Bachelor Party Trailer:  ʻಬ್ಯಾಚುಲರ್ ಪಾರ್ಟಿʼ ಟ್ರೈಲರ್‌ ಔಟ್‌; ಸಖತ್‌ ಕಾಮಿಡಿ ಎಂಟರ್‌ಟೈನರ್ ಗುರು ಅಂದ್ರು ವೀಕ್ಷಕರು! - Vistara News

South Cinema

Bachelor Party Trailer:  ʻಬ್ಯಾಚುಲರ್ ಪಾರ್ಟಿʼ ಟ್ರೈಲರ್‌ ಔಟ್‌; ಸಖತ್‌ ಕಾಮಿಡಿ ಎಂಟರ್‌ಟೈನರ್ ಗುರು ಅಂದ್ರು ವೀಕ್ಷಕರು!

ಜೀವನದ ಜಂಜಾಟದಿಂದ ಬೇಸತ್ತು ರಿಲ್ಯಾಕ್ಸ್ ಆಗುವುದಕ್ಕೆ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುವ 3 ‘ಬ್ಯಾಚುಲರ್’ಗಳ ಕಥೆ ಚಿತ್ರದಲ್ಲಿದೆ. ಜನವರಿ 26 ರಂದು ‘ಬ್ಯಾಚುಲರ್ ಪಾರ್ಟಿ’ ಸಿನಿಮಾ (Bachelor Party Trailer) ರಿಲೀಸ್‌ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಿಸಿದೆ.

VISTARANEWS.COM


on

Bachelor Party Official Trailer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ. ಟ್ರೈಲರ್‌ ನೋಡಿ ಸಖತ್‌ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಎಂದು ವೀಕ್ಷಕರು ಹಾಡಿ ಹೊಗಳುತ್ತಿದ್ದಾರೆ. ಜೀವನದ ಜಂಜಾಟದಿಂದ ಬೇಸತ್ತು ರಿಲ್ಯಾಕ್ಸ್ ಆಗುವುದಕ್ಕೆ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುವ 3 ‘ಬ್ಯಾಚುಲರ್’ಗಳ ಕಥೆ ಚಿತ್ರದಲ್ಲಿದೆ. ಜನವರಿ 26 ರಂದು ‘ಬ್ಯಾಚುಲರ್ ಪಾರ್ಟಿ’ ಸಿನಿಮಾ (Bachelor Party Trailer) ರಿಲೀಸ್‌ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಿಸಿದೆ.

ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾ‌ರ್, ನಟಿ ಸಿರಿ ರವಿಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಸಿನಿಮಾದಲ್ಲಿ ಮನರಂಜನೆಯ ರಸದೌತಣವಿರಲಿದೆ ಎಂದು ಚಿತ್ರತಂಡ ಮುನ್ಸೂಚನೆ ನೀಡಿದೆ. `ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಕಿರಿಕ್‌ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಈ ಚಿತ್ರದ ಮೂಲಕ ಇದೀಗ ಅವರು ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಕಾಲಿಡುತ್ತಿದ್ದಾರೆ. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಬ್ಯಾಂಕಾಕ್‌ನಲ್ಲಿ ನಡೆಯುವ ಒಂದು ಮದುವೆ ಇಡೀ ಕಥೆಗೆ ದೊಡ್ಡ ಟ್ವಿಸ್ಟ್ ಕೊಡುತ್ತದೆ. ಇದು ಕೂಡ ಹಾಲಿವುಡ್ ಸಿನಿಮಾದಲ್ಲಿದೆ. ಯೋಗಿ ಪಾತ್ರವನ್ನು ರಿಷಬ್‌ ಮಾಡಬೇಕಿತ್ತು. ಕಾರಣಾಂತರಗಳಿಂದ ರಿಷಬ್‌ ಅವರು ಹೊರ ಬರುವಂತಾಯಿತು. ದಿಗಂತ್ ಮಡದಿ ಪಾತ್ರದಲ್ಲಿ ಸಿರಿ ರವಿಕುಮಾರ್ ಕಾಣಿಸಿಕೊಂಡಿದ್ದಾರೆ.ಈ ವರ್ಷ ಯಾವುದೇ ದೊಡ್ಡ ಕನ್ನಡ ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ. ಜನವರಿ 26ಕ್ಕೆ ‘ಬ್ಯಾಚುಲರ್ ಪಾರ್ಟಿ’ ಹಾಗೂ ‘ಉಪಾಧ್ಯಕ್ಷ’ ಸಿನಿಮಾಗಳು ತೆರೆಗೆ ಬರ್ತಿದೆ.

ಇದನ್ನೂ ಓದಿ: Bachelor Party: ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌

ಒಟ್ಟಾರೆ ಹೇಳುವುದಾದರೆ ಸ್ಯಾಂಡಲ್‌ವುಡ್‌ ‘ಬ್ಯಾಚುಲರ್‌ ಪಾರ್ಟಿ‌’ ಪ್ರೇಕ್ಷಕರನ್ನ ಹೊಟ್ಟೆ ಉಣ್ಣಾಗುವಂತೆ ನಗಿಸೋದು ಪಕ್ಕಾ. ಅಭಿಮಾನಿಗಳು ಚಿತ್ರದ ಟ್ರೈಲರ್‌ ಕಣ್ತುಂಬಿಕೊಂಡು ಸಿನಿಮಾಗಾಗಿ ಕಾಯುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Sudha Murty: ಅಂಬಾನಿ ಮದುವೆಗೆ ಮಂಗಳ ಸೂತ್ರ ಮಾತ್ರವೇ ಧರಿಸಿ ಬಂದ ಸುಧಾ ಮೂರ್ತಿ; ಶೋ-ಆಫ್ ಇಲ್ಲ ಅಂದ್ರು ನೆಟ್ಟಿಗರು!

Sudha Murty: ಸುಧಾ ಮೂರ್ತಿ ಅವರು ವಿವಾಹ ಸಮಾರಂಭದಲ್ಲಿ ನೇರಳೆ ಬಣ್ಣದ ಸೀರೆಯನ್ನು ಧರಿಸಿ, ಕೇವಲ ಮಂಗಳಸೂತ್ರ ಮತ್ತು ಸ್ಮಾರ್ಟ್ ವಾಚ್‌ನೊಂದಿಗೆ ಸಿಂಪಲ್‌ ಆಗಿ ಬಂದಿದ್ದರು. ಅವರ ಸರಳತೆಗೆ ಹೆಚ್ಚು ಪ್ರಶಂಸೆಯನ್ನು ಗಳಿಸಿದರು. ನಮ್ರತಾ ಶಿರೋಡ್ಕರ್ ಅವರು ಸುಧಾ ಮೂರ್ತಿ ಅವರೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Sudha Murty praised for simplicity at Ambani wedding
Koo

ಮುಂಬೈ: ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ಅದ್ದೂರಿ ವಿವಾಹದಲ್ಲಿ ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಪಾಲ್ಗೊಂಡಿದ್ದರು.   (Sudha Murty) ಅವರ ಜತೆ ಮಹೇಶ್‌ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಸುಧಾ ಮೂರ್ತಿ ಜೊತೆಗಿನ ಫೋಟೊ ಶೇರ್ ಮಾಡಿ, ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ನಮ್ರತಾ ಶಿರೋಡ್ಕರ್ ಬರೆದುಕೊಂಡಿದ್ದಾರೆ. ಜತೆಗೆ ಸುಧಾ ಮೂರ್ತಿ ಅವರ ಸರಳತೆಗೆ ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಮಾತ್ರವಲ್ಲ ಕೊರಳಲ್ಲಿ ಮಂಗಳ ಸೂತ್ರ ಮಾತ್ರ ಧರಿಸಿ ಸಿಂಪಲ್‌ ಆಗಿ ಕಂಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಸುಧಾ ಮೂರ್ತಿ ಅವರು ವಿವಾಹ ಸಮಾರಂಭದಲ್ಲಿ ನೇರಳೆ ಬಣ್ಣದ ಸೀರೆಯನ್ನು ಧರಿಸಿ, ಕೇವಲ ಮಂಗಳಸೂತ್ರ ಮತ್ತು ಸ್ಮಾರ್ಟ್ ವಾಚ್‌ನೊಂದಿಗೆ ಸಿಂಪಲ್‌ ಆಗಿ ಬಂದಿದ್ದರು. ಅವರ ಸರಳತೆಗೆ ಹೆಚ್ಚು ಪ್ರಶಂಸೆಯನ್ನು ಗಳಿಸಿದರು. ನಮ್ರತಾ ಶಿರೋಡ್ಕರ್ ಅವರು ಸುಧಾ ಮೂರ್ತಿ ಅವರೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಬುದ್ಧಿವಂತ ಮಹಿಳೆಯ ಬಗ್ಗೆ ತುಂಬಾ ಕೇಳಿದ್ದೆ, ಅವರನ್ನು ಭೇಟಿಯಾದ ನಂತರ ನನ್ನ ನಂಬಿಕೆಯು ನಿಜವಾಯಿತು. ರೋಮಾಂಚಕ, ಜೀವನದಲ್ಲಿ ನೀಡಲು ತುಂಬಾ ಪ್ರೀತಿಯಿದೆ ಎನಿಸಿತು ಎಂದು ಮಹೇಶ್ ಬಾಬು ಪತ್ನಿ ನಮ್ರತಾ ಬಣ್ಣಿಸಿದ್ದಾರೆ.

ಇದನ್ನೂ ಓದಿ: Sudha Murty: ಸುಧಾ ಮೂರ್ತಿ 30 ವರ್ಷಗಳಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ; ಇದಕ್ಕೆ ಕಾರಣ ಕಾಶಿಯಂತೆ!

ಇನ್ನು ಈ ಫೋಟೊ ವೈರಲ್‌ ಆಗುತ್ತಿದ್ದಂತೆ ಸುಧಾ ಮೂರ್ತಿ ಅವರನ್ನು ನೆಟ್ಟಿಗರು ಹೊಗಳಿದ್ದಾರೆ. ʻʻಬಿಲಿಯನೇರ್ ಮಹಿಳೆ ಕೇವಲ ಮಂಗಳಸೂತ್ರದೊಂದಿಗೆ ಹಾಜರಾಗುವುದನ್ನು ನೋಡಲು ಖುಷಿ ಆಗುತ್ತೆʼʼಎಂದು ಒಬ್ಬರು ಕಮೆಂಟ್‌ ಮಾಡಿದರೆ, ʻಸರಳ ಮತ್ತು ವಿನಮ್ರʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʻಸ್ಫೂರ್ತಿದಾಯಕ ಮಹಿಳೆ. ಶೋ-ಆಫ್ ಇಲ್ಲʼʼಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ತಮ್ಮ ಸರಳತೆಯಿಂದಲೇ ಸುದ್ದಿಯಲ್ಲಿರುವ ರಾಜ್ಯಸಭೆಯ ನೂತನ (Rajya Sabha) ಸದಸ್ಯೆ (MP), ಲೇಖಕಿ, ಇನ್ಫೋಸಿಸ್‌ನ ಸಂಸ್ಥಾಪಕ (Infosys chairman) ನಾರಾಯಣ ಮೂರ್ತಿ (Narayana Murthy) ಅವರ ಪತ್ನಿ ಸುಧಾ ಮೂರ್ತಿ (Sudha Murty) ಅವರು ಕಳೆದ 30 ವರ್ಷಗಳಿಂದ ಒಂದೇ ಒಂದು ಸೀರೆಯನ್ನೂ ಖರೀದಿ ಮಾಡಿಲ್ಲವಂತೆ! ಇತ್ತೀಚಿಗೆ ಅವರು ನೀಡಿರುವ ಸಂದರ್ಶನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ್ದರು.

ಇದಕ್ಕೆ ಮುಖ್ಯ ಕಾರಣ ಕಾಶಿಗೆ ಪ್ರವಾಸ ಮಾಡಿರುವುದು ಎಂಬುದಾಗಿ ಅವರು ತಿಳಿಸಿದ್ದರು. ಅಪಾರ ಸಂಪತ್ತು ಇದ್ದರೂ ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ತಮ್ಮ ಸರಳವಾದ ಉಡುಗೆ ತೊಡುಗೆಗಳಿಂದ, ಸಾಮಾನ್ಯ ಜೀವನ ಶೈಲಿಯಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದರು ದಿ ವಾಯ್ಸ್ ಆಫ್ ಫ್ಯಾಶನ್‌ಗೆ ನೀಡಿದ ಸಂದರ್ಶನದಲ್ಲಿ ಸುಧಾ ಮೂರ್ತಿ ಅವರು ಈ ವಿಚಾರವನ್ನು ಹೀಗೆ ಹಂಚಿಕೊಂಡಿದ್ದರು

Continue Reading

ಸ್ಯಾಂಡಲ್ ವುಡ್

SIIMA 2024: ಸೈಮಾ ನಾಮಿನೇಷನ್ ರೇಸ್‌ನಲ್ಲಿ ʻಕಾಟೇರʼ, ʻಸಪ್ತ ಸಾಗರದಾಚೆ ಎಲ್ಲೋ ಸೈಡ್-ಎʼ!

SIIMA 2024:ಸ್ಯಾಂಡಲ್‌ವುಡ್‌ನಿಂದ ದರ್ಶನ್ ನಟಿಸಿದ ‘ಕಾಟೇರ’ ಹಾಗೂ ‘ಸಪ್ತಸಾಗರದಾಚೆ ಎಲ್ಲೋ ಸೈಡ್-ಎ’ ಸಿನಿಮಾಗಳು ಸೈಮಾ ಪ್ರಶಸ್ತಿಯ ನಾಮನಿರ್ದೇಶನಗೊಂಡ ಪಟ್ಟಿಯಲ್ಲಿವೆ. ತರುಣ್ ಸುಧೀರ್ ನಿರ್ದೇಶಿಸಿದ್ದ ‘ಕಾಟೇರ’ ಸಿನಿಮಾ ಸುಮಾರು 8 ವಿಭಾಗಗಗಳಲ್ಲಿ ನಾಮನಿರ್ದೇಶನಗೊಂಡಿದೆ.

VISTARANEWS.COM


on

SIIMA 2024 nomination list announced kaatera
Koo

ಬೆಂಗಳೂರು: ಪ್ರತಿಷ್ಠಿತ ಸೈಮಾ ಪ್ರಶಸ್ತಿ (SIIMA 2024) ಮತ್ತೆ ಬಂದಿದೆ. ಈ ಅವಾರ್ಡ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸೈಮಾ ಎಂದರೆ, ‘ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್’ ಎಂದು. ಈ ಪ್ರಶಸ್ತಿಯನ್ನು ಪ್ರಮುಖವಾಗಿ ಸೌತ್ ಸಿನಿಮಾರಂಗದಲ್ಲಿ ತಯಾರಾಗುವ ಸಿನಿಮಾಗಳಿಗೆ ಮಾತ್ರವೇ ಕೊಡಲಾಗುತ್ತದೆ. ಪ್ರತಿ ಬಾರಿ ಈ ಪ್ರಶಸ್ತಿ ಪಡದುಕೊಳ್ಳುವ ಸಿನಿಮಾ ಯಾವುವು, ಕಲಾವಿದರು ಯಾರು ಎನ್ನುವ ಕುತೂಹಲ ಇದ್ದೇ ಇರುತ್ತದೆ. 2024ರ ಸೈಮಾ ನಾಮೀಷನ್ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನ ಯಾವ ಸಿನಿಮಾಗಳು ರೇಸ್ ನಲ್ಲಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

SIIMA ನ ಅಧ್ಯಕ್ಷರಾದ ಬೃಂದಾ ಪ್ರಸಾದ್ ಅವರು 2023ರ SIIMA ನಾಮನಿರ್ದೇಶನ ಸಿನಿಮಾ ಪಟ್ಟಿ ಘೋಷಿಸಿದ್ದಾರೆ. ನಾಮನಿರ್ದೇಶನ ಸಿನಿಮಾ ಬಗ್ಗೆ ಮಾತನಾಡುತ್ತಾ ಬೃಂದಾ ಪ್ರಸಾದ್ “ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾದ ಪ್ರಾದೇಶಿಕ ಸಿನಿಮಾಗಳು ಭಾಷೆಯನ್ನು ಮೀರಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಹೀಗಾಗಿ SIIMA 2024 ಪ್ರಬಲ ಸ್ಪರ್ಧಿಗಳ ಪಟ್ಟಿಯನ್ನು ಹೊಂದಿರುತ್ತದೆ” ಎಂದಿದ್ದಾರೆ.

ಸ್ಯಾಂಡಲ್‌ವುಡ್‌ನಿಂದ ದರ್ಶನ್ ನಟಿಸಿದ ‘ಕಾಟೇರ’ ಹಾಗೂ ‘ಸಪ್ತಸಾಗರದಾಚೆ ಎಲ್ಲೋ ಸೈಡ್-ಎ’ ಸಿನಿಮಾಗಳು ಸೈಮಾ ಪ್ರಶಸ್ತಿಯ ನಾಮನಿರ್ದೇಶನಗೊಂಡ ಪಟ್ಟಿಯಲ್ಲಿವೆ. ತರುಣ್ ಸುಧೀರ್ ನಿರ್ದೇಶಿಸಿದ್ದ ‘ಕಾಟೇರ’ ಸಿನಿಮಾ ಸುಮಾರು 8 ವಿಭಾಗಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಇದರೊಂದಿಗೆ ರಕ್ಷಿತ್ ಶೆಟ್ಟಿ ನಟಿಸಿ, ಹೇಮಂತ್ ರಾವ್ ನಿರ್ದೇಶಿಸಿದ ‘ಸಪ್ತಸಾಗರದಾಚೆ ಎಲ್ಲೋ ಸೈಡ್-ಎ’ ಸಿನಿಮಾ ಸುಮಾರು 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಇದನ್ನೂ ಓದಿ: Paris Olympics 2024 : ಜಿಯೋಸಿನಿಮಾದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​​ ಉಚಿತ ನೇರಪ್ರಸಾರ

ಇದನ್ನೂ ಓದಿ : Kannada New Movie: ಸೆಟ್ಟೇರಿತು ‘ಆಕಾಶ್’, ‘ಅರಸು’ ಚಿತ್ರಗಳ ಡೈರೆಕ್ಟರ್ ಹೊಸ ಸಿನಿಮಾ; ಕಿರುತೆರೆಯ ಈ ಪ್ರತಿಭೆ ನಾಯಕ

ಸೈಮಾ ರೇಸ್‌ನಲ್ಲಿರುವ ಸಿನಿಮಾಗಳು

ಕನ್ನಡ-ಕಾಟೇರ
ತೆಲುಗು-ದಸರಾ
ತಮಿಳು-ಜೈಲರ್
ಮಲಯಾಳಂ-2018

ಕಾಟೇರ ಹಾಗೂ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಸಿನಿಮಾಗಳು ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ 8 ವಿಭಾಗಗಗಳಲ್ಲಿ ನಾಮಿನೇಟ್ ಆಗಿದೆ. ಅತ್ತ ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಚಿತ್ರ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ತೆಲುಗಿನಲ್ಲಿ, ನಾನಿ ಮತ್ತು ಕೀರ್ತಿ ಸುರೇಶ್ ಅಭಿನಯದ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ ಚಿತ್ರ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಹಾಯ್ ನಾನ್ನ’ 10 ವಿಭಾಗಗಳಲ್ಲಿ ನಾಮಿನೇಷನ್ ಗೊಂಡಿದೆ.

ತಮಿಳಿನಲ್ಲಿ, ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ 11 ವಿಭಾಗದಲ್ಲಿ ನಾಮನಿರ್ದೇಶನಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಉದಯನಿಧಿ ಸ್ಟಾಲಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ‘ಮಾಮಣ್ಣನ್’ ಸಿನಿಮಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಮಲಯಾಳಂನಲ್ಲಿ, ಟೋವಿನೋ ಥಾಮಸ್ ಮತ್ತು ಆಸಿಫ್ ಅಲಿ ಅಭಿನಯದ ಜೂಡ್ ಆಂಥನಿ ಜೋಸೆಫ್ ನಿರ್ದೇಶನದ ‘2018’ ಸಿನಿಮಾ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ, ಮಮ್ಮುಟ್ಟಿ ಮತ್ತು ಜ್ಯೋತಿಕಾ ಅಭಿನಯದ ‘ಕಾತಲ್ – ದಿ ಕೋರ್’ 7 ವಿಭಾಗಗಳಲ್ಲಿ ನಾಮಿನೇಷನ್ ಆಗಿದೆ.

ಆನ್‌ಲೈನ್ ವೋಟಿಂಗ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರು ಮತ್ತು ಚಲನಚಿತ್ರಗಳಿಗೆ www.siima.in ಮತ್ತು SIIMA ನ ಫೇಸ್‌ಬುಕ್ ಪುಟದಲ್ಲಿ ವೋಟ್ ಮಾಡಬಹುದು. ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು 2024ರ ಸೈಮಾ ನಡೆಯಲಿದೆ.

Continue Reading

ಸಿನಿಮಾ

Manorathangal Trailer: ಗಮನ ಸೆಳೆದ ʼಮನೋರಥಂಗಳ್‌ʼ ಟ್ರೈಲರ್‌; 8 ನಿರ್ದೇಶಕರ 9 ಎಪಿಸೋಡ್‌ನಲ್ಲಿ ಸ್ಟಾರ್‌ಗಳ ಸಮಾಗಮ

Manorathangal Trailer: ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿ, ಫಹಾದ್ ಫಾಸಿಲ್, ಬಿಜು ಮೆನನ್, ಅಪರ್ಣಾ ಬಾಲಮುರಳಿ ಮುಂತಾದ ಜನಪ್ರಿಯ ಕಲಾವಿದರು ತೆರೆ ಹಂಚಿಕೊಂಡಿರುವ ಮಲೆಯಾಳಂನ ಪ್ಯಾನ್‌ ಇಂಡಿಯಾ ಆಂಥಾಲಜಿ ʼಮನೋರಥಂಗಳ್‌ʼ ಸೀರಿಸ್‌ನ ಟ್ರೈಲರ್‌ ಬಿಡುಗಡೆಯಾಗಿದೆ. 9 ಕಥೆಗಳಿರುವ ಈ ಆಂಥಾಲಜಿಗೆ 8 ಮಂದಿ ನಿರ್ದೇಶಕರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

VISTARANEWS.COM


on

Manorathangal Trailer
Koo

ತಿರುವನಂತಪುರಂ: ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿ, ಫಹಾದ್ ಫಾಸಿಲ್, ಬಿಜು ಮೆನನ್, ಅಪರ್ಣಾ ಬಾಲಮುರಳಿ ಮುಂತಾದ ಜನಪ್ರಿಯ ಕಲಾವಿದರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಇವರ ಚಿತ್ರಗಳು ತೆರೆಕಂಡಾಗ ಭಾಷೆಯ ಗಡಿಯನ್ನೂ ಮೀರಿ ವೀಕ್ಷಿಸುವ ಪ್ರೇಕ್ಷಕರ ವರ್ಗವೇ ಇದೆ. ಹಾಗಾದರೆ ಇಂತಹ ಜನಪ್ರಿಯ ಸ್ಟಾರ್‌ಗಳು ಒಂದೇ ಬಾರಿಗೆ ತೆರೆ ಮೇಲೆ ಬಂದರೆ? ಹೌದು, ಮಲೆಯಾಳಂನ ಪ್ಯಾನ್‌ ಇಂಡಿಯಾ ಆಂಥಾಲಜಿ (Anthology) ʼಮನೋರಥಂಗಳ್‌ʼ (Manorathangal) ಸೀರಿಸ್‌ಗಾಗಿ ಈ ಸ್ಟಾರ್‌ಗಳು ಒಂದಾಗುತ್ತಿದ್ದಾರೆ. ಮಲಯಾಳಂನ ಅಚ್ಚುಮೆಚ್ಚಿನ ಬರಹಗಾರ, ಚಿತ್ರಕಥೆಗಾರ ಮತ್ತು ನಿರ್ದೇಶಕ ಎಂ.ಟಿ.ವಾಸುದೇವನ್ ನಾಯರ್ ಈ ಸೀರಿಸ್‌ಗೆ ಕಥೆ ಬರೆದಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಮನೋರಥಂಗಳ್‌ ಟ್ರೈಲರ್‌ ಬಿಡುಗಡೆಯಾಗಿದೆ (Manorathangal Trailer)

9 ಕಥೆಗಳಿರುವ ಈ ಆಂಥಾಲಜಿಗೆ 8 ಮಂದಿ ನಿರ್ದೇಶಕರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ʼಮನೋರಥಂಗಳ್‌ʼ ಆಂಥಾಲಜಿ ಆಗಸ್ಟ್‌ 15ರಂದು ಜೀ5ನಲ್ಲಿ ಬಿಡುಗಡೆ ಆಗಲಿದೆ. ಹಾಗಾದರೆ ಯಾವೆಲ್ಲ ಸಣ್ಣ ಕಥೆಗಳು ಈ ಸಿನಿಮಾದಲ್ಲಿ ಅಡಕವಾಗಿವೆ? ಯಾರೆಲ್ಲ ಸ್ಟಾರ್‌ ನಟರಿದ್ದಾರೆ? ನಿರ್ದೇಶಕರು ಯಾರು ? ಎಂಬ ಮಾಹಿತಿ ಇಲ್ಲಿದೆ.

ಯಾರೆಲ್ಲ ನಟಿಸಿದ್ದಾರೆ?

ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿ, ಫಹಾದ್ ಫಾಸಿಲ್, ಪಾರ್ವತಿ ತಿರುವೋತ್ತು, ಹರೀಶ್ ಉತ್ತಮನ್, ಬಿಜು ಮೆನನ್, ಶಾಂತಿ ಕೃಷ್ಣ, ಜಾಯ್ ಮ್ಯಾಥ್ಯೂ, ಮಧು, ಆಸಿಫ್ ಅಲಿ, ನದಿಯಾ ಮೊಯ್ದು, ಕೈಲಾಸ, ಇಂದ್ರನ್ಸ್, ನೆಡುಮುಡಿ ವೇಣು, ರಣಜಿ ಪಣಿಕ್ಕರ್, ಸುರಭಿ ಲಕ್ಷ್ಮೀ, ಸಿದ್ದಿಕ್, ಇಶಿತ್ ಯಾಮಿನಿ, ನಾಸೀರ್, ಇಂದ್ರಜಿತ್, ಅಪರ್ಣಾ ಬಾಲಮುರಳಿ ಮತ್ತಿತರರು ನಟಿಸಿದ್ದಾರೆ.

ಯಾವಾಗ ಬಿಡುಗಡೆ?

ಮೊದಲೇ ಹೇಳಿದಂತೆ ಜೀ5 ನಿರ್ಮಾಣ ಮಾಡಿರುವ ಈ ಆಂಥಾಲಜಿ ಆಗಸ್ಟ್‌ 15ರಂದು ಪ್ರೀಮಿಯರ್ ಆಗಲಿದೆ. ಮಲಯಾಳಂ ಜತೆಗೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯ.

9 ಕಥೆಗಳಿಗೆ 8 ನಿರ್ದೇಶಕರು

ಮೋಹನ್‌ಲಾಲ್ ನಟಿಸಿರುವ ಪ್ರಿಯದರ್ಶನ್ ನಿರ್ದೇಶಿಸಿದ ‘ಒಲ್ಲವುಮ್ ತೀರವುಮ್’ ಬ್ಲ್ಯಾಕ್‌ & ವೈಟ್‌ನಲ್ಲಿ ಮೂಡಿಬಂದಿದೆ. ರಂಜಿತ್ ಅವರ ನಿರ್ದೇಶನದಲ್ಲಿ ‘ಕಾಡುಗನ್ನವ ಒರು ಯಾತ್ರೆ ಕುರಿಪ್ಪು’ ಕಥೆಯಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ.

‘ಶಿಲಾಲಿಖಿತಂ’ ಪ್ರಿಯದರ್ಶನ್ ನಿರ್ದೇಶನದ ಈ ಕಥೆಯಲ್ಲಿ ಬಿಜು ಮೆನನ್, ಶಾಂತಿಕೃಷ್ಣ ಮತ್ತು ಜಾಯ್ ಮ್ಯಾಥ್ಯೂ ಅಭಿನಯಿಸಿದ್ದಾರೆ. ಶ್ಯಾಮಪ್ರಸಾದ್ ನಿರ್ದೇಶನದ ‘ಕಜ್ಚಾ’ದಲ್ಲಿ ಪಾರ್ವತಿ ತಿರುವೋತ್ತು ಮತ್ತು ಹರೀಶ್ ಉತ್ತಮನ್ ಕಾಣಿಸಿಕೊಂಡಿದ್ದಾರೆ.

ಮಾಧೂ ಮತ್ತು ಆಸಿಫ್ ಅಲಿ ನಟಿಸಿರುವ ‘ವಿಲ್ಪನಾ’ಕ್ಕೆ ಅಶ್ವತಿ ನಾಯರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಭಿನವ ಮಹೇಶ್ ನಾರಾಯಣನ್ ನಿರ್ದೇಶನದ ‘ಶರ್ಲಾಕ್’ನಲ್ಲಿ ಫಹಾದ್ ಫಾಸಿಲ್ ಮತ್ತು ಜರೀನಾ ಮೊಯ್ದು ಜೋಡಿ ಕಾಣಿಸಿಕೊಂಡಿದೆ. ‘ಸ್ವರ್ಗಂ ತುರಕ್ಕುನ್ನ ಸಮಯ’ ಜಯರಾಜನ್ ನಾಯರ್ ನಿರ್ದೇಶನದ ಚಿತ್ರವಾಗಿದ್ದು, ಕೈಲಾಶ್, ಇಂದ್ರನ್ಸ್, ನೆಡುಮುಡಿ ವೇಣು, ಎಂಜಿ ಪಣಿಕ್ಕರ್ ಮತ್ತು ಸುರಭಿ ಲಕ್ಷ್ಮೀ ನಟಿಸಿದ್ದಾರೆ.

‘ಅಭ್ಯಾಮ್ ತೀಡಿ ವೀಂದುಂ’ ಸಿದ್ಧಿಕ್, ಇಶಿತ್ ಯಾಮಿನಿ ಮತ್ತು ನಜೀರ್ ಅಭಿನಯಿಸಿರುವ ಚಿತ್ರವಾಗಿದ್ದು, ಸಂತೋಷ್ ಶಿವನ್ ನಿರ್ದೇಶಿಸಿದ್ದಾರೆ. ‘ಕಡಲ್‌ಕಾಟ್ಟು’ ರತೀಶ್ ಅಂಬಾಟ್ ನಿರ್ದೇಶನದ ಈ ಸಿನಿಮಾದಲ್ಲಿ ಇಂದ್ರಜಿತ್ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಅಪರ್ಣಾ ಬಾಲಮುರಳಿ ನಟಿಸಿದ್ದಾರೆ.

ಇದನ್ನೂ ಓದಿ: Actor Yash: ಯಶ್‌ ಅಭಿನಯದ ಈ ಸೂಪರ್‌ ಹಿಟ್‌ ಚಿತ್ರ ರಿ-ರಿಲೀಸ್‌; ಎರಡೂವರೆ ವರ್ಷಗಳ ಬಳಿಕ ರಾಕಿಂಗ್‌ ಸ್ಟಾರ್‌ ಥಿಯೇಟರ್‌ಗೆ ಎಂಟ್ರಿ

Continue Reading

ಸ್ಯಾಂಡಲ್ ವುಡ್

MAX Teaser: ಬಹುನಿರೀಕ್ಷಿತ ʼಮ್ಯಾಕ್ಸ್ʼ ಚಿತ್ರದ ಟೀಸರ್‌ ಔಟ್‌; ರೌಡಿಗಳ ಅಡ್ಡದಲ್ಲಿ ನಿಂತು ಲಾಂಗ್‌ ಬೀಸಿದ ಸುದೀಪ್‌

MAX Teaser: ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಮ್ಯಾಕ್ಸ್ʼನ ಟೀಸರ್ ರಿಲೀಸ್‌ ಆಗಿದೆ. ಈ‌ ಆ್ಯಕ್ಷನ್‌ ಚಿತ್ರದಲ್ಲಿ ಕಿಚ್ಚ ಸುದೀಪ್‌ ಮತ್ತೊಮ್ಮೆ ಮಾಸ್‌ ಅವತಾರದಲ್ಲಿ ಮಿಂಚಿದ್ದಾರೆ. ಟೀಸರ್‌ನಲ್ಲಿ ಭರಪೂರ ಆ್ಯಕ್ಷನ್‌ ದೃಶ್ಯಗಳು ಕಂಡು ಬಂದಿದ್ದು ಅಭಿಮಾನಿಗಳು ಮನಸೋತಿದ್ದಾರೆ. ಮಾಸ್- ಗಾಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನು ನೋಡಿದ ಅಭಿಮಾನಿಗಳ ನಿರೀಕ್ಷೆ ಇನ್ನೂ ಹೆಚ್ಚಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ʼಮ್ಯಾಕ್ಸ್ʼ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜತೆಗೆ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಸುನೀಲ್‌ ಮುಂತಾದವರು ಬಣ್ಣ ಹಚ್ಚಿದ್ದಾರೆ.

VISTARANEWS.COM


on

MAX Teaser
Koo

ಬೆಂಗಳೂರು: ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಮ್ಯಾಕ್ಸ್ʼನ ಟೀಸರ್ (MAX Teaser) ರಿಲೀಸ್‌ ಆಗಿದೆ. ಈ‌ ಆ್ಯಕ್ಷನ್‌ ಚಿತ್ರದಲ್ಲಿ ಕಿಚ್ಚ ಸುದೀಪ್‌ (Kiccha Sudeep) ಮತ್ತೊಮ್ಮೆ ಮಾಸ್‌ ಅವತಾರದಲ್ಲಿ ಮಿಂಚಿದ್ದಾರೆ. ಟೀಸರ್‌ನಲ್ಲಿ ಭರಪೂರ ಆ್ಯಕ್ಷನ್‌ ದೃಶ್ಯಗಳು ಕಂಡು ಬಂದಿದ್ದು ಅಭಿಮಾನಿಗಳು ಮನಸೋತಿದ್ದಾರೆ. ʼವಿಕ್ರಾಂತ್‌ ರೋಣʼ ಚಿತ್ರದ ಬಳಿಕ ಸುಮಾರು 2 ವರ್ಷಗಳ ತರುವಾಯ ಈ ಸಿನಿಮಾ ತರೆಕಾಣಲಿದ್ದು, ಕುತೂಹಲ ಕೆರಳಿಸಿದೆ.

ಮಾಸ್- ಗಾಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನು ನೋಡಿದ ಅಭಿಮಾನಿಗಳ ನಿರೀಕ್ಷೆ ಇನ್ನೂ ಹೆಚ್ಚಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ʼಮ್ಯಾಕ್ಸ್ʼ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜತೆಗೆ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಸುನೀಲ್‌ ಮುಂತಾದವರು ಬಣ್ಣ ಹಚ್ಚಿದ್ದಾರೆ. ʼವಿಕ್ರಾಂತ್‌ ರೋಣʼ ಬಳಿಕ ಸುದೀಪ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಅವಕಾಶ ಅಜನೀಶ್ ಲೋಕನಾಥ್‌ಗೆ ಸಿಕ್ಕಿದ್ದು, ಹಾಡುಗಳ ಬಗ್ಗೆಯೂ ಕುತೂಹಲ ಗರಿಗೆದರಿದೆ. ತನು ವಿ‌ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್. ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಟೀಸರ್‌ನಲ್ಲಿ ಏನಿದೆ?

ಕಿಚ್ಚ ಸುದೀಪ್‌ ʼಮ್ಯಾಕ್ಸ್‌ʼ ಡಬ್ಬಿಂಗ್‌ ಮುಗಿಸಿರುವ ಫೋಟೊ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಚಿತ್ರತಂಡ ʼಮ್ಯಾಕ್ಸ್‌ʼ ಟೀಸರ್‌ ಬಿಟ್ಟು ಪ್ರೇಕ್ಷಕರು ಸಿನಿಮಾ ರಿಲೀಸ್‌ಗಾಗಿ ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ. ರೌಡಿಗಳ ಅಖಾಡದಲ್ಲಿ ನಿಂತು ಎರಡು ಕೈಗಳಿಂದ ಮಚ್ಚು ಬೀಸುವ ಮಾಸ್‌ ಲುಕ್‌ನಲ್ಲಿ ಕಿಚ್ಚ ಸುದೀಪ್‌ ಮಿಂಚು ಹರಿಸಿದ್ದಾರೆ. ಹಿನ್ನಲೆ ಸಂಗೀತವೂ ಗಮನ ಸೆಳೆಯುವಂತಿದೆ.

ʼಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʻಅರ್ಜುನ್ ಮಹಾಕ್ಷಯ್ʼ ಹೆಸರಿನ ಸುದೀಪ್ ಪಾತ್ರ ಸ್ಪೆಷಲ್ ಆಗಿಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ. ʻಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಗಳನ್ನ ಕಂಪೋಸ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ ಎನ್ನಲಾಗಿದೆ. ಅದರ ಸೂಚನೆ ಈ ಟೀಸರ್‌ನಲ್ಲಿ ಲಭಿಸಿದೆ.

ಇದನ್ನೂ ಓದಿ: Kiccha Sudeep: ಕಿಚ್ಚ ಸುದೀಪ್ ಸಿನಿಮಾಗೆ ‘ಜೈಲರ್’ ಸ್ಟಂಟ್ ಮಾಸ್ಟರ್ ಎಂಟ್ರಿ!

ಮತ್ತೆ ಖಾಕಿ ತೊಟ್ಟ ಸುದೀಪ್‌

ಸುದೀಪ್‌ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡ ʼವಿಕ್ರಾಂತ್‌ ರೋಣʼ ಚಿತ್ರ 2022ರ ಜುಲೈ 28ರಂದು ತೆರೆಕಂಡಿತ್ತು. ʼರಂಗಿತರಂಗʼ ನಿರ್ದೇಶಕ ಅನೂಪ್‌ ಭಂಡಾರಿ ಆ್ಯಕ್ಷನ್‌ ಕಟ್‌ ಹೇಳಿದ್ದ ʼವಿಕ್ರಾಂತ್‌ ರೋಣʼ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿತ್ತು. ಈ ಥ್ರಿಲ್ಲರ್‌ ಚಿತ್ರ 100 ಕೋಟಿ ರೂ. ಕ್ಲಬ್‌ ಸೇರಿ ಸುದೀಪ್‌ ವೃತ್ತಿ ಜೀವನಕ್ಕೆ ಹೊಸ ಮೈಲೇಜ್‌ ನೀಡಿತ್ತು. ನಿರೂಪ್‌ ಭಂಡಾರಿ, ಮಿಲನಾ ನಾಗರಾಜ್‌, ನೀತಾ ಅಶೋಕ್‌ ಮತ್ತಿತರರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ಈ ಸಿನಿಮಾದಲ್ಲಿ ಬಾಲಿವುಡ್‌ ಬೆಡಗಿ ಜ್ವಾಕಲಿನ್‌ ಫೆರ್ನಾಂಡೀಸ್‌ ಹೆಜ್ಜೆ ಹಾಕಿದ ʼರಾ ರಾ ರಕ್ಕಮ್ಮʼ ಹಾಡು ಜನಪ್ರಿಯವಾಗಿತ್ತು. ಇದಾಗಿ ಎರಡು ವರ್ಷಗಳ ಬಳಿಕ ಸುದೀಪ್‌ ಮತ್ತೆ ಖಾಕಿ ವೇಷದಲ್ಲಿ ಪ್ರೇಕ್ಷಕರ ಎದುರು ಬರುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ರಿಲೀಸ್‌ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲಿಯೇ ಘೋಷಿಸಲಿದೆ.

Continue Reading
Advertisement
Karnataka Jobs Reservation
ಪ್ರಮುಖ ಸುದ್ದಿ1 min ago

Karnataka Jobs Reservation : ಕನ್ನಡಿಗರಿಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮೀಸಲಾತಿ ಕೊಡುವ ಮಸೂದೆಗೆ ತಾತ್ಕಾಲಿಕ ತಡೆ

Kapil Dev
ಕ್ರೀಡೆ22 mins ago

Kapil Dev : ಟಿ20 ವಿಶ್ವ ಕಪ್ ಚಾಂಪಿಯನ್ಸ್​ ಕೊಹ್ಲಿ, ರೋಹಿತ್ ಶ್ಲಾಘಿಸಿದ 1983ರ ವಿಶ್ವ ಕಪ್ ವಿಜೇತ ಕಪಿಲ್​ ದೇವ್​​

Hand Painted lehenga Fashion
ಫ್ಯಾಷನ್23 mins ago

Hand Painted lehenga Fashion: ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿದ ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ!

Karnataka Jobs Reservation
ರಾಜಕೀಯ24 mins ago

Karnataka Jobs Reservation: ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲು ಸಾಧ್ಯವೆ? ತೊಡಕುಗಳು ಏನೇನು?

UP CM DCM
ದೇಶ25 mins ago

UP CM v/s DCM: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ; ಯೋಗಿ ತಲೆದಂಡ ಪಕ್ಕಾನಾ?

ಕ್ರೀಡೆ43 mins ago

KL Rahul : ಆಮಿರ್​ ಖಾನ್ ಮನೆ ಪಕ್ಕದಲ್ಲೇ 20 ಕೋಟಿ ಫ್ಲ್ಯಾಟ್ ಖರೀದಿಸಿದ ರಾಹುಲ್, ಅಥಿಯಾ ದಂಪತಿ

Raj B Shetty starrer roopanthara is releasing on July 26
ಕರ್ನಾಟಕ45 mins ago

Kannada New Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದ ರಾಜ್ ಬಿ ಶೆಟ್ಟಿ ನಟನೆಯ ‘ರೂಪಾಂತರ’ ಚಿತ್ರ ಜು.26ಕ್ಕೆ ರಿಲೀಸ್‌

PR Seva Award for Media Connect in Bengaluru
ಕರ್ನಾಟಕ47 mins ago

Media Connect: ಮೀಡಿಯಾ ಕನೆಕ್ಟ್‌ಗೆ ಭರವಸೆಯ ಪಿಆರ್‌ ಸೇವಾ ಪ್ರಶಸ್ತಿ

Action to reduce pulses price says Union Minister Pralhad Joshi
ಕರ್ನಾಟಕ49 mins ago

Pralhad Joshi: ಬೇಳೆ ದರ ಇಳಿಕೆಗೆ ಕೇಂದ್ರದಿಂದ ಕ್ರಮ: ಪ್ರಲ್ಹಾದ್‌ ಜೋಶಿ

Minister Mankala Vaidya instructed to file a case against IRB and National Highways officers
ಕರ್ನಾಟಕ52 mins ago

Uttara Kannada News: ಐಆರ್‌ಬಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ: ಸಚಿವ ಮಂಕಾಳ ವೈದ್ಯ ಸೂಚನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌