Kichcha Sudeep | ಕಿಚ್ಚ ಸುದೀಪ್‌ ಬರ್ತ್‌ ಡೇಗೆ ಅಂಚೆ ಇಲಾಖೆಯಿಂದ ಸ್ಪೆಷಲ್‌ ಗಿಫ್ಟ್!‌ - Vistara News

ಸಿನಿಮಾ

Kichcha Sudeep | ಕಿಚ್ಚ ಸುದೀಪ್‌ ಬರ್ತ್‌ ಡೇಗೆ ಅಂಚೆ ಇಲಾಖೆಯಿಂದ ಸ್ಪೆಷಲ್‌ ಗಿಫ್ಟ್!‌

25 ವರ್ಷದಿಂದ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ನಟ ಸುದೀಪ್‌ ಅವರ ಸಾಧನೆಯನ್ನು ಪರಿಗಣಿಸಿ, ಭಾರತೀಯ ಅಂಚೆ ಇಲಾಖೆ ‘ವಿಶೇಷ ಅಂಚೆ ಲಕೋಟೆ’ ಹೊರತರಲು ನಿರ್ಧರಿಸಿದೆ.

VISTARANEWS.COM


on

Kichcha Sudeep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ಸುದೀಪ್‌ (Kichcha Sudeep) ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಅಭಿಮಾನಿಗಳಿಂದ ಸಕಲ ಸಿದ್ಧತೆ ಸಾಗಿದೆ. ಈಗಾಗಲೇ ಸುದೀಪ್‌ ಬರ್ತ್‌ ಡೇಗೆ ಸಿಕ್ಕಾಪಟೆ ಪ್ಲ್ಯಾನ್‌ಗಳನ್ನ ಮಾಡಿಕೊಂಡಿದ್ದಾರೆ ಫ್ಯಾನ್ಸ್‌. ಮತ್ತೊಂದೆಡೆ ಸುದೀಪ್‌ ಅವರ ಹುಟ್ಟುಹಬ್ಬದ ದಿನವೇ ‘ವಿಕ್ರಾಂತ್‌ ರೋಣ’ ಸಿನಿಮಾ ಒಟಿಟಿ ವೇದಿಕೆಗೂ ಎಂಟ್ರಿ ಕೊಡುತ್ತಿದೆ. ಇದರ ಜೊತೆಗೆ ಮತ್ತೊಂದು ಸರ್ಪ್ರೈಸ್‌ ನೀಡಲಾಗಿದ್ದು, ಸುದೀಪ್‌ ಅವರ ‘ವಿಶೇಷ ಅಂಚೆ ಲಕೋಟೆ’ ಬಿಡುಗಡೆಗೆ ಅಂಚೆ ಇಲಾಖೆ ಮುಂದಾಗಿದೆ.

ಅಂಚೆ ಇಲಾಖೆಯಿಂದ ನಟ ಸುದೀಪ್‌ ಅವರ ‘ವಿಶೇಷ ಅಂಚೆ ಲಕೋಟೆ’ ಹೊರತರಲು ತೀರ್ಮಾನಿಸಲಾಗಿದೆ. ಮಹತ್ತರ ಘಟನೆ, ವ್ಯಕ್ತಿಗಳ ಸಾಧನೆಯನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಲು ಅಂಚೆ ಇಲಾಖೆ ‘ವಿಶೇಷ ಅಂಚೆ ಲಕೋಟೆ’ಯನ್ನ ಬಿಡುಗಡೆ ಮಾಡುತ್ತದೆ. ಇದೇ ರೀತಿ 25 ವರ್ಷಗಳ ಸಿನಿ ಜರ್ನಿ ಪೂರ್ಣಗೊಳಿಸಿರುವ ಸುದೀಪ್ ಸಾಧನೆಯನ್ನೂ ಅಂಚೆ ಇಲಾಖೆ ದಾಖಲಿಸುತ್ತಿದೆ. ಹೀಗಾಗಿ ಇಂದು ಅಂಚೆ ಇಲಾಖೆ ಅಧೀಕ್ಷಕ ಮಾದೇಶ್ ಕಿಚ್ಚ ಸುದೀಪ್ ನಿವಾಸಕ್ಕೆ ಭೇಟಿ ನೀಡಿ NOC ಪಡೆದುಕೊಂಡರು. ‘ವಿಶೇಷ ಅಂಚೆ ಲಕೋಟೆ’ ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.

Kichcha Sudeep
‘ವಿಶೇಷ ಅಂಚೆ ಲಕೋಟೆ’ಯ ಎನ್‌ಒಸಿಗೆ ಒಪ್ಪಿಗೆ ನೀಡಿದ ನಟ ಕಿಚ್ಚ ಸುದೀಪ್

25 ವರ್ಷದ ಸಾಧನೆ..!
ನಟ ಕಿಚ್ಚ ಸುದೀಪ್‌ಗೆ 2022 ಅವಿಸ್ಮರಣೀಯ. ಯಾಕಂದ್ರೆ ಒಂದು ಕಡೆ ‘ವಿಕ್ರಾಂತ್‌ ರೋಣ’ ಜಗತ್ತಿನಾದ್ಯಂತ ದೊಡ್ಡ ಹಿಟ್‌ ಕಂಡಿದೆ. ಮತ್ತೊಂದು ಕಡೆ ನಟ ಕಿಚ್ಚ ಸುದೀಪ್‌ ಚಿತ್ರರಂಗಕ್ಕೆ ಎಂಟ್ರಿಯಾಗಿ 25 ವರ್ಷವೇ ಕಂಪ್ಲೀಟ್‌ ಆಗಿದೆ. ಹೀಗಾಗಿ ಸೆಪ್ಟೆಂಬರ್‌ 2ರ ಸುದೀಪ್‌ ಹುಟ್ಟುಹಬ್ಬವನ್ನು ತುಂಬಾ ಸ್ಪೆಷಲ್‌ ಆಗಿ ಆಚರಿಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಹೊತ್ತಲ್ಲೇ ಅಂಚೆ ಇಲಾಖೆ ವತಿಯಿಂದ ನಟ ಸುದೀಪ್‌ ಅವರಿಗೆ ಸ್ಪೆಷಲ್‌ ಗಿಫ್ಟ್‌ ಸಿಕ್ಕಿದೆ.

ಇನ್ನು ಸುದೀಪ್‌ ಅವರಿಗೆ ಅಂಚೆ ಇಲಾಖೆಯಿಂದ ಸ್ಪೆಷಲ್‌ ಗಿಫ್ಟ್‌ ಸಿಗುತ್ತಿರುವುದು ಕಿಚ್ಚ ಸುದೀಪ್‌ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ಶೀಘ್ರದಲ್ಲೇ ನಡೆಯಲಿದೆ. ಈ ನಡುವೆ ಶುಕ್ರವಾರ ಕಿಚ್ಚ ಸುದೀಪ್‌ ಬರ್ತ್‌ ಡೇ ಇದ್ದು, ರಾಜ್ಯಾದ್ಯಂತ ಅದ್ಧೂರಿಯಾಗಿ ಸುದೀಪ್‌ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿ ಬಳಗ ಸಕಲ ಸಿದ್ಧತೆ ನಡೆಸಿದೆ. ಮತ್ತೊಂದು ಕಡೆ ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಮತ್ತಷ್ಟು ಸಿನಿಮಾಗಳು ಘೋಷಣೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Ramya Production House | ದೊಡ್ಡ ಗ್ಯಾಪ್‌‌ ಬಳಿಕ ‘ಚಂದನವನ’ಕ್ಕೆ ರಮ್ಯಾ ಗ್ರ್ಯಾಂಡ್‌ ಕಮ್​ ಬ್ಯಾಕ್​ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Meghana Raj: ಅಮ್ಮನಿಗೆ ಚಿನ್ನದ ಓಲೆ ಗಿಫ್ಟ್‌ ಕೊಟ್ಟ ಮೇಘನಾ ರಾಜ್‌; ಕಣ್ಣೀರಿಟ್ಟ ಪ್ರಮೀಳಾ

Meghana Raj: ಮೇಘನಾ (Meghana Raj) ಅಮ್ಮ ಪ್ರಮೀಳಾ ಜೋಶಾಯ್ ಅವರಿಗೆ ಬಿಗ್‌ ಸರ್‌ಪ್ರೈಸ್‌ ನೀಡಿದ್ದಾರೆ. ಅಮ್ಮಂದಿರ ದಿನ ಹಾಗೂ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಚಿನ್ನದ ಓಲೆ ಗಿಫ್ಟ್‌ ಮಾಡಿದ್ದಾರೆ. ಓಲೆ ಕಂಡೊಡನೆ ಭಾವುಕರಾಗಿದ್ದಾರೆ ಪ್ರಮೀಳಾ.

VISTARANEWS.COM


on

Meghana Raj Mother Day Gift Shopping to mother
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ (Actress Meghana Raj) ಹೊಸ ಯುಟ್ಯೂಬ್‌ ಚಾನೆಲ್ ಶುರು ಮಾಡಿರುವುದು ಗೊತ್ತೇ ಇದೆ. ಪುತ್ರ ರಾಯನ್ ರಾಜ್ ಸರ್ಜಾ, ಪ್ರಮೀಳಾ ಜೋಶಾಯ್ ಹಾಗೂ ಸುಂದರ್ ರಾಜ್ ಜತೆ ಹಲವಾರು ವಿಡಿಯೊಗಳನ್ನು ಪೋಸ್ಟ್‌ ಮಾಡಿದ್ದಾರೆ. ಇದೀಗ ಮೇಘನಾ (Meghana Raj) ಅಮ್ಮ ಪ್ರಮೀಳಾ ಜೋಶಾಯ್ ಅವರಿಗೆ ಬಿಗ್‌ ಸರ್‌ಪ್ರೈಸ್‌ ನೀಡಿದ್ದಾರೆ. ಅಮ್ಮಂದಿರ ದಿನ ಹಾಗೂ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಚಿನ್ನದ ಓಲೆ ಗಿಫ್ಟ್‌ ಮಾಡಿದ್ದಾರೆ. ಓಲೆ ಕಂಡೊಡನೆ ಭಾವುಕರಾಗಿದ್ದಾರೆ ಪ್ರಮೀಳಾ.

ಯುಟ್ಯೂಬ್‌ನಲ್ಲಿ ಮೇಘನಾ ರಾಜ್‌ ಅವರು ಈ ವಿಡಿಯೊ ಪೋಸ್ಟ್‌ ಮಾಡಿದ್ದಾರೆ. ನನ್ನ ತಾಯಿ ಹೆಚ್ಚಾಗಿ ಬಂಗಾರದ ಉಂಗರವನ್ನು ಹಾಕಿಕೊಳ್ಳುತ್ತಾರೆ. ಆದರೆ ಈ ಬಾರಿ ನಾನು ಚಿನ್ನದ ಓಲೆ ಅವರಿಗೆ ಗಿಫ್ಟ್‌ ನೀಡಬೇಕು ಅಂದುಕೊಂಡಿದ್ದೆ. ಮದರ್ಸ್‌ ಡೇಗೆ ಗಿಫ್ಟ್‌ ಕೊಡುವಾಗ ಹೆಣ್ಣು ಮಕ್ಕಳು ಹೇಗೆ ಲೆಕ್ಕಾ ಮಾಡುತ್ತಾರೆ ಅಂದ್ರೆ ಅಮ್ಮನಿಗೆ ಅದು ಕೊಟ್ಟರೆ ನಾವೂ ಬಳಸಬಹುದು ಅನ್ನೋ ಮಲ್ಟಿಪರ್ಪಸ್‌ ಆಲೋಚನೆಯಲ್ಲಿ ಕೊಡಿಸುತ್ತಿರುವೆʼʼಎಂದು ಗಿಫ್ಟ್‌ ಬಾಕ್ಸ್‌ ಅಮ್ಮನ ಕೈಗೆ ಕೊಟ್ಟರು ಮೇಘನಾ. ಬಾಕ್ಸ್‌ ನೋಡಿ ಗೆಸ್‌ ಮಾಡಲು ಶುರು ಮಾಡುವ ಪ್ರಮೀಳಾ ಜೋಷಾಯಿ ಇದು ಲಿಪ್‌ಸ್ಟಿಕ್‌ ಇದು ರಿಂಗ್ ಇದು ಕಾಲಿ ಡಬ್ಬ ಎಂದು ಗೆಸ್‌ ಮಾಡುತ್ತಾರೆ. ಆಮೇಲೆ ಚಿನ್ನದ ಅಂಗಡಿ ಹೆಸರು ಓದಿ ಮೌನಿಯಾಗಿ ಬಿಡುತ್ತಾರೆ.

ಇದನ್ನೂ ಓದಿ: Meghana Raj: ಚಿರು ಕೊನೆ ಚಿತ್ರ ಅಲ್ಲ ಎಂದ ಮೇಘನಾ ರಾಜ್‌; ಧ್ರುವ ಸರ್ಜಾ ಭಾವುಕ ಮಾತು!

ಕಿವಿ ಓಲೆ ನೋಡಿದ ಕೂಡಲೇ ಭಾವುಕರಾದರು ಪ್ರಮೀಳಾ. ಜತೆಗೆ ಮಗಳಿಗೆ ನಾನೇ ಈ ವರ್ಷ ಏನು ಗಿಫ್ಟ್‌ ಕೊಟ್ಟಿಲ್ಲ ಎಂದು ಭಾವುಕರಾದರು. ಕೆಲವು ದಿನಗಳ ಹಿಂದೆ ಮೇಘನಾ ರಾಜ್‌ ವಕೇಶನ್‌ ಮೂಡ್‌ನಲ್ಲಿರುವ ವಿಡಿಯೊಗಳನ್ನು ಪೋಸ್ಟ್‌ ಮಾಡಿದ್ದರು ಮೇಘನಾ ರಾಜ್‌ ಯುಟ್ಯೂಬ್‌ನಲ್ಲಿ ಈಗೀಗ ಸಖತ್‌ ಬ್ಯುಸಿಯಾಗಿದ್ದಾರೆ.

ಮೇಘನಾ ರಾಜ್​ ಬದುಕಲ್ಲಿ 2020 ಕೆಟ್ಟವರ್ಷ. ಅವರು ಐದು ತಿಂಗಳ ಗರ್ಭಿಣಿಯಾಗಿದ್ದಾಗಲೇ, ಪತಿ ಚಿರಂಜೀವಿ ಸರ್ಜಾರನ್ನು ಕಳೆದು ಕೊಂಡರು. 2020ರ ಜೂನ್​ 7ರಂದು ಚಿರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದಾದ ಬಳಿಕ ಮಗ ರಾಯನ್​ ಹುಟ್ಟಿದ. ಬಳಿಕ ʻತತ್ಸಮ ತದ್ಭವʼ ಸಿನಿಮಾ ಮೂಲಕ ತೆರೆಗೆ ಮತ್ತೆ ಬಂದರು ನಟಿ. ತತ್ಸಮ ತದ್ಭವ ಸಿನಿಮಾಕ್ಕೆ ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್‌ ಅವರು ಬಂಡವಾಳ ಸುರಿದಿದ್ದಾರೆ. ವಿಶಾಲ್‌ ಆತ್ರೇಯ ಅವರು ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಿನಿಮಾಕ್ಕೆ ವಾಸುಕಿ ವೈಭವ್‌ ಅವರ ಸಂಗೀತ, ಶ್ರೀನಿವಾಸ್‌ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಅವರ ಸಂಕಲನವಿದೆ.

Continue Reading

South Cinema

 L2 Empuraan: ಮೋಹನ್‌ಲಾಲ್ ಬರ್ತ್‌ಡೇ; L2E-ಎಂಪುರಾನ್‌ ಲುಕ್‌ ಔಟ್‌!

 L2 Empuraan: ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಲಿವೆ. ಇದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೂಸಿಫರ್ 2019ರಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಗಳಿಕೆಗಳಲ್ಲಿ ಒಂದಾಯಿತು.

VISTARANEWS.COM


on

L2 Empuraan first look poster shared by Prithviraj Sukumaran
Koo

ಬೆಂಗಳೂರು: ಇಂದು ಮಾಲಿವುಡ್‌ ಸ್ಟಾರ್‌ ಮೋಹನ್‌ಲಾಲ್ (Mohanlal as Khureshi Abraam ) ಅವರ 64ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ನಟ ಪೃಥ್ವಿರಾಜ್ ಸುಕುಮಾರನ್ ʻL2 ಎಂಪುರಾನ್‌ʼ (L2 Empuraan) ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೃಥ್ವಿರಾಜ್ ಅವರ ನಿರ್ದೇಶನದಲ್ಲಿ, ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ 2019ರ ಬ್ಲಾಕ್‌ಬಸ್ಟರ್ ಚಲನಚಿತ್ರ ʻಲೂಸಿಫರ್‌ʼನ ಮುಂದುವರಿದ ಭಾಗವಾಗಿದೆ.

ʻL2 ಎಂಪುರಾನ್‌ʼಗಾಗಿ ಮೋಹನ್‌ಲಾಲ್‌ನ ಜಾಕೆಟ್ ಮತ್ತು ಪ್ಯಾಂಟ್‌ ಧರಿಸಿದ್ದಾರೆ. ಭದ್ರತಾ ಸಿಬ್ಬಂದಿಗಳ ನಡುವೆ ಖಡಕ್‌ ಆಗಿ ನಡೆದುಕೊಂಡು ಹೋಗುತ್ತಿರುವ ಪೋಸ್ಟರ್‌ ಇದು. ಲೂಸಿಫರ್ ಪೃಥ್ವಿರಾಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು. ಅದಾದ ಬಳಿಕ ʻಬ್ರೋ ಡ್ಯಾಡಿʼ ಸಿನಿಮಾವನ್ನು ಒಟ್ಟಿಗೆ ಮಾಡಿದ್ದರು. ಮತ್ತೆ ಈ ಜೋಡಿ L2E-ಎಂಪುರಾನ್‌ ಮೂಲಕ ಒಂದಾಗಿದೆ.

ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಲಿವೆ. ಇದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೂಸಿಫರ್ 2019ರಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಯಿತು. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಗಳಿಕೆಗಳಲ್ಲಿ ಒಂದಾಯಿತು. ಮೋಹನ್‌ಲಾಲ್ ಅವರಲ್ಲದೆ, ಚಿತ್ರದಲ್ಲಿ ವಿವೇಕ್ ಒಬೆರಾಯ್, ಮಂಜು ವಾರಿಯರ್, ಟೊವಿನೋ ಥಾಮಸ್, ಪೃಥ್ವಿರಾಜ್ ಸುಕುಮಾರನ್, ಇಂದ್ರಜಿತ್ ಸುಕುಮಾರನ್, ಸಾನಿಯಾ ಐಯಪ್ಪನ್, ಸಾಯಿ ಕುಮಾರ್, ಜಾನ್ ವಿಜಯ್, ಸಚಿನ್ ಖೇಡೇಕರ್, ಬೈಜು ಸಂತೋಷ್, ಕಲಾಭವನ್ ಶಾಜೋನ್, ಫಾಜಿಲ್, ಸುರೇಶ್ ಚಂದ್ರ ಮೆನನ್ ಮತ್ತು ನೈಲಾ ಉಷಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಮೋಹನ್ ಲಾಲ್ ಕೊನೆಯದಾಗಿ ಕಾಣಿಸಿಕೊಂಡದ್ದು ಫ್ಯಾಂಟಸಿ ನಾಟಕ ಮಲೈಕೊಟ್ಟೈ ವಾಲಿಬನ್ (2024), ಇದನ್ನು ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶಿಸಿದ್ದಾರೆ.

ಮೋಹನ್‌ಲಾಲ್‌ ಜತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ನಂದಕಿಶೋರ್ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ (Actor Mohan Lal) ಅವರಿಗೆ ನಂದಕಿಶೋರ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್‌ ಅವರ ಸಹ ನಿರ್ಮಾಣವಿದೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಅವರು ನಟ ಮೋಹನ್​ಲಾಲ್​ ಜತೆ ನಟಿಸುತ್ತಿದ್ದಾರೆ. ಮೋಹನ್​ಲಾಲ್​ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

Continue Reading

ಕ್ರೈಂ

Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

Actress Murder: ಮೂಲಗಳ ಪ್ರಕಾರ ಆದರೆ ವಿದ್ಯಾ ಅವರು ಕಾಂಗ್ರೆಸ್‌ನಲ್ಲಿದ್ದರೂ ಕೆಲ ನಾಯಕರೊಂದಿಗೆ ಆಪ್ತರಾಗಿದ್ದುದು ಕುಟುಂಬದಲ್ಲಿ ವಿರಸಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು ಎನ್ನಲಾಗಿದೆ. ಸಮಾಜ ಸೇವಕರಾದ ಬನ್ನೂರು ಸಮೀಪದ ತುರಗನೂರಿನ ನಂದೀಶ್‌ ಅವರನ್ನು ವಿವಾಹವಾಗಿದ್ದರು.

VISTARANEWS.COM


on

Mysuru News actress Vidhya Nandish congress leader killed by her husband
Koo

ಬೆಂಗಳೂರು: ಶಿವರಾಜ್‌ಕುಮಾರ್ ನಟನೆಯ ಸೂಪರ್‌ ಹಿಟ್‌ ಚಿತ್ರ ‘ಭಜರಂಗಿ’ಯಲ್ಲಿ ನಟಿಸಿದ್ದ ವಿದ್ಯಾ ನಂದೀಶ್ (Actress Murder) ಭೀಕರವಾಗಿ ಕೊಲೆಯಾಗಿದ್ದಾರೆ. ವಿದ್ಯಾ ನಂದೀಶ್‌ ಕನ್ನಡದ ಕೆಲ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಬಣ್ಣ ಹಚ್ಚಿದ್ದರು. ಇದೀಗ ಪತಿಯೇ ತನ್ನ ಪತ್ನಿಯನ್ನು (Vidhya Nandish) ಕೊಲೆ ಮಾಡಿದ್ದಾನೆ. ಮೈಸೂರು ಜಿಲ್ಲೆಯ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.

ಇನ್ನು ಚಿರಂಜೀವಿ ಸರ್ಜಾ ನಟನೆಯ ‘ಅಜಿತ್’ ಚಿತ್ರದಲ್ಲಿ ವಿದ್ಯಾ ನಂದೀಶ್ ನಾಯಕನ ಸ್ನೇಹಿತೆಯ ಪಾತ್ರದಲ್ಲಿ ಮಿಂಚಿದ್ದರು. ಮಾತ್ರವಲ್ಲ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರವನ್ನು ನಿಭಾಯಿಸಿದ್ದರು. ಇದೀಗ ಕೌಟುಂಬಿಕ ಕಲಹದಿಂದಾಗಿ ನಟಿ ಹತ್ಯೆಯಾಗಿದ್ದಾರೆ. ಸಿನಿಮಾ ಮಾತ್ರವಲ್ಲ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಬ್ಲಾಕ್ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮೂಲಗಳ ಪ್ರಕಾರ ಆದರೆ ವಿದ್ಯಾ ಅವರು ಕಾಂಗ್ರೆಸ್‌ನಲ್ಲಿದ್ದರೂ ಕೆಲ ನಾಯಕರೊಂದಿಗೆ ಆಪ್ತರಾಗಿದ್ದುದು ಕುಟುಂಬದಲ್ಲಿ ವಿರಸಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು ಎನ್ನಲಾಗಿದೆ. ಸಮಾಜ ಸೇವಕರಾದ ಬನ್ನೂರು ಸಮೀಪದ ತುರಗನೂರಿನ ನಂದೀಶ್‌ ಅವರನ್ನು ವಿವಾಹವಾಗಿದ್ದರು.

ಇದನ್ನೂ ಓದಿ: Farmer Self Harming: ಸಾಲ ವಸೂಲಿಗೆ ಹೆಂಡತಿ- ಮಗನಿಗೆ ಗೃಹಬಂಧನ, ಅವಮಾನದಿಂದ ರೈತ ಆತ್ಮಹತ್ಯೆ, ಎಂಥ ರಾಕ್ಷಸಿ ಇವಳು!

ವಿದ್ಯಾ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ವಿದ್ಯಾ ನಂದೀಶ್ ಮೈಸೂರಿನ ಶ್ರೀರಾಮಪುರದಲ್ಲಿ ಪತಿ ಹಾಗೂ ಮಕ್ಕಳ ಜೊತೆ ನೆಲೆಸಿದ್ದರು. ಬನ್ನೂರಿನ ತುರಗನೂರಿನಲ್ಲಿ ಪತಿಯ ಮನೆಗೆ ಆಕೆ ತೆರಳಿದ್ದಾಗ ಗಲಾಟೆ ನಡೆದಿದೆ ಎನ್ನಲಾಗಿದೆ. ಪತಿ ಹಾಗೂ ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಈ ಬಾರಿ ಅದು ವಿಕೋಪಕ್ಕೆ ಹೋಗಿದೆ ಕೊಲೆ ಸಂಭವಿಸಿದೆ ಎಂದು ವರದಿಯಾಗಿದೆ. ಗಲಾಟೆ ವೇಳೆ ಪತ್ನಿ ತಲೆಗೆ ನಂದೀಶ್‌ ಹರಿತವಾದ ಆಯುಧದಿಂದ ಹೊಡೆದು ಓಡಿ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬನ್ನೂರು ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Continue Reading

ಬಾಲಿವುಡ್

Anant Ambani Radhika: ಐಷಾರಾಮಿ ಹಡಗಿನಲ್ಲಿ ನಡೆಯಲಿದೆ ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌ ಶೋ!

Anant Ambani Radhika: ಎರಡನೇ ಪೂರ್ವ ವಿವಾಹ ಸಮಾರಂಭವು ಮೇ 28-30ರವರೆಗೆ ನಡೆಯಲಿದೆ. ಅಂಬಾನಿ ಕುಟುಂಬವು ಸುಮಾರು 800 ಅತಿಥಿಗಳಿಗಾ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಆಯೋಜಿಸಲಿದೆ ಎಂದು ವರದಿಯಾಗಿದೆ. ಇದು ಮೂರು ದಿನಗಳಲ್ಲಿ 4380 ಕಿ. ಮೀ ದೂರ ಚಲಿಸಿದೆ ಎನ್ನಲಾಗಿದೆ. ಜಾಮ್‌ನಗರದಲ್ಲಿ ನಡೆದ ಆಚರಣೆಯಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ರಿಹಾನ್ನಾ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಶಾರುಖ್ ಖಾನ್, ಆಲಿಯಾ ಭಟ್, ಕತ್ರಿನಾ ಕೈಫ್ ಸೇರಿದಂತೆ ಸುಮಾರು 1,200 ಅತಿಥಿಗಳು ಭಾಗವಹಿಸಿದ್ದರು.

VISTARANEWS.COM


on

Anant Ambani Radhika 2nd pre wedding bash
Koo

ಬೆಂಗಳೂರು: ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹಪೂರ್ವ (Anant Ambani Radhika) ಕಾರ್ಯಕ್ರಮವು (Pre Wedding) ಇತ್ತೀಚೆಗೆ ಅದ್ಧೂರಿಯಾಗಿ ನಡೆದಿತ್ತು. ಈ ವಿವಾಹ ಪೂರ್ವ ಸಮಾರಂಭದ ನಂತರ, ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ಗಾಗಿ ಎರಡನೇ ವಿವಾಹ ಪೂರ್ವ ಸಮಾರಂಭವನ್ನು ಆಯೋಜಿಸಲಿದ್ದಾರೆ ಎಂದು ವರದಿಯಾಗಿದೆ. ಜಾಮ್‌ನಗರದಲ್ಲಿ ನಡೆದ ಆಚರಣೆಯಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ರಿಹಾನ್ನಾ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಶಾರುಖ್ ಖಾನ್, ಆಲಿಯಾ ಭಟ್, ಕತ್ರಿನಾ ಕೈಫ್ ಸೇರಿದಂತೆ ಸುಮಾರು 1,200 ಅತಿಥಿಗಳು ಭಾಗವಹಿಸಿದ್ದರು.

ಎರಡನೇ ಪೂರ್ವ ವಿವಾಹ ಸಮಾರಂಭವು ಮೇ 28ರಿಂದ 30ರವರೆಗೆ ನಡೆಯಲಿದೆ. ಅಂಬಾನಿ ಕುಟುಂಬವು ಸುಮಾರು 800 ಅತಿಥಿಗಳಿಗಾಗಿ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು) ಪಾರ್ಟಿ ಆಯೋಜಿಸಲಿದೆ ಎಂದು ವರದಿಯಾಗಿದೆ. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿದೆ. ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇರಲಿದ್ದಾರಂತೆ.

ಇದನ್ನೂ ಓದಿ: Anant Ambani Radhika Merchant: ಹೀಗಿದೆ ನೋಡಿ! ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ನಿವಲ್‌ನ ರಾಯಲ್ ಡ್ರೆಸ್‌ಕೋಡ್ಸ್!

ಕಳೆದ ವರ್ಷ ಜನವರಿಯಲ್ಲಿ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ಸಾಂಪ್ರದಾಯಿಕ ಗೋಲ್‌ ಧನಾ ಕಾರ್ಯಕ್ರಮವಾಗಿ ನಡೆದಿತ್ತು. ಮದುವೆ ಜುಲೈ 12ರಂದು ನಡೆಯಲಿದೆ.

ಈ ಮುಂಚೆ ನಡೆದ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ಮುಕೇಶ್‌ ಅಂಬಾನಿ ಅವರು ಸುಮಾರು 1 ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Continue Reading
Advertisement
RCB vs RR
ಕ್ರೀಡೆ8 seconds ago

RCB vs RR: ಆರ್​ಸಿಬಿ-ರಾಜಸ್ಥಾನ್ ತಂಡಗಳ​ ಐಪಿಎಲ್​ ​ಪ್ಲೇ ಆಫ್/ನಾಕೌಟ್ ದಾಖಲೆ ಹೇಗಿದೆ?

India Skills National Competition 2024 Grand Finale 58 Winners to Represent India at World Skills
ದೇಶ3 mins ago

India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

Cm Siddaramaiah hits out at BJP for Gaurantee Scheme
ರಾಜಕೀಯ5 mins ago

CM Siddaramaiah: ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

Meghana Raj Mother Day Gift Shopping to mother
ಸ್ಯಾಂಡಲ್ ವುಡ್7 mins ago

Meghana Raj: ಅಮ್ಮನಿಗೆ ಚಿನ್ನದ ಓಲೆ ಗಿಫ್ಟ್‌ ಕೊಟ್ಟ ಮೇಘನಾ ರಾಜ್‌; ಕಣ್ಣೀರಿಟ್ಟ ಪ್ರಮೀಳಾ

Prashant Kishor
ದೇಶ15 mins ago

Prashant Kishor: ಮೋದಿ ಮೇಲೆ ಜನರಿಗೆ ಎಳ್ಳಷ್ಟೂ ಸಿಟ್ಟಿಲ್ಲ ಎಂದ ಪ್ರಶಾಂತ್‌ ಕಿಶೋರ್;‌ ಕೊಟ್ಟ ಕಾರಣ ಹೀಗಿದೆ

Ujjivan Small Finance Bank
ವಾಣಿಜ್ಯ15 mins ago

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಲಾಭಾಂಶ ಹೆಚ್ಚಳ

Kempegowda International Airport parking
ಬೆಂಗಳೂರು31 mins ago

Kempegowda International Airport: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲೂ ಹಣ ಕೊಡಬೇಕು!

Abhijit Gangopadhyay
ದೇಶ37 mins ago

Abhijit Gangopadhyay: ದೀದಿ ವಿರುದ್ಧ ಮಾಜಿ ಜಡ್ಜ್‌ ಅವಹೇಳನಕಾರಿ ಹೇಳಿಕೆ; 24 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ತಡೆ

2nd Puc Result
ಬೆಂಗಳೂರು52 mins ago

2nd PUC Result : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಫಲಿತಾಂಶವನ್ನು ಮೊಬೈಲ್‌ನಲ್ಲೇ ನೋಡಿ

L2 Empuraan first look poster shared by Prithviraj Sukumaran
South Cinema1 hour ago

 L2 Empuraan: ಮೋಹನ್‌ಲಾಲ್ ಬರ್ತ್‌ಡೇ; L2E-ಎಂಪುರಾನ್‌ ಲುಕ್‌ ಔಟ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌