Kantara Movie | ಜೂನ್‌ನಲ್ಲಿ ಕಾಂತಾರ-2 ಪ್ರಿಕ್ವೆಲ್ ಚಿತ್ರೀಕರಣ: ಮಾಹಿತಿ ಹಂಚಿಕೊಂಡ ವಿಜಯ್‌ ಕಿರಗಂದೂರು - Vistara News

ಸಿನಿಮಾ

Kantara Movie | ಜೂನ್‌ನಲ್ಲಿ ಕಾಂತಾರ-2 ಪ್ರಿಕ್ವೆಲ್ ಚಿತ್ರೀಕರಣ: ಮಾಹಿತಿ ಹಂಚಿಕೊಂಡ ವಿಜಯ್‌ ಕಿರಗಂದೂರು

ಹೊಂಬಾಳೆ ಫಿಲ್ಮ್ಸ್‌ ಸಂಸ್ಥಾಪಕ ವಿಜಯ್‌ ಕಿರಗಂದೂರು ಸಂವಾದವೊಂದರಲ್ಲಿ ರಿಷಬ್ ಶೆಟ್ಟಿ ಈಗಾಗಲೇ ಚಿತ್ರದ (Kantara Movie ) ಕೆಲಸ ಪ್ರಾರಂಭಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

VISTARANEWS.COM


on

Kantara Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ʻಕಾಂತಾರʼ ಸಿನಿಮಾ (Kantara Movie) ಈ ಬಾರಿ ಪ್ರಿಕ್ವೆಲ್‌ ಆಗಿ ಬರಲಿದೆ. ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ. ಹೊಂಬಾಳೆ ಫಿಲ್ಮ್ಸ್‌ ಸಂಸ್ಥಾಪಕ ವಿಜಯ್‌ ಕಿರಗಂದೂರು ಸಂವಾದವೊಂದರಲ್ಲಿ ರಿಷಬ್ ಶೆಟ್ಟಿ ಈಗಾಗಲೇ ಚಿತ್ರದ ಕೆಲಸ ಪ್ರಾರಂಭಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಪ್ರಿಕ್ವೆಲ್‌ ಆಗಿ ಬರಲಿದೆ ಕಾಂತಾರ 2:
ಕಾಂತಾರ 2 ಪೂರ್ವಭಾವಿ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಎಂದು ವಿಜಯ್‌ ಕಿರಗಂದೂರು ಹೇಳಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಮೆಚ್ಚಿ ರಿಷಬ್‌ಗೆ ಪತ್ರ ಬರೆದ ಕಮಲಹಾಸನ್‌: ಪತ್ರದಲ್ಲಿ ಏನಿದೆ?

“ಚಿತ್ರದ ಒಂದು ದೃಶ್ಯಕ್ಕೆ ಮಳೆ ಅವಶ್ಯಕತೆ ಇರುವುದರಿಂದ ಜೂನ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ರಿಷಬ್‌ ಯೋಜಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚಿತ್ರವನ್ನು ಪ್ಯಾನ್-ಇಂಡಿಯಾ ಬಿಡುಗಡೆ ಮಾಡುವುದು ನಮ್ಮ ಉದ್ದೇಶ” ಎಂದು ವಿಜಯ್ ಹೇಳಿದ್ದಾರೆ. ʻʻʻಈಗಾಗಲೇ ರಿಷಬ್ ಶೆಟ್ಟಿ ಅವರು ಕರ್ನಾಟಕದ ಕರಾವಳಿ ಪ್ರದೇಶದ ಕಾಡುಗಳಿಗೆ ಹೋಗಿದ್ದಾರೆ. ಅವರು ತಮ್ಮ ಕಾಂತಾರ ಚಿತ್ರದಲ್ಲಿ ಕಾಣಿಸಿಕೊಂಡಿರುವ ಜಾನಪದದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಎರಡು ತಿಂಗಳ ಕೆಲಸ ಮಾಡುತ್ತಿದ್ದಾರೆ. ಕಾಂತಾರ 2 ಚಿತ್ರದ ಬಜೆಟ್ ಅನ್ನು ಹೆಚ್ಚಿಸಲಾಗಿದೆ ಆದರೆ ಚಿತ್ರದ ನಿರಂತರತೆ ಮತ್ತು ನೈಜತೆಯನ್ನು ಉಳಿಸಿಕೊಳ್ಳಲು ಚಿತ್ರದ ಶೈಲಿ, ನಿರೂಪಣೆ ಮತ್ತು ಛಾಯಾಗ್ರಹಣವು ಕಾಂತಾರದಂತೆಯೇ ಇರುತ್ತದೆʼʼ ಎಂದರು.

ಹೆಚ್ಚಿನ ಪಾತ್ರವರ್ಗದ ಸದಸ್ಯರನ್ನು ಸೇರಿಸಲಾಗುತ್ತಿದೆ ಎನ್ನಲಾಗಿದೆ. ಮೊದಲ ಚಿತ್ರಕ್ಕೆ ಹೋಲಿಸಿದರೆ ಚಿತ್ರತಂಡದ ಸದಸ್ಯರು ಹೆಚ್ಚು ಸಂಭಾವನೆ ಪಡೆಯುವ ಸಾಧ್ಯತೆಯಿದೆ. ರಿಷಬ್ ಶೆಟ್ಟಿ ಮೊದಲ ಚಿತ್ರಕ್ಕೆ ರೂ. 4 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವದಂತಿಗಳಿವೆ. ಅವರು ಪ್ರಿಕ್ವೆಲ್‌ನೊಂದಿಗೆ ದುಪ್ಪಟ್ಟು ಗಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Kantara Movie

ಕಾಂತಾರ-1 , 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಿಲಾಗಿದ್ದು, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 400 ಕೋಟಿ ರೂ. ಗಳಿಸಿತು. ಕಾಂತಾರ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಾಗ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡಿತು. ಕಾಂತಾರ ಚಿತ್ರದಲ್ಲಿ ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Kantara Movie | ʻಕಾಂತಾರʼ ಪ್ರಭಾವದಿಂದ ದೈವದ ದರ್ಶನ ಸೇವೆಯನ್ನು ‌ಕಣ್ತುಂಬಿಕೊಂಡ ನೂರಾರು ವಿದ್ಯಾರ್ಥಿಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಾಲಿವುಡ್

Actress Nayanthara: ನಯನತಾರಾ ಅವಳಿ ಮಕ್ಕಳ ಭರ್ಜರಿ ಆಟೋ ಸವಾರಿ!

Actress Nayanthara: ಅವಕಾಶ ಸಿಕ್ಕಾಗಲೆಲ್ಲಾ ಮಕ್ಕಳನ್ನು ಆಟೋ ರೈಡ್‌ಗೆ ಕರೆದೊಯ್ಯುತ್ತಲೇ ಇರುತ್ತಾರೆ ನಯನತಾರಾ. ದಂಪತಿ ಇತ್ತೀಚೆಗೆ ಚೆನ್ನೈನ ತಿರುಚೆಂದೂರ್ ಮತ್ತು ಕನ್ಯಾಕುಮಾರಿಗೆ ಪ್ರವಾಸಕ್ಕೆ ತೆರಳಿದ್ದರು. ವಿಘ್ನೇಶ್ ಶಿವನ್ ಪ್ರಸ್ತುತ ʻಲವ್ ಇನ್ಶುರೆನ್ಸ್ ಕಾರ್ಪೊರೇಶನ್‌ʼ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರದೀಪ್ ರಂಗನಾಥನ್, ಎಸ್.ಜೆ.ಸೂರ್ಯ ಮತ್ತು ಕೃತಿ ಶೆಟ್ಟಿ ಮನರಂಜನಾ ಪಾತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

VISTARANEWS.COM


on

Actress Nayanthara twin sons on auto ride
Koo

ಬೆಂಗಳೂರು: ನಯನತಾರಾ (Actress Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಳಗ್ ಅವರನ್ನು ಚೆನ್ನೈನಲ್ಲಿ ಆಟೋ ಸವಾರಿ ಮಾಡಿಸಿದ್ದಾರೆ. ಮೇ 20ರಂದು ‘ನಯನತಾರಾ’ ವೀಡಿಯೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಮಕ್ಕಳನ್ನು ಆಟೋ ರೈಡ್‌ಗೆ ಕರೆದೊಯ್ಯುತ್ತಲೇ ಇರುತ್ತಾರೆ. ದಂಪತಿ ಇತ್ತೀಚೆಗೆ ಚೆನ್ನೈನ ತಿರುಚೆಂದೂರ್ ಮತ್ತು ಕನ್ಯಾಕುಮಾರಿಗೆ ಪ್ರವಾಸಕ್ಕೆ ತೆರಳಿದ್ದರು.

ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ನಯನತಾರಾ ಈ ಅವಳಿ ಮಕ್ಕಳ ಪೂರ್ಣ ಹೆಸರನ್ನು ಬಹಿರಂಗಪಡಿಸಿದ್ದರು. ಈವೆಂಟ್‌ನಲ್ಲಿ ʻʻನನ್ನ ಮೊದಲ ಮಗ ಉಯಿರ್ ರುದ್ರೋನಿಲ್ ಎನ್ ಶಿವನ್ ಮತ್ತು ನನ್ನ ಎರಡನೇ ಮಗ ಉಳಗ್ ದೈವಿಗ್ ಎನ್ ಶಿವನ್ʼʼ ಎಂದು ಹೇಳಿಕೊಂಡಿದ್ದರು. ನಯನತಾರಾ ಮಕ್ಕಳ ಆರೈಕೆಗಾಗಿ ನಟನೆಯಿಂದ ದೂರ ಸರಿಯಲಿದ್ದಾರೆ ಎನ್ನುವ ಮಾತುಗಳು ಕೂಡ ಹರಿದಾಡಿದ್ದವು. ನಟನೆ ಹಾಗೂ ಮಕ್ಕಳ ಜವಾಬ್ದಾರಿ ಎರಡನ್ನು ನಿಭಾಯಿಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಮಕ್ಕಳ ಜೊತೆ ಸಮಯ ಕಳೆಯಲು ಕೆಲ ಕಾಲ ನಟಿ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ಕೇಳಿ ಹರಿದಾಡಿತ್ತು. ಆದರೆ ನಟಿ ʻಜವಾನ್‌ʼ ಸಿನಿಮಾ ಮೂಲಕ ಮತ್ತೆ ಕಮ್‌ ಬ್ಯಾಕ್‌ ಆದರು.

ಇದನ್ನೂ ಓದಿ: Actress Nayanthara: ನಿವಿನ್ ಪೌಲ್‌-ನಯನತಾರಾ ಹೊಸ ಸಿನಿಮಾ ಅನೌನ್ಸ್‌!

ಇತ್ತೀಚೆಗೆ ಥಿಯೇಟರ್‌ಗಳಲ್ಲಿ ತೆರೆಕಂಡ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ (Actress Nayanthara) ಅಭಿನಯದ ʼಅನ್ನಪೂರ್ಣಿʼ (Annapoorani) ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಿತ್ತು. ಸಿನಿಮಾ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಕೇಸ್ ಕೂಡ ದಾಖಲಿಸಿದ್ದರು. ಇದಾದ ಬಳಿಕ ನೆಟ್​ಫ್ಲಿಕ್ಸ್ ಎಚ್ಚೆತ್ತುಕೊಂಡಿದ್ದು, ಸಿನಿಮಾವನ್ನು ಡಿಲೀಟ್ ಮಾಡಿತ್ತು. ಇನ್‌ಸ್ಟಾ ಮೂಲಕ ನಟಿ ಕ್ಷಮೆ ಕೂಡ ಕೇಳಿದ್ದರು.

ಏಪ್ರಿಲ್ 14ರಂದು ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ ನಯನತಾರಾ. ಸಂದೀಪ್ ಕುಮಾರ್ ಮತ್ತು ಜಾರ್ಜ್ ಫಿಲಿಪ್ ಜೋಡಿ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ನಯನತಾರಾ ಮತ್ತು ನಿವಿನ್ ಪೌಲಿ ಅವರು ಚಿತ್ರದಲ್ಲಿ ನಟಿಸಿರುವುದಲ್ಲದೇ ತಮ್ಮ ನಿರ್ಮಾಣ ಸಂಸ್ಥೆಗಳ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.ಈ ಸಿನಿಮಾ ಮೊದಲು ನಯನತಾರಾ ಮತ್ತು ನಿವಿನ್ ಪೌಲ್‌ 2019 ರಲ್ಲಿ ‘ಲವ್ ಆ್ಯಕ್ಷನ್ ಡ್ರಾಮಾ’ ನಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾಗೆ ಧ್ಯಾನ್ ಶ್ರೀನಿವಾಸನ್ ನಿರ್ದೇಶನವಿತ್ತು. ಇದೀಗ ಮತ್ತೆ ತೆರೆ ಮೇಲೆ ಮಿಂಚಲು ಜೋಡಿ ರೆಡಿಯಾಗಿದೆ.

ವಿಘ್ನೇಶ್ ಶಿವನ್ ಪ್ರಸ್ತುತ ʻಲವ್ ಇನ್ಶುರೆನ್ಸ್ ಕಾರ್ಪೊರೇಶನ್‌ʼ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರದೀಪ್ ರಂಗನಾಥನ್, ಎಸ್.ಜೆ.ಸೂರ್ಯ ಮತ್ತು ಕೃತಿ ಶೆಟ್ಟಿ ಮನರಂಜನಾ ಪಾತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Continue Reading

ಸಿನಿಮಾ

Katrina Kaif: ಕತ್ರಿನಾ ಕೈಫ್ ಈಗ ಪ್ರೆಗ್ನೆಂಟ್? ಪತಿ ಜತೆ ಲಂಡನ್‌ನಲ್ಲಿ ಜಾಲಿ ಮೂಡ್‌!

Katrina Kaif: ಜೀ ಲೆ ಜರಾ’ ಚಿತ್ರದ ಶೂಟಿಂಗ್ ಮುಗಿದ ನಂತರ ನಾನು ಮತ್ತು ವಿಕ್ಕಿ ಮೊದಲ ಮಗುವನ್ನು ಹೊಂದಲಿದ್ದೇವೆʼ ಎಂದು ಕತ್ರಿನಾ ತನ್ನ ಸ್ನೇಹಿತರಿಗೆ ಹೇಳಿರುವುದಾಗಿ ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು. “ನಾನು ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಅವರೊಂದಿಗೆ ಮಾಡುತ್ತಿರುವ ಚಿತ್ರಗಳ ಶೂಟಿಂಗ್ ಮುಗಿಸಿದ ನಂತರವೇ ಮಗುವನ್ನು ಯೋಜಿಸುತ್ತೇನೆ” ಎಂದು ಕತ್ರಿನಾ ತಮ್ಮ ಸ್ನೇಹಿತರಿಗೆ ಹೇಳಿದ್ದರಂತೆ. ಈಗಾಗಲೇ `ಮೆರ್ರಿ ಕ್ರಿಸ್‌ಮಸ್’ ಬಿಡುಗಡೆಯಾಗಿದೆ.

VISTARANEWS.COM


on

Katrina Kaif And Vicky Kaushal Together In London
Koo

ಬೆಂಗಳೂರು: ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಪ್ರಸ್ತುತ ಲಂಡನ್‌ನಲ್ಲಿ ವಕೇಶನ್‌ ಮೂಡ್‌ನಲ್ಲಿದ್ದಾರೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಲಂಡನ್‌ನಲ್ಲಿ ಓಡಾಡುತ್ತಿರುವ ವಿಡಿಯೊಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಶೇಷ ಅಂದರೆ ಕತ್ರಿನಾ ಪ್ರಗ್ನೆಂಟ್‌ ಅಂತೆ ಕಂಡಿದ್ದಾರೆ. ಕತ್ರಿನಾ ಕೈಫ್ ಅವರು ಕಪ್ಪು ಬಣ್ಣದ ಬ್ಲೇಜರ್ ಹಾಕಿದ್ದಾರೆ. ಅವರ ಹೊಟ್ಟೆ ಉಬ್ಬಿದಂತೆ ಕಾಣಿಸಿದೆ ಅವರ ಅಭಿಮಾನಿಗಳಿಗೆ! ಇದರಿಂದ ಅನೇಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 

ವಿಡಿಯೊ ಜತೆಗೆ “ನಮ್ಮ ಬಾಲಿವುಡ್ ಪವರ್ ಕಪಲ್ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಲಂಡನ್‌ನ ಬೇಕರ್ ಸ್ಟ್ರೀಟ್‌ನಲ್ಲಿ ಅಡ್ಡಾಡುತ್ತಿದ್ದಾರೆ. ವಿಕ್ಕಿ ಅವರು ಪತ್ನಿಯ ಕೈಯನ್ನು ಹಿಡಿದು ನಡೆಯುತ್ತಿದ್ದಾರೆʼʼ ಎಂದು ಅಭಿಮಾನಿಯೊಬ್ಬರು ಪೋಸ್ಟ್‌ ಮಾಡಿದ್ದಾರೆ. ವಿಕ್ಕಿ ಮೇ 16ರಂದು ಲಂಡನ್‌ನಲ್ಲಿ ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕತ್ರಿನಾ ಕೈಫ್ ಫೋಟೊಗಳನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದರು.

ʻಜೀ ಲೆ ಜರಾ’ ಚಿತ್ರದ ಶೂಟಿಂಗ್ ಮುಗಿದ ನಂತರ ನಾನು ಮತ್ತು ವಿಕ್ಕಿ ಮೊದಲ ಮಗುವನ್ನು ಹೊಂದಲಿದ್ದೇವೆʼ ಎಂದು ಕತ್ರಿನಾ ತನ್ನ ಸ್ನೇಹಿತರಿಗೆ ಹೇಳಿರುವುದಾಗಿ ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು. “ನಾನು ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಅವರೊಂದಿಗೆ ಮಾಡುತ್ತಿರುವ ಚಿತ್ರಗಳ ಶೂಟಿಂಗ್ ಮುಗಿಸಿದ ನಂತರವೇ ಮಗುವನ್ನು ಯೋಜಿಸುತ್ತೇನೆ” ಎಂದು ಕತ್ರಿನಾ ತಮ್ಮ ಸ್ನೇಹಿತರಿಗೆ ಹೇಳಿದ್ದರಂತೆ. ಈಗಾಗಲೇ `ಮೆರ್ರಿ ಕ್ರಿಸ್‌ಮಸ್’ ಬಿಡುಗಡೆಯಾಗಿದೆ.

ಇದನ್ನೂ ಓದಿ: Katrina Kaif : ಸಿಎಸ್​ಕೆ ಬ್ರಾಂಡ್ ಅಂಬಾಸಿಡರ್ ಆದ ಕತ್ರಿಕಾ ಕೈಫ್

ಇದನ್ನೂ ಓದಿ: Actor Upendra: ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್: ʻUIʼ ಸಿನಿಮಾದ ಬಿಗ್‌ ಅಪ್‌ಡೇಟ್‌!

ಕತ್ರಿನಾ ಕೈಫ್-‌ವಿಕ್ಕಿ ಕೌಶಲ್‌ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇಬ್ಬರೂ ಈ ಸುದ್ದಿಯನ್ನೇನೂ ಖಚಿತಪಡಿಸಿಲ್ಲ. ಇಬ್ಬರೂ 2021ರ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ವಿಕ್ಕಿ ಕೌಶಲ್ ಛಾವಾ, ಬ್ಯಾಡ್ ನ್ಯೂಸ್‌ ಮತ್ತು ಲವ್ & ವಾರ್‌ನಂತಹ ಸಿನಿಮಾಗಳು ಕೈಯಲ್ಲಿವೆ. ಕತ್ರಿನಾ ಕೈಫ್ ಕೊನೆಯದಾಗಿ ವಿಜಯ್ ಸೇತುಪತಿ ಜೊತೆಗೆ ʻಮೆರ್ರಿ ಕ್ರಿಸ್‌ಮಸ್‌ʼನಲ್ಲಿ ಕಾಣಿಸಿಕೊಂಡರು.

ವಿಕ್ಕಿ ಕೌಶಲ್ (Vicky Kaushal) ತಮ್ಮ ಮುಂದಿನ ಚಿತ್ರ `ಛಾವಾ’ದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿಯ ಪ್ರಕಾರ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ನಿಭಾಯಿಸಲಿದ್ದಾರೆ. “ಚಿತ್ರವು ಪ್ರಾಥಮಿಕವಾಗಿ ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದ್ದರೂ, ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ನಿರ್ವಹಿಸುತ್ತಿದ್ದರು ಎನ್ನುವುದು ವಿಶೇಷ. ಈ ವಿಚಾರ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಲಿದೆ.

Continue Reading

ಸ್ಯಾಂಡಲ್ ವುಡ್

Actor Upendra: ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್: ʻUIʼ ಸಿನಿಮಾದ ಬಿಗ್‌ ಅಪ್‌ಡೇಟ್‌!

Actor Upendra: ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಪ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.

VISTARANEWS.COM


on

Actor Upendra Ajaneesh Visited Hangary To Record Music
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ (Actor Upendra) ಅವರ ‘ಯುಐ’ ಸಿನಿಮಾ ಚಿತ್ರೀಕರಣ ಮುಗಿದು ಇದೀಗ ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಕಳೆದ ವರ್ಷವಷ್ಟೇ ‘UI’ ಸಿನಿಮಾವನ್ನು ಅನೌನ್ಸ್ ಮಾಡುವುದಾಗಿ ಘೋಷಿಸಿದ್ದರು. ಇದೂವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ಹೆಚ್ಚಿನ ಬಜೆಟ್‌ ಸಿನಿಮಾದಾಗಿದೆ. ಇದೀಗ ಈ ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ಇದೀಗ ನಿರ್ದೇಶಕ ಉಪೇಂದ್ರ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಯೂರೋಪಿಯಾ ದೇಶವಾದ ಹಂಗೆರಿಗೆ ಹೋಗಿದ್ದಾರೆ.ಅಜನೀಶ್ ಲೋಕನಾಥ್ ಲೈವ್ ಮ್ಯೂಸಿಕ್ ರೆಕಾರ್ಡ್ ಮಾಡಲು ಹಂಗೆರಿಯನ್ನು ಆರಿಸಿಕೊಂಡಿದ್ದಾರೆ.

ತಮ್ಮ ಸಿನಿಮಾದ ಹಾಡುಗಳಿಗೆ ಉಪೇಂದ್ರ ಅವರೇ ಸಾಹಿತ್ಯವನ್ನು ಬರೆಯುತ್ತಾರೆ. ಹಾಗಾಗಿ ಸಂಗೀತ ನಿರ್ದೇಶಕರ ಜೊತೆಗೆ ಉಪ್ಪಿ ಸಹ ಹಂಗೆರಿಗೆ ತೆರಳಿದ್ದಾರೆ. ಅಲ್ಲದೆ ಅಲ್ಲಿ ಸಿನಿಮಾದ ಇನ್ನಿತರೆ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಸಹ ಮಾಡಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ‘ಎ’ ಸಂಗೀತದೊಂದಿಗೆ ಆರಂಭವಾಗುವ ವಿಡಿಯೊನಲ್ಲಿ ಉಪ್ಪಿ ಹಾಗೂ ಅಜನೀಶ್ ಲೋಕನಾಥ್ ಹಂಗೆರಿಯ ನಗರವೊಂದರಲ್ಲಿ ನಿಂತು ಚರ್ಚೆ ಮಾಡುತ್ತಿರುವ ದೃಶ್ಯಗಳಿವೆ.

ಇದನ್ನೂ ಓದಿ: Money Guide: ಮನೆಯಲಿ ಇದ್ದರೆ ಚಿನ್ನ ಈ ನಿಯಮ ಅರಿತಿರುವುದು ಚೆನ್ನ: ಗೋಲ್ಡ್‌ ಟ್ಯಾಕ್ಸ್‌ ಏನು ಹೇಳುತ್ತದೆ?

ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ, ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು‌ ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್‌ ಹಾಕಿ, ಮೈಕ್‌ ಹಿಡಿದು ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ʻತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ʻಉಪ್ಪಿ 2ʼ ನಂತರ ಬುದ್ಧಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ.

ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಪ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.

ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ದುಬಾರಿ ಸಿನಿಮಾಗಳಲ್ಲಿ ‘UI’ ಕೂಡ ಒಂದು. ತನ್ನ ಕನಸನ್ನು ಸಿನಿಪ್ರಿಯರು ಒಟಿಟಿಯಲ್ಲಿ ಅಲ್ಲದೆ ಥಿಯೇಟರ್‌ನಲ್ಲೇ ಸಿನಿಮಾ ನೋಡಬೇಕು ಅಂತ ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಎಡಿಟಿಂಗ್ ಹಂತದಲ್ಲಿದ್ದು, ಮುಂದಿನ ತಿಂಗಳಿಂದ ಪ್ರಚಾರ ಶುರು ಮಾಡುವ ಸಾಧ್ಯತೆಯಿದೆ.ಟಗರು, ಸಲಗ ಖ್ಯಾತಿಯ ಕೆ.ಪಿ. ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆಯವರು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.

Continue Reading

ಬಾಲಿವುಡ್

Cannes 2024: ಇವರ ಫ್ಯಾಷನ್‌ ಮುಂದೆ ಐಶ್ವರ್ಯಾ ರೈ, ಕಿಯಾರಾನೂ ಇಲ್ಲ! ಸೋನಮ್ ಹೊಗಳಿದ್ದು ಯಾರನ್ನ?

Cannes 2024: ಸೋಮವಾರ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ ಮಿನುಗುವ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದಾಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆಕರ್ಷಕವಾಗಿ ಕಾಣುತ್ತಿದ್ದರು. ಜಾಕ್ವೆಲಿನ್ ಹೊರತಾಗಿ, ಕಿಯಾರಾ ಆಡ್ವಾಣಿ ಮತ್ತು ಶೋಭಿತಾ ಧೂಲಿಪಾಲ. ಐಶ್ವರ್ಯಾ ರೈ ಭಾಗಿಯಾಗಿದ್ದರು. ಅದಿತಿ ರಾವ್ ಹೈದರಿ ಕೂಡ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮೇ 25ರಂದು ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ 77ನೇ ಆವೃತ್ತಿ ಮುಕ್ತಾಯವಾಗಲಿದೆ.

VISTARANEWS.COM


on

Cannes 2024 Sonam Kapoor dubs this outfit the best at Cannes this year
Koo

ಬೆಂಗಳೂರು: ನಟಿ ಸೋನಮ್ ಕಪೂರ್ (Sonam Kapoor) ದೆಹಲಿ ಮೂಲದ ಫ್ಯಾಷನ್ ಪ್ರಭಾವಿ ನ್ಯಾನ್ಸಿ ತ್ಯಾಗಿ ಅವರ (Nancy Tyagi) ಫ್ಯಾಷನ್‌ಗೆ ಫಿದಾ ಆಗಿದ್ದಾರೆ. ಈ ಬಾರಿಯ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನ್ಯಾನ್ಸಿ ತ್ಯಾಗಿ ಭಾಗಿಯಾಗಿದ್ದರು. ಕಾನ್‌ ಫಿಲ್ಮ್‌ ಫೆಸ್ಟಿವಲ್‌ (Cannes 2024) ಫ್ಯಾಶನ್ ಸ್ಟೇಟ್‌ಮೆಂಟ್‌ಗಳಿಗೆ ಹೆಸರುವಾಸಿಯಾಗಿರುವ ಸೋನಮ್ ಅವರು ನ್ಯಾನ್ಸಿ ತ್ಯಾಗಿ ಅವರ ಪೋಸ್ಟ್‌ವನ್ನು ರಿ ಪೋಸ್ಟ್‌ ಮಾಡಿ ಹೊಗಳಿದ್ದಾರೆ.

ಐಶ್ವರ್ಯಾ ರೈ ಮತ್ತು ಕಿಯಾರಾ ಆಡ್ವಾಣಿ ಅವರ ಇತ್ತೀಚಿನ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ ಲುಕ್‌ಗಿಂತ ನ್ಯಾನ್ಸಿ ತ್ಯಾಗಿ ಅವರ ಸ್ಟೈಲ್‌ಗೆ ಫಿದಾ ಆಗಿದ್ದಾರೆ ಸೆಲೆಬ್ರಿಟಿಗಳು. “ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನ ಅತ್ಯುತ್ತಮ ಉಡುಗೆ” ಎಂದು ಹೇಳುವ ಮೂಲಕ ನ್ಯಾನ್ಸಿಯನ್ನು ಹೊಗಳಿದರು ಸೋನಮ್‌. ಮೊದಲ ದಿನ ನ್ಯಾನ್ಸಿ ತ್ಯಾಗಿ 1,000 ಮೀಟರ್‌ಗಿಂತಲೂ ಹೆಚ್ಚು ಫ್ಯಾಬ್ರಿಕ್‌ ಬಟ್ಟೆಯನ್ನು ಬಳಸಿ ತಯಾರಿಸಿದ ಸುಂದರವಾದ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಈ ಡ್ರೆಸ್ ಡಿಸೈನರ್ ಮಾಡಿದ್ದಲ್ಲ.. ಸ್ವತಃ ನಾನೇ ತಯಾರಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಈ ಗೌನ್‌ ತಯಾರಿಸಲು ನ್ಯಾನ್ಸಿ ತ್ಯಾಗಿ ಅವರಿಗೆ ಬರೋಬ್ಬರಿ ಒಂದು ತಿಂಗಳು ಬೇಕಾಯ್ತಂತೆ. ಇದೀಗ ಎರಡನೇ ದಿನ ಸೀರೆಯುಟ್ಟಿದ್ದಾರೆ.

“ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನ ನನ್ನ ಎರಡನೇ ಉಡುಗೆಯನ್ನು ನಾನು ವಿಶೇಷ ಸಮಾರಂಭದಲ್ಲಿ ಧರಿಸಿದ್ದೇನೆ, ಇದು ಸಂಪೂರ್ಣವಾಗಿ ನಾನೇ ಮಾಡಿದ ಮತ್ತೊಂದು ಸೃಷ್ಟಿಯಾಗಿದೆ. ಇದು ಕೈ ಕಸೂತಿಯನ್ನು ಒಳಗೊಂಡಿರುವ ಸೀರೆಯಾಗಿದೆʼʼ ಎಂದು ಬರೆದು ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. ದೆಹಲಿ ಮೂಲದ ಫ್ಯಾಷನ್ ಬ್ಲಾಗರ್ ನ್ಯಾನ್ಸಿ ತ್ಯಾಗಿ ಮೊದಲಿನಿಂದಲೂ ತಾನು ರಚಿಸುವ ಬಟ್ಟೆಗಳ ವಿನ್ಯಾಸದ ವಿಡಿಯೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಇದನ್ನೂ ಓದಿ: Cannes 2024: ಆಸ್ಕರ್‌ ಪ್ರಶಸ್ತಿಯ ಆಕಾರದಂತೆ ಕಂಡ ಶೋಭಿತಾ ಧೂಲಿಪಾಲ!

ಇದನ್ನೂ ಓದಿ: Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

ಸೋಮವಾರ ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ ಮಿನುಗುವ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದಾಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆಕರ್ಷಕವಾಗಿ ಕಾಣುತ್ತಿದ್ದರು. ಜಾಕ್ವೆಲಿನ್ ಹೊರತಾಗಿ, ಕಿಯಾರಾ ಆಡ್ವಾಣಿ ಮತ್ತು ಶೋಭಿತಾ ಧೂಲಿಪಾಲ. ಐಶ್ವರ್ಯಾ ರೈ ಭಾಗಿಯಾಗಿದ್ದರು. ಅದಿತಿ ರಾವ್ ಹೈದರಿ ಕೂಡ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮೇ 25ರಂದು ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ 77ನೇ ಆವೃತ್ತಿ ಮುಕ್ತಾಯವಾಗಲಿದೆ.

Continue Reading
Advertisement
Love Case Father throws hot water on man who loved his daughter for coming home
ಕೊಡಗು2 mins ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

RCB IPL Records
ಕ್ರೀಡೆ10 mins ago

RCB IPL Records: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಬಾರಿ ಪ್ಲೇ ಆಫ್​ಪ್ರವೇಶಿಸಿದೆ?: ತಂಡದ ದಾಖಲೆ ಹೇಗಿದೆ?

Emirates Flight
ದೇಶ10 mins ago

Emirates Flight: ವಿಮಾನ ಡಿಕ್ಕಿ ಹೊಡೆದು 36 ಫ್ಲೆಮಿಂಗೊ ಪಕ್ಷಿಗಳಿಗೆ ದಾರುಣ ಅಂತ್ಯ

Actress Nayanthara twin sons on auto ride
ಕಾಲಿವುಡ್25 mins ago

Actress Nayanthara: ನಯನತಾರಾ ಅವಳಿ ಮಕ್ಕಳ ಭರ್ಜರಿ ಆಟೋ ಸವಾರಿ!

Mallikarjuna Kharge siddaramaiah
ಪ್ರಮುಖ ಸುದ್ದಿ27 mins ago

CM Siddaramaiah: ಖರ್ಗೆಯೂ ಪಿಎಂ ಆಗಲ್ಲ! ಸಿದ್ದರಾಮಯ್ಯ ಯಾಕಿಂಥಾ ಮಾತಾಡಿದ್ರು?

murder Case in Vijayapura
ವಿಜಯಪುರ36 mins ago

Murder Case : ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ, ಶವದ ಪಕ್ಕದಲ್ಲೇ ನಿದ್ರೆಗೆ ಜಾರಿದ ಕುಡುಕ ಪತಿ

Jayant Sinha
ದೇಶ36 mins ago

Jayant Sinha: ವೋಟೂ ಹಾಕಿಲ್ಲ..ಪ್ರಚಾರಕ್ಕೂ ಬಂದಿಲ್ಲ; ಜಯಂತ್‌ ಸಿನ್ಹಾಗೆ ಬಿಜೆಪಿ ಶೋಕಾಸ್‌ ನೊಟೀಸ್‌

Katrina Kaif And Vicky Kaushal Together In London
ಸಿನಿಮಾ44 mins ago

Katrina Kaif: ಕತ್ರಿನಾ ಕೈಫ್ ಈಗ ಪ್ರೆಗ್ನೆಂಟ್? ಪತಿ ಜತೆ ಲಂಡನ್‌ನಲ್ಲಿ ಜಾಲಿ ಮೂಡ್‌!

gold rate today sruthi hassan
ಚಿನ್ನದ ದರ55 mins ago

Gold Rate Today: ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ, ಗ್ರಾಹಕರಿಗೆ ತುಸು ನಿರಾಳ

India Head Coach
ಕ್ರೀಡೆ1 hour ago

India Head Coach: ಭಾರತ ತಂಡದ ಕೋಚ್​ ಆಗಲು ಫ್ಲೆಮಿಂಗ್​ಗೆ ಮನವೊಲಿಸುವಂತೆ ಧೋನಿಗೆ ಮನವಿ ಮಾಡಿದ ಬಿಸಿಸಿಐ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ23 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌