Manjummel Boys: ʼಮಂಜುಮ್ಮೇಲ್ ಬಾಯ್ಸ್’ ತಂಡಕ್ಕೆ ರಜನಿಕಾಂತ್‌ ಸತ್ಕಾರ! - Vistara News

ಸಿನಿಮಾ

Manjummel Boys: ʼಮಂಜುಮ್ಮೇಲ್ ಬಾಯ್ಸ್’ ತಂಡಕ್ಕೆ ರಜನಿಕಾಂತ್‌ ಸತ್ಕಾರ!

Manjummel Boys: ಚಿದಂಬರಂ ನಿರ್ದೇಶನದ ಈ ಚಿತ್ರ ಫೆಬ್ರವರಿ 22ರಂದು ಥಿಯೇಟರ್​ನಲ್ಲಿ ಬಿಡುಗಡೆಯಾಗಿತ್ತು. ಅಂದಿನಿಂದ ಇದು ಸುಮಾರು 200 ಕೋಟಿ ರೂ. ಕಲೆಕ್ಷನ್‌ ಮಾಡಿದ್ದು, ಈ ಮೂಲಕ ಅತ್ಯಧಿಕ ಗಳಿಕೆ ಕಂಡ ಮಲಯಾಳಂ ಚಿತ್ರ ಎನ್ನುವ ದಾಖಲೆ ಬರೆದಿದೆ. ಸುಮಾರು 5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ಗಳಿಕೆ ಬರೋಬ್ಬರಿ 200 ಕೋಟಿ ರೂ ! ಮಲಯಾಳಿಗಳು ಮಾತ್ರವಲ್ಲ ವಿವಿಧ ಬಾಷಿಕರೂ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಥಿಯೇಟರ್‌ನಲ್ಲಿ ಪ್ರೇಕ್ಷಕರ ಗಮನ ಸೆಳೆದ ಈ ಚಿತ್ರ ಒಟಿಟಿ (OTT)ಗೆ ಬರಲು ಸಿದ್ಧವಾಗಿದೆ.

VISTARANEWS.COM


on

Manjummel Boys team meet Superstar Rajinikanth
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʼಮಂಜುಮ್ಮೇಲ್ ಬಾಯ್ಸ್’ (Manjummel Boys) ಮಲಯಾಳಂ ಸಿನಿಮಾ ಹಿಟ್‌ ಕಂಡಿದೆ. ಸಾರ್ವಕಾಲಿಕ ಅತಿ ಹೆಚ್ಚು ಹಣ ಗಳಿಸಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿದೆ. ಇತ್ತೀಚೆಗಷ್ಟೇ, ಮಂಜುಮ್ಮೆಲ್ ಬಾಯ್ಸ್ ನಿರ್ದೇಶಕ ಚಿದಂಬರಂ ಪೊದುವಾಲ್ (Chidambaram Poduval) ಮತ್ತು ತಂಡ ಸೂಪರ್‌ಸ್ಟಾರ್ ರಜನಿಕಾಂತ್ (Superstar Rajinikanth ) ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ‘ಮಂಜುಮ್ಮೇಲ್ ಬಾಯ್ಸ್’ ಸೂಪರ್ ಸ್ಟಾರ್ ರಜನಿಕಾಂತ್​ಗೆ ಬಹಳ ಇಷ್ಟವಾಗಿದ್ದು, ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ್ದಾರೆ. ಈ ಹಿಂದೆ ʻಕಾಂತಾರ’ ಸಿನಿಮಾವನ್ನು ಮೆಚ್ಚಿಕೊಂಡಿದ್ದ ರಜನಿಕಾಂತ್ ಅವರು ರಿಷಬ್ ಶೆಟ್ಟಿಯವರನ್ನು ಕರೆಸಿ ಅವರನ್ನು ಸತ್ಕರಿಸಿದ್ದರು.

ʼಮಂಜುಮ್ಮೇಲ್ ಬಾಯ್ಸ್’ ಪ್ರೇಕ್ಷಕರು ಮಾತ್ರವೇ ಅಲ್ಲದೆ ಸಿನಿಮಾ ಸೆಲೆಬ್ರಿಟಿಗಳು, ಸ್ಟಾರ್ ನಟರು ಸಹ ನೋಡಿ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ಚಿದಂಬರಂ ಅವರ ಜತೆ ರಜನಿಕಾಂತ್‌ ಸಂವಾದ ಮಾಡುತ್ತಿರುವ ಫೋಟೊ ವೈರಲ್‌ ಆಗಿದೆ. ನಟ ಧನುಷ್‌ಗೆ ಸಹ ‘ʼಮಂಜುಮ್ಮೇಲ್ ಬಾಯ್ಸ್’ ’ ಸಿನಿಮಾ ಬಹಳ ಇಷ್ಟವಾಗಿ, ನಿರ್ದೇಶಕರನ್ನು ಕರೆಸಿ ಅಭಿನಂದಿಸಿದ್ದರು. ನಿರ್ದೇಶಕ ಚಿದಂಬರಂ ಅವರಿಗೆ ಧುನುಷ್‌ ಆಫರ್‌ ಕೂಡ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ಏನಿದು ಕಥೆ

ಸೌಬಿನ್ ಶಬೀರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. 2006ರಲ್ಲಿ ಕೇರಳದಿಂದ ತಮಿಳುನಾಡಿನ ಕೊಡೈಕೆನಲ್​ಗೆ ಫ್ರೆಂಡ್ಸ್ ಗ್ರೂಪ್ ಒಂದು ಟ್ರಿಪ್ ಹೊರಡುತ್ತದೆ. ʻಡೆವಿಲ್ಸ್ ಕಿಚನ್ʼ ಹೆಸರಿನ ಗುಹೆಯಲ್ಲಿ ಸುಭಾಷ್ ಎಂಬಾತ ಬೀಳುತ್ತಾನೆ. ಆತನ ರಕ್ಷಿಸಲು ಫ್ರೆಂಡ್ಸ್ ಪ್ರಯತ್ನಿಸುತ್ತಾರೆ. ಇದರಲ್ಲಿ ಸಕ್ಸೆಸ್‌ ಆಗ್ತಾರಾ? ಇಲ್ಲವಾ ಎಂಬುದೇ ಕಥೆ. ಮಲಯಾಳಂ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿದೆ.ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಮತ್ತು ಜೀನ್ ಪಾಲ್ ಲಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Manjummel Boys: ಒಟಿಟಿಗೆ ಎಂಟ್ರಿ ಕೊಡಲು ʻಮಂಜುಮ್ಮೇಲ್ ಬಾಯ್ಸ್ʼ ಸಜ್ಜು; ಯಾವಾಗ, ಎಲ್ಲಿ ಪ್ರಸಾರ?

ಚಿದಂಬರಂ ಪೊದುವಾಲ್ ಅವರ ಎರಡನೇ ನಿರ್ದೇಶನ ಸಿನಿಮಾ ಇದು. ಈ ಮುಂಚೆ ʻಜೇನ್‌ಮ್ಯಾನ್ʼ ಹೆಚ್ಚು ಮೆಚ್ಚುಗೆ ಪಡೆದುಕೊಂಡಿತ್ತು. ಸುಶಿನ್ ಶ್ಯಾಮ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಒಟಿಟಿಗೆ ಯಾವಾಗ?

ʻಮಂಜುಮ್ಮೆಲ್ ಬಾಯ್ಸ್ʼ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಪ್ರಶಂಸೆ ಗಳಿಸುತ್ತಿದೆ. ವರದಿಯ ಪ್ರಕಾರ, ಈ ಸಿನಿಮಾ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಮಂಜುಮ್ಮೆಲ್ ಬಾಯ್ಸ್ ಏಪ್ರಿಲ್ 5ರಂದು ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ ಎಂದು ವರದಿ ಆಗಿದೆ. ಏಪ್ರಿಲ್ 6ರಂದು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗು ಆವೃತ್ತಿಯ ಹಕ್ಕುಗಳನ್ನು ಮೈತ್ರಿ ಮೂವಿ ಮೇಕರ್ಸ್‌ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಯಲಮಂಚಿಲಿ ಪಡೆದುಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Gurucharan Singh: ಎರಡು ವಾರ ಕಳೆದರೂ ಪತ್ತೆಯಾಗದ  ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ!

Gurucharan Singh: ಗುರುಚರಣ್ ತನ್ನ ಫೋನ್ ಅನ್ನು ದೆಹಲಿಯ ಪಾಲಂ ಪ್ರದೇಶದಲ್ಲಿ ಬಿಟ್ಟು ನಗರದಿಂದ ಹೊರಗೆ ಹೋಗಿರುವುದಾಗಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ನಟ ಒಂದು ರಿಕ್ಷಾದಿಂದ ಇನ್ನೊಂದಕ್ಕೆ ಹೋಗುತ್ತಿರುವುದು ಕಂಡುಬಂದಿದೆ. ಅವರು ಎಲ್ಲ ಫ್ಲ್ಯಾನ್‌ ಪ್ರಕಾರವಾಗಿಯೇ ದೆಹಲಿ ಬಿಟ್ಟು ಹೋಗಿದ್ದಾರೆʼʼಎಂದು ವರದಿಯಾಗಿದೆ.

VISTARANEWS.COM


on

Gurucharan Singh Taarak Mehta Ka Ooltah Chashmah actor planned disappearance
Koo

ಬೆಂಗಳೂರು: ಸುಮಾರು ಎರಡು ವಾರಗಳಿಂದ ನಾಪತ್ತೆಯಾಗಿರುವ  ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ (Taarak Mehta Ka Ooltah Chashmah) ಧಾರವಾಹಿ ನಟ ಗುರುಚರಣ್ ಸಿಂಗ್ (Gurucharan Singh) ಅವರು ಭರ್ಜರಿ ಪ್ಲ್ಯಾನ್‌ ಮಾಡಿಯೇ ನಗರ ಬಿಟ್ಟು ಹೋಗಿದ್ದಾರೆ ಎಂದು ವರದಿಯಾಗಿದೆ. ಗುರುಚರಣ್ ತನ್ನ ಫೋನ್ ಅನ್ನು ದೆಹಲಿಯ ಪಾಲಂ ಪ್ರದೇಶದಲ್ಲಿ ಬಿಟ್ಟು ನಗರದಿಂದ ಹೊರಗೆ ಹೋಗಿರುವುದಾಗಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಗುರುಚರಣ್ ಸಿಂಗ್ ನಾಪತ್ತೆಯಾದ ಬಗ್ಗೆ ದೆಹಲಿ ಪೊಲೀಸರು ಹೇಳಿದ್ದೇನು?

ದೆಹಲಿ ಪೊಲೀಸ್ ಮೂಲಗಳ ಪ್ರಕಾರ, “ಗುರುಚರಣ್ ಸಿಂಗ್ ತನ್ನ ಫೋನ್ ಅನ್ನು ಪಾಲಂ ಪ್ರದೇಶದಲ್ಲಿ ಬಿಟ್ಟಿದ್ದಾರೆ. ನಾವು ಕೂಡ ಅವರನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಆದರೆ ಗುರುಚರಣ್ ಸಿಂಗ್ ಅವರನ್ನು ಪತ್ತೆಹಚ್ಚಲು ನಮಗೆ ಕಷ್ಟವಾಗುತ್ತಿರುವ ಕಾರಣ ಅವರ ಬಳಿ ಫೋನ್‌ ಕೂಡ ಇಲ್ಲ. ಸಿಸಿಟಿವಿ ದೃಶ್ಯಾವಳಿಯಲ್ಲಿ ನಟ ಒಂದು ರಿಕ್ಷಾದಿಂದ ಇನ್ನೊಂದಕ್ಕೆ ಹೋಗುತ್ತಿರುವುದು ಕಂಡುಬಂದಿದೆ. ಅವರು ಎಲ್ಲ ಫ್ಲ್ಯಾನ್‌ ಪ್ರಕಾರವಾಗಿಯೇ ದೆಹಲಿ ಬಿಟ್ಟು ಹೋಗಿದ್ದಾರೆʼʼಎಂದು ವರದಿಯಾಗಿದೆ.

ಏಪ್ರಿಲ್ 22ರಂದು ಸಂಜೆ ನಟ ಗುರುಚರಣ್ ಸಿಂಗ್ ನಾಪತ್ತೆಯಾಗಿದ್ದರು. ಏಪ್ರಿಲ್ 22ರಂದು ರಾತ್ರಿ 8.30 ಕ್ಕೆ ಮಗ ಮುಂಬೈಗೆ ತೆರಳಿದ್ದ ಎಂದು ತಂದೆ ದೂರು ನೀಡಿದ್ದರು. ಪೊಲೀಸರ ಮಾಹಿತಿ ಪ್ರಕಾರ ʻʻಎಪ್ರಿಲ್ 22ರಂದು ಗುರುಚರಣ್ ಸಿಂಗ್ ಶೂಟಿಂಗ್ ಸೇರಿದಂತೆ ಇತರ ಕೆಲಸದ ನಿಮಿತ್ತ ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಲು ವಿಮಾನ ನಿಲ್ದಾಕ್ಕೆ ತೆರಳಿದ್ದರು. ಗುರುಚರಣ್ ಸಿಂಗ್ ಬೆಳಗ್ಗೆ 8.30ಕ್ಕೆ ಮನೆಯಿಂದ ತೆರಳಿದ್ದರು. ಆದರೆ ಅವರು ಮುಂಬೈಗೆ ತಲುಪಿಲ್ಲ. ಬದಲಾಗಿ ಬೆಳಗ್ಗೆ 9.14ರ ಸುಮಾರಿಗೆ ಪಾಲಂʼನಲ್ಲಿ ನಟ ಕಂಡು ಬಂದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ: Gurucharan Singh: ನಿಗೂಢವಾಗಿ ನಾಪತ್ತೆಯಾದ ಈ ನಟನಿಗೆ ಶೀಘ್ರದಲ್ಲೇ ಮದುವೆ!

ಕೆಲ ವರ್ಷಗಳ ಹಿಂದೆ ಗುರುಚರಣ್ ಸಿಂಗ್ ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರವಾಹಿಯಿಂದ ಹೊರಬಂದಿದ್ದರು. ತಂದೆಯ ಅನಾರೋಗ್ಯ, ಕುಟುಂಬದ ನಿರ್ವಹಣೆ ಕಾರಣದಿಂದ ಸೀರಿಯಲ್‌ನಿಂದ ಹೊರಬಂದು ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿ 2022 ಜುಲೈ 2ಕ್ಕೆ 3500 ಸಂಚಿಕೆಗಳನ್ನು ಕಂಡಿದೆ.

Continue Reading

ಸ್ಯಾಂಡಲ್ ವುಡ್

Covishield vaccine: ಕೋವಿಶೀಲ್ಡ್‌ ‌ ತಗೋಬೇಡಿ, ಒಳ್ಳೆಯದಲ್ಲ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್‌ ವೈರಲ್‌!

Covishield vaccine: ಕೋವಿಶೀಲ್ಡ್ ತೆಗೆದುಕೊಂಡಿದ್ದರಿಂದಲೇ ಪುನೀತ್​ಗೆ ಹೃದಯಾಘಾತ ಆಯಿತು ಎಂದು ಕೆಲವರು ಆರೋಪಿಸಿದ್ದಾರೆ. ಏಕೆಂದರೆ ಈ ಕುರಿತ ಹಳೆಯ ಟ್ವೀಟ್‌ವೊಂದು ವೈರಲ್‌ ಆಗಿದೆ. ಬ್ರಿಟನ್‌ನ ಮಾಧ್ಯಮ ವರದಿಗಳು ಉಲ್ಲೇಖಿಸಿರುವ ನ್ಯಾಯಾಲಯದ ದಾಖಲೆಗಳ ಪ್ರಕಾರ, ತನ್ನ ಕೋವಿಡ್ ಲಸಿಕೆ ಅಪರೂಪವಾಗಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಒಳಗೊಂಡ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿದೆ.

VISTARANEWS.COM


on

Covishield vaccine Puneeth Rakumar
Koo

ಬೆಂಗಳೂರು: ಭಾರತದಲ್ಲಿ ಕೊರೊನಾ ವೈರಸ್‌ (Corona Virus) ಎದುರಿಸಲು ಕೋವಿಶೀಲ್ಡ್‌ ಲಸಿಕೆ (Covishield vaccine) ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ (blood clotting) ಅಡ್ಡ ಪರಿಣಾಮದ (Side effects) ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, (Covishield vaccine) ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಹೇಳಿಕೆ ನೀಡಿದ್ದಾರೆ. ಆದರೂ ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ ಎಂಬ ವರದಿಗಳೂ ಇವೆ. ಇದೀಗ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಕುರಿತು ಪೋಸ್ಟ್‌ ವೊಂದು ವೈರಲ್‌ ಆಗುತ್ತಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಕೋವಿಶೀಲ್ಡ್ ತೆಗೆದುಕೊಂಡಿದ್ದರಿಂದಲೇ ಪುನೀತ್​ಗೆ ಹೃದಯಾಘಾತ ಆಯಿತು ಎಂದು ಕೆಲವರು ಆರೋಪಿಸಿದ್ದಾರೆ.

ಪುನೀತ್ ರಾಜ್‌ಕುಮಾರ್‌ ಅವರು 2021ರ ಅಕ್ಟೋಬರ್‌ 29ರಂದು ಹೃದಯಾಘಾತದಿಂದ ನಿಧನರಾದರು. ಇದೀಗ ಕೋವಿಶೀಲ್ಡ್ ತೆಗೆದುಕೊಂಡಿದ್ದರಿಂದಲೇ ಪುನೀತ್​ಗೆ ಹೃದಯಾಘಾತ ಆಯಿತು ಎಂದು ಕೆಲವರು ಆರೋಪಿಸಿದ್ದಾರೆ. ಏಕೆಂದರೆ ಈ ಕುರಿತ ಹಳೆಯ ಟ್ವೀಟ್‌ವೊಂದು ವೈರಲ್‌ ಆಗಿದೆ. ಬೃಂದಾವನಾ ಹೆಸರಿ ಖಾತೆಯಿಂದ ಅಭಿಮಾನಿಯೊಬ್ಬರು ʻʻ‘ನೀವು 45 ವರ್ಷ ಮೇಲ್ಪಟ್ಟಿದ್ದರೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಕೋವಿಶೀಲ್ಡ್ ತೆಗೆದುಕೊಳ್ಳಬೇಡಿ. 45 ವರ್ಷ ಮೇಲ್ಪಟ್ಟವರಿಗೆ ಇದು ಒಳ್ಳೆಯದಲ್ಲ’ ಎಂದು ಬರೆಯಲಾಗಿತ್ತುʼʼಸದ್ಯ ಈ ಪೋಸ್ಟ್ ಮತ್ತೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: Ashwini Puneeth Rajkumar: ಐಶಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್

ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳು ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಇದೆ ಎಂದು ವರದಿಯಾಗಿದೆ. ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಡ್ಡ ಪರಿಣಾಮ ಕಾಣಿಸಿಕೊಳ್ಳಬಹುದು ಎಂದು ಮೊನ್ನೆ ಅದರ ತಯಾರಿಕಾ ಕಂಪನಿ ಅಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ಬಳಿಕ ಈ ಬಗ್ಗೆ ಆತಂಕ ಮೂಡಿತ್ತು.

ಬ್ರಿಟನ್‌ನ ಮಾಧ್ಯಮ ವರದಿಗಳು ಉಲ್ಲೇಖಿಸಿರುವ ನ್ಯಾಯಾಲಯದ ದಾಖಲೆಗಳ ಪ್ರಕಾರ, ತನ್ನ ಕೋವಿಡ್ ಲಸಿಕೆ ಅಪರೂಪವಾಗಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಒಳಗೊಂಡ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿದೆ. ಈ ಲಸಿಕೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಹ ಉತ್ಪಾದಿಸಿದೆ. ಇದನ್ನು ಕೋವಿಶೀಲ್ಡ್ ಎಂದು ಕರೆಯಲಾಗುತ್ತದೆ. ಭಾರತೀಯ ಜನಸಂಖ್ಯೆಯ ಕನಿಷ್ಠ 90 ಪ್ರತಿಶತದಷ್ಟು ಜನರು ಈ ಲಸಿಕೆಯನ್ನು ಪಡೆದಿದ್ದಾರೆ. ಭಾರತದಲ್ಲಿ ಸುಮಾರು 175 ಕೋಟಿ ಕೋವಿಶೀಲ್ಡ್‌ ಲಸಿಕೆ ಡೋಸ್‌ ನೀಡಲಾಗಿದೆ.

Continue Reading

ಸ್ಯಾಂಡಲ್ ವುಡ್

Kiccha Sudeep: ಕಿಚ್ಚ ಸುದೀಪ್ ಸಿನಿಮಾಗೆ ‘ಜೈಲರ್’ ಸ್ಟಂಟ್ ಮಾಸ್ಟರ್ ಎಂಟ್ರಿ!

Kiccha Sudeep: ʻಮ್ಯಾಕ್ಸ್ʼ ಸಿನಿಮಾಕ್ಕೆ ಕನ್ನಡದ ತಾರೆಯರು ಇದ್ದಾರೆ. ಕನ್ನಡದ ಟೆಕ್ನಿಷನ್‌ಗಳೂ ಇದ್ದಾರೆ. ಹಾಗೆ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ಕೂಡ ಈ ಸಿನಿಮಾದಲ್ಲಿ ಇದ್ದಾರೆ.ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

VISTARANEWS.COM


on

Kiccha Sudeep jailer fame kevin has composed stunt in max
Koo

ಬೆಂಗಳೂರು: ʻವಿಕ್ರಾಂತ್ ರೋಣ’ ಬಳಿಕ ಕಿಚ್ಚ ಸುದೀಪ್ (Kiccha Sudeep) ಒಪ್ಪಿಕೊಂಡಿರುವ ಸಿನಿಮಾ ಮ್ಯಾಕ್ಸ್ (MAX). ಹೀಗಾಗಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಸುದೀಪ್ ಮ್ಯಾಕ್ಸ್ ಚಿತ್ರಕ್ಕೆ ಹೊಸ ಸ್ಟಂಟ್ಸ್ ಮಾಸ್ಟರ್ ಬಂದಿದ್ದಾರೆ. ಕಳೆದ ವರ್ಷ ಸೂಪರ್ ಹಿಟ್ ಆಗಿದ್ದ ರಜನಿ ‘ಜೈಲರ್’ ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ್ದ ಕೆವಿನ್ ಇದೀಗ ‘ಮ್ಯಾಕ್ಸ್’ ತಂಡ ಸೇರಿದ್ದಾರೆ.

ಖ್ಯಾತ ಫೈಟ್ ಮಾಸ್ಟರ್ ಸ್ಟಂಟ್‌ ಶಿವ ಪುತ್ರ ಕೆವಿನ್. ಮಾರ್ಷಲ್ ಆಟ್ಸ್ ಸೇರಿದಂತೆ ಹಲವು ಕಲೆಗಳನ್ನು ಕಲಿತಿದ್ದ ಕೆವಿನ್ ಸದ್ಯ ಕಾಲಿವುಡ್‌ನಲ್ಲಿ ಗಮನ ಸೆಳೆದಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರದ ಮೂಲಕ ಸ್ಟಂಟ್ ಮಾಸ್ಟರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಕೆವಿನ್ ಇದೀಗ ಕಿಚ್ಚನಿಗೆ ಫೈಟ್ ಕಂಪೋಸ್ ಮಾಡಿದ್ದಾರೆ. ನಾಲ್ಕೈದು ದಿನಗಳ ಕಾಲ ಆ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆದಿದೆ ಎಂದು ವರದಿಯಾಗಿದೆ. ಕನ್ನಡ ಸಿನಿಮಾಗಳಲ್ಲಿ ಇತ್ತೀಚೆಗೆ ಚೇತನ್ ಡಿಸೋಜಾ ಸ್ಟಂಟ್ಸ್ ಹೈಲೆಟ್ ಆಗುತ್ತಿದೆ. ‘ಮ್ಯಾಕ್ಸ್’ ಚಿತ್ರದಲ್ಲಿ ಕೆವಿನ್ ಒಂದು ಫೈಟ್ ಮಾತ್ರ ಕಂಪೋಸ್ ಮಾಡಿದ್ದಾರೆ. ಇನ್ನುಳಿದ ಆಕ್ಷನ್ ಸೀಕ್ವೆನ್ಸ್ ಚೇತನ್ ಡಿಸೋಜಾ ಮಾರ್ಗದರ್ಶನದಲ್ಲಿ ಬಂದಿದೆ ಎಂದು ವರದಿಯಾಗಿದೆ. ಮಹಾಬಲಿಪುರಂನಲ್ಲಿ ಸೆಟ್ ಹಾಕಿ ‘ಮ್ಯಾಕ್ಸ್’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗುತ್ತಿದೆ.

ಇದನ್ನೂ ಓದಿ: Kiccha Sudeep: ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ ಸುದೀಪ್‌!

ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಪಾತ್ರದ ಹೆಸರು ವಿಭಿನ್ನವಾಗಿಯೇ ಇದೆ. ʻಅರ್ಜುನ್ ಮಹಾಕ್ಷಯ್ʼ ಹೆಸರಿನ ಸುದೀಪ್ ಪಾತ್ರ ಸ್ಪೆಷಲ್ ಆಗಿಯೇ ಇರಲಿದೆ ಎಂದು ವರದಿಯಾಗಿದೆ. ʻಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಗಳನ್ನ ಕಂಪೋಸ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ ಎನ್ನಲಾಗಿದೆ.

ʻಮ್ಯಾಕ್ಸ್ʼ ಸಿನಿಮಾಕ್ಕೆ ಕನ್ನಡದ ತಾರೆಯರು ಇದ್ದಾರೆ. ಕನ್ನಡದ ಟೆಕ್ನಿಷನ್‌ಗಳೂ ಇದ್ದಾರೆ. ಹಾಗೆ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ಕೂಡ ಈ ಸಿನಿಮಾದಲ್ಲಿ ಇದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

Continue Reading

ಕಾಲಿವುಡ್

Actor Dhanush: ಧನುಷ್‌ ನಟನೆಯ ʻಕುಬೇರʼ ಸಿನಿಮಾದ ನಾಗಾರ್ಜುನ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌!

Actor Dhanush: ಸದ್ಯ ‘ಕುಬೇರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಸೂಟಿಂಗ್‌ ಮುಕ್ತಾಯವಾಗುವ ನಿರೀಕ್ಷೆಯಿದೆ. ‘ಕುಬೇರ’ ತ್ರಿಭಾಷಾ ಚಿತ್ರವಾಗಿದ್ದು, ಏಕಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಣವಾಗುತ್ತಿದೆ.ʻಕುಬೇರ’ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ, ಇದನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ.

VISTARANEWS.COM


on

ACTOR DHANUSH Nagarjuna mysterious first look from Kubera
Koo

ಬೆಂಗಳೂರು: ಸೂಪರ್ ಸ್ಟಾರ್ ಧನುಷ್ (Actor Dhanush) ನಟನೆಯ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ʻಕುಬೇರʼ ಸಿನಿಮಾ (Kubera Movie) ನಾಗಾರ್ಜುನ ಅವರ ಫಸ್ಟ್ ಲುಕ್ ಪ್ರೋಮೊ ಔಟ್‌ ಆಗಿದೆ. ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಲಿದೆ.

ಫಸ್ಟ್‌ ಲುಕ್‌ನಲ್ಲಿ ನಾಗಾರ್ಜುನ ಅವರು ನೀಲಿ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಭಾರೀ ಮಳೆಯಲ್ಲಿ ಛತ್ರಿ ಹಿಡಿದು ರಡಗ್‌ ಲುಕ್‌ನಲ್ಲಿ ಕಂಡಿದ್ದಾರೆ. ಹಣಗಳು ತುಂಬಿದ ಟ್ರಕ್‌ಗಳ ಮಧ್ಯೆ ಅವರು ಕಾಣಿಸಿಕೊಂಡಿದ್ದಾರೆ. ʻಕುಬೇರ’ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ, ಇದನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಧನುಷ್ ಅವರ ಫಸ್ಟ್ ಲುಕ್ ಪೋಸ್ಟರ್‌ ಅನಾವರಣಗೊಂಡಿತ್ತು. ಮಾತ್ರವಲ್ಲ ಪ್ರೇಕ್ಷರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಸದ್ಯ ‘ಕುಬೇರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಸೂಟಿಂಗ್‌ ಮುಕ್ತಾಯವಾಗುವ ನಿರೀಕ್ಷೆಯಿದೆ. ‘ಕುಬೇರ’ ತ್ರಿಭಾಷಾ ಚಿತ್ರವಾಗಿದ್ದು, ಏಕಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಣವಾಗುತ್ತಿದೆ.

ಇದನ್ನೂ ಓದಿ: Actor Dhanush: ಧನುಷ್ – ಐಶ್ವರ್ಯಾ ರಜನಿಕಾಂತ್‌ಗೆ ಕೋರ್ಟ್ ನೋಟಿಸ್

ಶ್ರೀವೆಂಕಟೇಶ್ವರ ಸಿನಿಮಾಸ್​ ಮತ್ತು ಒಮಿಗೋಸ್​ ಕ್ರಿಯೇಷನ್ಸ್​ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗಲಿದೆ. ಧನುಷ್‌​​ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ಸಿನಿಮಾ ಇದು.

ಕೆಲವು ದಿನಗಳ ಹಿಂದೆ ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ‘ಡಿ 50’ಪೋಸ್ಟರ್‌ ಲುಕ್‌ ಅನಾವರಣಗೊಂಡಿತ್ತು. ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ನಾಯಕಿ ಹಾಗೂ ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ನೀಡುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್‌ʼ ಅವರ ಎರಡನೇ ನಿರ್ದೇಶನದ ಸಿನಿಮಾ.

Continue Reading
Advertisement
Devon Thomas
ಕ್ರೀಡೆ14 seconds ago

Devon Thomas: ಟಿ20 ವಿಶ್ವಕಪ್​ಗೂ ಮುನ್ನ ವಿಂಡೀಸ್​ ಬ್ಯಾಟರ್​ಗೆ 5 ವರ್ಷ ನಿಷೇಧ ಹೇರಿದ ಐಸಿಸಿ

Prajwal Revanna Case If Prajwal and Revanna fails to appear infront of SIT they will be arrested says Dr Parameshwara
ಕ್ರೈಂ16 mins ago

Prajwal Revanna Case: ಪ್ರಜ್ವಲ್‌, ರೇವಣ್ಣಗೆ ಮತ್ತೊಂದು ನೋಟಿಸ್‌; ವಿಚಾರಣೆಗೆ ಬಾರದಿದ್ದರೆ ಅರೆಸ್ಟ್‌: ಡಾ. ಜಿ. ಪರಮೇಶ್ವರ್

gold rate today
ಚಿನ್ನದ ದರ31 mins ago

Gold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ; 10 ಗ್ರಾಂ 22 ಕ್ಯಾರಟ್‌ ಬಂಗಾರದ ಬೆಲೆಯಲ್ಲಿ ₹500 ಕಡಿತ

Gurucharan Singh Taarak Mehta Ka Ooltah Chashmah actor planned disappearance
ಕಿರುತೆರೆ32 mins ago

Gurucharan Singh: ಎರಡು ವಾರ ಕಳೆದರೂ ಪತ್ತೆಯಾಗದ  ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ!

Ram Mandir
ದೇಶ51 mins ago

Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

MS Dhoni
ಕ್ರೀಡೆ51 mins ago

MS Dhoni: ಈಡೇರಿದ ಶತಾಯುಷಿ ಅಭಿಮಾನಿಯ ಆಸೆ; ಧೋನಿ ಭೇಟಿಯಾಗಿ ವಿಶೇಷ ಉಡುಗೊರೆ ಪಡೆದ ರಾಮದಾಸ್

Drowned in water
ಕೋಲಾರ1 hour ago

Drowned In water : ಈಜಲು ಕೃಷಿ ಹೊಂಡಕ್ಕೆ ಜಿಗಿದ; ಸಾವಿನ ಕೊನೆ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ತಂಗಿ!

Triple Talaq
ದೇಶ1 hour ago

Triple Talaq: ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಪರಾರಿಯಾದ ಭೂಪ

Covishield vaccine Puneeth Rakumar
ಸ್ಯಾಂಡಲ್ ವುಡ್1 hour ago

Covishield vaccine: ಕೋವಿಶೀಲ್ಡ್‌ ‌ ತಗೋಬೇಡಿ, ಒಳ್ಳೆಯದಲ್ಲ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್‌ ವೈರಲ್‌!

Kavya Maran
ಕ್ರೀಡೆ2 hours ago

Kavya Maran: ರೋಚಕ ಗೆಲುವು ಕಂಡು ಆಕಾಶಕ್ಕೆ ಜಿಗಿದಂತೆ ಕುಣಿದು ಸಂಭ್ರಮಿಸಿದ ಕಾವ್ಯಾ ಮಾರನ್; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ18 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌