South Cinema
Kannada New Movie: ಬಿಡುಗಡೆಗೆ ಸಜ್ಜಾದ ಅಭಿರಾಮಚಂದ್ರ; ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್!
Kannada New Movie: ಕಿರಿಕ್ ಪಾರ್ಟಿ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಅಭಿರಾಮಚಂದ್ರ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಬೆಂಗಳೂರು: ಬಿಡುಗಡೆಗೆ ಸಜ್ಜಾಗಿರುವ ಅಭಿರಾಮಚಂದ್ರ ಸಿನಿಮಾ (Kannada New Movie) ಸೆನ್ಸಾರ್ ಮಂಡಳಿಯಲ್ಲಿ ಪಾಸ್ ಆಗಿದೆ. ನಾಗೇಂದ್ರ ಗಾಣಿಗ ನಿರ್ದೇಶನದ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಕಿರಿಕ್ ಪಾರ್ಟಿ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಅಭಿರಾಮಚಂದ್ರ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೋನ ಪ್ರೇಮಕಥೆ ಹೊತ್ತ ಚಿತ್ರದಲ್ಲಿ ರಥ ಕಿರಣ ಸಿದ್ದು ಮೂಲಿಮನಿ, ನಾಟ್ಯರಂಗ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಯಕಿಯಾಗಿ ಶಿವಾನಿ ರೈ ನಟಿಸಿದ್ದಾರೆ. ಕುಂದಾಪುರ, ಬೆಂಗಳೂರು, ಮೈಸೂರಿನಲ್ಲಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಅಭಿರಾಮಚಂದ್ರ ಸಿನಿಮಾ ಮೂಡಿ ಬರುತ್ತಿದ್ದು, ರವಿ ಬಸ್ರೂರು ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ‘ಅಭಿರಾಮಚಂದ್ರ’ ಸಿನಿಮಾ ಮೂಡಿ ಬರುತ್ತಿದ್ದು, ರವಿ ಬಸ್ರೂರು ಮೂವೀಸ್ ನಡಿ ಸಿನಿಮಾವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ರವಿ ಬಸ್ರೂರು ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ವೀಣಾ ಸುಂದರ್, ಸುಂದರ್ ವೀಣಾ, ಎಸ್.ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: Kannada New Movie: ’ಅಭಿರಾಮಚಂದ್ರ’ನಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್
ಎ.ಜಿ. ಎಸ್ ಎಂಟರ್ಟೈನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್ ನಡಿ ಎ.ಜಿ.ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನ ಚಿತ್ರಕ್ಕಿದೆ.
South Cinema
Actress Nayanthara: ಅವಳಿ ಮಕ್ಕಳ ಜತೆ ಕ್ಯೂಟ್ ಆಗಿ ಫೋಟೊಶೂಟ್ ಮಾಡಿಸಿಕೊಂಡ ನಯನತಾರಾ!
ನಟಿ ನಯನತಾರಾ (Nayanatara) ತಮ್ಮ ಅವಳಿ ಮಕ್ಕಳ ಆರೈಕೆಯಲ್ಲಿದ್ದಾರೆ. ನಟಿ ಮಕ್ಕಳ ಜತೆ ಫೋಟೊಶೂಟ್ ಮಾಡಿಸಿದ್ದಾರೆ.
ನಟಿ ನಯನತಾರಾ (Actress Nayanthara) ತಮ್ಮ ಅವಳಿ ಮಕ್ಕಳ ಆರೈಕೆಯಲ್ಲಿದ್ದಾರೆ. ನಟಿ ಮಕ್ಕಳ ಜತೆ ಫೋಟೊಶೂಟ್ ಮಾಡಿಸಿದ್ದಾರೆ. ಈ ಕುರಿತ ಫೋಟೊವನ್ನ ನಿರ್ದೇಶಕ ವಿಘ್ನೇಶ್ ಶಿವನ್ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಯನತಾರಾ ದಂಪತಿ ಬಾಡಿಗೆ ತಾಯ್ತನದ ಮೂಲಕ ಇತ್ತೀಚೆಗೆ ಮಗು ಪಡೆದಿದ್ದಾರೆ.
ಇತ್ತೀಚೆಗೆ ನಯನತಾರಾ ಅವರು ಮಕ್ಕಳ ಹೆಸರು ರಿವೀಲ್ ಮಾಡಿದ್ದರು. ಮೊದಲ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್. ಶಿವನ್ ಹಾಗೂ ಎರಡನೇ ಮಗನ ಹೆಸರು ಉಳಗ್ ದೈವಗನ್ ಎನ್. ಶಿವನ್ ಎಂದು ಹೇಳಿದ್ದರು.
ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಲವು ವರ್ಷಗಳ ಕಾಲ ಲಿವ್-ಇನ್ ರಿಲೇಷನ್ಶಿಪ್ನಲ್ಲಿ ಇದ್ದರು. ʻʻಜೀವನದಲ್ಲಿ ಅದೆಷ್ಟೇ ಕಷ್ಟಗಳಿದ್ದರೂ ಮಕ್ಕಳ ಮುಖ ನೋಡಿದಾಗ ಮತ್ತಷ್ಟು ಎನರ್ಜಿ ಬರುತ್ತದೆ. ಖುಷಿಯಾಗುತ್ತದೆʼʼ ಎಂದು ನಿರ್ದೇಶಕ ಬರೆದುಕೊಂಡಿದ್ದಾರೆ.
South Cinema
Chiranjeevi: ಅದ್ಧೂರಿಯಾಗಿದೆ ಭೋಲಾ ಶಂಕರ್ ಸೆಟ್; ಮತ್ತೊಮ್ಮೆ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಚಿರು
ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರು ಭೋಲಾ ಶಂಕರ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾ ಸೆಟ್‌ನ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಹೈದರಾಬಾದ್: ವಾಲ್ತೇರು ವೀರಯ್ಯ ಸಿನಿಮಾ ಹಿಟ್ ಆದ ಸಂಭ್ರಮದಲ್ಲಿರುವ ಮೆಗಾಸ್ಟಾರ್ ಚಿರಂಜೀವಿ (Chiranjeevi) ಸದ್ಯ ಭೋಲಾ ಶಂಕರ್ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿ ಇದ್ದಾರೆ. ಈ ಸಿನಿಮಾದಲ್ಲಿ ನಟಿ ತಮನ್ನಾ ಮತ್ತು ಕೀರ್ತಿ ಸುರೇಶ್ ಅವರೊಂದಿಗೆ ನಟಿಸುತ್ತಿರುವ ಚಿರಂಜೀವಿ ಸಿನಿಮಾದ ಸೆಟ್‌ನ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾದ ಹಾಡೊಂದನ್ನು ಚಿತ್ರೀಕರಿಸಲಾಗುತ್ತಿರುವ ಸೆಟ್‌ನ ವಿಡಿಯೊವನ್ನು ಚಿರಂಜೀವಿ ಹಂಚಿಕೊಂಡಿದ್ದಾರೆ. ತೆಲುಗಿನ ಫೇಮಸ್ ಕೊರಿಯೋಗ್ರಾಫರ್ ಶೇಖರ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬರುತ್ತಿರುವ ಹಾಡು ಇದಾಗಿದೆ. ಚಿರಂಜೀವಿ ಹಂಚಿಕೊಂಡಿರುವ ವಿಡಿಯೊದಲ್ಲಿ ಅವರು ನಟಿಯರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಹಾಗೆಯೇ ಆ ವಿಡಿಯೋದಲ್ಲಿ ನಾಯಕಿ ತಮನ್ನಾ, ಕೀರ್ತಿ ಸುರೇಶ್, ವೆನ್ನೆಲ ಕಿಶೋರ್, ಸುಶಾಂತ್, ಗೆಟಪ್ ಶ್ರೀನು, ಹೈಪರ್ ಆದಿ ಮತ್ತು ಬ್ಯಾನರ್ಜಿ ಮುಂತಾದ ನಟ ನಟಿಯರು ಕಾಣಿಸಿಕೊಂಡಿದ್ದಾರೆ.
ಈ ಭೋಲಾ ಶಂಕರ್ ಸಿನಿಮಾ ಇದೇ ಆಗಸ್ಟ್ 11ರಂದು ತೆರೆ ಕಾಣಲಿದೆ. ಚಿತ್ರತಂಡವು ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಅವುಗಳ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದಲ್ಲಿ ಚಿರಂಜೀವಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ವೇದಲಂ ಚಿತ್ರದ ತೆಲುಗು ರಿಮೇಕ್ ಆಗಿ ಈ ಚಿತ್ರ ಬರುತ್ತಿದೆ.
ಚಿರಂಜೀವಿ ಅವರು ಈ ಹಿಂದೆ ಗ್ಯಾಂಗ್ ಲೀಡರ್, ಇಂದ್ರ ಮತ್ತಿತರ ಚಿತ್ರಗಳಲ್ಲಿ ಕ್ಯಾಬ್ ಡ್ರೈವರ್ ಆಗಿ ನಟಿಸಿದ್ದರು. ಇದೀಗ ‘ಭೋಲಾ ಶಂಕರ್’ನಲ್ಲಿ ಮತ್ತೊಮ್ಮೆ ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೋಲಾ ಶಂಕರ ಚಿತ್ರವನ್ನು ಅನಿಲ್ ಸುಂಕರ, ಕೆ.ವೈ. ರಾಮರಾವ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
South Cinema
Darbar Movie Review: ಇದು ರಾಜಕಾರಣದ ʻದರ್ಬಾರ್ʼ, ಮತದಾರರ ಕಾರುಬಾರು!
Darbar Movie Review: ಸತತ 23 ವರ್ಷಗಳ ನಂತರ ವಿ.ಮನೋಹರ್ ಮತ್ತೆ ನಿರ್ದೇಶನಕ್ಕೆ ʻದರ್ಬಾರ್ʼ ಸಿನಿಮಾ ಮೂಲಕ ಕೈ ಹಾಕಿದ್ದಾರೆ. ಒಂದೊಳ್ಳೆಯ ಕಂಟೆಂಟ್ ಸಿನಿಮಾ.
–ಯಶಸ್ವಿ ದೇವಾಡಿಗ, ಬೆಂಗಳೂರು
ಸಿನಿಮಾ: ದರ್ಬಾರ್
ನಿರ್ದೇಶನ: ವಿ. ಮನೋಹರ್
ನಿರ್ಮಾಪಕರು: ಬಿ. ಎನ್ ಶಿಲ್ಪಾ
ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ: ಸತೀಶ್
ಛಾಯಾಗ್ರಹಣ: ಎಸ್ .ಸಾಮ್ರಾಟ್
ಸಂಗೀತ: ವಿ. ಮನೋಹರ್
ತಾರಾಗಣ: ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಜಾಹ್ನವಿ, ಹುಲಿ ಕಾರ್ತಿಕ್, ಸತೀಶ್, ಸಂತು ಕಾರ್ತೀಕ್, ನವೀನ್ ಪಡಿಲ್, ಸಾಧು ಕೋಕಿಲ ಇತರರು.
23 ವರ್ಷಗಳ ನಂತರ, ಸಂಗೀತ ನಿರ್ದೇಶಕ ವಿ. ಮನೋಹರ್ ಮತ್ತೆ ನಿರ್ದೇಶನಕ್ಕೆ ʻದರ್ಬಾರ್ʼ ಸಿನಿಮಾ ಮೂಲಕ ಕೈ ಹಾಕಿದ್ದಾರೆ. ಒಂದೊಳ್ಳೆಯ ಕಂಟೆಂಟ್ ಸಿನಿಮಾ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ರಾಜಕೀಯ ವಿಡಂಬನಾತ್ಮಕ ಕಥಾಹಂದರವಿದೆ. ಜೂನ್ 9ರಂದು ರಾಜ್ಯಾದಂತ ತೆರೆ ಕಂಡಿದ್ದು, ಹೊಸಬರ ಪ್ರಯತ್ನಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಜನ ದುಡ್ಡು ತೆಗೆದುಕೊಂಡು ಮತ ಹಾಕಿದರೆ ಪರಿಣಾಮ ಏನಾಗಲಿದೆ ಎಂಬುದೇ ಸಿನಿಮಾದ ಒನ್‌ಲೈನ್ ಸ್ಟೋರಿ. ಈ ಸಿನಿಮಾ ಮುಖ್ಯವಾಗಿ ಪ್ರಾಮಾಣಿಕ ಅಭ್ಯರ್ಥಿಗೆ ಮತದಾರರು ಮತ ಹಾಕಬೇಕು ಎಂಬ ಸಂದೇಶವನ್ನು ನೀಡುತ್ತದೆ.
ಹಳ್ಳಿಯ ಭಾಷೆಯ ಸೊಗಡು, ಗ್ರಾಮೀಣ ಭಾಗದ ಜನರ ಸ್ಥಿತಿ ಗತಿ, ಅವರ ಮುಗ್ದತೆ ಅಷ್ಟೇ ಅಲ್ಲದೇ ಸಿನಿಮಾದ ಹಿನ್ನೆಲೆ ಧ್ವನಿ ಈ ಎಲ್ಲ ಅಂಶಗಳನ್ನು ಉಳಿಸಿಕೊಳ್ಳುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಕಾಮಿಡಿ ಕಿಲಾಡಿಯಿಂದ ಬಂದ ಸಂತು ಹಾಗೂ ಹುಲಿ ಕಾರ್ತಿಕ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈ ಬಾರಿ ಇಡೀ ಸಿನಿಮಾದಲ್ಲಿ ಹುಲಿ ಕಾರ್ತಿಕ್ ಅಭಿನಯ ಅಮೋಘವಾಗಿತ್ತು. ಇದೇ ಮೊದಲ ಬಾರು ಹುಲಿ ಕಾರ್ತಿಕ್ ವಿಲನ್ ಪಾತ್ರವನ್ನು ಮಾಡಿದ್ದಾರೆ. ಸಿನಿಮಾ ಮುಗಿಯವರೆಗೂ ಅವರ ನಾಗನ ಪಾತ್ರ ಪ್ರೇಕ್ಷಕರು ಮರೆಯುವಂತಿಲ್ಲ.
ಹೊಸಬರ ಪ್ರಯತ್ನ!
ಸಿನಿಮಾದಲ್ಲಿ ಹೊಸ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಾಮಿಡಿ ಕಿಲಾಡಿ ಸಂತು ನಾಯಕನ ಜತೆಗೆ ಸದಾ ಬೆನ್ನೆಲುಬಾಗಿ ಇರುವನು. ಮೊದಲಾರ್ಧದಲ್ಲಿ ನಾಯಕ ಸತೀಶ್ ಅವರ ಮೇಲೆ ಕಥೆ ಸಾಗಿದ್ದು, ಬಳಿಕ ಖಳನಾಯಕ ಹುಲಿ ಕಾರ್ತಿಕ್ ಮೇಲೆ ಕಥೆ ಸಾಗುತ್ತದೆ. ಸಂತು ಪಾತ್ರ ತುಂಬಾ ನಗಿಸುತ್ತದೆ. ಸಂತು ಅವರ ಒಂದೊಂದು ಪಂಚಿಂಗ್ ಲೈನ್‌ಗೆ ಪ್ರೇಕ್ಷಕರು ಬಿದ್ದು ಬಿದ್ದು ನಗುವುದಂತೂ ಗ್ಯಾರಂಟಿ. ಹುಲಿ ಕಾರ್ತಿಕ್ ಕಾಮಿಡಿ ಬಿಟ್ಟು ಇದೇ ಮೊದಲ ಬಾರಿ ವಿಲನ್ ರೋಲ್ ಮಾಡಿದ್ದಾರೆ. ನಾಯಕ ಸತೀಶ್ ತಾವೊಬ್ಬರೇ ಸ್ಕ್ರೀನ್ ಮೇಲಿರಬೇಕು ಎಂದು ಯೋಚಿಸದೆ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ. ಅದಕ್ಕೆ ಉದಾಹರಣೆಯೇ ಹುಲಿ ಕಾರ್ತಿಕ್. ಪ್ರತಿ ಪಾತ್ರಕ್ಕೂ ನುರಿತ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: V Manohar: 23 ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟ ವಿ.ಮನೋಹರ್
ನಿರ್ದೇಶಕ ವಿ. ಮನೋಹರ್ ಓ ಮಲ್ಲಿಗೆ ನಂತರ ನಿರ್ದೇಶನ ಮಾಡಿರುವ ಚಿತ್ರ ದರ್ಬಾರ್. ಸಿನಿಮಾದಲ್ಲಿ ಮೂರು ಹಾಡುಗಳು ಇದ್ದು, ಟೈಟಲ್ ಸಾಂಗ್‌ವನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ನಿರ್ದೇಶಕ ವಿ. ಮನೋಹರ್ ಕಥೆಯ ಪ್ರಸ್ತುತ ಪಡಿಸಿದ ರೀತಿ ಚೆನ್ನಾಗಿಯೇ ಇದೆ. ಆದರೆ ಸಿನಿಮಾದ ಮೊದಲಾರ್ಧ ಭಾಗ ಸಿನಿಮಾ ಲ್ಯಾಗ್ ಆಗಿದ್ದು, ಎರಡನೇ ಭಾಗ ಹಾಗೇ ಪ್ರೇಕ್ಷಕರನ್ನು ಆರಾಮದಾಯಕವಾಗಿ ನೋಡಿಸಿಕೊಂಡು ಹೋಗಿದೆ. ಇನ್ನು ವಿ. ಮನೋಹರ್ ಸಂಗೀತ ಬಗ್ಗೆ ಮಾತಿಲ್ಲ. ಸಾಧು ಕೋಕಿಲ್, ನವೀನ್ ಪಡೀಲ್ ಜೋಡಿ ಕ್ಲೈಮ್ಯಾಕ್ಸ್ ಹಂತದಲ್ಲಿ ನೋಡುಗರನ್ನು ರಂಜಿಸಿತು.
ಸಿನಿಮಾ ಮೇಕಿಂಗ್ ಜತೆಗೆ ಫೈಟಿಂಗ್ ಸೀನ್‌ಗಳು ಮಿಶ್ರವಾಗಿದೆ. ಒಟ್ಟಾರೆ ಸಿನಿಮಾದಲ್ಲಿ ಹುಲಿ ಕಾರ್ತಿಕ್, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಬಿ.ಎನ್. ಶಿಲ್ಪ ಅವರು ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು ಚಿತ್ರದಲ್ಲಿವೆ.
South Cinema
Corset Fashion: ಬಣ್ಣ ಬಣ್ಣದ ಕಾರ್ಸೆಟ್ ಕ್ರಾಪ್ ಟಾಪ್ ಜಾದೂ…
ಕೇವಲ ಡೆನೀಮ್ ಹಾಗೂ ಬ್ಲಾಕ್ ಶೇಡ್‌ಗಳಿಗೆ ಸೀಮಿತವಾಗಿದ್ದ ಬಣ್ಣಬಣ್ಣದ ಕಾರ್ಸೆಟ್ ಕ್ರಾಪ್ ಟಾಪ್‌ಗಳು ಇಂದು ಯುವತಿಯರನ್ನು ಸೆಳೆದಿವೆ. ಅಲ್ಲದೇ, ಇವು ತಾರೆಯರ ನೆಚ್ಚಿನ ಔಟ್‌ಫಿಟ್‌ನಲ್ಲೊಂದಾಗಿವೆ. ಏನಿದು ಕಾರ್ಸೆಟ್ ಕ್ರಾಪ್ ಟಾಪ್ ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾರ್ಸೆಟ್ ಬಣ್ಣ ಬಣ್ಣದ ಕಾರ್ಸೆಟ್ ಟಾಪ್‌ಗಳು ಇದೀಗ ಯುವತಿಯರ ವೆಸ್ಟರ್ನ್ ಫ್ಯಾಷನ್ ಲಿಸ್ಟ್‌ಗೆ ಸೇರಿವೆ. ಈ ಹಿಂದೆ ಕೇವಲ ಡೆನೀಮ್ ಹಾಗೂ ಬ್ಲಾಕ್ ಶೇಡ್‌ಗಳಿಗೆ ಸೀಮಿತವಾಗಿದ್ದ ಕಾರ್ಸೆಟ್ ಟಾಪ್ ಇದೀಗ ಬಣ್ಣ ಬದಲಾಯಿಸಿವೆ. ಯುವತಿಯರ ನೆಚ್ಚಿನ ಟಾಪ್‌ಗಳಲ್ಲೊಂದಾಗಿರುವ ಇವು ಸಿನಿ ತಾರೆಯರ ನೆಚ್ಚಿನ ಔಟ್‌ಫಿಟ್‌ನಲ್ಲೂ ಸೇರಿವೆ.
ಏನಿದು ಕಾರ್ಸೆಟ್ ಕ್ರಾಪ್ ಟಾಪ್?
ಟಮ್ಮಿ ಭಾಗವನ್ನು ಸ್ಲಿಮ್ ಆಗಿ ಕಾಣಿಸಬಲ್ಲ ವಿನ್ಯಾಸ ಈ ಟಾಪ್‌ಗಿದೆ. ಮೂಲತಃ ಪಾಶ್ಚಿಮಾತ್ಯ ರಾಷ್ಟ್ರಗಳ ಫ್ಯಾಷನ್ ಆದ ಈ ಟಾಪ್, ಹೊಟ್ಟೆ ಭಾಗ ಸ್ಲಿಮ್ ಆಗಿ ಕಾಣಿಸುವಂತೆ ಮಾಡಬಲ್ಲ ತಂತ್ರಜ್ಞಾನ ಈ ಡಿಸೈನ್‌ನಲ್ಲಿಅಡಗಿದೆ. ಅಷ್ಟೇಕೆ! ಕರ್ವ್ಸ್ ಹೊಂದಿರುವವರಿಗೆ ಹೇಳಿ ಮಾಡಿಸಿದ ಟಾಪ್ ಇದು. ಕಾರ್ಸೆಟ್ ಟಾಪ್ ಫ್ಯಾಷನ್‌ನಲ್ಲಿಸಾಕಷ್ಟು ಡಿಸೈನ್‌ಗಳನ್ನು ನೋಡಬಹುದು. ಬಾಡಿಕವ್ರ್ಸ್ ಇರುವವರಿಗೆ ಹೇಳಿ ಮಾಡಿಸಿದ ಟಾಪ್ ಇದು ಎನ್ನುತ್ತಾರೆ ಸ್ಟೈಲಿಸ್ಟ್ ಚಿತ್ರಾ.
ಕಾರ್ಸೆಟ್ ಟಾಪ್‌ಗಳು ಯಾವ ಮಟ್ಟಿಗೆ ಫಿಟ್ಟಿಂಗ್ ಹೊಂದಿರುತ್ತವೆ ಎಂದರೇ, ಬಾಡಿ ಕರ್ವ್‌ಗೆ ತಕ್ಕಂತೆ ಅದರಲ್ಲೂ ವೇಸ್ಟ್ ಲೈನ್ ತೀರಾ ನಾಜೂಕಾಗಿ ರೂಪಿಸಲಾಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿಇಂಚು ಇಂಚಿಗೂ ಫಿಟ್ಟಿಂಗ್ ಬಗ್ಗೆ ಗಮನಹರಿಸಲಾಗಿರುತ್ತದೆ. ಹಾಗಾಗಿ ಧರಿಸಿದವರ ಬಾಡಿ ಕವ್ರ್ಸ್ ನೋಡಲು ಫಿಟ್ ಆಗಿರುವಂತೆ ಈ ಟಾಪ್‌ಗಳು ಇಲ್ಯೂಷನ್ ಕ್ರಿಯೇಟ್ ಮಾಡುತ್ತವೆ.
ಇದನ್ನೂ ಓದಿ: Skinny Dresses | ಸ್ಕಿನ್ನಿ ಉಡುಪುಗಳು ದೇಹಕ್ಕೆ ಬಾಧಕವೇ?
ಕಾರ್ಸೆಟ್ ಕ್ರಾಪ್ ಟಾಪ್ ಆಯ್ಕೆ
ಕೊಂಚ ಉದ್ದಗಿರುವವರಿಗೆ ಯಾವ ಬಗೆಯ ಕಾರ್ಸೆಟ್ ಟಾಪ್ ಆದರೂ ಸರಿಯೇ ಸೂಟ್ ಆಗುತ್ತದೆ. ಪ್ಲಂಪಿಯಾಗಿರುವವರು ಟ್ರಯಲ್ ನೋಡಿಯೇ ಆಯ್ಕೆ ಮಾಡಬೇಕು ಎನ್ನುತ್ತಾರೆ ಫ್ಯಾಷನಿಸ್ಟ್ ಸೂರಜ್. ಅವರ ಪ್ರಕಾರ, ಕಾರ್ಸೆಟ್ ಟಾಪ್‌ಗಳು ಮಾಡರ್ನ್ ಲುಕ್ ಕಲ್ಪಿಸುತ್ತವೆ. ಹಾಗಾಗಿ ತಾರೆಯರ ನೆಚ್ಚಿನ ಕ್ರಾಪ್ ಟಾಪ್‌ಗಳಲ್ಲಿ ಇವು ಸೇರಿವೆ ಎನ್ನುತ್ತಾರೆ. ಆಯಾ ಬಾಡಿ ಹೈಟ್‌ಗೆ ತಕ್ಕಂತೆ ಮ್ಯಾಚ್ ಆಗುವ ವಿನ್ಯಾಸದ ಕ್ರಾಪ್ ಕಾರ್ಸೆಟ್ ಟಾಪ್‌ಗಳನ್ನು ಧರಿಸುವುದು ಅಗತ್ಯ. ಇಲ್ಲವಾದಲ್ಲಿ ನೋಡಲು ಚೆನ್ನಾಗಿ ಕಾಣದು ಎನ್ನುತ್ತಾರೆ ಅವರು.
ಇದನ್ನೂ ಓದಿ: Skinny Dresses | ಸ್ಕಿನ್ನಿ ಉಡುಪುಗಳು ದೇಹಕ್ಕೆ ಬಾಧಕವೇ?
ಪರ್ಫೆಕ್ಟ್ ಕಾರ್ಸೆಟ್ ಕ್ರಾಪ್ ಟಾಪ್
- ಫಿಟ್ಟಿಂಗ್ ಸರಿಯಾಗಿರುವುದು ಅಗತ್ಯ.
- ಬೆನ್ನು ನೋವಿರುವವರು ಫಿಟ್ಟಿಂಗ್ ಕಾರ್ಸೆಟ್ ಆವಾಯ್ಡ್ ಮಾಡಿ.
- ಈ ಟಾಪ್ ಲೂಸಾಗಿರಕೂಡದು.
- ಪಾಸ್ಟಲ್ ಶೇಡ್‌ನವು ಹೆಚ್ಚು ಪ್ರಚಲಿತದಲ್ಲಿವೆ.
- ಜೀನ್ಸ್ ಪ್ಯಾಂಟ್-ಸ್ಕರ್ಟ್-ಲೆಹೆಂಗಾಗೂ ಮಿಕ್ಸ್ ಮ್ಯಾಚ್ ಮಾಡಬಹುದು.
- ಬಾರ್ಡಟ್, ಕೋಲ್ಡ್ ಶೋಲ್ಡರ್‌ನವು ಚಾಲ್ತಿಯಲ್ಲಿವೆ.
- ಹೈ ಹೀಲ್ಸ್ ಪರ್ಫೆಕ್ಟ್ ಲುಕ್ ನೀಡುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema23 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ದೇಶ18 hours ago
ಬದುಕುಳಿಯಲಿಲ್ಲ ಬೋರ್ವೆಲ್ಗೆ ಬಿದ್ದ ಕಂದಮ್ಮ; ಸಾವಿನ ವಿರುದ್ಧ 50 ಗಂಟೆ ಹೋರಾಟದಲ್ಲಿ ಗೆದ್ದಿದ್ದು ವಿಧಿ
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ10 hours ago
Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್ ವರ್ಲ್ಡ್ʼ