South Cinema
Anushka Sharma: ಕಾನ್ ಚಲನಚಿತ್ರೋತ್ಸವದಲ್ಲಿ ಮಿಂಚಿದ ಅನುಷ್ಕಾ ಶರ್ಮಾ
Anushka Sharma: 76ನೇ ಕಾನ್ ಚಲನಚಿತ್ರೋತ್ಸವ ತಾರಾ ಬಳಗದಿಂದ ಕೂಡಿದೆ. ಅನುಷ್ಕಾ ಶರ್ಮಾ ಇದೇ ಮೊದಲ ಬಾರಿಗೆ ಕಾನ್ ಉತ್ಸವದಲ್ಲಿ ಭಾಗಿಯಾಗಿದ್ದರು. ನಟಿಯ ಫೋಟೊಗಳು ಇಲ್ಲಿವೆ!
76ನೇ ಕಾನ್ ಚಲನಚಿತ್ರೋತ್ಸವದಲ್ಲಿ ನಟಿ ಅನುಷ್ಕಾ ಶರ್ಮಾ (Anushka Sharma) ಇದೇ ಮೊದಲ ಬಾರಿಗೆ ಕಾನ್ ಭಾಗಿಯಾಗಿದ್ದರು.
ಅದಿತಿ ರಾವ್ ಹೈದರಿ, ಮೃಣಾಲ್ ಠಾಕೂರ್, ಸನ್ನಿ ಲಿಯೋನ್, ಐಶ್ವರ್ಯಾ ರೈ, ಊರ್ವಶಿ ರೌಟೇಲಾ, ಸಾರಾ ಅಲಿ ಖಾನ್ ಸೇರಿದಂತೆ ಭಾರತದ ಹಲವು ಸೆಲೆಬ್ರಿಟಿಗಳು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.
ಬೆರಗುಗೊಳಿಸುವ ಬಿಳಿ ಹೂವಿನ ಗೌನ್‌ನಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದು ಹೀಗೆ. ಈ ಫೋಟೋದಲ್ಲಿ ಅನುಷ್ಕಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಅನೇಕರು ಬರೆದುಕೊಂಡಿದ್ದಾರೆ.
ಅನುಷ್ಕಾ ಫೋಟೊ ಶೇರ್ ಮಾಡುತ್ತಿದ್ದಂತೆ ಪತಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಸೇರಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಅನುಷ್ಕಾ ಶರ್ಮಾ ಅವರು ಚಕ್ ದೇ ಎಕ್ಸ್ಪ್ರೆಸ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಜೂಲನ್ ಗೋಸ್ವಾಮಿ ಪಾತ್ರವನ್ನು ಮಾಡಿದ್ದಾರೆ.
South Cinema
Corset Fashion: ಬಣ್ಣ ಬಣ್ಣದ ಕಾರ್ಸೆಟ್ ಕ್ರಾಪ್ ಟಾಪ್ ಜಾದೂ…
ಕೇವಲ ಡೆನೀಮ್ ಹಾಗೂ ಬ್ಲಾಕ್ ಶೇಡ್‌ಗಳಿಗೆ ಸೀಮಿತವಾಗಿದ್ದ ಬಣ್ಣಬಣ್ಣದ ಕಾರ್ಸೆಟ್ ಕ್ರಾಪ್ ಟಾಪ್‌ಗಳು ಇಂದು ಯುವತಿಯರನ್ನು ಸೆಳೆದಿವೆ. ಅಲ್ಲದೇ, ಇವು ತಾರೆಯರ ನೆಚ್ಚಿನ ಔಟ್‌ಫಿಟ್‌ನಲ್ಲೊಂದಾಗಿವೆ. ಏನಿದು ಕಾರ್ಸೆಟ್ ಕ್ರಾಪ್ ಟಾಪ್ ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾರ್ಸೆಟ್ ಬಣ್ಣ ಬಣ್ಣದ ಕಾರ್ಸೆಟ್ ಟಾಪ್‌ಗಳು ಇದೀಗ ಯುವತಿಯರ ವೆಸ್ಟರ್ನ್ ಫ್ಯಾಷನ್ ಲಿಸ್ಟ್‌ಗೆ ಸೇರಿವೆ. ಈ ಹಿಂದೆ ಕೇವಲ ಡೆನೀಮ್ ಹಾಗೂ ಬ್ಲಾಕ್ ಶೇಡ್‌ಗಳಿಗೆ ಸೀಮಿತವಾಗಿದ್ದ ಕಾರ್ಸೆಟ್ ಟಾಪ್ ಇದೀಗ ಬಣ್ಣ ಬದಲಾಯಿಸಿವೆ. ಯುವತಿಯರ ನೆಚ್ಚಿನ ಟಾಪ್‌ಗಳಲ್ಲೊಂದಾಗಿರುವ ಇವು ಸಿನಿ ತಾರೆಯರ ನೆಚ್ಚಿನ ಔಟ್‌ಫಿಟ್‌ನಲ್ಲೂ ಸೇರಿವೆ.
ಏನಿದು ಕಾರ್ಸೆಟ್ ಕ್ರಾಪ್ ಟಾಪ್?
ಟಮ್ಮಿ ಭಾಗವನ್ನು ಸ್ಲಿಮ್ ಆಗಿ ಕಾಣಿಸಬಲ್ಲ ವಿನ್ಯಾಸ ಈ ಟಾಪ್‌ಗಿದೆ. ಮೂಲತಃ ಪಾಶ್ಚಿಮಾತ್ಯ ರಾಷ್ಟ್ರಗಳ ಫ್ಯಾಷನ್ ಆದ ಈ ಟಾಪ್, ಹೊಟ್ಟೆ ಭಾಗ ಸ್ಲಿಮ್ ಆಗಿ ಕಾಣಿಸುವಂತೆ ಮಾಡಬಲ್ಲ ತಂತ್ರಜ್ಞಾನ ಈ ಡಿಸೈನ್‌ನಲ್ಲಿಅಡಗಿದೆ. ಅಷ್ಟೇಕೆ! ಕರ್ವ್ಸ್ ಹೊಂದಿರುವವರಿಗೆ ಹೇಳಿ ಮಾಡಿಸಿದ ಟಾಪ್ ಇದು. ಕಾರ್ಸೆಟ್ ಟಾಪ್ ಫ್ಯಾಷನ್‌ನಲ್ಲಿಸಾಕಷ್ಟು ಡಿಸೈನ್‌ಗಳನ್ನು ನೋಡಬಹುದು. ಬಾಡಿಕವ್ರ್ಸ್ ಇರುವವರಿಗೆ ಹೇಳಿ ಮಾಡಿಸಿದ ಟಾಪ್ ಇದು ಎನ್ನುತ್ತಾರೆ ಸ್ಟೈಲಿಸ್ಟ್ ಚಿತ್ರಾ.
ಕಾರ್ಸೆಟ್ ಟಾಪ್‌ಗಳು ಯಾವ ಮಟ್ಟಿಗೆ ಫಿಟ್ಟಿಂಗ್ ಹೊಂದಿರುತ್ತವೆ ಎಂದರೇ, ಬಾಡಿ ಕರ್ವ್‌ಗೆ ತಕ್ಕಂತೆ ಅದರಲ್ಲೂ ವೇಸ್ಟ್ ಲೈನ್ ತೀರಾ ನಾಜೂಕಾಗಿ ರೂಪಿಸಲಾಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿಇಂಚು ಇಂಚಿಗೂ ಫಿಟ್ಟಿಂಗ್ ಬಗ್ಗೆ ಗಮನಹರಿಸಲಾಗಿರುತ್ತದೆ. ಹಾಗಾಗಿ ಧರಿಸಿದವರ ಬಾಡಿ ಕವ್ರ್ಸ್ ನೋಡಲು ಫಿಟ್ ಆಗಿರುವಂತೆ ಈ ಟಾಪ್‌ಗಳು ಇಲ್ಯೂಷನ್ ಕ್ರಿಯೇಟ್ ಮಾಡುತ್ತವೆ.
ಇದನ್ನೂ ಓದಿ: Skinny Dresses | ಸ್ಕಿನ್ನಿ ಉಡುಪುಗಳು ದೇಹಕ್ಕೆ ಬಾಧಕವೇ?
ಕಾರ್ಸೆಟ್ ಕ್ರಾಪ್ ಟಾಪ್ ಆಯ್ಕೆ
ಕೊಂಚ ಉದ್ದಗಿರುವವರಿಗೆ ಯಾವ ಬಗೆಯ ಕಾರ್ಸೆಟ್ ಟಾಪ್ ಆದರೂ ಸರಿಯೇ ಸೂಟ್ ಆಗುತ್ತದೆ. ಪ್ಲಂಪಿಯಾಗಿರುವವರು ಟ್ರಯಲ್ ನೋಡಿಯೇ ಆಯ್ಕೆ ಮಾಡಬೇಕು ಎನ್ನುತ್ತಾರೆ ಫ್ಯಾಷನಿಸ್ಟ್ ಸೂರಜ್. ಅವರ ಪ್ರಕಾರ, ಕಾರ್ಸೆಟ್ ಟಾಪ್‌ಗಳು ಮಾಡರ್ನ್ ಲುಕ್ ಕಲ್ಪಿಸುತ್ತವೆ. ಹಾಗಾಗಿ ತಾರೆಯರ ನೆಚ್ಚಿನ ಕ್ರಾಪ್ ಟಾಪ್‌ಗಳಲ್ಲಿ ಇವು ಸೇರಿವೆ ಎನ್ನುತ್ತಾರೆ. ಆಯಾ ಬಾಡಿ ಹೈಟ್‌ಗೆ ತಕ್ಕಂತೆ ಮ್ಯಾಚ್ ಆಗುವ ವಿನ್ಯಾಸದ ಕ್ರಾಪ್ ಕಾರ್ಸೆಟ್ ಟಾಪ್‌ಗಳನ್ನು ಧರಿಸುವುದು ಅಗತ್ಯ. ಇಲ್ಲವಾದಲ್ಲಿ ನೋಡಲು ಚೆನ್ನಾಗಿ ಕಾಣದು ಎನ್ನುತ್ತಾರೆ ಅವರು.
ಇದನ್ನೂ ಓದಿ: Skinny Dresses | ಸ್ಕಿನ್ನಿ ಉಡುಪುಗಳು ದೇಹಕ್ಕೆ ಬಾಧಕವೇ?
ಪರ್ಫೆಕ್ಟ್ ಕಾರ್ಸೆಟ್ ಕ್ರಾಪ್ ಟಾಪ್
- ಫಿಟ್ಟಿಂಗ್ ಸರಿಯಾಗಿರುವುದು ಅಗತ್ಯ.
- ಬೆನ್ನು ನೋವಿರುವವರು ಫಿಟ್ಟಿಂಗ್ ಕಾರ್ಸೆಟ್ ಆವಾಯ್ಡ್ ಮಾಡಿ.
- ಈ ಟಾಪ್ ಲೂಸಾಗಿರಕೂಡದು.
- ಪಾಸ್ಟಲ್ ಶೇಡ್‌ನವು ಹೆಚ್ಚು ಪ್ರಚಲಿತದಲ್ಲಿವೆ.
- ಜೀನ್ಸ್ ಪ್ಯಾಂಟ್-ಸ್ಕರ್ಟ್-ಲೆಹೆಂಗಾಗೂ ಮಿಕ್ಸ್ ಮ್ಯಾಚ್ ಮಾಡಬಹುದು.
- ಬಾರ್ಡಟ್, ಕೋಲ್ಡ್ ಶೋಲ್ಡರ್‌ನವು ಚಾಲ್ತಿಯಲ್ಲಿವೆ.
- ಹೈ ಹೀಲ್ಸ್ ಪರ್ಫೆಕ್ಟ್ ಲುಕ್ ನೀಡುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
South Cinema
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
Nandamuri Balakrishna: ಅನಿಲ್ ರವಿಪುಡಿ ನಿರ್ದೇಶನವಿರುವ ನಟ ನಂದಮೂರಿ ಬಾಲಕೃಷ್ಣ ಅವರ ಬಹು ನಿರೀಕ್ಷಿತ ಚಿತ್ರ ಇಷ್ಟೂ ದಿನ ತಾತ್ಕಾಲಿಕವಾಗಿ NBK 108 ಎಂದು ಇಡಲಾಗಿತ್ತು.
ಬೆಂಗಳೂರು: ಸರಿಲೇರು ನೀಕೆವ್ವರು ಮತ್ತು ಎಫ್-2 ನಂತಹ ಸಿನಿಮಾಗಳ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರಗಳ ನಿರ್ದೇಶಕ ಅನಿಲ್ ರವಿಪುಡಿ ಹೊಸ ಸುದ್ದಿ ನೀಡಿದ್ದಾರೆ. ಇವರ ನಿರ್ದೇಶನವಿರುವ ನಟ ನಂದಮೂರಿ ಬಾಲಕೃಷ್ಣ ಅವರ ಬಹು ನಿರೀಕ್ಷಿತ ಚಿತ್ರ ಇಷ್ಟೂ ದಿನ ತಾತ್ಕಾಲಿಕವಾಗಿ NBK 108 (Nandamuri Balakrishna) ಎಂದು ಇಡಲಾಗಿತ್ತು. ಇದೀಗ ಚಿತ್ರತಂಡ ಈ ಸಿನಿಮಾಗೆ ʻಭಗವಂತ ಕೇಸರಿʼಎಂದು ಶೀರ್ಷಿಕೆ ಇಟ್ಟಿದ್ದಾರೆ. ಜತೆಗೆ ಫಸ್ಟ್ ಲುಕ್ ಪೋಸ್ಟರ್ ಕೂಡ ಶೇರ್ ಮಾಡಿಕೊಂಡಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಬಾಲಕೃಷ್ಣ ಅವರು ಖಡ್ಗದಂತಹ ಆಯುಧವನ್ನು ಹಿಡಿದಿದ್ದಾರೆ. ಪೋಸ್ಟರ್‌ನಲ್ಲಿ ಲುಕ್ ಜತೆಗೆ, ‘ಐ ಡೋಂಟ್ ಕೇರ್’ ಎಂದು ಟ್ಯಾಗ್‌ಲೈನ್ ಕೂಡ ಕೊಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ನಿರ್ಮಾಣ ಸಂಸ್ಥೆ ಶೈನ್ ಸ್ಕ್ರೀನ್ಸ್ ಬಿಡುಗಡೆ ಮಾಡಿದೆ. ಈ ಸಿನಿಮಾ ಮೂಲಕ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತೆಲುಗು ಸಿನಿಮಾಗೆ ಪದಾರ್ಪಣೆ ಮಾಡಿದ್ದಾರೆ. ನಟ ಶ್ರೀಲೀಲಾ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಎಸ್ ಥಮನ್ ಸಂಗೀತ ಚಿತ್ರಕ್ಕಿದೆ. ಭಗವಂತ ಕೇಸರಿ ದಸರಾಕ್ಕೆ ಥಿಯೇಟರ್‌ಗೆ ಲಗ್ಗೆ ಇಡಲಿದೆ.
ಅನಿಲ್ ರವಿಪುಡಿ ಅವರು ಮಹೇಶ್ ಬಾಬು ಅವರಿಗೆ ಸರಿಲೇರು ನೀಕೆವ್ವರು (2020)ನಲ್ಲಿ ನಿರ್ದೇಶಿಸಿದ ನಂತರ ಸ್ಟಾರ್ ಚಲನಚಿತ್ರ ನಿರ್ದೇಶಕರಾಗಿ ಹೊರಹೊಮ್ಮಿದರು. ಬಾಲಕೃಷ್ಣ ಸಿನಿಮಾದ ಟ್ರೇಡ್ ಮಾರ್ಕ್ ಮಾಸ್ ಅಂಶಗಳೂ ಇದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Nandamuri Balakrishna: ನಂದಮೂರಿ ಬಾಲಕೃಷ್ಣ NBK 108 ಸಿನಿಮಾದ ಫಸ್ಟ್ ಲುಕ್ ಔಟ್
అన్న దిగిండు🔥
— Shine Screens (@Shine_Screens) June 8, 2023
ఇగ మాస్ ఊచకోత షురూ 😎
Presenting #NandamuriBalakrishna in & as #BhagavanthKesari 💥#NBKLikeNeverBefore ❤️🔥@AnilRavipudi @MsKajalAggarwal @sreeleela14 @rampalarjun @MusicThaman @sahugarapati7 @harish_peddi @YoursSKrishna @JungleeMusicSTH pic.twitter.com/aIAYbnMgcK
ಮಾರ್ಚ್ 22ರಂದು, ಅನಿಲ್ ರವಿಪುಡಿ ಅವರು NBK 108 ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದರು. ಪೋಸ್ಟರ್‌ಗಳಲ್ಲಿ ‘ಈ ಬಾರಿ ನಿಮ್ಮ ಕಲ್ಪನೆಗೂ ಮೀರಿ’ ಎಂಬ ಅಡಿಬರಹವಿತ್ತು. ಈ ಚಿತ್ರವು ಬಾಲಯ್ಯ ಅವರ ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚು ಮಾಸ್ ಆಗಿರಲಿದೆ ಎನ್ನಲಾಗಿದೆ.
South Cinema
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
Kannada New Movie: ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿರುವ ಹಯವದನ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದೆ.
ಬೆಂಗಳೂರು: ‘ಕಂಬ್ಳಿಹುಳ’ ಸಿನಿಮಾದ (Kannada New Movie) ಅಂಜನ್ ನಾಗೇಂದ್ರ ನಾಯಕ ನಟನಾಗಿ ನಟಿಸುತ್ತಿರುವ ʻಎಲ್ಲೋ ಜೋಗಪ್ಪ ನಿನ್ನರಮನೆʼ ಹೊಸ ಸುದ್ದಿಯನ್ನು ತಂದಿದೆ. ಶುಭ ಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿರುವ ಹಯವದನ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದೆ.
ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ಬಾಕಿ ಉಳಿಸಿಕೊಂಡಿದೆ. ನಿರ್ದೇಶಕ ಹಯವದನ ಯಾರು ಸಲೀಸಾಗಿ ಚಿತ್ರೀಕರಣ ಮಾಡಲಾಗದ ಜಾಗದಲ್ಲಿ ಸಿನಿಮಾವನ್ನು ಚಿತ್ರೀಕರಿಸಬೇಕೆಂಬ ಕನಸು ಇಟ್ಟುಕೊಂಡಿದ್ದರು. ಅದರಂತೆ ಮಹಾರಾಷ್ಟ್ರ, ಉತ್ತರಖಂಡ, ದೆಹಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಿಮಾಲಯದ ಕೊರೆಯುವ ಚಳಿಯಲ್ಲಿಯೂ ಎಲ್ಲೋ ಜೋಗಪ್ಪ ನಿನ್ನರಮನೆ’ವನ್ನು ಶೂಟಿಂಗ್ ನಡೆಸಿದ್ದಾರೆ.
ಸುಂದರ ಸ್ಥಳಗಳಲ್ಲಿ ಸಿನಿಮಾ ಶೂಟ್ ಮಾಡಿರುವ ಖುಷಿ ಚಿತ್ರತಂಡದಲ್ಲಿದೆ. ಶೂಟಿಂಗ್ ಮುಗಿಸಿ ಈಗ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಬಳಗ ಮಾತಿನ ಜೋಡಣೆ ಕೆಲಸದಲ್ಲಿ ನಿರತರಾಗಿದ್ದಾರೆ. ಎಲ್ಲೋ ಜೋಗಪ್ಪ ನಿನ್ನರಮನೆ ಒಂದು ಜರ್ನಿಯ ಕಥೆ. ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ ಈ ಸಿನಿಮಾ ಹೈಲೈಟ್ಸ್. ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆ ಸಿನಿಮಾದಲ್ಲಿದೆ.
ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲವನ್ನೂ ಒಳಗೊಂಡಿರುವ ಈ ಚಿತ್ರದಲ್ಲಿ ಅಂಜನ್ ನಾಗೇಂದ್ರಗೆ ಜೋಡಿಯಾಗಿ ಯುವ ನಟಿ ವೆನ್ಯ ರೈ ನಟಿಸ್ತಿದ್ದು, ‘ಕೆಟಿಎಂ’, ‘ಮೂನ್ ವಾಕ್’ ಹಾಗೂ ಮಲಯಾಳಂನಲ್ಲಿ ‘ಮನಸ್ಮಿತ’ ಸಿನಿಮಾದಲ್ಲಿ ನಟಿಸಿರುವ ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು, ಬಿರಾದರ್ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: Kannada New Movie: ಮೊದಲ ಬಾರಿಗೆ ಗುಜರಾತಿ ಸಿನಿಮಾ ಕನ್ನಡದಲ್ಲಿ!
ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್‌ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಕ್ಯಾಮೆರಾ ವರ್ಕ್, ರವಿಚಂದ್ರನ್ ಸಂಕಲನದಲ್ಲಿ ಸಿನಿಮಾ ಮೂಡಿ ಬರಲಿದೆ.
ರವಿ ಮುದ್ದಿ, ವಿಕ್ರಮ ಹಾತ್ವಾರ್, ಪ್ರಮೋದ್ ಮರವಂತೆ ಸಾಹಿತ್ಯ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ನರಸಿಂಹ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆದಷ್ಟು ಬೇಗ ಎಲ್ಲಾ ಕೆಲಸವನ್ನು ಮುಗಿಸಿ ಸೆಪ್ಟಂಬರ್ ಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
South Cinema
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
Priya Prakash Varrier: ಕಣ್ಸನ್ನೆ ಮಾಡುವ ದೃಶ್ಯದ ಐಡಿಯಾವನ್ನು ಕೊಟ್ಟಿದ್ದು ನಾನೇ ಎಂದು ಪ್ರಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ನಿರ್ದೇಶಕ ಪರೋಕ್ಷಕವಾಗಿ ನಟಿಯ ಹೇಳಿಕೆ ಸುಳ್ಳು ಎನ್ನುವಂತೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಒಮರ್ ಲುಲು ನಿರ್ದೇಶದ ಟೀನೇಜ್ ಲವ್‌ಸ್ಟೋರಿ ಸಿನಿಮಾ ‘ಒರು ಆಡಾರ್ ಲವ್ ‘(oru adaar love) ತೆಲುಗು ಹಾಗೂ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. ‘ಮಾಣಿಕ್ಯ ಮಲರಾಯ ಪೂವಿ’ ಸಾಂಗ್ ಸಿನಿಮಾ ರಿಲೀಸ್‌ಗೂ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅದಕ್ಕೆ ಕಾರಣ ನಟಿ ಪ್ರಿಯಾ ಪ್ರಕಾಶ್ ಕಣ್ಸನ್ನೆ. ಇದೀಗ ಕೇರಳ ನಟಿ ಪ್ರಿಯಾ ವಾರಿಯಾರ್ (Priya Prakash Varrier) ಮತ್ತು ನಿರ್ದೇಶಕ ಒಮರ್ ಲುಲು ನಡುವೆ ಸಖತ್ ವಾರ್ ಆಗುತ್ತಿದೆ. ಕಣ್ಸನ್ನೆ ಮಾಡುವ ದೃಶ್ಯದ ಐಡಿಯಾವನ್ನು ಕೊಟ್ಟಿದ್ದು ನಾನೇ ಎಂದು ಪ್ರಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ನಿರ್ದೇಶಕ ಪರೋಕ್ಷಕವಾಗಿ ನಟಿಯ ಹೇಳಿಕೆ ಸುಳ್ಳು ಎನ್ನುವಂತೆ ತಿರುಗೇಟು ನೀಡಿದ್ದಾರೆ.
ಈ ಹಿಂದಿನ ಒಂದು ಸಂದರ್ಶನದಲ್ಲಿ ಪ್ರಿಯಾ ವಾರಿಯರ್, ಕಣ್ಸನ್ನೆ ದೃಶ್ಯದ ಐಡಿಯಾ ನೀಡಿದ್ದು ಆ ಸಿನಿಮಾದ ಹೀರೊ ರೋಷನ್ ಎಂದು ಹೇಳಿಕೆ ನೀಡಿದ್ದರು. ಆ ವಿಡಿಯೊವನ್ನು ಮತ್ತು ಈಗ ನಟಿ ಹೇಳಿಕೊಂಡಿರುವ ವಿಡಿಯೊವನ್ನು ಸೇರಿಸಿ, ನಿರ್ದೇಶಕರು ಪೋಸ್ಟ್ ಮಾಡಿಕೊಂಡಿದ್ದಾರೆ. ʻʻಈ ಹುಡುಗಿಗೆ ಮರುವಿನ ಕಾಯಿಲೆ ಇರಬಹುದು. 5 ವರ್ಷದ ಹಿಂದೆ ಏನಾಗಿತ್ತು ಎಂದು ಮರೆತು ಹೋದಂತಿದೆ, ಹಾಗಾಗಿ ಈ ತೈಲ ಕೊಡಿ, ತಲೆಗೆ ಹಚ್ಚಿಕೊಂಡರೆ ನೆನಪಾಗುವುದುʼʼ ಎಂದು ಬರೆದುಕೊಂಡಿದ್ದಾರೆ.
2019ರಲ್ಲಿ ಬಿಡುಗಡೆಯಾಗಿದ್ದ ‘ಒರು ಆಡಾರ್ ಲವ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಕೆ ಕಂಡಿಲ್ಲ. ಆದರೂ ಕೂಡ ಪ್ರಿಯಾಗೆ ಸಾಕಷ್ಟು ಅವಕಾಶಗಳು ಅ ಬಂತು. ಆದರೂ ಯಾವ ಸಿನಿಮಾ ಕೂಡ ಗೆಲ್ಲಲಿಲ್ಲ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾ, ‘ಒರು ಆಡಾರ್ ಲವ್’ ಚಿತ್ರದಲ್ಲಿ ಕಣ್ಸನ್ನೆ ಮಾಡುವ ದೃಶ್ಯದ ಐಡಿಯಾ ಕೊಟ್ಟಿದ್ದು ನಾನೇ ಎಂದು ಹೇಳಿದ್ದಾರೆ.
ಇದನ್ನೂ ಓದಿ: Odisha Train Accident : ಅಯ್ಯೊ ದುರ್ವಿಧಿ, ಟ್ರೈನ್ ಕೆಳಗೆ ಮಲಗಿದ್ದವರು ಅಲ್ಲೇ ಅಪ್ಪಚ್ಚಿ!
ರೋಷನ್ ಹಾಗೂ ಪ್ರಿಯಾ ನಡುವಿನ ಸನ್ನಿವೇಶಗಳನ್ನು ಸೇರಿಸಿ ‘ಮಾಣಿಕ್ಯ ಮಲರಾಯ ಪೂವಿ’ ಹಾಡನ್ನು ಕಟ್ಟಿಕೊಡಲಾಗಿತ್ತು. ಇದು ಸಖತ್ ವೈರಲ್ ಕೂಡ ಆಗಿತ್ತು. ಕಣ್ಸನ್ನೆ ಮೂಲಕ ಸಾಕಷ್ಟು ಅವಕಾಶಗಳನ್ನು ಪಡೆದಿದ್ದ ಪ್ರಿಯಾ ವಾರಿಯರ್, ಹೇಗೆಲ್ಲ ಸುಳ್ಳು ಹೇಳುತ್ತಾರೆ ಎನ್ನುವುದನ್ನು ಇನ್‌ಸ್ಟಾ ಮೂಲಕ ವ್ಯಕ್ತಪಡಿಸಿದ್ದಾರೆ ನಿರ್ದೇಶಕ.
ಪ್ರಿಯಾ ಸದ್ಯ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ‘ತ್ರೀ ಮಂಕೀಸ್’, ‘ಯಾರಿಯಾನ್- 2’, ‘ಲವ್ ಹ್ಯಾಕರ್ಸ್’, ‘ಶ್ರೀದೇವಿ ಬಂಗ್ಲೋ’ ಹಿಂದಿ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ.
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema23 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema22 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema21 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ17 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema24 hours ago
Sara Ali Khan: ಶುಭ್ಮನ್ ಗಿಲ್ ಜತೆ ಡೇಟಿಂಗ್, ಕೂನೆಗೂ ಉತ್ತರ ಕೊಟ್ಟರಾ ಸಾರಾ
-
ಪ್ರಮುಖ ಸುದ್ದಿ22 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಪ್ರಮುಖ ಸುದ್ದಿ23 hours ago
Textbook Revision: ಬುದ್ಧಿಜೀವಿ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ!: ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಸಚಿವ ಬಿ.ಸಿ. ನಾಗೇಶ್