Manorathangal Trailer: ಗಮನ ಸೆಳೆದ ʼಮನೋರಥಂಗಳ್‌ʼ ಟ್ರೈಲರ್‌; 8 ನಿರ್ದೇಶಕರ 9 ಎಪಿಸೋಡ್‌ನಲ್ಲಿ ಸ್ಟಾರ್‌ಗಳ ಸಮಾಗಮ - Vistara News

ಸಿನಿಮಾ

Manorathangal Trailer: ಗಮನ ಸೆಳೆದ ʼಮನೋರಥಂಗಳ್‌ʼ ಟ್ರೈಲರ್‌; 8 ನಿರ್ದೇಶಕರ 9 ಎಪಿಸೋಡ್‌ನಲ್ಲಿ ಸ್ಟಾರ್‌ಗಳ ಸಮಾಗಮ

Manorathangal Trailer: ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿ, ಫಹಾದ್ ಫಾಸಿಲ್, ಬಿಜು ಮೆನನ್, ಅಪರ್ಣಾ ಬಾಲಮುರಳಿ ಮುಂತಾದ ಜನಪ್ರಿಯ ಕಲಾವಿದರು ತೆರೆ ಹಂಚಿಕೊಂಡಿರುವ ಮಲೆಯಾಳಂನ ಪ್ಯಾನ್‌ ಇಂಡಿಯಾ ಆಂಥಾಲಜಿ ʼಮನೋರಥಂಗಳ್‌ʼ ಸೀರಿಸ್‌ನ ಟ್ರೈಲರ್‌ ಬಿಡುಗಡೆಯಾಗಿದೆ. 9 ಕಥೆಗಳಿರುವ ಈ ಆಂಥಾಲಜಿಗೆ 8 ಮಂದಿ ನಿರ್ದೇಶಕರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

VISTARANEWS.COM


on

Manorathangal Trailer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿ, ಫಹಾದ್ ಫಾಸಿಲ್, ಬಿಜು ಮೆನನ್, ಅಪರ್ಣಾ ಬಾಲಮುರಳಿ ಮುಂತಾದ ಜನಪ್ರಿಯ ಕಲಾವಿದರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಇವರ ಚಿತ್ರಗಳು ತೆರೆಕಂಡಾಗ ಭಾಷೆಯ ಗಡಿಯನ್ನೂ ಮೀರಿ ವೀಕ್ಷಿಸುವ ಪ್ರೇಕ್ಷಕರ ವರ್ಗವೇ ಇದೆ. ಹಾಗಾದರೆ ಇಂತಹ ಜನಪ್ರಿಯ ಸ್ಟಾರ್‌ಗಳು ಒಂದೇ ಬಾರಿಗೆ ತೆರೆ ಮೇಲೆ ಬಂದರೆ? ಹೌದು, ಮಲೆಯಾಳಂನ ಪ್ಯಾನ್‌ ಇಂಡಿಯಾ ಆಂಥಾಲಜಿ (Anthology) ʼಮನೋರಥಂಗಳ್‌ʼ (Manorathangal) ಸೀರಿಸ್‌ಗಾಗಿ ಈ ಸ್ಟಾರ್‌ಗಳು ಒಂದಾಗುತ್ತಿದ್ದಾರೆ. ಮಲಯಾಳಂನ ಅಚ್ಚುಮೆಚ್ಚಿನ ಬರಹಗಾರ, ಚಿತ್ರಕಥೆಗಾರ ಮತ್ತು ನಿರ್ದೇಶಕ ಎಂ.ಟಿ.ವಾಸುದೇವನ್ ನಾಯರ್ ಈ ಸೀರಿಸ್‌ಗೆ ಕಥೆ ಬರೆದಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಮನೋರಥಂಗಳ್‌ ಟ್ರೈಲರ್‌ ಬಿಡುಗಡೆಯಾಗಿದೆ (Manorathangal Trailer)

9 ಕಥೆಗಳಿರುವ ಈ ಆಂಥಾಲಜಿಗೆ 8 ಮಂದಿ ನಿರ್ದೇಶಕರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ʼಮನೋರಥಂಗಳ್‌ʼ ಆಂಥಾಲಜಿ ಆಗಸ್ಟ್‌ 15ರಂದು ಜೀ5ನಲ್ಲಿ ಬಿಡುಗಡೆ ಆಗಲಿದೆ. ಹಾಗಾದರೆ ಯಾವೆಲ್ಲ ಸಣ್ಣ ಕಥೆಗಳು ಈ ಸಿನಿಮಾದಲ್ಲಿ ಅಡಕವಾಗಿವೆ? ಯಾರೆಲ್ಲ ಸ್ಟಾರ್‌ ನಟರಿದ್ದಾರೆ? ನಿರ್ದೇಶಕರು ಯಾರು ? ಎಂಬ ಮಾಹಿತಿ ಇಲ್ಲಿದೆ.

ಯಾರೆಲ್ಲ ನಟಿಸಿದ್ದಾರೆ?

ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿ, ಫಹಾದ್ ಫಾಸಿಲ್, ಪಾರ್ವತಿ ತಿರುವೋತ್ತು, ಹರೀಶ್ ಉತ್ತಮನ್, ಬಿಜು ಮೆನನ್, ಶಾಂತಿ ಕೃಷ್ಣ, ಜಾಯ್ ಮ್ಯಾಥ್ಯೂ, ಮಧು, ಆಸಿಫ್ ಅಲಿ, ನದಿಯಾ ಮೊಯ್ದು, ಕೈಲಾಸ, ಇಂದ್ರನ್ಸ್, ನೆಡುಮುಡಿ ವೇಣು, ರಣಜಿ ಪಣಿಕ್ಕರ್, ಸುರಭಿ ಲಕ್ಷ್ಮೀ, ಸಿದ್ದಿಕ್, ಇಶಿತ್ ಯಾಮಿನಿ, ನಾಸೀರ್, ಇಂದ್ರಜಿತ್, ಅಪರ್ಣಾ ಬಾಲಮುರಳಿ ಮತ್ತಿತರರು ನಟಿಸಿದ್ದಾರೆ.

ಯಾವಾಗ ಬಿಡುಗಡೆ?

ಮೊದಲೇ ಹೇಳಿದಂತೆ ಜೀ5 ನಿರ್ಮಾಣ ಮಾಡಿರುವ ಈ ಆಂಥಾಲಜಿ ಆಗಸ್ಟ್‌ 15ರಂದು ಪ್ರೀಮಿಯರ್ ಆಗಲಿದೆ. ಮಲಯಾಳಂ ಜತೆಗೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯ.

9 ಕಥೆಗಳಿಗೆ 8 ನಿರ್ದೇಶಕರು

ಮೋಹನ್‌ಲಾಲ್ ನಟಿಸಿರುವ ಪ್ರಿಯದರ್ಶನ್ ನಿರ್ದೇಶಿಸಿದ ‘ಒಲ್ಲವುಮ್ ತೀರವುಮ್’ ಬ್ಲ್ಯಾಕ್‌ & ವೈಟ್‌ನಲ್ಲಿ ಮೂಡಿಬಂದಿದೆ. ರಂಜಿತ್ ಅವರ ನಿರ್ದೇಶನದಲ್ಲಿ ‘ಕಾಡುಗನ್ನವ ಒರು ಯಾತ್ರೆ ಕುರಿಪ್ಪು’ ಕಥೆಯಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ.

‘ಶಿಲಾಲಿಖಿತಂ’ ಪ್ರಿಯದರ್ಶನ್ ನಿರ್ದೇಶನದ ಈ ಕಥೆಯಲ್ಲಿ ಬಿಜು ಮೆನನ್, ಶಾಂತಿಕೃಷ್ಣ ಮತ್ತು ಜಾಯ್ ಮ್ಯಾಥ್ಯೂ ಅಭಿನಯಿಸಿದ್ದಾರೆ. ಶ್ಯಾಮಪ್ರಸಾದ್ ನಿರ್ದೇಶನದ ‘ಕಜ್ಚಾ’ದಲ್ಲಿ ಪಾರ್ವತಿ ತಿರುವೋತ್ತು ಮತ್ತು ಹರೀಶ್ ಉತ್ತಮನ್ ಕಾಣಿಸಿಕೊಂಡಿದ್ದಾರೆ.

ಮಾಧೂ ಮತ್ತು ಆಸಿಫ್ ಅಲಿ ನಟಿಸಿರುವ ‘ವಿಲ್ಪನಾ’ಕ್ಕೆ ಅಶ್ವತಿ ನಾಯರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಭಿನವ ಮಹೇಶ್ ನಾರಾಯಣನ್ ನಿರ್ದೇಶನದ ‘ಶರ್ಲಾಕ್’ನಲ್ಲಿ ಫಹಾದ್ ಫಾಸಿಲ್ ಮತ್ತು ಜರೀನಾ ಮೊಯ್ದು ಜೋಡಿ ಕಾಣಿಸಿಕೊಂಡಿದೆ. ‘ಸ್ವರ್ಗಂ ತುರಕ್ಕುನ್ನ ಸಮಯ’ ಜಯರಾಜನ್ ನಾಯರ್ ನಿರ್ದೇಶನದ ಚಿತ್ರವಾಗಿದ್ದು, ಕೈಲಾಶ್, ಇಂದ್ರನ್ಸ್, ನೆಡುಮುಡಿ ವೇಣು, ಎಂಜಿ ಪಣಿಕ್ಕರ್ ಮತ್ತು ಸುರಭಿ ಲಕ್ಷ್ಮೀ ನಟಿಸಿದ್ದಾರೆ.

‘ಅಭ್ಯಾಮ್ ತೀಡಿ ವೀಂದುಂ’ ಸಿದ್ಧಿಕ್, ಇಶಿತ್ ಯಾಮಿನಿ ಮತ್ತು ನಜೀರ್ ಅಭಿನಯಿಸಿರುವ ಚಿತ್ರವಾಗಿದ್ದು, ಸಂತೋಷ್ ಶಿವನ್ ನಿರ್ದೇಶಿಸಿದ್ದಾರೆ. ‘ಕಡಲ್‌ಕಾಟ್ಟು’ ರತೀಶ್ ಅಂಬಾಟ್ ನಿರ್ದೇಶನದ ಈ ಸಿನಿಮಾದಲ್ಲಿ ಇಂದ್ರಜಿತ್ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಅಪರ್ಣಾ ಬಾಲಮುರಳಿ ನಟಿಸಿದ್ದಾರೆ.

ಇದನ್ನೂ ಓದಿ: Actor Yash: ಯಶ್‌ ಅಭಿನಯದ ಈ ಸೂಪರ್‌ ಹಿಟ್‌ ಚಿತ್ರ ರಿ-ರಿಲೀಸ್‌; ಎರಡೂವರೆ ವರ್ಷಗಳ ಬಳಿಕ ರಾಕಿಂಗ್‌ ಸ್ಟಾರ್‌ ಥಿಯೇಟರ್‌ಗೆ ಎಂಟ್ರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

MAX Teaser: ಬಹುನಿರೀಕ್ಷಿತ ʼಮ್ಯಾಕ್ಸ್ʼ ಚಿತ್ರದ ಟೀಸರ್‌ ಔಟ್‌; ರೌಡಿಗಳ ಅಡ್ಡದಲ್ಲಿ ನಿಂತು ಲಾಂಗ್‌ ಬೀಸಿದ ಸುದೀಪ್‌

MAX Teaser: ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಮ್ಯಾಕ್ಸ್ʼನ ಟೀಸರ್ ರಿಲೀಸ್‌ ಆಗಿದೆ. ಈ‌ ಆ್ಯಕ್ಷನ್‌ ಚಿತ್ರದಲ್ಲಿ ಕಿಚ್ಚ ಸುದೀಪ್‌ ಮತ್ತೊಮ್ಮೆ ಮಾಸ್‌ ಅವತಾರದಲ್ಲಿ ಮಿಂಚಿದ್ದಾರೆ. ಟೀಸರ್‌ನಲ್ಲಿ ಭರಪೂರ ಆ್ಯಕ್ಷನ್‌ ದೃಶ್ಯಗಳು ಕಂಡು ಬಂದಿದ್ದು ಅಭಿಮಾನಿಗಳು ಮನಸೋತಿದ್ದಾರೆ. ಮಾಸ್- ಗಾಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನು ನೋಡಿದ ಅಭಿಮಾನಿಗಳ ನಿರೀಕ್ಷೆ ಇನ್ನೂ ಹೆಚ್ಚಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ʼಮ್ಯಾಕ್ಸ್ʼ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜತೆಗೆ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಸುನೀಲ್‌ ಮುಂತಾದವರು ಬಣ್ಣ ಹಚ್ಚಿದ್ದಾರೆ.

VISTARANEWS.COM


on

MAX Teaser
Koo

ಬೆಂಗಳೂರು: ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಮ್ಯಾಕ್ಸ್ʼನ ಟೀಸರ್ (MAX Teaser) ರಿಲೀಸ್‌ ಆಗಿದೆ. ಈ‌ ಆ್ಯಕ್ಷನ್‌ ಚಿತ್ರದಲ್ಲಿ ಕಿಚ್ಚ ಸುದೀಪ್‌ (Kiccha Sudeep) ಮತ್ತೊಮ್ಮೆ ಮಾಸ್‌ ಅವತಾರದಲ್ಲಿ ಮಿಂಚಿದ್ದಾರೆ. ಟೀಸರ್‌ನಲ್ಲಿ ಭರಪೂರ ಆ್ಯಕ್ಷನ್‌ ದೃಶ್ಯಗಳು ಕಂಡು ಬಂದಿದ್ದು ಅಭಿಮಾನಿಗಳು ಮನಸೋತಿದ್ದಾರೆ. ʼವಿಕ್ರಾಂತ್‌ ರೋಣʼ ಚಿತ್ರದ ಬಳಿಕ ಸುಮಾರು 2 ವರ್ಷಗಳ ತರುವಾಯ ಈ ಸಿನಿಮಾ ತರೆಕಾಣಲಿದ್ದು, ಕುತೂಹಲ ಕೆರಳಿಸಿದೆ.

ಮಾಸ್- ಗಾಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನು ನೋಡಿದ ಅಭಿಮಾನಿಗಳ ನಿರೀಕ್ಷೆ ಇನ್ನೂ ಹೆಚ್ಚಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ʼಮ್ಯಾಕ್ಸ್ʼ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜತೆಗೆ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಸುನೀಲ್‌ ಮುಂತಾದವರು ಬಣ್ಣ ಹಚ್ಚಿದ್ದಾರೆ. ʼವಿಕ್ರಾಂತ್‌ ರೋಣʼ ಬಳಿಕ ಸುದೀಪ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಅವಕಾಶ ಅಜನೀಶ್ ಲೋಕನಾಥ್‌ಗೆ ಸಿಕ್ಕಿದ್ದು, ಹಾಡುಗಳ ಬಗ್ಗೆಯೂ ಕುತೂಹಲ ಗರಿಗೆದರಿದೆ. ತನು ವಿ‌ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್. ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಟೀಸರ್‌ನಲ್ಲಿ ಏನಿದೆ?

ಕಿಚ್ಚ ಸುದೀಪ್‌ ʼಮ್ಯಾಕ್ಸ್‌ʼ ಡಬ್ಬಿಂಗ್‌ ಮುಗಿಸಿರುವ ಫೋಟೊ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಚಿತ್ರತಂಡ ʼಮ್ಯಾಕ್ಸ್‌ʼ ಟೀಸರ್‌ ಬಿಟ್ಟು ಪ್ರೇಕ್ಷಕರು ಸಿನಿಮಾ ರಿಲೀಸ್‌ಗಾಗಿ ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ. ರೌಡಿಗಳ ಅಖಾಡದಲ್ಲಿ ನಿಂತು ಎರಡು ಕೈಗಳಿಂದ ಮಚ್ಚು ಬೀಸುವ ಮಾಸ್‌ ಲುಕ್‌ನಲ್ಲಿ ಕಿಚ್ಚ ಸುದೀಪ್‌ ಮಿಂಚು ಹರಿಸಿದ್ದಾರೆ. ಹಿನ್ನಲೆ ಸಂಗೀತವೂ ಗಮನ ಸೆಳೆಯುವಂತಿದೆ.

ʼಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʻಅರ್ಜುನ್ ಮಹಾಕ್ಷಯ್ʼ ಹೆಸರಿನ ಸುದೀಪ್ ಪಾತ್ರ ಸ್ಪೆಷಲ್ ಆಗಿಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ. ʻಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಗಳನ್ನ ಕಂಪೋಸ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ ಎನ್ನಲಾಗಿದೆ. ಅದರ ಸೂಚನೆ ಈ ಟೀಸರ್‌ನಲ್ಲಿ ಲಭಿಸಿದೆ.

ಇದನ್ನೂ ಓದಿ: Kiccha Sudeep: ಕಿಚ್ಚ ಸುದೀಪ್ ಸಿನಿಮಾಗೆ ‘ಜೈಲರ್’ ಸ್ಟಂಟ್ ಮಾಸ್ಟರ್ ಎಂಟ್ರಿ!

ಮತ್ತೆ ಖಾಕಿ ತೊಟ್ಟ ಸುದೀಪ್‌

ಸುದೀಪ್‌ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡ ʼವಿಕ್ರಾಂತ್‌ ರೋಣʼ ಚಿತ್ರ 2022ರ ಜುಲೈ 28ರಂದು ತೆರೆಕಂಡಿತ್ತು. ʼರಂಗಿತರಂಗʼ ನಿರ್ದೇಶಕ ಅನೂಪ್‌ ಭಂಡಾರಿ ಆ್ಯಕ್ಷನ್‌ ಕಟ್‌ ಹೇಳಿದ್ದ ʼವಿಕ್ರಾಂತ್‌ ರೋಣʼ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿತ್ತು. ಈ ಥ್ರಿಲ್ಲರ್‌ ಚಿತ್ರ 100 ಕೋಟಿ ರೂ. ಕ್ಲಬ್‌ ಸೇರಿ ಸುದೀಪ್‌ ವೃತ್ತಿ ಜೀವನಕ್ಕೆ ಹೊಸ ಮೈಲೇಜ್‌ ನೀಡಿತ್ತು. ನಿರೂಪ್‌ ಭಂಡಾರಿ, ಮಿಲನಾ ನಾಗರಾಜ್‌, ನೀತಾ ಅಶೋಕ್‌ ಮತ್ತಿತರರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ಈ ಸಿನಿಮಾದಲ್ಲಿ ಬಾಲಿವುಡ್‌ ಬೆಡಗಿ ಜ್ವಾಕಲಿನ್‌ ಫೆರ್ನಾಂಡೀಸ್‌ ಹೆಜ್ಜೆ ಹಾಕಿದ ʼರಾ ರಾ ರಕ್ಕಮ್ಮʼ ಹಾಡು ಜನಪ್ರಿಯವಾಗಿತ್ತು. ಇದಾಗಿ ಎರಡು ವರ್ಷಗಳ ಬಳಿಕ ಸುದೀಪ್‌ ಮತ್ತೆ ಖಾಕಿ ವೇಷದಲ್ಲಿ ಪ್ರೇಕ್ಷಕರ ಎದುರು ಬರುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ರಿಲೀಸ್‌ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲಿಯೇ ಘೋಷಿಸಲಿದೆ.

Continue Reading

ಸಿನಿಮಾ

Soldier 2: ಮುಂದಿನ ವರ್ಷ ‘ಸೋಲ್ಜರ್ 2’ ಶೂಟಿಂಗ್; ಮತ್ತೆ ಒಂದಾಗಲಿದ್ದಾರೆಯೇ ಬಾಬಿ ಡಿಯೋಲ್-ಪ್ರೀತಿ ಜಿಂಟಾ?

ಆಕ್ಷನ್ -ಥ್ರಿಲ್ಲರ್ ಚಿತ್ರವಾದ ʼಸೋಲ್ಜರ್ʼ ʼಕುಚ್ ಕುಚ್ ಹೋತಾ ಹೈʼ ಅನಂತರ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯಾಗಿ ಚಿತ್ರವಾಗಿ ಹೊರಹೊಮ್ಮಿತ್ತು. ಅತ್ಯದ್ಭುತ ಸಂಗೀತದ ಜೊತೆಗೆ ನಟನಟಿಯ ನಡುವಿನ ಕೆಮೆಸ್ಟ್ರಿಯನ್ನು ಸಾಕಷ್ಟು ಪ್ರೇಕ್ಷಕರ ಮನ ಗೆದ್ದಿತ್ತು. ಚಿತ್ರದ ಜನಪ್ರಿಯತೆಗೆ ಇದು ಪ್ರಮುಖ ಕಾರಣವಾಗಿತ್ತು. ಕೆಲವು ಸಮಯದ ಹಿಂದೆಯಷ್ಟೇ ಬಾಬಿ ಡಿಯೋಲ್ ಅವರು ʼಸೋಲ್ಜರ್‌ʼನ ಮುಂದಿನ ಭಾಗದ (Soldier 2) ಬಗ್ಗೆ ಸುಳಿವು ನೀಡಿದ್ದರು. ನಿರ್ಮಾಪಕ ತೌರಾನಿ ಅವರು ಈಗ ಈ ಬಗ್ಗೆ ವಿವರ ನೀಡಿದ್ದಾರೆ.

VISTARANEWS.COM


on

By

Soldier 2
Koo

ಸೋಲ್ಜರ್ ಸೋಲ್ಜರ್ ಮೀಟಿ ಬಾತೆ ಬೋಲ್ ಕರ್.. 1998ರಲ್ಲಿ ಬಿಡುಗಡೆಯಾದ ರಮೇಶ್ ತೌರಾನಿಯವರ (Ramesh Taurani) ಸೋಲ್ಜರ್ (Soldier) ಚಿತ್ರದ ಈ ಹಾಡು ಆಗ ಬಹುಜನರ ಮನ ಗೆದ್ದಿತ್ತು. ಸೈನಿಕನೊಬ್ಬನ ಜೀವನ ಕಥೆಯನ್ನು ಆಧರಿಸಿ ಬಂದಿರುವ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸನ್ನೂ ಗಳಿಸಿತ್ತು. ಇದೀಗ ಇದರ ಮುಂದುವರಿದ ಭಾಗ ಸೋಲ್ಜರ್ 2ನ (Soldier 2) ಚಿತ್ರೀಕರಣ ಮುಂದಿನ ವರ್ಷ ಆರಂಭಗೊಳ್ಳಲಿದೆ ಎಂಬುದನ್ನು ಚಿತ್ರದ ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ.

ಅಬ್ಬಾಸ್- ಮಸ್ತಾನ್ (Abbas-Mustan) ಮತ್ತು ಬಾಬಿ ಡಿಯೋಲ್ (Bobby Deol) ನಡುವಿನ ಜಂಟಿ ಸಹಯೋಗದಲ್ಲಿ ನಿರ್ಮಾಣಗೊಂಡ ಮೊದಲ ಚಿತ್ರ ಸೋಲ್ಜರ್. ಬಾಲಿವುಡ್ ನ ಕ್ಯೂಟ್ ನಟಿ ಪ್ರೀತಿ ಜಿಂಟಾ (Preity Zinta) ಈ ಚಿತ್ರದ ಮೂಲಕವೇ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು.


ಆಕ್ಷನ್ -ಥ್ರಿಲ್ಲರ್ ಚಿತ್ರವಾದ ಸೋಲ್ಜರ್ ಆ ವರ್ಷದಲ್ಲಿ ಕುಚ್ ಕುಚ್ ಹೋತಾ ಹೈ ಅನಂತರ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯಾಗಿ ಚಿತ್ರವಾಗಿ ಹೊರಹೊಮ್ಮಿತು. ಅತ್ಯದ್ಭುತ ಸಂಗೀತದ ಜೊತೆಗೆ ನಟನಟಿಯ ನಡುವಿನ ಕೆಮೆಸ್ಟ್ರಿಯನ್ನು ಸಾಕಷ್ಟು ಪ್ರೇಕ್ಷಕರ ಮನ ಗೆದ್ದಿತು. ಚಿತ್ರದ ಜನಪ್ರಿಯತೆಗೆ ಇದು ಪ್ರಮುಖ ಕಾರಣವಾಯಿತು.

ಕೆಲವು ಸಮಯದ ಹಿಂದೆಯಷ್ಟೇ ಬಾಬಿ ಡಿಯೋಲ್ ಅವರು ಸೋಲ್ಜರ್‌ನ ಉತ್ತರಭಾಗದ ಬಗ್ಗೆ ಸುಳಿವು ನೀಡಿದ್ದರು. ತೌರಾನಿ ಅವರು ಅದರ ಉತ್ತರಭಾಗವನ್ನು ನಿರ್ಮಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದರು. ಇತ್ತೀಚೆಗೆ ಇಷ್ಕ್ ವಿಷ್ಕ್‌ನ ಉತ್ತರ ಭಾಗವನ್ನು ಇಷ್ಕ್ ವಿಷ್ಕ್ ರೀಬೌಂಡ್ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದ ಹಿರಿಯ ನಿರ್ಮಾಪಕರು, ಸೋಲ್ಜರ್ ಫ್ರ್ಯಾಂಚೈಸ್‌ನೊಂದಿಗೆ ಬರುವ ಅವರ ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಖಚಿತಪಡಿಸಿದ್ದಾರೆ.


ಖಂಡಿತವಾಗಿಯೂ ಸೋಲ್ಜರ್‌ನ ಮುಂದಿನ ಭಾಗವನ್ನು ತಯಾರಿಸುತ್ತಿದ್ದೇವೆ. ಮುಂದಿನ ವರ್ಷ ಚಿತ್ರದ ಚಿತ್ರೀಕರಣ ಆರಂಭಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಹಿದ್ ಕಪೂರ್, ಅಮೃತಾ ರಾವ್ ಮತ್ತು ಶೆನಾಜ್ ಖಜಾನೆ ಇಶ್ಕ್ ವಿಷ್ಕ್ ರೀಬೌಂಡ್‌ನಲ್ಲಿ ಇಲ್ಲ. ಆದರೆ ಬಾಬಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಸೋಲ್ಜರ್ 2 ನಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಕಥೆಯು ಹೇಗೆ ರೂಪುಗೊಳ್ಳುತ್ತದೆ ಎಂಬುದರ ಆಧಾರದ ಮೇಲೆ ಬಾಬಿ ಮತ್ತು ಪ್ರೀತಿ ಅದರ ಭಾಗವಾಗುತ್ತಾರೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು ಎಂದು ತೌರಾನಿ ತಿಳಿಸಿದ್ದಾರೆ.

ʼಕ್ಯಾ ಕೆಹೆನಾʼ ಚಿತ್ರ ಪ್ರೀತಿ ಜಿಂಟಾ ಅವರ ಮೊದಲ ಚಿತ್ರವಾಗಿದ್ದರೂ ʼಸೋಲ್ಜರ್ʼ ಪ್ರೀತಿ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತು. ತೌರಾನಿ ನಿರ್ಮಿಸಿದ ಚಿತ್ರಗಳಲ್ಲಿ ಮೆರಿ ಕ್ರಿಸ್‌ಮಸ್, ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಕೂಡ ಒಂದು, ಮೊದಲು ಪ್ರೀತಿ ಝಿಂಟಾ ಕ್ಯಾ ಕೆಹನಾಗೆ ಸಹಿ ಮಾಡಿದ್ದರು. ಆದರೆ ಚಿತ್ರ ತಡವಾಗಿ ಬಿಡುಗಡೆಯಾಯಿತು. ಕ್ಯಾ ಕೆಹೆನಾ ಮತ್ತು ಸೋಲ್ಜರ್ ನ ಶೂಟಿಂಗ್ ಕಾರ್ಯಗಳು ಏಕಕಾಲಕ್ಕೆ ನಡೆಯುತ್ತಿತ್ತು.


ಕ್ಯಾ ಕೆಹನಾ ಬಿಡುಗಡೆ ವಿಳಂಬಕ್ಕೆ ಕಾರಣ?

ಏಪ್ರಿಲ್ 1998ರ ವೇಳೆಗೆ ʼಸೋಲ್ಜರ್ʼ ಸಿದ್ಧವಾಗಿತ್ತು. ನಾವು ಅದನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ಬಯಸಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಕಾರಣ ವಿಧು ವಿನೋದ್ ಚೋಪ್ರಾ ನಿರ್ಮಿಸಿದ ʼಕರೀಬ್ʼ ಎಂಬ ಬಾಬಿ ಅಭಿನಯದ ಮತ್ತೊಂದು ಚಿತ್ರದ ಸಂಗೀತ ಹಕ್ಕುಗಳನ್ನು ನಾವು ಹೊಂದಿದ್ದೆವು. ಅದರ ಸಂಗೀತವನ್ನು ಜೂನ್‌ನಲ್ಲಿ ಮತ್ತು ಚಿತ್ರವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ನಾವು ಬಯಸಿದ್ದೇವು ಎಂದು ಚೋಪ್ರಾ ಹೇಳಿದರು. ಬಾಬಿಯ ಎರಡು ಚಿತ್ರಗಳು ಒಂದೇ ತಿಂಗಳಲ್ಲಿ ಬಿಡುಗಡೆಯಾಗುವುದು ನಮಗೂ ಇಷ್ಟವಿರಲಿಲ್ಲ ಎಂದು ತೌರಾನಿ ಹೇಳಿದರು.

ಇದನ್ನೂ ಓದಿ:Iti Acharya: ಬಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬ ಕನ್ನಡತಿ; ದಕ್ಷಿಣ ಭಾರತದ ಚಿತ್ರಗಳ ಬಳಿಕ ಹಿಂದಿಯಲ್ಲೂ ಅಭಿನಯ

ಎರಡೂ ಟ್ರೇಲರ್‌ಗಳು ಒಂದೇ ಸಮಯದಲ್ಲಿ ಬಿಡುಗಡೆಯಾದರೆ ಅವು ಹೇಗೆ ಇರುತ್ತವೆ ಎಂದು ನಾವು ಚಿಂತಿಸಿದ್ದೆವು. ಒಂದೇ ನಟ ನಟಿಸಿರುವ ಎರಡು ಚಿತ್ರಗಳಿಗೆ ಪ್ರಚಾರಕ್ಕೂ ತೊಂದರೆಯಾಗುತ್ತಿತ್ತು. ಅದಕ್ಕಾಗಿಯೇ ನಾವು ʼಕರೀಬ್‌ʼ ಮೊದಲೇ ಬಿಡುಗಡೆ ಮಾಡಬೇಕಾಗಿತ್ತು. ಹೀಗಾಗಿ ʼಕ್ಯಾ ಕೆಹನಾʼ ಚಿತ್ರದ ಬಿಡುಗಡೆಗೆ ಕೊಂಚ ವಿಳಂಬವಾಯಿತು ಎಂದು ಹಳೆಯ ಸಂಗತಿಯನ್ನು ವಿವರಿಸಿದರು.

Continue Reading

ಸ್ಯಾಂಡಲ್ ವುಡ್

Actor Mithra: ಖಡಕ್‌ ವಿಲನ್‌ ಆಗಿ ʼಕರಾವಳಿʼಯಲ್ಲಿ ಅಬ್ಬರಿಸಲಿದ್ದಾರೆ ಕಾಮಿಡಿ ಸ್ಟಾರ್ ಮಿತ್ರ; ಕಾಲಿವುಡ್‌ಗೂ ಎಂಟ್ರಿ

Actor Mithra: ಸ್ಯಾಂಡಲ್‌ವುಡ್‌ ನಟ ಮಿತ್ರ ಅವರ ಖದರ್ ಬದಲಾಗಿದೆ. ಹೌದು, ಮಿತ್ರ ಅವರು ಪ್ರಜ್ವಲ್ ದೇವರಾಜ್ ಅಭಿನಯದ ʼಕರಾವಳಿʼ ಸಿನಿಮಾದಲ್ಲಿ ಮುಖ್ಯಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅದಕ್ಕಾಗಿ ಗೆಟಪ್ ಕೂಡ ಚೇಂಜ್ ಮಾಡಿಕೊಂಡಿದ್ದಾರೆ. ಕಾಮಿಡಿ ಜತೆಗೆ ಎಮೋಷನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು ಕರಾವಳಿಯಲ್ಲಿ ಖಡಕ್‌ ವಿಲನ್‌ ಆಗಿದ್ದಾರೆ. ಜತೆಗೆ ಇನ್ನೆರಡು ಚಿತ್ರಗಳ ಖಳನಾಯಕನ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಸದ್ಯ ಅವರ ಫೋಟೊ ಶೂಟ್‌ ಗಮನ ಸೆಳೆಯುತ್ತಿದೆ.

VISTARANEWS.COM


on

Actor Mithra
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಮಿತ್ರ (Actor Mithra) ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರ ಪರಿಚಿತ ಮುಖ. ಕಳೆದ ಎರಡು ದಶಕಗಳಿಂದ ಮಿತ್ರ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ. ಅದರಲ್ಲಿಯೂ ಅವರು ಕಾಮಿಡಿ ಪಾತ್ರಗಳಿಂದ ಅಭಿಮಾನಿಗಳಿಗೆ ಕಚಗುಳಿ ಇಡುತ್ತ ಬಂದಿದ್ದಾರೆ. ಜತೆಗೆ ಹಿರಿತೆರೆ-ಕಿರುತೆರೆ ಸೇರಿದಂತೆ ಎಲ್ಲೆಡೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿದ್ದಾರೆ. ಇತ್ತೀಚೆಗೆ ಕಾಮಿಡಿ ಜತೆಗೆ ಎಮೋಷನ್ ಹೀಗೆ ಎಲ್ಲ ರೀತಿಯ ಪಾತ್ರಕ್ಕೂ ತಮ್ಮನ್ನ ತಾವು ಒಗ್ಗಿಸಿಕೊಂಡು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿರುವ ಅವರು ಇದೀಗ ಖಡಕ್‌ ವಿಲನ್‌ ಆಗಿ ಅಬ್ಬರಿಸಲು ಮುಂದಾಗಿದ್ದಾರೆ.

ಈಗ ನಟ ಮಿತ್ರ ಅವರ ಖದರ್ ಬದಲಾಗಿದೆ. ಲುಕ್ ಬೇರೆಯದ್ದೇ ರೀತಿ ಇದೆ. ಹೌದು, ಮಿತ್ರ ಅವರು ಪ್ರಜ್ವಲ್ ದೇವರಾಜ್ ಅಭಿನಯದ ʼಕರಾವಳಿʼ ಸಿನಿಮಾದಲ್ಲಿ ಮುಖ್ಯಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅದಕ್ಕಾಗಿ ಗೆಟಪ್ ಕೂಡ ಚೇಂಜ್ ಮಾಡಿಕೊಂಡಿದ್ದಾರೆ. ಬದಲಾದ ಲುಕ್ ಅವರ ಕೆರಿಯರ್‌ಗೆ ಟರ್ನಿಂಗ್ ಪಾಯಿಂಟ್ ಆಗುವ ಎಲ್ಲ ಸಾಧ್ಯತೆ ಇದೆ.

ಖಡಕ್ ವಿಲನ್

ಇಷ್ಟು ದಿನಗಳ ಕಾಲ ಕಾಮಿಡಿ ಸ್ಟಾರ್ ಆಗಿ ಮಿಂಚುತ್ತಿದ್ದ ಮಿತ್ರ ಇನ್ನು ಮುಂದೆ ಸ್ಯಾಂಡಲ್‌ವುಡ್‌ನ ಖಡಕ್ ವಿಲನ್ ಆಗಲಿದ್ದಾರೆ. ಗಡ್ಡ ಬಿಟ್ಟು ಲುಕ್ ಬದಲಾಯಿಸಿಕೊಂಡ ಮೇಲೆ ಬೇರೆ ರೀರಿಯ ಪಾತ್ರಗಳು ಹುಡುಕಿ ಬರುತ್ತಿವೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ. ಸದ್ಯ ಅದಕ್ಕಾಗಿ ಒಂದು ಸ್ಟೈಲಿಷ್ ವಿಲನ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

ವಿಲನ್ ಲುಕ್‌ನಲ್ಲಿ ಮಿತ್ರ ಅವರು ಸಾಕಷ್ಟು ವಿಭಿನ್ನ ಶೇಡ್‌ನಲ್ಲಿ ಮಿತ್ರ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊ ಶೂಟ್ ಮಾಡಿದ್ದು ʼಕರಾವಳಿʼ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದ್. ಮಿತ್ರ ಅವರ ಲುಕ್ ಅನ್ನು ಡೀಸೈನ್‌ ಮಾಡಿದ್ದು ಕಾಲಿವುಡ್‌ನ ಸ್ಟೈಲಿಷ್ ಕಣ್ಮಣಿ.

ಸದ್ಯ ಮಿತ್ರ ಅವರು ʼಕರಾವಳಿʼ ಸಿನಿಮಾ ಬಿಟ್ಟು ಕನ್ನಡದ ದೊಡ್ಡ ಎರಡು ಸ್ಟಾರ್ ಸಿನಿಮಾಗಳಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅದರ ಜತೆಗೆ ತಮಿಳಿನ ಒಂದು ಸಿನಿಮಾಗೆ ವಿಲನ್ ಆಗಿ ಆಯ್ಕೆ ಆಗಿದ್ದಾರೆ. ಕಲಾವಿದರು ಎಂದಿಗೂ ಒಂದೇ ಪಾತ್ರಕ್ಕೆ ಅಂಟಿಕೊಳ್ಳಬಾರದು. ವಯಸ್ಸಿಗೆ ತಕ್ಕಂತೆ ತಮ್ಮನ್ನ ನಾವು ಬದಲಾಯಿಸಿಕೊಳ್ಳಬೇಕು ಎನ್ನುವ ಪಾಲಿಸಿಯನ್ನು ಮಿತ್ರ ಫಾಲೋ ಮಾಡುವಂತೆ ಕಾಣಿಸುತ್ತಿದೆ. ಸದ್ಯ ಅವರ ಈ ಸಾಲ್ಟ್ & ಪೆಪ್ಪರ್ ಲುಕ್ ಹಾಗೂ ಮಿಲನ್ ಖದರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕಾಮಿಡಿಯನ್‌, ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮಿತ್ರ 2017ರಲ್ಲಿ ತೆರೆಕಂಡ ʼರಾಗʼ ಚಿತ್ರದಲ್ಲಿ ಕುರುಡನ ಪಾತ್ರದ ಮೂಲಕ ಗಮನ ಸೆಳೆದಿದ್ದರು. ನಾಯಕನಾಗಿ ಕಾಣಿಸಿಕೊಂಡಿದ್ದ ಅವರಿಗೆ ಜೋಡಿಯಾಗಿ ಮಲಯಾಳಂ ನಟಿ ಭಾಮಾ ಅಭಿನಯಿಸಿದ್ದರು. ಇಬ್ಬರು ಕಣ್ಣು ಕಾಣದ ವ್ಯಕ್ತಿಗಳ ಲವ್‌ಸ್ಟೋರಿ ಇದಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ ಮಿತ್ರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅವರು ಮತ್ತೊಮ್ಮೆ ಪ್ರಯೋಗಾತ್ಮಕ ಪಾತ್ರಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: Karavali Movie: ಪ್ರಜ್ವಲ್‌ ನಟನೆಯ ʼಕರಾವಳಿʼ ಚಿತ್ರಕ್ಕೆ ಇವರೇ ನಾಯಕಿ; ಪೋಸ್ಟರ್‌ ರಿಲೀಸ್‌

Continue Reading

ಸ್ಯಾಂಡಲ್ ವುಡ್

Kannada New Movie: ಸೆಟ್ಟೇರಿತು ‘ಆಕಾಶ್’, ‘ಅರಸು’ ಚಿತ್ರಗಳ ಡೈರೆಕ್ಟರ್ ಹೊಸ ಸಿನಿಮಾ; ಕಿರುತೆರೆಯ ಈ ಪ್ರತಿಭೆ ನಾಯಕ

Kannada New Movie: ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ʼಆಕಾಶ್ʼ, ʼಅರಸುʼ ಮುಂತಾದ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಕಿರುತೆರೆ ನಟ ಸ್ಮೈಲ್ ಗುರು ರಕ್ಷಿತ್ ಅವರನ್ನು ನಾಯಕನಾಗಿ ಕನ್ನಡ ಬೆಳ್ಳಿಪರದೆಗೆ ಕರೆದುಕೊಂಡು ಬರುತ್ತಿದ್ದಾರೆ. ಶೀರ್ಷಿಕೆ ಅಂತಿಮವಾಗದ ಈ ಸಿನಿಮಾದ ಮುಹೂರ್ತ ಬೆಂಗಳೂರಿನ ಅಭಯ ಹಸ್ತ ಬಲಮುರಿ ದೇಗುಲದಲ್ಲಿ ನಡೆದಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ (Puneeth Rajkumar) ಅಭಿನಯದ ʼಆಕಾಶ್ʼ, ʼಅರಸುʼ, ಪ್ರಜ್ವಲ್‌ ದೇವರಾಜ್‌ ನಟನೆಯ ʼಮೆರವಣಿಗೆʼಯಂತಹ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು (Mahesh Babu) ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಹೊಸ ಪ್ರತಿಭೆಗಳನ್ನು ಪರಿಚಯಿಸುವ ಅವರು ಇದೀಗ ಈ ಚಿತ್ರದ ಮೂಲಕ ಕಿರುತೆರೆ ನಟ ಸ್ಮೈಲ್ ಗುರು ರಕ್ಷಿತ್ ಅವರನ್ನು ನಾಯಕನಾಗಿ ಕನ್ನಡ ಬೆಳ್ಳಿಪರದೆಗೆ ಕರೆದುಕೊಂಡು ಬರುತ್ತಿದ್ದಾರೆ. ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಬೆಂಗಳೂರಿನ ಅಭಯ ಹಸ್ತ ಬಲಮುರಿ ದೇಗುಲದಲ್ಲಿ ಮುಹೂರ್ತ ನೆರವೇರಿದೆ (Kannada New Movie).

ಮಹೇಶ್ ಬಾಬು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಸದ್ಯಕ್ಕೆ ಇದನ್ನು ‘ಪ್ರೊಡಕ್ಷನ್ ನಂ 2’ ಎಂದು ಕರೆಯಲಾಗುತ್ತಿದೆ. ʼನೆನಪಿರಲಿʼ ಪ್ರೇಮ್ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮೊದಲ ದೃಶ್ಯಕ್ಕೆ ಅವರು ಆರಂಭ ಫಲಕ ತೋರಿದರು. ಬಳಿಕ ಚಿತ್ರತಂಡಕ್ಕೆ ಅವರು ಶುಭ ಹಾರೈಸಿದರು.

ಎ ಕ್ಲಾಸ್ ಸಿನಿ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥಾಪಕ ಅನುರಾಗ್ ಆರ್ ತಾಯಿ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಶುಭ ಕೋರಿದರು. ಈ ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾಗಿ ಸುದೀಪ್‌ ಅಭಿನಯದ ‘ವೀರ ಮದಕರಿ’ಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಜೆರುಶಾ ನಟಿಸಲಿದ್ದಾರೆ. ಮತ್ತೊಬ್ಬ ನಾಯಕಿಯ ಹೆಸರನ್ನು ಚಿತ್ರತಂಡ ಶೀಘ್ರದಲ್ಲಿಯೇ ರಿವೀಲ್ ಮಾಡಲಿದೆ.

ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮ್ಸ್‌ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್. ಹಾಗೂ ಮಿಥುನ್ ಕೆಎಸ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಸತ್ಯ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ. ಶೀಘ್ರದಲ್ಲಿಯೇ ಚಿತ್ರತಂಡ ಅದ್ಧೂರಿಯಾಗಿ ಟೈಟಲ್ ರಿವೀಲ್ ಮಾಡುವ ಯೋಜನೆ ಹಾಕಿಕೊಂಡಿದೆ. ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮುಗಿಸಲಿರುವ ಚಿತ್ರತಂಡ ಎರಡನೇ ಹಂತದ ಶೂಟಿಂಗ್‌ಗಾಗಿ ಮಲೆನಾಡಿನತ್ತ ಹೆಜ್ಜೆ ಹಾಕಲಿದೆ.

ಇದನ್ನೂ ಓದಿ: Kannada New Movie: ಕಣ್ಮನ ಸೆಳೆಯುತ್ತಿದೆ ”ಕಡಲೂರ ಕಣ್ಮಣಿ” ಚಿತ್ರದ ಟ್ರೇಲರ್

ಮಹೇಶ್‌ ಬಾಬು ಅವರು 2005ರಲ್ಲಿ ತೆರೆಕಂಡ ʼಆಕಾಶ್‌ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಪುನೀತ್‌ ರಾಜ್‌ಕುಮಾರ್‌-ರಮ್ಯಾ ಅಭಿನಯದ ಈ ಸಿನಿಮಾ ಸೂಪರ್‌ ಹಿಟ್‌ ಎನಿಸಿಕೊಂಡಿತ್ತು. ಬಳಿಕ 2007ರಲ್ಲಿ ಮತ್ತೆ ಪುನೀತ್‌ ರಾಜ್‌ಕುಮಾರ್‌-ರಮ್ಯಾ ಕಾಂಬಿನೇಷನ್‌ನಲ್ಲಿ ಮಹೇಶ್‌ ಬಾಬು ʼಅರಸುʼ ಸಿನಿಮಾ ತೆರೆಗೆ ತಂದರು. ಈ ಚಿತ್ರದಲ್ಲಿ ಮಲಯಾಳಂ ನಟಿ, ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಮೀರಾ ಜಾಸ್ಮಿನ್‌ ಕೂಡ ಅಭಿನಯಿಸಿದ್ದರು. ಈ ಚಿತ್ರವೂ ಸೂಪರ್‌ ಹಿಟ್‌ ಆಗಿತ್ತು. ಅದಾದ ಬಳಿಕ ಮಹೇಶ್‌ ಬಾಬು ಅವರು ಶಿವರಾಜ್‌ ಕುಮಾರ್‌ ಅವರ ʼಪರಮೇಶ ಪಾನ್‌ವಾಲಾʼ, ʼಮೆರವಣಿಗೆʼ ಮೊದಲದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮಾತ್ರವಲ್ಲ ದರ್ಶನ್‌ ಅಭಿನಯದ ʼಅಭಯ್‌ʼ ಚಿತ್ರಕ್ಕೂ ಮಹೇಶ್‌ ಬಾಬು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹೀಗೆ ಒಂದೂವರೆ ದಶಕಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿವ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Continue Reading
Advertisement
Muharram 2024 Man dies in fire during
ರಾಯಚೂರು42 seconds ago

Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

hit and run case
ದೇಶ3 mins ago

Hit And Run Case: ಮುಂಬೈ ಬಿಎಂಡಬ್ಲ್ಯು ಕಾರು ಹಿಟ್‌ ಆ್ಯಂಡ್‌ ರನ್‌ ಕೇಸ್‌; ಆರೋಪಿಗೆ ಜು.30ರವರೆಗೆ ನ್ಯಾಯಾಂಗ ಬಂಧನ

Assembly Session
ಕರ್ನಾಟಕ9 mins ago

Assembly Session: ವಾಲ್ಮೀಕಿ ನಿಗಮ ಅಕ್ರಮ ದಲಿತರಿಗೆ ಮಾಡಿರೋ ಅನ್ಯಾಯ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

Paris Olympics 2024
ಪ್ರಮುಖ ಸುದ್ದಿ26 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಡಿಮೆ ಪದಕಗಳು ಸಿಗುವುದು ಯಾಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ

BMTC staff commits suicide at headquarters
ಬೆಂಗಳೂರು43 mins ago

BMTC staff : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ

ಪ್ರಮುಖ ಸುದ್ದಿ48 mins ago

Uttara Kannada Rain: ಭಾರಿ ಮಳೆಗೆ ತತ್ತರಿಸಿದ ಉತ್ತರ ಕನ್ನಡ; ಭೂಕುಸಿತಕ್ಕೆ 11 ಸಾವು, ರಸ್ತೆಗಳೇ ಮಾಯ, ತೋಟ ಗದ್ದೆ ಮುಳುಗಡೆ

Pooja Khedkar
ಪ್ರಮುಖ ಸುದ್ದಿ49 mins ago

Pooja Khedkar: ಐಎಎಸ್‌ಗಾಗಿ ನಕಲಿ ಜಾತಿ, ಕಡಿಮೆ ವಯಸ್ಸು, ದರ್ಪ; ಪೂಜಾ ಖೇಡ್ಕರ್‌ ಕಳ್ಳಾಟ ಒಂದೆರಡಲ್ಲ!

Viral Video
Latest55 mins ago

Viral Video : ಡ್ಯಾನ್ಸ್‌ ಆಯ್ತು, ಹೊಡೆದಾಟವಾಯ್ತು, ಈಗ ಹುಡುಗಿಯರ ಮೇಕಪ್‌ಗೂ ಸಾಕ್ಷಿಯಾಯ್ತು ದೆಹಲಿ ಮೆಟ್ರೊ! ವಿಡಿಯೊ ನೋಡಿ

Rajnath Singh
ದೇಶ59 mins ago

Kashmir Encounter: ಸೇನಾ ಮುಖ್ಯಸ್ಥರ ಜೊತೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಮಾತುಕತೆ; ಸೇನೆಗೆ ಸಂಪೂರ್ಣ ಅಧಿಕಾರ

Model Arrest
Latest1 hour ago

Model Arrest: ತನ್ನ ಫಾಲೋವರ್ಸ್‌ಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಖ್ಯಾತ ಮಾಡೆಲ್‌ಗೆ ಜೈಲು ಶಿಕ್ಷೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ23 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌