Kamal Haasan | 35 ವರ್ಷಗಳ ನಂತರ ಮತ್ತೆ ಒಂದಾದ ಮಣಿರತ್ನಂ-ಕಮಲ್‌ ಹಾಸನ್‌ - Vistara News

ಕಾಲಿವುಡ್

Kamal Haasan | 35 ವರ್ಷಗಳ ನಂತರ ಮತ್ತೆ ಒಂದಾದ ಮಣಿರತ್ನಂ-ಕಮಲ್‌ ಹಾಸನ್‌

35 ವರ್ಷಗಳ ಬಳಿಕ ಮೋಡಿ ಮಾಡಲು (Kamal Haasan ) ಒಂದಾಗಿದೆ ಮಣಿರತ್ನಂ-ಕಮಲ್ ಜೋಡಿ. 67 ವರ್ಷದ ಕಮಲ್ ಹಾಸನ್ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

VISTARANEWS.COM


on

Kamal Haasan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Haasan ) ಜನುಮದಿನಕ್ಕೆ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. 35 ವರ್ಷಗಳ ಬಳಿಕ ಮೋಡಿ ಮಾಡಲು ಒಂದಾಗಿದೆ ಮಣಿರತ್ನಂ-ಕಮಲ್ ಜೋಡಿ. 67 ವರ್ಷದ ಕಮಲ್ ಹಾಸನ್, 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಕಮಲ್‌ ಹಾಸನ್‌ ಮಣಿರತ್ನಂ ಜತೆ ಸಿನಿಮಾ ಮಾಡುತ್ತಿದ್ದಾರೆ.

ಸದ್ಯಕ್ಕೆ ‘KH 234’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರವನ್ನು ಕಮಲ್ ಹಾಸನ್, ಮಣಿರತ್ನಂ, ಆರ್. ಮಹೇಂದ್ರನ್ ಮತ್ತು ಶಿವ ಅನಂತ್ ಅವರು ತಮ್ಮ ಬ್ಯಾನರ್‌ಗಳಾದ ರಾಜ್ ಕಮಲ್ ಫಿಲ್ಮ್ಸ್‌ ಇಂಟರ್‌ನ್ಯಾಶನಲ್‌ ಹಾಗೂ ಮದ್ರಾಸ್ ಟಾಕೀಸ್ ಸಂಸ್ಥೆಯಡಿಯಲ್ಲಿ ನಿರ್ಮಿಸಲಿದ್ದಾರೆ. ಮಣಿರತ್ನಂ ನಿರ್ದೇಶನದ ‘ನಾಯಕನ್’ ಚಿತ್ರಕ್ಕಾಗಿ ನಟ ಕಮಲ್ ಹಾಸನ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು.

ಇದನ್ನೂ ಓದಿ | ನಿರ್ದೇಶಕನಿಗೆ ʼಲೈಫ್‌ ಟೈಮ್‌ ಸೆಟಲ್‌ಮೆಂಟ್‌ʼ ಮಾಡಿದ ಕಮಲ್‌ ಹಾಸನ್‌

ಮಣಿರತ್ನಂ ಜತೆ ಸಿನಿಮಾ ಮಾಡುತ್ತಿರುವುದಾಗಿ ಕಮಲ್‌ ಹಾಸನ್‌ ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಎ. ಆರ್‌ ರೆಹಮಾನ್‌ ಸಂಗೀತ ಇದೆ. ಕಮಲ್‌ ಹಾಸನ್‌ ಅವರು ಶಂಕರ್‌ ನಿರ್ದೇಶನದ ‘ಇಂಡಿಯನ್‌-2’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ | ಕಾಲಿವುಡ್​ ನಿರ್ಮಾಪಕರಿಗೆ ಸೇರಿದ ಸ್ಥಳಗಳಲ್ಲಿ ಐಟಿ ರೇಡ್​; 200 ಕೋಟಿ ರೂ ಅಕ್ರಮ ಆದಾಯ ಪತ್ತೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

South Cinema

Thug Life Movie: ಕಮಲ್‌ ಹಾಸನ್‌ ಸಿನಿಮಾಗೆ ಕಾಲಿವುಡ್‌ ನಟ ಸಿಂಬು ಎಂಟ್ರಿ!

Thug Life Movie: ಈಗಾಗಲೇ ನವದೆಹಲಿಯಲ್ಲಿ ಕಮಲ್ ಹಾಸನ್ ಜತೆಗೆ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ ಸಿಂಬು. ದೆಹಲಿಯಲ್ಲಿ ನಡೆಯುತ್ತಿರುವ ಈ ಶೆಡ್ಯೂಲ್ ಮೇ 12 ರವರೆಗೆ ನಡೆಯಲಿದೆ. ಪ್ರೋಮೊದಲ್ಲಿ ಸಿಂಬು ಅತ್ಯಂತ ವೇಗದಲ್ಲಿ ಕಾರು ಓಡಿಸುವುದನ್ನು ನೋಡಬಹುದು. ದುಲ್ಕರ್ ಸಲ್ಮಾನ್ ಈ ಪಾತ್ರದಲ್ಲಿ ನಟಿಸಬೇಕಿತ್ತು ಎನ್ನಲಾಗಿತ್ತು. ಅವರ ಬದಲಿಗೆ ಸಿಂಬು ಬಂದಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Thug Life Simbu is the new gun wielding gangster in town
Koo

ಬೆಂಗಳೂರು:  ಕಾಲಿವುಡ್‌ ನಟ ಸಿಂಬು (Simbu Birthday), ಅವರ ನಿಜವಾದ ಹೆಸರು ಸಿಲಂಬರಸನ್ ಸಿಂಗು ರಾಜೇಂದರ್ (Silambarasan Thesingu Rajendar). ತಮಿಳು ಚಿತ್ರರಂಗದಲ್ಲಿ ನಟನಾಗಿ, ಕಥೆಗಾರ, ಸಂಗೀತ ನಿರ್ದೇಶಕ, ಬರಹಗಾರ, ಗಾಯಕ, ನೃತ್ಯಗಾರ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.  ಕಮಲ್ ಹಾಸನ್ (Thug Life Movie) ಮತ್ತು ಮಣಿರತ್ನಂ ಅವರು 1987ರ ʻನಾಯಗನ್ʼ ಚಿತ್ರದ ಬಳಿಕ ಮತ್ತೊಮ್ಮೆ ಕೈಜೋಡಿಸುತ್ತಿದ್ದಾರೆ. ಕಮಲ್ ಹಾಗೂ ಮಣಿರತ್ನಂ ಜೋಡಿಯ ಸಿನಿಮಾಗೆ ʼಥಗ್ ಲೈಫ್ʼ ಎಂಬ ಶೀರ್ಷಿಕೆ ಇಡಲಾಗಿದೆ. ಇದೀಗ ಸಿಂಬು ಈ ಸಿನಿಮಾದಲ್ಲಿ ನಟಿಸುತ್ತಿರುವುದು ಪಕ್ಕಾ ಆಗಿದೆ. ಇದೀಗ ತಂಡ ಹೊಸ ಪ್ರೋಮೊ ಹಂಚಿಕೊಂಡಿದ್ದು ಸಿಂಬು ರಗಡ್‌ ಆಗಿ ಕಂಡಿದ್ದಾರೆ.

ಈಗಾಗಲೇ ನವದೆಹಲಿಯಲ್ಲಿ ಕಮಲ್ ಹಾಸನ್ ಜತೆಗೆ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ ಸಿಂಬು. ದೆಹಲಿಯಲ್ಲಿ ನಡೆಯುತ್ತಿರುವ ಈ ಶೆಡ್ಯೂಲ್ ಮೇ 12 ರವರೆಗೆ ನಡೆಯಲಿದೆ. ಪ್ರೋಮೊದಲ್ಲಿ ಸಿಂಬು ಅತ್ಯಂತ ವೇಗದಲ್ಲಿ ಕಾರು ಓಡಿಸುವುದನ್ನು ನೋಡಬಹುದು. ದುಲ್ಕರ್ ಸಲ್ಮಾನ್ ಈ ಪಾತ್ರದಲ್ಲಿ ನಟಿಸಬೇಕಿತ್ತು ಎನ್ನಲಾಗಿತ್ತು. ಅವರ ಬದಲಿಗೆ ಸಿಂಬು ಬಂದಿದ್ದಾರೆ ಎಂದು ವರದಿಯಾಗಿದೆ.

ತಮಿಳಿನ ಹಿರಿಯ ನಟ ಕಾರ್ತಿಕ್ ಅವರ ಪುತ್ರ ಗೌತಮ್ ಕಾರ್ತಿಕ್ ಕೂಡ ಕಮಲ್‌ ಸಿನಿಮಾ ಪಾತ್ರವರ್ಗಕ್ಕೆ ಸೇರುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ನಿರ್ವಹಿಸುತ್ತಿರುವ ಪಾತ್ರ ಬಹು ಮುಖ್ಯವಾದದ್ದು ಎನ್ನಲಾಗಿದೆ. ಪಕ್ಕಾ ಆ್ಯಕ್ಷನ್ ಎಂಟರ್ ಟೈನರ್ ಕಥಾನಕ ‘ಥಗ್ ಲೈಫ್’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ರಾಜ್ ಕಮಲ್ ಇಂಟರ್ ನ್ಯಾಷನಲ್ ಫಿಲ್ಮ್ಸ್ ಹಾಗೂ ಮದ್ರಾಸ್ ಟಾಕೀಸ್ ನಡಿ ಕಮಲ್ ಹಾಸನ್, ಮಣಿರತ್ನಂ, ಆರ್.ಮಹೇಂದ್ರನ್ ಮತ್ತು ಶಿವ ಅನಂತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: Simbu Birthday: ನಟ ಸಿಂಬುಗೆ ಜನುಮದಿನದ ಸಂಭ್ರಮ; ಫಸ್ಟ್‌ ಲುಕ್‌ ಹಂಚಿಕೊಂಡ ಕಮಲ್‌ ಹಾಸನ್‌!

ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎ.ಆರ್.ರೆಹಮಾನ್ ಚಿತ್ರದ ಸಂಗೀತ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ. ಚಂದ್ರನ್ ಛಾಯಾಗ್ರಹಣ ʼಥಗ್ ಲೈಫ್ʼ ಸಿನಿಮಾದಲ್ಲಿದೆ. 1987ರಲ್ಲಿ ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ‘ನಾಯಕನ್’ ಸಿನಿಮಾ ರಿಲೀಸ್ ಆಗಿತ್ತು. ಇದಾದ ಬಳಿಕ ಸುಮಾರು 37 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

Continue Reading

ಕಾಲಿವುಡ್

Jyotika Trolled: ಆನ್​ಲೈನ್​ ಮೂಲಕ ವೋಟ್ ಮಾಡಿದ್ದಾರಂತೆ ಜ್ಯೋತಿಕಾ! ಟ್ರೋಲ್‌ ಆದ ಸೂರ್ಯ ಪತ್ನಿ!

Jyotika Trolled: ಸೂರ್ಯ ಪತ್ನಿ ಜ್ಯೋತಿಕಾ ಏಕೆ ಮತ ಹಾಕಲಿಲ್ಲ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಶ್ರೀಕಾಂತ್ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ನಟಿ ಏಕೆ ಮತದಾನ ಮಾಡಲಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ʻಆನ್​ಲೈನ್​ನಲ್ಲಿ ವೋಟ್ ಮಾಡಿದ್ದೇನೆʼ ಎಂದು ನಟಿ ಉತ್ತರ ನೀಡಿದ್ದಾರೆ. ಹೀಗಾಗಿ ನಟಿ ಜ್ಯೋತಿಕಾ ಟ್ರೋಲ್ ಆಗಿದ್ದಾರೆ. ನಟಿ ಜ್ಯೋತಿಕಾ (Jyotika Trolled) ಅವರು ಹಿಂದಿಯ ‘ಶ್ರೀಕಾಂತ್’ ಹೆಸರಿನ ( Srikanth with Rajkummar Rao) ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

VISTARANEWS.COM


on

Jyotika Trolled For Claiming Online Private Voting
Koo

ಬೆಂಗಳೂರು: ನಟಿ ಜ್ಯೋತಿಕಾ (Jyotika Trolled) ಅವರು ಹಿಂದಿಯ ‘ಶ್ರೀಕಾಂತ್’ ಹೆಸರಿನ ( Srikanth with Rajkummar Rao) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಆನ್​ಲೈನ್​ನಲ್ಲಿ ವೋಟ್ ಮಾಡಿದ್ದೇನೆ ಎಂದು ಹೇಳುವ ಮೂಲಕ ಜ್ಯೋತಿಕಾ ಟ್ರೋಲ್ ಆಗಿದ್ದಾರೆ. ಕಳೆದ ತಿಂಗಳು, ನಟ ಸೂರ್ಯ ಚೆನ್ನೈನ ಮತಗಟ್ಟೆಯಲ್ಲಿ ಮತದಾನ ಮಾಡಲು ಆಗಮಿಸಿದ್ದರು. ಆದರೆ, ಅವರ ಪತ್ನಿ ಜ್ಯೋತಿಕಾ ಏಕೆ ಮತ ಹಾಕಲಿಲ್ಲ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಶ್ರೀಕಾಂತ್ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ನಟಿ ಏಕೆ ಮತದಾನ ಮಾಡಲಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ʻಆನ್​ಲೈನ್​ನಲ್ಲಿ ವೋಟ್ ಮಾಡಿದ್ದೇನೆʼ ಎಂದು ನಟಿ ಉತ್ತರ ನೀಡಿದ್ದಾರೆ. ಹೀಗಾಗಿ ನಟಿ ಜ್ಯೋತಿಕಾ ಟ್ರೋಲ್ ಆಗಿದ್ದಾರೆ.

ಈವೆಂಟ್‌ನ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವರದಿಗಾರರೊಬ್ಬರು ಜ್ಯೋತಿಕಾ ಅವರಿಗೆ ಏಕೆ ವೋಟ್‌ ಮಾಡಲು ಬರಲಿಲ್ಲ? ಎಂದು ಕೇಳಿದ್ದರು. ಆಗ ನಟಿ ʻʻನಾನು ಪ್ರತಿ ವರ್ಷ ವೋಟ್‌ ಮಾಡುತ್ತೇನೆʼʼಎಂದಿದ್ದಾರೆ. ನಂತರ ಮತದಾನ ಪ್ರತಿ ವರ್ಷ ನಡೆಯಲ್ಲ ಎಂದು ಸಂದರ್ಶಕರು ಹೇಳಿದರು.ಇದನ್ನು ಜ್ಯೋತಿಕಾ ಒಪ್ಪಿಕೊಂಡಿದ್ದಾರೆ.

ಯಾಕೆ ಮತ ಹಾಕಲಿಲ್ಲ ಎಂಬುದನ್ನು ವಿವರಿಸಿದ ಜ್ಯೋತಿಕಾ ʻʻಕೆಲವೊಮ್ಮೆ ನಾವು ನಮ್ಮ ರಾಜ್ಯದಲ್ಲಿ ಇಲ್ಲದೆ ಬೇರೆ ರಾಜ್ಯಕ್ಕೆ ಹೋಗಿರಬಹುದು. ನಾವು ಅನಾರೋಗ್ಯಕ್ಕೆ ಒಳಗಾಗಬಹುದು, ಇದು ಖಾಸಗಿ ವಿಷಯವಾಗಿದೆʼʼಎಂದಿದ್ದಾರೆ ನಟಿ.

ಇದನ್ನೂ ಓದಿ: Jyotika and Suriya: ಸೂರ್ಯ ಜತೆ ಜಿಮ್‌ನಲ್ಲಿ ನಟಿ ಜ್ಯೋತಿಕಾ ಹೆವಿ ವರ್ಕೌಟ್!

ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಟಿಯನ್ನು ಟ್ರೋಲ್‌ ಮಾಡಲು ಶುರು ಮಾಡಿದ್ದಾರೆ. ಒಬ್ಬರು ʻʻನಟಿಯ ಆರೋಗ್ಯ ಹದೆಗಟ್ಟಿದ್ದರಿಂದ ವೋಟ್‌ ಹಾಕದೇ ಇರಬಹುದುʼʼ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ʻʻಇದೇನು ಬಿಗ್ ಬಾಸ್‌ನಲ್ಲಿ ಮತ ಚಲಾಯಿಸಿದಂತೆಯಾ?ʼʼಎಂದು ಕಮೆಂಟ್‌ ಮಾಡಿದ್ದಾರೆ. `ಜ್ಯೋತಿಕಾ ರೀತಿ ಆನ್​ಲೈನ್​ ವೋಟ್ ಮಾಡೋದು ಹೇಗೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.‘ಸಮಾಜ ಸುಧಾರಕಿ ಜ್ಯೋತಿಕಾ, ಅಶಿಕ್ಷಿತರಿಗೂ ಗೊತ್ತು ಚುನಾವಣೆ ಪ್ರತಿ ವರ್ಷಕ್ಕೆ ಅಲ್ಲ, 5 ವರ್ಷಕ್ಕೊಮ್ಮೆ ಎಂದು. ನಾನು ಭಾರತದಲ್ಲಿ ಈವರೆಗೆ ಆನ್‌ಲೈನ್ ಮತದಾನದ ಬಗ್ಗೆ ಕೇಳಿಲ್ಲ’ ಎಂದಿದ್ದಾರೆ ಅವರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಜ್ಯೋತಿಕಾ ಕೊನೆಯದಾಗಿ ʻಶೈತಾನ್‌ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಈ ಚಿತ್ರದಲ್ಲಿ ಆರ್ ಮಾಧವನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಹಿಂದಿಯ ‘ಶ್ರೀಕಾಂತ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತುಶಾರ್ ಹಿರಾನಂದನಿ ಇದನ್ನು ನಿರ್ದೇಶನ ಮಾಡಿದ್ದು, ರಾಜ್​ಕುಮಾರ್ ರಾವ್, ಅಲಾಯ ಎಫ್, ಶರದ್ ಕೇಲ್ಕರ್ ಈ ಚಿತ್ರದಲ್ಲಿ ನಟಿಸಿದ್ದಾರೆ.

Continue Reading

ಕಾಲಿವುಡ್

Annamalai Biopic: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಯೋಪಿಕ್‌ಗೆ ತಮಿಳು ಖ್ಯಾತ ನಟ ನಟನೆ!

Annamalai Biopic: ಸದ್ಯ ವಿಶಾಲ್ ನಟನೆಯ ‘ರತ್ನಂ’ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ನಟ ವಿಶಾಲ್ ನಿರ್ದೇಶಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಇದೀಗ ತೆರೆಮೇಲೆ ಅಣ್ಣಾಮಲೈ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಇತ್ತೀಚೆಗೆ ವಿಶಾಲ್ ಕೂಡ ರಾಜಕೀಯಕ್ಕೆ ಸೇರುವ ಸೂಚನೆ ನೀಡಿದ್ದಾರೆ. ಆದರೆ, ಯಾವ ಪಕ್ಷಕ್ಕೆ ಅವರು ಸೇರ್ಪಡೆ ಆಗುತ್ತಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ.

VISTARANEWS.COM


on

Annamalai Biopic Will Be Made In Kollywood Annamalai Biopic Will Be Made In Kollywood Annamalai Biopic Will Be Made In Kollywood
Koo

ಬೆಂಗಳೂರು: ಪೊಲೀಸ್ ಹುದ್ದೆಯಲ್ಲಿರುವಾಗ ತಮ್ಮ ಕಟ್ಟುನಿಟ್ಟಾದ ಕಾರ್ಯಶೈಲಿಯಿಂದ “ಸಿಂಗಂ ಅಣ್ಣ” ಎಂದು ಬಿರುದು ಪಡೆದ ನಿವೃತ್ತ ಪೊಲೀಸ್ ಅಧಿಕಾರಿ, ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ (k Annamalai) ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದರ ಮೂಲಕ ಲೋಕಸಭಾ ಚುನಾವಣೆಗೆ ಪದಾರ್ಪಣೆ ಮಾಡಿದ್ದಾರೆ. ಸದ್ಯ ಅಣ್ಣಾಮಲೈ ಕುರಿತು ತಮಿಳಿನಲ್ಲಿ ಬಯೋಪಿಕ್ ಸಿನಿಮಾ (Annamalai Biopic) ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳು ನಟ ವಿಶಾಲ್ ತೆರೆಮೇಲೆ ಅಣ್ಣಾಮಲೈ ಆಗಿ ನಟಿಸುತ್ತಾರೆ ಎನ್ನಲಾಗುತ್ತಿದೆ.

ಸದ್ಯ ವಿಶಾಲ್ ನಟನೆಯ ‘ರತ್ನಂ’ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ನಟ ವಿಶಾಲ್ ನಿರ್ದೇಶಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಇದೀಗ ತೆರೆಮೇಲೆ ಅಣ್ಣಾಮಲೈ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. 1984ರ ಜೂ.4ರಂದು ಹುಟ್ಟಿದ ಅಣ್ಣಾಮಲೈ ಮೂಲತಃ ತಮಿಳುನಾಡಿನ ಕೊಯಮತ್ತೂರಿನವರು. ಬಿಇ ಎಂಜಿನಿಯರಿಂಗ್‌ ಮಾಡಿ ಎಂಬಿಎ ಪೂರ್ಣಗೊಳಿಸಿದ ಅಣ್ಣಾಮಲೈ 2011ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಆಗಿದ್ದರು.

ಇತ್ತೀಚೆಗೆ ವಿಶಾಲ್ ಕೂಡ ರಾಜಕೀಯಕ್ಕೆ ಸೇರುವ ಸೂಚನೆ ನೀಡಿದ್ದಾರೆ. ಆದರೆ, ಯಾವ ಪಕ್ಷಕ್ಕೆ ಅವರು ಸೇರ್ಪಡೆ ಆಗುತ್ತಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

ಅಣ್ಣಾಮಲೈ ಅವರ ಕುರಿತಾದ ಕೆಲವು ಕುತೂಹಲಕರ ಸಂಗತಿಗಳು ಇಲ್ಲಿವೆ

  • ಅಣ್ಣಾಮಲೈ ಅವರಿಗೆ ಈಗ ಕೇವಲ 39 ವರ್ಷ. 2021ರಲ್ಲಿ ಅವರು ತಮಿಳುನಾಡಿನ ಅತ್ಯಂತ ಕಿರಿಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರು.
  • ಕೆ. ಅಣ್ಣಾಮಲೈ ಅವರು 2020ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ತಮಿಳುನಾಡಿನಲ್ಲಿ ಅವರು ಯುವಜನತೆಯ ಅಪಾರ ಬೆಂಬಲ ಪಡೆದಿದ್ದಾರೆ. ಈ ಮೂಲಕ ಅವರು ತಮಿಳುನಾಡಿನಲ್ಲಿ ಬಿಜೆಪಿಗೆ ಶಕ್ತಿ ತುಂಬಿದ್ದಾರೆ. ಬಹಳ ವೇಗವಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ.
  • ಕರ್ನಾಟಕ ಕೇಡರ್‌ನ 2011ರ ಬ್ಯಾಚ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಅಪಾರ ಜನಪ್ರಿಯತೆ ಪಡೆದಿದ್ದರು. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಅವರು ಜನರ ವಿಶ್ವಾಸ ಗಳಿಸಿದ್ದರು. ಬೆಂಗಳೂರು ದಕ್ಷಿಣ ಉಪ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.
  • ಕೆ ಅಣ್ಣಾಮಲೈ ಅವರು ಸೆಪ್ಟೆಂಬರ್ 2019ರಲ್ಲಿ ಪೊಲೀಸ್ ಸೇವೆಯನ್ನು ತೊರೆದು ಅಚ್ಚರಿ ಮೂಡಿಸಿದ್ದರು.
  • ಇವರು ಎಂಜಿನಿಯರಿಂಗ್ ಪದವೀಧರರಾಗಿದ್ದು, ಐಐಎಂ ಲಕ್ನೋದಲ್ಲಿ ಎಂಬಿಎ ಓದಿದ್ದರು.
  • ಪೊಲೀಸ್ ಫೋರ್ಸ್‌ನಲ್ಲಿ ಕೆಲಸ ಮಾಡುವಾಗ ಕೆ ಅಣ್ಣಾಮಲೈ ಅವರ ಕಟ್ಟುನಿಟ್ಟಾದ ಕಾರ್ಯಶೈಲಿಯನ್ನು ಕಂಡು ಅವರನ್ನು “ಸಿಂಗಂ ಅಣ್ಣ” ಎಂದೇ ಕರೆಯಲಾಗಿತ್ತು.
  • ಅಣ್ಣಾಮಲೈ ಅವರು ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಧಾರ್ಮಿಕ ಗ್ರಂಥಗಳ ತಪ್ಪು ವ್ಯಾಖ್ಯಾನವನ್ನು ತಪ್ಪಿಸಲು ಮತ್ತು ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಇಸ್ಲಾಂ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದರು. ಧಾರ್ಮಿಕ ವಿದ್ವಾಂಸರ ಸಹಾಯದಿಂದ ಖುರಾನ್ ಮತ್ತು ಹದೀಸ್ ಅನ್ನು ಅಧ್ಯಯನ ಮಾಡಿದ್ದರು.
  • 2019ರಲ್ಲಿ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವಾಗ ರಾಜೀನಾಮೆ ಪತ್ರದಲ್ಲಿ, ಇದು ನಾನು ತಕ್ಷಣ ತೆಗೆದುಕೊಂಡು ನಿರ್ಧಾರವಲ್ಲ. 2018ರಲ್ಲಿ ಕೈಗೊಂಡಿದ್ದ ಕೈಲಾಸ ಮಾನಸ ಸರೋವರ ಪ್ರವಾಸವು ನನ್ನ ಜೀವನವನ್ನು ಹಿಂತಿರುಗಿ ನೋಡುವಂತೆ ಮಾಡಿದೆ ಎಂದು ಬರೆದಿದ್ದರು.
  • 2023ರಲ್ಲಿ ಅಣ್ಣಾಮಲೈ ಅವರು ‘ಎನ್‌ ಮನ್ ಎನ್ ಮಕ್ಕಳ್ (ನನ್ನ ಭೂಮಿ ನನ್ನ ಜನರು)’ ಯಾತ್ರೆಯನ್ನು ತಮಿಳುನಾಡು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಿದರು.
  • ಅಣ್ಣಾಮಲೈ ಅವರನ್ನು ಬಿಜೆಪಿಯ ಭರವಸೆಯ ಉದಯೋನ್ಮುಖ ತಾರೆ ಎಂದು ವ್ಯಾಖ್ಯಾನಿಸಲಾಗಿದೆ. ಅವರು ವಾಕ್ಚಾತುರ್ಯಕ್ಕೆ ಹೆಸರುವಾಸಿಯಾದ ಕಾರಣ ಅವರ ಭಾಷಣಗಳು ಸಾಮಾನ್ಯವಾಗಿ ವೈರಲ್ ಆಗುತ್ತವೆ.
Continue Reading

ಕಿರುತೆರೆ

Vijay Deverakonda: ಸಿನಿಮಾಗಳ ಸತತ ಸೋಲಿನ ಬೆನ್ನಲ್ಲೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ ವಿಜಯ್‌ ದೇವರಕೊಂಡ!

Vijay Deverakonda: ವಿಜಯ್ ದೇವರಕೊಂಡ (Vijay Deverakonda) ಮತ್ತು ಮೃಣಾಲ್ ಠಾಕೂರ್ ( Mrunal Thakur) ಅಭಿನಯದ ಚಿತ್ರ ʻಫ್ಯಾಮಿಲಿ ಸ್ಟಾರ್ʼ ಭಾರತದಲ್ಲಿ ಸಾಧಾರಣ ಓಪನಿಂಗ್‌ (Family Star Box Office) ಪಡೆದುಕೊಂಡಿತ್ತು. ಏಪ್ರಿಲ್ 26 ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗಿತ್ತು.ಇದೀಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ ವಿಜಯ್‌ ದೇವರಕೊಂಡ.ತೆಲುಗು ನಟ ವಿಜಯ್ ದೇವರಕೊಂಡ ಅವರು ದಿಲ್ ರಾಜು ಅವರೊಂದಿಗೆ ಹೈ-ಆಕ್ಟೇನ್ ಆಕ್ಷನ್ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ.

VISTARANEWS.COM


on

Vijay Devarakonda announces new film
Koo

ಬೆಂಗಳೂರು: ʻಲೈಗರ್‌ʼ ಸಿನಿಮಾ ಸೋಲಿನ ಬಳಿಕ ನಟ ವಿಜಯ್‌ ದೇವರಕೊಂಡ (Vijay Deverakonda) ಯಾವ ಸಿನಿಮಾವನ್ನು ಮಾಡಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಇದಾದ ಬಳಿ ಸಾಕಷ್ಟು ಸಿನಿಮಾಗಳು ತೆರೆ ಕಂಡವು. ʻಖುಷಿʼ ಹಾಗೂ ʻಫ್ಯಾಮಿಲಿ ಸ್ಟಾರ್‌ʼ ಸಿನಿಮಾಗಳು ರಿಲೀಸ್‌ ಆದರೂ ತಕ್ಕ ಮಟ್ಟಿಗೆ ಸಕ್ಸೆಸ್‌ ಏನು ಆಗಿಲ್ಲ. ಇದೀಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ ವಿಜಯ್‌ ದೇವರಕೊಂಡ.

ತೆಲುಗು ನಟ ವಿಜಯ್ ದೇವರಕೊಂಡ ಅವರು ದಿಲ್ ರಾಜು ಅವರೊಂದಿಗೆ ಹೈ-ಆಕ್ಟೇನ್ ಆಕ್ಷನ್ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ರವಿ ಕರಣ್ ಕೋಲಾ (Ravi Kiran Kola) ನಿರ್ದೇಶನವಿದೆ. ರವಿಕಿರಣ್ ಕೋಲಾ ಅವರು ‘ರಾಜಾ ವರು ರಾಣಿ ಗಾರು’ (Raja Vaaru Rani Gaaru) ಮತ್ತು ‘ಅಶೋಕ ವನಮ್ಲೋ ಅರ್ಜುನ ಕಲ್ಯಾಣಂ'(Ashoka Vanamlo Arjuna Kalyanam) ಸಿನಿಮಾಗೆ ಹೆಸರುವಾಸಿಯಾಗಿದ್ದಾರೆ. ಚಿತ್ರದ ಶೀರ್ಷಿಕೆ, ತಾರಾಗಣ ಮತ್ತು ಬಿಡುಗಡೆಯ ದಿನಾಂಕ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ವಿಜಯ್ ದೇವರಕೊಂಡ (Vijay Deverakonda) ಮತ್ತು ಮೃಣಾಲ್ ಠಾಕೂರ್ ( Mrunal Thakur) ಅಭಿನಯದ ಚಿತ್ರ ʻಫ್ಯಾಮಿಲಿ ಸ್ಟಾರ್ʼ ಭಾರತದಲ್ಲಿ ಸಾಧಾರಣ ಓಪನಿಂಗ್‌ (Family Star Box Office) ಪಡೆದುಕೊಂಡಿತ್ತು. ಏಪ್ರಿಲ್ 26 ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗಿತ್ತು.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಜತೆಗಿನ ಸಂಬಂಧ ಒಪ್ಪಿಕೊಂಡ್ರಾ ರಶ್ಮಿಕಾ ಮಂದಣ್ಣ?

ಕೆಲವರು ಇದು ಸರಾಸರಿಗಿಂತ ಕಡಿಮೆ ಚಿತ್ರ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಈ ಚಿತ್ರಕ್ಕಿಂತ ಧಾರಾವಾಹಿ ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದರು. ಸಂಗೀತ ಅಷ್ಟಾಗಿ ಆಕರ್ಷಣೀಯವಾಗಿಲ್ಲ ಎಂಬ ಮಾತು ಕೂಡ ಇದೆ. ಈ ಸಿನಿಮಾ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ, ಹೊಸತನವೇನೂ ಇಲ್ಲ ಎಂದಿದ್ದರು.

ಹಾಯ್ ನಾನ್ನʼ (2023), ʻಸೀತಾ ರಾಮಂʼ (2022)ಬಳಿಕ ಮೃಣಾಲ್ ಠಾಕೂರ್ ಅವರ ಮೂರನೇ ತೆಲುಗು ಚಿತ್ರ ಇದು. ʻಫ್ಯಾಮಿಲಿ ಸ್ಟಾರ್ʼ ಸಿನಿಮಾವನ್ನು ಪರುಶುರಾಮ್ ನಿರ್ದೇಶಿಸಿದ್ದಾರೆ. ಈ ಮುಂಚೆ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻಗೀತ ಗೋವಿಂದಂʼ (2018) ಸಿನಿಮಾಗೆ ನಿರ್ದೇಶನ ಮಾಡಿದ್ದರು.

Continue Reading
Advertisement
Mango Juice Benefits
ಆರೋಗ್ಯ36 mins ago

Mango Juice Benefits: ತಾಜಾ ಮಾವಿನ ರಸ ಕುಡಿಯುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ…

Karnataka Weather Forecast
ಉಡುಪಿ36 mins ago

Karnataka Weather : ಮೇ 18ರವರೆಗೆ ಮಳೆ ಅಬ್ಬರ; 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ2 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

SSLC Result
ಪ್ರಮುಖ ಸುದ್ದಿ6 hours ago

ವಿಸ್ತಾರ ಸಂಪಾದಕೀಯ: ರಾಜ್ಯ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಣದ ಪರಿಸ್ಥಿತಿ ಸರಿಹೋಗುವುದೆಂದು?

Kangana Ranaut
ಪ್ರಮುಖ ಸುದ್ದಿ7 hours ago

Kangana Ranaut : ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್​ ಬಳಿ ಇರುವ ಆಸ್ತಿ ಎಷ್ಟು? ಇಲ್ಲಿದೆ ಎಲ್ಲ ಮಾಹಿತಿ

heavy wind and rain damaged tree and electricity poles In Jholada Gudde village
ಶಿವಮೊಗ್ಗ7 hours ago

Karnataka Weather: ಭಾರೀ ಗಾಳಿ ಮಳೆಗೆ ಧರೆಗುರುಳಿದ ಬೃಹತ್‌ ಮರ, ವಿದ್ಯುತ್‌ ಕಂಬ

ಪ್ರಮುಖ ಸುದ್ದಿ7 hours ago

SSLC Result 2024: ಎಸ್‌ಎಸ್‌ಎಲ್‌ಸಿ ಸಾಧಕರನ್ನು ಸನ್ಮಾನಿಸಿ, ಪ್ರೋತ್ಸಾಹ ಧನ ಘೋಷಿಸಿದ ಸಿಎಂ, ಡಿಸಿಎಂ

IPL 2024
ಕ್ರಿಕೆಟ್7 hours ago

IPL 2024 : ಲಕ್ನೊ ವಿರುದ್ಧ 19 ರನ್ ವಿಜಯ, ಗೆಲುವಿನೊಂದಿಗೆ ಐಪಿಎಲ್​ ಅಭಿಯಾನ ಮುಗಿಸಿದ ಡೆಲ್ಲಿ

Team India
ಪ್ರಮುಖ ಸುದ್ದಿ8 hours ago

Team India : ದ್ರಾವಿಡ್​ ಬಳಿಕ ಇವರೇ ಆಗ್ತಾರೆ ಭಾರತ ತಂಡದ ಕೋಚ್​​

Victoria Hospital
ಕರ್ನಾಟಕ8 hours ago

Victoria Hospital: ವಿಕ್ಟೋರಿಯಾ ಆಸ್ಪತ್ರೆಯಿಂದ ವಜಾಗೊಂಡಿದ್ದ 55 ಸಿಬ್ಬಂದಿ ಮರು ನೇಮಕ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

Prajwal Revanna Case
ಕರ್ನಾಟಕ9 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ನಾಳೆಯೇ ಜರ್ಮನಿಯಿಂದ ಭಾರತಕ್ಕೆ?; ವಿಸ್ತಾರ ನ್ಯೂಸ್‌ಗೆ ಮಹತ್ವದ ದಾಖಲೆ ಲಭ್ಯ

HD Revanna Released first reaction after release will be acquitted of all charges
ರಾಜಕೀಯ11 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202414 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 202417 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ18 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು19 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ1 day ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ1 day ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ1 day ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌