ನಿದ್ದೆಗೆ ಜಾರಿದ್ದ ಇಬ್ಬರೂ ಪೈಲಟ್​​ಗಳು; ಆದರೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್​ ಆಗಿದ್ದು ಹೇಗೆ? - Vistara News

ವೈರಲ್ ನ್ಯೂಸ್

ನಿದ್ದೆಗೆ ಜಾರಿದ್ದ ಇಬ್ಬರೂ ಪೈಲಟ್​​ಗಳು; ಆದರೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್​ ಆಗಿದ್ದು ಹೇಗೆ?

ವಿಮಾನ ಸಮುದ್ರ ಮಟ್ಟದಿಂದ ಸುಮಾರು 37 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಆದರೆ ಅದರಲ್ಲಿದ್ದ ಇಬ್ಬರೂ ಪೈಲಟ್​ಗಳಿಗೆ ನಿದ್ದೆ. ಏರ್​ ಟ್ರಾಫಿಕ್ ಕಂಟ್ರೋಲ್​​ರಗಳ ಕರೆಯೂ ಅವರನ್ನು ಎಚ್ಚರಿಸಿಲ್ಲ.

VISTARANEWS.COM


on

pilots fall asleep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪೈಲಟ್​​ಗಳು ಎಚ್ಚರ ತಪ್ಪಿದರೆ, ಚೂರೇಚೂರು ಮೈಮರೆತರೂ ವಿಮಾನ ಅಪಘಾತಕ್ಕೀಡಾಗುತ್ತದೆ. ಅಂಥದ್ದರಲ್ಲಿ ಒಂದು ವಿಮಾನದಲ್ಲಿದ್ದ ಇಬ್ಬರೂ ಪೈಲಟ್​​ಗಳು ನಿದ್ದೆಯನ್ನೇ ಮಾಡಿಬಿಟ್ಟರೆ..! -ಇದು ಊಹೆಯಲ್ಲ, ನಿಜಕ್ಕೂ ನಡೆದ ಘಟನೆ. ಉತ್ತರ ಆಫ್ರಿಕಾದ ಸೂಡಾನ್​ನಿಂದ ಪೂರ್ವ ಆಫ್ರಿಕಾದ ಇಥಿಯೋಪಿಯಾಕ್ಕೆ ವಿಮಾನವೊಂದು ಹೊರಟಿತ್ತು. ಅದರಲ್ಲಿ ಇಬ್ಬರು ಪೈಲಟ್​ಗಳು ಇದ್ದರು. ಆದರೆ ಇವರಿಬ್ಬರೂ ಏಕಕಾಲದಲ್ಲಿ ನಿದ್ದೆಗೆ ಜಾರಿದ್ದಾರೆ. ಅದೂ ಸಮುದ್ರಮಟ್ಟದಿಂದ 37 ಸಾವಿರ ಅಡಿಗಳಷ್ಟು ಎತ್ತರದಲ್ಲಿ ವಿಮಾನ ಹಾರುತ್ತಿದ್ದಾಗ. ಆದರೆ ಅದೃಷ್ಟಕ್ಕೆ ಏನೂ ಅಪಾಯ ಆಗಲಿಲ್ಲ ಮತ್ತು ಅವರು ಸಕಾಲದಲ್ಲಿ ಎಚ್ಚರಗೊಂಡು ವಿಮಾನವನ್ನು ಸುರಕ್ಷಿತವಾಗಿ, ಯಾರಿಗೂ ಏನೂ ಅಪಾಯವಾಗದಂತೆ ಲ್ಯಾಂಡ್ ಕೂಡ ಮಾಡಿಸಿದ್ದಾರೆ. ದೊಡ್ಡ ಅವಘಡವೊಂದು ತಪ್ಪಿದೆ ಎಂದು ಏವಿಯೇಷನ್​ ಹೆರಾಲ್ಡ್​ ವೆಬ್​​ಸೈಟ್​ ವರದಿ ಮಾಡಿದೆ.

ಬೋಯಿಂಗ್​ 737 ವಿಮಾನ ET-343 ಸೂಡಾನ್​ನಿಂದ ಹೊರಟು ಇಥಿಯೋಪಿಯಾದ ಅಡಿಸ್ ಅಬಾಬಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಟೇಕ್​ ಆಫ್​ ಆದ ಬಳಿಕ ಫ್ಲೈಟ್​ ಮ್ಯಾನೇಜ್​ಮೆಂಟ್​ ಕಂಪ್ಯೂಟರ್​​ನಿಂದ ಯೋಜಿತವಾದ ಮಾರ್ಗದಲ್ಲೇ ಸಂಚರಿಸುತ್ತಿತ್ತು. ಸಾಮಾನ್ಯವಾಗಿ ವಿಮಾನಗಳು ಇಳಿಯುವ ಸ್ಥಳ ಹತ್ತಿರ ಬಂದಾಗ ಕೆಳಕ್ಕೆ ಇಳಿಯುತ್ತ ಬರುತ್ತವೆ. ಆದರೆ ಈ ವಿಮಾನ ಮಾರ್ಗ ಮಧ್ಯೆಯೇ ಕೆಳಗೆ ಬರುತ್ತಿತ್ತು. ಅದನ್ನು ಗಮನಿಸಿದ ಏರ್​ ಟ್ರಾಫಿಕ್​ ಕಂಟ್ರೋಲರ್​ (ATC)ಗಳು ಪೈಲಟ್​​ಗಳನ್ನು ಸಂಪರ್ಕಿಸಲು ತುಂಬ ಪ್ರಯತ್ನ ಪಟ್ಟರು. ಆದರೆ ನಿದ್ದೆಗೆ ಜಾರಿದ್ದ ಪೈಲಟ್​​ಗಳು ಪ್ರತಿಕ್ರಿಯೆ ನೀಡಲೇ ಇಲ್ಲ, ಎಟಿಎಸ್​​ನಿಂದ ಕಾಲ್​ ಬರುತ್ತಿರುವುದು ಅವರಿಗೆ ಗೊತ್ತೂ ಆಗಲಿಲ್ಲ ಬಿಡಿ.

ಇಷ್ಟೆಲ್ಲ ಆದ ಮೇಲೆ ವಿಮಾನ ರನ್​ ವೇ ತಲುಪಬೇಕಾದ ಮಾರ್ಗವನ್ನೂ ಮೀರಿ ಹಾರಾಟ ನಡೆಸಿದೆ. ಫ್ಲೈಟ್​ ದಾರಿ ತಪ್ಪುತ್ತಿದ್ದಂತೆ ಅಟೋಪೈಲಟ್​ ಸಂಪರ್ಕ ಕಡಿತಗೊಂಡು, ಎಚ್ಚರಿಕೆ ಅಲಾರಾಂ ಬಾರಿಸಿದೆ. ಹೀಗೆ ಅಲರ್ಟ್​ ದೊಡ್ಡದಾಗಿ ಶಬ್ದ ಮಾಡುತ್ತಿದ್ದಂತೆ ಇಬ್ಬರೂ ಪೈಲಟ್​ಗಳೂ ಎಚ್ಚೆತ್ತು, ವಿಮಾನ ಹಾರಾಟವನ್ನು ಸುಸ್ಥಿತಿಗೊಳಿಸಿದ್ದಾರೆ. ಅದಾಗಿ 25 ನಿಮಿಷಗಳ ಕಾಲ ಮತ್ತೆ ವಿಮಾನ ಹಾರಾಟ ನಡೆಸಿ, ಸುರಕ್ಷಿತವಾಗಿ ಲ್ಯಾಂಡ್​ ಮಾಡಿಸಿದ್ದಾರೆ. ಇದೊಂದು 154 ಸೀಟ್​ಗಳುಳ್ಳ ವಿಮಾನವಾಗಿದ್ದು, ಪ್ರಯಾಣಿಕರು ಎಷ್ಟು ಮಂದಿ ಇದ್ದರು ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಶ್ರೀಲಂಕಾ ಬಂದರು ತಲುಪಿದ ಚೀನಾ ಬೇಹುಗಾರಿಕೆ ನೌಕೆ; ಅದಕ್ಕೂ ಮೊದಲೇ ವಿಮಾನ ಕಳಿಸಿದ ಭಾರತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

School Teacher: ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಶಿಕ್ಷಕಿ ಪುಂಡಾಟ; ನೆರೆಮನೆಯವರ ಮೇಲೂ ಹಲ್ಲೆ

School teacher: ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬಳು ನೆರೆಮನೆಯವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಿಟಕಿ ಗ್ಲಾಸ್‌ ಒಡೆದಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

VISTARANEWS.COM


on

By

Koo

ಉತ್ತರಪ್ರದೇಶ: ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬಳು(School teacher) ನೆರೆಮನೆಯವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಿಟಕಿ ಗ್ಲಾಸ್‌ ಒಡೆದಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ಪಾರುಲ್‌ ಶರ್ಮಾ (Parul Sharma) ಎಂಬ ಶಿಕ್ಷಕಿ ಬೆಳಗ್ಗೆ 3 ಗಂಟೆ ಸುಮಾರಿಗೆ ಪ್ರಿಯಾ ಗೋಯಲ್‌ ಎಂಬಾಕೆಯ ಮನೆಯ ಕಾಂಪೌಂಡ್‌ ಒಳಗೆ ನುಗ್ಗಿ ತಾನು ತಂದಿದ್ದ ಬ್ಯಾಗ್‌ನಿಂದ ಇಟ್ಟಿಗೆ, ಕಲ್ಲುಗಳಿಂದ ಕಾರಿನ ವಿಂಡೋ ಗ್ಲಾಸ್‌ (Window glass) ಜಖಂಗೊಳಿಸಿದ್ದಾಳೆ. ಆಕ್ರೋಶದಿಂದ ಕಾರಿನ ಮೇಲೆ ಕಲ್ಲು ಎತ್ತಿ ಹಾಕುತ್ತಿರುವುದನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಆಕೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಎಲ್ಲಾ ವಾಹನಗಳ ವಿಂಡೋ ಗ್ಲಾಸ್‌ಗಳನ್ನು ಪುಡಿಗಟ್ಟಿದ್ದಾಳೆ.

ಆಕೆಯ ಕೃತ್ಯ ಎಸಗುತ್ತಿದ್ದ ವೇಳೆ ಸದ್ದು ಕೇಳಿ ಎಚ್ಚರಗೊಂಡ ಪ್ರಿಯಾ ಗೋಯಲ್‌ ಹಾಗೂ ಆಕೆಯ ಕುಟುಂಬಸ್ಥರು ಪಾರುಲ್‌ಳನ್ನು ತಡೆಯಲು ಮುಂದಾಗಿದ್ದಾರೆ. ಆದರೂ ಅದನ್ನೂ ಲೆಕ್ಕಿಸದ ಪಾರುಲ್‌ ಪದೇ ಪದೇ ಕಲ್ಲಿನಿಂದ ಕಾರಿನ ಗ್ಲಾಸ್‌ ಪುಡಿ ಪುಡಿ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಮತ್ತೊಂದು ವಿಡಿಯೋ ಕ್ಲಿಪಿಂಗ್‌ನಲ್ಲಿ ಆಕೆಗೆ ತಾಯಿಯೂ ಜೊತೆಗಿರುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ಪಾರುಲ್‌ ಮನೆಯ ಬಾಗಿಲು ಒಡೆಯಲು ಕೂಡ ಯತ್ನಿಸಿದ್ದಾಳೆ.

ಇದನ್ನೂ ಓದಿ: Lok Sabha election 2024: ದಿಲ್ಲಿಯಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಯಲ್ಲಿ ಒಡಕು; ರಾಜ್ಯಾಧ್ಯಕ್ಷ ರಾಜೀನಾಮೆ

ಇದೀಗ ಪಾರುಲ್‌ ಕೃತ್ಯದ ವಿರುದ್ಧ ಪ್ರಿಯಾ ಗೋಯಲ್‌ ಪೊಲೀಸರಿಗೆ ದೂರು ನೀಡಿದ್ದು, ಕಾರಿನ ಗ್ಲಾಸ್‌ ಪುಡಿ ಮಾಡಿರುವ ಪಾರುಲ್‌ ಮನೆಯ ಗೇಟ್‌ ಲಾಕ್‌ ಒಡೆದು ತಮ್ಮ ಮೂರು ವರ್ಷದ ಮಗು ಸೇರಿದಂತೆ ಇತರೆ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದಾಳೆ. ಘಟನೆಯಲ್ಲಿ ಮಗು ಗಾಯಗೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸೂಕ್ತ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದೆ. ಮೇಲ್ನೋಟಕ್ಕೆ ಎರಡೂ ಕುಟುಂಬಗಳು ಹಲವು ದಿನಗಳಿಂದ ವೈಷಮ್ಯ ಹೊಂದಿದ್ದು, ಅದರ ಪರಿಣಾಮವಾಗಿಯೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿ ಶಂಕರ್‌ ಪ್ರಸಾದ್‌ ಮಾಹಿತಿ ಪ್ರಕಾರ ಸದ್ಯ ಬುಲಂದ್‌ಶೆಹರ್‌ನಲ್ಲಿ ಈ ವಿಡಿಯೋ ಬಹಳ ವೈರಲ್‌ ಆಗುತ್ತಿದ್ದು, ಪಾರುಲ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆ ವಿರುದ್ಧ ಅತಿಕ್ರಮಣ, ಆಸ್ತಿ-ಪಾಸ್ತಿ ನಾಶ ಮತ್ತು ಹಲ್ಲೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚೆಗೆ ಲಕ್ನೋದ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ಶಾಲೆಯಲ್ಲೇ ಫೇಶಿಯಲ್‌ ಮಾಡಿಕೊಳ್ಳುತ್ತಿದ್ದ ವಿಡಿಯೋ ಭಾರೀ ವೈರಲ್‌ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗ್ತಿದ್ದಂತೆ ವಿದ್ಯಾರ್ಥಿಗಳು ಪೋಷಕರು, ಜನಸಾಮಾನ್ಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳಿಗೆ ಊಟ ತಯಾರಿಸುವ ಕೋಣೆಯಲ್ಲಿ ಫೇಶಿಯಲ್ ಮಾಡಿಕೊಳ್ಳುತ್ತಿರುವುದನ್ನು ಕಂಡು ಸಹಾಯಕ ಶಿಕ್ಷಕಿ ವಿಡಿಯೊ ಮಾಡಿದ್ದರು. ಇದರಿಂದ ಕೋಪಗೊಂಡ ಮುಖ್ಯ ಶಿಕ್ಷಕಿ ಅವರನ್ನು ಹಿಗ್ಗಾಮುಗ್ಗಾ  ಥಳಿಸಿ, ಆಕೆಯ ಕೈಯನ್ನು ಕಚ್ಚಿ ಗಾಯಗೊಳಿಸಿದ್ದರು.

Continue Reading

ವೈರಲ್ ನ್ಯೂಸ್

Viral Video: ವಧುವಿಗೆ ಹೂಮಾಲೆ ಹಾಕಲು ವರ ಮಾಡಿರುವ ಕಿತಾಪತಿ ಏನು ನೋಡಿ!

Viral Video: ಮದುವೆ ಸಮಾರಂಭಗಳಲ್ಲಿ ಒಂದಲ್ಲ ಒಂದು ಎಡವಟ್ಟು ನಡೆದೇ ನಡೆಯುತ್ತೆ. ಇದರಲ್ಲಿ ಕೆಲವು ಗಂಭೀರ ರೂಪ ತಾಳಿದರೆ, ಇನ್ನು ಕೆಲವು ಎಲ್ಲರ ನಗೆಪಾಟಲಿಗೆ ಗುರಿಯಾಗುತ್ತದೆ. ಇಲ್ಲಿ ಸಿಕ್ಕಿರುವ ವಿಡಿಯೋವೊಂದು ಎಲ್ಲರೂ ನಗುವಂತೆ ಮಾಡಿದೆ.

VISTARANEWS.COM


on

By

Viral Video
Koo

ಮದುವೆ (wedding) ಮಂಟಪ ಸುಂದರವಾಗಿ ಅಲಂಕಾರಗೊಂಡಿತ್ತು. ವಧು ವರರು ಇಬ್ಬರೂ ವೇದಿಕೆಯಲ್ಲಿ ನಿಂತು ಒಂದೊಂದೇ ಶಾಸ್ತ್ರಗಳನ್ನು ಮಾಡುತ್ತಿದ್ದರು. ಇನ್ನೇನು ಹೂವಿನ ಮಾಲೆ (flower garland) ವಿನಿಮಯ ಮಾಡಿಕೊಳ್ಳಬೇಕಿತ್ತು. ವರನು (groom) ವಧುವಿಗೆ (bride) ಹೂವಿನ ಮಾಲೆ ಹಾಕಲು ಅವರಿಗೆ ಕುಳಿತು ಕೊಳ್ಳಲು ಇಟ್ಟಿದ್ದ ಸಿಂಹಾಸನದಿಂದ ಜಿಗಿದಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಎಲ್ಲರೂ ನಗುವಂತೆ ಮಾಡಿದೆ.

ಹಿಂದೂ ಸಂಪ್ರದಾಯದ ಮದುವೆಯಲ್ಲಿ ಹೂವಿನ ಮಾಲೆಯನ್ನು ಬದಲಾಯಿಸಿಕೊಳ್ಳುವ ಶಾಸ್ತ್ರವಿದೆ. ಈ ಸಂದರ್ಭದಲ್ಲಿ ವಧು ವರರು ಇಬ್ಬರಿಗೂ ಸಾಕಷ್ಟು ಸವಾಲುಗಳನ್ನು ಹತ್ತಿರದ ಸಂಬಂಧಿ, ಸ್ನೇಹಿತರು ತಂದೊಡ್ಡುತ್ತಾರೆ. ಅಂತೆಯೇ ಇಲ್ಲಿ ವಧು ಮತ್ತು ವರರು ಹೂವಿನ ಹಾರಗಳನ್ನು ವಿನಿಮಯ ಮಾಡಿಕೊಳ್ಳುವಾಗ ವಧುವಿನ ಕುಟುಂಬದವರು ವಧುವನ್ನು ಎತ್ತಿ ಹಿಡಿದು ವರನ ಮುಂದೆ ಸವಾಲು ಹಾಕಿದರು.

ಹಲವು ಬಾರಿ ವರ ಮಾಲೆ ಹಾಕಲು ಪ್ರಯತ್ನಿಸುತ್ತಾನೆ. ಆದರೆ ವಿಫಲನಾಗುತ್ತಾನೆ. ಕೊನೆಗೂ ವರನು ತನ್ನ ವಧುವನ್ನು ಗೆಲ್ಲುವ ಮಾರ್ಗವನ್ನು ಕಂಡುಕೊಂಡಿದ್ದಾನೆ. ಇದರ ವಿಡಿಯೋ ಎಕ್ಸ್ ನಲ್ಲಿ ಭಾರೀ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಮಂದಿ ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Viral News: ಸೈಕಲ್‌ ಸವಾರನಿಗೆ ಡಿಕ್ಕಿ ಹೊಡೆದು 2 ಕಿ.ಮೀ. ಎಳೆದೊಯ್ದ ಪಿಕ್‌ಅಪ್‌; ಶಾಕಿಂಗ್‌ ವಿಡಿಯೊ ಇಲ್ಲಿದೆ

ಏನಿದೆ ವಿಡಿಯೋದಲ್ಲಿ?

ಈ ವಿಡಿಯೋದಲ್ಲಿ ಸೆರೆಯಾಗಿರುವಂತೆ ವಧು ಈಗಾಗಲೇ ತನ್ನ ಗಂಡನ ಕುತ್ತಿಗೆಗೆ ಹೂವಿನ ಹಾರವನ್ನು ಹಾಕಿದ್ದಳು. ಈಗ ವರನ ಸರದಿ. ವಧುವಿನ ಸಂಬಂಧಿಗಳು ಅವಳನ್ನು ಎತ್ತಿ ಹಿಡಿದು ವರನಿಗೆ ಹೂಮಾಲೆ ಹಾಕುವ ಸವಾಲು ಹಾಕುತ್ತಾರೆ.


ವರನು ಮದುವೆಯ ಸಿಂಹಾಸನದ ಮೇಲೇರಿ ಜಿಗಿದ ಯಶಸ್ವಿಯಾಗಿ ವಧುವಿನ ಕುತ್ತಿಗೆಗೆ ಹಾರವನ್ನು ಹಾಕಿದನು. ವಧುವಿನ ಜೊತೆಗೆ ಸಂಬಂಧಿಕರು ತಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತಾರೆ. ಪರಿಣಾಮವಾಗಿ ಎಲ್ಲರೂ ವೇದಿಕೆಯ ಮೇಲೆ ಬಿದ್ದರು. ಕೊನೆಯಲ್ಲಿ, ವರನು ಹೆಮ್ಮೆಯಿಂದ ನಿಂತಿರುವಾಗ ವಧು ನಕ್ಕಳು.

ಸರಿತಾ ಸರವಾಗ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದು, ಸಾಕಷ್ಟು ಮಂದಿ ತಾವು ನೋಡಿರುವ, ಅನುಭವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹೂವಿನ ಮಾಲೆ ಹಾಕುವಾಗ ವರನ ತಂಡದ ವ್ಯಕ್ತಿಯೊಬ್ಬರು ಅವನನ್ನು ಮೇಲೆತ್ತುತ್ತಾನೆ. ಆಗ ಆತ ವಧುವಿನ ಮೇಲೆ ಬೀಳುವುದರಲ್ಲಿದ್ದ. ಆದರೆ ವಧುವಿನ ಸಮಯಪ್ರಜ್ಞೆಯಿಂದ ಘಟನೆಯು ದುರಂತ ತಿರುವು ಪಡೆಯುವುದು ತಪ್ಪಿತ್ತು.

Continue Reading

ಪ್ರಮುಖ ಸುದ್ದಿ

Girl Saved Mother: ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಯ ಜೀವ ಕಾಪಾಡಿತು ಪುತ್ರಿ ಶಾಲೆಯಲ್ಲಿ ಕಲಿತ ಪಾಠ!

ಅಲ್ಲಿನ ಅಭಯಂ 181 ಸಹಾಯವಾಣಿ ಅಧಿಕಾರಿಗಳ ಪ್ರಕಾರ, ಮಣಿಕಟ್ಟು ಸೀಳಿ ಬಿದ್ದಿರುವ ನಂತರ ತಾಯಿಗೆ ತೀವ್ರ ರಕ್ತಸ್ರಾವವಾಗುತ್ತಿದೆ ಎಂದು ಬಾಲಕಿಯೊಬ್ಬಳು ಕರೆ ಮಾಡಿದ್ದಾಳೆ. ತಕ್ಷಣ ಅವರ ಅಲ್ಲಿಗೆ ಹೋಗಿದ್ದಾಗ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರು ಮಹಿಳೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ.

VISTARANEWS.COM


on

girl Saved Mother
Koo

ಅಹಮದಾಬಾದ್​​: ಅಪ್ಪನ ದೌರ್ಜನ್ಯಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತನ್ನ ತಾಯಿಯನ್ನು ಏಳು ವರ್ಷದ ಬಾಲಕಿಯೊಬ್ಬಳು ಸಮಯ ಪ್ರಜ್ಞೆ ಹಾಗೂ ಚಾತುರ್ಯದ (Girl Saved Mother ) ಮೂಲಕ ಬದುಕುಳಿಸಿದ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ. ಅಂದ ಹಾಗೆ ಬಾಲಕಿಗೆ ನೆರವಾಗಿದ್ದು ಆಕೆ ತರಗತಿಯಲ್ಲಿ ಕಲಿತ ಪಾಠ. ಅಂದರೆ ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿಗೆ ಕರೆ ಮಾಡಬೇಕು ಎಂಬ ಶಿಕ್ಷಕರ ಹಿತನುಡಿ. ಹಾಗೆಯೇ ಕೈಯ ರಕ್ತನಾಳ ಕತ್ತರಿಸಿಕೊಂಡು ಅಸ್ವಸ್ಥಗೊಂಡು ಬಿದ್ದಿದ್ದ ತಾಯಿಯನ್ನು ನೋಡಿಯೂ ಗಾಬರಿಯಾಗದ ಆಕೆ ಸಹಾಯವಾಣಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕರೆಸಿ ಪ್ರಾಣ ಉಳಿಸಿದ್ದಾಳೆ.

ಕಳೆದ ಗುರುವಾರ ರಾತ್ರಿ ಘಟನೆ ನಡೆದಿದೆ ಎಂದು ಗುಜರಾತ್​ನ ಅಭಯಂ 181 ಸಹಾಯವಾಣಿ ಅಧಿಕಾರಿಗಳು ಹೇಳಿದ್ದಾರೆ. ಮಣಿಕಟ್ಟು ಸೀಳಿ ಬಿದ್ದಿರುವ ತಾಯಿಗೆ ತೀವ್ರ ರಕ್ತಸ್ರಾವವಾಗುತ್ತಿದೆ ಎಂದು ಬಾಲಕಿಯೊಬ್ಬಳು ಕರೆ ಅವರಿಗೆ ಕರೆ ಮಾಡಿದ್ದರು ತಕ್ಷಣ ಅವರ ಅಲ್ಲಿಗೆ ಹೋಗಿದ್ದಾಗ ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಅವರು ಮಹಿಳೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ.

ಆತ್ಮಹತ್ಯೆ ಮಾಡಲು ಮುಂದಾಗಿರುವ ಮಹಿಳೆಯ ಗಂಡ ಅಪರಾಧವೊಂದರಲ್ಲಿ ಜೈಲು ಸೇರಿದ್ದ. ಅಲ್ಲಿಂದ ಬಿಡುಗಡೆಯಾಗಿ ಬಂದ ಬಳಿಕವೂ ಸಣ್ಣ ವಿಷಯಗಳಿಗೆ ಜಗಳವಾಡಲು ಪ್ರಾರಂಭಿಸಿದ್ದ. ಆಗಾಗ್ಗೆ ನಡೆಯುವ ಜಗಳಗಳಿಂದ ಬೇಸತ್ತ ಮಹಿಳೆ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದಳು. ಪುತ್ರಿಯ ಸಮಯೋಚಿತ ಕರೆಯಿಂದ ಅವರೀಗ ಬದುಕಿದ್ದರೆ. ಶಾಲೆಯಲ್ಲಿ ಪಡೆದ ತರಬೇತಿಯನ್ನು ನೆನಪು ಮಾಡಿಕೊಂಡ ಬಾಲಕಿ ನಮ್ಮ ಸಹಾಯವಾಣಿ ಮತ್ತು 108 ಆಂಬ್ಯುಲೆನ್ಸ್ ಸೇವೆಗಳ ತುರ್ತು ಸಂಖ್ಯೆಗಳನ್ನು ನೆನಪಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಲಿಬಿಲಿಗೊಳ್ಳದ ಬಾಲಕಿ

ಸಾಮಾನ್ಯವಾಗಿ ಸಣ್ಣ ಮಕ್ಕಳು ಕಠಿಣ ಪರಿಸ್ಥಿತಿಯಲ್ಲಿ ಹೆಚ್ಚು ಗಲಿಬಿಲಿಗೆ ಒಳಗಾಗುತ್ತಾರೆ. ಅವರಿಗೆ ಮುಂದೇನು ಮಾಡಬೇಕು ಎಂಬ ಯೋಚನೆಯೇ ಇರುವುದಿಲ್ಲ. ಅಲ್ಲದೆ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಜೋರಾಗಿ ಅಳುವುದಕ್ಕೆ ಆರಂಭಿಸುತ್ತಾರೆ. ಆದರೆ ಈ ಏಳು ವರ್ಷದ ಬಾಲಕಿ ಆ ರೀತಿ ಮಾಡಿಲ್ಲ. ತಾಯಿ ರಕ್ತ ಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿಯೂ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಆಕೆಯ ಕರೆಯಿಂದಾಗಿ ಜೀವವೊಂದು ಉಳಿದಿದೆ.

ಬದುಕಿನ ಪಾಠ ಅಗತ್ಯ

ಆಧುನಿಕ ಜಗತ್ತಿನಲ್ಲಿ ಜನರಿಗೆ ತುರ್ತು ಪರಿಸ್ಥಿತಿಗಳು ಹೆಚ್ಚಾಗಿ ಎದುರಾಗುತ್ತವೆ. ಆದರೆ, ಬಹುತೇಕ ಸಂದರ್ಭದಲ್ಲಿ ಅವುಗಳನ್ನು ನಿರ್ವಹಿಸಲು ಸಾಧ್ಯವಾಗದೇ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತವೆ. ಹೀಗಾಗಿ ತುರ್ತು ಸಂದರ್ಭದಲ್ಲಿ ಪ್ರಾಣ ಉಳಿಸಲು ಅಥವಾ ಆ ಕ್ಷಣದಿಂದ ಬಚಾವಾಗಲು ಏನು ಮಾಡಬೇಕು ಎಂಬ ತರಬೇತಿ ಅಗತ್ಯವಾಗಿದೆ. ಅದರಲ್ಲೂ ಶಾಲಾ ಮಕ್ಕಳಿಗೆ ಈ ನಿಟ್ಟಿನಲ್ಲಿ ತರಬೇತಿ ಕಡ್ಡಾಯ.

ಇದನ್ನೂ ಓದಿ: Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಛಾಟಿತ ನಾಯಕ ಅರೆಸ್ಟ್‌

ಜನಜಂಗುಳಿ ತುಂಬಿರುವ ಪೇಟೆ ಮತ್ತು ಏಕಾಂಗಿಯಾಗಿರುವ ವೇಳೆ ನಾನಾ ಆತಂಕಗಳನ್ನು ಇಂದಿನ ಮಕ್ಕಳು ಎದುರಿಸುತ್ತಾರೆ. ಆದರೆ, ಅದನ್ನು ನಿಭಾಯಿಸಲು ಸಾಧ್ಯವಾಗದೇ ಮಕ್ಕಳು ದುರ್ಘಟನೆಗಳ ಬಲಿಪಶು ಆಗುತ್ತಾರೆ. ಹೀಗಾಗಿ ಶಾಲಾ ಹಂತದಲ್ಲಿಯೇ ಇಂಥ ಸಂದರ್ಭಗಳನ್ನು ನಿಭಾಯಿಸುವ ತಂತ್ರಗಳನ್ನು ಹೇಳಿಕೊಡಬೇಕಾಗುತ್ತದೆ.

ಶಾಲಾ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಈಗ ಲೈಂಗಿಕ ದೌರ್ಜನ್ಯದ ವಿರುದ್ಧ ಹೇಗೆ ಹೋರಾಡಬೇಕು ಎಂಬ ಪಾಠವನ್ನು ಹೇಳಿಕೊಡಲಾಗುತ್ತದೆ. ಅದು ಬಹುತೇಕ ಸಾಫಲ್ಯ ಕಾಣುತ್ತಿದೆ. ಆದರೆ, ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಕೆಲವು ತಂತ್ರಗಳನ್ನು ಕೆಲವೊಂದು ಶಾಲೆಗಳಲ್ಲಿ ಮಾತ್ರ ಕಲಿಸಲಾಗುತ್ತದೆ. ಇಲ್ಲಿ ಗಂಡು ಹಾಗೂ ಹೆಣ್ಣು ಎಂಬ ಭೇದವಿಲ್ಲದೇ ಎಲ್ಲ ಮಕ್ಕಳಿಗೂ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಪಾಠ ಹೇಳಿಕೊಡಬೇಕಾದ ಅಗತ್ಯವಿದೆ.

ಮೇಲಿನ ಪ್ರಕರಣದಲ್ಲಿ ಬಾಲಕಿಗೆ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಶಾಲೆಯಲ್ಲಿ ಹೇಳಿಕೊಟ್ಟಿದ್ದ ಕಾರಣ ಆಕೆಯ ತಾಯಿಯ ಪ್ರಾಣ ಉಳಿದಿದೆ. ಒಂದು ವೇಳೆ ಆಕೆ ಅಂಥದ್ದೊಂದು ಪರಿಸ್ಥಿತಿಯನ್ನು ಎದುರಿಸಲು ಸಿದ್ಧಗೊಳ್ಳದೇ ಹೋಗಿದ್ದರೆ ತಬ್ಬಲಿಯಾಗಬೇಕಾಗಿತ್ತು.

Continue Reading

ಕರ್ನಾಟಕ

Zameer Ahmed Khan‌: ಸಚಿವ ಜಮೀರ್ ಅಹ್ಮದ್ ರೋಷಾವೇಶದ ಭಾಷಣಕ್ಕೆ ಗಾಜು ಪೀಸ್‌ ಪೀಸ್; ಇಲ್ಲಿದೆ ವಿಡಿಯೊ

Zameer Ahmed Khan‌: ಗೋಕಾಕ್ ನಗರದಲ್ಲಿ‌ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಜಮೀರ್‌ ಅಹ್ಮದ್‌ ಅವರು ಭಾಷಣ ಮಾಡುತ್ತಿದ್ದಾಗ, ಡಯಾಸ್‌ ಮೇಲೆ ಗುದ್ದಿ ಗಾಜನ್ನು ಪುಡಿಪುಡಿ ಮಾಡಿದ್ದಾರೆ.

VISTARANEWS.COM


on

Zameer Ahmed Khan‌
Koo

ಬೆಳಗಾವಿ: ರೋಷಾವೇಶವಾಗಿ ಭಾಷಣ ಮಾಡುವ ವೇಳೆ ಸಚಿವ ಜಮೀರ್ ಅಹ್ಮದ್‌ ಅವರು ಕೈಯಿಂದ ಗುದ್ದಿ ಡಯಾಸ್‌ ಗಾಜನ್ನು ಪುಡಿ ಪುಡಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಗೋಕಾಕ್ ನಗರದಲ್ಲಿ‌ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಕೈ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಜಮೀರ್‌ ಅಹ್ಮದ್‌ (Zameer Ahmed Khan‌) ಅವರು ಭಾಷಣ ಮಾಡುತ್ತಿದ್ದರು. ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಾ ಡಯಾಸ್‌ ಮೇಲೆ ಗುದ್ದಿದ್ದರಿಂದ ಗಾಜು ಪುಡಿಪುಡಿಯಾಗಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಗೋಕಾಕ್‌ ಕೆಜಿಎನ್ ಹಾಲ್‌ ಶನಿವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಘಟನೆ ನಡೆದಿದೆ. ಭಾಷಣದ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಜಮೀರ್‌ ಅಹ್ಮದ್‌ ಅವರು, ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಎದೆಗೆ ಗುಂಡು ತಿಂದು ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಆದರೆ, ಬಿಜೆಪಿಯವರು ಕೋಮು ದ್ವೇಷ ಬಿತ್ತಲು ಮುಂದಾಗುತ್ತಾರೆ ಎಂದು ಆರೋಪಿಸಿದರು.

ಸಾರೇ ಜಹಾಂಸೇ ಅಚ್ಚಾ, ನಾವೆಲ್ಲ ಒಂದು, ದೇಶ ಹಮಾರಾ ಹೈ ಹಮಾರಾ ಹೈ ಎನ್ನುತ್ತಾ ಜಮೀರ್ ಅವರು ಕೈಯಿಂದ ಡಯಾಸ್ ಗಾಜಿಗೆ ಗುದ್ದಿದ್ದಾರೆ. ಜಮೀರ್ ಗುದ್ದುತ್ತಿದ್ದಂತೆಯೇ ಡಯಾಸ್‌ಗೆ ಅಳವಡಿಸಿದ ಗಾಜು ಒಡೆದು ಚೂರು ಚೂರಾಗಿದೆ. ಈ ವೇಳೆ ಅಲ್ಲೆ ನೆರೆದಿದ್ದ ಕಾರ್ಯಕರ್ತರು ಕೂಗ ತೊಡಗಿದರು. ಗಾಜು ಒಡೆದರೂ ಸಚಿವರು ಮಾತ್ರ ತಮ್ಮ ಭಾಷಣ ಮುಂದುವರೆಸಿದ್ದು ಕಂಡುಬಂತು.

ಇವ್ರು ನಮ್ಮ ಪ್ರಧಾನಿ ಮೋದಿ ಅಲ್ಲ; ಪಾನಿಪುರಿ ಮಾರೋ ಈ ಮೋದಿ ಫುಲ್‌ ಫೇಮಸ್‌

ಗುಜರಾತ್‌: ದೇಶಾದ್ಯಂತ ಲೋಕಸಭೆ ಚುನಾವಣೆ ರಂಗೇರಿದೆ. ಅಬ್ಬರದ ಪ್ರಚಾರ, ಪ್ರತಿಪಕ್ಷಗಳಿಗೆ ಟಾಂಗ್‌ ಕೊಡುತ್ತಾ ಒಂದೆಡೆ ಪ್ರಧಾನಿ ಮೋದಿ ಬ್ಯುಸಿ ಆಗಿದ್ದರೆ, ಮತ್ತೊಂದೆಡೆ ಗುಜರಾತ್‌ನಲ್ಲೊಬ್ಬ ಮೋದಿ ಪಾನಿಪುರಿ(Viral video) ಮಾರುತ್ತಾ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಒಂದು ಕ್ಷಣ ನೋಡೋರಿಗೆ ಪ್ರಧಾನಿ ಮೋದಿಯೇ ಪಾನಿಪುರಿ ಮಾರುತ್ತಿದ್ದಾರೋ ಅಂತ ಅನಿಸೋದು ಪಕ್ಕಾ! ಗುಜರಾತ್‌ನ ಆನಂದ್‌ನಲ್ಲಿ ಪಾನಿಪುರಿ ಅಂಗಡಿ(Pani puri seller) ನಡೆಸುತ್ತಿರುವ ಅನಿಲ್‌ ಭಾಯಿ ಠಕ್ಕರ್‌ ಪ್ರಧಾನಿ ನರೇಂದ್ರ ಮೋದಿ(Narendra Modi) ಯಂತೆ ಉಡುಪು ತೊಟ್ಟು, ಕನ್ನಡಕ ಧರಿಸಿ, ಹೇರ್‌ಸ್ಟೈಲ್‌ ಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ಮೋದಿ ಎಂದೇ ಫುಲ್‌ ಫೇಮಸ್‌ ಆಗಿದ್ದಾರೆ.

ಬಿಳಿ ಗಡ್ಡ, ಕೇಶ ವಿನ್ಯಾಸ ಆತನ ಹಾವಭಾವ ಪ್ರಧಾನಿ ಮೋದಿಗೆ ಹೋಲುತ್ತಿರುವ ಠಕ್ಕರ್‌, ಮೂಲತಃ ಜುನಾಗಢ್‌ ನಿವಾಸಿ. ಅವರು ತಮ್ಮ 18ನೇ ವಯಸ್ಸಿನಿಂದಲೂ ತುಳಸಿ ಪಾನಿ ಪುರಿ ಎಂಬ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ಅಂಗಡಿಯನ್ನು ಅವರ ತಾತ ಶುರು ಮಾಡಿದ್ದರು ಎಂಬುದು ವಿಶೇಷ. ಇನ್ನು ಮೋದಿಯಂತೆ ಕಾಣುತ್ತಿರುವ ಠಕ್ಕರ್‌ ಅವರ ವಿಶೇಷ ಲುಕ್‌ಗೆ ಮನಸೋತಿರುವ ಗ್ರಾಹಕರು ಅವರ ಬಳಿ ಬಂದು ಪಾನಿಪುರಿ ತಿಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.

ಸುಮಾರು 71 ವರ್ಷದ ಠಕ್ಕರ್‌ ಪ್ರಧಾನಿ ನರೇಂದ್ರ ಮೋದಿಯ ಅಪ್ಪಟ ಅಭಿಮಾನಿ. ಅವರ ಸ್ವಚ್ಛ ಭಾರತ ಅಭಿಯಾನದಿಂದ ಬಹಳಷ್ಟು ಸ್ಫೂರ್ತಿಗೊಂಡಿರುವ ಠಕ್ಕರ್‌ ತಮ್ಮ ಅಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಾರೆ. ತಮ್ಮ ವಿಶೇಷ ಲುಕ್‌ ಬಗ್ಗೆ ಪ್ರತಿಕ್ರಿಯಿಸಿರುವ ಠಕ್ಕರ್‌, ನನ್ನ ಪ್ರಧಾನಿ ಮೋದಿಯ ಲುಕ್‌ ಬಗ್ಗೆ ಜನ ಅತ್ಯಂತ ಪ್ರೀತಿ ತೋರುತ್ತಿದ್ದಾರೆ. ಸ್ಥಳೀಯರು ಮತ್ತು ಪ್ರವಾಸಿಗರು ನನ್ನ ಬಳಿ ಬಂದು ಸೆಲ್ಫಿ ತೆಗೆದುಕೊಂಡು ಹೋಗುವುದು ಬಹಳ ಸಂತೋಷ ಕೊಡುತ್ತಿದೆ. ಅವರ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mamata Banerjee: ಹೆಲಿಕಾಪ್ಟರ್‌ ಏರುವಾಗ ಬಿದ್ದ ಮಮತಾ ಬ್ಯಾನರ್ಜಿ, ಗಾಯ

ಇನ್ನು ಠಕ್ಕರ್‌ ಮಾತ್ರವಲ್ಲ ಮುಂಬೈನಲ್ಲೂ ಮತ್ತೋರ್ವ ವ್ಯಕ್ತಿಯೂ ಪ್ರಧಾನಿ ಮೋದಿಯಂತೆ ತನ್ನ ಸ್ಟೈಲ್‌ ಅನ್ನು ಬದಲಿಸಿಕೊಂಡು ಫುಲ್‌ ಫೇಮಸ್‌ ಆಗಿದ್ದಾನೆ. ಮುಂಬೈನ ವಿಕಾಸ್‌ ಮಹಂತೆ ಎಂಬಾತ ಗರ್ಬಾ ಡಾನ್ಸ್‌ ಮಾಡುತ್ತಿರುವ ವಿಡಿಯೋ ಫೇಮಸ್‌ ಆಗಿತ್ತು. ಇದು ಪ್ರಧಾನಿ ಮೋದಿಯ ಡೀಪ್‌ ಫೇಕ್‌ ವಿಡಿಯೋ ಎನ್ನಲಾಗಿತ್ತು. ಆದಾದ ಬಳಿಕ ಸ್ವತಃ ವಿಕಾಸ್‌ ಮಹಾಂತೆ ವಿಡಿಯೋದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ತಾವೊಬ್ಬ ಪ್ರಧಾನಿ ಮೋದಿಯ ಅಭಿಯಾನಿ. ಆ ವಿಡಿಯೋ ಸ್ವತಃ ತನ್ನದೇ ಎಂದು ಹೇಳಿದ್ದರು. ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಆಗಾಗ ಜೂನಿಯರ್‌ ಮೋದಿಗಳು ಗಮನ ಸೆಳೆಯುತ್ತಿರುತ್ತಾರೆ. ಆದರೆ ಇದೀಗ ಪಾನಿಪುರಿ ಮಾರುತ್ತಿರುವ ಮೋದಿಯನ್ನು ಕಂಡು ಜನಕ್ಕೆ ಖುಷಿಯೋ ಖುಷಿ.





Continue Reading
Advertisement
Gold Rate
ಪ್ರಮುಖ ಸುದ್ದಿ3 mins ago

Gold Rate : ಏರುಗತಿಯಲ್ಲಿದೆ ಬಂಗಾರದ ಬೆಲೆ; ಇನ್ನೂ ಏರುವ ಮೊದಲು ಖರೀದಿ ಸೂಕ್ತ

ದೇಶ7 mins ago

School Teacher: ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಶಿಕ್ಷಕಿ ಪುಂಡಾಟ; ನೆರೆಮನೆಯವರ ಮೇಲೂ ಹಲ್ಲೆ

Varalaxmi Sarathkumar negative comments on fiance
ಕಾಲಿವುಡ್16 mins ago

Varalaxmi Sarathkumar: ನನ್ನ ತಂದೆ ಎರಡು ಮದುವೆಯಾದರು, ಹಾಗೇ ನಾನೂ ಕೂಡ ಎಂದ ನಟ ಶರತ್‌ಕುಮಾರ್ ಪುತ್ರಿ!

Viral Video
ವೈರಲ್ ನ್ಯೂಸ್20 mins ago

Viral Video: ವಧುವಿಗೆ ಹೂಮಾಲೆ ಹಾಕಲು ವರ ಮಾಡಿರುವ ಕಿತಾಪತಿ ಏನು ನೋಡಿ!

Outdoor Exercise
ಆರೋಗ್ಯ24 mins ago

Outdoor Exercise: ಹೊರಾಂಗಣ ವ್ಯಾಯಾಮ ಖಿನ್ನತೆಯನ್ನು ದೂರ ಮಾಡುವುದೇ?

Has Karnataka Congress government suggested PM Narendra Modi programme should not be success Kageri question to police
Lok Sabha Election 202428 mins ago

PM Narendra Modi: ಮೋದಿ ಕಾರ್ಯಕ್ರಮ ವಿಫಲಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆಯೇ? ಪೊಲೀಸರಿಗೆ ಕಾಗೇರಿ ಪ್ರಶ್ನೆ

Congress MLA
ಪ್ರಮುಖ ಸುದ್ದಿ43 mins ago

Congress MLA : ಕಾಂಗ್ರೆಸ್​ ಶಾಸಕರಿಗೆ ಘೇರಾವ್ ಕೂಗಿದ ಬಿಜೆಪಿ ಕಾರ್ಯಕರ್ತರು; ಮಾತಿನ ಚಕಮಕಿ

Prajwal Revanna Pen Drive Case Prajwal Revanna accused of sex scandal No interference in SIT probe says Parameshwara
Lok Sabha Election 202458 mins ago

Prajwal Revanna Pen Drive: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ​; ಎಸ್​​ಐಟಿ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ: ಪರಮೇಶ್ವರ್

ರಾಜಕೀಯ1 hour ago

Lok Sabha election 2024: ದಿಲ್ಲಿಯಲ್ಲಿ ಆಪ್‌-ಕಾಂಗ್ರೆಸ್‌ ಮೈತ್ರಿಯಲ್ಲಿ ಒಡಕು; ರಾಜ್ಯಾಧ್ಯಕ್ಷ ರಾಜೀನಾಮೆ

777 Charlie
ಸ್ಯಾಂಡಲ್ ವುಡ್1 hour ago

777 Charlie: ಜಪಾನಿನಲ್ಲಿ `777 ಚಾರ್ಲಿ ಹವಾ’: ವರ್ಲ್ಡ್​​ ಟೂರ್‌ಗೆ ಧರ್ಮ ಹಾಗೂ ಚಾರ್ಲಿ ರೆಡಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ3 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202419 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ3 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

ಟ್ರೆಂಡಿಂಗ್‌