Tanisha Kuppanda: ನನ್ನ ತಾಯಿ ನನಗೆ ಮಗು ಎಂದು ಅಮ್ಮನ ಬರ್ತ್‌ಡೇ ಆಚರಿಸಿದ ತನಿಷಾ ಕುಪ್ಪಂಡ! - Vistara News

ಬಾಲಿವುಡ್

Tanisha Kuppanda: ನನ್ನ ತಾಯಿ ನನಗೆ ಮಗು ಎಂದು ಅಮ್ಮನ ಬರ್ತ್‌ಡೇ ಆಚರಿಸಿದ ತನಿಷಾ ಕುಪ್ಪಂಡ!

Tanisha Kuppanda: ‘ನನ್ನಮ್ಮ ಸೂಪರ್ ಸ್ಟಾರ್-3’ರಲ್ಲಿ (Nanamma Super Star 3) ತನಿಷಾ ಭಾಗಿಯಾಗಿದ್ದರು. ಇದೀಗ ಅಮ್ಮನ ಬರ್ತಡೇ ದಿನವನ್ನು ಆಚರಿಸಿ, ʻನನ್ನ ತಾಯಿ ಮಾತ್ರವಲ್ಲ ಅವಳು ನನ್ನ ಮಗುʼಎಂದು ಇನ್‌ಸ್ಟಾದಲ್ಲಿ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

VISTARANEWS.COM


on

Tanisha Kuppanda mother birthday
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʻಬಿಗ್ ಬಾಸ್’ ಬೆಡಗಿ ತನಿಷಾ ಕುಪ್ಪಂಡ (Tanisha Kuppanda) ದೊಡ್ಮನೆ ಆಟ ಮುಗಿದ ಮೇಲೆ ನಟನೆ, ಉದ್ಯಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ನನ್ನಮ್ಮ ಸೂಪರ್ ಸ್ಟಾರ್-3’ರಲ್ಲಿ (Nanamma Super Star 3) ತನಿಷಾ ಭಾಗಿಯಾಗಿದ್ದರು. ಇದೀಗ ಅಮ್ಮನ ಬರ್ತಡೇ ದಿನವನ್ನು ಆಚರಿಸಿ, ʻನನ್ನ ತಾಯಿ ಮಾತ್ರವಲ್ಲ ಅವಳು ನನ್ನ ಮಗುʼಎಂದು ಇನ್‌ಸ್ಟಾದಲ್ಲಿ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ತನಿಷಾ ಅಮ್ಮನ ಫೋಟೊ ಶೇರ್‌ ಮಾಡಿಕೊಂಡು ʻʻನನ್ನ ಸ್ಟ್ರಾಂಗ್‌ ಲೇಡಿ ಲೀಲಾ ಕುಪ್ಪಂಡ. ಅವಳು ನನ್ನ ತಾಯಿ ಮಾತ್ರವಲ್ಲ ಅವಳು ನನ್ನ ಮಗು. ನನ್ನ ಮಗುನ ನಾನು ಚೆನ್ನಾಗ ನೋಡ್ಕೋತೀನೋ ಇಲ್ವೋ ಗೊತ್ತಿಲ್ಲಆದರೆ ನಾನು ನನ್ನ ಲೀಲುವನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದೇನೆ. ನನ್ನ ಮಗುವಿಗೆ ಜನ್ಮದಿನದ ಶುಭಾಶಯಗಳು. ಐ ಲವ್‌ ಯು ಅಮ್ಮ. ಕುಶಿ ಕುಶಿ ಆಗಿರು ನನ್ನಮ್ಮ. ಲವ್ ಯು ಲೀಲಾವತಿʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: WPL 2024: ಪ್ಲೇ ಆಫ್ ಪ್ರವೇಶಿಸಿದ ಹಾಲಿ ಚಾಂಪಿಯನ್​ ಮುಂಬೈ; ನೂತನ ಅಂಕಪಟ್ಟಿ ಹೇಗಿದೆ?

ಇತ್ತೀಚೆಗೆ ತನಿಷಾ ಮತ್ತು ಕಾರ್ತಿಕ್ (Karthik Mahesh) ಸಿನಿಮಾ ಮಾಡುವ ಕುರಿತಂತೆ ಮಾತನಾಡಿದ್ದರು. ಈ ಕುರಿತು ಸ್ವತಃ ತನಿಷಾ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ನಮ್ಮದೇ ಬ್ಯಾನರ್‌ನಲ್ಲಿ ಪುಟ್ಟ ಪ್ರಾಜೆಕ್ಟ್‌ವೊಂದನ್ನು ಮಾಡಲು ಹೊರಟ್ಟಿದ್ದೇನೆ. ಕಾರ್ತಿಕ್ ಅವರ ಕಾಲ್‌ಶೀಟ್ ಕೇಳಿದ್ದೇವೆ ಎಂದಿದ್ದರು.

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತನಾಗಿದ್ದ ನಟಿ ತನಿಷಾ ಕುಪ್ಪಂಡ ಪೆಂಟಂಗನ್‌ ಸಿನಿಮಾದಲ್ಲಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಈ ಸಿನಿಮಾದ ಕಾಮನ ಬಿಲ್ಲು ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು ತನಿಷಾ. ಇದು ನಟಿಯ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.

ಸಂದರ್ಶನ ವೇಳೆ ನೀವು ನ್ಯೂಡ್ ಫಿಲ್ಮ್‌ ಮಾಡುತ್ತೀರಾ ಎಂಬ ಪ್ರಶ್ನೆಗೆ ನಟಿ ಮುಜುಗರದ ಸನ್ನಿವೇಶಕ್ಕೆ ಒಳಗಾಗಿದ್ದರು. ನಿಷಾ ಮಾತನಾಡಿ ʻʻಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿರುವ ಮಾತ್ರಕ್ಕೆ ಆ ಪ್ರಶ್ನೆ ಕೇಳಿದ್ದು ಸರಿ ಅಲ್ಲ. ಸುಶಾನ್ ಎಂಬ ವ್ಯಕ್ತಿ ನನಗೆ ಇಂಟರ್ವ್ಯೂ ಕೇಳಿದ್ದ. ಅವರು ಪ್ರಶ್ನೆ ಕೇಳುವ ರೀತಿ, ಮಾತನಾಡುವ ರೀತಿ ಇಷ್ಟ ಆಗಿರಲಿಲ್ಲ. ಹಲವು ಧಾರಾವಾಹಿಗಳು ಮಾಡಿ ಸಿನಿಮಾದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಈ ರೀತಿ ಅನುಭವ ಮೊದಲ ಬಾರಿಗೆ ನನಗೆ ಆಗಿದೆ. ಕಷ್ಟ ಪಟ್ಟು ಕೆಲಸ ಮಾಡುವವರಿಗೆ ಈ ರೀತಿ ಪ್ರಶ್ನೆಗಳು ಯಾಕೆ..? ಬ್ಯಾಕ್ ಲೆಸ್ ಬೋಲ್ಡ್ ಸೀನ್ ಮಾಡುವ ಮುನ್ನ ಏನು ತಯಾರಿ ಮಾಡ್ಕೋತ್ತೀರಾ ಎಂದು ಒಬ್ಬರು ಕೇಳಿದದು ಅದಕ್ಕೂ ಉತ್ತರ ಕೊಟ್ಟಿದೆ. ಪ್ರಶ್ನೆ ಕೇಳುವ ಹಾವ ಭಾವ ಸರಿ ಇರಬೇಕು. ಈತನ ಉದ್ದೇಶ ಟ್ರೆಂಡಿಂಗ್‌ನಲ್ಲಿ ಇರುವುದು. ಪಬ್ಲಿಸಿಟಿ ಗಿಮಿಕ್ ಅಲ್ಲಾ ಇದು. ನಮ್ಮ ತಾಯಿ ತುಂಬಾ ಸೆನ್ಸಿಟಿವ್. ಕಳೆದ ಬಾರಿ 4 ದಿನಗಳ ಕಾಲ ಕೋಮಾದಲ್ಲಿ ಇದ್ದರು ನಮ್ಮ ತಾಯಿ. ಈ ವಿಷಯ ಕೇಳಿ ಅವರು ಬೇಜಾರಾಗಿದ್ದಾರೆ. ದುಡ್ಡು ಮಾಡುವ ಅಗತ್ಯ ನನಗಿಲ್ಲʼʼ ಎಂದು ಭಾವುಕರಾಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Hum Do Humare Barah: ʼಹಮ್ ದೋ, ಹಮಾರೇ ಬಾರಹ್ʼ ಚಿತ್ರ ಬಿಡುಗಡೆಗೆ ಮುಸ್ಲಿಮರ ವಿರೋಧ: “ಪೆನ್‌ಡ್ರೈವ್‌ ಕೇಸ್‌ ಮೇಲೆ ಮಾಡಿ” ಎಂದು ಗರಂ!

Hum Do Humare Barah:ʼಹಮ್‌ ದೋ, ಹಮಾರೇ ಬಾರಹ್ʼ (hum do humare barah) ಚಿತ್ರ ನಿಗದಿಯಂತೆ ಜೂನ್ 7ರಂದು ಬಿಡುಗಡೆಯಾಗಬೇಕಿದೆ. ಆದರೆ ಬಾಲಿವುಡ್ ಹಿರಿಯ ನಟ ಅನ್ನು ಕಪೂರ್ ಅಭಿನಯದ ಈ ಚಿತ್ರದ ಸುತ್ತ ಈಗಲೇ ವಿವಾದದ ಕಾರ್ಮೋಡ ಕವಿದಿದೆ.

VISTARANEWS.COM


on

hum do humare barah
Koo

ವಿಜಯನಗರ: ಮುಸ್ಲಿಂ ಸಮುದಾಯವನ್ನು (muslim community) ಕೇಂದ್ರೀಕರಿಸಿದ ಚಿತ್ರಕತೆ (Screen play) ಹೊಂದಿರುವ ʼಹಮ್‌ ದೋ, ಹಮಾರೇ ಬಾರಹ್ʼ (Hum Do Humare Barah) ಚಿತ್ರ ಬಿಡುಗಡೆಗೆ ಆಕ್ಷೇಪಣೆ ವ್ಯಕ್ತವಾಗಿದೆ. ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಸಂಘಟನೆ ಮತ್ತು ಮುಸ್ಲಿಂ ಸಮಾಜದಿಂದ ವಿರೋಧ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಇದರ ಬಿಡುಗಡೆ ತಡೆಯುವಂತೆ ವಿಜಯನಗರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಯಾವುದೀ ಸಿನಿಮಾ?

ʼಹಮ್‌ ದೋ, ಹಮಾರೇ ಬಾರಹ್ʼ (hum do humare barah) ಚಿತ್ರ ನಿಗದಿಯಂತೆ ಜೂನ್ 7ರಂದು ಬಿಡುಗಡೆಯಾಗಬೇಕಿದೆ. ಆದರೆ ಬಾಲಿವುಡ್ ಹಿರಿಯ ನಟ ಅನ್ನು ಕಪೂರ್ ಅಭಿನಯದ ಈ ಚಿತ್ರದ ಸುತ್ತ ಈಗಲೇ ವಿವಾದದ ಕಾರ್ಮೋಡ ಕವಿದಿದೆ. ಒಂದೆಡೆ, ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಕೊಲೆ ಮತ್ತು ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಕೂಡ ಇದರ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆ ಎನ್‌ಸಿಪಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ನಟ ಅನ್ನು ಕಪೂರ್ ಮಹಾರಾಷ್ಟ್ರ ಪೊಲೀಸ್ ಮತ್ತು ಗೃಹ ಸಚಿವಾಲಯದಿಂದ ಭದ್ರತೆಯನ್ನು ಕೋರಿದ್ದಾರೆ.

ಕಮಲ್ ಚಂದ್ರ ನಿರ್ದೇಶನದ ಈ ಚಿತ್ರದಲ್ಲಿ ಅನ್ನು ಕಪೂರ್ ಹೊರತಾಗಿ ಪಾರ್ಥ್ ಸಮಾನ್, ಅಶ್ವಿನಿ ಕಲ್ಸೇಕರ್ ಮತ್ತು ಪರಿತೋಷ್ ತಿವಾರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇತ್ತೀಚೆಗೆ ಈ ಚಿತ್ರವು ಕಾನ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಅಲ್ಲಿ ಅದು ಪ್ರಶಂಸಿಸಲ್ಪಟ್ಟಿದೆ. ಈ ಚಿತ್ರದ ಟೀಸರ್ ನೋಡಿದ ಮೇಲೆ ನಮಗೆ, ನಮ್ಮ ಕಲಾವಿದರಿಗೆ ಹಾಗೂ ನಿರ್ದೇಶಕರಿಗೆ ಜೀವ ಬೆದರಿಕೆ ಬರುತ್ತಿದೆ ಎಂದು ಅನ್ನು ಕಪೂರ್ ಹೇಳಿದ್ದಾರೆ. “ಐಸಿಸ್‌ ಮಾದರಿಯಲ್ಲಿ ಶಿರಚ್ಛೇದ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ನಮ್ಮ ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಕಲಾವಿದರಿಗೆ ರಕ್ಷಣೆ ನೀಡುವಂತೆ ನಾನು ಮಹಾರಾಷ್ಟ್ರ ಪೊಲೀಸರು, ಗೃಹ ಸಚಿವರು ಮತ್ತು ಗೃಹ ಸಚಿವಾಲಯವನ್ನು ಕೋರುತ್ತೇನೆ” ಎಂದಿದ್ದಾರೆ.

“ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಫೋನ್ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ನನ್ನ ಚಿತ್ರತಂಡಕ್ಕೆ ಹೇಳುತ್ತೇನೆ. ಸಿನಿಮಾ ನೋಡದೆ ಅದರ ಬಗ್ಗೆ ಯಾವುದೇ ಅಭಿಪ್ರಾಯ ಮೂಡಿಸಿಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ನಮ್ಮ ಸಿನಿಮಾ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತದೆ. ಇದು ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುತ್ತದೆ. ಯಾವುದೇ ಧರ್ಮವನ್ನು ಅವಮಾನಿಸುವುದು ಅಥವಾ ಮಾನಹಾನಿ ಮಾಡುವುದು ನಮ್ಮ ಉದ್ದೇಶವಲ್ಲ” ​​ಎಂದು ಅನ್ನು ಕಪೂರ್‌ ಹೇಳಿದ್ದಾರೆ.

ಕರ್ನಾಟಕದಲ್ಲೂ ಆಕ್ಷೇಪ

ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಸಂಘಟನೆ, “ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಶಾಂತಿ ಸೌಹಾರ್ದತೆ ಕದಡುವ ಕೆಲಸ ಈ ಸಿನಿಮಾದಿಂದ ಮಾಡಲಾಗುತ್ತಿದೆ. ಚಿತ್ರೀಕರಣ ಮಾಡಬೇಕು ಅಂದ್ರೆ ಪ್ರಜ್ವಲ್ ರೇವಣ್ಣರವರ ಪೆನ್ ಡ್ರೈವ್ ವಿಷಯ ಮೇಲೆ ಚಿತ್ರ ಮಾಡಲಿ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚಿತ್ರ ಮಾಡಲಿ. ಸಾಮಾನ್ಯ ಜನರು ಪಡುತ್ತಿರುವ ಕಷ್ಟಗಳನ್ನು ಅರ್ಥ ಮಾಡಿಕೊಂಡು ಚಿತ್ರೀಕರಣ ಮಾಡಲಿ. ಧರ್ಮವನ್ನು ಮುಂದಿಟ್ಟು ಚಿತ್ರೀಕರಣ ಮಾಡೋದು ಎಷ್ಟರ ಮಟ್ಟಿಗೆ ಸರಿ? ರಾಜ್ಯ ಸರ್ಕಾರ ಚಿತ್ರ ಬಿಡುಗಡೆಗೆ ತಡೆ ಹಾಕಬೇಕು” ಎಂದು ಒತ್ತಾಯಿಸಿದೆ.‌

ಇದನ್ನೂ ಓದಿ: Pralhad Joshi: ಕನ್ನಡಿಗರ ತೆರಿಗೆಯಲ್ಲಿ ಕೇರಳಿಗರನ್ನು ಸಾಕುತ್ತಿದ್ದಾರೆ ಸಿದ್ದರಾಮಯ್ಯ: ಜೋಶಿ ಆರೋಪ

Continue Reading

ಬಾಲಿವುಡ್

Saiyami Kher: ಜರ್ಮನಿಯ ಫೇಮಸ್‌ ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ ಭಾಗವಹಿಸಲಿದ್ದಾರೆ ಖ್ಯಾತ ನಟಿ!

Saiyami Kher: ಐರನ್‌ಮ್ಯಾನ್ ಟ್ರಯಥ್ಲಾನ್ ಬರ್ಲಿನ್‌ಗೆ ಸಮೀಪವಿರುವ ಪಟ್ಟಣವಾದ ಎರ್ಕ್ನರ್‌ನಲ್ಲಿ ನಡೆಯಲಿದೆ. ಭಾಗವಹಿಸುವವರು ಈಜು, ಸೈಕ್ಲಿಂಗ್ ಮತ್ತು ಓಟ ಸೇರಿದಂತೆ ಈವೆಂಟ್‌ಗಳಲ್ಲಿ ಸ್ಪರ್ಧಿಸುತ್ತಾರೆ. ಸಯ್ಯಾಮಿ ಖೇರ್ ಹೊರತುಪಡಿಸಿ, ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿದ ಏಕೈಕ ಬಾಲಿವುಡ್ ಸೆಲೆಬ್ರಿಟಿ ಮಿಲಿಂದ್ ಸೋಮನ್.

VISTARANEWS.COM


on

Saiyami Kher to participate in Ironman Triathlon in Germany
Koo

ಬೆಂಗಳೂರು: ನಟಿ ಸಯ್ಯಾಮಿ ಖೇರ್ (Saiyami Kher ) ಸೆಪ್ಟೆಂಬರ್ 15ರಂದು ಜರ್ಮನಿಯಲ್ಲಿ ನಡೆಯಲಿರುವ ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ನಟಿ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ನಟಿ ಈಜು, ಸೈಕ್ಲಿಂಗ್ ಮತ್ತು ಜಿಮ್‌ನಲ್ಲಿ ತರಬೇತಿ ಪಡೆಯುವ ವಿಡಿಯೊ ಇದರಲ್ಲಿದೆ.

ನಟಿ ಪೋಸ್ಟ್‌ನಲ್ಲಿ ʻʻಕೊರೊನಾ ಆದ ಬಳಿಕ ಸಮಯ ಹೇಗೆ ಸಾಗಿತು ಗೊತ್ತಾಗಿಲ್ಲ. ಶೂಟಿಂಗ್‌ ಸೆಟ್‌ನಲ್ಲಿ ಪ್ರತಿದಿನ ಆನಂದಿಸುತ್ತಿದ್ದೆ. ಜೀವನ ರೋಲರ್ ಕೋಸ್ಟರ್ ಆಗಿತ್ತು. ಕಳೆದ ವರ್ಷ ಬೈಕ್ ಅಪಘಾತ ಕೂಡ ಆಯ್ತು. ಎಂಟು ತಿಂಗಳ ಕಾಲ ವ್ಯಾಯಾಮ ಏನೂ ಇಲ್ಲದೆ ಹಾಗೇ ಇದ್ದೆ. ಇದಾದ ಬಳಿಕ , ಟ್ರಯಥ್ಲಾನ್ ಈವೆಂಟ್‌ಗೆ ತರಬೇತಿ ಪಡೆಯುವುದು ಅತ್ಯಂತ ಕಠಿಣವಾಗಿತ್ತು. ಟ್ರಯಥ್ಲಾನ್ ಈವೆಂಟ್‌ಗಾಗಿ ಎರಡು ತಿಂಗಳ ತರಬೇತಿಯನ್ನು ಪಡೆದ ನಂತ ಇಂದು ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ ಭಾಗಿಯಾಗಲು ಸಿದ್ಧನಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.

ಐರನ್‌ಮ್ಯಾನ್ ಟ್ರಯಥ್ಲಾನ್ ಬರ್ಲಿನ್‌ಗೆ ಸಮೀಪವಿರುವ ಪಟ್ಟಣವಾದ ಎರ್ಕ್ನರ್‌ನಲ್ಲಿ ನಡೆಯಲಿದೆ. ಭಾಗವಹಿಸುವವರು ಈಜು, ಸೈಕ್ಲಿಂಗ್ ಮತ್ತು ಓಟ ಸೇರಿದಂತೆ ಈವೆಂಟ್‌ಗಳಲ್ಲಿ ಸ್ಪರ್ಧಿಸುತ್ತಾರೆ. ಸಯ್ಯಾಮಿ ಖೇರ್ ಹೊರತುಪಡಿಸಿ, ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿದ ಏಕೈಕ ಬಾಲಿವುಡ್ ಸೆಲೆಬ್ರಿಟಿ ಮಿಲಿಂದ್ ಸೋಮನ್.

ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

ಸಿನಿಮಾ ವಿಚಾರಕ್ಕೆ ಬಂದರೆ, ಸಯ್ಯಾಮಿ ʻಅಗ್ನಿʼ ಚಿತ್ರದಲ್ಲಿ ಪ್ರತೀಕ್ ಗಾಂಧಿ ಮತ್ತು ದಿವ್ಯೆಂದು ಶರ್ಮಾ ಅವರೊಂದಿಗೆ ನಟಿಸಲಿದ್ದಾರೆ. ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಬೆಂಬಲದೊಂದಿಗೆ ರಾಹುಲ್ ಧೋಲಾಕಿಯಾ ನಿರ್ದೇಶನವಿದೆ.

ಮರಾಠಿಯ ಖ್ಯಾತ ನಟಿ ಉಷಾ ಕಿರಣ್ ಅವರ ಮೊಮ್ಮಗಳು ಮತ್ತು ಪ್ರಮುಖ ಬಾಲಿವುಡ್ ನಟಿ ತನ್ವಿ ಅಜ್ಮಿ ಅವರ ಸೊಸೆ. ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ ಮತ್ತು 2016 ರಲ್ಲಿ ಬಿಡುಗಡೆಯಾದ “ಮಿರ್ಜ್ಯಾ” ಚಿತ್ರದಲ್ಲಿನ ಅಭಿನಯಕ್ಕಾಗಿ ಸೈಯಾಮಿ ಖೇರ್ ಮನ್ನಣೆ ಗಳಿಸಿದರು.

Continue Reading

ಬಾಲಿವುಡ್

Malaika Arora: 38ರ ಅರ್ಜುನ್‌ ಕಪೂರ್‌ಗೆ 50ರ ಮಲೈಕಾ ಅರೋರಾ ಸಹವಾಸ ಸಾಕಾಯ್ತಾ?!

Malaika Arora: ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ. ಅರ್ಜುನ್ ಕಪೂರ್​ಗೆ 38. ಇಬ್ಬರ ಮಧ್ಯೆ ಸುಮಾರು 11 ವರ್ಷಗಳ ಅಂತರ ಇದೆ. ಅರ್ಜುನ್ ಕಪೂರ್ ವಯಸ್ಸಿನಲ್ಲಿ ಸಣ್ಣವರು. ಮಾತ್ರವಲ್ಲ ಕೆಲವು ದಿನಗಳಿಂದ ಮಗು ವಿಚಾರವಾಗಿ ಸಾಕಷ್ಟು ಟ್ರೋಲ್‌ ಆಗಿತ್ತು ಜೋಡಿ. ಮಲೈಕಾ ಹಾಗೂ ಅರ್ಜುನ್ ಕಪೂರ್​ಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ಆದರೆ, ಈ ಬಗ್ಗೆ ಈ ಜೋಡಿ ಮೌನ ವಹಿಸಿದ್ದರು.

VISTARANEWS.COM


on

Malaika Arora respectfully part ways Here what we know
Koo

ಬೆಂಗಳೂರು: ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್(Arjun Kapoor) ಆಗಾಗ ವಕೇಶನ್‌ ಮೂಡ್‌ನಲ್ಲಿರುವ ಫೋಟೊವನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಜತೆಗೆ ಅದೆಷ್ಟೋ ಬಾರಿ ಸಾರ್ವಜನಿಕವಾಗಿ ಕಾಣಿಸಿದ್ದುಂಟು. ಆದರೀಗ ಜೋಡಿ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪರಸ್ಪರರ ಭವಿಷ್ಯದ ಒಳಿತಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಮಲೈಕಾ ಮತ್ತು ಅರ್ಜುನ್ ʼವಿಶೇಷವಾದ ಸಂಬಂಧʼವನ್ನು ಹೊಂದಿದ್ದರು. ಇಬ್ಬರೂ ಪರಸ್ಪರರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ಇದೀಗ ಜೋಡಿ ಬೇರೆಯಾಗಬೇಕು ಎಂದು ನಿರ್ಧರಿಸಿದೆ. ಇಷ್ಟೂ ವರ್ಷಗಳಲ್ಲಿ, ಅವರು ತಮ್ಮ ಸಂಬಂಧಕ್ಕೆ ಗೌರವವನ್ನು ನೀಡಿದ್ದಾರೆ. ಒಂದು ವೇಳೆ ಬೇರೆಯಾಗಲು ನಿರ್ಧರಿಸಿದರೂ ಪರಸ್ಪರ ಅದೇ ಗೌರವವನ್ನು ಕಾಪಾಡಿಕೊಂಡು ಹೋಗುತ್ತಾರೆ ಎಂದು ವರದಿಯಾಗಿದೆ.

ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ. ಅರ್ಜುನ್ ಕಪೂರ್​ಗೆ 38. ಇಬ್ಬರ ಮಧ್ಯೆ ಸುಮಾರು 11 ವರ್ಷಗಳ ಅಂತರ ಇದೆ. ಅರ್ಜುನ್ ಕಪೂರ್ ವಯಸ್ಸಿನಲ್ಲಿ ಸಣ್ಣವರು. ಮಾತ್ರವಲ್ಲ ಕೆಲವು ದಿನಗಳಿಂದ ಮಗು ವಿಚಾರವಾಗಿ ಸಾಕಷ್ಟು ಟ್ರೋಲ್‌ ಆಗಿತ್ತು ಜೋಡಿ. ಮಲೈಕಾ ಹಾಗೂ ಅರ್ಜುನ್ ಕಪೂರ್​ಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ಆದರೆ, ಈ ಬಗ್ಗೆ ಈ ಜೋಡಿ ಮೌನ ವಹಿಸಿದ್ದರು.

ಇತ್ತೀಚಿನ ವರದಿಗಳ ಪ್ರಕಾರ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗಿದೆ. ಅರ್ಜುನ್‌ ಕಪೂರ್ ಕುಟುಂಬದವರನ್ನು ಅನ್​ಫಾಲೋ ಮಾಡಿದ್ದಾರೆ ಮಲೈಕಾ ಅರೋರಾ. ಅಷ್ಟೇ ಅಲ್ಲದೇ ಅರ್ಜುನ್ ಕಪೂರ್ ಈಗ ನಟಿ ಕುಶಾ ಕಪಿಲಾ (Kusha Kapila) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂತಲೂ ವರದಿಗಳಿವೆ.

ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

ಈ ಮೊದಲು ಮಲೈಕಾ ಅವರು ಅರ್ಜುನ್ ಕಪೂರ್ ತಂದೆ ಬೋನಿ ಕಪೂರ್, ಕುಟುಂಬದ ಇತರ ಸದಸ್ಯರಾದ ಅನಿಲ್ ಕಪೂರ್, ಜಾನ್ವಿ ಕಪೂರ್, ಖುಷಿ ಕಪೂರ್ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ, ಇವರುಗಳನ್ನು ಮಲೈಕಾ ಅನ್​ಫಾಲೋ ಮಾಡಿದ್ದಾರೆ. ಆದರೆ, ಅರ್ಜುನ್ ಕಪೂರ್ ಅವರನ್ನು ಈಗಲೂ ಅವರು ಫಾಲೋ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿರುವ ಕರಣ್ ಜೋಹರ್ ಅವರ ಮನೆಯಲ್ಲಿ ಅರ್ಜುನ್ ಮತ್ತು ಕುಶಾ ಒಟ್ಟಿಗೆ ಪಾರ್ಟಿ ಮಾಡಿದ್ದಾಗಿನಿಂದಲೂ ಸಂಬಂಧದ ವದಂತಿಗಳು ಪ್ರಾರಂಭವಾದವು.

ಮಲೈಕಾ ಈ ಹಿಂದೆ ನಟ, ನಿರ್ಮಾಪಕ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು. ಇಬ್ಬರು 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಅವರಿಗೆ ಅರ್ಹಾನ್ ಖಾನ್ ಹೆಸರಿನ ಮಗನಿದ್ದಾನೆ. ಮಲೈಕಾ ಮತ್ತು ಅರ್ಜುನ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, 2019ರಲ್ಲಿ ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ ಅರ್ಜುನ್‌ ಕಪೂರ್‌ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ʼಸಿಂಗಮ್ ಅಗೇನ್ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು ಅಜಯ್‌ ದೇವಗನ್‌ಗೆ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಖಾನ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Continue Reading

ಒಟಿಟಿ

OTT Releases: ಒಟಿಟಿಯಲ್ಲಿ ಈ ವಾರ ತೆರೆ ಕಾಣುತ್ತಿವೆ ಬಹು ನಿರೀಕ್ಷೆಯ ಈ ಐದು ಚಿತ್ರಗಳು

ಪ್ರತೀಕ್ ಗಾಂಧಿ ಅಭಿನಯದ ದೇಧ್ ಭೀಗಾ ಜಮೀನ್ ಸೇರಿದಂತೆ ಐದು ಬಹು ನಿರೀಕ್ಷೆಯ ಚಿತ್ರಗಳು ಈ ವಾರ ಒಟಿಟಿಯಲ್ಲಿದ್ದು (OTT Releases), ಮನೆಮಂದಿ, ಸ್ನೇಹಿತರೊಂದಿಗೆ ನಿಮ್ಮಿಷ್ಟದ ಚಿತ್ರವನ್ನು ನೋಡುತ್ತಾ ಈ ವಾರದ ರಜೆಯನ್ನು ಕಳೆಯಬಹುದು. ಈ ಐದು ಚಿತ್ರಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

OTT Releases
Koo

ನಿಧಾನಕ್ಕಾದರೂ ಸರಿ ಮಳೆ (rain) ಮೆಲ್ಲನೆ ಅಡಿಯಿಡುತ್ತಿದೆ. ಬೇಸಿಗೆಯ (summer) ಬಿಸಿಲಿನಿಂದ ಬೇಸತ್ತು ತಂಪಾದ ವಾತಾವರಣದಲ್ಲಿ ಹೊದಿಕೆ ಹೊದ್ದು ಮಲಗುವುದು ಬೇಸರ ಮೂಡಿಸುತ್ತದೆ. ಇನ್ನು ಮನೆಯಲ್ಲಿ ರಜೆಯನ್ನು ಕಳೆಯುವುದಂತೂ ತುಂಬಾ ಬೋರು ಎಂದೆನಿಸುವುದು ಉಂಟು. ಆದರೆ ಈ ವಾರ ಐದು ಚಿತ್ರಗಳು (movies) ಒಟಿಟಿಯಲ್ಲಿ (OTT) ಬಿಡುಗಡೆಯಾಗುತ್ತಿದ್ದು (OTT Releases), ರಜೆಯನ್ನು ಖುಷಿಯಿಂದ ಕಳೆಯಬಹುದು.

ಚಿತ್ರಮಂದಿರಗಳಿಗೆ ಹೋಗಿ ಸರತಿಯಲ್ಲಿ ನಿಂತು ಟಿಕೆಟ್ ಪಡೆದು ಜನಜಂಗುಳಿಯ ಮಧ್ಯೆ ಚಿತ್ರ ವೀಕ್ಷಿಸಲು ಇಷ್ಟ ಪಡದವರಿಗೆ ಒಟಿಟಿಗಳು, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಹೊಸಹೊಸ ಚಲನಚಿತ್ರಗಳು ಮತ್ತು ಪ್ರದರ್ಶನಗಳು ಕಾಣಿಸುತ್ತಿವೆ. ಆದರೆ ಇತ್ತೀಚಿಗೆ ಪ್ರದರ್ಶನಗಳು ಕಡಿಮೆಯಾಗಿದ್ದರೂ ಈ ವಾರಾಂತ್ಯದಲ್ಲಿ ಭರ್ಜರಿಯಾಗಿ ಚಿತ್ರಗಳು ಸಿನಿ ಪರದೆಯ ಮೇಲೆ ಬಂದಿದೆ.

ದೇಧ್ ಭೀಗಾ ಜಮೀನ್ (Dedh Bhiga Zameen)

ಜಿಯೋ ಸಿನಿಮಾದಲ್ಲಿ (JioCinema) ಮೇ 31ರಿಂದ ಪ್ರದರ್ಶನ ಕಾಣಲಿರುವ ಈ ಚಿತ್ರದಲ್ಲಿ ಪ್ರತೀಕ್ ಗಾಂಧಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಕ್ಯಾಮ್ 1992ನ ಬಳಿಕ ಈ ಚಿತ್ರದಲ್ಲಿ ಪ್ರತೀಕ್ ಅವರ ಪ್ರತಿಭೆ ಮತ್ತಷ್ಟು ಪ್ರೇಕ್ಷಕರ ಮನ ಗೆಲ್ಲಲಿದೆ. ಮಡಗಾಂವ್ ಎಕ್ಸ್‌ಪ್ರೆಸ್‌ನ ಯಶಸ್ಸು ಮತ್ತು ದೋ ಔರ್ ದೋ ಪ್ಯಾರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅನಂತರ ಪ್ರತೀಕ್ ಈಗ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಖುಶಾಲಿ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ಜೊತೆಯಾಗಿರುವ ಪ್ರತೀಕ್ ಸ್ವಂತ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ಮ ಮೀಡಿಯಾ ಆಂಡ್ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್‌ನಡಿಯಲ್ಲಿ ಶೈಲೇಶ್ ಆರ್ ಸಿಂಗ್, ಸುನಿಲ್ ಜೈನ್ ಮತ್ತು ಹಿತೇಶ್ ಠಕ್ಕರ್ ನಿರ್ಮಿಸಿದ ಪುಲ್ಕಿತ್ ಬರೆದು ನಿರ್ದೇಶಿಸಿದ ಈ ಚಿತ್ರವು ಭ್ರಷ್ಟ ವ್ಯವಸ್ಥೆಯ ವಿರುದ್ಧ ಮಧ್ಯಮ ವರ್ಗದ ಸಾಮಾನ್ಯ ಜನರ ಹೋರಾಟದ ಮೇಲೆ ಬೆಳಕು ಚೆಲ್ಲಿದೆ.


ವಿಗಿಲಿ 2 (Vigil 2)

ನೆಟ್‌ಫ್ಲಿಕ್ಸ್ (Netflix) ಮೇ 31ರಂದು ತೆರೆ ಕಾಣುವ ಟಾಮ್ ಎಡ್ಜ್ ಅವರ ಪೊಲೀಸ್ ಕಾರ್ಯಾಚರಣೆಯ ಎರಡನೇ ಸರಣಿ ಇದಾಗಿದೆ. 2021ರಲ್ಲಿ ಮೊದಲ ಸೀಸನ್ ಕೊನೆಗೊಂಡಾಗ ನಿಖರವಾಗಿ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿತ್ತು. ಸುರನ್ನೆ ಜೋನ್ಸ್ ಅವರು ಡಿಟೆಕ್ಟಿವ್ ಚೀಫ್ ಇನ್‌ಸ್ಪೆಕ್ಟರ್ ಆಮಿ ಸಿಲ್ವಾ ಪಾತ್ರದಲ್ಲಿ ಈ ಸರಣಿಯಲ್ಲೂ ಕಾಣಿಸಿಕೊಂಡಿದ್ದಾರೆ. ಖಾಸಗಿ ಸಂಸ್ಥೆಗಳೊಂದಿಗೆ ಸೇರಿ ಯುಕೆ ಸರ್ಕಾರ ನಡೆಸುವ ಪಿತೂರಿಯ ಕಥೆಯನ್ನು ಇದು ಒಳಗೊಂಡಿದೆ.


ಎ ಪಾರ್ಟ್ ಆಫ್ ಯು (A Part of You )

ನೆಟ್‌ಫ್ಲಿಕ್ಸ್ ನಲ್ಲಿ ಮೇ 31ರಿಂದ ತೆರೆ ಕಾಣುವ ಈ ಚಿತ್ರದಲ್ಲಿ ಹದಿಹರೆಯದವರು ತಮ್ಮನ್ನು ಮತ್ತು ತಮ್ಮ ಹೊಸ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಹೆಣಗಾಡುವ ಕಥೆಯನ್ನು ಒಳಗೊಂಡಿದೆ. ಸಿಗ್ಗೆ ಎಕ್ಲುಂಡ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಫೆಲಿಸಿಯಾ ಮ್ಯಾಕ್ಸಿಮ್, ಎಡ್ವಿನ್ ರೈಡಿಂಗ್, ಇಡಾ ಎಂಗ್ವೊಲ್, ಅಲ್ವಾ ಬ್ರಾಟ್ ಮತ್ತು ಜರಾ ಲಾರ್ಸನ್ ಅವರ ಮೊದಲ ಬಾರಿಗೆ ಅಭಿನಯಿಸಿದ್ದಾರೆ.


ರೈಸಿಂಗ್ ವಾಯ್ಸೆಸ್‌ (Raising Voices )

ನೆಟ್‌ಫ್ಲಿಕ್ಸ್ ನಲ್ಲಿ ಮೇ 31ರಂದು ತೆರೆ ಕಾಣಲಿರುವ ಈ ಚಿತ್ರದಲ್ಲಿ 17 ವರ್ಷದ ಬಾಲಕಿ ಪ್ರೌಢಶಾಲೆಯಲ್ಲಿ ಲೈಂಗಿಕ ದೌರ್ಜನ್ಯವನ್ನು ವರದಿ ಮಾಡಿದಾಗ ತನಿಖೆಯಿಂದ ಅವಳ ಜೀವನವನ್ನು ಹೆಚ್ಚು ಚರ್ಚೆಯಾಗುತ್ತಿದೆ. ಅವಳ ಸಂಬಂಧಗಳನ್ನು ಪರೀಕ್ಷಿಸಲಾಗುತ್ತದೆ. ಜೋಸ್ ಮ್ಯಾನುಯೆಲ್ ಲೊರೆಂಜೊ ಮತ್ತು ಮಿಗುಯೆಲ್ ಸಾಯೆಜ್ ಕ್ಯಾರಲ್ ಅವರ ನಿರ್ದೇಶನದ ಈ ಚಿತ್ರದಲ್ಲಿ ನಿಕೋಲ್ ವ್ಯಾಲೇಸ್, ಕ್ಲಾರಾ ಗಲ್ಲೆ, ಐಚಾ ವಿಲ್ಲಾವರ್ಡೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ:Kannada New Movie: ಹಾಡಿನ ಮೂಲಕ ಸದ್ದು ಮಾಡ್ತಿದೆ ʻಬ್ಯಾಕ್ ಬೆಂಚರ್ಸ್ʼ ಸಿನಿಮಾ!

ಎರಿಕ್ (Eric)

ನೆಟ್‌ಫ್ಲಿಕ್ಸ್ ನಲ್ಲಿ ಮೇ 30ರಿಂದ ಪ್ರದರ್ಶನ ಕಾಣುತ್ತಿರುವ ಈ ಚಿತ್ರದಲ್ಲಿ ಎರಿಕ್ ಬೆನೆಡಿಕ್ಟ್ ಕಂಬರ್ಬ್ಯಾಚ್, ಗೇಬಿ ಹಾಫ್ಮನ್ ಮತ್ತು ಮೆಕಿನ್ಲೆ ಬೆಲ್ಚರ್ III ನಟಿಸಿದ್ದಾರೆ. ಅಬಿ ಮೋರ್ಗನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಒಂಬತ್ತು ವರ್ಷದ ಮಗು ಒಂದು ದಿನ ಬೆಳಗ್ಗೆ ಶಾಲೆಗೆ ಹೋಗುವ ದಾರಿಯಲ್ಲಿ ಕಣ್ಮರೆಯಾಗುತ್ತದೆ. ತಂದೆ ತನ್ನ ಮಗನಿಗಾಗಿ ಹುಡುಕುವ ಕಥೆ ಇದರಲ್ಲಿದೆ.

Continue Reading
Advertisement
IND vs BAN
ಕ್ರೀಡೆ19 mins ago

IND vs BAN: ಇಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ; ಕೊಹ್ಲಿ ಆಡುವುದು ಅನುಮಾನ

Exit Poll
Lok Sabha Election 202431 mins ago

Exit Poll: ಇಂದು ಸಂಜೆ 6.30ಕ್ಕೆ ಎಕ್ಸಿಟ್ ಪೋಲ್ ರಿಸಲ್ಟ್; ಮತಗಟ್ಟೆ ಸಮೀಕ್ಷೆ ಹೇಗೆ ನಡೆಸುತ್ತಾರೆ?

Kannada Cinema In OTT bad manners 02 Kannada Movie
ಸ್ಯಾಂಡಲ್ ವುಡ್35 mins ago

Kannada Cinema In OTT: ಒಟಿಟಿಗೆ ಲಗ್ಗೆ ಇಟ್ಟ ʼಬ್ಯಾಡ್‌ ಮ್ಯಾನರ್ಸ್‌ʼ, ‘O2’; ಸ್ಟ್ರೀಮಿಂಗ್ ಎಲ್ಲಿ?

hum do humare barah
ಕರ್ನಾಟಕ38 mins ago

Hum Do Humare Barah: ʼಹಮ್ ದೋ, ಹಮಾರೇ ಬಾರಹ್ʼ ಚಿತ್ರ ಬಿಡುಗಡೆಗೆ ಮುಸ್ಲಿಮರ ವಿರೋಧ: “ಪೆನ್‌ಡ್ರೈವ್‌ ಕೇಸ್‌ ಮೇಲೆ ಮಾಡಿ” ಎಂದು ಗರಂ!

Neeraj Chopra
ಕ್ರೀಡೆ54 mins ago

Neeraj Chopra: 2 ತಿಂಗಳು ವಿದೇಶದಲ್ಲಿ ಕಠಿಣ ತರಬೇತಿ ಪಡೆಯಲಿದ್ದಾರೆ ನೀರಜ್ ಚೋಪ್ರಾ

Neha Gowda is pregnant the actress shared the good news
ಕಿರುತೆರೆ1 hour ago

Neha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೊಂಬೆ-ಚಂದನ್‌ ದಂಪತಿ

Vastu Tips
ಧಾರ್ಮಿಕ1 hour ago

Vastu Tips: ಮನೆಯ ಯಾವ ಕೋಣೆಗೆ ಯಾವ ಬಣ್ಣ ಇದ್ದರೆ ನೆಮ್ಮದಿ ಸಿಗುತ್ತದೆ? ವಾಸ್ತು ಸಲಹೆ ಹೀಗಿದೆ

prajwal revanna case mobile
ಪ್ರಮುಖ ಸುದ್ದಿ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಮೊಬೈಲ್‌ ಮಂಗಮಾಯ! ಏನಂತಾರೆ ಪ್ರಜ್ವಲ್ಲು?

LPG Price Cut
ವಾಣಿಜ್ಯ1 hour ago

LPG Price Cut: ಎಲ್‌ಪಿಜಿ ಗ್ರಾಹಕರಿಗೆ ಗುಡ್‌ನ್ಯೂಸ್‌; ಕಮರ್ಷಿಯಲ್ ಅಡುಗೆ ಅನಿಲ ದರ ಇಳಿಕೆ

Paris Olympics 2024
ಕ್ರೀಡೆ1 hour ago

Paris Olympics 2024: ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆದ ಬಾಕ್ಸರ್ ನಿಶಾಂತ್ ದೇವ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌