Anushka Shetty | ಅನುಷ್ಕಾ ಶೆಟ್ಟಿ ಹೊಸ ಚಿತ್ರದ ಲುಕ್‌ ರಿವೀಲ್‌! - Vistara News

ಟಾಲಿವುಡ್

Anushka Shetty | ಅನುಷ್ಕಾ ಶೆಟ್ಟಿ ಹೊಸ ಚಿತ್ರದ ಲುಕ್‌ ರಿವೀಲ್‌!

ಅನುಷ್ಕಾ ಶೆಟ್ಟಿ ಕಂಬ್ಯಾಕ್ ಚಿತ್ರದಲ್ಲಿನ (Anushka Shetty)ತಮ್ಮ ಲುಕ್ ರಿವೀಲ್ ಮಾಡುವ ಮೂಲಕ ನಟಿ ಗಮನ ಸೆಳೆಯುತ್ತಿದ್ದಾರೆ. ಮೂರು ವರ್ಷಗಳ ನಂತರ ಮತ್ತೆ ಕಮ್‌ಬ್ಯಾಕ್‌ ಆಗಿದ್ದಾರೆ.

VISTARANEWS.COM


on

Anushka Shetty
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ನಟಿ ಅನುಷ್ಕಾ ಶೆಟ್ಟಿ (Anushka Shetty) 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ದಿನದಂದು ಹೊಸ ಚಿತ್ರದ ಲುಕ್‌ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಮಾಸ್ಟರ್‌ ಶೆಫ್‌ ಆಗಿ ಕಾಣಿಸಿಕೊಂಡಿದ್ದಾರೆ. ಮೂರು ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ನವೀನ್ ಪೊಲಿಶೆಟ್ಟಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಅನ್ವಿತಾ ರಾವಲಿಶೆಟ್ಟಿ ಎಂಬುದು ಅನುಷ್ಕಾ ಶೆಟ್ಟಿ ಅವರ ಪಾತ್ರದ ಹೆಸರಾಗಿದೆ. ಯುವಿ ಕ್ರಿಯೇಷನ್ಸ್‌ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರತಂಡ ಅನುಷ್ಕಾ ಪಾತ್ರದ ಲುಕ್ ರಿವೀಲ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ಪಿ ಮಹೇಶ್‌ ಬಾಬು ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.

ಇದನ್ನೂ ಓದಿ | Kantara Movie | ʻರಿಷಬ್‌ ಶೆಟ್ಟಿ ನೀವು ನಿಜಕ್ಕೂ ಅದ್ಭುತʼ ಎಂದ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ!

ಸದ್ಯ ಅನುಷ್ಕಾ ಶೆಟ್ಟಿ ಅವರು ಮ್ಯಾಥ್ಯೂ ಥಾಮಸ್ ನಿರ್ದೇಶನದ ಚಿತ್ರವಾದ ‘ಒಟ್ಟಕ್ಕಂಬನ್’ ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಬೇಕಿದೆ.

ಇದನ್ನೂ ಓದಿ | Actor Prabhas | ಪ್ರಭಾಸ್‌ ಜನುಮದಿನಕ್ಕೆ ʻಬಿಲ್ಲಾʼ ರಿ ರಿಲೀಸ್‌: ಬಿಕಿನಿಯಲ್ಲಿ ಅನುಷ್ಕಾ ಶೆಟ್ಟಿ ಎಂಟ್ರಿ, ಹುಚ್ಚೆದ್ದು ಕುಣಿದ ಫ್ಯಾನ್ಸ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kalki 2898 AD: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ʼಕಲ್ಕಿʼ; ಬಿಡುಗಡೆಯಾದ 5ನೇ ದಿನ ಗಳಿಸಿದ್ದು ಬರೋಬ್ಬರಿ 84 ಕೋಟಿ ರೂ.

Kalki 2898 AD:  ʼಕಲ್ಕಿ 2898 ಎಡಿʼ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನಾಗಾಲೋಟ ಮುಂದುವರಿಸಿದೆ. ಜೂನ್ 27ರಂದು ವಿಶ್ವಾದ್ಯಂತ ತೆರೆಕಂಡ, ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸೈನ್ಸ್‌ ಫಿಕ್ಷನ್‌ ದಾಖಲೆಯ ಕಲೆಕ್ಷನ್‌ ಮಾಡಿದೆ. ಅದರಲ್ಲಿಯೂ ಚಿತ್ರ ಬಿಡುಗಡೆಯಾಗಿ 5 ದಿನ ಕಳೆದರೂ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. 5ನೇ ದಿನವಾದ ಸೋಮವಾರ (ಜುಲೈ 2) ʼಕಲ್ಕಿʼ ಚಿತ್ರ ಜಾಗತಿಕವಾಗಿ ಬರೋಬ್ಬರಿ 84 ಕೋಟಿ ರೂ. ಗಳಿಸಿದೆ. ಈ ಮೂಲಕ ಮಲ್ಟಿ ಸ್ಟಾರರ್‌ ಚಿತ್ರ ಒಟ್ಟು 635 ಕೋಟಿ ರೂ. ಬಾಚಿಕೊಂಡಿದೆ. ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿ ತೆರೆ ಹಂಚಿಕೊಂಡಿದ್ದು, ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Kalki 2898 AD
Koo

ಮುಂಬೈ:  ʼಕಲ್ಕಿ 2898 ಎಡಿʼ (Kalki 2898 AD) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನಾಗಾಲೋಟ ಮುಂದುವರಿಸಿದೆ. ಜೂನ್ 27ರಂದು ವಿಶ್ವಾದ್ಯಂತ ತೆರೆಕಂಡ ಈ ಸೈನ್ಸ್‌ ಫಿಕ್ಷನ್‌ ದಾಖಲೆಯ ಕಲೆಕ್ಷನ್‌ ಮಾಡಿದೆ. ಅದರಲ್ಲಿಯೂ ಚಿತ್ರ ಬಿಡುಗಡೆಯಾಗಿ 5 ದಿನ ಕಳೆದರೂ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. 5ನೇ ದಿನವಾದ ಸೋಮವಾರ (ಜುಲೈ 2) ʼಕಲ್ಕಿʼ ಚಿತ್ರ ಜಾಗತಿಕವಾಗಿ ಬರೋಬ್ಬರಿ 84 ಕೋಟಿ ರೂ. ಗಳಿಸಿದೆ. ಈ ಮೂಲಕ ಮಲ್ಟಿ ಸ್ಟಾರರ್‌ ಚಿತ್ರ ಒಟ್ಟು 635 ಕೋಟಿ ರೂ. ಬಾಚಿಕೊಂಡಿದೆ.

ಭಾರತದಲ್ಲಿ ಗಳಿಸಿದ್ದೆಷ್ಟು?

ಸೋಮವಾರ ಭಾರತವೊಂದರಲ್ಲೇ ʼಕಲ್ಕಿʼ ಸುಮಾರು 34.6 ಕೋಟಿ ರೂ. ಗಳಿಸಿದೆ ಎಂದು ವರದಿಯೊಂದು ತಿಳಿಸಿದೆ. ʼʼಸೋಮವಾರ ಭಾರತದಲ್ಲಿ ಎಲ್ಲ ಭಾಷೆಗಳಲ್ಲಿ ಸೇರಿ ಸೇರಿ ಸುಮಾರು 34.6 ಕೋಟಿ ರೂ. ಬಾಚಿಕೊಂಡಿದೆ. ಇನ್ನು ಜಗತ್ತಿನ ವಿವಿಧ ಕಡೆಗಳ ಕಲೆಕ್ಷನ್‌ 45-50 ಕೋಟಿ ರೂ. ಹೀಗೆ ಒಂದೇ ದಿನ ಸುಮಾರು 84 ಕೋಟಿ ರೂ. ಬಾಚಿಕೊಂಡಿದ್ದು, ಒಟ್ಟು ಕಲೆಕ್ಷನ್‌ 635 ಕೋಟಿ ರೂ,ಗೆ ತಲುಪಿದೆʼʼ ಎಂದು ವರದಿ ತಿಳಿಸಿದೆ. ಅಧಿಕೃತ ಹೇಳಿಕೆ ಇನ್ನಷ್ಟೇ ಹೊರ ಬರಬೇಕಿದೆ. ಚಿತ್ರವನ್ನು ಸುಮಾರು 600 ಕೋಟಿ ರೂ. ಬಜೆಟ್‌ನಲ್ಲಿ ತಯಾರಿಸಲಾಗಿದ್ದು, ಈಗಾಗಲೇ ಹಾಕಿದ ದುಡ್ಡು ವಾಪಸ್‌ ಬಂದಂತಾಗಿದೆ.

ರಿಲೀಸ್‌ ಆದ 4 ದಿನಕ್ಕೆ ʼಕಲ್ಕಿʼ ಜಾಗತಿಕವಾಗಿ 550 ಕೋಟಿ ರೂ. ಗಳಿಸಿದೆ ಎಂದು ಈ ಹಿಂದೆ ಚಿತ್ರತಂಡ ಘೋಷಿಸಿತ್ತು. ಮೊದಲ ದಿನವೇ ಸಿನಿಮಾ ಸುಮಾರು 191 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಆ ಮೂಲಕ ಮೊದಲ ದಿನ ಅತ್ಯಧಿಕ ಕಲೆಕ್ಷನ್‌ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ತೆಲುಗಿನ ʼಆರ್‌ಆರ್‌ಆರ್‌ʼ ಮತ್ತು ʼಬಾಹುಬಲಿ 2ʼ ಮೊದಲೆರಡು ಸ್ಥಾನಗಳಲ್ಲಿವೆ.

ಭರ್ಜರಿ ಗಳಿಕೆ

ಮೊದಲ ದಿನ ಭರ್ಜರಿ 191 ಕೋಟಿ ರೂ. ಗಳಿಸಿದ ʼಕಲ್ಕಿʼ ಆ ಮೂಲಕ ಸ್ಯಾಂಡಲ್‌ವುಡ್‌ನ ʼಕೆಜಿಎಫ್‌ 2ʼ (159 ಕೋಟಿ ರೂ.), ʼಸಲಾರ್‌ʼ (158 ಕೋಟಿ ರೂ.), ʼಲಿಯೋʼ (142.75 ಕೋಟಿ ರೂ.), ʼಸಾಹೋʼ (130 ಕೋಟಿ ರೂ.) ಮತ್ತು ʼಜವಾನ್‌ʼ (129 ಕೋಟಿ ರೂ.) ದಾಖಲೆ ಮುರಿದೆ. ಅದಾಗ್ಯೂ 223 ಕೋಟಿ ರೂ. ಕಲೆಕ್ಷನ್‌ ಮಾಡಿದ ʼಆರ್‌ಆರ್‌ಆರ್‌ʼ ಮತ್ತು 217 ಕೋಟಿ ರೂ. ಗಳಿಸಿದ ʼಬಾಹುಬಲಿ 2ʼ ಈಗಲೂ ಮೊದಲ ದಿನದ ಕಲೆಕ್ಷನ್‌ ವಿಚಾರದಲ್ಲಿ ಮೊದಲೆರಡು ಸ್ಥಾನಗಳಲ್ಲಿ ಭದ್ರವಾಗಿವೆ.

ಬಹುತಾರಾಗಣ

ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್‌ ಕಟ್‌ ಹೇಳಿರುವ ʼಕಲ್ಕಿʼಯಲ್ಲಿ ಬಹುತಾರಾಗಣವಿದೆ. ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿ ತೆರೆ ಹಂಚಿಕೊಂಡಿದ್ದು, ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ತಾರೆಗಳಾದ ಕಮಲ್‌ ಹಾಸನ್‌, ಶೋಭನಾ ಮತ್ತಿತರರು ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಕಂಡ ʻಕಲ್ಕಿʼ: ಪ್ರಭಾಸ್‌ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಧೂಳೀಪಟ!

Continue Reading

ಟಾಲಿವುಡ್

Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಕಂಡ ʻಕಲ್ಕಿʼ: ಪ್ರಭಾಸ್‌ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಧೂಳೀಪಟ!

Kalki 2898 AD: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಈ ಚಿತ್ರ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 300.6 ಕೋಟಿ ರೂ. ಗಳಿಸಿದೆ. ವರದಿಗಳ ಪ್ರಕಾರ, ಕಲ್ಕಿ 2898 AD ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಮೀರಿದೆ.ಭಾನುವಾರ ಈ ಸಿನಿಮಾ 83.2 ಕೋಟಿ ರೂಪಾಯಿ ಗಳಿಸಿದೆ.

VISTARANEWS.COM


on

Kalki 2898 AD Prabhas Film Hits Jackpot 500 Cr WW In Opening
Koo

ಬೆಂಗಳೂರು: ಕಲ್ಕಿ 2898 AD (Kalki 2898 AD) ಕಲ್ಕಿ 2898 ಎಡಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ನಾಗ್ ಅಶ್ವಿನ್ ಅವರ ಕಲ್ಕಿ 2898 AD ಜೂನ್ 27 ರಂದು ಬಿಡುಗಡೆಯಾಯಿತು. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಈ ಚಿತ್ರ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 300.6 ಕೋಟಿ ರೂ. ಗಳಿಸಿದೆ. ವರದಿಗಳ ಪ್ರಕಾರ, ಕಲ್ಕಿ 2898 AD ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಮೀರಿದೆ.ಭಾನುವಾರ ಈ ಸಿನಿಮಾ 83.2 ಕೋಟಿ ರೂಪಾಯಿ ಗಳಿಸಿದೆ.

ಕಲ್ಕಿ 2898 AD ತನ್ನ ಆರಂಭಿಕ ದಿನದಲ್ಲಿ 95.3 ಕೋಟಿ ರೂ. ಮತ್ತು ಶುಕ್ರವಾರ 57.6 ಕೋಟಿ ರೂ. ಭಾರತದಲ್ಲಿ ಗಳಿಸಿತು. ಶನಿವಾರ 67.1 ಕೋಟಿ ರೂ. ಮತ್ತು ಭಾನುವಾರ 83.2 ಕೋಟಿ ರೂ. ಗಳಿಸಿದ ಈ ಚಿತ್ರ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಚಿತ್ರದ ಒಟ್ಟು ಮೊತ್ತ 300.6 ಕೋಟಿ ರೂ. ಆಗಿದೆ. ವಿಶ್ವಾದ್ಯಂತ ಮೂರು ದಿನಗಳಲ್ಲಿ ಚಿತ್ರ 415 ಕೋಟಿ ಗಳಿಸಿದೆ. ವಾರದ ದಿನಗಳಲ್ಲೂ ಚಿತ್ರ ತನ್ನ ಯಶಸ್ವಿ ಪ್ರದರ್ಶನವನ್ನು ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಕಲ್ಕಿ 2898 AD ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ 2D ಮತ್ತು 3D ನಲ್ಲಿ ಬಿಡುಗಡೆಯಾಯಿತು.

ಕರ್ನಾಟಕದಲ್ಲಿ ‘ಕಲ್ಕಿ2898 AD’ ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 219 ಸ್ಕ್ರೀನ್‌ಗಳಲ್ಲಿ ತೆಲುಗು, 100 ಸ್ಕ್ರೀನ್‌ಗಳಲ್ಲಿ ಕನ್ನಡ, 85 ಸ್ಕ್ರೀನ್‌ಗಳಲ್ಲಿ ಹಿಂದಿ, 40 ಸ್ಕ್ರೀನ್‌ಗಳಲ್ಲಿ ತಮಿಳು ಭಾಷೆಯ ಕಲ್ಕಿ ರಿಲೀಸ್ ಆಗಿದ್ದವು. ಈ ನಾಲ್ಕು ಭಾಷೆಗಳಿಂದ ಕರ್ನಾಟಕದಲ್ಲಿ ‘ಕಲ್ಕಿ2898 AD’ ಗಳಿಸಿದ್ದು ಬರೋಬ್ಬರಿ 6.7 ಕೋಟಿ ರೂಪಾಯಿ (Nett) ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.

ಇದನ್ನೂ ಓದಿ: Kalki 2898 AD: ಮೂರನೇ ದಿನ ಭರ್ಜರಿ ಗಳಿಕೆ ಕಂಡ ‘ಕಲ್ಕಿ 2898 ಎಡಿ’ ಸಿನಿಮಾ ! 

ಕಲ್ಕಿ 2898 AD ಜೂನ್ 27 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಲನಚಿತ್ರವು ಈಗಾಗಲೇ ತನ್ನ ಮುಂಗಡ ಬುಕಿಂಗ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ.

ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

Continue Reading

ಟಾಲಿವುಡ್

Kamal Haasan: ನನ್ನ ಪಾತ್ರ ಚಿಕ್ಕದಿರಬಹುದು ಆದರೆ ಇದು ಆರಂಭವಷ್ಟೇ ಎಂದು ಕಲ್ಕಿ ಭಾಗ- 2ರ ಸುಳಿವು ಕೊಟ್ಟ ಕಮಲ್‌ ಹಾಸನ್‌!

Kamal Haasan: ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ನಟ ಮಾತನಾಡಿ, “ಕಲ್ಕಿಯಲ್ಲಿ, ನಾನು ಕೆಲವೇ ನಿಮಿಷಗಳ ಕಾಲ ಕಾಣಿಸಿಕೊಳ್ಳುವ ಸಣ್ಣ ಪಾತ್ರವನ್ನು ನಿರ್ವಹಿಸಿದ್ದೇನೆ. ಚಿತ್ರದಲ್ಲಿ ನನ್ನ ನಿಜವಾದ ಭಾಗ ಪ್ರಾರಂಭವಾಗುವುದು ಎರಡನೇ ಪಾರ್ಟ್‌ನಲ್ಲಿ. ಈ ಚಿತ್ರವನ್ನು ನಾನು ಕೂಡ ಒಬ್ಬ ಅಭಿಮಾನಿಯಾಗಿ ನೋಡಿದೆʼʼಎಂದು ಹೇಳಿದರು.

VISTARANEWS.COM


on

Kamal Haasan on limited screen time in 'Kalki 2898 AD
Koo

ಬೆಂಗಳೂರು: 2024ರ ಬಹು ನಿರೀಕ್ಷಿತ ಚಿತ್ರ ಕಲ್ಕಿ 2898ಎಡಿ (Kalki 2898 AD) ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತೀ ದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿದ್ದು ಮಾತ್ರವಲ್ಲದೇ ಚಿತ್ರದ ಮುಂದಿನ ಸರಣಿ ಶೀಘ್ರದಲ್ಲೇ ತೆರೆ ಕಾಣುವ ನಿರೀಕ್ಷೆಯನ್ನು ಮೂಡಿಸಿದೆ. ಕಮಲ್ ಹಾಸನ್ (Kamal Haasan) ಅವರು ತನ್ನ ಪಾತ್ರ ಮತ್ತು ಚಿತ್ರದ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ.

ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ನಟ ಮಾತನಾಡಿ, “ಕಲ್ಕಿಯಲ್ಲಿ, ನಾನು ಕೆಲವೇ ನಿಮಿಷಗಳ ಕಾಲ ಕಾಣಿಸಿಕೊಳ್ಳುವ ಸಣ್ಣ ಪಾತ್ರವನ್ನು ನಿರ್ವಹಿಸಿದ್ದೇನೆ. ಚಿತ್ರದಲ್ಲಿ ನನ್ನ ನಿಜವಾದ ಭಾಗ ಪ್ರಾರಂಭವಾಗುವುದು ಎರಡನೇ ಪಾರ್ಟ್‌ನಲ್ಲಿ. ಈ ಚಿತ್ರವನ್ನು ನಾನು ಕೂಡ ಒಬ್ಬ ಅಭಿಮಾನಿಯಾಗಿ ನೋಡಿದೆʼʼಎಂದು ಹೇಳಿದರು.

“ಭಾರತೀಯ ಸಿನಿಮಾ ಜಾಗತಿಕ ಮನರಂಜನೆಯತ್ತ ಸಾಗುತ್ತಿದೆ ಎಂಬುದಕ್ಕೆ ನಾವು ಅನೇಕ ಸೂಚಕಗಳನ್ನು ನೋಡುತ್ತಿದ್ದೇವೆ. ಅವುಗಳಲ್ಲಿ ಕಲ್ಕಿ 2898 AD ಒಂದು. ನಾಗ್ ಅಶ್ವಿನ್ ಯಾವುದೇ ಧಾರ್ಮಿಕ ಪಕ್ಷಪಾತವಿಲ್ಲದೆ ಪುರಾಣದ ವಿಷಯವನ್ನು ಎಚ್ಚರಿಕೆಯಿಂದ ನಿರ್ವಹಿಸಿದ್ದಾರೆ. ಪ್ರಪಂಚದಾದ್ಯಂತ, ಜಪಾನ್, ಚೀನಾ, ಮತ್ತು ಗ್ರೀಕ್ ನಾಗರೀಕತೆಗಳು ಭಾರತೀಯ ಕಥಾ ಪರಂಪರೆಯ ಹತ್ತಿರ ಬರಬಹುದು. ಅಶ್ವಿನ್ ಅದರಿಂದ ಕಥೆಗಳನ್ನು ಆರಿಸಿಕೊಂಡರುʼʼಎಂದರು.

“ಯಾರಾದರೂ ನನ್ನ ಬಳಿ ಬಂದು ಯಾಸ್ಕಿನ್‌ನ ವಯಸ್ಸನ್ನು ಕೇಳಿದರೆ, ನಾನು ಧೈರ್ಯದಿಂದ ಹೇಳುತ್ತೇನೆ, ‘ಊಹಿಸಿ, ಅದು ನಿಮ್ಮ ಆಯ್ಕೆ’. ಎಂದು. ಬಹುಶಃ ಅವರಿಗೆ 180 ವರ್ಷ. ನಾನು ಕಲ್ಕಿ 2898 AD ಯಲ್ಲಿ ಬಹಳ ಚಿಕ್ಕ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ, ಆದರೆ ಇದು ನನಗೆ ಕುತೂಹಲ ಮೂಡಿಸಿದ ಮುಂದಿನ ಭಾಗವಾಗಿದೆ. ಈ ಭಾಗದಲ್ಲಿ ಸೀಮಿತ ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇನೆʼʼಎಂದರು.

ಇದನ್ನೂ ಓದಿ: Kamal Haasan: ಮುಂದೊಂದು ದಿನ ದೀಪಿಕಾ ಮಗು ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದ ಕಮಲ್‌ ಹಾಸನ್‌!

ಕಲ್ಕಿ 2898ಎಡಿ ದೊಡ್ಡ ಪರದೆಯ ಮೇಲೆ ದಾಖಲೆಯನ್ನೇ ಬರೆದಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿದಂತೆ ಬಹುದೊಡ್ಡ ತಾರಾ ಬಳಗವನ್ನೇ ಹೊಂದಿದ್ದು, ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿದೆ.ಚಿತ್ರದ ಮುಂದುವರಿದ ಭಾಗ ಶೀಘ್ರದಲ್ಲೇ ತೆರೆ ಕಾಣಲಿದೆ ಎಂಬ ಸಂದೇಶದೊಂದಿಗೆ ಕಲ್ಕಿ 2898ಎಡಿ ಚಲನಚಿತ್ರವು ಮುಕ್ತಾಯಗೊಂಡಿರುವುದರಿಂದ 2898ಎಡಿ ಚಿತ್ರ ಭಾಗ 2 ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ.

ಕಮಲ್ ಹಾಸನ್ ನಿರ್ವಹಿಸಿರುವ ಅಸಾಧಾರಣ ಪಾತ್ರ ಯಾಸ್ಕಿನ್ ನ ಅಪಾಯಕಾರಿ ಕಾರ್ಯಾಚರಣೆಯೊಂದಿಗೆ ‘ಕಲ್ಕಿ 2898ಎಡಿ ಭಾಗ 2 ಪ್ರಾರಂಭವಾಗುವ ನಿರೀಕ್ಷೆ ಇದೆ. ಚಿತ್ರದ ಮೊದಲ ಭಾಗದಲ್ಲಿ ಕಮಲ್ ಹಾಸನ್ ಅವರ ಚಿಕ್ಕ ಪಾತ್ರವನ್ನು ಮಾತ್ರ ತೋರಿಸಲಾಗಿದೆ. ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ, ಪ್ರಭಾಸ್ ಭೈರವ ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯಾಸ್ಕಿನ್ ಅವರನ್ನು ಹೇಗೆ ಎದುರಿಸಲು ಯೋಜಿಸುತ್ತಾರೆ ಎಂಬುದರ ಸುತ್ತ ಕಥೆ ಕೇಂದ್ರೀಕೃತವಾಗಿದೆ.

ಕಲ್ಕಿ 2898ಎಡಿ ಭಾಗ 2 ಚಿತ್ರ ನಿರ್ಮಾಣಕ್ಕೆ ಮೂರು ವರ್ಷಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಭಾಸ್ ಈ ವಿಭಾಗವನ್ನು ಎರಡು ಭಾಗಗಳಾಗಿ ವಿಂಗಡಿಸುವ ಬಗ್ಗೆ ಸುಳಿವು ನೀಡಿದ್ದಾರೆ. ವಿವಿಧ ಸಂದರ್ಶನಗಳಲ್ಲಿ ತಮ್ಮ ಮುಂದಿನ ಸರಣಿಯ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಸುಮಾರು ಮೂರು ವರ್ಷಗಳಲ್ಲಿ ಎರಡನೇ ಕಂತನ್ನು ಅಭಿಮಾನಿಗಳು ಎದುರು ನೋಡಬಹುದು ಎಂದು ನಾಗ್ ಅಶ್ವಿನ್ ಕೂಡ ಖಚಿತಪಡಿಸಿದ್ದಾರೆ.

ಭವ್ಯವಾದ ವೈಜ್ಞಾನಿಕ ಮಹಾಕಾವ್ಯ ‘ಕಲ್ಕಿ 2898ಎಡಿ’ ಚಿತ್ರಮಂದಿರಗಳಿಗೆ ಆಗಮಿಸಿದ್ದು, ಹಿಂದೂ ಧರ್ಮಗ್ರಂಥಗಳಿಂದ ಪ್ರೇರಿತವಾಗಿದೆ. ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ದೈವಿಕ ಜೀವಿಗಳ ಮೂಲವನ್ನು ವಿವರಿಸುವ ಈ ಚಿತ್ರವೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಥಾಹಂದರ, ಉಸಿರುಕಟ್ಟುವ ದೃಶ್ಯವಳಿಗಳು ಮತ್ತು ವಿಶಿಷ್ಟ ಪರಿಕಲ್ಪನೆ ಮಂತ್ರಮುಗ್ಧರನ್ನಾಗಿಸುತ್ತದೆ. ಇದು ಭಾರತೀಯ ಚಿತ್ರರಂಗದಲ್ಲಿ ಒಂದು ಅದ್ಭುತ ಸಾಧನೆಯನ್ನು ಸೂಚಿಸುತ್ತದೆ.

ಈ ಚಿತ್ರವು ಭಾರತದ ‘ಅವೆಂಜರ್ಸ್ ಕ್ಷಣ’. ವೈಜ್ಞಾನಿಕ, ಕಾಲ್ಪನಿಕ ಮತ್ತು ಪುರಾಣದ ಅಂಶಗಳನ್ನು ಅದ್ಭುತವಾಗಿ ಸಂಯೋಜಿಸುತ್ತದೆ. ಚಿತ್ರದ ಸುತ್ತ ಹೆಚ್ಚಿನ ನಿರೀಕ್ಷೆಗಳಿವೆ ಎಂದು ರಾಣಾ ದಗ್ಗುಬಾಟಿ ಅಭಿಪ್ರಾಯ ಪಟ್ಟಿದ್ದಾರೆ.

Continue Reading

ಟಾಲಿವುಡ್

Kalki 2898 AD: ಮೂರನೇ ದಿನ ಭರ್ಜರಿ ಗಳಿಕೆ ಕಂಡ ‘ಕಲ್ಕಿ 2898 ಎಡಿ’ ಸಿನಿಮಾ ! 

Kalki 2898 AD: ಕರ್ನಾಟಕದಲ್ಲಿ ‘ಕಲ್ಕಿ2898 AD’ ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 219 ಸ್ಕ್ರೀನ್‌ಗಳಲ್ಲಿ ತೆಲುಗು, 100 ಸ್ಕ್ರೀನ್‌ಗಳಲ್ಲಿ ಕನ್ನಡ, 85 ಸ್ಕ್ರೀನ್‌ಗಳಲ್ಲಿ ಹಿಂದಿ, 40 ಸ್ಕ್ರೀನ್‌ಗಳಲ್ಲಿ ತಮಿಳು ಭಾಷೆಯ ಕಲ್ಕಿ ರಿಲೀಸ್ ಆಗಿದ್ದವು. ಈ ನಾಲ್ಕು ಭಾಷೆಗಳಿಂದ ಕರ್ನಾಟಕದಲ್ಲಿ ‘ಕಲ್ಕಿ2898 AD’ ಗಳಿಸಿದ್ದು ಬರೋಬ್ಬರಿ 6.7 ಕೋಟಿ ರೂಪಾಯಿ (Nett) ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.

VISTARANEWS.COM


on

Koo

ಬೆಂಗಳೂರು: ನಾಗ್ ಅಶ್ವಿನ್ ಅವರ ಕಲ್ಕಿ 2898 AD ಜೂನ್ 27 ರಂದು (Kalki 2898 AD) ಬಿಡುಗಡೆಯಾಯಿತು. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್ ಮತ್ತು ಕಮಲ್ ಹಾಸನ್ ನಟಿಸಿದ ಈ ಚಿತ್ರ ಮೂರು ದಿನಗಳಲ್ಲಿ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 220 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ.

ಕಲ್ಕಿ 2898 AD ತನ್ನ ಆರಂಭಿಕ ದಿನದಲ್ಲಿ 95.3 ಕೋಟಿ ರೂ. ಮತ್ತು ಎರಡನೇ ದಿನ 57.6 ಕೋಟಿ ರೂ. ಭಾರತದಲ್ಲಿ ಗಳಿಕೆ ಕಂಡಿತ್ತು. ನಿನ್ನೆ ಅಂದರೆ ಮೂರನೇ ದಿನ 67.1 ಕೋಟಿ ರೂ. ಗಳಿಸಿ, ಒಟ್ಟು 220 ಕೋಟಿ ವರೆಗೆ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಎರಡು ದಿನಗಳಲ್ಲಿ 298.5 ಕೋಟಿ ರೂ. ಗಳಿಸಿದೆ. ಭಾನುವಾರದಂದು (ಇಂದು) ಚಿತ್ರ ಯಾವ ರೀತಿ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಕಲ್ಕಿ 2898 AD ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ 2D ಮತ್ತು 3D ನಲ್ಲಿ ಬಿಡುಗಡೆಯಾಗಿದೆ.

ಭಾರತದಲ್ಲಿ ಕೇವಲ ಮೂರು ದಿನಕ್ಕೆ 200 ಕೋಟಿ ಕಲೆಕ್ಷನ್ ಅನ್ನು ದಾಟಿದೆ. ಭಾರತದಲ್ಲಿ ಮೂರು ದಿನದಲ್ಲಿ ‘ಕಲ್ಕಿ’ ಸಿನಿಮಾ ಸುಮಾರು 225 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದ ಕಮಲ್, “ಭಾರತೀಯ ಸಿನಿಮಾ ಜಾಗತಿಕವಾಗಿ ಮನರಂಜನೆ ನೀಡುತ್ತಿದೆ. ಅವುಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ಕೂಡ. ನಾಗ್ ಅಶ್ವಿನ್ ಯಾವುದೇ ಧಾರ್ಮಿಕ ಪಕ್ಷಪಾತವಿಲ್ಲದೆ ಪುರಾಣದ ವಿಷಯವನ್ನು ಎಚ್ಚರಿಕೆಯಿಂದ ನಿಭಾಯಿಸಿದ್ದಾರೆ. ಪ್ರಪಂಚದಾದ್ಯಂತ, ಜಪಾನ್, ಚೀನಾ ಮತ್ತು ಗ್ರೀಕ್ ನಾಗರಿಕತೆಗಳು ಮಾತ್ರ ಭಾರತೀಯ ಪರಂಪರೆಯ ಕಥಾಹಂದರದ ಹತ್ತಿರ ಬರಬಹುದು. ಅಶ್ವಿನ್ ಅದರಲ್ಲಿ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಎಲ್ಲರನ್ನು ಒಟ್ಟಿಗೆ ಸೇರಿಸುವ ಮೂಲಕ ಹೆಚ್ಚು ತಾಳ್ಮೆಯಿಂದ ನಿಭಾಯಿಸಿದ್ದಾರೆʼʼಎಂದರು.

ಇದನ್ನೂ ಓದಿ: Kannada New Movie: ಸೆನ್ಸಾರ್ ಅಂಗಳದಲ್ಲಿ ‘ಬ್ಯಾಕ್ ಬೆಂಚರ್ಸ್’ ಸಿನಿಮಾ!


ಚಿತ್ರದಲ್ಲಿ ಪ್ರಭಾಸ್ ಭೈರವನಾಗಿ, ದೀಪಿಕಾ SUM-80 ಆಗಿ, ಅಮಿತಾಭ್‌ ಅಶ್ವತ್ಥಾಮನಾಗಿ ಮತ್ತು ಕಮಲ್ ಸುಪ್ರೀಂ ಯಾಸ್ಕಿನ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ದಿಶಾ ಪಟಾನಿ ರಾಕ್ಸಿಯಾಗಿ ನಟಿಸಿದ್ದಾರೆ. ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್, ದುಲ್ಕರ್ ಸಲ್ಮಾನ್, ಫರಿಯಾ ಅಬ್ದುಲ್ಲಾ ಮತ್ತು ಇತರರು ಅತಿಥಿ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಕರ್ನಾಟಕದಲ್ಲಿ ‘ಕಲ್ಕಿ2898 AD’ ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 219 ಸ್ಕ್ರೀನ್‌ಗಳಲ್ಲಿ ತೆಲುಗು, 100 ಸ್ಕ್ರೀನ್‌ಗಳಲ್ಲಿ ಕನ್ನಡ, 85 ಸ್ಕ್ರೀನ್‌ಗಳಲ್ಲಿ ಹಿಂದಿ, 40 ಸ್ಕ್ರೀನ್‌ಗಳಲ್ಲಿ ತಮಿಳು ಭಾಷೆಯ ಕಲ್ಕಿ ರಿಲೀಸ್ ಆಗಿದ್ದವು. ಈ ನಾಲ್ಕು ಭಾಷೆಗಳಿಂದ ಕರ್ನಾಟಕದಲ್ಲಿ ‘ಕಲ್ಕಿ2898 AD’ ಗಳಿಸಿದ್ದು ಬರೋಬ್ಬರಿ 6.7 ಕೋಟಿ ರೂಪಾಯಿ (Nett) ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.

ಕಲ್ಕಿ 2898 AD ಜೂನ್ 27 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಲನಚಿತ್ರವು ಈಗಾಗಲೇ ತನ್ನ ಮುಂಗಡ ಬುಕಿಂಗ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ.

ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

Continue Reading
Advertisement
Gold Rate Today
ಚಿನ್ನದ ದರ24 seconds ago

Gold Rate Today: ಮತ್ತೆ ಮೇಲ್ಮುಖವಾಗಿ ಸಾಗಿದ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

Road Accident
ಕ್ರೈಂ16 mins ago

Road Accident : ಹೆದ್ದಾರಿಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್‌ಗೆ ‌ವೃದ್ಧ ಸಾವು; ಯುವಕನ ತಲೆ ಮೇಲೆ ಹರಿದ ಟ್ಯಾಂಕರ್‌

Virat Kohli
ಕ್ರೀಡೆ30 mins ago

Virat Kohli: ಬುರ್ಜ್‌ ಖಲೀಫಾದಲ್ಲಿ ಕಣ್ಮನ ಸೆಳೆದ ವಿರಾಟ್​ ಕೊಹ್ಲಿಯ ಫೋಟೊ; ವಿಡಿಯೊ ವೈರಲ್​

Stock Market
ವಾಣಿಜ್ಯ38 mins ago

Stock Market: ಷೇರು ಪೇಟೆಯಲ್ಲಿ ಗೂಳಿ ನೆಗೆತ; 80,000 ಅಂಕಗಳ ಗಡಿ ತಲುಪಿದ ಸೆನ್ಸೆಕ್ಸ್‌

self harming mysore
ಕ್ರೈಂ53 mins ago

Self Harming: ಅಳಿಯನಿಂದ ಕೊಲೆಯಾದ ಪುತ್ರ, ಅಗಲಿಕೆ ಸಹಿಸದೆ ತಾಯಿ ಆತ್ಮಹತ್ಯೆ

police constable commits suicide by jumping into well
ಬೆಂಗಳೂರು1 hour ago

Police constable : ಬೆನ್ನಿಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿದ ಮಡಿವಾಳ ಪೊಲೀಸ್‌ ಕಾನ್ಸ್‌ಟೇಬಲ್!

Euro 2024
ಕ್ರೀಡೆ1 hour ago

Euro 2024: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಪೋರ್ಚುಗಲ್; ಫ್ರಾನ್ಸ್ ಎದುರಾಳಿ

Yogi Adityanath
ದೇಶ1 hour ago

Yogi Adityanath: ಉತ್ತರಪ್ರದೇಶಕ್ಕೆ ಅಪಮಾನ ಮಾಡಲು ರಾಹುಲ್‌ ಗಾಂಧಿ ಸಂಚು; ಯೋಗಿ ಕಿಡಿ

Good News For Farmers
ದೇಶ1 hour ago

Good News For Farmers: ಬಿಸಿಲಿನ ಝಳಕ್ಕೆ ಬಸವಳಿದ ಕೃಷಿಕರಿಗೆ ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ; ಈ ತಿಂಗಳು ಉತ್ತಮ ವರ್ಷಧಾರೆ

train service
ಬೆಂಗಳೂರು2 hours ago

Train services: ಗೋಲಗುಂಬಜ್ ಎಕ್ಸ್‌ಪ್ರೆಸ್‌ ವೇಳಾಪಟ್ಟಿ ಪರಿಷ್ಕರಣೆ; ಬೆಂಗಳೂರಿನಿಂದ ವಿಶೇಷ ರೈಲುಗಳ ಓಡಾಟ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ18 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌