Kannada New Movie: ಸೌಂಡ್ ಮಾಡಲು ‘ಖಾಲಿ ಡಬ್ಬ' ರೆಡಿ; ಹೊಸಬರ ಕನಸಿಗೆ ಸಾಥ್ ಕೊಟ್ಟ ವಿ.ನಾಗೇಂದ್ರ ಪ್ರಸಾದ್ - Vistara News

ಸ್ಯಾಂಡಲ್ ವುಡ್

Kannada New Movie: ಸೌಂಡ್ ಮಾಡಲು ‘ಖಾಲಿ ಡಬ್ಬ’ ರೆಡಿ; ಹೊಸಬರ ಕನಸಿಗೆ ಸಾಥ್ ಕೊಟ್ಟ ವಿ.ನಾಗೇಂದ್ರ ಪ್ರಸಾದ್

Kannada New Movie: ಹೊಸಬರ ತಂಡವೊಂದು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲು ಸಜ್ಜಾಗಿದೆ. ʼಖಾಲಿ ಡಬ್ಬʼ ಹೆಸರಿನ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಮಾರ್ಚ್‌ 25ರಂದು ಟೈಟಲ್ ಸಾಂಗ್ ಬಿಡುಗಡೆ ಮಾಡಲಾಯಿತು.

VISTARANEWS.COM


on

Kannada New Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʼಖಾಲಿ ಡಬ್ಬʼ (Khali Dabba) ಹೀಗೊಂದು ಶೀರ್ಷಿಕೆಯ ಸಿನಿಮಾ ಬರುತ್ತಿದೆ. ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಪ್ರಕಾಶ್ ಕೆ. ಅಂಬ್ಳೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಪೂರ್ಣ ಪ್ರಮಾಣ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪ್ರಕಾಶ್ ಮೊದಲ ಕನಸಿಗೆ ಮಂಜು ಗುರಪ್ಪ ಹಣ ಹಾಕಿದ್ದು, ರಾಮ್ ಗುಡಿ ನಾಯಕನಾಗಿ ನಟಿಸಿದ್ದು, ಆದ್ಯಾ ಪ್ರಿಯಾ, ಹರಿತಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಬೆಂಗಳೂರಿನ ಎಸ್.ಆರ್.ವಿ. ಥಿಯೇಟರ್‌ನಲ್ಲಿ ಮಾರ್ಚ್‌ 25ರಂದು ಹಮ್ಮಿಕೊಳ್ಳಲಾಗಿತ್ತು (Kannada New Movie).

ಈ ವೇಳೆ ಮಾತನಾಡಿದ ನಿರ್ದೇಶಕ ಪ್ರಕಾಶ್ ಕೆ.(ಅಂಬ್ಳೆ), ʼʼಈ ಸಿನಿಮಾದಲ್ಲಿ ಖಾಲಿ ಡಬ್ಬ ಕೂಡ ಒಂದು ಪಾತ್ರ. ವಯಸ್ಸು, ಸಮಯ ಮೀರಿದರೆ ಪ್ರತಿಯೊಬ್ಬರ ಲೈಫು ಖಾಲಿ. ಹೀಗಾಗಿ ಚಿತ್ರಕ್ಕೆ ʼಖಾಲಿ ಡಬ್ಬʼ ಎಂದು ಹೆಸರು ಇಡಲಾಗಿದೆ. ಈ ಹಿಂದೆ ಹತ್ತು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ಈ ಅನುಭವದಿಂದ ಈಗ ನಿರ್ದೇಶನಕ್ಕಿಳಿದಿದ್ದೇನೆ. ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಐದು ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ. ಇಡೀ ತಂಡಕ್ಕೆ ನಾಗೇಂದ್ರ ಪ್ರಸಾದ್ ಬೆನ್ನೆಲುಬಾಗಿ ನಿಂತಿದ್ದಾರೆʼʼ ಎಂದರು.

ನಟ ರಾಮ್ ಗುಡಿ ಮಾತನಾಡಿ, ʼʼಖಾಲಿ ಡಬ್ಬʼ ಟೈಟಲ್ ಇಟ್ಟಾಗ್ಲೇ ನೆಗೆಟಿವ್ ಟಾಕ್ ಆಗಿತ್ತು. ಇನ್ನೂ ಕೆಲವರು ಚೆನ್ನಾಗಿದೆ ಎಂದರು. ಮೂಲ ಕಥೆಗಾರರು ಜೀವನವೊಂದು ಖಾಲಿ ಡಬ್ಬಾ ಅಂತಾ ಇಡಿ ಎಂದರು. ಇದು ಕೇವಲ ಸಿನಿಮಾವಲ್ಲ. ತೇರು ಇದ್ದಂಗೆ. ಎಲ್ಲರೂ ಕೈ ಜೋಡಿಸಿದರು. ಸರಿಯಾದ ಸಮಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಮಾತ್ರ ಜೀವನವೆಂಬ ಡಬ್ಬ ತುಂಬುತ್ತದೆ. ಇಲ್ಲ ಎಂದರೆ ಜೀವನೇ ಖಾಲಿ ಡಬ್ಬವಾಗುತ್ತದೆʼʼ ಎಂದು ಹೇಳಿದರು.

ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ʼʼಡೈರೆಕ್ಟರ್ ಹೇಳಿದಂತೆ ಸಿನಿಮಾದಲ್ಲಿ ಖಾಲಿ ಡಬ್ಬಾ ಅಕ್ಷಶರಃ ಪಾತ್ರ. ಡಬ್ಬವನ್ನು ಸಂಕೇತವಾಗಿ ಇಟ್ಟುಕೊಂಡು ಕಥೆ ಹೇಳಲಾಗಿದೆ. ಎಮೋಷನಲ್, ಲವ್, ಫ್ಯಾಮಿಲಿ ಎಲ್ಲ ಇರುವಂತಹ ಕಥೆ. ಕಾಲ್ಪನಿಕ ಅನಿಸಿದ್ರೂ ವಾಸ್ತವ ಅನಿಸುವ ಕಥೆ ಚಿತ್ರದಲ್ಲಿದೆ. ಈ ಸಿನಿಮಾದಲ್ಲಿ ನಟ ಅದ್ಭುತವಾಗಿ ನಟಿಸಿದ್ದಾರೆ. ನಾಯಕಿಯರು ಇಬ್ಬರು ಚೆನ್ನಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಒಳ್ಳೆ ಹಾಡುಗಳಿವೆʼʼ ಎಂದು ತಿಳಿಸಿದರು.

ʼಖಾಲಿ ಡಬ್ಬʼ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬೆಂಗಳೂರು ಮಂಡ್ಯ ಮೈಸೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಕುರಿ ಪ್ರತಾಪ್, ಮಜಾಭಾರತ ಸೀತಾರಾಮ್, ಸುಧಾ, ಹನುಮಕ್ಕ ಹಾಗೂ ವಿ.ನಾಗೇಂದ್ರ ಪ್ರಸಾದ್ ತಾರಾಬಳಗದಲ್ಲಿದ್ದಾರೆ. ಎಸ್.ಯು.ಎ. ಎಂಟರ್‌ಟೈನ್‌ಮೆಂಟ್‌ನಡಿ ಮಂಜು ಗುರಪ್ಪ ನಿರ್ಮಾಣ ಮಾಡಿದ್ದು, ಅಪ್ಪಾಜಿ, ಸೌಮ್ಯಾ ರಾಮ್, ಲಕ್ಷ್ಮೀ ಮಹೇಂದ್ರ, ಚಿಕ್ಕೇಗೌಡ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.

ಇದನ್ನೂ ಓದಿ: Kannada New Movie: ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

ಲಕ್ಕಿ ಕ್ಯಾಮೆರಾ ಹಿಡಿದಿದ್ದು, ವೆಂಕಟ್ ಯುಡಿವಿ ಸಂಕಲನ, ಗಿರೀಶ್ ನೃತ್ಯ ಸಂಯೋಜನೆ ʼಖಾಲಿ ಡಬ್ಬʼ ಚಿತ್ರಕ್ಕಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಸೆನ್ಸಾರ್ ಅಂಗಳದಲ್ಲಿರುವ ಚಿತ್ರ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Sanjana Anand: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಸಂಜನಾ ಆನಂದ್!

Sanjana Anand: ತಿಳಿ ಹಸಿರು ಬಣ್ಣದ ಬ್ಯಾಕ್ ಲೆಸ್, ಹೈ ಸ್ಲಿಟ್ ಸ್ಯಾಟಿನ್ ಡ್ರೆಸಲ್ಲಿ ಸಂಜನಾ ಮಾದಕ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್‌ ಕನಸುಗಾರ ವಿ ರವಿಚಂದ್ರನ್ (Vikram Ravichandran) ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ಅವರ ಮುಧೋಳ್ ಸಿನಿಮಾಗೆ ಸಂಜನಾ ಆನಂದ್‌ (Sanjana Anand) ನಾಯಕಿ ಎಂದು ಹೇಳಲಾಗುತ್ತಿತ್ತು.

VISTARANEWS.COM


on

Sanjana Anand Hot Photoshoot
Koo

ʻಕೆಮೆಸ್ಟ್ರಿ ಆಫ್ ಕರಿಯಪ್ಪʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸಂಜನಾ ಆನಂದ್ (Sanjana Anand) ಸಖತ್‌ ಹಾಟ್ ಆಗಿದ್ದಾರೆ. ಮಾಡರ್ನ್ ಡ್ರೆಸ್‌ನಲ್ಲಿ ಪೋಸ್ ನೀಡುತ್ತಿದ್ದಾರೆ.

ತಿಳಿ ಹಸಿರು ಬಣ್ಣದ ಬ್ಯಾಕ್ ಲೆಸ್, ಹೈ ಸ್ಲಿಟ್ ಸ್ಯಾಟಿನ್ ಡ್ರೆಸಲ್ಲಿ ಸಂಜನಾ ಮಾದಕ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. 

ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್‌ ಕನಸುಗಾರ ವಿ ರವಿಚಂದ್ರನ್ (Vikram Ravichandran) ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ಅವರ ಮುಧೋಳ್ ಸಿನಿಮಾಗೆ ಸಂಜನಾ ಆನಂದ್‌ (Sanjana Anand) ನಾಯಕಿ ಎಂದು ಹೇಳಲಾಗುತ್ತಿತ್ತು.

ದುನಿಯಾ ವಿಜಯ್ ನಟನೆಯ `ಸಲಗ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು.

ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

ನಟಿ ಸಂಜನಾ ಆನಂದ್‌ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇದೀಗ ಮುಧೋಳ್ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Continue Reading

ಸ್ಯಾಂಡಲ್ ವುಡ್

Kannada New Movie: ಹಾಡಿನ ಮೂಲಕ ಸದ್ದು ಮಾಡ್ತಿದೆ ʻಬ್ಯಾಕ್ ಬೆಂಚರ್ಸ್ʼ ಸಿನಿಮಾ!

Kannada New Movie: ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನವಿದೆ.

VISTARANEWS.COM


on

back benchers Movie Kannada song
Koo

ಬೆಂಗಳೂರು: ಕಾಲೇಜು ದಿನಮಾನದ ಕಥೆಗಳು ಕನ್ನಡದಲ್ಲಿ (Kannada New Movie) ಸಾಕಷ್ಟು ಬಂದಿದೆ. ಆದರೆ ಮನೋರಂಜನೆಯೇ ಪ್ರಮುಖವಾಗಿಟ್ಟಿಕೊಂಡು ಕಾಲೇಜು ದಿನಗಳ ಕಥೆಯೊಂದು ಕನ್ನಡದಲ್ಲಿ ಬರುತ್ತಿದೆ. ಅದೇ ” ಬ್ಯಾಕ್ ಬೆಂಚರ್ಸ್ “. ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರಿಗೆ ಕಚುಗುಳಿಯಿಟ್ಟಿರುವ “ಬ್ಯಾಕ್ ಬೆಂಚರ್ಸ್” ಚಿತ್ರದ “ಯಲ್ಲೋ ಯಲ್ಲೋ” ಹಾಡು ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಯವಜನತೆಗೆ ಮುದ ನೀಡುವ ಈ ಹಾಡನ್ನು ನಕುಲ್ ಅಭಯಂಕರ್ ಹಾಡಿದ್ದಾರೆ. ಸಂಗೀತವನ್ನೂ ನಕುಲ್ ಅಭಯಂಕರ್ ಅವರೆ ನೀಡಿದ್ದಾರೆ. ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಬಿಡುಗಡೆಯ ನಂತರ “ಬ್ಯಾಕ್ ಬೆಂಚರ್ಸ್” ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಇದೊಂದು ಮನೋರಂಜನೆಯೇ ಪ್ರಮುಖವಾಗಿರುವ ಕಾಲೇಜು ಸ್ಟೋರಿ ಎಂದು ಮಾತನಾಡಿದ ನಿರ್ದೇಶಕ, ನಿರ್ಮಾಪಕ ಬಿ.ಆರ್ ರಾಜಶೇಖರ್, ಚಿತ್ರ ತೆರೆಗೆ ಬರಲು ಸಿದ್ದಾವಾಗಿದೆ‌.‌ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಮುಂದಿನ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುʼʼ ಎಂದರು.

ಇದನ್ನೂ ಓದಿ: Kannada New Movie: ʻತಿಥಿʼ ಚಿತ್ರದ ಖ್ಯಾತಿಯ ತಮ್ಮಣ್ಣ ಅಭಿನಯದ ʻದಾಸಪ್ಪʼ ಸಿನಿಮಾ ಟ್ರೈಲರ್‌ ಔಟ್‌!

ಇದನ್ನೂ ಓದಿ: Kannada New Movie: ʻತಿಥಿʼ ಚಿತ್ರದ ಖ್ಯಾತಿಯ ತಮ್ಮಣ್ಣ ಅಭಿನಯದ ʻದಾಸಪ್ಪʼ ಸಿನಿಮಾ ಟ್ರೈಲರ್‌ ಔಟ್‌!

ʻʻನಿರ್ದೇಶಕ ರಾಜಶೇಖರ್ ಅವರು ನಮಗೆಲ್ಲಾ ನೀಡಿದ ಪ್ರೋತ್ಸಹ ಅಷ್ಟಿಷ್ಟಲ್ಲ. ನಮ್ಮಗೆಲ್ಲಾ ಇದು ಮೊದಲ ಚಿತ್ರ. ಆದರೆ ನಮಗೆ ನಟನೆ ಹೊಸತಲ್ಲ‌‌. ನಾವೆಲ್ಲ ನಟನೆ ಕಲಿತು ಬಂದಿರುವವರು. ಈಗ ಚಿತ್ರಮಂದಿರಕ್ಕೆ ಹೆಚ್ಚಾಗಿ ಜನರು ಬರುತ್ತಿಲ್ಲ. ಆ ಮಾತನ್ನು ಸುಳ್ಳು ಮಾಡುವ ಪ್ರಯತ್ನವನ್ನು ನಾವು ಮಾಡುತ್ತೇವೆ‌. ವಿನೂತನ ಪ್ರಚಾರ ಮಾಡುವ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ‌. ಚಿತ್ರಮಂದಿರಕ್ಕೆ ಬಂದ ಮೇಲು ನಮ್ಮ ಚಿತ್ರ ನೀವು ಕೊಟ್ಟ ದುಡ್ಡಿಗೆ ಮೋಸ ಆಗುವುದಿಲ್ಲ ಎಂಬ ಭರವಸೆ ನೀಡುತ್ತೇವೆʼʼ ಎಂದು “ಬ್ಯಾಕ್ ಬೆಂಚರ್ಸ್ ” ಚಿತ್ರದಲ್ಲಿ ನಟಿಸಿರುವ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಮಾನ್ಯ ಗೌಡ, ಕುಂಕುಮ್ ಹೆಚ್, ಮನೋಜ್ ಶೆಟ್ಟಿ ಮುಂತಾದವರು ತಿಳಿಸಿದರು.

ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನವಿದೆ.

Continue Reading

ಸ್ಯಾಂಡಲ್ ವುಡ್

Shilpa Shetty: ʻಕೆಡಿʼಸಿನಿಮಾ ಶೂಟಿಂಗ್‌ ಮುಗಿಸಿ ಹೊಸ ವಿಡಿಯೊ ಹಂಚಿಕೊಂಡ ಶಿಲ್ಪಾ ಶೆಟ್ಟಿ!

Shilpa Shetty: ನಿರ್ದೇಶಕ ‘ಜೋಗಿ’ ಪ್ರೇಮ್​ (Prem) ಸೇರಿದಂತೆ ಇಡೀ ಚಿತ್ರತಂಡದವರ ಜೊತೆ ಶಿಲ್ಪಾ ಶೆಟ್ಟಿ ಖುಷಿ ಖುಷಿಯಿಂದ ಪೋಸ್​ ನೀಡಿದ್ದಾರೆ. . ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​ ಹಾಗೂ ಶಿಲ್ಪಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಶಿಲ್ಪಾ ಶೆಟ್ಟಿ 17 ವರ್ಷಗಳ ನಂತರ ಇದೀಗ ಕೆಡಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರೀತ್ಸೋದ್ ತಪ್ಪಾ? ಆಟೋ ಶಂಕರ್, ಒಂದಾಗೋಣ ಬಾ ಸಿನಿಮಾಗಳಲ್ಲಿ ಶಿಲ್ಪಾ ಅಭಿನಯಿಸಿದ್ದಾರೆ.

VISTARANEWS.COM


on

Shilpa Shetty Shares Special Video From KD Kannada Movie
Koo

ಬೆಂಗಳೂರು: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ (Shilpa Shetty) ʻಕೆಡಿʼಸಿನಿಮಾ ಶೂಟಿಂಗ್‌ ಕಂಪ್ಲೀಟ್‌ ಮಾಡಿದ್ದಾರೆ. ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಶನ್‌ ಇರುವ ʻಕೆಡಿ’ ಸಿನಿಮಾದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಎಂಟ್ರಿ ಕೊಡಲಿದ್ದಾರೆ. ಈ ಹಿಂದೆ ಪೋಸ್ಟರ್‌ ಔಟ್‌ ಆದಾಗ ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಕಾಣಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಕಂಡಿದ್ದರು ನಟಿ. ಮೈಸೂರಿನಲ್ಲಿ ‘ಕೆಡಿ’ ಸಿನಿಮಾ (KD Kannada Movie) ಶೂಟಿಂಗ್​ ನಡೆಯುತ್ತಿತ್ತು. ಈಗ ಅವರು ಚಿತ್ರೀಕರಣ ಮುಗಿಸಿದ್ದಾರೆ. ಈ ಖುಷಿಯಲ್ಲಿ ಹೊಸ ವಿಡಿಯೊ ಹಂಚಿಕೊಂಡಿದ್ದಾರೆ.

ನಿರ್ದೇಶಕ ‘ಜೋಗಿ’ ಪ್ರೇಮ್​ (Prem) ಸೇರಿದಂತೆ ಇಡೀ ಚಿತ್ರತಂಡದವರ ಜೊತೆ ಶಿಲ್ಪಾ ಶೆಟ್ಟಿ ಖುಷಿ ಖುಷಿಯಿಂದ ಪೋಸ್​ ನೀಡಿದ್ದಾರೆ. . ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​ ಹಾಗೂ ಶಿಲ್ಪಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಶಿಲ್ಪಾ ಶೆಟ್ಟಿ 17 ವರ್ಷಗಳ ನಂತರ ಇದೀಗ ಕೆಡಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರೀತ್ಸೋದ್ ತಪ್ಪಾ? ಆಟೋ ಶಂಕರ್, ಒಂದಾಗೋಣ ಬಾ ಸಿನಿಮಾಗಳಲ್ಲಿ ಶಿಲ್ಪಾ ಅಭಿನಯಿಸಿದ್ದಾರೆ.

ಇದನ್ನೂ ಓದಿ: Shilpa Shetty: ಮೈಸೂರಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ಧ್ಯಾನ

ಈ ಹಿಂದೆ ಚಿತ್ರತಂಡ ರವಿಚಂದ್ರನ್ ಅವರ ಲುಕ್‌ ಹಂಚಿಕೊಂಡಿತ್ತು. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಅಷ್ಟೇ ಅಲ್ಲದೇ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು.

ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.

ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ತೆರೆ ಕಾಣುತ್ತಿದೆ. ಆದರೆ ಅದೇ ಸಮಯಕ್ಕೆ ದರ್ಶನ್‌ ಅವರ `ಡೆವಿಲ್‌’ ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಮೊದಲೇ ದರ್ಶನ್‌ ಹಾಗೂ ಧ್ರುವ ನಡುವೆ ಸಂಬಂಧ ಚೆನ್ನಾಗಿಲ್ಲ. ಹೀಗಾಗಿ ಬಾಕ್ಸ್‌ ಆಫೀಸ್‌ ವಾರ್‌ ಜತೆ ಫ್ಯಾನ್ಸ್‌ ವಾರ ಕೂಡ ಆಗಬಹುದು ಎನ್ನಲಾಗುತ್ತಿದೆ.

Continue Reading

ಸ್ಯಾಂಡಲ್ ವುಡ್

Cinema Lovers Day 2024: ಇಂದು ‘ಸಿನಿಮಾ ಲವರ್ಸ್ ಡೇ’: 99 ರೂಪಾಯಿ ಕೊಟ್ಟು ಸಿನಿಮಾ ನೋಡಿ!

Cinema Lovers Day 2024: ಆ ಆಫರ್‌ ಒಂದೇ ದಿನ ಇರುವುದರಿಂದ ಒಟ್ಟಾರೆ ಚಿತ್ರದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ವ್ಯತ್ಯಾಸವನ್ನು ಇರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅನೇಕ ನಿರ್ಮಾಪಕರು ಏಪ್ರಿಲ್ ಮತ್ತು ಮೇನಲ್ಲಿ ಚುನಾವಣಾ ಕಾವು ಇದ್ದ ಕಾರಣ ಸಿನಿಮಾಗಳನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಒಂದೇ ಸಲ ಎಲ್ಲ ಸಿನಿಮಾಗಳು ಬಿಡುಗಡೆಯಾಗಿ ಕ್ಲ್ಯಾಶ್‌ ಆಗಬಹುದು ಎನ್ನಲಾಗಿದೆ. ರವಿಚಂದ್ರನ್‌ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕದ ಚಿತ್ರಮಂದಿರಗಳಲ್ಲಿ 90 ರೂಪಾಯಿಗೆ ʻದಿ ಜಡ್ಜ್‌ಮೆಂಟ್‌ ಸಿನಿಮಾ ನೋಡಬಹುದಾಗಿದೆ.

VISTARANEWS.COM


on

Cinema Lovers Day 2024 Theaters offer 99 rupees tickets for latest movies
Koo

ಬೆಂಗಳೂರು: ಇಂದು ಮೇ 31 ʻ ಸಿನಿಮಾ ಲವರ್ಸ್‌ ಡೇʼ. ಈ ನೆಪದಲ್ಲಿ ಕೇವಲ 99 ರೂಪಾಯಿಗೆ (Cinema Lovers Day 2024) ಸಿನಿಮಾ ನೋಡುವ ಅವಕಾಶ ಮಲ್ಟಿಫ್ಲೆಕ್ಸ್‌ ಮತ್ತು ಸಿಂಗಲ್‌ ಸ್ಕ್ರೀನ್‌ ಸಿನಿಮಾ ಥಿಯೇಟರ್‌ಗಳು ​ ನೀಡಿವೆ. ಭಾರತದ ಬಹುತೇಕ ಮಲ್ಟಿಪ್ಲೆಕ್ಸ್​ಗಳಲ್ಲಿ ಮೇ 31ರಂದು ಯಾವುದೇ ಸಿನಿಮಾ ನೋಡಿದರೂ ಟಿಕೆಟ್​ ಬೆಲೆ ಕೇವಲ 99 ರೂಪಾಯಿ ಆಗಿರಲಿದೆ. ಪಿವಿಆರ್‌ ಐನಾಕ್ಸ್‌, ಸಿನಿಪೋಲಿಸ್‌ ಇಂಡಿಯಾ, ಮಿರಾಜ್‌ ಸಿನಿಮಾಸ್‌, ಮುಲ್ತಾ ಎ2 ಮತ್ತು ಮೂವಿಮ್ಯಾಕ್ಸ್‌ ಸೇರಿದಂತೆ ಪ್ರಮುಖ ಮಲ್ಟಿಫ್ಲೆಕ್ಸ್‌ಗಳಲ್ಲಿಯೂ ಈ ಆಫರ್‌ ಇರಲಿದೆ. ರವಿಚಂದ್ರನ್‌ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕದ ಚಿತ್ರಮಂದಿರಗಳಲ್ಲಿ 90 ರೂಪಾಯಿಗೆ ʻದಿ ಜಡ್ಜ್‌ಮೆಂಟ್‌ ಸಿನಿಮಾ ನೋಡಬಹುದಾಗಿದೆ.

ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದು ಕಡಿಮೆಯಾಗಿದೆ. ಟಿಕೆಟ್‌ ದರ ಕೂಡ ಮುಖ್ಯ ಕಾರಣ. ಕೊರೊನಾ ಬಂದ ಬಳಿಕ ಮತ್ತಷ್ಟು ಜನ ಚಿತ್ರಮಂದಿರಗಳ ಕಡೆ ತಿರುಗಿ ನೋಡೇ ಇಲ್ಲ. ಮತ್ತೆ ಪ್ರೇಕ್ಷಕರನ್ನು ಸೆಳೆಯಲು ಮಲ್ಟಿಪ್ಲೆಕ್ಸ್​ಗಳ ಹೊಸ ಐಡಿಯಾ ಮಾಡಿದವು. ‘ಸಿನಿಮಾ ಲವರ್ಸ್​ ಡೇ’ ಹೆಸರಲ್ಲಿ ಆಫರ್​ ಬೆಲೆಗೆ ಟಿಕೆಟ್​ಗಳನ್ನು ನೀಡುವ ಮೂಲಕ ಜನರನ್ನು ಸೆಳೆಯಲಾಯಿತು. ಈ ವರ್ಷ ಮೇ 31ರಂದು ‘ಸಿನಿಮಾ ಲವರ್ಸ್​ ಡೇ’ ಸೆಲೆಬ್ರೇಟ್​ ಮಾಡಲಾಗುತ್ತಿದೆ.ಥಿಯೇಟರ್‌ನಲ್ಲಿ ಸುಮಾರು ಶೇಕಡ 90-95 ಸೀಟುಗಳು ಈ 99 ರೂಪಾಯಿ ಟಿಕೆಟ್‌ ದರದಲ್ಲಿ ದೊರಕಲಿದೆ. ಕೆಲವು ಏಕಪರದೆ ಚಿತ್ರಮಂದಿರಗಳಲ್ಲಿ 99 ರೂಪಾಯಿ, ಇನ್ನು ಕೆಲವು 70 ರೂಪಾಯಿಗೆ ಟಿಕೆಟ್‌ ನೀಡಲಿವೆ.

ಆ ಆಫರ್‌ ಒಂದೇ ದಿನ ಇರುವುದರಿಂದ ಒಟ್ಟಾರೆ ಚಿತ್ರದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ವ್ಯತ್ಯಾಸವನ್ನು ಇರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅನೇಕ ನಿರ್ಮಾಪಕರು ಏಪ್ರಿಲ್ ಮತ್ತು ಮೇನಲ್ಲಿ ಚುನಾವಣಾ ಕಾವು ಇದ್ದ ಕಾರಣ ಸಿನಿಮಾಗಳನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಒಂದೇ ಸಲ ಎಲ್ಲ ಸಿನಿಮಾಗಳು ಬಿಡುಗಡೆಯಾಗಿ ಕ್ಲ್ಯಾಶ್‌ ಆಗಬಹುದು ಎನ್ನಲಾಗಿದೆ.

ಇದನ್ನೂ ಓದಿ: Kamal Haasan: ‘ಇಂಡಿಯನ್-2’ ಸಿನಿಮಾದ ಎರಡನೇ ಹಾಡು ರಿಲೀಸ್!

ಈ ವಾರ ಬಿಡುಗಡೆ ಆಗಲಿರುವ ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’, ‘ಫಾಸ್ಟ್​ ಚಾರ್ಲಿ’, ‘ಸವಿ’, ‘ಸ್ಟ್ರೇಂಜರ್ಸ್​’ ಮುಂತಾದ ಸಿನಿಮಾಗಳನ್ನು ಕೂಡ ಕೇವಲ 99 ರೂಪಾಯಿಗೆ ನೋಡುವ ಅವಕಾಶ ಸಿನಿಪ್ರಿಯರಿಗೆ ಸಿಗಲಿದೆ.

Continue Reading
Advertisement
Healthy Salad Tips
ಆಹಾರ/ಅಡುಗೆ5 mins ago

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Lok Sabha Election
ದೇಶ1 hour ago

Lok Sabha Election: ಇಂದು ಕೊನೇ ಹಂತದ ಮತದಾನ; ಸಂಜೆ ಎಕ್ಸಿಟ್‌ ಪೋಲ್, ಇಂದೇ ತಿಳಿಯಲಿದೆ ಭವಿಷ್ಯ!

Dina Bhavishya
ಭವಿಷ್ಯ1 hour ago

Dina Bhavishya : ತಿಂಗಳ ಮೊದಲ ದಿನವೇ ಉದ್ಯೋಗದ ಸ್ಥಳದಲ್ಲಿ ಈ ರಾಶಿಯವರಿಗೆ ಕಿರಿಕಿರಿ ಅನುಭವ

Anti Islam Rally
ವಿದೇಶ6 hours ago

Anti Islam Rally: ಇಸ್ಲಾಂ ವಿರೋಧಿ ರ‍್ಯಾಲಿಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ; ಗುಂಡಿಕ್ಕಿದ ಪೊಲೀಸರು

Modi Meditation
ದೇಶ7 hours ago

Modi Meditation: ವಿವೇಕಾನಂದರ ಮೂರ್ತಿ ಎದುರು ಮೋದಿ ಗಾಢ ಧ್ಯಾನ; ಇಲ್ಲಿವೆ ಫೋಟೊಗಳು

Yamaha has opened a new Blue Square outlet in Bengaluru
ಬೆಂಗಳೂರು8 hours ago

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

Neha Hiremath
ಕರ್ನಾಟಕ8 hours ago

Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Kanyakumari Tour
ಪ್ರವಾಸ9 hours ago

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

Sri Huligemma Devi Maharathotsava in Hulagi
ಧಾರ್ಮಿಕ9 hours ago

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
ಆರೋಗ್ಯ9 hours ago

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌