Independence day | ಜಗತ್ತಿನ ಸರ್ಟಿಫಿಕೇಟ್‌ಗೆ ನಾವೇಕೆ ಕಾಯಬೇಕು? ನಾವು ಇರೋದೇ ಹೀಗೆ: ಮೋದಿ ಸ್ಪಷ್ಟೋಕ್ತಿ - Vistara News

ದೇಶ

Independence day | ಜಗತ್ತಿನ ಸರ್ಟಿಫಿಕೇಟ್‌ಗೆ ನಾವೇಕೆ ಕಾಯಬೇಕು? ನಾವು ಇರೋದೇ ಹೀಗೆ: ಮೋದಿ ಸ್ಪಷ್ಟೋಕ್ತಿ

ಆತ್ಮನಿರ್ಭರ ಭಾರತ, ಡಿಜಿಟಲ್‌ ಭಾರತಗಳ ಕುರಿತು ಕೆಂಪುಕೋಟೆ ಮೇಲಿನ ಭಾಷಣದಲ್ಲಿ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ನಮ್ಮದೇ ಮಾನದಂಡಗಳನ್ನು ರೂಢಿಸಿಕೊಳ್ಳಬೇಕಾದ ಬಗ್ಗೆ ಸ್ಪಷ್ಟಪಡಿಸಿದರು.

VISTARANEWS.COM


on

modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಜಗತ್ತಿನ ಸರ್ಟಿಫಿಕೇಟ್‌ಗೆ ನಾವೇಕೆ ಕಾಯಬೇಕು? ನಾವು ಹೇಗಿದ್ದೇವೋ ಹಾಗೇ ನಮ್ಮನ್ನು ಸ್ವೀಕರಿಸಿ. ನಮ್ಮ ಮಾನದಂಡಗಳನ್ನು ನಾವೇ ರೂಪಿಸಿಕೊಳ್ಳೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲಿನಿಂದ ನುಡಿದರು.

ಶತಮಾನಗಳ ಗುಲಾಮಿ ಮನಸ್ಥಿತಿಯಿಂದ ನಾವು ಹೊರಬರಬೇಕಿದೆ. ಅದಕ್ಕಾಗಿ ನಾವು ಹಲವು ಯೋಜನೆಗಳನ್ನು ರೂಪಿಸಿ ಮುನ್ನಡೆಸುತ್ತಿದ್ದೇವೆ. ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದೆವು. ಸಾಕಷ್ಟು ಎಚ್ಚರದಿಂದ, ಕೋಟಿ ಕೋಟಿ ಜನರ ವಿಚಾರ ಮಂಥನದಿಂದ, ನಮ್ಮ ದೇಶದ ಮಣ್ಣಿನ ಸಂಸ್ಕೃತಿಯಿಂದ ರೂಪಿಸಿದ್ದೇವೆ. ಇದು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಿ ಪಡೆಯುವ ಸಾಮರ್ಥ್ಯವನ್ನು ನಮಗೆ ನೀಡಲಿದೆ.

ನಮ್ಮ ಭಾಷೆಗಳ ಬಗ್ಗೆ ಹೆಮ್ಮೆ ಇರಬೇಕು. ಅದು ನಮ್ಮ ಪೂರ್ವಜರು ನಮಗೆ ನೀಡಿದ್ದು. ನಮ್ಮ ಬದುಕಿನ ಸಾರವನ್ನು ಒಳಗೊಂಡದ್ದು. ನಮ್ಮಲ್ಲಿ ಎಷ್ಟೋ ಪ್ರತಿಭೆಗಳಿವೆ. ಅವುಗಳೇ ಇಂದು ಗ್ರಾಮಗ್ರಾಮದಲ್ಲೂ ಹೊಸ ಆವಿಷ್ಕಾರಗಳೊಂದಿಗೆ, ಡಿಜಿಟಲ್‌ ಭಾರತವನ್ನು ಕಟ್ಟುತ್ತಿವೆ. ಜಗತ್ತು ಸಮಗ್ರ ಸ್ವಾಸ್ಥ್ಯದ ಬಗ್ಗೆ ಮಾತನಾಡುವಾಗ, ಅದರ ದೃಷ್ಟಿ ನಮ್ಮ ಯೋಗದ ಕಡೆಗೆ ಹರಿಯುತ್ತದೆ. ಭಾರತದ ಸಮಗ್ರ ಜೀವನಶೈಲಿಯತ್ತ ನೋಡುತ್ತದೆ. ನಾವು ಪ್ರಕೃತಿಯ ಜತೆ ಬದುಕಿದವರು, ಪ್ರಕೃತಿಯನ್ನು ಪ್ರೀತಿಸಿದವರು. ಗ್ಲೋಬಲ್‌ ವಾರ್ಮಿಂಗ್‌ ಸಮಸ್ಯೆಗೆ ನಮ್ಮ ಪರಿಸರಸ್ನೇಹಿ ಜೀವನಶೈಲಿಯಲ್ಲಿ ಉತ್ತರವಿದೆ. ನಮ್ಮ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಮ್ಮ ನೆಲದಲ್ಲಿ ನಾವು ಗಟ್ಟಿಯಾಗಿ ನಿಂತಾಗ ನಾವು ಜಗತ್ತನ್ನೂ ಅಧರಿಸಿ ಹಿಡಿಯುವ ಶಕ್ತಿಯನ್ನು ಹೊಂದುತ್ತೇವೆ. ನಮ್ಮ ಜನ ತಮ್ಮ ಸಣ್ಣ ಸಣ್ಣ ಜಮೀನುಗಳಲ್ಲಿ ಕಿರುಧಾನ್ಯಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರೇ ನಮ್ಮ ಅನ್ನದಾತರಾಗಿದ್ದಾರೆ.

ನಮ್ಮ ಜನತೆ ನದಿಯನ್ನು ಮಾತೆ ಎಂದವರು, ಶಿಲೆಯಲ್ಲಿ ಶಂಕರನನ್ನು ಕಂಡವರು. ನಾವು ಜಗತ್ತಿಗೆ ವಸುಧೈವ ಕುಟುಂಬಕಂ ಮಂತ್ರ ನೀಡಿದ್ದೇವೆ. ಏಕಂ ಸತ್‌ ವಿಪ್ರಾ ಬಹುಧಾ ವದಂತಿ ಎಂದಿದ್ದೇವೆ. ತಾನೇ ದೊಡ್ಡವನು ಎಂದು ಹೋರಾಡುವವರಿಗೆ ಇದರಲ್ಲಿ ಉತ್ತರವಿದೆ. ಜನಕಲ್ಯಾಣದಿಂದ ಜಗಕಲ್ಯಾಣದತ್ತ ಸಾಗುವುದು ನಮ್ಮ ದಾರಿಯಾಗಿದೆ. ನಮ್ಮ ವಿವಿಧತೆಯನ್ನು ನಾವು ಸೆಲೆಬ್ರೇಟ್‌ ಮಾಡಬೇಕು. ನಮ್ಮ ವೈವಿಧ್ಯ ನಮ್ಮ ಶ್ರೀಮಂತಿಕೆ. ʼಇಂಡಿಯಾ ಫಸ್ಟ್‌ʼ ಎಂಬುದು ನಮ್ಮ ಮಂತ್ರವಾಗಲಿ.

ಇದನ್ನೂ ಓದಿ: ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ್‌, ಜೈ ಅನುಸಂಧಾನ್‌: ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಘೋಷ

ನಾವು ನೋವಿನಿಂದ ಹೇಳಬೇಕಾಗಿದೆ. ಇಂದು ನಮ್ಮ ದೇಶವಾಸಿಗಳ ಮುಂದೆ, ಈ ಕೆಂಪು ಕೋಟೆಯ ಮೇಲಿನಿಂದ ಇದನ್ನ ಹೇಳದೆ ಇನ್ನೆಲ್ಲಿ ಹೇಳಲು ಸಾಧ್ಯ? ನಮ್ಮಲ್ಲಿ ನಾರಿಯನ್ನು ಅಪಮಾನ ಮಾಡುವ ವಿಕೃತಿಗಳು ಬೇರೂರಿವೆ. ನಮ್ಮ ಸ್ವಭಾವದಿಂದ, ಸಂಸ್ಕಾರದಿಂದ ಸ್ತ್ರೀಯನ್ನು ಅಪಮಾನ ಮಾಡುವ ಎಲ್ಲ ವರ್ತನೆ, ಮಾತುಗಳನ್ನು ನಾವು ನಿವಾರಿಸಿಕೊಳ್ಳಲೇಬೇಕು. ಲಿಂಗ ಸಮಾನತೆ ನಮ್ಮಲ್ಲಿ ನೆಲೆಯಾಗಬೇಕು. ಮಗ- ಮಗಳನ್ನು ಒಂದೇ ರೀತಿಯಲ್ಲಿ ಕಾಣಬೇಕು.

ಇಂದು ಮಹರ್ಷಿ ಅರವಿಂದರ ಜಯಂತಿ ಕೂಡ ಆಗಿದೆ. ಅವರು ʼಸ್ವದೇಶಿಯಿಂದ ಸ್ವರಾಜ್ಯ, ಸ್ವರಾಜ್ಯದಿಂದ ಸುರಾಜ್ಯʼ ಎಂಬ ಮಂತ್ರವನ್ನು ನೀಡಿದರು. ಇದಕ್ಕಾಗಿ ʼಆತ್ಮನಿರ್ಭರ ಭಾರತʼ ಪ್ರತಿಯೊಬ್ಬ ಪ್ರಜೆಯ ಪಣ ಆಗಬೇಕು. ಆತ್ಮನಿರ್ಭರ ಭಾರತವು ಸಮಾಜದ ಜನಾಂದೋಲನ. 75 ವರ್ಷಗಳ ಬಳಿಕ ಮೊದಲ ಬಾರಿಗೆ ಕೆಂಪು ಕೋಟೆಯಿಂದ ಸ್ವದೇಶಿ ತೋಪುಗಳಿಂದಲೇ ಧ್ವಜವಂದನೆ ನಡೆದಿದೆ. ಇದನ್ನು ನನಸಾಗಿಸಿದ ನಮ್ಮ ದೇಶದ ಸೇನಾಯೋಧರಿಗೆ ನಾನು ನಮನ ಸಲ್ಲಿಸುತ್ತೇನೆ. ನಾವು ಸಣ್ಣ ಸಣ್ಣ ವಸ್ತುಗಳಿಗೂ ವಿದೇಶಿ ಅವಲಂಬನೆ ನಿಲ್ಲಿಸಿದರೆ ಆತ್ಮನಿರ್ಭರ ಭಾರತವು ಸಂಪೂರ್ಣ ನಿಜವಾಗುತ್ತದೆ.

ಇಂದು ಭಾರತವು ಜಗತ್ತಿನ ಮ್ಯಾನುಫ್ಯಾಕ್ಚರಿಂಗ್‌ ಹಬ್‌ ಆಗುತ್ತಿದೆ. ಒಂದು ಲಕ್ಷ ಕೋಟಿ ರೂಪಾಯಿಯ ಪಿಎಲ್‌ಐ ಸ್ಕೀಮ್‌ ನಮ್ಮ ಉದ್ಯಮಿಗಳನ್ನು ಸ್ವಾವಲಂಬಿಗಳನ್ನಾಗಿಸಿದೆ. ಎಲೆಕ್ಟ್ರಾನಿಕ್‌ ವಸ್ತುಗಳು, ಮೊಬೈಲ್‌ ಫೋನ್‌ಗಳು ನಮ್ಮಲ್ಲೇ ತಯಾರಾಗುತ್ತಿವೆ. ನಮ್ಮ ಮೆಟ್ರೋ, ನಮ್ಮ ವಂದೇ ಭಾರತ್‌ ಟ್ರೇನು ವಿಶ್ವದ ಆಕರ್ಷಣೆಯಾಗುತ್ತಿದೆ. ನಮ್ಮ ವಿದ್ಯುತ್‌ ಕ್ಷೇತ್ರದಲ್ಲಿ ನಾವು ಯಾರಿಗೂ ಅವಲಂಬಿಯಾಗಬೇಕಿಲ್ಲ. ಸೋಲಾರ್‌ ವಿದ್ಯುತ್‌, ಸುಸ್ಥಿರ ವಿದ್ಯುತ್‌, ಮಿಷನ್‌ ಹೈಡ್ರೋಜನ್‌, ಪವರ್‌ ಪ್ಲಾಂಟ್‌ಗಳು, ಎಲೆಕ್ಟ್ರಿಕ್‌ ವಾಹನಗಳು ಇದೆಲ್ಲದರಲ್ಲೂ ಆತ್ಮನಿರ್ಭರ ಭಾರತವಾಗುತ್ತಿದ್ದೇವೆ. ಸಾವಯವ ಕೃಷಿಯು ಆತ್ಮನಿರ್ಭರಕ್ಕೆ ಕೊಡುಗೆ ನೀಡುತ್ತಿದೆ. ರಸಗೊಬ್ಬರಗಳಿಂದ ನಮ್ಮ ಕೃಷಿಗೆ ಮುಕ್ತಿ ನೀಡಬೇಕಿದೆ. ಹಸಿರು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಆತ್ಮನಿರ್ಭರ ಭಾರತ ಕಟ್ಟುವಲ್ಲಿ ನೆರವಾಗುವಂತೆ ನಾನು ಖಾಸಗಿ ವಲಯಕ್ಕೂ ಆಹ್ವಾನ ನೀಡುತ್ತಿದ್ದೇನೆ.

ಜೈ ಅನುಸಂಧಾನ್ ಎಂದರೆ ಆವಿಷ್ಕಾರಗಳ ನೆಲೆಯಲ್ಲಿ ನಾವು ತುಂಬಾ ಮುಂದುವರಿಯುತ್ತಿದ್ದೇವೆ. ಡಿಜಿಟಲ್‌ ಪಾವತಿಯಲ್ಲಿ ಶೇ.40ರಷ್ಟು ಸಾಧನೆ ಮಾಡಿದ್ದೇವೆ. ಬೇರೆ ಯಾವ ದೇಶವೂ ಇದನ್ನು ಮಾಡಿಲ್ಲ. ಭಾರತದ ನಾಲ್ಕು ಲಕ್ಷ ಕಾಮನ್‌ ಸರ್ವಿಸ್‌ ಸೆಂಟರ್‌ಗಳು ಗ್ರಾಮಗಳಲ್ಲಿ ನೆಲೆಯಾಗಿವೆ. ಇದು ಗ್ರಾಮ ಭಾರತದ ಯುವಜನತೆಯನ್ನು ಮುನ್ನೆಲೆಗೆ ತಂದಿದೆ. ಇದು ದೇಶದ ಹೆಮ್ಮೆ. ಇದು ಟೆಕ್ನಾಲಜಿ ಹಬ್‌ ಆಗಬಲ್ಲ ಭಾರತದ ಸಾಮರ್ಥ್ಯ. 5ಜಿ, ಆಪ್ಟಿಕಲ್‌ ಫೈಬರ್‌, ಸೆಮಿಕಂಡಕ್ಟರ್‌ಗಳ ಕ್ಷೇತ್ರದಲ್ಲಿ ಭಾರತ ಮುನ್ನಡೆಯುತ್ತಿದೆ.

ಮೂರು ಕ್ಷೇತ್ರಗಳಲ್ಲಿ ಕ್ರಾಂತಿ ಡಿಜಿಟಲ್‌ನಿಂದ ಆಗಲಿದೆ- ಶಿಕ್ಷಣ, ಆರೋಗ್ಯ ಹಾಗೂ ಸರ್ವಾಂಗೀಣ ಜೀವನ- ಇವುಗಳಲ್ಲಿ ಡಿಜಿಟಲ್‌ ಕ್ರಾಂತಿಯು ಮುಂದಿನ ದಿನಗಳಲ್ಲಿ ಭಾರತದಲ್ಲಿ ಆಗಲಿದೆ ಎಂದು ಮೋದಿ ಉಲ್ಲೇಖಿಸಿದರು.

ಇದನ್ನೂ ಓದಿ: Independence Day | ಕೆಂಪು ಕೋಟೆ ಮೇಲೆ ನಿಂತು ಕುಟುಂಬ ರಾಜಕಾರಣ ವಿರುದ್ಧ ಗುಡುಗಿದ ಮೋದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Gold Smuggling: ಶಶಿ ತರೂರ್‌ ಪಿಎ ಅರೆಸ್ಟ್‌- ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ನಾಯಕನಿಗೆ ತೀವ್ರ ಮುಜುಗರ

Gold Smuggling:ಈ ಕುರಿತು ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದು, ದುಬೈನಿಂದ ತಮ್ಮ ಸಹಾಯಕನ ಮೂಲಕ ಅಕ್ರಮವಾಗಿ ಚಿನ್ನವನ್ನು ಶಿವಕುಮಾರ್‌ ತರಿಸಿದ್ದರು. ಇದನ್ನು ಪಡೆಯುವ ವೇಳೆ ಕಸ್ಟಮ್ಸ್‌ ಅಧಿಕಾರಿಗಳು ಅವರನ್ನು ಅರೆಸ್ಟ್‌ ಮಾಡಿದ್ದಾರೆ. ಇನ್ನು 30ಲಕ್ಷ ರೂ.ಗೂ ಅಧಿಕ ಮೊತ್ತದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

VISTARANEWS.COM


on

Gold Smuggling
Koo

ನವದೆಹಲಿ: ಅಕ್ರಮ ಚಿನ್ನ ಸಾಗಾಟ(Gold Smuggling) ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌(Shashi Tharoor) ಅವರ ಆಪ್ತ ಸಹಾಯಕನನ್ನು ಅರೆಸ್ಟ್‌ ಮಾಡಲಾಗಿದೆ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ(IGI Airport)ದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಶಶಿ ತರೂರ್‌ ಅವರ ಪಿಎ ಶಿವ ಪ್ರಸಾದ್‌ ಅವರನ್ನು ವಶಕ್ಕೆ ಪಡೆಸಿದ್ದಾರೆ. ಶಿವ ಕುಮಾರ್‌ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಕಸ್ಟಮ್ಸ್‌ ಅಧಿಕಾರಿಗಳು ಟರ್ಮಿನಲ್‌ 3ರಲ್ಲಿ ಅವರನ್ನು ಪರಿಶೀಲನೆ ನಡೆಸಿ ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದು, ದುಬೈನಿಂದ ತಮ್ಮ ಸಹಾಯಕನ ಮೂಲಕ ಅಕ್ರಮವಾಗಿ ಚಿನ್ನವನ್ನು ಶಿವಕುಮಾರ್‌ ತರಿಸಿದ್ದರು. ಇದನ್ನು ಪಡೆಯುವ ವೇಳೆ ಕಸ್ಟಮ್ಸ್‌ ಅಧಿಕಾರಿಗಳು ಅವರನ್ನು ಅರೆಸ್ಟ್‌ ಮಾಡಿದ್ದಾರೆ. ಇನ್ನು 30ಲಕ್ಷ ರೂ.ಗೂ ಅಧಿಕ ಮೊತ್ತದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕುಮಾರ್‌ ದುಬೈನಿಂದ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಕಸ್ಟಮ್ಸ್‌ ಆದಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿದ್ದು, ಚಿನ್ನ ಎಲ್ಲಿಂದ ಬಂತು ಹೇಗೆ ಬಂದು ಎಂಬ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಕುಮಾರ್‌ ಅಧಿಕಾರಿಗಳ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡಿಲ್ಲ. ಹೀಗಾಗಿ ಅವರನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇನ್ನು ಕೆಲವು ದಿನಗಳ ಹಿಂದೆ ಭಾರತದಿಂದ ದುಬೈಗೆ ಕೋಟ್ಯಂತರ ರೂ ಮೌಲ್ಯದ ಚಿನ್ನವನ್ನು ಕಳ್ಳ ಸಾಗಾಣೆಮಾಡುತ್ತಿದ್ದ ಅಫ್ಘಾನಿಸ್ತಾನದ ರಾಜತಾಂತ್ರಿಕ(Afghan diplomat) ಅಧಿಕಾರಿಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಲೆಗೆ ಬಿದ್ದಿದ್ದರು. ಅಫ್ಘಾನಿಸ್ತಾನದ(Afghanistan) ಇಸ್ಲಾಮಿಕ್‌ ರಿಪಬ್ಲಿಕ್‌ನ ರಾಜತಾಂತ್ರಿಕ ಅಧಿಕಾರಿ ಜಾಕಿಯಾ ವಾರ್ದಕ್‌ ಅವರು ಬರೋಬ್ಬರಿ 18.6 ಕೋಟಿ ರೂ. ಮೌಲ್ಯದ 25 ಕೆ.ಜಿ. ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವೇಳೆ ಏರ್‌ಪೋರ್ಟ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ:Delhi Temperature: ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ದೇಶದಲ್ಲೇ ಇದುವರೆಗಿನ ಗರಿಷ್ಠ ಟೆಂಪರೇಚರ್!

ಇನ್ನು ಚುನಾವಣೆ ಸಂದರ್ಭದಲ್ಲೇ ತಮ್ಮ ಆಪ್ತ ಸಹಾಯಕನ ಬಂಧನ ಆಗಿರುವುದು ಶಶಿ ತರೂರ್‌ ಅವರಿಗೆ ಮುಜುಗರ ತಂದಿದೆ. ಶಶಿ ತರೂರ್‌ ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಹಾಲಿ ಸಂಸದನಾಗಿದ್ದು, ಈ ಬಾರಿ ಅವರಿಗೆ ಪೈಪೋಟಿ ನೀಡಲು ಬಿಜೆಪಿಯಿಂದ (bjp) ರಾಜೀವ್ ಚಂದ್ರಶೇಖರ್ (Rajeev Chandrasekhar ) ಮತ್ತು ಸಿಪಿಐ (cpi) ನಾಯಕ ಪನ್ನಯನ್ ರವೀಂದ್ರನ್ (Pannyan Raveendran) ಕಣಕ್ಕೆ ಇಳಿದಿದ್ದಾರೆ.
59 ವರ್ಷದ ಚಂದ್ರಶೇಖರ್ ಮತ್ತು 67 ವರ್ಷದ ತರೂರ್ ಇಬ್ಬರೂ ರಾಷ್ಟ್ರ ಮಟ್ಟದ ನಾಯಕರು. ಇವರಿಬ್ಬರೂ ತಮ್ಮದೇ ಆದ ಸಾಧನೆಗಳಿಂದ ಗುರುತಿಸಿಕೊಂಡಿದ್ದಾರೆ. ಇವರಿಗೆ ಪೈಪೋಟಿ ನೀಡಲು 78 ವರ್ಷದ ರವೀಂದ್ರನ್ ಸ್ಪರ್ಧೆಗೆ ಇಳಿದಿದ್ದು, ತಳಮಟ್ಟದ ನಾಯಕ ಎನ್ನುವ ಖ್ಯಾತಿ ಇವರಿಗೆ ಇದೆ.

Continue Reading

ದೇಶ

Firecracker Explosion: ಪುರಿ ಜಗನ್ನಾಥ ದೇಗುಲದಲ್ಲಿ ಅಗ್ನಿ ದುರಂತ; 15 ಮಂದಿಗೆ ಗಾಯ

Firecracker Explosion: ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ದೇಗುಲದಲ್ಲಿ ಬುಧವಾರ ರಾತ್ರಿ ಅಗ್ನಿ ದುರಂತವೊಂದು ಸಂಭವಿಸಿದ್ದು, ಸುಮಾರು 15 ಮಂದಿಗೆ ಸುಟ್ಟ ಗಾಯಗಳಾಗಿವೆ. ಭಗವಾನ್ ಜಗನ್ನಾಥನ ಚಂದನ್ ಜಾತ್ರಾ ಉತ್ಸವದ ಸಂದರ್ಭದಲ್ಲಿ ಪಟಾಕಿಗಳ ರಾಶಿ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಕ್ತರ ಗುಂಪು ಪಟಾಕಿ ಹಚ್ಚುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಹಾರಿದ ಬೆಂಕಿಯ ಕಿಡಿ ಪಟಾಕಿಗಳ ರಾಶಿಗೆ ಅಪ್ಪಳಿಸಿತು. ಇದು ಸ್ಫೋಟಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

VISTARANEWS.COM


on

Firecracker Explosion
Koo

ಭುವನೇಶ್ವರ: ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ದೇಗುಲ (Puri Jagannath temple)ದಲ್ಲಿ ಬುಧವಾರ ರಾತ್ರಿ ಅಗ್ನಿ ದುರಂತವೊಂದು ಸಂಭವಿಸಿದ್ದು, ಸುಮಾರು 15 ಮಂದಿಗೆ ಸುಟ್ಟ ಗಾಯಗಳಾಗಿವೆ. ಭಗವಾನ್ ಜಗನ್ನಾಥನ ಚಂದನ್ ಜಾತ್ರಾ ಉತ್ಸವದ ಸಂದರ್ಭದಲ್ಲಿ ಪಟಾಕಿಗಳ ರಾಶಿ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ (Firecracker Explosion).

ಉತ್ಸವ ವೀಕ್ಷಣೆಗಾಗಿ ನೂರಾರು ಮಂದಿ ನರೇಂದ್ರ ಪುಷ್ಕರಿಣಿ ದಂಡೆ ಮೇಲೆ ಜಮಾಯಿಸಿದ್ದ ವೇಳೆ ಪಟಾಕಿ ಸ್ಫೋಟಗೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭಕ್ತರ ಗುಂಪು ಪಟಾಕಿ ಹಚ್ಚುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಹಾರಿದ ಬೆಂಕಿಯ ಕಿಡಿ ಪಟಾಕಿಗಳ ರಾಶಿಗೆ ಅಪ್ಪಳಿಸಿತು. ಇದು ಸ್ಫೋಟಕ್ಕೆ ಕಾರಣ ಎಂದು ಅವರು ವಿವರಿಸಿದ್ದಾರೆ.

ಪಟಾಕಿ ಸಿಡಿಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಕೆಲವರು ತಮ್ಮನ್ನು ರಕ್ಷಿಸಿಕೊಳ್ಳಲು ಪುಷ್ಕರಿಣಿಗೆ ಜಿಗಿದಿದ್ದಾರೆ. ಇನ್ನು ಹಲವರು ಕೂಡಲೇ ಸ್ಥಳದಿಂದ ತೆರಳಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ದುಃಖ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಚಿಕಿತ್ಸೆಯ ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ʼʼಪುರಿ ಜಗನ್ನಾಥ ಉತ್ಸವದ ವೇಳೆ ನಡೆದ ಬೆಂಕಿ ದುರಂತದಿಂದ ತೀವ್ರ ದುಃಖವಾಗಿದೆ. ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಮುಖ್ಯ ಆಡಳಿತ ಕಾರ್ಯದರ್ಶಿ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶಿಸಲಾಗಿದೆ. ಗಾಯಾಳುಗಳ ಎಲ್ಲ ವೈದ್ಯಕೀಯ ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸಲಾಗುವುದು. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ” ಎಂದು ನವೀನ್ ಪಟ್ನಾಯಕ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. “ಪುರಿ ಚಂದನ ಯಾತ್ರೆಯ ಸಂದರ್ಭದಲ್ಲಿ ನರೇಂದ್ರ ಪುಷ್ಕರಿಣಿ ದೇವಿಘಾಟ್‌ನಲ್ಲಿ ನಡೆದ ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಕೇಳಿ ದುಃಖವಾಗಿದೆ. ಭಗವಂತನ ಆಶೀರ್ವಾದದಿಂದ, ಚಿಕಿತ್ಸೆಯಲ್ಲಿರುವವರು ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ಮರಳಲಿ” ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ: Fire Accident: ದೇಗುಲದಲ್ಲಿ ಅಗ್ನಿ ದುರಂತ; 13 ಜನಕ್ಕೆ ಗಾಯ, ಸಿಎಂ ಸ್ವಲ್ಪದರಲ್ಲೇ ಪಾರು!

Continue Reading

ದೇಶ

Girlfriend: ‘ಬಾಡಿಗೆ ಗರ್ಲ್‌ಫ್ರೆಂಡ್‌’ ಆಗಲು ಸಿದ್ಧಳೆಂದ ಯುವತಿ; ಈಕೆಯ ‘ದರಪಟ್ಟಿ’ ನೋಡಿ,‌ ನೀವೂ ಟ್ರೈ ಮಾಡಿ

Girlfriend: ಭಾರತದಲ್ಲಿ ಈಗ ಗರ್ಲ್‌ಫ್ರೆಂಡ್‌ ಕೂಡ ಬಾಡಿಗೆಗೆ ಸಿಗಲಿದ್ದಾಳೆ. ಈ ಕುರಿತು ಯುವತಿಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾಳೆ. ಯಾರು ಬೇಕಾದರೂ ಕರೆದುಕೊಂಡು ಹೋಗಿ ಎಂದಿದ್ದಾಳೆ. ಆದರೆ, ಒಂದು ದಿನದ ಮಟ್ಟಿಗೆ ಡೇಟ್‌ಗೆ ಕರೆದುಕೊಂಡು ಹೋಗುವುದು ಸೇರಿ ಹಲವು ಚಟುವಟಿಕೆಗಳಿಗೆ ಯುವತಿಯು ರೇಟ್‌ ಫಿಕ್ಸ್‌ ಮಾಡಿದ್ದಾಳೆ. ಆ ದರ ಪಟ್ಟಿ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ.

VISTARANEWS.COM


on

Girlfriend
Koo

ನವದೆಹಲಿ: ಈಗಿನದ್ದು ಬಾಡಿಗೆ ಜಮಾನ. ಮನೆ, ಕಾರು, ಬೈಕ್‌, ಬಟ್ಟೆ, ಆಭರಣ ಸೇರಿ ಸಾವಿರಾರು ವಸ್ತುಗಳು ಬಾಡಿಗೆಗೆ ಸಿಗುತ್ತವೆ. ಯಾರಾದರೂ ಸತ್ತಾಗ ಅಳಲು ಕೂಡ ‘ಬಾಡಿಗೆ ಜನ’ರಿದ್ದಾರೆ. ಅಷ್ಟರ ಮಟ್ಟಿಗೆ ನಮ್ಮ ‘ಬಾಡಿ’ಗೆ ಅನುಕೂಲವಾಗಲು ‘ಬಾಡಿಗೆಗೆ’ ಸಿಗುತ್ತವೆ. ಆದರೆ, ದೇಶದಲ್ಲಿ ಇದುವರೆಗೆ ಬಾಡಿಗೆಗೆ ಗರ್ಲ್‌ಫ್ರೆಂಡ್‌ ಸಿಗುತ್ತಿರಲಿಲ್ಲ. ಯಾರನ್ನೂ ಪಟಾಯಿಸಲು ಆಗದೆ, ಒಬ್ಬಂಟಿಯಾಗಿ ಇರಲೂ ಆಗದೆ ಯುವಕರು ಪರದಾಡುವಂತಾಗಿದೆ. ಆದರೆ, ಇನ್ನು ಮುಂದೆ ಬಾಡಿಗೆಗೆ ಗರ್ಲ್‌ಫ್ರೆಂಡ್‌ (Girlfriend) ಕೂಡ ಸಿಗಲಿದ್ದಾಳೆ. ಹೌದು, “ನನ್ನನ್ನು ಒಂದು ದಿನದ ಮಟ್ಟಿಗೆ ನಿಮ್ಮ ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಪಡೆಯಿರಿ” ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾಳೆ. ಆಕೆಯ ವಿಡಿಯೊ ಈಗ ಭಾರಿ ವೈರಲ್‌ (Viral Video) ಆಗಿದೆ.

ಯುವತಿಯೊಬ್ಬಳು ತನ್ನ ಹಾಗೂ ದರಪಟ್ಟಿಯ ವಿಡಿಯೊ ಹಂಚಿಕೊಂಡಿದ್ದಾಳೆ. “ನಾನು ಒಂದು ದಿನದ ಮಟ್ಟಿಗೆ ನಿಮ್ಮ ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಇರಬಲ್ಲೆ. ಯಾರು ಬೇಕಾದರೂ ನನ್ನನ್ನು ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಪಡೆಯಬಹುದು. ಆ ಮೂಲಕ ಸ್ಮರಣೀಯ ದಿನವನ್ನು, ಅತ್ಯುತ್ತಮ ನೆನಪುಗಳನ್ನು ಸೃಷ್ಟಿಸಿಕೊಳ್ಳಬಹುದು” ಎಂಬುದಾಗಿ ದಿವ್ಯಾ ಗಿರಿ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ. ನೂರಾರು ಜನ ಪೋಸ್ಟ್‌ಗೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಯುವತಿಯ ‘ದರ’ಪಟ್ಟಿ ಹೀಗಿದೆ…

ಒಂದು ದಿನದ ಮಟ್ಟಿಗೆ ಡೇಟ್‌ಗೆ ಕರೆದುಕೊಂಡು ಹೋಗುವುದು ಸೇರಿ ಹಲವು ಚಟುವಟಿಕೆಗಳಿಗೆ ಯುವತಿಯು ರೇಟ್‌ ಫಿಕ್ಸ್‌ ಮಾಡಿದ್ದಾಳೆ. ಸುಮ್ಮನೆ ಹೋಗಿ ಕಾಫಿ ಕುಡಿದುಕೊಂಡು ಬರಲು 1,500 ರೂ., ಸಿನಿಮಾ ನೋಡಿ, ಊಟ ಮಾಡಿಕೊಂಡು ಬರುವುದಾದರೆ 2 ಸಾವಿರ ರೂ. ಕುಟುಂಬಸ್ಥರನ್ನು ಭೇಟಿ ಮಾಡಿಸಲು 3 ಸಾವಿರ ರೂ., ಬೈಕ್‌ನಲ್ಲಿ ಸುತ್ತಾಡುವುದಾದರೆ 4 ಸಾವಿರ ರೂ., ಡೇಟಿಂಗ್‌ ಬಗ್ಗೆ ಸಾರ್ವಜನಿಕವಾಗಿ ಪೋಸ್ಟ್‌ ಮಾಡುವುದಾದರೆ 6 ಸಾವಿರ ರೂ., ಎರಡು ದಿನ ವೀಕೆಂಡ್‌ನಲ್ಲಿ ಸುತ್ತಾಡಲು 10 ಸಾವಿರ ರೂ. ಸೇರಿ ಹಲವು ಚಟುವಟಿಕೆಗಳಿಗೆ ವಿವಿಧ ಮೊತ್ತ ನಿಗದಿಪಡಿಸಿದ್ದಾಳೆ.

ಪೋಸ್ಟ್‌ ನೋಡಿದ ಜನ ಏನೆಂದರು?

ಯುವತಿಯ ಪೋಸ್ಟ್‌ ನೋಡಿದ ಒಂದಷ್ಟು ಜನ ಕಂಗಾಲಾಗಿದ್ದರೆ, ಇನ್ನೊಂದಿಷ್ಟು ಜನ ತಮಾಷೆಯಾಗಿ ಕಮೆಂಟ್‌ ಮಾಡಿದ್ದಾರೆ. “ನನ್ನ ಕಾಲೇಜಿನ ಅಸೈನ್‌ಮೆಂಟ್‌ ಮುಗಿಸಿಕೊಡಲು ಎಷ್ಟು ಚಾರ್ಜ್‌ ಮಾಡುತ್ತೀರಿ” ಎಂದು ಕಿಡಿಗೇಡಿಯೊಬ್ಬ ಕಮೆಂಟ್‌ ಮಾಡಿದ್ದಾನೆ. “ನನ್ನ ಮನೆಯ ಕಸ ಗುಡಿಸಿ, ಟಾಯ್ಲೆಟ್‌ ಕ್ಲೀನ್‌ ಮಾಡಿ, ಬಟ್ಟೆ ತೊಳೆದುಕೊಡಲು ಎಷ್ಟು ಬೇಕು” ಎಂದು ಇನ್ನೊಬ್ಬ ಟಾಂಗ್‌ ಕೊಟ್ಟಿದ್ದಾನೆ. “ಯುವತಿಯು ಭಾರತದಲ್ಲಿ ಅಲ್ಲ, ಜಪಾನ್‌ನಲ್ಲಿದ್ದೇನೆ” ಎಂದು ಭಾವಿಸಿದ್ದಾಳೆ ಎಂಬುದಾಗಿ ಮಗದೊಬ್ಬ ತಮಾಷೆ ಮಾಡಿದ್ದಾನೆ. “ಇಂಥ ಕೆಲಸ ಮಾಡುವ ಬದಲು ದುಡಿದು ತಿನ್ನು” ಎಂದು ಮತ್ತೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಹೀಗೆ, ನೂರಾರು ಜನ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

Continue Reading

ದೇಶ

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

CAA Certificate: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ಪಡೆಯುವುದನ್ನು ಸಿಎಎ ಜಾರಿಯಿಂದ ಸುಲಭಗೊಳಿಸುತ್ತದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ. ಈಗ ಸಿಎಎ ನಿಯಮಗಳ ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ನೆಲೆಸಿರುವ ನಿರಾಶ್ರಿತರಿಗೆ ಕೇಂದ್ರ ಸರ್ಕಾರ ಪೌರತ್ವ ನೀಡಿದೆ.

VISTARANEWS.COM


on

CAA Certificate
Koo

ಕೋಲ್ಕೊತಾ: “ಪಶ್ಚಿಮ ಬಂಗಾಳದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಬಿಡುವುದಿಲ್ಲ” ಎಂಬುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳುತ್ತಲೇ ಇದ್ದರು. “ಸಿಎಎ ಜಾರಿಯನ್ನು ತಡೆಯಲು ಯಾವುದೇ ರಾಜ್ಯಗಳಿಗೆ ಸಾಧ್ಯವಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಿರುಗೇಟು ನೀಡುತ್ತಲೇ ಇದ್ದರು. ಸಿಎಎ ಜಾರಿ ಕುರಿತು ದೀದಿ ಹಾಗೂ ಮೋದಿ ನಡುವೆ ಜಟಾಪಟಿ ನಡೆಯುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಗೊಳಿಸಿದೆ. ಹೌದು, ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಸಿಎಎ ಅಡಿಯಲ್ಲಿ ಕೇಂದ್ರ ಸರ್ಕಾರವು ಭಾರತದ ಪೌರತ್ವ (CAA Certificate) ಪ್ರದಾನ ಮಾಡಿದೆ.

ಸಿಎಎ ಪ್ರಮಾಣಪತ್ರ ನೀಡಿರುವ ಕುರಿತು ಕೇಂದ್ರ ಗೃಹ ಸಚಿವಾಲಯವು ಮಾಹಿತಿ ನೀಡಿದೆ. “ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ಉತ್ತರಾಖಂಡದಲ್ಲಿ ನೆಲೆಸಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ಪ್ರಮಾಣಪತ್ರ ನೀಡಲಾಗಿದೆ. ಅರ್ಜಿದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೌರತ್ವ ನೀಡಲಾಗಿದೆ” ಎಂಬುದಾಗಿ ತಿಳಿಸಿದೆ. ಇದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕೃತವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಂತಾಗಿದೆ.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು 14 ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗಿತ್ತು. ಪಾಕಿಸ್ತಾನದಿಂದ ಬಂದು, ದೆಹಲಿಯ ಆದರ್ಶ ನಗರದಲ್ಲಿ ವಾಸಿಸುತ್ತಿರುವ ಹಲವರಿಗೆ ಭಾರತದ ಪೌರತ್ವ ನೀಡಲಾಗಿತ್ತು. ಮಹಿಳೆಯರು ಹಾಗೂ ಮಕ್ಕಳು ಸೇರಿ ಹಲವರು ಭಾರತದ ಪೌರತ್ವ ಪ್ರಮಾಣಪತ್ರ ಹಿಡಿದಿರುವ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿದ್ದವು. ಪೌರತ್ವ ಪಡೆದವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದರು.

ಮಮತಾ ಬ್ಯಾನರ್ಜಿ ಏನು ಹೇಳಿದ್ದರು?

ಸಿಎಎ, ಏಕರೂಪ ನಾಗರಿಕ ಸಂಹಿತೆ ಹಾಗೂ ಎನ್‌ಆರ್‌ಸಿಯನ್ನು ವಿರೋಧಿಸುತ್ತಲೇ ಬಂದಿರುವ ಮಮತಾ ಬ್ಯಾನರ್ಜಿ ಅವರು ಹಲವು ಸಂದರ್ಭಗಳಲ್ಲಿ ಸಿಎಎ ಜಾರಿಯಾಗಲು ಬಿಡುವುದಿಲ್ಲ ಎಂದಿದ್ದರು. “ಪಶ್ಚಿಮ ಬಂಗಾಳದಲ್ಲಿ ಸಿಎಎ, ಎನ್‌ಆರ್‌ಸಿ ಜಾರಿಗೊಳಿಸಲು ಬಿಡುವುದಿಲ್ಲ. ಇದಕ್ಕಾಗಿ ನಾವು ರಕ್ತಪಾತಕ್ಕೂ ಸಿದ್ಧರಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಗಲಾಟೆ ಎಬ್ಬಿಸಲು ಸಿಎಎ ಸೇರಿ ಹಲವು ವಿಷಯಗಳನ್ನು ಮುನ್ನೆಲೆಗೆ ತರುತ್ತಾರೆ. ಆದರೆ, ಪಶ್ಚಿಮ ಬಂಗಾಳದವರಾದ ನಾವು ಒಗ್ಗಟ್ಟಿನಿಂದ ಇದ್ದರೆ ಸಿಎಎ ಜಾರಿಗೊಳಿಸಲು ಆಗುವುದಿಲ್ಲ” ಎಂದು ಹೇಳಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019 ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Continue Reading
Advertisement
Gold Smuggling
ದೇಶ7 mins ago

Gold Smuggling: ಶಶಿ ತರೂರ್‌ ಪಿಎ ಅರೆಸ್ಟ್‌- ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ನಾಯಕನಿಗೆ ತೀವ್ರ ಮುಜುಗರ

Firecracker Explosion
ದೇಶ9 mins ago

Firecracker Explosion: ಪುರಿ ಜಗನ್ನಾಥ ದೇಗುಲದಲ್ಲಿ ಅಗ್ನಿ ದುರಂತ; 15 ಮಂದಿಗೆ ಗಾಯ

Raitha Siri Yojana
ಪ್ರಮುಖ ಸುದ್ದಿ35 mins ago

Raitha Siri Yojana: ಸಿರಿ ಧಾನ್ಯ ಬೆಳೆಯುವವರಿಗೆ ಸಿಹಿ ಸುದ್ದಿ; ನಿಮ್ಮ ಖಾತೆಗೇ ಬರುತ್ತೆ 10 ಸಾವಿರ ರೂ.

Nosebleeds In Summer
ಆರೋಗ್ಯ1 hour ago

Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

Karnataka Weather
ಕರ್ನಾಟಕ2 hours ago

Karnataka Weather: ಇಂದು ದಕ್ಷಿಣ ಕನ್ನಡ, ಹಾಸನ, ಕೊಡಗು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ!

Hair Growth Tips
ಆರೋಗ್ಯ2 hours ago

Hair Growth Tips: ಕೂದಲು ಉದುರುವುದಕ್ಕೆ ಬೀಟಾ ಕ್ಯಾರೊಟಿನ್‌ ಮದ್ದು!

Dina Bhavishya
ಭವಿಷ್ಯ3 hours ago

Dina Bhavishya: ಈ ರಾಶಿಯವರು ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ!

Girlfriend
ದೇಶ8 hours ago

Girlfriend: ‘ಬಾಡಿಗೆ ಗರ್ಲ್‌ಫ್ರೆಂಡ್‌’ ಆಗಲು ಸಿದ್ಧಳೆಂದ ಯುವತಿ; ಈಕೆಯ ‘ದರಪಟ್ಟಿ’ ನೋಡಿ,‌ ನೀವೂ ಟ್ರೈ ಮಾಡಿ

CAA Certificate
ದೇಶ9 hours ago

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

Modi Meditation
ದೇಶ10 hours ago

Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌