Rashmika Mandanna | ಹೊಸ ಫೋಟೊಸ್‌ ಹಂಚಿಕೊಂಡ ರಶ್ಮಿಕಾ: ಈ ಬಾರಿ ಟ್ಯಾಟೂ ಹೈಲೈಟ್‌ - Vistara News

ಸಿನಿಮಾ

Rashmika Mandanna | ಹೊಸ ಫೋಟೊಸ್‌ ಹಂಚಿಕೊಂಡ ರಶ್ಮಿಕಾ: ಈ ಬಾರಿ ಟ್ಯಾಟೂ ಹೈಲೈಟ್‌

ರಶ್ಮಿಕಾ ಮಂದಣ್ಣ(Rashmika Mandanna ) ಈ ಬಾರಿ ತಮ್ಮ ಟ್ಯಾಟೂ ಮೂಲಕ ಹೈಲೈಟ್‌ ಆಗಿದ್ದಾರೆ. ಹಾಗಿದ್ದರೆ ಟ್ಯಾಟೂನಲ್ಲಿ ಏನು ಬರೆದುಕೊಂಡಿದ್ದಾರೆ.. ನೀವೇ ನೋಡಿ..

VISTARANEWS.COM


on

Rashmika Mandanna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ತಮ್ಮ ಬೋಲ್ಡ್​ ಲುಕ್​ನಿಂದಲೇ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮತ್ತೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಗಮನ ಸೆಳೆದಿದ್ದಾರೆ. ಕೆಲ ವರ್ಷಗಳ ಹಿಂದೆ ಕೈ ಮೇಲೆ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದರು. ಅದರಲ್ಲಿ irreplaceable ಎಂದು ಬರೆಸಿಕೊಂಡಿದ್ದರು. ಅದನ್ನೀಗ ರಿವೀಲ್‌ ಮಾಡಿದ್ದಾರೆ. ಇದರ ಅರ್ಥ ʻʻಜೀವನದಲ್ಲಿ ನಿಮ್ಮನ್ನು ಯಾರೂ ರಿಪ್ಲೇಸ್‌ ಮಾಡಲು ಸಾಧ್ಯವಿಲ್ಲʼʼ ಎಂದು.

Rashmika Mandanna
Rashmika Mandanna
Rashmika Mandanna
Rashmika Mandanna

ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಭ್‌ ಬಚ್ಚನ್‌ ಮಗಳಾಗಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ “ಗುಡ್ ಬೈʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರು ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಿಗ್ ಬಿ ಜತೆಗಿನ ʻಗುಡ್ ಬೈʼ ಚಿತ್ರದ (Goodbye Movie) ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಜತೆ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಚಿತ್ರವು ಅಕ್ಟೋಬರ್ ೭ರಂದು ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.

ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದು, ತಮಿಳಿನ ʻವರಿಸುʼ ಚಿತ್ರದಲ್ಲಿ ದಳಪತಿ ವಿಜಯ್ ಜತೆ ನಾಯಕಿಯಾಗಿ ನಟಿಸಲಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರಕ್ಕೆ, ರಾಷ್ಟ್ರ ಪ್ರಶಸ್ತಿ ವಿಜೇತ ದಿಲ್ ರಾಜು ಅವರು ವೆಂಕಟೇಶ್ವರ ಕ್ರಿಯೇಷನ್ಸ್‌ನ ಪ್ರತಿಷ್ಠಿತ ಬ್ಯಾನರ್ ಅಡಿಯಲ್ಲಿ ಬೆಂಬಲ ನೀಡುತ್ತಿದ್ದಾರೆ. ರಶ್ಮಿಕಾ ಬಾಲಿವುಡ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ʻಮಿಷನ್ ಮಜ್ನುʼ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | Rashmika Mandanna | ಕ್ಯಾಮೆರಾ ಕಣ್ಣಿಗೆ ಬೋಲ್ಡ್‌ ಆಗಿ ಪೋಸ್‌ ಕೊಟ್ಟ ರಶ್ಮಿಕಾ: ಗರಂ ಆದ್ರು ಫ್ಯಾನ್ಸ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ ರಾಜ್​ಕುಮಾರ್​ ; ಅಣ್ಣಾವ್ರ ಕುಟುಂಬದಲ್ಲಿ ಇದೇ ಮೊದಲ ಪ್ರಕರಣ!

Yuva Rajkumar: ಯುವ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್‌ ಪಡೆದುಕೊಳ್ಳಲು ಮುಂದಾಗಿದ್ದಾರೆ. ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ ಈಗ ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸ್ ಕೂಡ ದಾಖಲಿಸಿದ್ದಾರೆ. ಶ್ರೀದೇವಿಗೆ ಈಗಾಗಲೇ ಯುವ ನೋಟಿಸ್‌ ಕೊಟ್ಟಿದ್ದಾರೆ.

VISTARANEWS.COM


on

Yuva Rajkumar son of raghavendra Rajkumar yuva divorce
Koo

ಬೆಂಗಳೂರು: ವರನಟ ಡಾ. ರಾಜ್‌ ಕುಮಾರ್‌ (Yuva Rajkumar) ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್‌ ಭಾರತೀಯ ವಿವಾಹ ಕಾಯ್ದೆ 13(1)ಅಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೂನ್​ 6ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿದೆ. ಹೆಂಡತಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಎದುರಿಸುತ್ತಿದ್ದೆ ಎಂದು ಯುವ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಯುವ ಕೇಸ್ ಕೂಡ ದಾಖಲು ಮಾಡಿದ್ದಾರೆ.

ಯುವರಾಜ್​ ಕುಮಾರ್​ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್‌ ಪಡೆದುಕೊಳ್ಳಲು ಮುಂದಾಗಿದ್ದಾರೆ. ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ ಈಗ ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸ್ ಕೂಡ ದಾಖಲಿಸಿದ್ದಾರೆ. ಶ್ರೀದೇವಿಗೆ ಈಗಾಗಲೇ ಯುವ ನೋಟಿಸ್‌ ಕೊಟ್ಟಿದ್ದಾರೆ. ಸದ್ಯಕ್ಕೆ ಅಮೆರಿಕಾದಲ್ಲಿ ಶ್ರೀದೇವಿ ನೆಲೆಸಿದ್ದಾರೆ. ಶಾಂತಿನಗರ ಫ್ಯಾಮಿಲಿ ಕೋರ್ಟ್‌ನಲ್ಲಿ ಇದೇ ತಿಂಗಳು 6ನೇ ತಾರೀಕು ವಿಚ್ಛೇದನ ಅರ್ಜಿ ಸಲ್ಲಿಸಿದ್ದರು ಯುವರಾಜ್.

ಇದನ್ನೂ ಓದಿ: Yuva Rajkumar: ಯುವ ಅಭಿಮಾನಿಗಳಿಗೆ ನಿರಾಸೆ; ಹುಟ್ಟುಹಬ್ಬ ಆಚರಣೆಗೆ ಬ್ರೇಕ್‌

2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು.ಶ್ರೀದೇವಿ ಅವರು ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು. ಇನ್ನೂ ಪವರ್ ಸ್ಟಾರ್‌ ಪುನೀತ್‌ ನಿಧನರಾದಾಗ ಮುಂದೆ ನಿಂತು ಸಾಕಷ್ಟು ಕೆಲಸಗಳು ಮಾಡಿದ್ದರು. ಕೆಲವು ದಿನಗಳಿಂದ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನೂ ಯುವ ಸಿನಿಮಾ ಪ್ರಚಾರದಲ್ಲಿ ಪತ್ನಿ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಇನ್ನೂ ಅಚ್ಚರಿ ಅಂದರೆ ನಿವೇದಿತಾ ಹಾಗೂ ಚಂದನ್‌ ಕೂಡ ಇದೇ ಕೋರ್ಟ್‌ನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಇದೀಗ ಮತ್ತೊಂದು ಜೋಡಿ ಕೂಡ ವೈವಾಹಿಕ ಜೀವನಕ್ಕೆ ಫುಲ್‌ಸ್ಟಾಪ್‌ ಇಡಲು ಮುಂದಾಗಿದೆ.

ʻಯುವʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಯುವ ರಾಜ್‌ಕುಮಾರ್ (Yuva Rajkumar) ಎಂಟ್ರಿ ಕೊಟ್ಟಿದ್ದರು. ವರನಟ ಡಾ. ರಾಜ್‌ ಕುಮಾರ್‌ ಕುಟುಂಬದ ಮತ್ತೊಂದು ಕುಡಿ ಸಿನಿಮಾ ರಂಗದಲ್ಲಿ ಮಿಂಚಿದ್ದರು. ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣದ ʼಯುವʼ ಚಿತ್ರಕ್ಕೆ ಯಶಸ್ವಿ ನಿರ್ದೇಶಕ ಸಂತೋಷ್ ಆನಂದ್​ರಾಮ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಯುವ ರಾಜ್​ಕುಮಾರ್ ಜತೆಗೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ, ಹಿತಾ ಚಂದ್ರಶೇಖರ್ ಮೊದಲಾದವರು ನಟಿಸಿದ್ದರು. . ಎಲೆಕ್ಷನ್ ಅಬ್ಬರದ ಮಧ್ಯೆಯೂ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿತ್ತು. ಸಿನಿಮಾ ತೆರೆ ಕಂಡ 21 ದಿನಕ್ಕೆ ಒಟಿಟಿಗೆ ಬಂದಿತ್ತು. ಸದ್ಯ ʼಯುವʼ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Continue Reading

ಕಿರುತೆರೆ

Niveditha Gowda : ಡಿವೋರ್ಸ್‌ ಬಳಿಕ ಒಟ್ಟಾಗಿ ಸುದ್ದಿಗೋಷ್ಠಿ ಕರೆದ ಚಂದನ್-ನಿವೇದಿತಾ!

Niveditha Gowda: ಡಿವೋರ್ಸ್‌ ಅನೌನ್ಸ್‌ ಮಾಡಿದ ಬಳಿಕ ನಿವೇದಿತಾ ಬಗ್ಗೆ ಹಲವು ಗಾಸಿಪ್‌ಗಳು ಕೇಳಿ ಬಂದವು. ಮಗು ಪಡೆಯಲು ಒಪ್ಪದ್ದಕ್ಕೆ ನಿವೇದಿತಾ ವಿಚ್ಛೇದನ ಪಡೆದರು, ನಟಿಯಾಗಿ ಮುಂದುವರಿಯಬೇಕು ಎಂಬುದಕ್ಕೆ ಗಂಡನಿಂದ ದೂರ ಆಗುತ್ತಿದ್ದಾರೆ, ಹಣದ ಆಸೆಗೆ ನಿವೇದಿತಾ ಈ ರೀತಿ ನಿರ್ಧಾರ ತೆಗೆದುಕೊಂಡರು ಎಂದು ವದಂತಿಗಳು ಹಬ್ಬಿದವು. ಇದೀಗ ಸ್ವತಃ ಜೋಡಿಯೇ ಮುಂದೆ ಬಂದು ಈ ಎಲ್ಲ ವದಂತಿಗೆ ತೆರೆ ಎಳೆಯಲಿದೆ.

VISTARANEWS.COM


on

Niveditha Gowda Chandan Shetty Joint Pressmeet For The First Time
Koo

ಬೆಂಗಳೂರು: ಚಂದನ್‌ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಡಿವೋರ್ಸ್‌ ಪಡೆದುಕೊಂಡಿರುವುದು ಗೊತ್ತೇ ಇದೆ. ಇನ್‌ಸ್ಟಾದಲ್ಲಿ ಪೋಸ್ಟ್‌ ಮೂಲಕ ಜೋಡಿ ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಹಂಚಿಕೊಂಡಿದೆ. ಈಗ ಇಬ್ಬರೂ ಒಟ್ಟಾಗಿ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಮೂಲಕ ಹಲವು ವದಂತಿಗೆ ಇವರು ತೆರೆ ಎಳೆಯಲಿದ್ದಾರೆ. ಬೆಂಗಳೂರಿನ ಜಿಟಿ ಮಾಲ್​ನಲ್ಲಿರುವ ಎಂಬಿ ಲೆಗಸಿಯಲ್ಲಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿದೆ. ಮಧ್ಯಾಹ್ನ 3:30ಕ್ಕೆ ಸುದ್ದಿಗೋಷ್ಠಿ ಆರಂಭ ಆಗಲಿದೆ. ಈ ವೇಳೆ ಯಾವೆಲ್ಲ ವಿಚಾರ ಮಾತನಾಡುತ್ತಾರೆ ಎನ್ನುವ ಕುತೂಹಲ ಅವರ ಫ್ಯಾನ್ಸ್‌ನಲ್ಲಿ ಹೆಚ್ಚಾಗಿದೆ.

ಡಿವೋರ್ಸ್‌ ಅನೌನ್ಸ್‌ ಮಾಡಿದ ಬಳಿಕ ನಿವೇದಿತಾ ಬಗ್ಗೆ ಹಲವು ಗಾಸಿಪ್‌ಗಳು ಕೇಳಿ ಬಂದವು. ಮಗು ಪಡೆಯಲು ಒಪ್ಪದ್ದಕ್ಕೆ ನಿವೇದಿತಾ ವಿಚ್ಛೇದನ ಪಡೆದರು, ನಟಿಯಾಗಿ ಮುಂದುವರಿಯಬೇಕು ಎಂಬುದಕ್ಕೆ ಗಂಡನಿಂದ ದೂರ ಆಗುತ್ತಿದ್ದಾರೆ, ಹಣದ ಆಸೆಗೆ ನಿವೇದಿತಾ ಈ ರೀತಿ ನಿರ್ಧಾರ ತೆಗೆದುಕೊಂಡರು ಎಂದು ವದಂತಿಗಳು ಹಬ್ಬಿದವು. ಇದೀಗ ಸ್ವತಃ ಜೋಡಿಯೇ ಮುಂದೆ ಬಂದು ಈ ಎಲ್ಲ ವದಂತಿಗೆ ತೆರೆ ಎಳೆಯಲಿದೆ.

ದುಡ್ಡಿನ ಹಿಂದೆ ಹೋದವರು ಯಾರಂತ ಗೊತ್ತಾಗುತ್ತೆ!

ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ “ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು, ದೂರಾಗಲು ಚಿಕ್ಕದಾದ ಸಂಶಯ ಸಾಕು’ಎಂದು ಚಂದನ್‌ ಕುರಿತಾಗಿ ಬರೆದುಕೊಂಡಿದ್ದರು. ʻʻದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಎಂದು ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆʼʼ ಎಂದು ಸಂದರ್ಶನದಲ್ಲಿಯೂ ಹೇಳಿದ್ದಾರೆ.

ಪ್ರಶಾಂತ್‌ ಸಂಬರಗಿ ಮಾತನಾಡಿ ʻʻʻನಿನ್ನೆ ನಗ್ತಾನೇ ಬಂದು ಹೋದರು. ಆದರೆ ಚಂದನ್‌ಗೆ ನೋವಾಗಿದೆ. ಇರುವ ಸ್ವಿಫ್ಟ್ ಕಾರು ಬಿಟ್ಟು ಬೆನ್ಜ್ ಕಾರು ಬೇಕು ಅಂದರೆ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಬೆನ್ಜ್ ಹಿಂದೆ ಹೋಗಿರುವಂತವರು, ದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಅಂತ ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆ. ಚಂದನ್‌ಗೆ ನಮ್ಮ ಬ್ರದರ್ಲಿ ಸಪೋರ್ಟ್, ಎಮೋಷನಲ್ ಸಪೋರ್ಟ್ ಇದೆʼʼ ಎಂದಿದ್ದರು.

ಇದನ್ನೂ ಓದಿ: Niveditha Gowda: ದುಡ್ಡಿನ ಹಿಂದೆ ಹೋದವರು ಯಾರಂತ ಗೊತ್ತಾಗುತ್ತೆ; ಚಂದನ್‌ಗೆ ನಮ್ಮ ಸಪೋರ್ಟ್‌ ಎಂದ ಪ್ರಶಾಂತ್‌ ಸಂಬರಗಿ!

ಡಿವೋರ್ಸ್​ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದ ನಿವೇದಿತಾ ಗೌಡ

ಈ ದಿನ., ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನ ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೂಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣೆಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ನಿವೇದಿತಾ ಗೌಡ ಬರೆದುಕೊಂಡಿದ್ದರು.

ವಿದೇಶಕ್ಕೆ ಹೋಗುವ ಸಾರ್ಧಯತೆ

ಫ್ಯಾಮಿಲಿ ಕೋರ್ಟ್‌ನಲ್ಲಿ ಜೂನ್ 6ರಂದು ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಮಿಡಿಯೆಟರ್ ಸಂಧಾನಕ್ಕೆ ಕೊನೆಗೂ ದಂಪತಿ ಒಪ್ಪಿಲ್ಲ. ಡಿವೋರ್ಸ್‌ ಪಡೆದುಕೊಂಡರೂ ಜೀವನಾಂಶ ಬೇಡ ಎಂದಿದ್ದಾರೆ ನಿವೇದಿತಾ. ಡಿವೋರ್ಸ್ ಸಿಕ್ಕ ನಂತರ ನಿವೇದಿತಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

Continue Reading

ಬಾಲಿವುಡ್

Sonakshi Sinha: ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ಸೋನಾಕ್ಷಿ ಸಿನ್ಹಾ ಅದ್ಧೂರಿ ಮದುವೆ?

Sonakshi Sinha: ಸೋನಾಕ್ಷಿ 2010ರಲ್ಲಿ ʻದಬಾಂಗ್‌ʼ ಸಿನಿಮಾದಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ ಆಗಿತ್ತು. ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರುಈ ಹಿಂದೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೋನಾಕ್ಷಿಯನ್ನು “ಅತ್ತಿಗೆ” ಎಂದು ಕರೆದಿದ್ದರು. ಕೆಲವೇ ಕ್ಷಣಗಳಲ್ಲಿ ಆ ಸ್ಟೋರಿಯನ್ನು ಡಿಲೀಟ್‌ ಮಾಡಿದ್ದರು ಕೂಡ. ಆಗ ಸೋನಾಕ್ಷಿ ಹಾಗೂ ಜಹೀರ್‌ ನಡುವೆ ಸಂಬಂಧ ಇದೆ ಎಂಬ ಸುದ್ದಿ ವೈರಲ್‌ ಆಗಿತ್ತು. .

VISTARANEWS.COM


on

Sonakshi Sinha to marry boyfriend Zaheer Iqbal on June 23
Koo

ಬೆಂಗಳೂರು: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ತಮ್ಮ ಬಾಯ್‌ಫ್ರೆಂಡ್‌ ನಟ ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಸೋನಾಕ್ಷಿ ಮತ್ತು ಜಹೀರ್ ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆದರೆ ಜೋಡಿ ಎಲ್ಲಿಯೂ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಸೋನಾಕ್ಷಿ ಹಾಗೂ ಜಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರೂ ಪ್ರೀತಿ ವಿಚಾರವನ್ನು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇವರು ಈಗ ವಿವಾಹ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸೋನಾಕ್ಷಿ 2010ರಲ್ಲಿ ʻದಬಾಂಗ್‌ʼ ಸಿನಿಮಾದಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ ಆಗಿತ್ತು. ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರು.

ಮುಂಬೈನ ಬಾಸ್ಟಿಯನ್​ನಲ್ಲಿ ವಿವಾಹ ನಡೆಯಲಿದೆ ಎನ್ನಲಾಗಿದೆ. ಜಹೀರ್ ಅವರನ್ನು ಸೋನಾಕ್ಷಿ ಭೇಟಿ ಮಾಡಿದ್ದು ಸಲ್ಮಾನ್ ಖಾನ್ ಮೂಲಕ. ಸಲ್ಲು ಹಾಗೂ ಜಹೀರ್ ಗೆಳೆಯರು. ಭೇಟಿ ಬಳಿಕ ಸೋನಾಕ್ಷಿ ಹಾಗೂ ಜಹೀರ್ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಆ ಬಳಿಕ ಅದು ಪ್ರೀತಿಗೆ ತಿರುಗಿತು ಎನ್ನಲಾಗಿದೆ.

ಕಳೆದ ವಾರ ಸೋನಾಕ್ಷಿ ಅವರ ಹುಟ್ಟುಹಬ್ಬದಂದು, ಜಹೀರ್ ಹಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಮೊದಲ ಚಿತ್ರದಲ್ಲಿ ಸೋನಾಕ್ಷಿ ಅವರನ್ನು ಜಹೀರ್ ಬಿಗಿಯಾಗಿ ಅಪ್ಪಿಕೊಳ್ಳುವುದು ಇದೆ. “ಜನ್ಮದಿನದ ಶುಭಾಶಯಗಳು ಸೋನಾʼʼಎಂದು ಶೀರ್ಷಿಕೆ ನೀಡಿದ್ದರು.

ಈ ಹಿಂದೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೋನಾಕ್ಷಿಯನ್ನು “ಅತ್ತಿಗೆ” ಎಂದು ಕರೆದಿದ್ದರು. ಕೆಲವೇ ಕ್ಷಣಗಳಲ್ಲಿ ಆ ಸ್ಟೋರಿಯನ್ನು ಡಿಲೀಟ್‌ ಮಾಡಿದ್ದರು ಕೂಡ. ಆಗ ಸೋನಾಕ್ಷಿ ಹಾಗೂ ಜಹೀರ್‌ ನಡುವೆ ಸಂಬಂಧ ಇದೆ ಎಂಬ ಸುದ್ದಿ ವೈರಲ್‌ ಆಗಿತ್ತು.

ಇದನ್ನೂ ಓದಿ: Sonakshi Sinha : ಪ್ರೀತಿಯಲ್ಲಿ ಬಿದ್ದ ಸೋನಾಕ್ಷಿ, ಲವ್‌ ಯು ಎಂದು ಪೋಸ್ಟ್‌ ಹಾಕಿದ ಬಾಯ್‌ಫ್ರೆಂಡ್‌ ಯಾರು ನೋಡಿ!

ಸೋನಾಕ್ಷಿ ಕೊನೆಯದಾಗಿ ಸಂಜಯ್ ಲೀಲಾ ಬನ್ಸಾಲಿಯವರ ಸಿರೀಸ್‌ ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಕಾಣಿಸಿಕೊಂಡಿದ್ದರು. ಹೀರಾಮಂಡಿ: ದಿ ಡೈಮಂಡ್ ಬಜಾರ್‌ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹೀರಾಮಂಡಿ: ದಿ ಡೈಮಂಡ್ ಬಜಾರ್‌ನಲ್ಲಿ ಮನಿಶಾ ಕೊಯಿರಾಲಾ, ರಿಚಾ ಚಡ್ಡಾ, ಸಂಜೀದಾ ಶೇಖ್, ಅದಿತಿ ರಾವ್ ಹೈದರಿ, ಶರ್ಮಿನ್ ಸೆಗಲ್ ಮೆಹ್ತಾ, ಫರೀದಾ ಜಲಾಲ್, ಫರ್ದೀನ್ ಖಾನ್ ಮತ್ತು ಅಧ್ಯಯನ್ ಸುಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading

ಟಾಲಿವುಡ್

Nandamuri Balakrishna: ಇಂದು ತೆಲುಗು ಸೂಪರ್‌ಸ್ಟಾರ್ ಬಾಲಯ್ಯ ಬರ್ತ್‌ಡೇ; ಹೊಸ ಸಿನಿಮಾ ಅನೌನ್ಸ್‌!

Nandamuri Balakrishna: ನಂದಮೂರಿ ಬಾಲಕೃಷ್ಣ ಅವರ ಅತ್ಯಂತ ದುಬಾರಿ ಚಿತ್ರಗಳಲ್ಲಿ ಇದು ಒಂದಾಗಲಿದೆ ಎಂದು ಹೇಳಲಾಗಿದೆ. ಬಾಲಕೃಷ್ಣ ಅವರು ‘ಭಗವಂತ ಕೇಸರಿ’ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ಸಹ-ನಟಿಯಾಗಿ ನಟಿಸಿದ್ದರು.ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತಾ ಅವರು 14 ರೀಲ್ಸ್ ಪ್ಲಸ್‌ ಬ್ಯಾನರ್‌ ಅಡಿ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಿದ್ದಾರೆ. ಎಂ ತೇಜಸ್ವಿನಿ ನಂದಮೂರಿ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.

VISTARANEWS.COM


on

Nandamuri Balakrishna BB4 new film announced
Koo

ಬೆಂಗಳೂರು: ತೆಲುಗು ಸೂಪರ್‌ಸ್ಟಾರ್ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರಿಗೆ ಇಂದು ಜನುಮದಿನದ ಸಂಭ್ರಮ. ಹೀಗಾಗಿ ಅನೇಕ ಸಿನಿ ಗಣ್ಯರು ಸೇರಿದಂತೆ ಅವರ ಫ್ಯಾನ್ಸ್‌ ವಿಶ್‌ ಮಾಡುತ್ತಿದ್ದಾರೆ. ಇದೀಗ ಬೊಯಾಪಾಟಿ ಶ್ರೀನು ಅವರ ನಾಲ್ಕನೇ ಚಿತ್ರಕ್ಕಾಗಿ ಮತ್ತೆ ನಂದಮೂರಿ ಬಾಲಕೃಷ್ಣ ಒಂದಾಗಿದ್ದಾರೆ. 64ನೇ ವಸಂತಕ್ಕೆ ಕಾಲಿಟ್ಟ ಬಾಲಯ್ಯ ಇದೀಗ ‘BB4’ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. BB4ಎಂದು ತಾತ್ಕಲಿಕವಾಗಿ ಶಿರ್ಷಿಕೆ ಇಡಲಾಗಿದೆ.

‘ಸಿಂಹ’, ‘ಲೆಜೆಂಡ್’ ಮತ್ತು ‘ಅಖಂಡ’ ನಂತರ ನಾಲ್ಕನೇ ಬಾರಿಗೆ ಬಾಲಕೃಷ್ಣ ಮತ್ತು ಬೊಯಾಪಾಟಿ ಶ್ರೀನು ಕೈ ಜೋಡಿಸಿದ್ದಾರೆ. ʻʻ’ಗಾಡ್ ಆಫ್ ಮಾಸಸ್’ ನಂದಮೂರಿ ಬಾಲಕೃಷ್ಣ ಮತ್ತು ಬೊಯಾಪಾಟಿ ಶ್ರೀನು BB4ಗಾಗಿ ಮತ್ತೆ ಒಂದಾಗುತ್ತಾರೆ. ಜನ್ಮದಿನದ ಶುಭಾಶಯಗಳು, ಬಾಲಯ್ಯ ಬಾಬುʼʼಎಂದು ಪೋಸ್ಟರ್‌ ಹಂಚಿಕೊಂಡಿದೆ. ನಂದಮೂರಿ ಬಾಲಕೃಷ್ಣ ಅವರ ಅತ್ಯಂತ ದುಬಾರಿ ಚಿತ್ರಗಳಲ್ಲಿ ಇದು ಒಂದಾಗಲಿದೆ ಎಂದು ಹೇಳಲಾಗಿದೆ. ಬಾಲಕೃಷ್ಣ ಅವರು ‘ಭಗವಂತ ಕೇಸರಿ’ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ಸಹ-ನಟಿಯಾಗಿ ನಟಿಸಿದ್ದರು.

ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತಾ ಅವರು 14 ರೀಲ್ಸ್ ಪ್ಲಸ್‌ ಬ್ಯಾನರ್‌ ಅಡಿ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಿದ್ದಾರೆ. ಎಂ ತೇಜಸ್ವಿನಿ ನಂದಮೂರಿ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.

ಇದನ್ನೂ ಓದಿ: Pawan Kalyan: ಮರು ಬಿಡುಗಡೆಯಾಗುತ್ತಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!

ಹಿಂದೂಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದರು. ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆ ಆಗಿದ್ದಾರೆ. ತಂದೆ ಎನ್‌ಟಿಆರ್ ಹಾದಿಯಲ್ಲೇ ನಟ ಬಾಲಯ್ಯ ಚಿತ್ರರಂಗಕ್ಕೆ ಬಂದರು. ತಂದೆ ರಾಜಕೀಯರಂಗ ಪ್ರವೇಶಿಸಿ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಈಗ ಬಾಲಯ್ಯ- ಚಂದ್ರಬಾಬು ಬೀಗರು ಸಹ ಆಗಿದ್ದಾರೆ. ಚಂದ್ರಬಾಬು ನಾಯ್ಡು ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Continue Reading
Advertisement
murder case
ಮೈಸೂರು1 min ago

Murder Case : ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಕೊಲೆ

pm narendra modi leopord
ಪ್ರಮುಖ ಸುದ್ದಿ2 mins ago

PM Narendra Modi: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ಚಿರತೆ! ವಿಡಿಯೋ ಇದೆ ನೋಡಿ

Yuva Rajkumar son of raghavendra Rajkumar yuva divorce
ಸ್ಯಾಂಡಲ್ ವುಡ್7 mins ago

Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ ರಾಜ್​ಕುಮಾರ್​ ; ಅಣ್ಣಾವ್ರ ಕುಟುಂಬದಲ್ಲಿ ಇದೇ ಮೊದಲ ಪ್ರಕರಣ!

Congress Guaratee
ಕರ್ನಾಟಕ16 mins ago

Congress Guarantee: ಗ್ಯಾರಂಟಿ ನಿಲ್ಲಿಸುವ ಮಾತು ಬೇಡ: ಕೈ ನಾಯಕರಿಗೆ ಎಚ್.ಎಂ ರೇವಣ್ಣ ಎಚ್ಚರಿಕೆ

Suresh Gopi
ದೇಶ17 mins ago

Suresh Gopi : ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ ಸಚಿವ ಸ್ಥಾನ ಬೇಡ ಎಂದ ಸುರೇಶ್​ ಗೋಪಿ!

Physical Abuse
ಮೈಸೂರು36 mins ago

Physical Abuse : ಪಿಕ್‌ ಅಪ್, ಡ್ರಾಪ್ ನೆಪದಲ್ಲಿ ಸಲುಗೆ; ಅಂಕಲ್ ಗಾಳಕ್ಕೆ ಸಿಲುಕಿದ ಬಾಲಕಿಯ ನರಳಾಟ

Election Commission
ಪ್ರಮುಖ ಸುದ್ದಿ41 mins ago

Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

bhavani revanna prajwal revanna case
ಪ್ರಮುಖ ಸುದ್ದಿ43 mins ago

Prajwal Revanna Case: ಎಸ್‌ಐಟಿಯಿಂದ ಪ್ರಜ್ವಲ್‌ ರೇವಣ್ಣ ಕೋಣೆ ತಲಾಶ್‌, ಭವಾನಿ ತುಳಸಿ ಪೂಜೆ! ಅಲ್ಲೇ ಇದ್ದರೂ ಮುಖಾಮುಖಿಯಾಗದ ಅಮ್ಮ- ಮಗ

Niveditha Gowda Chandan Shetty Joint Pressmeet For The First Time
ಕಿರುತೆರೆ1 hour ago

Niveditha Gowda : ಡಿವೋರ್ಸ್‌ ಬಳಿಕ ಒಟ್ಟಾಗಿ ಸುದ್ದಿಗೋಷ್ಠಿ ಕರೆದ ಚಂದನ್-ನಿವೇದಿತಾ!

Narendra Modi 3.0
ಪ್ರಮುಖ ಸುದ್ದಿ1 hour ago

Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್​ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌