ಬಾಲಿವುಡ್
Swara Bhasker: ಹಿಂದೂ ಸಂಪ್ರದಾಯದಂತೆ ಮದುವೆಯಾದ ಸ್ವರಾ-ಫಹಾದ್: ಇಲ್ಲಿವೆ ಫೋಟೊಗಳು
ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ ಕುಟುಂಬದವರ ಆಸೆಯಂತೆ ಫಹಾದ್ ಜತೆ ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ವಿವಾಹ ಪೂರ್ವದ ಹಲವು ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ (Swara Bhasker) ಕುಟುಂಬದವರ ಆಸೆಯಂತೆ ಫಹಾದ್ ಜತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಸಂಗೀತ, ಹಳದಿ ಶಾಸ್ತ್ರದ ಸಂಭ್ರಮದ ಫೋಟೊಗಳು, ವಿವಾಹ ಪೂರ್ವದ ಹಲವು ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಮೊದಲ ರಾತ್ರಿಯ ಬೆಡ್‌ರೂಮ್ ಶೃಂಗಾರದ ಫೋಟೊವನ್ನು ನಟಿ ಹಂಚಿಕೊಂಡು ಟ್ರೋಲ್‌ಗೆ ಗುರಿಯಾಗಿದ್ದರು ನಟಿ.
ಪುನರ್ ವಿವಾಹದಲ್ಲಿ ಸ್ವರಾ ಭಾಸ್ಕರ್ ಸಂತಸದ ಕ್ಷಣ
ನಟಿ ಸ್ವರಾ ಭಾಸ್ಕರ್ (Swara Bhaskar) ರಾಜಕೀಯ ಕಾರ್ಯಕರ್ತ ಹಾಗೂ ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಅವರೊಂದಿಗೆ ಸಂತಸದ ಕ್ಷಣ.
ನಟಿ ಈ ಹಿಂದೆ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾದ ಫೋಟೊಗಳನ್ನು ಹಂಚಿಕೊಂಡಿದ್ದರು. ಫಹಾದ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಬಯೋ ಪ್ರಕಾರ ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ.
ಬಾಲಿವುಡ್
Singer Kumar Sanu: ಪ್ರಸಿದ್ಧ ಗಾಯಕ ಕುಮಾರ್ ಸಾನು ನಿಜವಾದ ಹೆಸರೇ ಬೇರೆ; ಮರುನಾಮಕರಣಕ್ಕೂ ಇತ್ತು ಕಾರಣ
ಬಾಲಿವುಡ್ ಗಾಯಕ ಕುಮಾರ್ ಸಾನು (Singer Kumar Sanu) ಅವರ ನಿಜವಾದ ಹೆಸರು ಕೇದರಾನಾಥ ಭಟ್ಟಾಚಾರ್ಯ. ಹೆಸರು ಬದಲಾವಣೆಗೆ ಕಾರಣವನ್ನು ಅವರು ಇತ್ತೀಚೆಗೆ ಹೇಳಿದ್ದಾರೆ.
ಮುಂಬೈ: ಕುಮಾರ್ ಸಾನು (Singer Kumar Sanu) 90ರ ದಶಕದ ಅತ್ಯಂತ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಅವರ ʼಚುರಾ ಕೆ ದಿಲ್ ಮೇರಾʼ, ʼಬಸ್ ಏಕ್ ಸನಮ್ ಚಾಹಿಯೆʼ ಹಾಡುಗಳನ್ನು ಇಂದಿಗೂ ಅನೇಕರು ಗುನುಗುತ್ತಲೇ ಇರುತ್ತಾರೆ. ಹಾಡಿನ ಮೂಲಕ ಮೋಡಿ ಮಾಡುತ್ತಿದ್ದ ಈ ಗಾಯಕನ ನಿಜವಾದ ಹೆಸರು ಕುಮಾರ್ ಅಲ್ಲವೇ ಅಲ್ಲ. ಬಂಗಾಳಿಯವರಾದ ಅವರ ಹೆಸರು ಬದಲಾಗಿದ್ದರಲ್ಲೂ ಬಲವಾದ ಕಾರಣವೊಂದಿದೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಗಾಯಕ ಸ್ನೇಹದೀಪ್ರ ಕೇಸರಿಯಾ ಹಾಡಿಗೆ ಪ್ರಧಾನಿ ಮೋದಿ ಫಿದಾ; ವಿವಿಧತೆಯಲ್ಲಿ ಏಕತೆಯ ಪ್ರತಿಬಿಂಬ ಎಂದು ಟ್ವೀಟ್
ಕೋಲ್ಕೊತಾ ಮೂಲದವರಾದ ಕುಮಾರ್ ಅವರ ನಿಜವಾದ ಹೆಸರು ಕೇದರನಾಥ್ ಭಟ್ಟಾಚಾರ್ಯ. ಆದರೆ ಅವರು ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದು ಮಾತ್ರ ಕುಮಾರ್ ಸಾನು ಆಗಿಯೇ. ಅವರು ಆರಂಭಿಕ ದಿನಗಳಲ್ಲಿ ಕೋಲ್ಕೊತಾದ ಹೋಟೆಲ್‌ಗಳಲ್ಲಿ ಹಾಡುಗಳನ್ನು ಹಾಡುತ್ತಿದ್ದರಂತೆ. ಅಲ್ಲಿ ಬಂದ ಹಣದಿಂದ ತಮ್ಮದೇ ಆದ ಕ್ಯಾಸೆಟ್ ತಯಾರಿಸಿಕೊಳ್ಳುತ್ತಿದ್ದರು. ನಂತರ ಅದನ್ನು ಸಂಗೀತ ನಿರ್ದೇಶಕರ ಬಳಿ ತೆಗೆದುಕೊಂಡು ಹೋಗಿ ಸಿನಿಮಾಗಳಲ್ಲಿ ಹಾಡುವುದಕ್ಕೆ ಅವಕಾಶ ಕೋರುತ್ತಿದ್ದರು.
ಆದರೆ ಕೋಲ್ಕೊತಾದಲ್ಲಿ ಯಾವೊಬ್ಬ ಸಂಗೀತ ನಿರ್ದೇಶಕರೂ ಕೇದರನಾಥ ಅವರಿಗೆ ಅವಕಾಶ ಕೊಡುವುದಕ್ಕೆ ಒಪ್ಪಿಕೊಂಡಿಲ್ಲ. ಅವರ ಧ್ವನಿ ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಅವರ ಧ್ವನಿಯಂತೆಯೇ ಇತ್ತು ಎನ್ನುವ ಕಾರಣಕ್ಕೆ ಯಾರೊಬ್ಬರೂ ಅವರಿಗೆ ಅವಕಾಶ ಕೊಟ್ಟಿಲ್ಲ. “ಕಿಶೋರ್ ಕುಮಾರ್ ಅವರೇ ಇರುವಾಗ ಅವರಿಂದಲೇ ಹಾಡಿಸಿಕೊಳ್ಳುತ್ತೇವೆ. ನಿಮ್ಮ ಬಳಿ ಏಕಾಗಿ ಹಾಡಿಸೋಣ” ಎಂದು ಹೇಳುತ್ತಿದ್ದರಂತೆ. ಮುಂದೆ ಮುಂಬೈಗೆ ಬಂದ ಅವರು ಅಲ್ಲಿಯೂ ಕೂಡ ಹೋಟೆಲ್‌ಗಳಲ್ಲಿ ಹಾಡಿ ಹಣ ಮಾಡಿ ಕ್ಯಾಸೆಟ್ ತಯಾರಿಸಲಾರಂಭಿಸಿದರು.
ಇದನ್ನೂ ಓದಿ: Bombay Jayashree: ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
ಆಗ ಅವರಿಗೆ ಗುಲ್ಶನ್ ಜಿ ಅವರೊಂದಿಗೆ ಕವರ್ ವರ್ಷನ್ ಒಂದಕ್ಕೆ ಹಾಡುವುದಕ್ಕೆ ಅವಕಾಶ ಸಿಕ್ಕಿತು ಹಾಗೆಯೇ ಜೀನಾ ತೇರಿ ಗಲಿ ಮೇ ಸಿನಿಮಾದಲ್ಲಿಯೂ ಅವಕಾಶ ಶಿಕ್ಕಿತು. ಆ ಸಿನಿಮಾದಲ್ಲಿ ಅವರು ಹಾಡಿದ ಎರಡೂ ಹಾಡುಗಳು ಸೂಪರ್ ಹಿಟ್ ಆದವು. ಅದರಿಂದಾಗಿ ಗುಲ್ಶನ್ ಅವರಿಗೆ ನಂಬಿಕೆ ಹುಟ್ಟಿ ಕೇದರನಾಥ ಅವರಿಗೆ ಅವಕಾಶಗಳನ್ನು ಕೊಡಲಾರಂಭಿಸಿದರು.
ಈ ಕೇದರಾನಾಥ ಅವರಿಗೆ ಕುಮಾರ್ ಸಾನು ಎಂದು ಹೆಸರು ಕೊಟ್ಟವರು ಸಂಗೀತ ನಿರ್ದೇಶಕರುಗಳಾದ ಕಲ್ಯಾಣ್‌ಜೀ ಮತ್ತು ಆನಂದ್‌ಜೀ. “ಬಂಗಾಳಿ ಗಾಯಕರು ಹಿಂದಿ ಮತ್ತು ಉರ್ದು ಹಾಡುಗಳನ್ನು ಚೆನ್ನಾಗಿ ಹಾಡುವುದಿಲ್ಲ ಎಂಬ ಕಲ್ಪನೆ ಬಾಲಿವುಡ್‌ನಲ್ಲಿದೆ. ನಿನ್ನ ಹೆಸರಿನಲ್ಲಿ ಭಟ್ಟಾಚಾರ್ಯ ಎಂದಿರುವುದರಿಂದಾಗಿ ನೀನು ಬಂಗಾಳಿ ಎಂದು ಗೊತ್ತಾಗುತ್ತದೆ. ಹಾಗಾಗಿ ನಿನ್ನ ಹೆಸರನ್ನು ಕುಮಾರ್ ಸಾನು ಎಂದು ಬದಲಿಸಿಕೊ” ಎಂದು ಅವರೇ ಹೇಳಿದ್ದರು ಎಂದು ಕುಮಾರ್ ಅವರು ತಿಳಿಸಿದ್ದಾರೆ.
ಕುಮಾರ್ ಸಾನು ಅವರಿಗೆ ಚಿಕ್ಕ ವಯಸ್ಸಿನಿಂದಲೂ ಅವರ ಕುಟುಂಬ ಛಾನು ಎಂದು ಕರೆಯುತ್ತಿದ್ದರಂತೆ. ಮುಂದೆ ಅದೇ ಸಾನು ಆಗಿ ಬದಲಾಯಿತು ಎಂದೂ ಕೂಡ ಕುಮಾರ್ ಅವರು ತಿಳಿಸಿದ್ದಾರೆ. ಕುಮಾರ್ ಅವರು ಈವರೆಗೆ 26 ಭಾಷೆಗಳಲ್ಲಿ ಒಟ್ಟು 21 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅವೆಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟ ಎಂದು ಹೇಳಿರುವ ಅವರು ಈ ವರ್ಷದ ಅಂತ್ಯದೊಳಗೆ ಒಟ್ಟು 22 ಸಾವಿರ ಹಾಡುಗಳ ದಾಖಲೆ ದಾಟುವುದಾಗಿಯೂ ತಿಳಿಸಿದ್ದಾರೆ.
South Cinema
Suniel Shetty: ಸುನೀಲ್ ಶೆಟ್ಟಿಗೆ ಅಮಿತಾಭ್ ಬಚ್ಚನ್, ಸಂಜಯ್ ದತ್ ʻಅಣ್ಣಾʼ ಅಂತ ಕರೆಯುವುದೇಕೆ?
ಅಮಿತಾಭ್ ಬಚ್ಚನ್ ಮತ್ತು ಸಂಜಯ್ ದತ್ ಅವರನ್ನು (Suniel Shetty) ‘ಅಣ್ಣಾ (ಸಹೋದರ)’ ಎಂದು ಕರೆಯುವ ಪ್ರವೃತ್ತಿಯನ್ನು ಹೇಗೆ ಪ್ರಾರಂಭಿಸಿದರು ಎಂಬುದನ್ನು ಸುನೀಲ್ ಬಹಿರಂಗಪಡಿಸಿದರು.
ಬೆಂಗಳೂರು: ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಇತ್ತೀಚೆಗೆ ಶೆಹನಾಜ್ ಗಿಲ್ ( Shehnaaz Gill ) ಅವರ ಟಾಕ್ ಶೋ ದೇಸಿ ವೈಬ್ಸ್‌ನಲ್ಲಿ ಕಾಣಿಸಿಕೊಂಡರು. ಅಮಿತಾಭ್ ಬಚ್ಚನ್ ಮತ್ತು ಸಂಜಯ್ ದತ್ ಅವರು ತಮ್ಮನ್ನು ‘ಅಣ್ಣಾ (ಸಹೋದರ)’ ಎಂದು ಕರೆಯುವ ಪ್ರವೃತ್ತಿಯನ್ನು ಹೇಗೆ ಪ್ರಾರಂಭಿಸಿದರು ಎಂಬುದನ್ನು ಸುನೀಲ್ ಬಹಿರಂಗಪಡಿಸಿದರು.
ಉದ್ಯಮಿಯೂ ಆಗಿರುವ ನಟ ಸುನೀಲ್ ಶೆಟ್ಟಿ ತಮ್ಮ ವ್ಯವಹಾರದ ಬಗ್ಗೆ ಬಗ್ಗೆಯೂ ಹಂಚಿಕೊಂಡರು. ʻʻನಾನು ಉದ್ಯಮಿ ಮತ್ತು ನಾನು ಹೋಟೆಲ್ ನಿರ್ವಹಣೆಯನ್ನು ಮಾಡಿದ್ದೇನೆ. ನಾನು ಹೊರಬಂದಾಗ, ನನ್ನ ತಂದೆ ಹೇಳಿದರು, ನಿಮಗೆ ಒಂದು ಜೀವನವಿದೆ, ನಿಮ್ಮ ಅದೃಷ್ಟವನ್ನು ಪ್ರಯತ್ನಿಸಿ ಎಂದು. ಹಾಗೇ ನಾನು ಸಿನಿರಂಗಕ್ಕೆ ಕಾಲಿಟ್ಟೆ. ಆದರೆ ವಿಮರ್ಶಕರು ನನ್ನ ಪರವಾಗಿರಲಿಲ್ಲ. ಆದ್ದರಿಂದ, ನಾನು ಹೆದರುತ್ತಿದ್ದೆ, ಈ ವೃತ್ತಿಜೀವನವು ಅದು ಎಷ್ಟು ಕಾಲ ಉಳಿಯುತ್ತದೆ?’ ಎಂಬ ಯೋಚನೆ ಬಂತು. ಅದಕ್ಕಾಗಿಯೇ ನಾನು ಬ್ಯುಸಿನೆಸ್ ಎಂದಿಗೂ ಬಿಡಲಿಲ್ಲ. ಆರ್ಥಿಕವಾಗಿ ಸುಭದ್ರವಾಗಿರುವುದು ಮುಖ್ಯ. ನಟನೆ ನನ್ನ ವೃತ್ತಿ ಎಂದು ನನಗೆ ಯಾವಾಗ ಪಕ್ಕಾ ಆಯ್ತೋ ನಾನು ಹೂಡಿಕೆ ಮಾಡುತ್ತಲೇ ಇದ್ದೆ, ಆದರೆ ನಾನು ವ್ಯಾಪಾರ ಮಾಡುವುದನ್ನು ನಿಲ್ಲಿಸಿದೆʼʼ ಎಂದರು.
ಇದನ್ನೂ ಓದಿ: INDvsAUS : ವೆಂಕಟೇಶ್ ಪ್ರಸಾದ್ಗೆ ಒಂದೇ ಮಾತಿನಲ್ಲಿ ತಿರುಗೇಟು ಕೊಟ್ಟ ಸುನೀಲ್ ಶೆಟ್ಟಿ; ಏನಂದರು ಅವರು?
ಶೆಹನಾಜ್ ಗಿಲ್ ಟಾಕ್ ಶೋ
ಅದೇ ರೀತಿ ಸುನೀಲ್ ಶೆಟ್ಟಿ ತನಗೆ ಆ್ಯಕ್ಷನ್ ಹೀರೊ ಎಂಬ ಟ್ಯಾಗ್ ಸಿಕ್ಕಿರುವುದಕ್ಕಾಗಿ ಖುಷಿ ಇದೆ ಎಂದು ಹೇಳಿದರು. ಶೆಹನಾಜ್ ಅವರು ಸುನೀಲ್ ಅವರನ್ನು ‘ಅಣ್ಣಾ’ ಎಂದು ಏಕೆ ಕರೆಯುತ್ತಾರೆ ಎಂದು ಕೇಳಿದರು. ಈ ಬಗ್ಗೆ ನಟ ಪ್ರತಿಕ್ರಿಯೆ ನೀಡಿ ʻʻನಾವು LAನಲ್ಲಿ ಕಾಂಟೆಗಾಗಿ (Kaante in LA) ಚಿತ್ರೀಕರಣ ಮಾಡುತ್ತಿದ್ದೆವು. ನನ್ನ ಕೆಲವು ಸಿಬ್ಬಂದಿ ನನ್ನನ್ನು ಅಣ್ಣಾ ಎಂದು ಕರೆಯುತ್ತಿದ್ದರು. ನಂತರ, ಸಂಜಯ್ ದತ್ ನನ್ನನ್ನು ಅಣ್ಣಾ ಎಂದು ಕರೆಯಲು ಪ್ರಾರಂಭಿಸಿದರು. ಹೀಗೆ ಅದು ಮುಂದುವರಿದಿದೆʼʼ ಎಂದರು.
ಸುನೀಲ್ ಶೆಟ್ಟಿ ಮುಂದೆ ವೆಬ್ ಶೋ `ಹಂಟರ್: ಟೂಟೇಗಾ ನಹಿ ತೊಡೆಗಾ’ದಲ್ಲಿ (Hunter: Tootega Nahi Todega) ಕಾಣಿಸಿಕೊಳ್ಳಲಿದ್ದಾರೆ. ಅಮೆಜಾನ್ ಮಿನಿ ಟಿವಿಯಲ್ಲಿ ಕಾರ್ಯಕ್ರಮ ಬಿಡುಗಡೆಯಾಗಲಿದೆ.
South Cinema
Anushka Sharma: ʻಮಿಸೆಸ್ ಕೊಹ್ಲಿʼ ಅಂದಾಕ್ಷಣ ಅನುಷ್ಕಾ ಶರ್ಮಾ ʻರಿಲ್ಯಾಕ್ಸ್ʼ ಅಂದಿದ್ಯಾಕೆ?
ಅನುಷ್ಕಾ ಶರ್ಮಾ (Anushka Sharma) ಶುಕ್ರವಾರ (ಮಾರ್ಚ್ 24) ಮುಂಬೈನಲ್ಲಿ ನಡೆದ ಹಂಗಾಮಾ ಸ್ಟೈಲ್ ಐಕಾನ್ ಅವಾರ್ಡ್ಸ್‌ನಲ್ಲಿ ಹಾಜರಾಗಿದ್ದರು. ಬಾಲಿವುಡ್ ಹಂಗಾಮಾ ಸ್ಟೈಲ್ ಐಕಾನ್ ಅವಾರ್ಡ್ಸ್‌ನಲ್ಲಿ ಸುಂದರವಾದ ಕಪ್ಪು ಬಣ್ಣದ ಉಡುಪಿನಲ್ಲಿ ಮಾಧ್ಯಮಗಳಿಗೆ ಪೋಸ್ ನೀಡಿದ್ದಾರೆ.
ಮುಂಬೈ: ನಟಿ ಅನುಷ್ಕಾ ಶರ್ಮಾ (Anushka Sharma) ಕೊನೆಯದಾಗಿ ಜೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ವಿರಾಟ್ ಕೊಹ್ಲಿಯೊಂದಿಗೆ ಇಂಡಿಯನ್ ಸ್ಪೋರ್ಟ್ಸ್ ಆನರ್ಸ್‌ನಲ್ಲಿ ನಡೆದ ಇವೆಂಟ್ ನಂತರ, ಅನುಷ್ಕಾ ಶರ್ಮಾ ಶುಕ್ರವಾರ (ಮಾರ್ಚ್ 24) ಮುಂಬೈನಲ್ಲಿ ನಡೆದ ಬಾಲಿವುಡ್ ಹಂಗಾಮಾ ಸ್ಟೈಲ್ ಐಕಾನ್ ಅವಾರ್ಡ್ಸ್‌ನಲ್ಲಿ ಹಾಜರಾಗಿದ್ದಾರೆ. ಸುಂದರವಾದ ಕಪ್ಪು ಬಣ್ಣದ ಉಡುಪಿನಲ್ಲಿ ಮಾಧ್ಯಮಗಳಿಗೆ ಅನುಷ್ಕಾ ಪೋಸ್ ನೀಡಿದ್ದಾರೆ.
ರೆಡ್ ಕಾರ್ಪೆಟ್ ಮೇಲೆ ಅನುಷ್ಕಾ ಶರ್ಮಾ ಬರುತ್ತಿದ್ದಂತೆ, ಛಾಯಾಗ್ರಾಹಕರು “ಮಿಸೆಸ್ ಕೊಹ್ಲಿ” ಎಂದು ಕರೆಯಲು ಪ್ರಾರಂಭಿಸಿದರು. ಮಾಧ್ಯಮದವರು ಕಿರುಚಾಡುತ್ತಿದ್ದಂತೆ ನಟಿ ನಕ್ಕು ʻʻ ರಿಲ್ಯಾಕ್ಸ್ ಆಗಿ,! ನೀವೆಲ್ಲ ಯಾಕೆ ಹೀಗೆ ಕೂಗುತ್ತಿದ್ದೀರಿ? ಎಂದು ನಗುತ್ತಲೇ ಕಿವಿ ಮುಚ್ಚಿಕೊಂಡಿದ್ದಾರೆ. ಬಳಿಕ ಮತ್ತೆ ನಗುತ್ತಲೇ ʻʻ ನಿನ್ನೆಯ ಕಾರ್ಯಕ್ರಮದಿಂದಲೇ (ಇಂಡಿಯನ್ ಸ್ಪೋರ್ಟ್ಸ್ ಆನರ್ಸ್) ನಾನಿನ್ನೂ ಚೇತರಿಸಿಕೊಂಡಿಲ್ಲʼʼ ಎಂದು ಹೇಳಿದ್ದಾರೆ. ಈ ಇವೆಂಟ್‌ನಲ್ಲಿ ಅನುಷ್ಕಾ ರೆಡ್ ಕಾರ್ಪೆಟ್‌ನಲ್ಲಿ ವರುಣ್ ಧವನ್ ಮತ್ತು ಕೃತಿ ಸನೂನ್ ಅವರನ್ನು ಭೇಟಿಯಾದರು. ಮೂವರೂ ಒಟ್ಟಿಗೆ ಪೋಸ್ ಕೊಟ್ಟರು. ಅಷ್ಟೇ ಅಲ್ಲದೇ ಅನುಷ್ಕಾ ಅವರು ಕೃತಿಯನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Virat And Anushka| ಮಗಳ ಹುಟ್ಟುಹಬ್ಬಕ್ಕೆ ವಿಶೇಷ ಫೋಟೊ ಹಂಚಿಕೊಂಡ ವಿರುಷ್ಕಾ ಜೋಡಿ!
ಅನುಷ್ಕಾ ಶರ್ಮಾ ವಿಡಿಯೊ
ಒಂದು ದಿನದ ಹಿಂದೆ, ವಿರಾಟ್ ಕೊಹ್ಲಿಯೊಂದಿಗೆ ಕಾಣಿಸಿಕೊಂಡಾಗ ಅನುಷ್ಕಾ ಲ್ಯಾವೆಂಡರ್ ಬಣ್ಣದ ಉಡುಪಿನಲ್ಲಿ ಮಿಂಚಿದ್ದರು. ಈ ಸಮಾರಂಭದಲ್ಲಿ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ, ಅಂಗದ್ ಬೇಡಿ-ನೇಹಾ ಧೂಪಿಯಾ ಅವರನ್ನು ಭೇಟಿಯಾಗಿದ್ದಾರೆ.
ಅನುಷ್ಕಾ ಶರ್ಮಾ ಅವರು ಚಕ್ ದೇ ಎಕ್ಸ್ಪ್ರೆಸ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಜೂಲನ್ ಗೋಸ್ವಾಮಿ ಪಾತ್ರವನ್ನು ಮಾಡಿದ್ದಾರೆ.
South Cinema
Malaika Arora: ಬ್ಯಾಕ್‌ಲೆಸ್ ಗೌನ್‌ನಲ್ಲಿ ಮಿಂಚಿದ ಮಲೈಕಾ: ʻಪವರ್‌ಫುಲ್ ಕಪಲ್ʼ ಅಂದ್ರು ನೆಟ್ಟಿಗರು
ಹಂಗಾಮಾ ಸ್ಟೈಲ್ ಐಕಾನ್ಸ್ ಅವಾರ್ಡ್ಸ್‌ನಲ್ಲಿ ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ ರೆಡ್ ಕಾರ್ಪೆಟ್ ಮೇಲೆ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಇಬ್ಬರೂ ಒಟ್ಟಿಗೆ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ.
ಮುಂಬೈ: ಮುಂಬೈನಲ್ಲಿ ನಡೆದ ಹಂಗಾಮಾ ಸ್ಟೈಲ್ ಐಕಾನ್ಸ್ ಅವಾರ್ಡ್ಸ್‌ನಲ್ಲಿ ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ ರೆಡ್ ಕಾರ್ಪೆಟ್ ಮೇಲೆ ಒಟ್ಟಿಗೇ ಹೆಜ್ಜೆ ಹಾಕಿದ್ದಾರೆ. ಇಬ್ಬರೂ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಾಧ್ಯಮಗಳು ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ, ಮಲೈಕಾ ಮತ್ತು ಅರ್ಜುನ್ ರೆಡ್ ಕಾರ್ಪೆಟ್ ಮೇಲೆ ಒಟ್ಟಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಅರ್ಜುನ್ ವೆಲ್ವೆಟ್ ಲೇಯರ್ಡ್ ಹೊಳೆಯುವ ಬ್ಲೇಜರ್ ಮತ್ತು ಮ್ಯಾಚಿಂಗ್ ಪ್ಯಾಂಟ್‌ನೊಂದಿಗೆ ಕಾಣಿಸಿಕೊಂಡರೆ, ಮಲೈಕಾ ಬ್ಯಾಕ್‌ಲೆಸ್ ಗೌನ್‌ನಲ್ಲಿ ಮಿಂಚಿದ್ದಾರೆ.
ಈ ಜೋಡಿಯ ಈ ಸ್ಟೈಲಿಶ್ ಅವತಾರಕ್ಕೆ ನೆಟ್ಟಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ, ʻʻಫೋಟೊದಲ್ಲಿ ಉಸಿರನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡಿದ್ದಾರೆ ಮಲೈಕಾʼʼ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು ʻಪವರ್‌ಫುಲ್ʼ ಜೋಡಿ ಎಂದೂ ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ಹಂಗಾಮಾ ಸ್ಟೈಲ್ ಐಕಾನ್ಸ್ ಅವಾರ್ಡ್ಸ್ ಮಾರ್ಚ್24ರಂದು ಮುಂಬೈನಲ್ಲಿ ನಡೆಯಿತು. ಬಾಲಿವುಡ್‌ನ ಹಲವಾರು ತಾರೆಯರು ಇವೆಂಟ್‌ಗೆ ಹಾಜರಿದ್ದರು. ರೆಡ್ ಕಾರ್ಪೆಟ್ ಮೇಲೆ ಗುರುತಿಸಿಕೊಂಡವರಲ್ಲಿ ಜಾನ್ವಿ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ, ರಶ್ಮಿಕಾ ಮಂದಣ್ಣ, ಅನನ್ಯಾ ಪಾಂಡೆ, ಅಮೀಶಾ ಪಟೇಲ್, ಅನುಷ್ಕಾ ಶರ್ಮಾ, ವರುಣ್ ಧವನ್, ಕೃತಿ ಸನೂನ್, ಮೌನಿ ರಾಯ್, ಕಾರ್ತಿಕ್ ಆರ್ಯನ್ ಮತ್ತು ಕರಣ್ ಕುಂದ್ರಾ ಭಾಗಿಯಾಗಿದ್ದರು.
ಇದನ್ನೂ ಓದಿ: Malaika Arora: ಇಲ್ಲಿವೆ ಬಳಕುವ ಬಳ್ಳಿ ಮಲೈಕಾ ಅರೋರಾ ಲೇಟೆಸ್ಟ್ ಫೋಟೊಗಳು
ವೈರಲ್ ವಿಡಿಯೊ
ಬಾಲಿವುಡ್ ನಟಿ ಮಲೈಕಾ ಅರೋರಾ ತನಗಿಂತ ಕಿರಿಯ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಅರ್ಬಾಜ್ ಖಾನ್ ಜತೆಗಿನ ಮಲೈಕಾ ವಿಚ್ಛೇದನಕ್ಕೆ ಅರ್ಜುನ್ ಕಪೂರ್ ಕಾರಣ ಎನ್ನಲಾಗುತ್ತಿದೆ. ಈ ವಿಚಾರವಾಗಿ ನಟಿ ಹಲವು ಬಾರಿ ವಿವರಣೆ ನೀಡಿದ್ದಾರೆ. ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಲೈಕಾ, ʻʻಇದೀಗ ನಾವು ನಮ್ಮ ಜೀವನವನ್ನು ಪ್ರೀತಿಸುತ್ತಿದ್ದೇವೆ. ನಾವು ನಮ್ಮ ಪ್ರೀ ಹನಿಮೂನ್ ಹಂತವನ್ನು ಆನಂದಿಸುತ್ತಿದ್ದೇವೆʼʼ ಎಂದು ಹೇಳಿಕೊಂಡಿದ್ದಾರೆ
-
ಸುವಚನ14 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಅಂಕಣ21 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ22 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ21 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ23 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ20 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ15 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಕರ್ನಾಟಕ19 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ