ಸಿಗರೇಟ್‌ ಸೇದುತ್ತಿರುವ ಕಾಳಿ ಪೋಸ್ಟರ್‌! ನಿರ್ಮಾಪಕಿ ವಿರುದ್ಧ ದೂರು ದಾಖಲು - Vistara News

ಪ್ರಮುಖ ಸುದ್ದಿ

ಸಿಗರೇಟ್‌ ಸೇದುತ್ತಿರುವ ಕಾಳಿ ಪೋಸ್ಟರ್‌! ನಿರ್ಮಾಪಕಿ ವಿರುದ್ಧ ದೂರು ದಾಖಲು

ಕಾಳಿ ಮಾತೆ ಸಿಗರೇಟು ಸೇದುತ್ತಿರುವ ದೃಶ್ಯದಿಂದ ಆಕ್ರೋಶಗೊಂಡಿರುವ ನೆಟ್ಟಿಗರು ‘ಅರೆಸ್ಟ್ ಲೀನಾಮಣಿಮೇಕಲೈ’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್‌ ಅಭಿಯಾನ ಮಾಡುತ್ತಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ದೇಶನದ ಸಾಕ್ಷ್ಯಚಿತ್ರದ ಪೋಸ್ಟರ್ ವಿರುದ್ಧ ಎಲ್ಲೆಡೆ ಆಕ್ರೋಶ ಶುರುವಾಗಿದೆ. ಲೀನಾ ಅವರು ಇತ್ತೀಚೆಗೆ ತಮ್ಮ ಮುಂಬರುವ ಸಾಕ್ಷ್ಯಚಿತ್ರದ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟರ್‌ನಲ್ಲಿ ಮಹಿಳೆಯೊಬ್ಬರು ಹಿಂದೂ ದೇವತೆಯ ವೇಷವನ್ನು ಧರಿಸಿದ್ದಾರೆ, ಫೋಟೊದಲ್ಲಿ ಕಾಳಿ ಮಾತೆಯ ವೇಷಧಾರಿ ಸಿಗರೇಟು ಸೇದುತ್ತಿರುವ ದೃಶ್ಯವಿದೆ.

ಇದು ಹಿಂದೂ ಸಮುದಾಯ ಹಾಗೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಲೀನಾ ವಿರುದ್ಧ ಹಿಂದೂ ಸಂಘಟಕರು ದೂರು ದಾಖಲು ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ LGBT ಸಮುದಾಯದ ಧ್ವಜವನ್ನು ಬಳಸಿರುವುದು ಕೂಡ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಪೋಸ್ಟರ್ ಹಿಂಪಡೆಯುವಂತೆ ಹಿಂದೂ ಸಂಘಟನೆಗಳ ಪ್ರಮುಖರು ಒತ್ತಾಯಿಸಿದ್ದಾರೆ. ‘ಅರೆಸ್ಟ್ ಲೀನಾಮಣಿಮೇಕಲೈ’ ಎಂಬ ಹ್ಯಾಶ್‌ಟ್ಯಾಗ್ ಕೂಡ ಸದ್ಯ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ತಮಗೆ ಬರುತ್ತಿರುವ ನಕಾರಾತ್ಮಕ ಸಂದೇಶಗಳಿಗೆ ಪ್ರತಿಕ್ರಿಯಿಸಿರುವ ಲೀನಾ ‘ದ್ವೇಷಕ್ಕಿಂತ ಪ್ರೀತಿ ಆಯ್ಕೆ ಮಾಡಿಕೊಳ್ಳಿʼ ಎಂದು ಕೇಳಿಕೊಂಡಿದ್ದಾರೆ.

“”ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯ ನಡೆಸಿದ್ದ ಶಿಬಿರಕ್ಕೆ ಕೆನಡಾದ್ಯಂತದ ಕೆಲವು ಅತ್ಯುತ್ತಮ ಸಿನಿಮಾ ವಿದ್ಯಾರ್ಥಿಗಳನ್ನು ಕರೆಯಲಾಗಿತ್ತು. ಆ ಶಿಬಿರದಲ್ಲಿ ನಾನೂ ಭಾಗವಹಿಸಿದ್ದೆ. ಅದಕ್ಕಾಗಿ ನಾನು ಆಯ್ಕೆ ಮಾಡಿದ ಚಿತ್ರ- ಕಾಳಿ. ದೇವಿ ಕಾಳಿ ಪಾತ್ರದಲ್ಲಿ ನಾನೇ ನಟಿಸಿದ್ದೇನೆ, ನಿರ್ದೇಶನ ಮಾಡಿದ್ದೇನೆ ಮತ್ತು ನಿರ್ಮಿಸಿದ್ದೇನೆʼʼ ಎಂದು ಲೀನಾ ತಿಳಿಸಿದ್ದಾರೆ.

“”ಟೊರೊಂಟೊದ ಬೀದಿಗಳಲ್ಲಿ ಒಂದು ಇಳಿ ಸಂಜೆ ಕಾಳಿ ಮಾತೆ ಓಡಾಡುವ ಕುರಿತಾದ ಚಿತ್ರವನ್ನು ನಿರ್ಮಿಸಿದ್ದೇನೆ. ಈ ಅದ್ಭುತ ಸಿನಿಮಾ ನೋಡಿದ ಮೇಲೆ`ಲೀನಾ ಮಣಿಮೇಕಲೈ ಅರೆಸ್ಟ್ ಮಾಡಿಸಿ ಎಂದು ಹ್ಯಾಷ್ ಟ್ಯಾಗ್ ಹಾಕಬೇಡಿ, ಲವ್ ಯೂ ಲೀನಾ ಮಣಿಮೇಕಲೈ ಎಂಬ ಹ್ಯಾಷ್ ಟ್ಯಾಗ್ ಪೋಸ್ಟ್ ಮಾಡಿ. ಹಲವಾರು ಜನಾಂಗೀಯ ಭಿನ್ನಾಭಿಪ್ರಾಯಗಳ ನಡುವೆ ದ್ವೇಷದ ಬದಲು ಪ್ರೀತಿಯನ್ನು ಆರಿಸಿಕೊಳ್ಳುವ ಬಗ್ಗೆ ಈ ಕಾಳಿ ಮಾತನಾಡುತ್ತಾಳೆ” ಎಂದು ತಮ್ಮ ವಿರುದ್ಧ ದ್ವನಿ ಎತ್ತಿದವರಿಗೆ ಲೀನಾ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ಕೇಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Wakf Board Scam: ವಾಲ್ಮೀಕಿ ನಿಗಮದ ಬಳಿಕ ವಕ್ಫ್ ಬೋರ್ಡ್‌ನಲ್ಲಿ ಹಗರಣ ಬೆಳಕಿಗೆ; ಮಾಜಿ ಸಿಇಒ ವಿರುದ್ಧ ಎಫ್‌ಐಆರ್!

Wakf Board Scam: ರಾಜ್ಯ ವಕ್ಫ್ ಬೋರ್ಡ್ ಖಾತೆಯಿಂದ ಹಂತ ಹಂತವಾಗಿ 8 ಕೋಟಿ ರೂ.ಗಳನ್ನು ಅಕ್ರಮ ವರ್ಗಾವಣೆ ಮಾಡಿದ ಆರೋಪದಲ್ಲಿ ಮಾಜಿ ಸಿಇಒ ಝುಲ್ಫಿಕಾರುಲ್‌ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

VISTARANEWS.COM


on

Koo

ಬೆಂಗಳೂರು: ವಾಲ್ಮೀಕಿ ಹಗರಣ, ಅಪೆಕ್ಸ್ ಬ್ಯಾಂಕ್ ಹಗರಣದ ಬಳಿಕ ಇದೀಗ ರಾಜ್ಯ ವಕ್ಫ್ ಬೋರ್ಡ್‌ನಲ್ಲಿ ನಡೆದ ಕೋಟ್ಯಂತರ ರೂ. ಹಗರಣ ಬೆಳಕಿಗೆ ಬಂದಿದೆ. ವಕ್ಫ್ ಬೋರ್ಡ್‌ನ ಮಾಜಿ ಸಿಇಒ ಝುಲ್ಫಿಕಾರುಲ್‌ ವಿರುದ್ಧ ಕೋಟಿ ಕೋಟಿ ಡೀಲ್ ಆರೋಪ ಕೇಳಿಬಂದಿದೆ. ವಕ್ಫ್ ಬೋರ್ಡ್ (Wakf Board Scam) ಖಾತೆಯಿಂದ ಹಂತ ಹಂತವಾಗಿ 8 ಕೋಟಿ ರೂ.ಗಳನ್ನು ಅಕ್ರಮ ವರ್ಗಾವಣೆ (Money laundering) ಮಾಡಿದ ಆರೋಪದಲ್ಲಿ ಮಾಜಿ ಸಿಇಒ ಝುಲ್ಫಿಕಾರುಲ್‌ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಅಕ್ರಮ ಸಂಬಂಧ ವಕ್ಫ್ ಬೋರ್ಡ್ ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮ್ಮದ್‌ ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂನಿಂದ ಚಿಂತಾಮಣಿ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರಗೆ ಮುಂದುವರೆದ ಇಡಿ ಡ್ರಿಲ್

Valmiki Corporation Scam

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ (Valmiki Corporation Scam) ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರ (Ex minister B Nagendra) ಸದ್ಯ ಇಡಿ ಅಧಿಕಾರಿಗಳ (ED Officers) ವಶದಲ್ಲಿದ್ದಾರೆ. ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಕೂಡ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಆದರೆ ನಾಗೇಂದ್ರ ಯಾವುದೇ ವಿಚಾರವನ್ನು ಬಾಯಿ ಬಿಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ದಾಖಲೆಗಳನ್ನ ಮುಂದಿಟ್ಟುಕೊಂಡು ಇಡಿ ಅಧಿಕಾರಿಗಳು ಪ್ರಶ್ನೆಸುತ್ತಿದ್ದರೂ ನಾಗೇಂದ್ರ ಯಾವುದೇ ರೀತಿಯಲ್ಲಿಯೂ ತನಿಖೆಗೆ ಸಹಕರಿಸುತ್ತಿಲ್ಲ. ಏನು ಕೇಳಿದರೂ ನನಗೇನೂ ಗೊತ್ತಿಲ್ಲ, ನಾನೇನೂ ಮಾಡಿಲ್ಲ ಎಂದೇ ಹೇಳುತ್ತಿದ್ದಾರೆ. ಪ್ರಕರಣ ಸಂಬಂಧ ಬಂಧಿತ ಆರೋಪಿಗಳ ಹೇಳಿಕೆ ಆಧರಿಸಿ ಪ್ರಶ್ನೆ ಮಾಡಿದರೂ ಯಾವುದೇ ವಿಚಾರ ತಿಳಿಸದ ಕಾರಣ ಅಧಿಕಾರಿಗಳು ಹೈರಾಣಾಗಿದ್ದಾರೆ.

ನಾಗೇಂದ್ರ ಹೇಳಿದ್ದೇನು?

ಆಪ್ತ ನೆಕ್ಕುಂಟಿ ನಾಗರಾಜ್, ನಾಗೇಶ್ವರ್ ರಾವ್, ನಿಗಮದ ಎಂ.ಡಿ ಪದ್ಮನಾಭ್ ಜತೆ ಸೇರಿ ಹೋಟೆಲ್‌ನಲ್ಲಿ‌ ಮೀಟಿಂಗ್ ಮಾಡಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೇಂದ್ರ ಯಾವುದೇ ಮೀಟಿಂಗ್ ಮಾಡಿಲ್ಲ. ಊಟಕ್ಕೆ ಸೇರಿದ್ವಿ ಅಷ್ಟೇ ಎಂದಿದ್ದಾರೆ. ನಿಮ್ಮ ಸೂಚನೆಯಂತೆ ನಿಗಮದಲ್ಲಿ ಹೊಸ ಅಕೌಂಟ್ ತೆರೆಯಲಾಗಿದೆ ಎಂದು ನಿಗಮದ ಎಂ.ಡಿ. ಪದ್ಮನಾಭ್ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದಾಗ ಅವರನ್ನೆ ಕೇಳಿಕೊಳ್ಳಿ ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವರು ಪ್ರತಿಕ್ರಿಯಿಸಿದ್ದಾರೆ.

ನಿಗಮಕ್ಕೆ ಸಂಬಂಧವಿಲ್ಲದ ಆಂಧ್ರದ ಐಟಿ ಕಂಪನಿಗಳಿಗೆ ಹಣ ವರ್ಗಾವಣೆ ಆಗಿದ್ದೇಕೆ? ಎಂಬ ಪ್ರಶ್ನೆಗೆ ಗೊತ್ತಿಲ್ಲ ಎಂದೇ ಉತ್ತರ ಲಭಿಸಿದೆ. ನಿಗಮಕ್ಕೂ ನೆಕ್ಕುಂಟಿ ನಾಗರಾಜ್, ಸತ್ಯನಾರಾಯಣ, ನಾಗೇಶ್ವರ್ ರಾವ್‌ಗೂ ಏನು ಸಂಬಂಧ ? ಎಂದು ಇಡಿ ಅಧಿಕಾರಿಗಳು ಕೇಳಿದಾಗ ನನಗೇನು ಗೊತ್ತು ಸರ್ ? ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಸುಸ್ತಾದ ಅಧಿಕಾರಿಗಳು

ವಿಚಾರಣೆ ವೇಳೆ ಏನೇ ಕೇಳಿದರೂ ನನಗೇನು ಗೊತ್ತಿಲ್ಲ, ನಾನೇನು ಮಾಡಿಲ್ಲ ಎಂಬ ಎರಡು ಮಾತನ್ನ ಬಿಟ್ಟು ಬೇರೆ ಮಾತಾಡದ ಮಾಜಿ ಸಚಿವ ನಾಗೇಂದ್ರ ಅವರಿಂದಾಗಿ ಅಧಿಕಾರಿಗಳು ಸುಸ್ತಾಗಿದ್ದಾರೆ. ಎಸ್.ಐ.ಟಿ. ಹಾಗೂ ಸಿಬಿಐ ವಿಚಾರಣೆ ವೇಳೆ ಮಾಜಿ ಸಚಿವ ನಾಗೇಂದ್ರ ಸೂಚನೆಯಂತೆ ಹೊಸ ಅಕೌಂಟ್ ತೆರೆದಿದ್ದಾಗಿ ಎಂ.ಡಿ ಪದ್ಮನಾಭ್ ಬಾಯ್ಬಿಟ್ಟಿದ್ದರು. ಆದರೆ ಇಡಿ ವಿಚಾರಣೆ ವೇಳೆ ಯಾವುದಕ್ಕೂ ಸರಿಯಾಗಿ ಉತ್ತರಿಸದೇ ತನಗೇನೂ ಗೊತ್ತಿಲ್ಲ ಎಂದು ನಾಗೇಂದ್ರ ಹೇಳುತ್ತಿದ್ದಾರೆ.

ಇದನ್ನೂ ಓದಿ: ED Raid: ಮಾಜಿ ಸಚಿವ ನಾಗೇಂದ್ರ, ಶಾಸಕ ದದ್ದಲ್‌ ನಿವಾಸದಲ್ಲಿ 24 ಗಂಟೆಗಳಿಂದ ಮುಂದುವರಿದ ಇಡಿ ಅಧಿಕಾರಿಗಳ ತಪಾಸಣೆ

ನಿರಂತರ 40 ಗಂಟೆಗಳ ತಪಾಸಣೆ ಹಾಗೂ ತನಿಖೆಯ ಬಳಿಕ, ವಾಲ್ಮೀಕಿ ನಿಗಮ ಹಗರಣ ಕುರಿತು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜುಲೈ 12ರಂದು ವಶಕ್ಕೆ ಪಡೆದುಕೊಂಡಿದ್ದರು. 40 ಗಂಟೆಗಳ ಕಾಲ ನಾಗೇಂದ್ರ ಹಾಗೂ ಕುಟುಂಬದವರನ್ನು ಮನೆಯಿಂದ ಹೊರಬಿಡದ ಇಡಿ ಅಧಿಕಾರಿಗಳು ನಿರಂತರವಾಗಿ ಪ್ರಶ್ನೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂಪಾಯಿಗಳ ಹಗರಣದ ಬಗ್ಗೆ ಯಾವುದೇ ಸುಳಿವು ತಮಗಿಲ್ಲ ಎಂದೇ ನಾಗೇಂದ್ರ ಹೇಳಿದ್ದರು. ಆದರೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ ಹೇಳಿಕೆಯಿಂದಾಗಿ ನಾಗೇಂದ್ರ ಹೇಳಿಕೆಯ ಬಗ್ಗೆ ಅನುಮಾನ ಮೂಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿತ್ತು.

Continue Reading

ಭವಿಷ್ಯ

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ತಾರೆ ಎಚ್ಚರ!

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ ಅಷ್ಟಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina bhavishya
Koo

ಚಂದ್ರನು ತುಲಾ ರಾಶಿಯಿಂದ ಭಾನುವಾರ ಬೆಳಗ್ಗೆ 10:52 ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡೋವರ ಬಗ್ಗೆ ಎಚ್ಚರಿಕೆ ಇರಲಿ. ಅತಿಯಾದ ಒತ್ತಡ ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮಿಕ ಸಾಧನೆ ಅವಶ್ಯಕವಿದೆ. ಸಿಂಹ ರಾಶಿಯವರು ಮಿತಿಮೀರಿದ ಕೆಲಸದ ಒತ್ತಡದಿಂದಾಗಿ ದಣಿವು, ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ಮೀನ ರಾಶಿಯವರು ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಪಾಲುದಾರಿಕೆ ವ್ಯವಹಾರವು ನಷ್ಟ ತರುವುದು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (14-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ.
ತಿಥಿ: ಅಷ್ಟಮಿ 17:25 ವಾರ: ಭಾನುವಾರ
ನಕ್ಷತ್ರ: ಚಿತ್ತಾ 22:05 ಯೋಗ: ಶಿವ 06:14
ಕರಣ: ಭವ 17:25 ಅಮೃತಕಾಲ: ಮಧ್ಯಾಹ್ನ 02:57ರಿಂದ 04:44
ದಿನದ ವಿಶೇಷ: ನಂದೀಶ್ವರ ಅಷ್ಟಾಹ್ಮಿಕ ವ್ರತಾರಂಭ

ಸೂರ್ಯೋದಯ : 06:01   ಸೂರ್ಯಾಸ್ತ : 06:50

ರಾಹುಕಾಲ: ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡೋವರ ಬಗ್ಗೆ ಎಚ್ಚರಿಕೆ ಇರಲಿ. ಅತಿಯಾದ ಒತ್ತಡ ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮಿಕ ಸಾಧನೆ ಅವಶ್ಯಕವಿದೆ. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಸಹದ್ಯೋಗಿಗಳಿಂದ ಕಿರಿಕಿರಿಯಾಗಲಿದೆ ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ಮಿಥುನ: ಬಂಧುಗಳು ಟೀಕೆಗಳನ್ನು ಮಾಡುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಒತ್ತಡ ಇರಲಿದ್ದು, ಮಾನಸಿಕ ನೆಮ್ಮದಿ ಹಾಳು ಮಾಡುವ ಸಾಧ್ಯತೆ ಇದೆ. ಸಂಯಮದಿಂದ ವರ್ತಿಸಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

Horoscope Today

ಕಟಕ: ಪ್ರಮುಖ ವ್ಯಕ್ತಿಗಳ ಸಹಕಾರ ಸಿಗಲಿದೆ. ಆತುರದ ತೀರ್ಮಾನ ತೆಗೆದುಕೊಳ್ಳುವುದು ಬೇಡ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರುತ್ತದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ಮಿತಿಮೀರಿದ ಕೆಲಸದ ಒತ್ತಡದಿಂದಾಗಿ ದಣಿವು, ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ಮಕ್ಕಳಿಂದ ಸಂತೋಷ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ಕನ್ಯಾ:ನಿಮ್ಮ ವರ್ತನೆ ಕುಟುಂಬದ ಸದಸ್ಯರಿಗೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಹಣಕಾಸು ಪ್ರಗತಿ ಇರಲಿದೆ. ಬಂಧುಗಳ ಭೇಟಿ ಕೊಂಚ ಸಮಾಧಾನ ತರುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಸಂಗಾತಿಯ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಮಾತಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ : ಕುಟುಂಬ ಸದಸ್ಯರ ಆರೋಗ್ಯ ಕಡೆ ಗಮನ ಇರಲಿ. ನಕಾರಾತ್ಮಕ ಆಲೋಚನೆಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುವಂತೆ ಮಾಡಬಹುದು. ದಿನದ ಮಟ್ಟಿಗೆ ಖರ್ಚು ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಧನಸ್ಸು: ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಆಪ್ತ ಸ್ನೇಹಿತ- ಸಂಬಂಧಿಗಳ ಸಮಸ್ಯೆಗಳಿಗೆ ಸ್ಪಂದಿಸುವಿರಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಮಕರ:ಆರೋಗ್ಯ ಉತ್ತಮವಾಗಿರಲಿದೆ. ಸ್ನೇಹಿತರ ಸಹಕಾರ ಸಿಗಲಿದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಕೆಲಸದ ನಿಧಾನಗತಿ ಸ್ವಲ್ಪ ಒತ್ತಡ ತರುವುದು. ಅತಿರೇಖದಲ್ಲಿ ಮಾತನಾಡುವುದು ಬೇಡ. ಸಮಾಧಾನದಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ಕುಂಭ:ಉದ್ಯೋಗದ ಸ್ಥಳದಲ್ಲಿ ಪ್ರಸಂಶೆ ಸಿಗಲಿದೆ. ಹಿರಿಯರ ಮಾರ್ಗದರ್ಶನ ಸಿಗುವುದು. ಆರೋಗ್ಯ ಉತ್ತಮವಾಗಿರಲಿದೆ. ಅನಿರೀಕ್ಷಿತ ಖರ್ಚು ಇರಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಅದೃಷ್ಟ ಸಂಖ್ಯೆ: 3

Horoscope Today

ಮೀನ: ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಪಾಲುದಾರಿಕೆ ವ್ಯವಹಾರವು ನಷ್ಟ ತರುವುದು. ನಿಮ್ಮ ಉದಾರ ವರ್ತನೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

Legends World Cup 2024 : ಪಾಕಿಸ್ತಾನ ತಂಡವನ್ನು ಸೋಲಿಸಿ ಲೆಜೆಂಡ್ಸ್​ ವಿಶ್ವ ಕಪ್-2024 ಟ್ರೋಫಿ ಗೆದ್ದ ಭಾರತ

Legends World Cup 2024 : ಇಲ್ಲಿನ ಎಜ್​ಬಾಸ್ಟರ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 156 ರನ್ ಗಳಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನೂ ಐದು ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ ಗೆಲುವು ಸಾಧಿಸಿತು.

VISTARANEWS.COM


on

Legends World Cup 2024
Koo

ಬರ್ಮಿಂಗ್​ಹ್ಯಾಮ್​: ಪಾಕಿಸ್ತಾನ ತಂಡವನ್ನು ಮಣಿಸಿದ ಇಂಡಿಯಾ ಚಾಂಪಿಯನ್ಸ್ ತಂಡ ಉದ್ಘಾಟನಾ ಆವೃತ್ತಿಯ ಲೆಜೆಂಡ್ಸ್​ ವಿಶ್ವ ಕಪ್​ನಲ್ಲಿ (Legends World Cup 2024 ) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಕ್ರಿಕೆಟ್​ ದೇಶಗಳ ನಿವೃತ್ತ ಆಟಗಾರರನ್ನು ಒಳಗೊಂಡಿರುವ ಟೂರ್ನಿಯಾಗಿದೆ. ಮೊದಲ ಆವೃತ್ತಿಯಲ್ಲಿ ಗೆದ್ದ ಯುವರಾಜ್ ಸಿಂಗ್​ ನೇತೃತ್ವದ ಭಾರತ ತಂಡ 2007ರ ಟಿ20 ವಿಶ್ವ ಕಪ್​ ಟೂರ್ನಿಯನ್ನು ನೆನಪಿಸಿದೆ. ಟಿ20 ವಿಶ್ವ ಕಪ್​ನ ಮೊದಲ ಆವೃತ್ತಿಯಲ್ಲೇ ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು. ಅಲ್ಲೂ ಪಾಕಿಸ್ತಾನವನ್ನೇ ಕೊನೇ ಎಸೆತದಲ್ಲಿ ಪಡೆದ ನಾಟಕೀಯ ಫಲಿತಾಂಶದ ಮೂಲಕ ಸೋಲಿಸಿತ್ತು.

ಭಾರತ ಪರ ಬ್ಯಾಟಿಂಗ್​ನಲ್ಲಿ ಅಂಬಾಟಿ ರಾಯುಡು (50) ಅರ್ಧ ಶತಕ ಬಾರಿಸಿ ಮಿಂಚಿದರೆ ಯೂಸುಫ್ ಪಠಾಣ್​ 16 ಎಸೆತಕ್ಕೆ 30 ರನ್ ಬಾರಿಸಿ ಮಿಂಚಿದರು. ಯುವರಾಜ್ ಸಿಂಗ್​ 15 ರನ್ ಬಾರಿಸಿದರೆ ಇರ್ಫಾಣ್ ಪಠಾಣ್ 5 ರನ್ ಬಾರಿಸಿದರು. ಬೌಲಿಂಗ್​ನಲ್ಲಿ ಅನುರೀತ್ ಸಿಂಗ್ ಮೂರು ವಿಕೆಟ್ ಪಡೆದರು.

ಇಲ್ಲಿನ ಎಜ್​ಬಾಸ್ಟನ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 156 ರನ್ ಗಳಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನೂ ಐದು ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ ಗೆಲುವು ಸಾಧಿಸಿತು.

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಉತ್ತಮ ಆರಂಭನ್ನು ಪಡೆಯಿತು. ಮೊದಲ ವಿಕೆಟ್​ಗೆ 34 ರನ್​ ಬಾರಿಸಿತು. ಪ್ರಮುಖವಾಗಿ ಅಂಬಾಟಿ ರಾಯುಡು 30 ಎಸೆತಕ್ಕೆ 50 ರನ್ ಬಾರಿಸಿ ಭಾರತ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ 10 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಸುರೇಶ್ ರೈನಾ ಕೂಡ 4 ರನ್​ಗೆ ವಿಕೆಟ್​ ಒಪ್ಪಿಸಿ ಆತಂಕ ತಂದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಗುರುಕೀರತ್​ ಸಿಂಗ್ ಮಾನ್​ 33 ಎಸೆತಕ್ಕೆ 34 ರನ್ ಬಾರಿಸಿ ಆಧಾರವಾದರು. ಕೊನೆ ಹಂತದಲ್ಲಿ ಯೂಸುಫ್ ಪಠಾಣ್​ ಭರ್ಜರಿಯಾಗಿ ಬ್ಯಾಟ್ ಬೀಸಿ 30 ರನ್ ಬಾರಿಸಿ ಗೆಲುವು ತಂದುಕೊಟ್ಟರು.

ಪಾಕಿಸ್ತಾನ ಉತ್ತಮ ಮೊತ್ತ

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವೂ ಉತ್ತಮ ಮೊತ್ತ ಪೇರಿಸಿತು. ಕಮ್ರಾನ್ ಅಕ್ಮಲ್​ 24 ರನ್ ಬಾರಿಸಿದರೆ ಶ್ರಜೀಲ್ ಖಾನ್ 12 ರನ್ ಬಾರಿಸಿದರು. ಶೋಯೆಬ್ ಮಕ್ಸೂದ್ 21 ರನ್ ಗಳಿಸಿದರೆ ಶೋಯೆಬ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 36 ಎಸೆತಕ್ಕೆ 41 ರನ್ ಗಳಿಸಿದರು. ಅವರ ವೇಗದ ರನ್​ ಗಳಿಕೆಯಿಂದಾಗಿ ಪಾಕಿಸ್ತಾನ ಉತ್ತಮ ಮೊತ್ತದತ್ತ ಸಾಗಿತು. ಮಿಸ್ಬಾ ಉಲ್ ಹಕ್​ 18 ರನ್ ಬಾರಿಸಿದ ಬಳಿಕ ಗಾಯಗೊಂಡು ನಿವೃತ್ತರಾದರು. ಕೊನೆಯಲ್ಲಿ ಸೋಹೈಲ್ ತನ್ವೀರ್ 9 ಎಸೆತಕ್ಕೆ 19 ರನ್ ಬಾರಿಸಿದರು. ಭಾರತ ಪರ ಬೌಲಿಂಗ್​ನಲ್ಲಿ ಅನುರೀತ್ ಸಿಂಗ್​ 3 ವಿಕೆಟ್​ ಪಡೆದರೆ, ವಿನಯ್ ಕುಮಾರ್​, ಪವನ್ ನೇಗಿ ಹಾಗೂ ಇರ್ಪಾನ್ ಪಠಾಣ್​ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

Continue Reading

ಕರ್ನಾಟಕ

Dengue Fever: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ಮೊದಲ ಬಲಿ; ಸಾವಿನ ಸಂಖ್ಯೆ 8ಕ್ಕೆ ಏರಿಕೆ

Dengue Fever: ಕಳೆದ 24 ಗಂಟೆಯಲ್ಲಿ ಒಂದು ವರ್ಷದಿಂದ 18 ವರ್ಷದೊಳಗಿನ 168 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಇಲ್ಲಿಯವರೆಗೂ ಒಂದು ವರ್ಷದಿಂದ 18 ವರ್ಷದೊಳಗಿನ 3,203 ಮಂದಿಗೆ ಡೆಂಗ್ಯೂ ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 252 ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇದುವರೆಗೆ ಶಂಕಿತ ಡೆಂಗ್ಯೂಗೆ 8 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಆತಂಕ ಹೆಚ್ಚಾಗಿದೆ.

VISTARANEWS.COM


on

Dengue Fever
Koo

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ವ್ಯಕ್ತಿಯೊಬ್ಬರು ಶನಿವಾರ (ಜುಲೈ 13) ಮೃತಪಟ್ಟಿದ್ದಾರೆ. ಇದರೊಂದಿಗೆ ಡೆಂಗ್ಯೂಗೆ ದಕ್ಷಿಣ ಕನ್ನಡದಲ್ಲಿ (Dakshina Kannada) ಮೊದಲ ಸಾವು ಉಂಟಾಗಿದೆ. ಪುತ್ತೂರು ತಾಲೂಕು ಪಡ್ನೂರಿನ ಯತೀಶ್ (50) ಮೃತ. ಮೂಲತಃ ಬಂಟ್ವಾಳ ತಾಲೂಕಿನ ಶಂಭೂರು ನಿವಾಸಿಯಾದ ಯತೀಶ್ ಅವರಿಗೆ ಜುಲೈ 10ರಂದು ಜ್ವರ ಕಾಣಿಸಿಕೊಂಡಿತು. ವಿಪರೀತ ಜ್ವರದ (Dengue Fever) ಹಿನ್ನೆಲೆಯಲ್ಲಿ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ (Dengue In Karnataka) ಡೆಂಗ್ಯೂಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಒಂದೇ ದಿನದಲ್ಲಿ 424 ಮಂದಿಗೆ ಡೆಂಗ್ಯೂ

ಕರ್ನಾಟಕದಲ್ಲಿ ದಿನೇದಿನೆ ಡೆಂಗ್ಯೂ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 424 ಮಂದಿಗೆ ಡೆಂಗ್ಯೂ ತಗುಲಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ 9,082 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈಗ 353 ಡೆಂಗ್ಯೂ ಪ್ರಕರಣಗಳು ಸಕ್ರಿಯವಾಗಿವೆ. ಕಳೆದ 24 ಗಂಟೆಯಲ್ಲಿ ಒಂದು ವರ್ಷದೊಳಗಿನ 4 ಮಕ್ಕಳಿಗೆ ಜ್ವರ ಪತ್ತೆಯಾಗಿದೆ. ಇಲ್ಲಿಯವರೆಗೂ ಒಂದು ವರ್ಷದೊಳಗಿನ 154 ಮಕ್ಕಳಲ್ಲಿ ಡೆಂಗ್ಯೂ ದೃಢವಾಗಿದೆ ಎಂದು ತಿಳಿಸಿದೆ.

Healthy Food For Dengue

ಕಳೆದ 24 ಗಂಟೆಯಲ್ಲಿ ಒಂದು ವರ್ಷದಿಂದ 18 ವರ್ಷದೊಳಗಿನ 168 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಇಲ್ಲಿಯವರೆಗೂ ಒಂದು ವರ್ಷದಿಂದ 18 ವರ್ಷದೊಳಗಿನ 3,203 ಮಂದಿಗೆ ಡೆಂಗ್ಯೂ ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 252 ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಇಲ್ಲಿಯವರೆಗೂ 18 ವರ್ಷ ಮೇಲ್ಪಟ್ಟ 5,725 ಜನರಿಗೆ ಜ್ವರ ತಗುಲಿದೆ. ಕಳೆದ 24 ಗಂಟೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಪ್ರಕರಣಗಳು ದೃಢವಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಡೆಂಗ್ಯೂ ನಿಯಂತ್ರಣಕ್ಕಾಗಿ ಕ್ರಮ ತೆಗೆದುಕೊಳ್ಳುವ ಕುರಿತು ಈಗಾಗಲೇ ರಾಜ್ಯದ ತಜ್ಞರು ಸರ್ಕಾರಕ್ಕೆ ಹಲವು ಸಲಹೆ ನೀಡಿದ್ದಾರೆ. “ಡೆಂಗ್ಯೂ ಫಿವರ್‌ ನಿಯಂತ್ರಣ ಅಂದರೆ ಸೊಳ್ಳೆ ನಿಯಂತ್ರಣ. ಸೊಳ್ಳೆ ನಿಯಂತ್ರಣ ಆದರೆ ಮಾತ್ರ ಡೆಂಗ್ಯು ನಿಯಂತ್ರಣ ಆಗಲಿದೆ. ಮಳೆಗಾಲ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಬರುತ್ತದೆ. ಡೆಂಗ್ಯು ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಬರಬಹುದು. ಕೋವಿಡ್ ಪ್ಯಾಂಡಮಿಕ್ ಅಂದೆವು. ಡೆಂಗ್ಯು ಎಂಡಮಿಕ್ ಆಗಿದೆ. ಎಂಡೆಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು” ಎಂದು ಸಂಸದರೂ ಆಗಿರುವ ಡಾ.ಮಂಜುನಾಥ್‌ ಹೇಳಿದ್ದಾರೆ.

ಇದನ್ನೂ ಓದಿ: Healthy Food For Dengue: ಈ ಆಹಾರಗಳನ್ನು ತಿನ್ನಿ; ಡೆಂಗ್ಯೂಗೆ ಡೋಂಟ್ ಕೇರ್ ಅನ್ನಿ

Continue Reading
Advertisement
Cauvery Dispute
ರಾಜಕೀಯ46 seconds ago

Cauvery Dispute: ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಬಿಡಲು ಸೂಚನೆ; ಸರ್ವಪಕ್ಷ‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ

haveri News
ಹಾವೇರಿ2 mins ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಕರ್ನಾಟಕ20 mins ago

Wakf Board Scam: ವಾಲ್ಮೀಕಿ ನಿಗಮದ ಬಳಿಕ ವಕ್ಫ್ ಬೋರ್ಡ್‌ನಲ್ಲಿ ಹಗರಣ ಬೆಳಕಿಗೆ; ಮಾಜಿ ಸಿಇಒ ವಿರುದ್ಧ ಎಫ್‌ಐಆರ್!

Bhavana Ramanna hoovu foundation Varna Spardhe Bharathanatya Competition
ಸಿನಿಮಾ30 mins ago

Bhavana Ramanna: ನಟಿ ಭಾವನ ಸಂಸ್ಥೆಯಿಂದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ; ಪ್ರಥಮ ಬಹುಮಾನಕ್ಕಿದೆ ಒಂದು ಲಕ್ಷ ರೂ.

Road Accident
ಬೆಂಗಳೂರು ಗ್ರಾಮಾಂತರ41 mins ago

Road Accident : ಲಾಂಗ್‌ ಡ್ರೈವ್‌ ಹೋದ ಯುವಕರಿಬ್ಬರು ಹಿಟ್ ಆ್ಯಂಡ್ ರನ್‌ಗೆ ಬಲಿ; ನಿಲ್ಲದ ನಿಶಾಚರಿಗಳ ಕಾಟ

Gold Rate Today
ಚಿನ್ನದ ದರ43 mins ago

Gold Rate Today: ಮತ್ತೆ ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ; ಆಭರಣ ಕೊಳ್ಳುವ ಮುನ್ನ ದರ ಗಮನಿಸಿ

Chandan Shetty talk about Nivedita other marriage
ಸ್ಯಾಂಡಲ್ ವುಡ್59 mins ago

Chandan Shetty: ನಿವೇದಿತಾ ಇನ್ನೊಂದು ಮದುವೆ ಆದ್ರೆ ಓಕೆ ನಾ? ಚಂದನ್‌ ಶೆಟ್ಟಿ ಹೇಳಿದ್ದೇನು?

Valmiki Corporation Scam
ಕರ್ನಾಟಕ1 hour ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರಗೆ ಮುಂದುವರೆದ ಇಡಿ ಡ್ರಿಲ್

Donald Trump Assassination Bid
ವಿದೇಶ1 hour ago

Donald Trump Assassination Bid: ಟ್ರಂಪ್ ಹತ್ಯೆಗೆ ಯತ್ನಿಸಿದವನನ್ನು ಸ್ನೈಪರ್ ರೈಫಲ್‌‌ನಿಂದ ಹೊಡೆದುರುಳಿಸಿದ ಕಮಾಂಡೊ! ವಿಡಿಯೊ ನೋಡಿ

karnataka Rain
ಮಳೆ1 hour ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 hour ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ18 hours ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ24 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ5 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ5 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ6 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ6 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

ಟ್ರೆಂಡಿಂಗ್‌