Actor Karthi | ನಟ ಕಾರ್ತಿ ಫೇಸ್‌ಬುಕ್‌ ಹ್ಯಾಕ್‌: ನಿರ್ದೇಶಕರ ಮಾತಿಗೆ ಪ್ರತೀಕಾರ ತೀರಿಸಿಕೊಂಡ್ರಾ ಹ್ಯಾಕರ್ಸ್‌! - Vistara News

ಕಾಲಿವುಡ್

Actor Karthi | ನಟ ಕಾರ್ತಿ ಫೇಸ್‌ಬುಕ್‌ ಹ್ಯಾಕ್‌: ನಿರ್ದೇಶಕರ ಮಾತಿಗೆ ಪ್ರತೀಕಾರ ತೀರಿಸಿಕೊಂಡ್ರಾ ಹ್ಯಾಕರ್ಸ್‌!

ಕಾರ್ತಿ (Actor Karthi) ಅವರ ಫೇಸ್‌ ಬುಕ್‌ ಖಾತೆಯಲ್ಲಿ ಕಿಡಿಗೇಡಿಗಳು ಆನ್‌ಲೈನ್‌ ಗೇಮ್‌ ಆಡಿದ್ದಾರೆ. ನಿರ್ದೇಶಕರ ಮಾತುಗಳಿಗೆ ತಕ್ಕ ಶಾಸ್ತಿಯಾದಂತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

VISTARANEWS.COM


on

Actor Karthi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಕಾಲಿವುಡ್‌ ನಟ ಕಾರ್ತಿ (Actor Karthi) ಅವರ ಫೇಸ್‌ಬುಕ್‌ ಖಾತೆ (ನವೆಂಬರ್‌ 14) ಸೋಮವಾರ ಹ್ಯಾಕ್‌ ಆಗಿದೆ. ಈಗಾಗಲೇ ತಾವು ನಟಿಸಿರುವ ʻಸರ್ದಾರ್‌ʼ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 100ಕೋಟಿ ರೂ. ಕ್ಲಬ್‌ ಸೇರಿದೆ ಎನ್ನಲಾಗುತ್ತಿದೆ. ಕಾರ್ತಿ ಅವರ ಫೇಸ್‌ ಬುಕ್‌ ಖಾತೆಯಲ್ಲಿ ಕಿಡಿಗೇಡಿಗಳು ಆನ್‌ಲೈನ್‌ ಗೇಮ್‌ ಆಡಿದ್ದಾರೆ. ತಮ್ಮ ಖಾತೆ ಹ್ಯಾಕ್‌ ಆಗಿರುವ ಕುರಿತು ನಟ ಟ್ವೀಟ್‌ ಮೂಲಕ ಹೇಳಿಕೊಂಡಿದ್ದಾರೆ. ಲೈವ್‌ ಸ್ಟ್ರೀಮ್‌ ಆಗುತ್ತಿದ್ದಂತೆ ʻಸರ್ದಾರ್‌ʼ ಚಿತ್ರದ ನಿರ್ದೇಶಕರ ಮಾತುಗಳಿಗೆ ತಕ್ಕ ಶಾಸ್ತಿಯಾದಂತಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಏನಿದು ಚರ್ಚೆ?
ಕಾರ್ತಿ ಅಭಿನಯದ ʻಸರ್ದಾರ್‌ʼ ಚಿತ್ರದಲ್ಲಿ ನಟ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪೈ ಏಜೆಂಟ್‌ ಹಾಗೂ ಪೊಲೀಸ್‌ ಪಾತ್ರದಲ್ಲಿ ಕಾರ್ತಿ ನಟನೆ ಮಾಡಿದ್ದು, ಪಿ.ಎಸ್‌ ಮಿತ್ರನ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದಲ್ಲಿ ವಾಟರ್‌ ಮಾಫಿಯಾ, ಹೀಗೆ ಹಲವು ಸಂದೇಶಗಳನ್ನು ಒಳಗೊಂಡಿದೆ. ʻಸರ್ದಾರ್‌ʼ ಚಿತ್ರದ ಕಾರ್ಯಕ್ರಮವೊಂದರಲ್ಲಿ ಹಲವು ವಿಚಾರಗಳ ಬಗ್ಗೆ ಪಿ.ಎಸ್‌ ಮಿತ್ರನ್‌ ಹಂಚಿಕೊಂಡಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ | Karthikeya 2 | ನಿಖಿಲ್ ಸಿದ್ಧಾರ್ಥ್ ನಟನೆಯ ಕಾರ್ತಿಕೇಯ-2 ಸಿನಿಮಾದ ಟೀಸರ್ ರಿಲೀಸ್

ಈ ಹಿಂದೆ ಪಿ.ಎಸ್‌ ಮಿತ್ರನ್‌ ಅವರು ನಟ ವಿಶಾಲ್‌ ಅವರಿಗೆ ʻಇರುಂಬುದಿರೈʼ (Irumbu Thirai) ಎಂಬ ಸೈಬರ್ ಡ್ರಾಮಾ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಸೈಬರ್‌ ಕ್ರೈಂ ಕುರಿತು ಇದ್ದಿದ್ದು, ʻಸರ್ದಾರ್‌ʼ ಪ್ರಚಾರದ ವೇಳೆ ಹ್ಯಾಕಿಂಗ್‌ ವಿಚಾರದ ಬಗ್ಗೆ ಮಿತ್ರನ್‌ ಮಾತನಾಡಿದ್ದರು. ಇದೀಗ ಕಿಡಿಗೇಡಿಗಳು ಮಿತ್ರನ್ ನಿರ್ದೇಶನದ ಸದ್ಯದ ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ನಟಿಸಿರುವ ನಟ ಕಾರ್ತಿ ಫೇಸ್‌ಬುಕ್ ಹ್ಯಾಕ್ ಮಾಡಿ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡ ಕಾರ್ತಿ
ನಟ ಕಾರ್ತಿ ಟ್ವೀಟ್‌ ಮೂಲಕ ತಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆ ಎಂದು ಹಂಚಿಕೊಂಡಿದ್ದಾರೆ. ಇವೆಲ್ಲವನ್ನು ಸರಿಪಡಿಸುವತ್ತ ತಮ್ಮ ಫೇಸ್‌ ಬುಕ್‌ ತಂಡ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ ಬೆನ್ನಲ್ಲೇ ಕಾರ್ತಿ ಅವರು ʻಸರ್ದಾರ್‌ʼ 25 ದಿನ ಪೂರೈಸಿದೆ ಎಂದು ಪೋಸ್ಟರ್‌ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಹೊಗಳಿದ ತಮಿಳು ನಟ ಕಾರ್ತಿ: ರಿಷಬ್‌ ಮೇಲೆ ಕನ್ನಡಿಗರು ಗರಂ ಆಗಿದ್ಯಾಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಾಲಿವುಡ್

Pawan Kalyan: ಸಿಂಗಾಪುರದಲ್ಲಿ ಪವನ್ ಕಲ್ಯಾಣ್ ಮೂರನೇ ಪತ್ನಿ ಪಡೆದ ಪದವಿ ಯಾವುದು?

Pawan Kalyan: ಅನ್ನಾ ಇತ್ತೀಚೆಗೆ ಸಿಂಗಾಪುರ್ ನ್ಯಾಷನಲ್ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದರು. ಹೀಗಾಗಿ, ಪವನ್ ಮತ್ತು ಅನ್ನಾ ಲೆಜ್ನೇವಾ ಇಬ್ಬರೂ ಪದವಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದರು. ಸಿಂಗಾಪುರಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿದ್ದಾಗ ದಿಢೀರ್ ಭೇಟಿಯ ಹಿಂದಿನ ಕಾರಣವೇನೆಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದರು.

VISTARANEWS.COM


on

Pawan Kalyan Go To Singapore Anna Lezhneva graduation ceremony
Koo

ಬೆಂಗಳೂರು: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೊನಿಡೆಲಾ (Pawan Kalyan) ಅವರು ಇತ್ತೀಚೆಗೆ ಸಿಂಗಾಪುರಕ್ಕೆ ತೆರಳಿರುವ ಫೋಟೊಗಳು ವೈರಲ್‌ ಆಗಿತ್ತು. ಇದಾದ ಬಳಿಕ ಸಾಕಷ್ಡು ವದಂತಿಗಳು ಹಬ್ಬಿದ್ದವು. ಆದರೆ, ಪವನ್ ಅವರು ತಮ್ಮ ಪತ್ನಿ ಅನ್ನಾ ಲೆಜ್ನೇವಾ (Anna Lezhneva) ಅವರ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದರು ಎಂಬುದು ಈಗ ಬಹಿರಂಗವಾಗಿದೆ.

ಅನ್ನಾ ಇತ್ತೀಚೆಗೆ ಸಿಂಗಾಪುರ್ ನ್ಯಾಷನಲ್ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿ (Anna Lezhneva graduation) ಪಡೆದರು. ಹೀಗಾಗಿ, ಪವನ್ ಮತ್ತು ಅನ್ನಾ ಲೆಜ್ನೇವಾ ಇಬ್ಬರೂ ಪದವಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದರು. ಸಿಂಗಾಪುರಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿದ್ದಾಗ ದಿಢೀರ್ ಭೇಟಿಯ ಹಿಂದಿನ ಕಾರಣವೇನೆಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದರು. ಕೊನೆಗೂ ಅವರ ಭೇಟಿಯ ಹಿಂದಿನ ಕಾರಣ ಬಯಲಾಗಿದೆ. ಅನ್ನಾ ಲೆಜ್ನೇವಾ ಅವರ ಪದವಿ ಪ್ರದಾನ ಸಮಾರಂಭದಲ್ಲಿ ಗಂಡ ಹೆಂಡತಿ ಕ್ಲಿಕ್ಕಿಸಿಕೊಂಡಿರುವ ಫೋಟೊ ವೈರಲ್‌ ಆಗುತ್ತಿದೆ.

ಪವನ್ ಕಳೆದ ಕೆಲವು ದಿನಗಳಿಂದ ವಾರಾಹಿ ದೀಕ್ಷೆಯಲ್ಲಿದ್ದರು. ಅವರು ತಮ್ಮ ದೀಕ್ಷಾ ಸಮಯದಲ್ಲಿ ಸಾಂಪ್ರದಾಯಿಕ ದೀಕ್ಷಾ ಉಡುಗೆಯಲ್ಲಿದ್ದರು. ಈಗ, ದೀಕ್ಷಾ ಪೂರ್ಣಗೊಂಡಂತೆ, ಪವನ್ ಸಿಂಗಾಪುರಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Pawan Kalyan: ವೇತನವೇ ಬೇಡ ಎಂದ ಪವನ್‌ ಕಲ್ಯಾಣ್‌- ಮತ್ತೊಮ್ಮೆ ಗಮನ ಸೆಳೆದ ಆಂಧ್ರ ಡಿಸಿಎಂ

ಲೋಕಸಭಾ ಚುನಾವಣೆ-2024ರಲ್ಲಿ (Loksabha election-2024) ಆಂಧ್ರಪ್ರದೇಶದಲ್ಲಿ (andrapradesh) ಭರ್ಜರಿ ಗೆಲುವು ಸಾಧಿಸಿ ಮನೆಗೆ ಬಂದ ತೆಲುಗು ನಟ (Telugu actor), ರಾಜಕಾರಣಿ (politician) ಪವನ್ ಕಲ್ಯಾಣ್ (Pawan Kalyan) ಅವರನ್ನು ಪತ್ನಿ (wife) ಅನ್ನಾ ಲೆಜ್ನೆವಾ (Anna Lezhneva) ಆರತಿ ಮಾಡಿ, ತಿಲಕವಿಟ್ಟು ಸ್ವಾಗತಿಸಿದ್ದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral news) ಆಗಿತ್ತು.

ಅನ್ನಾ ಲೆಜ್ನೆವಾ ಯಾರು?

ರಷ್ಯಾದ ರೂಪದರ್ಶಿ ಮತ್ತು ನಟಿಯಾಗಿರುವ ಅನ್ನಾ ಲೆಜ್ನೆವಾ ಅವರು 2011ರ ತೀನ್ ಮಾ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಮೊದಲ ಬಾರಿಗೆ ಪವನ್ ಅವರನ್ನು ಭೇಟಿಯಾಗಿದ್ದರು. ಶೀಘ್ರದಲ್ಲೇ ಅವರು ಪ್ರೀತಿಸುವುದಾಗಿ ಪ್ರಕಟಿಸಿ 2013ರ ಸೆಪ್ಟೆಂಬರ್ 30ರಂದು ಮದುವೆಯಾದರು. ಇದಕ್ಕೂ ಮೊದಲು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ.

ಪವನ್ ಕಲ್ಯಾಣ್ ಅವರ ಹಿಂದಿನ ಮದುವೆಗಳು

ʼಗಬ್ಬರ್ ಸಿಂಗ್ʼ ಪವನ್ ಮೊದಲ ಬಾರಿಗೆ 1997ರಲ್ಲಿ 19 ವರ್ಷದ ಹುಡುಗಿ ನಂದಿನಿಯನ್ನು ವಿವಾಹವಾದರು. 2001ರಲ್ಲಿ ಪವನ್ ನಟಿ ರೇಣು ದೇಸಾಯಿ ಅವರೊಂದಿಗೆ ವಾಸ ಮಾಡಲು ತೊಡಗಿದರು. ಅವರಿಬ್ಬರಿಗೆ ಗಂಡು ಮಗುವಾಗಿತ್ತು. ಪವನ್ ತನ್ನ ಮೊದಲ ಹೆಂಡತಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡದ ಕಾರಣ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಯಿತು. ಅನಂತರ ನ್ಯಾಯಾಲಯವು 2008ರಲ್ಲಿ ಅವರಿಗೆ ವಿಚ್ಛೇದನವನ್ನು ನೀಡಿತು. ಅವರ ಎರಡನೇ ಮದುವೆಯು 2009ರಲ್ಲಿ ನಡೆಯಿತು. ಬಳಿಕ ಪವನ್ ಮತ್ತು ರೇಣು ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು. ದುರದೃಷ್ಟವಶಾತ್ ಇವರಿಬ್ಬರ ವೈವಾಹಿಕ ಜೀವನ 2012 ರಲ್ಲಿ ವಿಚ್ಛೇದನದ ಮೂಲಕ ಕೊನೆಯಾಯಿತು.

ವಿಚ್ಛೇದನದ ವದಂತಿ

ಕಳೆದ ವರ್ಷ ಅನ್ನಾ ಮತ್ತು ಪವನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಇತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ತೆಲುಗು ತಾರೆ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಅನ್ನಾ ಲೆಜ್ನೆವಾ ಹಾಜರಾಗದಿದ್ದಾಗ ಈ ಗುಲ್ಲು ಹಬ್ಬಿತ್ತು. ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳು ಕ್ಲಿನ್ ಕಾರಾ ಕೊನಿಡೆಲಾ ಅವರ ತೊಟ್ಟಿಲು ಸಮಾರಂಭವನ್ನು ಇವರು ತಪ್ಪಿಸಿಕೊಂಡರು. ಇದರಿಂದ ಅವರ ಪ್ರತ್ಯೇಕತೆಯ ವದಂತಿಗಳಿಗೆ ಉತ್ತೇಜನ ಸಿಕ್ಕಿತು. ಆದರೂ ಇತ್ತೀಚಿನ ವಿಡಿಯೋ ಗಳು ಈ ವದಂತಿಗಳನ್ನು ತಳ್ಳಿ ಹಾಕುವಂತೆ ಮಾಡಿದೆ.

Continue Reading

ಕಾಲಿವುಡ್

Chiyaan Vikram: ʻKGFʼ ಅಸಲಿ ಕಥೆ ಹೇಳಲು ಬರ್ತಾ ಇದೆ ‘ತಂಗಲಾನ್’; ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್!

Chiyaan Vikram: ಕೋಲಾರದ ಚಿನ್ನದ ಗಣಿ ಕಾರ್ಮಿಕರ ಜೀವನದ ಸುತ್ತ ಸುತ್ತುವ ನೈಜ ಘಟನೆಗಳಿಂದ ಪ್ರೇರಿತವಾದ ʻʻತಂಗಲಾನ್‌ʼʼನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಚಿಯಾನ್‌ ವಿಕ್ರಮ್‌. ಪಾ ರಂಜಿತ್ ನಿರ್ದೇಶನದ ಚಿತ್ರದಲ್ಲಿ ವಿಕ್ರಮ್‌ ಬುಡಕಟ್ಟಿನ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Chiyaan Vikram Starrer Thangalaan Movie Release Date Announced
Koo

ಬೆಂಗಳೂರು: ಕಾಲಿವುಡ್‌ ನಟ ಚಿಯಾನ್ ವಿಕ್ರಮ್ (Chiyaan Vikram) ನಟನೆಯ ʻʻತಂಗಲಾನ್‌ʼʼ ಚಿತ್ರ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ನಿರ್ದೇಶಕ ಪಾ ರಂಜಿತ್, ‘ತಾಂಗಾಲನ್’ ಸಿನಿಮಾ ನಿರ್ದೇಶನ ಮಾಡಿದ್ದು ಪ್ರತಿಭಾವಂತ ನಟ ಚಿಯಾನ್ ವಿಕ್ರಂ, ‘ತಂಗಾಲನ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನಿಜವಾದ ‘ಕೆಜಿಎಫ್’ ಕತೆ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರ ಆಗಸ್ಟ್‌ 15ರಂದು ತೆರೆಗೆ ಬರಲಿದೆ.

ಕೋಲಾರದ ಚಿನ್ನದ ಗಣಿ ಕಾರ್ಮಿಕರ ಜೀವನದ ಸುತ್ತ ಸುತ್ತುವ ನೈಜ ಘಟನೆಗಳಿಂದ ಪ್ರೇರಿತವಾದ ʻʻತಂಗಲಾನ್‌ʼʼನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಚಿಯಾನ್‌ ವಿಕ್ರಮ್‌. ಪಾ ರಂಜಿತ್ ನಿರ್ದೇಶನದ ಚಿತ್ರದಲ್ಲಿ ವಿಕ್ರಮ್‌ ಬುಡಕಟ್ಟಿನ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ತಂಗಲಾನ್‌ನಲ್ಲಿನ ಈ ಪಾತ್ರಕ್ಕಾಗಿಯೇ ವಿಕ್ರಮ್ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಬ್ರಿಟಿಷರು ಹಾಗೂ ಬುಡಕಟ್ಟು ಸಮಾಜದ ನಡುವೆ ನಡೆಯುವ ಸಂಘರ್ಷವನ್ನು ʻತಂಗಲಾನ್‌ʼʼ ಹೇಳುತ್ತಿದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ನಟ ಚಿಯಾನ್ ವಿಕ್ರಮ್ ಜತೆ ಪಾರ್ವತಿ ಮೆನನ್‌, ಮಾಳವಿಕಾ ಮೋಹನ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನ್ನಡದ ಕೆಜಿಎಫ್‌ ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್‌ ನೀಲ್‌ ಕಾಲ್ಪನಿಕ ಕಥೆಯನ್ನು ಕಟ್ಟಿಕೊಟ್ಟರೆ, ಕೆಜಿಎಫ್‌ನ ನಿಜವಾದ ಕಥೆಯನ್ನು ನಿರ್ದೇಶಕ ಪಾ. ರಂಜಿತ್‌ ಹೇಳಲು ಹೊರಟ್ಟಿದ್ದಾರೆ ಎಂದು ಈ ಮುಂಚೆ ಸುದ್ದಿಯಾಗಿತ್ತು. ಇದೀಗ ಈ ಚಿತ್ರದ ಮೂಲಕ ಹೊಸ ಕಥೆಯನ್ನು ಹೇಳಲು ಹೊರಟ್ಟಿದ್ದಾರೆ ರಂಜಿತ್‌.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ತಂಗಲಾನ್’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್, ಪಶುಪತಿ, ಡೇನಿಯಲ್ ಕಾಲ್ಟಗಿರೋನ್ ಮತ್ತು ಇನ್ನೂ ಅನೇಕರು ಇದ್ದಾರೆ. ಜಿವಿ ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತವನ್ನು ರಚಿಸಿದ್ದಾರೆ.

ಇದನ್ನೂ ಓದಿ: Chiyaan Vikram: ಚಿಯಾನ್ ವಿಕ್ರಮ್ ಜನುಮದಿನಕ್ಕೆ ʻತಂಗಲಾನ್‌ʼ ಚಿತ್ರತಂಡದಿಂದ ಭರ್ಜರಿ ಗಿಫ್ಟ್‌!

ಚಿಯಾನ್ ವಿಕ್ರಮ್ ಅವರ ಮುಂಬರುವ ಚಿತ್ರಗಳು

ಅಣ್ಣಿಯಾನ್ ನಟ ಚಿತ್ರನಿರ್ಮಾಪಕ ಎಸ್‌ಯು ಅರುಣ್ ಕುಮಾರ್ ಅವರೊಂದಿಗೆ ತಾತ್ಕಾಲಿಕವಾಗಿ ʻಚಿಯಾನ್ 62ʼ ಎಂಬ ಯೋಜನೆಯಲ್ಲಿ ಕೆಲಸ ಮಾಡಲಿದ್ದಾರೆ. ಚಿತ್ರದಲ್ಲಿ ಎಸ್ ಜೆ ಸೂರ್ಯ ಮತ್ತು ಸೂರಜ್ ವೆಂಜರಮೂಡು ಪ್ರಮುಖ ಭಾಗಗಳಲ್ಲಿದ್ದಾರೆ.

ಈ ಚಿತ್ರವನ್ನು HR ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್‌ನಡಿಯಲ್ಲಿ ಶಿಬು ಥಮೀನ್ಸ್ ಮತ್ತು ರಿಯಾ ಶಿಬು ನಿರ್ಮಿಸಿಲಿದ್ದಾರೆ.

Continue Reading

ಕಾಲಿವುಡ್

Kanguva Movie: ʻಕಂಗುವʼ ಚಿತ್ರದಲ್ಲಿ ಮೂರು ಅವತಾರಗಳಲ್ಲಿ ಮಿಂಚಲಿದ್ದಾರಂತೆ ಸೂರ್ಯ

Kanguva Movie: ಶಿವ-ನಿರ್ದೇಶನದ ಈ ಸಿನಿಮಾ ಅಕ್ಟೋಬರ್ 10 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕಂಗುವಾದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ನಟಿಸಿದ್ದಾರೆ. ಈ ಸಿನಿಮಾ 38 ಜಾಗತಿಕ ಭಾಷೆಗಳಲ್ಲಿ 3D ನಲ್ಲಿ ಬಿಡುಗಡೆಯಾಗಲಿದೆ.

VISTARANEWS.COM


on

Kanguva Movie Suriya to have 3 different looks in Siva
Koo

ಬೆಂಗಳೂರು: ಈಗಾಗಲೇ ಸೂರ್ಯ ಅಭಿನಯದ ಕಂಗುವ ಸಿನಿಮಾ (Kanguva vs Alia Bhatt) ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. “ಕಂಗುವ” ಪ್ರೇಕ್ಷಕರಿಗೆ ಹೆಚ್ಚು ನಿರೀಕ್ಷಿತ ಚಿತ್ರವಾಗಿದೆ. ಶಿವ ನಿರ್ದೇಶನದ ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಸೂರ್ಯ ಸಂಪೂರ್ಣವಾಗಿ (Kanguva Movie) ಹೊಸ ಅವತಾರದಲ್ಲಿ ನಟಿಸಿದ್ದಾರೆ. ಮೂರು ಅವತಾರದಲ್ಲಿ ಸೂರು ಮಿಂಚುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಸೂರ್ಯ ಅವರ ಪ್ರತಿಯೊಂದು ಪಾತ್ರವು ಹಿಂದೆಂದೂ ನೋಡಿರದ ವಿಭಿನ್ನ ಲುಕ್‌ ಇರಲಿದೆ ಎಂದಿದ್ದಾರೆ.

ಶಿವ-ನಿರ್ದೇಶನದ ಈ ಸಿನಿಮಾ ಅಕ್ಟೋಬರ್ 10 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕಂಗುವಾದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ನಟಿಸಿದ್ದಾರೆ. ಈ ಸಿನಿಮಾ 38 ಜಾಗತಿಕ ಭಾಷೆಗಳಲ್ಲಿ 3D ನಲ್ಲಿ ಬಿಡುಗಡೆಯಾಗಲಿದೆ.

ಮೂಲಗಳ ಪ್ರಕಾರ ಅಮೆಜಾನ್‌ ಪ್ರೈಂ ಸಂಸ್ಥೆ ಬರೋಬ್ಬರಿ 80 ಕೋಟಿ ರೂ. ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಂಗುವ ಈ ವರ್ಷದ ಅತಿ ದೊಡ್ಡ ಮತ್ತು ದುಬಾರಿ ಚಿತ್ರ. ಅಂದಾಜು 350 ಕೋಟಿ ಬಜೆಟ್‌ನೊಂದಿಗೆ, ಇದು ಪುಷ್ಪ, ಸಿಂಗಂ ಮತ್ತು ಇತರ ಹಲವಾರು ದೊಡ್ಡ ಚಿತ್ರಗಳಿಗಿಂತ ದೊಡ್ಡ ಬಜೆಟ್‌ ಸಿನಿಮಾ ಅದಾಗಿದೆ. ಇದಲ್ಲದೆ, ಚಿತ್ರವನ್ನು ಏಳು ವಿವಿಧ ದೇಶಗಳಲ್ಲಿ ಚಿತ್ರೀಕರಿಸಲಾಗಿದೆ. 10,000 ಕ್ಕೂ ಹೆಚ್ಚು ಜನರನ್ನು ಒಳಗೊಂಡಿರುವ ಅತ್ಯಂತ ದೊಡ್ಡ ಬಜೆಟ್‌ ಸಿನಿಮಾ.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಹಲ್ಲೆ ದೃಶ್ಯ ಐಫೋನ್‌ನಲ್ಲಿ ರೆಕಾರ್ಡ್‌; ಸಿನಿಮಾ ಶೈಲಿಯಲ್ಲಿ ನಡೆದಿತ್ತು ಕೃತ್ಯ!

ವೆಟ್ರಿ ಪಳನಿಸಾಮಿ ಅವರ ಅದ್ಭುತ ಛಾಯಾಗ್ರಹಣ ಮತ್ತು ಗಾಯಕ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರವು ಹೆಚ್ಚು ಪ್ರದರ್ಶನವನ್ನು ಕಾಣುವ ನಿರೀಕ್ಷೆಯಿದೆ.

ಸ್ಟುಡಿಯೋ ಗ್ರೀನ್‌ ಬೆಂಬಲದಿಂದ ನಿರ್ದೇಶಕ ಶಿವ ಅವರ ವಿಶಿಷ್ಟ ಕಲ್ಪನೆಗೆ ಜೀವ ತುಂಬಿದೆ. ಹಾಲಿವುಡ್ ಶೈಲಿಯಲ್ಲಿ ಮೂಡಿ ಬಂದಿರುವ ಚಿತ್ರ ಸಿನಿರಸಿಕರ ಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ.

ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಪ್ರಮುಖರಾಗಿರುವ ಸ್ಟುಡಿಯೋ ಗ್ರೀನ್ ಮಾಲಕ ಕೆ.ಇ. ಜ್ಞಾನವೇಲ್ ರಾಜಾ ಅವರು ಕಳೆದ 16 ವರ್ಷಗಳಲ್ಲಿ ಸತತವಾಗಿ “ಸಿಂಗಂ” ಸರಣಿ, “ಪರುತಿ ವೀರನ್,” “ಸಿರುತೈ,” “ಕೊಂಬನ್,” “ನಾನ್ ಮಹನ್ ಅಲ್ಲಾ,” “ಮದ್ರಾಸ್,” “ಟೆಡ್ಡಿ,” ಮತ್ತು ತೀರಾ ಇತ್ತೀಚೆಗೆ ಬ್ಲಾಕ್ಬಸ್ಟರ್ ಹಿಟ್ ಗಳನ್ನು ನೀಡಿದ್ದಾರೆ.

“ಪಾತು ತಾಲಾ.” ಅವರು “ಬಾಹುಬಲಿ: ದಿ ಬಿಗಿನಿಂಗ್” ನಂತಹ ಪ್ರಮುಖ ಬ್ಲಾಕ್‌ಬಸ್ಟರ್‌ಗಳನ್ನು ವಿತರಿಸಿದ ಕಾರಣ ಅವರಿಂದಲೇ ಚಿತ್ರ ಬಿಡುಗಡೆ ಮಾಡಿಸಬೇಕು ಎಂದು ಹಲವಾರು ಮಂದಿ ನಿರ್ದೇಶಕರು ಕಾಯುವಂತಾಗಿದೆ.
ಸ್ಟುಡಿಯೋ ಗ್ರೀನ್ ಕಂಗುವಕ್ಕಾಗಿ ವಿಶ್ವದಾದ್ಯಂತ ಇರುವ ಪ್ರಮುಖ ವಿತರಕರೊಂದಿಗೆ ಕೈಜೋಡಿಸಿದೆ.

Continue Reading

ಕಾಲಿವುಡ್

Vijay Sethupathi: ವಿಜಯ್​ ಸೇತುಪತಿ ನಟನೆಯ’ʻವಿಡುತಲೈ 2ʼ ಫಸ್ಟ್‌ ಲುಕ್‌ ಔಟ್‌!

vijay sethupathi: ಆರ್‌ಎಸ್ ಇನ್‌ಫರ್‌ಟೈನ್‌ಮೆಂಟ್ ಪ್ರೈ. ಲಿಮಿಟೆಡ್ ಬ್ಯಾನರ್‌ದಲ್ಲಿ ಸಿದ್ದಗೊಳ್ಳುತ್ತಿರುವ ಸಿನಿಮಾದ ಫಸ್ಟ್ ಲುಕ್ ಯಾವ ರೀತಿ ಇರಬಹುದೆಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಮಿಕ್ಕಂತೆ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ.

VISTARANEWS.COM


on

Vijay Sethupathi 'Viduthalai 2' first look out now
Koo

ಬೆಂಗಳೂರು: ಕಳೆದ ವರ್ಷ ಬಿಡುಗಡೆಗೊಂಡಿದ್ದ ’ʻವಿಡುತಲೈʼ ’ ಚಿತ್ರವು ಯಶಸ್ಸು ಕಂಡು ಕಲಾವಿದರು ಸೇರಿದಂತೆ ತಂತ್ರಜ್ಞರುಗಳಿಗೆ ಅವಕಾಶಗಳು ಒಲಿದು ಬಂದವು. ಇದರಿಂದ ಸ್ಪೂರ್ತಿಗೊಂಡ ನಿರ್ದೇಶಕ ವೆಟ್ರಿ ಮಾರನ್ ಮತ್ತು ನಿರ್ಮಾಪಕ ಎಲ್ರಡ್ ಕುಮಾರ್ ಭಾಗ-2 ಬರುವುದಾಗಿ (Vijay Sethupathi) ಘೋಷಣೆ ಮಾಡಿದ್ದರು. ಬಹುತೇಕ ಹಿಂದಿನ ಚಿತ್ರದಲ್ಲಿ ಕೆಲಸ ಮಾಡಿದವರು ಇದರಲ್ಲೂ ಮುಂದುವರೆದಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಸಿನಿಮಾದ ಫಸ್ಟ್ ಲುಕ್‌ನ ಎರಡು ಪೋಸ್ಟರ್‌ನ್ನು ಅನಾವರಣಗೊಳಿಸಲಿದ್ದಾರೆ. ಎರಡು ಲುಕ್‌ಗಳಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ.

ತಾರಾಗಣದಲ್ಲಿ ವಿಜಯ್ ಸೇತುಪತಿ, ಸೂರಿ, ಮಂಜುವಾರಿಯರ್, ಅನುರಾಗ್ ಕಶ್ಯಪ್, ಕಿಶೋರ್, ಗೌತಂ ವಾಸುದೇವ್‌ಮೆನನ್, ರಾಜೀವ್ ಮೆನನ್, ಚೇತನ್ ಮುಂತಾದವರು ನಟಿಸಿದ್ದಾರೆ. ಸಂಗೀತ ಇಳಯರಾಜ, ಛಾಯಾಗ್ರಹಣ ಆರ್.ವೆಲ್ವರಾಜ್, ಕಲೆ ಜಾಕಿ, ಸಂಕಲನ ರಮರ್, ವಸ್ರ್ತಾಂಲಕಾರ ಉತ್ತರ ಮೆನನ್, ಸಾಹಸ ಪೀಟರ್ ಹೈನ್-ಸ್ವಂಟ್ ಶಿವ, ವಿಎಫ್‌ಎಕ್ಸ್ ಆರ್.ಹರಿಹರಸುಧನ್ ಅವರದಾಗಿದೆ.

ಆರ್‌ಎಸ್ ಇನ್‌ಫರ್‌ಟೈನ್‌ಮೆಂಟ್ ಪ್ರೈ. ಲಿಮಿಟೆಡ್ ಬ್ಯಾನರ್‌ದಲ್ಲಿ ಸಿದ್ದಗೊಳ್ಳುತ್ತಿರುವ ಸಿನಿಮಾದ ಫಸ್ಟ್ ಲುಕ್ ಯಾವ ರೀತಿ ಇರಬಹುದೆಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಮಿಕ್ಕಂತೆ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ.

ಇದನ್ನೂ ಓದಿ: Actor  Karthi: ನಟ ಕಾರ್ತಿ ಸಿನಿಮಾ ಸೆಟ್‌ನಲ್ಲಿ ಅವಘಡ; 20 ಅಡಿಯಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಸಾವು

ಈ ಚಿತ್ರಕ್ಕೆ ಎಲ್‌ರೆಡ್‌ ಕುಮಾರ್‌ ಬಂಡವಾಳ ಹೂಡಿದ್ದಾರೆ. ಜಿಯಾ ಮೆನನ್‌ ಬರೆದ ʻತುನೈವನ್‌ʼ ಸಣ್ಣ ಕಥೆ ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿದೆ.

ದೊಡ್ಡ ಬಜೆಟ್‌ ಸಿನಿಮಾ ʻವಿಡುತಲೈʼ!
ಎರಡು ಭಾಗಗಳಲ್ಲಿ ಬಿಡುಗಡೆಯಾಗುವ ಈ ಚಿತ್ರ ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗಿದೆ. ತಮಿಳಿನ ದುಬಾರಿ ಚಿತ್ರಗಳ ಪೈಕಿಗೆ ‘ವಿಡುತಲೈ’ ಸೇರ್ಪಡೆಯಾಗಲಿದೆ. ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್​ ನಿರ್ಮಾಣ ಮಾಡಲಾಗಿತ್ತು. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್​ ನಿರ್ಮಾಣಕ್ಕೂ ಬಳಸಲಾಗಿದೆ ಎನ್ನಲಾಗಿತ್ತು.

ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಇಳಯರಾಜ ಅವರು ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ವೇಲ್​ರಾಜ್​ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್​ ಜೈಂಟ್​ ಮೂವೀಸ್​ ವಹಿಸಿಕೊಂಡಿದೆ.

Continue Reading
Advertisement
BJP strongly condemns MLA Shivaram Hebbar statement about MP Vishweshwar Hegde Kageri says hariprakash konemane
ಕರ್ನಾಟಕ9 mins ago

Uttara Kannada News: ಸಂಸದ ಕಾಗೇರಿ ಬಗ್ಗೆ ಶಾಸಕ ಹೆಬ್ಬಾರ್‌ ಕೀಳುಮಟ್ಟದ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ

Chaluvadi Narayanaswamy
ಕರ್ನಾಟಕ1 hour ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ1 hour ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ2 hours ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ2 hours ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ2 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ2 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Tata Curvv
ಆಟೋಮೊಬೈಲ್2 hours ago

Tata Curvv : ಎಸ್​ಯುವಿ ವಿಭಾಗದಲ್ಲಿ ವಿಭಿನ್ನ ವಿನ್ಯಾಸದ ಕಾರನ್ನು ಪರಿಚಯಿಸಿದ ಮಾಡಿದ ಟಾಟಾ

Kempambudi lake encroachment cleared soon says DCM DK Shivakumar
ಕರ್ನಾಟಕ2 hours ago

Assembly Session 2024: ಕೆಂಪಾಂಬುದಿ ಕೆರೆ ಒತ್ತುವರಿ ಶೀಘ್ರ ತೆರವು; ಡಿ.ಕೆ.ಶಿವಕುಮಾರ್

Viral Video
ವೈರಲ್ ನ್ಯೂಸ್3 hours ago

Viral Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 10 ಅಡಿ ಮೇಲಕ್ಕೆ ಹಾರಿ ಬಿದ್ದ ತಾಯಿ, ಮಗ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌