ರಕ್ತ ಬಸಿಯಲು ಬಂದಿದ್ದ ಪಾಕ್‌ ಉಗ್ರನಿಗೆ ರಕ್ತ ನೀಡಿ ಬದುಕುಳಿಸಿದ ಭಾರತೀಯ ಸೇನಾ ಯೋಧರು! - Vistara News

ದೇಶ

ರಕ್ತ ಬಸಿಯಲು ಬಂದಿದ್ದ ಪಾಕ್‌ ಉಗ್ರನಿಗೆ ರಕ್ತ ನೀಡಿ ಬದುಕುಳಿಸಿದ ಭಾರತೀಯ ಸೇನಾ ಯೋಧರು!

ಭಾರತೀಯ ಸೇನೆಯ ನೆಲೆಗಳ ಮೇಲೆ ದಾಳಿ ನಡೆಸಲೆಂದೇ ಬಂದಿದ್ದ ಉಗ್ರನನ್ನು ಜೀವಂತವಾಗಿ ಬಂಧಿಸಿದ ಭಾರತೀಯ ಸೇನೆಯ ಯೋಧರು, ಗುಂಡುಗಳಿಂದ ಗಾಯಗೊಂಡಿದ್ದ ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಮಾನವೀಯತೆ ಮೆರೆದಿದ್ದಾರೆ.

VISTARANEWS.COM


on

Target Indian Army
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಭಾರತೀಯ ಸೇನೆಯ ಮೇಲೆ ದಾಳಿ ಮಾಡಲು ಬಂದು, ಗಾಯಗೊಂಡಿದ್ದ ಪಾಕ್‌ ಉಗ್ರನನ್ನು ಯೋಧರೇ ಸೇನಾ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆಗೆ ಅಗತ್ಯವಾಗಿದ್ದ ರಕ್ತವನ್ನೂ ದಾನ ಮಾಡಿ, ಬದುಕುಳಿಸಿದ ಘಟನೆ ಕಾಶ್ಮೀರದಲ್ಲಿ ನಡೆದಿದೆ.

ಪಾಕಿಸ್ತಾನ ಸೇನೆಯ ಕರ್ನಲ್‌ ಒಬ್ಬರು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲೆಂದೇ ತಬರಾಕ್‌ ಹುಸೇನ್‌ ಎಂಬ ಉಗ್ರನನ್ನು ಕಳುಹಿಸಿಕೊಟ್ಟಿದ್ದರು. ಈತ ಆಗಸ್ಟ್‌ ೨೧ರಂದು ರಾತ್ರಿ ರಾಜೌರಿ ಭಾಗದ ಗಡಿನಿಯಂತ್ರಣ ರೇಖೆಯಲ್ಲಿ ಭಾರತಕ್ಕೆ ನುಸುಳುವ ಯತ್ನ ನಡೆಸಿದ್ದ. ಈ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಿದ್ದ ಭಾರತೀಯ ಸೇನೆಯ ಯೋಧರು, ಆತನನ್ನು ಜೀವಂತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಯೋಧರು ಹಾರಿಸಿದ ಗುಂಡು ಆತನ ತೋಳು ಮತ್ತು ತೊಡೆಗೆ ಬಿದ್ದು, ಆತ ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನು ಸೇನಾ ಆಸ್ಪತ್ರೆಗೆ ಸೇರಿಸಿದ ಯೋಧರು, ಆತನಿಗೆ ಚಿಕಿತ್ಸೆ ಕೊಡಿಸಿದ್ದರು. ಶಸ್ತ್ರಚಿಕಿತ್ಸೆ ಮಾಡುವಾಗ ಆತನಿಗೆ ರಕ್ತ ಬೇಕಾಗಿತ್ತು. ಭಾರತೀಯ ಸೇನೆಯ ಯೋಧರೇ ಆತನಿಗೆ ರಕ್ತವನ್ನೂ ದಾನ ಮಾಡಿದ್ದಾರೆ.

“ಆತನದು ಅಪರೂಪವಾದ ʼಒ ನೆಗೆಟಿವ್‌ʼ ಗ್ರೂಪ್‌ ಆಗಿತ್ತು. ನಮ್ಮ ಯೋಧರು ರಕ್ತವನ್ನೂ ನೀಡಿದರು. ಆತ ನಮ್ಮ ರಕ್ತ ಬಸಿಯಲು ಬಂದಿದ್ದರೂ, ಆತನನ್ನು ಉಗ್ರ ಎಂದು ಪರಿಗಣಿಸದೇ ಸಾಮಾನ್ಯ ರೋಗಿಯಂತೆ ಆತನಿಗೆ ಚಿಕಿತ್ಸೆ ಕೊಡಿಸಿ, ಆತನಿಗೆ ಜೀವ ಉಳಿಸಿಕೊಳ್ಳಲು ನೆರವಾಗಿದ್ದೇವೆʼʼ ಎಂದು ಸೇನೆಯ ಬ್ರಿಗೇಡಿಯರ್‌ ನೈರ್‌ ತಿಳಿಸಿದ್ದಾರೆ.

ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಸೇನ್‌ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಈತ ಪಾಕಿಸ್ತಾನದ ಕುತಂತ್ರದ ಕುರಿತು ಮಾಹಿತಿ ಕೂಡ ನೀಡಿದ್ದಾನೆ.

೩೦ ಸಾವಿರ ಕೊಟ್ಟು ಕಳುಹಿಸಿದ್ದರು!

ಭಾರತೀಯ ಸೇನೆಯ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಸೇನೆಯೇ ಉಗ್ರರನ್ನು ಭಾರತಕ್ಕೆ ನುಗ್ಗಿಸುತ್ತಿರುವುದು ಪದೇ ಪದೇ ಸಾಬೀತಾಗುತ್ತಿದೆ. ಭಾನುವಾರ ಬಂಧಿಸಲ್ಪಟ್ಟ ಉಗ್ರ ತಬರಾಕ್‌ ಹುಸೇನ್‌ “ಭಾರತೀಯ ಸೇನೆಯ ಮೇಲೆ ಆತ್ಮಾಹುತಿ ದಾಳಿ ನಡೆಸಲು ಪಾಕ್‌ ಸೇನೆಯ ಕರ್ನಲ್‌ 30 ಸಾವಿರ ರೂ. ನೀಡಿ ತಮ್ಮನ್ನು ಕಳುಹಿಸಿದ್ದರುʼʼ ಎಂದು ಹೇಳಿಕೆ ನೀಡಿದ್ದಾನೆ.

ಪಾಕ್‌ ಸೇನೆಯ ಕರ್ನಲ್‌ ಯೂನಸ್‌ ತನಗೆ ಮತ್ತು ಇನ್ನಿತರ ಐವರಿಗೆ ಆತ್ಮಾಹುತಿ ದಾಳಿ ನಡೆಸಲು ಹಣ ನೀಡಿ ಕಳುಹಿಸಿಕೊಟ್ಟಿದ್ದಾರೆ ಎಂದು ಬಾಯ್ಬಿಟ್ಟಿದ್ದಾನೆ. ದಾಳಿ ನಡೆಸಲು ತಾನು ಭಾರತೀಯ ಸೇನೆಯ ಮೂರ್ನಾಲ್ಕು ನೆಲೆಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾಗಿ ಹುಸೇನ್‌ ಹೇಳಿಕೆ ನೀಡಿದ್ದಾನೆ.

“ನಾನು ಇನ್ನೂ ನಾಲ್ಕೈದು ಜನರೊಂದಿಗೆ ಭಾರತಕ್ಕೆ ನುಸುಳಲು ಬಂದಿದ್ದೆ. ನಮಗೆ ಪಾಕ್‌ ಸೇನೆಯ ಕರ್ನಲ್‌ ೩೦ ಸಾವಿರ ರೂ. ನೀಡಿ, ಭಾರತೀಯ ಸೇನೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸುವಂತೆ ಸೂಚಿಸಲಾಗಿತ್ತು. ದಾಳಿ ನಡೆಸುವ ನೆಲೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತುʼʼ ಎಂದು ವಿವರಿಸಿದ್ದಾನೆ.

ಇದನ್ನೂ ಓದಿ| JeM Terrorist | ಪಾಕ್‌ ಉಗ್ರರ ಆಣತಿಯಂತೆ ಆತ್ಮಾಹುತಿ ಬಾಂಬರ್‌ಗಳನ್ನು ಸಜ್ಜುಗೊಳಿಸುತ್ತಿದ್ದ ಬಂಧಿತ ಭಯೋತ್ಪಾದಕರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Rahul Gandhi: ಹಿಂದುಗಳಿಗೆ ಅವಮಾನ ಖಂಡಿಸಿ ದೇಗುಲದ ಡೋರ್‌ಮ್ಯಾಟ್‌ಗೆ ರಾಹುಲ್‌ ಗಾಂಧಿ ಫೋಟೊ; ಇಲ್ಲಿದೆ Video

Rahul Gandhi: ಹಿಂದುಗಳ ಕುರಿತು ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ದೇವಾಲಯವೊಂದರ ಆಡಳಿತ ಮಂಡಳಿಯು ಡೋರ್‌ಮ್ಯಾಟ್‌ಗೆ ರಾಹುಲ್‌ ಗಾಂಧಿ ಅವರ ಫೋಟೊವನ್ನು ಅಳವಡಿಸಿದೆ. ದೇಗುಲಕ್ಕೆ ತೆರಳುವ ಭಕ್ತರು ರಾಹುಲ್‌ ಗಾಂಧಿ ಅವರ ಫೋಟೊ ಇರುವ ಡೋರ್‌ಮ್ಯಾಟ್‌ಅನ್ನು ತುಳಿದುಕೊಂಡು ಹೋಗುತ್ತಿರುವ ವಿಡಿಯೊ ಲಭ್ಯವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ.

VISTARANEWS.COM


on

Rahul Gandhi
Koo

ಮುಂಬೈ: ಪ್ರತಿಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ (Rahul Gandhi) ಅವರು ಹಿಂದುಗಳ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೂಡ ಸಂಸತ್‌ನಲ್ಲಿ ರಾಹುಲ್‌ ಗಾಂಧಿ ಹೇಳಿಕೆಯನ್ನು ಖಂಡಿಸಿದ್ದಾರೆ. ಇದರ ಬೆನ್ನಲ್ಲೇ, ಹಿಂದುಗಳ ಕುರಿತು ರಾಹುಲ್‌ ಗಾಂಧಿ ನೀಡಿದ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರದ ದೇಗುಲದ (Maharashtra Temple) ಡೋರ್‌ ಮ್ಯಾಟ್‌ಗೆ ರಾಹುಲ್‌ ಗಾಂಧಿ ಅವರ ಫೋಟೊವನ್ನು ಅಳವಡಿಸಲಾಗಿದೆ. ಈ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

ಹಿಂದುಗಳ ಕುರಿತು ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿ ದೇವಾಲಯದ ಆಡಳಿತ ಮಂಡಳಿಯು ಡೋರ್‌ಮ್ಯಾಟ್‌ಗೆ ರಾಹುಲ್‌ ಗಾಂಧಿ ಅವರ ಫೋಟೊವನ್ನು ಅಳವಡಿಸಿದೆ. ದೇಗುಲಕ್ಕೆ ತೆರಳುವ ಭಕ್ತರು ರಾಹುಲ್‌ ಗಾಂಧಿ ಅವರ ಫೋಟೊ ಇರುವ ಡೋರ್‌ಮ್ಯಾಟ್‌ಅನ್ನು ತುಳಿದುಕೊಂಡು ಹೋಗುತ್ತಿರುವ ವಿಡಿಯೊ ಲಭ್ಯವಾಗಿದೆ. ಅಷ್ಟೇ ಅಲ್ಲ, ಡೋರ್‌ ಮ್ಯಾಟ್‌ ಮೇಲೆ, “ಹಿಂದುಗಳನ್ನು ಹಿಂಸಾವಾದಿಗಳು ಎಂಬುದಾಗಿ ಕರೆಯಲು ನಿಮಗೆ ಎಷ್ಟು ಧೈರ್ಯ” ಎಂದು ಕೂಡ ಬರೆಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್‌ ಆಗುತ್ತಲೇ ಪರ-ವಿರೋಧ ಚರ್ಚೆಯಾಗುತ್ತಿದೆ.

ರಾಹುಲ್‌ ಗಾಂಧಿ ಹೇಳಿದ್ದೇನು?

“ಹಿಂದೂ ಧರ್ಮ ಹಾಗೂ ನಮ್ಮ ಅನೇಕ ಹಿಂದೂ ಮಹಾಪುರುಷರು ಅಹಿಂಸೆಯನ್ನು ಪ್ರತಿಪಾದಿಸುತ್ತಾರೆ. ಜೀಸಸ್‌ ಕ್ರೈಸ್ಟ್‌ ಕೂಡ ಅಹಿಂಸೆಯನ್ನೇ ಪ್ರತಿಪಾದಿಸುತ್ತಾನೆ. ಸ್ವತಃ ಕೈಯಲ್ಲಿ ತ್ರಿಶೂಲ ಹಿಡಿದಿರುವ ಮಹಾಶಿವನೂ ಅಹಿಂಸೆಯನ್ನೇ ಹೇಳುತ್ತಾನೆ. ಆದರೆ ದಿನದ 24 ಗಂಟೆ ಹಿಂದೂಗಳೆಂದು ಹೇಳುತ್ತಾ ತಿರುಗಾಡುವವರು ಹಿಂಸೆ, ಶತ್ರುತ್ವ, ಅಸತ್ಯವನ್ನೇ ಹೇಳುತ್ತಿದ್ದಾರೆ. ನೀವು ಹಿಂದೂಗಳೇ ಅಲ್ಲ” ಎಂದು ರಾಹುಲ್‌ ಗಾಂಧಿ ಸಂಸತ್‌ನಲ್ಲಿ ಜುಲೈ 1ರಂದು ಹೇಳಿದ್ದರು.

ಮೋದಿ ತಿರುಗೇಟು ಕೊಟ್ಟಿದ್ದರು

ರಾಹುಲ್‌ ಗಾಂಧಿ ಹೇಳಿಕೆಗೆ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿಯೇ ತಿರುಗೇಟು ಕೊಟ್ಟಿದ್ದರು. “ಸ್ವಾಮಿ ವಿವೇಕಾನಂದರು ಯಾವ ಧರ್ಮದ ಕುರಿತು ಅಭಿಮಾನದಿಂದ ಹೇಳಿದ್ದರೋ, ಯಾವ ಧರ್ಮದ ಮಹತ್ವ, ಸಹಿಷ್ಣುತೆಯನ್ನು ಜಗತ್ತಿಗೇ ತಿಳಿಸಿದ್ದರೋ, ಅದೇ ಧರ್ಮದವರು ನಾವು. ಹಿಂದು ಧರ್ಮವು ಎಂದಿಗೂ ದ್ವೇಷ, ಹಿಂಸೆಯನ್ನು ಪ್ರಚೋದಿಸಿಲ್ಲ. ಬಿಜೆಪಿಯು ಇಂತಹ ಧರ್ಮದಲ್ಲಿ ನಂಬಿಕೆ ಇರಿಸಿದ್ದು, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್‌ ಹಿಂದುಗಳನ್ನು ಅವಮಾನಿಸುತ್ತಿದೆ. ಹಿಂದುಗಳು ಕಾಂಗ್ರೆಸ್‌ನ ಈ ಷಡ್ಯಂತ್ರವನ್ನು ತಿಳಿಯಬೇಕು. ದೇಶದಲ್ಲಿ ಹಿಂದುಗಳು ಕಾಂಗ್ರೆಸ್‌ ಬಗ್ಗೆ ಎಚ್ಚರದಿಂದ ಇರಬೇಕು” ಎಂದು ಹೇಳಿದ್ದರು.

“ಹಿಂದುಗಳ ಕುರಿತು ರಾಹುಲ್‌ ಗಾಂಧಿ ಅವರು ಸುಳ್ಳುಗಳನ್ನು ಹರಡಿಸುತ್ತಿದ್ದಾರೆ. ಹಿಂದುಗಳು ಹಿಂಸಾವಾದಿಗಳು ಎಂದು ಹೇಳುವ ಮೂಲಕ ಪ್ರಚೋದನೆ ನೀಡುತ್ತಿದೆ. ಇದು ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ನಾಯಕನ ಸಂಸ್ಕೃತಿ, ಇದು ನಿಮ್ಮ ವ್ಯಕ್ತಿತ್ವ, ಇವು ನಿಮ್ಮ ಕೆಟ್ಟ ವಿಚಾರಗಳು, ಹಿಂದುಗಳ ಮೇಲೆ ನೀವು ಹೊಂದಿರುವ ದ್ವೇಷ, ನಿಮ್ಮ ಚಟುವಟಿಕೆಗಳು ಹಿಂದುಗಳ ವಿರೋಧಿಯಾಗಿವೆ. ಇದನ್ನು ಹಿಂದುಗಳು ಗಮನಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Continue Reading

ದೇಶ

NEET UG 2024: ನೀಟ್‌ ಅಕ್ರಮ ಮೇಲ್ನೋಟಕ್ಕೆ ಸಾಬೀತು ಎಂದ ಸುಪ್ರೀಂ; ಎನ್‌ಟಿಎ, ಸಿಬಿಐಗೆ ಖಡಕ್ ಸೂಚನೆ!

NEET UG 2024: ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಸೇರಿ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನೀಟ್ ಯುಜಿ 2024 (NEET-UG 2024)ರ ಕೌನ್ಸೆಲಿಂಗ್ ಅನ್ನು ಮುಂದಿನ ಸೂಚನೆಯವರೆಗೆ ಮುಂದೂಡಲಾಗಿದೆ. ಇದರಿಂದ ಜುಲೈ 6 ಪ್ರಾರಂಭವಾಗಬೇಕಿದ್ದ ನೀಟ್ ಯುಜಿ ಅಖಿಲ ಭಾರತ ಕೋಟಾ (AIQ) ಸೀಟು ಕೌನ್ಸೆಲಿಂಗ್ ವಿಳಂಬವಾಗಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿದ್ದು, ಅಕ್ರಮ ನಡೆದಿರುವುದು ಢಾಳಾಗಿದೆ ಎಂದು ತಿಳಿಸಿದೆ.

VISTARANEWS.COM


on

NEET UG 2024
Koo

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG 2024) ಅಕ್ರಮ ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬುದಾಗಿ ಸಲ್ಲಿಕೆಯಾದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು (Supreme Court), ಜುಲೈ 11ಕ್ಕೆ ವಿಚಾರಣೆ ಮುಂದೂಡಿದೆ. ಜುಲೈ 11ರಂದು ಅಂತಿಮ ವಿಚಾರಣೆ ನಡೆಯಲಿದ್ದು, ಅಂದಿನ ತೀರ್ಪು ಮಹತ್ವ ಪಡೆದಿದೆ.

ಹಾಗೆಯೇ, ನೀಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಹಾಗೂ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಸಿಜೆಐ ಚಂದ್ರಚೂಡ್‌ ಅವರಿದ್ದ ನ್ಯಾಯಪೀಠವು ತಿಳಿಸಿತು. ಹಾಗೆಯೇ, ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮದ ಕುರಿತಂತೆ ಮಹತ್ವದ ಮಾಹಿತಿ ನೀಡಬೇಕು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ನೀಟ್‌ ಮೂರು ನಿರ್ದೇಶನಗಳನ್ನು ನೀಡಿದೆ. ಹಾಗೆಯೇ, ತನಿಖೆಯ ವರದಿ ನೀಡಬೇಕು ಎಂಬುದಾಗಿ ಸಿಬಿಐಗೂ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನಿರ್ದೇಶನಗಳು

  1. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಯಾವಾಗ ಎಂಬುದರ ಮಾಹಿತಿ ಕೊಡಿ
  2. ಯಾವ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬುದರ ಮಾಹಿತಿ ಪ್ರತ್ಯೇಕವಾಗಿ ಇರಲಿ
  3. ಪ್ರಶ್ನೆಪತ್ರಿಕೆ ಸೋರಿಕೆಯಾದ ದಿನ ಹಾಗೂ ಪರೀಕ್ಷೆ ನಡೆದ ದಿನದ ನಡುವೆ ಎಷ್ಟು ಸಮಯದ ಅಂತರವಿತ್ತು ಎಂಬುದರ ಮಾಹಿತಿ ಕೊಡಿ

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೇಳಿದ್ದಿಷ್ಟು…

  1. ನೀಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ
  2. ಅಕ್ರಮ ನಡೆದಿರುವುದು ನೋಡಿದರೆ ನೀಟ್‌ ಪರೀಕ್ಷೆಯ ಘನತೆ, ಮೌಲ್ಯಕ್ಕೆ ಧಕ್ಕೆಯಾಗಿದೆ
  3. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ನಮಗೆ ಎನ್‌ಟಿಎ ಹಾಗೂ ಸಿಬಿಐ ನಿಖರ ಮಾಹಿತಿ ನೀಡಬೇಕು
  4. ಹಾಗೊಂದು ವೇಳೆ, ಅಕ್ರಮ ಎಸಗಿದವರು ಯಾರೆಂಬುದು ಗೊತ್ತಾಗದಿದ್ದರೆ ಮರು ಪರೀಕ್ಷೆ ನಿಶ್ಚಿತ

ಏನಿದು ಪ್ರಕರಣ?

ನೀಟ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌ ಮಾರ್ಕ್ಸ್‌ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್‌ ಮಾರ್ಕ್ಸ್‌ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.

ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

ಇದನ್ನೂ ಓದಿ: NEET PG 2024: ನೀಟ್-ಪಿಜಿ ಪರೀಕ್ಷೆಯ ದಿನಾಂಕ ಪ್ರಕಟ; ಆ. 11ರಂದು ನಡೆಯಲಿದೆ ಟೆಸ್ಟ್‌

Continue Reading

ಪ್ರಮುಖ ಸುದ್ದಿ

Sandeshkhali case : ಸಿಬಿಐ ತನಿಖೆ ವಿರುದ್ಧದ ಅರ್ಜಿ ವಜಾ; ಸುಪ್ರೀಂ ಕೋರ್ಟ್‌‌ನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆ

Sandeshkhali case: ಏಪ್ರಿಲ್ 29 ರಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೆಲವು ಖಾಸಗಿ ವ್ಯಕ್ತಿಗಳ ಹಿತಾಸಕ್ತಿಯನ್ನು ರಕ್ಷಿಸಲು ರಾಜ್ಯವು ಏಕೆ ಅರ್ಜಿದಾರರಾಗಿ ಬರಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಕೇಳಿತು. ಕಲ್ಕತ್ತಾ ಹೈಕೋರ್ಟ್​​ನ ಆದೇಶವು ಪೊಲೀಸ್ ಪಡೆ ಸೇರಿದಂತೆ ಇಡೀ ರಾಜ್ಯ ಯಂತ್ರದ ನೈತಿಕ ಸ್ಥೈರ್ಯ ಕುಗ್ಗಿಸಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​​ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿತ್ತು.

VISTARANEWS.COM


on

Supreme Court
Koo

ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್​ಖಾಲಿಯಲ್ಲಿ (Sandeshkhali case) ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ನಿರ್ದೇಶಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಯಾರನ್ನಾದರೂ ರಕ್ಷಿಸಲು ರಾಜ್ಯವು ಏಕೆ ಆಸಕ್ತಿ ವಹಿಸಬೇಕು?” ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠ ಪ್ರಶ್ನಿಸಿದೆ. ವಿಚಾರಣೆಯ ಕೊನೆಯ ದಿನಾಂಕದಂದು, ಸುಪ್ರೀಂ ಕೋರ್ಟ್ ಈ ನಿರ್ದಿಷ್ಟ ಪ್ರಶ್ನೆಯನ್ನು ಕೇಳಿದ ನಂತರ ವಿಚಾರಣೆ ಮುಂದೂಡಬೇಕೆಂದು ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರು ಹೇಳಿದರು.

ಈ ವೇಳೆ “ಧನ್ಯವಾದಗಳು. ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಪೀಠ ಹೇಳಿತು. ಕಲ್ಕತ್ತಾ ಹೈಕೋರ್ಟ್​​ ಏಪ್ರಿಲ್ 10 ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ಏಪ್ರಿಲ್ 29 ರಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೆಲವು ಖಾಸಗಿ ವ್ಯಕ್ತಿಗಳ ಹಿತಾಸಕ್ತಿಯನ್ನು ರಕ್ಷಿಸಲು ರಾಜ್ಯವು ಏಕೆ ಅರ್ಜಿದಾರರಾಗಿ ಬರಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಕೇಳಿತು. ಕಲ್ಕತ್ತಾ ಹೈಕೋರ್ಟ್​​ನ ಆದೇಶವು ಪೊಲೀಸ್ ಪಡೆ ಸೇರಿದಂತೆ ಇಡೀ ರಾಜ್ಯ ಯಂತ್ರದ ನೈತಿಕ ಸ್ಥೈರ್ಯ ಕುಗ್ಗಿಸಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​​ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿತ್ತು.

ಸಂದೇಶ್​ಖಾಲಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ಸಿಬಿಐ ಈಗಾಗಲೇ ನಡೆಸುತ್ತಿದೆ ಮತ್ತು ಜನವರಿ 5 ರಂದು ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಮೂರು ಎಫ್ಐಆರ್​ಗಳನ್ನು ದಾಖಲಿಸಲಾಗಿದೆ.

ಕಲ್ಕತ್ತಾ ಹೈಕೋರ್ಟ್, ಕಂದಾಯ ದಾಖಲೆಗಳ ಸಮಗ್ರ ಪರಿಶೀಲನೆ ಮತ್ತು ಪರಿವರ್ತಿಸಲಾಗಿದೆ ಎಂದು ಹೇಳಲಾದ ಭೂಮಿಯ ಭೌತಿಕ ತಪಾಸಣೆ ನಡೆಸಿದೆ. ಬಳಿಕ ಕೃಷಿ ಭೂಮಿಯನ್ನು ಮೀನು ಸಾಕಣೆಗಾಗಿ ಜಲಮೂಲಗಳಾಗಿ ಅಕ್ರಮವಾಗಿ ಪರಿವರ್ತಿಸಲಾಗಿದೆ ಎಂಬ ಆರೋಪದ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತು.

ಇದನ್ನೂ ಓದಿ: Chennai Police commissioner : ಬಿಎಸ್‌‌ಪಿ ರಾಜ್ಯಾಧ್ಯಕ್ಷನ ಹತ್ಯೆ ಎಫೆಕ್ಟ್; ಚೆನ್ನೈ ಪೊಲೀಸ್ ಕಮಿಷನರ್ ಎತ್ತಂಗಡಿ

ಸಂದೇಶ್​ಖಾಲಿಯಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಗಳು ಮತ್ತು ಭೂ ಕಬಳಿಕೆ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಮತ್ತು ಮುಂದಿನ ವಿಚಾರಣೆಯ ದಿನಾಂಕದಂದು ಸಮಗ್ರ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು.

ಏನಿದು ಸಂದೇಶ್ಖಾಲಿ ಪ್ರಕರಣ?

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್​ಖಾಲಿ ಎಂಬ ಹಳ್ಳಿಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಆ ಪಕ್ಷದ ಪ್ರಭಾವಿ ಶೇಖ್ ಶಹಜಹಾನ್ ವಿರುದ್ಧ ಗ್ರಾಮಸ್ಥರು, ಹೆಚ್ಚಾಗಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಅಲ್ಲಿ ರಾಜಕೀಯ ಬಿರುಗಾಳಿ ಎದ್ದಿತ್ತು. ನಂತರ ಅವರನ್ನು ಬಂಧಿಸಲಾಯಿತು. ಸಂದೇಶ್​ಖಾಲಿ ವಿಚಾರವಾಗಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಎರಡೂ ಪರಸ್ಪರರ ವಿರುದ್ಧ ಆರೋಪಗಳನ್ನು ಮಾಡುತ್ತಿವೆ. ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರದಲ್ಲಿ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಜನರ ಗುಂಪು ದಂಪತಿಯನ್ನು ಸಾರ್ವಜನಿಕವಾಗಿ ಥಳಿಸಿದ ವಿಷಯದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು.

Continue Reading

ಪ್ರಮುಖ ಸುದ್ದಿ

Chennai Police commissioner : ಬಿಎಸ್‌‌ಪಿ ರಾಜ್ಯಾಧ್ಯಕ್ಷನ ಹತ್ಯೆ ಎಫೆಕ್ಟ್; ಚೆನ್ನೈ ಪೊಲೀಸ್ ಕಮಿಷನರ್ ಎತ್ತಂಗಡಿ

Chennai Police commissioner

VISTARANEWS.COM


on

Chennai Police commissioner
Koo

ಚೆನ್ನೈ: ತಮಿಳುನಾಡಿನ ಬಿಎಸ್​ಪಿ ಪಕ್ಷದ ಮುಖ್ಯಸ್ಥ ಕೆ. ಆರ್ಮ್​ಸ್ಟ್ರಾಂಗ್ ಅವರನ್ನು ಬರ್ಬರ ಕೊನೆಯಾದ ಕೆಲವೇ ದಿನಗಳ ಬಳಿಕ ತಮಿಳುನಾಡು ಸರ್ಕಾರ, ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತ (Chennai Police commissioner) ಸಂದೀಪ್ ರಾಯ್ ರಾಥೋಡ್ ಅವರನ್ನು ವರ್ಗಾವಣೆ ಮಾಡಿದೆ. ಸಂದೀಪ್ ರಾಯ್ ರಾಥೋಡ್ ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಎ.ಅರುಣ್ ಅವರನ್ನು ಸೋಮವಾರ ನೇಮಿಸಲಾಗಿದೆ.

ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಅಮುದಾ ಹೊರಡಿಸಿದ ಆದೇಶದ ಪ್ರಕಾರ, ಐಪಿಎಸ್ ಸಂದೀಪ್ ರೈ ರಾಥೋಡ್ ಅವರನ್ನು ಹುದ್ದೆಯಿಂದ ಇಳಿಸುವ ಮೂಲಕ ಎ.ಅರುಣ್ ಅವರನ್ನು ಗ್ರೇಟರ್ ಚೆನ್ನೈನ ಎಡಿಜಿಪಿ / ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ಐಪಿಎಸ್ ರಾಜೀವ್ ಕುಮಾರ್ ನೇತೃತ್ವದ ಚೆನ್ನೈನ ಪೊಲೀಸ್ ತರಬೇತಿ ಕಾಲೇಜಿನ ಡಿಜಿಪಿಯಾಗಿ ಅವರನ್ನು ನೇಮಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಡೇವಿಡ್ಸನ್ ದೇವಸಿರ್ವಥ ಅವರನ್ನು ಈಗ ಅರುಣ್ ಅವರ ಬದಲಿಗೆ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿಯಾಗಿ ನೇಮಿಸಲಾಗಿದೆ. ಗೃಹ ಇಲಾಖೆಯ ನೇತೃತ್ವವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಹಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚೆನ್ನೈನಲ್ಲಿ ಕೊಲೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂಬ ರಾಥೋಡ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು/

ಆರ್ಮ್​ಸ್ಟ್ರಾಂಗ್​ ಅವರನ್ನು ಅವರ ಬೆಂಬಲಿಗರಂತೆ ಸೋಗು ಹಾಕಿಕೊಂಡು ಬಂದ ಆರು ದುಷ್ಕರ್ಮಿಗಳು ಶುಕ್ರವಾರ ಕೊಚ್ಚಿ ಕೊಲೆ ಮಾಡಿದ್ದರು. ಅಪರಾಧ ಮಾಡಿದ ನಂತರ ದಾಳಿಕೋರರು ಬೈಕ್ ಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದರು. ಕೊಲೆಯ ತನಿಖೆ ನಡೆಸುತ್ತಿರುವ ಪೊಲೀಸರು ಅಪರಾಧಕ್ಕೆ ಸಂಬಂಧಿಸಿದಂತೆ ಈವರೆಗೆ ಹನ್ನೊಂದು ಜನರನ್ನು ಬಂಧಿಸಿದ್ದಾರೆ. ಆರ್ಮ್​​ಸ್ಟ್ರಾಂಗ್ ಸೂಚನೆಯ ಮೇರೆಗೆ ಒಂದು ವರ್ಷದ ಹಿಂದೆ ಹತ್ಯೆಗೀಡಾದ ದರೋಡೆಕೋರ ಆರ್ಕಾಟ್ ಸುರೇಶ್ ಹತ್ಯೆಗೆ ಸಂಬಂಧಿಸಿದ ಸೇಡಿನ ಕೊಲೆಯಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Indecent Behaviour: ಕಾಲೇಜು ಯುವತಿಯವರಿಗೆ ಮರ್ಮಾಂಗ ತೋರಿಸಿ ಎಸ್ಕೇಪ್‌ ಆಗಿದ್ದವ ಪೊಲೀಸ್‌ ವಶಕ್ಕೆ

ಹತ್ಯೆಗೀಡಾದ ಬಿಎಸ್ಪಿ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಚೆನ್ನೈಗೆ ಭೇಟಿ ನೀಡಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಹತ್ಯೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಅಪರಾಧದ ಹಿಂದಿನ ನಿಜವಾದ ಅಪರಾಧಿಗಳನ್ನು ತಮಿಳುನಾಡು ಪೊಲೀಸರು ಬಂಧಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

“ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ನಾನು ರಾಜ್ಯ ಸರ್ಕಾರವನ್ನು, ವಿಶೇಷವಾಗಿ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ದುರ್ಬಲ ವರ್ಗಗಳು ಸುರಕ್ಷಿತವಾಗಿರಬೇಕು. ಸರ್ಕಾರ ಗಂಭೀರವಾಗಿದ್ದರೆ ಆರೋಪಿಗಳನ್ನು ಬಂಧಿಸಬಹುದಿತ್ತು. ಹಾಗೆ ಆಗದ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

Continue Reading
Advertisement
PGET 2024 Online application for PGET can be submitted till July 10
ಶಿಕ್ಷಣ20 mins ago

PGET 2024 : ಪಿಜಿಇಟಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 10ರವರೆಗೆ ಅವಕಾಶ

Suryakumar Yadav
ಕ್ರೀಡೆ22 mins ago

Suryakumar Yadav: 8 ವರ್ಷಗಳ ಹಿಂದೆಯೇ ಅದ್ಭುತ ಕ್ಯಾಚ್​ ಹಿಡಿದೆ ಎಂದು ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೂರ್ಯಕುಮಾರ್

Rahul Gandhi
ದೇಶ28 mins ago

Rahul Gandhi: ಹಿಂದುಗಳಿಗೆ ಅವಮಾನ ಖಂಡಿಸಿ ದೇಗುಲದ ಡೋರ್‌ಮ್ಯಾಟ್‌ಗೆ ರಾಹುಲ್‌ ಗಾಂಧಿ ಫೋಟೊ; ಇಲ್ಲಿದೆ Video

Manvita Kamath Honeymoon in baali
ಸ್ಯಾಂಡಲ್ ವುಡ್34 mins ago

Manvita Kamath: ಪತಿ ಅರುಣ್ ಜತೆ ಬಾಲಿಯಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿರುವ ಮಾನ್ವಿತಾ ಕಾಮತ್!

NEET UG 2024
ದೇಶ46 mins ago

NEET UG 2024: ನೀಟ್‌ ಅಕ್ರಮ ಮೇಲ್ನೋಟಕ್ಕೆ ಸಾಬೀತು ಎಂದ ಸುಪ್ರೀಂ; ಎನ್‌ಟಿಎ, ಸಿಬಿಐಗೆ ಖಡಕ್ ಸೂಚನೆ!

OPS News
ಕರ್ನಾಟಕ47 mins ago

OPS News: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಅರ್ಹರಿಗೆ ಒಪಿಎಸ್‌, ಪ್ರಸ್ತಾವನೆ ಸಲ್ಲಿಕೆಗೆ ಆದೇಶ

ಕ್ರೀಡೆ56 mins ago

Paris 2024 Olympics Athletics: ವಿಶ್ವ ರ್‍ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜೆಸ್ವಿನ್‌, ಅಂಕಿತಾ ಧ್ಯಾನಿ

First Night Video
Latest59 mins ago

First Night Video: ಫಸ್ಟ್‌ ನೈಟ್‌ ವಿಡಿಯೊ ಹಂಚಿಕೊಂಡ ನವ ದಂಪತಿ! ಇನ್ನೇನು ಬಾಕಿ ಉಳಿದಿದೆ ಎಂದ ನೆಟ್ಟಿಗರು!

Ragging case in Bengaluru
ಬೆಂಗಳೂರು1 hour ago

Ragging Case : ಬೆಂಗಳೂರಲ್ಲಿ ನಿಲ್ಲದ ವ್ಹೀಲಿಂಗ್‌ ಆ್ಯಂಡ್‌ ರ‍್ಯಾಗಿಂಗ್‌ ಹಾವಳಿ; ಮಹಿಳೆ ಹಿಂದೆ ಬಿದ್ದ ಪೋಲಿ ಹುಡುಗರು

Supreme Court
ಪ್ರಮುಖ ಸುದ್ದಿ1 hour ago

Sandeshkhali case : ಸಿಬಿಐ ತನಿಖೆ ವಿರುದ್ಧದ ಅರ್ಜಿ ವಜಾ; ಸುಪ್ರೀಂ ಕೋರ್ಟ್‌‌ನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain Effect
ಮಳೆ2 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು6 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ21 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ24 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 day ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

ಟ್ರೆಂಡಿಂಗ್‌