MI 7 Movie : ಟಾಮ್‌ ಕ್ರೂಸ್‌ ನಟನೆಯ ʼMI 7ʼನಲ್ಲಿ ಪಠಾಣ್‌ ದೃಶ್ಯ? Vistara News

ಸಿನಿಮಾ

MI 7 Movie : ಟಾಮ್‌ ಕ್ರೂಸ್‌ ನಟನೆಯ ʼMI 7ʼನಲ್ಲಿ ಪಠಾಣ್‌ ದೃಶ್ಯ?

ಟಾಮ್‌ ಕ್ರೂಸ್‌ ನಟನೆಯ MI 7 ಸಿನಿಮಾದ (MI 7 Movie) ಕ್ಲೈಮ್ಯಾಕ್‌ ದೃಶ್ಯವು ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾದಲ್ಲಿನ ದೃಶ್ಯದಂತೆಯೇ ಇದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

VISTARANEWS.COM


on

mi 7 and pathaan comparison
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಹಾಲಿವುಡ್‌ ನಟ ಟಾಮ್‌ ಕ್ರೂಸ್‌ ಅಭಿನಯದ ʼMission Impossible Dead Reckoning: Part 1′ (MI 7 Movie) ಸಿನಿಮಾ ಬುಧವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಟಾಮ್‌ ಕ್ರೂಸ್‌ ಅವರು ಹಯ್ಲೆ ಅಟ್ವೆಲ್‌ ಅವರೊಂದಿಗೆ ಸೇರಿಕೊಂಡು ಹಲವಾರು ಸಾಹಸಮಯ ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಚಿತ್ರದ ಕ್ಲೈಮ್ಯಾಕ್ಸ್‌ ಮಾತ್ರ ಶಾರುಖ್‌ ಅವರ ಪಠಾಣ್‌ ಸಿನಿಮಾದಿಂದ ಬಟ್ಟಿ ಇಳಿಸಿದಂತಿದೆ ಎನ್ನುತ್ತಿದ್ದಾರೆ ವೀಕ್ಷಕರು.

MI 7 ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರೈಲ್ವೆ ಸೇತುವೆ ಬಾಂಬ್‌ ಇಂದ ಸ್ಫೋಟಗೊಳ್ಳುತ್ತದೆ. ಆಗ ಟಾಮ್‌ ಕ್ರೂಸ್‌ ಮತ್ತು ಹಯ್ಲೆ ಅಟ್ವೆಲ್‌ ಅವರು ರೈಲಿನ ಮೇಲಕ್ಕೆ ಜಿಗಿದು ಅದರ ಮೇಲೆ ಓಡುವ ಸೀನ್‌ ಇದೆ. ಇದೇ ರೀತಿಯ ಸೀನ್‌ ಶಾರುಖ್‌ ನಟನೆಯ ಪಠಾಣ್‌ ಸಿನಿಮಾದಲ್ಲೂ ಇದೆ. ಅದರಲ್ಲಿ ಶಾರುಖ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಇಬ್ಬರೂ ರೈಲಿನ ಮೇಲೆ ಓಡುವ ದೃಶ್ಯವಿದೆ. ಹಾಗಾಗಿ ಹಾಲಿವುಡ್‌ ಸಿನಿಮಾ ಕೂಡ ಬಾಲಿವುಡ್‌ ಸಿನಿಮಾದಿಂದ ಕದಿಯುವ ಕೆಲಸ ಮಾಡಿದೆ ಎಂದು ಬಾಲಿವುಡ್‌ ಅಭಿಮಾನಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: Viral Video: ಅಬ್ಬಾ ಮಳೆಯೇ; ಮನಾಲಿಯಲ್ಲಿ 4 ಅಂತಸ್ತಿನ ಹೋಟೆಲ​ನ್ನು ಅರೆಕ್ಷಣದಲ್ಲಿ ನುಂಗಿದ ಪ್ರವಾಹ!
ಈ MI 7 ಸಿನಿಮಾದ ಬಗ್ಗೆ ಈಗಾಗಲೇ ಅತ್ಯದ್ಭುತ ಪ್ರತಿಕ್ರಿಯೆ ಕೇಳಿಬರುತ್ತಿದೆ. ಸಿನಿಮಾದ 10 ನಿಮಿಷಗಳ ಕ್ಲೈಮ್ಯಾಕ್ಸ್‌ ಮೈ ರೋಮಾಂಚನ ಮಾಡಿಸುವಂತಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ನಂತರ ʼMission Impossible Dead Reckoning Part 2′ ಕೂಡ ತಯಾರಾಗಲಿದೆ. ಅದು 2024ರಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ‘MI: Falloutʼ ಸಿನಿಮಾದ ನಂತರದ ಭಾಗವಾಗಿ ಈಗ MI 7 ಸಿನಿಮಾ ತೆರೆಗೆ ಬಂದಿದೆ.


MI 1 ಸಿನಿಮಾ 1996ರಲ್ಲಿ ಬಿಡುಗಡೆಯಾಗಿತ್ತು. ಆಗಲೇ ಆ ಸಿನಿಮಾ ಭಾರತದಲ್ಲಿ 2 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿತ್ತು. 2000ನೇ ಇಸವಿಯಲ್ಲಿ ಬಿಡುಗಡೆಯಾದ MI 2 ಸಿನಿಮಾ ದೇಶದಲ್ಲಿ 7 ಕೋಟಿ ರೂ. ಗಳಿಸಿಕೊಂಡಿತು. 2006ರಲ್ಲಿ ಬಿಡುಗಡೆಯಾದ MI 3 ಸಿನಿಮಾ 10 ಕೋಟಿ ರೂ. ಗಳಿಸಿತು. ಸಿನಿಮಾದ ನಾಲ್ಕನೇ ಭಾಗ 2011ರಲ್ಲಿ ಬಿಡುಗಡೆಯಾಗಿ ದೇಶದಲ್ಲಿ 46 ಕೋಟಿ ಗಳಿಸುವಲ್ಲಿ ಯಶಸ್ವಿಯಾಯಿತು. ಐದನೇ ಭಾಗ 2015ರಲ್ಲಿ ಬಿಡುಗಡೆಯಾಗಿ ದೇಶಾದ್ಯಂತ 54 ಕೋಟಿ ರೂ. ಗಳಿಸಿತು. MI 6 2018ರಲ್ಲಿ ಬಿಡುಗಡೆಯಾಗಿ 80 ಕೋಟಿ ರೂ. ಗಳಿಸಿತು. ಇದೀಗ ಬಿಡುಗಡೆಯಾಗಿರುವ MI 7 ಭಾರತದಲ್ಲಿ 200 ಕೋಟಿ ರೂ. ಗಳಿಸಬಹುದು ಎನ್ನುವ ಅಂದಾಜಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Junior Mehmood: ‘ಮೇರಾ ನಾಮ್ ಜೋಕರ್’ ಖ್ಯಾತಿಯ ನಟ ಜೂನಿಯರ್ ಮೆಹಮೂದ್ ಇನ್ನಿಲ್ಲ

Junior Mehmood: ಚಲನಚಿತ್ರಗಳ ಹೊರತಾಗಿ, ಅವರು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸ್ಟೇಜ್ ಶೋಗಳ ಭಾಗವಾಗಿದ್ದರು. ನಟ ಐದು ದಶಕಗಳ ಕಾಲ ತನ್ನ ವೃತ್ತಿಜೀವನದಲ್ಲಿ 250ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

VISTARANEWS.COM


on

Junior Mehmood
Koo

ಬೆಂಗಳೂರು; ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದ, ಜೂನಿಯರ್ ಮೆಹಮೂದ್ (Junior Mehmood) ಎಂದೇ ಜನಪ್ರಿಯರಾಗಿದ್ದ ಹಿರಿಯ ನಟ ಮತ್ತು ಚಲನಚಿತ್ರ ನಿರ್ದೇಶಕ ನಯೀಮ್ ಸಯ್ಯದ್ ನಿನ್ನೆ (ಡಿ.7) ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ನಟ ಐದು ದಶಕಗಳ ಕಾಲ ತನ್ನ ವೃತ್ತಿಜೀವನದಲ್ಲಿ 250ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಎರಡು ವಾರಗಳ ಹಿಂದೆ, 4ನೇ ಹಂತದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಎಂದು ವರದಿಯಾಗಿದೆ.

ಬ್ರಹ್ಮಚಾರಿ (1968), ಮೇರಾ ನಾಮ್ ಜೋಕರ್, ಪರ್ವಾರೀಶ್ ಮತ್ತು ದೋ ಔರ್ ದೋ ಪಾಂಚ್ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಸಂಜೀವ್ ಕುಮಾರ್, ಹಿರಿಯ ನಟ ಬಾಲರಾಜ್ ಸಾಹ್ನಿ ಮತ್ತು ಇಂದ್ರಾಣಿ ಮುಖರ್ಜಿ ನಟಿಸಿದ ‘ನೌನಿಹಾಲ್’ ಚಿತ್ರದ ಮೂಲಕ ಅವರು ಬಾಲ ನಟರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1967ರಲ್ಲಿ ಬಿಡುಗಡೆಯಾದ ‘ನೌನಿಹಾಲ್’ನಿಂದ ಇಲ್ಲಿಯವರೆಗೆ, ನಟ ಜೂನಿಯರ್ ಮೆಹಮೂದ್ ಎಂದೇ ಚಿರಪರಿಚಿತರು.

250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವುದರ ಜತೆಗೆ, ನಟ ಹಲವಾರು ಮರಾಠಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಗುರುತು ಹಿಡಿಯದ ಸ್ಥಿತಿಯಲ್ಲಿರುವ ಜೂನಿಯರ್ ಮೆಹಮೂದ್ ಅವರನ್ನು ಹಾಸ್ಯನಟ ಜಾನಿ ಲಿವರ್ ಭೇಟಿ ಮಾಡಿದ್ದರು.

ಇದನ್ನೂ ಓದಿ: Death News: ರಾಮದುರ್ಗ ಗಂಗಮ್ಮ ನಿಧನ

ಹಿರಿಯ ನಟ ಜೀತೇಂದ್ರ ಮತ್ತು ಸಚಿನ್ ಪಿಲ್ಗಾಂವ್ಕರ್ ಅವರೊಂದಿಗೆ ಹಲವಾರು ಚಲನಚಿತ್ರಗಳಲ್ಲಿ ಜೂನಿಯರ್ ಮೆಹಮೂದ್ ಕೆಲಸ ಮಾಡಿದ್ದಾರೆ. ಸಚಿನ್ ಮತ್ತು ಜೂನಿಯರ್ ಮೆಹಮೂದ್ ‘ಬಚ್ಪನ್’, ‘ಗೀತ್ ಗಾತಾ ಚಲ್’ ಮತ್ತು ‘ಬ್ರಹ್ಮಚಾರಿ’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಚಲನಚಿತ್ರಗಳ ಹೊರತಾಗಿ, ಅವರು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸ್ಟೇಜ್ ಶೋಗಳ ಭಾಗವಾಗಿದ್ದರು.

Continue Reading

ಕರ್ನಾಟಕ

BBK SEASON 10: ಬಿಗ್ ಬಾಸ್‌ ಮನೆಯಿಂದ ಹೊರ ಬಂದ್ರಾ ಡ್ರೋನ್ ಪ್ರತಾಪ್, ಸಂಗೀತಾ?

BBK SEASON 10: ಬಿಗ್ ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾಗಿರುವ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಬಿಗ್‌ ಬಾಸ್ ಮನೆಯಿಂದ ಹೊರ ಬಂದಿದ್ದಾರೆಂದು ಹೇಳಲಾಗುತ್ತಿದೆ.

VISTARANEWS.COM


on

BBK SEASON 10, Is Drone Pratap and Sangita out of big boss house?
Koo

ಬೆಂಗಳೂರು: ಈ ಬಾರಿ ಬಿಗ್‌ ಬಾಸ್ (BBK SEASON 10) ಸ್ಪರ್ಧೆ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾಗಿರುವ ಡ್ರೋನ್ ಪ್ರತಾಪ್ (Drone Pratap) ಮತ್ತು ನಟಿ ಸಂಗೀತಾ (Sangita) ಅವರು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆಂದು ಹೇಳಲಾಗುತ್ತಿದೆ(Out of Big Boss House). ಆದರೆ, ಇದರಲ್ಲಿ ಟ್ವಿಸ್ಟ್ ಇದ್ದು, ಟಾಸ್ಕ್‌ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಅವರನ್ನು ಮನೆಯಿಂದ ಹೊರಗೆ ತಂದು, ಆಸ್ಪತ್ರೆ ದಾಖಲಿಸಲಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪೆತ್ರೆಯಲ್ಲಿ ಚಿಕಿತ್ಸೆ (Bengaluru Hospital) ಪಡೆಯುತ್ತಾರೆಂದು ಮೂಲಗಳು ತಿಳಿಸಿವೆ.

ಬಿಗ್‌ ಬಾಸ್ ನೀಡಿದ ಟಾಸ್ಕ್ ಮಾಡುವಾಗ ಸಂಗೀತಾ ಮತ್ತು ಡ್ರೋನ್ ಪ್ರತಾಪ್ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಅವರ ಪರಿಸ್ಥಿತಿ ಯಾವ ರೀತಿ ಇದೆ, ಅವರು ಮತ್ತೆ ವಾಪಸ್ ಬಿಗ್‌ಬಾಸ್ ಮನೆಗೆ ಹೋಗುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಟ್ಟಾರೆಯಾಗಿ ಈ ಘಟನೆ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ದೊರೆಯಬೇಕಿದೆ.

ಅವಿನಾಶ್‌ ಈಗ ಮಾವುತನಾ ಮೇಕೆಯಾ? ಏನಯ್ಯ ನಿನ್ನ ಕಥೆ ಹೀಗಾಗೋಯ್ತು!

ರಕ್ಕಸ-ಗಂಧರ್ವರ (BBK SEASON 10) ನಡುವಿನ ಗುದ್ದಾಟ ತಾರಕಕ್ಕೆ ಏರಿರುವ ಹೊತ್ತಿನಲ್ಲಿಯೇ ನಡುನಡುವೆ ನಗೆಬುಗ್ಗೆಯುಕ್ಕಿಸುವಂಥಹ ಕಾಮಿಡಿ ಸನ್ನಿವೇಶಗಳಿಗೂ ಬಿಗ್‌ಬಾಸ್ ಸಾಕ್ಷಿಯಾಗುತ್ತಿದೆ. ಇಂಥದ್ದೊಂದು ಕಾಮಿಡಿ ದೃಶ್ಯದ ಝಲಕ್‌ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ.

“ಆನೆಯನ್ನು ಪಳಗಿಸುವ ಮಾವುತನಾಗುತ್ತೇನೆ’ ಎಂದು ಹೇಳಿಕೊಂಡೇ ಅವಿನಾಶ್‌ ಶೆಟ್ಟಿ ಮನೆಯೊಳಗೆ ಬಂದಿದ್ದರು. ಮನೆಯೊಳಗೂ ಹಲವು ಸದಸ್ಯರು ಅವರನ್ನು ಮಾವುತ ಎಂದೇ ಕರೆಯುತ್ತಿದ್ದಾರೆ. ಆದರೆ ಈ ಗಂಧರ್ವ-ರಕ್ಕಸರ ಗುದ್ದಾಟದಲ್ಲಿ ಈ ಮಾವುತ ಮೇಕೆಯಾಗಿದ್ದಾನೆ.

ತುಕಾಲಿ ಸಂತೋಷ್ ಮತ್ತು ವರ್ತೂರು ಅವರು ‘ನೀನು ಮಾವುತನಾ? ಮೇಕೆಯಾ?’ ಎಂದು ಕೇಳಿದಾಗ ಅವಿನಾಶ್‌, ‘ನಾನು ಮೇಕೆಯಾಗುವುದಿಲ್ಲ’ ಎಂದು ಗಂಧರ್ವರ ಶೈಲಿಯಲ್ಲಿಯೇ ಉತ್ತರಿಸಿದ್ದಾರೆ ಅವಿನಾಶ್. ಆದರೆ ಅದರ ಮರುಕ್ಷಣವೇ ಅವರು ಮೇಕೆಯ ಗೆಟಪ್‌ನಲ್ಲಿ ಮ್ಯಾ… ಎಂದು ಕೂಗುತ್ತ ಓಡಾಡುವ ದೃಶ್ಯಗಳೂ ಇವೆ.

ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದು ಮೋಟಿವೇಷನಲ್ ಸ್ಪೀಚ್ ಕೂಡ ಕೊಟ್ಟಿದ್ದಾರೆ! ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಎದುರಾಳಿ ತಂಡದ ಸದಸ್ಯನನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆಯೇ ವರ್ತೂರು? ಇದಕ್ಕೆ ಅವಿನಾಶ್ ಮರುಳಾಗುತ್ತಾರಾ?ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಅವಿನಾಶ್‌ ಅವರು ಮೊದ ಮೊದಲು ಸ್ಟ್ರಾಂಗ್‌ ಆಗಿಯೇ ಇದ್ದರು. ಇನ್ನು ವಿನಯ್‌ ಕೂಡ ಅವಿನಾಶ್‌ ಅವರಿಗೆ ಗೋಳು ಕೊಡುತ್ತಲೇ ಇದ್ದಾರೆ. ಕಳೆದ ಸಂಚಿಕೆಯಲ್ಲಿ ವಿನಯ್‌ ಅವರು ಅವಿನಾಶ್‌ಗೆ ʻʻನಾನು ಮಾವುತ ಅಲ್ಲ. ಹುಚ್ಚು ಕುದುರೆʼʼ ಎಂದು ಹೇಳಿಸಿದರು. ಇದಕ್ಕೂ ಮುಂಚೆ ವಿನಯ್‌ ಅವರು ಮನೆಮಂದಿ ಜತೆಗೆ ಅವಿನಾಶ್‌ ಕುರುತು ತುಂಬಾ ಕೀಳಾಗಿ ಮಾತನಾಡಿದ್ದೂ ಇದೆ. ಆಗಾಗ ವರ್ತೂರ್‌ ಹಾಗೂ ತುಕಾಲಿ ಅವಿನಾಶ್‌ ಅವರಿಗೆ ವಿನಯ್‌ ವಿರುದ್ಧ ತಿರುಗಿ ಬೀಳುವಂತೆ ಪ್ರಚೋದನೆಯನ್ನು ಕೊಟ್ಟಿದ್ದೂ ಇದೆ. ಅವಿನಾಶ್‌ ಕೂಡ ಈ ಬಗ್ಗೆ ತುಕಾಲಿ ಜತೆ ʻʻಪದೇ ಪದೇ ಮಾವುತ ಎಂದು ಹೇಳಬೇಡಿʼʼಎಂದಿದ್ದರು.

ಈ ಸುದ್ದಿಯನ್ನೂ ಓದಿ: Bigg Boss Telugu 7: ಬಿಗ್‌ ಬಾಸ್‌ ತೆಲುಗು ವೇದಿಕೆಯಲ್ಲಿ ಕನ್ನಡ ಮಾತನಾಡಿದ ಆಶಿಕಾ ರಂಗನಾಥ್‌!

Continue Reading

ಕ್ರೀಡೆ

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

ಕನ್ನಡಿಗರ ನೆಚ್ಚಿನ ತಂಡ ಬೆಂಗಳೂರು ಬುಲ್ಸ್​ಗೆ ಬೆಂಬಲ ಸೂಚಿಸಲು ಚಿತ್ರನಟ ಕಿಚ್ಚ ಸುದೀಪ್ ನಾಳಿನ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

bengaluru bulls kiccha sudeep
Koo

ಬೆಂಗಳೂರು: ಪ್ರಸಕ್ತ ಸಾಗುತ್ತಿರುವ ಪ್ರೊ ಕಬಡ್ಡಿ ಲೀಗ್‌(pro kabaddi) 10ನೇ ಆವೃತ್ತಿಯ ಬೆಂಗಳೂರು ಚರಣದ ಪಂದ್ಯಗಳು ನಾಳೆಯಿಂದ(ಡಿ.8) ಆರಂಭಗೊಳ್ಳಲಿದೆ. ಆತಿಥೇಯ ಬೆಂಗಳೂರು ಬುಲ್ಸ್(bengaluru bulls)​ ತಂಡ ನಾಳೆ ನಡೆಯುವ ಪಂದ್ಯದಲ್ಲಿ ದಬಾಂಗ್​ ಡೆಲ್ಲಿ ವಿರುದ್ಧ ಸೆಣಸಾಟ ನಡೆಸಲಿದೆ. ಕನ್ನಡಿಗರ ನೆಚ್ಚಿನ ತಂಡಕ್ಕೆ ಬೆಂಬಲ ಸೂಚಿಸಲು ಚಿತ್ರನಟ ಕಿಚ್ಚ ಸುದೀಪ್(kiccha sudeep) ಹಾಜರ್​ ಆಗಲಿದ್ದಾರೆ.

ಕಿಚ್ಚ ಸುದೀಪ್​ ಅವರು ಬುಲ್ಸ್​ ಪಂದ್ಯ ವೀಕ್ಷಣೆಗೆ ಬರುತ್ತಿರುವ ವಿಚಾರವನ್ನು ಸ್ಟಾರ್​ಸ್ಪೋರ್ಟ್ಸ್​ ಕನ್ನಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಖಚಿತಪಡಿಸಿದೆ. ಟಿಟ್ವರ್​ ಎಕ್ಸ್​ ಖಾತೆಯಲ್ಲಿ ಬುಲ್ಸ್​ ತಂಡದ ಜೆರ್ಸಿಯಲ್ಲಿರು ಸುದೀಪ್​ ಅವರ ಫೋಟೊ ಹಂಚಿಕೊಂಡು ‘ಅಖಾಡಕ್ಕೆ ಕಿಚ್ಚೇರಿಸಲು ಖುದ್ದು ಕಿಚ್ಚನೇ ಬರಲಿದ್ದಾರೆ.’ ಎಂದು ಬರೆದುಕೊಂಡಿದೆ. ಹಿಂದಿನ ಕಲವು ಆವೃತ್ತಿಯಲ್ಲೂ ಸುದೀಪ್​ ಅವರು ಬುಲ್ಸ್​ ಪಂದ್ಯಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದರು.

ಗೆಲುವಿನ ಖಾತೆ ತೆರೆಯದ ಬುಲ್ಸ್​

10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್​ ತಂಡ ಈವರೆಗೆ 2 ಪಂದ್ಯಗಳನ್ನು ಆಡಿದ್ದು. ಆಡಿದ 2ರಲ್ಲೂ ಸೋಲು ಕಂಡಿದೆ. ಇದೀಗ ತವರಿನಲ್ಲಿ ತಮ್ಮ ಮೂರನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯಲಿದೆಯಾ ಎಂದು ಕಾದು ನೋಡಬೇಕಿದೆ. ಸುದೀಪ್​ ಕೂಡ ಆಟಗಾರರಿಗೆ ಆತ್ಮವಿಶ್ವಾಸ ತುಂಬಲಿದ್ದಾರೆ. ಒಟ್ಟಾರೆ ತವರಿನಲ್ಲಿ ಗೂಳಿಗಳು ಘರ್ಜನೆ ನಡೆಸಲು ಎಲ್ಲ ಸಿದ್ಧತೆ ನಡಸಿದ್ದಾರೆ.

ತಂಡದ ಸ್ಟಾರ್ ಆಟಗಾರರಾದ ಭರತ್​ ಕುಮಾರ್​, ವಿಕಾಸ್​ ಕಂಡೋಲ, ಸುರ್ಜಿತ್​ ಸಿಂಗ್​, ಅಭಿಷೇಕ್​ ಸಿಂಗ್​ ಅವರು ಉತ್ಕೃಷ್ಟ ಮಟ್ಟದ ಆಟ ತೋರ್ಪಡಿಸುವಲ್ಲಿ ಯಶಸ್ವಿಯಾದರೆ ತಂಡಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಡೆಲ್ಲಿ ಕೂಡ ಬಲಿಷ್ಠ ಪಡೆಯಾಗಿದೆ. ಎಕ್ಸ್​ಪ್ರೆಸ್​ ಖ್ಯಾತಿಯ ನವೀನ್​ ಕುಮಾರ್​, ವಿಶಾಲ್​ ಭಾರದ್ವಾಜ್​, ಅಶು ಮಲಿಕ್​ ಇವರನ್ನೆಲ್ಲ ಕಟ್ಟಿಹಾಕಬೇಕು.

ಇದನ್ನೂ ಓದಿ Pro Kabaddi: ಗೆಲುವಿನ ನಗೆ ಬೀರಿದ ಪಾಟ್ನಾ ಪೈರೇಟ್ಸ್‌, ಯುಪಿ ಯೋಧಾಸ್

‘ಭಾರತದ ಪ್ರತಿ ಉಸಿರಲ್ಲೂ ಕಬಡ್ಡಿ’ ಎನ್ನುವ ಕ್ಯಾಂಪೇನ್ ಸ್ಥಳೀಯ ಕಬಡ್ಡಿ ಅಭಿಮಾನಿಗಳಿಗಾಗಿಯೇ ರೂಪಿಸಿದ ಕಾರ್ಯಕ್ರಮವಾಗಿತ್ತು. ಈ ಕ್ಯಾಂಪೇನ್​ನ ಪೋಸ್ಟರ್​ನಲ್ಲಿ ಕಿಚ್ಚ ಸುದೀಪ್​ ಕೂಡ ಕಾಣಿಸಿಕೊಂಡಿದ್ದರು.

ಕನ್ನಡಿಗರ ಪ್ರತಿ ಉಸಿರಲ್ಲೂ ಕಬಡ್ಡಿ ಜೀವಂತ

“ಕಬಡ್ಡಿಯಲ್ಲಿನ ಶಕ್ತಿ, ಧೈರ್ಯ, ದೃಢತೆ ಮತ್ತು ಸಂಪೂರ್ಣ ಉತ್ಸಾಹದ ಸಂಯೋಜನೆಯು ನನ್ನೊಂದಿಗೆ ಆಳವಾಗಿ ಅನುರಣಿಸುತ್ತದೆ. ನಮ್ಮ ರಾಷ್ಟ್ರದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಶಕ್ತಿ ಮತ್ತು ದೃಢತೆಗೆ ಸಮಾನಾರ್ಥಕವಾದ ಗೂಳಿಗಳ ಸದ್ಗುಣಗಳಿಂದ ಸ್ಫೂರ್ತಿಯನ್ನು ಪಡೆಯುತ್ತಿದ್ದೇನೆ, ನಾನು ‘ಕನ್ನಡಿಗರ ಪ್ರತಿ ಉಸಿರಲ್ಲೂ ಕಬಡ್ಡಿ’ಯನ್ನು ಜೀವಂತವಾಗಿಸುವಲ್ಲಿ ಉತ್ಸುಕನಾಗಿದ್ದೇನೆ. ಈ ಭಾವನೆಯು ಕರ್ನಾಟಕದ ಚೈತನ್ಯವನ್ನು ಪ್ರತಿಬಿಂಬಿಸುವುದಲ್ಲದೆ, ಕನ್ನಡಿಗರ ಸಮುದಾಯದ ಅಚಲ ಬೆಂಬಲ ಮತ್ತು ಅದಮ್ಯ ಚೇತನಕ್ಕೆ ಗೌರವ ಸಲ್ಲಿಸುತ್ತದೆ. ನಮ್ಮ ಗೂಳಿಗಳ ಬೆಂಬಲಕ್ಕೆ ಕನ್ನಡಿಗರು ಕೈಜೋಡಿಸಿ ಎಂದು ಟೂರ್ನಿ ಆರಂಭಕ್ಕೂ ಮುನ್ನ ಕಿಚ್ಚ ಹೇಳಿದ್ದರು.

Continue Reading

ಬಾಲಿವುಡ್

The Kapil Sharma Show: 6 ವರ್ಷದ ಮುನಿಸು ಮರೆತು ಒಟ್ಟಿಗೆ ಪಾರ್ಟಿ ಮಾಡಿದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್!

The Kapil Sharma Show ಅರ್ಚನಾ ಪುರಾನ್ ಸಿಂಗ್ ಅವರು ನೆಟ್‌ಫ್ಲಿಕ್ಸ್ ಆಯೋಜಿಸಿದ ಪಾರ್ಟಿಯ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡು ಸಂತೋಷಪಟ್ಟಿದ್ದಾರೆ. “ಇದೊಂದು ಸುಂದರ ಪುನರ್ಮಿಲನʼʼಎಂದು ಫ್ಯಾನ್ಸ್‌ ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

Kapil Sharma and Sunil Grover
Koo

ಬೆಂಗಳೂರು: ಹಾಸ್ಯ, ಮನರಂಜನೆಯ ರಸದೌತಣ ನೀಡುವ ದಿ ಕಪಿಲ್‌ ಶರ್ಮಾ ಶೋ (The Kapil Sharma Show) ಮೂಲಕ ದೇಶದ ಮನೆಮಾತಾಗಿರುವ ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ (Sunil Grover) ಮತ್ತೆ ಒಂದಾಗಿದ್ದಾರೆ. ಹೌದು, ಆರು ವರ್ಷದ ಮುನಿಸು, ವದಂತಿ, ಸ್ಪಷ್ಟನೆ ಬಳಿಕ ಇಬ್ಬರೂ ಒಂದಾಗಿದ್ದಾರೆ. ನೆಟ್‌ಫ್ಲಿಕ್ಸ್‌ ಕಾಮಿಡಿ ಶೋ (Netflix Show) ಪ್ರೋಮೊ ಬಿಡುಗಡೆ ಮಾಡಿರುವ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್‌ ಜತೆ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಆರು ವರ್ಷದ ಬಳಿಕ ಇಬ್ಬರು ಹಾಸ್ಯ ಕಲಾವಿದರು ಮುನಿಸು ಮರೆತು ಒಂದಾದಂತಾಗಿದೆ. ಕಪಿಲ್ ಮತ್ತು ಸುನೀಲ್ ಇತ್ತೀಚೆಗೆ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಅರ್ಚನಾ ಪುರಾನ್ ಸಿಂಗ್ ಅವರು ನೆಟ್‌ಫ್ಲಿಕ್ಸ್ ಆಯೋಜಿಸಿದ ಪಾರ್ಟಿಯ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡು ಸಂತೋಷಪಟ್ಟಿದ್ದಾರೆ. “ಇದೊಂದು ಸುಂದರ ಪುನರ್ಮಿಲನʼʼಎಂದು ಫ್ಯಾನ್ಸ್‌ ಕಮೆಂಟ್‌ ಮಾಡಿದ್ದಾರೆ.

ಈ ಹಿಂದೆ ಬಿಡುಗಡೆಯಾಗಿದ್ದ ಪ್ರೋಮೊದಲ್ಲಿ ಮೊದಲು ಕಪಿಲ್‌ ಶರ್ಮಾ ಕಾಣಿಸಿಕೊಂಡಿದ್ದರು. “ಹಾಯ್‌ ಗೆಳೆಯರೆ, ನಾನು ಕಪಿಲ್‌ ಶರ್ಮಾ. ಶೀಘ್ರದಲ್ಲೇ ಹೊಸ ಶೋ ಹೊತ್ತು ನಿಮ್ಮೆದುರು ಬರುತ್ತೇನೆ” ಎಂದು ಕಪಿಲ್‌ ಶರ್ಮಾ ಹೇಳುತ್ತಾರೆ. ಆಗ ಸುನಿಲ್‌ ಗ್ರೋವರ್‌, “ನಾನು ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದಿದ್ದರು. ಆಗ ಕಪಿಲ್‌ ಶರ್ಮಾ, “ಸರಿ ಹಾಗಾದರೆ, ಇಬ್ಬರೂ ಬರೋಣ, 190ಕ್ಕೂ ಅಧಿಕ ದೇಶಗಳಿಗೆ ಬರೋಣ” ಎಂದಿದ್ದರು. ಹಾಗೆಯೇ ಇಬ್ಬರ ನಡುವಿನ ಸಂಭಾಷಣೆ ಮುಂದುವರಿಯುತ್ತದೆ.

ಇದನ್ನೂ ಓದಿ: Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

ಇದೇ ವೇಳೆ ವಿಡಿಯೊ ಫ್ರೇಮ್‌ನಲ್ಲಿ ಹಾಸ್ಯ ಕಲಾವಿದರಾದ ರಾಜೀವ್‌, ಕಿಕು, ಕೃಷ್ಣಾ ಹಾಗೂ ನಟಿ ಅರ್ಚನಾ ಪೂರನ್‌ ಸಿಂಗ್‌ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ, ಕಾಮಿಡಿ ನೈಟ್ಸ್‌ ವಿತ್‌ ಕಪಿಲ್‌, ದಿ ಕಪಿಲ್‌ ಶರ್ಮಾ ಶೋ ಮೂಲಕವೇ ದೇಶದ ಮನೆಮಾತಾಗಿರುವ ಕಲಾವಿದರು ನೆಟ್‌ಫ್ಲಿಕ್ಸ್‌ ಶೋನಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ, ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರು ಒಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ದಿ ಕಪಿಲ್‌ ಶರ್ಮಾ ಶೋನಲ್ಲಿ ಸುನೀಲ್‌ ಗ್ರೋವರ್‌ ಅವರು ಮಾಡುತ್ತಿದ್ದ “ಡಾ ಮಶೂರ್‌ ಗುಲಾಟಿ” ಪಾತ್ರವು ಮನೆಮಾತಾಗಿತ್ತು.

ಇಬ್ಬರ ಮಧ್ಯೆ ಏಕೆ ಜಗಳ?

ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರ ಮಧ್ಯೆ 2017ರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಆಸ್ಟ್ರೇಲಿಯಾದಲ್ಲಿ ಶೋ ಮುಗಿಸಿ, ಮುಂಬೈಗೆ ಆಗಮಿಸುವಾಗ ವಿಮಾನದಲ್ಲಿಯೇ ಕಪಿಲ್‌ ಶರ್ಮಾ ಅವರು ಸುನಿಲ್‌ ಗ್ರೋವರ್‌ ಅವರಿಗೆ ಬೈದಿದ್ದರು. ಇದಾದ ಬಳಿಕ ಇಬ್ಬರೂ ವಾಗ್ವಾದ ನಡೆಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ನಂತರ ಸುನಿಲ್‌ ಗ್ರೋವರ್‌ ಅವರು ದಿ ಕಪಿಲ್‌ ಶರ್ಮಾ ಶೋ ತೊರೆದಿದ್ದರು. ಜಗಳದ ಕುರಿತು ಸ್ಪಷ್ಟನೆ ನೀಡಿದ್ದ ಕಪಿಲ್‌ ಶರ್ಮಾ, “ನಾನು ಎಂದಿಗೂ ಸುನಿಲ್‌ ಗ್ರೋವರ್‌ ಜತೆ ಜಗಳ ಆಡಿಲ್ಲ, ಬೈದಿಲ್ಲ. ನಾನು ಅದ್ಭುತ ವ್ಯಕ್ತಿಗಳ ಜತೆ ಕೆಲಸ ಮಾಡಲು ಬಯಸುತ್ತೇನೆ. ಅವರಲ್ಲಿ ಸುನಿಲ್‌ ಗ್ರೋವರ್‌ ಕೂಡ ಒಬ್ಬರು” ಎಂದು ಹೇಳಿದ್ದರು.

Continue Reading
Advertisement
Junior Mehmood
ಬಾಲಿವುಡ್3 mins ago

Junior Mehmood: ‘ಮೇರಾ ನಾಮ್ ಜೋಕರ್’ ಖ್ಯಾತಿಯ ನಟ ಜೂನಿಯರ್ ಮೆಹಮೂದ್ ಇನ್ನಿಲ್ಲ

cm k chandrashekar rao
ದೇಶ7 mins ago

K Chandrasekhar Rao: ರೇವಂತ್‌ ರೆಡ್ಡಿ ಸಿಎಂ ಆದ ದಿನವೇ ಜಾರಿ ಬಿದ್ದು ಸೊಂಟ ಮುರಿದುಕೊಂಡ ಕೆಸಿಆರ್‌

Jasprit bumarh
ಕ್ರಿಕೆಟ್12 mins ago

Jasprit Bumrah : ಬುಮ್ರಾ ಚಿತ್ರ ಹಾಕಿ ಎಲ್ಲರಿಗೂ ಸಂದೇಶ ರವಾನಿಸಿದ ಮುಂಬಯಿ ಇಂಡಿಯನ್ಸ್​​​

Karthik threw the sandal to vinay Ugly Fight
ಬಿಗ್ ಬಾಸ್28 mins ago

BBK SEASON 10: ಚಪ್ಪಲಿ ಎಸೆದೆ ಕಾರ್ತಿಕ್‌; ನನಗೆ ಮರ್ಯಾದೆ ಇಲ್ವಾ? ಆಚೆ ಹೋಗ್ಬೇಕು ಎಂದ ವಿನಯ್‌!

RBI governor Shaktikanta Das
ದೇಶ52 mins ago

RBI monetary policy: ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರ ಇಂದು; ಬಡ್ಡಿ ದರ ಏರುತ್ತಾ?

Stamp duty
ಕರ್ನಾಟಕ1 hour ago

Assembly Session : ಭೂಮಿ ಬೆಲೆ ಹೆಚ್ಚಿಸಿದ್ದ ಸರ್ಕಾರದಿಂದ ಮುದ್ರಾಂಕ ಶುಲ್ಕವೂ ಹೆಚ್ಚಳ

dengue flue
ಆರೋಗ್ಯ1 hour ago

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

Vistara Editorial, Government should conduct exam without any lapse
ಕರ್ನಾಟಕ2 hours ago

Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್‌, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ

Raja Marga Father and Daughter
ಅಂಕಣ2 hours ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Hair Care Tips
ಆರೋಗ್ಯ2 hours ago

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ15 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ16 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ21 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ2 days ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌