Kusha Kapila: 6 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌ Vistara News

ಸಿನಿಮಾ

Kusha Kapila: 6 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌

ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌ ಮತ್ತು ಕಂಟೆಂಟ್‌ ಕ್ರಿಯೇಟರ್‌ ಆಗಿರುವ ಕುಶಾ ಕಪಿಲಾ (Kusha Kapila) ಅವರು ಪತಿ ಜೋರಾವರ್‌ ಅವರಿಂದ ದೂರವಾಗಿರುವುದಾಗಿ ತಿಳಿಸಿದ್ದಾರೆ.

VISTARANEWS.COM


on

Kusha Kapila divorce
Follow us on
Koo

ಮುಂಬೈ: ಇನ್‌ಸ್ಟಾಗ್ರಾಂನ ಇನ್‌ಫ್ಲೂಯೆನ್ಸರ್‌ ಮತ್ತು ಪ್ರಸಿದ್ಧ ಕಂಟೆಂಟ್‌ ಕ್ರಿಯೇಟರ್‌ ಆಗಿರುವ ಕುಶಾ ಕಪಿಲಾ(Kusha Kapila) ಅವರು ಪತಿ ಜೋರಾವರ್‌ ಅಹ್ಲುವಾಲಿಯಾ ಅವರೊಂದಿಗಿನ ದಾಂಪತ್ಯವನ್ನು ಮುರಿದುಕೊಂಡಿದ್ದಾರೆ. ಈ ಬಗ್ಗೆ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಳ್ಳುವ ಮೂಲಕ ಮಾಹಿತಿ ಕೊಟ್ಟಿದ್ದಾರೆ.

“ಜೋರಾವರ್‌ ಮತ್ತು ನಾನು ಬೇರೆಯಾಗುವುದಕ್ಕೆ ನಿರ್ಧರಿಸಿದ್ದೇವೆ. ಇದು ಸುಲಭವಾದ ನಿರ್ಧಾರವಲ್ಲ. ಆದರೆ ನಮ್ಮ ಜೀವನದಲ್ಲಿ ಈ ಹಂತದಲ್ಲಿ ಇದು ಸರಿಯಾದ ನಿರ್ಧಾರವಾಗಿದೆ. ನಾವಿಬ್ಬರು ಹಂಚಿಕೊಂಡ ಪ್ರೀತಿ ಎಂದೆಂದಿಗೂ ಅರ್ಥಪೂರ್ಣ. ಆದರೆ ಸದ್ಯಕ್ಕೆ ನಮ್ಮಿಬ್ಬರ ನಡುವೆ ಹೊಂದಾಣಿಕೆಯಾಗುತ್ತಿಲ್ಲ. ಎಲ್ಲವನ್ನು ಸರಿಪಡಿಸಿಕೊಳ್ಳುವುದಕ್ಕೆ ನಾವು ಸಕಲ ಪ್ರಯತ್ನ ಮಾಡಿದ್ದಾಗಿದೆ” ಎಂದು ನಟಿ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಪ್ರೀತಿಯಲ್ಲಿ ಬಿದ್ದ ಮಗಳಿಗೆ ಬಾಸುಂಡೆ ಬರುವಂತೆ ಬಾರಿಸಿದ ಅಮ್ಮ! ಇದು ಲವ್ ಸೈಡ್ ಎಫೆೆಕ್ಟ್
ಹಾಗೆಯೇ, “ಸಂಬಂಧಗಳ ಅಂತ್ಯ ನಿಜಕ್ಕೂ ದುಃಖಕರ, ಇದು ನಮಗೆ ಮತ್ತು ನಮ್ಮ ಕುಟುಂಬಕ್ಕೆ ಅಗ್ನಿಪರೀಕ್ಷೆ. ಇದನ್ನು ಸಹಿಸಿಕೊಳ್ಳುವುದಕ್ಕೆ ನಮಗೆ ಸಮಯವಿದೆ. ನಮ್ಮ ಜೀವನದಲ್ಲಿ ಮುಂದೆ ಹೋಗುವುದಕ್ಕೆ ಮತ್ತು ಎಲ್ಲವೂ ಸರಿಯಾಗುವುದಕ್ಕೆ ಇನ್ನೂ ಹೆಚ್ಚಿನ ಸಮಯ ಬೇಕಿದೆ. ಸದ್ಯಕ್ಕೆ ಪರಸ್ಪರ ಪ್ರೀತಿ, ಗೌರವ ಮತ್ತು ಬೆಂಬಲ ಕೊಟ್ಟುಕೊಳ್ಳಬೇಕಿದೆ. ನಮ್ಮ ಪ್ರೀತಿಯಾದ ಮಾಯಾಳಿಗೆ ನಾವಿಬ್ಬರೂ ಸಹ ಪೋಷಕರಾಗಿಯೇ ಇರುತ್ತೇವೆ” ಎಂದು ಅವರು ಹೇಳಿಕೊಂಡಿದ್ದಾರೆ.


ಕುಶಾ ಕಪಿಲಾ ಅವರು ಇತ್ತೀಚೆಗೆ ಮುಂಬೈಗೆ ಸ್ಥಳಾಂತರಗೊಂಡಿದ್ದಾರೆ. ಜೋರಾವರ್‌ ಅವರು ಗುರುಗ್ರಾಮದಲ್ಲಿಯೇ ನೆಲೆಸಿದ್ದಾರೆ. ಈ ಜೋಡಿ 2017ರಲ್ಲಿ ವಿವಾಹವಾಗಿತ್ತು. ಕುಶಾ ಅವರು ʼಮಸಬ ಮಸಬʼ ವೆಬ್‌ ಸೀರಿಸ್‌ನಲ್ಲಿ ನಟಿಸುವ ಮೂಲಕ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Salman Khan: ಬರ್ತ್‌ ಡೇ ಪಾರ್ಟಿಯಲ್ಲಿ ಸಲ್ಮಾನ್‌ ಸಖತ್ ಡ್ಯಾನ್ಸ್! ಅಭಿಮಾನಿಗಳಿಗೆ ನಟನ ಆರೋಗ್ಯದ್ದೇ ಚಿಂತೆ

Salman Khan: ಪಾರ್ಟಿಯೊಂದರಲ್ಲಿ ನಟ ಸಲ್ಮಾನ್‌ ಖಾನ್‌ ಡ್ಯಾನ್ಸ್‌ ಮಾಡುವ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

salman
Koo

ನವ ದೆಹಲಿ: ಇತ್ತೀಚೆಗೆ ಉದ್ಯಮಿಯೊಬ್ಬರ ಮೊಮ್ಮಗುವಿನ ಬರ್ತ್‌ ಡೇ ಪಾರ್ಟಿಯ ವೇಳೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಡ್ಯಾನ್ಸ್‌ ಮಾಡಿದ್ದಾರೆ. ಈ ಕಾರ್ಯಕ್ರಮ ಫೋಟೊ ಮತ್ತು ವಿಡಿಯೊ ಈಗ ವೈರಲ್‌ (Viral Video) ಆಗಿದೆ. ಈ ವೇಳೆ ಸಲ್ಮಾನ್‌ ಖಾನ್‌ ತಮ್ಮ ಸೂಪರ್‌ ಹಿಟ್‌ ಚಿತ್ರಗಳಾದ ‘ದಬಾಂಗ್‌’ನ ‘ಹಮ್‌ಕ ಪೀನಿ ಹೆ’ ಮತ್ತು ‘ವಾಂಟೆಡ್‌’ ಚಿತ್ರದ ʼಜಲ್ವʼ ಮುಂತಾದ ಹಾಡುಗಳಿಗೆ ಹೆಜ್ಜೆ ಹಾಕಿದರು.

ಸಲ್ಮಾನ್‌ ಖಾನ್‌ ಅಭಿಮಾನಿಗಳು ಈ ವಿಡಿಯೊವನ್ನು ವಿವಿಧ ಸೋಷಿಯಲ್‌ ಮಿಡಿಯಾಗಳ ಮೂಲಕ ಹಂಚಿಕೊಂಡಿದ್ದಾರೆ. ಈ ವೇಳೆ ಕೆಲವರು ನಟನ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊದಲ್ಲಿ ಅವರು ಸ್ವಲ್ಪ ಅಸ್ವಸ್ಥರಂತೆ ಕಂಡು ಬರುತ್ತಿದ್ದುದೇ ಫ್ಯಾನ್ಸ್‌ ಆತಂಕಕ್ಕೆ ಕಾರಣ. ಆರಂಭದಲ್ಲಿ ಸಲ್ಮಾನ್‌ ಖಾನ್‌ ಅವರ ಈ ಡ್ಯಾನ್ಸ್‌ ಮದುವೆಯೊಂದರಲ್ಲಿ ನಡೆದಿತ್ತು ಎಂದು ಕೆಲವರು ಭಾವಿಸಿದ್ದರು. ಬಳಿಕ ಇದು ಬರ್ತ್‌ ಡೇ ಪಾರ್ಟಿ ಎಂದು ಖಚಿತವಾಗಿದೆ.

ಅಭಿಮಾನಿಗಳಿಗೆ ಆತಂಕ

ವೈರಲ್ ಆಗಿರುವ ವಿಡಿಯೊದಲ್ಲಿ ಸಲ್ಮಾನ್ ಖಾನ್ ಕಪ್ಪು ಪ್ಯಾಂಟ್ ಮತ್ತು ಮ್ಯಾಚಿಂಗ್ ಶೂಗಳೊಂದಿಗೆ ಕಪ್ಪು ಟೀ ಶರ್ಟ್ ಧರಿಸಿದ್ದಾರೆ. ಟ್ಯೂಬ್ ಲೈಟ್ ಚಿತ್ರದ ‘ಸಾಜನ್ ರೇಡಿಯೋ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಅವರು ಬೆಳ್ಳಿಯ, ಹೊಳೆಯುವ ಜಾಕೆಟ್‌ನೊಂದಿಗೆ ಪ್ರತ್ಯಕ್ಷರಾದರು. ವಿಡಿಯೊ ನೋಡಿದ ಅನೇಕರು ಸಲ್ಮಾನ್‌ ಖಾನ್‌ ಫಿಟ್ ಮತ್ತು ಆರೋಗ್ಯವಂತವಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ಒಬ್ಬರು ಕಮೆಂಟ್ ಮಾಡಿ, ʼʼಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಲ್ಮಾನ್ ಖಾನ್ ಅಮೇರಿಕಾಕ್ಕೆ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವ್ಯಾಯಾಮವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ಜತೆಗೆ ಸಲ್ಮಾನ್‌ ಖಾನ್‌ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇನ್ನೊಬ್ಬರು ʼʼಇದು ಸಲ್ಮಾನ್ ಖಾನ್ ಅವರ ನಿಜವಾದ ವಯಸ್ಸನ್ನು ತೋರಿಸುತ್ತಿದೆ, ಈ ರೀತಿ ಕಾಣಿಸುವುದು ಅನಾರೋಗ್ಯದಿಂದಲ್ಲʼʼ ಎಂದಿದ್ದಾರೆ. ಸಲ್ಮಾನ್ ಖಾನ್ ಫಿಟ್ನೆಸ್ ಮತ್ತು ನಿಯಮಿತ ವ್ಯಾಯಾಮಗಳಿಗೆ ಪ್ರಾಮುಖ್ಯತೆ ಕೊಡುವುದರಿಂದ ಅಭಿಮಾನಿಗಳಿಗೆ ಈ ರೀತಿಯ ಬದಲಾವಣೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆದಷ್ಟು ಬೇಗ ಮೊದಲಿನಂತಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?

ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ ಬಹು ನಿರೀಕ್ಷಿತ ʼಟೈಗರ್ 3ʼ ಚಿತ್ರದ ಟೀಸರ್ ಅನಾವರಣಗೊಳಿಸಿದ್ದಾರೆ. ಸಲ್ಮಾನ್ ಈ ವರ್ಷದ ಮೇ ತಿಂಗಳಲ್ಲಿ ಅಬುಧಾಬಿಯಲ್ಲಿ ʼಟೈಗರ್ 3ʼ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದರು. ಶೂಟಿಂಗ್‌ ಪೂರ್ಣಗೊಳಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, “ಕಳೆದ ರಾತ್ರಿ ʼಟೈಗರ್ 3ʼ ಚಿತ್ರವನ್ನು ಪೂರ್ಣಗೊಳಿಸಿದ್ದೇನೆ. ದೀಪಾವಳಿಯಂದು ಚಿತ್ರ ತೆರೆಗೆ ಬರಲಿದೆ. ಈ ಚಿತ್ರಕ್ಕಾಗಿ ಬಿಡುವಿಲ್ಲದೆ ದುಡಿದಿದ್ದೇವೆ. ಇದೊಂದು ಅದ್ಭುತ ಅನುಭವ” ಎಂದು ಅವರು ಹೇಳಿಕೊಂಡಿದ್ದರು.

ʼಟೈಗರ್ 3ʼ ಟೈಗರ್ ಸೀರಿಸ್‌ನ ಮೂರನೇ ಕಂತು. 2012ರಲ್ಲಿ ಬಿಡುಗಡೆಗೊಂಡ ʼಏಕ್ ಥಾ ಟೈಗರ್‌ʼ, 2017ರಲ್ಲಿ ತೆರೆಕಂಡ ʼಟೈಗರ್ ಜಿಂದಾ ಹೈʼ ಬಳಿಕ ಇದೀಗ ʼಟೈಗರ್ 3ʼ ರಿಲೀಸ್‌ ಆಗಲಿದೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Continue Reading

ಬಾಲಿವುಡ್

Gandhi Jayanti: ಗಾಂಧಿ ಪಾತ್ರಕ್ಕಾಗಿ 30 ಕೆಜಿ ತೂಕ ಕಳೆದುಕೊಂಡಿದ್ದೆ; ಬೊಮನ್‌ ಇರಾನಿ

Gandhi Jayanti: ಬಾಲಿವುಡ್‌ ನಟ ಬೊಮನ್‌ ಇರಾನಿ ʼಮಹಾತ್ಮಾ V/s ಗಾಂಧಿʼ ಚಿತ್ರಕ್ಕಾಗಿ ತಾವು 30 ಕೆಜಿ ತೂಕ ಕಳೆದುಕೊಂಡ ವಿಚಾರವನ್ನು ಹಂಚಿಕೊಂಡಿದ್ದಾರೆ.

VISTARANEWS.COM


on

gandhi
Koo

ನವ ದೆಹಲಿ: ನಿನ್ನೆ (ಅಕ್ಟೋಬರ್‌ 2) ಎಲ್ಲೆಡೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ (Gandhi Jayanti). ಈ ಸಂದರ್ಭದಲ್ಲಿ ಬಾಲಿವುಡ್‌ನ ಹಿರಿಯ ನಟ ಬೋಮನ್‌ ಇರಾನಿ (Boman Irani)ಫಿರೋಜ್‌ ಖಾನ್‌ ಅವರ ʼಮಹಾತ್ಮ V/s ಗಾಂಧಿʼ (Mahatma V/s Gandhi) ಚಿತ್ರದಲ್ಲಿನ ತಮ್ಮ ಪಯಣವನ್ನು ಮೆಲುಕು ಹಾಕಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗಾಂಧಿ ಪಾತ್ರಕ್ಕಾಗಿ ತಾವು ಬರೋಬ್ಬರಿ 30 ಕೆಜಿ ತೂಕ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬೊಮನ್ ಇರಾನಿ ಈ ಚಿತ್ರದಲ್ಲಿ ಮಹಾತ್ಮ ಗಾಂಧಿ-ಕಠಿಣ ಪಾತ್ರದ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದ್ದರು. ಈ ಸವಾಲಿನ ಪಾತ್ರಕ್ಕಾಗಿ ನಟನಾ ಕೌಶಲ್ಯ ಮತ್ತು ದೈಹಿಕ ರೂಪಾಂತರದ ಅಗತ್ಯವಿತ್ತು. ಅದನ್ನು ಸಮರ್ಥವಾಗಿ ನಿರ್ವಹಿಸಿದ ಅವರು ನೋಡುಗರನ್ನು ಬೆರಗುಗೊಳಿಸಿದರು. “ಇದು ಗಾಂಧಿ ಜಯಂತಿ. ಒಂದು ದಿನಕ್ಕೆ ಸೀಮತ ಮಾಡದೆ ನಾವು ಪ್ರತಿದಿನ ಅವರ ಬಗ್ಗೆ ಮತ್ತು ಅವರ ತತ್ವಗಳ ಬಗ್ಗೆ ಯೋಚಿಸಬೇಕು. ಫಿರೋಜ್ ಖಾನ್ ಅವರ ‘ಮಹಾತ್ಮ V/s ಗಾಂಧಿ’ ಚಿತ್ರದಲ್ಲಿ ಅವರ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ, ಈ ಚಿತ್ರಕ್ಕಾಗಿ 30 ಕೆಜಿ ತೂಕ ಕಳೆದುಕೊಂಡೆ ಮತ್ತು ಜೀವನದಲ್ಲಿ ಬಹು ದೊಡ್ಡ ಪಾಠ ಕಲಿತುಕೊಂಡೆʼʼ ಎಂದು ಬರೆದುಕೊಂಡಿದ್ದಾರೆ.

ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯಂದು ರಾಷ್ಟ್ರವು ಅವರಿಗೆ ಗೌರವ ಸಲ್ಲಿಸುತ್ತಿರುವಾಗ, ಬೊಮನ್ ಇರಾನಿ ಅವರ ‘ಮಹಾತ್ಮಾ V/s ಗಾಂಧಿ’ ಚಿತ್ರದಲ್ಲಿ ಮಹಾತ್ಮನ ಪಾತ್ರವು ರಾಷ್ಟ್ರಪಿತ ಮತ್ತು ಅವರ ಬೋಧನೆಗಳ ಹೃದಯಸ್ಪರ್ಶಿ ಜ್ಞಾಪಕವಾಗಿ ಚಾಲ್ತಿಯಲ್ಲಿದೆ.

ಇದನ್ನೂ ಓದಿ: Dunki Movie: ʻಡಂಕಿʼ ಸಿನಿಮಾ ರಿಲೀಸ್‌ ಬಗ್ಗೆ ಬಾಯ್ಬಿಟ್ಟ ಶಾರುಖ್‌; 2023 ಬಾದ್‌ಷಾರ ವರ್ಷ ಅಂದ್ರು ಫ್ಯಾನ್ಸ್‌!

ಸದ್ಯ ಬೊಮನ್‌ ಇರಾನಿ ಶಾರುಖ್‌ ಖಾನ್‌ ಜತೆ ʼಡಂಕಿʼ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಇದು ಈ ವರ್ಷದ ಬಹು ನಿರೀಕ್ಷಿತ ಚಿತ್ರವೂ ಹೌದು. ಇತ್ತೀಚೆಗೆ ಪತ್ರಕರ್ತರೊಂದಿಗೆ ಮಾತನಾಡಿದ್ದ ಬೊಮನ್‌ ಇರಾನಿ, ಸಹ ನಟ ಶಾರುಖ್‌ ಖಾನ್‌ ಅವರನ್ನು ಹೊಗಳಿದ್ದರು. ʼʼಶಾರುಖ್‌ ಖಾನ್‌ ಅವರಿಗೆ ಯಾವುದೇ ರೀತಿಯ ಅಹಂ ಇಲ್ಲ. ಸ್ಟಾರ್‌ ಡಮ್‌ ಅವರ ತಲೆಗೇರಿಲ್ಲ. ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಾರೆ. ಅವರು ದೊಡ್ಡ ಸ್ಟಾರ್‌ ಎಂಬ ಭಾವನೆ ನನಗೆ ಬಂದೇ ಇಲ್ಲ. ಶೂಟಿಂಗ್‌ ಸೆಟ್‌ನಲ್ಲಿ ಸಹೋದರನ ಹಾಗೆ ಬೆರೆಯುತ್ತಿದ್ದರುʼʼ ಎಂದು ಹೇಳಿದ್ದರು. ಈ ಇಬ್ಬರು ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿಲ್ಲ. ಈ ಹಿಂದೆ ʼಮೆ ಹೂ ನಾʼ, ʼಡಾನ್‌ʼ ಮತ್ತು ʼಹ್ಯಾಪಿ ನ್ಯೂ ಇಯರ್‌ʼ ಮತ್ತಿತರ ಚಿತ್ರಗಳಲ್ಲಿ ಈ ಇಬ್ಬರು ಜತೆಗೆ ಅಭಿನಯಿಸಿದ್ದರು. ʼಡಂಕಿʼ ಡಿಸೆಂಬರ್‌ 22ರಂದು ತೆರೆಗೆ ಬರಲಿದೆ. ಈ ಹಿಂದೆ ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ʼಮುನ್ನಾಭಾಯಿ ಎಂ.ಬಿ.ಬಿ.ಎಸ್‌.ʼ, ʼಲಗೇ ರಹೋ ಮುನ್ನಾ ಭಾಯಿʼ, ʼ3 ಈಡಿಯಟ್ಸ್‌ʼ, ʼಪಿಕೆʼ, ʼಸಂಜುʼ ಮುಂತಾದ ಚಿತ್ರಗಳಲ್ಲಿ ಬೊಮನ್‌ ಇರಾನಿ ಮುಖ್ಯ ಪಾತ್ರದ ಮೂಲಕ ಗಮನ ಸೆಳೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Continue Reading

South Cinema

Rashmika Mandanna: ಮತ್ತೊಮ್ಮೆ ʼರಂಜಿತಮೆʼ, ʼಸಾಮಿʼ ಹಾಡಿಗೆ ಹೆಜ್ಜೆ ಹಾಕಿದ ರಶ್ಮಿಕಾ!

Rashmika Mandanna: ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ದುಬೈಯಲ್ಲಿ ಆಭರಣ ಮಳೆಗೆಯೊಂದರ ಉದ್ಘಾಟನೆ ವೇಳೆ ವೇದಿಕೆಯಲ್ಲಿ ಹೆಜ್ಜೆ ಹಾಕಿದ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

rashmika
Koo

ದುಬೈ: ಸ್ಯಾಂಡಲ್‌ವುಡ್‌ನ ʼಕಿರಿಕ್‌ ಪಾರ್ಟಿʼ (Kirik Party) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿ ʼಚಲೋʼ ಚಿತ್ರದ ಮೂಲಕ ತೆಲುಗಿನಲ್ಲಿ ಛಾಪು ಮೂಡಿಸಿ ʼಸುಲ್ತಾನʼನ ಮನದರಸಿಯಾಗಿ ಕಾಲಿವುಡ್‌ಗೆ ಕಾಲಿಟ್ಟು, ʼಗುಡ್‌ ಬೈʼ ಮೂಲಕ ಬಾಲಿವುಡ್‌ಗೆ ಜಿಗಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಕೈ ತುಂಬಾ ಸಿನಿಮಾ, ಜಾಹೀರಾತು ಹೊಂದಿರುವ ನಟಿ. ಅವರು ದೇಶಾದ್ಯಂತ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ಆಭರಣ ಮಳಿಗೆಯೊಂದರ ಉದ್ಘಾಟನೆಗಾಗಿ ದುಬೈಗೆ ತೆರಳಿದ್ದರು. ಈ ವೇಳೆ ಅವರು ತಾವು ಕಾಲಿವುಡ್‌ ಸೂಪರ್‌ ಸ್ಟಾರ್‌ ವಿಜಯ್‌ ಜತೆ ನಟಿಸಿದ ʼವಾರಿಸುʼ (Varisu) ಚಿತ್ರ ʼರಂಜಿತಮೆʼ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಎಸ್‌. ತಮನ್‌ ಸಂಗೀತ ನೀಡಿದ ʼರಂಜಿತಮೆʼ ಹಾಡು ಸೂಪರ್‌ ಹಿಟ್‌ ಆಗಿತ್ತು. ಡ್ಯಾನ್ಸಿಂಗ್‌ ನಂಬರ್‌ ಇದಾಗಿದ್ದು, ವಿಜಯ್‌-ರಶ್ಮಿಕಾ ಹೆಜ್ಜೆ ಹಾಕಿದ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಇತ್ತೀಚೆಗೆ ದುಬೈಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ರಶ್ಮಿಕಾ ವೇದಿಕೆ ಮೇಲೆ ಬಂದಾಗ ನಿರೂಪಕರು ಒಂದರಡು ಹೆಜ್ಜೆ ಹಾಕಲು ಮನವಿ ಮಾಡಿದರು. ಅದಕ್ಕೆ ತಕ್ಕಂತೆ ಡಿಜೆ ʼರಂಜಿತಮೆʼ ಹಾಡು ಪ್ಲೇ ಮಾಡಿದರು. ಬಳಿಕ ರಶ್ಮಿಕಾ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ಗಮನ ಸೆಳೆದರು.

ಕಲ್ಯಾಣ್‌ ಜ್ಯುವೆಲ್ಲರ್ಸ್‌ನ ಬ್ರ್ಯಾಂಡ್‌ ರಾಯಭಾರಿಯಾಗಿರುವ ರಶ್ಮಿಕಾ ದುಬೈನ ಅಲ್ ಬರ್ಶಾದಲ್ಲಿನ ಹೊಸ ಶೋರೂಂ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ʼರಂಜಿತಮೆʼ ಮಾತ್ರವಲ್ಲ ತಮ್ಮ ಸೂಪರ್‌ ಹಿಟ್‌ ತೆಲುಗು ಚಿತ್ರ ʼಪುಷ್ಪʼದ ʼಸಾಮಿ ಸಾಮಿʼ ಹಾಡಿಗೂ ಕುಣಿದಿದ್ದಾರೆ. ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಅಭಿನಯಿಸಿದ್ದ ʼಪುಷ್ಪʼ ಚಿತ್ರ 2021ರಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು. ಸುಕುಮಾರ್‌ ನಿರ್ದೇಶನದ ಈ ಚಿತ್ರಕ್ಕೆ ದೇವಿ ಪ್ರಸಾದ್‌ ಸಂಗೀತ ನೀಡಿದ್ದರು. ಈ ಚಿತ್ರದ ಹಾಡುಗಳೆಲ್ಲ ಸೂಪರ್‌ ಹಿಟ್‌ ಆಗಿದ್ದವು. ಆಭರಣ ಮಳಿಗೆ ಉದ್ಘಾಟನೆ ವೇಳೆ ಸೀರೆ ಸುತ್ತಿ ಅಭಿಮಾನಿಗಳ ಮನ ಕದ್ದಿದ್ದ ರಶ್ಮಿಕಾ ಬಳಿ ಸ್ಪೆಪ್‌ ಮೂಲಕವೂ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ʼರಂಜಿತಮೆʼ ಹಾಡಿನ ವಿಡಿಯೊವನ್ನು ಎಕ್ಸ್‌ನಲ್ಲಿ ಈಗಾಗಲೇ ಸುಮಾರು 20 ಸಾವಿರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ʼಸಾಮಿ ಸಾಮಿʼ ಹಾಡಿನ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Rashmika Mandanna: ಧನುಷ್‌ ಜತೆ ರಶ್ಮಿಕಾ ರೊಮ್ಯಾನ್ಸ್‌!

ಸದ್ಯ ರಶ್ಮಿಕಾ ವಿವಿಧ ಭಾಷೆಗಳ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ರಣಬೀರ್‌ ಕಪೂರ್‌ ಜತೆ ನಟಿಸುತ್ತಿರುವ ಬಾಲಿವುಡ್‌ ಚಿತ್ರ ʼಅನಿಮಲ್‌ʼನ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ಇನ್ನು ಬಹು ನಿರೀಕ್ಷಿತ ತೆಲುಗು ಚಿತ್ರ ʼಪುಷ್ಪ 2′ ಚಿತ್ರೀಕರಣ ನಡೆಯುತ್ತಿದೆ. ಮಾತ್ರವಲ್ಲ ‘ರೈನ್‌ ಬೋ’, ಧನುಷ್‌ ಜತೆ ‘ಡಿ 51ʼ, ವಿಜಯ್‌ ದೇವರಕೊಂಡ, ರವಿತೇಜ ಅಭಿನಯದ ಚಿತ್ರಗಳಿಗೂ ರಶ್ಮಿಕಾ ನಾಯಕಿ ಆಯ್ಕೆಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Continue Reading

ಬಾಲಿವುಡ್

Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?

Boney Kapoor: ಬಾಲಿವುಡ್‌ ಸ್ಟಾರ್‌, ಬಹುಭಾಷಾ ನಾಯಕಿ ಶ್ರೀದೇವಿ ಸಾವಿನ ಕುರಿತು ಪತಿ, ನಿರ್ಮಾಪಕ ಬೋನಿ ಕಪೂರ್‌ ಮುಕ್ತವಾಗಿ ಮಾತನಾಡಿದ್ದಾರೆ. ಶ್ರೀದೇವಿ ಸಾವು ಸಹಜವಲ್ಲ ಆದರೆ ಆಕಸ್ಮಿಕ ಎಂದಿದ್ದಾರೆ.

VISTARANEWS.COM


on

boney kapoor
Koo

ಮುಂಬೈ: ಬಾಲಿವುಡ್‌ ನಟಿ, ಪತ್ನಿ ಶ್ರೀದೇವಿ ಸಾವಿನ ಕುರಿತು ಇದೇ ಮೊದಲ ಬಾರಿ ನಿರ್ಮಾಪಕ ಬೋನಿ ಕಪೂರ್‌ ಮಾತನಾಡಿದ್ದಾರೆ. 2018ರಲ್ಲಿ ಮೃತಪಟ್ಟ ನಟಿಯ ಸಾವಿನ ಹಿಂದೆ ತಮ್ಮ ಪಾತ್ರ ಇರುವ ಬಗ್ಗೆ ವದಂತಿ ಕೇಳಿ ಬಂದಿರುವ ಹಿನ್ನಲೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಶ್ರೀದೇವಿ ಅವರ ಸಾವು ಸಹಜವಲ್ಲ. ಆದರೆ ಆಕಸ್ಮಿಕ ಎಂದಿದ್ದಾರೆ. ಈ ಬಗ್ಗೆ ಅವರು ದುಬೈ ಪೊಲೀಸರಿಂದ ಎಲ್ಲಾ ರೀತಿಯ ಪರೀಕ್ಷೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಆ ಸಮಯದಲ್ಲಿ ಭಾರತೀಯ ಮಾಧ್ಯಮಗಳಿಂದ ಸಾಕಷ್ಟು ಒತ್ತಡ ಇತ್ತು ಎನ್ನುವುದನ್ನೂ ತಿಳಿಸಿದ್ದಾರೆ.

”ಆ ಬಗ್ಗೆ ನಾನು ಮಾತನಾಡದಿರಲು ನಿರ್ಧರಿಸಿದ್ದೆ. ತನಿಖೆ ವೇಳೆ ನಾನು ಈ ಬಗ್ಗೆಯೇ ಸುಮಾರು 24ರಿಂದ 48 ಗಂಟೆಗಳ ಕಾಲ ಮಾತನಾಡಿದ್ದೆ. ಹೀಗಾಗಿ ನಾನು ದುಬೈ ಪೊಲೀಸ್‌ನಿಂದ ಕ್ಲೀನ್‌ ಚಿಟ್‌ ಪಡೆದುಕೊಂಡಿದ್ದೆ. ಮಾತ್ರವಲ್ಲ ನಾನು ತನಿಖೆಗೆ ಪೊಲೀಸರ ಜತೆ ಎಲ್ಲಾ ರೀತಿಯಲ್ಲೂ ಸಹಕರಿಸಿದ್ದೆ. ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ ಸಹಿತ ಎಲ್ಲಾ ಪರೀಕ್ಷೆಗಳಿಗೆ ಒಳಗಾಗಿದ್ದೆ. ಕೊನೆಗೆ ಇದು ನೀರಿನಲ್ಲಿ ಮುಳುಗಿ ಸಂಭವಿಸಿದ ಆಕಸ್ಮಿಕ ಸಾವು ಎನ್ನುವ ವರದಿ ಬಂತುʼʼ ಎಂದು ಬೋನಿ ಕಪೂರ್‌ ಹೇಳಿದ್ದಾರೆ.

ಡಯಟ್‌ ಮಾಡುತ್ತಿದ ಶ್ರೀದೇವಿ

ಶ್ರೀದೇವಿ ಕೈಗೊಳ್ಳುತ್ತಿದ್ದ ಡಯಟ್‌ ಬಗ್ಗೆಯೂ ಬೋನಿ ಕಪೂರ್‌ ಮಾತನಾಡಿದ್ದಾರೆ. ʼʼಅವರು ಆಹಾರ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. ಕುಟುಂಬ ವೈದ್ಯರು ಪಥ್ಯ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದರು. ಅದರಂತೆ ಶ್ರೀದೇವಿ ಹಸಿವಿನಿಂದ ಬಳಲುತ್ತಿದ್ದರೂ ಚೆನ್ನಾಗಿ ಕಾಣಬೇಕು ಎಂದು ಬಯಸಿದ್ದರುʼʼ ಎಂದು ಬೋನಿ ಕಪೂರ್‌ ಹೇಳಿದ್ದಾರೆ.

ʼʼಶ್ರೀದೇವಿ ತಮ್ಮ ದೇಹದ ಆಕಾರ ಉತ್ತಮವಾಗಿ ಇರಿಸಿಕೊಳ್ಳಲು ಸದಾ ಗಮನ ಹರಿಸುತ್ತಿದ್ದರು. ಹಿಂದೊಮ್ಮೆ ಅವರು ʼಇಂಗ್ಲಿಷ್‌ ವಿಂಗ್ಲಿಷ್‌ʼ ಚಿತ್ರಕ್ಕಾಗಿ ದೇಹವನ್ನು 46-47 ಕೆಜಿಗೆ ಇಳಿಸಿಕೊಂಡಿದ್ದರು. ಮಾತ್ರವಲ್ಲ ಅವರು ಉಪ್ಪನ್ನು ಸೇವಿಸುತ್ತಿರಲಿಲ್ಲʼʼ ಎಂದು ವಿವರಿಸಿದ್ದಾರೆ.

ʼʼಮದುವೆಯಾದಾಗಿನಿಂದ ಗಮನಿಸುತ್ತಿದ್ದೆ. ಆಕೆ ಕಟ್ಟುನಿಟ್ಟಿನ ಜೀವನ ಕ್ರಮ ಅನುಸರಿಸುತ್ತಿದ್ದರು. ಕಠಿಣ ಡಯಟ್‌ ಫಾಲೋ ಮಾಡುತ್ತಿದ್ದರು. ಲೋ ಬಿಪಿಯ ಅಪಾಯದ ಬಗ್ಗೆ ಆಗಾಗ ವೈದ್ಯರು ಸೂಚಿಸುತ್ತಿದ್ದರು. ಉಪ್ಪು ತಿನ್ನದಿರುವ ಆಹಾರ ಕ್ರಮ ಅನುಸರಿಸಬೇಡಿ ಎಂದು ಎಚ್ಚರಿಸುತ್ತಿದ್ದರು. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಶ್ರೀದೇವಿ ಮೃತಪಟ್ಟಾಗ ನಟ ನಾಗಾರ್ಜುನ ಸಾಂತ್ವನ ಹೇಳಲು ಬಂದಿದ್ದರು. ಆಗ ಅವರು ಒಂದು ಸಿನಿಮಾಕ್ಕಾಗಿ ಕಠಿಣ ಡಯಟ್‌ ಮಾಡಿ ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದು ಹಲ್ಲು ಮುರಿದುಕೊಂಡ ಘಟನೆಯನ್ನು ವಿವರಿಸಿದ್ದರುʼʼ ಎಂದು ಬೋನಿ ಕಪೂರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Actress Sridevi: ಮದುವೆಯಾಗುವಾಗ ಶ್ರೀದೇವಿ ಗರ್ಭಿಣಿಯಾಗಿದ್ದರೆ? ಬೋನಿ ಕಪೂರ್‌ ಹೇಳಿದ್ದೇನು?

2018ರಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಶ್ರೀದೇವಿ ಕುಟುಂಬ ಸಮೇತ ದುಬೈಗೆ ತೆರಳಿದ್ದರು. ಈ ವೇಳೆ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟಿದ್ದರು. ಇದು ಅನುಮಾನಗಳನ್ನನು ಹುಟ್ಟು ಹಾಕಿತ್ತು. ಹೀಗಾಗಿ ಬೋನಿ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಶ್ರೀದೇವಿ-ಬೋನಿ ಕಪೂರ್‌ ದಂಪತಿಯ ಮಕ್ಕಳು. ಸದ್ಯ ಜಾಹ್ನವಿ ಚಿತ್ರಗಳಲ್ಲಿ ನಟಿಸುತ್ತಿದ್ದು, ಖುಷಿ ಶೀಘ್ರದಲ್ಲಿಯೇ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Continue Reading
Advertisement
Hospital
ಪ್ರಮುಖ ಸುದ್ದಿ28 mins ago

ವಿಸ್ತಾರ ಸಂಪಾದಕೀಯ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸರಣಿ ಸಾವು ಆಘಾತಕರ

dina bhavishya
ಪ್ರಮುಖ ಸುದ್ದಿ1 hour ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

Sphoorti Salu
ಸುವಚನ1 hour ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Vivek Ramaswamy offering rs 80 lakh to nanny Says media report
ಪ್ರಮುಖ ಸುದ್ದಿ6 hours ago

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

MLC TA Sharavana
ಬೆಂಗಳೂರು7 hours ago

TA Sharavana: ಅನಾಮಿಕರಾಗಿದ್ದ ಜಮೀರ್‌ಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್: ಟಿ.ಎ.ಶರವಣ

Justin Trudeau
ದೇಶ7 hours ago

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

Netherlands cricket team
ಕ್ರಿಕೆಟ್7 hours ago

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

Modi and KTR
ದೇಶ7 hours ago

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

Child dies
ಕರ್ನಾಟಕ7 hours ago

Anekal News: ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

MB Patil visits america
ಕರ್ನಾಟಕ8 hours ago

MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

dina bhavishya
ಪ್ರಮುಖ ಸುದ್ದಿ1 hour ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

The maintenance train finally lifted Metro services as usual
ಕರ್ನಾಟಕ15 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ16 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ2 days ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ3 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

ಟ್ರೆಂಡಿಂಗ್‌