Anup Bhandari: ʻಬಿಲ್ಲ ರಂಗ ಬಾಷʼ ಅಪ್‌ಡೇಟ್ ಪೋಸ್ಟ್‌ ಡಿಲೀಟ್‌ ಮಾಡಿದ ಅನೂಪ್‌ ಭಂಡಾರಿ! - Vistara News

ಸ್ಯಾಂಡಲ್ ವುಡ್

Anup Bhandari: ʻಬಿಲ್ಲ ರಂಗ ಬಾಷʼ ಅಪ್‌ಡೇಟ್ ಪೋಸ್ಟ್‌ ಡಿಲೀಟ್‌ ಮಾಡಿದ ಅನೂಪ್‌ ಭಂಡಾರಿ!

Anup Bhandari: ಏಕಾಏಕಿ ಅನೂಪ್ ಭಂಡಾರಿ ‘ಬಿಲ್ಲ ರಂಗ ಬಾಷ’ ಅಪ್‌ಡೇಟ್ ಬಗ್ಗೆ ಸುಳಿವು ಕೊಟ್ಟು ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂದು ಟ್ರೆಂಡ್ ಮಾಡುತ್ತಿದ್ದಾರೆ.

VISTARANEWS.COM


on

Billa Ranga Baasha update post deleted by Anoop Bhandari
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು:ರಂಗಿ ತರಂಗ' ಹಾಗೂ ‘ವಿಕ್ರಾಂತ್‌ ರೋಣ’ ಸಿನಿಮಾ ಖ್ಯಾತಿಯ ನಿರ್ದೇಶಕ ಅನೂಪ್‌ ಭಂಡಾರಿ (Anup Bhandari) ‘ಬಿಲ್ಲ ರಂಗ ಬಾಷ’ (billa ranga baashaa) ಕಥೆ ಚಿತ್ರಕಥೆ ಸಿದ್ಧಪಡಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಕಿಚ್ಚ ಫ್ಯಾನ್ಸ್‌ ಒಂದೇ ಸಮನೆ ‘ಬಿಲ್ಲ ರಂಗ ಬಾಷ’ ಸಿನಿಮಾ ಯಾವಾಗಿಂದ ಶುರು ಎಂದು ಪ್ರಶ್ನೆ ಇಡುತ್ತಿದ್ದಾರೆ. ಆದರೀಗ ಏಕಾಏಕಿ ಅನೂಪ್ ಭಂಡಾರಿ ‘ಬಿಲ್ಲ ರಂಗ ಬಾಷ’ ಅಪ್‌ಡೇಟ್ ಬಗ್ಗೆ ಸುಳಿವು ಕೊಟ್ಟು ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂದು ಟ್ರೆಂಡ್ ಮಾಡುತ್ತಿದ್ದಾರೆ.

ನಿರ್ದೇಶಕ ಅನೂಪ್‌ ಭಂಡಾರಿ ‘ಬಿಲ್ಲ ರಂಗ ಬಾಷ’ ಅಪ್‌ಡೇಟ್ ಆದಷ್ಟು ಬೇಗ ಎನ್ನುವಂತೆ ಇನ್‌ಸ್ಟಾ ಸ್ಟೋರಿ ಹಾಕಿದ್ದರಂತೆ. ಈ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ. ಅನೂಪ್‌ ಈ ಪೋಸ್ಟ್‌ ಪೋಸ್ಟ್ ಮಾಡಿ ಇದೀಗ ಡಿಲೀಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ಸ್ಕ್ರೀನ್ ಶಾಟ್ ವೈರಲ್ ಮಾಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ ಅನೂಪ್‌.

ಅನೂಪ್ ಭಂಡಾರಿ ಈ ಬಗ್ಗೆ ಮಾತನಾಡಿ ʻʻನಾನು ಆ ರೀತಿಯ ಯಾವುದೇ ಪೋಸ್ಟ್ ಮಾಡಿಲ್ಲ, ಡಿಲೀಟ್ ಸಹ ಮಾಡಿಲ್ಲ. ಅಭಿಮಾನಿಗಳು ‘ಬಿಲ್ಲ ರಂಗ ಬಾಷ’ ಅಪ್‌ಡೇಟ್ ಕೇಳಲು ನಮ್ಮ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆʼʼ ಎಂದು ಹೇಳಿಕೆ ನೀಡಿದ್ದಾರೆ. ‘ಬಿಲ್ಲ ರಂಗ ಬಾಷ’ ಸಿನಿಮಾ ಈ ವರ್ಷವೇ ಶುರುವಾಗಲಿದೆ. ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್‌ಗೆ ಬಹಳ ಸಮಯ ಬೇಕು. ಹಾಗಾಗಿ ‘ಮ್ಯಾಕ್ಸ್’ ಬಳಿಕ ಮತ್ತೊಂದು ಸಿನಿಮಾದಲ್ಲಿ ಸುದೀಪ್ ನಟಿಸುತ್ತಾರೆ. ಆ ನಂತರವಷ್ಟೆ ನಮ್ಮ ಸಿನಿಮಾ ಎಂದಿದ್ದಾರೆ.

ಇದನ್ನೂ ಓದಿ: ‌Self Harming : ಅಯ್ಯೋ ವಿಧಿಯೇ!; ಇಬ್ಬರು ಪುಟ್ಟ ಮಕ್ಕಳ ಕತ್ತು ಹಿಸುಕಿ ಕೊಂದು ತಾಯಿಯೂ ಆತ್ಮಹತ್ಯೆ

ಏನಿದು ‘ಬಿಲ್ಲ ರಂಗ ಬಾಷ’?

ಈ ಮುಂಚೆ ಅನೂಪ್‌ ಅವರು ಈ ಸಿನಿಮಾ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದರು. ʻʻರಂಗಿತರಂಗ’, ‘ರಾಜರಥ’ ಹಾಗೂ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಬರುವ ತಮ್ಮ ಪಾತ್ರದ ಫೋಟೊವನ್ನು ಜೋಡಿಸಿ ಹಂಚಿಕೊಂಡಿದ್ದರು. ನಾಲ್ಕನೇ ಚಿತ್ರ ಲೋಡಿಂಗ್ ಎಂದೂ ಬರೆದಿದ್ದರು. ಈ ಫೋಟೋಗೆ ಕ್ಯಾಪ್ಶನ್ ನೀಡಿರುವ ಅವರು, ‘ನಿಮ್ಮ ಹಾರೈಕೆಗೆ ಧನ್ಯವಾದ. ‘ಬಿ’ಗಿಯಾಗ್ ಕೂತ್ಕೋಳಿ. ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ. ಅಲ್ಲಿವರೆಗೂ ಎಂದಿನ ಹಾಗೆ ತಾಳ್ಮೆ ಇರ್ಲಿ’ ಎಂದು ಕೋರಿದ್ದರು. ಅವರು ಬರೆದ ಸಾಲುಗಳಲ್ಲಿ ‘ಬಿ, ರಂ, ಬಾ’ ಹೈಲೈಟ್ ಆಗಿತ್ತು. ಹೀಗಾಗಿ, ಅನೂಪ್ ಮುಂದಿನ ಚಿತ್ರ ‘ಬಿಲ್ಲ ರಂಗ ಬಾಷಾ’ ಎಂದು ಫ್ಯಾನ್ಸ್ ಹೇಳಿಕೊಂಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kiccha Sudeep: ಸಂದೇಶ್‌ ಪ್ರೊಡಕ್ಷನ್ಸ್‌ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್

Kiccha Sudeep: ಸಂದೇಶ್‌ ನಾಗರಾಜ್‌ ಅರ್ಪಿಸುವ ಸಂದೇಶ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಎನ್‌ ಸಂದೇಶ್‌ ನಿರ್ಮಾಣದಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಮೂಡಿಬರುವುದು ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ಅವರ ಜತೆಗೆ ಸಂದೇಶ್‌ ನಾಗರಾಜ್ ಮತ್ತು ಎನ್ ಸಂದೇಶ್‌ ಅವರು ಒಟ್ಟಿಗೆ ಇರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ಶುರುವಾಗಲಿದೆ ಎಂದೇ ಹೇಳಲಾಗಿತ್ತು.

VISTARANEWS.COM


on

Kichcha Sudeep joined hands with Sandesh
Koo

ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಂದೇಶ್‌ (kiccha sudeep) ಪ್ರೊಡಕ್ಷನ್ಸ್‌ ಸಂಸ್ಥೆ, ಈಗಾಗಲೇ ಸದಭಿರುಚಿಯ ಚಿತ್ರಗಳ ಜತೆಗೆ ಬಿಗ್‌ ಬಜೆಟ್‌ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದೆ. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ “ಘೋಸ್ಟ್‌” ಚಿತ್ರವೂ ಅದರಲ್ಲೊಂದು. ಇದೀಗ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಮತ್ತೊಂದು ಬಿಗ್‌ ಸಿನಿಮಾವನ್ನು ಕೈಗೆತ್ತಿಕೊಂಡಿದೆ. ಈ ಸಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಜತೆಗೆ ಕೈ ಜೋಡಿಸಿದ್ದಾರೆ ನಿರ್ಮಾಪಕ ಎನ್‌. ಸಂದೇಶ್‌.

ಸಂದೇಶ್‌ ನಾಗರಾಜ್‌ ಅರ್ಪಿಸುವ ಸಂದೇಶ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಎನ್‌ ಸಂದೇಶ್‌ ನಿರ್ಮಾಣದಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಮೂಡಿಬರುವುದು ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ಅವರ ಜತೆಗೆ ಸಂದೇಶ್‌ ನಾಗರಾಜ್ ಮತ್ತು ಎನ್ ಸಂದೇಶ್‌ ಅವರು ಒಟ್ಟಿಗೆ ಇರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ಶುರುವಾಗಲಿದೆ ಎಂದೇ ಹೇಳಲಾಗಿತ್ತು. ಇದೀಗ ಆ ಊಹೆ ನಿಜವಾಗಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಸೆಟ್ಟೇರಲಿದೆ.

ಇದನ್ನೂ ಓದಿ: Kiccha Sudeep: ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್ ಭೇಟಿ; ಇವರನ್ನು ನೋಡಲು ಜನವೋ ಜನ!

ಹಾಗಾದರೆ ಯಾವಾಗ ಶುರು?

ಸದ್ಯಕ್ಕೆ ಕಿಚ್ಚ ಸುದೀಪ್‌ ಸಂದೇಶ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಯಾವಾಗ ಶುರು, ನಿರ್ದೇಶಕರು ಯಾರು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಈ ನಡುವೆ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪ್ರಭುದೇವ ನಟನೆಯ “ವುಲ್ಫ್” ಸಿನಿಮಾ ರೆಡಿಯಾಗಿದೆ. ಸೃಜನ್‌ ಲೋಕೇಶ್‌ ಜತೆಗಿನ ಜಿಎಸ್‌ಟಿ ಚಿತ್ರದ ಶೂಟಿಂಗ್‌ ಕೆಲಸಗಳೂ ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜತೆಗೆ “ಘೋಸ್ಟ್‌ 2” ಅಥವಾ ಶಿವಣ್ಣನ ಜತೆಗಿನ “ದಳವಾಯಿ ಮುದ್ದಣ್ಣ”, “ಬೀರಬಲ್ 2” ಸಿನಿಮಾಗಳೂ ಸೆಟ್ಟೇರಲಿವೆ.

Continue Reading

ಸ್ಯಾಂಡಲ್ ವುಡ್

Actor Jaggesh: ಬಾಲ್ಯದಲ್ಲಿ ನನ್ನನ್ನು ಕರಿಯ ಎಂದು ಗೇಲಿ ಮಾಡುತ್ತಿದ್ದರು, ಆದರೆ ನಾನು…; ಜಗ್ಗೇಶ್‌ ಮನದ ಮಾತು

Actor Jaggesh: ಬಾಡಿ ಶೇಮಿಂಗ್ ಬಗ್ಗೆ ಜಗ್ಗೇಶ್‌ ಅವರು ಈ ಮೂಲಕ ಹೇಳಿಕೊಂಡಿದ್ದಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕೆಲವೊಮ್ಮೆ ಅದನ್ನೇ ತಮಾಷೆಯಾಗಿ ಹೇಳಿಕೊಂಡು ನಕ್ಕಿದ್ದಾರೆ, ನಗಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರ ಮಗ ಅರ್ಜುನ್. ಮೊಮ್ಮಗ ಎಂದರೆ ಜಗ್ಗೇಶ್ ಅವರಿಗೆ ಬಹಳ ಪ್ರೀತಿ.

VISTARANEWS.COM


on

Actor Jaggesh talk about body shame
Koo

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ (Actor Jaggesh) ಅವರು ಸೋಷಿಯಲ್‌ ಮೀಡಿಯಾ ಮೂಲಕ ಆಗಾಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ಈ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

ಜಗ್ಗೇಶ್‌ ಪೋಸ್ಟ್‌ನಲ್ಲಿ ʻʻನನ್ನನ್ನು ಕಪ್ಪು ಎಂದು ಅಣಕ ಮಾಡುತ್ತಿದ್ದರು ಬಾಲ್ಯದಲ್ಲಿ ಎಲ್ಲರು..!!
ಆಗ ನನಗೆ ಬಹಳ ಸಿಟ್ಟು ಬರುತ್ತಿತ್ತು. ನಾನು ಯವ್ವನದಲ್ಲಿ ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು!
ನಟನಾದ ಮೇಲೆ ನನ್ನ ಮ್ಯಾಕ್ಸ್‌ ಫ್ಯಾಕ್ಟರ್‌ (max factor) ಮೇಕಪ್‌, ಅಂಬರೀಶ್‌ ಅವರ, ರಜನಿಯವರ, ವಿಜಯಕಾಂತ್, ಶಿವಣ್ಣ ಕೂಡ ಬಳಸುತ್ತಿದ್ದರು. ನಾನು ಬಳಸುತ್ತಿದ್ದ ಪ್ಯಾನ್‌ ಕೇಕ್‌ ಇಂದು ವಿಶ್ವದಲ್ಲಿ ಮರೆಯಾದ ಪ್ಯಾನ್‌ ಕೇಕ್‌ . ಆದರೆ ನನ್ನ ಅದೃಷ್ಟ ಅದು ನನ್ನ ಬಳಿ ಇನ್ನೂ 50 ಸಿನಿಮಾಗೆ ಸಾಕಾಗುತ್ತದೆ ಅಪ್ಟಿದೆ. ಅನೇಕರು ಕೇಳಿದರು ಈ ಪ್ಯಾನ್‌ ಕೇಕ್‌ ಕೊಡಿ ಎಂದು (pancake). ನಾನು ನೀಡುವುದಿಲ್ಲಾ ಎಂದೆ. ಕಾರಣ ಅದರ ಮೇಲಿನ ವಿಪರೀತ ಪ್ರೀತಿ ಹಾಗೂ ಭಕ್ತಿ. ಅದು ಹಚ್ಚಿದರೆ ನನ್ನ ಕಪ್ಪು ಅಂದವರು ಮೌನವಾಗುತ್ತಾರೆ. ಇದನ್ನು ಬಳಸುವಾಗ ಅಯ್ಯೋ ನಾನು ನಿಜವಾಗಲು ಈ ಬಣ್ಣ ಹೊಂದಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸುತ್ತದೆ. ಆದರೆ ನನ್ನ ಮೊಮ್ಮಗ ಅರ್ಜುನ ಯಾವ pancake ಬಳಸದಂತೆ ಬಣ್ಣ ಹಚ್ಚಿಕೊಂಡೇ ಬಂದಿದ್ದಾನೆ. ಭೂಮಿಗೆ ಇಷ್ಟು ಹೇಳಲು ಕಾರಣ ಇಂದು ಇವನು 9ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಅಂದರೆ ಅವನ ಹುಟ್ಟುಹಬ್ಬ. ಹುಟ್ಟು ಹಬ್ಬದ ಶುಭಾಶಯಗಳು ಕಂದ. ದೇವರು ಒಳ್ಳೆಯದು ಮಾಡಲಿʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Jaggesh: ರಂಗ ನಾಯಕ, ʻಕಿತ್ತೋದ್‌ ನನ್ಮಗʼ ಮಾತಿಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ ಜಗ್ಗೇಶ್‌!

ಬಾಡಿ ಶೇಮಿಂಗ್ ಬಗ್ಗೆ ಜಗ್ಗೇಶ್‌ ಅವರು ಈ ಮೂಲಕ ಹೇಳಿಕೊಂಡಿದ್ದಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕೆಲವೊಮ್ಮೆ ಅದನ್ನೇ ತಮಾಷೆಯಾಗಿ ಹೇಳಿಕೊಂಡು ನಕ್ಕಿದ್ದಾರೆ, ನಗಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರ ಮಗ ಅರ್ಜುನ್. ಮೊಮ್ಮಗ ಎಂದರೆ ಜಗ್ಗೇಶ್ ಅವರಿಗೆ ಬಹಳ ಪ್ರೀತಿ.

ʻಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್‌ ಅವರು ಮುದ್ದಿನ ಶ್ವಾನ ಅರ್ಜುನನನ್ನು ನೆನೆದು ಭಾವುಕರಾಗಿದ್ದರು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್ ಅವರು ʻಅರ್ಜುನʼ ಎಂಬ ಹೆಸರಿನ ಸಾಕು ನಾಯಿಯ ಜತೆ ಇರುವ ಫೋಟೊವನ್ನು ತೋರಿಸಿದಾಗ, ʻಇವನ ಹೆಸರನ್ನೇ ನಾನು ನನ್ನ ಮೊಮ್ಮಗನಿಗೆ ಇಟ್ಟಿದ್ದೇನೆ. ಕಾರಣವೇನೆಂದರೆ, ಲ್ಯಾಬ್ರೇಡರ್ ನಾಯಿ ಜಾಸ್ತಿ ದಿನ ಬದುಕುವುದಿಲ್ಲ. ಆದರೆ ಅವನು ಹದಿನಾಲ್ಕುವರೆ ವರ್ಷ ನಮ್ಮ ಜತೆ ಬದುಕಿದ್ದʼ ಎಂದಿದ್ದರು. ಸಿನಿಮಾಗಳ ವಿಚಾರಕ್ಕೆ ಬಂದರೆ ಕೊನೆಯದಾಗಿ ಜಗ್ಗೇಶ್ ನಟಿಸಿದ ‘ರಂಗನಾಯಕ’ ಸಿನಿಮಾ ತೆರೆಗೆ ಬಂದಿತ್ತು. ಆದರೆ ಚಿತ್ರ ಗೆಲ್ಲಲಿಲ್ಲ.

Continue Reading

ಸ್ಯಾಂಡಲ್ ವುಡ್

Kannada Cinema In OTT: ಒಟಿಟಿಗೆ ಲಗ್ಗೆ ಇಟ್ಟ ʼಬ್ಯಾಡ್‌ ಮ್ಯಾನರ್ಸ್‌ʼ, ‘O2’; ಸ್ಟ್ರೀಮಿಂಗ್ ಎಲ್ಲಿ?

Kannada Cinema In OTT: ಬಹು ಭಾಷಾ ಗಾಯಕಿ ಉಷಾ ಉತ್ತುಪ್‌ ಅವರ ಅದ್ಭುತ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿತ್ತು. ಗೀತೆಯಲ್ಲಿ ಅಭಿಷೇಕ್‌ ಅಂಬರೀಶ್‌ ನಿರ್ವಹಿಸಿರುವ ಪಾತ್ರದ ಚಿತ್ರಣ ಇತ್ತು. ಪ್ರತಿ ಸಾಲಿನಲ್ಲೂ ಅಭಿ ಪಾತ್ರದ ಸಾಫ್ಟ್‌ ಮತ್ತು ಹಾರ್ಡ್‌ ಮ್ಯಾನರಿಸಂನ ಝಲಕ್ ಇತ್ತು. ಆಶಿಕಾ ರಂಗನಾಥ್ ನಟನೆಯ ‘O2’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು.

VISTARANEWS.COM


on

Kannada Cinema In OTT bad manners 02 Kannada Movie
Koo

ಬೆಂಗಳೂರು: ಇತ್ತೀಚಿಗೆ ‘ಯುವ’, ‘ಬ್ಲಿಂಕ್’, ‘ಅವತಾರ ಪುರುಷ’-2, ‘ಶಾಖಾಹಾರಿ’, ‘ಜೂನಿ’ ರೀತಿಯ ಸಿನಿಮಾಗಳು ವೀಕ್ಷಕರನ್ನು (Kannada Cinema In OTT) ರಂಜಿಸಿವೆ. ಅದರಲ್ಲೂ ‘ಬ್ಲಿಂಕ್’ ಹಾಗೂ ‘ಶಾಖಾಹಾರಿ’ ಚಿತ್ರಗಳು ಪ್ರೇಕ್ಷಕರ ಮನ ಗೆದ್ದಿವೆ. ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್‌ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ, ಆಶಿಕಾ ರಂಗನಾಥ್ ನಟನೆಯ ‘O2’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿವೆ.

ʼಬ್ಯಾಡ್‌ ಮ್ಯಾನರ್ಸ್‌ʼ

ʼಬ್ಯಾಡ್‌ ಮ್ಯಾನರ್ಸ್‌ʼ ಚಿತ್ರಕ್ಕೆ ದುನಿಯಾ ಸೂರಿ ನಿರ್ದೇಶನವಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಅಭಿಷೇಕ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಡಿಂಪಲ್‌ ಕ್ವೀನ್‌ ರಚಿತಾ ರಾಮ್‌. ಕಳೆದ ವರ್ಷ ನವೆಂಬರ್ 24ಕ್ಕೆ ತೆರೆಗಪ್ಪಳಿಸಿದ್ದ ‘ಬ್ಯಾಡ್‌ ಮ್ಯಾನರ್ಸ್’ ಸಿನಿಮಾ ಇದೀಗ ಸನ್‌ನೆಕ್ಸ್ಟ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಬ್ಯಾಡ್ ಮ್ಯಾನರ್ಸ್‌ ಹಾಡಿಗೆ ಧನು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದರು. ಸಿನಿಮಾಟೋಗ್ರಾಫರ್ ಶೇಖರ್ ಅದನ್ನು ಅಷ್ಟೇ ಅದ್ಭುತವಾಗಿ ಸೆರೆ ಹಿಡಿದಿದ್ದರು.ಯುಗಾದಿ ಹಬ್ಬಕ್ಕೆ ಬ್ಯಾಡ್‌ ಮ್ಯಾನರ್ಸ್ ಟೈಟಲ್‌ ಟ್ರ್ಯಾಕ್‌ ಸಿನಿರಸಿಕರಿಗೆ ಸಖತ್‌ ಕಿಕ್‌ ನೀಡಿತ್ತು.

ಬಹು ಭಾಷಾ ಗಾಯಕಿ ಉಷಾ ಉತ್ತುಪ್‌ ಅವರ ಅದ್ಭುತ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿತ್ತು. ಗೀತೆಯಲ್ಲಿ ಅಭಿಷೇಕ್‌ ಅಂಬರೀಶ್‌ ನಿರ್ವಹಿಸಿರುವ ಪಾತ್ರದ ಚಿತ್ರಣ ಇತ್ತು. ಪ್ರತಿ ಸಾಲಿನಲ್ಲೂ ಅಭಿ ಪಾತ್ರದ ಸಾಫ್ಟ್‌ ಮತ್ತು ಹಾರ್ಡ್‌ ಮ್ಯಾನರಿಸಂನ ಝಲಕ್ ಇತ್ತು. ನಿರ್ದೇಶಕ ದುನಿಯಾ ಸೂರಿ ಅವರ ಕಲ್ಪನೆಯ ಈ ಗೀತೆಯ ಮೇಕಿಂಗ್ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹವಾ ಕ್ರಿಯೇಟ್‌ ಮಾಡಿತ್ತು.

ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

‘O2’ ಸಿನಿಮಾ

ಆಶಿಕಾ ರಂಗನಾಥ್ ನಟನೆಯ ‘O2’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು. ನೀವು ನೋಡಿ ಎಂದು ಸಲಹೆ ನೀಡಿದ್ದರು. ಪುನೀತ್ ರಾಜ್‌ಕುಮಾರ್ ಕಥೆ ಕೇಳಿ ಒಪ್ಪಿ ತಮ್ಮ ಬ್ಯಾನರ್‌ನಲ್ಲಿ ಆರಂಭಿಸಿದ್ದ ಕೊನೆಯ ಸಿನಿಮಾ ‘O2’. ಆಶಿಕಾ ರಂಗನಾಥ್‌ ಜೊತೆ ಪ್ರವೀಣ್‌ ತೇಜ, ರಾಘವ್‌ ನಾಯಕ್‌, ಸಿರಿ ರವಿಕುಮಾರ್, ಗೋಪಾಲ್‌ ದೇಶಪಾಂಡೆ, ಪ್ರಕಾಶ್‌ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಇನ್ನು ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿರುವ ಥ್ರಿಲ್ಲರ್ ಸಿನಿಮಾ ‘O2’ ಅಮೇಜಾನ್ ಪ್ರೈಂನಲ್ಲಿ ಸಿಗುತ್ತಿದೆ. ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್’ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ’02’ ಒಂದು ಮೆಡಿಕಲ್‌ ಥ್ರಿಲ್ಲರ್‌ ಸಿನಿಮಾ.

Continue Reading

ಸ್ಯಾಂಡಲ್ ವುಡ್

Dolly Dhananjay: ಕೆಆರ್​ಜಿ ಸ್ಟುಡಿಯೋಸ್ ಪಾಲಾದ ‘ಕೋಟಿ‌’ ವಿತರಣಾ ಹಕ್ಕು; ರಿಲೀಸ್‌ಗೆ ಕೌಂಟ್‌ ಡೌನ್!

Dolly Dhananjay: ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ವಿತರಣೆಯಲ್ಲಿ ಕೆಆರ್ ಜಿ ಸಂಸ್ಥೆ ಒಳ್ಳೆ ಹೆಸರು ಮಾಡಿದೆ. ಕೆಜಿಎಫ್ 1, ಕೆಜಿಎಫ್ 2, ಕಾಂತಾರ, ಚಾರ್ಲಿ 777, ಬಡವ ರಾಸ್ಕಲ್, ಪೈಲ್ವಾನ್, 12 ನೇ ಫೇಲ್, ಹನುಮಾನ್ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳು ಈ ಸಂಸ್ಥೆಯ ಮೂಲಕವೇ ಬಿಡುಗಡೆಗೊಂಡಿದೆ. KRG ಸ್ಟುಡಿಯೋಸ್ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಿಸಿದೆ.

VISTARANEWS.COM


on

Dolly Dhananjay kotee distribution rights held by KRG Studios
Koo

ಬೆಂಗಳೂರು: ಡಾಲಿಯ ʻಕೋಟಿʼ (Dolly Dhananjay) ಸಿನಿಮಾ ಹವಾ ಎಲ್ಲೆಡೆ ಹಬ್ಬಿಕೊಂಡಿದೆ. ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇರುವಾಗಲೇ ಈ ಸಿನಿಮಾದೆಡೆಗಿನ ಕ್ರೇಜ್ ಅಚ್ಚರಿದಾಯಕವಾಗಿ ವ್ಯಾಪಿಸಿಕೊಂಡಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ದಿನಕ್ಕೊಂದರಂತೆ ಹೊಸಾ ಬಗೆಯ ಸುದ್ದಿಗಳು ಕೋಟಿ ಬಳಗದಿಂದ ಕಡೆಯಿಂದ ಬರುತ್ತಲೇ ಇದ್ದಾವೆ. ಇದೀಗ ʻಕೋಟಿʼ ವಿತರಣಾ ಹಕ್ಕುಗಳು KRG ಸ್ಟುಡಿಯೋಸ್ ಪಾಲಾಗಿದೆ. ಸಿನಿಮಾ ಮೂಡಿ ಬಂದಿರುವ ರೀತಿಯನ್ನು ಮೆಚ್ಚಿಕೊಳ್ಳುತ್ತಲೇ, ಭರವಸೆಯಿಂದ ಸದರಿ ಸಂಸ್ಥೆ ಡಾಲಿ ಸಿನಿಮಾ ವಿತರಣಾ ಹಕ್ಕನ್ನು ತನ್ನದಾಗಿಸಿಕೊಂಡಿದೆ.

ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ವಿತರಣೆಯಲ್ಲಿ ಕೆಆರ್ ಜಿ ಸಂಸ್ಥೆ ಒಳ್ಳೆ ಹೆಸರು ಮಾಡಿದೆ. ಕೆಜಿಎಫ್ 1, ಕೆಜಿಎಫ್ 2, ಕಾಂತಾರ, ಚಾರ್ಲಿ 777, ಬಡವ ರಾಸ್ಕಲ್, ಪೈಲ್ವಾನ್, 12 ನೇ ಫೇಲ್, ಹನುಮಾನ್ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳು ಈ ಸಂಸ್ಥೆಯ ಮೂಲಕವೇ ಬಿಡುಗಡೆಗೊಂಡಿದೆ. KRG ಸ್ಟುಡಿಯೋಸ್ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಿಸಿದೆ. ಹಾಗೆಂದ ಮಾತ್ರಕ್ಕೆ, ಈ ಸಂಸ್ಥೆಯ ಕಡೆಯಿಂದ ಸಿನಿಮಾವೊಂದು ಬಿಡುಗಡೆಗೊಳ್ಳೋದು ಸಲೀಸಿನ ಸಂಗತಿಯಲ್ಲ. ಅದು ನಿಜಕ್ಕೂ ಪ್ರತಿಷ್ಠೆಯ ಸಂಗತಿ. ಯಾಕೆಂದರೆ, ಎಲ್ಲ ಬಗೆಯಲ್ಲಿಯೂ ಪರಿಪೂರ್ಣವಾಗಿರುವ, ಗೆಲುವಿನ ಲಕ್ಷಣಗಳನ್ನು ಹೊಂದಿರುವ ಚಿತ್ರಗಳನ್ನು ಮಾತ್ರವೇ ಈ ಸಂಸ್ಥೆ ತನ್ನಡಾಗಿಸಿಕೊಳ್ಳುತ್ತೆ. ಇದೀಗ ಕೋಟಿ ವಿತರಣಾ ಹಕ್ಕು ಕೆಆರ್ ಜಿ ಪಾಲಾಗಿರೋದೇ, ಈ ಚಿತ್ರದೆಡೆಗಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಇದನ್ನೂ ಓದಿ: Dolly Dhananjay: ʻಕೋಟಿʼ ಸಿನಿಮಾ ಮೊದಲ ಹಾಡು ಬಿಡುಗಡೆ!

ಕೋಟಿ ಸಿನಿಮಾವನ್ನು ಇಡೀ ಕೆಆರ್ ಜಿ ಬಳಗ ವೀಕ್ಷಣೆ ಮಾಡಿದೆ. ಭಾವನಾತ್ಮಕ ಎಳೆಯುಳ್ಳ ಈ ಚಿತ್ರ ಐಪಿಎಲ್ ಹಾಗೂ ಚುನಾವಣಾ ಬಳಿಕ ಇಡೀ ಫ್ಯಾಮಿಲಿಗೆ ಹೇಳಿ ಮಾಡಿಸಿದ ಪರಿಪೂರ್ಣವಾದ ಔತಣದಂತಿದೆ ಎಂದಿದೆ.

ಕೆಆರ್‌ಜಿ ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, “ಧನಂಜಯ್ ಅವರೊಂದಿಗಿನ ನಮ್ಮ ಸಂಬಂಧವು ‘ಕೋಟಿ’ ಮೂಲಕ ಮತ್ತಷ್ಟು ವಿಸ್ತರಿಸಿದೆ. ನಾನು ಸಿನಿಮಾ ನೋಡಿದೆ. ಪರಮೇಶ್ವರ್ ಗುಂಡ್ಕಲ್ ಅವರ ಬರವಣಿಗೆ ಹಾಗೂ ಚಿತ್ರಕಥೆ ಹೆಣೆದಿರುವ ಸೊಗಸನ್ನು ನೋಡಿ ಥ್ರಿಲ್ ಆಗಿದ್ದೇನೆ. ಈ ಚಿತ್ರವನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಈ ಅವಕಾಶವನ್ನು ನೀಡಿದ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರಿಗೆ ನಾನು ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದಿದ್ದಾರೆ.

ಕೋಟಿ ಕನ್ನಡದಲ್ಲಿ ಜಿಯೋ ಸ್ಟುಡಿಯೋಸ್ ಚೊಚ್ಚಲ ನಿರ್ಮಾಣವಾಗಿದ್ದು, ನಿರ್ದೇಶಕ ಪರಮ್ ಅವರ ನೇತೃತ್ವದಲ್ಲಿ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರವಾಗಿದೆ. ನಟರಾಕ್ಷಸ ಡಾಲಿ ಧನಂಜಯ, ರಮೇಶ್ ಇಂದಿರಾ, ಮೋಕ್ಷ ಕುಶಾಲ್, ರಂಗಾಯಣ ರಘು, ತಾರಾ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಪರಮ್ ಬರವಣಿಗೆ ಸಾರಥ್ಯದ ಕೋಟಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಟೀಸರ್ ಹಾಗೂ ಹಾಡುಗಳು ಹಿಟ್ ಲೀಸ್ಟ್ ಸೇರಿದ್ದು,, ಜೂನ್ 14 ರಿಂದ ಚಿತ್ರ ತೆರೆಗೆ ಬರಲಿದೆ.

Continue Reading
Advertisement
Kichcha Sudeep joined hands with Sandesh
ಸ್ಯಾಂಡಲ್ ವುಡ್4 mins ago

Kiccha Sudeep: ಸಂದೇಶ್‌ ಪ್ರೊಡಕ್ಷನ್ಸ್‌ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್

Prajwal Revanna Case
ಕರ್ನಾಟಕ20 mins ago

Prajwal Revanna Case: ವಿಚಾರಣೆಯಲ್ಲಿ ಬಾಯಿಬಿಡದ ಪ್ರಜ್ವಲ್‌; ಸ್ಥಳ ಮಹಜರಿಗಾಗಿ ಹೊಳೆನರಸೀಪುರಕ್ಕೆ ಕರೆದೊಯ್ಯಲು ಸಿದ್ಧತೆ

Cow Smuggling
ಕ್ರೈಂ49 mins ago

Cow Smuggling : ಕಂಟೇನರ್‌, ಮಿಲ್ಕ್‌ ವ್ಯಾನ್‌ನಲ್ಲಿತ್ತು 70ಕ್ಕೂ ಹೆಚ್ಚು ಜಾನುವಾರು; ಹಿಂಸೆ ಕೊಟ್ಟವರು ಅರೆಸ್ಟ್‌

Gautam Gambhir
ಕ್ರೀಡೆ1 hour ago

Gautam Gambhir: ಗೌತಮ್​ ಗಂಭೀರ್​ ಭಾರತದ ಮುಂದಿನ ಕೋಚ್​; ಅಧಿಕೃತ ಘೋಷಣೆಯೊಂದೇ ಬಾಕಿ

Rameshwaram Cafe food on Anant Ambani, Radhika Merchant
ಸಿನಿಮಾ1 hour ago

Rameshwaram Cafe: ಅನಂತ್ ಅಂಬಾನಿ ಎರಡನೇ ಪ್ರಿ ವೆಡ್ಡಿಂಗ್‌ನಲ್ಲಿ ಮೇನ್‌ ಮೆನು ರಾಮೇಶ್ವರಂ ಕೆಫೆಯ ಪುಡಿ ಇಡ್ಲಿ ಮತ್ತು ಪುಡಿ ದೋಸೆ!

Family Fighting in Belgavi
ಬೆಳಗಾವಿ1 hour ago

Family Fighting : ಜಮೀನಿನ ವಿಚಾರದಲ್ಲಿ ಕುಟುಂಬಗಳ ಫೈಟ್; ಕುಡುಗೋಲು, ದೊಣ್ಣೆ ಹಿಡಿದು ಮಾರಾಮಾರಿ

Valmiki Corporation Scam
ಕರ್ನಾಟಕ1 hour ago

Valmiki Corporation Scam: ಮೃತ ಅಧೀಕ್ಷಕ ಚಂದ್ರಶೇಖರನ್‌ ಪತ್ನಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು

prashant kishor
ಪ್ರಮುಖ ಸುದ್ದಿ1 hour ago

Lok Sabha Election 2024: ಈಗಲೂ ಹೇಳ್ತೇನೆ ಕೇಳಿ, ಬಿಜೆಪಿಯೇ ಗೆಲ್ಲೋದು! ಎಕ್ಸಿಟ್ ಪೋಲ್‌ಗೆ ಮೊದಲು ಪ್ರಶಾಂತ್ ಕಿಶೋರ್ ಫೈನಲ್ ಲೆಕ್ಕಾಚಾರ ಹೀಗಿದೆ!

IndiGo Flight
ದೇಶ1 hour ago

IndiGo Flight: ಮತ್ತೊಂದು ಹುಸಿ ಬಾಂಬ್‌ ಕರೆ; ಮುಂಬೈಯಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್‌

bhavani revanna SIT team
ಪ್ರಮುಖ ಸುದ್ದಿ2 hours ago

Bhavani Revanna: ಮಗ ಬಂದ, ಅಮ್ಮ ನಾಪತ್ತೆ! ಮನೆಯಿಂದ ಮಾಯವಾದ ಭವಾನಿ ರೇವಣ್ಣ; ಕಾದು ಕುಳಿತ ಎಸ್‌ಐಟಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌