Dhruva Sarja: ವಿಮಾನ ದುರಂತ: ಕೂದಲೆಳೆ ಅಂತರದಿಂದ ಪಾರಾದ ಧ್ರುವ ಸರ್ಜಾ! - Vistara News

ಸಿನಿಮಾ

Dhruva Sarja: ವಿಮಾನ ದುರಂತ: ಕೂದಲೆಳೆ ಅಂತರದಿಂದ ಪಾರಾದ ಧ್ರುವ ಸರ್ಜಾ!

Dhruva Sarja: ಧ್ರುವ ಸರ್ಜಾ ಹಾಗೂ ಅವರ ‘ಮಾರ್ಟಿನ್​’ ಸಿನಿಮಾ ತಂಡದವರು ವಿಮಾನ ದುರಂತದಿಂದ ಪಾರಾಗಿದ್ದಾರೆ. ಇದೀಗ ಈ ಬಗ್ಗೆ ವಿಡಿಯೊ ಹಂಚಿಕೊಂಡಿದ್ದಾರೆ ಧ್ರುವ.

VISTARANEWS.COM


on

Dhruva SarjaMartin Movie Team Escaped From Plane Crash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ (Dhruva Sarja) ಅವರು ‘ಮಾರ್ಟಿನ್​’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇರುವುದು ಗೊತ್ತೇ ಇದೆ. ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡದವರ ಜತೆ ಧ್ರುವ ಸರ್ಜಾ ಅವರು ಶ್ರೀನಗರಕ್ಕೆ ತೆರಳಿದ್ದರು. ಅಲ್ಲಿ ಶೂಟಿಂಗ್​ ಮುಗಿಸಿಕೊಂಡು ದೆಹಲಿಗೆ ವಾಪಸ್​ ಬರುವಾಗ ವಿಮಾನದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಧ್ರುವ ಸರ್ಜಾ ಹಾಗೂ ಅವರ ‘ಮಾರ್ಟಿನ್​’ ಸಿನಿಮಾ ತಂಡದವರು ವಿಮಾನ ದುರಂತದಿಂದ ಪಾರಾಗಿದ್ದಾರೆ. ಇದೀಗ ಈ ಬಗ್ಗೆ ವಿಡಿಯೊ ಹಂಚಿಕೊಂಡಿದ್ದಾರೆ ಧ್ರುವ.

ಧ್ರುವ ಸರ್ಜಾ ಅವರು ವಿಡಿಯೊ ಪೋಸ್ಟ್‌ ಮಾಡಿ ʻʻಇವತ್ತು ಕೆಟ್ಟ ಅನುಭವ ಆಗಿದೆ. ಕ್ರ್ಯಾಶ್ ಆಗಬೇಕಿದ್ದ ಫ್ಲೈಟ್​​​ ಕೂದಲೆಳೆ ಅಂತರದಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಆಗಿದೆ. ಪೈಲಟ್‌ಗೆ ಧನ್ಯವಾದ. ಈಗ ನಾವು ಸೇಫ್​ ಆಗಿದ್ದೇವೆ. ಜೈ ಆಂಜನೇಯʼʼಎಂದು ಧ್ರುವ ಸರ್ಜಾ ಹೇಳಿದ್ದಾರೆ.

ʻʻಮೊದಲ ಬಾರಿ ಸಾವನ್ನು ಹತ್ತಿರದಿಂದ ನೋಡಿ ವಾಪಸ್​ ಬಂದಿದ್ದೇನೆ. ನನ್ನ ಪೋಷಕರು, ನನ್ನ ವಿಐಪಿಗಳು ಮತ್ತು ನನ್ನ ಚಿರು ಅವರ ಸಂಪೂರ್ಣ ಆಶೀರ್ವಾದದಿಂದ ಪಾರಾಗಿದ್ದೇನೆ.  ಫ್ಲೈಟ್​ನಲ್ಲಿ ಇದ್ದ ಎಲ್ಲರೂ ಜೀವ ಉಳಿಸಿಕೊಳ್ಳಲು ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು. ನಾವು ಸೇಫ್​ ಆಗಿ ಲ್ಯಾಂಡ್​ ಆದಾಗ ಜನರು ಖುಷಿಯಿಂದ ಕೂಗಾಡಿದರು. ಪ್ರತಿಯೊಬ್ಬ ಪ್ರಯಾಣಿಕರು ತಮ್ಮ ಪ್ರೀತಿಪಾತ್ರರನ್ನು ನೆನೆದು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಚೆನ್ನಾಗಿ ಬದುಕಲು ನಮಗೆ ಈ ಮರುಜನ್ಮ ಒಂದು ಕಾರಣವಾಗಿದೆ’ ಎಂದು ಧ್ರುವ ಸರ್ಜಾ ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Dhruva Sarja: ಆಂಜನೇಯ ಪರಮಭಕ್ತ ಧ್ರುವ ಸರ್ಜಾ ಭೇಟಿಯಾದ ‘ಹನುಮಾನ್’ ಸಿನಿಮಾ ಹೀರೊ!

‘ಮಾರ್ಟಿನ್​’ ಸಿನಿಮಾಗೆ ಎ.ಪಿ. ಅರ್ಜುನ್​ ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್​ ಸರ್ದಾರಿಯಾ ಅವರು ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಅವರು ಕೂಡ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು.ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Heeramandi Premiere: ʻಹೀರಾಮಂಡಿʼ ಪ್ರೀಮಿಯರ್‌ನಲ್ಲಿ ಅಪರೂಪವಾಗಿ ಕಂಡ ʻಕಭಿ ಖುಷಿ ಕಭಿ ಗಮ್ʼ ಸಿನಿಮಾ ನಟಿ!

Heeramandi Premiere: ಕಭಿ ಖುಷಿ ಕಭಿ ಗಮ್ʼ ಸಿನಿಮಾ ಮೂಲಕ ಫರೀದಾ ಹೆಚ್ಚು ಜನಪ್ರೀಯತೆ ಪಡೆದವರು. ಬಳಿ ಬಣ್ಣದ ಉಡುಗೆಯಲ್ಲಿ ನಟಿ ಫರೀದಾ ಕ್ಯೂಟ್‌ ಆಗಿ ಕಾಣುತ್ತಿದ್ದರು. ಪಾಪರಾಜಿಗಳಿಗೆ ಮುದ್ದಾಗಿ ಪೋಸ್‌ ಕೊಟ್ಟರು. ಈ ವಿಡಿಯೊ ಹಾಗೂ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ನಟಿಯನ್ನು ಕಂಡು ಫ್ಯಾನ್ಸ್‌ ಸಂತಸ ಹೊರಹಾಕಿದ್ದಾರೆ.

VISTARANEWS.COM


on

Heeramandi Premiere Farida Jalal rare public appearance
Koo

ಬೆಂಗಳೂರು:  ʼದೇವ್‌ದಾಸ್‌ʼ ‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ಯಂತಹ ಹಿಟ್‌ ಸಿನಿಮಾಗಳನ್ನು ನೀಡಿದವರು ಸಂಜಯ್ ಲೀಲಾ ಬನ್ಸಾಲಿ. ಇದೀಗ ಸಂಜಯ್‌ ಲೀನಾ ಬನ್ಸಾಲಿ ಅವರು ʻಹೀರಾಮಂಡಿ: ದಿ ಡೈಮಂಡ್ ಬಜಾರ್‌ʼ ಸಿರೀಸ್‌ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಏ.24ರ ಬುಧವಾರದಂದು ʻಹೀರಾಮಂಡಿ: ದಿ ಡೈಮಂಡ್ ಬಜಾರ್‌ʼ (Heeramandi: The Diamond Bazaar) ಸಿರೀಸ್‌ ಪ್ರೀಮಿಯರ್‌ ಶೋ (Heeramandi Premiere) ಇತ್ತು. ಕಾರ್ಯಕ್ರಮವೊಂದರಲ್ಲಿ ಹಿರಿಯ ನಟಿ ಫರೀದಾ ಜಲಾಲ್ (Farida Jalal) ಬಹಳ ಸಮಯದ ನಂತರ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಈ ಸಿರೀಸ್‌ನಲ್ಲಿ ಫರೀದಾ ಕೂಡ ನಟಿಸಿದ್ದಾರೆ.

ʻಕಭಿ ಖುಷಿ ಕಭಿ ಗಮ್ʼ ಸಿನಿಮಾ ಮೂಲಕ ಫರೀದಾ ಹೆಚ್ಚು ಜನಪ್ರೀಯತೆ ಪಡೆದವರು. ಬಳಿ ಬಣ್ಣದ ಉಡುಗೆಯಲ್ಲಿ ನಟಿ ಫರೀದಾ ಕ್ಯೂಟ್‌ ಆಗಿ ಕಾಣುತ್ತಿದ್ದರು. ಪಾಪರಾಜಿಗಳಿಗೆ ಮುದ್ದಾಗಿ ಪೋಸ್‌ ಕೊಟ್ಟರು. ಈ ವಿಡಿಯೊ ಹಾಗೂ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ನಟಿಯನ್ನು ಕಂಡು ಫ್ಯಾನ್ಸ್‌ ಸಂತಸ ಹೊರಹಾಕಿದ್ದಾರೆ. ಅಭಿಮಾನಿಯೊಬ್ಬರು ʻʻಫರೀದಾ ಅವರ ನಟನೆ ಮರೆಯುವಂತಿಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಇಂದಿಗೂ ನಟಿ ಸುಂದರವಾಗಿ ಕಾಣುತ್ತಿದ್ದಾರೆʼʼಎಂದು ಕಮೆಂಟ್‌ ಮಾಡಿದ್ದಾರೆ. ಹೀರಾಮಂಡಿ ಚಿತ್ರದಲ್ಲಿನ ಫರೀದಾ ಪಾತ್ರವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಫರೀದಾ ಇತ್ತೀಚೆಗೆ ಅಕ್ಷಯ್ ಕುಮಾರ್ ಅವರ ʻವೆಲ್ಕಮ್ ಟು ದಿ ಜಂಗಲ್‌ʼಗೆ ಸಿನಿಮಾಗೆ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Heeramandi Trailer: ʻಹೀರಾಮಂಡಿʼ ಟ್ರೈಲರ್‌ ಕಂಡು ರಶ್ಮಿಕಾ, ಆಲಿಯಾ, ವಿಕ್ಕಿ ಕೌಶಲ್‌ ಫಿದಾ!

ಸಂಜಯ್ ಲೀಲಾ ಬನ್ಸಾಲಿಯವರ ( Sanjay Leela Bhansali) ಹದಿನಾಲ್ಕು ವರ್ಷಗಳ ಕನಸಿನ ಕೂಸಾಗಿರುವ ನೆಟ್‌ಫ್ಲಿಕ್ಸ್ ಸೀರೀಸ್ ʻಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಚಿತ್ರದ (Hiramandi: The Diamond Bazaar) ಬಹು ನಿರೀಕ್ಷಿತ ಟ್ರೈಲರ್‌ ಏಪ್ರಿಲ್‌ 10ರಂದು ಬಿಡುಗಡೆಯಾಗಿತ್ತು. ಅನೇಕ ನಟಿಯರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ನೆಟ್​ಫ್ಲಿಕ್ಸ್​ ಮೂಲಕ ಮೇ 1ರಂದು ಈ ವೆಬ್​ ಸಿರೀಸ್​ ವೀಕ್ಷಣೆಗೆ ಲಭ್ಯವಾಗಲಿದೆ.

ಹೀರಾಮಂಡಿ: ದಿ ಡೈಮಂಡ್ ಬಜಾರ್’ನ ಮೊದಲ ಹಾಡು ‘ಸಕಲ್ ಬನ್’ (Sakal Ban) ಮಿಸ್ ವರ್ಲ್ಡ್ 2024 ರ ಫಿನಾಲೆಯಲ್ಲಿ ಲಾಂಚ್‌ ಆಗಿತ್ತು. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಸೇರಿದಂತೆ ಅನೇಕರು ಈ ಹಾಡಿಗೆ ರ್‍ಯಾಂಪ್‌ ವಾಕ್‌ ಮಾಡಿದ್ದರು.

ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳೆಂದರೆ ಅಲ್ಲೊಂದು ಅದ್ಭುತ ಮಾಯಾಲೋಕವನ್ನೇ ನಾವು ನಿರೀಕ್ಷಿಸಬಹುದು. “ಹೀರಾಮಂಡಿ” ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ವೇಶ್ಯೆಯರ ಜೀವನದಲ್ಲಿ ಪ್ರೀತಿ ಮತ್ತು ದ್ರೋಹದ ವಿಷಯಗಳನ್ನು ಅನ್ವೇಷಿಸುತ್ತದೆ. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್​ ಹೈದರಿ, ರಿಚಾ ಚಡ್ಡಾ, ಶರ್ಮಿನ್​ ಸೇಗಲ್​, ಸಂಜೀದಾ ಶೇಖ್​ ಮುಂತಾದವರು ‘ಹೀರಾಮಂಡಿ’ ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Shakhahaari Movie: ಒಟಿಟಿಗೆ ಎಂಟ್ರಿ ಕೊಡ್ತಿದೆ ʻಶಾಖಾಹಾರಿʼ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

Shakhahaari Movie: ರಂಗಾಯಣ ರಘು ನಟನೆಯ ʻಶಾಖಾಹಾರಿʼ ಸಿನಿಮಾ ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿದೆ. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾವ ಒಟಿಟಿಗೆ ಲಗ್ಗೆ ಇಡುತ್ತಿದೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Shakhahaari Movie In OTT amzon Prime
Koo

ಬೆಂಗಳೂರು: ರಂಗಾಯಣ ರಘು ನಟನೆಯ ʻಶಾಖಾಹಾರಿʼ ಸಿನಿಮಾ (Shakhahaari Movie) ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ನಿರ್ದೇಶಕ ಸಂದೀಪ್ ಸುಂಕದ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಸಿನಿರಸಿಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿರುವ ಶಾಖಾಹಾರಿ ರೋಚಕ ತಿರುವು, ಭಾವನಾತ್ಮಕ ಸಂಬಂಧ, ಪ್ರೀತಿ, ಸ್ನೇಹ, ನಂಬಿಕೆ ಇವೆಲ್ಲವುದರ ಬಗ್ಗೆ ಬಹಳ ಸೂಕ್ಷ್ಮವಾಗಿ ಪ್ರೇಕ್ಷಕರಿಗೆ ಮುಟ್ಟಿಸಿ ಎಲ್ಲಾ ರೀತಿಯ ರಸಾನುಭವ ನೀಡಿತ್ತು. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾವ ಒಟಿಟಿಗೆ ಲಗ್ಗೆ ಇಡುತ್ತಿದೆ. ಮೂಲಗಳ ಪ್ರಕಾರ ʻಶಾಖಾಹಾರಿʼ ಸಿನಿಮಾ (Shakhahaari Movie OTT) ಡಿಜಿಟಲ್‌ ರೈಟ್ಸ್‌ ಅಮೆಜಾನ್‌ ಪ್ರೈಂ (Amazon Prime) ಪಾಲಾಗಿದೆ. ಮುಂದಿನ ವಾರ ಒಟಿಟಿಗೆ ಕಾಲಿಡಿದೆ ಎಂದು ವರದಿಯಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ಬಲು ರೋಚಕವಾದ ಕಥೆ ‘ಶಾಖಾಹಾರಿ’ . ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ ಭಟ್‌ ರಂಗಾಯಣ ರಘು ಒಂದು ವೆಜಿಟೇರಿಯನ್ ಹೋಟೆಲ್ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಕಾಹಾರಿ ಹೋಟೆಲ್‌ನ ಇಮೇಜ್ ‘ಶಾಖಾಹಾರಿ’ಯಾಗಿ ಬದಲಾಗುತ್ತದೆ. ಇಂಥ ಒಗಟಿನಂತಹ ಟೈಟಲ್‌ ಹಿಂದಿರುವ ಕಥೆ ಏನು ಎಂಬುದು ಸಿನಿಮಾದ ತಿರುಳು.

ಇದನ್ನೂ ಓದಿ: Shakhahaari Movie: ಬೆಂಗಳೂರಿನಲ್ಲೇ ಕನ್ನಡದ “ಶಾಖಾಹಾರಿʼಯನ್ನು ಕೊಂದ ಮಲಯಾಳಂ ಸಿನಿಮಾ! ಕನ್ನಡಿಗರಿಗೇ ಸವಾಲ್‌!

ಶಾಖಾಹಾರಿ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ. ಶಶಾಂಕ್ ನಾರಾಯಣ್ ಸಂಕಲನ, ಮಯೂರ್ ಅಂಬೇಕಲ್ಲು ಸಂಗೀತ ಚಿತ್ರಕ್ಕೆ ಪುಷ್ಟಿ ನೀಡಿದೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ.ನ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

ಕಿರುತೆರೆ

Salaar Movie: ಕಿರುತೆರೆಗೆ ಬಂದೇ ಬಿಡ್ತು ಬ್ಲಾಕ್ ಬಸ್ಟರ್ ಸಿನಿಮಾ ‘ಸಲಾರ್’!

Salaar Movie: ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾವನ್ನು ನಿರ್ಮಿಸಿದೆ. ಇನ್ನು ಈ ಸಿನಿಮಾದ ಹಾಡುಗಳು ಅದ್ಭುತ ರೀತಿಯಲ್ಲಿ ಮೂಡಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿ ಇತ್ತು. ಇದೀಗ 2023ರ ಬ್ಲಾಕ್ ಬಸ್ಟರ್ ಹಿಟ್ “ಸಲಾರ್” ಸಿನಿಮಾ (Salaar Movie) ಪ್ರಸಾರವಾಗಲಿದೆ.

VISTARANEWS.COM


on

Salaar Movie In star suvarna
Koo

ಬೆಂಗಳೂರು: ಕನ್ನಡಿಗರಿಗೆ `ಸ್ಟಾರ್ ಸುವರ್ಣ’ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು ನೀಡುತ್ತ ಬಂದಿದೆ. ವಿಶ್ವ-ವಿಖ್ಯಾತಿ ಪಡೆದ ʻಕಾಂತಾರʼ, ʻಹೊಯ್ಸಳʼ, ʻಜೇಮ್ಸ್ʼ ನಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡಿ ಪ್ರೇಕ್ಷಕರ ಮನಗೆದ್ದ ಸುವರ್ಣ ವಾಹಿನಿ (Star Suvarna) ಇದೀಗ 2023ರ ಬ್ಲಾಕ್ ಬಸ್ಟರ್ ಹಿಟ್ “ಸಲಾರ್” ಸಿನಿಮಾ (Salaar Movie) ಪ್ರಸಾರವಾಗಲಿದೆ. ಜತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ.

ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾವು ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂ. ಕಮಾಯಿ ಮಾಡಿತ್ತು. ಇದೀಗ ಈ ಸಿನಿಮಾವು ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಸುವರ್ಣ ವರ್ಲ್ಡ್ ಪ್ರೀಮಿಯರ್ ಆಗುತ್ತಿದೆ. ಈ ಸಿನಿಮಾದಲ್ಲಿ ವೀಕ್ಷಕರಿಗೆ ಪ್ರಭಾಸ್ ಅವರ ಲುಕ್ ಜತೆಗೆ ಸಿನಿಮಾದಲ್ಲಿ ಬಳಸಲಾಗಿದ್ದ ಬೈಕ್ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿ ಮಾಡಿತ್ತು. ಇದೀಗ ಆ ಬೈಕ್ ಗೆಲ್ಲೋ ಅವಕಾಶವನ್ನು ನೋಡುಗರಿಗೆ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯು ನೀಡುತ್ತಿದೆ. ‘ಸಲಾರ್’ ಸಿನಿಮಾ ನೋಡಿ, ಅಲ್ಲಿ ಕೇಳೊ ಪ್ರಶ್ನೆಗಳಿಗೆ ಆದಷ್ಟು ಬೇಗ ಸರಿಯಾದ ಉತ್ತರ ಕೊಟ್ರೆ, ಅದೃಷ್ಟಶಾಲಿ ವಿಜೇತರಿಗೆ ‘ಸಲಾರ್’ ನಲ್ಲಿ ಪ್ರಭಾಸ್ ಬಳಸಿರುವ ಬೈಕ್ ಬಹುಮಾನವಾಗಿ ಸಿಗಲಿದೆ.

ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾವನ್ನು ನಿರ್ಮಿಸಿದೆ. ಇನ್ನು ಈ ಸಿನಿಮಾದ ಹಾಡುಗಳು ಅದ್ಭುತ ರೀತಿಯಲ್ಲಿ ಮೂಡಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿ ಇತ್ತು.

ಇದನ್ನೂ ಓದಿ: Kiara Advani: ಪ್ರಭಾಸ್ ನಟನೆಯ ʻಸಲಾರ್ 2ʼ ಸಿನಿಮಾದಲ್ಲಿ ಕಿಯಾರಾ ಆಡ್ವಾಣಿ?

ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ “ಸಲಾರ್” ಇದೇ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Continue Reading

ಬಾಲಿವುಡ್

Ranbir Kapoor: ಸಖತ್ ಫಿಟ್ ಆ್ಯಂಡ್ ಫೈನ್​ ಆದ ರಣಬೀರ್! ಫೋಟೊ ಶೇರ್‌ ಮಾಡಿದ ಟ್ರೈನರ್‌!

Ranbir Kapoor: ಈ ಮುಂಚೆ ನಟರ ವೇಷಭೂಷಣದಲ್ಲಿರುವ ಚಿತ್ರಗಳು ಸೋರಿಕೆಯಾದ ಬಳಿಕ ಚಿತ್ರೀಕರಣದ ಮೊದಲ ಎರಡು ದಿನಗಳು ಕಾಲ ನಿರ್ದೇಶಕರು ಒತ್ತಡವನ್ನುಂಟುಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಈ ಫೋಟೊಗಳಿಂದ ನಿರ್ದೇಶಕ ನಿತೇಶ್ ತಿವಾರಿ ತುಂಬ ಬೇಸರಿಸಿಗೊಂಡಿದ್ದರು ಎಂದು ವರದಿಯಾಗಿತ್ತು.ದೃಶ್ಯಕ್ಕೆ ಅಗತ್ಯವಿರುವ ನಟರು ಮತ್ತು ತಂತ್ರಜ್ಞರನ್ನು ಮಾತ್ರ ಸೆಟ್‌ನಲ್ಲಿ ಇರುವಂತೆ ಆದೇಶ ನೀಡಿದ್ದು, ಉಳಿದವರಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿತ್ತು.

VISTARANEWS.COM


on

Ranbir Kapoor trainer shares transformation Of Ranbir
Koo

ಬೆಂಗಳೂರು: ರಣಬೀರ್ ಕಪೂರ್ (Ranbir Kapoor) ಮುಂಬರುವ ಸಿನಿಮಾ ‘ರಾಮಾಯಣ’ (Ramayana Movie) ಚಿತ್ರದ ರಾಮನ ಪಾತ್ರಕ್ಕಾಗಿ ಕಠಿಣ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಮುಂಚೆ ʻಅನಿಮಲ್‌ʼ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ರಾಮಾಯಣ ಸಿನಿಮಾಗಾಗಿ ಸಖತ್‌ ಫಿಟ್‌ ಫೈನ್‌ ಆಗಿದ್ದಾರೆ. ಇದೀಗ ಬಾಡಿ ಟ್ರಾನ್ಸ್‌ಫರ್ಮೇಶನ್‌ ಫೋಟೊವನ್ನು ಹಂಚಿಕೊಂಡಿದ್ದಾರೆ.

ಏಪ್ರಿಲ್ 24ರಂದು, ರಣಬೀರ್ ಅವರ ತರಬೇತುದಾರ ಶಿವೋಹಂ (trainer Shivoham) ಅವರು ರಣಬೀರ್‌ ಅವರ ಟ್ರಾನ್ಸ್‌ಫರ್ಮೇಶನ್‌ ಫೋಟೊವನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ʻಅನಿಮಲ್‌ʼ ಸಿನಿಮಾ ಲುಕ್‌, ಬಳಿಕ ನಾರ್ಮಲ್‌ ಫೋಟೊ, ಹಾಗೇ ಮೂರನೇ ಫೋಟೊದಲ್ಲಿ ರಾಮನ ಪಾತ್ರಕ್ಕೆ ಫಿಟ್‌ ಆಗಿರುವ ರಣಬೀರ್‌ ಫೋಟೊವನ್ನು ಹಂಚಿಕೊಂಡಿದ್ದಾರೆ.

ಶಿವೋಹಂ ಫೋಟೊ ಜತೆಗೆ ʻ “ಇದೊಂದು ಸುಂದರ ಪ್ರಯಾಣ ಮತ್ತು ಮುಂದಿನ ಬ್ಲಾಕ್ಬಸ್ಟರ್ ಯಶಸ್ಸಿಗೆ! ರಣಬೀರ್‌ ಅವರ ʻರಾಮಾಯಣʼ ಸಿನಿಮಾಗೆ ಶುಭ ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್​ ಯಶ್​ ಅವರು ರಾವಣನಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಗಾಸಿಪ್ ಹಬ್ಬಿದೆ.

ಈ ಮುಂಚೆ ನಟರ ವೇಷಭೂಷಣದಲ್ಲಿರುವ ಚಿತ್ರಗಳು ಸೋರಿಕೆಯಾದ ಬಳಿಕ ಚಿತ್ರೀಕರಣದ ಮೊದಲ ಎರಡು ದಿನಗಳು ಕಾಲ ನಿರ್ದೇಶಕರು ಒತ್ತಡವನ್ನುಂಟುಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಈ ಫೋಟೊಗಳಿಂದ ನಿರ್ದೇಶಕ ನಿತೇಶ್ ತಿವಾರಿ ತುಂಬ ಬೇಸರಿಸಿಗೊಂಡಿದ್ದರು ಎಂದು ವರದಿಯಾಗಿತ್ತು. ಈಗಾಗಲೇ ಸೆಟ್‌ನಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದು ಫೋನ್‌ಕೂಡ ನಿಷೇಧಿಸಲಾಗಿದೆ ಎನ್ನಲಾಗಿತ್ತು.

ದೃಶ್ಯಕ್ಕೆ ಅಗತ್ಯವಿರುವ ನಟರು ಮತ್ತು ತಂತ್ರಜ್ಞರನ್ನು ಮಾತ್ರ ಸೆಟ್‌ನಲ್ಲಿ ಇರುವಂತೆ ಆದೇಶ ನೀಡಿದ್ದು, ಉಳಿದವರಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: Ranbir Kapoor: `ರಾಮಾಯಣ’ ಸಿನಿಮಾಗಾಗಿ ಕಠಿಣ ವರ್ಕೌಟ್ ಮಾಡುತ್ತಿರುವ ರಣಬೀರ್ ಕಪೂರ್!

ಇನ್ನು ದಶರಥನಾಗಿ ಅರುಣ್‌ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗುತ್ತಿದೆ. ರಾವಣನ ಸಹೋದರಿ ಶೂರ್ಪನಖಿಯಾಗಿ ರಕುಲ್‌ಪ್ರೀತ್ ಸಿಂಗ್ ಹಾಗೂ ಮಡದಿ ಮಂಡೋದರಿಯಾಗಿ ಸಾಕ್ಷಿ ತನ್ವರ್ ನಟಿಸುತ್ತಾರೆ ಎಂದು ವರದಿಯಾಗಿದೆ.

ಸದ್ಯ ಯಶ್ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮಾಯಣ’ ಚಿತ್ರದಲ್ಲಿ ಸದ್ಯ ಬೇರೆ ಕಲಾವಿದರ ದೃಶ್ಯಗಳನ್ನು ಸೆರೆಹಿಡಿಯಲಿದ್ದು ನಿಧಾನವಾಗಿ ಯಶ್ ತಂಡ ಸೇರಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.

Continue Reading
Advertisement
Lok Sabha Election 2024 BJP rejects Sam Pitroda statement
Lok Sabha Election 20242 mins ago

Lok Sabha Election 2024: ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ಪಿತ್ರಾರ್ಜಿತ ಆಸ್ತಿಯಲ್ಲಿ ಸರ್ಕಾರಕ್ಕೆ ಪಾಲು; ‘ಕೈ’ಗೆ ಇಕ್ಕಟ್ಟು, ಬಿಜೆಪಿಗೆ ಅಸ್ತ್ರ

Anant-Radhika wedding
ವಾಣಿಜ್ಯ8 mins ago

Anant- Radhika  wedding: 1,500 ಕೋಟಿ ರೂ. ದಾಟಲಿದೆ ಅಂಬಾನಿ ಮಗನ ಮದುವೆ ಖರ್ಚು!

Ballari Lok Sabha constituency Congress candidate e Tukaram election campaign at apmc market
ಬಳ್ಳಾರಿ14 mins ago

Lok Sabha Election 2024: ತಾಯಿ ನಾನು ನಿಮ್ಮ ಮಗನಂತೆ, ಮತ ನೀಡಿ ಗೆಲ್ಲಿಸಿ ಎಂದ ಈ. ತುಕಾರಾಂ

Rahul Gandhi
ದೇಶ30 mins ago

Rahul Gandhi: ಅಮೇಥಿಯಲ್ಲಿ ರಾಹುಲ್‌ ಗಾಂಧಿ ಸ್ಪರ್ಧೆ ಖಚಿತ; ಸ್ಮೃತಿ ಇರಾನಿಗೆ ಕೈ ನಾಯಕ ಸವಾಲು!

DC vs GT
ಕ್ರೀಡೆ38 mins ago

DC vs GT: ಕೊಹ್ಲಿಯಂತೆ ಅದ್ಭುತ ಫೀಲ್ಡಿಂಗ್​ ನಡೆಸಿ ಡೆಲ್ಲಿಗೆ ಗೆಲುವು ತಂದ ಟ್ರಿಸ್ಟಾನ್ ಸ್ಟಬ್ಸ್

Heeramandi Premiere Farida Jalal rare public appearance
ಬಾಲಿವುಡ್38 mins ago

Heeramandi Premiere: ʻಹೀರಾಮಂಡಿʼ ಪ್ರೀಮಿಯರ್‌ನಲ್ಲಿ ಅಪರೂಪವಾಗಿ ಕಂಡ ʻಕಭಿ ಖುಷಿ ಕಭಿ ಗಮ್ʼ ಸಿನಿಮಾ ನಟಿ!

Murder case In davanagere
ದಾವಣಗೆರೆ38 mins ago

Murder Case : ಮನೆ ಹಾಳು ಮಾಡಿದ ಕುಡಿತ; ತಾಯಿ ಸಾವಿಗೆ, ತಂದೆಯ ಕೊಂದ ಮಗ!

Election Commission
ದೇಶ56 mins ago

ನೀತಿ ಸಂಹಿತೆ ಉಲ್ಲಂಘನೆ; ಮೋದಿ, ರಾಹುಲ್‌ ಗಾಂಧಿ ಪ್ರತಿಕ್ರಿಯೆ ಕೇಳಿದ ಚುನಾವಣೆ ಆಯೋಗ!

arunachal pradesh landslide
ವೈರಲ್ ನ್ಯೂಸ್1 hour ago

Arunachal Pradesh landslide: ಅರುಣಾಚಲದಲ್ಲಿ ಭೂಕುಸಿತ, ಚೀನಾ ಗಡಿ ಪ್ರದೇಶಕ್ಕೆ ಸಂಪರ್ಕ ಬಂದ್‌

Neha Murder case CID Officer
ಹುಬ್ಬಳ್ಳಿ1 hour ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder case CID Officer
ಹುಬ್ಬಳ್ಳಿ1 hour ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20243 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

ಟ್ರೆಂಡಿಂಗ್‌