BICFF 2023: ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ವಿಜೇತರಿಗೆ ಅಪ್ಪು ಹೆಸರಲ್ಲಿ ನೆನಪಿನ ಕಾಣಿಕೆ - Vistara News

ಸಿನಿಮಾ

BICFF 2023: ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ವಿಜೇತರಿಗೆ ಅಪ್ಪು ಹೆಸರಲ್ಲಿ ನೆನಪಿನ ಕಾಣಿಕೆ

ಫೆಬ್ರವರಿ 22ರಿಂದ (BICFF 2023) ಒಟ್ಟು ಐದು ದಿನಗಳ ಕಾಲ ನಡೆದಿದ್ದ ಚಲನಚಿತ್ರೋತ್ಸವದಲ್ಲಿ ಕನ್ನಡ ಒಳಗೊಂಡಂತೆ ಬೇರೆ ಬೇರೆ ಭಾಷೆಯ ಸಿನಿಮಾಗಳು ಪ್ರದರ್ಶನಗೊಂಡಿದೆ. ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ವಿಜೇತರಿಗೆ ಅಪ್ಪು ಹೆಸರಲ್ಲಿ ನೆನಪಿನ ಕಾಣಿಕೆ ನೀಡಲಾಯಿತು.

VISTARANEWS.COM


on

BICFF 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಐದು ದಿನಗಳಿಂದ ನಡೆಯುತ್ತಿದ್ದ ‘ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ’ (bangalore international childrens film festival) (BICFF 2023) ಫೆ.26ರಂದು ತೆರೆ ಕಂಡಿದೆ. ‘ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್’ ಇದೇ ಮೊದಲ ಬಾರಿಗೆ ಆಯೋಜನೆ ಮಾಡಿರುವ ಮಕ್ಕಳ ಚಲನಚಿತ್ರೋತ್ಸವ ಅದ್ಭುತ ಪ್ರತಿಕ್ರಿಯೆಯೊಂದಿಗೆ ಯಶಸ್ವಿಯಾಗಿದೆ. ಮೊದಲ ಚಲನಚಿತ್ರೋತ್ಸವವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಣೆ ಮಾಡಲಾಗಿದ್ದು, ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ವಿಜೇತರಿಗೆ ಅಪ್ಪು ಹೆಸರಲ್ಲಿ ನೆನಪಿನ ಕಾಣಿಕೆ ನೀಡಲಾಯಿತು.

ಫೆಬ್ರವರಿ 22ರಿಂದ ಒಟ್ಟು ಐದು ದಿನಗಳ ಕಾಲ ನಡೆದಿದ್ದ ಚಲನಚಿತ್ರೋತ್ಸವದಲ್ಲಿ ಕನ್ನಡ ಒಳಗೊಂಡಂತೆ ಬೇರೆ ಬೇರೆ ಭಾಷೆಯ ಸಿನಿಮಾಗಳು ಪ್ರದರ್ಶನಗೊಂಡಿದೆ. ಚಲನಚಿತ್ರೋತ್ಸವ ಅದ್ದೂರಿಯಾಗಿ ತೆರೆ ಕಂಡಿದ್ದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಎಸ್.ನಾರಾಯಣ್, ವಿ.ನಾಗೇಂದ್ರ ಪ್ರಸಾದ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ‘ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್’ ಉಲ್ಲಾಸ್, ಕಾರ್ಯಕ್ರಮ ನಿರ್ದೇಶಕ ನಂದಳಿಕೆ ನಿತ್ಯಾನಂದ ಪ್ರಭು, ನಿರ್ದೇಶಕ ಹರಿ ಸಂತೋಷ್, ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸುಂದರ್ ರಾಜ್ ಸೇರಿದಂತೆ ಹಲವರು ಭಾಗಿಯಾಗಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಇದನ್ನೂ ಓದಿ: BICFF 2023: ಫೆಬ್ರವರಿ 22ರಿಂದ 26ವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನ ಚಿತ್ರೋತ್ಸವ

ಕಾರ್ಯಕ್ರಮದಲ್ಲಿ ಎಸ್.ನಾರಾಯಣ್ ಮಾತನಾಡಿ ʻʻಇದು ಚಲನಚಿತ್ರೋತ್ಸವ ಮುಕ್ತಾಯ ಸಮಾರಂಭ ಅಲ್ಲ ನನ್ನ ಪ್ರಕಾರ ಇದು ಆರಂಭ. ಈ ವೇದಿಕೆ ಬಳಸಿಕೊಂಡು ಹಲವರ ಪ್ರತಿಭೆ ಅನಾವರಣವಾಗಲಿ. ಸುಂದರವಾದ ವಿಚಾರ ಅಂದ್ರೆ ಅಪ್ಪು ಹೆಸರಲ್ಲಿ ಈ ಪ್ರಶಸ್ತಿ ಕೊಡುತ್ತಿರೋದು ಹೆಮ್ಮೆಯ ವಿಚಾರ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಅದ್ಭುತವಾದ ಪ್ರಶಸ್ತಿಯೇ ಅಪ್ಪು. ಅವರ ಹೆಸರಲ್ಲಿ ಅರ್ಥಪೂರ್ಣವಾಗಿ ಚಲನಚಿತ್ರೋತ್ಸವನ್ನು ಆಚರಿಸಲಾಗುತ್ತಿದೆ. ಪ್ರಶಸ್ತಿ ಸಿಕ್ಕವರಿಗೆಲ್ಲ ಅಭಿನಂದನೆಗಳುʼʼ ಎಂದು ಶುಭ ಹಾರೈಸಿದರು.

BICFF 2023

ಪ್ರಶಸ್ತಿ ವಿವರ:

  • ಅತ್ಯುತ್ತಮ ಮಕ್ಕಳ ಚಿತ್ರ
    ಮೊದಲ ಸ್ಥಾನ: ದಿ ಗಾರ್ಡ್
    ಎರಡನೇ ಸ್ಥಾನ: ಗಾಂಧಿ ಮತ್ತು ನೋಟು
    ಮೂರನೇ ಸ್ಥಾನ: ಕೇಕ್
  • ಅತ್ಯುತ್ತಮ ನಿರ್ದೇಶಕಿ: ಆಶಾ ದೇವಿ.ಡಿ (ಓ ನನ್ನ ಚೇತನ)
  • ಅತ್ಯುತ್ತಮ ಸಂಕಲನಕಾರ: ವಸಂತ್ ಕುಮಾರ್ (ಗಾಂಧಿ ಮತ್ತು ನೋಟು)
  • ಅತ್ಯುತ್ತಮ ಛಾಯಾಗ್ರಾಹಕ: ರಾಜು ಎನ್.ಎಂ ( ಮನ್ 3)
  • ಅತ್ಯುತ್ತಮ ಸಂಗೀತ ನಿರ್ದೇಶಕಿ: ವಾಣಿ ಹರೀಕೃಷ್ಣ (ಗಾಂಧಿ ಮತ್ತು ನೋಟು)
  • ಅತ್ಯುತ್ತಮ ನಿರ್ಮಾಣ ಸಂಸ್ಥೆ: ಪೂಜಾ ಘೋಯಲ್ ( ನಮ್ಮ ಅರಣ್ಯ ಪ್ರದೇಶ)
  • ಅತ್ಯುತ್ತಮ ಚಿತ್ರಕಥೆ: ಉಮೇಶ್ ಬಡಿಗೇರ್ ( ದಿ ಗಾರ್ಡ್)
  • ಅತ್ಯುತ್ತಮ ಬಾಲನಟ: ತರುಣ್( ಮಸಣದ ಹೂವು)
  • ಅತ್ಯುತ್ತಮ ಬಾಲನಟಿ: ದಿವಿಜ (ಗಾಂಧಿ ಮತ್ತು ನೋಟು)
  • ಅತ್ಯುತ್ತಮ ಬಾಲ ನಟ ವಿಮರ್ಶಕರ ಆಯ್ಕೆ: ಮಹೇಂದ್ರ (ನನ್ನ ಹೆಸರು ಕಿಶೋರ)
  • ಅತ್ಯುತ್ತಮ ಬಾಲನಟಿ ವಿಮರ್ಶಕರ ಆಯ್ಕೆ: ದೀಕ್ಷಾ. ಡಿ. ರೈ (ಪೆನ್ಸಿಲ್ ಬಾಕ್ಸ್)
  • ಅತ್ಯುತ್ತಮ ಪೋಷಕ ನಟ: ಕಾರ್ತಿಕ್ (ಮೂಕ ಜೀವ)
  • ಅತ್ಯುತ್ತಮ ಪೋಷಕ ನಟಿ: ಅರುಣಾ ಬಾಲರಾಜ್ (ನಹಿ ಜ್ಞಾನೇನ ಸದೃಶಂ)
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Salman Khan : ಸಲ್ಮಾನ್​ ಮನೆ ಬಳಿ ಗುಂಡಿನ ದಾಳಿ; ಪಂಜಾಬ್​​ನಲ್ಲಿ ಗನ್​ ಕೊಟ್ಟವರಿಬ್ಬರ ಬಂಧನ

Salman Khan : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ನಡೆದಿತ್ತು. ಆ ಆರೋಪಿಗಳಿಗೆ ಮಾರ್ಚ್ 15 ರಂದು ಸುಭಾಷ್ ಚಂದರ್ (37) ಮತ್ತು ಅನುಜ್ ಥಾಪನ್ (32) ಎಂಬಿಬ್ಬರು ಪಿಸ್ತೂಲ್ ಮತ್ತು ಕಾಟ್ರಿಜ್​ಗಳನ್ನು ನೀಡಿದ್ದರು. ಈ ಇಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Salman Khan
Koo

ಮುಂಬಯಿ: ಬಾಲಿವುಡ್​ ನಟ ಸಲ್ಮಾನ್​ ಖಾನ್ (Salman Khan) ಅವರ ಮನೆಯ ಬಳಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ (Firing at Salman Khan house) ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಪಂಜಾಬ್​ನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಗುಂಡಿನ ದಾಳಿ ನಡೆಸಿದವರಿಗೆ ಗನ್​ಗಳನ್ನು ನೀಡಿದ್ದರು.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ನಡೆದಿತ್ತು. ಆ ಆರೋಪಿಗಳಿಗೆ ಮಾರ್ಚ್ 15 ರಂದು ಸುಭಾಷ್ ಚಂದರ್ (37) ಮತ್ತು ಅನುಜ್ ಥಾಪನ್ (32) ಎಂಬಿಬ್ಬರು ಪಿಸ್ತೂಲ್ ಮತ್ತು ಕಾಟ್ರಿಜ್​ಗಳನ್ನು ನೀಡಿದ್ದರು. ಈ ಇಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದಾರೆ.

ಸಲ್ಮಾನ್ ಖಾನ್‌ನನ್ನು ಕೊಂದೇ ತೀರುತ್ತೇನೆ, ನನ್ನ ಜೀವನದ ಗುರಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರಿಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಎಬಿಪಿ ನ್ಯೂಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿʼʼ ಎಂದು ಉಲ್ಲೇಖಿಸಿದ್ದಾರೆ. ʻʻಸಲ್ಮಾನ್‌ ಅವರು ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆʼʼ ಎಂಬುದಾಗಿ ಹೇಳಿದ್ದಾರೆ.

“ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಅವರು ಬಿಕಾನೇರ್‌ನಲ್ಲಿರುವ ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ನನ್ನ ಜೀವನದ ಗುರಿ. ಸಲ್ಮಾನ್ ಖಾನ್ ಅವರ ಭದ್ರತೆಯನ್ನು ತೆಗೆದುಹಾಕಿದರೆ ನಾನು ಅವರನ್ನು ಕೊಲ್ಲುತ್ತೇನೆʼʼ ಎಂದು ಬಿಷ್ಣೋಯ್ ಹೇಳಿದ್ದಾರೆ.

ಇದನ್ನೂ ಓದಿ: Gyanvapi Mosque: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಆದೇಶ ನೀಡಿದ್ದ ಜಡ್ಜ್‌ಗೆ ವಿದೇಶದಿಂದ ಜೀವ ಬೆದರಿಕೆ

ʻʻಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ, ಈ ವಿಷಯ ಕೊನೆಗೊಳ್ಳುತ್ತದೆ. ಸಲ್ಮಾನ್ ಅಹಂಕಾರಿ, ಗಾಯಕ ಮೂಸೆವಾಲಾ ಕೂಡ ಹಾಗೇ ಇದ್ದ. ಸಲ್ಮಾನ್ ಖಾನ್‌ನ ಅಹಂ ರಾವಣನಿಗಿಂತ ದೊಡ್ಡದಾಗಿದೆ” ಹೇಳಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ, ಕೃಷ್ಣಮೃಗವನ್ನು ಕೊಂದ ಆರೋಪದ ಮೂಲಕ ಸಲ್ಮಾನ್ ತನ್ನ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಲಾರೆನ್ಸ್‌ ಬಿಷ್ಣೋಯ್‌ ಹೇಳಿದ್ದಾರೆ.

ಸಲ್ಮಾನ್ ಖಾನ್ ಬಗ್ಗೆ ನಮ್ಮ ಸಮಾಜದಲ್ಲಿ ಕೋಪವಿದೆ. ಅವರು ನನ್ನ ಸಮಾಜವನ್ನು ಅವಮಾನಿಸಿದರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರು ಕ್ಷಮೆ ಕೇಳಲಿಲ್ಲ. ಇದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು. ನಾನು ಬೇರೆಯವರನ್ನು ಅವಲಂಬಿಸುವುದಿಲ್ಲ,’’ ಎಂದು ಎಬಿಪಿ ಸುದ್ದಿವಾಹಿನಿಗೆ ತಿಳಿಸಿದರು.

2018 ರಲ್ಲಿ, ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಅವರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್​ನ ಬಿಷ್ಣೋಯ್​ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್​ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಇದನ್ನು ಜಾಂಬಾಜಿ ಎಂದೂ ಕರೆಯುತ್ತಾರೆ.

Continue Reading

ಕಿರುತೆರೆ

Kannada Serials TRP: ಈ ವಾರ ಟಿಆರ್‌ಪಿಯಲ್ಲಿ ʻಲಕ್ಷ್ಮೀ ನಿವಾಸʼಕ್ಕೆ ಎರಡನೇ ಸ್ಥಾನ: ಟಾಪ್‌ 5ನಲ್ಲಿ ʻಅಮೃತಧಾರೆʼ!

Kannada Serials TRP: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.ಸೀತಾ ರಾಮ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

VISTARANEWS.COM


on

Kannada Serials TRP Lakshmi Nivasa In Top Amruthadhaare in Top 5
Koo

ಬೆಂಗಳೂರು: ಪ್ರತಿ ಬಾರಿ ಜೀ ಕನ್ನಡ ವಾಹಿನಿ ಧಾರಾವಾಹಿಯ (Kannada Serials TRP) ʻಲಕ್ಷ್ಮೀ ನಿವಾಸʼ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ ಈ ವಾರ ಈ ವಾರ ʻಪುಟ್ಟಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಕಲರ್ಸ್‌ ಕನ್ನಡದ ʻರಾಮಾಚಾರಿʼ ಸಿನಿಮಾ ಕೂಡ ಟಾಪ್‌ 5ನಲ್ಲಿ ಇದೆ.

‘ಪುಟ್ಟಕ್ಕನ ಮಕ್ಕಳು’

ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿ ಈ ಮೊದಲು ಎರಡಂಕಿ ಟಿಆರ್​ಪಿ ಪಡೆಯುತ್ತಿತ್ತು. ಆದರೆ, ಇತ್ತೀಚೆಗೆ ಟಿಆರ್​ಪಿ ಕುಸಿಯುತ್ತಿತ್ತು. ಪಾಯಿಂಟ್ ಒಂದು ಅಂಕಗಳ ಅಂತರದಲ್ಲಿ ಈ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಲಕ್ಷ್ಮೀ ನಿವಾಸ

ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂದು ಕಷ್ಟಪಡುವ ತಂದೆಯ ಕಥೆ-ವ್ಯಥೆಯ ಜೊತೆ ಸಾಕಷ್ಟು ಭಾವನಾತ್ಮಕ ವಿಚಾರಗಳನ್ನು ಈ ಧಾರಾವಾಹಿಯಲ್ಲಿ (Kannada Serials TRP) ತೋರಿಸಲಾಗಿದೆ. ಸದ್ಯ ಜಯಂತ್‌ನ ಅಸಲಿ ಮುಖ ಜಾಹ್ನವಿ ತಿಳಿಯಬೇಕಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಅದ್ಧೂರಿ ಬಜೆಟ್​ನಲ್ಲಿ ಈ ಧಾರಾವಾಹಿ ಸಿದ್ಧವಾಗಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ.

ಇದನ್ನೂ ಓದಿ: Kannada Serials TRP: ಐಪಿಎಲ್​ ಎಫೆಕ್ಟ್‌: ಯಾವ ಧಾರಾವಾಹಿ ಈ ವಾರ ಟಾಪ್‌?

ಸೀತಾ ರಾಮ

‘ಸೀತಾ ರಾಮ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಮುನ್ನಡೆ ಸಾಧಿಸಿದೆ. ಧಾರಾವಾಹಿ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

‘ರಾಮಾಚಾರಿ’

ಕಲರ್ಸ್ ಕನ್ನಡದ ಧಾರಾವಾಹಿ ‘ರಾಮಾಚಾರಿ’ (Ramachari Serila Kannada) ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಮೌನ, ರುತ್ವಿಕ್ ಕೃಪಾಕರ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿಟ್ಟಿಯ ಪಾತ್ರ ಕೂಡ ಜನ ಮೆಚ್ಚಿದ್ದಾರೆ. ಈ ಧಾರಾವಾಹಿಯ ಟಿಆರ್​ಪಿಯಲ್ಲಿ ಏರಿಳಿತ ಆಗುತ್ತಲೇ ಇದೆ. ಇದು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

ಐದನೇ ಸ್ಥಾನದಲ್ಲಿ ಈ ಬಾರಿ ಎರಡು ಧಾರಾವಾಹಿಗಳು ಸ್ಥಾನ ಪಡೆದಿವೆ. ಇತ್ತೀಚೆಗೆ ಆರಂಭ ಆಗಿರುವ ‘ಶ್ರಾವಣಿ ಸುಬ್ರಮಣ್ಯ’ ಹಾಗೂ ‘ಅಮೃತಧಾರೆ’ ಧಾರಾವಾಹಿ ಇದೆ. ಎರಡೂ ಧಾರಾವಾಹಿಗಳಿಗೆ ಈ ಬಾರಿ ಐದನೇ ಸ್ಥಾನ ಸಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

ಫ್ಯಾಷನ್

Ethnic Collection: ‘ಹೀರಾಮಂಡಿ’ ವೆಬ್ ಸೀರಿಸ್‌ ಪ್ರೇರಿತ ಸಾಂಪ್ರದಾಯಿಕ ಫ್ಯಾಷನ್ ಕಲೆಕ್ಷನ್‌ ಬಿಡುಗಡೆ ಮಾಡಿದ ಅಜಿಯೋ

Ethnic Collection: ನೆಟ್‌ಫ್ಲಿಕ್ಸ್‌ (Netflix) ಹಾಗೂ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ‌ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ (Heeramandi: The Diamond Bazaar) ವೆಬ್‌ ಸೀರಿಸ್‌ನಿಂದ ಸ್ಫೂರ್ತಿ ಪಡೆದ ಸಾಂಪ್ರದಾಯಿಕ ದಿರಿಸುಗಳ (Ethnic Collection) ಎಕ್ಸ್‌ಕ್ಲೂಸಿವ್ ಸಂಗ್ರಹದ ಅನಾವರಣವನ್ನು ಭಾರತದ ಪ್ರೀಮಿಯರ್ ಫ್ಯಾಷನ್ ಇ-ಟೇಲರ್ ಆದ ಅಜಿಯೋ ಬುಧವಾರ ಘೋಷಿಸಿದೆ. ಇಂದಿನಿಂದ (ಏಪ್ರಿಲ್ 25) ಗ್ರಾಹಕರು ಖರೀದಿಸಬಹುದು.

VISTARANEWS.COM


on

Ethnic Collection
Koo

ಮುಂಬೈ: ನೆಟ್‌ಫ್ಲಿಕ್ಸ್‌ (Netflix) ಹಾಗೂ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ‌ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ (Heeramandi: The Diamond Bazaar) ವೆಬ್‌ ಸೀರಿಸ್‌ನಿಂದ ಸ್ಫೂರ್ತಿ ಪಡೆದ ಸಾಂಪ್ರದಾಯಿಕ ದಿರಿಸುಗಳ (Ethnic Collection) ಎಕ್ಸ್‌ಕ್ಲೂಸಿವ್ ಸಂಗ್ರಹದ ಅನಾವರಣವನ್ನು ಭಾರತದ ಪ್ರೀಮಿಯರ್ ಫ್ಯಾಷನ್ ಇ-ಟೇಲರ್ ಆದ ಅಜಿಯೋ ಬುಧವಾರ ಘೋಷಿಸಿದೆ. ಅಜಿಯೋದ ಹೌಸ್ ಆಫ್ ಎಥ್ನಿಕ್ಸ್ (AJIO’s House of Ethnics) ಅಡಿಯಲ್ಲಿ ಇದನ್ನು ಆರಂಭಿಸಲಾಗಿದೆ. ನೆಟ್‌ಫ್ಲಿಕ್ಸ್‌ನ ಈ ಸರಣಿಯಿಂದ ಪ್ರೇರಣೆಗೊಂಡ 250 ಸ್ಟೈಲ್‌ನ ಸಾಂಪ್ರದಾಯಿಕ ದಿರಿಸುಗಳ ಈ ಸೀಮಿತ ಅವಧಿಯ ಸಂಗ್ರಹವು ಗ್ರಾಹಕರಿಗೆ ಒದಗಿಸಲಿದೆ. ಇಂದಿನಿಂದ (ಏಪ್ರಿಲ್ 25) ಗ್ರಾಹಕರು ಖರೀದಿಸಬಹುದು.

ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಈ ಸೀರಿಸ್‌ನಲ್ಲಿ ಬಳಸಲಾದ ಬಣ್ಣಗಳು, ಸಿಲೌಟ್‌ಗಳು, ಬಟ್ಟೆಗಳು ಮತ್ತು ಅಲಂಕಾರಗಳಿಂದ ಈ ಬಹು ನಿರೀಕ್ಷಿತ ಸಂಗ್ರಹವು ಪ್ರೇರಣೆ ಪಡೆದಿದೆ. ಈ ಸಂಗ್ರಹದ ಶ್ರೇಣಿಯಲ್ಲಿ ಬಟ್ಟೆಗಳಿಗೆ ಶುದ್ಧ ರೇಷ್ಮೆ, ಟಿಶ್ಯೂ, ಜಾರ್ಜೆಟ್‌ ಮತ್ತು ಬ್ರೋಕೇಡ್‌ಗಳನ್ನು ಬಳಸಲಾಗಿದೆ. ಇವುಗಳಲ್ಲಿ ಬಹಳ ಕೌಶಲದಿಂದ ರೂಪಿಸಿದ ಡಬ್ಕಾ ಕೈ ಕಸೂತಿ, ಪಾರ್ಸಿ ಕಸೂತಿ, ಬೀಡ್ ವರ್ಕ್ ಮತ್ತು ಇದೇ ಸೀರಿಸ್‌ನಿಂದ ಸ್ಫೂರ್ತಿಗೊಂಡ ಡಿಜಿಟಲ್ ಪ್ರಿಂಟ್ಸ್ ಇವೆ.

ಇದು ಮಹಿಳಾ ಕೇಂದ್ರಿತ ಸಂಗ್ರಹವಾಗಿದ್ದು, ಶರಾರಾ, ಕುರ್ತಾ ಸೂಟ್ ಸೆಟ್, ಲೆಹೆಂಗಾ ಮತ್ತು ಸೀರೆಗಳನ್ನು ಒಳಗೊಂಡಿದೆ. ಇವುಗಳ ಬೆಲೆ 4,000 ರೂ.ಯೊಂದ ಆರಂಭಗೊಂಡು 1,50,000 ರೂ. ತನಕ ಇರುತ್ತದೆ. ಇದನ್ನು ಸಂಜಯ್ ಲೀಲಾ ಬನ್ಸಾಲಿ ಅವರ ತಂಡ ವಿನ್ಯಾಸ ಮಾಡಿದೆ. ಅಜಿಯೋ ಹಾಗೂ ನೆಟ್‌ಫ್ಲಿಕ್ಸ್ ಮಧ್ಯೆ ಈ ಪಾಲುದಾರಿಕೆಯ ಕಲ್ಪನೆ ಮೂಡಿರುವ ಬಗೆಯೂ ಆಸಕ್ತಿದಾಯಕ. ಇದರಿಂದಾಗಿ ಅಭಿಮಾನಿಗಳು ನೆಟ್‌ಫ್ಲಿಕ್ಸ್ ಸೀರಿಸ್‌ನಿಂದ ಪ್ರೇರಣೆಗೊಂಡ ವಿಶಿಷ್ಟ ಸ್ಟೈಲ್ ಹೊಂದಬಹುದು.

ಅಜಿಯೋದ ಸಿಇಒ ವಿನೀತ್ ನಾಯರ್ ಅವರು ಮಾತನಾಡಿ, “ಸಂಜಯ್ ಲೀಲಾ ಬನ್ಸಾಲಿ ಅವರ ಸೃಷ್ಟಿಯಲ್ಲಿ ಫ್ಯಾಷನ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದರ ಥೀಮ್ ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯಲ್ಲಿ ಆಳವಾಗಿ ಬೇರೂರಿರುತ್ತದೆ. ಆದ್ದರಿಂದ ನಾವು ʼಹೀರಾಮಂಡಿʼಗಾಗಿ ನೆಟ್‌ಫ್ಲಿಕ್ಸ್‌ನೊಂದಿಗೆ ಈ ಸಹಯೋಗದ ಬಗ್ಗೆ ಯೋಚಿಸಿದಾಗ ಅದು ಬಹಳಷ್ಟು ಅರ್ಥಪೂರ್ಣ ಎನಿಸಿತು. ಅಜಿಯೋದ ಹೌಸ್ ಆಫ್ ಎಥ್ನಿಕ್ಸ್ ಈ ಸೀಮಿತ ಆವೃತ್ತಿಯ ಸಂಗ್ರಹಕ್ಕೆ ಪರಿಪೂರ್ಣ ಲಾಂಚ್‌ಪ್ಯಾಡ್ ಆಗಿದೆ. ಗ್ರಾಹಕರು ಆರಾಧಿಸುವ ಫ್ಯಾಷನ್‌ ಕೈಗೆಟುಕುವಂತೆ ಮಾಡುತ್ತದೆ. ನಿಮ್ಮ ಕನಸಿನ ಬಾಲಿವುಡ್-ಪ್ರೇರಿತ ಲುಕ್ ಪಡೆಯುವುದಕ್ಕೆ ಇದು ಸಹಾಯ ಮಾಡುತ್ತದೆʼʼ ಎಂದು ಹೇಳಿದ್ದಾರೆ.

ʼಹೀರಾಮಂಡಿ: ಡೈಮಂಡ್ ಬಜಾರ್ʼ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚೊಚ್ಚಲ ವೆಬ್ ಸೀರಿಸ್‌. ಇದು 2024ರಲ್ಲಿ ಬಹು ನಿರೀಕ್ಷಿತ ಸರಣಿಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯಪೂರ್ವ ಭಾರತಲ್ಲಿ ನಡೆಯುವ ಘಟನೆ ಇದಾಗಿದೆ. ಅಂತಿಮ ಎಳೆಯನ್ನು ತವೈಫ್‌ಗಳ ಕಲೆಯನ್ನು ಹಿಡಿದಿಟ್ಟುಕೊಳ್ಳುವ (ಮುಜ್ರಾ) ಪರೀಕ್ಷೆಗೆ ಒಳಪಡಿಸಲಾಗಿದೆ.

ನೆಟ್‌ಫ್ಲಿಕ್ಸ್‌ನ ಏಪ್ಯಾಕ್ ಮಾರ್ಕೆಟಿಂಗ್ ಪಾಲುದಾರಿಕೆಯ ಹಿರಿಯ ನಿರ್ದೇಶಕಿ ಶಿಲ್ಪಾ ಸಿಂಗ್ ಮಾತನಾಡಿ, “ಸಂಜಯ್ ಲೀಲಾ ಬನ್ಸಾಲಿ ಅವರ ಕಥೆಗಳಲ್ಲಿನ ವೇಷಭೂಷಣಗಳು ಮುಖ್ಯ ಪಾತ್ರ ವಹಿಸುತ್ತವೆ. ಕಥಾಹಂದರಕ್ಕೆ ಇನ್ನಷ್ಟು ಗಟ್ಟಿತನವನ್ನು ಸೇರಿಸುತ್ತವೆ. ʼಹೀರಾಮಂಡಿ: ಡೈಮಂಡ್ ಬಜಾರ್ʼ ಹಿಂದೆಂದೂ ನೋಡಿರದ ಕೆಲವು ಸಾಂಪ್ರದಾಯಿಕ ಶೈಲಿಗಳು ಮತ್ತು ಫ್ಯಾಷನ್‌ಗಳನ್ನು ಹೊಂದಿರುತ್ತದೆ. ʼಹೀರಾಮಂಡಿʼಯಿಂದ ಪ್ರೇರಿತವಾದ ಅಜಿಯೋ ಹೌಸ್ ಆಫ್ ಎಥ್ನಿಕ್ಸ್‌ನಿಂದ ಹೊಸ ಮತ್ತು ವಿಶೇಷ ಸಂಗ್ರಹವನ್ನು ಈ ಸಹಯೋಗವು ತರುತ್ತದೆʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Mens Neck Chains Fashion: ಹುಡುಗರ ಕ್ರೇಜಿ ಫ್ಯಾಷನ್‌ಗೆ ಬಂತು ಫಂಕಿ ನೆಕ್‌ ಚೈನ್ಸ್‌

ಅಜಿಯೋ ಹೌಸ್ ಆಫ್ ಎಥ್ನಿಕ್ಸ್ ಬಿಬಾ (BIBA), ಇಂಡಿ ಪಿಕ್ಸ್, ನೈರಿಕಾ (Nyrika), ಆರ್ಕೆ ರಿತು ಕುಮಾರ್, ಸತ್ಯ ಪಾಲ್, ರಿ-ವಾಹ್, ಗ್ಲೋಬಲ್ ದೇಸಿ, ಗುಲ್ಮೊಹರ್ ಜೈಪುರ್, ಸೋಚ್ ಮತ್ತು ಫ್ಯಾಬಿಂಡಿಯಾದಂತಹ ಉನ್ನತ ಸಾಂಪ್ರದಾಯಿಕ ದಿರಿಸುಗಳ ಬ್ರಾಂಡ್‌ಗಳನ್ನು ಹೊಂದಿರುವ ಕ್ಯುರೇಟೆಡ್ ಸ್ಟೋರ್ ಆಗಿದೆ. 3 ಲಕ್ಷಕ್ಕೂ ಹೆಚ್ಚು ಸ್ಟೈಲ್‌ಗಳೊಂದಿಗೆ ಅಜಿಯೋ ಹೌಸ್ ಆಫ್ ಎಥ್ನಿಕ್ಸ್ ಸಾಂಪ್ರದಾಯಿಕ ದಿರಿಸುಗಳ ಫ್ಯಾಷನ್‌ಗಾಗಿ ಭಾರತದ ಆದ್ಯತೆಯ ತಾಣವಾಗಿದೆ. ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಮೇ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆಗಲಿದೆ.

Continue Reading

ಬಾಲಿವುಡ್

Heeramandi Premiere: ʻಹೀರಾಮಂಡಿʼ ಪ್ರೀಮಿಯರ್‌ನಲ್ಲಿ ಅಪರೂಪವಾಗಿ ಕಂಡ ʻಕಭಿ ಖುಷಿ ಕಭಿ ಗಮ್ʼ ಸಿನಿಮಾ ನಟಿ!

Heeramandi Premiere: ಕಭಿ ಖುಷಿ ಕಭಿ ಗಮ್ʼ ಸಿನಿಮಾ ಮೂಲಕ ಫರೀದಾ ಹೆಚ್ಚು ಜನಪ್ರೀಯತೆ ಪಡೆದವರು. ಬಳಿ ಬಣ್ಣದ ಉಡುಗೆಯಲ್ಲಿ ನಟಿ ಫರೀದಾ ಕ್ಯೂಟ್‌ ಆಗಿ ಕಾಣುತ್ತಿದ್ದರು. ಪಾಪರಾಜಿಗಳಿಗೆ ಮುದ್ದಾಗಿ ಪೋಸ್‌ ಕೊಟ್ಟರು. ಈ ವಿಡಿಯೊ ಹಾಗೂ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ನಟಿಯನ್ನು ಕಂಡು ಫ್ಯಾನ್ಸ್‌ ಸಂತಸ ಹೊರಹಾಕಿದ್ದಾರೆ.

VISTARANEWS.COM


on

Heeramandi Premiere Farida Jalal rare public appearance
Koo

ಬೆಂಗಳೂರು:  ʼದೇವ್‌ದಾಸ್‌ʼ ‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ಯಂತಹ ಹಿಟ್‌ ಸಿನಿಮಾಗಳನ್ನು ನೀಡಿದವರು ಸಂಜಯ್ ಲೀಲಾ ಬನ್ಸಾಲಿ. ಇದೀಗ ಸಂಜಯ್‌ ಲೀನಾ ಬನ್ಸಾಲಿ ಅವರು ʻಹೀರಾಮಂಡಿ: ದಿ ಡೈಮಂಡ್ ಬಜಾರ್‌ʼ ಸಿರೀಸ್‌ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಏ.24ರ ಬುಧವಾರದಂದು ʻಹೀರಾಮಂಡಿ: ದಿ ಡೈಮಂಡ್ ಬಜಾರ್‌ʼ (Heeramandi: The Diamond Bazaar) ಸಿರೀಸ್‌ ಪ್ರೀಮಿಯರ್‌ ಶೋ (Heeramandi Premiere) ಇತ್ತು. ಕಾರ್ಯಕ್ರಮವೊಂದರಲ್ಲಿ ಹಿರಿಯ ನಟಿ ಫರೀದಾ ಜಲಾಲ್ (Farida Jalal) ಬಹಳ ಸಮಯದ ನಂತರ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಈ ಸಿರೀಸ್‌ನಲ್ಲಿ ಫರೀದಾ ಕೂಡ ನಟಿಸಿದ್ದಾರೆ.

ʻಕಭಿ ಖುಷಿ ಕಭಿ ಗಮ್ʼ ಸಿನಿಮಾ ಮೂಲಕ ಫರೀದಾ ಹೆಚ್ಚು ಜನಪ್ರೀಯತೆ ಪಡೆದವರು. ಬಳಿ ಬಣ್ಣದ ಉಡುಗೆಯಲ್ಲಿ ನಟಿ ಫರೀದಾ ಕ್ಯೂಟ್‌ ಆಗಿ ಕಾಣುತ್ತಿದ್ದರು. ಪಾಪರಾಜಿಗಳಿಗೆ ಮುದ್ದಾಗಿ ಪೋಸ್‌ ಕೊಟ್ಟರು. ಈ ವಿಡಿಯೊ ಹಾಗೂ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ನಟಿಯನ್ನು ಕಂಡು ಫ್ಯಾನ್ಸ್‌ ಸಂತಸ ಹೊರಹಾಕಿದ್ದಾರೆ. ಅಭಿಮಾನಿಯೊಬ್ಬರು ʻʻಫರೀದಾ ಅವರ ನಟನೆ ಮರೆಯುವಂತಿಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಇಂದಿಗೂ ನಟಿ ಸುಂದರವಾಗಿ ಕಾಣುತ್ತಿದ್ದಾರೆʼʼಎಂದು ಕಮೆಂಟ್‌ ಮಾಡಿದ್ದಾರೆ. ಹೀರಾಮಂಡಿ ಚಿತ್ರದಲ್ಲಿನ ಫರೀದಾ ಪಾತ್ರವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಫರೀದಾ ಇತ್ತೀಚೆಗೆ ಅಕ್ಷಯ್ ಕುಮಾರ್ ಅವರ ʻವೆಲ್ಕಮ್ ಟು ದಿ ಜಂಗಲ್‌ʼಗೆ ಸಿನಿಮಾಗೆ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Heeramandi Trailer: ʻಹೀರಾಮಂಡಿʼ ಟ್ರೈಲರ್‌ ಕಂಡು ರಶ್ಮಿಕಾ, ಆಲಿಯಾ, ವಿಕ್ಕಿ ಕೌಶಲ್‌ ಫಿದಾ!

ಸಂಜಯ್ ಲೀಲಾ ಬನ್ಸಾಲಿಯವರ ( Sanjay Leela Bhansali) ಹದಿನಾಲ್ಕು ವರ್ಷಗಳ ಕನಸಿನ ಕೂಸಾಗಿರುವ ನೆಟ್‌ಫ್ಲಿಕ್ಸ್ ಸೀರೀಸ್ ʻಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಚಿತ್ರದ (Hiramandi: The Diamond Bazaar) ಬಹು ನಿರೀಕ್ಷಿತ ಟ್ರೈಲರ್‌ ಏಪ್ರಿಲ್‌ 10ರಂದು ಬಿಡುಗಡೆಯಾಗಿತ್ತು. ಅನೇಕ ನಟಿಯರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ನೆಟ್​ಫ್ಲಿಕ್ಸ್​ ಮೂಲಕ ಮೇ 1ರಂದು ಈ ವೆಬ್​ ಸಿರೀಸ್​ ವೀಕ್ಷಣೆಗೆ ಲಭ್ಯವಾಗಲಿದೆ.

ಹೀರಾಮಂಡಿ: ದಿ ಡೈಮಂಡ್ ಬಜಾರ್’ನ ಮೊದಲ ಹಾಡು ‘ಸಕಲ್ ಬನ್’ (Sakal Ban) ಮಿಸ್ ವರ್ಲ್ಡ್ 2024 ರ ಫಿನಾಲೆಯಲ್ಲಿ ಲಾಂಚ್‌ ಆಗಿತ್ತು. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಸೇರಿದಂತೆ ಅನೇಕರು ಈ ಹಾಡಿಗೆ ರ್‍ಯಾಂಪ್‌ ವಾಕ್‌ ಮಾಡಿದ್ದರು.

ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳೆಂದರೆ ಅಲ್ಲೊಂದು ಅದ್ಭುತ ಮಾಯಾಲೋಕವನ್ನೇ ನಾವು ನಿರೀಕ್ಷಿಸಬಹುದು. “ಹೀರಾಮಂಡಿ” ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ವೇಶ್ಯೆಯರ ಜೀವನದಲ್ಲಿ ಪ್ರೀತಿ ಮತ್ತು ದ್ರೋಹದ ವಿಷಯಗಳನ್ನು ಅನ್ವೇಷಿಸುತ್ತದೆ. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್​ ಹೈದರಿ, ರಿಚಾ ಚಡ್ಡಾ, ಶರ್ಮಿನ್​ ಸೇಗಲ್​, ಸಂಜೀದಾ ಶೇಖ್​ ಮುಂತಾದವರು ‘ಹೀರಾಮಂಡಿ’ ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ.

Continue Reading
Advertisement
drinking ors
ಆರೋಗ್ಯ2 mins ago

ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

Dina bhavishya
ಭವಿಷ್ಯ1 hour ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Lok sabha Election
ಪ್ರಮುಖ ಸುದ್ದಿ6 hours ago

ವಿಸ್ತಾರ ಸಂಪಾದಕೀಯ: ಈ ದಿನ ನಮ್ಮದು, ನಮ್ಮ ಅಧಿಕಾರ ಚಲಾಯಿಸೋಣ

food
ಕರ್ನಾಟಕ6 hours ago

Food Poisoning : ಮದುವೆ ಮನೆ ಊಟ ತಿಂದ ನೂರಾರು ಮಂದಿ ಅಸ್ವಸ್ಥ; ಆಸ್ಪತ್ರೆಯಲ್ಲಿ ಹಾಹಾಕಾರ

PM Narendra Modi will visit Sirsi on April 28
ಉತ್ತರ ಕನ್ನಡ6 hours ago

Lok Sabha Election 2024: ಶಿರಸಿಯಲ್ಲಿ ಏಪ್ರಿಲ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಸಮಾವೇಶ

Bus Driver attacked
ಕರ್ನಾಟಕ6 hours ago

Bus driver Attacked : ಮುಸ್ಲಿಮ್ ಯುವಕರಿಂದ ಬಸ್​ ಚಾಲಕನ ಮೇಲೆ ಹಲ್ಲೆ, ನೌಕರರಿಂದ ​ ಠಾಣೆ ಮುಂಭಾಗ ಧರಣಿ

IPL 2024
ಪ್ರಮುಖ ಸುದ್ದಿ7 hours ago

IPL 2024 : ಆರ್​​ಸಿಬಿಗೆ ಸಿಕ್ಕಿತು ಕೊನೆಗೂ ಒಂದು ವಿಜಯ; ಎಸ್​ಆರ್​ಎಚ್​ ವಿರುದ್ಧ 35 ರನ್ ಗೆಲುವು

Viral News
ವೈರಲ್ ನ್ಯೂಸ್7 hours ago

Viral News: ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿದ ಬುದ್ಧಿವಂತ ಮಂಗ; ವಿಡಿಯೊ ನೀವೂ ನೋಡಿ

lok sabha Election
ಪ್ರಮುಖ ಸುದ್ದಿ7 hours ago

lok sabha election : ಒಂದು ವರ್ಷದ ಕೂಸಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಬಂದ ಪೊಲೀಸ್​​!

Car Accident
ಪ್ರಮುಖ ಸುದ್ದಿ7 hours ago

Car Accident : ಟೈರ್​ ಬ್ಲಾಸ್ಟ್​ ಆಗಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕಾರು; ಇಬ್ಬರ ದುರ್ಮರಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ1 hour ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ14 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ14 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ17 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 202419 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು4 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ4 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು4 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

ಟ್ರೆಂಡಿಂಗ್‌