Actress Leelavathi: ಇಂದು ಹಾಲು, ತುಪ್ಪ ಕಾರ್ಯ; ಲೀಲಾವತಿ ಆಪ್ತರು ಮಾತ್ರ ಭಾಗಿ - Vistara News

ಸಿನಿಮಾ

Actress Leelavathi: ಇಂದು ಹಾಲು, ತುಪ್ಪ ಕಾರ್ಯ; ಲೀಲಾವತಿ ಆಪ್ತರು ಮಾತ್ರ ಭಾಗಿ

Actress Leelavathi: ವಿನೋದ್ ರಾಜ್, ಪತ್ನಿ ಅನು, ಪುತ್ರ ಯುವರಾಜ್ ಸೇರಿ ಕುಟುಂಬದ ಆಪ್ತರು ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಲೀಲಾವತಿ ಅವರು ನಿಧನವಾಗಿ ಮೂರು ದಿನಗಳ ಪೂರ್ಣವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೂರನೇ ದಿನದ ಕಾರ್ಯ ನೆರವೇರಿಸಲಿದ್ದಾರೆ.

VISTARANEWS.COM


on

Family performs haalu tuppa rituals of Leelavathi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಿರಿಯ ನಟಿ ಲೀಲಾವತಿ ಅವರ (Actress Leelavathi) ಅಂತ್ಯ ಸಂಸ್ಕಾರ ನೆಲಮಂಗಲದ ಸೋಲದೇವನಹಳ್ಳಿಯ ತೋಟದ ಮನೆ ಬಳಿ ಕುಟುಂಬಸ್ಥರು ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ(ಡಿ.9) ಸಂಜೆ ನೆರವೇರಿತು. ಸಕಲ ಸರ್ಕಾರಿ ಗೌರವದೊಂದಿಗೆ ಹಿಂದು ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಯಿತು. ಇಂದು 11.30 ರಿಂದ 12 ಗಂಟೆಯ ಒಳಗೆ ಹಾಲುತುಪ್ಪದ ಕಾರ್ಯ ನಡೆಯಲಿದೆ. ಬಳಿಕ 11 ದಿನದ ಕಾರ್ಯ ಮಾಡಲು ನಿರ್ಧಾರ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರಷ್ಟೇ ಭಾಗಿಯಾಗುತ್ತಾರೆ. ಮಧ್ಯಾಹ್ನ 12 ಗಂಟೆಯ ನಂತರ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ವಿನೋದ್ ರಾಜ್, ಪತ್ನಿ ಅನು, ಪುತ್ರ ಯುವರಾಜ್ ಸೇರಿ ಕುಟುಂಬದ ಆಪ್ತರು ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಲೀಲಾವತಿ ಅವರು ನಿಧನವಾಗಿ ಮೂರು ದಿನಗಳ ಪೂರ್ಣವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೂರನೇ ದಿನದ ಕಾರ್ಯ ನೆರವೇರಿಸಲಿದ್ದಾರೆ.

ವಿನೋದ್‌ ಅವರು ಲೀಲಾವತಿ ಕುರಿತು ಹಲವು ವಿಚಾರಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದರು. ‘ಕಳೆದ ಹದಿನೈದು ದಿನಗಳಲ್ಲಿ ಅಮ್ಮ ಹೆಚ್ಚು ಮಾತನ್ನೇ ಆಡಿಲ್ಲ. ಅವರಿಗೆ ಸಾಧ್ಯವಾಗುತ್ತಿರಿಲಿಲ್ಲ. . ನನಗೆ ನೆನಪಿರುವಂತೆ ನೀರು ಕುಡಿಸುವಂತೆ ನನ್ನನ್ನು ಕೇಳಿದರು, ನೀರು ಕುಡಿಸಿದೆ, ನೀರು ಕುಡಿದು ಕಣ್ಣು ಮುಚ್ಚಿ ಬಿಟ್ಟರು’ ಎಂದು ನೆನಪು ಮಾಡಿಕೊಂಡಿದ್ದಾರೆ ವಿನೋದ್ ರಾಜ್.

ಪುತ್ರನ ಬಗ್ಗೆಯೂ ಮಾತನಾಡಿದ ವಿನೋದ್ ರಾಜ್, ‘‘ನನ್ನ ಪುತ್ರ ಯುವರಾಜ್ ಎಂದರೆ ಅಮ್ಮನಿಗೆ ಬಹಳ ಪ್ರೀತಿ. ಕಳೆದ ಬಾರಿ ಬಂದಿದ್ದಾಗ ಅಜ್ಜಿ ಎಂದು ಕರೆದಾಗ ಕಣ್ಣು ಬಿಟ್ಟು ನೋಡಿದ್ದರು. ಅವನನ್ನು ಚಿತ್ರರಂಗಕ್ಕೆ ತರಬೇಕೆಂಬ ಆಸೆ ಅಮ್ಮನಿಗೆ ಇರಲಿಲ್ಲ. ಆದರೆ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆಯಿತ್ತು, ಹಾಗೆಯೇ ಅವನು ಒಳ್ಳೆಯ ವಿಧ್ಯಾಭ್ಯಾಸ ಮಾಡಿದ್ದಾನೆ. ಸಾಫ್ಟ್​ವೇರ್ ಉದ್ಯೋಗ ಮಾಡುತ್ತಿದ್ದಾನೆ’’ ಎಂದಿದ್ದಾರೆ.

ಇದನ್ನೂ ಓದಿ: Actress Leelavathi: ಮಣ್ಣಲ್ಲಿ ಮಣ್ಣಾದ ಲೀಲಾವತಿ; ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ

ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಸೋಲದೇವನಹಳ್ಳಿಗೆ ಆಂಬ್ಯುಲೆನ್ಸ್‌ನಲ್ಲಿ ತರಲಾಯಿತು. ನಂತರ ವಿನೋದ್‌ ರಾಜ್‌ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ನಂತರ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಸರ್ಕಾರದ ಪರವಾಗಿ ಸಚಿವ ಕೆ.ಎಚ್‌.ಮುನಿಯಪ್ಪ ಪುಷ್ಪಗುಚ್ಛ ಸಮರ್ಪಿಸಿದರು. ಬಳಿಕ ಹಿಂದು ಧರ್ಮದ ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬಾಲಿವುಡ್

Shah Rukh Khan: ಅಲ್ಲು ಅರ್ಜುನ್ ಮಗನನ್ನು ಹಾಡಿ ಹೊಗಳಿದ ಶಾರುಖ್‌! ಅದ್ಯಾಕೆ?

ಕಳೆದ ವರ್ಷ ಶಾರುಖ್ ಖಾನ್ ಅವರ ʻಜವಾನ್ʼ ಬಿಡುಗಡೆಯಾದ ನಂತರ, ಅಲ್ಲು ಅರ್ಜುನ್ ಎಕ್ಸ್‌ ಮೂಲಕ ಹೊಗಳಿದ್ದರು. ಈಗ ಶಾರುಖ್‌ ಖಾನ್‌ ಅವರು ಅಲ್ಲು ಅರ್ಜುನ್‌ ಮಗನನ್ನು ಶ್ಲಾಘಿಸಿದ್ದಾರೆ.

VISTARANEWS.COM


on

Shah Rukh Khan's Adorable Reaction To Allu Arjun's Son
Koo

ಬೆಂಗಳೂರು: ಅಲ್ಲು ಅರ್ಜುನ್ ಅವರ ಮಗ ಅಯಾನ್ (Ayaan) ಅವರು ಶಾರುಖ್‌ (Shah Rukh Khan) ಅಭಿನಯದ ʻಡಂಕಿ; ಸಿನಿಮಾದ ʻಲುಟ್ ಪಟ್ ಗಯಾ; ಹಾಡನ್ನು ಹಾಡಿದ್ದಾರೆ. ಅಯಾನ್ ಹಾಡಿರುವ ವಿಡಿಯೊ ವೈರಲ್‌ ಆಗಿದ್ದು, ಶಾರುಖ್‌ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡು ʻನನ್ನ ಮಕ್ಕಳಿಗೆ ಶ್ರೀವಲ್ಲಿ ಹಾಡನ್ನು ಪ್ರ್ಯಾಕ್ಟಿಸ್ ಮಾಡಿಸಬೇಕಿದೆ’ ಎಂದಿದ್ದಾರೆ ಶಾರುಖ್ ಖಾನ್.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಒಂದು ದಿನದ ನಂತರ, ಸೂಪರ್‌ ಸ್ಟಾರ್‌ ಶಾರುಖ್ ಖಾನ್ ವಿಡಿಯೊವನ್ನು ರಿಪೋಸ್ಟ್‌ ಮಾಡಿಕೊಂಡಿದ್ದಾರೆ. ಶಾರುಖ್ ಖಾನ್ ಅವರು ಅಲ್ಲು ಅರ್ಜುನ್‌ರನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿ, “ಧನ್ಯವಾದ್‌. ಪುಷ್ಪ ಮತ್ತು ಬೆಂಕಿ ಎರಡೂ ಒಂದರಲ್ಲೇ ಇದೆ. ನನ್ನ ಮಕ್ಕಳಿಗೆ ಶ್ರೀವಲ್ಲಿ ಹಾಡನ್ನು ಪ್ರ್ಯಾಕ್ಟಿಸ್ ಮಾಡಿಸಬೇಕಿದೆ’ ಎಂದಿದ್ದಾರೆ ಶಾರುಖ್ ಖಾನ್. ಕ್ಲಿಪ್‌ನಲ್ಲಿ, ಅಲ್ಲು ಅರ್ಜುನ್ ಅವರ ಮಗ ಅಯಾನ್‌ ಕೈಯಲ್ಲಿ ನೀರಿನ ಬಾಟಲಿಯೊಂದಿಗೆ ಕಪ್ಪು, ಬಿಳಿ ಮತ್ತು ಹಳದಿ ಬಣ್ಣದ ಟೀ ಶರ್ಟ್‌ ಧರಿಸಿದ್ದಾರೆ. ಕಳೆದ ವರ್ಷ, ಶಾರುಖ್ ಖಾನ್ ಅವರ ʻಜವಾನ್ʼ ಬಿಡುಗಡೆಯಾದ ನಂತರ, ಅಲ್ಲು ಅರ್ಜುನ್ ಎಕ್ಸ್‌ ಮೂಲಕ ಹೊಗಳಿದ್ದರು.

ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್‌ ಸಿನಿಮಾಗೆ ಅಟ್ಲೀ ಆ್ಯಕ್ಷನ್‌ ಕಟ್‌?

ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್‌ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಪುಷ್ಪ 2: ದಿ ರೂಲ್ ಚಿತ್ರ 2024ರ ಆಗಸ್ಟ್ 15ರಂದು ಥಿಯೇಟರ್‌ಗೆ ಬರಲು ಸಿದ್ಧವಾಗಿದೆ. ಫಹಾದ್ ಫಾಸಿಲ್ ಅವರು ಎಸ್ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Darshan: ನಟ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದು!

Actor Darshan:  ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದಾಗಿದೆ. ನಗರದಲ್ಲಿ ಸಾರ್ವಜನಿಕ ಮೆರವಣಿಗೆ,ರ್‍ಯಾಲಿ ನಡೆಸಲು ಅವಕಾಶ ಇಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವ ಕಾರಣಕ್ಕೆ ಪೊಲೀಸರು ಅನುಮತಿ ನಿರಾಕರಿದ್ದಾರೆ.

VISTARANEWS.COM


on

Actor Darshan rally police deny permission
Koo

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಹಾಗೂ ನಿರ್ಮಾಪಕ ಉಮಾಪತಿ ನಡುವಿನ ವಾರ್‌ ತಾರಕ್ಕೇರಿದ್ದು ಗೊತ್ತೇ ಇದೆ. ಇದಾದ ಬಳಿಕ ಇದೆಲ್ಲದರ ನಡುವೆ ನಟ ದರ್ಶನ್ ಅಭಿಮಾನಿಗಳು ಉಮಾಪತಿ ಏರಿಯಾದಲ್ಲಿ ಬೈಕ್ ರ್‍ಯಾಲಿ ನಡೆಸಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದರು. ಆದರೀಗ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದಾಗಿದೆ. ನಗರದಲ್ಲಿ ಸಾರ್ವಜನಿಕ ಮೆರವಣಿಗೆ, ರ್‍ಯಾಲಿ ನಡೆಸಲು ಅವಕಾಶ ಇಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವ ಕಾರಣಕ್ಕೆ ಅನುಮತಿ ನಿರಾಕರಣೆ ಆಗಿದೆ.

ನಿರ್ಮಾಪಕ ಉಮಾಪತಿ ಅವರು ಹೆಚ್.ಎಸ್. ಆರ್ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಹಾಗಾಗಿ ಬೊಮ್ನನಹಳ್ಳಿಯ ಮಹಾ ಗಣಪತಿ ದೇವಸ್ಥಾನದಿಂದ ಹೆಚ್.ಎಸ್. ಆರ್ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್‌ವರೆಗೂ ಬೈಕ್ ರ್‍ಯಾಲಿ ನಡೆಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದರು. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಅನುಮತಿ ಕೋರಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ರ್‍ಯಾಲಿಗೆ ಅನುಮತಿ ನೀಡುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುವ ಕಾರಣಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇದರಿಂದ ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಇದನ್ನೂ ಓದಿ: Actor Darshan: ʻಒಂಟಿ ಸಲಗ’ ಹೆಸರಲ್ಲಿ ಬೃಹತ್ ರ‍್ಯಾಲಿ: ಪೊಲೀಸರಿಂದ ಅನುಮತಿ ಸಿಕ್ತಾ?

ಉಮಾಪತಿ ಶ್ರೀನಿವಾಸ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆ ಸಂದರ್ಭದಲ್ಲಿ ನಟ ದರ್ಶನ್ ಅವರು ಉಮಾಪತಿ ಶ್ರೀನಿವಾಸ್ ವಿರುದ್ಧವಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಉಮಾಪತಿ ಶ್ರೀನಿವಾಸ್ ಆ ಚುನಾವಣೆಯಲ್ಲಿ ಸೋತಿದ್ದರು.

ಈಗ ಮುಂದಿನ ವಿಧಾನಸಭೆ ಚುನಾವಣೆಗೆ ಅವರು ತಯಾರಾಗುತ್ತಿದ್ದಾರೆ. ಹೀಗಾಗಿ ಉಮಾಪತಿ ಶ್ರೀನಿವಾಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಲೆಂದೇ ಈ ಬೈಕ್ ರ್‍ಯಾಲಿ ಆಯೋಜಿಸಲಾಗಿತ್ತು.

Continue Reading

ಸಿನಿಮಾ

Siddharth Bodke: ಮರಾಠಿ ನಟಿ ತಿತೀಕ್ಷಾ- ʻದೃಶ್ಯಂʼ ನಟ ಸಿದ್ಧಾರ್ಥ್ ಬೋಡ್ಕೆ ಜೋಡಿಯ ಅದ್ಧೂರಿ ಮದುವೆ ಇಂದು

Siddharth Bodke: ಫೆಬ್ರವರಿ 25ರಂದು ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಇಂದು (ಫೆಬ್ರವರಿ 26) ಅದ್ಧೂರಿಯಾಗಿ ಮದುವೆ ನಡೆಯಲಿದೆ. ತಿತೀಕ್ಷಾ ಈಗಾಗಲೇ ನಿಶ್ಚಿತಾರ್ಥದ ಫೋಟೊ ಜತೆಗೆ ಮದುವೆ ಶಾಸ್ತ್ರಗಳ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

VISTARANEWS.COM


on

Siddharth Bodke and Titeeksha Tawade to get married
Koo

ಬೆಂಗಳೂರು: ಮರಾಠಿ ನಟಿ ತಿತೀಕ್ಷಾ ತಾವಡೆ (Titeeksha Tawade) ʻದೃಶ್ಯಂʼ ಸಿನಿಮಾ ಖ್ಯಾತಿಯ ನಟ ಸಿದ್ಧಾರ್ಥ್ ಬೋಡ್ಕೆ (Siddharth Bodke) ಜತೆ ಎಂಗೇಜ್‌ ಆಗಿದ್ದಾರೆ. ಫೆಬ್ರವರಿ 25ರಂದು ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಇಂದು (ಫೆಬ್ರವರಿ 26) ಅದ್ಧೂರಿಯಾಗಿ ಮದುವೆ ನಡೆಯಲಿದೆ. ತಿತೀಕ್ಷಾ ಈಗಾಗಲೇ ನಿಶ್ಚಿತಾರ್ಥದ ಫೋಟೊ ಜತೆಗೆ ಮದುವೆ ಶಾಸ್ತ್ರಗಳ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ತಿತೀಕ್ಷಾ ಮತ್ತು ಸಿದ್ಧಾರ್ಥ್ ಟಿವಿ ಶೋ ʻತು ಆಶಿ ಜವಲಿ ರಹಾʼದಲ್ಲಿ (Tu Ashi Jawali Raha) ಒಟ್ಟಿಗೆ ಕೆಲಸ ಮಾಡುವಾಗ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. 2019ರಲ್ಲಿ ಶೋ ಮುಗಿದ್ದರೂ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಇದಾದ ಬಳಿಕ ಆಗಾಗ ಸೋಷಿಯಲ್‌ ಮೀಡಿಯಾ ಮೂಲಕ ಒಟ್ಟಿಗೆ ಇರುವ ಫೋಟೊವನ್ನು ಹಂಚಿಕೊಳ್ಳುತ್ತಿದ್ದರು. ಫ್ಯಾನ್ಸ್‌ ಕೂಡ ಮದುವೆ ಯಾವಾಗ ಎಂದು ಕೇಳುತ್ತಿದ್ದರು. ಇದೀಗ ಜೋಡಿ ಅಂತೂ ಸಿಹಿ ಸುದ್ದಿ ನೀಡಿದೆ. ತಿತೀಕ್ಷಾ ಮತ್ತು ಸಿದ್ಧಾರ್ಥ್ ತಮ್ಮ ನಿಶ್ಚಿತಾರ್ಥದ ಫೋಟೊವನ್ನು ಇದೀಗ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಈಗಾಗಲೇ ಇಬ್ಬರ ಕುಟುಂಬದಲ್ಲಿ ಸಾಂಪ್ರದಾಯಿಕ ಕೆಲ್ವನ್ ಶಾಸ್ತ್ರಗಳನ್ನು ನೆರವೇರಿಸಲಾಗಿದೆ. ವಧು ಮತ್ತು ವರನ ಕುಟುಂಬಗಳು ಬಟ್ಟೆ, ಹೂವುಗಳು, ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳಂತಹ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವೆಂದರೆ ಕೆಲ್ವನ್. ಈ ಸಮಾರಂಭವು ಮಹಾರಾಷ್ಟ್ರದ ಮದುವೆ ಪದ್ಧತಿಯಲ್ಲಿ ಮಹತ್ವದ್ದಾಗಿದೆ.

ಇದನ್ನೂ ಓದಿ: Kannada New Movie: ‘ಎಬಿ ಪಾಸಿಟಿವ್’ ಸಿನಿಮಾದಿಂದ ತೇಲಿಬಂತು ಮತ್ತೊಂದು ಚೆಂದದ ಹಾಡು!

ನಟಿ ತಿತೀಕ್ಷಾ ತಾವಡೆ ಸದ್ಯ ಟಿವಿ ಶೋ ʻಸತ್ಯ ಮುಳಿಚಿ ಸತವಿ ಮುಲ್ಗಿʼಯಲ್ಲಿ ನಟಿಸುತ್ತಿದ್ದು, ನಟ ಸಿದ್ಧಾರ್ಥ್ ಬೋಡ್ಕೆ ಹಿಂದಿ ಮತ್ತು ಮರಾಠಿ ನಾಟಕಗಳಲ್ಲಿ ಚಲನಚಿತ್ರಗಳಲ್ಲಿ ನಿರತರಾಗಿದ್ದಾರೆ. ಸಿದ್ಧಾರ್ಥ್ ʻತು ಆಶಿ ಜವಳಿ ರಹಾʼ ಮತ್ತು ʻಅನನ್ಯʼ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ಚಲನಚಿತ್ರ ʻದೃಶ್ಯಂʼನಲ್ಲಿಯೂ ಅವರು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ತಿತೀಕ್ಷಾ ತಾವ್ಡೆ ಅವರು ʻಸರಸ್ವತಿʼ, ʻಏಕ್ ಥ್ರಿಲ್ಲರ್ ನೈಟ್ʼ ಮತ್ತು ʻಶಭಾಶ್ ಮಿಥುʼ ಸೇರಿದಂತೆ ಹಲವು ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

Continue Reading

ಬಾಲಿವುಡ್

Kenneth Mitchell: ‘ಸ್ಟಾರ್ ಟ್ರೆಕ್’, ‘ಕ್ಯಾಪ್ಟನ್ ಮಾರ್ವೆಲ್’ ಖ್ಯಾತಿಯ ನಟ ಕೆನ್ನೆತ್ ಮಿಚೆಲ್ ಇನ್ನಿಲ್ಲ

ಕೆನ್ನೆತ್ ಅಲೆಕ್ಸಾಂಡರ್ ಮಿಚೆಲ್‌ ಅನೇಕ ಚಲನಚಿತ್ರಗಳು ಮತ್ತು ದೂರದರ್ಶನ Kenneth Mitchell: ಕಾರ್ಯಕ್ರಮಗಳಲ್ಲಿ ಪರಿಚಿತರಾಗಿದ್ದರು. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್, ಅಥವಾ ALS, ಮೆದುಳು ಮತ್ತು ಬೆನ್ನುಹುರಿಯ ನರ ಕೋಶಗಳ ಮೇಲೆ ಪರಿಣಾಮ ಬೀರುವ ಕಾಯಿಲೆ ಆಗಿದೆ.

VISTARANEWS.COM


on

Kenneth Mitchell Dies at 49
Koo

ಬೆಂಗಳೂರು: ʻಸ್ಟಾರ್ ಟ್ರೆಕ್ʼ: ಡಿಸ್ಕವರಿ ಸೇರಿದಂತೆ ಹಿಟ್‌ ಸಿನಿಮಾ ನೀಡಿದ ಕೆನಡಾದ ನಟ `ಕೆನ್ನೆತ್ ಅಲೆಕ್ಸಾಂಡರ್ ಮಿಚೆಲ್‌ʼ ನಿಧನರಾಗಿದ್ದಾರೆ. ನಟನಿಗೆ 49 ವರ್ಷ ವಯಸ್ಸಾಗಿತ್ತು. 2020ರಲ್ಲಿ ಮಿಚೆಲ್‌ ಅವರು ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (Amyotrophic Lateral Sclerosis) ತುತ್ತಾಗಿದ್ದರು. ಅವರ ಕುಟುಂಬ ಸದಸ್ಯರು ನಿಧನದ ಸುದ್ದಿಯನ್ನು ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಕೆನ್ನೆತ್ ಅಲೆಕ್ಸಾಂಡರ್ ಮಿಚೆಲ್‌ ಅನೇಕ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಪರಿಚಿತರಾಗಿದ್ದರು. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್, ಅಥವಾ ALS, ಮೆದುಳು ಮತ್ತು ಬೆನ್ನುಹುರಿಯ ನರ ಕೋಶಗಳ ಮೇಲೆ ಪರಿಣಾಮ ಬೀರುವ ಕಾಯಿಲೆ ಆಗಿದೆ. ಕ್ರಮೇಣ ಬೆನ್ನುಹುರಿ ಮತ್ತು ಮೆದುಳಿನಾದ್ಯಂತ ನರ ಕೋಶಗಳು ಕ್ರಮೇಣ ಕ್ಷೀಣಿಸುತ್ತವೆ. ಇದನ್ನು ಲೌ ಗೆಹ್ರಿಗ್ ಕಾಯಿಲೆ ಎಂದೂ ಕರೆಯುತ್ತಾರೆ.

ಮಿಚೆಲ್‌ 2019ರ ಕ್ಯಾಪ್ಟನ್‌ ಮಾರ್ವೆಲ್‌’ನಲ್ಲಿ ಬ್ರೀ ಲಾರ್ಸನ್‌ ಅವರ ತಂದೆ ಜೋಸೇಫ್‌ ಡ್ಯಾನ್ವರ್ಸ್‌ ಪಾತ್ರವನ್ನು ನಿರ್ವಹಿಸಿದರು. `ದಿ ರಿಕ್ರೂಟ್’, ದಿ ಗ್ರೀನ್’, ಮಿರಾಕಲ್’ ಸೇರದಂತೆ ಅನೇಕ್‌ ಹಿಟ್‌ ಸಿನಿಮಾ ನೀಡಿದ್ದರು.

ಇದನ್ನೂ ಓದಿ: Ameen Sayani: ‘ಬಿನಾಕಾ ಗೀತ್‌ಮಾಲಾʼ ಖ್ಯಾತಿಯ ರೇಡಿಯೋ ನಿರೂಪಕ ಅಮೀನ್‌ ಸಯಾನಿ ನಿಧನ

ಲೋವರ್ ಡೆಕ್ಸ್‌ನ ಸಂಚಿಕೆಯಲ್ಲಿ ಹಲವಾರು ಪಾತ್ರಗಳಿಗೆ ಧ್ವನಿ ನೀಡಿದ್ದಾರೆ. 2020ರಲ್ಲಿ ನಟ ತಮಗಿರುವ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದರು. ಮಿಚೆಲ್ ಅವರು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ಇಷ್ಟ ಎಂದು ಸಂದರ್ಶನದಲ್ಲಿ ತಿಳಿಸಿದ್ದರು. ಕ್ರಮೇಣ ಸಿನಿ ರಂಗದಲ್ಲಿ ತೊಡಗಿಸಿಕೊಳ್ಳಲು ಕಷ್ಟಕರವಾಗಿತ್ತು ಎಂದು ಹೇಳಿಕೊಂಡಿದ್ದರು.

Continue Reading
Advertisement
Road Accident in Anekal
ಬೆಂಗಳೂರು ಗ್ರಾಮಾಂತರ2 mins ago

Road Accident : ಬೈಕ್‌-ಕಾರು ಡಿಕ್ಕಿ; ಹಿಂಬದಿ ಕುಳಿತಿದ್ದ ಮಹಿಳೆ ಸಾವು

PM Narendra Modi inaugurates 2000 railway projects worth RS 41,000 crore
ಪ್ರಮುಖ ಸುದ್ದಿ8 mins ago

PM Narendra Modi: 2000 ರೈಲ್ವೆ ಪ್ರಾಜೆಕ್ಟ್‌ಗಳಿಗೆ ಪಿಎಂ ಚಾಲನೆ; ಜೂನ್‌ನಿಂದ 3ನೇ ಅವಧಿಗೆ ಸರ್ಕಾರ ಎಂದ ಮೋದಿ

Kannada Name Board Deadline
ಬೆಂಗಳೂರು13 mins ago

Kannada Name Board : ಕನ್ನಡ ನಾಮಫಲಕಕ್ಕೆ ಫೆ. 28 ಕೊನೇ ದಿನ; ಇನ್ನೂ ಬಳಸದವರಿಗೆ ನೋಟಿಸ್‌

CM Siddaramaiah Inauguration of job fair and announces setting up of new GTTC
ಉದ್ಯೋಗ15 mins ago

Job Fair: ಚಾರಿತ್ರಿಕ ಉದ್ಯೋಗ ಮೇಳ ಉದ್ಘಾಟನೆ; ಹೊಸದಾಗಿ GTTC ಸ್ಥಾಪನೆ: ಸಿಎಂ ಮಹತ್ವದ ಘೋಷಣೆ

cricket
ಕ್ರಿಕೆಟ್20 mins ago

IND Vs ENG: ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಗೆಲುವು; ಭಾರತಕ್ಕೆ ಸರಣಿ

Man murders old woman to pay off debts
ಬೆಂಗಳೂರು21 mins ago

Murder Case : ಸಾಲ ತೀರಿಸಲು ವೃದ್ಧೆ ಸುಶೀಲಮ್ಮಳ ಉಸಿರುಗಟ್ಟಿಸಿ ಕೊಂದ

Shah Rukh Khan's Adorable Reaction To Allu Arjun's Son
ಬಾಲಿವುಡ್24 mins ago

Shah Rukh Khan: ಅಲ್ಲು ಅರ್ಜುನ್ ಮಗನನ್ನು ಹಾಡಿ ಹೊಗಳಿದ ಶಾರುಖ್‌! ಅದ್ಯಾಕೆ?

Crowd mistakes Arabic words as Quran Verses on the kurta and Pak Women mobbed
ವಿದೇಶ34 mins ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

aadhar update
ಪ್ರಮುಖ ಸುದ್ದಿ44 mins ago

Aadhaar Card: ಗಮನಿಸಿ; ಆಧಾರ್‌ ಕಾರ್ಡ್‌ ಉಚಿತ ತಿದ್ದುಪಡಿಗೆ ಇನ್ನು ಕೆಲವು ದಿನ ಮಾತ್ರ ಅವಕಾಶ

Nitasha Kaul
ದೇಶ53 mins ago

Nitasha Kaul: ಕರ್ನಾಟಕ ಸರ್ಕಾರ ಕರೆಸಿದ ಲಂಡನ್‌ ಲೇಖಕಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದಲೇ ಗೇಟ್‌ಪಾಸ್; ʼನಗರ- ನಕ್ಸಲ್‌ʼ ಎಂದ ಬಿಜೆಪಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Crowd mistakes Arabic words as Quran Verses on the kurta and Pak Women mobbed
ವಿದೇಶ34 mins ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ9 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

ಟ್ರೆಂಡಿಂಗ್‌