Amrutha Prem: ಜನುಮದಿನದ ಸಂಭ್ರಮದಲ್ಲಿ 'ಟಗರು ಪಲ್ಯ' ಬೆಡಗಿ ಅಮೃತಾ ಪ್ರೇಮ್ - Vistara News

ಸಿನಿಮಾ

Amrutha Prem: ಜನುಮದಿನದ ಸಂಭ್ರಮದಲ್ಲಿ ‘ಟಗರು ಪಲ್ಯ’ ಬೆಡಗಿ ಅಮೃತಾ ಪ್ರೇಮ್

‘ಟಗರು ಪಲ್ಯ’ ಚಿತ್ರದಲ್ಲಿ ಅಮೃತಾ ಪ್ರೇಮ್ (Amrutha Prem) ಹಳ್ಳಿ ಹುಡುಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು, ವರ್ಕ್ ಶಾಪ್ ಮೂಲಕ ಸಾಕಷ್ಟು ಕಲಿತು ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಂಡ್ಯ ಭಾಗದ ಕಥೆಯನ್ನೊಳ್ಳಗೊಂಡ ಈ ಚಿತ್ರದಲ್ಲಿ ಅಲ್ಲಿನ ಸೊಗಡಿನ ಭಾಷೆ ಕಲಿತು ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

VISTARANEWS.COM


on

Amrutha Prem in 'Tagaru Palya' on birthday celebrations
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಡಾಲಿ ಪಿಕ್ಚರ್ಸ್ ಮೂಲಕ ಸ್ಯಾಂಡಲ್‌ವುಡ್‌ ಅಂಗಳಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ (Amrutha Prem) ಎಂಟ್ರಿ ಕೊಟ್ಟಿದ್ದಾರೆ. ಉಮೇಶ್ ಕೆ ಕೃಪ ನಿರ್ದೇಶನದ ‘ಟಗರು ಪಲ್ಯ’ ಸಿನಿಮಾ ಮೂಲಕ ಕರುನಾಡ ಜನರ ಮುಂದೆ ನಾಯಕ ನಟಿಯಾಗಿ ಅಮೃತಾ ಪ್ರೇಮ್ ಪರಿಚಿತಗೊಳ್ಳುತ್ತಿದ್ದಾರೆ. ಈಗಾಗಲೇ ‘ಟಗರು ಪಲ್ಯ’ ಲುಕ್‌ನಲ್ಲಿ ಸಿನಿ ಪ್ರೇಕ್ಷಕರಿಂದ ಅಪಾರ ಪ್ರೀತಿ ಪಡೆದುಕೊಂಡಿರುವ ಅಮೃತಾ ಪ್ರೇಮ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ವಿಶೇಷ ದಿನದಂದು ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿ ನಾಯಕ ನಟಿಗೆ ಶುಭ ಕೋರಿದೆ.

‘ಟಗರು ಪಲ್ಯ’ ಚಿತ್ರದಲ್ಲಿ ಅಮೃತಾ ಪ್ರೇಮ್ ಹಳ್ಳಿ ಹುಡುಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು, ವರ್ಕ್ ಶಾಪ್ ಮೂಲಕ ಸಾಕಷ್ಟು ಕಲಿತು ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಂಡ್ಯ ಭಾಗದ ಕಥೆಯನ್ನೊಳ್ಳಗೊಂಡ ಈ ಚಿತ್ರದಲ್ಲಿ ಅಲ್ಲಿನ ಸೊಗಡಿನ ಭಾಷೆ ಕಲಿತು ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಉಮೇಶ್ ಕೆ ಕೃಪ ʻʻಹಳ್ಳಿ ಹುಡುಗಿ ಪಾತ್ರ ಅಂದ್ರೆ ಸುಲಭದ ವಿಷಯವಲ್ಲ. ಅದಕ್ಕೆ ಆದಷ್ಟು ಬೇಗ ಒಗ್ಗಿಕೊಂಡು ಆ ನಯ ನಾಜೂಕನ್ನು ಬಹಳ ಬೇಗ ಅರ್ಥಮಾಡಿಕೊಂಡು ಅಮೃತಾ ಪ್ರೇಮ್ ನಟಿಸಿದ್ದಾರೆ. ಭಾಷೆ ಮೇಲೆ ಅವರಿಗೆ ಹಿಡಿತ ಇದೆ. ಮಂಡ್ಯ ಸ್ಲ್ಯಾಂಗ್ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಕಂಪ್ಲೀಟ್ ಆಗಿದ್ದು ಬಹಳ ಬೇಗ ಎಲ್ಲವನ್ನು ಕಲಿತುಕೊಂಡು ಅಭಿನಯ ಮಾಡಿದ್ದಾರೆʼʼ ಎಂದು ಹೇಳಿದರು.

ಇದನ್ನೂ ಓದಿ: Dolly Dhananjay | ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಸಿನಿಮಾ: ಡಿಸೆಂಬರ್ ಮೊದಲ ವಾರದಿಂದ ‘ಟಗರು ಪಲ್ಯ’ ಶೂಟಿಂಗ್‌ ಶುರು

ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ‘ಟಗರು ಪಲ್ಯ. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. ‘ಇಕ್ಕಟ್’ ಖ್ಯಾತಿಯ ನಾಗಭೂಷಣ್‌ ನಾಯಕನಾಗಿ ಮಿಂಚಲಿದ್ದಾರೆ. ಈ ಚಿತ್ರವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

‘ಟಗರು ಪಲ್ಯ’ ಕಟೆಂಟ್ ಆಧಾರಿತ ಸಿನಿಮಾವಾಗಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಇದನ್ನೂ ಓದಿ: Kannada New Movie | ಸೆಟ್ಟೇರಲು ಸಜ್ಜಾಗಿದೆ ಡಾಲಿ ಪಿಕ್ಚರ್ಸ್ ನಿರ್ಮಾಣದ ʻಟಗರು ಪಲ್ಯʼ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Shekhar Suman: ಲೈಂಗಿಕ ಕಾರ್ಯಕರ್ತರು, ವೇಶ್ಯೆಯರ ನಡುವೆ ವ್ಯತ್ಯಾಸಗಳಿವೆ ಎಂದ ʻಹೀರಾಮಂಡಿʼನಟ!

Shekhar Suman: ಸಂದರ್ಶನದಲ್ಲಿ ನಟ ಶೇಖರ್ ಸುಮನ್ ಮಾತನಾಡಿ ʻʻವೇಶ್ಯೆಯರನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಅನ್ಯಾಯವಾಗಿ ಲೈಂಗಿಕ ಕಾರ್ಯಕರ್ತೆಯರೆಂದು ಲೇಬಲ್ ಮಾಡಲಾಗುತ್ತದೆʼʼ ಎಂದು ಹೇಳಿದರು.ಹೀರಾಮಂಡಿ: ದಿ ಡೈಮಂಡ್ ಬಜಾರ್‌ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಸಂಜೀದಾ ಶೇಖ್, ಅದಿತಿ ರಾವ್ ಹೈದರಿ, ಶರ್ಮಿನ್ ಸೆಗಲ್ ಮೆಹ್ತಾ, ಫರೀದಾ ಜಲಾಲ್, ಫರ್ದೀನ್ ಖಾನ್ ಮತ್ತು ಅಧ್ಯಯನ್ ಸುಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

VISTARANEWS.COM


on

Shekhar Suman Says Sex Workers Keep Society
Koo

ಬೆಂಗಳೂರು: ನಟ ಶೇಖರ್ ಸುಮನ್ (Shekhar Suman) ಅವರು ಲೈಂಗಿಕ ಕಾರ್ಯಕರ್ತರು ಮತ್ತು ವೇಶ್ಯೆಯರ ನಡುವಿನ ವ್ಯತ್ಯಾಸದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇವರ ಸಮಾಜದ ಉತ್ಪನ್ನಗಳು ಮತ್ತು ಅವರನ್ನು ಒಟ್ಟಿಗೆ ವರ್ಗೀಕರಿಸಬಾರದು ಎಂದು ಸಂದರ್ಶನದಲ್ಲಿ ಹೇಳಿದರು. ʻʻವೇಶ್ಯೆಯರನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಅನ್ಯಾಯವಾಗಿ ಲೈಂಗಿಕ ಕಾರ್ಯಕರ್ತೆಯರೆಂದು ಲೇಬಲ್ ಮಾಡಲಾಗುತ್ತದೆʼʼ ಎಂದು ಹೇಳಿದರು.

“ವೇಶ್ಯೆಯರನ್ನು ಈ ರೀತಿ ಲೈಂಗಿಕ ಕಾರ್ಯಕರ್ತೆಯರೆಂದು ತೋರಿಸುವಂತೆ ಮಾಡಿದ್ದು ಸಮಾಜವೇ. ಯಾವುದೇ ಮಹಿಳೆ ಆಯ್ಕೆಯಿಂದ ವೇಶ್ಯೆಯಾಗುವುದಿಲ್ಲ. ಆದರೆ ಸಂದರ್ಭಗಳು ಹೆಚ್ಚಾಗಿ ಮಹಿಳೆಯನ್ನು ಲೈಂಗಿಕ ಕಾರ್ಯಕರ್ತೆಯಾಗುವಂತೆ ಮಾಡುತ್ತವೆ. ಈ ಎಲ್ಲದರ ಹೊರತಾಗಿಯೂ, ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ. ಪುರುಷರ ಲೈಂಗಿಕ ಹಸಿವನ್ನು ಲೈಂಗಿಕ ಕಾರ್ಯಕರ್ತರಿಂದ ನೀಗಿಸಿಕೊಳ್ಳುತ್ತಿದ್ದಾರೆʼʼಎಂದರು.

ಶೇಖರ್ ಸುಮನ್ ಮಾತನಾಡಿ ʻʻಹೀರಾಮಂಡಿಯಲ್ಲಿ ಜನರು ಕಲೆ ಮತ್ತು ಸಂಗೀತದಂತಹ ವಿವಿಧ ಕೌಶಲ್ಯಗಳನ್ನು ಕಲಿಯಲು ಹೋದ ಸ್ಥಳವಾಗಿತ್ತು. ಮಕ್ಕಳನ್ನು ಅಲ್ಲಿಗೆ ಕಳುಹಿಸಲಾಗುತ್ತಿತ್ತು. ನವಾಬರು ಅವರಿಂದ ಅನೇಕ ವಿಚಾರಗಳನ್ನು ಕಲಿಯುತ್ತಿದ್ದರು. ಹೀರಾಮಂಡಿಯವರ ಕೊಡುಗೆ ಅಪಾರವಾಗಿತ್ತು, ಅದೊಂದು ಸಂಸ್ಥೆಯಾಗಿತ್ತು, ಆದರೆ ನಾವು ಯಾವಾಗಲೂ ವೇಶ್ಯೆಯರನ್ನು ವಿಭಿನ್ನ ಅರ್ಥದಲ್ಲಿ ನೋಡುತ್ತಿದ್ದೇವು. ಹೀರಾಮಂಡಿಯಲ್ಲಿ, ಸ್ವಾತಂತ್ರ್ಯ ಚಳವಳಿಗೆ ವೇಶ್ಯೆಯರ ಕೊಡುಗೆಯನ್ನು ಸಹ ತೋರಿಸಲಾಗಿದೆʼʼಎಂದರು. ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಶೇಖರ್ ಸುಮನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ನಟ ಶೇಖರ್‌ ಸುಮನ್‌, ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರಾ ಬಿಜೆಪಿ ಸೇರ್ಪಡೆ

ಹೀರಾಮಂಡಿ: ದಿ ಡೈಮಂಡ್ ಬಜಾರ್‌ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಸಂಜೀದಾ ಶೇಖ್, ಅದಿತಿ ರಾವ್ ಹೈದರಿ, ಶರ್ಮಿನ್ ಸೆಗಲ್ ಮೆಹ್ತಾ, ಫರೀದಾ ಜಲಾಲ್, ಫರ್ದೀನ್ ಖಾನ್ ಮತ್ತು ಅಧ್ಯಯನ್ ಸುಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಟ ಶೇಖರ್‌ ಸುಮನ್‌(Shekhar Suman) ಕೆಲವು ದಿನಗಳ ಹಿಂದೆ ಬಿಜೆಪಿ(BJP). ಸೇರ್ಪಡೆಗೊಂಡಿದ್ದರು. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶೇಖರ್‌ ಸುಮನ್‌ ಮತ್ತು ರಾಧಿಕಾರನ್ನು ಬಿಜೆಪಿ ಪ್ರಧಾನ ಕಾರ್ಯಕದರ್ಶಿ ವಿನೋದ್‌ ತಾವ್ಡೆ ಸ್ವಾಗತಿಸಿದ್ದರು.

ಈ ವೇಳೆ ಶೇಖರ್‌ ಸುಮನ್‌ ಮಾತನಾಡಿದ್ದು, ನಿನ್ನೆಯವರೆಗೆ ನಾನು ಇಲ್ಲಿ ಬಂದು ಕೂರುತ್ತೇನೆ ಎಂದು ಭಾವಿಸಿಯೇ ಇರಲಿಲ್ಲ. ಜೀವನದಲ್ಲಿ ನಡೆದ ಅನೇಕ ಘಟನೆಗಳಿಂದಾಗಿ ನಾನು ಇಂದು ಇಲ್ಲಿ ಬಂದಿದ್ದೇನೆ. ಬಹಳ ಧನಾತ್ಮಕ ಚಿಂತನೆಯೊಂದಿಗೆ ನಾನು ಇಲ್ಲಿ ಬಂದಿದ್ದೇನೆ. ಇಲ್ಲಿ ಬರಲು ಪ್ರೇರೇಪಿಸಿದ ದೇವರಿಗೆ ನಾನು ಆಭಾರಿ ಎಂದು ಹೇಳಿದ್ದರು.

Continue Reading

ಸಿನಿಮಾ

Richa Chadha: ಖ್ಯಾತ ನಿರ್ದೇಶಕ ಸೆಟ್‌ನಲ್ಲಿ ಮದ್ಯ ಸೇವಿಸಿ ಫಜೀತಿಗೆ ಒಳಗಾದ ರಿಚಾ ಚಡ್ಡಾ!

Richa Chadha : ರಿಚಾ ಚಡ್ಡಾ ಅವರು ಹಲವು ವೆಬ್​ ಸರಣಿಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಇದೀಗ ‘ಹೀರಾಮಂಡಿ’ ಚಿತ್ರದಲ್ಲಿಯೂ ನಟಿ ಅಭಿನಯಿಸಿದ್ದಾರೆ. ರಿಚಾ ಚಡ್ಡ ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. `ಗಾಂಗ್ಸ್‌ ಆಫ್‌ ವಸೇಪುರ್‌’ ಸಿನಿಮಾ ಮೂಲಕ ಮತ್ತಷ್ಟು ಜನಪ್ರೀಯತೆ ಪಡೆದ ರಿಚಾ ಚಡ್ಡಾ (Richa Chadha) ಅವರು ಸ್ವಾರ್‌ ನಿರ್ದೇಶಕರ ಸೆಟ್‌ ಶೂಟ್‌ ವೇಳೆ ಮದ್ಯ ಸೇವಿಸಿ ಸಮಸ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಟಿ ಬಾಯ್ಬಿಟ್ಟಿದ್ದಾರೆ.

VISTARANEWS.COM


on

Richa Chadha drank alcohol to perform Sanjay Leela Bhansali’s Heeramandi
Koo

ಬೆಂಗಳೂರು: `ಗಾಂಗ್ಸ್‌ ಆಫ್‌ ವಸೇಪುರ್‌’ ಸಿನಿಮಾ ಮೂಲಕ ಮತ್ತಷ್ಟು ಜನಪ್ರೀಯತೆ ಪಡೆದ ರಿಚಾ ಚಡ್ಡಾ (Richa Chadha) ಅವರು ಸ್ವಾರ್‌ ನಿರ್ದೇಶಕರ ಸೆಟ್‌ ಶೂಟ್‌ ವೇಳೆ ಮದ್ಯ ಸೇವಿಸಿ ಸಮಸ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಟಿ ಬಾಯ್ಬಿಟ್ಟಿದ್ದಾರೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ʻಹೀರಾಮಂಡಿʼ ಸಿನಿಮಾದಲ್ಲಿ (Sanjay Leela Bhansali’s Heeramandi) ನಟಿ ಒಂದು ದೃಶ್ಯದಲ್ಲಿ ಅಭಿನಯಿಸಲು ʻಜಿನ್ʼ ಸೇವಿಸಿದ್ದರಂತೆ. ದೃಶ್ಯ ರಿಯಲ್‌ ಆಗಿ ಬರಬೇಕು ಎಂದು ಮದ್ಯ ಸೇವಿಸಿದ ಪರಿಣಾಮ 30-40 ರೀಟೇಕ್‌ಗಳನ್ನು ಪಡೆದುಕೊಂಡು, ದೃಶ್ಯ ನಿಭಾಯಿಸಲು ಆಗದೇ ಪರದಾಡಿದ್ದರಂತೆ.

ಈ ಬಗ್ಗೆ ನಟಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿ ʻʻಸ್ವಲ್ಪ ಜಿನ್ ಸೇವಿಸಿ ನಟಿಸೋಣ ಎಂದು ಕೊಂಡು ಎಂದಿಗೂ ಕುಡಿಯದ ನಾನು ಜಿನ್ ಸೇವಿಸಿದೆ. ಜಿನ್ ಕುಡಿದ ಕೆಲವೇ ಹೊತ್ತಿನಲ್ಲಿ ದೃಶ್ಯವನ್ನು ನಿಭಾಯಿಸಲು ಕಷ್ಟಕವಾಯ್ತು. ನಟನೆ ಚೆನ್ನಾಗಿ ಆಗುವ ಬದಲಿಗೆ ಇನ್ನೂ ಕೆಟ್ಟದಾಯ್ತ. ಕೇವಲ ಒಂದು ಸೀನ್​ಗೆ ಸುಮಾರು30-40 ರೀಟೇಕ್‌ಗಳನ್ನು ಪಡೆದುಕೊಂಡೆ.  ಸರಿಯಾಗಿ ನಟಿಸಲು ಮಾತ್ರವಲ್ಲ, ಸರಿಯಾಗಿ ನಿಲ್ಲಲು ಸಹ ಸಾಧ್ಯವಾಗಲಿಲ್ಲ’ ಎಂದಿದ್ದಾರೆ ರಿಚಾ ಚಡ್ಡಾ.ʼʼ

ರಿಚಾ ಚಡ್ಡಾ ಅವರು ಹಲವು ವೆಬ್​ ಸರಣಿಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಇದೀಗ ‘ಹೀರಾಮಂಡಿ’ ಚಿತ್ರದಲ್ಲಿಯೂ ನಟಿ ಅಭಿನಯಿಸಿದ್ದಾರೆ. ರಿಚಾ ಚಡ್ಡ ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ಮಸಾನ್’, ಫಕ್ರೆ, ಸರಬ್​ಜಿತ್ ಇನ್ನೂ ಕೆಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿರುವ ‘ಶಕೀಲ’ ಸಿನಿಮಾನಲ್ಲಿಯೂ ರಿಚಾ ಚಡ್ಡ ನಟಿಸಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿಯವರ ( Sanjay Leela Bhansali) ಹದಿನಾಲ್ಕು ವರ್ಷಗಳ ಕನಸಿನ ಕೂಸಾಗಿರುವ ನೆಟ್‌ಫ್ಲಿಕ್ಸ್ ಸೀರೀಸ್ ʻಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಚಿತ್ರದ (Hiramandi: The Diamond Bazaar) ಬಹು ನಿರೀಕ್ಷಿತ ಟ್ರೈಲರ್‌ ಏಪ್ರಿಲ್‌ 10ರಂದು ಬಿಡುಗಡೆಯಾಗಿತ್ತು. ಅನೇಕ ನಟಿಯರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದರು. ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಸಿರೀಸ್‌ ಸ್ಟ್ರೀಮಿಂಗ್‌ ಆಗುತ್ತಿದೆ.

ಇದನ್ನೂ ಓದಿ: ನಾವೇನು ಫ್ರಿಡ್ಜ್‌ನಲ್ಲಿ ಇಡಲು ಅಣುಬಾಂಬ್‌ ತಯಾರಿಸಿಲ್ಲ; ಅಯ್ಯರ್‌ ‘ಪಾಕ್‌’ ಹೇಳಿಕೆಗೆ ಯೋಗಿ ಖಡಕ್‌ ಉತ್ತರ

ಹೀರಾಮಂಡಿ: ದಿ ಡೈಮಂಡ್ ಬಜಾರ್’ನ ಮೊದಲ ಹಾಡು ‘ಸಕಲ್ ಬನ್’ (Sakal Ban) ಮಿಸ್ ವರ್ಲ್ಡ್ 2024 ರ ಫಿನಾಲೆಯಲ್ಲಿ ಲಾಂಚ್‌ ಆಗಿತ್ತು. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಸೇರಿದಂತೆ ಅನೇಕರು ಈ ಹಾಡಿಗೆ ರ್‍ಯಾಂಪ್‌ ವಾಕ್‌ ಮಾಡಿದ್ದರು.

ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳೆಂದರೆ ಅಲ್ಲೊಂದು ಅದ್ಭುತ ಮಾಯಾಲೋಕವನ್ನೇ ನಾವು ನಿರೀಕ್ಷಿಸಬಹುದು. “ಹೀರಾಮಂಡಿ” ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ವೇಶ್ಯೆಯರ ಜೀವನದಲ್ಲಿ ಪ್ರೀತಿ ಮತ್ತು ದ್ರೋಹದ ವಿಷಯಗಳನ್ನು ಅನ್ವೇಷಿಸುತ್ತದೆ. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್​ ಹೈದರಿ, ರಿಚಾ ಚಡ್ಡಾ, ಶರ್ಮಿನ್​ ಸೇಗಲ್​, ಸಂಜೀದಾ ಶೇಖ್​ ಮುಂತಾದವರು ‘ಹೀರಾಮಂಡಿ’ ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ.

Continue Reading

ಸಿನಿಮಾ

Abdu Rozik: ಎಂಗೇಜ್‌ ಆದ ಬಿಗ್‌ ಬಾಸ್‌ ಖ್ಯಾತಿಯ ಅಬ್ದು ರೋಜಿಕ್!

Abdu Rozik: 20 ವರ್ಷದ ಅಬ್ದು ರೋಜಿಕ್ 19 ವರ್ಷದ ಯುವತಿಯನ್ನು ಮದುವೆಯಾಗಲಿದ್ದಾರೆ. ಅಭಿಮಾನಿಗಳು ಕೂಡ ಅಬ್ದು ಮದುವೆಗಾಗಿ ಕಾಯುತ್ತಿದ್ದಾರೆ. ಅಬ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿಗ್ ಬಾಸ್’ ನಿಂದಾಗಿ ಅಬ್ದು ಖ್ಯಾತಿ ಮತ್ತು ಜನಪ್ರಿಯತೆ ಹೆಚ್ಚಾಯಿತು. ಸಲ್ಮಾನ್ ಖಾನ್ ಅವರ ಜೊತೆಗೂ ಅಬ್ದು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ.

VISTARANEWS.COM


on

Abdu Rozik Bigg Boss 16 gets engaged
Koo

ಬೆಂಗಳೂರು: ಹಿಂದಿ ಬಿಗ್‌ ಬಾಸ್‌ ಸೀಸನ್‌ 16ರ (Bigg Boss 16 fame Abdu Rozik) ಖ್ಯಾತಿಯ ಅಬ್ದು ರೋಜಿಕ್ (Abdu Rozik) ತಾವು ಎಂಗೇಜ್‌ ಆಗಿರುವ ವಿಚಾರವನ್ನು ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಅಬ್ದು ರೋಜಿಕ್ ಇದೀಗ ನಿಶ್ಚಿತಾರ್ಥ ಸಮಾರಂಭದ ಕೆಲವು ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಜತೆಗೆ ಮದುವೆಯಾಗುತ್ತಿರುವ ಹುಡುಗಿ ಹೆಸರನ್ನು ರಿವೀಲ್‌ ಮಾಡಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅಮೀರಾ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಜುಲೈನಲ್ಲಿ ಮದುವೆಯಾಗುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಮದುವೆಗೆ ಸಲ್ಮಾನ್ ಖಾನ್ ಭಾಗಿಯಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಅಬ್ದು ರೋಜಿಕ್ ನಿಶ್ಚಿತಾರ್ಥದ ಸಮಾರಂಭಕ್ಕಾಗಿ ಸಾಂಪ್ರದಾಯಿಕ ಉಡುಪನ್ನು ಧರಿಸಿರುವುದನ್ನು ಕಾಣಬಹುದು. ಭಾವಿ ಪತ್ಮಿ ಅಮೀರಾ ಮುಖವು ಬುರ್ಖಾದಿಂದ ಮುಚ್ಚಲ್ಪಟ್ಟಿತ್ತು. ಅಬ್ದು ಹೃದಯ ಆಕಾರದ ಉಂಗುರವನ್ನು ಹಿಡಿದಿರುವುದು ಕಂಡುಬಂದಿದೆ. ದುಬೈ ಮಾಲ್‌ನಲ್ಲಿ ಇವರ ಭೇಟಿ ನಡೆದಿದೆ. ಮೊದಲ ಬಾರಿಗೆ ಅಬ್ದು ಅವರು ಅಮೀರಾ ಅವರನ್ನು ನೋಡಿದರು. ಮೊದಲ ನೋಟದಲ್ಲೇ ಅವರು ಸಾಕಷ್ಟು ಇಷ್ಟ ಆದರು. ಈಗ ಇವರು ಮದುವೆ ಆಗುತ್ತಿದ್ದಾರೆ.

ಅಬ್ದು ಅವರು ಅಮೀರಾ ಕುರಿತಾಗಿ ಮಾತನಾಡಿ ʻʻಅಮೀರಾ ಸುಂದರವಾದ ಉದ್ದ ಕೂದಲು ಮತ್ತು ಚೆಂದದ ಕಣ್ಣುಗಳನ್ನು ಹೊಂದಿದ್ದಾಳೆ” ಎಂದು ಹೇಳಿದರು. ಅಮೀರಾ ಶಾರ್ಜಾದಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಓದುತ್ತಿದ್ದಾರೆ ಎಂದು ಹೇಳಿಕೆ ನೀಡಿದರು. ಅಬ್ದು ಮಾತನಾಡಿ ʻʻಅಮೀರಾ ನಾನು ಕುಳ್ಳುಗಿದ್ದರೂ ನನ್ನ ಪ್ರೀತಿಯನ್ನು ಒಪ್ಪಿಕೊಂಡಿರುವುದು ಸಂತೋಷವಾಗಿದೆ. ಜುಲೈ 7 ರಂದು ಮದುವೆಯಾಗಲಿದ್ದೇವೆ. ಸಲ್ಮಾನ್ ಖಾನ್ ನಮಗೆ ಆಶೀರ್ವದಿಸಲು ಮದುವೆಗೆ ಬರುತ್ತಾರೆ. ಅಮೀರಾ ನನ್ನ ಜೀವನದಲ್ಲಿ ಬಂದಿರುವುದು ನನ್ನ ಅದೃಷ್ಟʼʼಎಂದರು.

ಇದನ್ನೂ ಓದಿ: Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

20 ವರ್ಷದ ಅಬ್ದು ರೋಜಿಕ್ 19 ವರ್ಷದ ಯುವತಿಯನ್ನು ಮದುವೆಯಾಗಲಿದ್ದಾರೆ. ಅಭಿಮಾನಿಗಳು ಕೂಡ ಅಬ್ದು ಮದುವೆಗಾಗಿ ಕಾಯುತ್ತಿದ್ದಾರೆ. ಅಬ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿಗ್ ಬಾಸ್’ ನಿಂದಾಗಿ ಅಬ್ದು ಖ್ಯಾತಿ ಮತ್ತು ಜನಪ್ರಿಯತೆ ಹೆಚ್ಚಾಯಿತು. ಸಲ್ಮಾನ್ ಖಾನ್ ಅವರ ಜೊತೆಗೂ ಅಬ್ದು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಅಬ್ದು ರೋಜಿಕ್ ತಜಕಿಸ್ತಾನದ ಸಂಗೀತಗಾರರೂ ಹೌದು.

Continue Reading

ಸ್ಯಾಂಡಲ್ ವುಡ್

Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

Dolly Dhananjay:  ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.

VISTARANEWS.COM


on

Dolly Dhananjay Koti Movie Kannada First song will out
Koo

ಬೆಂಗಳೂರು: ಡಾಲಿ ಧನಂಜಯ್ (Dolly Dhananjay) ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಮೇ 13ರಂದುಬಿಡುಗಡೆಯಾಗಲಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. `ಕೋಟಿ’ ಸಿನಿಮಾದ (Koti Movie Kannada) ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೊ ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ಮೇ 13ರಂದು ಬಿಡುಗಡೆಯಾಗಲಿದೆ.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ʻಕಾಂತಾರʼ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮೆರಮನ್.

ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Actor Upendra: ಉಪೇಂದ್ರ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ರಿ-ರಿಲೀಸ್‌ ಆಗಲಿದೆ ಈ ಕ್ಲಾಸಿಕ್‌ ಸಿನಿಮಾ

ಹೇಗಿತ್ತು ಟೀಸರ್‌?

ಪರಮ್‌ (ಪರಮೇಶ್ವರ್‌ ಗುಂಡ್ಕಲ್‌) (parameshwar gundkal) ನಿರ್ದೇಶನದ ʻಕೋಟಿʼ ಸಿನಿಮಾ ಟೀಸರ್‌ (Kotee teaser) ಇಂದು ಏ.13ರಂದು ಬಿಡುಗಡೆಯಾಗಿತ್ತು. ʻಒಂದರ ಮುಂದೆ ಇರುವ ಸೊನ್ನೆ ಕೋಟಿ ಅಲ್ಲ…ಸೊನ್ನೆಗಳ ಮೊದಲು ಬರೋ ʻ1ʼ ಅದು ಕೋಟಿʼ ಎನ್ನುವ ಡೈಲಾಗ್‌, ಟೀಸರ್‌ನಲ್ಲಿ ಪ್ರಮುಖ ಹೈಲೈಟ್‌ ಆಗಿತ್ತು.

ಟೀಸರ್‌ನಲ್ಲಿ ದೃಶ್ಯಕ್ಕೆ ತಕ್ಕಂತೆ ಡೈಲಾಗ್‌, ಹಿನ್ನೆಲೆ ಧ್ವನಿ (Dolly Dhananjay) ಸಖತ್‌ ಆಗಿ ಮೂಡಿ ಬಂದಿತ್ತು. ಪ್ರತಿ ಶಾಟ್‌ನಲ್ಲಿಯೂ ಕುತೂಹಲ ಮೂಡಿಸುವಂತಿತ್ತು. ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್.‌ ಕಲರ್ಸ್‌ ಕನ್ನಡ ವಾಹಿನಿಯನ್ನು ಅವರು ಮುನ್ನಡೆಸುತ್ತಿದ್ದಾಗ ಅತಿ ಹೆಚ್ಚು ಕನ್ನಡ ಮೂಲದ ಕತೆಗಳನ್ನು ಅವರು ಕೊಟ್ಟಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅಪ್ಪಟ ಕನ್ನಡದ ಕತೆಯೊಂದಿಗೆ ಅವರು ಮೊದಲ ಬಾರಿ ʻಕೋಟಿʼ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಯುಗಾದಿ ಹಬ್ಬದ ದಿನ ‘ಕೋಟಿ’ ಚಿತ್ರದ ಟೈಟಲ್‌ ಬಿಡುಗಡೆಯಾಗಿತ್ತು. 500 ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷವಾಗಿತ್ತು. ʻಕೋಟಿʼ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿತ್ತು.

ಹೊಯ್ಸಳʼ ನಂತರ ಬರುತ್ತಿರುವ ಧನಂಜಯ್‌ ಮೊದಲ ಕನ್ನಡ ಚಿತ್ರ ಇದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

Continue Reading
Advertisement
six seats of Karnataka Legislative Council Elections to be held on June 3
ರಾಜಕೀಯ25 mins ago

Karnataka Legislative Council: ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಐದಲ್ಲ 4 ಕ್ಷೇತ್ರ; ಜೆಡಿಎಸ್‌ಗೆ 2 ಕ್ಷೇತ್ರ ಬಿಟ್ಟುಕೊಡಲು ತೀರ್ಮಾನ?

IPL 2024
ಕ್ರಿಕೆಟ್26 mins ago

IPL 2024: ಬೆಂಗಳೂರಲ್ಲಿಂದು ಆರ್‌ಸಿಬಿ, ಡೆಲ್ಲಿ ನಿರ್ಣಾಯಕ ಪಂದ್ಯ; ಮಳೆ ಅಡ್ಡಿ ಆಗತ್ತಾ ? ಇಲ್ಲಿದೆ ರಿಪೋರ್ಟ್

Shekhar Suman Says Sex Workers Keep Society
ಬಾಲಿವುಡ್33 mins ago

Shekhar Suman: ಲೈಂಗಿಕ ಕಾರ್ಯಕರ್ತರು, ವೇಶ್ಯೆಯರ ನಡುವೆ ವ್ಯತ್ಯಾಸಗಳಿವೆ ಎಂದ ʻಹೀರಾಮಂಡಿʼನಟ!

Tirupathi Temple
ದೇಶ35 mins ago

Tirupati Temple: ತಿರುಪತಿಯ ಆಗಸ್ಟ್ ತಿಂಗಳ ಟಿಕೆಟ್ ವೇಳಾಪಟ್ಟಿ ಬಿಡುಗಡೆ: ಹೀಗೆ ಬುಕ್‌ ಮಾಡಿ

POSCO Case in Tumkur
ತುಮಕೂರು54 mins ago

POSCO Case : ತುಮಕೂರಿನಲ್ಲಿ ಪೈಶಾಚಿಕ ಕೃತ್ಯ; ತಂದೆಯಿಂದಲೇ ಮಗಳ ಮಾನಭಂಗ!

Mamitha Baiju
ಚಿನ್ನದ ದರ1 hour ago

Gold Rate Today: ಭಾರಿ ಏರಿಕೆ ಬಳಿಕ ಇಂದು ಚಿನ್ನದ ಬೆಲೆ ಯಥಾಸ್ಥಿತಿ; ಇಷ್ಟಿದೆ ದರ

Pakistan Occupied Kashmir
ವಿದೇಶ1 hour ago

Pakistan Occupied Kashmir: ಪಾಕ್‌ ದಿವಾಳಿ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಿಂಸೆಯ ಹಾವಳಿ; ನಾಗರಿಕ ದಂಗೆ ಶುರು?

SSLC Student Death Exam fail
ಚಿತ್ರದುರ್ಗ1 hour ago

SSLC Student Death : ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ 4 ಸಬ್ಜೆಕ್ಟ್‌ ಫೇಲ್‌; ವಿದ್ಯಾರ್ಥಿನಿ ಸೂಸೈಡ್‌

Richa Chadha drank alcohol to perform Sanjay Leela Bhansali’s Heeramandi
ಸಿನಿಮಾ1 hour ago

Richa Chadha: ಖ್ಯಾತ ನಿರ್ದೇಶಕ ಸೆಟ್‌ನಲ್ಲಿ ಮದ್ಯ ಸೇವಿಸಿ ಫಜೀತಿಗೆ ಒಳಗಾದ ರಿಚಾ ಚಡ್ಡಾ!

Elon Musk
ತಂತ್ರಜ್ಞಾನ2 hours ago

Elon Musk: ದೇಶದಲ್ಲಿ 1.8 ಲಕ್ಷ ಎಕ್ಸ್‌ ಖಾತೆಗಳು ಬಂದ್‌; ಕಾರಣವೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು21 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ3 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ3 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌