ಪ್ರಮುಖ ಸುದ್ದಿ
Rashmika Mandanna | ಕೊನೆಗೂ ರಕ್ಷಿತ್ ಶೆಟ್ಟಿ- ರಿಷಬ್ ಶೆಟ್ಟಿ ಕುರಿತು ತುಟಿ ಬಿಚ್ಚಿದ ನ್ಯಾಷನಲ್ ಕ್ರಷ್! ಏನ್ ಹೇಳಿದ್ರು?
ಇತ್ತೀಚೆಗೆ ಹಲವು ಕಾರಣಗಳಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ʼನ್ಯಾಷನಲ್ ಕ್ರಷ್ʼ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಹಳೆಯ ಸಹನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಬಗ್ಗೆ ತುಟಿ ಬಿಚ್ಚಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಹಲವು ಕಾರಣಗಳಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ʼನ್ಯಾಷನಲ್ ಕ್ರಷ್ʼ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಹಳೆಯ ಸಹನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಬಗ್ಗೆ ತುಟಿ ಬಿಚ್ಚಿದ್ದಾರೆ.
ಇದೀಗ ಅವರ ಹೊಸ ಹೇಳಿಕೆ ಯೂಟ್ಯೂನ್‌ನಲ್ಲಿ ಸದ್ದು ಮಾಡುತ್ತಿದೆ. ಪ್ರೇಮಾ ಜರ್ನಲಿಸ್ಟ್ ಎಂಬ ಯೂಟ್ಯೂಬ್ ಸಂದರ್ಶನಕಾರ್ತಿಗೆ ನೀಡಿರುವ ಸಂದರ್ಶನದಲ್ಲಿ ಮಾತಾಡಿರುವ ರಶ್ಮಿಕಾ, ಕನ್ನಡ ಚಿತ್ರರಂಗವನ್ನು ನೆನಪು ಮಾಡಿಕೊಂಡಿದ್ದಾರೆ. ತಮಗೆ ಸಿನಿಮಾ ಇಂಡಸ್ಟ್ರಿಗೆ ದಾರಿ ತೋರಿಸಿದ್ದೇ ರಕ್ಷಿತ್ ಮತ್ತು ರಿಷಬ್ ಶೆಟ್ಟಿ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Rashmika Mandanna | ನನಗೆ ಮನರಂಜನೆ ನೀಡುವುದಷ್ಟೇ ಕೆಲಸ: ರಶ್ಮಿಕಾ ಮಂದಣ್ಣ
ಕನ್ನಡದಿಂದ ವೃತ್ತಿಜೀವನ ಆರಂಭಿಸಿ ಬಾಲಿವುಡ್‌ವರೆಗೆ ಬೆಳೆದು ನಿಂತರೂ ಎಲ್ಲಿಯೂ ಕನ್ನಡದ ಬಗ್ಗೆ ಕೃತಜ್ಞತೆಯ ಮಾತುಗಳನ್ನು ಇದುವರೆಗೂ ರಶ್ಮಿಕಾ ಆಡಿರಲಿಲ್ಲ. ಮಾತ್ರವಲ್ಲ, ಟಿವಿ ಸಂದರ್ಶನವೊಂದರಲ್ಲಿ ರಿಷಬ್- ರಕ್ಷಿತ್ ಜೋಡಿಯ ಚಿತ್ರನಿರ್ಮಾಣ ಸಂಸ್ಥೆಯ ಬಗೆಗೆ ಅದರ ಹೆಸರೂ ಹೇಳದೇ ಸನ್ನೆಯಲ್ಲಿ ಸೂಚಿಸಿದ್ದರು. ʼಕಿರಿಕ್ ಪಾರ್ಟಿʼಯ ನಂತರ ಜನಪ್ರಿಯತೆಗೆ ಬಂದಿದ್ದ ಅವರು ಎಲ್ಲಿಯೂ ಅದನ್ನು ನೆನೆದುಕೊಂಡಿರಲಿಲ್ಲ. ಹೀಗಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ಬಹುಭಾಷಾ ನಟಿಯಾಗಿ ಹೊರಹೊಮ್ಮಿರುವ ರಶ್ಮಿಕಾಗೆ ತೆಲುಗು, ತಮಿಳು, ಹಿಂದಿಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಇತ್ತೀಚೆಗೆ ತಮಿಳಿನ ವಿಜಯ್ ಜತೆಗೆ ಅವರು ನಟಿಸಿರುವ ʼವಾರಿಸುʼ ಫಿಲಂ ಕನ್ನಡ ಹೊರತುಪಡಿಸಿ ಉಳಿದ ಕೇಂದ್ರಗಳಲ್ಲಿ ಚೆನ್ನಾಗಿ ಓಡುತ್ತಿದೆ. ಆದರೆ ಕನ್ನಡಿಗರು ಬಹುತೇಕ ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಕಾರಣ ರಶ್ಮಿಕಾ ಎನ್ನಲಾಗಿತ್ತು. ಇದು ಕರಿಯರ್‌ನಲ್ಲಿ ರಶ್ಮಿಕಾಗೆ ಉಂಟಾದ ಹಿನ್ನಡೆ. ಇದೀಗ ಅವರ ಹೊಸ ಹೇಳಿಕೆ ಟ್ರೋಲ್ ಮತ್ತು ವಿವಾದಗಳಿಗೆ ಕಡಿವಾಣ ಹಾಕುತ್ತಾ ಕಾಯ್ದು ನೋಡಬೇಕಿದೆ.
ಇದನ್ನೂ ಓದಿ | Rashmika Mandanna | ಕನ್ನಡದಲ್ಲೇ ಸಂಕ್ರಾಂತಿ ವಿಶ್ ಮಾಡಿದ್ರೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ!
ಕೋರ್ಟ್
Supreme Court: ಜಡ್ಜ್ ನೇಮಕಾತಿ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ! 10 ತಿಂಗಳಾದ್ರೂ ಶಿಫಾರಸು ಕ್ಲಿಯರ್ ಮಾಡಿಲ್ಲ ಸರ್ಕಾರ
Supreme Court: ಜಡ್ಜ್ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಶಿಫಾರಸು ಮಾಡಿರುವ ಹೆಸರಗಳನ್ನು ವಾಪಸ್ ಕೊಲಿಜಿಯಂಗೆ ಕಳುಹಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ.
ನವದೆಹಲಿ: ಜಡ್ಜ್‌ಗಳ ನೇಮಕಾತಿ ವಿಷಯಕ್ಕೆ (Appointment of Judges) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಹಾಗೂ ಕೇಂದ್ರ ಸರ್ಕಾರ (Central Government) ನಡುವೆ ಮತ್ತೊದು ಸುತ್ತಿನ ಜಟಾಪಟಿ ಶುರುವಾಗುವ ಸಾಧ್ಯತೆಗಳಿವೆ. ಹೈಕೋರ್ಟ್ ಶಿಫಾರಸಗಳನ್ನು (High court Recommendations) ಕೊಲಿಜಿಯಂಗೆ (Collegium) ಏಕೆ ಕಳುಹಿಸಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರು ಅಂತಿಮಗೊಳಿಸುವ ಸಂಬಂಧ ಕೇಂದ್ರ ಸರ್ಕಾರವು ವಿಳಂ ಧೋರಣೆಯನ್ನು ಅನುಸರಿಸುತ್ತಿದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿದ್ದ ಪೀಠವು ಹೇಳಿದೆ. ಅಲ್ಲದೇ ಈ ವಿಷಯವನ್ನು ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದೆ.
ಹೆಸರುಗಳನ್ನು ತೆರವುಗೊಳಿಸುವಲ್ಲಿ ಕೇಂದ್ರವು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು. ಹೈಕೋರ್ಟ್‌ನಿಂದ ಶಿಫಾರಸು ಮಾಡಿದ 80 ಹೆಸರುಗಳು 10 ತಿಂಗಳ ಅವಧಿಗೆ ಬಾಕಿ ಉಳಿದಿವೆ ಎಂದು ನ್ಯಾಯಮೂರ್ತಿ ಕೌಲ್ ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಹೇಳಿದರು.
ಹೆಸರನ್ನು ತೆರವುಗೊಳಿಸುವುದರಲ್ಲಿ ಕೇಂದ್ರ ಸರ್ಕಾರದ ವಿಳಂಭವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು, 26 ನ್ಯಾಯಾಧೀಶರ ವರ್ಗಾವಣೆ ಮತ್ತು ‘ಸೂಕ್ಷ್ಮ ಹೈಕೋರ್ಟ್’ನಲ್ಲಿ ಮುಖ್ಯ ನ್ಯಾಯಮೂರ್ತಿ ನೇಮಕ ಬಾಕಿ ಇದೆ ಎಂದು ಪೀಠ ಹೇಳಿದೆ. ಹೈಕೋರ್ಟ್ ಶಿಫಾರಸು ಮಾಡಿದ್ದರೂ ಕೊಲಿಜಿಯಂಗೆ ಕಳುಹಿಸಲಾಗದ ಎಷ್ಟು ಹೆಸರುಗಳು ಬಾಕಿ ಉಳಿದಿವೆ ಎಂಬ ಮಾಹಿತಿ ನನ್ನ ಬಳಿ ಇದೆ ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.
ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಕೇಂದ್ರ ಸರ್ಕಾರದ ಪ್ರತಿಕ್ರಿಯೆಗೆ ವಾರ ಕಾಲ ಸಮಯ ಕೇಳಿದರು. ಪೀಠವು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಸಮಯವನ್ನು ನೀಡಿದೆ. ಅಲ್ಲದೇ, ಕೇಂದ್ರ ಸರ್ಕಾರದ ಪ್ರತಿಕ್ರಿಯೆಯೊಂದಿಗೆ ಮರಳಬೇಕು ಎಂದು ಅಟಾರ್ನಿ ಜನರಲ್‌ಗೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿತು.
ಈ ಸುದ್ದಿಯನ್ನೂ ಓದಿ: Supreme Court: ಮುಸ್ಲಿಂ ಬಾಲಕನಿಗೆ ಶಾಲೆಯಲ್ಲಿ ಕಪಾಳ ಮೋಕ್ಷ, ಇದು ದೇಶದ ಅಂತಃಸಾಕ್ಷಿ ಅಲುಗಾಡಿಸುವ ಕೇಸ್!
ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನಡೆದುಕೊಳ್ಳುತ್ತಿರುವ ರೀತಿಗೆ ನಾನು ಬಹಳಷ್ಟು ಹೇಳಬೇಕಿದೆ. ಆದರೆ, ನನ್ನಷ್ಟಕ್ಕೆ ತಡೆದುಕೊಳ್ಳುತ್ತಿದ್ದೇನೆ. ನಾನು ಶಾಂತವಾಗಿದ್ದೇನೆ. ಯಾಕೆಂದರೆ, ಅಟಾರ್ನಿ ಜನರಲ್ ಒಂದು ವಾರ ಸಮಯ ಕೇಳಿದ್ದಾರೆ. ಆದರೆ, ಮುಂದಿನ ದಿನಾಂಕದಲ್ಲಿ ನಾನು ಸುಮ್ಮನೆ ಇರಲಾರೆ ಎಂದು ಜಸ್ಟೀಸ್ ಕೌಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ನ್ಯಾಯಮೂರ್ತಿಗಳ ನೇಮಕಾತಿ ವಿಷಯವು ಯಾವಾಗಲೂ ಸುಪ್ರೀಂ ಕೋರ್ಟ್ ಹಾಗೂ ಕಾರ್ಯಾಂಗದ ನಡುವಿನ ಜಟಾಪಟಿ ವಿಷಯವಾಗಿ ಮಾರ್ಪಟ್ಟಿದೆ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಇರಬೇಕು ಎಂದು ಕೆಲವು ಕೇಂದ್ರ ಸಚಿವರು ವಾದಿಸುತ್ತಾರೆ. ನ್ಯಾಯಾಧೀಶರ ನೇಮಕಾತಿಯಲ್ಲಿ ಸರ್ಕಾರದ ದೊಡ್ಡ ಪಾತ್ರವನ್ನು ನೀಡುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 2015 ರಲ್ಲಿ ರದ್ದುಗೊಳಿಸಿತ್ತು.
ಕ್ರಿಕೆಟ್
World Cup 2023 : ಮುಂಬರುವ ವಿಶ್ವ ಕಪ್ ಮಿಸ್ ಮಾಡಿಕೊಳ್ಳಲಿರುವ ಸ್ಟಾರ್ ಪ್ಲೇಯರ್ಗಳ ಲಿಸ್ಟ್ ಇಲ್ಲಿದೆ
ಅಕ್ಟೋಬರ್ 5ರಿಂದ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವ ಕಪ್ ವಿಶ್ವ ಕಪ್ ನಡೆಯಲಿದೆ. ಬಹುತೇಕ ತಂಡಗಳು ಈಗಾಗಲೇ ಭಾರತಕ್ಕೆ ಬಂದು ಬೀಡುಬಿಟ್ಟಿವೆ.
ನವ ದೆಹಲಿ: ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್ಗೆ ಮುಂಚಿತವಾಗಿ ಎಲ್ಲ ತಂಡಗಳಲ್ಲಿ ಗಾಯದ ಆತಂಕ ಎದುರಾಗಿವೆ. ಕಳೆದ ಆವೃತ್ತಿಯ ಟಿ 20 ಏಷ್ಯಾ ಕಪ್ನ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದ ಶ್ರೀಲಂಕಾದ ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗ ಅವರು ಮೆಗಾ ಟೂರ್ನಮೆಂಟ್ನಿಂದ ಹೊರಗುಳಿಯುವ ಕ್ರಿಕೆಟಿಗರ ಪಟ್ಟಿಗೆ ಸೇರಿಕೊಂಡಿದ್ದಾರೆ.
ಹಸರಂಗ ಹೊರತುಪಡಿಸಿ, ಶ್ರೀಲಂಕಾ ಕೂಡ ವಿಶ್ವಕಪ್ನಲ್ಲಿ ದುಷ್ಮಂತ ಚಮೀರಾ ಅವರ ಸೇವೆಯನ್ನು ಕಳೆದುಕೊಳ್ಳಲಿದೆ. ಹೀಗಾಗಿ ಯುವ ಆಟಗಾರರಾದ ಮಹೀಶ್ ತೀಕ್ಷಣ, ಮತೀಶಾ ಪತಿರಾನಾ ಮತ್ತು ದಿಲ್ಶಾನ್ ಮಧುಶಂಕಾ ಅವರನ್ನು ತಂಡ ಅಲಂಭಿಸಿದೆ.
ಇದೇ ರೀತಿ ಟೂರ್ನಿಯಲ್ಲಿ ಆಡಲಿರುವ ಹಲವು ತಂಡಗಳಲ್ಲಿ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನೋರ್ಜೆ , ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಮತ್ತು ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಶಾ ಕೂಡ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಇದೇ ವೇಲೆ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಜೇಸನ್ ರಾಯ್ ಅವರನ್ನು ಕೊನೆಯ ಕ್ಷಣದಲ್ಲಿ ತಂಡದಿಂದ ಕೈಬಿಡಲಾಗಿದೆ. ಹ್ಯಾರಿ ಬ್ರೂಕ್ ಅವರನ್ನು ಅವರ ಬದಲಿ ಆಟಗಾರನಾಗಿ ಘೋಷಿಸಲಾಗಿದೆ. ದಕ್ಷಿಣ ಆಫ್ರಿಕಾದ ಆಂಡಿಲೆ ಫೆಹ್ಲುಕ್ವಾಯೊ ಮತ್ತು ಲಿಜಾದ್ ವಿಲಿಯಮ್ಸ್ ಅವರನ್ನು ಬದಲಿ ಆಟಗಾರರಾಗಿ ದಕ್ಷಿಣ ಆಫ್ರಿಕಾ ಹೆಸರಿಸಿದೆ. ಆಫ್ರಿಕಾ ತಂಡದ ಸಿಸಾಂಡಾ ಮಗಲಾ ಅವರೂ ತಂಡದಲ್ಲಿ ಇಲ್ಲ.
ಇದನ್ನೂ ಓದಿ : Asia Cup 2023 : ಏಕ ದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಕಳಪೆ ಸಾಧನೆ ಮಾಡಿದ ಶ್ರೀಲಂಕಾ ತಂಡ
ನ್ಯೂಜಿಲೆಂಡ್ ವಿಚಾರಕ್ಕೆಬಂದಾಗ ನಾಯಕ ಕೇನ್ ವಿಲಿಯಮ್ಸನ್ 2023 ರ ಐಪಿಎಲ್ ಸಮಯದಲ್ಲಿ ಗಾಯಕ್ಕೆ ಒಳಗಾಗಿದ್ದರು. ಅಲ್ಲಿಂದ ಇನ್ನೂ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ. ಅವರನ್ನು ನ್ಯೂಜಿಲೆಂಡ್ನ ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿದೆ ಆದರೆ ಅವರ ಫಿಟ್ನೆಸ್ ಅನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಇದಲ್ಲದೆ, ವೇಗಿ ಟಿಮ್ ಸೌಥಿ ಇತ್ತೀಚೆಗೆ ಹೆಬ್ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ, ಇದು ಅವರನ್ನು ಸ್ಪರ್ಧೆಯಿಂದ ಹೊರಗುಳಿಯುವಂತೆ ಮಾಡುತ್ತದೆ. ಮೈಕೆಲ್ ಬ್ರೇಸ್ವೆಲ್ ಅವರೂ ಗಾಯದ ಕಾರಣಕ್ಕೆ ತಂಡಿಂದ ಹೊರಗುಳಿದಿದ್ದಾರೆ.
ಭಾರತದಲ್ಲಿ ಯಾರಿಲ್ಲ?
ಭಾರತದಿಂದ ರಿಷಭ್ ಪಂತ್ ಅವಕಾಶ ಕಳೆದುಕೊಂಡ ಪ್ರಮುಖ ಆಟಗಾರ. ಕಳೆದ ವರ್ಷ ಕಾರು ಅಪಘಾತದಲ್ಲಿ ಅನುಭವಿಸಿದ ಅನೇಕ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಟೂರ್ನಿಇಂದ ಹೊರಗುಳಿಯಲಿದ್ದಾರೆ. ಪ್ರಮುಖ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕರೆ ಪಡೆಯಲು ವಿಫಲರಾಗಿದ್ದಾರೆ. ಪ್ರಸ್ತುತ, ಅಕ್ಷರ್ ಪಟೇಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ವಿಶ್ವಕಪ್ಗೆ ಫಿಟ್ ಆಗುವ ನಿರೀಕ್ಷೆಯಿದೆ.
ಆಸ್ಟ್ರೇಲಿಯಾ ತಂಡದ ಪರ ಟ್ರಾವಿಸ್ ಹೆಡ್ ಪ್ರಸ್ತುತ ಕೈ ಗಾಯದಿಂದ ಬಳಲುತ್ತಿರುವುದರಿಂದ ಅವರ ವಿಶ್ವ ಕಪ್ ಭವಿಷ್ಯವೂ ಗೊಂದಲದಲ್ಲಿದೆ. ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಇಡೀ ಪಂದ್ಯಾವಳಿಯಲ್ಲದಿದ್ದರೂ ವಿಶ್ವಕಪ್ನ ಕೆಲವು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಸ್ತುತ ವಿಶ್ವಕಪ್ ತಂಡದ ಭಾಗವಲ್ಲದ ಮರ್ನಸ್ ಲಾಬುಶೇನ್ ತಂಡಕ್ಕೆ ಸೇರ್ಪಡೆಗೊಳ್ಳುವ ಅವಕಾಶಗಳಿವೆ.
ಕರ್ನಾಟಕ
Cauvery Dispute : 3000 ಕ್ಯೂಸೆಕ್ ನೀರು ಬಿಡುಗಡೆ ಆದೇಶವನ್ನೂ ಪಾಲಿಸುತ್ತಾ ಸರ್ಕಾರ?; ಸಿಎಂ ಹೇಳಿದ್ದೇನು?
Cauvery Dispute: 18 ದಿನಗಳ ಕಾಲ 3000 ಕ್ಯೂಸೆಕ್ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ರಾಜ್ಯ ಸರ್ಕಾರ ಪ್ರಾಧಿಕಾರದಲ್ಲಿ ಪ್ರಶ್ನಿಸುವುದು ಖಚಿತವಾಗಿದೆ. ಅದರೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ ಎಂಬ ಒತ್ತಡವಿದೆ.
ಬೆಂಗಳೂರು: ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನವೂ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು (Cauvery Dispute) ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery water regulation Committee) ಆದೇಶವನ್ನೂ ಈ ಹಿಂದಿನಂತೆ ರಾಜ್ಯ ಸರ್ಕಾರ (Karnataka Government) ಪಾಲನೆ ಮಾಡುತ್ತದಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕಾವೇರಿ ನಿಗಮ ಇದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ (Cauvery water Management Authority) ಪ್ರಶ್ನಿಸಲಾಗುವುದು ಎಂದು ಹೇಳಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕಾನೂನಾತ್ಮಕ ವಿಚಾರಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸಮಿತಿ ಆದೇಶವನ್ನು ಪ್ರಾಧಿಕಾರದಲ್ಲಿ ಪ್ರಶ್ನೆ: ಕಾವೇರಿ ನೀರು ನಿಗಮ
ಕರ್ನಾಟಕ ತಾನು ಎದುರಿಸುತ್ತಿರುವ ಪರಿಸ್ಥಿತಿಯನ್ನು ವಿವರಿಸಿದರೂ ಸಮಿತಿ ನೀರು ಬಿಡಲೇಬೇಕು ಎಂದು ಪಟ್ಟು ಹಿಡಿದು ಆದೇಶ ನೀಡಿರುವುದನ್ನು ಪ್ರಾಧಿಕಾರದ ಮುಂದೆ ಪ್ರಶ್ನೆ ಮಾಡಲಿದ್ದೇವೆ ಎಂದು ಕಾವೇರಿ ನೀರು ನಿಗಮದ ವ್ಯವಸ್ಥಾಪನಾ ನಿರ್ದೇಶಕ ಮಹೇಶ ಅವರು ಹೇಳಿದ್ದಾರೆ.
ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದೆವು. ಆದರೂ ನೀರು ಹರಿಸಲು ಸೂಚನೆ ನೀಡಿದ್ದಾರೆ. ಹೀಗಾಗಿ ನಾವು ಆದೇಶವನ್ನು ಪ್ರಶ್ನೆ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಕಾವೇರಿ ನೀರು ನಿಯಂತ್ರಣ ಮಂಡಳಿಯು ಸೆ. 13ರಂದು ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತ್ತು. ಮುಂದಿನ ಪ್ರಾಧಿಕಾರ ಸಭೆ ಮತ್ತು ಸುಪ್ರೀಂಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಇದನ್ನು ಎತ್ತಿಹಿಡಿಯಲಾಗಿತ್ತು. ಈ ಆದೇಶ ಸೆ. 28ರವರೆಗೆ ಅನ್ವಯವಾಗಿತ್ತು.
ಈ ನಡುವೆ, ರಾಜ್ಯದಿಂದ ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಬೆಂಗಳೂರು ಬಂದ್ ಮತ್ತು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅದರ ನಡುವೆಯೇ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯು ಮತ್ತೆ 18 ದಿನಗಳ ಕಾಲ ಪ್ರತಿ ದಿನ 3000 ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶಿಸಿದೆ.
ಇದನ್ನೂ ಓದಿ: Bangalore Bandh: ಸು.ಕೋರ್ಟ್ ಗಮನ ಸೆಳೆಯಲು ಬೀದಿ ಹೋರಾಟವೇ ಬೇಕು; ಬಂದ್ ಸಮರ್ಥಿಸಿದ ಬೊಮ್ಮಾಯಿ
ಕರ್ನಾಟಕವು ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವುದು, 195 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಕಾವೇರಿ ಕೊಳ್ಳದ ಬಹುತೇಕ ತಾಲೂಕುಗಳು ಬರ ಎದುರಿಸುತ್ತಿರುವುದು, ನೀರಿನ ಒಳಹರಿವು ಕಡಿಮೆಯಾಗುತ್ತಿರುವುದು ಮೊದಲಾದ ಎಲ್ಲ ಸಂಗತಿಗಳನ್ನು ವಿವರಿಸಿತ್ತು. ಆದರೂ ಸಮಿತಿ ನೀರು ಬಿಡುಗಡೆ ಮಾಡಲೇಬೇಕು ಎಂದು ತಿಳಿಸಿರುವುದರಿಂದ ಅದನ್ನು ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡಲಾಗುತ್ತದೆ ಎಂದು ಮಹೇಶ್ ತಿಳಿಸಿದರು.
ಕಾನೂನಾತ್ಮಕ ಕ್ರಮಗಳ ಬಗ್ಗೆ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ನಡುವೆ, ತಮಿಳುನಾಡಿಗೆ 300 ಕ್ಯೂಸೆಕ್ಸ್ ನೀರು ಹರಿಸುವ ಕುರಿತು ಸಮಿತಿ ಯ ತೀರ್ಪಿನ ಕುರಿತು ನಮ್ಮ ಕಾನೂನು ತಂಡದ ತಜ್ಞರೊಂದಿಗೆ ಕಾನೂನಾತ್ಮಕವಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಮೈಸೂರಿನಲ್ಲಿ ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಕಾವೇರಿ ನೀರು ನಿಯಂತ್ರಣ ಸಮಿತಿಯು 15 ದಿನಗಳವರೆಗೆ ಪುನಃ 3000 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಆದೇಶ ಮಾಡಿದ್ದು, ಸೆಪ್ಟೆಂಬರ್ 27 ರವರೆಗೆ ಆದೇಶ ಜಾರಿಯಲಿದೆ. ಚರ್ಚಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಕೆಗೆ ಸಲಹೆ
ಈ ನಡುವೆ, ಬಿಜೆಪಿ ಮತ್ತು ಜಾತ್ಯತೀತ ಜನತಾದಳಗಳು ಈ ಆದೇಶವನ್ನು ಒಪ್ಪಬಾರದು, ಸಮಿತಿ ಅಸಂಬದ್ಧ ಆದೇಶಗಳ ವಿರುದ್ಧ ನಾವೇ ಮೊದಲಾಗಿ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ದಾವೆಯನ್ನು ಸಲ್ಲಿಸಬೇಕು. ಆಗ ನಮ್ಮ ಅಂಶಗಳನ್ನು ಸ್ಪಷ್ಟವಾಗಿ ವಾದ ಮಾಡಲು ಅವಕಾಶವಾಗುತ್ತದೆ ಎಂದು ಹೇಳಿವೆ.
Fact Check
Fact Check: ಕೇರಳ ಯೋಧನ ಮೇಲೆ ಪಿಎಫ್ಐ ದಾಳಿ! ಪ್ರಸಿದ್ಧಿಗಾಗಿ ‘ಫೇಕ್’ ಅಟ್ಯಾಕ್ ಕತೆ ಕಟ್ಟಿದ್ನಾ ಸೈನಿಕ?
Fact Check: ಆರು ಜನರು ತನ್ನ ಮೇಲೆ ದಾಳಿ ನಡೆಸಿ, ಬೆನ್ನ ಮೇಲೆ ಪಿಎಫ್ಐ ಎಂದು ಬರೆದಿದ್ದಾರೆಂದು ಭಾರತೀಯ ಸೇನೆಯ ಯೋಧ ಕೇರಳ ಪೊಲೀಸರಿಗೆ ದೂರು ನೀಡಿದ್ದ. ವಿಚಾರಣೆ ನಡೆಸಿದಾಗ ಪಿಎಫ್ಐ ಫೇಕ್ ಅಟ್ಯಾಕ್ ಕತೆ ಬಯಲಾಗಿದೆ.
ನವದೆಹಲಿ: ಕೇರಳದಲ್ಲಿ ನಿಷೇಧಿತ ಪಿಎಫ್ಐ ಭಾರತೀಯ ಸೇನಾ ಯೋಧನ ಮೇಲೆ ದಾಳಿ (PFI Attack) ನಡೆಸಿದ ಸುದ್ದಿ ಎರಡ್ಮೂರು ದಿನಗಳಿಂದ ಭಾರೀ ವೈರಲ್ ಆಗಿತ್ತು. ಆದರೆ, ಅದು ಫೇಕ್ ಘಟನೆ ಎಂದು ಸಾಬೀತಾಗಿದ್ದು, ಕೇರಳ ಪೊಲೀಸರು (Kerala Police) ‘ಸಂತ್ರಸ್ತ’ ಯೋಧ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ‘ಸಂತ್ರಸ್ತ’ ಯೋಧ (Indian Army Soldier) ತನ್ನ ಮನೆಯ ಸಮೀಪ ಆರು ಮಂದಿ ಹಲ್ಲೆ ನಡೆಸಿದ್ದಾರೆ ಮತ್ತು ತನ್ನ ಬೆನ್ನ ಮೇಲೆ ‘ಪಿಎಫ್ಐ’ ಎಂದು ಬರೆಯಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಈ ಕುರಿತು ವಿಚಾರಣ ನಡೆದಾಗ, ದಿಢೀರ್ ಖ್ಯಾತಿ ಗಳಿಸಲು ಯೋಧನೇ ಈ ರೀತಿಯ ಫೇಕ್ ಪಿಎಫ್ಐ ದಾಳಿ ಘಟನೆ ರೂಪಿಸಿದ್ದು ಬಹಿರಂಗವಾಗಿದೆ(Fact Check).
ಕೇರಳದ ಕೊಲ್ಲಮ್ ಜಿಲ್ಲೆ ಹಿರಿಯ ಪೊಲೀಸ್ ಅಧಿಕಾರಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಅರೆಸ್ಟ್ ಮಾಡಿಲ್ಲ. ಆದರೆ, ಯೋಧ ಶೈನ್ ಕುಮಾರ್ ಮತ್ತು ಆತನ ಗೆಳೆಯನನ್ನು ವಶಕ್ಕೆ ಪಡೆದುಕೊಂಡು ಹೇಳಿಕೆಯನ್ನು ದಾಖಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅವರ ಹೇಳಿಕೆಗಳನ್ನು, ವಿಷಯಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ದಿಢೀರ್ ಪ್ರಸಿದ್ಧಿಯನ್ನು ಪಡೆಯುವುದಕ್ಕಾಗಿ ಶೈನ್ ಕುಮಾರ್ ಪ್ರಸಿದ್ಧರಾಗಲು ಬಯಸಿದ್ದರು. ಅದಕ್ಕಾಗಿಯೇ ಈ ಪಿಎಫ್ಐ ದಾಳಿಯ ಫೇಕ್ ಕೃತ್ಯವನ್ನು ಮಾಡಿದ್ದರು ಎಂದು ಯೋಧನ ಸ್ನೇಹಿತ ಹೇಳಿದ್ದಾನೆ. ಆತನ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ.
ಯೋಧ ಶೈನ್ ಕುಮಾರ್ ಅವರು ಕಡಕ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ಅವರ ದೂರು ಸುಳ್ಳು ಎಂದು ತಿಳಿದುಬಂದಿದೆ. ಅದರ ಆಧಾರದ ಮೇಲೆ ಈಗ ಯೋಧ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಘಟನೆಯಿಂದ ದೇಶದ ಗಮನ ಸೆಳೆಯಲು ತನಗೆ ಬೇಕಾದ ಪೋಸ್ಟಿಂಗ್ ಪಡೆಯಲು ಶೈನ್ ಕುಮಾರ್ ಮುಂದಾಗಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಕೊಲ್ಲಮ್ ಗ್ರಾಮಾಂತರದ ಹೆಚ್ಚುವರಿ ಎಸ್‌ಪಿ ಆರ್ ಪ್ರತಾಪನ್ ನಾಯರ್ ಹೇಳಿದ್ದಾರೆ.
ಈ ಕೃತ್ಯಕ್ಕೆ ಬಳಸಲಾದ ಹಸಿರು ಪೇಂಟ್, ಬ್ರಷ್ ಮತ್ತು ಟೇಪ್ ಅನ್ನು ಶೈನ್ ಕುಮಾರ್ ಸ್ನೇಹಿತನ ಮನೆಯಿಂದ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಎಎಫ್ ದಾಳಿ ನಡದೆ ರೀತಿ ಹೇಗೆ?
ಶೈನ್ ಕುಮಾರ್ ಅವರು ಹೇಗೆ ಪಿಎಫ್ಐ ನಕಲಿ ದಾಳಿಯ ಕೃತ್ಯವನ್ನು ಜಾರಿಗೆ ತಂದರು ಕತೆಯನ್ನು ಆತನ ಸ್ನೇಹಿತ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. “ನಾನು ಕುಡಿದಿದ್ದೆ, ಆದ್ದರಿಂದ ನಾನು ಆರಂಭದಲ್ಲಿ ಡಿಎಫ್‌ಐ ಅನ್ನು ಬರೆದ. ಆದರೆ ಅವನು (ಕುಮಾರ್) ಪಿಎಫ್‌ಐ ಬರೆಯಲು ಹೇಳಿದ. ಹಾಗಾಗಿ ನಾನು ಅದನ್ನು ಪಿಎಫ್‌ಐ ಮಾಡಿದೆ. ನಂತರ ಅವನು ನನ್ನನ್ನು ಹೊಡೆಯಲು ಕೇಳಿದ. ಆದರೆ ನಾನು ಕುಡಿದಿದ್ದರಿಂದ ನನಗೆ ಸಾಧ್ಯವಿಲ್ಲ ಎಂದೆ. ಆಗ ಅವನು ನೆಲದ ಮೇಲೆ ಎಳೆದುಕೊಂಡು ಹೋಗಲು ಹೇಳಿದನು. ಆದರೆ ನನ್ನ ಅಮಲಿನಲ್ಲಿದ್ದೆ ಅದು ನನಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವನು ತನ್ನ ಬಾಯಿ ಮತ್ತು ಕೈಗಳನ್ನು ಟೇಪ್‌ನಿಂದ ಬಂಧಿಸಿ ಹೊಗುವಂತೆ ತಿಳಿಸಿದ. ನಾನು ಹಾಗೆ ಮಾಡಿದೆ ಎಂದು ಆರೋಪಿಯ ಸ್ನೇಹಿತ ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ: Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
ಭಾನುವಾರ ರಾತ್ರಿ ತನ್ನ ಮನೆಯ ಬಳಿ ಆರು ಜನರಿಂದ ಥಳಿಸಿದರು ಮತ್ತು ತನ್ನ ಬೆನ್ನಿನ ಮೇಲೆ ಹಸಿರು ಬಣ್ಣದಿಂದ ‘ಪಿಎಫ್‌ಐ’ ಎಂದು ಬರೆದಿದ್ದಾರೆ ಎಂದು ಸೈನಿಕನು ತನ್ನ ದೂರಿನಲ್ಲಿ ತಿಳಿಸಿದ್ದ. ಕೇರಳದ ಕಡಕ್ಕಲ್‌ನಲ್ಲಿರುವ ಅವರ ಮನೆಯ ಸಮೀಪವೇ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದ. ಈ ವಿಷಯವು ಭಾರೀ ಗಮನ ಸೆಳೆದಿತ್ತು. ಆದರೆ, ಕೇರಳ ಪೊಲೀಸರು ವಿಚಾರಣೆ ನಡೆಸಿದಾಗ ಇಡೀ ಘಟನೆ ನಕಲಿ ಎಂದು ಗೊತ್ತಾಗಿದ್ದು, ಕೇವಲ ಪ್ರಚಾರಕ್ಕಾಗಿ ಭಾರತೀಯ ಸೇನೆಯ ಯೋಧ ಫೇಕ್ ಪಿಎಫ್ಐ ದಾಳಿಯನ್ನು ರೂಪಿಸಿದ್ದ ಎಂದು ಗೊತ್ತಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
Live News14 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ5 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ21 hours ago
Lawyer Sara Sunny: ಸುಪ್ರೀಂ ಕೋರ್ಟ್ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ
-
ದೇಶ24 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
South Cinema8 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕ್ರಿಕೆಟ್21 hours ago
Babar Azam: ಆಡಿ ಕಾರ್ ಓವರ್ಸ್ಪೀಡ್ ಓಡಿಸಿ, ದಂಡ ಕಟ್ಟಿದ ಪಾಕ್ ಕ್ರಿಕೆಟ್ ಟೀಂ ನಾಯಕ ಬಾಬರ್ ಅಜಮ್!
-
ದೇಶ22 hours ago
MP Assembly Election: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್, ಮೂವರು ಕೇಂದ್ರ ಸಚಿವರು, ಹಲವು ಸಂಸದರು ಕಣಕ್ಕೆ!
-
ದೇಶ23 hours ago
Sanatan Dharma row: ತಮಿಳುನಾಡು ಸಿಎಂ ಪುತ್ರ ಉದಯನಿಧಿ ವಿರುದ್ಧ ದಿಲ್ಲಿಯಲ್ಲಿ ಸಂತರ ಪ್ರತಿಭಟನೆ, ಕ್ರಮಕ್ಕೆ ಆಗ್ರಹ