Dollu Kannada Movie | ಡೊಳ್ಳು ಸಿನಿಮಾದ ಮಾಯಾನಗರಿ ಹಾಡು ಬಿಡುಗಡೆ ಮಾಡಿದ ಡಾಲಿ ಧನಂಜಯ್‌ - Vistara News

ಸಿನಿಮಾ

Dollu Kannada Movie | ಡೊಳ್ಳು ಸಿನಿಮಾದ ಮಾಯಾನಗರಿ ಹಾಡು ಬಿಡುಗಡೆ ಮಾಡಿದ ಡಾಲಿ ಧನಂಜಯ್‌

ಪವನ್‌ ಒಡೆಯರ್‌ ನಿರ್ಮಾಣದ ಡೊಳ್ಳು ಸಿನಿಮಾದ (Dollu Kannada Movie) ಮೊದಲ ಹಾಡು ಬಿಡುಗಡೆಗೊಂಡಿದೆ. ಇದೇ ಆಗಸ್ಟ್‌ 26ರಂದು ಚಿತ್ರ ತೆರೆಗೆ ಬರಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಕನ್ನಡ ಚಿತ್ರರಂಗದ ನಿರ್ದೇಶಕ ಪವನ್ ಒಡೆಯರ್ ಡೊಳ್ಳು ಸಿನಿಮಾದ (Dollu Kannada Movie) ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿ ಹೆಜ್ಜೆ ಇಟ್ಟಿದ್ದಾರೆ. ಇದು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಒಡಲಿಗೆ ಹಾಕಿಕೊಂಡಿರುವುದಲ್ಲದೇ, ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಭಾರಿ ಮೆಚ್ಚುಗೆ ಪಡೆದಿರುವ ಡೊಳ್ಳು ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ.

ನಟರಾಕ್ಷಸ ಡಾಲಿ ಧನಂಜಯ್ ಮಾಯಾನಗರಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ತಾವು ಬೆಂಗಳೂರಿಗೆ ಬಂದ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ನಾಯಕನ ಕಣ್ಣಲ್ಲಿ ಮಾಯಾನಗರಿ ಸೊಬಗನ್ನು ತೆರೆದಿಡುವ ಈ ಹಾಡಿಗೆ ಪ್ರದ್ಯುಮ್ನ ನರಹಳ್ಳಿ ಪ್ರಾಸಬದ್ಧ ಪದಪುಂಜಗಳನ್ನು ಪೋಣಿಸಿ ಸಾಹಿತ್ಯ ಬರೆದಿದ್ದಾರೆ. ನಿರ್ದೇಶಕ ಸಾಗರ್ ಪುರಾಣಿಕ್ ಧ್ವನಿಯಾಗಿದ್ದಾರೆ. ಈ ಮೂಲಕ ಸಾಗರ್ ಗಾಯಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ.

ಇದನ್ನೂ ಓದಿ | 68th National Film Awards | ಕನ್ನಡದ ಡೊಳ್ಳು ಮತ್ತು ತಲೆದಂಡಕ್ಕೆ ಪ್ರಶಸ್ತಿಯ ಗರಿ

ಜನಪದ ಕಲೆ ಡೊಳ್ಳಿನ ಸುತ್ತಾ ಸಾಗುವ ಕಥಾಹಂದರ ಹೊಂದಿರುವ ಸಿನಿಮಾಗೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ಒಡೆಯರ್ ಮೂವೀಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸಿದ್ದಾರೆ.

ನಿಧಿ ಹೆಗ್ಡೆ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರತ್ ಮುಂತಾದ ಕಲಾವಿದರು ನಟಿಸಿದ್ದಾರೆ. ಶ್ರೀನಿಧಿ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಳತ್ತಿ ಅವರ ಕ್ಯಾಮೆರಾ ಚಿತ್ರಕ್ಕಿದೆ. ಈ ಚಿತ್ರ ಆಗಸ್ಟ್‌ 26ರಂದು ತೆರೆಗೆ ಬರಲಿದೆ.

ಇದನ್ನೂ ಓದಿ | Dollu Kannada Movie | ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Manvita Kamath: ‘ಟಗರು ಪುಟ್ಟಿʼ ಮಾನ್ವಿತಾದ್ದು ಲವ್ ಮ್ಯಾರೇಜ್? ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ!

Manvita Kamath: ಮಾನ್ವಿತಾ ಕಾಮತ್‌ ಅವರ ಹಳದಿ ಶಾಸ್ತ್ರ ಏಪ್ರಿಲ್ 29ರಂದು ನಡೆಯಲಿದೆ. ಸಂಗೀತ ಕಾರ್ಯಕ್ರಮ ಮತ್ತು ಎಂಗೇಜ್‌ಮೆಂಟ್ ಏಪ್ರಿಲ್ 30ರಂದು ನಡೆಯಲಿದೆ ಎಂದು ಮಾನ್ವಿತಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.ಕನ್ನಡ ಚಿತ್ರರಂಗದ ಕಲಾವಿದರಿಗಾಗಿ ಗೆಟ್​​ ಟುಗೆದರ್ ಮಾಡುವ ಯೋಜನೆ ಇದೆ’ ಎಂದು ಮಾನ್ವಿತಾ ಹೇಳಿದ್ದಾರೆ.

VISTARANEWS.COM


on

Manvita Kamath Marriage Details Future Husband Arun
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ (Manvita Kamath) ಅವರು ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಅವರನ್ನು ಕೈಹಿಡಿಯುತ್ತಿದ್ದಾರೆ. ಮೇ 1ರಂದು ಚಿಕ್ಕಮಗಳೂರು ಜಿಲ್ಲೆಯ ಕಳಸದ ವೆಂಕಟರಮಣ ದೇವಸ್ಥಾನದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಿದೆ. ಅರುಣ್ ಒಬ್ಬ ಐಟಿ ಪ್ರೊಫೆಶನಲ್ ಮತ್ತು ಮ್ಯೂಸಿಕ್ ಪ್ರೊಡ್ಯೂಸರ್. ಏಪ್ರಿಲ್ 29ರಂದು ಹಳದಿ ಶಾಸ್ತ್ರ ನಡೆಯಲಿದೆ. ಸಂಗೀತ ಕಾರ್ಯಕ್ರಮ ಮತ್ತು ಎಂಗೇಜ್‌ಮೆಂಟ್ ಏಪ್ರಿಲ್ 30ರಂದು ನಡೆಯಲಿದೆ ಎಂದು ಮಾನ್ವಿತಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮದುವೆ ಬಗ್ಗೆ ನಟಿ ಮಾಧ್ಯಮದ ಮುಂದೆ ಹಲವು ವಿಚಾರಗಳನ್ನು ಹೇಳಿದರು. ʻʻಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್ʼʼ ಎಂದರು. ಇದು ಲವ್ ಮ್ಯಾರೇಜ್ ಅಲ್ಲ ಎಂದು ನಟಿ ಮಾನ್ವಿತಾ ಕಾಮತ್ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಮ್ಮದು ಅರೇಂಜ್ಡ್ ಮ್ಯಾರೇಜ್. ಮುಂದಿನ 3 ತಿಂಗಳು ಶುಭ ಮುಹೂರ್ತ ಇರಲಿಲ್ಲ. ಹೀಗಾಗಿ, ಮೇ 1ಕ್ಕೆ ಮದುವೆ ಆಗುತ್ತಿದ್ದೇವೆ. ಕನ್ನಡ ಚಿತ್ರರಂಗದ ಕಲಾವಿದರಿಗಾಗಿ ಗೆಟ್​​ ಟುಗೆದರ್ ಮಾಡುವ ಯೋಜನೆ ಇದೆ’ ಎಂದು ಮಾನ್ವಿತಾ ಹೇಳಿದ್ದಾರೆ. ಮಾತ್ರವಲ್ಲ ʻಮದುವೆ ಬಳಿಕವೂ ಸಿನಿಮಾ ಮಾಡುತ್ತೇನೆ. ವೈಯಕ್ತಿಕ ಬೇರೆ, ಪ್ರೊಫೆಷನಲ್ ಬೇರೆ. ಅದನ್ನು ಮಿಕ್ಸ್ ಅಪ್ ಮಾಡಲ್ಲʼʼಎಂದರು ಮಾನ್ವಿತಾ.

ಇದನ್ನೂ ಓದಿ: Manvita Kamath: ‘ಟಗರು ಪುಟ್ಟಿʼಗೆ ಗಂಡು ಹುಡುಕಿದ್ದು ಯಾರು? ಮದುವೆ ಸ್ಥಳದ ಮಾಹಿತಿ ಇಲ್ಲಿದೆ ನೋಡಿ!

ಇನ್ನು ಅರುಣ್‌ ಕೂಡ ಮಾನ್ವಿತಾ ಅವರು ಮದುವೆ ಬಳಿಕ ಸಿನಿಮಾ ಮಾಡಿದರೂ ಯಾವುದೇ ಅಭ್ಯಂತರ ಇಲ್ಲ ಎಂದಿದ್ದಾರೆ. ಮೈಸೂರಿನಲ್ಲಿ ಅರುಣ್ ಎಂಜಿನಿಯರಿಂಗ್ ಮಾಡಿದ್ದಾರೆ. ಅವರಿಗೆ ಸಿನಿಮಾ ರಂಗದಲ್ಲಿ ಹೆಚ್ಚು ಆಸಕ್ತಿ ಇಲ್ಲವಂತೆ.

ಮಾನ್ವಿತಾ ಮದುವೆಯಾಗುತ್ತಿರುವ ಅರುಣ್ ಕುಮಾರ್ ಮೈಸೂರಿನವರು. ಕಳಸದಲ್ಲಿಯೇ ಯಾಕೆ ಮದುವೆಯಾಗುತ್ತಿದ್ದೀರಾ ಎಂಬ ಪ್ರಶ್ನೆಗೆ ಮಾನ್ವಿತಾ ಮಾತನಾಡಿ ʻʻನಾನು ಹತ್ತನೇ ತರಗತಿವರಗೆ ಕಳಸದಲ್ಲೇ ಕಲಿತದ್ದು. ಈ ಊರಿನೊಂದಿಗೆ ನನಗೆ ನಂಟಿದೆ, ಅಪ್ಪ- ಅಮ್ಮನ ಜೊತೆ ಇಲ್ಲೇ ವಾಸವಿದ್ದೆ. ಹಾಗಾಗಿ ಮದುವೆ ಇಲ್ಲೇ ಆಗುವುದರ ಬಗ್ಗೆ ಅರುಣ್ ಮತ್ತು ಅವರ ಪೋಷಕರಿಗೆ ತಿಳಿಸಿದಾಗ ಅವರು ಖುಷಿಯಿಂದಲೇ ಒಪ್ಪಿದರು.ʼʼಎಂದರು.

ಇದನ್ನೂ ಓದಿ: Manvita Kamath: ʻಟಗರು ಪುಟ್ಟಿʼಗೆ ಕಂಕಣ ಭಾಗ್ಯ ಕೂಡಿ ಬಂತು! ವರ ಯಾರು?

`ಕೆಂಡಸಂಪಿಗೆ‘ (kendasampige Cinema Kannada) ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಹೆಜ್ಜೆ ಇಟ್ಟು ಸಕ್ಸೆಸ್‌ ಫುಲ್ ನಟಿಯಾಗಿ ಹೊರಹೊಮ್ಮಿರುವವರು ಮಾನ್ವಿತಾ ಕಾಮತ್ (Manvita Kamath). ಆರ್ ಜೆಯಾಗಿದ್ದ ಮಾನ್ವಿತಾ ಅವರು ದುನಿಯಾ ಸೂರಿ ನಿರ್ದೇಶನದ ʻಕೆಂಡಸಂಪಿಗೆʼ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಬಲಗಾಲಿಟ್ಟರು. ಬಳಿಕ ಶಿವಣ್ಣನ ʻಟಗರುʼ ಸಿನಿಮಾದಲ್ಲಿ ಬಣ್ಣ ಹಚ್ಚಿ ʻಟಗರು ಪುಟ್ಟಿʼಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದರು. ಚೌಕ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮಾನ್ವಿತಾ. ಸದ್ಯ ಕನ್ನಡ ಮತ್ತು ಮರಾಠಿಯಲ್ಲಿ ನಿರ್ಮಾಣವಾಗಿರುವ ʻರಾಜಸ್ತಾನ ಡೈರೀಸ್‌ʼ ಮತ್ತು ʻಹ್ಯಾಪಿಲಿ ಮ್ಯಾರೀಡ್‌ʼ ಸಿನಿಮಾಗಳಲ್ಲಿಯೂ ನಟಿಸಿದ್ದು, ತೆರೆಗೆ ಬರಬೇಕಿದೆ.

Continue Reading

ಬೆಂಗಳೂರು

Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

Film festival: ಮೇ 4 ಮತ್ತು 5ರಂದು‌ ಬೆಂಗಳೂರಿನ ಭಾರತೀಯ ವಿದ್ಯಾಭವನ ಹಾಗೂ ಸುಚಿತ್ರ ಫಿಲ್ಮ್‌ ಸೊಸೈಟಿಯಲ್ಲಿ ಖ್ಯಾತ ನಟ, ನಿರ್ದೇಶಕ ಗುರುದತ್‌ ಅವರ ಪ್ಯಾಸಾ, ಕಾಗಜ್‌ ಕೆ ಫೂಲ್‌, Mr&Mrs 55, ಆರ್‌ ಪಾರ್‌ ಚಿತ್ರಗಳ ಪ್ರದರ್ಶನ ನಡೆಯಲಿದೆ. ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್‌ ಮಾಧ್ಯಮ ಸಹಯೋಗ ನೀಡಿದೆ.

VISTARANEWS.COM


on

Film Festival
Koo

ಬೆಂಗಳೂರು: ರೋಟರಿ ನೀಡೀ ಹಾರ್ಟ್‌ ಫೌಂಡೇಶನ್‌ ವತಿಯಿಂದ ಮೇ 4 ಮತ್ತು 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ (Film festival) ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಗುರುದತ್‌ ಅವರ ಚಲನಚಿತ್ರಗಳ ಕಲೆ ಮತ್ತು ಆತ್ಮಾವಲೋಕನ ನಡೆಯಲಿದೆ.

ಭಾರತೀಯ ವಿದ್ಯಾಭವನದಲ್ಲಿ ಮೇ 4ರಂದು ಬೆಳಗ್ಗೆ 10ಗಂಟೆಯಿಂದ ವಿ.ಕೆ.ಮೂರ್ತಿಯವರ ಛಾಯಾಗ್ರಹಣ ಕುರಿತು ಜಿ.ಎಸ್‌.ಭಾಸ್ಕರ್‌ ಅವರ ಸಂವಾದ ಇರಲಿದೆ. ಭಾರತೀಯ ವಿದ್ಯಾಭವನ ಹಾಗೂ ಸುಚಿತ್ರ ಫಿಲ್ಮ್‌ ಸೊಸೈಟಿಯಲ್ಲಿ ಬೆಳಗ್ಗೆ 10ಗಂಟೆಯಿಂದ ಖ್ಯಾತ ನಟ, ನಿರ್ದೇಶಕ ಗುರುದತ್‌ ಅವರ ಪ್ಯಾಸಾ, ಕಾಗಜ್‌ ಕೆ ಫೂಲ್‌, Mr&Mrs 55, ಆರ್‌ ಪಾರ್‌ ಚಿತ್ರಗಳ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್ ಮಾಧ್ಯಮ ಸಹಯೋಗ ನೀಡಿದೆ.

ನಿರ್ಗತಿಕರು ಹಾಗೂ ಬಡವರ ಹೃದಯ ಶಸ್ತ್ರಚಿಕಿತ್ಸೆಗಳಿಗೆ ನೆರವಾಗುವ ಉದ್ದೇಶದಿಂದ ರೋಟರಿ ನೀಡೀ ಹಾರ್ಟ್‌ ಫೌಂಡೇಶನ್‌ ಈ ಕಾರ್ಯಕ್ರಮ ಆಯೋಜಿಸಿದ್ದು, ಪ್ರವೇಶದ ಡೋನರ್‌ ಪಾಸ್‌ಗಳ ದರ 2000 ರೂ., 1500 ರೂ. ಹಾಗೂ 800 ರೂ., ಡೆಲಿಗೇಟ್‌ ಪಾಸ್‌ 500 ರೂ. ಇರಲಿದೆ.

ಸಂಗೀತ ರಸ ಸಂಜೆ

ಭಾರತೀಯ ವಿದ್ಯಾಭವನದಲ್ಲಿ ಶನಿವಾರ (ಮೇ 4ರಂದು) ಸಂಜೆ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ. ನಿರ್ವಾಹಕರಾದ ನರಸಿಂಹನ್‌ ಕಣ್ಣನ್‌, ಶಾರದಾ ಶೆನೊಯ್‌, ಗಾಯಕರಾದ ರಾಮ ತೀರಥ್‌, ಸಮನ್ವಿತಾ ಶರ್ಮಾ, ಶ್ರುತಿ ಬಿಡೆ, ಗೋವಿಂದ್‌ ಕರ್ನೂಲ್‌, ನರಸಿಮ್ಮನ್‌ ಕಣ್ಣನ್‌, ವಾದ್ಯ ವೃಂದ ಕಲಾವಿದರಾದ ಪ್ರದೀಪ್‌ ಪಾಟ್ಕರ್‌ ಮತ್ತು ಸಂಘವು ಕಾರ್ಯಕ್ರಮ ನಡೆಸಿಕೊಡಲಿದೆ. ಕಾರ್ಯಕ್ರಮದ ಡೋನರ್‌ ಪಾಸ್‌ ದರ 2000 ರೂ., 1500 ರೂ. ಹಾಗೂ 800 ರೂ. ಇದೆ.

ಕಾರ್ಯಕ್ರಮಕ್ಕೆ ಆಗಮಿಸುವವರು ಪಾಸ್‌ಗಳಿಗಾಗಿ ರೋ.ಮನೋಜ್‌ ಅಗರ್ವಾಲ್-9845012716‌, ರೋ. ಹರಿ ಪಬ್ಬತ್ತಿ-9663305911, ರೋ.ರಾಜಾರಾಂ ಕೃಷ್ಣಮೂರ್ತಿ-9980009398 ಸಂಪರ್ಕಿಸಬಹುದು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಬಾಲಿವುಡ್

Parineeti Chopra: ವೃತ್ತಿ ಜೀವನದ ಆರಂಭಿಕ ದಿನಗಳನ್ನು ನೆನೆದು ಭಾವುಕರಾದ ಪರಿಣಿತಿ ಚೋಪ್ರಾ!

Parineeti Chopra: ರಾಜ್ ಶಾಮಾನಿ ಅವರೊಂದಿಗಿನ ಪಾಡ್‌ಕಾಸ್ಟ್‌ ಚರ್ಚೆಯಲ್ಲಿ ನಟಿ ತನ್ನ ವೃತ್ತಿಜೀವನದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. ಆರಂಭದಲ್ಲಿ ಅಷ್ಟಾಗಿ ಹಣ ಗಳಿಸಿರಲಿಲ್ಲ ಎಂದು ಬಹಿರಂಗಪಡಿಸಿದರು. ರಾಜ್ ಶಾಮಾನಿ ಅವರೊಂದಿಗಿನ ಪಾಡ್‌ಕಾಸ್ಟ್‌ ಚರ್ಚೆಯಲ್ಲಿ ನಟಿ ತನ್ನ ವೃತ್ತಿಜೀವನದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಐದನೇ ಚಿತ್ರದ ಬಳಿಕ ನಟಿ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ನಟಿ ಪರಿಣಿತಿ ಚೋಪ್ರಾ (parineeti chopra) ಅವರು ಈ ಸಿನಿಮಾದಲ್ಲಿ ಅಮರ್ ಜೋತ್ ಪಾತ್ರ ಮಾಡಿದ್ದಾರೆ. ದಿವಂಗತ ಗಾಯಕ ಅಮರ್ ಸಿಂಗ್ ಚಮ್ಕಿಲಾ ಮತ್ತು ಅವರ ಪತ್ನಿ ಅಮರಜೋತ್ ಕೌರ್ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಇದು.

VISTARANEWS.COM


on

Parineeti Chopra talks about initial struggles in the Industry
Koo

ಬೆಂಗಳೂರು: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ (Parineeti Chopra) ಅವರು ತಮ್ಮ ವೃತ್ತೀ ಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹೋರಾಟ ಜೀವನ ನಡೆಸಿರುವುದಾಗಿ ಪಾಡ್‌ಕಾಸ್ಟ್‌ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಐದನೇ ಚಿತ್ರದ ಬಳಿಕ ನಟಿ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ರಾಜ್ ಶಾಮಾನಿ ಅವರೊಂದಿಗಿನ ಪಾಡ್‌ಕಾಸ್ಟ್‌ ಚರ್ಚೆಯಲ್ಲಿ ನಟಿ ತನ್ನ ವೃತ್ತಿಜೀವನದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. ಆರಂಭದಲ್ಲಿ ಅಷ್ಟಾಗಿ ಹಣ ಗಳಿಸಿರಲಿಲ್ಲ ಎಂದು ಬಹಿರಂಗಪಡಿಸಿದರು.

ಪರಿಣಿತಿ ಮಾತನಾಡಿ, “ನಾನು ತುಂಬಾ ಶ್ರೀಮಂತ ಹಿನ್ನೆಲೆಯಿಂದ ಬಂದವಳಲ್ಲ. ನಾನು ತುಂಬಾ ಸರಳ, ಮಧ್ಯಮ ವರ್ಗದ ಹುಡುಗಿ. ಆಗ ನನಗೆ ಬಾಲಿವುಡ್ ಹೇಗೆ ಎಂಬುದು ಅರ್ಥವಾಗುತ್ತಿರಲಿಲ್ಲ. ಮುಂಬೈನಲ್ಲಿ ಜನರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ನನಗೆ ನಿಜವಾಗಿ ತಿಳಿದಿರಲಿಲ್ಲ. ದೊಡ್ಡ ವರ್ಗದ ಸ್ನೇಹಿತರು ನನಗೆ ಗೊತ್ತಿರಲಿಲ್ಲ. ನನಗೆ ನನ್ನಲ್ಲಿ ತರಬೇತುದಾರರಾಗಲಿ, ಸ್ಟೈಲಿಸ್ಟ್‌ಗಳಾಗಲಿ ಆಗ ಇರಲಿಲ್ಲ. ಆಗ ತಿಂಗಳಿಗೆ ಸುಮಾರು 2 ಲಕ್ಷ ರೂ, ಕೊಟ್ಟು ತರಬೇತುದಾರರನ್ನು ನೇಮಿಸಿಕೊಳ್ಳುವಂತೆ ಯಾರೋ ಒಬ್ಬರು ಶಿಫಾರಸು ಮಾಡಿದ್ದರು. ಆದರೆ ಆಗ ನನ್ನ ಬಳಿ ಅಷ್ಟಾಗಿ ಹಣ ಇರುತ್ತಿರರಿಲ್ಲ. ಮೂರನೇ ಚಿತ್ರ ಮಾಡುವಾಗ ನನ್ನ ಸಂಭಾವನೆ 4 ಲಕ್ಷ ರೂ. ಆಗಿತ್ತು. ಆ ಸಮಯದಲ್ಲಿ ನನಗೆ ಕೆಲವರು ಯಾಕೆ ಫಿಟ್‌ನೆಸ್‌ ಟ್ರೈನರ್‌ಗಳನ್ನು ನೀವು ನೇಮಿಸಿಕೊಳ್ಳುತ್ತಿಲ್ಲ? ಎಂದು ಕೇಳುತ್ತಿದ್ದರು. ಆಗ ನನಗೆ ಕೇವಲ 5 ಲಕ್ಷ ರೂ. ಸಂಭಾವನೆ ಆಗಿತ್ತು ಎಂದು ಹೇಳಿದ್ದೆ. ಆ ಬಳಿಕ ಅವರು ನನ್ನ ಸ್ಥಿತಿ ಗತಿ ತಿಳಿದುಕೊಂಡ ನಂತರ ಇವೆಲ್ಲವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದರೆ ನೀವು ವೃತ್ತಿಯಲ್ಲಿ ಇರಬಾರದು ಎಂದು ಹೇಳಿದರುʼʼಎಂದು ನಟಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Lok Sabha Election 2024: ರಾಮಕೃಷ್ಣ ಹೆಗಡೆಯಂತೆ ಲಿಂಗಾಯತರ ಪರ ಗಟ್ಟಿಯಾಗಿ ನಿಂತ ನಾಯಕ ಪ್ರಲ್ಹಾದ್ ಜೋಶಿ ಎಂದ ಯತ್ನಾಳ್

ಸಿನಿಮಾ ವಿಚಾರಕ್ಕೆ ಬಂದರೆ, ಪರಿಣಿತಿ ಪ್ರಸ್ತುತ ದಿಲ್ಜಿತ್ ದೋಸಾಂಜ್ ಅವರೊಂದಿಗೆ ʻಅಮರ್ ಸಿಂಗ್ ಚಮ್ಕಿಲಾʼ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾ ಇದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ಗೆ ಆಗುತ್ತಿದೆ. ಸಿನಿಮಾ ಭಾರಿ ಮೆಚ್ಚುಗೆ ಪಡೆದುಕೊಂಡಿದೆ.

ನಟಿ ಪರಿಣಿತಿ ಚೋಪ್ರಾ (parineeti chopra) ಅವರು ಈ ಸಿನಿಮಾದಲ್ಲಿ ಅಮರ್ ಜೋತ್ ಪಾತ್ರ ಮಾಡಿದ್ದಾರೆ. ದಿವಂಗತ ಗಾಯಕ ಅಮರ್ ಸಿಂಗ್ ಚಮ್ಕಿಲಾ ಮತ್ತು ಅವರ ಪತ್ನಿ ಅಮರಜೋತ್ ಕೌರ್ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಇದು.

ಏನಿದು ಕಥೆ?

ತನ್ನ ಹಾಡುಗಳಿಂದಲೇ ಜನಪ್ರಿಯರಾದ ಗಾಯಕ, ಸಂಗೀತಗಾರ ಅಮರ್‌ ಸಿಂಗ್‌ ಚಮ್ಕಿಲಾ ಅವರ ಜೀವನಗಾಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. 1980 ರ ದಶಕದಲ್ಲಿ ಜನಪ್ರಿಯತೆ ಪಡೆದ ʻಪಂಜಾಬ್‌ ಎಲ್ವಿಸ್‌ʼ ಎಂದೇ ಖ್ಯಾತಿ ಪಡೆದ ಚಮ್ಕಿಲಾರ ಬದುಕಿನ ಕಥೆಯಿದು . ಈ ಗಾಯಕ ತನ್ನ 27ನೇ ವಯಸ್ಸಿನಲ್ಲಿಯೇ ಕೊಲೆಯಾದರು. ಕಾಂಟ್ರವರ್ಸಿಯಲ್‌ ಹಾಡುಗಳು ಅಮರ್‌ ಸಿಂಗ್‌ ಚಮ್ಕಿಲಾ ಸಾವಿಗೆ ಕಾರಣವಾಗಿರಬಹುದು ಎಂದು ವರದಿಯಾಗಿದೆ.

Continue Reading

ಸಿನಿಮಾ

The Rulers: ಅಂಬೇಡ್ಕರ್ ಹೆಸರಲ್ಲಿ ಸಿನಿಮಾ ಮಾಡಿದ್ದಕ್ಕೆ` ರೌಡಿ ಶೀಟರ್ʼ ಪಟ್ಟ ಕೊಡ್ತಾ ಕಾಂಗ್ರೆಸ್ ಸರ್ಕಾರ? ನಟ ಹೇಳಿದ್ದೇನು?

The Rulers: Power of Constitution: ದಿ ರೂಲರ್ಸ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರುವುದು ಕೋಲಾರದ ಡಾ. ಕೆ.ಎಮ್ ಸಂದೇಶ್. ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಗಾಗಿ 350ಕ್ಕೂ ಹೆಚ್ಚು ಹೋರಾಟಗಳನ್ನ ಮಾಡಿ ಗೆದ್ದಿರೋ, 350ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನ ಮಾಡಿರೋ ಇವರು ತಮ್ಮ ಬದುಕಿನಲ್ಲೇ ನಡೆದ ಘಟನೆಗಳನ್ನಿಟ್ಟುಕೊಂಡು ಕಮರ್ಷಿಯಲ್ಲಾಗಿ ಸಿನಿಮಾ ಮಾಡಿದ್ದಾರೆ.

VISTARANEWS.COM


on

Congress government notice to The Rulers: Power of Constitution hero
Koo

ಬೆಂಗಳೂರು: ʻದ ರೂಲರ್ಸ್ʼ Power of Constitution (The Rulers: Power of Constitution) ಇದು ಸ್ಯಾಂಡಲ್ ವುಡ್ (Sandalwood Movie) ಅಂಗಳದಲ್ಲಿ ಸದ್ದಿಲ್ಲದೇ ಸಿದ್ಧವಾಗಿರುವ ಹೊಸ ಸಿನಿಮಾ. ಕಾಲಿವುಡ್‌ನ ಖ್ಯಾತ ನಿರ್ದೇಶಕ, ಪೊಲ್ಲಾದವನ್‌, ಅಸುರನ್‌, ವಿಸಾರಣೈ ಚಿತ್ರಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ ವೆಟ್ರಿಮಾರನ್ (Director Vetrimaran) ಗರಡಿಯಲ್ಲಿ ನುರಿತ ಕನ್ನಡದ ಹುಡುಗರು ಕಟ್ಟಿದ ಸೂಕ್ಷ್ಮ ಸಂವೇದನೆಗಳ (Sensitive Movie) ಸಿನಿಮಾ (The Rulers Movie). ಸಂವಿಧಾನದ ಶಕ್ತಿಯನ್ನು ತೋರುವ ಚಲನಚಿತ್ರ ʻದ ರೂಲರ್ಸ್ʼ ಸಿನಿ ತಂಡ ಈಗ ತೊಂದರೆಯಲ್ಲಿದೆ. ಮೊದಲ ಭಾರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿಜೃಂಭಣೆಯಿಂದ ತೋರಿಸುವ ಪ್ರಯತ್ನ ಮಾಡಿರುವ ʻರೂಲರ್ಸ್ʼ ಚಿತ್ರದ ನಾಯಕ ನಟ ಸಂದೇಶ್ ಅವರ ಮೇಲೆ ಕಾಂಗ್ರೆಸ್ ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ಈ ಬಗ್ಗೆ ನಟ ಸಂದೇಶ್ ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.

ವೆಟ್ರಿಮಾರನ್‌ ಅವರ ತಂಡದಲ್ಲಿ ಕೆಲಸ ಮಾಡಿದ್ದ ಹುಡುಗರೆಲ್ಲಾ ಸೇರಿ ಚೊಚ್ಚಲ ಕನ್ನಡ ಸಿನಿಮಾ ಮಾಡಿದ್ದಾರೆ. ʻದ ರೂಲರ್ಸ್ʼ ಟೈಟಲ್‌ಗೆ Power of Constitution ಅನ್ನೋ ಅಡಿ ಬರಹವಿದೆ. ಹೊಸ ವರ್ಷದ ಮೊದಲ ದಿನ ದ ರೂಲರ್ಸ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು, ಅದು ಸಾಕಷ್ಟು ಸೌಂಡ್‌ ಮಾಡಿತ್ತು. ಕೋಲಾರ ಜಿಲ್ಲೆಯಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳನ್ನಾಧರಿಸಿ ಮಾಡಿರುವ ಕಥೆ. ಸಂವಿಧಾನವೊಂದು ನೀಡುವ ಆಸರೆ ಮತ್ತು ಶಕ್ತಿ ಎಂಥಹದ್ದು, ಅದು ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥಹದ್ದು ಅನ್ನೋ ವಿಚಾರವನ್ನ ಮೂಲವಾಗಿಸಿಕೊಂಡು ದ ರೂಲರ್ಸ್ ಚಿತ್ರವನ್ನ ಮಾಡಲಾಗಿದೆ.

ಇದನ್ನೂ ಓದಿ: Anupama Parameswaran: ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ ಅನೌನ್ಸ್‌: ನಟಿಯ ಲುಕ್‌ಗೆ ಫ್ಯಾನ್ಸ್‌ ಫಿದಾ!

ತೊಂದರೆಯಲ್ಲಿ ಚಿತ್ರತಂಡ

ತಂಡ ಸದ್ಯ ತೊಂದರೆಯಲ್ಲಿದೆ. ಕನ್ನಡ ಸಿನಿಮಾ ರಂಗದಲ್ಲಿ ಮೊದಲ ಭಾರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿಜೃಂಭಣೆಯಿಂದ ತೋರಿಸುವ ಪ್ರಯತ್ನ ಮಾಡಿರುವದ ʻದ ರೂಲರ್ಸ್ʼ ಚಿತ್ರದ ನಾಯಕ ನಟ ಸಂದೇಶ್ ಅವರ ಮೇಲೆ ಕಾಂಗ್ರೆಸ್ ಸರ್ಕಾರ ನೋಟಿಸ್‌ ಜಾರಿ ಮಾಡಿದೆ ಎಂದು ಚಿತ್ರತಂಡ ಆರೋಪಿಸಿದೆ. ಸಂದೇಶ್ ಈ ಬಗ್ಗೆ ಮಾತನಾಡಿ ʻʻನನ್ನ ಜನರ ಪರವಾಗಿ 341 ಯಶಸ್ವಿ ಹೋರಾಟಗಳು, 151 ಅಂತರ್ಜಾತೀಯ ವಿವಾಹಗಳನ್ನು ಮಾಡಿ, ಹಲವು ಮಕ್ಕಳಿಗೆ ವಿಧ್ಯಾಭ್ಯಾಸ, ನೂರಾರು ಗುಡಿಸಲು ವಾಸಿಗಳಿಗೆ ಮನೆ ನಿರ್ಮಿಸಿಕೊಟ್ಟಿದ್ದು, ಸಾವಿರ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇನೆ. ನನ್ನ ಜನರ ಪರ ಹೋರಾಟ ಮಾಡುವ ಸಂದರ್ಭಗಳಲ್ಲಿ ನನ್ನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ನ್ಯಾಯಲಯದಲ್ಲಿ ಪ್ರಕರಣಗಳಲ್ಲಿ ನಮಗೆ ಜಯ ಸಿಕ್ಕಿದೆ. ಇಲ್ಲಿಯ ತನಕ ನಮ್ಮ‌ ಜನರ ಪರವಾಗಿ ಹೋರಾಟ ಮಾಡಿದ್ದೇನೆ ಹೊರೆತು ಯಾವತ್ತು ಜನರಿಗೆ ತೊಂದರೆ ಕೊಟ್ಟಿಲ್ಲ. ಇತ್ತಿಚಿಗೆ ಒಂದು ವರ್ಷದಿಂದ ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿ ಅಡಿಯಲ್ಲಿ ಚಲನಚಿತ್ರ ಮೂಡಿ ಬಂದಿದ್ದು, ನಮ್ಮ ಸಿನಿಮಾ ಆಡಿಯೋ ಕಾರ್ಯಕ್ರಮ ಮಾರ್ಚ್ 17 ರಂದು ಮಾಡಿದೆವು. , ಇದನ್ನು ನೋಡಿ ಕೋಪಿಸಿಕೊಂಡ ಮನುವಾದಿಗಳು ಮಾರ್ಚ್ 25ರಂದ ನನಗೆ ನೋಟಿಸ್ ಸಹ ಜಾರಿ ಮಾಡಿ, ರೌಡಿ ಪಟ್ಟ ಕೊಟ್ಟಿದ್ದಾರೆ. ಅದು ಕೂಡ ನಮ್ಮ ಸರ್ಕಾರದಿಂದಲೇ ಹೀಗೆ ಮಾಡಿರುವುದು ಮನಸ್ಸಿಗೆ ನೋವುಂಟು ಮಾಡಿದೆʼʼ ಎಂದು ವಿಡಿಯೊ ಶೇರ್‌ ಮಾಡಿಕೊಂಡಿದ್ದಾರೆ.

ಸಿನಿಮಾದಲ್ಲಿ ಏನಿದೆ?

ಈ ಸಿನಿಮಾದಲ್ಲಿ ಇಲ್ಲಿ ಮೇಲೂ ಕೀಳು ಅನ್ನುವ ಸಮುದಾಯಗಳ ಸಂಘರ್ಷದಲ್ಲಿ ಮರೆಯಾದ ಮಾನವೀಯತೆಯನ್ನು ಒಂದು ಕಡೆ ಬಿಂಬಿಸಿದರೆ, ಮತ್ತೊಂದು ಕಡೆ ಸಂವಿಧಾನ ಕೊಟ್ಟಿರುವ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ, ಅದರ ಶಕ್ತಿಯನ್ನು ಪ್ರದರ್ಶಿಸುವ ಮತ್ತೊಂದು ಮಜಲನ್ನು ಅನಾವರಣಗೊಳಿಸಿದ್ದಾರಂತೆ.

ದಿ ರೂಲರ್ಸ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರುವುದು ಕೋಲಾರದ ಡಾ. ಕೆ.ಎಮ್ ಸಂದೇಶ್. ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಗಾಗಿ 350ಕ್ಕೂ ಹೆಚ್ಚು ಹೋರಾಟಗಳನ್ನ ಮಾಡಿ ಗೆದ್ದಿರೋ, 350ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನು ಮಾಡಿರೋ ಇವರು ತಮ್ಮ ಬದುಕಿನಲ್ಲೇ ನಡೆದ ಘಟನೆಗಳನ್ನಿಟ್ಟುಕೊಂಡು ಕಮರ್ಷಿಯಲ್ಲಾಗಿ ಸಿನಿಮಾ ಮಾಡಿದ್ದಾರೆ.

ಇದನ್ನೂ ಓದಿ: Pavitra Naresh: ಪವಿತ್ರಾ ಲೋಕೇಶ್-ನರೇಶ್ ಪ್ರೇಮ ಕಹಾನಿ ಶುರುವಾಗಿದ್ದು ಹೇಗೆ? ’ಮತ್ತೆ ಮದುವೆ’ ಟ್ರೈಲರ್‌ ಔಟ್‌!

ಎಂ.ಎನ್.ಎಂ ಮೂವೀಸ್ ಬ್ಯಾನರ್ ನಡಿಯಲ್ಲಿ ಅಶ್ವಥ್ ಬಳಗೆರೆ ನಿರ್ಮಾಣದಲ್ಲಿ, ಉದಯ್ ಭಾಸ್ಕರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕರುಣ್ ಕೆ.ಜಿ.ಎಫ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನವ ಪ್ರತಿಭೆ ವಿಶಾಲ್, ರಿತಿಕಾ ಗೌಡ, ಕೆ.ಜಿ.ಎಫ್‌ನ ಪಠಾಣ್ ಖ್ಯಾತಿಯ ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಖುದ್ದು ಸಂದೇಶ್ ತಮ್ಮ ನೈಜ ಪಾತ್ರವನ್ನ ತಾವೇ ಮಾಡಿದ್ದಾರೆ.

ಸದ್ಯ ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್‌ ರಿಲೀಸ್‌ ಆಗಿತ್ತು. ಸೂಕ್ಷ್ಮ ವಿಚಾರವನ್ನು ನೇರವಾಗಿ ಹೇಳೋ ಪ್ರಯತ್ನ ಮಾಡಿರುವ ದ ರೂಲರ್ಸ್ ಚಿತ್ರ ವಿಶಿಷ್ಟವಾಗಿ ಪ್ರೇಕ್ಷಕರನ್ನ ಸೆಳೆಯುತ್ತಿದ್ದು, ಸಾಮಾಜಿಕವಾಗಿಯೂ ಸದ್ದು ಮಾಡುವ ಸೂಚನೆ ಕೊಡುತ್ತಿದೆ.

Continue Reading
Advertisement
ದೇಶ10 mins ago

Usman Ghani: ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಬಿಜೆಪಿ ಉಚ್ಛಾಟಿತ ನಾಯಕ ಅರೆಸ್ಟ್‌

Car Accident
ಪ್ರಮುಖ ಸುದ್ದಿ11 mins ago

Car Accident : ಯಮವೇಗದಲ್ಲಿ ಬಂದ ಇನೋವಾ ಕಾರು ಪಲ್ಟಿ, ಯುವತಿ ಸಾವು

Manvita Kamath Marriage Details Future Husband Arun
ಸ್ಯಾಂಡಲ್ ವುಡ್26 mins ago

Manvita Kamath: ‘ಟಗರು ಪುಟ್ಟಿʼ ಮಾನ್ವಿತಾದ್ದು ಲವ್ ಮ್ಯಾರೇಜ್? ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ!

state JDS secretary R A Chabusab statement In Ripponpet
ಶಿವಮೊಗ್ಗ27 mins ago

Lok Sabha Election 2024: ಅತಿ ಹೆಚ್ಚು ಮತಗಳ ಅಂತರದಿಂದ ಬಿ.ವೈ.ರಾಘವೇಂದ್ರ ಗೆಲುವು: ಆರ್.ಎ. ಚಾಬುಸಾಬ್

Narendra Modi
ಪ್ರಮುಖ ಸುದ್ದಿ30 mins ago

Narendra Modi : ಪ್ರಧಾನಿ ವಿಮಾನ ಹಾರಾಟ ಹಿನ್ನೆಲೆ; ಸಿಎಂ ವಿಮಾನಕ್ಕೆ ಬೆಳಗಾವಿಯಲ್ಲಿ ಅನುಮತಿ ನಿರಾಕರಣೆ

Lok Sabha Election 2024
ರಾಜಕೀಯ1 hour ago

Yogi Adityanath:”ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮುಸ್ಲಿಮರಿಗೆ ಬೀಫ್‌ ಸೇವನೆ ಹಕ್ಕು”- ಮತ್ತೆ ಗುಡುಗಿದ ಯೋಗಿ

Drinks for Summer
ಆರೋಗ್ಯ2 hours ago

Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

Fire Accident
ಪ್ರಮುಖ ಸುದ್ದಿ2 hours ago

Fire Accident : ಬೆಂಗಳೂರು ನಗರ ವಲಯದಲ್ಲಿ ಅರಣ್ಯಕ್ಕೆ ಬೆಂಕಿ, ಭಾರೀ ಹಾನಿ

karnataka weather forecast
ಮಳೆ3 hours ago

Karnataka Weather : ಹುಷಾರ್‌.. ನಾಲ್ಕೈದು ದಿನ ಮತ್ತಷ್ಟು ಏರಲಿದೆ ಉರಿ ಬಿಸಿಲು; ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

Narendra modi
ದೇಶ3 hours ago

Narendra Modi : ಇಂದು, ನಾಳೆ ರಾಜ್ಯದಲ್ಲಿ ಮೋದಿಯಿಂದ ಅಬ್ಬರದ ಪ್ರಚಾರ; ಬಹಿರಂಗ ಭಾಷಣದ ವಿವರ ಇಲ್ಲಿದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202417 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ21 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ3 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ3 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

ಟ್ರೆಂಡಿಂಗ್‌