Dingri Nagaraj | ʻಅಶ್ಲೀಲ ಮೆಸೇಜ್‌ ಕಳುಹಿಸಿ ಡಿಂಗ್ರಿ ನಾಗರಾಜ್‌ ಕುಚೇಷ್ಟೆ: ನಟಿ ರಾಣಿ ಮತ್ತೇನು ಹೇಳಿದರು? - Vistara News

ಸಿನಿಮಾ

Dingri Nagaraj | ʻಅಶ್ಲೀಲ ಮೆಸೇಜ್‌ ಕಳುಹಿಸಿ ಡಿಂಗ್ರಿ ನಾಗರಾಜ್‌ ಕುಚೇಷ್ಟೆ: ನಟಿ ರಾಣಿ ಮತ್ತೇನು ಹೇಳಿದರು?

ನಟ ಡಿಂಗ್ರಿ ನಾಗರಾಜ್‌ (Dingri Nagaraj) ಅವರು ಅಸಭ್ಯ ಮೆಸೇಜ್‌ಗಳನ್ನು ಕಳಿಸುತ್ತಿದ್ದಾರೆ ಎಂದು ನಟಿ ರಾಣಿ ಅವರು
ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಇದಕ್ಕೆ ನಟ ಡಿಂಗ್ರಿ ನಾಗರಾಜ್‌ ಪ್ರತಿಕ್ರಿಯೆ ಏನು? ಇಲ್ಲಿದೆ ವರದಿ.

VISTARANEWS.COM


on

Dingri Nagaraj (actress Rani allegation on dingrinagaraj)
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕ ಚಲನಚಿತ್ರ ಪೋಷಕರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್‌ (Dingri Nagaraj) ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್, ಖಚಾಂಚಿ ಸುರೇಶ್‌ ಅವರು ಸೊಂಟದ ಕೆಳಗಿನ ಮಾತುಗಳನ್ನಾಡುತ್ತಾರೆ ಎಂದು ಕನ್ನಡ ಚಿತ್ರರಂಗದ ಪೋಷಕ ಕಲಾವಿದೆ ರಾಣಿ ಆರೋಪ ಮಾಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ನಟ ಡಿಂಗ್ರಿ ನಾಗರಾಜ್‌, ಆಡುಗೋಡಿ ಶ್ರೀನಿವಾಸ್ ಅವರು ಅಸಭ್ಯ, ಅಶ್ಲೀಲ ಮೆಸೇಜ್‌ಗಳನ್ನು ಕಳಿಸುತ್ತಿದ್ದಾರೆ ಎಂದೂ ಆಪಾದಿಸಿದರು.

ʻʻಡಿಂಗ್ರಿ ನಾಗರಾಜ್ ಅವರು ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾಗಿ ಮೋಸ ಮಾಡುತ್ತಿದ್ದಾರೆ. ಸಂಘದಲ್ಲಿ ಆಗುಹೋಗುಗಳ ಬಗ್ಗೆ ಮಾಹಿತಿ ನೀಡುವುದಿಲ್ಲ. ಅವರಿಗೆ ಇಷ್ಟ ಬಂದ ಹಾಗೆ ನಿರ್ಧಾರ ತಗೆದುಕೊಳ್ಳುತ್ತಾರೆ. ಏಕವಚನದಲ್ಲಿ ಮಾತನಾಡಿಸುತ್ತಾರೆ. ಮಹಿಳೆಯರಿಗೆ ಅಗೌರವ ತೋರಿ ಮಾತಾಡಿದ್ದಾರೆ. ಕೆಲವೊಮ್ಮೆ ಅಶ್ಲೀಲ ವಿಡಿಯೊ ಕಳುಹಿಸುತ್ತಿದ್ದರು. ಆ ವಿಚಾರವಾಗಿ ಈ ಹಿಂದೆ ಗಲಾಟೆಯೂ ಆಗಿದೆ. ಹಣಕಾಸಿನ ದುರುಪಯೋಗ ಜತೆಗೆ ಅವಾಚ್ಯ ಶಬ್ದಗಳ‌ ನಿಂದನೆ ಮಾಡಿದ್ದಾರೆ. ಉಪಾಧ್ಯಕ್ಷೆ ಸ್ಥಾನದಿಂದ ಏಕಾಏಕಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಅವರು ಕಳುಹಿಸಿರುವ ಅಶ್ಲೀಲ ವಿಡಿಯೊ ಡಿಲೀಟ್‌ ಆಗಿದೆ. ಇದರಲ್ಲಿ ಆಡುಗೋಡಿ ಶ್ರೀನಿವಾಸ್‌ ಅವರ ಕೈವಾಡ ಕೂಡ ಇದೆʼʼ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | Operation Meghchakra | ಮಕ್ಕಳ ಅಶ್ಲೀಲ ವಿಡಿಯೊ ಹಂಚಿಕೆ ಜಾಲ ಭೇದಿಸಿದ ಸಿಬಿಐ, 20 ರಾಜ್ಯದಲ್ಲಿ ದಾಳಿ

Dingri Nagaraj

ಈ ಬಗ್ಗೆ ಡಿಂಗ್ರಿ ನಾಗರಾಜ್‌ ಪ್ರತಿಕ್ರಿಯೆ ನೀಡಿದ್ದು ʻʻರಾಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ರಾಣಿ ಮಾಡಿರುವ ಆರೋಪ ಎಲ್ಲವೂ ಸುಳ್ಳು. ಪೋಷಕ ಕಲಾವಿದರ ಸಂಘದ ಹಣ ದುರುಪಯೋಗ ಮಾಡಿಲ್ಲ. ಸಂಘದ ಆವರಣದಲ್ಲಿ ವೈಯಕ್ತಿಕ ಗಲಾಟೆ ಶುರು ಮಾಡಿದ್ದಾರೆ. ಹಾಗಾಗಿ ಅವರನ್ನು ಉಚ್ಚಾಟನೆ ಮಾಡಿದ್ದೇವೆ. ಅಶ್ಲೀಲ ವಿಡಿಯೊ ಕಳುಹಿಸಿರುವುದು ಸುಳ್ಳು ಮಾಹಿತಿʼʼ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Yogaraj Bhat | ʻನೀನು ಬೆಳೆಯೋ ಮಗ ಅಲ್ಲʼ: ಜೀ ಟಿವಿಯ ಹುಣಸೂರ್‌ಗೆ ಯೋಗರಾಜ್‌ ಭಟ್‌ ಅವಾಚ್ಯ ಬೈಗುಳ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Jaggesh: ಬಾಲ್ಯದಲ್ಲಿ ನನ್ನನ್ನು ಕರಿಯ ಎಂದು ಗೇಲಿ ಮಾಡುತ್ತಿದ್ದರು, ಆದರೆ ನಾನು…; ಜಗ್ಗೇಶ್‌ ಮನದ ಮಾತು

Actor Jaggesh: ಬಾಡಿ ಶೇಮಿಂಗ್ ಬಗ್ಗೆ ಜಗ್ಗೇಶ್‌ ಅವರು ಈ ಮೂಲಕ ಹೇಳಿಕೊಂಡಿದ್ದಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕೆಲವೊಮ್ಮೆ ಅದನ್ನೇ ತಮಾಷೆಯಾಗಿ ಹೇಳಿಕೊಂಡು ನಕ್ಕಿದ್ದಾರೆ, ನಗಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರ ಮಗ ಅರ್ಜುನ್. ಮೊಮ್ಮಗ ಎಂದರೆ ಜಗ್ಗೇಶ್ ಅವರಿಗೆ ಬಹಳ ಪ್ರೀತಿ.

VISTARANEWS.COM


on

Actor Jaggesh talk about body shame
Koo

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ (Actor Jaggesh) ಅವರು ಸೋಷಿಯಲ್‌ ಮೀಡಿಯಾ ಮೂಲಕ ಆಗಾಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ಈ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

ಜಗ್ಗೇಶ್‌ ಪೋಸ್ಟ್‌ನಲ್ಲಿ ʻʻನನ್ನನ್ನು ಕಪ್ಪು ಎಂದು ಅಣಕ ಮಾಡುತ್ತಿದ್ದರು ಬಾಲ್ಯದಲ್ಲಿ ಎಲ್ಲರು..!!
ಆಗ ನನಗೆ ಬಹಳ ಸಿಟ್ಟು ಬರುತ್ತಿತ್ತು. ನಾನು ಯವ್ವನದಲ್ಲಿ ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು!
ನಟನಾದ ಮೇಲೆ ನನ್ನ ಮ್ಯಾಕ್ಸ್‌ ಫ್ಯಾಕ್ಟರ್‌ (max factor) ಮೇಕಪ್‌, ಅಂಬರೀಶ್‌ ಅವರ, ರಜನಿಯವರ, ವಿಜಯಕಾಂತ್, ಶಿವಣ್ಣ ಕೂಡ ಬಳಸುತ್ತಿದ್ದರು. ನಾನು ಬಳಸುತ್ತಿದ್ದ ಪ್ಯಾನ್‌ ಕೇಕ್‌ ಇಂದು ವಿಶ್ವದಲ್ಲಿ ಮರೆಯಾದ ಪ್ಯಾನ್‌ ಕೇಕ್‌ . ಆದರೆ ನನ್ನ ಅದೃಷ್ಟ ಅದು ನನ್ನ ಬಳಿ ಇನ್ನೂ 50 ಸಿನಿಮಾಗೆ ಸಾಕಾಗುತ್ತದೆ ಅಪ್ಟಿದೆ. ಅನೇಕರು ಕೇಳಿದರು ಈ ಪ್ಯಾನ್‌ ಕೇಕ್‌ ಕೊಡಿ ಎಂದು (pancake). ನಾನು ನೀಡುವುದಿಲ್ಲಾ ಎಂದೆ. ಕಾರಣ ಅದರ ಮೇಲಿನ ವಿಪರೀತ ಪ್ರೀತಿ ಹಾಗೂ ಭಕ್ತಿ. ಅದು ಹಚ್ಚಿದರೆ ನನ್ನ ಕಪ್ಪು ಅಂದವರು ಮೌನವಾಗುತ್ತಾರೆ. ಇದನ್ನು ಬಳಸುವಾಗ ಅಯ್ಯೋ ನಾನು ನಿಜವಾಗಲು ಈ ಬಣ್ಣ ಹೊಂದಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸುತ್ತದೆ. ಆದರೆ ನನ್ನ ಮೊಮ್ಮಗ ಅರ್ಜುನ ಯಾವ pancake ಬಳಸದಂತೆ ಬಣ್ಣ ಹಚ್ಚಿಕೊಂಡೇ ಬಂದಿದ್ದಾನೆ. ಭೂಮಿಗೆ ಇಷ್ಟು ಹೇಳಲು ಕಾರಣ ಇಂದು ಇವನು 9ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಅಂದರೆ ಅವನ ಹುಟ್ಟುಹಬ್ಬ. ಹುಟ್ಟು ಹಬ್ಬದ ಶುಭಾಶಯಗಳು ಕಂದ. ದೇವರು ಒಳ್ಳೆಯದು ಮಾಡಲಿʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Jaggesh: ರಂಗ ನಾಯಕ, ʻಕಿತ್ತೋದ್‌ ನನ್ಮಗʼ ಮಾತಿಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ ಜಗ್ಗೇಶ್‌!

ಬಾಡಿ ಶೇಮಿಂಗ್ ಬಗ್ಗೆ ಜಗ್ಗೇಶ್‌ ಅವರು ಈ ಮೂಲಕ ಹೇಳಿಕೊಂಡಿದ್ದಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕೆಲವೊಮ್ಮೆ ಅದನ್ನೇ ತಮಾಷೆಯಾಗಿ ಹೇಳಿಕೊಂಡು ನಕ್ಕಿದ್ದಾರೆ, ನಗಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರ ಮಗ ಅರ್ಜುನ್. ಮೊಮ್ಮಗ ಎಂದರೆ ಜಗ್ಗೇಶ್ ಅವರಿಗೆ ಬಹಳ ಪ್ರೀತಿ.

ʻಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್‌ ಅವರು ಮುದ್ದಿನ ಶ್ವಾನ ಅರ್ಜುನನನ್ನು ನೆನೆದು ಭಾವುಕರಾಗಿದ್ದರು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್ ಅವರು ʻಅರ್ಜುನʼ ಎಂಬ ಹೆಸರಿನ ಸಾಕು ನಾಯಿಯ ಜತೆ ಇರುವ ಫೋಟೊವನ್ನು ತೋರಿಸಿದಾಗ, ʻಇವನ ಹೆಸರನ್ನೇ ನಾನು ನನ್ನ ಮೊಮ್ಮಗನಿಗೆ ಇಟ್ಟಿದ್ದೇನೆ. ಕಾರಣವೇನೆಂದರೆ, ಲ್ಯಾಬ್ರೇಡರ್ ನಾಯಿ ಜಾಸ್ತಿ ದಿನ ಬದುಕುವುದಿಲ್ಲ. ಆದರೆ ಅವನು ಹದಿನಾಲ್ಕುವರೆ ವರ್ಷ ನಮ್ಮ ಜತೆ ಬದುಕಿದ್ದʼ ಎಂದಿದ್ದರು. ಸಿನಿಮಾಗಳ ವಿಚಾರಕ್ಕೆ ಬಂದರೆ ಕೊನೆಯದಾಗಿ ಜಗ್ಗೇಶ್ ನಟಿಸಿದ ‘ರಂಗನಾಯಕ’ ಸಿನಿಮಾ ತೆರೆಗೆ ಬಂದಿತ್ತು. ಆದರೆ ಚಿತ್ರ ಗೆಲ್ಲಲಿಲ್ಲ.

Continue Reading

ಬಾಲಿವುಡ್

Salman Khan: ಸಲ್ಮಾನ್ ಖಾನ್ ಕಾರಿನ ಮೇಲೆ ಗುಂಡಿನ ದಾಳಿಗೆ ಸಂಚು; ನಾಲ್ವರ ಬಂಧನ

Salman Khan: ಪೊಲೀಸ್ ಮೂಲಗಳ ಪ್ರಕಾರ, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ತನ್ನ ಕೆನಡಾ ಮೂಲದ ಸೋದರಸಂಬಂಧಿ ಅನ್ಮೋಲ್ ಬಿಷ್ಣೋಯ್ ಮತ್ತು ಸಹವರ್ತಿ ಗೋಲ್ಡಿ ಬ್ರಾರ್ ಜತೆಗೆ ಪಾಕಿಸ್ತಾನಿ ಶಸ್ತ್ರಾಸ್ತ್ರ ವ್ಯಾಪಾರಿಯಿಂದ AK-47, M-16 ಮತ್ತು ಇತರ ಉನ್ನತ-ಕ್ಯಾಲಿಬರ್ ಶಸ್ತ್ರಾಸ್ತ್ರಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಖಾನ್ ಅವರ ಕಾರಿನ ಮೇಲೆ ದಾಳಿ ಮಾಡುವುದು ಮತ್ತು ತೋಟದ ಮನೆಯ ಮೇಲೆ ಅಟ್ಯಾಕ್‌ ಮಾಡುವುದು ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್‌ ಆಗಿತ್ತು ಎನ್ನಲಾಗಿದೆ.

VISTARANEWS.COM


on

Salman Khan Cops arrest 4 with alleged links to Bishnoi gang
Koo

ಬೆಂಗಳೂರು: ಮಹಾರಾಷ್ಟ್ರದ ಪನ್ವೇಲ್‌ನಲ್ಲಿ (Maharashtra’s Panvel) ನಟ ಸಲ್ಮಾನ್ ಖಾನ್ (Salman Khan) ಅವರ ಕಾರಿನ ಮೇಲೆ ಅಟ್ಯಾಕ್‌ ಮಾಡಲು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನೊಂದಿಗೆ ನಂಟು ಹೊಂದಿರುವ ನಾಲ್ವರು ವ್ಯಕ್ತಿಗಳನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಪಾಕಿಸ್ತಾನಿ ಶಸ್ತ್ರಾಸ್ತ್ರ ಪೂರೈಕೆದಾರರಿಂದ ಶಸ್ತ್ರಾಸ್ತ್ರ ಪಡೆದು ಸಲ್ಮಾನ್‌ ಖಾನ್‌ ಕಾರಿನ ಮೇಲೆ ದಾಳಿ ಮಾಡಲು ಈ ತಂಡ ಸಂಚು ರೂಪಿಸಿತ್ತು ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ತನ್ನ ಕೆನಡಾ ಮೂಲದ ಸೋದರಸಂಬಂಧಿ ಅನ್ಮೋಲ್ ಬಿಷ್ಣೋಯ್ ಮತ್ತು ಸಹವರ್ತಿ ಗೋಲ್ಡಿ ಬ್ರಾರ್ ಜತೆಗೆ ಪಾಕಿಸ್ತಾನಿ ಶಸ್ತ್ರಾಸ್ತ್ರ ವ್ಯಾಪಾರಿಯಿಂದ AK-47, M-16 ಮತ್ತು ಇತರ ಉನ್ನತ-ಕ್ಯಾಲಿಬರ್ ಶಸ್ತ್ರಾಸ್ತ್ರಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಖಾನ್ ಅವರ ಕಾರಿನ ಮೇಲೆ ದಾಳಿ ಮಾಡುವುದು ಮತ್ತು ತೋಟದ ಮನೆಯ ಮೇಲೆ ಅಟ್ಯಾಕ್‌ ಮಾಡುವುದು ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್‌ ಆಗಿತ್ತು ಎನ್ನಲಾಗಿದೆ.

ಲಾರೆನ್ಸ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್, ಸಂಪತ್ ನೆಹ್ರಾ ಮತ್ತು ಗೋಲ್ಡಿ ಬ್ರಾರ್ ಸೇರಿದಂತೆ 17ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಧನಂಜಯ್ ಅಲಿಯಾಸ್ ಅಜಯ್ ಕಶ್ಯಪ್, ಗೌರವ್ ಭಾಟಿಯಾ ಅಲಿಯಾಸ್ ನಹ್ವಿ, ವಾಸ್ಪಿ ಖಾನ್ ಅಲಿಯಾಸ್ ವಾಸಿಂ ಚಿಕ್ನಾ ಮತ್ತು ರಿಜ್ವಾನ್ ಖಾನ್ ಅಲಿಯಾಸ್ ಜಾವೇದ್ ಖಾನ್ ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಸಲ್ಮಾನ್‌ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಬಳಿಕ, ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದರು. ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ಗುಜರಾತ್‌ನಲ್ಲಿ ಬಂಧಿಸಲಾಗಿತ್ತು. ಅನುಜ್ ಥಾಪನ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಪಂಜಾಬ್‌ನಲ್ಲಿ ಏಪ್ರಿಲ್ 26 ರಂದು ಬಂಧಿಸಲಾಗಿತ್ತು. ಒಟ್ಟಾರೆಯಾಗಿ, ಆರು ಮಂದಿಯನ್ನು ಬಂಧಿಸಲಾಗಿತ್ತು ಅನುಜ್ ಥಾಪನ್ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದ

ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

ಏನಿದು ಪ್ರಕರಣ?

ಎಪ್ರಿಲ್‌ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದು ದಾಳಿ ನಡೆಸಿದ್ದ ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳನ್ನು ಬಳಿಕ ಅರೆಸ್ಟ್‌ ಮಾಡಲಾಗಿತ್ತು. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದರು.

ಈ ಮಧ್ಯೆ ಗುಂಡಿನ ದಾಳಿ ನಡೆಸಿದ್ದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಅನೂಜ್‌ ಥಾಪನ್‌ ಕೆಲವು ದಿನಗಳ ಹಿಂದೆ ಪೊಲೀಸ್‌ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ. ಅನುಜ್ ಥಾಪನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆತನ ಕುಟುಂಬ ಇದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಲಾಕಪ್‌ನಲ್ಲಿ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರೆ ಆತನ ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು.

Continue Reading

ಟಾಲಿವುಡ್

Nandamuri Balakrishna: ನಟಿ ಅಂಜಲಿಯ ಹಿಂಭಾಗ ಟಚ್ ಮಾಡಿದ್ರಾ ಬಾಲಯ್ಯ?

Nandamuri Balakrishna: ನಟಿ ಅಂಜಲಿಯನ್ನು (Actress Anjali ) ವೇದಿಕೆಯಲ್ಲಿಯೇ ತಳ್ಳಿದ್ದರು ಬಾಲಯ್ಯ. ನಟಿ ಅಂಜಲಿ “ನಾವಿಬ್ಬರು ಗ್ರೇಟ್ ಫ್ರೆಂಡ್ಸ್” ಎಂದು ಹೇಳಿ ಆ ಚರ್ಚೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು. . ಆದರೆ ಇದೀಗ ಅದೇ ಕಾರ್ಯಕ್ರಮದ ಮತ್ತೊಂದು ವೀಡಿಯೊ ವೈರಲ್ ಆಗಿ ಮತ್ತೆ ಬಾಲಯ್ಯ ಟ್ರೋಲ್ ಆಗುವಂತಾಗಿದೆ.

VISTARANEWS.COM


on

Nandamuri Balakrishna touch actress anjali back
Koo

ಬೆಂಗಳೂರು: ತೆಲುಗು ಸೂಪರ್‌ಸ್ಟಾರ್ ನಂದಮೂರಿ ಬಾಲಕೃಷ್ಣ (Nandamuri Balakrishna) ಇತ್ತೀಚೆಗೆ ತಮ್ಮ ಚಿತ್ರ `ಗ್ಯಾಂಗ್ಸ್ ಆಫ್ ಗೋದಾವರಿ’ (Gangs of Godavari) ಪ್ರಚಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಟಿ ಅಂಜಲಿಯನ್ನು (Actress Anjali ) ವೇದಿಕೆಯಲ್ಲಿಯೇ ತಳ್ಳಿದ್ದರು. ಈ ವಿಡಿಯೊ ಭಾರಿ ವೈರಲ್‌ ಆಗಿ, ಸಖತ್‌ ಟ್ರೋಲ್‌ ಆಗಿದ್ದರು ಬಾಲಯ್ಯ. ನಟಿ ಅಂಜಲಿ “ನಾವಿಬ್ಬರು ಗ್ರೇಟ್ ಫ್ರೆಂಡ್ಸ್” ಎಂದು ಹೇಳಿ ಆ ಚರ್ಚೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು. . ಆದರೆ ಇದೀಗ ಅದೇ ಕಾರ್ಯಕ್ರಮದ ಮತ್ತೊಂದು ವೀಡಿಯೊ ವೈರಲ್ ಆಗಿ ಮತ್ತೆ ಬಾಲಯ್ಯ ಟ್ರೋಲ್ ಆಗುವಂತಾಗಿದೆ. ವೇದಿಕೆಗೆ ಅಂಜಲಿ ಹೊರಟು ನಿಂತಾಗ ನಟ ಬಾಲಯ್ಯ ಆಕೆಯ ಹಿಂಬದಿಯನ್ನು ನಯವಾಗಿ ತಟ್ಟಿದ್ದಾರೆ ಎನ್ನಲಾಗಿದೆ.

ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ಬಾಲಕೃಷ್ಣ ಕುಳಿತಿದ್ದಾಗ ಅವರ ಕಾಲ ಬಳಿ ನೀರಿನ ಬಾಟಲ್‌ನಲ್ಲಿ ಮದ್ಯದ ರೀತಿಯ ಪಾನೀಯ ಇರುವುದು ಕಂಡುಬಂದಿತ್ತು. ಇದನ್ನು ನೋಡಿ ಅವರು ಕುಡಿದು ವೇದಿಕೆಯಲ್ಲಿ ಆ ರೀತಿ ನಡೆದುಕೊಂಡಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಆದರೆ ಅದೆಲ್ಲಾ ಗ್ರಾಫಿಕ್ಸ್ ಎಂದು ಕಾರ್ಯಕ್ರಮದ ಆಯೋಜಕರು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Nandamuri Balakrishna: ವೇದಿಕೆ ಮೇಲೆ ತಳ್ಳಿದ್ದ ಬಾಲಯ್ಯ ಬಗ್ಗೆ ಕೊನೆಗೂ ಪ್ರತಿಕ್ರಿಯೆ ಕೊಟ್ಟ ನಟಿ ಅಂಜಲಿ!

ಬಾಲಯ್ಯ ಬಗ್ಗೆ ಕೊನೆಗೂ ಪ್ರತಿಕ್ರಿಯೆ ಕೊಟ್ಟ ನಟಿ ಅಂಜಲಿ!

‘ಗ್ಯಾಂಗ್ಸ್ ಆಫ್ ಗೋದಾವರಿ’ ಯ ಪ್ರೀ-ರಿಲೀಸ್ ಸಮಾರಂಭದಲ್ಲಿ (Vishwak Sen and Neha Shetty) ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ನೇಹಾ ಶೆಟ್ಟಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು. ಬಾಲಯ್ಯ ಅವರು ಅಂಜಲಿಗೆ ಏನನ್ನೋ ಹೇಳುವ ಪ್ರಯುತ್ನ ಮಾಡಿದ್ದಾರೆ. ಆದರೆ, ಅವರಿಗೆ ಇದು ಕೇಳಿಲ್ಲ. ಇದರಿಂದ ಸಿಟ್ಟಾದ ಬಾಲಯ್ಯ ಅವರು ಅಂಜಲಿಯನ್ನು ತಳ್ಳಿದ್ದರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು.

ವೈರಲ್‌ ಆದ ವಿಡಿಯೊದಲ್ಲಿ ವೇದಿಕೆಯ ಮೇಲೆ ನೇಹಾ ಶೆಟ್ಟಿ ಮತ್ತು ಅಂಜಲಿ ಅಕ್ಕ ಪಕ್ಕ ನಿಂತಿದ್ದರು. ನೇಹಾ ಅವರಿಗೆ ನಯವಾಗಿ ಪಕ್ಕಕ್ಕೆ ಸರಿಯಲು ಕೇಳುತ್ತಾರೆ. ಕೆಲವು ಕ್ಷಣಗಳ ನಂತರ, ಬಾಲಯ್ಯ ಅವರು ಅಂಜಲಿಯನ್ನು ದೂರ ತಳ್ಳುತ್ತಾರೆ, ಬಹುತೇಕ ನಟಿ ಬಿದ್ದೇ ಬಿಡುವಂತಿದ್ದರು. ಆಗ ನೇಹಾ ಅವರು ಅಂಜಲಿ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಬಳಿಕ ನಟಿಯರು ತಮಾಷೆಯಾಗಿ ಬಾಲಯ್ಯ ನೋಡಿ ನಕ್ಕಿದ್ದರು.

ಕಾರ್ಯಕ್ರಮದ ಕ್ಲಿಪ್ ಅನ್ನು ಹಂಚಿಕೊಂಡಿರುವ ಅಂಜಲಿ ಹೀಗೆ ಬರೆದುಕೊಂಡಿದ್ದರು “ಗ್ಯಾಂಗ್ಸ್ ಆಫ್ ಗೋದಾವರಿ ಪ್ರೀ-ರಿಲೀಸ್ ಈವೆಂಟ್‌ವನ್ನು ತಮ್ಮ ಉಪಸ್ಥಿತಿಯೊಂದಿಗೆ ಅಲಂಕರಿಸಿದ್ದಕ್ಕಾಗಿ ನಾನು ಬಾಲಕೃಷ್ಣ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಬಾಲಕೃಷ್ಣ ಅವರು ಮತ್ತು ನಾನು ಯಾವಾಗಲೂ ಪರಸ್ಪರ ಗೌರವವನ್ನು ಉಳಿಸಿಕೊಂಡಿದ್ದೇವೆ. ಬಹಳ ಹಿಂದಿನಿಂದಲೂ ನಾವಿಬ್ಬರು ಪರಸ್ಪರ ಉತ್ತಮ ಸ್ನೇಹ, ಗೌರವವನ್ನು ಹಂಚಿಕೊಂಡಿದ್ದೇವೆ ಎಂದು ಹೇಳುವುದಕ್ಕೆ ನಾನು ಬಯಸುತ್ತೇನೆ. ಅವರ ಜತೆ ವೇದಿಕೆ ಹಂಚಿಕೊಂಡಿದ್ದು ಅದ್ಭುತವಾಗಿತ್ತುʼʼಎಂದು ಬರೆದುಕೊಂಡಿದ್ದರು.

Continue Reading

ಸಿನಿಮಾ

Cannes Film Festival:  ಮಾಡೆಲ್‌ನನ್ನು ಒರಟಾಗಿ ಹೊರ ದಬ್ಬಿದ ಕಾನ್‌ ಚಲನಚಿತ್ರೋತ್ಸವ ಸಂಘಟಕರು; ವಿಡಿಯೊ ವೈರಲ್‌!

Cannes Film Festival: ಮಾರ್ಸೆಲ್ಲೊ ಮಿಯೊ ಅವರ ಪ್ರಥಮ ಪ್ರದರ್ಶನವಾಗುತ್ತಿತ್ತು. ಸಾವಾ ಪಾಂಟಿಜ್ಸ್ಕಾ ಟಿಕೆಟ್‌ನೊಂದಿಗೆ ಚಿತ್ರಮಂದಿರಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಅಲ್ಲಿರುವ ಸಿಬ್ಬಂದಿ ಅತ್ಯಂತ ಕ್ರೂರವಾಗಿ ಮಾಡೆಲ್‌ ಅವರನ್ನು ತಡೆದು ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಉಕ್ರೇನಿಯನ್ ಮಾಡೆಲ್, ಫ್ಯಾಷನ್‌ ಟಿವಿ ನಿರೂಪಕಿ ಸಾವಾ ಪಾಂಟಿಜ್ಸ್ಕಾ ( Sawa Pontyjska ) ಅವರು ಇತ್ತೀಚೆಗೆ ನಡೆದ ಕಾನ್‌ ಚಲನಚಿತ್ರೋತ್ಸವದ (Cannes Film Festival) ಸಂಘಟಕರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Cannes Film Festival Ukrainian model Sawa Pontyjska assault by security guard
Koo

ಬೆಂಗಳೂರು: ಉಕ್ರೇನಿಯನ್ ಮಾಡೆಲ್, ಫ್ಯಾಷನ್‌ ಟಿವಿ ನಿರೂಪಕಿ ಸಾವಾ ಪಾಂಟಿಜ್ಸ್ಕಾ ( Sawa Pontyjska ) ಅವರು ಇತ್ತೀಚೆಗೆ ನಡೆದ ಕಾನ್‌ ಚಲನಚಿತ್ರೋತ್ಸವದ (Cannes Film Festival) ಸಂಘಟಕರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಭದ್ರತಾ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಾವಾ ಆರೋಪಿಸಿದ್ದಾರೆ. ಭದ್ರತಾ ಸಿಬ್ಬಂದಿ ಸಾವಾ ಅವರನ್ನು ರೆಡ್‌ ಕಾರ್ಪೆಟ್‌ ಮೇಲೆ ಬರದಂತೆ ತಡೆದಿರುವ ವಿಡಿಯೊ ವೈರಲ್‌ ಆಗಿದೆ.

ಮಾರ್ಸೆಲ್ಲೊ ಮಿಯೊ ಅವರ ಪ್ರಥಮ ಪ್ರದರ್ಶನವಾಗುತ್ತಿತ್ತು. ಸಾವಾ ಪಾಂಟಿಜ್ಸ್ಕಾ ಟಿಕೆಟ್‌ನೊಂದಿಗೆ ಚಿತ್ರಮಂದಿರಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಅಲ್ಲಿರುವ ಸಿಬ್ಬಂದಿ ಅತ್ಯಂತ ಕ್ರೂರವಾಗಿ ಮಾಡೆಲ್‌ ಅವರನ್ನು ತಡೆದು ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಡೆಲ್‌ ಮಾತನಾಡಿ ʻʻಸಿಬ್ಬಂದಿ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಯಾಕೆಂದರೆ ಅದು ಔಟ್‌ ಡೋರ್‌ ಆಗಿತ್ತು. ಆದರೆ ಭದ್ರತಾ ಸಿಬ್ಬಂದಿ ನನ್ನನ್ನು ಒಳಗೆ ತಳ್ಳಲು ಪ್ರಯತ್ನಿಸುತ್ತಿದ್ದಳು. ನನ್ನ ಮೇಲೆ ಕ್ರೂರವಾಗಿ ನಡೆದುಕೊಂಡಿದ್ದನ್ನು ಯಾರೂ ನೋಡಿಲ್ಲ. ಬಳಿಕ ನನ್ನನ್ನು ಹಿಂದಿನ ಬಾಗಿಲಿನ ಮೂಲಕ ಹೊರಹಾಕಿದರುʼʼ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಸಾವಿರಾರು ಜನರ ಸಮ್ಮುಖದಲ್ಲಿ ಹಿಂಸಾತ್ಮಕವಾಗಿ ನಡೆದುಕೊಂಡ ರೀತಿ ಬಗ್ಗೆ ನಟಿ ಮಾನಸಿಕವಾಗಿ ಕುಗ್ಗಿ ಹೋಗಿರುವುದಾಗಿ ವರದಿಯಾಗಿದೆ. ಇದೀಗ ನಟಿ ಕಾನ್‌ ಚಲನಚಿತ್ರೋತ್ಸವದ ಸಂಘಟಕರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ; Cannes 2024 Sandalwood Actress Interview: ಕಾನ್‌ನಲ್ಲಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ ಹೇಳಿದ್ದೇನು?

ವೈರಲ್‌ ವಿಡಿಯೊ

ನಟಿ ದೂರಿನಲ್ಲಿ ʻʻನನ್ನ ಮೇಲೆ ಕಾನ್‌ ಚಲನಚಿತ್ರೋತ್ಸವದ ಸಂಘಟಕರು ದೈಹಿಕವಾಗಿ ಹಾಗೂ ಮಾನಸಿಕವಾಕಿ ಹಲ್ಲೆ ನಡೆಸಿದ್ದಾರೆ. ನನ್ನ ಖ್ಯಾತಿಗೆ ಧಕ್ಕೆಯಾಗಿದೆ ಮತ್ತು ಪರಿಹಾರ ಧನ ನೀಡಬೇಕುʼʼಎಂದು ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

ಇದಕ್ಕೂ ಮೊದಲು ಮೇ 21 ರಂದು ನಡೆದ ಘಟನೆಯ ವಿಡಿಯೊವನ್ನು ಸಾವಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಮಹಿಳಾ ಸಿಬ್ಬಂದಿ ಬಳಿ ಒಳಗೆ ಹೋಗಲು ಸಾವಾ ಅನಮತಿ ಕೇಳಿದ್ದರು. ಆದರೆ ಭದ್ರತಾ ಸಿಬ್ಬಂದಿ ಸಾವಾ ಅವರನ್ನು ಒಳಗೆ ಬಿಟ್ಟಿಲ್ಲ. ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವ ಅತಿಥಿಗಳಿಗೆ ಕಟ್ಟುನಿಟ್ಟಾದ ನಿಯಮಗಳು ಇವೆ. ಇದಕ್ಕೆ ಕಾನ್‌ ಹೆಸರುವಾಸಿಯಾಗಿದೆ.

Continue Reading
Advertisement
Family Fighting in Belgavi
ಬೆಳಗಾವಿ3 mins ago

Family Fighting : ಜಮೀನಿನ ವಿಚಾರದಲ್ಲಿ ಕುಟುಂಬಗಳ ಫೈಟ್; ಕುಡುಗೋಲು, ದೊಣ್ಣೆ ಹಿಡಿದು ಮಾರಾಮಾರಿ

Valmiki Corporation Scam
ಕರ್ನಾಟಕ4 mins ago

Valmiki Corporation Scam: ಮೃತ ಅಧೀಕ್ಷಕ ಚಂದ್ರಶೇಖರನ್‌ ಪತ್ನಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು

prashant kishor
ಪ್ರಮುಖ ಸುದ್ದಿ6 mins ago

Lok Sabha Election 2024: ಈಗಲೂ ಹೇಳ್ತೇನೆ ಕೇಳಿ, ಬಿಜೆಪಿಯೇ ಗೆಲ್ಲೋದು! ಎಕ್ಸಿಟ್ ಪೋಲ್‌ಗೆ ಮೊದಲು ಪ್ರಶಾಂತ್ ಕಿಶೋರ್ ಫೈನಲ್ ಲೆಕ್ಕಾಚಾರ ಹೀಗಿದೆ!

IndiGo Flight
ದೇಶ9 mins ago

IndiGo Flight: ಮತ್ತೊಂದು ಹುಸಿ ಬಾಂಬ್‌ ಕರೆ; ಮುಂಬೈಯಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್‌

bhavani revanna SIT team
ಪ್ರಮುಖ ಸುದ್ದಿ43 mins ago

Bhavani Revanna: ಮಗ ಬಂದ, ಅಮ್ಮ ನಾಪತ್ತೆ! ಮನೆಯಿಂದ ಮಾಯವಾದ ಭವಾನಿ ರೇವಣ್ಣ; ಕಾದು ಕುಳಿತ ಎಸ್‌ಐಟಿ

Valmiki Corporation Scam
ಪ್ರಮುಖ ಸುದ್ದಿ46 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ ತನಿಖೆಗೆ ಸಿಬಿಐ ಎಂಟ್ರಿ ಫಿಕ್ಸ್; ನಾಗೇಂದ್ರ ವಿರುದ್ಧ ಕ್ರಮಕ್ಕೆ ಖರ್ಗೆ ಸೂಚನೆ

Assault Case
ಬೆಳಗಾವಿ1 hour ago

Assault Case : ಮಾರಾಮಾರಿಯಲ್ಲಿ ತಂದೆ ಕಿವಿ ಕಟ್‌; ಚಾಲಕ ಇಲ್ಲದ್ದಕ್ಕೆ ತಾನೇ ಆಂಬ್ಯುಲೆನ್ಸ್‌ ಓಡಿಸಿ ಆಸ್ಪತ್ರೆಗೆ ಕರೆತಂದ ಮಗ

Actor Jaggesh talk about body shame
ಸ್ಯಾಂಡಲ್ ವುಡ್1 hour ago

Actor Jaggesh: ಬಾಲ್ಯದಲ್ಲಿ ನನ್ನನ್ನು ಕರಿಯ ಎಂದು ಗೇಲಿ ಮಾಡುತ್ತಿದ್ದರು, ಆದರೆ ನಾನು…; ಜಗ್ಗೇಶ್‌ ಮನದ ಮಾತು

Modi Meditation
ದೇಶ2 hours ago

Modi Meditation: ಕನ್ಯಾಕುಮಾರಿಯಲ್ಲಿ ಧ್ಯಾನಾಸಕ್ತ ಪ್ರಧಾನಿ ಮೋದಿಯಿಂದ ಸೂರ್ಯ ವಂದನೆ; ವಿಡಿಯೊ ನೋಡಿ

Cristiano Ronaldo
ಕ್ರೀಡೆ2 hours ago

Cristiano Ronaldo: ಕಿಂಗ್ಸ್ ಕಪ್ ಫೈನಲ್​ನಲ್ಲಿ ಸೋಲು; ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ಟಿಯಾನೊ ರೊನಾಲ್ಡೊ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌