Elvish Yadav: ʻಬಿಗ್ ಬಾಸ್ ಹಿಂದಿ ಒಟಿಟಿ 2ʼ ವಿನ್ನರ್‌ ಅರೆಸ್ಟ್‌ - Vistara News

ಬಿಗ್ ಬಾಸ್

Elvish Yadav: ʻಬಿಗ್ ಬಾಸ್ ಹಿಂದಿ ಒಟಿಟಿ 2ʼ ವಿನ್ನರ್‌ ಅರೆಸ್ಟ್‌

Elvish Yadav: ಎಲ್ವಿಶ್ ಯಾದವ್ ಅವರನ್ನು ಇಂದು ವಿಚಾರಣೆಗೆ ಕರೆಸಿ ಬಳಿಕ ಬಂಧಿಸಲಾಗಿದೆ (Noida Police) ಎಂದು ವರದಿಯಾಗಿದೆ. ಇಂದು (ಮಾ.17) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಡಿಸಿಪಿ ನೋಯ್ಡಾ ವಿದ್ಯಾ ಸಾಗರ್ ಮಾಹಿತಿ ಹಂಚಿಕೊಂಡಿದ್ದಾರೆ.

VISTARANEWS.COM


on

Elvish Yadav
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಬಿಗ್ ಬಾಸ್ OTT 2 ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ (Elvish Yadav ) ಅವರನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ  ಪ್ರಕರಣದಲ್ಲಿ ಬಂಧಿಸಿದ್ದಾರೆ. ಕಳೆದ ವರ್ಷ ನೋಯ್ಡಾ ಪೊಲೀಸರು ಹಾವು ಮತ್ತು ಅವುಗಳ ವಿಷವನ್ನು (Snake Venom Case) ಸರಬರಾಜು ಮಾಡುತ್ತಿದ್ದ ಗ್ಯಾಂಗ್‌ನ ಐವರು ಸದಸ್ಯರನ್ನು ಬಂಧಿಸಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಇದಾದ ಬಳಿಕ ಎಲ್ವಿಶ್ ಯಾದವ್ ಅವರನ್ನು ಇಂದು ವಿಚಾರಣೆಗೆ ಕರೆಸಿ ಬಳಿಕ ಅರೆಸ್ಟ್‌ (Noida Police) ಮಾಡಲಾಗಿದೆ ಎಂದು ವರದಿಯಾಗಿದೆ. ಇಂದು (ಮಾ.17) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಡಿಸಿಪಿ ನೋಯ್ಡಾ ವಿದ್ಯಾ ಸಾಗರ್ ಮಾಹಿತಿ ಹಂಚಿಕೊಂಡಿದ್ದಾರೆ.

ಏನಿದು ಪ್ರಕರಣ?

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಯೂಟ್ಯೂಬರ್, ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿತ್ತು. ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ತಿಳಿಸಿದ್ದರು. ಬಂಧಿತರನ್ನು ಆಗ್ನೇಯ ದೆಹಲಿಯ ಬದರ್‌ಪುರದ ಮೊಹರ್‌ಬಂದ್ ಗ್ರಾಮದ ನಿವಾಸಿಗಳಾದ ರಾಹುಲ್(32), ತೀತುನಾಥ್ (45), ಜೈಕರನ್ (50), ನಾರಾಯಣ್ (50) ಮತ್ತು ರವಿನಾಥ್ (45) ಎಂದು ಗುರುತಿಸಲಾಗಿತ್ತು.

ವಿದೇಶಿ ಪ್ರಜೆಗಳಿಗೂ ಆತಿಥ್ಯ ನೀಡಿದ ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪಿಯಿಂದ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳು ಹಾಗೂ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದ್ದು, ಹಾವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಅಂದು ಎಲ್ವಿಶ್ ಯಾದವ್ ಅವರನ್ನು ಬಂಧಿಸಿರಲಿಲ್ಲ.
ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು, ಎಲ್ವಿಶ್ ಯಾದವ್‌ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು.. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಈ ಮುಂಚೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Elvish Yadav: ಯೂಟ್ಯೂಬರ್‌ ಮೇಲೆ ಹಲ್ಲೆ ನಡೆಸಿದ ʻಬಿಗ್ ಬಾಸ್ ಹಿಂದಿ ಒಟಿಟಿ 2ʼ ವಿನ್ನರ್‌!

ಯೂಟ್ಯೂಬರ್‌ ಮೇಲೆ ಹಲ್ಲೆ ನಡೆಸಿದ್ದ ಎಲ್ವಿಶ್‌

ಎಲ್ವಿಶ್ ಯಾದವ್ ವಿವಾದಗಳು ಹೊಸದೇನಲ್ಲ. ಕೆಲವು ದಿನಗಳ ಹಿಂದೆಯಷ್ಟೇ ‘ಬಿಗ್ ಬಾಸ್ ಹಿಂದಿ ಒಟಿಟಿ 2’ (Bigg Boss OTT) ಮೂಲಕ ಖ್ಯಾತಿ ಪಡೆದಿದ್ದ ಎಲ್ವಿಶ್​ ಯಾದವ್ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದರು. ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ್ ಪೊಲೀಸರು ಬಿಗ್ ಬಾಸ್ ವಿಜೇತ ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬಿಗ್ ಬಾಸ್

Bigg Boss Kannada : ಕಿಚ್ಚನ ಪಂಚಾಯ್ತಿಯಲ್ಲಿ ಗರ್ಮಾಗರಂ ವಿಷ್ಯಗಳು; ಬಿಗ್‌ಬಾಸ್‌ ನಿರ್ಧಾರವನ್ನೇ ಪ್ರಶ್ನೆ ಮಾಡ್ತಾರಾ ಸುದೀಪ್‌!

ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಯಾವೆಲ್ಲ ವಿಷ್ಯಗಳು ಚರ್ಚೆಗೆ ಬರುತ್ತೆ ಗೊತ್ತಾ?
ಕಿಚ್ಚನ ಪಂಚಾಯ್ತಿಗೆ ವೀಕ್ಷಕರು ಇಟ್ಟ ಬೇಡಿಕೆಗಳೇನು?

VISTARANEWS.COM


on

Bigg boss kannada

ಬೆಂಗಳೂರು: ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಶೋನಲ್ಲಿ ಕಿಚ್ಚು ಹೆಚ್ಚಾಗಿದೆ. ಇದೆ ಮೊದಲ ಸಲ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಸ್ಪರ್ಧಿಗಳು ನಿಯಮ ಮೀರಿದ ಹಿನ್ನೆಲೆಯಲ್ಲಿ ನೇರವಾಗಿ ಎಲಿಮಿನೇಟ್‌ ಆಗಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಲಾಯರ್‌ ಜಗದೀಶ್‌, ದೈಹಿಕ ಹಲ್ಲೆ ಆರೋಪದ ಮೇಲೆ ರಂಜಿತ್‌ ಶುಕ್ರವಾರ ಮನೆ ತೊರೆದಿದ್ದರು.

ಇದೀಗ ವಾರದ ಕಥೆ ಕಿಚ್ಚ ಜತೆಯಲ್ಲಿ ನಟ ಸುದೀಪ್‌ ಬಿಗ್‌ಬಾಸ್‌ ನಿರ್ಧಾರವನ್ನೇ ಪ್ರಶ್ನೆ ಮಾಡ್ತಾರಾ? ಕಿಚ್ಚನ ಪಂಚಾಯ್ತಿಯಲ್ಲಿ ಗರ್ಮಾಗರಂ ವಿಷ್ಯಗಳು ಯಾವುದು ಎಂಬ ಕುತೂಹಲ ಮೂಡಿದೆ.

ಅಸಲಿಗೆ ದೊಡ್ಡ ಮನೆಯಲ್ಲಿ ಆ ದಿನ ನಡೆದಿದ್ದೇನು ಗೊತ್ತಾ?

ಕಳೆದ (ಬುಧವಾರ) ಟಾಸ್ಕ್‌ ಮುಗಿದ ಬಳಿಕ ಗಾರ್ಡನ್‌ ಏರಿಯಾದಲ್ಲಿ ಜಗದೀಶ್‌ ಮತ್ತು ಗೋಲ್ಡ್‌ ಸುರೇಶ್‌ ಮಾತನಾಡುತ್ತ ಕೂತಿದ್ದರು. ಈ ವೇಳೆ ಮಾತಿನ ಭರದಲ್ಲಿ ಜಗದೀಶ್‌ ಮನೆಯ ಸ್ಪರ್ಧಿಗಳ ಬಗ್ಗೆ ಇಲ್ಲ ಸಲ್ಲದ ಪದ ಬಳಕೆ ಮಾಡಿ ಮಾತನಾಡಲು ಶುರುಮಾಡಿದರು. ಜಗದೀಶ್‌ ಅವರ ಮಾತುಗಳು ಸುರೇಶ್‌ಗೆ ಅಸಹನೀಯ ಎನಿಸತೊಡಗಿದವು. ಕೂಡಲೇ ಇಂಥ ಪದಗಳ ಪ್ರಯೋಗ ನನ್ನ ಮುಂದೆ ಮಾಡಬೇಡ ಎಂದು ಬೇಡಿಕೊಂಡರು. ಮುಂದುವರಿದು, ಆ ಹಂಸಾ ಮುಂ* ಎಂಬ ಪದ ಬಳಕೆ ಪ್ರಯೋಗಿಸಿದರು .

ಅಲ್ಲಿಂದ ಶುರುವಾಯ್ತು ವಾರ್‌.. ಹಂಸಾಗೆ ಆ ಪದ ಪ್ರಯೋಗಿಸಿದ ವಿಚಾರ, ನಂತರ ಇಡೀ ಮನೆಗೂ ಗೊತ್ತಾಯ್ತು. ಮುಂದುವರಿದು ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆಯಿತು. ತಳ್ಳಾಟ ನೂಕಾಟವೂ ನಡೆಯಿತು. ಲಾಯರ್‌ ಜಗದೀಶ್‌ ಅವರ ಮೇಲೆ ಇಡೀ ಮನೆಯ ಮಹಿಳಾ ಸ್ಪರ್ಧಿಗಳು ಮುಗಿಬಿದ್ದರು. ಇದೇ ವೇಳೆ ಮಾತುಕತೆ ಅತಿರೇಕಕ್ಕೆ ಹೋಗುತ್ತಿದ್ದಂತೆ, ಜಗದೀಶ್‌ ಅವರನ್ನು ಅಲ್ಲೇ ಇದ್ದ ರಂಜಿತ್‌ ತಳ್ಳಿದರು. ಇದೆಲ್ಲವನ್ನು ಗಮನಿಸಿದ ಬಿಗ್‌ಬಾಸ್‌ ಸಹ ತಾಳ್ಮೆ ಕಳೆದುಕೊಂಡು, ಮೊದಲ ಸಲ ಜೋರಾಗಿ ಕೂಗಿ ಎಲ್ಲರನ್ನು ಒಂದೆಡೆ ಕೂರಿಸಿದರು.

ದೈಹಿಕ ಹಲ್ಲೆ ಆರೋಪದ ಮೇಲೆ ರಂಜಿತ್‌ ಹೊರಕ್ಕೆ

ಇತ್ತ, ಕೆಲ ಹೊತ್ತಿನ ಬಳಿಕ ಮಹಿಳೆಯರಿಗೆ ನಿಂದನೆ, ಅಪಮಾನ ಸಹಿಸುವುದಿಲ್ಲ ಎಂಬ ಆರೋಪದ ಮೇಲೆ ಜಗದೀಶ್‌ ಅವರನ್ನು ಬಿಗ್‌ಬಾಸ್‌ನಿಂದ ನೇರವಾಗಿ ಎಲಿಮಿನೇಟ್‌ ಮಾಡಿ, ಹೊರಗೆ ಕಳಿಸಲಾಯಿತು. ಇತ್ತ ದೈಹಿಕ ಹಲ್ಲೆ ಅಕ್ಷಮ್ಯ ಅಪರಾಧ ಎಂಬ ನಿಯಮದಡಿ ರಂಜಿತ್‌ ಅವರನ್ನೂ ಹೊರಗೆ ಕಳಿಸಲಾಯಿತು. ಈ ಮೂಲಕ ಶುಕ್ರವಾರ ಅಚ್ಚರಿಯ ಬೆಳವಣಿಗೆಯಲ್ಲಿ ಡಬಲ್‌ ಶಾಕಿಂಗ್‌ ಎಲಿಮಿನೇಷನ್‌ ಆಯ್ತು. ಇತ್ತ ರಂಜಿತ್‌ ಮಾಡಿದ್ದು ಸರಿಯಿದೆ. ಅವರ ಉದ್ದೇಶ ಒಳ್ಳೆಯದು ಎಂದು ಸ್ಪರ್ಧಿಗಳು ಕಣ್ಣೀರಿಟ್ಟರೂ, ನಿಯಮ ಗೌರವಿಸುವ ಸಲುವಾಗಿ ಔಟ್‌ ಮಾಡಲಾಯಿತು.

ಇದೀಗ.. ವಾರದ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಲಿರುವ ‘ಗರಮಾ ಗರಂ’ ವಿಷಯಗಳು ಯಾವವು ಎಂಬುದನ್ನು ಕಲರ್ಸ್‌ ಕನ್ನಡ ಸೋಶಿಯಲ್‌ ಮೀಡಿಯಾದಲ್ಲಿ ನಿನ್ನೆ ಪೋಸ್ಟ್‌ ಹಂಚಿಕೊಂಡಿದೆ . ಆ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿವೆ. ಆ ಪೈಕಿ ವೀಕ್ಷಕರ ಪ್ರಶ್ನೆಗಳೇನು? ಕಿಚ್ಚನ ಮುಂದೆ ವೀಕ್ಷಕರು ಇಟ್ಟಿರುವ ಬೇಡಿಕೆಗಳೇನು? ಇಲ್ಲಿದೆ ನೋಡಿ

ಈ ಸಲದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ. ಮಹಿಳಾ ಸ್ಪರ್ಧಿಗಳ ಬಗ್ಗೆ ಕೆಟ್ಟ ಪದ ಪ್ರಯೋಗ ಬಳಸಿದ್ದಕ್ಕೆ ಜಗದೀಶ್‌ ಎಲಿಮಿನೇಟ್‌ ಆದರೆ, ಒಳ್ಳೆಯ ಉದ್ದೇಶ ಇದ್ದರೂ, ದೈಹಿಕ ಹಲ್ಲೆ ಮಾಡಿದ ಆರೋಪದ ಮೇಲೆ ರಂಜಿತ್‌ ಮನೆಯಿಂದ ಹೊರ ನಡೆದಿದ್ದಾರೆ. ಇತ್ತ ಮನೆಯ ಸ್ಪರ್ಧಿಗಳು ರಂಜಿತ್‌ ತೆರಳಿದ್ದಕ್ಕೆ ಬೇಸರದಲ್ಲಿದ್ದರೆ, ಜಗದೀಶ್‌ ಹೊರ ನಡೆದಿದ್ದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಇದೆಲ್ಲದರ ನಡುವೆಯೇ ವಾರಾಂತ್ಯವೂ ಬಂದಿದೆ. ಕಿಚ್ಚನ ಆಗಮನಕ್ಕೂ ಕ್ಷಣಗಣನೆ ಆರಂಭವಾಗಿದೆ.

ಕಳೆದ ವಾರ ಯಾವುದೇ ಎಲಿಮಿನೇಷನ್‌ ಇರಲಿಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ ಎಲ್ಲರೂ ಸೇವ್‌ ಆಗಿದ್ದರು. ಆದರೆ, ಈ ವಾರ ಹಾಗಾಗಲಿಲ್ಲ. ಯಾರೂ ನಿರೀಕ್ಷಿಸದೇ ಇಬ್ಬರು ಸ್ಪರ್ಧಿಗಳು ನೇರವಾಗಿ ಹೊರ ನಡೆಯಬೇಕಾಯಿತು. ಹೀಗಿರುವಾಗ ಈ ವಾರ ಎಲಿಮಿನೇಷನ್‌ ಇರುತ್ತಾ? ಎಂಬ ಒಂದಷ್ಟು ಪ್ರಶ್ನೆಗಳಂತೂ ಎಲ್ಲರ ಮನಸಿನಲ್ಲೂ ಮೂಡಿದೆ. ಅದರಲ್ಲೂ ವೀಕ್ಷಕರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದೀಗ ಕಿಚ್ಚನ ಪಂಚಾಯ್ತಿಯಲ್ಲಿ ಆ ಪ್ರಶ್ನೆಗಳಿಗೆ ಉತ್ತರ ಸಿಗಬಹುದಾ?

ಹೌದು. ಸೋಷಿಯಲ್‌ ಮೀಡಿಯಾದಲ್ಲಿ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಬೇಕಿರೋ ‘ಗರಮಾ ಗರಂ’ ವಿಷಯಗಳು ಯಾವವು” ಎಂದು ಪೋಸ್ಟ್‌ ಹಂಚಿಕೊಂಡಿದೆ ಕಲರ್ಸ್‌ ಕನ್ನಡ. ಆ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಹರಿದು ಬಂದಿವೆ. ಆ ಪೈಕಿ ವೀಕ್ಷಕರ ಪ್ರಶ್ನೆಗಳೇನು? ಕಿಚ್ಚ ಸುದೀಪ್‌ ಮುಂದೆ ವೀಕ್ಷಕರು ಇಟ್ಟಿರುವ ಬೇಡಿಕೆಗಳೇನು? ಇಲ್ಲಿದೆ ನೋಡಿ ಆಯ್ದ ಕೆಲವು ಪ್ರಶ್ನೆಗಳು ಮತ್ತು ಬೇಡಿಕೆಗಳು.

ಸುದೀಪ್‌ಗೆ ವೀಕ್ಷಕರ ಪ್ರಶ್ನೆ ಮತ್ತು ಬೇಡಿಕೆ:

  • -ಜಗ್ಗು ಇಲ್ಲದ ಬಿಗ್‌ ಬಾಸ್ ನಾವು ನೋಡಲ್ಲ.‌ ಲಾಯರ್ ಜಗದೀಶ್‌ಗೆ ನ್ಯಾಯ ಸಿಗಬೇಕು. ಪುರುಷರಿಗೆ ಆದ ನಿಂದನೆ ಅಪಮಾನದ ಬಗ್ಗೆ ಕರ್ನಾಟಕದ ಜನತೆ ಸಹಿಸುವುದಿಲ್ಲ. ಅವರನ್ನ ಮತ್ತೆ ಅಖಾಡಕ್ಕೆ ಇಳಿಸಲೇಬೇಕು. ಹೆಣ್ಣಿಗೆ ಮಾತ್ರ ಅವಮಾನ ಆಗಿರಲಿಲ್ಲ ಗಂಡಿಗೂ ಅವಮಾನ ಆಗಿದೆ ಇದರ ಬಗ್ಗೆ ನೀವು ಪ್ರಶ್ನೆ ಎತ್ತಲೇಬೇಕು. ಗಂಡಿನ ಮರ್ಯಾದೆಗೆ ಧಕ್ಕೆ ಬರ್ತಿದೆ ಈ ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳಿಂದ. ಮುಂದೆ ಪುರುಷ ರಕ್ಷಣಾ ವೇದಿಕೆಯನ್ನು ತೆರೆದರು ತೆರೆಯಬಹುದು.
  • -ಸುದೀಪ್‌ ಸರ್‌, ಜಗದೀಶ್‌ ಅವರನ್ನ ಏಕವಚನದಲ್ಲಿ ಮಾತಾಡುವುದಲ್ಲದೇ ಹೋರ್ಗಡೆ ಎನ್ ತಗೊಂಡು ಹೊಡೀತಾರೆ ನಿಂಗೆ ಎನ್ನುತ್ತ ತಳ್ಳಿದ್ದಾರೆ ಭವ್ಯ ಇದಕ್ಕೆ ನ್ಯಾಯ ಸಿಗುತ್ತಾ?
  • -ಮಾನಸ ಅವರು ಒಬ್ಬ ಗಂಡಸಿಗೆ ಸೀರೆ ಕೊಡ್ತೀನಿ ಉಟ್ಕೋ, ಅಂತಾರೆ ಅವಳ ಗಂಡ ತುಕಾಲಿ, ಹೆಂಡತಿ ತುಕಾಲಿ ಪ್ರೊ ಮ್ಯಾಕ್ಸ್ ಅಂತ ನೆಟ್ಟಿಗರು ಕಿಡಿಕಾರಿದ್ದಾರೆ. ಗಂಡಿನ ಘನತೆಗೆ ಧಕ್ಕೆ ಆದಾಗ ತಿರುಗೇಟು ಕೊಟ್ಟರೆ ಅದು ಮಹಿಳೆಗೆ ಅಗೌರವವೇ? ಕಿಚ್ಚ ಸುದೀಪ್ ಇದಕ್ಕೆ ನ್ಯಾಯ ಒದಗಿಸುವ ಮೂಲಕ ಪುರುಷರ ಘನತೆ ಕಾಪಾಡಬೇಕು ಅಂದಿದ್ದಾರೆ.
  • -ಜಗ್ಗುನ ಪ್ರವೋಕ್ ಮಾಡಿದ ಎಲ್ಲರಿಗೂ ಅವರ ತಪ್ಪಿನ ಅರಿವು ಮಾಡಿಸಬೇಕು. ಹೆಣ್ಣಿನ ಬಗ್ಗೆ ಕೆಟ್ಟದಾಗಿ ಮಾತಾಡುವುದು ತಪ್ಪು. ಜಗದೀಶ್‌ಗೆ ಶಿಕ್ಷೆಯಾಗಿದ್ದು ಸರಿ. ಆದರೆ ಚೈತ್ರ ಹೇಳ್ತಾರೆ ಅಪ್ಪನಿಗೆ ಹುಟ್ಟಿದರೆ ಬಾ, ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಬಾ ಅಂತ ಇದರಲ್ಲಿ ಆಗಿರುವುದು ಒಂದು ಹೆಣ್ಣಿಗೆ ಅವಮಾನ ಅಂದರೇ (ಜಗದೀಶ್ ತಾಯಿಯ ಬಗ್ಗೆ ) ಇದರ ಬಗ್ಗೆನೂ ಚರ್ಚೆ ಆಗಲೇಬೇಕು.
  • -ಜಗ್ಗು ಮಾತಾಡಿದ್ದು ತಪ್ಪು ಅದರಲ್ಲಿ 2 ಮಾತಿಲ್ಲ.. ಆದ್ರೆ ಸತತ 3 ದಿನಗಳಿಂದ ರಂಜಿತ್, ಮಂಜು, ತ್ರಿವಿಕ್ರಮ ಜಗಳ ಆಡೋ ತರ ಪ್ರಚೋದನೆ ಮಾಡಿದ್ದು ತಪ್ಪಲ್ವಾ?.. ಮಾನಸ ಮಾತು ಅಸಹ್ಯವಾಗಿತ್ತು ಅವಳನ್ನು ಯಾಕೆ ಹೊರಗೆ ಹಾಕಿಲ್ಲ. . ಚೈತ್ರ, ಭವ್ಯ, ಮಾನಸ 3 ಜನ ಅಮ್ಮ ಅಪ್ಪ ಹೆಂಡ್ತಿ ಅನ್ನೋ ಶಬ್ದ ಬಳಸಿ ಮಾತನಾಡುವುದಲ್ಲದೇ ಜಗದೀಶ್‌ ಅವರನ್ನ ಥಳಿಸಿದ್ದಾರೆ.

ರಂಜಿತ್‌ಗೆ ವೀಕ್ಷಕರ ಮೆಚ್ಚುಗೆ

ರಂಜಿತ್‌ ನೇರವಾಗಿ ಮನೆಯಿಂದ ಹೊರಬರುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ರಂಜಿತ್‌ ಪರವಾಗಿ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. “ನಿಮ್ಮ ಹೆಸರು ಬಿಗ್‌ಬಾಸ್‌ನಲ್ಲಿ ಶಾಶ್ವತ. ಒಂದೊಳ್ಳೆಯ ಉದ್ದೇಶಕ್ಕೆ ನೀವು ನಿಯಮ ಮುರಿದಿದ್ದೀರಿ. ಇದನ್ನು ಬೇರೆಯವರೂ ಮಾಡಲು ಅಸಾಧ್ಯ” ಎಂದು ಧ್ರುವ ಎಂಬುವವರು ಟ್ವಿಟ್‌ ಮಾಡಿದ್ದಾರೆ. “ಉದ್ದೇಶ ಸರಿ. ಅಸಲಿ ವಿಚಾರ ಬಿಗ್‌ಬಾಸ್‌ಗೂ ಗೊತ್ತು, ಅಷ್ಟೇ ಸಾಕು.. ಮಿಸ್‌ ಯೂ ರಂಜಿತ್”‌ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಳ್ಳೆಯ ಉದ್ದೇಶಕ್ಕೆ ಹೋಗ್ತಿದ್ದೀಯಾ ಮಗ. ಸೂರ್ಯ ರಂಜಿತ್‌ ಬಿಬಿ ಇರೋವರೆಗೂ ಇದು ಒಂದು ಉದಾಹರಣೆಯಾಗಿ ನಿಲ್ಲಲಿದೆ. ಒಂದೊಳ್ಳೆಯ ಕಾರಣಕ್ಕೆ ನೀವು ಆಚೆ ಹೋಗಿದ್ದೀರಿ” ಎಂದು ವೀಕ್ಷಕರು ಟ್ವಿಟ್‌ ಮಾಡಿದ್ದಾರೆ.

Continue Reading

ಬೆಂಗಳೂರು

Kiccha Sudeep: ಬಿಗ್‌ಬಾಸ್‌ಗೆ ಕಿಚ್ಚ ಸುದೀಪ್ ವಿದಾಯ; ಇದೊಂದೆ ರೀಸನ್‌ಗೆ ಹೊರಬಂದ್ರಾ ಬಾದ್‌ ಶಾ

Kiccha Sudeep: ಕಿಚ್ಚ ಸುದೀಪ್‌ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳುತ್ತಿದ್ದಾರೆ. ಬಿಗ್‌ಬಾಗ್‌ ಸೀಸನ್‌ 11 ನನ್ನ ಕಡೆಯ ನಿರೂಪಣೆ ಆಗಿದೆ ಎಂದು ಎಕ್ಸ್‌ ಮಾಡಿದ್ದಾರೆ. ಇಷ್ಟಕ್ಕೂ ಸುದೀಪ್‌ ಹೀಗೆ ಹೇಳಲು ಅಸಲಿ ಕಾರಣ ಏನು. ಅದ್ಯಾವ ರೀಸನ್‌ಗೆ ಬಿಗ್‌ಬಾಸ್‌ ಮನೆಯಿಂದ ಹೊರ ಬರುತ್ತಿದ್ದಾರೆ?

VISTARANEWS.COM


on

This will be my last season as a host for BBK By Kichcha Sudeepa

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗುವ ಮೊದಲೇ ಕಿಚ್ಚ ಸುದೀಪ್‌ (Kiccha Sudeep) ಈ ಬಾರಿ ನಿರೂಪಣೆ ಮಾಡುವುದಿಲ್ಲ ಎನ್ನಲಾಗಿತ್ತು. ಆದರೆ ವಾಪಸ್‌ ಅವರ ಸಾರಥ್ಯದಲ್ಲೇ ಬಿಗ್‌ ಬಾಸ್‌ ಸೀಸನ್‌ 11 ಅದ್ಧೂರಿಯಾಗಿ ಆರಂಭಗೊಂಡಿತ್ತು. ಆದರೆ ಇದೇ ಬಿಗ್‌ಬಾಗ್‌ ವೀಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಸುದೀಪ್‌ ಶಾಕ್‌ ಕೊಟ್ಟಿದ್ದಾರೆ. ಬಿಗ್​ಬಾಸ್​ಗೆ ಬಾದ್ ಶಾ ಕಿಚ್ಚ ಸುದೀಪ್ ವಿದಾಯ ಹೇಳುತ್ತಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಕನ್ನಡ ಕಿರುತೆರೆಯ ಬಿಗೆಸ್ಟ್‌ ರಿಯಾಲಿಟಿ ಶೋ ಬಿಗ್‌ಬಾಸ್ 11ನೇ ಸೀಸನ್‌ಗೆ (Bigg Boss Kannada) ಕಿಕ್ ಸ್ಟಾರ್ಟ್ ಸಿಕ್ಕಿದೆ. ಕನ್ನಡ ಟೆಲಿವಿಷನ್ ಲೋಕದಲ್ಲಿ ದೊಡ್ಮನೆಯ ಕಲರವ ಶುರುವಾಗಿದೆ. ಭಿನ್ನ -ವಿಭಿನ್ನ ಹದಿನೇಳು ಸ್ಪರ್ಧಿಗಳು ಈ ಬಾರಿಯ ಕನ್ನಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಗೇಮ್‌ ಆಡ್ತಿದ್ದಾರೆ. ಇಷ್ಟು ದಿನದಿಂದ ಒಂದು ಲೆಕ್ಕ ಈಗಿನಿಂದ ಇನ್ನೊಂದು ಲೆಕ್ಕವನ್ನು ಬಿಗ್ ಬಾಸ್ ಶುರುಮಾಡಿದ್ದು, ಸ್ವರ್ಗ- ನರಕದ ಆಟವಾಡುತ್ತಿರುವಾಗಲೇ ಕಿಚ್ಚ ಸುದೀಪ್‌ ಶಾಕ್‌ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಬಿಗ್‌ ಬಾಸ್‌ 11 ನನ್ನ ಕೊನೆಯ ಸೀಸನ್‌ ಎಂದು ಹೇಳಿದ್ದಾರೆ.

ಬಿಗ್‌ಬಾಸ್‌ ಸೀಸನ್‌ 11ಕ್ಕೂ ಉತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು, ಈ ಕಾರ್ಯಕ್ರಮಕ್ಕೆ ಹಾಗೂ ನನಗೆ ತೋರಿದ ಪ್ರೀತಿಗೆ ಇದು ಸಾಕ್ಷಿಯಾಗಿದೆ. ಒಟ್ಟಿಗೆ 10 + 1 ಸೀಸನ್‌ ಸೇರಿ 11 ವರ್ಷಗಳ ಉತ್ತಮ ಪ್ರಯಾಣವಾಗಿದೆ. ಬಿಗ್‌ಬಾಸ್‌ನ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ಈ ನಿರ್ಧಾರವನ್ನು ಕಲರ್ಸ್‌ ಸಂಸ್ಥೆ ಮತ್ತು ಇಷ್ಟು ವರ್ಷಗಳು ಬಿಗ್‌ಬಾಸ್‌ನನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ. ಈ ಸೀಸನ್‌ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಸಹ ನಿಮ್ಮೆಲ್ಲರನ್ನೂ ಅತ್ಯುತ್ತಮವಾಗಿ ರಂಜಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಸುದೀಪ್ ಬಿಗ್ ಬಾಸ್ ತೊರೆಯುತ್ತಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸುದೀಪ್‌ ಟ್ವೀಟ್‌ ಮಾಡಿರುವುದು ಎಲ್ಲೆಡೆ ವೈರಲ್‌ ಆಗಿದೆ. ಹಿಂದೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚ ಸುದೀಪ್‌ ಬಿಗ್‌ಬಾಗ್‌ ಕಾರ್ಯಕ್ರಮದಿಂದ ಹೊರ ಬರುತ್ತಾರೆ ಎನ್ನಲಾಗಿತ್ತು. ಅವರ ಜಾಗಕ್ಕೆ ನಟ ರಮೇಶ್ ಅರವಿಂದ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಬ್ಬರಲ್ಲಿ ಒಬ್ಬರು ಹೋಸ್ಟ್‌ ಮಾಡಲಿದ್ದಾರೆ ಎನ್ನಲಾಗಿತ್ತು. ರಮೇಶ್‌ ಅರವಿಂದ ವೀಕೆಂಡ್ ವಿತ್ ರಮೇಶ್ ಮತ್ತು ಕೋಟ್ಯಾಧಿಪತಿ, ಮಹಾನಟಿ ಶೋ ಮೂಲಕ ವೀಕ್ಷಕರನ್ನು ತಲುಪಿದ್ದರು.

Continue Reading

ಬೆಂಗಳೂರು

Bigg Boss Kannada : ಸ್ವರ್ಗ- ನರಕಕ್ಕೆ ಎಂಟ್ರಿ ಕೊಟ್ಟ ಸ್ಪರ್ಧಿಗಳು; ಬಿಗ್‌‌ ಬಾಸ್‌ ಮನೆಯಲ್ಲಿ ದಚ್ಚು ಫಾಲೋವರ್ಸ್ ಕಿಕ್

Bigg Boss Kannada : ಬಿಗ್‌ಬಾಸ್‌ ಸೀಸನ್‌ 11ರ ಸ್ವರ್ಗ- ನರಕದ ಆಟದಕ್ಕೆ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ನಟ ದರ್ಶನ್‌ ಫಾಲೋವರ್ಸ್ ಇದ್ದು, ದರ್ಶನ್‌ ಬಗ್ಗೆ ಚರ್ಚೆಯಾಗುತ್ತಾ ಎಂಬ ಕುತೂಹಲ ಮೂಡಿದೆ.

VISTARANEWS.COM


on

Bigg Boss season 11 The real game starts today

ಬೆಂಗಳೂರು: ಕನ್ನಡ ಕಿರುತೆರೆಯ ಬಿಗೆಸ್ಟ್‌ ರಿಯಾಲಿಟಿ ಶೋ ಬಿಗ್‌ಬಾಸ್ 11ನೇ ಸೀಸನ್‌ಗೆ (Bigg Boss Kannada) ಕಿಕ್ ಸ್ಟಾರ್ಟ್ ಸಿಕ್ಕಿದೆ. ಕನ್ನಡ ಟೆಲಿವಿಷನ್ ಲೋಕದಲ್ಲಿ ದೊಡ್ಮನೆಯ ಕಲರವ ಮತ್ತೆ ಶುರುವಾಗಿದೆ. ಭಿನ್ನ -ವಿಭಿನ್ನ ಹದಿನೇಳು ಸ್ಪರ್ಧಿಗಳು ಈ ಬಾರಿಯ ಕನ್ನಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನದಿಂದ ಒಂದು ಲೆಕ್ಕ ಈಗಿನಿಂದ ಇನ್ನೊಂದು ಲೆಕ್ಕವನ್ನು ಬಿಗ್ ಬಾಸ್ ಶುರುಮಾಡಿದ್ದು, ಸ್ವರ್ಗ- ನರಕದ ಆಟಕ್ಕೆ ಸ್ಪರ್ಧಿಗಳು ನಿನ್ನೆ ಭಾನುವಾರ ಗ್ರಾಂಡ್ ಎಂಟ್ರಿ (bigg boss kannada season 11) ಕೊಟ್ಟಿದ್ದಾರೆ.

ದೊಡ್ಮನೆಯ ರಂಗಿನಾಟಕ್ಕೆ ಬಣ್ಣದ ಲೋಕದಿಂದ ಮಾತ್ರವಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೆ ಚಾಪು ಮೂಡಿಸಿ ಫೇಮಸ್‌ ಆಗಿರುವ ಕಂಟೆಸ್ಟೆಂಟ್ಸ್ ಎಂಟ್ರಿ ಕೊಟ್ಟಿದ್ದಾರೆ. ಮೊದಲಿಗೆ ಕಿರುತೆರೆ ನಟಿ ಭವ್ಯಾ ಗೌಡ ಎಂಟ್ರಿ ಕೊಟ್ಟರೆ, ನಂತರ ಒಬ್ಬೊಬ್ಬರಾಗೆ ಕೆಲವರು ಸ್ವರ್ಗಕ್ಕೆ, ಮತ್ತೆ ಕೆಲವರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮೈ ತುಂಬಾ ಚಿನ್ನವನ್ನು ಹಾಕಿಕೊಂಡ ಗೋಲ್ಡ್ ಸುರೇಶ್, ಫೇಸ್‌ಬುಕ್ ಲಾಯರ್ ಜಗದೀಶ್, ಹಿಂದುತ್ವವಾದಿ ಚೈತ್ರಾ ಕುಂದಾಪುರ, ಹೀಗೆ ಭಿನ್ನ-ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳನ್ನು ಬಿಗ್ ಬಾಸ್ 11ನೇ ಸೀಸನ್ ಮನೆಯೊಳಗೆ (bigg boss kannada season 11 grand opening) ಕಾಲ್ಟಿಟ್ಟಿದ್ದಾರೆ.

Bigg Boss season 11 The real game starts today

ಸ್ವರ್ಗ- ನರಕದ ಆಟಕ್ಕೆ ರೆಡಿಯಾದ ಕಂಟೆಸ್ಟೆಂಟ್ಸ್

ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ಮನೆಗಳನ್ನು ಮಾಡಲಾಗಿದೆ. ಬಿಗ್‌ ಮನೆಗೆ ಗ್ರ್ಯಾಂಡ್ ವೆಲ್ಕಮ್ ಪಡೆದುಕೊಂಡ ಹದಿನೇಳು ಸ್ಪರ್ಧಿಗಳಲ್ಲಿ ಒಬ್ಬೊಬ್ಬರಾಗೆ ಸ್ವರ್ಗ- ನರಕದ ಆಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ವರ್ಗಕ್ಕೆ ಭವ್ಯ, ಯಮುನಾ, ಧನರಾಜ್, ಗೌತಮಿ, ಧರ್ಮ ಕೀರ್ತಿ, ಲಾಯರ್ ಜಗದೀಶ್, ತ್ರಿವಿಕ್ರಮ್, ಹಂಸ, ಐಶ್ವರ್ಯ ಹಾಗೂ ಉಗ್ರಂ ಮಂಜು ಎಂಟ್ರಿ ಕೊಟ್ಟಿದ್ದಾರೆ. ಇನ್ನು ನರಕಕ್ಕೆ ಅನುಷಾ ರೈ, ಶಿಶಿರ್, ಮಾನಸ, ಗೋಲ್ಡ್ ಶಶಿ, ಚೈತ್ರ, ಮೋಕ್ಷಿತ ಹಾಗು ರಂಜಿತ್ ಎಂಟ್ರಿ ಕೊಟ್ಟಿದ್ದಾರೆ. ಸ್ವರ್ಗ ಹಾಗೂ ನರಕದ ಆಟಕ್ಕೆ ಕಂಟೆಸ್ಟೆಂಟ್ಸ್ ತುದಿಗಾಲಲ್ಲಿ ನಿಂತಿದ್ದು, 17 ಜನ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ನಾಲ್ವರು ದರ್ಶನ್ ಆಪ್ತರಾಗಿರುವುದು (bigg boss kannada season 11 timings) ವಿಶೇಷ.

ಬಿಗ್ ಬಾಸ್ ಸೀಸನ್ 10 ಕಾಂಟ್ರವರ್ಸಿ ಮೂಲಕವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಸೀಸನ್ 11 ಬಿಗ್ ಬಾಸ್ ವೀಕ್ಷಕರಿಗೆ ಬೆಟ್ಟದಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ ಅಂದರೆ ತಪ್ಪಾಗಲ್ಲ. ಹಲವು ಕಾಂಟ್ರವರ್ಸಿಗಳ ಮೂಲಕವೇ ಕಳೆದ ಸೀಸನ್ ಸ್ಪರ್ಧಿಗಳು ನೇಮ್ ಆ್ಯಂಡ್ ಫೇಮ್ ಗಿಟ್ಟಿಸಿಕೊಂಡಿದ್ದರು. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಇನ್ನೆಷ್ಟು ಕಾಂಟ್ರವರ್ಸಿ ಕ್ರಿಯೇಟ್ ಆಗುತ್ತೆ ಎಂದು ಬಿಗ್ ಬಾಸ್ ವೀಕ್ಷಕರು ಕಾಯ್ತಾ ಇದ್ದಾರೆ. ಇನ್ನು ದೊಡ್ಮನೆಯಲ್ಲಿರುವ ನಟ ದರ್ಶನ್‌ ಫಾಲೋವರ್ಸ್‌ನಿಂದ ಈ ಬಾರಿಯ ಬಿಗ್ ಬಾಸ್ ಸಖತ್ ಕಿಕ್ ಕೊಡಲಿದೆ ಎಂದು ಹೇಳಲಾಗುತ್ತಿದೆ.

ದೊಡ್ಮನೆಯಲ್ಲಿ ದಚ್ಚು ಫಾಲೋವರ್ಸ್ ಕಿಕ್


ಹದಿನೇಳು ಸ್ಪರ್ಧಿಗಳಲ್ಲಿ ನಾಲ್ವರು ಕಂಟೆಸ್ಟೆಂಟ್ಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತರಾಗಿದ್ದಾರೆ. ದರ್ಶನ್ ಅವರ ಹೆಸರನ್ನು ಹಗಲಿರುಳು ಜಪ ಮಾಡುವ ಈ ನಾಲ್ವರು, ಸುದೀಪ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ದೊಡ್ಮನೆಯಲ್ಲಿ ಹಿಂದೆಂದೂ ಈ ತರಹದ ಕಾಕತಾಳೀಯ ಆಗಿರಲಿಲ್ಲ. ಆದರೆ ಈ ಬಾರಿ ನಿಜವಾಗಿದೆ. ಆ ನಾಲ್ಕು ಜನ ಸ್ಪರ್ಧಿಗಳು ಪ್ರತಿನಿತ್ಯ ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಜಪ ಮಾಡಿದರೂ ಕೂಡ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಕೆಲವು ದರ್ಶನ್ ಆಪ್ತರು ವೇದಿಕೆ ಮೇಲೆ ದಚ್ಚು ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ನಾಲ್ವರಿಂದ ಬಿಗ್ ಬಾಸ್ ಮನೆಯಲ್ಲೂ ದರ್ಶನ್ ಬಗ್ಗೆ ಚರ್ಚೆಯಾಗುತ್ತಾ ಅಂತ ಬಿಗ್ ಬಾಸ್ ವೀಕ್ಷಕರಿಗೆ ಕುತೂಹಲ ಕ್ರಿಯೇಟ್ ಆಗಿದೆ.

ಮುಂದಿನ ನೂರು ದಿನಗಳವರೆಗೆ ದರ್ಶನ್ ವಿಚಾರ ಒಂಟಿ ಮನೆಯಲ್ಲಿ ಕೇಳಿ ಬಂದರೆ, ದರ್ಶನ್ ವಿಚಾರವನ್ನು ಸುದೀಪ್ ಗಮನಿಸಿ ವಾರಾಂತ್ಯದಲ್ಲಿ ಯಾವ ರೀತಿ ಮಾತನಾಡುತ್ತಾರೆ ಎಂಬುದು ಸದ್ಯ ಬಿಗ್ ಬಾಸ್ ವೀಕ್ಷಕರಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಿಗ್ ಬಾಸ್

Bigg Boss Kannada: ಲೀಕ್‌ ಆಯ್ತು ಬಿಗ್‌ ಬಾಸ್‌ ಪ್ರೋಮೊ ಶೂಟ್‌ ಫೋಟೊ; ನಿರೂಪಕನ ಫೇಸ್‌ ರಿವೀಲ್‌!

Bigg Boss Kannada: ಈ ಮುಂಚೆ ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗಿತ್ತು. ಈ ಬಾರಿ ಸುದೀಪ್‌ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ ಎಂದು ವರದಿಯಾಗಿತ್ತು.ಆದರೆ ಈಗ ಪ್ರೋಮೊ ಶೂಟ್‌ ಫೋಟೊಗಳು ವೈರಲ್‌ ಆಗಿವೆ.

VISTARANEWS.COM


on

Bigg Boss Kannada promo shoot leak sudeep anchor

ಬೆಂಗಳೂರು: ಈಗಾಗಲೇ ಬಿಗ್‌ ಬಾಸ್‌ (Bigg Boss Kannada) ಹಿಂದಿ ಒಟಿಟಿ ಸೀಸನ್‌ ಮುಕ್ತಾಯವಾಗಿದೆ. ಕನ್ನಡದಲ್ಲಿ ಯಾವಾಗ ಸೀಸನ್‌ ಶುರು ಎಂಬ ಚರ್ಚೆ ಜೋರಾಗಿದೆ. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೀಘ್ರದಲ್ಲಿಯೇ ಶುರು ಆಗೋದು ಗ್ಯಾರಂಟಿ ಆಗಿದೆ ಸದ್ದಿಲ್ಲದೇ ಪ್ರೋಮೊ ಚಿತ್ರೀಕರಣ ಮಾಡಲಾಗಿದೆ. ಮತ್ತೊಮ್ಮೆ ಸುದೀಪ್ ವೀಕೆಂಡ್‌ನಲ್ಲಿ ಮನೆ ಮನೆಯ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್‌ಬಾಸ್ ಕನ್ನಡ-11 ಮೊದಲ ಪ್ರೋಮೊ ಬಿಡುಗಡೆ ಆಗಲಿದೆ.

ಈ ಮುಂಚೆ ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗಿತ್ತು. ಈ ಬಾರಿ ಸುದೀಪ್‌ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ ಎಂದು ವರದಿಯಾಗಿತ್ತು.ಆದರೆ ಈಗ ಪ್ರೋಮೊ ಶೂಟ್‌ ಫೋಟೊಗಳು ವೈರಲ್‌ ಆಗಿವೆ.

ಸುದೀಪ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೊಗೆ ಸಂಬಂಧಿಸಿದಂತೆ ಒಂದಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಸೀಸನ್‌ನಿಂದ ಸೀಸನ್‌ಗೆ ಸುದೀಪ್ ಸಂಭಾವನೆ ಕೂಡ ಹೆಚ್ಚಾಗಿದೆ. ಇನ್ನು ಕಿಚ್ಚ ಬಹಳ ಇಷ್ಟಪಟ್ಟು ಶೋ ನಡೆಸಿಕೊಡುತ್ತಿದ್ದಾರೆ. ಸೆಪ್ಟೆಂಬರ್ 27 ಅಥವಾ ಅಕ್ಟೋಬರ್ 5ರಂದು ಬಿಗ್‌ಬಾಸ್ ಕನ್ನಡ-11 ಆರಂಭವಾಗಲಿದೆ. ಯೂಟ್ಯೂಬರ್ ವರ್ಷಾ ಕಾವೇರಿ, ಕಿರುತೆರೆ ನಟ ವರುಣ್ ಆರಾಧ್ಯ, ತುಕಾಲಿ ಸಂತು ಪತ್ನಿ ಮಾನಸ, ನಟ ಸುನೀಲ್ ರಾವ್, ಮೋಕ್ಷಿತಾ ಪೈ, ದಿವ್ಯಾ ವಸಂತ ಹೀಗೆ ಹಲವರ ಹೆಸರುಗಳು ಈ ಬಾರಿ ದೊಡ್ಮನೆಗೆ ಹೋಗಲು ಕೇಳಿಬರುತ್ತಿದೆ.

ಇದನ್ನೂ ಓದಿ: Bigg Boss Kannada: ಬಿಗ್‌ ಬಾಸ್‌ ಆಫರ್‌ ಬಂದಿದ್ದು ನಿಜ ಎಂದ ನಟಿ ಜ್ಯೋತಿ ರೈ! ಆದರೆ…..

ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ʼ 10 (Bigg Boss Kannada OTT)ರ ಚಾಂಪಿಯನ್‌ ಆಗಿ ಕಾರ್ತಿಕ್‌ ಮಹೇಶ್‌ ಹೊರ ಹೊಮ್ಮಿದರೆ, ಡ್ರೋನ್‌ ಪ್ರತಾಪ್‌ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ರನ್ನರ್‌ ಅಪ್‌ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 10 ಭರ್ಜರಿ ಟಿಆರ್‌ಪಿಯನ್ನು ಪಡೆದು ವೀಕ್ಷಕರ ಮನ ಸೆಳೆದಿತ್ತು. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸುದೀಪ್ ಆ್ಯಂಕರಿಂಗ್ ನೋಡಲು ಅನೇಕರು ಕಾದಿದ್ದಾರೆ.. ‘ಡ್ರೋನ್’ ಪ್ರತಾಪ್, ಸೋನು ಶ್ರೀನಿವಾಸ್ ಗೌಡ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

Continue Reading
Advertisement
Latest21 ನಿಮಿಷಗಳು ago

ಸಾಧ್ವಿ ಸೈಲ್ ಮಿಸ್ ವರ್ಲ್ಡ್ ಪ್ರಶಸ್ತಿ ಗೆಲ್ಲಲಿ: ಸಿಎಂ ಸಿದ್ದರಾಮಯ್ಯ ಆಶಯ

Latest32 ನಿಮಿಷಗಳು ago

ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ

Latest1 ಗಂಟೆ ago

ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ ಸಿದ್ದರಾಮಯ್ಯ ಟೀಕೆ

Latest2 ಗಂಟೆಗಳು ago

ಬಸವಣ್ಣನವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು: ಸಚಿವ ಸತೀಶ್‌ ಜಾರಕಿಹೊಳಿ

Latest2 ಗಂಟೆಗಳು ago

ಇಡಿ ದಾಳಿ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಸಚಿವೆ ಶೋಭಾ ಕರಂದ್ಲಾಜೆ

ರಾಜಕೀಯ2 ಗಂಟೆಗಳು ago

ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್‌ ವಾಗ್ದಾಳಿ

Latest3 ಗಂಟೆಗಳು ago

ಪಿಎನ್‌ಎಸ್‌ ವಿಸ್ತಾರ ಮುಂಚೂಣಿ ಸುದ್ದಿವಾಹಿನಿಯಾಗಲಿ: ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ವಿಶ್ವಾಸ

ಫ್ಯಾಷನ್3 ಗಂಟೆಗಳು ago

ದೇಶದ ಗಮನ ಸೆಳೆದ ಕಾರವಾರದ ಪ್ರತಿಭೆ: ಶಾಸಕ ಸತೀಶ್ ಸೈಲ್ ಪುತ್ರಿಗೆ ‘ಮಿಸ್ ಇಂಡಿಯಾ’ ಕಿರೀಟದ ಗರಿ.

Latest3 ಗಂಟೆಗಳು ago

ಹುಬ್ಬಳ್ಳಿ ರನ್-ವೇ ಬದಲಿಗೆ ಬೆಂಗಳೂರಲ್ಲಿ ಲ್ಯಾಂಡ್ ಆದ ಫ್ಲೈಟ್: ಆಗಸದಲ್ಲಿ ವಿಮಾನ ಸುತ್ತಾಡಿದ್ದೇಕೆ?

ಕರ್ನಾಟಕ3 ಗಂಟೆಗಳು ago

SSLC ಫಲಿತಾಂಶ ಪ್ರಕಟ ಯಾವಾಗ? ತಡ ಆಗುತ್ತಿರುವುದು ಏಕೆ?; ಇಲ್ಲಿದೆ ಮಾಹಿತಿ

galipata neetu
ಕಿರುತೆರೆ2 ವರ್ಷಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 ವರ್ಷಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 ವರ್ಷಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 ವರ್ಷಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 ವರ್ಷಗಳು ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 ವರ್ಷಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವರ್ಷಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ವರ್ಷಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ವರ್ಷಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ವರ್ಷಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ವರ್ಷಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ವರ್ಷಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ವರ್ಷಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ವರ್ಷಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ವರ್ಷಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ವರ್ಷಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌