Duniya Vijay: ಪುತ್ರಿಗಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌ - Vistara News

ಸ್ಯಾಂಡಲ್ ವುಡ್

Duniya Vijay: ಪುತ್ರಿಗಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌

Duniya Vijay: ಈಗಾಗಲೇ ಸಿನಿಮಾದ ಪೋಸ್ಟರ್‌ ರಿವೀಲ್‌ ಆಗಿದೆ. ಕತ್ತಿ ಹಾಗೂ ಕೊಡಲಿ ಹಿಡಿದು ದುನಿಯಾ ವಿಜಯ್ ನಿಂತಿದ್ದಾರೆ. ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎನ್ನುವ ಲೈನ್ ಕೂಡ ಇದೆ. ಈ ಚಿತ್ರಕ್ಕೆ ರಚಿತಾ ರಾಮ್‍ ನಾಯಕಿ ಎನ್ನಲಾಗಿದೆ. ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

VISTARANEWS.COM


on

Duniya Vijay New Movie Monika Enters To Film Industry
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ (Duniya Vijaj) ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಇಂದು ಸಿನಿಮಾದ ಮುಹೂರ್ತ ನೆರವೇರಿದೆ/ ವಿಶೇಷ ಅಂದರೆ ಈ ಸಿನಿಮಾ ಮೂಲಕ ದುನಿಯಾ ವಿಜಯ್‌ ಅವರ ಮಗಳು ಮೋನಿಕಾ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.

ಈಗಾಗಲೇ ಸಿನಿಮಾದ ಪೋಸ್ಟರ್‌ ರಿವೀಲ್‌ ಆಗಿದೆ. ಕತ್ತಿ ಹಾಗೂ ಕೊಡಲಿ ಹಿಡಿದು ದುನಿಯಾ ವಿಜಯ್ ನಿಂತಿದ್ದಾರೆ. ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎನ್ನುವ ಲೈನ್ ಕೂಡ ಇದೆ. ಈ ಚಿತ್ರಕ್ಕೆ ರಚಿತಾ ರಾಮ್‍ ನಾಯಕಿ ಎನ್ನಲಾಗಿದೆ.ಜಡೇಶ್‍ ಹಂಪಿ ಅವರಿಗೆ ನಿರ್ದೇಶನದಲ್ಲಿ ಅನುಭವ ಇದೆ. ‘ರಾಜಹಂಸ’, ‘ಜಂಟಲ್‍ಮ್ಯಾನ್‍’, ‘ಗುರು ಶಿಷ್ಯರು’ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ದುನಿಯಾ ವಿಜಯ್ ಮುಂದಿನ ಸಿನಿಮಾಗೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Duniya Vijay: ಸೈಕ್‌ ಸಾಂಗ್‌ ಬಗ್ಗೆ ʻಬ್ಯಾಡ್‌ ಬಾಯ್‌ʼ ದುನಿಯಾ ವಿಜಯ್‌ ಹೇಳಿದ್ದೇನು?

ದುನಿಯಾ ವಿಜಯ್ (Duniya Vijay) ಸದ್ಯ ‘ಭೀಮ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ವಿಜಯ್‌ ರಿಲೀಸ್ ತಯಾರಿಯಲ್ಲಿದ್ದಾರೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ “ಭೀಮʼ ಸಿನಿಮಾ ಕೆಲಸಗಳು‌ ಕೊನೆಯ ಹಂತ ತಲುಪುತ್ತಿದ್ದು, ಚಿತ್ರತಂಡ ಸಿನಿಮಾ ರಿಲೀಸ್‌ ಡೇಟ್ ಫಿಕ್ಸ್ ಮಾಡಿಕೊಳ್ಳುತ್ತಿದೆ.

ಭೀಮ’ ಸಿನಿಮಾದ ಬಗ್ಗೆ ಹೇಳುವುದಾದರೆ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರೆ, ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಸಾರ್ಥಕ್ ಈ ಸಿನಿಮಾಗೆ ಬಂಡವಾಳ ಹೂಡಿಸಿದ್ದಾರೆ. ಸಲಗ ಬಳಿಕ ದುನಿಯ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ. ಸಲಗ ಸಕ್ಸೆಸ್‌ನಲ್ಲಿರುವ ವಿಜಿ “ಭೀಮʼ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kannada New Movie: ‘ಕನ್ನಡ ಮಾಧ್ಯಮ’ ಸಿನಿಮಾಕ್ಕೆ ಹಿರಿಯ ಸಾಹಿತಿ ದೊಡ್ಡರಂಗೇಗೌಡರ ಸಾಥ್; ಮೋಷನ್ ಪೋಸ್ಟರ್ ರಿಲೀಸ್

Kannada New Movie: ಕನ್ನಡದ ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರು ಕನ್ನಡ ಚಿತ್ರತಂಗದ ಹೊಸ ಪ್ರತಿಭೆಗಳಿಗೆ ಯಾವತ್ತೂ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಅದರಂತೆ ಇದೀಗ ಹೊಸಬರ ಪ್ರಯತ್ನ ‘ಕನ್ನಡ ಮಾಧ್ಯಮ’ ಸಿನಿಮಾಕ್ಕೆ ಸಾಥ್‌ ನೀಡಿದ್ದಾರೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಸೋಮವಾರ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿದ್ದಾರೆ. ʼʼಕನ್ನಡ ನಮ್ಮೆಲ್ಲರ ಚೈತ್ಯನವಾಗಲಿ. ಉಸಿರಾಗಲಿ. ಕನ್ನಡ ಮಾಧ್ಯಮ ಸಿನಿಮಾದಲ್ಲಿ ಈ ಎಲ್ಲ ಅಂಶಗಳನ್ನು ಅಳವಡಿಸುವಂತಾಗಲಿ. ಸಮಗ್ರವಾದ ಕನ್ನಡ ಸಮಸ್ಯೆಗಳ ಕೈಪಿಡಿ ತರ ಚಿತ್ರ ಇರಲಿʼʼ ಎಂದು ಹೇಳಿದ್ದಾರೆ.

VISTARANEWS.COM


on

Kannada New Movie
Koo

ಬೆಂಗಳೂರು: ಕಲ್ಕಿ ಪ್ರೊಡಕ್ಷನ್‌ನಲ್ಲಿ ವೆಂಕಟೇಶ್ ಎಸ್‌. ನಿರ್ಮಿಸುತ್ತಿರುವ ʼಕನ್ನಡ ಮಾಧ್ಯಮʼ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಸೋಮವಾರ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದರು (Kannada New Movie).

ದೊಡ್ಡರಂಗೇಗೌಡ ಮಾತನಾಡಿ, ”ಎಲ್ಲಿ ಕನ್ನಡ ಅಲ್ಲಿ ದೊಡ್ಡ ರಂಗೇಗೌಡರು. ಆದ್ದರಿಂದ ಕನ್ನಡದ ಯಾವುದೇ ಕಾರ್ಯವಿರಲಿ, ಸಮಾರಂಭವಿರಲಿ. ಗೀತೆ ಪ್ರಸ್ತುತಿyಲ್ಲಿ ನಾನು ಪಾಲ್ಗೊಳ್ಳಲು ಮುಖ್ಯ ಕಾರಣ ಕನ್ನಡವೇ ನನ್ನ ಉಸಿರು, ಕನ್ನಡವೇ ನನ್ನ ಬದುಕು, ಕನ್ನಡವೇ ನನ್ನ ಹೆಸರು, ಕನ್ನಡವೇ ನನ್ನ ಬೆಳಕು ಕೂಡ. ವಿಧಾನಸೌಧದಲ್ಲಿ ಮೊದಲು ಕನ್ನಡ ಬಳಕೆ ಪ್ರಾರಂಭವಾಗಬೇಕು. ಎಷ್ಟೋ ಅಧಿಕಾರಿಗಳು ಕನ್ನಡವನ್ನು ಬಳಸುವುದಿಲ್ಲ. ನಾನು ಆಶಾವಾದಿ. ನನ್ನಲ್ಲಿ ಆಶಾ ಕಿರಣವಿದೆ. ಕನ್ನಡ ಇಂದಲ್ಲ ನಾಳೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಕನ್ನಡ ನಮ್ಮೆಲ್ಲರ ಚೈತ್ಯನವಾಗಲಿ. ಉಸಿರಾಗಲಿ. ಕನ್ನಡ ಮಾಧ್ಯಮ ಸಿನಿಮಾದಲ್ಲಿ ಈ ಎಲ್ಲ ಅಂಶಗಳನ್ನು ಅಳವಡಿಸುವಂತಾಗಲಿ. ಸಮಗ್ರವಾದ ಕನ್ನಡ ಸಮಸ್ಯೆಗಳ ಕೈಪಿಡಿ ತರ ಚಿತ್ರ ಇರಲಿʼʼ ಎಂದು ಹೇಳಿದರು.

ನಿರ್ದೇಶಕ ಅಖಿಲ್ ಪುತ್ತೂರು ಮಾತನಾಡಿ, ”ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಎರಡು ಹಾಡುಗಳಿವೆ. ಜನಗಳಿಗೆ ಗೊತ್ತಿಲ್ಲದ ಒಂದಷ್ಟು ವಿಷಯಗಳನ್ನು ‘ಕನ್ನಡ ಮಾಧ್ಯಮ’ ಚಿತ್ರದಲ್ಲಿ ತಿಳಿಸುತ್ತೇವೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತೇನೆ. ನಾನು ಯೋಧನ ಪಾತ್ರ ಮಾಡುತ್ತಿದ್ದೇನೆ” ಎಂದರು.

‘ಕನ್ನಡ ಮಾಧ್ಯಮ’ ಸಿನಿಮಾಗೆ ಅಖಿಲ್ ಪುತ್ತೂರು ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಂದಹಾಗೇ ಅಖಿಲ್ ಅವರಿಗಿದು ನಿರ್ದೇಶಕನಾಗಿ ಮೊದಲ ಪ್ರಯತ್ನ. ಸವಾದ್ ಮಂಗಳೂರು ಕಥೆ ಚಿತ್ರಕಥೆ ಹಾಗೂ ಸಂಭಾಷಣೆ –ಬರೆಯುವುದರ ಜತೆ ಛಾಯಾಗ್ರಹಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಟೈಟಲ್ ಹೇಳುವಂತೆ ಕನ್ನಡ ಮಾಧ್ಯಮದ ಪ್ರಾಮುಖ್ಯತೆಯನ್ನು ತಿಳಿಸುವ ಈ ಚಿತ್ರದಲ್ಲಿ ದೊಡ್ಡರಂಗೇಗೌಡ, ನಾಗೇಂದ್ರ ಅರಸ್, ವಾಣಿ, ಅಖಿಲ್, ಜಾಹ್ನವಿ, ಚಿನ್ಮಯ್, ಶಿವಮೊಗ್ಗ ರಾಮಣ್ಣ, ಪ್ರದೀಪ್ ಕುಮಾರ್ ಮತ್ತಿತರರು ನಟಿಸುತ್ತಿದ್ದಾರೆ.

ಸಿ.ವಿಶಾಲ್ ಕೃಷ್ಣ ಕನ್ನಡ ಮಾಧ್ಯಮ ಸಿನಿಮಾಗೆ ಸಂಗೀತ ಒದಗಿಸುತ್ತಿದ್ದು, ಕೃಷ್ಣ ಸಂಕಲನ ಚಿತ್ರಕ್ಕೆ ಇರಲಿದೆ. ಮುಂದಿನ ತಿಂಗಳ 7ರಿಂದ ಶೂಟಿಂಗ್ ಶುರುವಾಗ್ತಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: Kannada New Movie:ʻದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಆಯ್ಕೆಯಾದ ಕನ್ನಡದ ʻಕೆಂಡʼ ಸಿನಿಮಾ!

Continue Reading

ಪ್ರಮುಖ ಸುದ್ದಿ

Mahanati Show: ʼಮಹಾನಟಿ ಶೋʼ ವಿರುದ್ಧ ಮೆಕ್ಯಾನಿಕ್‌ಗಳ ಆಕ್ರೋಶ; ಸ್ಪರ್ಧಿ ಗಗನಾ, ರಮೇಶ್‌ ಅರವಿಂದ್‌ ಸೇರಿ ಐವರ ವಿರುದ್ಧ ಮತ್ತೊಂದು ದೂರು

Mahanati Show: ಮೆಕ್ಯಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗವನ್ನು ಅಪಮಾನಿಸಲಾಗಿದೆ ಎಂದು ಆರೋಪಿಸಿ ʼಮಹಾನಟಿʼ ರಿಯಾಲಿಟಿ ಶೋ ಸ್ಪರ್ಧಿ ಗಗನಾ ಹಾಗೂ ಜಡ್ಜ್‌ಗಳಾ ನಟ ರಮೇಶ್‌ ಅರವಿಂದ್‌, ನಟಿ ಪ್ರೇಮಾ ಸೇರಿ ಐವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮೆಕ್ಯಾನಿಕ್‌ ಮಿತ್ರ ವೆಲ್‌ಫೇರ್‌ ಅಸೋಸಿಯೇಷನ್‌ ದೂರು ನೀಡಿದೆ.

VISTARANEWS.COM


on

Mahanati Show
Koo

ಬೆಂಗಳೂರು: ʼಮಹಾನಟಿʼ ರಿಯಾಲಿಟಿ ಶೋ (Mahanati Show) ಸ್ಪರ್ಧಿ ಗಗನಾ ಹೇಳಿಕೆಯಿಂದ ಮೆಕ್ಯಾನಿಕ್‌ ವರ್ಗಕ್ಕೆ ನೋವಾಗಿದೆ ಎಂದು ಚಿಕ್ಕನಾಯಕನಹಳ್ಳಿಯ ದ್ವಿಚಕ್ರವಾಹನ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘ ದೂರು ನೀಡಿದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಮೆಕ್ಯಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗವನ್ನು ಕೀಳಾಗಿ ನಿಂದಿಸಿ, ಅಪಮಾನಿಸಲಾಗಿದೆ ಎಂದು ಆರೋಪಿಸಿ ʼಮಹಾನಟಿʼ ರಿಯಾಲಿಟಿ ಶೋ ನಡೆಸುವ ಜೀ ವಾಹಿನಿ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಮುಖ ನಟ, ನಟಿಯರು ಹಾಗೂ ಸ್ಪರ್ಧಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೆಕ್ಯಾನಿಕ್‌ ಮಿತ್ರ ವೆಲ್‌ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಆರ್‌.ನಾಗೇಶ್‌ ನೇತೃತ್ವದಲ್ಲಿ ಪದಾಧಿಕಾರಿಗಳು, ಸುಬ್ರಮಣ್ಯನಗರ ಪೊಲೀಸ್‌ ಠಾಣೆಗೆ ದೂರು‌ ನೀಡಿದ್ದಾರೆ.

ಮಹಾನಟಿ ಶೋ ಜಡ್ಜ್‌ಗಳಾದ ನಟಿ ಪ್ರೇಮಾ, ನಟ ರಮೇಶ್‌ ಅರವಿಂದ್‌, ನಿರ್ದೇಶಕ ತರುಣ್‌ ಸುಧೀರ್‌, ನಿರೂಪಕಿ ಅನುಶ್ರೀ ಹಾಗೂ ಸ್ಪರ್ಧಿ ಗಗನಾ ವಿರುದ್ಧ ದೂರು ದಾಖಲಾಗಿದೆ.

ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಎಂಬ ರಿಯಾಲಿಟಿ ಶೋನ ಒಂದು ಕಾರ್ಯಕ್ರಮದಲ್ಲಿ ಮೆಕ್ಯಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗದ ಜನರನ್ನು ತೀರಾ ಕೆಟ್ಟದಾಗಿ ಅಪಮಾನಿಸಲಾಗಿದೆ. ಈ ಕಾರ್ಯಕ್ರಮವನ್ನು ರಾಜ್ಯದ ಕೋಟ್ಯಂತರ ಜನರು ನೋಡುತ್ತಾರಾದ್ದರಿಂದ ನಮಗೆ ಆಗಿರುವ ಅವಮಾನಕ್ಕೆ ಎಣೆಯೇ ಇಲ್ಲದಂತಾಗಿದೆ. ಈ ಕಾರ್ಯಕ್ರಮದ ಒಂದು ಎಪಿಸೋಡ್‌ನಲ್ಲಿ, ಕಾರ್ಯಕ್ರಮದ ಜಡ್ಜ್ ಆಗಿರುವ ನಟ ರಮೇಶ್ ಅರವಿಂದ್ ಅವರು ಸ್ಪರ್ಧಿಯೊಬ್ಬರಿಗೆ ಟಾಸ್ಕ್ ನೀಡುತ್ತಾರೆ. ನಿಮ್ಮ ತಂಗಿ ಒಬ್ಬ ಮೆಕ್ಯಾನಿಕ್ ಜತೆ ಓಡಾಡುವುದನ್ನು ನೀವು ನೋಡುತ್ತೀರಿ. ನಿಮ್ಮ ತಂಗಿ ಮನೆಗೆ ಬಂದಾಗ ಏನು ಹೇಳುತ್ತೀರಿ ಎಂದು ಅವರು ಪ್ರಶ್ನಿಸಿ, ಅಭಿನಯಿಸಲು ಹೇಳುತ್ತಾರೆ. ಈ ಸಂದರ್ಭದಲ್ಲಿ ಸ್ಪರ್ಧಿ ಹೇಳುವ ಮಾತುಗಳು ಮೆಕ್ಯಾನಿಕ್ ಸಮುದಾಯಕ್ಕೆ ಅಪಮಾನಕಾರಿಯಾಗಿರುತ್ತದೆ ಎಂದು ಪದಾಧಿಕಾರಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ | Mahanati Show: ಮೆಕ್ಯಾನಿಕಲ್‌ ಲೈಫ್‌ ಬಗ್ಗೆ ಕೆಟ್ಟ ಡೈಲಾಗ್‌ ಹೊಡೆದ ಗಗನಾ; ರಮೇಶ್‌ ಸೇರಿ ಹಲವರ ವಿರುದ್ಧ ದೂರು!

“ನೋಡು ಐಶು, ನೀನು ಅವನ ಜತೆ ಬೈಕಲ್ಲಿ ಸುತ್ತಾಡೋದನ್ನು ನಾನು ನೋಡಿದೆ. ಬಿದ್ರೆ ಯಾವಾಗೂ, ತುಪ್ಪದ ಕೊಳದಲ್ಲಿ ಬೀಳಬೇಕೇ ಹೊರತು ಕೊಚ್ಚೆಯ ಕೊಳೆಯಲ್ಲಿ ಬೀಳಬಾರದು. ಇದನ್ನ ನೆನಪಿಟ್ಕೋ. ಲೈಫು ನೀನು ಅಂದುಕೊಂಡಷ್ಟು ಈಜಿಯಾಗಿರೋದಿಲ್ಲ. ದುಡ್ಡು ಇಂಪಾರ್ಟೆಂಟ್ ಅಲ್ಲ, ಪ್ರೀತಿನೇ ಇಂಪಾರ್ಟೆಂಟ್ ಅಂತ ನೀನು ಅಂದುಕೊಂಡಿರಬಹುದು. ಆದರೆ ದುಡ್ಡು ಯಾವಾಗಲೂ ಬೇಕು. ಪ್ರೀತಿ ಮಾಡ್ಕೊಂಡೇ ಗ್ರೀಸ್ ತಿಂದುಕೊಂಡು ಇರುತ್ತೀನಿ ಅಂದ್ರ ಆಗಲ್ಲ. ನೀನು ಮೆಕಾನಿಕ್ ಜತೆನೇ ಹೋಗಿ ಅವನ ಜತೆ ಗ್ರೀಸ್ ತಿಂದುಕೊಂಡು ಇರುತ್ತೀನಿ ಅಂದ್ರೆ ತಪ್ಪಾಗುತ್ತೆ” ಎಂದು ಆಕೆ ಹೇಳುತ್ತಾರೆ.

ಸ್ಪರ್ಧಿ ಇಷ್ಟು ಕೆಟ್ಟದಾಗಿ ಒಂದು ದೊಡ್ಡ ಶ್ರಮಿಕ ವರ್ಗದ ಬಗ್ಗೆ ಮಾತನಾಡುತ್ತಿದ್ದರೂ ಜಡ್ಜ್‌ಗಳಾದ ರಮೇಶ್ ಅರವಿಂದ್, ನಟಿ ಪ್ರೇಮ, ನಿರ್ದೇಶಕ ತರುಣ್ ಸುಧೀರ್, ಆಂಕರ್ ಅನುಶ್ರೀ ಮತ್ತು ಅತಿಥಿಗಳಾಗಿ ಪಾಲ್ಗೊಂಡಿದ್ದ ನಟ ನಟಿಯರು ಹೀಗೆ ಮಾತನಾಡುವುದು ತಪ್ಪು ಎಂದು ಹೇಳುವ ಬದಲಾಗಿ, ಆಕೆಯ ಮಾತುಗಳಿಗೆ ಚಪ್ಪಾಳೆ ಹೊಡೆದು, ಪ್ರೋತ್ಸಾಹಿಸುತ್ತಾರೆ.

ಮೆಕ್ಯಾನಿಕ್ ವೃತ್ತಿಯೂ ಎಲ್ಲ ವೃತ್ತಿಗಳ ಹಾಗೆಯೇ ಗೌರವಾನ್ವಿತ ವೃತ್ತಿ. ಎಂಜಿನಿಯರ್, ಡಾಕ್ಟರ್, ಬ್ಯುಸಿನೆಸ್ ಮ್ಯಾನ್, ಪೊಲೀಸ್, ಮಿಲಿಟರಿಯಿಂದ ಹಿಡಿದು ಚಪ್ಪಲಿ ಹೊಲೆಯುವ ಕಾಯಕದವರೆಗೆ ಎಲ್ಲ ವೃತ್ತಿಗಳೂ ಶ್ರೇಷ್ಠ ವೃತ್ತಿಗಳೇ ಆಗಿವೆ. ಯಾವ ವೃತ್ತಿಯೂ ಕನಿಷ್ಠವಲ್ಲ, ಯಾವ ವೃತ್ತಿ ಮಾಡುವವನೂ ಕೊಚ್ಚೆ ಅಲ್ಲ. ಇದು ಈ ಮಹಾನಟ ನಟಿಯರಿಗೆ ಅರ್ಥವಾಗದೇ ಇರುವುದು ಆಶ್ಚರ್ಯಕರವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.

ಮಹಾನಟಿ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್ ಕೆಲಸ ಮಾಡುವವರು ಕೊಚ್ಚೆ ಎಂದು ನಿಂದಿಸಲಾಗಿದೆ. ಮೆಕಾನಿಕ್ ಮನೆಯವರು ಗ್ರೀಸ್ ತಿಂದು ಬದುಕುತ್ತಾರೆ ಎಂದು ಬಿಂಬಿಸಲಾಗಿದೆ. ಈ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವೂ ಆಗಿರುವುದರಿಂದ, ನಮ್ಮ ಬಗ್ಗೆ ಇಷ್ಟು ಕೊಳಕಾಗಿ ನಿಂದಿಸಿರುವುದರಿಂದ ನಾವುಗಳು ತಲೆ ಎತ್ತಿಕೊಂಡು ಓಡಾಡದಂತಾಗಿದೆ. ಇದೇ ಮಾತುಗಳನ್ನು ವೈದ್ಯ, ಪೊಲೀಸ್, ವಕೀಲ, ಪತ್ರಕರ್ತ, ಚಿತ್ರನಟರು ಅಥವಾ ಇನ್ಯಾವುದೇ ವೃತ್ತಿಪರ ಸಮುದಾಯದ ವಿರುದ್ಧ ಮಾತನಾಡಿದ್ದರೆ ಅವರು ಸುಮ್ಮನೆ ಇರುತ್ತಿದ್ದರೆ? ಅದಕ್ಕೂ ರಮೇಶ್ ಅರವಿಂದ್ ಅವರಾದಿಯಾಗಿ ಎಲ್ಲರೂ ಆಕೆಯನ್ನು ಹೊಗಳಿ ಅಟ್ಕ್ಕೇರಿಸುತ್ತಾರೆ. ಆ ಸಂದರ್ಭದಲ್ಲಿ ಇಡೀ ಒಂದು ಶ್ರಮಿಕ ವರ್ಗವನ್ನು ಕೊಚ್ಚೆ ಗುಂಡಿಯಲ್ಲಿರುವವರು ಹಾಗೂ ತಮ್ಮ ಕುಟುಂಬದವರಿಗೆ ಅನ್ನಕ್ಕೆ ಬದಲಾಗಿ ಗ್ರೀಸನ್ನು ತಿನ್ನಿಸುತ್ತಾರೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಒಂದು ಶ್ರಮಿಕ ಸಮುದಾಯವನ್ನು ಕೊಚ್ಚೆ ಗುಂಡಿಯಲ್ಲಿರುವವರು, ಗ್ರೀಸ್ ತಿಂದು ಬದುಕುವವರು ಎಂದು ನಿಂದಿಸಿರುವ ಈ ಕಾರ್ಯಕ್ರಮ ಪ್ರಸಾರ ಮಾಡುವ ವಾಹಿನಿ ಮುಖ್ಯಸ್ಥರು, ಜಡ್ಜ್‌ಗಳಾದ ರಮೇಶ್ ಅರವಿಂದ್ ಮತ್ತು ಪ್ರೇಮ, ತರುಣ್ ಸುಧೀರ್, ಆಂಕರ್ ಅನುಶ್ರೀ, ಸ್ಪರ್ಧಿ ಗಗನ ಮೇಲೆ ಸಮುದಾಯಗಳ ನಡುವೆ ದ್ವೇಷ ಹರಡುವ, ಸಮಾಜದಲ್ಲಿ ಅಶಾಂತಿ ಹರಡುವ, ಒಂದಿಡೀ ಶ್ರಮಿಕ ಸಮುದಾಯವನ್ನು ಕೊಚ್ಚೆ ಎಂದು ನಿಂದಿಸಿ ಅವರ ಆತ್ಮಗೌರವಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ಸಂಘ ಕೋರಿದೆ.

Continue Reading

ಸ್ಯಾಂಡಲ್ ವುಡ್

Vinay Gowda: ಮೂರು ಸಿನಿಮಾಗಳಿಗೆ ಸಹಿ ಮಾಡಿದ ʻಬಿಗ್‌ ಬಾಸ್‌ʼ ಖ್ಯಾತಿಯ ವಿನಯ್‌ ಗೌಡ!

Vinay Gowd: . ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ವಿನಯ್‌ ಅವರು ಮೂರನೇ ರನ್ನರ್ ಅಪ್ ಆದರು. ವಿನಯ್ ಗೌಡ ಅವರು ಈ ಸೀಸನ್‌ನಲ್ಲಿ ಮೂಡಿಸಿರುವ ಹೆಜ್ಜೆಗುರುತು ಸಣ್ಣದೇನಲ್ಲ. ಅದು ಅಳಿಸಲಾಗದಂಥ ಛಾಪು. ಬಿಗ್‌ಬಾಸ್‌ ಈ ಸೀಸನ್‌ನ ಆರಂಭದಲ್ಲಿದ್ದ ಕೋಪಿಷ್ಠ ‘ವಿಲನ್’ ವಿನಯ್ ಮಾಯವಾಗಿ ಪ್ರಬುದ್ಧ, ಸ್ನೇಹಪರ, ಮೃದುಹೃದಯಿ, ಭಾವುಕ ‘ಹೀರೊ’ ವಿನಯ್‌ ಜನರ ಮನಸಲ್ಲಿ ಸ್ಥಾನ ಪಡೆದುಕೊಂಡಿದ್ದರು.

VISTARANEWS.COM


on

Vinay Gowda Got three Film Offer
Koo

ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ವಿನಯ್‌ ಗೌಡ ( Vinay Gowda) ಅವರಿಗೆ ಹಲವು ಆಫರ್‌ಗಳು ಬಂದಿವೆ. ಮೂರು ಸಿನಿಮಾಗಳಿಗೆ ವಿಲನ್ ಆಗಿ ವಿನಯ್ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

ವಿನಯ್‌ ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ಇದರಲ್ಲಿ ಸಖತ್‌ ಹೆಸರು ಗಳಿಸಿದ್ದರು.

ಹಲವು ಧಾರಾವಾಹಿಗಳಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು ವಿನಯ್‌. ಇದೀಗ ಮಾಧ್ಯಮದವೊಂದರಲ್ಲಿ ತಮಗೆ ಬಂದ ಆಫರ್‌ಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Vinay Gowda: ಕಿಚ್ಚ ಸುದೀಪ್‌ ಜತೆ ವಿನಯ್‌ ಗೌಡ ಭರ್ಜರಿ ಭೋಜನ!

‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾಗಳು, ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ. ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದಿದ್ದಾರೆ ವಿನಯ್ ಗೌಡ.

ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ವಿನಯ್‌ ಅವರು ಮೂರನೇ ರನ್ನರ್ ಅಪ್ ಆದರು. ವಿನಯ್ ಗೌಡ ಅವರು ಈ ಸೀಸನ್‌ನಲ್ಲಿ ಮೂಡಿಸಿರುವ ಹೆಜ್ಜೆಗುರುತು ಸಣ್ಣದೇನಲ್ಲ. ಅದು ಅಳಿಸಲಾಗದಂಥ ಛಾಪು. ಬಿಗ್‌ಬಾಸ್‌ ಈ ಸೀಸನ್‌ನ ಆರಂಭದಲ್ಲಿದ್ದ ಕೋಪಿಷ್ಠ ‘ವಿಲನ್’ ವಿನಯ್ ಮಾಯವಾಗಿ ಪ್ರಬುದ್ಧ, ಸ್ನೇಹಪರ, ಮೃದುಹೃದಯಿ, ಭಾವುಕ ‘ಹೀರೊ’ ವಿನಯ್‌ ಜನರ ಮನಸಲ್ಲಿ ಸ್ಥಾನ ಪಡೆದುಕೊಂಡಿದ್ದರು. . ಮೂರನೇ ರನ್ನರ್‌ ಅಪ್‌ (4ನೇ ಸ್ಥಾನ ಪಡೆದ) ಆಗಿದ ವಿನಯ್‌ ಗೌಡ ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ಸಿಕ್ಕಿತ್ತು.

Continue Reading

ಸಿನಿಮಾ

Family Drama Trailer: ʻಡೇರ್ ಡೆವಿಲ್ ಮುಸ್ತಾಫ’ ತಂಡದಿಂದ ವಿಭಿನ್ನ ಸಿನಿಮಾ!

Family Drama Trailer: ʻಕಾಂತಾರʼ ಸ್ಟಾರ್‌ ರಿಷಬ್ ಶೆಟ್ಟಿ ಅವರ ತಂಡದಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ನಿರ್ದೇಶಕ ಆಕರ್ಷ್ ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಟ್ರೈಲರ್ ಎಷ್ಟು ಗಮನ ಸೆಳೆಯುತ್ತಿದೆಯೂ ಹಾಗೆ ಪೋಸ್ಟರ್‌ ಕೂಡ ಅಷ್ಟೇ ಕ್ರಿಯೇಟಿವ್ ಆಗಿ ಮಾಡಿದ್ದಾರೆ. ಫಿಲಿಫೈನ್ಸ್ ಕ್ರಿಯೇಟಿವ್ ಡಿಸೈನರ್ ಬಳಿ ʻಫ್ಯಾಮಿಲಿ ಡ್ರಾಮʼ ಚಿತ್ರದ ಪೋಸ್ಟರ್ ಡಿಸೈನ್ ಮಾಡಿಸಿದ್ದು ವಿಶೇಷವಾಗಿದೆ.

VISTARANEWS.COM


on

Family Drama Trailer Out
Koo

ಬೆಂಗಳೂರು: 2024ರ ಲೋಕಸಭಾ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ. ಈಗ ಎಲ್ಲಿ ನೋಡಿದರೂ ರಾಜಕೀಯದೇ ಸುದ್ದಿ. ಈ ನಡುವೆ ಸಿನಿಮಾ ಕ್ಷೇತ್ರ ಕೊಂಚ ಮಂಕಾಗಿದೆ. ಚುನಾವಣಾ ಬಿಸಿಯ ನಡುವೆಯೂ ‘ಫ್ಯಾಮಿಲಿ ಡ್ರಾಮ‘ (Family Drama Trailer) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದ್ಯಾವ ಫ್ಯಾಮಿಲಿ ಡ್ರಾಮ ಅಂತೀರಾ? ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್‌ಗೆ ಸಿದ್ದವಾಗುತ್ತಿರುವ ಹೊಸ ಸಿನಿಮಾ. ಸದ್ಯ ಸಿನಿಮಾ ತಂಡ ಟ್ರೈಲರ್ ಮೂಲಕ ಸಿನಿಮಾ ಅಭಿಮಾನಿಗಳ ಮುಂದೆ ಬಂದಿದೆ. ಸಾಕಷ್ಟು ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ ‘ಫ್ಯಾಮಿಲಿ ಡ್ರಾಮ’.

ಕ್ರಿಯೇಟಿವ್ ಆಗಿ ಮೂಡಿ ಬಂದಿರುವ ಈ ಟ್ರೈಲರ್ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಸಿನಿಮಾದ ಕಂಟೆಂಟ್ ಜತೆಗೆ ಟೆಕ್ನಿಕಲ್ ವಿಚಾರಗಳು ಸಹ ಗಮನ ಸೆಳೆಯುತ್ತಿದೆ. ಯುವ ಪ್ರತಿಭೆ ಆಕರ್ಷ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾವಿದು. ಆಕರ್ಷ್‌ಗೆ ಇದು ಮೊದಲ ನಿರ್ದೇಶನದ ಸಿನಿಮಾ. ಹಾಗಂತ ಸಿನಿಮಾರಂಗ ಹೊಸದೇನಲ್ಲ. ʻಕಾಂತಾರʼ ಸ್ಟಾರ್‌ ರಿಷಬ್ ಶೆಟ್ಟಿ ಅವರ ತಂಡದಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ನಿರ್ದೇಶಕ. ಸದ್ಯ ಬಿಡುಗಡೆಗೆ ರೆಡಿಯಾಗಿರುವ ‘ಲಾಫಿಂಗ್ ಬುದ್ಧ’ ಸಿನಿಮಾದಲ್ಲಿ ಆಕರ್ಷ್ ಕೆಲಸ ಮಾಡಿದ್ದಾರೆ. ಜತೆಗೆ ಒಂದಿಷ್ಟು ಕಿರು ಚಿತ್ರಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: Shiva Rajkumar: ಸೆಟ್ಟೇರಿತು ಶಿವರಾಜ್‌ಕುಮಾರ್‌ – ಆರ್ ಚಂದ್ರು ಕಾಂಬಿನೇಷನ್‌ನ ಹೊಸ ಸಿನಿಮಾ!

ಇನ್ನೂ ಈ ಸಿನಿಮಾದಲ್ಲಿ ʻಆಚಾರ್ ಆ್ಯಂಡ್ ಕೋʼ ಸಿನಿಮಾದ ನಿರ್ದೇಶಕಿ ಸಿಂಧು ಶ್ರೀನಿವಾಸ್ ಮೂರ್ತಿ, ʻಡೇರ್ ಡೆವಿಲ್ ಮುಸ್ತಾಫʼ ಸಿನಿಮಾದಲ್ಲಿ ನಟಿಸಿರುವ ಅಭಯ್, ಪೂರ್ಣ ಮೈಸೂರು ಹಾಗೂ ಅನನ್ಯ ಅಮರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ʻಆಚಾರ್ ಆ್ಯಂಡ್ ಕೋʼ ಬಳಿಕ ಸಿಂಧು (Sindhu Sreenivasa Murthy) ಒಪ್ಪಿಕೊಂಡ ಚಿತ್ರ ಇದಾಗಿದೆ. ‘ಫ್ಯಾಮಿಲಿ ಡ್ರಾಮ’ ಡಾರ್ಕ್‌ ಕಾಮಿಡಿ ಸಿನಿಮಾ. ಮುಗ್ದ ಕುಟುಂಬವೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ ಕಥೆಯೇ ಫ್ಯಾಮಿಲಿ ಡ್ರಾಮ. ಸಾಕಷ್ಟು ಹೊಸತನದೊಂದಿಗೆ, ವಿಭಿನ್ನವಾಗಿ, ಕ್ರಿಯೇಟಿವ್ ಆಗಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಆಕರ್ಷ್ ತಂಡ.

ಚಿತ್ರದ ಟ್ರೈಲರ್ ಎಷ್ಟು ಗಮನ ಸೆಳೆಯುತ್ತಿದೆಯೂ ಹಾಗೆ ಪೋಸ್ಟರ್‌ ಕೂಡ ಅಷ್ಟೇ ಕ್ರಿಯೇಟಿವ್ ಆಗಿ ಮಾಡಿದ್ದಾರೆ. ಫಿಲಿಫೈನ್ಸ್ ಕ್ರಿಯೇಟಿವ್ ಡಿಸೈನರ್ ಬಳಿ ʻಫ್ಯಾಮಿಲಿ ಡ್ರಾಮʼ ಚಿತ್ರದ ಪೋಸ್ಟರ್ ಡಿಸೈನ್ ಮಾಡಿಸಿದ್ದು ವಿಶೇಷವಾಗಿದೆ. ರೆಟ್ರೋ ಶೈಲಿಯಲ್ಲಿ ಡಿಸೈನ್‌ಗಳನ್ನು ನೋಡಬಹುದು.

ಇನ್ನೂ ವಿಶೇಷ ಎಂದರೆ ಸಿನಿಮಾದ ಸಂಗೀತ ಕೂಡ ರೆಟ್ರೋ ಶೈಲಿಯಲ್ಲಿ ಇದೆ. ಇವತ್ತಿನ ಕಾಲಘಟ್ಟದ ಕಥೆಯಾದರೂ ಸಂಗೀತ ರೆಟ್ರೋ ಶೈಲಿಯಲ್ಲಿ ಇರುವುದು ಈ ಸಿನಿಮಾದ ವಿಶೇಷವಾಗಿದೆ. ಅಂದಹಾಗೆ ಚಿತ್ರಕ್ಕೆ ಚೇತನ್ ಅಮಯ್ಯ ಸಂಗೀತ ಸಂಯೋಜನೆ ಮಾಡದ್ದಾರೆ.

Continue Reading
Advertisement
Kaladarpana-Art Reflects
ಬೆಂಗಳೂರು1 hour ago

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Covishield Vaccine
ಪ್ರಮುಖ ಸುದ್ದಿ1 hour ago

ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Narendra modi
ಪ್ರಮುಖ ಸುದ್ದಿ1 hour ago

Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

DK Shivakumar
ಪ್ರಮುಖ ಸುದ್ದಿ2 hours ago

DK Shivakumar: ಅಶ್ಲೀಲ ಚಿತ್ರಕ್ಕೆ ಡಿಕೆಶಿ ಫೋಟೊ ಮಾರ್ಫಿಂಗ್ ಆರೋಪ; ಮೂವರ ವಿರುದ್ಧ ಎಫ್‌ಐಆರ್‌

IPL 2024
Latest2 hours ago

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

Union Minister Pralhad Joshi election campaign in Shiggavi
ಧಾರವಾಡ2 hours ago

Lok Sabha Election 2024: ಈ ಲೋಕಸಭಾ ಚುನಾವಣೆ ಭಾರತದ ಸುವರ್ಣ ಯುಗಕ್ಕೆ ನಾಂದಿ: ಪ್ರಲ್ಹಾದ್‌ ಜೋಶಿ

Lok Sabha Election 2024 Bike rally for voting awareness in Hosapete
ವಿಜಯನಗರ2 hours ago

Lok Sabha Election 2024: ಹೊಸಪೇಟೆಯಲ್ಲಿ ಮತದಾನ ಜಾಗೃತಿಗಾಗಿ ಬೈಕ್ ರ‍್ಯಾಲಿ

BJP National President JP Nadda Election Campaign for Haveri Gadag Lok Sabha Constituency BJP Candidate Basavaraj Bommai
ಕರ್ನಾಟಕ2 hours ago

Lok Sabha Election 2024: ಮೋದಿಯವರ ವಿಕಸಿತ ಭಾರತ ಸಾಕಾರಗೊಳಿಸಲು ಬೊಮ್ಮಾಯಿಯವರನ್ನು ಗೆಲ್ಲಿಸಿ: ಜೆಪಿ ನಡ್ಡಾ

2nd PUC Paper Leak
ಕರ್ನಾಟಕ2 hours ago

2nd PUC Paper Leak: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ವಜಾಗೊಂಡಿದ್ದ ಎಸ್‌ಡಿಎ ಮರು ನೇಮಕ!

Lok Sabha Election
Lok Sabha Election 20242 hours ago

Lok Sabha Election: ಕಳೆದ ಬಾರಿಗೆ ಹೋಲಿಸಿದರೆ ಮೊದಲೆರಡು ಹಂತಗಳ ಮತದಾನದ ಪ್ರಮಾಣದಲ್ಲಿ ಕುಸಿತ; ಇಲ್ಲಿದೆ ಅಂಕಿ-ಅಂಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ21 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌