ಸಿನಿಮಾ
Kannada New Movie: ಐದು ಕಥೆಗಳನ್ನೊಂಡ ʻಪೆಂಟಗನ್ʼ ಸಿನಿಮಾ ರಿಲೀಸ್ ಡೇಟ್ ಫಿಕ್ಸ್
ಐವರು ನಿರ್ದೇಶಕರು ನಿರ್ದೇಶನ (Kannada New Movie) ಮಾಡಿರುವ ಚಿತ್ರವಾಗಿದ್ದು, ಇದೀಗ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಗೊಂಡಿದೆ. ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಕಥೆಯಲ್ಲಿ ಮುಖ್ಯಪಾತ್ರವನ್ನು ಕಿಶೋರ್ ಮಾಡಿದ್ದಾರೆ.
ಬೆಂಗಳೂರು: `ಪೆಂಟಗನ್‘ ಸಿನಿಮಾ (Pentagon Movie) ಐದು ಕಥೆಗಳನ್ನು (Kannada New Movie) ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಚಿತ್ರವಾಗಿದ್ದು, ಇದೀಗ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಗೊಂಡಿದೆ. ಚಿತ್ರದ 5ನೇ ಟೀಸರ್ ಜನವರಿ 18 ರಂದು ಬಿಡುಗಡೆಯಾಗಿದ್ದು, ನೋಡುಗರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಸಿನಿಮಾ ಏಪ್ರಿಲ್ 7 ರಂದು ದೇಶಾದ್ಯಂತ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಗುರು ದೇಶಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಪೆಂಟಗನ್’ ಸಿನಿಮಾದ ಐದನೇ ಕಥೆಯ ಟೀಸರ್ ಕನ್ನಡಪರ ಹೋರಾಟಗಾರರ ಕಥೆಯನ್ನು ಇದು ಒಳಗೊಂಡಿದೆ ಎನ್ನಲಾಗುತ್ತಿದೆ. ಟೀಸರ್‌ನಲ್ಲಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. `ಪೆಂಟಗನ್’ ಒಂದೊಂದು ಕಥೆಯನ್ನು ಒಬ್ಬೊಬ್ಬರು ನಿರ್ದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಕಥೆಯಲ್ಲಿ ಮುಖ್ಯಪಾತ್ರವನ್ನು ಕಿಶೋರ್ ಮಾಡಿದ್ದಾರೆ. ಜತೆಗೆ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಕೂಡ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Pentagon Movie | ಪೆಂಟಗನ್ ಟೀಸರ್ ವಿವಾದ, ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ರಾ ನಿರ್ದೇಶಕರು?
ಸಿನಿಮಾ ಟ್ರೈಲರ್ ಬಿಡುಗಡೆಯಾದ ದಿನದಿಂದ ನಿರೀಕ್ಷೆ ಮೂಡಿಸಿದೆ. ʻಪೆಂಟಗನ್’ ಸಿನಿಮಾದಲ್ಲಿ ‘ಶಿವಾಜಿ ಸುರತ್ಕಲ್’ ಖ್ಯಾತಿಯ ಆಕಾಶ್ ಶ್ರೀವತ್ಸ, ‘ಬ್ರಹ್ಮಚಾರಿ’ ಖ್ಯಾತಿಯ ಚಂದ್ರ ಮೋಹನ್, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ಹೊಸ ಪ್ರತಿಭೆ ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಜೀ ಸಿನಿಮಾಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ ಇದೆ.
ಗುರು ದೇಶಪಾಂಡೆ ಟ್ವೀಟ್
ಪ್ರಕಾಶ್ ಬೆಳವಾಡಿ, ಕಿಶೋರ್, ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ. ಜೀ ಸಿನಿಮಾಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ.
ಕಿರುತೆರೆ
Smriti Irani: ಗರ್ಭಪಾತದ ನೋವಿನ ಮಧ್ಯೆಯೂ ಧಾರಾವಾಹಿ ಚಿತ್ರೀಕರಣಕ್ಕೆ ತೆರಳಿದ ಕಥೆ ಹಂಚಿಕೊಂಡ ಸ್ಮೃತಿ ಇರಾನಿ
ಸಚಿವೆ ಸ್ಮೃತಿ ಇರಾನಿ (Smriti Irani) ಅವರು ತಾವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಸಮಯದಲ್ಲಿ ಗರ್ಭಪಾತವಾದಾಗ ಅನುಭವಿಸಿದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.
ಮುಂಬೈ: ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಈ ಹಿಂದೆ ಹಿಂದಿ ತೆರೆ ಮೇಲೆ ಮಿಂಚಿದವರು. ರಾಮಾಯಣ ಸೇರಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದವರು. ಅವರ ತೆರೆ ಜೀವನ ಅಷ್ಟೊಂದು ಸುಲಭವಾಗಿಯೂ ಇರಲಿಲ್ಲ. ಆರೋಗ್ಯದಲ್ಲಿ ಏರು ಪೇರಾದಗಲೂ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲೇಬೇಕಾಗಿತ್ತಂತೆ. ಈ ವಿಚಾರವನ್ನು ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral News : ಪ್ರಿಯತಮನೊಂದಿಗೆ ಸೇರಿ ಇಬ್ಬರು ಮಕ್ಕಳನ್ನೇ ಕೊಂದ ತಾಯಿ!
ಸ್ಮೃತಿ ಇರಾನಿ ಅವರು ಏಕ್ತಾ ಕಪೂರ್ ನಿರ್ಮಾಣದ ʼಕ್ಯೂಕಿ ಸಾಸ್ ಭೀ ಕಭಿ ಬಹು ಥೀʼ ಹಾಗೂ ರವಿ ಚೋಪ್ರಾ ನಿರ್ಮಾಣದ ʼರಾಮಾಯಣʼ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದರು. ಆ ವೇಳೆ ಅವರು ಗರ್ಭಿಣಿಯಾಗಿದ್ದರಂತೆ. ಆದರೆ ಆ ವಿಚಾರ ಸ್ವತಃ ನಟಿಗೇ ತಿಳಿದಿರಲಿಲ್ಲವಂತೆ. ಧಾರಾವಾಹಿ ಚಿತ್ರೀಕರಣದಲ್ಲಿದ್ದ ವೇಳೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಅವರು ಆಸ್ಪತ್ರೆಗೆ ತೆರಳಲು ಆಟೋ ಹತ್ತಿದ್ದಾರೆ. ಆಗ ಅವರಲ್ಲಿ ವಿಪರೀತವಾಗಿ ರಕ್ತಸ್ರಾವ ಆಗಲಾರಂಭಿಸಿದೆ.
ಆಸ್ಪತ್ರೆಗೆ ಹೋದೊಡನೆ ನರ್ಸ್ ಒಬ್ಬರು ಸ್ಮೃತಿ ಅವರ ಬಳಿ ಓಡಿ ಬಂದು ಆಟೋಗ್ರಾಫ್ ತೆಗೆದುಕೊಂಡಿದ್ದಾರೆ. ಆಗ ನಟಿ “ನನಗೆ ಗರ್ಭಪಾತವಾದಂತಿದೆ. ದಯವಿಟ್ಟು ಬೇಗ ಅಡ್ಮಿಟ್ ಮಾಡಿಕೊಳ್ಳಿ” ಎಂದು ಹೇಳಿ ಮನವಿ ಮಾಡಿದ್ದರಂತೆ. ಈ ವಿಚಾರವನ್ನು ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಜಪಾನ್‌ನಲ್ಲಿ ಮಗನಿಗಾಗಿ ಆರ್‌ಆರ್‌ಆರ್ ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ತಾಯಿ
“ನಾನು ಗರ್ಭಪಾತವಾಗಿದೆ ಎಂದು ಹೇಳಿದರೆ ಧಾರಾವಾಹಿ ತಂಡ ನಂಬುವುದಕ್ಕೆ ಸಿದ್ಧವಿರಲೇ ಇಲ್ಲ. ಗರ್ಭಪಾತವಾದ ಮಾರನೇ ದಿನವೇ ನಾನು ಚಿತ್ರೀಕರಣದ ಸೆಟ್‌ಗೆ ಹೋಗಿ ಏಕ್ತಾ ಅವರಿಗೆ ದಾಖಲೆಗಳನ್ನು ತೋರಿಸಬೇಕಾಯಿತು. ಆದರೆ ರಾಮಾಯಣ ತಂಡದಲ್ಲಿ ಆ ಸಮಸ್ಯೆ ಆಗಲಿಲ್ಲ. ನಿರ್ಮಾಪಕ ರವಿ ಅವರಿಗೆ ಕರೆ ಮಾಡಿ ಹೇಳಿದಾಕ್ಷಣ ಅವರೇ ನಿನಗೆ ಬೇಕಾದಷ್ಟು ದಿನ ವಿಶ್ರಾಂತಿ ಪಡೆದುಕೊ ಎಂದು ಹೇಳಿದರು” ಎಂದು ನಟಿ ಹೇಳಿದ್ದಾರೆ.
South Cinema
Actor Nani: ನಾನಿ ಅಭಿನಯದ ʻದಸರಾʼ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ 36 ಕಟ್ ಸೂಚನೆ
ಸೆನ್ಸಾರ್ (Actor Nani) ಮಂಡಳಿಯು 36 ಕಟ್ಗಳನ್ನು ಸೂಚಿಸಿದೆ. ಇದೀಗ ಯು/ಎ ಪ್ರಮಾಣಪತ್ರವನ್ನು ನೀಡಿದ್ದು, ತೆಲುಗುವಿನಲ್ಲಿ ಸೆನ್ಸಾರ್ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದು ವರದಿಯಾಗಿದೆ. .
ಬೆಂಗಳೂರು: ತೆಲುಗು ನಟ ನಾನಿ (Actor Nani) ಅಭಿನಯದ ದಸರಾ ಸಿನಿಮಾ ಮಾರ್ಚ್ 30ರಂದು ಬಿಡುಗಡೆಯಾಗುತ್ತಿದೆ. ನಿರ್ದೇಶಕ-ಲೇಖಕ ಶ್ರೀಕಾಂತ್ ಒಡೆಲಾ ಅವರು ನಾನಿ ಅಭಿನಯದ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾನಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆನ್ಸಾರ್ ಮಂಡಳಿಯು 36 ಕಟ್ಗಳನ್ನು ಸೂಚಿಸಿದೆ. ಇದೀಗ ಯು/ಎ ಪ್ರಮಾಣಪತ್ರವನ್ನು ನೀಡಿದ್ದು, ತೆಲುಗಿನಲ್ಲಿ ಸೆನ್ಸಾರ್ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದು ವರದಿಯಾಗಿದೆ. .
ದೃಶ್ಯಗಳನ್ನು ತೆಗೆಯುವ ಹೊರತಾಗಿ, ವಿವಿಧ ಫ್ರೇಮ್‌ಗಳಿಂದ ಕೆಲವು ಆಡಿಯೊ ಮತ್ತು ಸಂಭಾಷಣೆಗಳನ್ನು ತೆಗೆದುಹಾಕಲಾಗಿದೆ. ಸೆನ್ಸಾರ್ ಮಂಡಳಿ ಸದಸ್ಯರು ಕೆಲವು ಸೀಕ್ವೆನ್ಸ್‌ಗಳಿಂದ ಸಬ್‌ಟೈಟಲ್ ತೆಗೆದುಹಾಕಲು ಸೂಚಿಸಿದ್ದಾರೆ. ಅದರಲ್ಲಿಯೂ ಕುಡಿತವನ್ನು ವೈಭವೀಕರಿಸುವ ಹಲವು ದೃಶ್ಯಗಳಿಗೆ ಹಾಗೂ ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳಿಗೆ ಹಲವು ಕಟ್ಗಳನ್ನು ಸೂಚಿಸಿದೆ. ಇವಲ್ಲದೆ ಸಿನಿಮಾದ ಪ್ರಚಾರದಲ್ಲಿಯೂ ಬಳಸಲಾಗುತ್ತಿರುವ ಬಾಂಚೆತ್ ಹಾಗೂ ಬದ್ದಲು ಬಾಸಿಂಗಾಲೈತಾಯ್ ಸಂಭಾಷಣೆಗಳನ್ನು ಸಹ ಮ್ಯೂಟ್ ಮಾಡಲಾಗಿದೆ. ಸಿನಿಮಾಕ್ಕೆ ಅಂತಿಮವಾಗಿ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ.
ಮಾರ್ಚ್ 26 ರಂದು ಆಂಧ್ರಪ್ರದೇಶದ ಅನಂತಪುರದ ಆರ್ಟ್ಸ್ ಕಾಲೇಜು ಮೈದಾನದಲ್ಲಿ ದಸರಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ ಎಂದು ಎಸ್‌ಎಲ್‌ವಿ ಸಿನಿಮಾಸ್ ಹೇಳಿಕೊಂಡಿದೆ. “ಧೂಮ್ ಧಾಮ್ ದಸರಾ ಆಚರಣೆಗೆ ಸಿದ್ಧರಾಗಿ. ಮಾರ್ಚ್ 26 ರಂದು ಅನಂತಪುರದ ಆರ್ಟ್ಸ್ ಕಾಲೇಜ್ ಮೈದಾನದಲ್ಲಿ ದಸರಾ ಗ್ರ್ಯಾಂಡ್ ಪ್ರಿ-ರಿಲೀಸ್ ಈವೆಂಟ್” ಎಂದು ಪ್ರೊಡಕ್ಷನ್ ಹೌಸ್ ಟ್ವೀಟ್ ಮಾಡಿದೆ.
ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: Dasara Movie: ನ್ಯಾಚುರಲ್ ಸ್ಟಾರ್ ನಾನಿ ‘ದಸರಾ’ದಲ್ಲಿ ಮಿಂಚಲಿದ್ದಾರೆ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ
ಬಹು ದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ‘ದಸರಾ’ ಸಿನಿಮಾ ಮೂಡಿ ಬಂದಿದೆ.
South Cinema
Kiran Govi: `ಪಯಣ’ ಸಿನಿಮಾ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ ನಿಧನ, ಹೃದಯಾಘಾತವೇ ಕಾರಣ
ಪಯಣ ಸಿನಿಮಾ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ (Kiran Govi)ನಿಧನರಾಗಿದ್ದಾರೆ. ಸಂಚಾರಿ, ʻಯಾರಿಗೆ ಯಾರುಂಟುʼ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು.
ಬೆಂಗಳೂರು: ರವಿಶಂಕರ್ ನಾಯಕ ನಟರಾಗಿ ನಟಿಸಿದ್ದ ಪಯಣ ಸಿನಿಮಾ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ (Kiran Govi) ನಿಧನರಾಗಿದ್ದಾರೆ. ಅವರಿಗೆ 40 ವರ್ಷ ಆಗಿತ್ತು. ಮಾರ್ಚ್ 25ರಂದು ತಮ್ಮ ಕಚೇರಿಯಲ್ಲಿದ್ದಾಗ ಕಿರಣ್ ಅವರಿಗೆ ಹೃದಯಾಘಾತವುಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಂಚಾರಿ, ʻಯಾರಿಗೆ ಯಾರುಂಟುʼ ಹೀಗೆ ಹಲವು ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು.
ತುಮಕೂರು ಮೂಲದವರಾದ ಕಿರಣ್ ಗೋವಿ ಗಾಯನದಲ್ಲಿ ತುಂಬಾ ಆಸಕ್ತಿ ಇತ್ತು. ಹಾಗಾಗಿ ಆರ್ಕೆಸ್ಟ್ರಾ ಸೇರಿಕೊಂಡಿದ್ದರು. ಮುಂದೆ ಸಿನಿಮಾ ಲೋಕ ಪ್ರವೇಶಿಸಿ ನಿರ್ದೇಶಕರಾದರು. ನಿರ್ದೇಶಕ ಕಿರಣ್ ಗೋವಿ ನಿಧನಕ್ಕೆ ಸ್ಯಾಂಡಲ್ವುಡ್ನ ಕೆಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಒರಟ ಖ್ಯಾತಿಯ ಪ್ರಶಾಂತ್ ಜತೆಗೆ ಸಂಚಾರಿ ಹೆಸರಿನ ಸಿನಿಮಾವನ್ನು ಮಾಡಿದ್ದರು.
ಇದನ್ನೂ ಓದಿ: Ajith Kumar: ತಮಿಳು ನಟ ಅಜಿತ್ ಕುಮಾರ್ ತಂದೆ ಪಿ ಸುಬ್ರಮಣ್ಯಂ ನಿಧನ
ಯಾರಿಗೆ ಯಾರುಂಟು ಸಿನಿಮಾ ಬಿಡುಗಡೆಯಾದಾಗ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಡುಗಳಷ್ಟೇ ಮಾಧುರ್ಯ ಹೊಂದಿರುವ ಕಥೆ, ಮನೋರಂಜನೆ, ಜೀವನಪ್ರೇಮದ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಗಳನ್ನು ತಣಿಸುತ್ತಲೇ ಗೆಲುವಿನ ಯಾನ ಆರಂಭಿಸಿತ್ತು.
South Cinema
Samantha Ruth Prabhu: `ಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಬೇಕಂತಿದ್ದ ಸಮಂತಾ: ಕಾರಣವೇನು?
ನಟಿ (Samantha Ruth Prabhu) ಸಂದರ್ಶನವೊಂದರಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಯವನ್ನು ಹೇಗೆ ಎದುರಿಸಿದ್ದೆ ಹಾಗೂ ʻಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಿ, ಬಳಿಕ ಯಾಕೆ ಒಪ್ಪಿಕೊಂಡೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.
ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಅವರ ಮುಂಬರುವ ಪೌರಾಣಿಕ ಚಿತ್ರ ಶಾಕುಂತಲಂ (Shaakuntalam) ಏಪ್ರಿಲ್ 14 ರಂದು ತೆರೆ ಕಾಣುತ್ತಿದೆ. ಸ್ಯಾಮ್ ಅಭಿಮಾನಿಗಳು ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ನಟಿ ಸಂದರ್ಶನವೊಂದರಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಯವನ್ನು ಹೇಗೆ ಎದುರಿಸಿದ್ದೆ ಹಾಗೂ ʻಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಿ, ಬಳಿಕ ಯಾಕೆ ಒಪ್ಪಿಕೊಂಡೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.
ಸಮಂತಾ ಮಾತನಾಡಿ ʻʻನಾನು ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣವನ್ನು ಪೂರ್ಣಗೊಳಿಸಿದ ಸಮಯದಲ್ಲಿ ನನಗೆ ಈ ಆಫರ್ ಬಂದಿತು. ನಾನು ಆಗಷ್ಟೇ ಶಾಕುಂತಲೆಗಿಂತ ವಿಭಿನ್ನವಾದ ರಾಜಿ ಪಾತ್ರವನ್ನು ನಿರ್ವಹಿಸಿದ್ದೆ. ಶಾಕುಂತಲೆ ಪಾತ್ರ ಪಾವಿತ್ರ್ಯತೆ, ಮುಗ್ಧತೆ ಮತ್ತು ಘನತೆಯ ಸಂಕೇತವಾಗಿದೆ. ಆ ಸಮಯದಲ್ಲಿ ನಾನು ಶಾಕುಂತಲೆ ಆಗಿ ಬದಲಾಗಬಹುದೇ ಎಂದು ನನಗೆ ಖಚಿತ ಇರಲಿಲ್ಲʼʼಬಎಂದು ಸಮಂತಾ ಹೇಳಿದ್ದಾರೆ.
ʻಬಳಿಕ ನಾನು ಶಾಕುಂತಲೆ ಪಾತ್ರ ನನಗೊಂದು ಅವಕಾಶ ಎಂದು ಸಹಿ ಹಾಕಿದೆ. ಕಳೆದ 3 ವರ್ಷಗಳಲ್ಲಿ, ನಾನು ತುಂಬ ಭಯದಿಂದ ಬದುಕಿದ್ದೇನೆ. ಶಾಕುಂತಲೆ ಕೂಡ ತುಂಬ ಕಷ್ಟಗಳನ್ನು ಎದುರಿಸಿದ್ದಳು. ಆದರೆ ಅವಳು ಎಲ್ಲವನ್ನೂ ಘನತೆಯಿಂದ ಎದುರಿಸಿದಳು. ನನ್ನ ಭಯವನ್ನು ಎದುರಿಸಲು ನಾನು ಈ ಸಿನಿಮಾ ತೆಗೆದುಕೊಂಡೆ. ಕಳೆದ ಮೂರು ವರ್ಷಗಳಲ್ಲಿ ನನ್ನ ಭಯವನ್ನು ನಾನು ಹೇಗೆ ಎದುರಿಸಿದೆ ಎಂಬುದು ನಟಿಯಾಗಿ ನನ್ನ ವಿಕಾಸವನ್ನು ವಿವರಿಸುತ್ತದೆ’ ಎಂದು ಹೇಳಿದರು.
ಇದನ್ನೂ ಓದಿ: Samantha: ಸಮಂತಾ ಅಭಿನಯದ ʻಶಾಕುಂತಲಂʼ ಸಿನಿಮಾದಲ್ಲಿ ನಟ ಜಿಶು ಸೇನಗುಪ್ತಾ ಪಾತ್ರವೇನು?
ಏಪ್ರಿಲ್ 14 ರಂದು ತೆರೆಗೆ
ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ದೇವ್ ಮೋಹನ್ ಸಮಂತಾ ಎದುರು ನಾಯಕ ನಟನಾಗಿ ನಟಿಸಲಿದ್ದಾರೆ. ಮಹಾಕವಿ ಕಾಳಿದಾಸನ ʻಅಭಿಜ್ಞಾನ ಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
-
ಅಂಕಣ19 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ19 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ19 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ20 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ17 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ13 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಕರ್ನಾಟಕ17 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಅಂಕಣ14 hours ago
ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!