ಕಾಲಿವುಡ್
CM Stalin: ದಿ ಎಲಿಫೆಂಟ್ ವಿಸ್ಪರರ್ಸ್ ದಂಪತಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್
ಪ್ರತಿಯೊಬ್ಬರಿಗೂ 1 ಲಕ್ಷ ರೂ. (CM Stalin)ಬಹುಮಾನವನ್ನು ಘೋಷಿಸಿದ್ದಾರೆ. ಅಲ್ಲದೇ 2 ಆನೆ ಶಿಬಿರದಲ್ಲಿ ಇರುವ 91 ಮಾವುತರಿಗೂ ಕೂಡ ತಲಾ ಒಂದು ಲಕ್ಷ ರೂಪಾಯಿ ಹಣ ನೀಡಲಾಗುತ್ತಿದೆ.
ಚೆನ್ನೈ: ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್ ವಿಸ್ಪರರ್ಸ್ʼ ಮುಖ್ಯ ರೂವಾರಿಗಳಾದ ಸ್ಥಳೀಯ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (CM Stalin) ದಂಪತಿಯನ್ನು ಸನ್ಮಾನಿಸಿದ್ದಾರೆ. ಪ್ರತಿಯೊಬ್ಬರಿಗೂ 1 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದಾರೆ. ಅಲ್ಲದೇ 2 ಆನೆ ಶಿಬಿರದಲ್ಲಿ ಇರುವ 91 ಮಾವುತರಿಗೂ ಕೂಡ ತಲಾ ಒಂದು ಲಕ್ಷ ರೂಪಾಯಿ ಹಣ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಈ ಧನ ಸಹಾಯ ಮಾಡಲಾಗುತ್ತಿದೆ. ಅಲ್ಲದೇ, ಮಾವುತರಿಗೆ ಮನೆ ಕಟ್ಟಿಕೊಡಲು 9.1 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ ಎಂದು ವರದಿ ಆಗಿದೆ.
ತಮಿಳುನಾಡು ಅರಣ್ಯ ಇಲಾಖೆಯ ಆನೆಗಳ ಆರೈಕೆಯ ಬಗ್ಗೆ ಈ ಚಿತ್ರ ವಿಶ್ವದ ಗಮನ ಸೆಳೆದಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ತಮಿಳುನಾಡಿನ ನೀಲಗಿರಿಯ ಸುಂದರವಾದ ಮುದುಮಲೈ ಕಾಡುಗಳಲ್ಲಿ ವಾಸಿಸುವ ಕಟ್ಟುನಾಯಕನ್ ಬುಡಕಟ್ಟಿನ ಸ್ಥಳೀಯ ದಂಪತಿ ಬೊಮ್ಮನ್ ಮತ್ತು ಬೆಳ್ಳಿಯ ಆರೈಕೆಯಲ್ಲಿ ರಘು ಎಂಬ ಅನಾಥ ಆನೆ ಮರಿಯ ಕಥೆಯನ್ನು ಹೇಳುತ್ತದೆ. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಮತ್ತು ಗುನೀತ್ ಮೊಂಗಾ ನಿರ್ಮಿಸಿದ 40 ನಿಮಿಷಗಳ ಸಾಕ್ಷ್ಯಚಿತ್ರವು ಆನೆ ಮತ್ತು ದಂಪತಿ ನಡುವೆ ಬೆಳೆಯುವ ಬಾಂಧವ್ಯವನ್ನು ಹೇಳುತ್ತದೆ. ಚಿತ್ರದ ಆಸ್ಕರ್ ಪ್ರಶಸ್ತಿ ಗೆದ್ದ ನಂತರ, ಪ್ರವಾಸಿಗರು ಮುದುಮಲೈ ತೆಪ್ಪಕಾಡು ಆನೆ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಮರಿ ಆನೆಯನ್ನು ವೀಕ್ಷಿಸುತ್ತಿದ್ದಾರೆ.
ದಿ ಎಲಿಫೆಂಟ್ ವಿಸ್ಪರರ್ಸ್’ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಲಭ್ಯವಿದೆ. ತಮಗೆ ಸಿಕ್ಕಿದ ಈ ಪ್ರಶಸ್ತಿ ʼನನ್ನ ತಾಯ್ನೆಲ ಭಾರತಕ್ಕೆ ಅರ್ಪಿತʼ ಎಂದಿದ್ದಾರೆ ಇದರ ನಿರ್ದೇಶಕ ಕಾರ್ತಿಕಿ. ಕಾರ್ತಿಕಿ ಅವರಿಗೆ ಇದು ಮೊದಲ ನಿರ್ದೇಶನ. ಹೌಲ್‌ಔಟ್, ಹೌ ಡು ಯು ಮೆಶರ್ ಎ ಇಯರ್, ದಿ ಮಾರ್ಥಾ ಮಿಶೆಲ್ ಎಫೆಕ್ಟ್, ಸ್ಟ್ರೇಂಜರ್ ಎಟ್ ದಿ ಗೇಟ್ ಮುಂತಾದ ಚಿತ್ರಗಳು ಸ್ಪರ್ಧೆಯಲ್ಲಿದ್ದವು.
South Cinema
Kamal Haasan: ನಿರ್ದೇಶಕ ಮಣಿರತ್ನಂ ಬಗ್ಗೆ ಅನೇಕರಿಗೆ ಅಸೂಯೆ! ನಟ ಕಮಲ್ ಹಾಸನ್ ಹೀಗೆ ಹೇಳಿದ್ದೇಕೆ?
ಮಣಿರತ್ನಂ ನಿರ್ದೇಶನದ ʻಪೊನ್ನಿಯನ್ ಸೆಲ್ವನ್ʼ -1ರ ಸೂಪರ್ ಸಕ್ಸೆಸ್ ನಂತರ, ಆ ಸಿನಿಮಾದ ಎರಡನೇ ಭಾಗವಾದ ‘ಪೊನ್ನಿಯನ್ ಸೆಲ್ವನ್ 2’ (Ponniyin Selvan 2) ಬಿಡುಗಡೆಗೆ ಸಿದ್ಧವಾಗಿದೆ. ಟ್ರೈಲರ್ ಲಾಂಚ್ ನಲ್ಲಿಕಮಲ್ ಹಾಸನ್ (Kamal Haasan) ಅವರು ಮುಖ್ಯ ಅತಿಥಿಯಾಗಿ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು: ಮಣಿರತ್ನಂ ನಿರ್ದೇಶನದ ʻಪೊನ್ನಿಯನ್ ಸೆಲ್ವನ್ʼ -1ರ ಸೂಪರ್ ಸಕ್ಸೆಸ್ ನಂತರ, ಆ ಸಿನಿಮಾದ ಎರಡನೇ ಭಾಗವಾದ ‘ಪೊನ್ನಿಯನ್ ಸೆಲ್ವನ್ 2’ (Ponniyin Selvan 2) ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಚಿಯಾನ್ ವಿಕ್ರಮ್, ತ್ರಿಶಾ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಜತೆಗೆ ಪ್ರಕಾಶ್ ರಾಜ್, ಪ್ರಭು, ಐಶ್ವರ್ಯ ಲಕ್ಷ್ಮಿ, ಶೋಭಿತಾ ಧೂಲಿಪಾಲ, ಜಯರಾಮ್, ಅಶ್ವಿನ್ ಕಾಕುಮನು, ಮೋಹನ್ ರಾಮನ್, ಶರತ್‌ಕುಮಾರ್ ಮತ್ತು ಪಾರ್ತಿಬನ್ ನಟಿಸಿದ್ದಾರೆ. ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಮಲ್ ಹಾಸನ್ (Kamal Haasan) ಅವರಲ್ಲದೆ, ನಟ ಸಿಲಂಬರಸನ್ ಟಿಆರ್, ಹಿರಿಯ ಚಲನಚಿತ್ರ ನಿರ್ಮಾಪಕ ಭಾರತಿರಾಜ ಸೇರಿದಂತೆ ಹಲವು ಗಣ್ಯರು ಮಾರ್ಚ್ 29ರಂದು ಟ್ರೈಲರ್ ಲಾಂಚ್‌ನಲ್ಲಿ ಭಾಗಿಯಾಗಿದ್ದರು.
ಪೊನ್ನಿಯನ್ ಸೆಲ್ವನ್ 2 ಟ್ರೈಲರ್ ಲಾಂಚ್ ನಲ್ಲಿ ಕಮಲ ಹಾಸನ್
ಕಮಲ್ ಹಾಸನ್ ಅವರು ಮುಖ್ಯ ಅತಿಥಿಯಾಗಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ನಟ ಮಾತನಾಡಿ “ವರ್ಷಗಳಿಂದ ನನ್ನನ್ನು ವೇದಿಕೆಗೆ ಬರುವಂತೆ ಮಾಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಪೊನ್ನಿಯಿನ್ ಸೆಲ್ವನ್‌ನಂತಹ ಚಿತ್ರದಲ್ಲಿ ನಟಿಸುವ ಅವಕಾಶ ನಾನು ಕಳೆದುಕೊಂಡಿದ್ದೇನೆ. ಹಾಗಾಗಿ ನಾನು ಧ್ವನಿ ನೀಡಿದ್ದೇನೆʼʼ ಎಂದರು. ʻʻಕಲ್ಕಿ ಕೃಷ್ಣಮೂರ್ತಿ ಅವರ ಪುಸ್ತಕಗಳನ್ನು ಆಧರಿಸಿ ಅನೇಕ ಬರಹಗಾರರು ಅಸೂಯೆ ಪಟ್ಟಂತೆ, ಈಗ ಅನೇಕ ಬರಹಗಾರರು ಮಣಿರತ್ನಂ ಬಗ್ಗೆ ಅಸೂಯೆ ಹೊಂದಿದ್ದಾರೆʼʼ ಎಂದು ಹೇಳಿದರು.
ʻʻನಿನ್ನೆ ಮೊನ್ನೆ ಎಆರ್ ರೆಹಮಾನ್ ಮೂಲಕ ನನಗೆ ಹೊಸ ಅವಕಾಶ ಸಿಕ್ಕಿತು. ಅವರ ಆರ್ಕೆಸ್ಟ್ರಾ ಹಾಡುಗಳು ಮ್ಯಾಜಿಕ್ ಆಗಿತ್ತು. ಅದನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ಜೀವನ ಚಿಕ್ಕದಾಗಿದ್ದು ಸಿನಿಮಾದಲ್ಲಿ ಅವಕಾಶ ಸಿಗುವುದು ಕಡಿಮೆ. ಸಿಕ್ಕ ಅವಕಾಶಗಳನ್ನು ನಾವೆಲ್ಲರೂ ಸಂಭ್ರಮಿಸಬೇಕು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಅಸೂಯೆಗೆ ಸಮಯವಿಲ್ಲ. ಈ ನಟರು ನಮ್ಮನ್ನು ಬೇರೆ ಜಗತ್ತಿಗೆ ಸಾಗಿಸಿದ್ದಾರೆ. ಅದು ಸುಲಭದ ಸಾಧನೆಯಲ್ಲ, ”ಎಂದರು.
ಇದನ್ನೂ ಓದಿ : Kamal Haasan: ವಿಚ್ಛೇದನ ನಂತರ ನನ್ನ ಬಳಿ ಇದ್ದದ್ದು ಕೇವಲ 60 ರೂ. : ಕಮಲ್ ಹಾಸನ್ ಮಾಜಿ ಪತ್ನಿ ಸಾರಿಕಾ ಹೇಳಿದ್ದೇನು?
ಈ ಸಿನಿಮಾ ಇದೇ ವರ್ಷ ಏಪ್ರಿಲ್ 28ರಂದು ತೆರೆ ಕಾಣಲಿದೆ. ಪೊನ್ನಿಯನ್ ಸೆಲ್ವನ್ 2 ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಂಯೋಜಕ ಎಆರ್ ರೆಹಮಾನ್, ಸಂಕಲನಕಾರ ಶ್ರೀಕರ್ ಪ್ರಸಾದ್ ಮತ್ತು ಛಾಯಾಗ್ರಾಹಕ ರವಿವರ್ಮನ್ ತಾಂತ್ರಿಕ ಸಿಬ್ಬಂದಿಯ ಭಾಗವಾಗಿದ್ದಾರೆ. ಈ ಚಿತ್ರವನ್ನು ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿವೆ.
South Cinema
Actress Madhavi: ʻಹಾಲುಜೇನುʼ ಖ್ಯಾತಿಯ ನಟಿ ಮಾಧವಿ ಬಿಕಿನಿ ಫೋಟೊ ವೈರಲ್
ಮಾಧವಿ (Actress Madhavi) ಅವರು ಸಿನಿರಂಗದಿಂದ ದೂರ ಉಳಿದಿದ್ದಾರೆ. ಅಮೆರಿಕಾದಲ್ಲಿಯೇ ನೆಲೆಸಿದ್ದಾರೆ. ಕೊನೆಯದಾಗಿ ಡಾ. ರಾಜ್‌ಕುಮಾರ್ ಜೊತೆ ‘ಒಡಹುಟ್ಟಿದವರು’ ಸಿನಿಮಾದಲ್ಲಿ ನಟಿಸಿದ್ದರು
ಬೆಂಗಳೂರು: ಅಣ್ಣಾವ್ರ ಸಿನಿಮಾ ʻಹಾಲುಜೇನುʼ ಖ್ಯಾತಿಯ ನಟಿ ಮಾಧವಿ (Actress Madhavi) ಇದೀಗ ಬಿಕಿನಿ ಫೋಟೊದ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಖ್ಯಾತ ನಟಿ ರಾಧಾ ತಮ್ಮ ಇನ್‌ಸ್ಟಾದಲ್ಲಿ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಕಮಲ್ ಹಾಸನ್ ಚೇರ್ ಮೇಲೆ ಕೂತಿದ್ದರೆ ಹಿಂದೆ ಸ್ವಪ್ನ, ರಾಧಾ, ಮಾಧವಿ ಸ್ವಿಮ್‌ಸೂಟ್‌ನಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಇದೀಗ ರಾಧಾ ಅವರ ಫೋಟೊದಿಂದಾಗಿ ಮಾಧವಿ ಸಖತ್ ಸುದ್ದಿಯಲ್ಲಿದ್ದಾರೆ.
‘ಹಾಲುಜೇನು’, ‘ಖೈದಿ’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಅನುರಾಗ ಅರಳಿತು’, ‘ಜೀವನಚೈತ್ರ’, ‘ಆಕಸ್ಮಿಕ’ ರೀತಿಯ ಹಿಟ್ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಮಾಧವಿ ದಶಕಗಳ ಹಿಂದೆಯೇ ಬಿಕಿನಿ ತೊಟ್ಟು ಮೈಚಳಿ ಬಿಟ್ಟು ನಟಿಸಿದ್ದರು. ತಮಿಳಿನಲ್ಲಿ ʻತಿಳ್ಳು ಮುಳ್ಳು’, ‘ತಂಬಿಕ್ಕು ಎಂದ ಊರು’, ‘ರಾಜ ಪರ್ವೈ’, ‘ಕಾಕಿ ಚಟ್ಟೈ’, ‘ವಿದುತಲೈ’ ಮತ್ತು ‘ಟಿಕ್ ಟಿಕ್ ಟಿಕ್’ ಚಿತ್ರಗಳ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ನಟಿಯ ಈ ಫೋಟೊ ಮತ್ತೆ ವೈರಲ್ ಆಗುತ್ತಿದೆ. 80ರ ದಶಕದಲ್ಲಿ ಈ ಫೋಟೊ ಚರ್ಚೇಗೀಡಾಗಿತ್ತು. ತಮಿಳಿನ ‘ಟಿಕ್ ಟಿಕ್ ಟಿಕ್’ ಸಿನಿಮಾ ಶೂಟಿಂಗ್ ಸಮಯದಲ್ಲಿ ಕ್ಲಿಕ್ಕಿಸಿರುವ ಫೋಟೊ ಅದು. ಅದರಲ್ಲಿ ಕಮಲ್ ಹಾಸನ್ ಚೇರ್ ಮೇಲೆ ಕೂತಿದ್ದರೆ ಹಿಂದೆ ಸ್ವಪ್ನ, ರಾಧಾ, ಮಾಧವಿ ಸ್ವಿಮ್‌ಸೂಟ್‌ನಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ.
ಕಮಲ್ ಹಾಸನ್, ಮಾಧವಿ, ಸ್ವಪ್ನಾ ಮತ್ತು ರಾಧಾ ಅಭಿನಯದ ಕ್ರೈಮ್ ಥ್ರಿಲ್ಲರ್ ‘ಟಿಕ್ ಟಿಕ್ ಟಿಕ್ ಸಿನಿಮಾ 1981ರಲ್ಲಿ ಬಿಡುಗಡೆಯಾಗಿ ಹಿಟ್ ಕಂಡಿತ್ತು. ಮಾಧವಿ ಮತ್ತು ರಾಧಾ ಇಬ್ಬರೂ ಕಮಲ್ ಹಾಸನ್ ಅವರೊಂದಿಗೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Vaashi | ಕೋರ್ಟ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ ಟೋವಿನೋ ಥಾಮಸ್ ಹಾಗೂ ಕೀರ್ತಿ ಸುರೇಶ್
ರಾಧಾ ಪೋಸ್ಟ್
ಆದರೆ ಇದೀಗ ಮಾಧವಿ ಅವರು ಸಿನಿರಂಗದಿಂದ ದೂರ ಉಳಿದಿದ್ದಾರೆ. ಅಮೆರಿಕಾದಲ್ಲಿಯೇ ನೆಲೆಸಿದ್ದಾರೆ. ಕೊನೆಯದಾಗಿ ಡಾ. ರಾಜ್‌ಕುಮಾರ್ ಜೊತೆ ‘ಒಡಹುಟ್ಟಿದವರು’ ಸಿನಿಮಾದಲ್ಲಿ ನಟಿಸಿದ್ದರು. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಮಾಧವಿ ಭರತನಾಟ್ಯ ಕಲಾವಿದೆ ಆಗಿದ್ದರು. 1996ರಲ್ಲಿ ರಾಲ್ಫ್ ಶರ್ಮಾ ಎಂಬುವವರ ಕೈ ಹಿಡಿದಿದ್ದರು. ಆಕೆಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ.
South Cinema
Veerappan Daughter: ವೀರಪ್ಪನ್ ಮಗಳು ವಿಜಯಲಕ್ಷ್ಮೀ ಸಿನಿರಂಗಕ್ಕೆ ಎಂಟ್ರಿ
ಈಗಾಗಲೇ ಚೆನ್ನೈನಲ್ಲಿ ಆಡಿಯೊ ರಿಲೀಸ್ ಕಾರ್ಯಕ್ರಮ ನೆರವೇರಿದೆ. ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ವಿಜಯಲಕ್ಷ್ಮೀ (Veerappan Daughter) ರಾಜಕೀಯ ರಂಗದಿಂದ ಸಿನಿಮಾರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಚೆನ್ನೈ: ವೀರಪ್ಪನ್ ಮಗಳು ವಿಜಯಲಕ್ಷ್ಮೀ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ವಿಜಯಲಕ್ಷ್ಮೀ (Veerappan Daughter) ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.. ʼಮಾವೀರನ್ ಪಿಳ್ಳೈʼ (Maaveeran Pillai) ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚೆನ್ನೈನಲ್ಲಿ ಆಡಿಯೊ ರಿಲೀಸ್ ಕಾರ್ಯಕ್ರಮ ನೆರವೇರಿದೆ. ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ವಿಜಯಲಕ್ಷ್ಮೀ, ರಾಜಕೀಯ ರಂಗದಿಂದ ಸಿನಿಮಾರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ, ಆಲ್ ಪೀಪಲ್ಸ್ ಪೊಲಿಟಿಕಲ್ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್ ಸುರೇಶ್, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.ಆರ್. ರಾಜ ಮೊದಲಾದವರು ಭಾಗವಹಿಸಿದ್ದರು. ವಿಜಯಲಕ್ಷ್ಮೀ ಮಾತನಾಡಿ ʻʻನನಗೆ ಮೊದಲಿನಿಂದಲೂ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆಯಿತ್ತು. ಕುಡಿತದ ಪರಿಣಾಮದ ಮೇಲೆ ಬೆಳಕು ಚೆಲ್ಲುವ ಕಥೆ ಇದಾಗಿದೆ. ಪ್ರತಿ ಮನೆಯಲ್ಲೂ ಗಂಡಸರ ಕುಡಿತದ ಕಾರಣದಿಂದ ಹೆಣ್ಣುಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂತಹ ಮಹಿಳೆಯರ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಪಾತ್ರ ಇದಾಗಿದೆ. ಆ ಕಾರಣಕ್ಕೆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆʼ ಎಂದಿದ್ದಾರೆ.
ಇದನ್ನೂ ಓದಿ: Actor Suriya: ಸಚಿನ್ ತೆಂಡೂಲ್ಕರ್ ಭೇಟಿ ಮಾಡಿದ ಕಾಲಿವುಡ್ ನಟ ಸೂರ್ಯ: ಫೋಟೊ ವೈರಲ್
ಆಡಿಯೊ ಲಾಂಚ್ ಇವೆಂಟ್
ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಪೇರರಸು ʼಸಿನಿಮಾ ಎಂದರೆ ಅದರಲ್ಲಿ ಯಾರು ನಟಿಸುತ್ತಾರೆ, ಯಾರು ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬುದನ್ನು ಮುಖ್ಯವಾಗುವುದಿಲ್ಲ. ಸಿನಿಮಾದ ಎಂದರೆ ಕಥೆಯೇ ಜೀವಾಳʼ ಎಂದಿದ್ದಾರೆ.
ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್ ಸಂಕಲನವಿದೆ.
South Cinema
Kamal Haasan: ವಿಚ್ಛೇದನ ನಂತರ ನನ್ನ ಬಳಿ ಇದ್ದದ್ದು ಕೇವಲ 60 ರೂ. : ಕಮಲ್ ಹಾಸನ್ ಮಾಜಿ ಪತ್ನಿ ಸಾರಿಕಾ ಹೇಳಿದ್ದೇನು?
ಸಾರಿಕಾ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರಿಂದ (Kamal Haasan) ವಿಚ್ಛೇದನ ಪಡೆದ ನಂತರ ಸಾರಿಕಾ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದು, ಹಲವು ಬಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಾರಿಕಾ ರಾತ್ರೋ ರಾತ್ರಿ ಕೇವಲ 60 ರೂ. ಹಾಗೂ ಕಾರಿನೊಂದಿಗೆ ಹೊರಟುಬಿಟ್ಟೆ ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರು: ಕಮಲ್ ಹಾಸನ್ (Kamal Haasan) ಅವರ ಮಾಜಿ ಪತ್ನಿ ಹಿರಿಯ ನಟಿ ಸಾರಿಕಾ ತಮ್ಮ ಏಳನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಾರಿಕಾ ಅವರ ಮೊದಲ ಸಿನಿಮಾ 1967ರಲ್ಲಿ ತೆರೆಕಂಡ ನಿರ್ದೇಶಕ ಬಿ.ಆರ್. ಚೋಪ್ರಾ ಅವರ ಹುಮ್ರಾಜ್ (Humraaz). ಬಾಲನಟಿಯಾಗಿ ಆಶೀರ್ವಾದ್, ಸತ್ರಕಂ, ಬಾಲಕ ಮತ್ತು ಬೇಟಿಯಂತಹ ಇತರ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ, ಅವರು 1975ರಲ್ಲಿ ಕಾಗಜ್ ಕಿ ನಾವೊ (Kaagaz Ki Nao) ಸಿನಿಮಾ ಮೂಲ ಗುರುತಿಸಿಕೊಂಡರು. ಸಾರಿಕಾ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಸೂಪರ್‌ಸ್ಟಾರ್ ಕಮಲ್ ಹಾಸನ್‌ನಿಂದ ವಿಚ್ಛೇದನ ಪಡೆದ ನಂತರ ಸಾರಿಕಾ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದು, ಹಲವು ಬಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಾರಿಕಾ ರಾತ್ರೋ ರಾತ್ರಿ ಕೇವಲ 60 ರೂ. ಹಾಗೂ ಕಾರಿನೊಂದಿಗೆ ಹೊರಟುಬಿಟ್ಟೆ ಎಂದು ಹೇಳಿಕೊಂಡಿದ್ದಾರೆ.
ಪ್ರಾಮಾಣಿಕ ವ್ಯಕ್ತಿಯಾಗಿದ್ದೆ
ಸಿಮಿ ಗರೆವಾಲ್ ಅವರ ಚಾಟ್ ಶೋನಲ್ಲಿ 2000ರ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದರು ಸಾರಿಕಾ. ʻʻನಾನು ನನಗೆ ಮತ್ತು ನನ್ನ ತಾಯಿಗೆ ಸಾಕಷ್ಟು ಪ್ರಾಮಾಣಿಕ ವ್ಯಕ್ತಿಯಾಗಿ ಇದ್ದೆ. ಅವರಿಗೆ ಸಾಧ್ಯವಾಗುವಷ್ಟು ಒಳ್ಳೆಯದನ್ನೇ ಮಾಡಿದ್ದೇನೆ. ಇಲ್ಲದಿದ್ದರೆ ರಾತ್ರೋ ರಾತ್ರಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಆ ಸಮಯದಲ್ಲಿ ಕಮಲ್ ಮತ್ತು ಸಾರಿಕಾ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧಾರ ಮಾಡಿದ್ದರು. ಕಮಲ್ ವಾರು ವಾಣಿ ಗಣಪತಿ ಅವರನ್ನು ವಿವಾಹವಾದ ಕಾರಣ ಹಲವಾರು ಬಾರಿ ತಮ್ಮ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದರು ಎಂದು ಬಹಿರಂಗಪಡಿಸಿದರು. ಕಮಲ್ ಅವರೇ ಸಾರಿಕಾ ಅವರನ್ನು ಇಷ್ಟ ಪಟ್ಟದ್ದರು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆಗ ಸಾರಿಕಾ ಮತ್ತು ಕಮಲ್ ನಡುವಿನ ಸಂಬಂಧ ಕುರಿತು ಹೆಚ್ಚಾಗಿ ಚರ್ಚೆಗಳು ನಡೆದಿದ್ದವು. ಕಮಲ್ ಅವರೊಂದಿಗಿನ ಸಂಬಂಧಕ್ಕಾಗಿ ಸಾರಿಕಾ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದ್ದರು. ಸಾರಿಕಾ 1988ರಲ್ಲಿ ಕಮಲ್ ಅವರನ್ನು ವಿವಾಹವಾದರು. ಶ್ರುತಿ ಮತ್ತು ಅಕ್ಷರಾ ಹಾಸನ್ ಹುಟ್ಟಿದರು. ಕೊನೆಗೆ ದಂಪತಿ 2002ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. ವಿಚ್ಛೇದನದ ನಂತರ, ಸಾರಿಕಾ ಹಲವು ಏರಿಳಿತವನ್ನು ಕಾಣುತ್ತಾರೆ.
ಇದನ್ನೂ ಓದಿ: Delhi MCD: ರಣರಂಗವಾದ ದೆಹಲಿ ಮಹಾನಗರ ಪಾಲಿಕೆ; ಬಿಜೆಪಿ ಕೌನ್ಸಿಲರ್ಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದ ಮೇಯರ್ ಶೆಲ್ಲಿ
ಇದಾದ ನಂತರ ಸಾರಿಕಾ ತನ್ನ ವೃತ್ತಿಜೀವನವನ್ನು ಮೊದಲಿನಿಂದಲೂ ಪುನರಾರಂಭಿಸಬೇಕಾಗಿತ್ತು. ಸಿಮಿ ಗರೆವಾಲ್ ಅವರ ಹಳೆಯ ಸಂದರ್ಶನವೊಂದರಲ್ಲಿ, ಸಾರಿಕಾ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ನನ್ನಲ್ಲಿ ಉಳಿದ್ದಿದ್ದು ಕೇವಲ 60 ರೂ. ಹಾಗೂ ಕಾರು
ಸಾರಿಕಾ ಮಾತನಾಡಿ ʻʻಡಿವೋರ್ಸ್ ಪಡೆದ ನಂತರ ನನ್ನಲ್ಲಿ ಉಳಿದ್ದಿದ್ದು ಕೇವಲ 60 ರೂ. ಹಾಗೂ ಕಾರು. ನಾನು ನನಗೆ ಮತ್ತು ನನ್ನ ತಾಯಿಗೆ ಸಾಕಷ್ಟು ಪ್ರಾಮಾಣಿಕ ವ್ಯಕ್ತಿಯಾಗಿ ಇದ್ದೆ. ರಾತ್ರೋರಾತ್ರಿ ನಾನು 60 ರೂಪಾಯಿ ಮತ್ತು ನನ್ನ ಕಾರಿನೊಂದಿಗೆ ಹೊರಟೆ ಬಿಟ್ಟೆ” ಎಂದು ಹೇಳಿಕೊಂಡಿದ್ದರು. ಮಾತು ಮುಂದುವರಿಸಿ ʻʻರಾತ್ರೋ ರಾತ್ರಿ ಹೊರಟೆ ಆದರೆ ಮುಂದೇನು ಎಂಬುದು ನನಗೆ ತಿಳಿದಿರಲಿಲ್ಲ. ನನ್ನ ಸ್ನೇಹಿತರ ಮನೆಗೆ ಹೋಗಿದ್ದೆ, ಅವರ ಮನೆಯಲ್ಲಿಯೇ ಸ್ನಾನ ಮಾಡಿ, ನನ್ನ ಕಾರಿನಲ್ಲಿ ಮಲಗುತ್ತಿದ್ದೆ. ಆದರೆ ಜೀವನಕ್ಕೆ ಹೆದರಿರಲಿಲ್ಲʼʼಎಂದರು.
ಕಮಲ್ ಈ ಬಗ್ಗೆ ಹೇಳಿದ್ದೇನು?
ಸಿಮಿ ಅವರು ತಮ್ಮ ಮಾಜಿ ಪತ್ನಿಗೆ ಆರ್ಥಿಕವಾಗಿ ಏಕೆ ಸಹಾಯ ಮಾಡಲಿಲ್ಲ ಎಂದು ಕಮಲ್ ಅವರನ್ನು ಕೇಳಿದಾಗ, ಕಮಲ್ ಈ ಬಗ್ಗೆ ಮಾತನಾಡಿ ʻʻಸಾರಿಕಾಳ ಕಷ್ಟದ ಪರಿಸ್ಥಿತಿ ನನಗೆ ತಿಳಿದಿತ್ತು. ಅವಳ ಆಗಿನ ಪರಿಸ್ಥಿತಿ ನೀವು ನೋಡಿದ್ದರೆ ನಿಜಕ್ಕೂ ಆಘಾತಕ್ಕೊಳಗಾಗುತ್ತೀರಿ. ಆದರೆ ಸೆಟ್‌ನಲ್ಲಿ ಅವಳು ದೊಡ್ಡ ಸ್ಟಾರ್ ಆಗಿ ಮಿಂಚುತ್ತಿದ್ದಳು. ಆದರೆ ಅವಳು ವಾಸಿಸುವ ಸ್ಥಳ ನೋಡಿದರೆ ಅವಳು ಸ್ಟಾರ್ ಅಲ್ಲ ಎಂದು ಅನಿಸುತ್ತಿತ್ತು. ಅವಳು ಎಲ್ಲಿ ವಾಸಿಸುತ್ತಿದ್ದಾರೆಂದು ಕೆಲವೇ ಜನರಿಗೆ ತಿಳಿದಿದೆ. ನಾನು ಅವಳಿಗೆ ಸಹಾನುಭೂತಿ ತೋರಿಸಿದೆ. ಆಕೆಗೆ ಆ ಸಹಾನುಭೂತಿ ಬೇಕಾಗಿರಲ್ಲ. ಸಹಾಯವೂ ಬೇಕಿರಲಿಲ್ಲ. ಅವಳಿಗೆ ಹಣದ ಸಹಾಯ ಮಾಡುತ್ತೇನೆ ಎಂದರೂ ಸಹ ಕೋಪ ಬರುತ್ತಿತ್ತು. ಆದ್ದರಿಂದ ಆಕೆಯನ್ನು ಕಂಡರೆ ನನಗೆ ಅಪಾರ ಹೆಮ್ಮೆ. ಆದ ಕಾರಣವೇ ಆಕೆಯನ್ನು ನಾನು ಮೆಚ್ಚಿ ಮದುವೆಯಾದೆʼʼ ಎಂದು ಕಮಲ್ ಉಲ್ಲೇಖಿಸಿದ್ದಾರೆ. 2004ರಲ್ಲಿ ಕಮಲ್ ಹಾಸನ್ ಮತ್ತು ಸಾರಿಕಾ ವಿಚ್ಛೇದನ ಪಡೆದುಕೊಂಡ ದೂರವಾಗಿದ್ದರು.
ಸಾರಿಕಾ 2020ರಲ್ಲಿ ಮಾಡರ್ನ್ ಲವ್ ಮುಂಬೈ ವೆಬ್ ಸಿರೀಸ್ ಮುಳಕ ಮತ್ತೆ ಕಮ್‌ಬ್ಯಾಕ್ ಆದರು. ಕೊನೆಯದಾಗಿ ಸೂರಜ್ ಬರ್ಜಾತ್ಯಾ ಅವರ ಉಂಚೈನಲ್ಲಿ ಕಾಣಿಸಿಕೊಂಡರು.
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್23 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ20 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ