Diabetes Diet | ಮಧುಮೇಹದ ನಿಯಂತ್ರಣ ಹೇಗೆ? ಇಲ್ಲಿದೆ ಸರಳ ಸೂತ್ರ - Vistara News

ಆರೋಗ್ಯ

Diabetes Diet | ಮಧುಮೇಹದ ನಿಯಂತ್ರಣ ಹೇಗೆ? ಇಲ್ಲಿದೆ ಸರಳ ಸೂತ್ರ

ಮಧುಮೇಹದ ಪ್ರಮಾಣದಲ್ಲಿ ಭಾರತದಲ್ಲಿ ತೀವ್ರ ಏರುಗತಿಯಲ್ಲಿದೆ. ೭.೪ ಕೋಟಿ ಜನ ಮಧುಮೇಹಿಗಳಿದ್ದು, ಸುಮಾರು ೮ ಕೋಟಿ ಜನ ಮಧುಮೇಹ-ಪೂರ್ವ ಸ್ಥಿತಿಯಲ್ಲಿದ್ದಾರೆ. ಆದರೆ ಆತಂಕವಿಲ್ಲದೇ ಆಹಾರದಲ್ಲಿ ಮರೆಯದೇ ಈ ಒಂದು ಸೂತ್ರವನ್ನು ಅನುಸರಿಸಿದರೆ ಸಾಕು ಅಂತಾರೆ ತಜ್ಞರು.

VISTARANEWS.COM


on

Diabetes control
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒತ್ತಡದ ಜೀವನಶೈಲಿಯ ಪರಿಣಾಮಗಳು ನಾನಾ ರೀತಿಯಲ್ಲಿ ದೇಹದ ಮೇಲಾಗುತ್ತವೆ. ಅದರಲ್ಲೂ ಕೆಲವು ಆರೋಗ್ಯ ಸಮಸ್ಯೆಗಳು ಬೆನ್ನು ಬಿದ್ದವೆಂದರೆ ಬೇತಾಳದಂತೆಯೇ. ಮಧುಮೇಹ ಅಂಥದ್ದೇ ಕಾಯಿಲೆ. ಆರಂಭದಲ್ಲಿ ಅಷ್ಟೇನು ಸಮಸ್ಯೆ ಅನಿಸದಿದ್ದರೂ, ಕ್ರಮೇಣ ವಿಪರೀತ ಉಪದ್ರವಕಾರಿ ಎನಿಸುತ್ತದೆ ಈ ಸಮಸ್ಯೆ. ಆದರೆ ನಮ್ಮ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡುವುದರಿಂದ (Diabetes Diet) ಮಧುಮೇಹವನ್ನು ಔಷಧಿಯಿಲ್ಲದೆಯೇ ದೀರ್ಘಕಾಲದವರೆಗೆ ಹತೋಟಿಯಲ್ಲಿ ಇಡಬಹುದು ಎನ್ನುತ್ತದೆ ಇತ್ತೀಚಿನ ಒಂದು ಅಧ್ಯಯನ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಆಶ್ರಯದಲ್ಲಿ ನಡೆಸಲಾದ ಈ ಮಧುಮೇಹ ಅಧ್ಯಯನದಲ್ಲಿ, ಹೊಸದಾಗಿ ಮಧುಮೇಹಕ್ಕೆ ತುತ್ತಾಗಿರುವವರ ದೈನಂದಿನ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿಳಿ ಅಕ್ಕಿ ಮತ್ತು ಗೋಧಿಯನ್ನು ಕಡಿಮೆ ಮಾಡಿ, ಪ್ರೊಟೀನ್‌ ಪ್ರಮಾಣವನ್ನು ಹೆಚ್ಚಿಸಲಾಗಿತ್ತು. ಮಧುಮೇಹ-ಪೂರ್ವ ಸ್ಥಿತಿಯಲ್ಲಿರುವವರನ್ನೂ ಸೇರಿ ಒಟ್ಟು ೧೮,೦೯೦ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಶೇ. ೬.೫ಕ್ಕೆ ಮೀರದಂತೆ ಮಾಡುವುದಕ್ಕಾಗಿ ಪಿಷ್ಟ ಪದಾರ್ಥಗಳನ್ನು ಶೇ. ೫೪ಕ್ಕೆ ಮೀರದಂತೆ ಇರಿಸಲಾಗಿತ್ತು.

ಉದಾ, ದಿನದ ಆಹಾರದಲ್ಲಿ ಬೆಳಗಿನ ತಿಂಡಿಗೆ ೨ ದೋಸೆ ಅಥವಾ ಇಡ್ಲಿ ಮತ್ತು ಒಂದು ಮಲ್ಟಿಗ್ರೇನ್‌ ಬ್ರೆಡ್‌ಗೆ ಕಾರ್ಬ್‌ ಪ್ರಮಾಣವನ್ನು ಸೀಮಿತಗೊಳಿಸಿದರೆ, ಪ್ರೊಟೀನ್‌ ಪ್ರಮಾಣವನ್ನು ಸೋಯಾ ಸಾಂಬಾರ್‌ ಮತ್ತು ಮೂರು ಮೊಟ್ಟೆಯ ಬಿಳಿ ಭಾಗಗಳು ಎಂದು ನಿರ್ಧರಿಸಲಾಗಿತ್ತು. ಅಂದರೆ, ಕಾರ್ಬ್‌ ಕಡಿತದಿಂದ ಉಂಟಾಗುವ ಕೊರತೆಯನ್ನು ಪ್ರೊಟೀನ್‌ನಿಂದ ತುಂಬಿಸಲು ಯೋಜಿಸಲಾಗಿತ್ತು. ಇದೇ ಮಾದರಿಯನ್ನು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಯೋಜಿಸಲಾಗಿತ್ತು. ಊಟ-ತಿಂಡಿಗಳ ನಡುವೆ ಲಘುವಾಗಿ ಬಾಯಾಡುವುದಕ್ಕೆ ಹಣ್ಣು-ತರಕಾರಿಗಳನ್ನು ಸೂಚಿಸಲಾಗಿತ್ತು.

ಇದನ್ನೂ ಓದಿ | Sleep secret | ಇಷ್ಟಿದ್ದರೆ ದೇಹಕ್ಕೊಂದು ನೆಮ್ಮದಿಯ ಗುಡ್‌ ನೈಟ್‌!

ಇದು ನೂತನ ಮಧುಮೇಹಿಗಳಿಗಾದರೆ, ಇನ್ನೂ ಮಧುಮೇಹ-ಪೂರ್ವ ಸ್ಥಿತಿಯಲ್ಲಿರುವವರಿಗೆ ಎಚ್‌ಬಿಎ೧ಸಿ ಪ್ರಮಾಣವನ್ನು ಶೇ. ೫.೬ ಕ್ಕೆ ನಿಲ್ಲಿಸುವುದು ಸಂಶೋಧಕರ ಉದ್ದೇಶವಾಗಿತ್ತು. ಇವರಲ್ಲಿ ಪ್ರೊಟೀನ್‌ ಮತ್ತು ನಾರಿನ ಪ್ರಮಾಣವನ್ನು ಇನ್ನೂ ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಈ ಎರಡೂ ಗುಂಪಿನಲ್ಲಿ ಶೇ. ೮೦ರಷ್ಟು ಮಂದಿಯಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶ ನಿರ್ದೇಶಿತ ರೀತಿಯಲ್ಲೇ ಹತೋಟಿಗೆ ಬಂದಿರುವುದನ್ನು ದಾಖಲಿಸಲಾಗಿದೆ. ಸ್ಥೂಲವಾಗಿ ಹೇಳುವುದಾದರೆ, ಮಧುಮೇಹಿಗಳಿಗೆ ಶೇ. ೪೯-೫೪ ಕಾರ್ಬ್‌, ಶೇ. ೧೯-೨೦ ಪ್ರೊಟೀನ್‌, ಶೇ. ೨೧-೨೬ ಕೊಬ್ಬಿನ ಅಂಶ ಮತ್ತು ಶೇ. ೫-೬ ನಾರಿನ ಅಂಶಗಳನ್ನು ಆಹಾರದಲ್ಲಿ ನಿರ್ವಹಿಸಲು ಸೂಚಿಸಲಾಗಿತ್ತು. ಮಧುಮೇಹ-ಪೂರ್ವದಲ್ಲಿರುವವರಿಗೆ ಈ ಪ್ರಮಾಣಗಳನ್ನು ಕ್ರಮವಾಗಿ ಶೇ. ೫೦-೫೬, ಶೇ. ೧೮-೨೦, ಶೇ. ೨೧-೨೭ ಮತ್ತು ಶೇ. ೩-೫ರಷ್ಟು ಇರಿಸಲು ತಿಳಿಸಲಾಗಿತ್ತು. ಯಾವುದೇ ಔಷಧವಿಲ್ಲದೆ ಆಹಾರಕ್ರಮದಲ್ಲಿಯೇ ಇದನ್ನು ಸಾಧಿಸಿರುವುದರಿಂದ, ಒಟ್ಟಾರೆಯಾಗಿ ಅಧ್ಯಯನ ಫಲಿತಾಂಶ ಆಶಾದಾಯಕವಾಗಿದೆ ಎನ್ನಲಾಗಿದೆ.

ಮಧುಮೇಹದ ಪ್ರಮಾಣದಲ್ಲಿ ಭಾರತದಲ್ಲಿ ತೀವ್ರ ಏರುಗತಿಯಲ್ಲಿದೆ. ೭.೪ ಕೋಟಿ ಜನ ಮಧುಮೇಹಿಗಳಿದ್ದು, ಸುಮಾರು ೮ ಕೋಟಿ ಜನ ಮಧುಮೇಹ-ಪೂರ್ವ ಸ್ಥಿತಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ICMR ನಡೆಸಿದ ಅಧ್ಯಯನಕ್ಕೆ ಮಹತ್ವ ಒದಗಿದೆ. ಇದಕ್ಕಾಗಿ ೨೯ ರಾಜ್ಯಗಳು ಮತ್ತು ೨ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಅಧ್ಯಯನ ನಡೆಸಲಾಗಿದ್ದು, ಬೇರೆ ಬೇರೆ ಸಂಸ್ಕೃತಿ ಮತ್ತು ಆಹಾರ ಪದ್ಧತಿಗಳ ಜನರು ಇದರಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಭಾರತದ ಹೆಚ್ಚಿನ ಜನಸಂಖ್ಯೆಗೆ ಈ ಅಧ್ಯಯನದಲ್ಲಿ ಸೂಚಿತ ಆಹಾರಪದ್ಧತಿಯನ್ನು ಅನುಸರಿಸಲು ಸಾಧ್ಯವಿದೆ ಎಂಬುದು ಸಂಶೋಧಕರ ಅಭಿಮತ.

ಇದನ್ನೂ ಓದಿ | Snapping footwear: ಮಧುಮೇಹಿಗಳಿಗೆ IIScಯಿಂದ ಸ್ಪೆಷಲ್‌ ಪಾದರಕ್ಷೆ, ನೋವಾಗಲ್ಲ, ಕೀವಾಗಲ್ಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

ಕಡಿಮೆ ಚಟುವಟಿಕೆಯುಳ್ಳ ಪುರುಷರು ಮತ್ತು ಮಹಿಳೆಯರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Dietary Guidelines
Koo

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಚಟುವಟಿಕೆ ಹೊಂದಿರುವ ಪುರುಷರು (men) ಮತ್ತು ಮಹಿಳೆಯರು (women) ಆಹಾರದಲ್ಲಿ (food) ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದು, ಇದಕ್ಕಾಗಿ ಇಂಥವರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದೆ.

ಉಪಾಹಾರದಲ್ಲಿ ಏನು ಇರಬೇಕು?

ಐಸಿಎಂಆರ್ ಪ್ರಕಾರ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರ ಉಪಾಹಾರದಲ್ಲಿ ನೆನೆಸಿದ ಮತ್ತು ಬೇಯಿಸಿದ ಬಜ್ರಾ 90 ಗ್ರಾಂ ಮತ್ತು ತರಕಾರಿಗಳು 50 ಗ್ರಾಂ ಒಳಗೊಂಡಿರಬೇಕು. ಅದೇ ರೀತಿ ಮಹಿಳೆಯರಿಗೆ ನೆನೆಸಿದ ಮತ್ತು ಬೇಯಿಸಿದ ಬಜ್ರಾವನ್ನು ಉಪಾಹಾರದಲ್ಲಿ 60 ಗ್ರಾಂ ಮತ್ತು ತರಕಾರಿಗಳು 100 ಗ್ರಾಂ ಸೇರಿಸಿಕೊಳ್ಳಬೇಕು.

ಊಟದಲ್ಲಿ ಏನು ಇರಬೇಕು?

ಮಧ್ಯಾಹ್ನದ ಊಟದಲ್ಲಿ ಪುರುಷರು ಧಾನ್ಯಗಳನ್ನು 100 ಗ್ರಾಂ ಮತ್ತು ಬೇಳೆಕಾಳುಗಳು 30 ಗ್ರಾಂ, ಮಹಿಳೆಯರು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳು 80 ಗ್ರಾಂ ಮತ್ತು ದ್ವಿದಳ ಧಾನ್ಯಗಳನ್ನು 20 ಗ್ರಾಂ ತೆಗೆದುಕೊಳ್ಳಬಹುದು. ಸಂಜೆ ಇಬ್ಬರಿಗೂ 50 ಮಿಲಿ ಲೀಟರ್ ಹಾಲು ಕುಡಿಯಲು ಸೂಚಿಸಲಾಗುತ್ತದೆ.


ನಮ್ಮ ಆಹಾರ ಹೇಗಿರಬೇಕು?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಧುನಿಕ ಆಹಾರ ಪದ್ಧತಿಗೆ ಸರಿ ಹೊಂದುವಂತೆ ಭಾರತೀಯರಿಗೆ ನವೀಕರಿಸಿದ ಆಹಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಐಸಿಎಂಆರ್ ನ ಆಹಾರ ಮಾರ್ಗಸೂಚಿಗಳ ಪ್ರಕಾರ ಆರೋಗ್ಯಕರ ಊಟವು ಹೆಚ್ಚಿನ ತರಕಾರಿ, ಸಾಕಷ್ಟು ಧಾನ್ಯ, ಕಾಳು, ಬೀನ್ಸ್, ಬೀಜಗಳು, ಹಣ್ಣುಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಮೊಸರು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಹೆಚ್ಚುವರಿ ಸಕ್ಕರೆಗಳಿಂದ ಮುಕ್ತ ಅಥವಾ ಅತೀ ಕಡಿಮೆ ಪ್ರಮಾಣದಲ್ಲಿ ಎಣ್ಣೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಒಳ್ಳೆಯ ಆಯ್ಕೆಯಾಗಿರುತ್ತದೆ.

ಆರೋಗ್ಯಕರವಾಗಿರಲು ಆಹಾರ ಮಾತ್ರವಲ್ಲ ದೈಹಿಕವಾಗಿ ಸಕ್ರಿಯವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ಸೂಚಿಸಲಾಗಿದೆ. ತಾಜಾ ಆಹಾರ ಸೇವಿಸುವುದು ಬಹು ಮುಖ್ಯ. ಆಹಾರ ಸುರಕ್ಷತೆಯ ಕಡೆಗೂ ಗಮನವಿರಬೇಕು. ಕನಿಷ್ಠ ಸಂಸ್ಕರಿಸಿದ ಆಹಾರಗಳ ಆಯ್ಕೆ ಒಳ್ಳೆಯದು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

ದೈಹಿಕ ಚಟುವಟಿಕೆ ಹೇಗಿರಬೇಕು?

ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವಯಸ್ಸಿನ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 30ರಿಂದ 45 ನಿಮಿಷಗಳ ಮಧ್ಯಮ, ತೀವ್ರತೆಯ ದೈಹಿಕ ಚಟುವಟಿಕೆಯನ್ನು ನಡೆಸಲೇಬೇಕು. ಮಕ್ಕಳಲ್ಲಿ ದಿನಕ್ಕೆ ಕನಿಷ್ಠ 60 ನಿಮಿಷಗಳ ನಿಯಮಿತ ದೈಹಿಕ ಚಟುವಟಿಕೆ ಇದ್ದರೆ ಅಧಿಕ ತೂಕ ಮತ್ತು ಸ್ಥೂಲಕಾಯತೆಯನ್ನು ತಡೆಯಬಹುದು ಎನ್ನುತ್ತದೆ ಐಸಿಎಂಆರ್ ಮಾರ್ಗಸೂಚಿ.

Continue Reading

ಆರೋಗ್ಯ

Veg v/s Non Veg Thali: ಭಾರತದಲ್ಲಿ ನಾನ್‌ವೆಜ್‌ ಊಟಕ್ಕಿಂತ ವೆಜ್ ಊಟ ದುಬಾರಿ! ಏಕೆ ಗೊತ್ತಾ?

ಕಳೆದ ಒಂದು ವರ್ಷದಲ್ಲಿ ವಿವಿಧ ಕಾರಣಗಳಿಂದ ತರಕಾರಿ ಬೆಳೆಗಳು ಗಗನಕ್ಕೇರಿದ್ದು, ಮನೆಯಲ್ಲಿ ತಯಾರಿಸುವ ವೆಜ್ ಥಾಲಿ ಬೆಲೆ ನಾನ್ ವೆಜ್ ಥಾಲಿಗಿಂತ (Veg v/s Non Veg Thali) ದುಬಾರಿಯಾಗಿದೆ. ಇದಕ್ಕೆ ಹಲವು ಕಾರಣಗಳೂ ಇವೆ. ಭಾರತದಲ್ಲಿ ಮಾಂಸಾಹಾರಿ ಊಟಕ್ಕಿಂತ ಸಸ್ಯಾಹಾರಿ ಊಟ ದುಬಾರಿ ಆಗಿರುವುದರ ಕುತೂಹಲಕರ ಹಿನ್ನೆಲೆ ಇಲ್ಲಿದೆ.

VISTARANEWS.COM


on

By

Veg v/s Non Veg Thali
Koo

ಭಾರತದಲ್ಲಿ ಸಸ್ಯಾಹಾರಿ ಊಟವು ಮಾಂಸಾಹಾರಿ ಊಟಕ್ಕಿಂತ (Veg v/s Non Veg Thali) ದುಬಾರಿಯಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ (onion) ಬೆಲೆ ಶೇ. 41, ಟೊಮೆಟೊ (tomato) ಬೆಲೆ ಶೇ.40 ಮತ್ತು ಆಲೂಗಡ್ಡೆ (potato) ಬೆಲೆ ಶೇ. 38ರಷ್ಟು ಹೆಚ್ಚಳವಾಗಿರುವ ಕಾರಣ ಮನೆಯಲ್ಲಿ ತಯಾರಿಸುವ ಸಸ್ಯಾಹಾರಿ ಊಟದ ಪ್ಲೇಟ್ ಬೆಲೆ ಶೇ. 13ರಷ್ಟು ಹೆಚ್ಚಾಗಿದೆ ಎಂದು ಸಿಆರ್ ಐಎಸ್‌ಐಎಲ್ (CRISIL) ವರದಿ ತಿಳಿಸಿದೆ.

ಮನೆಯಲ್ಲಿ ತಯಾರಿಸುವ ಥಾಲಿಯಲ್ಲಿ ಧಾನ್ಯ, ಬೇಳೆಕಾಳು, ತರಕಾರಿ, ಮಸಾಲೆ, ಖಾದ್ಯ ತೈಲ ಮತ್ತು ಅಡುಗೆ ಅನಿಲವೆಲ್ಲ ಸೇರಿ ಸರಾಸರಿ ವೆಚ್ಚವನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದೆ. ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಚಾಲ್ತಿಯಲ್ಲಿರುವ ಬೆಲೆಗಳ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ಇದು ಸಾಮಾನ್ಯ ಮನುಷ್ಯನ ವೆಚ್ಚದ ಮೇಲೆ ತೀವ್ರ ಪ್ರಭಾವ ಬೀರುತ್ತಿದೆ.

ವೆಜ್ ಥಾಲಿ ಬೆಲೆ ಎಷ್ಟು ಹೆಚ್ಚಳ?

ಮನೆಯಲ್ಲಿ ಬೇಯಿಸಿದ ವೆಜ್ ಥಾಲಿಯ ಬೆಲೆ ಏಪ್ರಿಲ್‌ನಲ್ಲಿ ಶೇ. 8ರಷ್ಟು ಏರಿಕೆಯಾಗಿದೆ. ಆದರೆ ಮಾಂಸಾಹಾರಿ ಥಾಲಿಯ ಬೆಲೆ ಶೇ.4ರಷ್ಟು ಕಡಿಮೆಯಾಗಿದೆ.

ಕಾರಣ ಏನು?

ಕಳೆದ ಆರ್ಥಿಕ ವರ್ಷದ ಕ್ರಮವಾಗಿ ಈರುಳ್ಳಿ, ಟೊಮ್ಯಾಟೊ ಮತ್ತು ಆಲೂಗೆಡ್ಡೆಗಳ ಬೆಲೆಗಳು ವರ್ಷಕ್ಕೆ ಶೇ.41, ಶೇ. 40 ಮತ್ತು ಶೇ. 38ರಷ್ಟು ಏರಿಕೆಯಾದ ಕಾರಣ ಸಸ್ಯಾಹಾರಿ ಥಾಲಿಯ ಬೆಲೆ ಹೆಚ್ಚಾಗಿದೆ. ಬೆಳೆ ಬೆಳೆಯುವ ಪ್ರಮಾಣದಲ್ಲಿ ಗಮನಾರ್ಹ ಕುಸಿತ ಮತ್ತು ಪಶ್ಚಿಮ ಬಂಗಾಳದಲ್ಲಿ ಆಲೂಗಡ್ಡೆ ಬೆಳೆ ಹಾನಿ, ಕಡಿಮೆ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದು ಬೆಲೆ ಏರಿಕೆಗೆ ಮುಖ್ಯ ಕಾರಣ.

ಅಕ್ಕಿಯ ಬೆಲೆ ಶೇ. 13ರಿಂದ ಶೇ.14ರಷ್ಟು, ಬೇಳೆಕಾಳುಗಳ ಬೆಲೆ ಶೇ. 9ರಿಂದ ಶೇ. 20ರಷ್ಟು ವರ್ಷಕ್ಕೆ ಏರಿಕೆಯಾಗಿದೆ.
ಜೀರಿಗೆ, ಮೆಣಸಿನಕಾಯಿ ಮತ್ತು ಸಸ್ಯಜನ್ಯ ಎಣ್ಣೆಯ ಬೆಲೆಗಳು ಕ್ರಮವಾಗಿ ಶೇ. 40, ಶೇ. 31 ಮತ್ತು ಶೇ. 10ರಷ್ಟು ಕುಸಿತವಾಗಿದೆ. ಇದು ಥಾಲಿ ವೆಚ್ಚದಲ್ಲಿ ಮತ್ತಷ್ಟು ಹೆಚ್ಚಾಳಕ್ಕೆ ಕೊಂಚ ನಿಯಂತ್ರಣ ಹಾಕಿದೆ.


ಮಾಂಸಾಹಾರಿ ಥಾಲಿ ಬೆಲೆಯಲ್ಲಿ ಇಳಿಕೆ

ಕಳೆದ ಹಣಕಾಸು ವರ್ಷದಲ್ಲಿ ಮಾಂಸದ ಕೋಳಿಗಳ ಬೆಲೆಯಲ್ಲಿ ವರ್ಷದಲ್ಲಿ ಕುಸಿತವಾಗಿದ್ದರೂ ತಿಂಗಳಿನಲ್ಲಿ ಸ್ಥಿರವಾಗಿತ್ತು. ಇದರಿಂದ ಮಾಂಸಾಹಾರಿ ಥಾಲಿಯ ಬೆಲೆ ಕೇವಲ ಶೇ. 3ರಷ್ಟು ಹೆಚ್ಚಳವಾಗಿತ್ತು. ಈರುಳ್ಳಿ ಬೆಲೆಯಲ್ಲಿನ ಶೇ. 4ರಷ್ಟು ಇಳಿಕೆಯಿಂದಾಗಿ ಮಾಂಸಾಹಾರಿ ಥಾಲಿಯು ತಿಂಗಳ ಬೆಲೆ ಸ್ಥಿರವಾಗಿತ್ತು. ಇಂಧನ ವೆಚ್ಚದಲ್ಲಿ ಶೇ. 3ರಷ್ಟು ಕುಸಿತವಾಗಿದ್ದು, ಟೊಮೆಟೊ ಮತ್ತು ಆಲೂಗಡ್ಡೆ ಬೆಲೆ ಏರಿಕೆಯಾಗಿತ್ತು.

ಮಾಂಸಾಹಾರಿ ಥಾಲಿಯ ಬೆಲೆಯು ಬ್ರಾಯ್ಲರ್‌ಗಳ ಬೆಲೆಯಲ್ಲಿ ಅಂದಾಜು ಶೇ. 4ರಷ್ಟು ಹೆಚ್ಚಳದಿಂದಾಗಿ ಏರಿಕೆಯಾಗಿದೆ. ಇದು ಹೆಚ್ಚಿನ ಬೇಡಿಕೆ ಮತ್ತು ಹೆಚ್ಚುತ್ತಿರುವ ವೆಚ್ಚಗಳ ಕಾರಣದಿಂದಾಗಿ ಎನ್ನಲಾಗಿದೆ.
ಕಡಿಮೆ ಕೋಳಿ ಬೆಲೆಗಳಿಂದಾಗಿ ಮನೆಯಲ್ಲಿ ಬೇಯಿಸಿದ, ಮಾಂಸಾಹಾರಿ ಥಾಲಿಯ ಬೆಲೆ ಏಪ್ರಿಲ್‌ನಲ್ಲಿ ಕಡಿಮೆಯಾಗಿದೆ. ಆದರೆ ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಲೆಗಳ ಏರಿಕೆಯೊಂದಿಗೆ ಸಸ್ಯಾಹಾರಿ ಥಾಲಿಯನ್ನು ತಯಾರಿಸುವ ವೆಚ್ಚವನ್ನು ಹೆಚ್ಚಾಗಿದೆ.

ಇದನ್ನೂ ಓದಿ: Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

ಎಷ್ಟು ಹೆಚ್ಚಳ?

ಮನೆಯಲ್ಲಿ ತಯಾರಿಸುವ ವೆಜ್ ಥಾಲಿ ಬೆಲೆ 2022ರ ಡಿಸೆಂಬರ್‌ನಿಂದ 2023ರ ಜೂನ್‌ವರೆಗೆ 26.7ರ ಒಳಗೆ ಇತ್ತು ಹಾಗೂ ಮಾಂಸಾಹಾರಿ ಥಾಲಿ ಬೆಲೆ 60.5ರ ಒಳಗಿತ್ತು. ಜುಲೈ ಮತ್ತು ಆಗಸ್ಟ್ ನಲ್ಲಿ ವೆಜ್ ಥಾಲಿ ಬೆಲೆ 34.1ರ ಸಮೀಪವಿದ್ದು, ಮಾಂಸಾಹಾರಿ ಥಾಲಿ 62.8 ರವರೆಗೆ ತಲುಪಿತ್ತು. ಬಳಿಕ ವೆಜ್ ಮತ್ತು ನಾನ್ ವೆಜ್ ಥಾಲಿ ಬೆಲೆ ಇಳಿಕೆಯಾಗಿದ್ದು, 2024ರ ಏಪ್ರಿಲ್ ನಲ್ಲಿ ವೆಜ್ ಥಾಲಿ ಬೆಲೆ 27.4ಕ್ಕೆ ತಲುಪಿದ್ದು, ನಾನ್ ವೆಜ್ ಥಾಲಿ ಬೆಲೆ 56.3ಕ್ಕೆ ತಲುಪಿದೆ.

Continue Reading

ಸಿನಿಮಾ

Manisha Koirala: ಕ್ಯಾನ್ಸರ್‌ ವಿರುದ್ಧ ಹೋರಾಡಿದ್ದು ಹೇಗೆ? ಅನುಭವ ಹಂಚಿಕೊಂಡ ಮನೀಶಾ ಕೊಯಿರಾಲ

ಸಂಜಯ್ ಲೀಲಾ ಬನ್ಸಾಲಿ ಅವರ ʼಹೀರಾಮಂಡಿʼ ಸರಣಿಯಲ್ಲಿ ನಟಿಸಿರುವ ಬಾಲಿವುಡ್ ನಟಿ ಮನಿಶಾ ಕೊಯಿರಾಲಾ (Manisha Koirala) ಚಿತ್ರೀಕರಣದ ಸಮಯದಲ್ಲಿ ಕ್ಯಾನ್ಸರ್ ನಿಂದಾಗಿ ಉಂಟಾಗಿರುವ ಖಿನ್ನತೆಯ ವಿರುದ್ಧ ಹೋರಾಡಿರುವ ಬಗ್ಗೆ ಹೇಳಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

By

Manisha Koirala
Koo

ಕ್ಯಾನ್ಸರ್ (cancer) ವಿರುದ್ಧ ಹೋರಾಡಿದ ಬಾಲಿವುಡ್ ನಟಿ (Bollywood actress) ಮನೀಶಾ ಕೊಯಿರಾಲ (Manisha Koirala) ʼಹೀರಾಮಂಡಿʼ (Heeramandi) ಚಿತ್ರೀಕರಣದ ವೇಳೆ ಅನುಭವಿಸಿದ ಖಿನ್ನತೆ, ಮೂಡ್ ಸ್ವಿಂಗ್‌ಗಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ʼಹೀರಾಮಂಡಿʼ ಸರಣಿಯ ಚಿತ್ರೀಕರಣದ ಸಮಯದಲ್ಲಿ ಕ್ಯಾನ್ಸರ್‌ ತಮ್ಮ ಅಭಿನಯ ಮತ್ತು ಆರೋಗ್ಯದ ಬೀರಿದ ಪರಿಣಾಮದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಅವರ ʼಹೀರಾಮಂಡಿʼ ಸರಣಿಯಲ್ಲಿ ನಟಿ ಮನಿಶಾ ಕೊಯಿರಾಲಾ ಅವರು ವೇಶ್ಯೆಯರ ಮುಖ್ಯಸ್ಥರಾಗಿ ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ಸರಣಿಯ ಚಿತ್ರೀಕರಣದ ಸಮಯದಲ್ಲಿ ಖಿನ್ನತೆಯ ವಿರುದ್ಧ ಹೋರಾಡಿದ ಬಗ್ಗೆ ಅವರು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾನ್ಸರ್‌ನಿಂದ ಪ್ರಭಾವಿತರಾಗಿದ್ದ ಅವರು ಮೂಡ್ ಸ್ವಿಂಗ್‌ಗಳಿಂದಾಗಿ ಅಭಿನಯದ ಮೇಲೆ ಅದು ಹೇಗೆ ಪರಿಣಾಮ ಬೀರಿದೆ ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮನೀಶಾ, ಕ್ಯಾನ್ಸರ್‌ನಿಂದ ಪ್ರಭಾವಿತನಾಗಿದ್ದ ನನಗೆ ದೇಹ ಮತ್ತು ಮನಸ್ಸು ಹೇಗೆ ಒಂದಕ್ಕೊಂದು ಹೆಣೆದುಕೊಂಡಿದೆ ಎಂಬುದು ತಿಳಿದಿದೆ. ಆದರೆ ಮೇಲೆ ವಿಶ್ವಾಸ ಇಟ್ಟರೆ ಮಾತ್ರ ನಾವು ವಿಜಯಿಯಾಗಬಹುದು. ಈಗಲೂ ಕೆಲವೊಮ್ಮೆ ನಾನು ಖಿನ್ನತೆಯನ್ನು ಅನುಭವಿಸುತ್ತೇನೆ. ʼಹೀರಾಮಂಡಿʼ ಚಿತ್ರೀಕರಣದ ವೇಳೆ ಅದು ನನ್ನನ್ನು ತುಂಬಾ ಕಾಡಿತು. ಪದೇಪದೇ ಮನಸ್ಥಿತಿ ಬದಲಾಗುತ್ತಿದೆ ಎಂದೆನಿಸುತ್ತಿತ್ತು. ಕ್ಯಾನ್ಸರ್ ನಿಂದ ಹೊರ ಬಂದ ಅನಂತರವೂ ಆರೋಗ್ಯದ ಮೇಲೆ ಅದರ ಪರಿಣಾಮವಿರುತ್ತದೆ ಎಂದರು.


2012ರಲ್ಲಿ ಕ್ಯಾನ್ಸರ್ ಪತ್ತೆ

ಮನೀಶಾ ಅವರಿಗೆ 2012ರಲ್ಲಿ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನ್ಯೂಯಾರ್ಕ್‌ನಲ್ಲಿ ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿ ಪಡೆದು 2014ರಲ್ಲಿ ಅವರು ಚೇತರಿಸಿಕೊಂಡರು. ಚಿತ್ರೀಕರಣದ ವೇಳೆ ನಾನು ಅದನ್ನು ಮಾಡಲು ಸಾಧ್ಯವಾಗುತ್ತದೆಯೇ ಅಥವಾ ನನ್ನ ದೇಹವು ಅದನ್ನು ತೆಗೆದುಕೊಳ್ಳುತ್ತದೆಯೇ ಎಂಬ ಖಚಿತತೆ ನನಗಿರಲಿಲ್ಲ. ಆದರೆ ನಿರ್ದೇಶಕರು ಅದನ್ನು ಅರ್ಥಮಾಡಿಕೊಳ್ಳುತ್ತಿದ್ದರು. 12 ಗಂಟೆಗಳ ಶೂಟಿಂಗ್ ಅನಂತರ ನಾವು ನಿಲ್ಲಿಸುತ್ತಿದ್ದೆವು. ಸಂಜಯ್ ನನ್ನ ಭಯ ಮತ್ತು ಆತಂಕವನ್ನು ಅರ್ಥಮಾಡಿಕೊಂಡರು ಎಂದು ಮನೀಶಾ ತಿಳಿಸಿದ್ದಾರೆ.

ಇದನ್ನೂ ಓದಿ: Actor Prabhas: ʼಕಣ್ಣಪ್ಪʼ ಚಿತ್ರಕ್ಕೆ ಎಂಟ್ರಿಕೊಟ್ಟ ಪ್ರಭಾಸ್‌; ಹೊಸ ಪೋಸ್ಟರ್‌ ರಿಲೀಸ್‌

ಸಮಯದ ಮೌಲ್ಯ ಅರ್ಥವಾಗಿದೆ

ಸಾಮಾಜಿಕ ಮಾಧ್ಯಮದದಲ್ಲಿ ಮನೀಶಾ ಈ ಹಿಂದೆ ತಮ್ಮ ಕ್ಯಾನ್ಸರ್ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದಾರೆ. ಜೀವನದಲ್ಲಿ ನಾನು ಕೃತಜ್ಞಳಾಗಿರಲು ಬಹಳಷ್ಟು ಇದೆ. ವೃತ್ತಿಜೀವನವು ಬಹಳಷ್ಟು ಉನ್ನತ ಕ್ಷಣಗಳು, ಮಹತ್ವದ ಪಾತ್ರಗಳು, ಅತ್ಯುತ್ತಮ ನಿರ್ದೇಶಕರು ಮತ್ತು ಸ್ನೇಹವನ್ನು ನೋಡಿದೆ. ಸಮಯದ ಪರೀಕ್ಷೆಯಲ್ಲಿ ನಿಂತಿದ್ದೇನೆ ಮತ್ತು ದೇವರ ಅನುಗ್ರಹದಿಂದ ನಾನು ಕ್ಯಾನ್ಸರ್ ವಿರುದ್ಧ ಹೋರಾಡಿದ ಎರಡನೇ ಬಾರಿ ಜೀವ ಪಡೆದುಕೊಂಡಿದ್ದೇನೆ. ನಾನು ಜೀವನದಲ್ಲಿ ಅತ್ಯಂತ ಕಡಿಮೆ ಕಷ್ಟಗಳನ್ನು ನೋಡಿದ್ದೇನೆ ಮತ್ತು ಅನೇಕ ತಪ್ಪುಗಳನ್ನೂ ಮಾಡಿದ್ದೇನೆ. ಜೀವನವು ಅದರ ಎಲ್ಲಾ ಉತ್ತುಂಗ ಮತ್ತು ಕೆಳಮಟ್ಟಗಳೊಂದಿಗೆ ಉತ್ತಮ ಶಿಕ್ಷಣ ನೀಡಿದೆ. ಈಗ ನಾನು ಸಮಯದ ಮೌಲ್ಯವನ್ನು ಹೆಚ್ಚು ತೀವ್ರವಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಹೀರಾಮಂಡಿಯಲ್ಲಿ ಮನೀಶಾ ಅವರೊಂದಿಗೆ ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಕೂಡ ನಟಿಸಿದ್ದಾರೆ.

Continue Reading

ಆರೋಗ್ಯ

Dates Benefits: ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ದಿನಕ್ಕೊಂದು ಖರ್ಜೂರ ತಿಂದರೆ ಸಾಕು!

ನಮ್ಮ ಹಿರಿಯರು ಬಹಳ ಹಿಂದೆಯೇ ಖರ್ಜೂರದ ಉಪಯೋಗ ಅರಿತುಕೊಂಡು ಅದರ ಲಾಭಗಳನ್ನು ಪಡೆಯುತ್ತಿದ್ದರು. ವೈದ್ಯರು, ಆಹಾರ ತಜ್ಞರು ದಿನಕ್ಕೊಂದು ಖರ್ಜೂರ ಸೇವಿಸಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ಖರ್ಜೂರ ಒಂದು ಸಂಪೂರ್ಣ ಆಹಾರ. ಇದರಲ್ಲಿ ಎಲ್ಲ ಪ್ರಮುಖವಾದ ಪೋಷಕಾಂಶಗಳೂ ಇರುವುದರಿಂದ ಇದನ್ನು ನಿತ್ಯವೂ ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಈ ಕುರಿತ (dates benefits) ಮಾಹಿತಿ ಇಲ್ಲಿದೆ.

VISTARANEWS.COM


on

Dates Benefits
Koo

ಕೆಲವು ಆಹಾರಗಳನ್ನು ನಾವು ನಿತ್ಯಾಹಾರವಾಗಿ ಅಭ್ಯಾಸ ಮಾಡುವುದರಿಂದ ನಮಗೆ ಸಾಕಷ್ಟು ಆರೋಗ್ಯದ ಲಾಭಗಳಿವೆ. ಅಂತಹ ಆಹಾರದ ಪೈಕಿ ಖರ್ಜೂರವೂ ಒಂದು. ನಮ್ಮ ಹಿರಿಯರು ಬಹಳ ಹಿಂದೆಯೇ ಖರ್ಜೂರದ ಉಪಯೋಗವನ್ನು ಅರಿತುಕೊಂಡು ಅದರ ಲಾಭಗಳನ್ನು ಪಡೆಯುತ್ತಿದ್ದರು. ವೈದ್ಯರುಗಳು, ಆಹಾರ ತಜ್ಞರು ದಿನಕ್ಕೊಂದು ಖರ್ಜೂರ ಸೇವಿಸಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ಖರ್ಜೂರ ಒಂದು ಸಂಪೂರ್ಣ ಆಹಾರ. ಇದರಲ್ಲಿ ಎಲ್ಲ ಪ್ರಮುಖವಾದ ಪೋಷಕಾಂಶಗಳೂ ಇರುವುದರಿಂದ ಇದನ್ನು ನಿತ್ಯವೂ ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಆದರೆ, ಖರ್ಜೂರವನ್ನು ಹೆಚ್ಚು ತಿನ್ನುವುದರಿಂದ ಕೆಲವು ಅನನುಕೂಲತೆಗಳೂ ಇಲ್ಲದಿಲ್ಲ. ಅಗತ್ಯಕ್ಕಿಂದ ಹೆಚ್ಚು ಖರ್ಜೂರದ ಸೇವನೆಯಿಂದ ತೂಕ ಹೆಚ್ಚಾಗುವ ಸಂಭವವಿದೆ. ಯಾಕೆಂದರೆ ಇದರಲ್ಲಿ ಹೆಚ್ಚು ಕ್ಯಾಲರಿಯಿದೆ. ಹಾಗಾಗಿ ಇದು ತೂಕ ಇಳಿಸುವ ಮಂದಿ ಇದನ್ನು ಪರಿಗಣಿಸುವುದಿಲ್ಲ. ನೈಸರ್ಗಿಕ ಸಕ್ಕರೆ ಇದರಲ್ಲಿ ಅಧಿಕವಾಗಿರುವುದರಿಂದ ಮಧುಮೇಹಿಗಳು ಹೆಚ್ಚು ತಿನ್ನುವುದು ಒಳ್ಳೆಯದಲ್ಲ. ಕಿಡ್ನಿ ಸಮಸ್ಯೆ ಇರುವ ಮಂದಿಯೂ ವೈದ್ಯರ ಸಲಹೆಯನ್ನು ಪಡೆದು ಸೇವಿಸಬಹುದು. ಅಸ್ತಮಾ ಇರುವ ಮಂದಿಗೆ, ಅಲರ್ಜಿ ಸಮಸ್ಯೆ ಇರುವ ಮಂದಿಗೆ ಖರ್ಜೂರದಲ್ಲಿ ಸಲ್ಫೈಟ್‌ ಇರುವ ಕಾರಣ ಅಷ್ಟು ಒಳ್ಳೆಯದಲ್ಲ. ಇದರ ಹೊರತಾಗಿ, ಖರ್ಜೂರವನ್ನು ಮಿತವಾಗಿ ದಿನಕ್ಕೊಂದರಂತೆ ತಿನ್ನುವ ಅಭ್ಯಾಸವನ್ನು ಮಾಡಿಕೊಂಡರೆ ಅದರಿಂದ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಬನ್ನಿ ಯಾಕೆ ನಾವು ನಿತ್ಯವೂ ಒಂದು ಖರ್ಜೂರವನ್ನು ತಿನ್ನಬೇಕು ಎಂಬುದಕ್ಕೆ (dates benefits) ಕಾರಣ ತಿಳಿಯೋಣ.

dates

ನಾರಿನಂಶ

ಖರ್ಜೂರದಲ್ಲಿ ಸಾಕಷ್ಟು ನಾರಿನಂಶವಿದೆ. ಇದು ಎಲ್‌ಡಿಎಲ್‌ ಅಂದರೆ, ಕೆಟ್ಟ ಕೊಲೆಸ್ಟೆರಾಲನ್ನು ಇಳಿಸುವಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ ಇದು ಹೃದಯದ ಆರೋಗ್ಯಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತದೆ.

ಆಂಟಿ ಆಕ್ಸಿಡೆಂಟ್‌

ಖರ್ಜೂರದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ ಹಲವು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೆಟ್ಟ ಬ್ಯಾಕ್ಟೀರಿಯಾ ನಿವಾರಣೆ

ಖರ್ಜೂರವು ಸಣ್ಣ ಕರುಳಿನಲ್ಲಿ ಶೇಖರಣೆಯಾಗುವ ಕೆಟ್ಟ ಬ್ಯಾಕ್ಟೀರಿಯಾವನ್ನು ಹೊಡೆದೋಡಿಸಿ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಕೆಯನ್ನು ಉತ್ತೇಜಿಸುತ್ತದೆ.

Doctor listens to the human lungs

ಶ್ವಾಸಕೋಶ ಆರೋಗ್ಯಕ್ಕೆ ಉತ್ತಮ

ಖರ್ಜೂರದಲ್ಲಿ ಪೊಟಾಶಿಯಂ ಹೇರಳವಾಗಿರುವುದರಿಂದ ಹೃದಯ, ಶ್ವಾಸಕೋಶ ಹಾಗೂ ಮಾಂಸಖಂಡಗಳ ಆರೋಗ್ಯವನ್ನು ಹೆಚ್ಚಿಸುತ್ತ ದೆ.

ಸುಸ್ತು ನಿವಾರಣೆ

ಖರ್ಜೂರದಲ್ಲಿ ಎಲ್ಲ ಬಗೆಯ ವಿಟಮಿನ್‌ಗಳು ಹೇರಳವಾಗಿದ್ದು ಇದು ಸುಸ್ತು ಹಾಗೂ ನಿಶಃಕ್ತಿಯನ್ನು ದೂರವಿರಿಸುತ್ತದೆ. ಬೇಸಿಗೆಯಲ್ಲಿ ಸುಸ್ತು, ತೆಲೆಸುತ್ತುವಿಕೆ ಇತ್ಯಾದಿ ಸಮಸ್ಯೆಗಳಿದ್ದರೆ ಖರ್ಜೂರವನ್ನು ಹೀಗೆ ತಿನ್ನುವುದರಿಂದ ಲಾಭ ಪಡೆಯಬಹುದು.

Dates Dry Fruits For Hair Fall

ಹೇರಳ ಪೊಟಾಶಿಯಂ

ಖರ್ಜೂರದಲ್ಲಿ ಪೊಟಾಶಿಯಂ ಹೇರಳವಾಗಿರುವುದರಿಂದ ಇದು ಸೋಡಿಯಂ ಅನ್ನು ದೇಹದಿಂದ ಹೊರಕ್ಕೆ ಕಳಿಸಲು ನೆರವಾಗುತ್ತದೆ. ಜೊತೆಗೆ ಹೃದಯ ಸರಿಯಾಗಿ ಬಡಿಯಲು ಸಹಾಯ ಮಾಡುತ್ತದೆ.

ರಕ್ತ ಹೀನತೆ ನಿವಾರಣೆ

ಖರ್ಜೂರದಲ್ಲಿ ಕಬ್ಬಿಣಾಂಶ ಹೆಚ್ಚಿರುವುದರಿಂದ ಇದು ಅನೀಮಿಯಾದಂತಹ ರಕ್ತಹೀನತೆಯನ್ನು ತರುವುದಿಲ್ಲ. ರಕ್ತ ಕಡಿಮೆ ಇರುವ ಮಂದಿಗೆ, ನಿಶಃಕ್ತಿ, ಸುಸ್ತಿನಂತಹ ಸಮಸ್ಯೆಯ ಮಂದಿಗೆ ಇದು ಉತ್ತಮ ಆಹಾರ. ರಕ್ತದಲ್ಲಿ ಹಿಮೋಗ್ಲೋಬಿನ್‌ ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.

Bone Health In Winter

ಎಲುಬು ಗಟ್ಟಿಗೊಳಿಸುತ್ತದೆ

ಇದರಲ್ಲಿ ಸಾಕಷ್ಟು ಖನಿಜಾಂಶಗಳಿರುವುದರಿಂದ ಇದು ಎಲುಬನ್ನು ಗಟ್ಟಿಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಮೂಳೆ ಸವತೆ ಮತ್ತಿತರ ಎಲುಬಿನ ಸಮಸ್ಯೆ ಇರುವ ಮಂದಿಗೆ ಇದು ಬಹಳ ಒಳ್ಳೆಯದು.

ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ

ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿಯೂ ಖರ್ಜೂರದ ಕಾಣಿಕೆ ದೊಡ್ಡದು. ಲೈಂಗಿಕ ರೋಗಗಳಿದ್ದರೂ ಕೂಡ ಖರ್ಜೂರದ ಸೇವನೆಯಿಂದ ಕೊಂಚ ಮಟ್ಟಿನ ಪರಿಹಾರ ಕಾಣಬಹುದು.

hair fall Hair And Skin Care Tips

ಕೂದಲು ಉದುರುವ ಸಮಸ್ಯೆಗೆ ಪರಿಹಾರ

ಕೂದಲುದುರುವಿಕೆ ಸೇರಿದಂತೆ ಕೂದಲ ಸಮಸ್ಯೆಗಳಿಗೆ ಖರ್ಜೂರ ಅತ್ಯಂತ ಒಳ್ಳೆಯದು. ನಿತ್ಯವೂ ಒಂದು ಖರ್ಜೂರವನ್ನು ನಿಯಮಿತವಾಗಿ ತಿನ್ನುವುದರಿಂದ ಸಾಕಷ್ಟು ಕೂದಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

Continue Reading
Advertisement
Narendra Modi
ದೇಶ41 mins ago

Narendra Modi: ಶಿಂಧೆ, ಅಜಿತ್‌ ಬಣಕ್ಕೆ ನೀವೇ ಸೇರಿಬಿಡಿ; ಠಾಕ್ರೆ, ಶರದ್‌ ಪವಾರ್‌ಗೆ ಮೋದಿ ಸಲಹೆ!

Wonderla Bengaluru
ಕರ್ನಾಟಕ43 mins ago

Wonderla Bengaluru: ತಾಯಂದಿರ ದಿನ ಹಿನ್ನೆಲೆ ವಂಡರ್‌ಲಾದಿಂದ ವಿಶೇಷ ಆಫರ್‌; 2 ಟಿಕೆಟ್‌ ಖರೀದಿಸಿದರೆ ತಾಯಿಗೆ ಫ್ರೀ ಎಂಟ್ರಿ!

IPL 2024
ಕ್ರೀಡೆ45 mins ago

IPL 2024 : ಚೆನ್ನೈ ವಿರುದ್ಧ ಗುಜರಾತ್​ಗೆ 35 ರನ್ ವಿಜಯ, ಆರ್​​ಸಿಬಿ ಪ್ಲೇಆಫ್​ ಪ್ರವೇಶಕ್ಕೆ ಮತ್ತೊಂದು ಸವಾಲು

Court Order
ದೇಶ2 hours ago

Cash Transfers: ಚುನಾವಣೆ; ಸರ್ಕಾರದ 14 ಸಾವಿರ ಕೋಟಿ ರೂ. ಜನರ ಖಾತೆಗೆ ವರ್ಗಾಯಿಸಲು ಕೋರ್ಟ್‌ ತಡೆ!

Prajwal Revanna Case
ಕರ್ನಾಟಕ2 hours ago

Prajwal Revanna Case: 36 ಸೆಕೆಂಡ್‌‌ಗಳ ಮತ್ತೊಂದು ಆಡಿಯೊ ಬಾಂಬ್; ಪ್ರಜ್ವಲ್ ಕೇಸ್‌‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್!

Mr. & Mrs. Mahi'
ಪ್ರಮುಖ ಸುದ್ದಿ2 hours ago

Mr. & Mrs. Mahi : ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ನಟನೆಯ ಮಿಸ್ಟರ್& ಮಿಸೆಸ್​ ಮಹಿ’ ಬಿಡುಗಡೆ ದಿನಾಂಕ ಪ್ರಕಟ

888 rupees postpaid plan with 15 OTT applications for JioFiber AirFiber customers
ತಂತ್ರಜ್ಞಾನ2 hours ago

Reliance Jio: ಜಿಯೋಫೈಬರ್, ಏರ್ ಫೈಬರ್ ಗ್ರಾಹಕರಿಗೆ ಆಫರ್‌; 15 ಒಟಿಟಿ ಅಪ್ಲಿಕೇಷನ್‌ ಜತೆಗೆ 888 ರೂ. ಪೋಸ್ಟ್ ಪೇಯ್ಡ್ ಪ್ಲಾನ್

Prajwal Revanna case SIT to issue Red Corner Notice against Prajwal
ಕ್ರೈಂ2 hours ago

Prajwal Revanna case: ಪ್ರಜ್ವಲ್‌ ರೇವಣ್ಣ ವಿರುದ್ಧ ರೆಡ್‌ ಕಾರ್ನರ್ ಬ್ರಹ್ಮಾಸ್ತ್ರ; ಯಾವ ದೇಶದಲ್ಲಿದ್ದರೂ ಅರೆಸ್ಟ್‌ ಮಾಡಲು ಸಿದ್ಧತೆ?

IPL 2024
ಕ್ರೀಡೆ3 hours ago

IPL 2024 : ಐಪಿಎಲ್​ನಲ್ಲಿ ಹೊಸ ಇತಿಹಾಸ; ಸಚಿನ್​ ದಾಖಲೆ ಮುರಿದ ಸಾಯಿ ಸುದರ್ಶನ್​

US
ಪ್ರಮುಖ ಸುದ್ದಿ3 hours ago

ಮಹಿಳೆಯ ಕುತ್ತಿಗೆಗೆ ಬೆಲ್ಟ್‌ನಿಂದ ಬಿಗಿದು, ರಸ್ತೆ ಬದಿಯೇ ಅತ್ಯಾಚಾರ ಎಸಗಿದ ದುಷ್ಟ; ಭೀಕರ ವಿಡಿಯೊ ಇಲ್ಲಿದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ10 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ12 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ13 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ20 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ1 day ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ1 day ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ1 day ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌