ಟಾಲಿವುಡ್
Actor Mahesh Babu | ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಂದೆ ಆಸ್ಪತ್ರೆಗೆ ದಾಖಲು!
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ (Actor Mahesh Babu) ಬಾಬು ತಂದೆ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ತೆಲುಗು ನಟ ಮಹೇಶ್ ಬಾಬು (Actor Mahesh Babu) ಅವರ ತಂದೆ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕೃಷ್ಣ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಕೃಷ್ಣ ಅವರ ಪಿಆರ್ ಸುರೇಶ್ ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಮಹೇಶ್ ಬಾಬು ಅವರ ತಾಯಿ ನಿಧನ ಹೊಂದಿದ್ದರು. ಇದರ ಬೆನ್ನಲ್ಲೇ ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಕುರಿತು ಕೃಷ್ಣ ಅವರ ಪಿಆರ್ ಸುರೇಶ್ ಅವರು ಟ್ವೀಟ್ ಮಾಡಿದ್ದು, ʻʻಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಂದೆಯ ಆರೋಗ್ಯ ಸ್ಥಿರವಾಗಿದೆ. ಜನರಲ್ ಚೆಕಪ್‌ಗೆಂದು ಆಸ್ಪತ್ರೆಗೆ ಹೋಗಿದ್ದರು. ಯಾರೂ ಆತಂಕ ಪಡುವ ಅಗತ್ಯವಿಲ್ಲʼʼಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ | Mahesh Babu | ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಮಾತೃ ವಿಯೋಗ
ವರದಿ ಪ್ರಕಾರ ಉಸಿರಾಟದ ಸಮಸ್ಯೆ ಇದ್ದ ಕಾರಣ ನವೆಂಬರ್ 13ರಂದು ಹಿರಿಯ ನಟ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗುತ್ತಿದೆ. ಕೃಷ್ಣ ಅವರು ಟಾಲಿವುಡ್‌ನಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ | Mahesh Babu| ಮಹೇಶ್ ಬಾಬು-ತ್ರಿವಿಕ್ರಮ ಕಾಂಬಿನೇಷನ್‌ನಲ್ಲಿ ಬರುತ್ತಿದೆ ಹೊಸ ಸಿನಿಮಾ
South Cinema
Actress Kajal Aggarwal : ನಂದಮುರಿ ಬಾಲಕೃಷ್ಣಗೆ ಜೋಡಿಯಾಗಲಿದ್ದಾರೆ ನಟಿ ಕಾಜಲ್ ಅಗರ್ವಾಲ್
ನಂದಮುರಿ ಬಾಲಕೃಷ್ಣ ಅವರ ಎನ್‌ಬಿಕೆ 108 ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ (Actress Kajal Aggarwal) ನಾಯಕ ನಟಿಯಾಗಿ ನಟಿಸಲಿದ್ದಾರೆ. ಈ ವಿಚಾರವನ್ನು ಸಿನಿ ತಂಡ ಅಧಿಕೃತಗೊಳಿಸಿದೆ.
ಹೈದರಾಬಾದ್: ವೀರ ಸಿಂಹ ರೆಡ್ಡಿ ಸಿನಿಮಾ ಹಿಟ್ ಆದ ಸಂತಸದಲ್ಲಿ ನಟ ನಂದಮುರಿ ಬಾಲಕೃಷ್ಣ ಅವರಿದ್ದಾರೆ. ಅದರ ಬೆನ್ನಲ್ಲೇ ನಟ ಅನಿಲ್ ರವಿಪುಡಿ ಅವರ ಇನ್ನೂ ಹೆಸರಿಡದ ʼಎನ್‌ಬಿಕೆ 108ʼ ಸಿನಿಮಾ ನಟನೆಯಲ್ಲೂ ಬಿಜಿಯಾಗಿದ್ದಾರೆ. ಬಹುನಿರೀಕ್ಷಿತ ಸಿನಿಮಾವಾದ ಇದರಲ್ಲಿ ಬಾಲಯ್ಯ ಅವರಿಗೆ ಜತೆಯಾಗಿ ಯಾರು ನಟಿಸಲಿದ್ದಾರೆ ಎನ್ನುವ ಕುತೂಹಲ ಇಲ್ಲಿಯವರೆಗಿತ್ತು. ಆದರೆ ಇದೀಗ ಚಿತ್ರತಂಡ ಆ ಕುತೂಹಲಕ್ಕೆ ತೆರೆ ಎಳೆದಿದ್ದು, ನಟಿ ಕಾಜಲ್ ಅಗರ್ವಾಲ್ (Actress Kajal Aggarwal) ಅವರನ್ನು ಸಿನಿಮಾ ತಂಡಕ್ಕೆ ಕರೆತಂದಿರುವುದಾಗಿ ಘೋಷಿಸಿದೆ.
ಇದನ್ನೂ ಓದಿ: South Indian Cinema | ನಯನತಾರಾರಿಂದ ಕಾಜಲ್ ಅಗರ್ವಾಲ್‌ವರೆಗೆ: 2022ರಲ್ಲಿ ತಾಯಿಯಾದ ಸೆಲೆಬ್ರೆಟಿಗಳಿವರು!
ಈ ಬಗ್ಗೆ ತಮಿಳಿನ ಸಿನಿಮಾಗಳ ಪಿಆರ್ ಆಗಿರುವ ವಂಶಿ ಶೇಖರ್ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಎನ್‌ಬಿಕೆ 108 ಸಿನಿ ತಂಡ ಪ್ರತಿಭಾನ್ವಿತ ನಟಿ ಕಾಜಲ್ ಅಗರ್ವಾಲ್ ಅವರನ್ನು ಚಿತ್ರಕ್ಕೆ ಬರಮಾಡಿಕೊಂಡಿದೆ. ಸಿನಿಮಾ ಬಗ್ಗೆ ಇನ್ನೂ ಹೆಚ್ಚಿನ ಸುದ್ದಿಗಳು ಸದ್ಯದಲ್ಲೇ ಹೊರಬೀಳಲಿವೆ” ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಬಾಲಕೃಷ್ಣ ಅವರು ಈಗಾಗಲೇ ಎನ್‌ಬಿಕೆ 108 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯದಲ್ಲೇ ನಟಿ ಕಾಜಲ್ ಕೂಡ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎಂದು ಮಾಹಿತಿಯಿದೆ.
ಎನ್‌ಬಿಕೆ 108 ಸಿನಿಮಾ ಕಳೆದ ಆಗಸ್ಟ್‌ನಲ್ಲೇ ಘೋಷಣೆಯಾಗಿತ್ತು. ಈ ಬಗ್ಗೆ ನಿರ್ದೇಶಕ ಅನಿಲ್ ಅವರೇ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಅದಲ್ಲದೆ ಸಿನಿಮಾಕ್ಕೆ ಎಸ್.ಥಾಮನ್ ಅವರ ಸಂಗೀತ ನಿರ್ದೇಶನವಿರಲಿದೆ ಎಂದೂ ಅವರು ತಿಳಿಸಿದ್ದರು.
South Cinema
Niharika Konidela: ಮೆಗಾಸ್ಟಾರ್ ಕುಟುಂಬದ ಕುಡಿ ನಿಹಾರಿಕಾ ದಾಂಪತ್ಯದಲ್ಲಿ ಬಿರುಕು
ಇತ್ತೀಚಿನ ವರದಿಗಳ ಪ್ರಕಾರ, ನಿಹಾರಿಕಾ ಕೊನಿಡೆಲಾ (Niharika Konidela) ಮತ್ತು ಅವರ ಪತಿ ಚೈತನ್ಯ ಇಬ್ಬರೂ ಬೇರೆಯಾಗಿದ್ದು, ಸದ್ಯದಲ್ಲಿಯೇ ಡಿವೋರ್ಸ್ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ವದಂತಿಗಳ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರೂ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಚೈತನ್ಯ ತಮ್ಮ ಪ್ರೊಫೈಲ್‌ನಿಂದ ಮದುವೆಯ ಚಿತ್ರಗಳನ್ನು ಡಿಲಿಟ್ ಸಹ ಮಾಡಿದ್ದಾರೆ.
ಬೆಂಗಳೂರು: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರನ ಮಗಳು ನಿಹಾರಿಕಾ (Niharika Konidela) ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. 2020ರ ಡಿಸೆಂಬರ್‌ನಲ್ಲಿ ಉದಯಪುರದ ಉದಯವಿಲಾಸ್‌ನಲ್ಲಿ ಚೈತನ್ಯ ಜೊನ್ನಲಗಡ್ಡ ಅವರೊಂದಿಗೆ ನಿಹಾರಿಕಾ ಕೊನಿಡೇಲಾ ಅವರು ಅದ್ಧೂರಿಯಾಗಿ ಪ್ರೇಮ ವಿವಾಹವಾಗಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ನಿಹಾರಿಕಾ ಕೊನಿಡೆಲಾ ಮತ್ತು ಅವರ ಪತಿ ಚೈತನ್ಯ ಇಬ್ಬರೂ ಬೇರೆಯಾಗಿದ್ದು, ಸದ್ಯದಲ್ಲಿಯೇ ಡಿವೋರ್ಸ್ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ವದಂತಿಗಳ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರೂ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಚೈತನ್ಯ ತಮ್ಮ ಪ್ರೊಫೈಲ್‌ನಿಂದ ಮದುವೆಯ ಚಿತ್ರಗಳನ್ನು ಡಿಲಿಟ್ ಸಹ ಮಾಡಿದ್ದಾರೆ.
2020ರಲ್ಲಿ ನಡೆದ ಮದುವೆಯಲ್ಲಿ ತೆಲುಗು ಚಿತ್ರರಂಗದ ಜನಪ್ರಿಯ ನಟರುಗಳಾದ ಚಿರಂಜೀವಿ, ಪವನ್ ಕಲ್ಯಾಣ್, ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಸೇರಿದಂತೆ ಕೊನಿಡೇಲಾ ಕುಟುಂಬದ ಅನೇಕರು ಭಾಗವಹಿಸಿದ್ದರು. ಕೆಲವು ದಿನಗಳ ಹಿಂದೆ ನಿಹಾರಿಕಾ ತನ್ನ ಪತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ತಮ್ಮ ಮದುವೆಯ ಚಿತ್ರಗಳನ್ನು ಫೋಟೊಗಳನ್ನೂ ಡಿಲಿಟ್ ಮಾಡಿದ್ದಾರೆ. ಇದೀಗ ಜೋಡಿ ಬೇರೆಯಾಗುತ್ತಿದೆ ಎಂಬ ವದಂತಿಗಳು ಹರಿದಾಡಿದ್ದರೂ ಜೋಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: Yuzvendra Chahal | ನಮ್ಮ ದಾಂಪತ್ಯ ಜೀವನದಲ್ಲಿ ಒಡಕು ಮೂಡಿಲ್ಲ, ವದಂತಿ ಹಬ್ಬಿಸಬೇಡಿ ಎಂದ ಚಹಲ್
ತೆಲುಗು ಚಿತ್ರಗಳಾದ ʻಒಕ ಮನಸುʼ ಮತ್ತು ʻಹ್ಯಾಪಿ ವೆಡ್ಡಿಂಗ್ʼನಲ್ಲಿ ಕೆಲಸ ಮಾಡಿದ ನಿಹಾರಿಕಾ ಕೊನಿಡೆಲಾ, ಆಗಸ್ಟ್ 2020ರಲ್ಲಿ ಚೈತನ್ಯ ಜೊನ್ನಲಗಡ್ಡಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.
South Cinema
Allu Arjun: ಅಲ್ಲು ಅರ್ಜುನ್ ಜನುಮದಿನದಂದೇ ಪುಷ್ಪ 2 ಸಿನಿಮಾದ ಟೀಸರ್ ರಿಲೀಸ್?
ಪುಷ್ಪ 2 (Allu Arjun ಕಳೆದ ನವೆಂಬರ್‌ನಲ್ಲಿ ಲುಕ್ ಟೆಸ್ಟ್‌ನೊಂದಿಗೆ ಸೆಟ್ಟೇರಿತು. ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿದೆ. ಚಿತ್ರತಂಡ ಇಲ್ಲಿಯವರೆಗೆ ಚಿತ್ರೀಕರಿಸಿದ ಆಕ್ಷನ್ ಸೀಕ್ವೆನ್ಸ್‌ಗಳನ್ನು ಮೂರು ನಿಮಿಷಗಳ ಟೀಸರ್ ಅನ್ನು ತಯಾರಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ನಟ ಅಲ್ಲು ಅರ್ಜುನ್ (Allu Arjun) ಅವರ ಹುಟ್ಟುಹಬ್ಬ ದಿನವಾಗಿರುವ ಏಪ್ರಿಲ್ 8ರಂದು ಪುಷ್ಪ 2 ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧವಾಗಿದೆ. ಪುಷ್ಪ 2 ಕಳೆದ ನವೆಂಬರ್‌ನಲ್ಲಿ ಸೆಟ್ಟೇರಿತ್ತು. ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿದೆ.
ತೆಲುಗು ಚಲನಚಿತ್ರಗಳ ಟ್ವೀಟ್ ಪ್ರಕಾರ, ಚಿತ್ರತಂಡ ಇಲ್ಲಿಯವರೆಗೆ ಚಿತ್ರೀಕರಿಸಿದ ಆಕ್ಷನ್ ಸೀಕ್ವೆನ್ಸ್‌ಗಳನ್ನು ಮೂರು ನಿಮಿಷಗಳ ಟೀಸರ್ ಅನ್ನು ತಯಾರಿಸಿದ್ದಾರೆ. ಅಲ್ಲು ಅರ್ಜುನ್ ಅವರ ಜನ್ಮದಿನದಂದು ಏಪ್ರಿಲ್ 8 ರಂದು ಬಿಡುಗಡೆ ಮಾಡಲು ಯೋಜಿಸಿದ್ದಾರೆ ಎಂದು ವರದಿ ಮಾಡಿದೆ. ಎರಡನೇ ಭಾಗವು ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ನಡುವಿನ ಮುಖಾಮುಖಿಯ ಮೇಲೆ ಕೇಂದ್ರೀಕರಿಸುತ್ತದೆ. ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ.
ಅಲ್ಲು ಅರ್ಜುನ್ ಸಂಭಾವನೆ ಪ್ರಮಾಣ ಹೆಚ್ಚಳ
ಇತ್ತೀಚೆಗೆ ಅಲ್ಲು ಅರ್ಜುನ್ ಅವರ ನಟನೆಯ ಎಲ್ಲ ಸಿನಿಮಾಗಳು ಹಿಟ್ ಲಿಸ್ಟ್ ಸೇರುತ್ತಿರುವ ಹಿನ್ನೆಲೆ ನಟ ತನ್ನ ಸಂಭಾವನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಹಾಗೆಯೇ ಪುಷ್ಪಾ 2 ಸಿನಿಮಾದಲ್ಲಿ ನಟಿಸುವುದಕ್ಕೆ ಬರೋಬ್ಬರಿ 150 ಕೋಟಿ ರೂ. ಕೊಡಬೇಕು ಎಂದು ಚಿತ್ರತಂಡವನ್ನು ಕೇಳಿದ್ದಾರೆ. ಆದರೆ ಚಿತ್ರತಂಡ ಮತ್ತು ನಟ ಕುಳಿತು ಚರ್ಚೆ ನಡೆಸಿದ್ದು, 125 ಕೋಟಿ ರೂ. ಅನ್ನು ಕೊಡಲು ಒಪ್ಪಿಕೊಳ್ಳಲಾಗಿದೆ ಎಂದು ವರದಿಯಿದೆ.
ಪುಷ್ಪಾ 2 ಸಿನಿಮಾ ತಂಡವು ಎಲ್ಲ ಭಾಷೆಗಳಲ್ಲಿ ಸಿನಿಮಾ ತೆರೆಯ ಹಕ್ಕು ಕಾಯ್ದಿರಿಸಿಕೊಳ್ಳಲು ಒಟ್ಟು 1000 ಕೋಟಿ ರೂ. ಕೇಳಿತ್ತು ಎಂದು ಈ ಹಿಂದೆ ವರದಿಯಾಗಿತ್ತು. ಪುಷ್ಪಾ 2 ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆಯಲ್ಲಿ ಚಿತ್ರತಂಡ ಮತ್ತು ನಟ ಅಲ್ಲು ಅರ್ಜುನ್ ಇದ್ದಾರೆ. ಈ ಸಿನಿಮಾ ಬಾಹುಬಲಿ ಮತ್ತು ಕೆಜಿಎಫ್ 2 ಸಿನಿಮಾದ ದಾಖಲೆಗಳನ್ನೂ ಮುರಿಯಲಿದೆ ಎನ್ನುವ ವಿಶ್ವಾಸವನ್ನು ಅಲ್ಲು ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗಿದೆ. ತೆಲುಗಿನಲ್ಲಿ ಚಿತ್ರೀಕರಿಸಲಾದ ಪುಷ್ಪಾ ಮೊದಲ ಭಾಗವನ್ನು ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: Allu Arjun: ನಟಿ ಭಾನುಶ್ರೀ ಮೆಹ್ರಾರನ್ನು ಬ್ಲಾಕ್ ಮಾಡಿದ ಅಲ್ಲು ಅರ್ಜುನ್; ಸ್ಪಷ್ಟನೆ ನೀಡಿದ ನಟಿ
ಬುಡಕಟ್ಟು ಜನಾಂಗದ ಹುಡುಗಿಯಾಗಿ ಸಾಯಿ ಪಲ್ಲವಿ
ಮೂಲಗಳ ಪ್ರಕಾರ ಸಾಯಿ ಪಲ್ಲವಿ ಈಗಾಗಲೇ 10 ದಿನಗಳ ಕಾಲ ಶೂಟಿಂಗ್‌ಗಾಗಿ ಮೀಸಲಟ್ಟಿದ್ದು, ಚಿತ್ರದಲ್ಲಿ ಬುಡಕಟ್ಟು ಜನಾಂಗದ ಹುಡುಗಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ.
ಮೊದಲ ಪಾರ್ಟ್‌ನಲ್ಲಿ ಮಲಯಾಳಂ ಚಿತ್ರರಂಗದ ಫಹಾದ್ ಫಾಸಿಲ್ ಮತ್ತು ಕನ್ನಡ ಚಿತ್ರರಂಗದ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪುಷ್ಪಾ: ದಿ ರೈಸ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಲ್ಲಿಯವರೆಗೆ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಕಥಾ ನಾಯಕನ ಬದುಕಿನಲ್ಲಿ ಮುಂದೇನಾಯಿತು ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಿಗೆ ಇದೆ.
South Cinema
Actor Jr. NTR : ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ ಎಂದು RRR ಸಿನಿಮಾ ನಟ ಜೂ. ಎನ್‌ಟಿಆರ್ ಹೇಳಿದ್ದೇಕೆ?
ಆರ್‌ಆರ್‌ಆರ್ ಸಿನಿಮಾದ ನಟ ಜೂ.ಎನ್‌ಟಿಆರ್ (Actor Jr. NTR) ಅವರು ಅಭಿಮಾನಿಗಳು ಪದೇಪದೆ ಪ್ರಶ್ನೆ ಕೇಳುತ್ತಿದ್ದರೆ ಸಿನಿಮಾ ಮಾಡುವುದನ್ನೇ ನಿಲ್ಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ನಂತರ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
ಹೈದರಾಬಾದ್: ತೆಲುಗು ನಟ ಜೂನಿಯರ್ ಎನ್‌ಟಿಆರ್ (Actor Jr. NTR) ಮತ್ತು ರಾಮ್ ಚರಣ್ ನಟನೆಯ ಆರ್‌ಆರ್‌ಆರ್ ಸಿನಿಮಾ ಆಸ್ಕರ್ ಪ್ರಶಸ್ತಿಯನ್ನೂ ಗೆದ್ದುಕೊಳ್ಳುವ ಮೂಲಕ ದಾಖಲೆ ಬರೆದಿದೆ. ಅದೇ ಕಾರಣದಿಂದಾಗಿ ಈ ಇಬ್ಬರೂ ನಟರು ಇದೀಗ ಎಲ್ಲೆಡೆ ಭಾರೀ ಸುದ್ದಿಯಲ್ಲಿದ್ದಾರೆ. ಹೀಗಿರುವಾಗಲೇ ನಟ ಜೂನಿಯರ್ ಎನ್‌ಟಿಆರ್ ಆಘಾತಕಾರಿ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. “ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸಿಬಿಡುತ್ತೇನೆ” ಎಂದು ನಟ ಹೇಳಿದ್ದು, ಈ ವಿಚಾರ ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಇದನ್ನೂ ಓದಿ: Jr NTR: ಖಡಕ್ ವಾರ್ನಿಂಗ್ ಬೆನ್ನಲ್ಲೇ ಫೋಟೊಗಾಗಿ ಜ್ಯೂನಿಯರ್ ಎನ್‌ಟಿಆರ್ ಮೇಲೆ ಅಟ್ಯಾಕ್ ಮಾಡಿದ ಅಭಿಮಾನಿ
ಹೌದು. ಜೂ.ಎನ್‌ಟಿಆರ್ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ವಿಶ್ವಕ್ ಸೇನ್ ಅವರ ಕ ಧಮ್ಕಿ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಆ ವೇಳೆ ಅಭಿಮಾನಿಗಳು “ನಿಮ್ಮ ಮುಂದಿನ ಸಿನಿಮಾ ಯಾವುದು? ಯಾವಾಗ ಬಿಡುಗಡೆಯಾಗುತ್ತದೆ?” ಎಂದು ನಟನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ನಟ, “ನೀವು ಇದೇ ರೀತಿ ಪದೇಪದೆ ನನ್ನ ಮುಂದಿನ ಸಿನಿಮಾ ಬಗ್ಗೆ ಕೇಳುತ್ತಿದ್ದರೆ ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸಿಬಿಡುತ್ತೇನೆ” ಎಂದು ಹೇಳಿದ್ದಾರೆ.
ಇದಾದ ಕೆಲವೇ ಸೆಕೆಂಡುಗಳಲ್ಲಿ ನಟ “ಇಲ್ಲ, ನನಗೆ ಸಿನಿಮಾ ಮಾಡುವುದನ್ನು ನಿಲ್ಲಿಸುವ ಯಾವುದೇ ಆಲೋಚನೆ ಇಲ್ಲ” ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ಪ್ರಭಾಸ್ ಅವರ ಮುಂದಿನ ಸಿನಿಮಾ ʼಕೊರಟಲ ಶಿವʼ ಈ ಸಿನಿಮಾದಲ್ಲಿ ನಟಿ ಜಾನ್ಹ್ವಿ ಕಪೂರ್ ಅವರು ನಟಿಸಲಿದ್ದಾರೆ.
ಇದನ್ನೂ ಓದಿ: Actor Jr NTR: ಆಸ್ಕರ್ ಕಾರ್ಯಕ್ರಮಕ್ಕೆ ದುಬಾರಿ ವಾಚ್ ತೊಟ್ಟಿದ್ದ ಜೂ. ಎನ್‌ಟಿಆರ್! ಆ ವಾಚ್ ಬೆಲೆ ಎಷ್ಟು?
ಇದೇ ಕಾರ್ಯಕ್ರಮದಲ್ಲಿ ಆರ್‌ಆರ್‌ಆರ್ 2 ಬಗ್ಗೆಯೂ ಜೂ.ಎನ್‌ಟಿಆರ್ ಮಾತನಾಡಿದ್ದಾರೆ. “ಆ ಸಿನಿಮಾಕ್ಕಾಗಿ ನಾನೂ ಕೂಡ ಕಾತುರದಿಂದ ಕಾಯುತ್ತಿದ್ದೇನೆ. ಸಿನಿಮಾ ಚಿತ್ರೀಕರಣದ ಬಗ್ಗೆ ರಾಜಮೌಳಿ ಅವರು ಇನ್ನೂ ಯಾವುದೇ ಮಾಹಿತಿಯನ್ನು ನಮಗೆ ಕೊಟ್ಟಿಲ್ಲ. ಆದರೆ ಆ ಸಿನಿಮಾ ವೇಳೆಗೆ ನಾವು ನಮ್ಮೆಲ್ಲ ಕೆಲಸಗಳನ್ನು ಮುಗಿಸಿಕೊಂಡಿರಬೇಕಾಗುತ್ತದೆ. ಅದಕ್ಕೆ ಸಂಪೂರ್ಣ ಸಮಯವನ್ನು ಕೊಡಬೇಕಾಗುತ್ತದೆ” ಎಂದು ಹೇಳಿದ್ದಾರೆ.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ24 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ