Karavali Movie: ಪ್ರಜ್ವಲ್‌ ನಟನೆಯ ʼಕರಾವಳಿʼ ಚಿತ್ರಕ್ಕೆ ಇವರೇ ನಾಯಕಿ; ಪೋಸ್ಟರ್‌ ರಿಲೀಸ್‌ - Vistara News

ಸ್ಯಾಂಡಲ್ ವುಡ್

Karavali Movie: ಪ್ರಜ್ವಲ್‌ ನಟನೆಯ ʼಕರಾವಳಿʼ ಚಿತ್ರಕ್ಕೆ ಇವರೇ ನಾಯಕಿ; ಪೋಸ್ಟರ್‌ ರಿಲೀಸ್‌

Karavali Movie: ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸುತ್ತಿರುವ, ಯುವ ನಿರ್ದೇಶಕ ಗುರುದತ್ ಗಾಣಿಗ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼಕರಾವಳಿʼ ಚಿತ್ರಕ್ಕೆ ನಾಯಕಿಯಾಗಿ ಸಂಪದಾ ಆಯ್ಕೆಯಾಗಿದ್ದಾರೆ.

VISTARANEWS.COM


on

karavali movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಜ್ವಲ್‌ ದೇವರಾಜ್‌ (Prajwal Devaraj) ನಾಯಕನಾಗಿ ನಟಿಸುತ್ತಿರುವ, ಯುವ ನಿರ್ದೇಶಕ ಗುರುದತ್ ಗಾಣಿಗ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼಕರಾವಳಿʼ (Karavali Movie) ಚಿತ್ರ ತನ್ನ ಟೈಟಲ್‌, ಪೋಸ್ಟರ್‌, ಟೀಸರ್‌ನಿಂದಲೇ ಕುತೂಹಲ ಕೆರಳಿಸಿದೆ. ಇಷ್ಟು ದಿನ ಚಿತ್ರತಂಡ ನಾಯಕಿ ಯಾರೆನ್ನುವುದನ್ನು ರಿವೀಲ್‌ ಮಾಡಿರಲಿಲ್ಲ. ಇಂದು (ಫೆಬ್ರವರಿ 14) ಸಿನಿಮಾ ತಂಡ ನಾಯಕಿಯನ್ನು ಪರಿಚಯಿಸುವ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ. ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಪದಾ ‘ಕರಾವಳಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಯಾರು ಈ ಸಂಪದಾ?

ಕಿರುತೆರೆಯಲ್ಲಿ ಗಮನ ಸೆಳೆದಿದ್ದ ಸಂಪದಾ ಇದೀಗ ಪ್ರಜ್ವಲ್‌ಗೆ ನಾಯಕಿಯಾಗುವ ಮೂಲಕ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಹಿಂದೆ ಅವರು ʼಮಿಥುನ ರಾಶಿʼ ಎನ್ನುವ ಧಾರಾವಾಹಿಗೆ ಬಣ್ಣ ಹಚ್ಚಿದ್ದರು. ಈ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಆದರೆ ವಿದ್ಯಾಭ್ಯಾಸದ ಕಾರಣದಿಂದ ಕೇವಲ 10 ತಿಂಗಳಿಗೇ ಈ ಧಾರಾವಾಹಿಯಿಂದ ಹೊರ ಬಂದಿದ್ದರು. ಬಳಿಕ 2021ರಲ್ಲಿ ಬಿಡುಗಡೆಯಾದ ನಿಖಿಲ್‌ ಕುಮಾರಸ್ವಾಮಿ ಅಭಿನಯದ ʼರೈಡರ್‌ʼ ಸಿನಿಮಾದಲ್ಲಿ ನಟಿಸಿದ್ದರು. ಜತೆಗೆ ತೆಲುಗಿನ ʼಮಾಸ್‌ ಮಹಾರಾಜುʼ ಚಿತ್ರದಲ್ಲಿಯೂ ನಟಿಸಿದ್ದರು. ಇದೀಗ ʼಕರಾವಳಿʼ ಚಿತ್ರದಲ್ಲಿ ದಕ್ಷಿಣಾ ಎನ್ನುವ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಕರಾವಳಿ ಭಾಗದ ಕಥೆಯನ್ನು ಹೊಂದಿರುವ ಈ ಚಿತ್ರದ ಟೀಸರ್‌ ಈಗಾಗಲೇ ಸದ್ದು ಮಾಡುತ್ತಿದೆ. ಪ್ರಜ್ವಲ್‌ ನಟನೆಯ 40ನೇ ಚಿತ್ರ ಇದು ಎನ್ನುವುದು ಮತ್ತೊಂದು ವಿಶೇಷ. ಅಂಬರೀಷ್‌ ಅಭಿನಯದ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ. ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಬಗ್ಗೆ ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಜತೆಗೆ ಕರಾವಳಿ ಸಂಸ್ಕೃತಿಯ ಭಾಗವಾಗಿರುವ ಕೋಲ, ಯಕ್ಷಗಾನ, ಕಂಬಳ ಮುಂತಾದ ಅಂಶವೂ ಸಿನಿಮಾದಲ್ಲಿ ಇರಲಿದೆ ಎನ್ನುವುದಕ್ಕೆ ಟೀಸರ್‌ ಮೂಲಕ ಕ್ಲೂ ಸಿಕ್ಕಿದೆ. ಇನ್ನು ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇದುವರೆಗೆ ಕಾಣಿಸಿಕೊಳ್ಳದ ರೀತಿಯ ಪಾತ್ರದಲ್ಲಿ ಡೈನಾಮಿಕ್‌ ಪ್ರಿನ್ಸ್ ಪ್ರಜ್ವಲ್‌ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಕೂಡ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: Prajwal Devaraj: ಕೋಣದ ಮೇಲೆ ಪ್ರಜ್ವಲ್ ಸವಾರಿ; ‘ಕರಾವಳಿ’ ಟೀಸರ್ ಔಟ್‌!

ಸದ್ಯ ಕರಾವಳಿ ಕಥಾ ಹಂದರ ಹೊಂದಿರುವ ಚಿತ್ರಗಳು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿವೆ. ‘ರಂಗಿ ತರಂಗ’, ‘ಕಾಂತಾರ’ ಮುಂತಾದ ಸಿನಿಮಾಗಳಲ್ಲಿ ಕರಾವಳಿ ಭಾಗದ ಆಚಾರ-ವಿಚಾರ, ಜೀವನ ರೀತಿ ಅನಾವರಣಗೊಂಡಿತ್ತು. ಹೀಗಾಗಿ ‘ಕರಾವಳಿ’ ಚಿತ್ರದಲ್ಲಿಯೂ ಈ ಬಗೆಗಿನ ವಿವರಗಳು ಕಂಡು ಬರಲಿವೆ ಎನ್ನಲಾಗುತ್ತಿದೆ. ಸತತ ಸೋಲಿನ ಸುಳಿಗೆ ಸಿಲುಕಿರುವ ಪ್ರಜ್ವಲ್‌ ಈ ಸಿನಿಮಾ ಮೂಲಕ ಯಶಸ್ಸಿನ ಹಳಿಗೆ ಮರಳಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಹಿಂದೆ ʼಕರಾವಳಿʼ ಚಿತ್ರಕ್ಕೆ ಅಮೂಲ್ಯ ನಾಯಕಿ ಎಂದು ಹೇಳಲಾಗಿತ್ತು. ಆದರೆ ಇದೀಗ ಅಂತೆ-ಕಂತೆಗೆ ತೆರೆ ಬಿದ್ದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

Shiva Rajkumar: ಶಿವಣ್ಣನ ಜನ್ಮದಿನದ ಅಂಗವಾಗಿ 131ನೇ ಚಿತ್ರದ ಮೊದಲ ತುಣುಕು ಬಿಡುಗಡೆ ಮಾಡಲಾಗಿದೆ. 3 ನಿಮಿಷ 49 ಸೆಕೆಂಡ್ ಇರುವ ವಿಡಿಯೋ ತುಣುಕಿನಲ್ಲಿ ಪೊಲೀಸ್ ಸ್ಟೇಷನ್ ನಲ್ಲಿ ರಗಡ್ ಡೈಲಾಗ್ ಮೂಲಕ ಹೀರೋ ಇಂಟ್ರೂಡ್ಯೂಸ್ ಮಾಡಲಾಗುತ್ತದೆ. ಶಿವಣ್ಣನನ್ನು ಅಚ್ಯುತ್ ಕುಮಾರ್ ವರ್ಣನೆ ಮಾಡುವ ರೀತಿ ಅದ್ಭುತವಾಗಿದೆ.

VISTARANEWS.COM


on

Shiva Rajkumar 131 cinema Look out
Koo

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ (Shiva Rajkumar) ಹುಟ್ಟುಹಬ್ಬದ ಸಂಭ್ರಮದಲ್ಲಿ ಹಲವಾರು ಪೋಸ್ಟರ್‌ಗಳು ಔಟ್‌ ಆಗಿವೆ. ಶಿವಣ್ಣನ ಜನ್ಮದಿನದ ವಿಶೇಷವಾಗಿ ರಾಶಿ ರಾಶಿ ಉಡುಗೊರೆಗಳು ಶಿವಸೈನ್ಯಕ್ಕೆ ಸಿಕ್ಕಿದೆ. ಆ ಸ್ಪೆಷಲ್ ಗಿಫ್ಟ್ ಗಳಲ್ಲಿ ತುಂಬಾನೇ ಸ್ಪೆಷಲ್ ಎನಿಸಿಕೊಂಡಿರುವುದು ಶಿವಣ್ಣನ 131ನೇ ಚಿತ್ರದ ಝಲಕ್…ಯಾಕೆ ವಿಶೇಷ ಅಂದರೆ ಈ ಹಿಂದೆ ಕನ್ನಡ ಚಿತ್ರರಂಗಕ್ಕೆ ರಾಮ್ ಗೋಪಾಲ್ ವರ್ಮಾ ಕರೆ ತಂದು ಶಿವಣ್ಣನಿಗೆ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡಿಸಿದ್ದ ಸುಧೀರ್ ಮತ್ತೊಮ್ಮೆ ಕರುನಾಡ ಕಿಂಗ್ ಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ತಮಿಳಿನ ಯುವ ನಿರ್ದೇಶಕ ಕಾರ್ತಿಕ್ ಅದ್ವೈತ್ ದೊಡ್ಮನೆ ದೊರೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೊದಲ ಝಲಕ್ ಶಿವಣ್ಣನ ಹುಟ್ಟುಹಬ್ಬಕ್ಕೆ ಅನಾವರಣಗೊಂಡಿದೆ.

ಶಿವಣ್ಣನ ಜನ್ಮದಿನದ ಅಂಗವಾಗಿ 131ನೇ ಚಿತ್ರದ ಮೊದಲ ತುಣುಕು ಬಿಡುಗಡೆ ಮಾಡಲಾಗಿದೆ. 3 ನಿಮಿಷ 49 ಸೆಕೆಂಡ್ ಇರುವ ವಿಡಿಯೋ ತುಣುಕಿನಲ್ಲಿ ಪೊಲೀಸ್ ಸ್ಟೇಷನ್ ನಲ್ಲಿ ರಗಡ್ ಡೈಲಾಗ್ ಮೂಲಕ ಹೀರೋ ಇಂಟ್ರೂಡ್ಯೂಸ್ ಮಾಡಲಾಗುತ್ತದೆ. ಶಿವಣ್ಣನನ್ನು ಅಚ್ಯುತ್ ಕುಮಾರ್ ವರ್ಣನೆ ಮಾಡುವ ರೀತಿ ಅದ್ಭುತವಾಗಿದೆ. ಆದ್ರೆ ಶಿವಣ್ಣ ವಿಡಿಯೋದಲ್ಲಿ ಕಾಣಿಸಿಕೊಳ್ಳಲ್ಲ. ಐ ಆಮ್ ಕಮಿಂಗ್ ಎನ್ನುವ ಕರುನಾಡ ಕಿಂಗ್ ನ ಫೋಟೋ ಬಿಟ್ಟು ಚಿತ್ರತಂಡ ಥ್ರಿಲ್ ಹೆಚ್ಚಿಸಿದೆ. ಚಂಡಮಾರುತ ಮೊದಲ ಮೌನ ಎಂಬ ಅಡಿಬರಹದೊಂದಿಗೆ ಶಿವಣ್ಣನ 131ನೇ ಚಿತ್ರದ ವಿಡಿಯೋ ಝಲಕ್ ಬಿಡುಗಡೆ ಮಾಡಲಾಗಿದ್ದು, ಅಚ್ಯುತ್ ಕುಮಾರ್, ರವೀಂದ್ರ ವಿಜಯ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Shiva Rajkumar: ಶಿವಣ್ಣನ ಬರ್ತ್‌ಡೇ ದಿನ, ಬರೋಬ್ಬರಿ 4 ತಿಂಗಳ ಬಳಿಕ ಒಟಿಟಿಗೆ ʻಕರಟಕ ದಮನಕʼ ಎಂಟ್ರಿ!

ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ಪಾಯುಮ್ ಒಲಿ ನೀ ಎನಕ್ಕು ಚಿತ್ರವನ್ನು ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್, ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ, ಅಂದಹಾಗೇ ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ. ಇತರ ಕಲಾವಿದರ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಚಿತ್ರೀಕರಣಕ್ಕೆ ತೆರಳು ಎದುರು ನೋಡುತ್ತಿದೆ ಚಿತ್ರತಂಡ. ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್ ನಡಿ ಎಸ್ ಎನ್ ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Continue Reading

ದೇಶ

Anant Ambani Wedding:  ಅನಂತ್‌ ಅಂಬಾನಿ ಮದುವೆಯಲ್ಲಿ ಯುವಕರೂ ನಾಚುವಂತೆ ಸ್ಟೆಪ್ಸ್‌ ಹಾಕಿದ ರಜನಿಕಾಂತ್‌!

Anant Ambani Wedding:  ಈ ಸಂದರ್ಭದ ವಿಡಿಯೋ ವೈರಲ್​ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ರಜನಿಕಾಂತ್​ ಅವರ ಡ್ಯಾನ್ಸ್​ ಮತ್ತು ಉತ್ಸಾಹ ನೋಡಿ ಯುವಕರೂ ನಾಚುವಂತಿದೆ. ಬಂದಿರುವ ಅತಿಥಿಗಳ ಜೊತೆ ಅಂಬಾನಿ ಕುಟುಂಬದವರು ಖುಷಿಯಿಂದ ಬೆರೆತಿದ್ದಾರೆ. ರಜನಿಕಾಂತ್​ ಅವರು ಮಸ್ತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ.

VISTARANEWS.COM


on

Anant Ambani Wedding Rajinikanth dances with Mukesh Ambani
Koo

ಬೆಂಗಳೂರು: ನಟ ರಜನಿಕಾಂತ್ ಅವರು ಕುಟುಂಬ ಸಮೇತರಾಗಿ ಅನಂತ್​ ಅಂಬಾನಿಯ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಅವರು ಭರ್ಜರಿಯಾಗಿ (Anant Ambani Wedding) ಡ್ಯಾನ್ಸ್​ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ರಜನಿಕಾಂತ್​ ಅವರ ಡ್ಯಾನ್ಸ್​ ಮತ್ತು ಉತ್ಸಾಹ ನೋಡಿ ಯುವಕರೂ ನಾಚುವಂತಿದೆ. ಹಾಲಿವುಡ್​ ಸೆಲೆಬ್ರಿಟಿಗಳು, ಬಾಲಿವುಡ್​ ತಾರೆಯರು, ದಕ್ಷಿಣ ಭಾರತದ ಸಿನಿಮಾ ಮಂದಿ ಸೇರಿದಂತೆ ನೂರಾರು ಗಣ್ಯರು ಮದುವೆಗೆ ಸಾಕ್ಷಿ ಆಗಿದ್ದಾರೆ. ಬಂದಿರುವ ಅತಿಥಿಗಳ ಜೊತೆ ಅಂಬಾನಿ ಕುಟುಂಬದವರು ಖುಷಿಯಿಂದ ಬೆರೆತಿದ್ದಾರೆ.ಜನಿಕಾಂತ್​ ಅವರು ಮಸ್ತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಈ ಸೂಪರ್​ ಸ್ಟಾರ್​ಗಳ ಜೊತೆ ಅನಂತ್​ ಅಂಬಾನಿ ಕೂಡ ಹೆಜ್ಜೆ ಹಾಕಿದ್ದಾರೆ. ಅವರ ಮದುವೆಯಲ್ಲಿ ತಾರಾ ಮೆರುಗು ತುಂಬಿದೆ.‘ತಲೈವಾ’ ರಜನಿಕಾಂತ್​ ಜೊತೆ ಅವರ ಪತ್ನಿ ಲತಾ, ಮಗಳು ಸೌಂದರ್ಯಾ ಕೂಡ ಅನಂತ್​ ಅಂಬಾನಿಯ ಮದುವೆಗೆ ಬಂದಿದ್ದಾರೆ ನಟ ರಜನಿಕಾಂತ್​ ಅವರು ಕುಟುಂಬ ಸಮೇತರಾಗಿ ಅನಂತ್​ ಅಂಬಾನಿಯ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಅವರು ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದಾರೆ.

ಈ ಸಂದರ್ಭದ ವಿಡಿಯೋ ವೈರಲ್​ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ರಜನಿಕಾಂತ್​ ಅವರ ಡ್ಯಾನ್ಸ್​ ಮತ್ತು ಉತ್ಸಾಹ ನೋಡಿ ಯುವಕರೂ ನಾಚುವಂತಿದೆ. ಬಂದಿರುವ ಅತಿಥಿಗಳ ಜೊತೆ ಅಂಬಾನಿ ಕುಟುಂಬದವರು ಖುಷಿಯಿಂದ ಬೆರೆತಿದ್ದಾರೆ. ರಜನಿಕಾಂತ್​ ಅವರು ಮಸ್ತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಈ ಸೂಪರ್​ ಸ್ಟಾರ್​ಗಳ ಜೊತೆ ಅನಂತ್​ ಅಂಬಾನಿ ಕೂಡ ಹೆಜ್ಜೆ ಹಾಕಿದ್ದಾರೆ. ರಜನಿಕಾಂತ್​ ಜೊತೆ ಅವರ ಪತ್ನಿ ಲತಾ, ಮಗಳು ಸೌಂದರ್ಯಾ ಕೂಡ ಅನಂತ್​ ಅಂಬಾನಿಯ ಮದುವೆಗೆ ಬಂದಿದ್ದಾರೆ.

ಇದನ್ನೂ ಓದಿ: Anant Ambani Wedding: ಕೌಟುಂಬಿಕ ಮುನಿಸು ಮರೆತು ವರನೊಂದಿಗೆ ಜತೆಯಾಗಿ ಹೆಜ್ಜೆ ಹಾಕಿದ ಮುಖೇಶ್ ಅಂಬಾನಿ-ಅನಿಲ್ ಅಂಬಾನಿ

ಗಣ್ಯರ ದಂಡೇ ಉಪಸ್ಥಿತಿ

ಅನಂತ್‌ ಅಂಬಾನಿ ಮದುವೆಯಲ್ಲಿ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್‌ ಧೋನಿ, ಅಮಿತಾಭ್‌ ಬಚ್ಚನ್‌, ಆಲಿಯಾ ಭಟ್‌, ರಣವೀರ್‌ ಸಿಂಗ್‌, ರಣಬೀರ್‌ ಕಪೂರ್‌, ಅನನ್ಯಾ ಪಾಂಡೆ, ರಜನಿಕಾಂತ್‌, ಮಹೇಶ್‌ ಬಾಬು, ಹಾರ್ದಿಕ್‌ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಬ್ರಿಟನ್‌ ಮಾಜಿ ಪ್ರಧಾನಿಗಳಾದ ಬೋರಿಸ್‌ ಜಾನ್ಸನ್‌, ಟೋನಿ ಬ್ಲೇರ್‌ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

5 ಸಾವಿರ ಕೋಟಿ ರೂ. ಖರ್ಚು

ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್‌ನಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಜಾಗತಿಕ ಗಾಯನ ಐಕಾನ್‌ಗಳಾದ ಜಸ್ಟಿನ್ ಬೀಬರ್, ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಾಲಿವುಡ್‌-ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

ವಿವಾಹ ಪೂರ್ವ ಕಾರ್ಯಕ್ರಮಗಳೂ ಅದ್ಧೂರಿಯಾಗಿ ನಡೆದವು. ಭಾರತದ ಜಾಮ್‌ನಗರದಲ್ಲಿರುವ ಅಂಬಾನಿ ಎಸ್ಟೇಟ್‌ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೊದಲ ವಿವಾಹ ಪೂರ್ವ ಆಚರಣೆಯು 1,200 ಅತಿಥಿಗಳೊಂದಿಗೆ ನಡೆಯಿತು, ಇದರಲ್ಲಿ ಬಿಲ್ ಗೇಟ್ಸ್, ಹಿಲರಿ ಕ್ಲಿಂಟನ್, ಜೇರೆಡ್ ಕುಶ್ನರ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ 1,200 ಅತಿಥಿಗಳು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ರಿಹಾನ್ನಾ ಅವರ ಪ್ರದರ್ಶನಕ್ಕೆ 6 ರಿಂದ 9 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎನ್ನಲಾಗಿದೆ.

Continue Reading

ಸ್ಯಾಂಡಲ್ ವುಡ್

Actor Darshan: ಮಾನಸಿಕ ಖಿನ್ನತೆಯಿಂದ ಹೊರಬರಲು ಯೋಗದ ಮೊರೆ ಹೋದ ದರ್ಶನ್‌!

Actor Darshan: ಊಟ ಸೇರದೆ ನಿದ್ದರೆ ಬಾರದೇ ದರ್ಶನ್‌ ಕಂಗಾಲಾಗಿದ್ದಾರೆ. ಜೈಲಿನಲ್ಲಿರುವ ದರ್ಶನ್‌ ಅವರನ್ನು ಈವರೆಗೆ ಮೂರು ಬಾರಿ ಕುಟುಂಬ ಭೇಟಿ ಮಾಡಿದೆ. ಇದೀಗ ನಟ ಮಾನಸಿಕ ಖಿನ್ನತೆಯಿಂದ ಹೊರಬರಲು ಯೋಗದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

VISTARANEWS.COM


on

Actor Darshan turned to yoga to overcome mental depression
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ (Actor Darshan) ಜೈಲಿನಲ್ಲಿ ಇದ್ದಾರೆ. ಸದ್ಯ ಜೈಲಲ್ಲಿ ದರ್ಶನ್ ಚಡಪಡಿಕೆ ಮುಂದುವರಿದಿದೆ. ಊಟ ಸೇರದೆ ನಿದ್ದರೆ ಬಾರದೇ ದರ್ಶನ್‌ ಕಂಗಾಲಾಗಿದ್ದಾರೆ. ಜೈಲಿನಲ್ಲಿರುವ ದರ್ಶನ್‌ ಅವರನ್ನು ಈವರೆಗೆ ಮೂರು ಬಾರಿ ಕುಟುಂಬ ಭೇಟಿ ಮಾಡಿದೆ. ಇದೀಗ ನಟ ಮಾನಸಿಕ ಖಿನ್ನತೆಯಿಂದ ಹೊರಬರಲು ಯೋಗದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಜೈಲೂಟ ರುಚಿಸುತ್ತಿಲ್ಲ, ಸಹಖೈದಿಗಳ ಸಹವಾಸ ಬೇಡವಾಗಿದೆ. ಇದರ ಜತೆಗೆ ಒಂಟಿತನ ಇನ್ನಿಲ್ಲದೆ ಕಾಡುತ್ತಿದೆ. ಒಂಟಿತನದಿಂದ ಪರಾಗಲು ದರ್ಶನ್ ಪುಸ್ತಕಗಳನ್ನು ಕೇಳಿ ಪಡೆದಿದ್ದರು. ಆದರೂ ಮನಸ್ಸಿನಿಂದ ಬೇಸರ ದೂರವಾಗುತ್ತಿಲ್ಲ. ಜತೆಗೆ ರೇಣುಕಾಸ್ವಾಮಿ ಕೊಲೆ ಕೇಸ್ ಭಯ ಕೂಡ ಕಾಡುತ್ತಿದೆ. ಪೊಲೀಸರ ತನಿಖೆ ಕೂಡ ಭರ್ಜರಿಯಾಗೇ ಸಾಗುತ್ತಿದೆ. ಇವೆಲ್ಲವೂ ನಟ ದರ್ಶನ್ ಅವರನ್ನು ನಿದ್ದೆಗೆಡಿಸಿವೆ. ಹಾಗಾಗಿ ಎಲ್ಲಾ ಟೆನ್ಷನ್ ಗಳಿಂದ ಹೊರ ಬರಲು ಯೋಗದ ಮೊರೆ ಹೋಗಿದ್ದಾರೆ.

ನಿನ್ನೆಯಿಂದ ಜೈಲಿನಲ್ಲಿ ನಟ ದರ್ಶನ್ ಯೋಗಾಭ್ಯಾಸ ಶುರು ಮಾಡಿದ್ದಾರೆ. ಈ ಹಿಂದೆ ರವಿಶಂಕರ್ ಗೂರೂಜಿ ಆಶ್ರಮದಿಂದ ಜೈಲಿನ ಸಜಾಬಂಧಿಗಳಿಗೆ ಯೋಗ ತರಬೇತಿ ನೀಡಲಾಗಿತ್ತು.

ಈ ಮುಂಚೆ ದರ್ಶನ್ ಭೇಟಿಯಾಗಿ ವಿಜಯಲಕ್ಷ್ಮಿ ಧೈರ್ಯ ತುಂಬಿ ಬಂದಿದ್ದರು. ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ಮಗ ವಿನೀಶ್‌ ಕಣ್ಣೀರು ಹಾಕಿದ್ದ.

ಇದನ್ನೂ ಓದಿ: Actor Darshan: ಅಪ್ಪನ ಸ್ಥಿತಿ ಕಂಡು ಮಗ ವಿನೀಶ್‌ ಕಣ್ಣೀರು; ಧೈರ್ಯ ತುಂಬಿದ ವಿಜಯಲಕ್ಷ್ಮಿ!

ಬಟ್ಟೆ, ಹಣ್ಣುಗಳನ್ನು ನೀಡಿದ್ದರು. ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ಮಗ ಕಣ್ಣೀರು ಹಾಕಿದ್ದ. ಮಗನನ್ನು ಅಪ್ಪಿಕೊಂಡು ದರ್ಶನ್ ಕೂಡ ಕಣ್ಣೀರು ಹಾಕಿ ಬಾವುಕರಾಗಿದ್ದರು., ಪತ್ನಿಯ ಬಳಿ ಜೈಲೂಟ ಮಾಡಲು ಆಗುತ್ತಿಲ್ಲ ಎಂದು ದರ್ಶನ್‌ ಹೇಳಿದ್ದರು. ವಕೀಲರ ಮೂಲಕ ಕೋರ್ಟ್​​ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ದರ್ಶನ್​ಗೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದರು. ಸದ್ಯ ಮನೆ ಊಟ ಕೊಡುವ ಬಗ್ಗೆ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಜುಲೈ 18ರಂದು ಈ ಬಗ್ಗೆ ನಿರ್ಧಾರ ಆಗಲಿದೆ.

ಹೊರಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪತ್ನಿಯ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದಾರೆ ದಚ್ಚು. ಜಾಮೀನು ಪ್ರಕ್ರಿಯೆ ಬಗ್ಗೆಯೂ ಕುಟುಂಬಸ್ಥರ ಜತೆಗೆ ಚರ್ಚೆ ಮಾಡಿದ್ದಾರೆ. ಮಗನನ್ನ ತೊಡೆಯ ಮೇಲೆ ಕೂರಿಸಿಕೊಂಡು ಕೆಲಹೊತ್ತು ದರ್ಶನ್‌ ಮಾತನಾಡಿಸಿದ್ದರು. ಮಗನನ್ನು ಕಂಡು ಕೊಂಚ ನಿರಾಳವಾಗಿದ್ದಾರೆ. ಮತ್ತೆ ರಾತ್ರಿಯಾಗುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ. ಒಂದು ಕಡೆ ಜಿಮ್‌ನಲ್ಲಿ ವರ್ಕೌಟ್ ಇಲ್ಲ, ಸರಿಯಾದ ಆಹಾರ ಕೂಡ ಇಲ್ಲ. ಇದರಿಂದ ತೂಕ ಕಳೆದುಕೊಂಡು ಮಾನಸಿಕವಾಗಿ ದರ್ಶನ್ ಕುಗ್ಗಿ ಹೋಗುತ್ತಿದ್ದಾರೆ. ಇತರ ಜೈಲು ಸಿಬ್ಬಂದಿ ಜೊತೆ ಅವರು ಬರೆಯುತ್ತಿಲ್ಲ.

Continue Reading

ಸ್ಯಾಂಡಲ್ ವುಡ್

Kannada New Movie: `ಕೆಂಡ’ ಟ್ರೈಲರ್ ಬಿಡುಗಡೆ : ಹಿಂದೆದೂ ಕಂಡು ಕೇಳರಿಯದ ಕಥೆಯ ಸುಳಿವು! 

Kannada New Movie: ಸೂಕ್ಷ್ಮ ಮನಃಸ್ಥಿತಿಯ ನಿರ್ದೇಶಕನ ಕೈಗೆ ಭೂಗತ ಜಗತ್ತಿನ ಕಥೆ ಸಿಕ್ಕರೆ, ಅಲ್ಲಿ ಬೇರೊಂದು ಆಯಾಮದ ದೃಷ್ಯಕಾವ್ಯ ರೂಪುಗೊಳ್ಳೋದು ಖಚಿತ. ಕೆಂಡದಲ್ಲಿರೋದೂ ಕೂಡಾ ಅಂಥಾದ್ದೇ ರೌಡಿಸಮ್ಮಿನ ಸುತ್ತ ಜರುಗುವ ಕಥನ. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡೋ ಯುವಕನೋರ್ವ, ಪರಿಸ್ಥಿತಿಗಳ ಸೆಳವಿಗೆ ಸಿಕ್ಕು ಭೂಗತದ ತೆಕ್ಕೆಗೆ ಬೀಳುವ ಕಥೆ ಇಲ್ಲಿದೆ. ಹಾಗಂತ ಅದು ಸಿದ್ಧ ಸೂತ್ರಗಳ ಸುತ್ತ ಗಿರಕಿ ಹೊಡೆಯುವಂಥಾದ್ದಲ್ಲ.

VISTARANEWS.COM


on

Kannada New Movie kenda trailer out
Koo

ಬೆಂಗಳೂರು: ಸಹದೇವ್ ಕೆಲವಡಿ ನಿರ್ದೇಶನದ (Kannada New Movie) `ಕೆಂಡ’ ಚಿತ್ರ ಇದೇ ತಿಂಗಳ 26ರಂದು ಬಿಡುಗಡೆಗೊಳ್ಳಲಿದೆ. ಈಗಾಗಲೇ ಈ ಚಿತ್ರ ಅಂತಾರಾಷ್ಟ್ರೀಯ ಸಿನಿಮಾ ಫೆಸ್ಟಿವಲ್‍ಗಳಲ್ಲಿ ಬಿಡುಗಡೆಗೊಂಡಿದೆ. ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಭಾರತದಲ್ಲಿ ಇಂಥಾ ಸಿನಿಮಾಗಳನ್ನೂ ರೂಪಿಸ್ತಾರಾ ಎಂಬಂಥಾ ಬೆರಗೊಂದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಂಡ ಪ್ರತಿಷ್ಠಾಪಿಸಿ ಬಿಟ್ಟಿದೆ. ಇಷ್ಟೆಲ್ಲ ಖುಷಿಯ ಪುಳಕಗಳೊಂದಿಗೆ ಚಿತ್ರತಂಡವೀಗ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಿದೆ. ಅಚ್ಚುಕಟ್ಟಾದ ಪತ್ರಿಕಾ ಗೋಷ್ಠಿಯ ಮೂಲಕ ಕೆಂಡದ ಟ್ರೈಲರ್ ಅನ್ನು ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್ ಲೋಕಾರ್ಪಣೆಗೊಳಿಸಿದ್ದಾರೆ. ಇದೇ ಹೊತ್ತಿನಲ್ಲಿ ಕೆಂಡದ ಬಗೆಗಿನ ಒಂದಷ್ಟು ಬೆರಗಿನ ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ಸೂಕ್ಷ್ಮ ಮನಃಸ್ಥಿತಿಯ ನಿರ್ದೇಶಕನ ಕೈಗೆ ಭೂಗತ ಜಗತ್ತಿನ ಕಥೆ ಸಿಕ್ಕರೆ, ಅಲ್ಲಿ ಬೇರೊಂದು ಆಯಾಮದ ದೃಷ್ಯಕಾವ್ಯ ರೂಪುಗೊಳ್ಳೋದು ಖಚಿತ. ಕೆಂಡದಲ್ಲಿರೋದೂ ಕೂಡಾ ಅಂಥಾದ್ದೇ ರೌಡಿಸಮ್ಮಿನ ಸುತ್ತ ಜರುಗುವ ಕಥನ. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡೋ ಯುವಕನೋರ್ವ, ಪರಿಸ್ಥಿತಿಗಳ ಸೆಳವಿಗೆ ಸಿಕ್ಕು ಭೂಗತದ ತೆಕ್ಕೆಗೆ ಬೀಳುವ ಕಥೆ ಇಲ್ಲಿದೆ. ಹಾಗಂತ ಅದು ಸಿದ್ಧ ಸೂತ್ರಗಳ ಸುತ್ತ ಗಿರಕಿ ಹೊಡೆಯುವಂಥಾದ್ದಲ್ಲ. ಕೈಗೆ, ಮೈ ಮನಸಿಗೆ ಮೆತ್ತಿಕೊಂಡ ರಕ್ತದ ಕಲೆಗಳನ್ನ ಕಲಾತ್ಮಕವಾಗಿ ತೋರಿಸಲು ಸಾಧ್ಯವಾ? ಸುಡುವ ಕ್ರೌರ್ಯವನ್ನು ಸೂಕ್ಷ್ಮ ಸಂವೇದನೆಯ ಒಳಗಣ್ಣಿನಿಂದ ನೋಡಲು ಹೇಗೆ ಸಾಧ್ಯ? ಇದು ಸಿನಿಮಾಸಕ್ತರನ್ನು ಕಾಡುವ ಗೊಂದಲ ಬೆರೆತ ಅಚ್ಚರಿ. ಅಂಥಾ ಅಚ್ಚರಿಗಳೇ ಬೆರಗುಗೊಳ್ಳುವಂತೆ ಕೆಂಡ ಚಿತ್ರ ಮೂಡಿ ಬಂದಿದೆ ಎಂಬ ಮುನ್ಸೂಚನೆ ಈ ಟ್ರೈಲರಿನಲ್ಲಿ ಸ್ಪಷ್ಟವಾಗಿ ಸಿಕ್ಕಿಬಿಟ್ಟಿದೆ.

ಇದನ್ನೂ ಓದಿ: Kannada New Movie:ʻದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಆಯ್ಕೆಯಾದ ಕನ್ನಡದ ʻಕೆಂಡʼ ಸಿನಿಮಾ!

ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕ ಸಹದೇವ್ ಕೆಲವಡಿ, ನಿರ್ಮಾಪಕಿ ರೂಪಾ ರಾವ್, ಸಂಗೀತ ನಿರ್ದೇಶಕ ರಿತ್ವಿಕ್ ಕಾಯ್ಕಿಣಿ, ರಂಗಭೂಮಿಯಿಂದ ಬಂದಿರುವ, ಈ ಚಿತ್ರದ ನಾಯಕ ಬಿ.ವಿ ಭರತ್, ಪ್ರಣವ್ ಶ್ರೀಧರ್, ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್, ಸತೀಶ್, ಫೃಥ್ವಿ, ದೀಪ್ತಿ ಮುಂತಾದವರು ಪಾಲ್ಗೊಂಡಿದ್ದರು. ಮೊದಲಿಗೆ ಮಾತಾಡಿದ ರೂಪಾ ರಾವ್ ಕೆಂಡ ಚಿತ್ರ ರೂಪುಗೊಂಡ ಬಗ್ಗೆ, ಅದರ ಕಥೆಯ ಬಗ್ಗೆ ಹಾಗೂ ಅಮೇಯುಕ್ತಿ ಸ್ಟುಡಿಯೋಸ್ ಹುಟ್ಟಿನ ವಿಚಾರವಾಗಿ ಒಂದಷ್ಟು ವಿಚಾರಗಳನ್ನ ಹಂಚಿಕೊಂಡರು. ನಿರ್ದೇಶಕ ಸಹದೇವ್ ಕೆಲವಡಿ ಕೆಂಡ ರೂಪುಗೊಂಡಿದ್ದರ ಹಿಂಚುಮುಂಚಿನ ರಸವತ್ತಾದ ವಿವರಗಳನ್ನು ಹಂಚಿಕೊಂಡರು.

ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಂಡ ಶೀಘ್ರದಲ್ಲೇ ತೆರೆಗಾಣಲಿದೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಕೆಂಡವನ್ನು ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ, ರೇಖಾ ಕೂಡ್ಲಿಗಿ, ಪ್ರಭಾಕರ್ ಜೋಶಿ ಮುಂತಾದವರ ತಾರಾಗಣವಿದೆ.

Continue Reading
Advertisement
karnataka Weather Forecast
ಮಳೆ5 seconds ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

Healthy Food For Dengue
ಫ್ಯಾಷನ್2 mins ago

Healthy Food For Dengue: ಈ ಆಹಾರಗಳನ್ನು ತಿನ್ನಿ; ಡೆಂಗ್ಯೂಗೆ ಡೋಂಟ್ ಕೇರ್ ಅನ್ನಿ

radioactive material
ದೇಶ31 mins ago

Radioactive Material: ಅಪಾಯಕಾರಿ ರಾಸಾಯನಿಕ ವಸ್ತು ತುಂಬಿದ್ದ ಬಾಕ್ಸ್‌ಗಳು ಪತ್ತೆ; ಐವರು ಅರೆಸ್ಟ್‌

Ambani Wedding Fashion
ಫ್ಯಾಷನ್39 mins ago

Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Bagalkot news
ಕರ್ನಾಟಕ45 mins ago

Bagalkot News: ಭಕ್ತರಿಗೆ ಭಂಡಾರ ಹಚ್ಚಿ ಕೊಡಲಿ ಏಟು ನೀಡೋ ಪೂಜಾರಿ; ಮೌಢ್ಯ ನಿಷೇಧ ಕಾಯ್ದೆಯಡಿ ಬಂಧನ!

T20 World Cup 2024
ಕ್ರೀಡೆ54 mins ago

T20 World Cup 2024 : ವಿಶ್ವ ಕಪ್ ಆಯೋಜನೆಯಲ್ಲಿ ಐಸಿಸಿಗೆ ಸಿಕ್ಕಾಪಟ್ಟೆ ನಷ್ಟ ​; ತೆರೆಮರೆಯಲ್ಲಿ ಜೋರು ಚರ್ಚೆ

Anant Ambani Wedding
ಪ್ರಮುಖ ಸುದ್ದಿ1 hour ago

ಅಂಬಾನಿಯನ್ನು ಟೀಕಿಸುತ್ತಿದ್ದ ದೀದಿ, ಅಖಿಲೇಶ್‌, ಲಾಲು ಸೇರಿ ಹಲವು ರಾಜಕಾರಣಿಗಳು ಅನಂತ್‌ ಮದುವೆಯಲ್ಲಿ ಭಾಗಿ

Self Harming
ಬೆಂಗಳೂರು1 hour ago

Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

Shiva Rajkumar 131 cinema Look out
ಸ್ಯಾಂಡಲ್ ವುಡ್2 hours ago

Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

YouTuber Dhruv Rathee
ದೇಶ2 hours ago

YouTuber Dhruv Rathee: ಸ್ಪೀಕರ್‌ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್‌; ಯೂಟ್ಯೂಬರ್‌ ಧೃವ್‌ ರಥೀ ವಿರುದ್ಧ FIR

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ7 seconds ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ6 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ4 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ4 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ5 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ5 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

ಟ್ರೆಂಡಿಂಗ್‌