Kaatera 50 Days: ‘ಕಾಟೇರ’ ಚಿತ್ರ 50 ಡೇಸ್‌ ಕಂಪ್ಲೀಟ್‌, ‘ಪ್ರಸನ್ನ’ ಚಿತ್ರಮಂದಿರಕ್ಕೆ 50 ವರ್ಷ: ಇಲ್ಲಿದೆ ಲೈವ್‌! - Vistara News

ಸ್ಯಾಂಡಲ್ ವುಡ್

Kaatera 50 Days: ‘ಕಾಟೇರ’ ಚಿತ್ರ 50 ಡೇಸ್‌ ಕಂಪ್ಲೀಟ್‌, ‘ಪ್ರಸನ್ನ’ ಚಿತ್ರಮಂದಿರಕ್ಕೆ 50 ವರ್ಷ: ಇಲ್ಲಿದೆ ಲೈವ್‌!

Kaatera 50 Days: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಮಾಲಾಶ್ರೀ ಮಗಳು ಆರಾಧನ, ಶ್ರುತಿ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಇಡೀ ಟೀಂ ಭಾಗಿಯಾಗಿದೆ. ಸಿಬ್ಬಂದಿಗೆ ʻಕಾಟೇರ 50 ಡೇಸ್ʼ ಪ್ರಶಸ್ತಿ ವಿತರಣೆ ಮಾಡಿದ್ದಾರೆ ದರ್ಶನ್‌.

VISTARANEWS.COM


on

Darshan Kaatera Movie 50 Days And Prasanna Theatre 50 Years Celebration
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ‘ಪ್ರಸನ್ನ’ ಥಿಯೇಟರ್ ಆರಂಭವಾಗಿ 50 ವರ್ಷ ಪೂರ್ಣಗೊಂಡಿದೆ. ‘ಕಾಟೇರ’ ಸಿನಿಮಾ ತೆರೆಕಂಡು ಯಶಸ್ವಿಯಾಗಿ 50 (Kaatera 50 Days) ದಿನಗಳನ್ನು ಪೂರೈಸಿದೆ. ಹೀಗಾಗಿ ಒಂದೇ ವೇದಿಕೆಯಲ್ಲಿ ಈ ಎರಡು ಖುಷಿಯನ್ನು ಸೆಲೆಬ್ರೇಟ್​ ಮಾಡಲಾಗುತ್ತಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಮಾಲಾಶ್ರೀ ಮಗಳು ಆರಾಧನ, ಶ್ರುತಿ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಇಡೀ ಟೀಂ ಭಾಗಿಯಾಗಿದೆ. ಸಿಬ್ಬಂದಿಗೆ ʻಕಾಟೇರ 50 ಡೇಸ್ʼ ಪ್ರಶಸ್ತಿ ವಿತರಣೆ ಮಾಡಿದ್ದಾರೆ ದರ್ಶನ್‌.

ನಟಿ ಶ್ರುತಿ ಮಾತನಾಡಿ ʻʻಕಾಟೇರ ಸಕ್ಸೆಸ್‌ ಚಿತ್ರತಂಡಕ್ಕೆ ಮಾತ್ರವಲ್ಲ. ಚಿತ್ರರಂಗಕ್ಕೆ ಸಲ್ಲುತ್ತದೆ. ಮಲ್ಟಿಪ್ಲೆಕ್ಸ್ ಬಂದಮೇಲೆ ಚಿತ್ರಮಂದಿರ ಕಲ್ಚರ್ ಕಡಿಮೆ ಆಗುತ್ತಿದೆ. ಚಿತ್ರಮಂದಿರ ದೇವಸ್ಥಾನ ಇದ್ದಹಾಗೆ. ದೇವಸ್ಥಾನಕ್ಕೆ ಭಕ್ತಾದಿಗಳು ಬರ್ತಾರೆ ಚಿತ್ರಮಂದಿರಕ್ಕೆ ಅಭಿಮಾನಿಗಳು ಬರ್ತಾರೆ. ನನ್ನ ತಮ್ಮ ದರ್ಶನ್ ಸಕ್ಸೆಸ್‌ ಖುಷಿ ಕೊಟ್ಟಿದೆʼʼ ಎಂದರು.

ನಟಿ ಆರಾಧನ ಮಾತನಾಡಿ ʻʻನನ್ನ ಮೊದಲ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಡ್ರೀಮ್ ವರ್ಲ್ಡ್‌ನಲ್ಲಿ ನಾನಿದ್ದೀನಿ. ಸಿನಿಮಾ ಸಕ್ಸೆಸ್‌ ಆಗಲು ಕನ್ನಡ ಜನತೆ ಕಾರಣʼʼ ಎಂದರು. ಮಾಲಾಶ್ರೀ ಮಾತನಾಡಿ ʻʻನನಗೆ ಮಾತೇ ಬರ್ತಿಲ್ಲ. ಪ್ರಸನ್ನ ಥಿಯೇಟರ್‌ನಲ್ಲೇ ನಾನು ಅಭಿನಯಿಸಿದ್ದ ʻನಂಜುಂಡಿ ಕಲ್ಯಾಣʼ ಸಿನಿಮಾ 25 ವಾರ ಪ್ರದರ್ಶನ ಕಂಡಿತ್ತು. ದರ್ಶನ್ 25 ವರ್ಷದ ಸಿನಿಜರ್ನಿಗೆ ಅಭಿನಂದನೆಗಳುʼʼ ಎಂದರು. ಹಿರಿಯ ನಟ ದೊಡ್ಡಣ್ಣ ಮಾತನಾಡಿ ʻʻಒಳ್ಳೆ ಚಿತ್ರಗಳನ್ನು ಕೊಟ್ರೆ ಪ್ರೇಕ್ಷಕರು ನೋಡೇ ನೋಡ್ತಾರೆ. ಈ ಚಿತ್ರದಲ್ಲಿ ದರ್ಶನ್ ಅಭಿನಯ ಮರಿಯೋಕೆ ಸಾಧ್ಯವಿಲ್ಲ. ʻಮದಕರಿ ನಾಯಕ ಸಿನಿಮಾʼ ದರ್ಶನ್‌ ಮಾಡಲಿʼʼ ಎಂದು ಹಾರೈಸಿದರು.

ಇದನ್ನೂ ಓದಿ: Kaatera  Movie: ʻಕಾಟೇರʼ ಒಟಿಟಿ ಎಂಟ್ರಿಗೆ ಮುಹೂರ್ತ ಫಿಕ್ಸ್‌!

ಲೈವ್‌ ಲಿಂಕ್‌

ರಾಕ್‌ಲೈನ್‌ ವೆಂಕಟೇಶ್‌ ಮಾತನಾಡಿ ʻʻದರ್ಶನ್ ಒಂದೇ ಮಾತು ಹೇಳೋದು ನಮ್ಮ ಕರ್ನಾಟಕಕ್ಕೆ, ನಮ್ಮ ಜನಕ್ಕೆ ಮಾತ್ರ ಸಿನಿಮಾ ಮಾಡೋಣ ಎಂದು. ಕನ್ನಡಿಗರಿಗೆ ಇಷ್ಟವಾದ್ರೆ ಪ್ಯಾನ್ ಇಂಡಿಯಾ ಸಿನಿಮಾ ಅದಾಗಿಯೇ ಅದು ಆಗುತ್ತೆ. ನಮ್ಮ ಕಲಾವಿದರಿಗೆ ಮೊದಲು ಚಾನ್ಸ್ ಕೊಡೋಣ. ನಮ್ಮಲ್ಲಿ ಇಲ್ಲ ಅಂದಾಗ ಪರಭಾಷೆಗೆ ನಟ ನಟಿಯರಿಗೆ ಅವಕಾಶ ಕೊಡೋಣ. ವರ್ಷದಲ್ಲಿ 2 ಸಿನಿಮಾ ದರ್ಶನ್ ಕೊಡಬೇಕುʼʼ ಎಂದರು.

ದರ್ಶನ್​ ಅವರು ಜನ್ಮದಿನ (ಫೆಬ್ರವರಿ 16) ಆಚರಿಸಿಕೊಂಡರು. ಮರುದಿನ ಶ್ರೀರಂಗಪಟ್ಟಣದಲ್ಲಿ ‘ಬೆಳ್ಳಿ ಪರ್ವ ಡಿ-25’ ಕಾರ್ಯಕ್ರಮ ನಡೆಯಿತು. ಈಗ ಅವರು ‘ಕಾಟೇರ’ ಸಿನಿಮಾದ 50ನೇ ದಿನದ ಸೆಲೆಬ್ರೇಷನ್​ನಲ್ಲಿ ಭಾಗಿ ಆಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Ambareesh Birthday: ಸಿಹಿ ಸುದ್ದಿ ಕೊಡಲಿದ್ದಾರಾ ಅಭಿಷೇಕ್‌-ಅವಿವಾ? ಸುಮಲತಾ ಹೇಳಿದ್ದೇನು?

Ambareesh Birthday: ಇನ್ನು ರೆಬಲ್‌ ಸ್ಟಾರ್‌ ಹುಟ್ಟುಹಬ್ಬ ನಟ ದರ್ಶನ್‌ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. ಅಂಬರೀಶ್‌ ಅವರ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ದರ್ಶನ್‌ ಶುಭಕೋರಿದ್ದಾರೆ. ಎಕ್ಸ್‌ನಲ್ಲಿ ಸ್ಪೆಷಲ್ ಆಗಿ ಅಂಬರೀಶ್ ಅಪ್ಪಾಜಿಗೆ ದರ್ಶನ್ (Darshan) ವಿಶ್ ಮಾಡಿದ್ದಾರೆ. ಅಭಿಷೇಕ್‌ ಅಂಬರೀಶ್‌ ಕಂಠೀರವ ಸ್ಟುಡಿಯೋದಲ್ಲಿರೋ ಅಂಬರೀಶ್ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದ್ದಾರೆ. ಮಾಧ್ಯಮಗಳ ಬಳಿ ಅಂಬರೀಶ್ ಅವರ ನೆನಪುಗಳ ಕುರಿತಾಗಿ ಸುಮಲತಾ ಮಾತನಾಡಿದರು.

VISTARANEWS.COM


on

Ambareesh Birthday during Sumalatha Ambareesh Talks About Abhishek Ambareesh And Aviva
Koo

ಬೆಂಗಳೂರು: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಜನ್ಮ ದಿನ (Ambareesh Birthday). ಅಂಬಿ ನಮ್ಮನ್ನಗಲಿ ಐದು ವರ್ಷಗಳು ಕಳೆದರೂ ಬದುಕಿದ್ದಾಗ ಅವರು ಅದೆಷ್ಟು ಅಭಿಮಾನಿ ಬಳಗ ಹೊಂದಿದ್ದರೋ ಅಷ್ಟೇ ಫ್ಯಾನ್‌ ಬೇಸ್‌ ಇವತ್ತಿಗೂ ಅವರಿಗಿದೆ. ಇಂದು ಅವರ 72 ನೇ ಜನ್ಮ ದಿನವಾದ ಇಂದು ಪತ್ನಿ ಸುಮಲತಾ ಅಂಬರೀಶ್‌, ಪುತ್ರ ಅಭಿಷೇಕ್‌ ಅಂಬರೀಶ್‌ ಕಂಠೀರವ ಸ್ಟುಡಿಯೋದಲ್ಲಿರೋ ಅಂಬರೀಶ್ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದ್ದಾರೆ. ಮಾಧ್ಯಮಗಳ ಬಳಿ ಅಂಬರೀಶ್ ಅವರ ನೆನಪುಗಳ ಕುರಿತಾಗಿ ಸುಮಲತಾ ಮಾತನಾಡಿದರು. ಈ ಸಮಯದಲ್ಲಿ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಅಪ್ಪ ಆಗುತ್ತಿದ್ದಾರೆಯೇ? ನೀವು ಅಜ್ಜಿ ಆಗುತ್ತಿದ್ದೀರಿಯೇ? (Abhishek Ambareesh And Aviva) ಎಂಬ ಪ್ರಶ್ನೆ ಬಂತು. ಆಗ ಸಮಲತಾ ಅವರು ʻʻಸದ್ಯಕ್ಕೆ ಇಲ್ಲ. ಸಿಹಿ ಸುದ್ದಿ ಇದ್ದಾಗ ಖಂಡಿತ ಹೇಳುತ್ತೇನೆʼʼಎಂದರು.

ಈ ವೇಳೆ ಸುಮಲತಾ ಮಾತನಾಡಿ ʻʻಅಂಬಿ ಅಗಲಿ ಆರು ವರ್ಷ ಆಗಿದೆ. ಆದರೆ ಅಂಬಿ ಇದ್ದಾಗ ಎಷ್ಟು ಪ್ರೀತಿ ತೋರಿಸುತ್ತಿದ್ದರೋ ಅಷ್ಟೇ ಪ್ರೀತಿ ಈಗಲೂ ಅಭಿಮಾನಿಗಳು ತೋರಿಸುತ್ತಿದ್ದಾರೆ. ಅಂಬರೀಶ್ ಮಾಡಿದ ಸಮಾಜಮುಖಿ ಕೆಲಸಗಳನ್ನ ನೆನಪಲ್ಲಿಟ್ಕೊಂಡಿದ್ದಾರೆ ಜನ. ಕಳೆದ ವರ್ಷ ಅಂಬರೀಶ್ ಫೌಂಡೇಶನ್ ಶುರು ಮಾಡಿದ್ವಿ. ಫೌಂಡೇಶನ್ ವತಿಯಿಂದ ಸಾಧಕರನ್ನ ಗುರ್ತಿಸಿ ಸನ್ಮಾನಿಸುವ ಕೆಲಸ ಆಗ್ತಿದೆ. ಸಮಾಜಮುಖಿ ಕೆಲಸ ಮಾಡಿದವರಿಗೆ, ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಅಂಬರೀಶ್ ಫೌಂಡೇಶನ್ ವತಿಯಿಂದ ಸನ್ಮಾನ ಆಗುತ್ತಿದೆ. ಮಂಡ್ಯದಲ್ಲಿ ಇಂದು ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಹೋದ ಕಡೆಯಲೆಲ್ಲ ಅಂಬರೀಶ್ ಅವರ ಬಗ್ಗೆ ನಮಗೆ ಗೊತ್ತಿಲ್ಲದ ಕೆಲಸಗಳ ಬಗ್ಗೆ ಹೇಳ್ತಾರೆʼʼಎಂದರು.

ಇದನ್ನೂ ಓದಿ: Ambareesh Birthday: ರೆಬಲ್‌ ಸ್ಟಾರ್‌ 72 ನೇ ಹುಟ್ಟುಹಬ್ಬ; ಅಂಬಿ ಸ್ಮರಣಾರ್ಥ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ

ಸುಮಲತಾ ಅಂಬರೀಷ್ ಅವರು ಬೆಳಿಗ್ಗೆಯೇ ಮಗ ಅಭಿಷೇಕ್ ಹಾಗೂ ಸೊಸೆ ಅವಿವಾ ಜತೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.

ಅಂಬರೀಶ್‌ರನ್ನು ನೆನೆದ ಡಿ ಬಾಸ್‌

ಇನ್ನು ರೆಬಲ್‌ ಸ್ಟಾರ್‌ ಹುಟ್ಟುಹಬ್ಬ ನಟ ದರ್ಶನ್‌ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. ಅಂಬರೀಶ್‌ ಅವರ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ದರ್ಶನ್‌ ಶುಭಕೋರಿದ್ದಾರೆ. ಎಕ್ಸ್‌ನಲ್ಲಿ ಸ್ಪೆಷಲ್ ಆಗಿ ಅಂಬರೀಶ್ ಅಪ್ಪಾಜಿಗೆ ದರ್ಶನ್ (Darshan) ವಿಶ್ ಮಾಡಿದ್ದಾರೆ.

ನಮ್ಮೆಲ್ಲರ ಅಚ್ಚುಮೆಚ್ಚಿನ ಸಹೃದಯಿ, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿರವರ ಹುಟ್ಟುಹಬ್ಬದ (Birthday) ಪ್ರಯುಕ್ತ ಮೂಡಿಬಂದಿರುವ CDP ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಅಭಿಮಾನಿ ಸಮೂಹಕ್ಕೆ ಧನ್ಯವಾದಗಳು. ನಮ್ಮ ನಿಷ್ಠೆಯ ಕೆಲಸ-ಕಾರ್ಯಗಳಲ್ಲಿ ಸದಾ ಬೆನ್ನೆಲುಬಾಗಿ ಅಂಬಿ ಅಪ್ಪಾಜಿ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ದರ್ಶನ್‌ ಅಂಬರೀಶ್‌ಗೆ ಶುಭಕೋರಿದ್ದಾರೆ.

Continue Reading

ಸ್ಯಾಂಡಲ್ ವುಡ್

Shakhahaari Movie: ಪ್ರೇಕ್ಷಕರನ್ನು ಆವರಿಸಿದ ‘ಶಾಖಾಹಾರಿ’: ಪರಭಾಷಿಕರಿಂದಲೂ ಚಿತ್ರಕ್ಕೆ ಮೆಚ್ಚುಗೆ!

Shakhahaari Movie : ಚಿತ್ರಮಂದಿರದಲ್ಲಿ ದಕ್ಕದ ಪ್ರೀತಿ ಶಾಖಾಹಾರಿ ಚಿತ್ರಕ್ಕೆ ಒಟಿಟಿಯಲ್ಲಿ ದೊರೆಯುತ್ತಿದೆ. ಅಮೇಜಾನ್ ಪ್ರೈಮ್‌ಗೆ ಎಂಟ್ರಿ ಕೊಟ್ಟ ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿರುವ ಸಿನಿಮಾ.. ಎಲ್ಲಾ ಜಾಲತಾಣಗಳಲ್ಲು ಬಹಳಷ್ಟು ಜನ ದಿನೇ ದಿನೇ ಮೆಚ್ಚುಗೆ ವ್ಯಕ್ತಪಡಿಸುತ್ತ ಇರುವುದು ಗಮನಾರ್ಹ.

VISTARANEWS.COM


on

Shakhahaari Movie 1 cr minutes of streaming amazon prime
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಿನ್ನ-ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಹೊಸಬರ ಜತೆಗೆ ಅನುಭವಿ ತಾರಾಬಳಗ ಕೈ ಜೋಡಿಸಿದಾಗ ಒಂದೊಳ್ಳೆ ಅದ್ಭುತ ಸಿನಿಮಾ ಹೊರಹೊಮ್ಮಲಿದೆ ಎಂಬುದಕ್ಕೆ ʻಶಾಖಾಹಾರಿʼ ಚಿತ್ರ (Shakhahaari Movie) ತಾಜಾ ಉದಾಹರಣೆ. ತನ್ನ ಒಳ್ಳೆಯ ಕಂಟೆಂಟ್‌ನಿಂದಲೇ ಭಾರೀ ಸದ್ದು ಮಾಡಿದ್ದ ಈ ಚಿತ್ರವೀಗ ಅಮೇಜಾನ್ ಪ್ರೈಮ್‌ನಲ್ಲಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಶಾಖಾಹಾರಿ ನೋಡಿದವರೆಲ್ಲಾ ಇಂತಹ ಸಿನಿಮಾವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡ್ವಲ್ಲಾ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಫೆಬ್ರವರಿ 16ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದ ಶಾಖಾಹಾರಿ ಸಿನಿಮಾವೀಗ ಮೂರು ತಿಂಗಳ ಬಳಿಕ ಒಟಿಟಿಗೆ ಲಗ್ಗೆ ಇಟ್ಟಿದೆ. ಶುಕ್ರವಾರದಿಂದ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮ್ ಆಗಿರುವ ಈ ಚಿತ್ರವನ್ನು ನೋಡಿದವರೆಲ್ಲಾ ವಾವ್ ಇಂತಹ ಪ್ರಯತ್ನಗಳು ಮಾಲಿವುಡ್‌ನಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ನಡೆಯುತ್ತವೆ. ಅದಕ್ಕೆ ಪ್ರೇಕ್ಷಕಪ್ರಭು ಬೆನ್ನುತಟ್ಟಬೇಕಷ್ಟೇ.

ಚಿತ್ರಮಂದಿರದಲ್ಲಿ ದಕ್ಕದ ಪ್ರೀತಿ ಶಾಖಾಹಾರಿ ಚಿತ್ರಕ್ಕೆ ಒಟಿಟಿಯಲ್ಲಿ ದೊರೆಯುತ್ತಿದೆ. ಅಮೇಜಾನ್ ಪ್ರೈಮ್‌ಗೆ ಎಂಟ್ರಿ ಕೊಟ್ಟ ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿರುವ ಸಿನಿಮಾ.. ಎಲ್ಲಾ ಜಾಲತಾಣಗಳಲ್ಲು ಬಹಳಷ್ಟು ಜನ ದಿನೇ ದಿನೇ ಮೆಚ್ಚುಗೆ ವ್ಯಕ್ತಪಡಿಸುತ್ತ ಇರುವುದು ಗಮನಾರ್ಹ.

ಇದನ್ನೂ ಓದಿ: Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

ಶಾಖಾಹಾರಿಗೆ ಜೈ ಎಂದ ಸತೀಶ್

ನೀನಾಸಂ ಸತೀಶ್ ಶಾಖಾಹಾರಿ ಸಿನಿಮಾವನ್ನು ಬಾಯ್ ತುಂಬಾ ಹೊಗಳಿದ್ದಾರೆ. ಯಾವ ನೀರಿಕ್ಷೆಯು ಇಲ್ಲದೆ ಸುಮ್ಮನೆ ಸಿನಿಮಾ ನೋಡುತ್ತಾ ಹೋದಾಗ,ಸಿನಿಮಾ ನಮ್ಮನ್ನು ಒಳಗೆ ಸೆಳೆದೊಯ್ಯುತ್ತದೆ,ಸುಳಿಯಂತೆ. ಪ್ರಾಮಾಣಿಕವಾದ, ಯಾರನ್ನೂ ಮೆಚ್ಚಿಸಲು ಅಲ್ಲದೆ ತಮ್ಮಷ್ಟಕ್ಕೆ ತಂಡ ಧ್ಯಾನಿಸಿದೆ. ಸಿನಿಮಾ ಬರೀ ನಿರ್ದೇಶಕ,ಅಥವಾ ನಟರಲ್ಲದೆ ಸಮೂಹದ ಕೆಲಸ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.ಗೆಳೆಯ ಗೋಪಿ ವಾವ್! ರಘು ಅಣ್ಣ ನಮ್ಮ ಹೆಮ್ಮೆ! ನಿರ್ದೇಶಕ ಸಂದೀಪ್ ,ಮತ್ತು ಛಾಯಾಗ್ರಹಣ, ಸಂಗೀತ ಎಲ್ಲವೂ ಅದ್ಭುತ.ನೋಡಲೇಬೇಕಾದ ನಮ್ಮ ಚಿತ್ರ ಎಂದು ಟ್ವೀಟ್ ಮಾಡಿದ್ದಾರೆ.

ಕ್ಲೈಮ್ಯಾಕ್ಸ್ ಚಿಂದಿ ಎಂದ ಪೃಥ್ವಿ

ನಟ ಪೃಥ್ವಿ ಅಂಬಾರ್ ಕೂಡ ಚಿತ್ರವನ್ನು ನೋಡಿ ಮನಸಾರೆ ಕೊಂಡಾಡಿದ್ದಾರೆ. ಶಾಖಾಹಾರಿ ಬಿಡುಗಡೆ ಸಮಯದಲ್ಲಿ ನನ್ನ ಚಿತ್ರ ಬಿಡುಗಡೆಯಾಗಿತ್ತು. ಹೀಗಾಗಿ ಇಂತಹ ಒಳ್ಳೆ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದೇನೆ. ಅದಕ್ಕಾಗಿ ನನಗೆ ಬೇಸರವಿದೆ. ಚಿತ್ರದ ಕಥೆ, ಟ್ವಿಸ್ಟ್, ಕ್ಲೈಮ್ಯಾಕ್ಸ್ ಎಲ್ಲವೂ ಅದ್ಭುತ. ರಂಗಾಯಣ ರಘು ಸರ್ ಹಾಗೂ ಗೋಪಾಲ್ ದೇಶಪಾಂಡೇ ಸರ್ ಅಭಿನಯ ಸೂಪರ್ ಎಂದಿದ್ದಾರೆ.

ಸಂದೀಪ್ ಸುಂಕದ್ ನಿರ್ದೇಶನದ ‘ಶಾಖಾಹಾರಿ’ ಸಿನಿಮಾದ ಸೂತ್ರಧಾರಿ. ಕನ್ನಡ ಚಿತ್ರರಂಗದ ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಪೊಲೀಸ್ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಅತ್ಯದ್ಬುತವಾಗಿ ನಟಿಸಿದ್ದರು. ಉಳಿದಂತೆ ವಿನಯ್, ನಿಧಿ ಹೆಗಡೆ, ಸುಜಯ್ ಶಾಸ್ತ್ರೀ, ಹರಿಣಿ ಹಾಗೂ ಕಾನ್‌ಸ್ಟೇಬಲ್ ಮಮತಕ್ಕನ ಪಾತ್ರಧಾರಿಯಾಗಿ ಪ್ರತಿಭಾ ನಾಯಕ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಕೀಲಂಬಿ ಮೀಡಿಯಾ ಲ್ಯಾಬ್ ಬ್ಯಾನರ್ ನಡಿ ರಾಜೇಶ್ ಕೀಲಾಂಬಿ, ರಂಜಿನಿ ಪ್ರಸನ್ನ ಶಾಖಾಹಾರಿಗೆ ಬಂಡವಾಳ ಹೂಡಿದ್ದಾರೆ.

ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ರೋಚಕ ಕಥೆಯೇ ಶಾಖಾಹಾರಿ. ಸಿನಿಮಾದಲ್ಲಿ ಮಾಸ್ತಿಕಟ್ಟೆ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ (ರಂಗಾಯಣ ರಘು)ಗೆ ಹಿಂದೆ-ಮುಂದೆ ಯಾರೂ ಇರುವುದಿಲ್ಲ. ಹೋಟೆಲ್ ಮಾಲೀಕನಾಗಿರುವ ಸುಬ್ಬಣ್ಣ, ಬಾಣಸಿಗನಾಗಿಯೂ ಕೆಲಸ ಮಾಡಿಕೊಂಡಿರುತ್ತಾರೆ. ಇವರದ್ದು ಶುದ್ಧ ಶಾಕಾಹಾರಿ ಹೋಟೆಲ್… ಹೀಗಿರುವಾಗ, ಅಲ್ಲಿ ನಡೆಯುವ ಕೆಲ ಘಟನೆಗಳಿಂದ ಸುಬ್ಬಣ್ಣನ ಹೋಟೆಲ್ ಹೇಗೆ ‘ಶಾಖಾ’ಹಾರಿ ಆಗುತ್ತೆ ಎಂಬುದೆ ರೋಚಕ ವಿಷಯ.

Continue Reading

ಸಿನಿಮಾ

Shilpa Shetty: ಮೈಸೂರಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ಧ್ಯಾನ

Shilpa Shetty: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಶನ್‌ ಇರುವ ʻಕೆಡಿ’ ಸಿನಿಮಾದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್-ಇಂಡಿಯಾ ಸಿನಿಮಾವಾದ ಕೆಡಿ ಸಿನಿಮಾದಲ್ಲಿ ಸತ್ಯವತಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ .ಯುಗಾದಿ ಹಬ್ಬದಂದು ಚಿತ್ರತಂಡ, ಶಿಲ್ಪಾ ಶೆಟ್ಟಿ ಫಸ್ಟ್‌ ಲುಕ್‌ ಪೋಸ್ಟರ್‌ ಹಂಚಿಕೊಂಡಿತ್ತು.

VISTARANEWS.COM


on

Shilpa Shetty Visiting Nanjundeshwara Temple
Koo

ಬೆಂಗಳೂರು: ಮೈಸೂರಿನಲ್ಲಿ `ಕೆಡಿ’ ಸಿನಿಮಾ (KD cinema) ಚಿತ್ರೀಕರಣ ನಟಿ ಶಿಲ್ಪಾ ಶೆಟ್ಟಿ ತಂಗಿದ್ದಾರೆ. ಈ ವೇಳೆ ನಟಿ ಬಿಡುವು ಮಾಡಿಕೊಂಡು ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ (Nanjundeshwara Temple) ಬಂದಿದ್ದಾರೆ. ಪೂಜೆ ಸಲ್ಲಿಸಿ, ದೇವಸ್ಥಾನದ ಆವರಣದಲ್ಲಿ ಶಿಲ್ಪಾ ಶೆಟ್ಟಿ ಅವರು ಧ್ಯಾನ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಬಂದಿರುವ ವಿಷಯ ತಿಳಿದು, ಫ್ಯಾನ್ಸ್​ ಮುಗಿಬಿದ್ದಿದ್ದರು.

 ಈ ಮಧ್ಯೆ ಶಿಲ್ಪಾ ಶೆಟ್ಟಿ ಅವರು ಆಗಾಗ ದೇವಸ್ಥಾನಗಳಿಗೆ ತೆರಳುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿಗೆ ತೆರಳಿ ಭೂತ ಕೋಲ ವೀಕ್ಷಿಸಿದ್ದರು. ಈಗ ಅವರು ಮೈಸೂರಿನಲ್ಲಿ ನಂಜನಗೂಡು ನಂಜುಡೇಶ್ವರನ ಸನ್ನಿಧಾನಕ್ಕೆ ತೆರಳಿದ್ದಾರೆ. ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಶನ್‌ ಇರುವ ʻಕೆಡಿ’ ಸಿನಿಮಾದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್-ಇಂಡಿಯಾ ಸಿನಿಮಾವಾದ ಕೆಡಿ ಸಿನಿಮಾದಲ್ಲಿ ಸತ್ಯವತಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ .ಯುಗಾದಿ ಹಬ್ಬದಂದು ಚಿತ್ರತಂಡ, ಶಿಲ್ಪಾ ಶೆಟ್ಟಿ ಫಸ್ಟ್‌ ಲುಕ್‌ ಪೋಸ್ಟರ್‌ ಹಂಚಿಕೊಂಡಿತ್ತು. ಶಿಲ್ಪಾ ಶೆಟ್ಟಿ ಕೂಡಾ ತಮ್ಮ ಪೋಸ್ಟರನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಬಹಳ ಎಕ್ಸೈಟ್‌ ಆಗಿದ್ದರು. ರೆಟ್ರೋ ಲುಕ್‌ನಲ್ಲಿ ಕಾರೊಂದರ ಮುಂದೆ ಬ್ಯಾಗ್‌ ಹಿಡಿದು ನಿಂತಿರುವ ಶಿಲ್ಪಾ ಶೆಟ್ಟಿ ಲುಕ್‌ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.ಶಿಲ್ಪಾ ಶೆಟ್ಟಿ 17 ವರ್ಷಗಳ ನಂತರ ಇದೀಗ ಕೆಡಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರೀತ್ಸೋದ್ ತಪ್ಪಾ? ಆಟೋ ಶಂಕರ್, ಒಂದಾಗೋಣ ಬಾ ಸಿನಿಮಾಗಳಲ್ಲಿ ಶಿಲ್ಪಾ ಅಭಿನಯಿಸಿದ್ದಾರೆ.

ಇದನ್ನೂ ಓದಿ: Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

ಕೆಡಿ ಸಿನಿಮಾದಲ್ಲಿ ಬಹು ತಾರಾಗಣ ಇದೆ. ಈ ಹಿಂದೆ ಚಿತ್ರತಂಡ ರವಿಚಂದ್ರನ್ ಅವರ ಲುಕ್‌ ಹಂಚಿಕೊಂಡಿತ್ತು. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಅಷ್ಟೇ ಅಲ್ಲದೇ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು.

ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.

Continue Reading

ಸ್ಯಾಂಡಲ್ ವುಡ್

Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

Kannada New Movie: 90ರ ದಶಕದಲ್ಲಿ ಯಶಸ್ವಿಯ ಉತ್ತುಂಗದಲ್ಲಿದ್ದ ಶಶಿಕುಮಾರ್ ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು ಸೈ ಎನಿಸಿಕೊಂಡಿದ್ದರು. `ಕಾದಾಡಿ’ (Kaadaadi Movie Kannada) ಎನ್ನುವ ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ನಟಿಸಿದ್ದಾರೆ. ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ.

VISTARANEWS.COM


on

Kannada New Movie Aditya Shashikumar Kaadaadi Movie Lyrical song out
Koo

ಬೆಂಗಳೂರು: ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ (Kannada New Movie) ಈಗ ಆದಿತ್ಯ ಶಶಿಕುಮಾರ್ (Aditya Shashikumar) ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. `ಕಾದಾಡಿ’ (Kaadaadi Movie Kannada) ಎನ್ನುವ ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ನಟಿಸಿದ್ದಾರೆ. ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆಯಷ್ಟೇ ನಾಯಕನ ಪರಿಚಯದ ಎರಡನೇ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಎನ್.ಮಾರುತಿ ಸಾಹಿತ್ಯದ ’ಕಲೆಯು ಇರಬೇಕು, ಮನೆಯು ಇರಬೇಕುʼʼ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದಾರೆ. ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.

ಲಾವಣ್ಯಸಾಹುಕಾರ, ಚಾಂದಿನಿತಮಿಳರಸನ್ ಈ ಸಿನಿಮಾಗೆ ನಾಯಕಿಯರು. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್‌ಮನೋಹರ್, ಶ್ರವಣ್‌ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಡಿ.ಯೋಗಿಪ್ರಸಾದ್ ಛಾಯಾಗ್ರಹಣ ಡಿ.ಯೋಗಿಪ್ರಸಾದ್, ಕಲೆ ಅರ್ಜುನ್‌ ಸೂರಿ ಸೆಟ್ಟಿ, ಪ್ರಕಾಶ್‌ತೋಟ ಸಂಕಲನ, ನೃತ್ಯ ರಾಜ್‌ಪಿಡಿ-ರಾಜ್‌ಕೃಷ್ಣ, ಸಾಹಸ ಸಿನಿಮಾಕ್ಕಿದೆ.

ಇದನ್ನೂ ಓದಿ: Kannada New Movie: ʼಕೋಟಿʼ ಚಿತ್ರಕ್ಕೆ ಕಿಚ್ಚನ ಬಲ; ಹೊಸ ಪೋಸ್ಟರ್‌ ರಿಲೀಸ್‌

ಗೋವಾ, ಚಿಕ್ಕಮಗಳೂರು, ಹೈದರಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ಸನಡೆಸಲಾಗಿದೆ. ಅಂದಹಾಗೆ ಸಿನಿಮಾವು ಜೂನ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

90ರ ದಶಕದಲ್ಲಿ ಯಶಸ್ವಿಯ ಉತ್ತುಂಗದಲ್ಲಿದ್ದ ಶಶಿಕುಮಾರ್ ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು ಸೈ ಎನಿಸಿಕೊಂಡಿದ್ದರು. ಇದೀಗ ಅವರ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು ತಂದೆಯಂತೆ ಆದಿತ್ಯ ಸ್ಯಾಂಡಲ್ವುಡ್ ನಲ್ಲಿ ತಮ್ಮ ಮಿಂಚು ಹರಿಸುತ್ತಾರೆ ಕಾದು ನೋಡಬೇಕು.

Continue Reading
Advertisement
Rudram II
ದೇಶ2 mins ago

Rudram II: ಆಗಸದಿಂದಲೇ ವೈರಿಗಳನ್ನು ನಾಶಪಡಿಸುವ ರುದ್ರಂ II ಕ್ಷಿಪಣಿ ಪ್ರಯೋಗ ಯಶಸ್ವಿ; ಶತ್ರುಗಳಿಗೆ ನಡುಕ!

Chahal-Dhanashree
ಕ್ರೀಡೆ24 mins ago

Chahal-Dhanashree: ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರಾ ಚಹಲ್?; ಕುತೂಹಲ ಮೂಡಿಸಿದ ಪತ್ನಿಯ ಪೋಸ್ಟ್!

Timing change of 5 trains arriving at Sri Siddharooda Swamiji Railway Station Hubballi
ಹುಬ್ಬಳ್ಳಿ35 mins ago

Hubballi Train: ಪ್ರಯಾಣಿಕರೇ ಗಮನಿಸಿ; ಹುಬ್ಬಳ್ಳಿಗೆ ಆಗಮಿಸುವ 5 ರೈಲುಗಳ ಸಮಯ ಬದಲಾಗಿದೆ

Valmiki corporation Scam
ಕರ್ನಾಟಕ38 mins ago

Valmiki Corporation Scam: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಎಂಡಿ, ಲೆಕ್ಕಾಧಿಕಾರಿ ಅಮಾನತು

PM Kisan Samman
ಕೃಷಿ57 mins ago

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

Nita Ambani
ವಾಣಿಜ್ಯ1 hour ago

Nita Ambani: ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ ರೂಪಾಯಿ!

Team India Coach
ಕ್ರೀಡೆ1 hour ago

Team India Coach: ಅಭಿಮಾನಿಗಳು ಬಯಸಿದರೂ ಕೋಚ್​ ಹುದ್ದೆಗೆ ಧೋನಿ ಅನರ್ಹ; ಕಾರಣವೇನು?

Sudha Murty
ಕರ್ನಾಟಕ1 hour ago

Sudha Murty: ಡಾ.ಮಂಜುನಾಥ್‌ ಗೆಲುವಿಗಾಗಿ ರಾಯರಿಗೆ ವಿಶೇಷ ಹರಕೆ ಹೊತ್ತ ಸುಧಾಮೂರ್ತಿ; ಏನದು?

Headless Chicken
ವಿಜ್ಞಾನ1 hour ago

Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

Monsoon 2024
ದೇಶ2 hours ago

Monsoon 2024: ಮುಂದಿನ 24 ಗಂಟೆಗಳಲ್ಲೇ ಮುಂಗಾರು ಪ್ರವೇಶ; ಕರ್ನಾಟಕ ಸೇರಿ ಎಲ್ಲೆಲ್ಲಿ ಮಳೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌