Kantara Movie | ʻಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರʼ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು ಕಾಂತಾರ! - Vistara News

ಸಿನಿಮಾ

Kantara Movie | ʻಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರʼ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು ಕಾಂತಾರ!

ಕಾಂತಾರ ಸಿನಿಮಾ ʻಕರ್ನಾಟಕದಲ್ಲಿ (Kantara Movie) ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರʼ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೊಂಬಾಳೆ ಫಿಲಮ್ಸ್‌ ಹೇಳಿಕೊಂಡಿದೆ.

VISTARANEWS.COM


on

Kantara Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಕಾಂತಾರ ಸಿನಿಮಾ (Kantara Movie) ಅಕ್ಟೋಬರ್‌ 30ರಂದು ಬಿಡುಗಡೆಯಾಗಿತ್ತು. 200ಕೋಟಿ ರೂ. ಚಿತ್ರ ಈಗಾಗಲೇ ಗಳಿಕೆ ಕಂಡಿದೆ ಎನ್ನಲಾಗುತ್ತಿದೆ. ಪರಭಾಷೆಯಲ್ಲಿಯೂ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೆ ದೀಪಾವಳಿಗೆ ಹೊಂಬಾಳೆ ಫಿಲಮ್ಸ್ ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ. ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ.

ಕನ್ನಡದಲ್ಲಿ ಈವರೆಗೆ ಕೆಜಿಎಫ್‌, 777 ಚಾರ್ಲಿ ಬಗ್ಗೆಯೇ ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಕಾಂತರ ಸಿನಿಮಾ ವಿಶ್ವದೆಲ್ಲಡೆ ತನ್ನ ಛಾಪು ಮೂಡಿಸಿದೆ. ಸ್ವತಃ ಹೊಂಬಾಳೆ ಫಿಲಮ್ಸ್ ಈ ಬಗ್ಗೆ ಟ್ವೀಟ್‌ ಮೂಲಕ ಹಂಚಿಕೊಂಡಿದ್ದು ʻʻಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ.. ಧನ್ಯವಾದ ಕರ್ನಾಟಕʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ರಿಷಬ್ ಒಳಗಿನ ಬರಹಗಾರ, ನಟ ಹಾಗೂ ನಿರ್ದೇಶಕನ ಅಭಿಮಾನಿಯಾದೆ: ಡಾಲಿ ಧನಂಜಯ್‌!

ವಿವಾದದ ನಡುವೆಯೂ ಕಾಂತಾರ ನೋಡಿದ ಪ್ರೇಕ್ಷಕರು ಈ ಸಿನಿಮಾಗೆ ಆಸ್ಕರ್‌ ಅವಾರ್ಡ್‌ಗೆ ನಿರ್ದೇಶನ ಮಾಡಬೇಕು ಎಂದು ಟ್ವೀಟ್‌ನಲ್ಲಿ ಆಂದೋಲನ ನಡೆಸಿದ್ದರು .ʻʻಕಾಂತಾರ ಚಿತ್ರದಲ್ಲಿ ಕಾಡಿನ ರಕ್ಷಣೆಯ ಜಾಗೃತಿ ಮೂಡಿಸಲಾಗಿದೆ. ಅಷ್ಟೇ ಅಲ್ಲ ದೈವಗಳ ಬಗ್ಗೆ ಪರಿಚಯಿಸಲಾಗಿದೆ. ಹಿನ್ನೆಲೆ ಸಂಗೀತ, ಸಿನಿಮಾದ ಛಾಯಾಗ್ರಹಣದ ಮೂಲಕವೂ ಸಿನಿಮಾ ಗಮನ ಸೆಳೆದಿದೆ. ಕಾಂತಾರ ಚಿತ್ರವನ್ನು ಆಸ್ಕ್‌ರ್‌ಗೆ ನಾಮನಿರ್ದೇಶನ ಮಾಡಬೇಕುʼʼ ಎಂದು ಅನೇಕರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ | Kantara Movie | ಕಾಂತಾರ ಮತ್ತು ಧರ್ಮ: ಸಿನಿಮಾ ಸುತ್ತ ಎದ್ದಿರುವ ವಿವಾದಕ್ಕೆ ಖಡಕ್‌ ಉತ್ತರ ನೀಡಿದ ನಟ ಕಿಶೋರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Singer Suchitra: ಶಾರುಖ್ – ಕರಣ್ ಸಲಿಂಗಿಗಳು ಎಂದು ಹೇಳಿ ವಿವಾದ ಸೃಷ್ಟಿಸಿದ ತಮಿಳು ಗಾಯಕಿ!

Singer Suchitra: ಸಂದರ್ಶನದಲ್ಲಿ, ಸುಚಿತ್ರಾ ತನ್ನ ಮಾಜಿ ಪತಿ ಕಾರ್ತಿಕ್ ಕುಮಾರ್ ‘ಸಲಿಂಗಕಾಮಿ’ ಎಂದು ಹೇಳಿಕೊಂಡಿದ್ದಾರೆ. ಲಂಡನ್ ಪ್ರವಾಸದ ವೇಳೆ ಮಾಜಿ ಪತಿ ಕಾರ್ತಿಕ್ ಕುಮಾರ್, ಶಾರುಖ್ ಮತ್ತು ಕರಣ್ ಒಟ್ಟಿಗೇ ಪಾರ್ಟಿಗಳಿಗೆ ತೆರಳಿದ್ದರು ಎಂದು ಸುಚಿತ್ರಾ ಹೇಳಿದ್ದಾರೆ. ಸಲಿಂಗಕಾಮಿಗಳಿಗೆ ಕಾನೂನುಬದ್ಧವಾಗಿ ಅವಕಾಶವಿರುವ ದೇಶಗಳಿಗೆ ಅವರು ಹೋಗುತ್ತಾರೆ ಎಂದಿದ್ದಾರೆ.

VISTARANEWS.COM


on

Singer Suchitra makes shocking aligeations against shahrukh khan
Koo

ಬೆಂಗಳೂರು: ಗಾಯಕಿ ಸುಚಿತ್ರಾ ರಾಮದುರೈ (Singer Suchitra) ಅವರು ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಮತ್ತು ಸೂಪರ್ ಸ್ಟಾರ್ ಶಾರುಖ್ ಖಾನ್ ಬಗ್ಗೆ ಕೆಲವು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ತಮ್ಮ ಮಾಜಿ ಪತಿ ನಟ ಕಾರ್ತಿಕ್ ಕುಮಾರ್, ನಟರಾದ ಧನುಷ್, ವಿಜಯ್, ಕಮಲ್ ಹಾಸನ್, ನಟಿ ತ್ರಿಶಾ ಸೇರಿದಂತೆ ಹಲವರ ಬಗ್ಗೆ ನಾನಾ ರೀತಿಯಲ್ಲಿ ಆರೋಪ ಮಾಡಿದ್ದಾರೆ. ಕಾರ್ತಿಕ್, ಧನುಷ್ ಇಬ್ಬರೂ ಸಲಿಂಗಕಾಮಿಗಳು ಎಂದಿದ್ದಾರೆ.

ಸಂದರ್ಶನದಲ್ಲಿ, ಸುಚಿತ್ರಾ ತನ್ನ ಮಾಜಿ ಪತಿ ಕಾರ್ತಿಕ್ ಕುಮಾರ್ ‘ಸಲಿಂಗಕಾಮಿ’ ಎಂದು ಹೇಳಿಕೊಂಡಿದ್ದಾರೆ. ಲಂಡನ್ ಪ್ರವಾಸದ ವೇಳೆ ಮಾಜಿ ಪತಿ ಕಾರ್ತಿಕ್ ಕುಮಾರ್, ಶಾರುಖ್ ಮತ್ತು ಕರಣ್ ಒಟ್ಟಿಗೇ ಪಾರ್ಟಿಗಳಿಗೆ ತೆರಳಿದ್ದರು ಎಂದು ಸುಚಿತ್ರಾ ಹೇಳಿದ್ದಾರೆ. ಸಲಿಂಗಕಾಮಿಗಳಿಗೆ ಕಾನೂನುಬದ್ಧವಾಗಿ ಅವಕಾಶವಿರುವ ದೇಶಗಳಿಗೆ ಅವರು ಹೋಗುತ್ತಾರೆ ಎಂದಿದ್ದಾರೆ. ಈ ಬಗ್ಗೆ ಕಾರ್ತಿಕ್ ಖುದ್ದು ನನಗೆ ಈ ವಿಷಯ ಹೇಳಿದ್ದರು. ಕರಣ್- ಶಾರುಖ್ ಸಲಿಂಗಕಾಮಿಗಳಿಗೆ ಸ್ವತಂತ್ರವಾಗಿರುವ ಅವಕಾಶವಿರುವ ಜಾಗಗಳಿಗೆ ಹೋಗುತ್ತಾರೆ. ಅಲ್ಲಿ ನಡೆಯುವ ಪಾರ್ಟಿಗಳಿಗೆ ಗೇಗಳ ರೀತಿ ವೇಷ ಬದಲಿಸಿಕೊಂಡು ಅವರೊಟ್ಟಿಗೆ ಸೇರಿ ಪಾರ್ಟಿಯಲ್ಲಿ ಸೇರಿಕೊಳ್ಳುತ್ತಾರೆ. ಕಾರ್ತಿಕ್ ಕೂಡ ಅಲ್ಲಿ ಹೋದಾಗ ಅವರಿಬ್ಬರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದರುʼʼಎಂದರು.

ಇದನ್ನೂ ಓದಿ: Jr NTR: ಜ್ಯೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್ ಸಿನಿಮಾ ಟೈಟಲ್‌ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್‌?

ಸುಚಿತ್ರಾ ತಮಿಳು ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಎಕ್ಸ್‌ಕ್ಯೂಸ್ ಮಿ, ಎನ್ ಇಧಯಂ ಸೇರಿದತೆ ಅನೇಕ ಹಿಟ್‌ ಹಾಡುಗಳನ್ನು ಹಾಡಿದ್ದಾರೆ. ಸುಚಿತ್ರಾ ಈ ಹಿಂದೆ ಕಮಲ್‌ ಹಾಸನ್‌ ಬಗ್ಗೆಯೂ ಹೇಳಿಕೆ ನೀಡಿದ್ದರು. ʻʻಕಮಲ್‌ ಅವರು ಹೆಚ್ಚಾಗಿ ಕುರ್ತಾ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ‘ವಿಶ್ವರೂಪಂ’ ಚಿತ್ರದಲ್ಲಿ ಕ್ಲಾಸಿಕಲ್ ಡ್ಯಾನ್ಸ್ ಕಲಿಸುವಾಗ ಕಮಲ್ ಎಕ್ಸ್‌ಪ್ರೇಶನ್ ಬಹುತೇಕ ಟ್ರಾನ್ಸ್‌ಜೆಂಡರ್ ರೀತಿ ಇರುತ್ತದೆʼʼಎಂದಿದ್ದರು.

ಇದೆಲ್ಲದರ ಜತೆಗೆ ಧನುಷ್‌ ಮತ್ತು ಐಶ್ವರ್ಯಾ ಅವರ ಡಿವೋರ್ಸ್‌ ವಿಚಾರವಾಗಿಯೂ ಮಾತನಾಡಿದ್ದಾರೆ. ಧನುಷ್‌ ಮತ್ತು ಐಶ್ವರ್ಯಾ ಅವರಿಗೆ ದಾಂಪತ್ಯ ಜೀವನ ಸಾಕಾಗಿದೆ. ಇಬ್ಬರೂ ಬೇರೆಯವರ ಜತೆ ಡೇಟಿಂಗ್‌ ನಡೆಸುತ್ತಿದ್ದಾರೆ. ಐಶ್ವರ್ಯಾ ಮಕ್ಕಳಿಗೆ ಒಳ್ಳೆಯ ತಾಯಿಯಾಗಲಿಲ್ಲ. ಒಬ್ಬರಿಗೊಬ್ಬರು ಮೋಸ ಮಾಡುತ್ತಾ ಇರುವ ಬದಲು ದೂರಾಗೋಣ ಎಂದು ನಿರ್ಧರಿಸಿದ್ದಾರೆʼʼಎಂದಿದ್ದಾರೆ. ಸುಚಿತ್ರಾ ಅವರು ಸ್ಟ್ಯಾಂಡಪ್ ಕಮಿಡಿಯನ್, ನಟ ಕಾರ್ತಿಕ್ ಕುಮಾರ್ ಅವರನ್ನು ಹಿಂದೆ ಮದುವೆ ಆಗಿದ್ದರು. ಈಗ ಜೋಡಿ ದೂರವಾಗಿದೆ.

Continue Reading

ಟಾಲಿವುಡ್

Kajal Aggarwal: ವಿಷ್ಣು ಮಂಚು `ಕಣ್ಣಪ್ಪ’ ಚಿತ್ರಕ್ಕೆ ಕಾಜಲ್ ಅಗರ್​ವಾಲ್​​ ಎಂಟ್ರಿ; ಪಾತ್ರ ಏನಿರಬಹುದು?

Kajal Aggarwal: ಈ ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ಬಹು ತಾರಾಗಣವೇ ಇದೆ. ಇತ್ತೀಚೆಗಷ್ಟೇ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಸಹ ಈ ಚಿತ್ರದ ಮೂಲಕ ಸೌತ್‌ ಕಡೆಗೆ ವಾಲಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಪ್ರಭಾಸ್ ಸಹ ಕೆಲವು ದಿನಗಳ ಹಿಂದೆ ಕಣ್ಣಪ್ಪ ತಂಡವನ್ನು ಸೇರಿಕೊಂಡರು. ಈಗ ಕಾಜಲ್‌ ಅಗರ್‌ವಾಲ್‌ ಸರದಿ.

VISTARANEWS.COM


on

Kajal Aggarwal Kannappa Movie Entry
Koo

ಬೆಂಗಳೂರು: ಪಾತ್ರವರ್ಗದ ವಿಚಾರವಾಗಿಯೇ ಸಾಕಷ್ಟು ಸದ್ದು ಮಾಡುತ್ತಿದೆ ತೆಲುಗಿನ ʻಕಣ್ಣಪ್ಪʼ ಸಿನಿಮಾ. ಆಗೊಬ್ಬರು ಈಗೊಬ್ಬರು ಈ ಚಿತ್ರದ ತಾರಾಬಳಗ ಸೇರಿಕೊಳ್ಳುತ್ತಲೇ ಇದ್ದಾರೆ. ಇದೀಗ ಮತ್ತೊಬ್ಬರು ಸ್ಟಾರ್‌ ನಟಿ ಈ ತಂಡ ಸೇರಿಕೊಂಡಿದ್ದಾರೆ. ಅದು ಬೇರಾರು ಅಲ್ಲ, ನಟಿ ಕಾಜಲ್‌ ಅಗರ್‌ವಾಲ್! ವಿಷ್ಣು ಮಂಚು ಮತ್ತು ಕಾಜಲ್‌ ಅಗರ್‌ವಾಲ್‌ (Kajal Aggarwal) ಈ ಹಿಂದೆ ತೆಲುಗಿನ ʻಮೊಸಗಲ್ಲುʼ ಚಿತ್ರದಲ್ಲಿ ಸಹೋದರ ಮತ್ತು ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ವಿಷ್ಣು ಮಂಚು ಅವರ ಬಹುನಿರೀಕ್ಷಿತ ಪ್ರಾಜೆಕ್ಟ್‌ ʻಕಣ್ಣಪ್ಪʼ ಚಿತ್ರಕ್ಕೂ ಆಗಮಿಸುವ ಮೂಲಕ ಎರಡನೇ ಸಲ ಒಂದಾಗುತ್ತಿದ್ದಾರೆ.

ಹಾಗಾದರೆ, ಕಾಜಲ್‌ ಅಗರ್‌ವಾಲ್‌ ಪಾತ್ರವೇನು? ಸದ್ಯಕ್ಕೆ ಆ ಬಗ್ಗೆ ಚಿತ್ರತಂಡ ರಿವೀಲ್‌ ಮಾಡಿಲ್ಲ. ಬದಲಿಗೆ ವಿಶೇಷವಾದ ಪಾತ್ರವೊಂದರಲ್ಲಿ ಕಾಜಲ್‌ ನಟಿಸುವ ಮೂಲಕ ಕಣ್ಣಪ್ಪ ಸಿನಿಮಾದ ಭಾಗವಾಗಲಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಸಹ ಅಷ್ಟೇ ಬಿರುಸಾಗಿಯೇ ನಡೆಯುತ್ತಿದೆ.

ಈ ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ಬಹು ತಾರಾಗಣವೇ ಇದೆ. ಇತ್ತೀಚೆಗಷ್ಟೇ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಸಹ ಈ ಚಿತ್ರದ ಮೂಲಕ ಸೌತ್‌ ಕಡೆಗೆ ವಾಲಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಪ್ರಭಾಸ್ ಸಹ ಕೆಲವು ದಿನಗಳ ಹಿಂದೆ ಕಣ್ಣಪ್ಪ ತಂಡವನ್ನು ಸೇರಿಕೊಂಡರು. ಈಗ ಕಾಜಲ್‌ ಅಗರ್‌ವಾಲ್‌ ಸರದಿ.

ಇದನ್ನೂ ಓದಿ: Kajal Aggarwal: ಸೆಲ್ಫಿ ನೆಪದಲ್ಲಿ ನಟಿ ಕಾಜಲ್ ಸೊಂಟ ಮುಟ್ಟಿದ ವ್ಯಕ್ತಿ: ವಿಡಿಯೊ ವೈರಲ್‌!


ಕಣ್ಣಪ್ಪ’ ಸಿನಿಮಾ ವ್ಯಕ್ತಿಯ ಅಚಲವಾದ ಭಕ್ತಿಯ ಮೇಲೆ ಬೆಳಕು ಚೆಲ್ಲುವ ಸಿನಿಮಾ ಆಗಿದೆ. ನಾಸ್ತಿಕನಾದ ಕಣ್ಣಪ್ಪ ಮಹಾನ್ ಶಿವನ ಆರಾಧಕನಾಗಿ ಬದಲಾದ ವಿಸ್ಮಯಕಾರಿ ಕತೆಯನ್ನು ಸಿನಿಮಾ ಒಳಗೊಂಡಿದೆ. ಈ ಚಿತ್ರವು ಶಿವನ ಭಕ್ತನಾಗಿದ್ದ ಭಕ್ತ ಕಣ್ಣಪ್ಪನ ಜೀವನವನ್ನು ಆಧರಿಸಿದೆ ಎಂದು ವರದಿಯಾಗಿದೆ.

ಮೋಹನ್ ಬಾಬು ನಿರ್ಮಿಸುತ್ತಿರುವ ಕಣ್ಣಪ್ಪ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಿಗೂ ಈ ಚಿತ್ರ ಡಬ್‌ ಆಗಿ ರಿಲೀಸ್‌ ಆಗಲಿದೆ. ಅದೇ ರೀತಿ ಚಿತ್ರೀಕರಣದ ಮುಕ್ತಾಯದ ಹಂತಕ್ಕೂ ಬಂದು ನಿಂತಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕವೂ ಘೋಷಣೆ ಆಗಲಿದೆ.

Continue Reading

ಕಿರುತೆರೆ

Gurucharan Singh: ಕಾಣೆಯಾಗಿದ್ದ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ ಮತ್ತೆ ಮನೆಗೆ ವಾಪಸ್‌!

Gurucharan Singh: ವರದಿಯ ಪ್ರಕಾರ, ಗುರುಚರಣ್ ವಿಚಾರಣೆಯ ವೇಳೆ ಪೊಲೀಸ್ ಅಧಿಕಾರಿಗಳಿಗೆ“ ಲೌಕಿಕ ಜೀವನವನ್ನು ತೊರೆದು ಧಾರ್ಮಿಕ ಪ್ರಯಾಣದಲ್ಲಿದ್ದೇನೆ” ಎಂದು ಹೇಳಿದ್ದಾನೆ. ಕಳೆದ ಕೆಲವು ದಿನಗಳಲ್ಲಿ, ನಟ ಅಮೃತಸರ ಮತ್ತು ಲುಧಿಯಾನ ಸೇರಿದಂತೆ ಅನೇಕ ನಗರಗಳಿಗೆ ಭೇಟಿ ನೀಡಿದ್ದರು. ಆದರೆ ನಂತರ ಅವರು ಮನೆಗೆ ಮರಳಬೇಕೆಂದು ಅರಿತುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

Gurucharan Singh returns home after almost a month
Koo

ಬೆಂಗಳೂರು: ಏಪ್ರಿಲ್ 22 ರಿಂದ ನಾಪತ್ತೆಯಾಗಿದ್ದ   ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ (Taarak Mehta Ka Ooltah Chashmah) ಧಾರವಾಹಿ ನಟ ಗುರುಚರಣ್ ಸಿಂಗ್ (Gurucharan Singh) ಮೇ.17ರಂದು ಮನೆಗೆ ಮರಳಿದ್ದಾರೆ. ಪೊಲೀಸರ ಪ್ರಕಾರ, ಸಿಂಗ್ ವಿಚಾರಣೆಯ ಸಮಯದಲ್ಲಿ ತನ್ನ ಲೌಕಿಕ ಜೀವನವನ್ನು ತೊರೆದು ಧಾರ್ಮಿಕ ಪ್ರಯಾಣದಲ್ಲಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವರದಿಯ ಪ್ರಕಾರ, ಗುರುಚರಣ್ ವಿಚಾರಣೆಯ ವೇಳೆ ಪೊಲೀಸ್ ಅಧಿಕಾರಿಗಳಿಗೆ“ ಲೌಕಿಕ ಜೀವನವನ್ನು ತೊರೆದು ಧಾರ್ಮಿಕ ಪ್ರಯಾಣದಲ್ಲಿದ್ದೇನೆ” ಎಂದು ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ನಟ ಅಮೃತಸರ ಮತ್ತು ಲುಧಿಯಾನ ಸೇರಿದಂತೆ ಅನೇಕ ನಗರಗಳಿಗೆ ಭೇಟಿ ನೀಡಿದ್ದರು. ಆದರೆ ನಂತರ ಅವರು ಮನೆಗೆ ಮರಳಬೇಕೆಂದು ಅರಿತುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 22 ರಂದು ನಟ ದೆಹಲಿಯಿಂದ ಮುಂಬೈಗೆ ವಿಮಾನ ಹಿಡಿಯಬೇಕಿತ್ತು. ಆದರೆ ಅವರು ವಿಮಾನ ಹತ್ತಲಿಲ್ಲ ಮತ್ತು ಕಾಣೆಯಾಗಿದ್ದರು.

ಏಪ್ರಿಲ್ 22ರಂದು ರಾತ್ರಿ 8.30 ಕ್ಕೆ ಮಗ ಮುಂಬೈಗೆ ತೆರಳಿದ್ದ ಎಂದು ತಂದೆ ದೂರು ನೀಡಿದ್ದರು. ಪೊಲೀಸರ ಮಾಹಿತಿ ಪ್ರಕಾರ ʻʻಎಪ್ರಿಲ್ 22ರಂದು ಗುರುಚರಣ್ ಸಿಂಗ್ ಶೂಟಿಂಗ್ ಸೇರಿದಂತೆ ಇತರ ಕೆಲಸದ ನಿಮಿತ್ತ ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಲು ವಿಮಾನ ನಿಲ್ದಾಕ್ಕೆ ತೆರಳಿದ್ದರು. ಗುರುಚರಣ್ ಸಿಂಗ್ ಬೆಳಗ್ಗೆ 8.30ಕ್ಕೆ ಮನೆಯಿಂದ ತೆರಳಿದ್ದರು. ಆದರೆ ಅವರು ಮುಂಬೈಗೆ ತಲುಪಿಲ್ಲ. ಬದಲಾಗಿ ಬೆಳಗ್ಗೆ 9.14ರ ಸುಮಾರಿಗೆ ಪಾಲಂʼನಲ್ಲಿ ನಟ ಕಂಡು ಬಂದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ: Gurucharan Singh: ಎರಡು ವಾರ ಕಳೆದರೂ ಪತ್ತೆಯಾಗದ  ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ!

ಗುರುಚರಣ್ ಆಗಾಗ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದರು ಮತ್ತು ಹಣಕಾಸಿನ ಚಟುವಟಿಕೆಗಳಿಗಾಗಿ ಅನೇಕ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡಿದ್ದರು. ಈತ 10ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬಳಿಸಿದ್ದ ಎಂದು ಪೊಲೀಸರು ಪತ್ತೆ ಮಾಡಿದ್ದರು.

ಕೆಲ ವರ್ಷಗಳ ಹಿಂದೆ ಗುರುಚರಣ್ ಸಿಂಗ್ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರವಾಹಿಯಿಂದ ಹೊರಬಂದಿದ್ದರು. ತಂದೆಯ ಅನಾರೋಗ್ಯ, ಕುಟುಂಬದ ನಿರ್ವಹಣೆ ಕಾರಣದಿಂದ ಸೀರಿಯಲ್‌ನಿಂದ ಹೊರಬಂದು ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿ 2022 ಜುಲೈ 2ಕ್ಕೆ 3500 ಸಂಚಿಕೆಗಳನ್ನು ಕಂಡಿದೆ.

Continue Reading

South Cinema

Pavithra Jayaram: ಗೆಳೆಯ ಚಂದು ಜತೆ ಪವಿತ್ರ ಜಯರಾಮ್ ರೀಲ್ಸ್ ನೋಡಿದ್ರೆ ಕಣ್ಣು ಒದ್ದೆಯಾಗುತ್ತೆ!

Pavithra Jayaram: ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ‘ತ್ರಿನಯನಿ’ ನಟಿ ಸೀರೆಯನ್ನು ಧರಿಸಿ ಚಂದ್ರಕಾಂತ್‌ ಜತೆ ಪುಟ್ಟಮಲ್ಲಿ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ‘ತ್ರಿನಯನಿ’ಯಲ್ಲಿ ಸಹೋದರ ಪಾತ್ರ ನಿಭಾಯಿಸುತ್ತಿದ್ದರು ಚಂದ್ರಕಾಂತ್‌. ಚಂದ್ರಕಾಂತ್‌ ಕೊನೆಯ ಪೋಸ್ಟ್‌ನಲ್ಲಿ “ನನ್ನ ಪ್ರೀತಿ ಯಾವಾಗಲೂ ನಿನಗೆ. ಮಿಸ್ ಯೂ ಪಾಪಾʼʼ ಎಂದು ಬರೆಯಲಾಗಿತ್ತು. ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ವಿಡಿಯೊ ಡಿಲಿಟ್‌ ಮಾಡಿದ್ದರು ನಟ.

VISTARANEWS.COM


on

Pavithra Jayaram Last Instagram post to chandrakanth
Koo

ಬೆಂಗಳೂರು: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani Serial) ಜನಪ್ರಿಯರಾಗಿದ್ದ ಕನ್ನಡತಿ ಪವಿತ್ರ ಜಯರಾಮ್ (Pavithra Jayaram)‌ ಅವರು ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ಅವರ ಪ್ರಿಯತಮ, ನಟ ಚಂದ್ರಕಾಂತ್‌ (Chandrakanth) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿಯ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ, ಚಂದ್ರಕಾಂತ್‌ ಅವರು ಪವಿತ್ರ ಜಯರಾಮ್ ಜತೆ ರೀಲ್ಸ್‌ ಮಾಡಿರುವ ವಿಡಿಯೊಗಳು ವೈರಲ್‌ ಆಗುತ್ತಿವೆ.

ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ‘ತ್ರಿನಯನಿ’ ನಟಿ ಸೀರೆಯನ್ನು ಧರಿಸಿ ನಟ ಚಂದ್ರಕಾಂತ್‌ ಜತೆ ಪುಟ್ಟಮಲ್ಲಿ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ‘ತ್ರಿನಯನಿ’ಯಲ್ಲಿ ಸಹೋದರ ಪಾತ್ರ ನಿಭಾಯಿಸುತ್ತಿದ್ದರು ಚಂದ್ರಕಾಂತ್‌. ಚಂದ್ರಕಾಂತ್‌ ಕೊನೆಯ ಪೋಸ್ಟ್‌ನಲ್ಲಿ “ನನ್ನ ಪ್ರೀತಿ ಯಾವಾಗಲೂ ನಿನಗೆ. ಮಿಸ್ ಯೂ ಪಾಪಾʼʼ ಎಂದು ಬರೆಯಲಾಗಿತ್ತು. ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ವಿಡಿಯೊ ಡಿಲಿಟ್‌ ಮಾಡಿದ್ದರು ನಟ.

ಇದನ್ನೂ ಓದಿ: Pavithra Jayaram: ಪವಿತ್ರ ಜಯರಾಂಗೆ ಅಂತಿಮ ವಿದಾಯ; ಭಯದಲ್ಲೇ ಪ್ರಾಣ ಬಿಟ್ರಾ ನಟಿ?

ಇದೀ ನಟ ಚಂದ್ರಕಾಂತ್‌ (Chandrakanth) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ (Andhra Pradesh) ಚಂದ್ರಕಾಂತ್‌ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪವಿತ್ರ ಜಯರಾಮ್‌ ಅವರ ನಿಧನದ ಬಳಿಕ ಖಿನ್ನತೆಗೊಳಗಾಗಿದ್ದ ಅವರು ನೇಣಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆ ನರಸಿಂಗ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಅಲ್ಕಾಪುರ ಕಾಲೊನಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಪವಿತ್ರಾ ಜಯರಾಮ್‌ ಅವರು ಕಾರು ಅಪಘಾತದಲ್ಲಿ ಮೇ 12ರಂದು ಮೃತಪಟ್ಟಿದ್ದರು. ಅದೇ ಕಾರಿನಲ್ಲಿ ಚಂದ್ರಕಾಂತ್‌ ಅವರು ಕೂಡ ತೆರಳುತ್ತಿದ್ದಾರೆ. ಘಟನೆಯ ಬಳಿಕ ನೊಂದಿದ್ದ ಅವರು ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಟಿಯ ಅಗಲಿಕೆಯ ನೋವು ತಾಳದೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kannada New Movie: ಬಹು ನಿರೀಕ್ಷಿತ ʻಪೌಡರ್‌ʼ ಸಿನಿಮಾ ಟೀಸರ್‌ ಔಟ್‌!

ದುರಂತ ಸಾವು

ಆಂಧ್ರಪ್ರದೇಶದ ಕರ್ನೂಲು ಬಳಿ ಮೇ 12ರಂದು ಬೆಳಗ್ಗೆ ಅಪಘಾತ ಸಂಭವಿಸಿತ್ತು. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು. ಚಂದ್ರಕಾಂತ್‌ ಕೂಡ ನಟರಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ, ಒಂದೇ ವಾರದಲ್ಲಿ ಇಬ್ಬರೂ ದುರಂತ ಸಾವು ಕಂಡಿದ್ದಾರೆ.

ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್‌ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ . ಈ ಬಗ್ಗೆ ನಟಿ ಈ ಹಿಂದೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ʻʻನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಆದರೆ ಕನ್ನಡಕ್ಕಿಂತ ನನಗೆ ಹೆಚ್ಚು ಹೆಸರು ಕೊಟ್ಟಿದ್ದು ತೆಲುಗು. ‘ತ್ರಿನಯನಿ’ ಧಾರಾವಾಹಿ ಮುಂಚೆ ಅನೇಕ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದರು ಅಷ್ಟಾಗಿ ಫಾಲೋವರ್ಸ್‌ ಇರಲಿಲ್ಲ. ಆದರೆ ‘ತ್ರಿನಯನಿ’ ಧಾರಾವಾಹಿ ಕನ್ನಡದಲ್ಲಿಯೂ ಡಬ್‌ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿಯೂ ತುಂಬಾ ಫ್ಯಾನ್ ಪೇಜ್‌ಗಳು ಶುರುವಾದವುʼʼಎಂದಿದ್ದರು.

Continue Reading
Advertisement
Singer Suchitra makes shocking aligeations against shahrukh khan
ಬಾಲಿವುಡ್2 mins ago

Singer Suchitra: ಶಾರುಖ್ – ಕರಣ್ ಸಲಿಂಗಿಗಳು ಎಂದು ಹೇಳಿ ವಿವಾದ ಸೃಷ್ಟಿಸಿದ ತಮಿಳು ಗಾಯಕಿ!

Lok Sabha Election 2024
ವೈರಲ್ ನ್ಯೂಸ್11 mins ago

Lok Sabha Election 2024: ʼನನ್ನ ಸ್ಟೈಲು ಬೇರೇನೆ…ʼ; ಕತ್ತೆ ಮೂಲಕ ಪ್ರಚಾರ ನಡೆಸುವ ಅಭ್ಯರ್ಥಿಯ ಕಾರ್ಯ ವೈಖರಿ ಈಗ ವೈರಲ್‌

IPL 2024
ಕ್ರೀಡೆ13 mins ago

IPL 2024 : ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಿದ ಬಿಸಿಸಿಐ; ಮುಂದಿನ ಪಂದ್ಯದಲ್ಲಿ ಆಡದಂತೆ ತಾಕೀತು

natural ice cream 1 rajamarga coumn
ಅಂಕಣ20 mins ago

ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

naturals ic cream raghunandan kamath
ಶ್ರದ್ಧಾಂಜಲಿ46 mins ago

Raghunandan Kamath: ʼನ್ಯಾಚುರಲ್ಸ್‌ʼ ಖ್ಯಾತಿಯ ʼಐಸ್‌ಕ್ರೀಂ ಮ್ಯಾನ್‌ʼ ರಘುನಂದನ ಕಾಮತ್‌ ಇನ್ನಿಲ್ಲ

IPL 2024
ಪ್ರಮುಖ ಸುದ್ದಿ50 mins ago

IPL 2024 : ಸಹ ಆಟಗಾರ ರೊಮಾರಿಯೊ ಶೆಫರ್ಡ್​ಗೆ ಆಟೋಗ್ರಾಫ್​ ಕೊಟ್ಟ ರೋಹಿತ್​ , ಚಿತ್ರಗಳು ಇಲ್ಲಿವೆ

Kajal Aggarwal Kannappa Movie Entry
ಟಾಲಿವುಡ್1 hour ago

Kajal Aggarwal: ವಿಷ್ಣು ಮಂಚು `ಕಣ್ಣಪ್ಪ’ ಚಿತ್ರಕ್ಕೆ ಕಾಜಲ್ ಅಗರ್​ವಾಲ್​​ ಎಂಟ್ರಿ; ಪಾತ್ರ ಏನಿರಬಹುದು?

White House
ವಿದೇಶ1 hour ago

White House: ಭಾರತದಲ್ಲಿದೆ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ: ಅಮೆರಿಕದ ಮೆಚ್ಚುಗೆ; ಮೋದಿ ನಾಯಕತ್ವಕ್ಕೂ ಸಿಕ್ತು ಶಹಬ್ಬಾಸ್‌ಗಿರಿ

IPL 2024
ಕ್ರೀಡೆ1 hour ago

IPL 2024 : ಆರ್​ಸಿಬಿ- ಚೆನ್ನೈ ಪಂದ್ಯದ ವೇಳೆ ಮಳೆ ಬಂದು ರದ್ದಾದರೆ ಮುಂದೇನಾಗುವುದು?

hd deve gowda birthday
ಪ್ರಮುಖ ಸುದ್ದಿ1 hour ago

HD Deve Gowda: ಈ ಅವಮಾನದಿಂದ ಪಾರು ಮಾಡು: 93ರ ಜನ್ಮದಿನಂದು ದೇವೇಗೌಡರ ಮೌನ ಪ್ರಾರ್ಥನೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ14 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌