ಕನ್ನಡ ಚಿತ್ರಗಳಿಗೆ ಬಂದಿವೆ ಹೊಸ OTT ಪ್ಲಾಟ್‌ಫಾರ್ಮ್ - Vistara News

ಒಟಿಟಿ

ಕನ್ನಡ ಚಿತ್ರಗಳಿಗೆ ಬಂದಿವೆ ಹೊಸ OTT ಪ್ಲಾಟ್‌ಫಾರ್ಮ್

Netflix ಭಾರತದಲ್ಲಿ 6.1 ಮಿಲಿಯನ್ ಚಂದಾದಾರರನ್ನು ಹೊಂದಿದ್ದರೆ, Amazon Prime ಸುಮಾರು 22.3 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಇದೀಗ ಕನ್ನಡದ OTT ಪ್ಲಾಟ್‌ಫಾರ್ಮ್‌ ಬಿಡುಗಡೆಯಾಗಿವೆ.

VISTARANEWS.COM


on

ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

OTT ಪ್ಲಾಟ್‌ಫಾರ್ಮ್‌ಗಳು ಮನರಂಜನಾ ಉದ್ಯಮದಲ್ಲಿ ಹೊಸ ಪ್ರಪಂಚದ ಒಂದು ಪರಿಕಲ್ಪನೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಜನರು ಟಿವಿಗಳಿಂದ OTT ಗೆ ಬದಲಾಗಿದ್ದಾರೆ ಮತ್ತು ದಿನದಿಂದ ದಿನಕ್ಕೆ ಅದರ ಜನಪ್ರಿಯತೆ ಹೆಚ್ಚುತ್ತಿದೆ. OTT ಯೊಂದಿಗೆ ಪ್ರೇಕ್ಷಕರು ತಮ್ಮ ನೆಚ್ಚಿನ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಅವರ ಆದ್ಯತೆಯ ಯಾವುದೇ ಸಮಯದಲ್ಲಿ ಅದನ್ನು ವೀಕ್ಷಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಹೆಚ್ಚಿನ OTT ವಿಷಯಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. Netflix, Zee5, Amazon Prime ಮತ್ತು Disney+Hotstar ನಂತಹ ಪ್ಲಾಟ್‌ಫಾರ್ಮ್‌ಗಳು ಪ್ರತಿ ತಿಂಗಳು ಹೊಸ ಮನರಂಜನಾ‌ ಕಾರ್ಯಕ್ರಮಗಳೊಂದಿಗೆ ಬರುತ್ತಿವೆ. ಇದೀಗ ಕನ್ನಡದ್ದೇ ಮೂಲದ ಒಟಿಟಿ ವೇದಿಕೆಗಳು ಬಿಡುಗಡೆಗೊಂಡಿವೆ.

ಡಿಸ್ನಿಯ ವೀಡಿಯೊ ಸ್ಟ್ರೀಮಿಂಗ್ ಸೇವೆ Disney+Hotstar ಅದರ ಒಟ್ಟು 45.9 ಮಿಲಿಯನ್ ಬಳಕೆದಾರರಿಗೆ ಹೊಂದಿದ್ದಾರೆ. Disney+Hotstar ಪ್ರಸ್ತುತ ಭಾರತ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಲ್ಲಿ ಲಭ್ಯವಿದೆ, ಆದರೂ ಹೆಚ್ಚಿನ ಚಂದಾದಾರರು ಭಾರತದಿಂದ ಇದ್ದಾರೆ. Netflix ಭಾರತದಲ್ಲಿ 6.1 ಮಿಲಿಯನ್ ಚಂದಾದಾರರನ್ನು ಹೊಂದಿದ್ದರೆ, Amazon Prime ಸುಮಾರು 22.3 ಮಿಲಿಯನ್ ಚಂದಾದಾರರನ್ನು ಹೊಂದಿದೆ. Zee5 6.1 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಕನ್ನಡದಲ್ಲಿ ಸದ್ಯಕ್ಕೆ ಎರಡು ಹೊಸ ಪ್ರಯತ್ನಗಳು ಆರಂಭವಾಗಿವೆ.

ಇದನ್ನೂ ಓದಿ: ʼಅಧ್ಯಕ್ಷʼರ ಅವತಾರಪುರುಷ ಟ್ರೇಲರ್‌ ರಿಲೀಸ್‌..!: ಅಷ್ಟದಿಗ್ಬಂಧನ ಮಂಡಲಕ Part-1

ಟಾಕೀಸ್‌ಗೆ ಶಿವಣ್ಣ ಬಲ

ಕನ್ನಡದ ಒಟಿಟಿ ವೇದಿಕೆಗೆ ಹ್ಯಾಟ್ರಿಕ್‌ ಹೀರೊ ಶಿವರಾಜಕುಮಾರ್‌ ಬೆಂಬಲವಾಗಿ ನಿಂತಿದ್ದಾರೆ. ‘ಟಾಕೀಸ್’ ಎಂಬ OTT ಅನ್ನು ಶಿವಣ್ಣ ಲಾಂಚ್‌ ಮಾಡಿದ್ದಾರೆ. ಸ್ವಯಂ ಪ್ರಭಾ ಸಂಸ್ಥೆಯ ರತ್ನಾಕರ್ ಕಾಮತ್ ಆರಂಭಿಸಿರುವ ‘ಟಾಕೀಸ್’ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಆಗಮಿಸಿ ಶುಭ ಕೋರಿದ್ದಾರೆ. ಇಂದಿನ ದಿನಗಳಲ್ಲಿ OTT ವೇದಿಕೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಶಿವಣ್ಣ, ಕನ್ನಡ ವಿಷಯಕ್ಕಾಗಿ ಪ್ರತ್ಯೇಕವಾಗಿ ಟಾಕೀಸ್ ಕನ್ನಡ OTT ಆರಂಭವಾಗಿದೆ. ಇದು ಹಲವು ವಿಶೇಷತೆಗಳನ್ನು ಹೊಂದಿದೆ. ಹೀಗಾಗಿ ಶಿವಣ್ಣ ಈ ತಂಡವನ್ನು ಬೆನ್ನು ತಟ್ಟಿದ್ದಾರೆ. ಇಂತಹ ಚಟುವಟಿಕೆಗಳಿಗೆ ಸದಾ ಬೆಂಬಲವಿದೆ ಎಂದು ಭರವಸೆ ನೀಡಿದರು. ಈ ಹಿಂದೆ ತುಳು ಸಿನಿಮಾ ಮತ್ತು ಕಿರುಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ಟಾಕೀಸ್ ಈಗ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿದೆ. ಸಕಲ ಸಿದ್ಧತೆಯೊಂದಿಗೆ ಕನ್ನಡಿಗ ಬಾಗಿಲು ತೆರೆದರು. ಪ್ರೇಕ್ಷಕರು ಟಾಕೀಸ್‌ನಲ್ಲಿ ಪ್ರಸಿದ್ಧ ಕಲಾವಿದರನ್ನು ಒಳಗೊಂಡ ಚಲನಚಿತ್ರಗಳು, ಕಿರುಚಿತ್ರಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸಬಹುದು.

ವಿಜಯ್ ರಾಘವೇಂದ್ರ, ಪ್ರಮೋದ್ ಶೆಟ್ಟಿ, ರಂಜನಿ ರಾಘವನ್, ಮಂಜು ಪಾವಗಡ, ವೈಷ್ಣವಿ ಗೌಡ, ಭೂಮಿ ಶೆಟ್ಟಿ, ಹರೀಶ್ ರಾಜ್ ಸೇರಿದಂತೆ 1,200 ಕಲಾವಿದರು ‘ಟಾಕೀಸ್’ಗೆ ಕೈ ಜೋಡಿಸಿದ್ದಾರೆ. 700ಕ್ಕೂ ಹೆಚ್ಚು ತಂತ್ರಜ್ಞರು ಕೆಲಸ ಮಾಡಿದ್ದಾರೆ. ಈ OTT 200 ದಿನಗಳ ಪರಿಶ್ರಮದಿಂದ ಪ್ರಾರಂಭವಾಯಿತು. 400ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಲಭ್ಯವಾಗುತ್ತಿವೆ. ಜೊತೆಗೆ ಹೊಸ ಮನರಂಜನಾ ಸನ್ನಿವೇಶಗಳನ್ನು ಸೃಷ್ಟಿಸುವ ಗುರಿಯನ್ನು ‘ಟಾಕೀಸ್’ ಮುಂದಿಟ್ಟಿದೆ. ಇದರಿಂದ ಕಲಾವಿದರು ಮತ್ತು ತಂತ್ರಜ್ಞರಿಗೆ ಸಾಕಷ್ಟು ಅವಕಾಶ ಸಿಗಲಿದೆ.

‘ಟಾಕೀಸ್’ ಬಗ್ಗೆ ಶಿವರಾಜ್ ಕುಮಾರ್ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ‘ಕನ್ನಡಿಗನಿಗೆ ಕನ್ನಡಿ ಎಂಬ ಆಶಯದೊಂದಿಗೆ ಈ ಟಾಕೀಸ್ ಒಟಿಟಿ ಆರಂಭವಾಗಿದೆ. ಇದರಿಂದ ಕನ್ನಡಿಗರಿಗೆ ಉದ್ಯೋಗ ದೊರೆಯುತ್ತದೆ. ಇದು ಇತರ ಯಾವುದೇ ಭಾಷೆ OTT ಗಿಂತ ಉತ್ತಮವಾಗಿ ಬೆಳೆಯುತ್ತದೆ ಎಂಬುದು ನನ್ನ ನಂಬಿಕೆ. ಈ ಅವಕಾಶವನ್ನು ಕನ್ನಡದ ಕಲಾವಿದರು ಮತ್ತು ತಂತ್ರಜ್ಞರು ಬಳಸಿಕೊಳ್ಳಬೇಕು. ರತ್ನಾಕರ್ ಕಾಮತ್ ಅವರಿಗೆ ಧನ್ಯವಾದಗಳು ಎಂದು ಶಿವಣ್ಣ ಹೇಳಿದರು.

ಇದನ್ನೂ ಓದಿ: Explainer: ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಚಂದಾದಾರರನ್ನು ಕಳೆದುಕೊಳ್ಳುತ್ತಿರುವುದೇಕೆ?

ಬಣಕಾರ್‌ರಿಂದ ಸಿನಿಬಜಾರ್‌

ಭಾಸ್ಕರ್‌ ವೆಂಕಟೇಶ್‌ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಸೇರಿ ಸಿನಿಬಜಾರ್‌ ಎಂಬ ಮತ್ತೊಂದು ಒಟಿಟಿಯನ್ನು ಬಿಡುಗಡೆ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯಪ್‌ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಭಾಸ್ಕರ್‌ ವೆಂಕಟೇಶ್‌, ಪ್ರತಿ ಸಿನಿಮಾ ವೀಕ್ಷಣೆಗೆ ₹25-₹30 ವೆಚ್ಚವಾಗುತ್ತದೆ. ಉತ್ತಮ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದ್ದು, ಉತ್ತಮ ಮನರಂಜನೆ ಲಭಿಸಲಿದೆ. ಈಗಾಗಲೆ ಅನೇಕ ಚಲನಚಿತ್ರಗಳು ಈ ಭಂಡಾರದಲ್ಲಿದ್ದು, ಹೊಸ ಸಿನಿಮಾಗಳನ್ನೂ ಬಿಡುಗಡೆ ಮಾಡಬಹುದು ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Richa Chadda:  ರಿಚಾ ಚಡ್ಡಾ ಬೇಬಿ ಬಂಪ್‌ಗೆ ಮುತ್ತಿಟ್ಟ ನಟಿ ರೇಖಾ!

Richa Chadda:ರಿಚಾ ಚಡ್ಡಾ ಅವರು ಹಲವು ವೆಬ್​ ಸರಣಿಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಇದೀಗ ‘ಹೀರಾಮಂಡಿ’ ಚಿತ್ರದಲ್ಲಿಯೂ ನಟಿ ಅಭಿನಯಿಸಿದ್ದಾರೆ. ‘ಹೀರಾಮಂಡಿ’ ವೀಕ್ಷಿಸಿದ ನಂತರ ರೇಖಾ ಅವರು ರಿಚಾ ಚಡ್ಡಾ ಅವರ ನಟನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಹೀರಾಮಂಡಿ’ ಸಿನಿಮಾ ತಂಡವನ್ನು ಬೆಂಬಲಿಸಲು ಬಾಲಿವುಡ್ ತಾರೆಯರ ಗುಂಪೇ ನೆರೆದಿತ್ತು. ʻಹೀರಾಮಂಡಿʼ ಸಿರೀಸ್‌ ಮೇ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

VISTARANEWS.COM


on

Rekha kisses Richa Chadha baby bump at Heeramandi event
Koo

ಬೆಂಗಳೂರು: ‘ಹೀರಾಮಂಡಿ’ ಚಿತ್ರದ ಪ್ರೀಮಿಯರ್‌ ವೇಳೆ ಹಿರಿಯ ನಟಿ ರೇಖಾ (Richa Chadda) ಅವರು ರಿಚಾ ಚಡ್ಡಾ ಬೇಬಿ ಬಂಪ್‌ಗೆ ಮುತ್ತಿಟ್ಟಿದ್ದಾರೆ. ಈ ಫೋಟೊ ಹಾಗೂ ವಿಡಿಯೊ ವೈರಲ್‌ ಆಗಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾಮಂಡಿ’ ಸಿನಿಮಾ ತಂಡವನ್ನು ಬೆಂಬಲಿಸಲು ಬಾಲಿವುಡ್ ತಾರೆಯರ ಗುಂಪೇ ನೆರೆದಿತ್ತು. ʻಹೀರಾಮಂಡಿʼ ಸಿರೀಸ್‌ ಮೇ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

ರಿಚಾ ಚಡ್ಡಾ ಅವರು ಹಲವು ವೆಬ್​ ಸರಣಿಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಇದೀಗ ‘ಹೀರಾಮಂಡಿ’ ಚಿತ್ರದಲ್ಲಿಯೂ ನಟಿ ಅಭಿನಯಿಸಿದ್ದಾರೆ. ‘ಹೀರಾಮಂಡಿ’ ವೀಕ್ಷಿಸಿದ ನಂತರ ರೇಖಾ ಅವರು ರಿಚಾ ಚಡ್ಡಾ ಅವರ ನಟನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯವರ ಬಹು ನಿರೀಕ್ಷಿತ ಸರಣಿಯಲ್ಲಿ ʻಲಜ್ಜೋʼ ಪಾತ್ರದಲ್ಲಿ ನಟಿಸಿದ್ದಾರೆ.

ರಿಚಾ ಚಡ್ಡಾ ಕೂಡ ಈ ಬಗ್ಗೆ ಮಾತನಾಡಿ ʻʻರೇಖಾ ಅವರಂತಹ ಪೂಜ್ಯರಿಂದ ಪ್ರಶಂಸೆ ಮತ್ತು ಪ್ರೀತಿಯನ್ನು ಸ್ವೀಕರಿಸುತ್ತಿರುವುದು ಖುಷಿಯ ಕ್ಷಣವಾಗಿದೆ. ನನ್ನ ಹೃದಯ ತುಂಬಿದೆ. ‘ಹೀರಾಮಂಡಿ’ ಚಿತ್ರದಲ್ಲಿನ ನನ್ನ ಅಭಿನಯದ ಮೇಲಿನ ಪ್ರೀತಿಯು ನನ್ನನ್ನು ಮೂಕನನ್ನಾಗಿ ಮಾಡಿತುʼʼಎಂದರು.

ಇದನ್ನೂ ಓದಿ: Kiran Rao: ಆಮೀರ್ ಖಾನ್ ಮಾಜಿ ಪತ್ನಿ ಸಿನಿಮಾ ಒಟಿಟಿಗೆ ಬಂದೇ ಬಿಡ್ತು! ಎಲ್ಲಿ ಸ್ಟ್ರೀಮಿಂಗ್?

ಸಂಜಯ್ ಲೀಲಾ ಬನ್ಸಾಲಿಯವರ ( Sanjay Leela Bhansali) ಹದಿನಾಲ್ಕು ವರ್ಷಗಳ ಕನಸಿನ ಕೂಸಾಗಿರುವ ನೆಟ್‌ಫ್ಲಿಕ್ಸ್ ಸೀರೀಸ್ ʻಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಚಿತ್ರದ (Hiramandi: The Diamond Bazaar) ಬಹು ನಿರೀಕ್ಷಿತ ಟ್ರೈಲರ್‌ ಏಪ್ರಿಲ್‌ 10ರಂದು ಬಿಡುಗಡೆಯಾಗಿತ್ತು. ಅನೇಕ ನಟಿಯರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ನೆಟ್​ಫ್ಲಿಕ್ಸ್​ ಮೂಲಕ ಮೇ 1ರಂದು ಈ ವೆಬ್​ ಸಿರೀಸ್​ ವೀಕ್ಷಣೆಗೆ ಲಭ್ಯವಾಗಲಿದೆ.

ಹೀರಾಮಂಡಿ: ದಿ ಡೈಮಂಡ್ ಬಜಾರ್’ನ ಮೊದಲ ಹಾಡು ‘ಸಕಲ್ ಬನ್’ (Sakal Ban) ಮಿಸ್ ವರ್ಲ್ಡ್ 2024 ರ ಫಿನಾಲೆಯಲ್ಲಿ ಲಾಂಚ್‌ ಆಗಿತ್ತು. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಸೇರಿದಂತೆ ಅನೇಕರು ಈ ಹಾಡಿಗೆ ರ್‍ಯಾಂಪ್‌ ವಾಕ್‌ ಮಾಡಿದ್ದರು.

ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳೆಂದರೆ ಅಲ್ಲೊಂದು ಅದ್ಭುತ ಮಾಯಾಲೋಕವನ್ನೇ ನಾವು ನಿರೀಕ್ಷಿಸಬಹುದು. “ಹೀರಾಮಂಡಿ” ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ವೇಶ್ಯೆಯರ ಜೀವನದಲ್ಲಿ ಪ್ರೀತಿ ಮತ್ತು ದ್ರೋಹದ ವಿಷಯಗಳನ್ನು ಅನ್ವೇಷಿಸುತ್ತದೆ. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್​ ಹೈದರಿ, ರಿಚಾ ಚಡ್ಡಾ, ಶರ್ಮಿನ್​ ಸೇಗಲ್​, ಸಂಜೀದಾ ಶೇಖ್​ ಮುಂತಾದವರು ‘ಹೀರಾಮಂಡಿ’ ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ.

Continue Reading

ಬಾಲಿವುಡ್

Kiran Rao: ಆಮೀರ್ ಖಾನ್ ಮಾಜಿ ಪತ್ನಿ ಸಿನಿಮಾ ಒಟಿಟಿಗೆ ಬಂದೇ ಬಿಡ್ತು! ಎಲ್ಲಿ ಸ್ಟ್ರೀಮಿಂಗ್?

Kiran Rao: ʻಲಾಪತಾ ಲೇಡೀಸ್‌ʼ (Laapataa Ladies) ಇತ್ತೀಚೆಗೆ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. 14 ವರ್ಷಗಳ ಬ್ರೇಕ್‌ ನಂತರ ಚಿತ್ರವನ್ನು ನಿರ್ದೇಶಿಸಿದ್ದಾರೆ ಕಿರಣ್. ‘ಲಾಪತಾ ಲೇಡೀಸ್’ ಬಿಪ್ಲಬ್ ಗೋಸ್ವಾಮಿಯವರ ಕಾದಂಬರಿಯನ್ನು ಆಧರಿಸಿದೆ. ಮಾರ್ಚ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು

VISTARANEWS.COM


on

Kiran Rao Laapataa Ladies to release on OTT
Koo

ಬೆಂಗಳೂರು: ಆಮೀರ್ ಖಾನ್ ಪ್ರೊಡಕ್ಷನ್ (APK) ಮತ್ತು ಕಿರಣ್ ಅವರ ಕಿಂಡ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ʻಲಾಪತಾ ಲೇಡೀಸ್‌ʼ (Laapataa Ladies) ಇತ್ತೀಚೆಗೆ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. 14 ವರ್ಷಗಳ ಬ್ರೇಕ್‌ ನಂತರ ಚಿತ್ರವನ್ನು ನಿರ್ದೇಶಿಸಿದ್ದಾರೆ ಕಿರಣ್. ಇದೀಗ ಈ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. ಇಂದು (ಏಪ್ರಿಲ್ 26)ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಗೊಂಡಿದೆ.

ಸಿನಿಮಾ ಬಗ್ಗೆ ಮೆಚ್ಚುಗೆ ಕೇಳಿಬಂದಿದ್ದರೂ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಈ ಸಿನಿಮಾವನ್ನು ಥಿಯೇಟರ್​ನಲ್ಲಿ ನೋಡಿರಲಿಲ್ಲ. ಒಟಿಟಿಯಲ್ಲಿ ನೋಡಬೇಕು ಎಂದು ಕಾದಿದ್ದ ಪ್ರೇಕ್ಷಕರಿಗೆ ಈಗ ಖುಷಿ ಸುದ್ದಿ ಸಿಕ್ಕಿದೆ. ಸ್ನೇಹಾ ದೇಸಾಯಿ ಬರೆದು ಆಮೀರ್ ಖಾನ್ ನಿರ್ಮಿಸಿದ ‘ಲಾಪತಾ ಲೇಡೀಸ್’ ಬಿಪ್ಲಬ್ ಗೋಸ್ವಾಮಿಯವರ ಕಾದಂಬರಿಯನ್ನು ಆಧರಿಸಿದೆ. ಮಾರ್ಚ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.

‘ಮಹಿಳಾ ಪ್ರಧಾನ ವಸ್ತುವಿಷಯವನ್ನು ‘ಲಾಪತಾ ಲೇಡೀಸ್​’ ಚಿತ್ರದಲ್ಲಿದೆ. ಗಂಭೀರವಾದ ವಿಷಯವಾದರೂ ಕೂಡ ಇಡೀ ಸಿನಿಮಾವನ್ನು ಹಾಸ್ಯದ ಧಾಟಿಯಲ್ಲಿ ಕಟ್ಟಿಕೊಡಲಾಗಿದೆ. ಎಮೋಷನಲ್​ ದೃಶ್ಯಗಳು ಕೂಡ ಈ ಚಿತ್ರದಲ್ಲಿ ಗಮನ ಸೆಳೆದಿವೆ.

ಇದನ್ನೂ ಓದಿ: Aamir Khan: ಆಮೀರ್ ಖಾನ್-ರೀನಾ ದತ್ತಾ ಡಿವೋರ್ಸ್‌ಗೆ ನಾನು ಕಾರಣನಲ್ಲ: ಕಿರಣ್ ರಾವ್!

‘ಲಾಪತಾ ಲೇಡೀಸ್’ ಚಿತ್ರವನ್ನು ಕಿರಣ್ ರಾವ್ ಅವರು ನಿರ್ದೇಶಿಸಿದ್ದಾರೆ. ಆಮೀರ್ ಖಾನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರವಿ ಕಿಶನ್ ಜತೆಗೆ ನಿತಾಂಶಿ ಗೋಯೆಲ್, ಪ್ರತಿಭಾ ರಂತ, ಸ್ಪರ್ಶ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ ಬರೆದಿದ್ದರು.

ಈಗ ಆಮಿರ್ ಖಾನ್​ ಅವರು ‘ಸಿತಾರೆ ಜಮೀನ್​ ಪರ್​’ (Sitaare Zameen Par) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷದ ಕ್ರಿಸ್‌ಮಸ್ ಸಂದರ್ಭದಲ್ಲಿ ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆ ಮಾಡಲು ಯೋಜಿಸುತ್ತಿದ್ದೇನೆ ಎಂದು ಆಮೀರ್ ಖಾನ್ ಬಹಿರಂಗಪಡಿಸಿದ್ದರು. ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಆಮೀರ್ ಖಾನ್ ಜೋಡಿಯಾಗಿ ಜೆನಿಲಿಯಾ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿತಾರೆ ಜಮೀನ್ ಪರ್’ ಚಿತ್ರದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ನಟ ಮಾಹಿತಿ ಹಂಚಿಕೊಳ್ಳಲಿದ್ದಾರೆ.

Continue Reading

ಸಿನಿಮಾ

The Legend of Hanuman: ಹನುಮ ಜಯಂತಿಯಂದೇ ‘ದಿ ಲೆಜೆಂಡ್ ಆಫ್ ಹನುಮಾನ್’ ಸೀಸನ್ 4 ಘೋಷಣೆ

The Legend of Hanuman: ರಾಮ ಭಕ್ತ ಹನುಮಂತನ ಕಥೆಯನ್ನು ಎಲ್ಲರೂ ಕೇಳಿದ್ದಾರೆ. ಆದರೆ ಹೊಸ ಪೀಳಿಗೆಯನ್ನು ಆಕರ್ಷಿಸಲು ಬಂದಿರುವ ದಿ ಲೆಜೆಂಡ್ ಆಫ್ ಹನುಮಾನ್ ನ ನಾಲ್ಕನೇ ಸರಣಿ ಘೋಷಣೆಯಾಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

By

The Legend of Hanuman
Koo

ಹಿಂದೂಗಳ (hindu) ಆರಾಧ್ಯ ದೇವರಾದ ಶ್ರೀ ರಾಮನ (sriram) ಭಕ್ತ ಹನುಮಾನ್ ಜನ್ಮ ದಿನದ ಶುಭ ಸಂದರ್ಭದಲ್ಲೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney Plus Hotstar) ಜನಪ್ರಿಯ ಅನಿಮೇಟೆಡ್ ಸರಣಿ ‘ದಿ ಲೆಜೆಂಡ್ ಆಫ್ ಹನುಮಾನ್’ ನ (The Legend of Hanuman) ನಾಲ್ಕನೇ ಸರಣಿಯನ್ನು ಏಪ್ರಿಲ್ 23ರಂದು ಘೋಷಣೆ ಮಾಡಿದೆ. ಹನುಮಾನ್ ಜಯಂತಿಯ ದಿನದಂದೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಈ ಘೋಷಣೆ ಮಾಡಿರುವುದು ಬಹುತೇಕ ಹನುಮಾನ್ ಭಕ್ತರಲ್ಲಿ ಸಂತಸ ತಂದಿದೆ.

ನಾಲ್ಕನೇ ಸರಣಿಯ ಕಥಾವಸ್ತುವಿನ ಕುರಿತಾದ ವಿವರಗಳನ್ನೂ ಇನ್ನೂ ಘೋಷಣೆ ಮಾಡಿಲ್ಲ. ಆದರೆ ಅಭಿಮಾನಿಗಳು ಹನುಮಂತನ ಶೌರ್ಯ, ಭಕ್ತಿ ಮತ್ತು ಅಚಲ ನಂಬಿಕೆಯ ಹೆಚ್ಚಿನ ಕಥೆಗಳನ್ನು ಇದರಲ್ಲಿ ನಿರೀಕ್ಷಿಸಬಹುದು. ಹಿಂದಿನ ಸರಣಿಯಲ್ಲಿ ಹನುಮಂತನ ಆರಂಭಿಕ ಜೀವನ, ಭಗವಾನ್ ರಾಮನೊಂದಿಗಿನ ಅವನ ಭೇಟಿ, ಲಂಕಾಕ್ಕೆ ಮಹಾಕಾವ್ಯದ ಪ್ರಯಾಣ ಮತ್ತು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತಿಮ ಯುದ್ಧವನ್ನು ವಿವರಿಸಲಾಗಿತ್ತು.

ಡಿಸ್ನಿ+ ಹಾಟ್‌ಸ್ಟಾರ್‌ಗೆ ‘ದಿ ಲೆಜೆಂಡ್ ಆಫ್ ಹನುಮಾನ್’ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿದೆ. ಕಾರ್ಯಕ್ರಮದ ಬೆರಗುಗೊಳಿಸುವ ಅನಿಮೇಷನ್, ಆಕರ್ಷಕ ಕಥೆ ಹೇಳುವಿಕೆ ಮತ್ತು ಹಿಂದೂ ಪುರಾಣಗಳ ಚಿತ್ರಣವು ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ: OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!

‘ದಿ ಲೆಜೆಂಡ್ ಆಫ್ ಹನುಮಾನ್’ ನ ಹೊಸ ಸೀಸನ್‌ನಲ್ಲಿ ನಟ ಮತ್ತು ರಾವಣನ ಧ್ವನಿ, ಶರದ್ ಕೇಳ್ಕರ್ ಅವರದ್ದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಡಿ ಲೆಜೆಂಡ್ ಆಫ್ ಹನುಮಾನ್ ನ ಹೊಸ ಸೀಸನ್‌ನಲ್ಲಿ ರಾವಣ ರಾಜನಿಗೆ ಧ್ವನಿ ನೀಡುವುದು ನನಗೆ ಆಳವಾದ ವೈಯಕ್ತಿಕ ಪ್ರಯಾಣವಾಗಿದೆ. ಒಂದು ಪೌರಾಣಿಕ ಸಿದ್ಧಾಂತವನ್ನು ಆಧರಿಸಿ ಮತ್ತು ಇದರ ಮೂಲಕ ನಾನು ಅನೇಕ ಲೇಯರಿಂಗ್ ಕಥೆಗಳನ್ನು ಕಂಡುಹಿಡಿದಿದ್ದೇನೆ. ಇದರಿಂದ ನನಗೆ ಹೆಚ್ಚು ತಿಳಿಯಲು ಸಾಧ್ಯವಾಯಿತು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ದಿ ಲೆಜೆಂಡ್ ಆಫ್ ಹನುಮಾನ್‌ನ ಹೊಸ ಸರಣಿ ಇನ್ನಷ್ಟು ಶ್ರೇಷ್ಠವಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.


ಸಾಹಸಮಯ, ಭಕ್ತಿಪ್ರಧಾನವಾದ ಹನುಮಂತನ ಜೀವನ ಕಥೆಯನ್ನು ಹೇಳುವ ಮೂರು ಸರಣಿಯನ್ನು ಇಷ್ಟಪಟ್ಟಿರುವವರು ನಾಲ್ಕನೇ ಸರಣಿಗೆ ಕುತೂಹಲದಿಂದ ಕಾಯುವಂತಾಗಿದೆ.

ರಾವಣನ ದುಷ್ಟತನವನ್ನು ಎದುರಿಸಲು, ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅವನ ದಾರಿಯಲ್ಲಿ ಎದುರಾಗುವ ವಿನಮ್ರ ರಾಮ ಭಕ್ತನಾದ ವಾನರನು ತನ್ನ ಭಕ್ತಿಯಿಂದಾಗಿಯೇ ದೇವರಾಗಿರುವ ಕಥೆಯನ್ನು ಇದು ಒಳಗೊಂಡಿದೆ. ಗ್ರಾಫಿಕ್ ಇಂಡಿಯಾ ರಚಿಸಿರುವ ಈ ಸರಣಿಗೆ ಶರದ್ ದೇವರಾಜನ್, ಜೀವನ್ ಜೆ. ಕಾಂಗ್, ಶರದ್ ಕೇಳ್ಕರ್ ಮತ್ತು ದಮನ್ ಬಗ್ಗನ್ ಧ್ವನಿ ನೀಡಿದ್ದಾರೆ.

Continue Reading

ಒಟಿಟಿ

Tillu Square: ಅನುಪಮಾ ಪರಮೇಶ್ವರನ್‌‌ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ

Tillu Square: ಸಿದ್ದು ಜೊನ್ನಲಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ನಟಿ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಚಿತ್ರತಂಡ ಇತ್ತೀಚೆಗೆ ಯಶಸ್ಸನ್ನು ಆಚರಿಸಿಲು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಜ್ಯೂನಿಯರ್‌ ಎನ್‌ಟಿಆರ್‌ ಅವರು (Jr NTR Fans) ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದೀಗ ಸಿನಿಮಾ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

VISTARANEWS.COM


on

Tillu Square anupama parameswaran movie tillu square release date
Koo

ಬೆಂಗಳೂರು: ನಟ ಸಾರ್ವಭೌಮʼ ಚಿತ್ರದ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅಭಿನಯದ ʻಟಿಲ್ಲು ಸ್ಕ್ವೇರ್’ ಸಿನಿಮಾ 100 ಕೋಟಿ ರೂ. ಗಳಿಕೆ ಕಂಡಿದ್ದು ಗೊತ್ತೇ ಇದೆ. 2002ರಲ್ಲಿ ಬಂದಿದ್ದ ʻಡಿಜೆ ಟಿಲ್ಲು’ ಚಿತ್ರದ ಮುಂದುವರಿದ ಭಾಗ ಈ `ಟಿಲ್ಲು ಸ್ಕ್ವೇರ್’. ಸಿದ್ದು ಜೊನ್ನಲಗಡ್ಡ ( Siddhu Jonnalagadda ) ಈ ಚಿತ್ರದ ನಾಯಕ. ಸಿದ್ದು ಜೊನ್ನಲಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ನಟಿ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಚಿತ್ರತಂಡ ಇತ್ತೀಚೆಗೆ ಯಶಸ್ಸನ್ನು ಆಚರಿಸಿಕೊಂಡಿತ್ತು. ಇದೀಗ ಸಿನಿಮಾ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

‘ಟಿಲ್ಲು ಸ್ಕ್ವೇರ್’ 2024, ಮಾರ್ಚ್ 29ರಂದು ರಿಲೀಸ್ ಆಗಿತ್ತು. ‘ಡಿಜೆ ಟಿಲ್ಲು’ 30 ಕೋಟಿ ರೂಪಾಯಿ ಲೂಟಿ ಮಾಡಿದ್ದರೆ, ‘ಟಿಲ್ಲು ಸ್ಕ್ವೇರ್’ ಬಾಕ್ಸಾಫೀಸ್‌ನಲ್ಲಿ ಬರೋಬ್ಬರು 125 ಕೋಟಿ ರೂಪಾಯಿ ದೋಚಿದೆ. ಈ ವರ್ಷದ ಟಾಲಿವುಡ್‌ನ ಮೋಸ್ಟ್ ಸಕ್ಸೆಸ್‌ಫುಲ್‌ ಸಿನಿಮಾ ಎನಿಸಿಕೊಂಡಿದೆ. ನೆಟ್‌ಫ್ಲಿಕ್ಸ್ ‘ಟಿಲ್ಲು ಸ್ಕ್ವೇರ್’ ಸಿನಿಮಾ ಖರೀದಿ ಮಾಡಿದೆ. ತನ್ನ ಅಫಿಶಿಯಲ್ ಎಕ್ಸ್ ಖಾತೆಯಲ್ಲಿ ಏಪ್ರಿಲ್ 26ಕ್ಕೆ ‘ಟಿಲ್ಲು ಸ್ಕ್ವೇರ್’ ರಿಲೀಸ್ ಆಗುವುದಾಗಿ ಅನೌನ್ಸ್ ಮಾಡಿದೆ. ಈ ಸಿನಿಮಾ, ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ: Tillu Square: 100 ಕೋಟಿ ರೂ. ಗಳಿಕೆ ಕಂಡ ಅನುಪಮಾ ಪರಮೇಶ್ವರನ್ ಸಿನಿಮಾ

`ಟಿಲ್ಲು ಸ್ಕ್ವೇರ್’ ಒಳ್ಳೆಯ ಕಥಾಹಂದರ ಮತ್ತು ಆಕರ್ಷಕ ಪ್ರದರ್ಶನ ಪ್ರೇಕ್ಷಕರನ್ನು ಮೋಡಿ ಮಾಡಿತ್ತು.
ಟಿಲ್ಲು ಸ್ಕ್ವೇರ್‌ನ ನಿರ್ಮಾಪಕರ ಇತ್ತೀಚಿನ ವರದಿಗಳ ಪ್ರಕಾರ, ಚಿತ್ರವು ಈಗಾಗಲೇ ಕೇವಲ 9 ದಿನಗಳಲ್ಲಿ ವಿಶ್ವಾದ್ಯಂತ 100 ಕೋಟಿ ರೂಪಾಯಿಗಳನ್ನು ದಾಟಿದೆ. ತೆಲುಗು ಚಿತ್ರ ಟಿಲ್ಲು ಸ್ಕ್ವೇರ್ 100 ಕೋಟಿ ಗಳಿಸಿದ ಮೊದಲ ಹಾಸ್ಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ʻಜಾತಿ ರತ್ನಲುʼ ಸಿನಿಮಾ ಈ ಮುಂಚೆ ದಾಖಲೆ ಮಾಡಿತ್ತು.

ಟಿಲ್ಲು ಸ್ಕ್ವೇರ್ ಚಿತ್ರವನ್ನ ಮಲ್ಲಿಕ್ ರಾಮ್ ನಿರ್ದೇಶಿಸಿದ್ದಾರೆ. ಸೂರ್ಯದೇವರ ನಾಗ ವಂಶಿ ಹಾಗೂ ಸಾಯಿ ಸೌಜನ್ಯ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. `ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಸಖತ್ ಬೋಲ್ಡ್ ದೃಶ್ಯಗಳು ಇವೆ.

Continue Reading
Advertisement
ಕ್ರೈಂ31 seconds ago

Child Welfare commission: ಅಕ್ರಮವಾಗಿ ಸಾಗಿಸುತ್ತಿದ್ದ 95 ಮಕ್ಕಳ ರಕ್ಷಣೆ

jai sriram slogan viral news
ವೈರಲ್ ನ್ಯೂಸ್16 mins ago

Jai SriRam Slogan: ಉತ್ತರಪತ್ರಿಕೆಯಲ್ಲಿ `ಜೈ ಶ್ರೀರಾಮ್’ ಬರೆದ ವಿದ್ಯಾರ್ಥಿಗಳು ಪಾಸ್;‌ ಪ್ರಾಧ್ಯಾಪಕರು ವಜಾ!

Ayushman Bharat Yojana
ಆರೋಗ್ಯ26 mins ago

 Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Sushant Singh Rajput
ಬಾಲಿವುಡ್35 mins ago

Sushant Singh Rajput: ಸುಶಾಂತ್‌ ಸಿಂಗ್‌ ಸಾವಿಗೆ ನ್ಯಾಯಕ್ಕಾಗಿ ಆನ್‌ಲೈನ್ ಅಭಿಯಾನ ಶುರು ಮಾಡಿದ ಸಹೋದರಿ!

donkey milk
ವಾಣಿಜ್ಯ1 hour ago

Donkey milk: ಕತ್ತೆ ಹಾಲು ಲೀಟರ್‌ಗೆ 7000 ರೂ! ಈ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌?

ವಿದೇಶ1 hour ago

US Sanction: ಭಾರತೀಯ ಮೂಲದ 3 ಕಂಪನಿಗಳಿಗೆ ಅಮೆರಿಕ ನಿರ್ಬಂಧ

Kalki 2898 AD to release on this date
ಟಾಲಿವುಡ್1 hour ago

Kalki 2898 AD: ಪ್ರಭಾಸ್, ದೀಪಿಕಾ, ಅಮಿತಾಭ್‌ ಮುಖ್ಯಭೂಮಿಕೆಯ ʻಕಲ್ಕಿ 2898 ADʼ ರಿಲೀಸ್‌ ಡೇಟ್‌ ಅನೌನ್ಸ್‌!

nota vote
ಪ್ರಮುಖ ಸುದ್ದಿ1 hour ago

NOTA: ಅತಿ ಹೆಚ್ಚು `ನೋಟಾ’ ಬಿದ್ದರೆ ಹೊಸ ಚುನಾವಣೆ ಮಾಡಬಹುದೇ? ಸುಪ್ರೀಂ ಪ್ರಶ್ನೆ

anjali nimbalkar
ಉತ್ತರ ಕನ್ನಡ2 hours ago

Anjali Nimbalkar: ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ನೆರವಾದ ಅಂಜಲಿ ನಿಂಬಾಳ್ಕರ್

ದೇಶ2 hours ago

Physical abuse: ಲೈಂಗಿಕ ಕಿರುಕುಳ ಕೇಸ್‌; ಅರ್ಜುನ ಪ್ರಶಸ್ತಿ ಪುರಸ್ಕೃತ ಅಧಿಕಾರಿ ವಜಾ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ22 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202422 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202423 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

ಟ್ರೆಂಡಿಂಗ್‌