Rishab Shetty: ಒಂದೇ ಫ್ರೇಮ್‌ನಲ್ಲಿ ರಿಷಬ್‌, ಜ್ಯೂನಿಯರ್‌ ಎನ್‌ಟಿಆರ್‌, ಪ್ರಶಾಂತ್‌ ನೀಲ್‌: ಫ್ಯಾನ್ಸ್‌ಗೆ ಹೆಚ್ಚಿತು ಕುತೂಹಲ! - Vistara News

ಸ್ಯಾಂಡಲ್ ವುಡ್

Rishab Shetty: ಒಂದೇ ಫ್ರೇಮ್‌ನಲ್ಲಿ ರಿಷಬ್‌, ಜ್ಯೂನಿಯರ್‌ ಎನ್‌ಟಿಆರ್‌, ಪ್ರಶಾಂತ್‌ ನೀಲ್‌: ಫ್ಯಾನ್ಸ್‌ಗೆ ಹೆಚ್ಚಿತು ಕುತೂಹಲ!

Rishab Shetty: ಮಾರ್ಚ್​ 1ರಂದು ಪ್ರಶಾಂತ್ ನೀಲ್ ಮನೆಯಲ್ಲಿ ಕಾರ್ಯಕ್ರಮ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಜೂನಿಯರ್​ ಎನ್​ಟಿಆರ್ ಅವರು ತೆರೆಳಿದ್ದರು. ಎನ್​ಟಿಆರ್ ಜತೆ ಅವರ ಪತ್ನಿ, ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

VISTARANEWS.COM


on

Jr NTR Posing With Rishab Shetty and Prashanth Neel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʻಕೆಜಿಎಫ್‌ 1ʼ ಹಾಗೂ ʻಕೆಜಿಎಫ್‌ 2ʼರ (Rishab Shetty) ಖ್ಯಾತಿಯ ಪ್ರಶಾಂತ್‌ ನೀಲ್‌, ‘ಕಾಂತಾರ’ ಮೂಲಕ ಖ್ಯಾತಿ ಪಡೆದ ರಿಷಬ್‌ ಶೆಟ್ಟಿ, ಹಲವು ಸೂಪರ್ ಹಿಟ್​ ಚಿತ್ರಗಳನ್ನು ನೀಡಿದ ಜ್ಯೂನಿಯರ್‌ ಎನ್‌ಟಿಆರ್‌ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಮೂವರು ಒಟ್ಟಿಗೆ ಇರೋದು ನೋಡಿ ಫ್ಯಾನ್ಸ್‌ ಮೂವರು ಜತೆಗೂಡಿ ಸಿನಿಮಾ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಮೂವರು ಒಂದುಗೂಡಿದ್ದೂ ಯಾಕೆ? ತಿಳಿಯಲು ಮುಂದೆ ಓದಿ!

ಮಾರ್ಚ್​ 1ರಂದು ಪ್ರಶಾಂತ್ ನೀಲ್ ಮನೆಯಲ್ಲಿ ಕಾರ್ಯಕ್ರಮ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಜ್ಯೂನಿಯರ್‌ ಎನ್​ಟಿಆರ್ ಅವರು ತೆರೆಳಿದ್ದರು. ಎನ್​ಟಿಆರ್ ಜತೆ ಅವರ ಪತ್ನಿ, ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಈಗಾಗಲೇ ಪ್ರಶಾಂತ್‌ ನೀಲ್‌ ಅವರು ಜ್ಯೂನಿಯರ್‌ ಎನ್‌ಟಿಆರ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ‘ಕಾಂತಾರ’ ಹಾಗೂ ‘ಕೆಜಿಎಫ್’ ಸರಣಿಯನ್ನು ನಿರ್ಮಾಣ ಮಾಡಿದ್ದು ಹೊಂಬಾಳೆ ಫಿಲ್ಮ್ಸ್. ಹೀಗಾಗಿ, ಪ್ರಶಾಂತ್ ನೀಲ್ ಹಾಗೂ ರಿಷಬ್ ಶೆಟ್ಟಿ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ.

ಇದನ್ನೂ ಓದಿ: Rishab Shetty: ಕಾಂತಾರ 2ನಲ್ಲಿ ದೈವಾರಾಧನೆ ಪ್ರದರ್ಶಿಸಿದರೆ ಉಗ್ರ ಹೋರಾಟ: ರಿಷಬ್‌ಗೆ ವಾರ್ನಿಂಗ್‌!

 ‘ದೇವರ‘ ಸಿನಿಮಾ (Devara Movie) ಒಂದು ದೊಡ್ಡ-ಬಜೆಟ್ ಕಮರ್ಷಿಯಲ್ ಆ್ಯಕ್ಷನ್ ಎಂಟರ್‌ಟೈನರ್. ಕೊರಟಾಲ ಶಿವ ಈ ಸಿನಿಮಾ ನಿರ್ದೇಶಕರು. `ದೇವರ’ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಪಕರು ಹೊಸ ಅಪ್ ಡೇಟ್ ನೀಡಿದ್ದಾರೆ. ಈ ಚಿತ್ರವು 2024ರ ಅಕ್ಟೋಬರ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ಮೊದಲ ಭಾಗಕ್ಕೆ ‘ದೇವರ: ಭಾಗ 1’ ಎಂದು ಹೆಸರಿಡಲಾಗಿದೆ. ಈ ಮುಂಚೆ ಚಿತ್ರತಂಡ ಏಪ್ರಿಲ್ 5 ರಂದು ಸಿನಿಮಾ ರಿಲೀಸ್‌ ಡೇಟ್‌ವನ್ನು ಘೋಷಿಸಿತ್ತು.

ಜ್ಯೂನಿಯರ್‌ ಎನ್‌ಟಿಆರ್‌, ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವರ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್​ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್​ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ.

ಈ ಚಿತ್ರದ OTT ಹಕ್ಕುಗಳನ್ನು ಸ್ಟ್ರೀಮಿಂಗ್ ಕಂಪನಿ ನೆಟ್ಫ್ಲಿಕ್ಸ್ ಭಾರಿ ಬೆಲೆಗೆ ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, ನೆಟ್ಫ್ಲಿಕ್ಸ್ 155 ಕೋಟಿ ರೂಪಾಯಿ ನೀಡಿ ಈ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Manvita Kamath: ʻಟಗರು ಪುಟ್ಟಿʼಗೆ ಕಂಕಣ ಭಾಗ್ಯ ಕೂಡಿ ಬಂತು! ವರ ಯಾರು?

Manvita Kamath: ನಟಿ ಮಾನ್ವಿತಾ ಕಾಮತ್ ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಕುಮಾರ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. 2015ರಲ್ಲಿ ತೆರೆಗೆ ಬಂದ ‘ಕೆಂಡಸಂಪಿಗೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಟಗರು’ ಚಿತ್ರದಲ್ಲಿ ಮಾನ್ವಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಚಿತ್ರದಲ್ಲಿಯೇ ಸೈಮಾ ಪ್ರಶಸ್ತಿ ಪಡೆಯುತ್ತಾರೆ.ʻಚೌಕ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು, ಕನಕ’, ಟಗರು’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

VISTARANEWS.COM


on

Manvita Kamath
Koo

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ (Manvita Kamath) ಸ್ಯಾಂಡಲ್‌ವುಡ್‌ನಲ್ಲಿ ಟಗರು ಪುಟ್ಟಿ ಎಂದೇ ಖ್ಯಾತಿ ಪಡೆದಿದ್ದಾರೆ. ಇದೀಗ ನಟಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ನಟಿ ಮಾನ್ವಿತಾ ಕಾಮತ್ ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಕುಮಾರ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

ಇದೇ ಮೇ 1 ರಂದು ಅರುಣ್ ಕುಮಾರ್ ಅವರೊಂದಿಗೆ ಹಸಮಣೆ ಏರುತ್ತಿರುವುದಾಗಿ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Rameshwaram Cafe Blast: ಯಾರು ಈ ಅಬ್ದುಲ್‌ ಮತೀನ್‌ ತಾಹಾ? ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಮಾಸ್ಟರ್‌ ಮೈಂಡ್‌ ಎಲ್ಲಿಯವನು?

2015ರಲ್ಲಿ ತೆರೆಗೆ ಬಂದ ‘ಕೆಂಡಸಂಪಿಗೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಟಗರು’ ಚಿತ್ರದಲ್ಲಿ ಮಾನ್ವಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಚಿತ್ರದಲ್ಲಿಯೇ ಸೈಮಾ ಪ್ರಶಸ್ತಿ ಪಡೆಯುತ್ತಾರೆ.

ʻಚೌಕ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು, ಕನಕ’, ಟಗರು’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Yash: `ರಾಮಾಯಣ’ಕ್ಕೆ ಯಶ್‌ ನಿರ್ಮಾಪಕ: ರಾವಣನ ಪಾತ್ರ ನಿಭಾಯಿಸೋದು ಯಾರು?

Actor Yash: ರಾಮಾಯಣʼ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡುವುದಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಆದರೆ ರಾವಣನ ಪಾತ್ರಕ್ಕೆ ಯಶ್‌ ಬಣ್ಣ ಹಚ್ಚಲಿದ್ದಾರಾ? ಇಲ್ಲವಾ? ಎಂಬುದರ ಬಗ್ಗೆ ಅಧಿಕೃತ ಮಾಹಿತಿ ನಟ ಹಂಚಿಕೊಂಡಿಲ್ಲ.

VISTARANEWS.COM


on

Actor Yash
Koo

ಬೆಂಗಳೂರು: ಬಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ʻರಾಮಾಯಣʼ (Actor Yash) ಚಿತ್ರೀಕರಣ ಪ್ರಾರಂಭವಾಗಿದೆ. ಭಾರತೀಯ ಪುರಾಣದ ಕಥೆಯನ್ನು ತೆರೆದಿಡುವ ʻರಾಮಾಯಣʼ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ. ಆದರೆ ರಾವಣನ ಪಾತ್ರಕ್ಕೆ ಯಶ್‌ ಬಣ್ಣ ಹಚ್ಚಲಿದ್ದಾರಾ? ಇಲ್ಲವಾ? ಎಂಬುದರ ಬಗ್ಗೆ ಅಧಿಕೃತ ಮಾಹಿತಿ ನಟ ಹಂಚಿಕೊಂಡಿಲ್ಲ.

ರಾಮಾಯಣಕ್ಕೆ ರಾಕಿ ಕೂಡ ನಿರ್ಮಾಪಕ

ʻರಾಮಾಯಣʼ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡುವುದಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಯಶ್ ಒಡೆತನದ ʻಮಾನ್ಸ್ಟರ್ ಮೈಂಡ್ ಕ್ರಿಯೇಷನ್ʼ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ʻಪ್ರೈಮ್ ಫೋಕಸ್ ಸ್ಟುಡಿಯೊʼ ರಾಮಾಯಣ ಸಿನಿಮಾವನ್ನು ನಿರ್ಮಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಮಿತ್ ಮಲ್ಹೋತ್ರಾ, ʻʻರಾಮಾಯಣ ಕಥೆಗೆ ನ್ಯಾಯ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲು ನಾನು ಉತ್ಸಕನಾಗಿದ್ದೇನೆ. ನಾನು ಯಶ್ ಅವರಲ್ಲಿಯೂ ಇದನ್ನು ಕಂಡುಕೊಂಡಿದ್ದೇನೆ. ಯಶ್‌ ಅವರ ಪಯಣದಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ಯಶ್ ಅವರಲ್ಲಿರುವ ಯೋಜನೆಯನ್ನು ಅರಿತುಕೊಂಡಿದ್ದೇನೆ. ರಾಮಾಯಣ ದೃಶ್ಯಕಾವ್ಯವನ್ನು ತೆರೆಗೆ ತರುತ್ತಿದ್ದೇವೆʼʼ ಎಂದರು.

ಇದನ್ನೂ ಓದಿ: Blast in Bengaluru: ಕೊನೆಗೂ ಸಿಕ್ಕಿಬಿದ್ದ ರಾಮೇಶ್ವರಂ ಕೆಫೆ ಬಾಂಬರ್!‌ ಪ್ರಧಾನ ಸೂತ್ರಧಾರಿಯೂ ಎನ್‌ಐಎ ವಶಕ್ಕೆ

ಯಶ್ ಮಾತನಾಡಿ, ʻʻಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಕಾಟದಲ್ಲಿ ನಾನು ಅತ್ಯುತ್ತಮ VFC ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ಬ ಭಾರತೀಯ. ನಾವು ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವಾಗ ರಾಮಾಯಣ ವಿಷಯವು ಬಂದಿತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಸಿನಿಮಾ ರೂಪ ತಾಳುತ್ತಿದೆ. ಆ ಅತ್ಯುತ್ತಮ ಅನುಭವನ್ನು ಜಗತ್ತಿಗೆ ನೀಡಲು ನಾವು ಕಾತರರಾಗಿದ್ದೇವೆʼʼ ಎಂದರು.

ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು.

ಯಶ್ ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಬ್ಯಾನರ್ ನಡಿ ‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಇದೇ ಬ್ಯಾನರ್ ನಡಿ ‘ರಾಮಾಯಣ’ ಸಿನಿಮಾಗೂ ಯಶ್ ಬಂಡವಾಳ ಹೂಡುತ್ತಿದ್ದಾರೆ.

Continue Reading

ಸ್ಯಾಂಡಲ್ ವುಡ್

Dr. Rajkumar:  ವರನಟ ರಾಜ್‌ಕುಮಾರ್‌ ನಮ್ಮನ್ನು ಅಗಲಿ ಇಂದಿಗೆ 18 ವರ್ಷ!

Dr. Rajkumar:  ಕನ್ನಡ ಚಿತ್ರರಂಗದ ಮಾಣಿಕ್ಯದಂತಿದ್ದ ರಾಜ್‌ ಅವರು 2006ರ ಏಪ್ರಿಲ್‌ 12ರಂದು ನಿಧನರಾದರು. ಅವರ ಮಕ್ಕಳಾದ ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಕೂಡ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ನಟರಾಗಿ ಮಿಂಚಿದ್ದಾರೆ. ನಟಸಾರ್ವಭೌಮ ಅವರ 18ನೇ ಪುಣ್ಯತಿಥಿ ಪ್ರಯುಕ್ತ ದೊಡ್ಮನೆ ಕುಟುಂಬದವರು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ಕುಮಾರ್‌ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.

VISTARANEWS.COM


on

Dr. Rajkumar
Koo

ಬೆಂಗಳೂರು: ಡಾ.ರಾಜ್‌ಕುಮಾರ್‌ (Dr. Rajkumar) ಕನ್ನಡ ಸಿನಿಮಾ ರಂಗದ ಅತ್ಯಮೂಲ್ಯ ರತ್ನ ಎಂದರೂ ತಪ್ಪಾಗದು. ಅತ್ಯದ್ಭುತ ಸಿನಿಮಾಗಳನ್ನು ಹಾಗೆಯೇ ಚಿತ್ರರಂಗದ ಪ್ರೀತಿಯ ದೊಡ್ಮನೆ ಕುಟುಂಬವನ್ನು ಕೊಟ್ಟವರು ಅವರು. ಕರ್ನಾಟಕಕ್ಕೆ ಸಿಕ್ಕ ವರನಟ ಎಂದೇ ಪ್ರಖ್ಯಾತರಾಗಿದ್ದ ಅವರು ನಮ್ಮನ್ನು ಅಗಲಿ ಇಂದಿಗೆ (ಏ.12) 18 ವರ್ಷಗಳು ಕಳೆದಿವೆ.

ನಟಸಾರ್ವಭೌಮ ಅವರ 18ನೇ ಪುಣ್ಯತಿಥಿ ಪ್ರಯುಕ್ತ ದೊಡ್ಮನೆ ಕುಟುಂಬದವರು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ಕುಮಾರ್‌ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.

ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ 1929ರ ಏಪ್ರಿಲ್ 24ರಂದು ರಾಜ್‌ಕುಮಾರ್ ಹುಟ್ಟಿದರು. ಅವರಿಗೆ ತಂದೆ ತಾಯಿ ಇಟ್ಟ ಹೆಸರು ಮುತ್ತುರಾಜು (ಮುತ್ತಣ್ಣ). ಬೇಡರ ಕಣ್ಣಪ್ಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಸೇರಿದ ಅವರು ಮಾಡಿದ ಸಿನಿಮಾಗಳೆಲ್ಲವೂ ಹಿಟ್‌ ಸಿನಿಮಾಗಳೇ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಅವರ ಹಲವಾರು ಸಿನಿಮಾಗಳು ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ರಾಜ್‌ಕುಮಾರ್‌ ಅವರು ಕೊನೆಯದಾಗಿ 2000ನೇ ಇಸವಿಯಲ್ಲಿ ಶಬ್ದವೇಧಿ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು.

ಡಾ.ರಾಜ್​ಕುಮಾರ್ ಕನ್ನಡದ ಪ್ರಸಿದ್ಧ ಕಾದಂಬರಿಗಳನ್ನು ಆಧರಿಸಿ ಚಲನಚಿತ್ರಗಳನ್ನು ನಿರ್ಮಿಸಿದರು. ತಮ್ಮ ಸಹೋದರ ಎಸ್.ಪಿ.ವರದರಾಜು ಅವರೊಂದಿಗೆ ಸಮಾಲೋಚಿಸಿದ ನಂತರವೇ ಚಿತ್ರಗಳಿಗೆ ಸಹಿ ಹಾಕುತ್ತಿದ್ದರು.

ಇದನ್ನೂ ಓದಿ: Dr. Rajkumar : ವರನಟ ರಾಜ್‌ಕುಮಾರ್‌ ನಮ್ಮನ್ನು ಅಗಲಿ ಇಂದಿಗೆ 17 ವರ್ಷ; ಕಂಠೀರವ ಸ್ಟುಡಿಯೋದಲ್ಲಿ ಪೂಜೆ

ರಾಜ್‌ಕುಮಾರ್‌ ಅವರು ಕೇವಲ ನಟನಾಗಿ ಮಾತ್ರವಲ್ಲದೆ ಗಾಯಕರಾಗಿಯೂ ಗುರುತಿಸಿಕೊಂಡವರು. ಸಂಪತ್ತಿಗೆ ಸವಾಲ್‌ ಸಿನಿಮಾದಲ್ಲಿ ಅವರು ಹಾಡಿದ ʼಯಾರೇ ಕೂಗಾಡಲಿʼ ಹಾಡು ಇಂದಿಗೂ ಅನೇಕರ ಫೇವರಿಟ್‌ ಹಾಡು. ರಾಜ್‌ಕುಮಾರ್‌ ಅವರ ಧ್ವನಿಯಲ್ಲಿ ಬಂದ ಅನೇಕ ಭಕ್ತಿ ಗೀತೆಗಳ ಕ್ಯಾಸೆಟ್‌ಗಳೂ ಕೂಡ ಆ ಕಾಲದಲ್ಲಿ ಬಿಡುಗಡೆಯಾಗಿ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದವು. ಕನ್ನಡ ಚಿತ್ರರಂಗದ ಮಾಣಿಕ್ಯದಂತಿದ್ದ ರಾಜ್‌ ಅವರು 2006ರ ಏಪ್ರಿಲ್‌ 12ರಂದು ನಿಧನರಾದರು. ಅವರ ಮಕ್ಕಳಾದ ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಕೂಡ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ನಟರಾಗಿ ಮಿಂಚಿದ್ದಾರೆ. ಇದೀಗ ರಾಜ್‌ ಅವರ ಮೊಮ್ಮಕ್ಕಳು ಕೂಡ ಸಿನಿ ರಂಗಕ್ಕೆ ಪ್ರವೇಶಿಸಿದ್ದಾರೆ.

Continue Reading

Latest

Movie web series: ಆ್ಯಕ್ಷನ್‌, ಥ್ರಿಲರ್, ಹಾರರ್: ವಾರಾಂತ್ಯಕ್ಕೆ ಬರಲಿವೆ ಬಹು ನಿರೀಕ್ಷಿತ ಚಿತ್ರಗಳು!

Movie, web series: ಹಬ್ಬ ಮುಗಿದು ವಾರ ಕೊನೆಯಾಗುವ ಹೊತ್ತಿಗೆ ಮುಂದಿನ ವಾರದಿಂದ ಒಂದೊಂದು ಚಿತ್ರಗಳು ತೆರೆಗೆ ಬರಲು ಕಾತರಿಸುವಂತಿದೆ. ಒಟಿಟಿಯಲ್ಲೂ ಹೊಸಹೊಸ ಸರಣಿಗಳು ಬರುವ ನಿರೀಕ್ಷೆ ಮೂಡಿಸಿದೆ. ಕೆಲವು ವೆಬ್ ಸೀರಿಸ್‌ಗಳು ಈ ವಾರದಲ್ಲೇ ಸರಣಿ ಪ್ರದರ್ಶನಕ್ಕೆ ಚಾಲನೆ ನೀಡಿವೆ. ಗುರುವಾರ, ಶುಕ್ರವಾರ, ಶನಿವಾರ ಒಂದಷ್ಟು ಸಿನಿಮಾ, ಸೀರಿಸ್ ಬಿಡುಗಡೆಯಾಗಲು ಕಾಯುತ್ತಿವೆ.

VISTARANEWS.COM


on

By

Movie, web series
Koo

ಬೆಂಗಳೂರು: ಹಬ್ಬದ ವೇಳೆಗೆ ಹೊಸ ಚಿತ್ರ ತೆರೆಗೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಈ ಬಾರಿ ಯುಗಾದಿ (yugad), ಈದ್ ಮಿಲಾದ್ (eid-millad) ಹಬ್ಬ ಬೇಸರ ಮೂಡಿಸಿತ್ತು. ಯಾಕೆಂದರೆ ರಜೆಯ ಮೂಡ್ ನಲ್ಲಿದ್ದವರಿಗೆ ಯಾವುದೇ ದೊಡ್ಡ ಸಿನಿಮಾಗಳು (Movie, web series) ತೆರೆ (theater) ಮೇಲೆ ಕಾಣಲಿಲ್ಲ, ಒಟಿಟಿಯಲ್ಲೂ (OTT) ಸಿಗಲಿಲ್ಲ.

ಹಬ್ಬ ಮುಗಿದು ವಾರ ಕೊನೆಯಾಗುವ ಹೊತ್ತಿಗೆ ಮುಂದಿನ ವಾರದಿಂದ ಒಂದೊಂದು ಚಿತ್ರಗಳು ತೆರೆಗೆ ಬರಲು ಕಾತರಿಸುವಂತಿದೆ. ಒಟಿಟಿಯಲ್ಲೂ ಹೊಸಹೊಸ ಸರಣಿಗಳು ಬರುವ ನಿರೀಕ್ಷೆ ಮೂಡಿಸಿದೆ. ಕೆಲವು ವೆಬ್ ಸೀರಿಸ್‌ಗಳು ಈ ವಾರದಲ್ಲೇ ಸರಣಿ ಪ್ರದರ್ಶನಕ್ಕೆ ಚಾಲನೆ ನೀಡಿವೆ. ಗುರುವಾರ, ಶುಕ್ರವಾರ, ಶನಿವಾರ ಒಂದಷ್ಟು ಸಿನಿಮಾ, ಸೀರಿಸ್ ಬಿಡುಗಡೆಯಾಗಲು ಕಾಯುತ್ತಿವೆ.

ಇದನ್ನೂ ಓದಿ: Duniya Vijay: ಪುತ್ರಿಗಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌

ಎಂದಿನಂತೆ ಕನ್ನಡ ಚಿತ್ರರಂಗದಿಂದ ಯಾವುದೇ ಹೊಸ ಸಿರೀಸ್‌, ಚಿತ್ರಗಳು ತೆರೆಗೆ ಬರುವ ನಿರೀಕ್ಷೆ ಇಲ್ಲ. ಈಗಾಗಲೇ ಥಿಯೇಟರ್‌ಗಳಲ್ಲಿ ‘ಯುವ’, ‘ಬ್ಲಿಂಕ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಕೆಲವು ಸಿನಿಮಾಗಳು ಥಿಯೇಟರ್‌ಗೆ ಬಂದಿದ್ದರೂ ಒಟಿಟಿಗೆ ಬಂದಿಲ್ಲ. ಹೀಗಾಗಿ ಮುಂದೆಯಾದರೂ ಒಂದಷ್ಟು ಸಿನಿಮಾಗಳ ಒಟಿಟಿಯಲ್ಲಿ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕನ್ನಡ ಸಿನಿ ಪ್ರಿಯರು.

ಈ ವಾರದಲ್ಲಿ ಹಲವು ಚಿತ್ರಗಳು ಥಿಯೇಟರ್ ಹಾಗೂ ಓಟಿಟಿಗೆ ಬರಲು ಸಜ್ಜಾಗಿದೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

ʻಬಡೇ ಮಿಯಾ ಚೋಟೆ ಮಿಯಾʼ

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಜೊತೆಯಾದರೆ ಆ್ಯಕ್ಷನ್ ನೊಂದಿಗೆ ಮನೋರಂಜನೆಗೇನೂ ಕೊರತೆಯಾಗದು. ಇವರಿಬ್ಬರು ಒಟ್ಟಿಗೆ ನಟಿಸಿರುವ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ʻಬಡೇ ಮಿಯಾ ಚೋಟೆ ಮಿಯಾʼ ಈ ವಾರದಲ್ಲಿ ತೆರೆಗೆ ಬರಲಿದೆ. ಮಾನುಷಿ ಚಿಲ್ಲರ್‌, ಸೋನಾಕ್ಷಿ ಸಿನ್ಹಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ʻಮೈದಾನ್’

ಬಹು ನಿರೀಕ್ಷೆ ಮೂಡಿಸಿರುವ ಅಜಯ್ ದೇವಗನ್ ಜತೆಗೆ ಪ್ರಿಯಾಮಣಿ ನಟನೆಯ ‘ಮೈದಾನ್’ ಸಿನಿಮಾ ತೆರೆಗೆ ಬರಲು ಕಾಯುತ್ತಿದೆ. ಬೋನಿ ಕಪೂರ್ ನಿರ್ದೇಶನದ ಈ ಚಿತ್ರ ಖ್ಯಾತ ಭಾರತದ ಫುಟ್ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಮ್ ಅವರ ಜೀವನವನ್ನು ಆಧರಿಸಿದೆ.

ಪ್ರೇಮಲು

ಹಾಟ್ ಸ್ಟಾರ್ ನಲ್ಲಿ ಸಣ್ಣ ಬಜೆಟ್‌ನ ಮಲಯಾಳಂ ಚಿತ್ರ ಪ್ರೇಮಲು ತೆರೆಗೆ ಬರಲಿದೆ. ಮಲಯಾಳಂ ಹಾಗೂ ತೆಲುಗಿನಲ್ಲಿ ಡಬ್ ಆಗಿ ಹಿಟ್ ಆಗಿದ್ದ ಈ ಚಿತ್ರದ ತೆಲುಗು ಚಿತ್ರ ಈಗಾಗಲೇ ಒಟಿಟಿಯಲ್ಲಿದೆ. ಏಪ್ರಿಲ್ 12ರಂದು ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ನೆಸ್ಲೇನ್ ಕೆ ಗೂಫರ್ ಮತ್ತು ಮಮಿತಾ ಬೈಜು ನಾಯಕಿಯರಾಗಿ ನಟಿಸಿರುವ ಪ್ರೇಮಲು ಚಿತ್ರವನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ.

ಕರುಂಗಾಪಿಯಂ

ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡ ಕಾಜಲ್ ಅಗರ್‌ವಾಲ್ ಹಾಗೂ ರೆಗಿಮಾ ಕಸೆಂದ್ರಾ ನಟನೆಯ ‘ಕರುಂಗಾಪಿಯಂ’ ಸಿನಿಮಾ ತೆಲುಗಿಗೂ ಡಬ್ ಆಗಿ ಒಟಿಟಿಯಲ್ಲಿ ತೆರೆಕಂಡಿದೆ.


ಅಮೇಜಾನ್ ಪ್ರೈಂ

ಈ ಬಾರಿ ಅಮೇಜಾನ್ ಪ್ರೈಂ ನಲ್ಲಿ ಏಪ್ರಿಲ್ 1ರಿಂದ ಹಾಲಿವುಡ್ ಸಿರೀಸ್ ಫಾಲ್ ಔಟ್, ಏಪ್ರಿಲ್ 9ರಿಂದ ಹಾರರ್ ಸಿನೆಮಾ ದಿ ಎಕ್ಸಾರ್ಸಿಸ್ಟ್: ಬಿಲಿವರ್, ಏಪ್ರಿಲ್ 8 ಅನ್‌ಫರ್ಗಟನ್ ಸೀಸನ್-5 ಸರಣಿ, ಏಪ್ರಿಲ್ 12ರಿಂದ ಎನ್‌ಡಬ್ಲೂಎಸ್‌ಎಲ್ -ಒರಿಜಿನಲ್ ಸೀರಿಸ್ ತೆರೆಕಾಣುತ್ತಿದೆ.


ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ನಲ್ಲಿಏಪ್ರಿಲ್ 8ರಿಂದ ಸ್ಪಿರಿಟ್ ರೇಂಜರ್ಸ್-ಸೀಸನ್-3(ಆನಿಮೇಟೆಡ್ ಸೀರಿಸ್), ಏಪ್ರಿಲ್ 10ರಿಂದ ದಿ ಹೈಜಾಕಿಂಗ್ ಆಫ್ ಫ್ಲೈಟ್ 601(ವೆಬ್ ಸೀರಿಸ್), ಅನ್‌ಲಾಕ್ಡ್: ಎ ಜೈಲ್ ಎಕ್ಸ್‌ಪೆರಿಮೆಂಟ್(ಡಾಕ್ಯೂ ಸೀರಿಸ್), ಜೆನ್ನಿಫರ್ ವಾಟ್ ಡಿಡ್(ಕ್ರೈಂ ಡಾಕ್ಯುಮೆಂಟರಿ), ಆಂತ್ರಾಸೈಟ್(ಫ್ರೆಂಚ್ ವೆಬ್ ಸೀರಿಸ್), ಏಪ್ರಿಲ್ 11ರಿಂದ ಮಿಡ್ ಸಮ್ಮರ್ ನೈಟ್- ಸೀಸನ್-1(ನಾರ್ವೆ ಥ್ರಿಲ್ಲರ್ ಸೀರಿಸ್), ಯಾಜ್ ದಿ ಕ್ರೋ ಫೈಲ್ಸ್- ಸೀಸನ್-3(ಟರ್ಕಿಸ್ ವೆಬ್ ಸೀರಿಸ್) , ಹಾರ್ಟ್‌ಬ್ರೇಕ್ ಹೈ- ಸೀಸನ್-2 (ಟೀನ್ ಬೆವ್ ಸೀರಿಸ್), ಏಪ್ರಿಲ್ 12ರಿಂದ ಸ್ಟೋಲೆನ್(ಸ್ವಿಡಿಶ್ ಸಿನಿಮಾ), ಅಮರ್ ಸಿಂಗ್ ಚಮ್ಕಿಲಾ(ಹಿಂದಿ ಸಿನಿಮಾ) ತೆರೆಯಲ್ಲಿ ಕಾಣಿಸಲಿದೆ. ಜೀ-5ನಲ್ಲಿ ಏಪ್ರಿಲ್ 12ರಿಂದ ʻಗಾಮಿʼ (ತೆಲುಗು ಸಿನಿಮಾ) ತೆರೆಗೆ ಬರಲಿದೆ.

Continue Reading
Advertisement
Rishabh Pant
ಕ್ರಿಕೆಟ್49 mins ago

Rishabh Pant: ಐಪಿಎಲ್​ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ರಿಷಭ್ ಪಂತ್​

IPL 2024
ಪ್ರಮುಖ ಸುದ್ದಿ1 hour ago

IPL 2024 : ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ತಂಡಕ್ಕೆ 6 ವಿಕೆಟ್​ ವಿಜಯ

NIA Raid
ಕರ್ನಾಟಕ2 hours ago

NIA Raid: ಹುಬ್ಬಳ್ಳಿಯಲ್ಲಿ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಎನ್‌ಐಎ

Khalistan Terrorist
ಪ್ರಮುಖ ಸುದ್ದಿ2 hours ago

Khalistani Terrorist : ದೆಹಲಿ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಉಗ್ರ ಪ್ರಭ್​ಪ್ರೀತ್ ಸಿಂಗ್ ಸೆರೆ

Lok Sabha Election 2024
ಕರ್ನಾಟಕ2 hours ago

Lok Sabha Election 2024: ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ; ಇವರ ಆಸ್ತಿ ಎಷ್ಟು?

Pakistan
ಪ್ರಮುಖ ಸುದ್ದಿ2 hours ago

United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

Chikkaballapur Lok Sabha Constituency BJP Candidate Dr K Sudhakar is campaigning in various places today
ಚಿಕ್ಕಬಳ್ಳಾಪುರ3 hours ago

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ರಿಂದ ಏ.13ರಂದು ಪ್ರಚಾರ

Union Minister Pralhad Joshi statement
ಹುಬ್ಬಳ್ಳಿ3 hours ago

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Union Minister Pralhad Joshi latest statement in hubli
ಕರ್ನಾಟಕ3 hours ago

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Rashtrotthana Hospital adopts Dozi technology to provide greater safety to patients
ಕರ್ನಾಟಕ3 hours ago

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameshwaram Cafe Blast Fake IDs created and captured bombers hiding in Kolkata
ಕ್ರೈಂ12 hours ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ20 hours ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 day ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20242 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ3 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ3 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

Rockstar Bull of bull festival king fame passes away
ಹಾವೇರಿ5 days ago

Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ಇನ್ನಿಲ್ಲ; ಬೊಮ್ಮಾಯಿ ಕಂಬನಿ

ಟ್ರೆಂಡಿಂಗ್‌