Actor Yash: ಯಶ್‌ ಹೊಸ ಹೇರ್‌ ಸ್ಟೈಲ್‌ ಯಾವ ಸಿನಿಮಾಗಾಗಿ? ಕೇಶ ವಿನ್ಯಾಸಕ ಕೊಟ್ಟೇ ಬಿಟ್ರು ಬಿಗ್‌ ಅಪ್‌ಡೇಟ್‌! - Vistara News

ಸ್ಯಾಂಡಲ್ ವುಡ್

Actor Yash: ಯಶ್‌ ಹೊಸ ಹೇರ್‌ ಸ್ಟೈಲ್‌ ಯಾವ ಸಿನಿಮಾಗಾಗಿ? ಕೇಶ ವಿನ್ಯಾಸಕ ಕೊಟ್ಟೇ ಬಿಟ್ರು ಬಿಗ್‌ ಅಪ್‌ಡೇಟ್‌!

Actor Yash: ಜೂನ್ 13 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಅವರು ಮುಂಬೈಗೆ ಆಗಮಿಸಿದಾಗ, ಹೊಸ ಲುಕ್‌ನಲ್ಲಿ ಕಂಡು ಬಂದರು. ಇದಾದ ಬಳಿಕ ನಟ ಯಾವ ಸಿನಿಮಾಗೆ ಈ ಲುಕ್‌ ಎಂಬುದರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ಮಾಡಿದ್ದಾರೆ. ಇದೀಗ ಈ ಲುಕ್‌ ʻಟಾಕ್ಸಿಕ್‌ʼ ಸಿನಿಮಾಗೆ ಎಂಬುದು ಕನ್‌ಫರ್ಮ್‌ ಆಗಿದೆ ಎಂದು ವರದಿಯಾಗಿದೆ.

VISTARANEWS.COM


on

Actor Yash goes short crop for Toxic
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ನಟ ಯಶ್ (Actor Yash) ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಫ್ಯಾನ್ಸ್‌ಗೆ ಭಾರಿ ಕುತೂಹಲ ಮೂಡಿಸಿದೆ. ಜೂನ್ 13 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಅವರು ಮುಂಬೈಗೆ ಆಗಮಿಸಿದಾಗ, ಹೊಸ ಲುಕ್‌ನಲ್ಲಿ ಕಂಡು ಬಂದರು. ಇದಾದ ಬಳಿಕ ನಟ ಯಾವ ಸಿನಿಮಾಗೆ ಈ ಲುಕ್‌ ಎಂಬುದರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ಮಾಡಿದ್ದಾರೆ. ಇದೀಗ ಈ ಲುಕ್‌ ʻಟಾಕ್ಸಿಕ್‌ʼ ಸಿನಿಮಾಗೆ ಎಂಬುದು ಕನ್‌ಫರ್ಮ್‌ ಆಗಿದೆ ಎಂದು ವರದಿಯಾಗಿದೆ.

ಕೇಶ ವಿನ್ಯಾಸಕ ಅಲೆಕ್ಸ್ ವಿಜಯಕಾಂತ್ ಈ ಬಗ್ಗೆ ಮಾಧ್ಯಮದ ಜತೆ ಹೇಳಿಕೊಂಡಿದ್ದು ಹೀಗೆ. “ಯಶ್‌ ಅವರ ಹೊಸ ಲುಕ್‌ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಫ್ಯಾನ್‌ ಚರ್ಚೆ ಮಾಡಿದರು. ಈ ಲುಕ್‌ ಟಾಕ್ಸಿಕ್‌ ಸಿನಿಮಾಗಾಗಿ. ನಾನು ಕೂಡ ಸ್ಕ್ರಿಪ್ಟ್ ಕೇಳಿದಾಗ ಯಶ್‌ ಅವರ ಹೇರ್‌ ಸ್ಟೈಲ್‌ ಪಾತ್ರಕ್ಕೆ ಸೂಕ್ತವಾಗಿದೆ ಎಂದು ನನಗೆ ತಿಳಿದಿತ್ತು. ನಾವು ಅವರ ಪಾತ್ರ ಮತ್ತು ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಕಸ್ಟಮೈಸ್ ಮಾಡಿದ ಪಾಂಪಡೋರ್ ಶೈಲಿಯಲ್ಲಿ ಸ್ಲೈಲ್‌ ಮಾಡಿದ್ದೇವೆ. ಯಶ್‌ ಅವರ ಹೇರ್‌ ಸ್ಟೈಲ್‌ ಯಾವುದು ಅಂದರೆ ʻಪಾಂಪಡೋರ್ʼ (customised pompadour style) ಎಂದು ಕರೆಯಲಾಗುತ್ತದೆ. ಈ ಸಿನಿಮಾದಲ್ಲಿ ನಿರ್ವಹಿಸುತ್ತಿರುವ ಪಾತ್ರಕ್ಕೆ ವಿಶಿಷ್ಟವಾದ ಟ್ವಿಸ್ಟ್ ಕೂಡ ಇದೆʼʼಎಂದು ಹೇಳಿಕೆ ನೀಡಿದ್ದಾರೆ.

ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಕೆಜಿಎಫ್‌ (KGF) ಸರಣಿ ಚಿತ್ರಗಳ ಬಳಿಕ ಸ್ಯಾಂಡಲ್‌ವುಡ್‌ ಸ್ಟಾರ್‌ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಖದರೇ ಬದಲಾಗಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹವಾ ಎಬ್ಬಿಸಿದ್ದಾರೆ. ‘ಕೆಜಿಎಫ್‌ 2’ (KGF 2ತೆರೆಕಂಡು ಎರಡೂವರೆ ವರ್ಷ ಕಳೆದರೂ ಯಶ್‌ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ .

ಇದನ್ನೂ ಓದಿ: Actor Yash: ಯಶ್‌ ಅಭಿನಯದ ಈ ಸೂಪರ್‌ ಹಿಟ್‌ ಚಿತ್ರ ರಿ-ರಿಲೀಸ್‌; ಎರಡೂವರೆ ವರ್ಷಗಳ ಬಳಿಕ ರಾಕಿಂಗ್‌ ಸ್ಟಾರ್‌ ಥಿಯೇಟರ್‌ಗೆ ಎಂಟ್ರಿ

ಕೆಜಿಎಫ್‌ 2ʼ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸುಮಾರು ಒಂದೂವರೆ ವರ್ಷದ ಬಳಿಕ ಯಶ್‌ ಅಭಿನಯದ ʼಟಾಕ್ಸಿಕ್‌ʼ (Toxic) ಸಿನಿಮಾ ಘೋಷಣೆಯಾಗಿದೆ. ಮಲೆಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಟ ಯಶ್ ಮತ್ತು ನಯನತಾರಾ ಮೊದಲ ಬಾರಿಗೆ ಜೊತೆಯಾಗುತ್ತಿದ್ದಾರೆ, ಇದರಲ್ಲಿ ಕಿಯಾರಾ ಆಡ್ವಾಣಿ, ಹುಮಾ ಖುರೇಷಿ ಮತ್ತು ಶ್ರುತಿ ಹಾಸನ್ ಕೂಡ ಇದ್ದಾರೆ. ಇದೀಗ ಸಿನಿಮಾ ಕುರಿತು ಹೊಸ ಸಂಗತಿವೊಂದು ವೈರಲ್‌ ಆಗುತ್ತಿದೆ. ಟಾಕ್ಸಿಕ್‌’ ಸಿನಿಮಾದಲ್ಲಿ ಯಶ್ ಹೀರೋ ಆಗಿರವುದು ಬಿಟ್ಟರೆ ಬೇರೆ ಯಾರೆಲ್ಲಾ ಬಣ್ಣ ಹಚ್ಚಲಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಸದ್ಯ ಕೇಳಿಬಂದಿರುವ ಮಾಹಿತಿ ಪ್ರಕಾರ, ‘ಲೇಡಿ ಸೂಪರ್ ಸ್ಟಾರ್‌’ ನಯತಾರಾ ಅವರು ಈ ಸಿನಿಮಾದಲ್ಲಿ ಬಹುಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುವುದು ಕನ್ಫರ್ಮ್ ಆಗಿದೆ.

ಮಲೆಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಆರಂಭದಲ್ಲಿ ಸಾಯಿ ಪಲ್ಲವಿ, ಸಂಯುಕ್ತಾ ಮೆನನ್‌ ನಾಯಕಿಯರಾಗಿತ್ತಾರೆ ಎನ್ನಲಾಗಿತ್ತು. ಅದಾದ ಬಳಿಕ ಕರೀನಾ ಕಪೂರ್‌ ಹೆಸರು ಕೇಳಿ ಬಂದಿತ್ತು. ಇತ್ತೀಚೆಗೆ ಬಹುಭಾಷಾ ನಟಿ ಶ್ರುತಿ ಹಾಸನ್‌ ಟಾಕ್ಸಿಕ್‌ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಇದರ ಜತೆಗೆ ಮಲಯಾಳಂ ನಟ ಟೊವಿನೋ ಥಾಮಸ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಆದರೆ ಚಿತ್ರತಂಡ ಇದುವರೆಗೆ ಇದ್ಯಾವುದನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹೀಗಾಗಿ ಸಿನಿ ಪ್ರಿಯರಲ್ಲಿ ಕುತೂಹಲ ಮನೆ ಮಾಡಿದೆ. ಬರೋಬ್ಬರಿ 170 ಕೋಟಿ ರೂಪಾಯಿ ಬಜೆಟ್‌ನ ಈ ಯಶ್‌ (Yash) ಚಿತ್ರ ಡ್ರಗ್‌ ಮಾಫಿಯಾ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿವೆ. 2025ರಲ್ಲಿ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ.

ಕಳೆದ ಡಿಸೆಂಬರ್‌ನಲ್ಲಿ ಭಾರತ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಇಂಗ್ಲೆಂಡ್‌, ಯೂರೋಪ್ ಸೇರಿದಂತೆ ಹಲವೆಡೆ ʼಟಾಕ್ಸಿಕ್‌ʼ ಟೈಟಲ್ ಅದ್ಧೂರಿಯಾಗಿ ರಿವೀಲ್ ಆಗಿತ್ತು. ಇದುವರೆಗೂ ಕನ್ನಡ ಯಾವ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ಈ ರೀತಿ ರಿಲೀಸ್ ಆಗಿರಲಿಲ್ಲ. ಈ ಮೂಲಕ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದೆ ಎನ್ನುವುದು ಖಚಿತವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ರಾಜಕುಮಾರ್‌ ಸಮಾಧಿಗೆ ಭೂಮಿ: ವಿವಾದ ಹುಟ್ಟು ಹಾಕಿದ ನಟ ಚೇತನ್‌ ವಿರುದ್ಧ ಅಭಿಮಾನಿಗಳ ಆಕ್ರೋಶ; ದೂರು ದಾಖಲು

VISTARANEWS.COM


on

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಕಂಠೀರವ ಸ್ಟುಡಿಯೋ ಆವರಣದಲ್ಲಿ 2.5 ಎಕರೆ ಭೂಮಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಟ ಚೇತನ್ ಅಹಿಂಸಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ರಾಜ್ಯಾದ್ಯಂತ ರಾಜ್‌ಕುಮಾರ್‌ ಅಭಿಮಾನಿಗಳು ಚೇತನ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಅವರ ವಿರುದ್ಧ ದೂರು ದಾಖಲಿಸಿವೆ.
ರಾಜ್‌ಕುಮಾರ್ ಅಭಿಮಾನಿಗಳ ಸಂಘಟನೆ ರಾಜ್‌ಕುಮಾರ್ ಸೇನೆ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ನಟ ಚೇತನ್ ಅಹಿಂಸಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಪಡಿಸಿದೆ. ರಾಜ್‌ಕುಮಾರ್ ಅಭಿಮಾನಿಗಳಾದ ನಮಗೆ ಅವಮಾನ ಉಂಟಾಗಿದ್ದು, ಚೇತನ್‌ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ‌.
ಡಾ. ರಾಜ್‌ಕುಮಾರ್ ಅವರ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿಯಾಗಿದೆ. ಸರ್ಕಾರ ಅದನ್ನು ಗಮನದಲ್ಲಿಟ್ಟುಕೊಂಡು ಭೂಮಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು ಎಂದು ಅಣ್ಣಾವ್ರ ಜನ್ಮದಿನದಂದೇ ಸಾಮಾಜಿಕ ಜಾಲತಾಣಗಳಲ್ಲಿ ಚೇತನ್ ಪೋಸ್ಟ್ ಮಾಡಿದ್ದರು
ತಮ್ಮ ಅಭಿಪ್ರಾಯ ಕುರಿತು ಪ್ರತಿಕ್ರಿಯೆ ನೀಡಿರುವ ಚೇತನ್, ನಾನು ಆಕ್ಷೇಪ ಎತ್ತಿದ್ದು ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ್ದಲ್ಲ. ನಾನು ಅಮೆರಿಕಾದಲ್ಲಿ ಇದ್ದಾಗಲೂ ಅವರ ಸಿನೆಮಾ ನೋಡಿಕೊಂಡು ಬೆಳೆದಿದ್ದೇನೆ. ಚಿತ್ರರಂಗಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ಆದರೆ ಅವರ ಕಾಲಾನಂತರ ಅವರ ಹೆಸರಲ್ಲಿ ಸರ್ಕಾರ ಭೂಮಿ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಮತ ಗಳಿಕೆಯ ಉದ್ದೇಶದಿಂದಲೇ ಸರ್ಕಾರ ಭೂಮಿ ಕೊಟ್ಟಿದೆ. ಅದರ ಬಗ್ಗೆ ಪ್ರಶ್ನೆ ಎತ್ತಿದ್ದೇನೆ. ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಕೊಡುಗೆ ಕೊಟ್ಟಿದ್ದಾರೆ ಎಂದಿದ್ದಾರೆ.
ಚೇತನ್‌ ಹೇಳಿಕೆಯಲ್ಲಿ ಏನಿದೆ?
ಸರ್ಕಾರಗಳು ಭೂಮಿಯನ್ನು ಮಂಜೂರು ಮಾಡುವಾಗ ಕೇವಲ ಮತ ಬ್ಯಾಂಕ್ ಮೇಲೆ ಕಣ್ಣಿಡಬಾರದು. ಅದರ ಬದಲು ದೂರದೃಷ್ಟಿ ಮತ್ತು ಸಾರ್ವಜನಿಕ ಉಪಯುಕ್ತತೆಯನ್ನು ಗಮನಿಸಬೇಕು. 21ನೇ ಶತಮಾನದ ಭಾರತದಲ್ಲಿ ಭೂಮಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.
ಪುಟ್ಟಣ್ಣ ಕಣಗಾಲ್, ಸರೋಜಾ ದೇವಿ, ವಿಷ್ಣುವರ್ಧನ್ ಸೇರಿದಂತೆ ಅನೇಕ ಮಂದಿ ಕೊಡುಗೆ ನೀಡಿದ್ದಾರೆ. ಆದರೆ ಅವರ ಸಮಾಧಿಗಳಿಗೆ ಜಾಗ ಕೊಟ್ಟಿಲ್ಲ. ಕುವೆಂಪು ಅವರ ಸಮಾಧಿಯನ್ನೇ ಕುಪ್ಪಳ್ಳಿಯಲ್ಲಿ ಮಾಡಲಾಗಿದೆ. ರಾಜ್‌ಕುಮಾರ್‌ ಅವರ ಸಮಾಧಿಯನ್ನು ಗಾಜನೂರಿನಲ್ಲಿ ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮಗೆ ರಾಜ್‌ಕುಮಾರ್ ಅವರ ಮೇಲೆ ಒಬ್ಬ ಶ್ರೇಷ್ಠ ಕಲಾವಿದ ಎಂಬ ಗೌರವವಿದೆ. ಆದರೆ, ಸ್ಮಾರಕ ಸಂಕೀರ್ಣಕ್ಕಾಗಿ ಬೆಂಗಳೂರಿನ ಪ್ರಮುಖ ಜಾಗದಲ್ಲಿ 2.5 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು ಎಷ್ಟು ಸಮಂಜಸ? ಎಂದು ಪ್ರಶ್ನಿಸಿದ್ದಾರೆ.
ಅಣ್ಣಾವ್ರ ಕನ್ನಡ ಭಾಷೆ, ಕಲೆ ಮತ್ತು ನಾಡಿಗೆ ನೀಡಿದ ಕೊಡುಗೆಯನ್ನು ಅರಿಯದೆ ಚೇತನ್ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಸಮಾಧಿ ಸ್ಥಳಗಳಿಗೆ ಎಕರೆಗಟ್ಟಲೆ ಜಾಗ ನೀಡಿದಾಗ ಚೇತನ್ ಅವರಿಗೆ ಸಾರ್ವಜನಿಕ ಉಪಯುಕ್ತತೆ ನೆನಪಾಗಲಿಲ್ಲವೇ? ಕೋಟ್ಯಂತರ ಕನ್ನಡಿಗರ ಆರಾಧ್ಯ ದೈವದ ಸ್ಮಾರಕದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ನೆಟ್ಟಿಗರು ತಿರುಗೇಟು ನೀಡಿದ್ದಾರೆ.
ಈ ಹಿಂದೆಯೂ ಚೇತನ್‌ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕಾನೂನು ಸಂಕಷ್ಟ ಎದುರಿಸಿದ್ದರು. ಅನೇಕ ರಾಜಕೀಯ ಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದ್ದರು.

Continue Reading

Latest

ಗ್ಯಾಂಗ್‌ಸ್ಟರ್ ಸಿನಿಮಾ ಎಂಬ ಭ್ರಮೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಯಶ್; ‘ಟಾಕ್ಸಿಕ್’ ಹಿಂದಿದೆ ಬೇರೆಯದೇ ಪ್ಲ್ಯಾನ್‌!

VISTARANEWS.COM


on

ಸ್ಯಾಂಡಲ್‌ವುಡ್‌ನಿಂದ ಜಾಗತಿಕ ಮಟ್ಟಕ್ಕೆ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್, ತಮ್ಮ ಮುಂದಿನ ಸಿನಿಮಾ ‘ಟಾಕ್ಸಿಕ್’ ಬಗ್ಗೆ ಅಭಿಮಾನಿಗಳಲ್ಲಿ ಇದ್ದ ಕುತೂಹಲಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಇತ್ತೀಚೆಗೆ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ‘ಸಿನಿಮಾಕಾನ್ 2026’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಈ ಸಿನಿಮಾ ಕೇವಲ ರಕ್ತಪಾತದ ಗ್ಯಾಂಗ್‌ಸ್ಟರ್ ಕಥೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಆಕ್ಷನ್ ಸಿನಿಮಾದಂತೆ ಕಂಡರೂ, ಕಥೆಯ ಒಳಗೆ ಮಾನವನ ಮನಸ್ಥಿತಿಯ ಆಳವಾದ ಪದರಗಳಿವೆ ಮತ್ತು ಇದು ಪ್ರತಿಯೊಬ್ಬರಿಗೂ ಹತ್ತಿರವಾಗುವಂತಹ ಭಾವನಾತ್ಮಕ ಕಥೆಯನ್ನು ಹೊಂದಿದೆ ಎಂದು ಅವರು ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ‘ಟಾಕ್ಸಿಕ್’ ಕೇವಲ ಭಾರತೀಯ ಭಾಷೆಗಳಿಗೆ ಸೀಮಿತವಾಗಿಲ್ಲ. ಈ ಚಿತ್ರವನ್ನು ಕನ್ನಡದ ಜೊತೆಗೆ ನೇರವಾಗಿ ಇಂಗ್ಲಿಷ್ ಭಾಷೆಯಲ್ಲೂ ಚಿತ್ರೀಕರಿಸಲಾಗಿದ್ದು, ಅಂತರರಾಷ್ಟ್ರೀಯ ಪ್ರೇಕ್ಷಕರನ್ನು ಸೆಳೆಯುವ ಗುರಿ ಹೊಂದಿದೆ. ಜಾಗತಿಕ ಮಟ್ಟದ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ದೃಶ್ಯ ವೈಭವದ ಜೊತೆಗೆ ಪ್ರೇಕ್ಷಕರನ್ನು ಆಳವಾಗಿ ಯೋಚಿಸುವಂತೆ ಮಾಡುವ ವಿಭಿನ್ನ ಶೈಲಿಯ ಸಿನಿಮಾ ಇದಾಗಲಿದೆ ಎಂಬ ಭರವಸೆಯನ್ನು ಯಶ್ ನೀಡಿದ್ದಾರೆ. ಈ ಸುದ್ದಿಯು ಯಶ್ ಅವರ ಅಭಿಮಾನಿಗಳಲ್ಲಿ ಸಿನಿಮಾದ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಚಿತ್ರದ ಬಿಡುಗಡೆ ವಿಚಾರಕ್ಕೆ ಬರುವುದಾದರೆ, ಈ ಹಿಂದೆ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಸಿನಿಮಾ ವಿಳಂಬವಾಗಬಹುದು ಎಂಬ ವದಂತಿಗಳಿದ್ದವು. ಆದರೆ, ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ ಎಲ್ಲ ಅಡೆತಡೆಗಳನ್ನು ದಾಟಿ ಸಿನಿಮಾ ಜೂನ್ 4, 2026 ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಕಿಯಾರಾ ಅಡ್ವಾಣಿ, ನಯನತಾರಾ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಈ ಸಿನಿಮಾದಲ್ಲಿದ್ದು, ಜೂನ್ ತಿಂಗಳಿನಲ್ಲಿ ‘ಟಾಕ್ಸಿಕ್’ ಹವಾ ಶುರುವಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.

Continue Reading

ಸಿನಿಮಾ

Dolly Dhananjay: ಕೋಟೆ ನಾಡಿನ ಕನ್ಯೆ ಜತೆಗೆ ಸಪ್ತಪದಿ ತುಳಿಯಲ್ಲಿದ್ದಾರೆ ಡಾಲಿ ಧನಂಜಯ್‌

Dolly Dhananjay : ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ನಟ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಜೋಡಿ ಹಸೆಮಣೆ ಏರಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಡಾಲಿ ಧನಂಜಯ್‌ ತಮ್ಮ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ.

VISTARANEWS.COM


on

Dolly Dhananjay

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ನಟರಾಕ್ಷಸ ಡಾಲಿ ಧನಂಜಯ್‌ (Dolly Dhananjay) ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.

Sandalwood star Dali Dhananjay And dhanya They are getting married next year

ಹಲವು ದಿನಗಳ ಮೌನಕ್ಕೆ ತೆರೆ ಎಳೆದಿರುವ ಧನಂಜಯ್ ಬೆಳಕಿನ ಹಬ್ಬ ದೀಪಾವಳಿಯಂದು ಬಾಳ ಸಂಗತಿಯನ್ನು ಪರಿಚಯಿಸಿದ್ದಾರೆ.

Sandalwood star Dali Dhananjay And dhanya They are getting married next year

ಡಾಕ್ಟರ್ ಧನ್ಯತಾ ಜತೆಗೆ ಸಪ್ತಪದಿ ತುಳಿಯಲಿದ್ದಾರೆ. ಕೋಟೆ ನಾಡು ಚಿತ್ರದುರ್ಗದ ಧನ್ಯತಾ ಅವರೊಂದಿಗೆ ಮುಂದಿನ ವರ್ಷ ಫೆಬ್ರವರಿ 16 ರಂದು ಅದ್ಧೂರಿಯಾಗಿ ವಿವಾಹ ನಡೆಯಲಿದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಧನ್ಯತಾ ಹಾಗೂ ಧನಂಜಯ್‌ ವಿವಾಹ ನಡೆಯಲಿದೆ.

Sandalwood star Dali Dhananjay And dhanya They are getting married next year

ಸೌತ್ ಸಿನಿಮಾ ಇಂಡಸ್ಟ್ರಿ ತಾರೆಯರು ಹಾಗು ಹಲವು ರಾಜಕೀಯ ಗಣ್ಯರು ಡಾಲಿ ಧನಂಜಯ್ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ.

Sandalwood star Dali Dhananjay And dhanya They are getting married next year

ವಿಭಿನ್ನ ರೀತಿಯ ಫೋಟೊಶೂಟ್‌ ನಡೆಸಿ ತಮ್ಮ ಹುಡುಗಿಯನ್ನು ಪರಿಚಯಿಸಿದ ಡಾಲಿ ಧನಂಜಯ್‌

Sandalwood star Dali Dhananjay And dhanya They are getting married next year
Continue Reading

ಸಿನಿಮಾ

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

Actor Darshan: ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, 6 ವಾರಗಳ ನಂತ್ರ ಮತ್ತೆ ಸರೆಂಡರ್‌ ಆಗಬೇಕಿದೆ

VISTARANEWS.COM


on

Hc grants interim bail to actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. 5 ತಿಂಗಳ ಬಳಿಕ ನಟ ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ನೀಡಿ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಿಂದ ಆದೇಶ ಹೊರಡಿದೆ. ಇನ್ನು ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕಿಲ್ಲ. ಬದಲಾಗಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್‌ ಆದೇಶ ನೀಡಿದೆ.

ಬೆನ್ನುಹುರಿ ಚಿಕಿತ್ಸೆಗೆ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಅಂಗೀಕಾರವಾಗಿದೆ. ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವಾರದಲ್ಲಿ ಯಾವ ರೀತಿಯ ಚಿಕಿತ್ಸೆ ಎಂಬ ವರದಿಯನ್ನು ನೀಡಬೇಕು. ದರ್ಶನ್ ತನ್ನ ಪಾಸ್‌ಪೋರ್ಟ್ ಸರಂಡರ್ ಮಾಡಬೇಕೆಂದು ನ್ಯಾ . ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆದೇಶಿಸಿದೆ.

ಏನಿದು ಕೊಲೆ ಕೇಸ್‌?

ಜೂನ್ 9ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸಂಬಂಧ ಜೂನ್ 11ರಂದು ಮೈಸೂರಿನಲ್ಲಿ ಎ2 ದರ್ಶನ್ ಅರೆಸ್ಟ್ ಆಗಿದ್ದರು. ಜೂನ್ 22ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಜೂ.22ರಂದು ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಅಲ್ಲಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಶಿಫ್ಟ್ ಮಾಡಲಾಗಿತ್ತು. ಆ.29ರಂದು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದ ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ.

ಪವಿತ್ರಾಗೌಡ ಖುಷಿ

ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಖುಷಿ ಆಗಿದ್ದಾರೆ. ತನ್ನಿಂದಾಗಿ ದರ್ಶನ್ ಜೈಲು ಸೇರಿದ ಎಂಬ ಬೇಸರವಿತ್ತು. ದರ್ಶನ್‌ಗೆ ಜಾಮೀನು ಸಿಕ್ಕಿದೆ ಎಂದು ಪವಿತ್ರಾ ಖುಷಿಯಾಗಿದ್ದು, ತನಗೂ ಬೇಲ್ ಸಿಗುತ್ತೆಂಬ ವಿಶ್ವಾಸದಲ್ಲಿದ್ದಾರೆ.

Continue Reading
Advertisement
bigbreaking9 hours ago

ಮೋದಿ ಅಥವಾ ದೀದಿ? ಪ.ಬಂಗಾಳದ ಭವಿಷ್ಯ ನಿರ್ಧರಿಸಲಿದೆ 142 ಸೀಟು

Latest9 hours ago

ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ’: ಸಿಎಂ ಬದಲಾವಣೆ ಬಗ್ಗೆ ರಾಜಣ್ಣ ನೀಡಿದ ಹೇಳಿಕೆಯ ಮರ್ಮವೇನು?

ಕ್ರೀಡೆ10 hours ago

ಕಿಂಗ್ ಕೊಹ್ಲಿಗೆ ಟಕ್ಕರ್ ಕೊಟ್ಟ ಯುವ ಕಿಡಿ: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಹಿಂದಿಕ್ಕಿದ ವೈಭವ್ ಸೂರ್ಯವಂಶಿ!

Latest10 hours ago

ಅಪ್ಪು ಸರ್ ಕೊಟ್ಟ ಆ ಪ್ರೋತ್ಸಾಹವೇ ನನ್ನ ಯಶಸ್ಸಿನ ಗುಟ್ಟು: ಕನ್ನಡಿಗರ ನೆಚ್ಚಿನ ‘ಅಂಜನಿಪುತ್ರ’ನ ಬಗ್ಗೆ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಹೇಳಿದ್ದೇನು?

bigbreaking11 hours ago

20 ಸಾವಿರ ಕೋಟಿ ಹಗರಣದ ಮೂಲ ದಾಖಲೆಗಳೇ ನಾಪತ್ತೆ. ಎನ್‌.ಆರ್‌.ರಮೇಶ್‌ ಗಂಭೀರ ಆರೋಪ.

Latest11 hours ago

ಕಿಂಗ್ ಕೊಹ್ಲಿಗಾಗಿ ಪುಟಾಣಿ ಫ್ಯಾನ್ ಹಠ: ಹೋಟೆಲ್ ಸಿಬ್ಬಂದಿ ತಡೆದಿದ್ದಕ್ಕೆ ಕಣ್ಣೀರು ಹಾಕಿದ ಬಾಲಕ

Latest12 hours ago

ಹಣ ಪಡೆಯಲು ಬ್ಯಾಂಕಿಗೆ ಸಹೋದರಿಯ ಅಸ್ಥಿಪಂಜರವನ್ನೇ ತಂದ ವ್ಯಕ್ತಿ!

Latest14 hours ago

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರಾ? ಪರಮೇಶ್ವರ್ ಮೌನದ ಹಿಂದೆ ಅಡಗಿದೆಯೇ ದೊಡ್ಡ ರಹಸ್ಯ?

Latest15 hours ago

ಸಾಲದ ಸುಳಿಯಲ್ಲಿ ರಾಜ್ಯ ಸರ್ಕಾರ! ಆರ್ಥಿಕ ಶಿಸ್ತಿನ ಬಗ್ಗೆ ಹೆಚ್‌ಡಿಕೆ ಆತಂಕ

Latest16 hours ago

ರಿಷಬ್ ಶೆಟ್ಟಿ ಸಿನಿಮಾದ ತೆಲುಗು ವರ್ಷನ್ ರೆಡಿ: ಟಾಲಿವುಡ್‌ನಲ್ಲಿ ಬಿಡುಗಡೆಗೆ ದಿನಾಂಕ ನಿಗದಿ! ಯಾವುದು ಆ ಸಿನಿಮಾ?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌