Kotee Movie Review: ಎಲ್ಲರೂ ಬೆತ್ತಲೆಯಾಗಿರುವ ಸಮಾಜದಲ್ಲಿ ಬಟ್ಟೆ ಹಾಕಿಕೊಂಡವನಿಗೆ ನಾಚಿಕೆಯಾದಾಗ?! - Vistara News

ಸ್ಯಾಂಡಲ್ ವುಡ್

Kotee Movie Review: ಎಲ್ಲರೂ ಬೆತ್ತಲೆಯಾಗಿರುವ ಸಮಾಜದಲ್ಲಿ ಬಟ್ಟೆ ಹಾಕಿಕೊಂಡವನಿಗೆ ನಾಚಿಕೆಯಾದಾಗ?!

Kotee Movie Review: ನಿತ್ಯ ಜೀವನ ಜಂಜಾಟವನ್ನು ತೋರಿಸುವ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಕೋಟಿ ಎಂಬ ಪಾತ್ರ ನಮ್ಮ ಸುತ್ತಮುತ್ತಲಿನಲ್ಲಿ ಕಾಣುವ ಒಬ್ಬ ಕಾಮನ್‌ ಮ್ಯಾನ್‌! ಕೆಳ- ಮಧ್ಯಮ ವರ್ಗದ ದೊಡ್ಡ ಕನಸುಗಳು ಹೊತ್ತಿರುವ ಈ ಕೋಟಿಯ ಕನಸಿನ ತಾಣ. ‘ಎಲ್ಲರೂ ಬೆತ್ತಲೆಯಾಗಿರುವ ಸಮಾಜದಲ್ಲಿ ಬಟ್ಟೆ ಹಾಕಿಕೊಂಡವನಿಗೆ ನಾಚಿಕೆಯಾಗಬೇಕು’ ಎನ್ನುವುದು ‘ಕೋಟಿ’ ಚಿತ್ರದಲ್ಲಿ ರಾಮಣ್ಣ ಪಾತ್ರಧಾರಿ ರಂಗಾಯಣ ರಘು ನಾಯಕ ‘ಕೋಟಿ’ ಡಾಲಿಗೆ ಹೇಳುವ ಡೈಲಾಗ್‌.. ಇಡೀ ಸಿನಿಮಾದ ಒನ್‌ಲೈನ್‌ ಸ್ಟೋರಿಯನ್ನು ಇದು ಉಲ್ಲೇಖಿಸುತ್ತದೆ.

VISTARANEWS.COM


on

Kotee Movie Review dolly dhanjay News In Kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಜಯ್‌ ಗಾಯತೊಂಡೆ, ಬೆಂಗಳೂರು

ನಿರ್ಮಾಣ: ಜಿಯೋ ಸ್ಟುಡಿಯೋ​. ನಿರ್ದೇಶನ: ಪರಮೇಶ್ವರ್ ಗುಂಡ್ಕಲ್. ಪಾತ್ರವರ್ಗ: ಧನಂಜಯ್, ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ತಾರಾ, ರಂಗಾಯಣ ರಘು, ಪೃಥ್ವಿ ಶಾಮನೂರು, ದುನಿಯಾ ವಿಜಯ್ ಮೊದಲಾದವರು. 

ಸ್ಯಾಂಡಲ್​​ವುಡ್​​ ನಟ ಡಾಲಿ ಧನಂಜಯ್ (Kotee Movie Review) ಅಭಿನಯದ ಬಹುನೀರಿಕ್ಷಿತ ಸಿನಿಮಾ ಕೋಟಿ ಸಿನಿಮಾ ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಂದಲೇ ಸಾಕಷ್ಟು ಸದ್ದು ಮಾಡಿತ್ತು. ಇದೀಗ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕನ್ನಡ ಕಿರುತೆರೆ ಲೋಕದ ಪರಿಣತ ಪರಮೇಶ್ವರ್‌ ಗುಂಡ್ಕಲ್‌ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಇಲ್ಲಿ ಡಾಲಿ ಧನಂಜಯ್‌ ಎಂಬ ʼನಟ ರಾಕ್ಷಸʼ ಈ ಸಿನಿಮಾದ ಹೀರೋ. ಹೀಗಾಗಿ ಈ ʼಕೋಟಿʼ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆಯಿತ್ತು. ಈ ಚಿತ್ರದ ಕುರಿತು ಸಾಕಷ್ಟು ಹಿಂದೆಯೇ ಕೆಲಸ ಆರಂಭಿಸಲಾಗಿತ್ತು. ಆದರೆ, ಟೀಸರ್‌ ಮತ್ತು ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸುವ ತನಕ ಈ ಚಲನಚಿತ್ರದ ವಿಚಾರವನ್ನು ಗುಟ್ಟಾಗಿ ಇಡಲಾಗಿತ್ತು. ಇದೀಗ ಈ ಸಿನಿಮಾ ರೀಲಿಸ್ ಆಗಿದ್ದು ಈ ಚಿತ್ರದಲ್ಲಿ ಏನೇನಿದೆ? ಹಾಗೂ ಏನಿರಬೇಕಿತ್ತು ಎಂಬುದನ್ನು ನೋಡೋಣ.

ಏನಿದು ಕೋಟಿ?

ಕೋಟಿ ಅಂದ್ರೆ ಹೆಸರು, ಹಣ, ಸಂಖ್ಯೆ ಅವರವರ ಭಾವಕ್ಕೆ..! ಪ್ರತಿನಿತ್ಯದ ಜೀವನ ಜಂಜಾಟವನ್ನು ತೋರಿಸುವ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಕೋಟಿ ಎಂಬ ಪಾತ್ರ ನಮ್ಮ ಸುತ್ತಮುತ್ತಲಿನಲ್ಲಿ ಕಾಣುವ ಒಬ್ಬ ಕಾಮನ್‌ ಮ್ಯಾನ್‌! ಕೆಳ- ಮಧ್ಯಮ ವರ್ಗದ ದೊಡ್ಡ ಕನಸುಗಳು ಹೊತ್ತಿರುವ ಈ ಕೋಟಿಯ ಕನಸಿನ ತಾಣ.
ಪ್ರಾಮಾಣಿಕತೆಯೇ ಜೀವನ. ಜೀವನದಲ್ಲಿ ಒಂದು ಪೆನ್ನನ್ನೂ ಕದ್ದಿಲ್ಲ ಎನ್ನುವ ಈ ಹರೀಶ್ಚಂದ್ರನಿಗೆ ‘ಕೋಟಿ’ ಆಮಿಷವೊಡ್ಡುವ ನಕ್ಷತ್ರಿಕನೊಬ್ಬ ಗಂಟು ಬಿದ್ದಿದ್ದಾನೆ! ‘ಎಲ್ಲರೂ ಬೆತ್ತಲೆಯಾಗಿರುವ ಸಮಾಜದಲ್ಲಿ ಬಟ್ಟೆ ಹಾಕಿಕೊಂಡವನಿಗೆ ನಾಚಿಕೆಯಾಗಬೇಕು’ ಎನ್ನುವುದು ‘ಕೋಟಿ’ ಚಿತ್ರದಲ್ಲಿ ರಾಮಣ್ಣ ಪಾತ್ರಧಾರಿ ರಂಗಾಯಣ ರಘು ನಾಯಕ ‘ಕೋಟಿ’ ಡಾಲಿಗೆ ಹೇಳುವ ಡೈಲಾಗ್‌.. ಇಡೀ ಸಿನಿಮಾದ ಒನ್‌ಲೈನ್‌ ಸ್ಟೋರಿಯನ್ನು ಇದು ಉಲ್ಲೇಖಿಸುತ್ತದೆ. ಬಡ ಕುಟುಂಬದಿಂದ ಬಂದು ನಿಯತ್ತಿನಲ್ಲೇ ಬದುಕುತ್ತಿರುವ ನಾಯಕ ‘ಕೋಟಿ’ ಈ ಹಾದಿಯಲ್ಲೇ ಹೆಜ್ಜೆ ಹಾಕುತ್ತಾನೋ ಅಥವಾ ಬೆತ್ತಲಾಗಿರುವ ಸಮಾಜದಲ್ಲಿ ತಾನೂ ಬೆತ್ತಲಾಗುತ್ತಾನೋ ಎನ್ನುವುದೇ ಚಿತ್ರದ ಸ್ವಾರಸ್ಯ..!

ಇದನ್ನೂ ಓದಿ: Raveena Tandon: ರವೀನಾ ಟಂಡನ್ ವಿಡಿಯೊ ವೈರಲ್​ ಮಾಡಿದ ವ್ಯಕ್ತಿ ಮೇಲೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

ಛಲಗಾರನೊಬ್ಬನ ಕನಸು ನನಸಾಗುವ ಕೋಟಿ!

ಮೂವರು ಒಡಹುಟ್ಟಿದವರಲ್ಲಿ ಕೋಟಿ (ಧನಂಜಯ್‌) ಹಿರಿಯವನು. ಆತ ಅತ್ಯಂತ ಕಷ್ಟಪಟ್ಟು ದುಡಿಯುವ ವ್ಯಕ್ತಿ. ನಾಳೆಯ ಕುರಿತು ಸುಂದರ ಕನಸು ಹೊಂದಿದ್ದಾನೆ. ಆ ಕನಸು ಈಡೇರಿಸಲು ಕಷ್ಟಪಟ್ಟು ದುಡಿಯುತ್ತಿದ್ದಾನೆ. ಇವರಿಲ್ಲಿ ಜನತಾ ನಗರದ ನಿವಾಸಿಗಳು. ಆ ನಗರ ಕೊಲೆಗಡುಕರ ಅಡ್ಡ. ದಿನೂ ಸಾವ್ಕಾರ್‌ (ರಮೇಶ್‌ ಇಂದಿರಾ) ನಿಯಂತ್ರಣದಲ್ಲಿದೆ. ಕೋಟಿ ಈ ಸಾಹುಕಾರನಿಂದ ಟ್ರಕ್‌ ಬಾಡಿಗೆಗೆ ಪಡೆದು ಸಣ್ಣ ಮೂವರ್ಸ್‌ ಮತ್ತು ಪ್ಯಾಕರ್ಸ್‌ ಬಿಸ್ನೆಸ್‌ ನಡೆಸುತ್ತಾನೆ. ಈ ಬಿಸ್ನೆಸ್‌ ಇಲ್ಲದಿರುವಾಗ ಕ್ಯಾಬ್‌ ಡ್ರೈವರ್‌ ಆಗಿಯೂ ದುಡಿಯುತ್ತಾನೆ. ಆದರೆ, ಈತನ ಕಷ್ಟಕ್ಕೆ ಈ ಹಣ ಸಾಕಾಗುವುದಿಲ್ಲ. ಮನಸ್ಸಿಲ್ಲದಿದ್ದರೂ ಸಾಹುಕಾರನಿಂದ ಸಾಲ ಪಡೆಯುತ್ತಾನೆ. ಈ ಸಾಲ ಕೆಲವೇ ಸಮಯದಲ್ಲಿ ಈತನನನು ಮುಳುಗಿಸಲು ರೆಡಿಯಾಗುತ್ತದೆ. ಕೋಟಿ ಬದುಕನ್ನು ತೋರಿಸುತ್ತ ತುಸು ಮಂದ ವೇಗದಲ್ಲಿ ಸಾಗುತ್ತಿದ್ದ ಸಿನಿಮಾ ವೇಗ ಪಡೆದುಕೊಳ್ಳುತ್ತದೆ.

ಮಾಸ್ ಸಿನಿಮಾ ಜೊತೆಗೆ ಫ್ಯಾಮಿಲಿ ಆಡಿಯನ್ಸ್​ಗೂ ಹೆಚ್ಚು ಕನೆಕ್ಟ್ ಆಗಿದ್ದಾರೆ ಡಾಲಿ. ಅವರ ನಟನೆಯ ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಹೈಲೈಟ್ ಆಗಿತ್ತು. ಈಗ ಮತ್ತೊಮ್ಮೆ ಅವರು ಫ್ಯಾಮಿಲಿ ಆಡಿಯನ್ಸ್​ಗೆ ಇಷ್ಟ ಆಗುವ ಸಿನಿಮಾ ಮಾಡಿದ್ದಾರೆ. ಇಲ್ಲಿ ಅನಗತ್ಯ ಬಿಲ್ಡಪ್ಪು, ಡೈಲಾಗುಗಳೇ ಇಲ್ಲದ ಪಾತ್ರ ಒಪ್ಪಿಕೊಂಡು ಲೀಲಾಜಾಲವಾಗಿ ಅಭಿನಯಿಸಿದ್ದು ಪ್ರೇಕ್ಷಕರಿಗೆ ಅವರ ಮೇಲಿನ ಪ್ರೀತಿ ಇಮ್ಮಡಿಯಾಗುವುದಂತೂ ಸುಳ್ಳಲ್ಲ.
ಅವರಷ್ಟೇ ಅಲ್ಲದೇ ಈ ಸಿನಿಮಾದ ಯಶಸ್ಸು ಅದರ ಇಡೀ ತಾರಾಗಣದ ಆಯ್ಕೆಯಲ್ಲಿದೆ. ತಾರಾ ಅನುರಾಧ, ರಮೇಶ್ ಇಂದಿರಾ ಎಲ್ಲರೂ ಅಮೋಘವಾಗಿ ಅಭಿನಯಿಸಿದ್ದಾರೆ. ಇಲ್ಲಿ ರಂಗಾಯಣ ರಘು, ದುನಿಯಾ ವಿಜಯ್ ಹೆಚ್ಚು ಕಾಣಿಸಿಕೊಂಡಿಲ್ಲ ಇವರ ಪಾತ್ರಕ್ಕೆ ಇನ್ನಷ್ಟು ಪೂರಕ ಅಂಶ ಬೇಕಿದ್ದವು ಎನಿಸುತ್ತದೆ.
ತನುಜಾ ವೆಂಕಟೇಶ್ ಕೋಟಿಯ ಸಹೋದರಿ ಮಹತಿ ಪಾತ್ರದಲ್ಲಿ, ಪೃಥ್ವಿ ಶಾಮನೂರು, ಕೋಟಿಯ ಸಹೋದರ ನಚ್ಚಿಯಾಗಿ, ತಲೆ ಮೇಲೆ ಹೆಡ್‌ಫೋನ್‌ ಹಾಕಿಕೊಂಡು ಸದಾ ಸಂಗೀತ ಕೇಳುತ್ತಾ ಇರುತ್ತಾರೆ. ಚಿತ್ರದ ನಾಯಕಿ ಮೋಕ್ಷಾ ಕುಶಾಲ್‌ ಸುಂದರಿ ಮಾತ್ರವಲ್ಲ, ತನಗೆ ಸಿಕ್ಕ ಪಾತ್ರದಲ್ಲಿ ಶ್ರದ್ಧೆಯಿಂದ ನಟಿಸಿದ್ದಾರೆ. ಇಲ್ಲಿ ಅವರಿಗೊಂದು ಅಪರೂಪದ ಕಾಯಿಲೆಯಿದೆ ಇದು ಸಿನಿಮಾದಲ್ಲಿ ಹೆಚ್ಚು ಹೈಲೈಟ್ ಆಗಿದೆ. ಅದೇನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.

ಮಾಯಾ ಲೋಕದಲ್ಲಿ ಬಣ್ಣದ ಕ್ಲೈಮ್ಯಾಕ್ಸ್!

ಹೌದು. ಬಣ್ಣ ಬಣ್ಣದ ಪಟ್ಟೆ ತೊಟ್ಟ ಅಷ್ಟೊಂದು ಹುಲಿಗಳು ಪಾಳುಬಿದ್ದ ಹಳೆಯ ಥಿಯೇಟರ್ರೊಂದರ ಕತ್ತಲಲ್ಲಿ ಹೊಡೆದಾಡುವ ದೃಶ್ಯಗಳಲ್ಲಿ ಕ್ಲೈಮ್ಯಾಕ್ಸಿಗೆ ಅಗತ್ಯವಾಗಿ ಬೇಕಾದ ‘ಕಲರ್’ಫುಲ್ ಬಣ್ಣದಲೋಕ ಸೃಷ್ಟಿಯಾಗಿದೆ.
ಈ ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಾಮನ್ ಆಗಿದ್ದಾರೆ. ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಯಶ ಸಾಧಿಸಿದ್ದಾರೆ. ನಿರೂಪಣೆಗೆ ಮತ್ತಷ್ಟು ವೇಗ ಸಿಕ್ಕಿದ್ದರೆ ಈ ಚಿತ್ರ ಮತ್ತಷ್ಟು ಖುಷಿ ಕೊಡುತ್ತಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬೇಲ್‌ ಕನಸು ನಚ್ಚು ನೂರು; ನಟ ದರ್ಶನ್‌ ಜಾಮೀನು ನಿರಾಕರಣೆಗೆ ಕೋರ್ಟ್‌ ಕೊಟ್ಟ 9 ಕಾರಣಗಳು

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ರ ಬೇಲ್‌ ಕನಸು ನಚ್ಚು ನೂರಾಗಿದೆ. ನಟ ದರ್ಶನ್‌ ಜಾಮೀನು ನಿರಾಕರಣೆಗೆ ಕೋರ್ಟ್‌ 9 ಕಾರಣಗಳನ್ನು ಕೊಟ್ಟಿದೆ.

VISTARANEWS.COM


on

By

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್‌ ಆಗಿರುವ ನಟ ದರ್ಶನ್‌‌ (Actor Darshan) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನುನಿನ್ನೆ ಸೋಮವಾರ ಕೋರ್ಟ್‌ ವಜಾಗೊಳಿಸಿತು. ದರ್ಶನ್‌ಗೆ ಜಾಮೀನು ನೀಡಲು ನಿರಾಕರಿಸಿದ್ದಕ್ಕೆ ಕೋರ್ಟ್‌ 9 ಕಾರಣಗಳನ್ನು ನೀಡಿದೆ.

ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಲು ಪ್ರಮುಖ ಕಾರಣಗಳು!

  • -ಐ ವಿಟ್ನೆಸ್ ಹೇಳಿಕೆಗಳು ಕಾನೂನು ಪ್ರಕಾರವಾಗಿವೆ
  • -ರೇಣುಕಾಸ್ವಾಮಿ ಮೃತದೇಹದ ಗುರುತು ಪತ್ತೆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ತಡವಾಗಿಲ್ಲ.
  • -ದರ್ಶನ್ ಟ್ರಯಲ್ ಆರಂಭವಾದ ಬಳಿಕ ಆರೋಪಿಗಳ ಹೇಳಿಕೆಯ ಬಗ್ಗೆ ತಿಳಿಯುತ್ತದೆ.
  • -ದರ್ಶನ್ ಕ್ರಾಸ್ ಎಕ್ಸಾಮಿನ್ ಮಾಡಿದಾಗ ರಿಕವರಿಯ ಅಂಶಗಳ ಬಗ್ಗೆ ತಿಳಿಯುತ್ತದೆ
  • -ಸಿಡಿಆರ್ ನಲ್ಲಿ ಎ೨ ಆರೋಪಿ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿರೋದು ಸ್ಪಷ್ಟವಾಗಿದೆ
  • -ಈ ಹಂತದಲ್ಲಿ ಸಾಕ್ಷಿಗಳ ಹೇಳಿಕೆ ತಡವಾಗಿದೆ ಅನ್ನೋದಕ್ಕೆ ಪುರಾವೆಗಳಿಲ್ಲ
  • -ಡಿ ಎನ್ ಎ ಟೆಸ್ಟ್‌ ನಲ್ಲಿ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿ ಇದ್ದ ಬಗ್ಗೆ ಸ್ಪಷ್ಟಪಡಿಸಿದೆ
  • -ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ರೇಣುಕಾಸ್ವಾಮಿ ಯ ಕೊಲೆಯ ಕ್ರೂರತೆ ಬಗ್ಗೆ ತಿಳಿಸಿದೆ
  • -ಸಮಾಜದಲ್ಲಿ ದರ್ಶನ್ ರೋಲ್ ಮಾಡೆಲ್ ಆಗಿದ್ದು, ಸಾಕಷ್ಟು ಜನ್ರು ಪ್ರಭಾವಿತರಾಗಿರ್ತಾರೆ

ಹತ್ಯೆ ಕೇಸ್‌ ಆರೋಪಿ ದರ್ಶನ್‌ಗೆ ಮತ್ತಷ್ಟು ದಿನ ಜೈಲುವಾಸವೇ ಫಿಕ್ಸ್ ಆಗಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ಆರೋಪಿ ದರ್ಶನ್‌ಗೆ ನ್ಯಾಯಾಲಯ ಬಿಗ್‌ ಶಾಕ್‌ ನೀಡಿದೆ. ಸ್ಯಾಂಡಲ್‌‌ವುಡ್ ಜಗ್ಗುದಾದಾನ ಬೇಲ್‌ ಅರ್ಜಿ ವಜಾಗೊಳಿಸಿರುವ ಕೋರ್ಟ್‌, ಜಾಮೀನು ನಿರಾಕರಣೆಗೆ ಹಲವು ಕಾರಣ ನೀಡಿದೆ. ವಿಸ್ತಾರ ನ್ಯೂಸ್‌ಗೆ ಬೇಲ್‌ ರಿಜೆಕ್ಟ್‌‌ ಬಗ್ಗೆ ಕೋರ್ಟ್‌ ಉಲ್ಲೇಖಿಸಿದ ಅಂಶಗಳ ಪಿನ್‌ ಟು ಪಿನ್‌ ಮಾಹಿತಿ ಲಭ್ಯವಾಗಿದೆ. ಸದ್ಯ ಜೈಲಲ್ಲಿರುವ ದರ್ಶನ್‌ಗೆ ಜಾಮೀನು ಅನ್ನೋದು ಮರೀಚಿಕೆ ಆಗಿದೆ. ನ್ಯಾಯಾಲಯ ಉಲ್ಲೇಖಿಸಿದ ಅಂಶಗಳ ನೋಡಾದಾದರೆ, ಕೊಲೆ ಕೇಸಲ್ಲಿ ಐ ವಿಟ್ನೆಸ್ ಹೇಳಿಕೆಗಳು ಕಾನೂನು ಪ್ರಕಾರವಾಗಿವೆ ಅಂತಾ ಆದೇಶದಲ್ಲಿ ತಿಳಿಸಲಾಗಿದೆ.

ದರ್ಶನ್‌ ಪರ ವಕೀಲರ ಆರೋಪದಂತೆ ರೇಣುಕಾಸ್ವಾಮಿ ಮೃತದೇಹ ಗುರುತಿನ ಬಳಿಕ ಮರಣೋತ್ತರ ಪರೀಕ್ಷೆ ತಡವಾಗಿಲ್ಲ, ದರ್ಶನ್ ಟ್ರಯಲ್ ಆರಂಭ ಬಳಿಕ ಆರೋಪಿಗಳ ಹೇಳಿಕೆ ತಿಳಿಯುತ್ತದೆ. ದರ್ಶನ್ ಕ್ರಾಸ್ ಎಕ್ಸಾಮ್‌‌‌‌‌‌ ಮಾಡಿದಾಗ ರಿಕವರಿ ಅಂಶ ತಿಳಿಯುತ್ತದೆ. ಸಿಡಿಆರ್‌ನಲ್ಲಿ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿರೋದು ಸ್ಪಷ್ಟವಾಗಿದೆ ಅಂತಾ ಬೇಲ್‌ ಅರ್ಜಿ ವಜಾಗೊಳಿಸಿದೆ. ಮಾತ್ರವಲ್ಲ ಕೊಲೆ ಕೇಸಲ್ಲಿ ಸಾಕ್ಷಿಗಳ ಹೇಳಿಕೆ ತಡವಾಗಿದೆ ಅನ್ನೋದಕ್ಕೆ ಪುರಾವೆಗಳಿಲ್ಲ, DNA ಟೆಸ್ಟ್‌‌ನಲ್ಲಿ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿ ಇದ್ದ ಬಗ್ಗೆ ಸ್ಪಷ್ಟಪಡಿಸಿದೆ. ಪೋಸ್ಟ್‌‌ಮಾರ್ಟಂ ವರದಿ ರೇಣುಕಾಸ್ವಾಮಿ ಕೊಲೆಯ ಕ್ರೂರತೆ ತಿಳಿಸಿದೆ ಎಂದಿರುವ ಕೋರ್ಟ್‌, ದರ್ಶನ್‌ಗೆ ಜಾಮೀನು ನೀಡಲು ನಿರಾಕರಿಸಿದ್ದು, ಬೇಲ್ ಅರ್ಜಿ ವಜಾಗೊಳಿಸಿದೆ.

ಹೈಕೋರ್ಟ್‌ನತ್ತ ದಚ್ಚು-ಪವಿ ಬೇಲ್‌ ಅರ್ಜಿ?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ದರ್ಶನ್‌, ಜಾಮೀನು ಪಡೆದು ಹೊರಬರುವ ದಿನಕ್ಕಾಗಿ ಕಾಯುತ್ತಾ ಇದ್ದರು. ಆದರೆ ಸ್ಯಾಂಡಲ್‌ವುಡ್ ಕಾಟೇರನ ಬೇಲ್‌‌ ಕನಸು ನುಚ್ಚು ನೂರಾಯಿತು. ಕಳೆದ ವಾರ ದರ್ಶನ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 57ನೇ ಸಿಸಿಎಚ್‌ ಕೋರ್ಟ್‌ ಪೂರ್ಣಗೊಳಿಸಿತ್ತು. ನಿನ್ನೆ ಬೇಲ್ ಆದೇಶ ಹೊರಬಿದ್ದಿದ್ದು, ದರ್ಶನ್​ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರ ತಂಡ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲು ಸಜ್ಜಾಗಿದ್ದಾರೆ.

ಸೆಷನ್‌ ಕೋರ್ಟ್‌ನ ಆದೇಶ ಪ್ರತಿ ಸೇರಿಸಿ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಲು ಸಜ್ಜಾಗಿದ್ದು, ಯಾವುದೇ ಕ್ಷಣದಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಮತ್ತೊಂದೆಡೆ ಸದ್ಯಕ್ಕೆ ಜಾಮೀನು ಸಿಗದಿರೋ ಕಾರಣ ಅನಾರೋಗ್ಯ ಕಾರಣ ನೀಡಿ, ದರ್ಶನ್ ಬೆಂಗಳೂರಿಗೆ ಶಿಫ್ಟ್​ ಆಗುವ ಸಾಧ್ಯತೆ ಇದೆ. ಈಗಾಗಲೇ ದರ್ಶನ್ ಕುಟುಂಬಸ್ಥರು ಮೆಡಿಕಲ್ ವರದಿ ಸಿದ್ಧ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಬೆಂಗಳೂರಿಗೆ ಶಿಫ್ಟ್​ ಆಗಲು ಪ್ಲ್ಯಾನ್​ ನಡೆದಿದೆ.

ದರ್ಶನ್ ಕಳೆದ ಕೆಲ ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ನಡೆಯಲು ಕೂಡ ದರ್ಶನ್‌ಗೆ ಕಷ್ಟ ಆಗುತ್ತಿದೆ ಎನ್ನಲಾಗಿದೆ. ಅನಾರೋಗ್ಯದ ನೆಪದಲ್ಲಾದರೂ ಚಾಲೆಂಜಿಂಗ್‌ ಸ್ಟಾರ್‌, ಬೆಂಗಳೂರು ಜೈಲು ಸೇರುವ ಯತ್ನ ನಡೆಸ್ತಿದ್ದಾರೆ ಎನ್ನಲಾಗ್ತಿದೆ. ಈ ಮಧ್ಯೆ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ. ಮತ್ತೊಂದೆಡೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡಗೂ ಬೇಲ್‌ ಸಿಕ್ಕಿಲ್ಲ. ಹೀಗಾಗಿ ಜೈಲುಹಕ್ಕಿ, ದರ್ಶನ್ ಗೆಳತಿ ಪವಿತ್ರಾ ಕೂಡ ಹೈಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದಾರೆ. ಪವಿತ್ರಾ ಗೌಡ ಪರ ವಕೀಲರ ತಂಡ, ಬೇಲ್‌‌ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಈವರೆಗೆ ಐವರಿಗೆ ಜಾಮೀನು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳಿಗೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. ಹತ್ಯೆ ಕೇಸ್‌ನ ಎ8 ರವಿಶಂಕರ್ ಹಾಗೂ ಎ13 ದೀಪಕ್‌ಗೆ ಬೇಲ್ ನೀಡಿದ ಕೋರ್ಟ್‌ ಆದೇಶಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈವರೆಗೆ ಐವರಿಗೆ ಜಾಮೀನು ಸಿಕ್ಕಿದ್ದು, ಇದೀಗ ಮತ್ತಿಬ್ಬರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಮರ್ಡರ್‌ ಕೇಸ್‌ನ ಎ8 ಆಗಿರುವ ರವಿಶಂಕರ್ ಕ್ಯಾಬ್‌ವೊಂದರ ಚಾಲಕನಾಗಿರುವ ಹಿನ್ನೆಲೆ ಚಿತ್ರದುರ್ಗದಿಂದ ಬೆಂಗಳೂರಿಗೆ ಸ್ವಾಮಿಯನ್ನು ಕರೆತಂದಿದ್ದ ಅಷ್ಟೇ ಎಂದು ವಕೀಲರು ವಾದ ಮಾಡಿದ್ದು, ಹತ್ಯೆ ಕೇಸಲ್ಲಿ ರವಿಶಂಕರ್ ಒಳಸಂಚು ಮೇಲ್ನೋಟಕ್ಕೆ ಕಾಣದ ಹಿನ್ನೆಲೆ ಬೇಲ್ ನೀಡುವಂತ ಮನವಿ ಕೂಡ ಮಾಡಲಾಗಿತ್ತು.

ಮತ್ತೊಂದೆಡೆ ಎ13 ದೀಪಕ್ ವಿರುದ್ಧ ಸಾಕ್ಷ್ಯ ನಾಶ ಮಾಡಿರುವ ಆರೋಪ ಕೇಳಿ ಬಂದಿತ್ತು. ಆದರೆ ದೀಪಕ್‌‌ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದಿರುವ ವಕೀಲರು, ಜಾಮೀನು ಕೋರಿ ಮನವಿ ಮಾಡಿದ್ದು, ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಕೂಡ ಆಕ್ಷೇಪ ವ್ಯಕ್ತಪಡಿಸದ ಹಿನ್ನೆಲೆ ಜಾಮೀನು ಸಿಕ್ಕಿದ್ದು, ಇಬ್ಬರಿಗೂ ರಿಲೀಫ್ ಸಿಕ್ಕಿದೆ. ಇಬ್ಬರು ಆರೋಪಿಗಳ ವಿರುದ್ಧವೂ ಜಾಮೀನು ನೀಡಬಹುದಾದ ಪ್ರಕರಣ ಹಿನ್ನೆಲೆ ನ್ಯಾಯಾಲಯ ಬೇಲ್ ನೀಡಿದೆ. ಜಾಮೀನು ಪ್ರಕ್ರಿಯೆ ಮುಗಿದ ಬಳಿಕ ಇಬ್ಬರೂ ರಿಲೀಸ್ ಆಗಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಗದಗ

Darshan Fans : ದರ್ಶನ ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ

Darshan Fans : ದರ್ಶನ ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ ಎಂದು ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

VISTARANEWS.COM


on

By

darshan fans Writer Nadoja G.R. Channabasappa
ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ
Koo

ಗದಗ: ಚಿತ್ರನಟ ದರ್ಶನ ಅಭಿಮಾನಿಗಳಿಂದಾಗಿ (Darshan Fans) ಶ್ರವಣ ಶಕ್ತಿ ಕಳೆದುಕೊಂಡೆ ಎಂದು ಹಿರಿಯ ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು. ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಮರಣವೇ ಮಹಾನವಮಿ ಆಚರಣೆ ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

Darshan Fans Writer Nadoja G.R. Channabasappa
Darshan Fans Writer Nadoja G.R. Channabasappa

ಇಂದು ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಚಲಿತದಲ್ಲಿರುವ ಚಿತ್ರನಟ ದರ್ಶನರ ಜನ್ಮದಿನದ ಸಂದರ್ಭದಲ್ಲಿ ಬೆಂಗಳೂರಿನ ನಿವಾಸದ ಪಕ್ಕದಲ್ಲಿ ಸೇರಿದ್ದ ದರ್ಶನ ಅಭಿಮಾನಿಗಳು ಸಿಡಿಸಿದ ಭಾರಿ ಸಿಡಿಮದ್ದಿನ ಸದ್ದಿನಿಂದ ನಾನು ನನ್ನ ಶ್ರವಣ ಶಕ್ತಿಯನ್ನು ಕಳೆದುಕೊಳ್ಳಬೇಕಾಯಿತು ಎಂದು ಅಸಮಾಧಾನ ಹೊರಹಾಕಿದರು. 97ರ ವಯಸ್ಸಿನಲ್ಲೂ ಸ್ಪಷ್ಟವಾಗಿ ಮಾತನಾಡಬಲ್ಲೆ, ನಡೆದಾಡಬಲ್ಲೆನು. ಆದರೆ, ಇಂದಿನ ಕಾರ್ಯಕ್ರಮದಲ್ಲಿ ತಾವೆಲ್ಲರೂ ಮಾತನಾಡುವ ಪದಗಳನ್ನು ಕೇಳಿಸಿಕೊಳ್ಳಲಾಗದಷ್ಟು ಶ್ರವಣದೋಷವನ್ನು ಅನುಭವಿಸುತ್ತಿದ್ದೇನೆ ಎಂದರು.

Continue Reading

ಬೆಂಗಳೂರು

Kiccha Sudeep: ಬಿಗ್‌ಬಾಸ್‌ಗೆ ಕಿಚ್ಚ ಸುದೀಪ್ ವಿದಾಯ; ಇದೊಂದೆ ರೀಸನ್‌ಗೆ ಹೊರಬಂದ್ರಾ ಬಾದ್‌ ಶಾ

Kiccha Sudeep: ಕಿಚ್ಚ ಸುದೀಪ್‌ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳುತ್ತಿದ್ದಾರೆ. ಬಿಗ್‌ಬಾಗ್‌ ಸೀಸನ್‌ 11 ನನ್ನ ಕಡೆಯ ನಿರೂಪಣೆ ಆಗಿದೆ ಎಂದು ಎಕ್ಸ್‌ ಮಾಡಿದ್ದಾರೆ. ಇಷ್ಟಕ್ಕೂ ಸುದೀಪ್‌ ಹೀಗೆ ಹೇಳಲು ಅಸಲಿ ಕಾರಣ ಏನು. ಅದ್ಯಾವ ರೀಸನ್‌ಗೆ ಬಿಗ್‌ಬಾಸ್‌ ಮನೆಯಿಂದ ಹೊರ ಬರುತ್ತಿದ್ದಾರೆ?

VISTARANEWS.COM


on

By

This will be my last season as a host for BBK By Kichcha Sudeepa
Koo

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗುವ ಮೊದಲೇ ಕಿಚ್ಚ ಸುದೀಪ್‌ (Kiccha Sudeep) ಈ ಬಾರಿ ನಿರೂಪಣೆ ಮಾಡುವುದಿಲ್ಲ ಎನ್ನಲಾಗಿತ್ತು. ಆದರೆ ವಾಪಸ್‌ ಅವರ ಸಾರಥ್ಯದಲ್ಲೇ ಬಿಗ್‌ ಬಾಸ್‌ ಸೀಸನ್‌ 11 ಅದ್ಧೂರಿಯಾಗಿ ಆರಂಭಗೊಂಡಿತ್ತು. ಆದರೆ ಇದೇ ಬಿಗ್‌ಬಾಗ್‌ ವೀಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಸುದೀಪ್‌ ಶಾಕ್‌ ಕೊಟ್ಟಿದ್ದಾರೆ. ಬಿಗ್​ಬಾಸ್​ಗೆ ಬಾದ್ ಶಾ ಕಿಚ್ಚ ಸುದೀಪ್ ವಿದಾಯ ಹೇಳುತ್ತಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಕನ್ನಡ ಕಿರುತೆರೆಯ ಬಿಗೆಸ್ಟ್‌ ರಿಯಾಲಿಟಿ ಶೋ ಬಿಗ್‌ಬಾಸ್ 11ನೇ ಸೀಸನ್‌ಗೆ (Bigg Boss Kannada) ಕಿಕ್ ಸ್ಟಾರ್ಟ್ ಸಿಕ್ಕಿದೆ. ಕನ್ನಡ ಟೆಲಿವಿಷನ್ ಲೋಕದಲ್ಲಿ ದೊಡ್ಮನೆಯ ಕಲರವ ಶುರುವಾಗಿದೆ. ಭಿನ್ನ -ವಿಭಿನ್ನ ಹದಿನೇಳು ಸ್ಪರ್ಧಿಗಳು ಈ ಬಾರಿಯ ಕನ್ನಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಗೇಮ್‌ ಆಡ್ತಿದ್ದಾರೆ. ಇಷ್ಟು ದಿನದಿಂದ ಒಂದು ಲೆಕ್ಕ ಈಗಿನಿಂದ ಇನ್ನೊಂದು ಲೆಕ್ಕವನ್ನು ಬಿಗ್ ಬಾಸ್ ಶುರುಮಾಡಿದ್ದು, ಸ್ವರ್ಗ- ನರಕದ ಆಟವಾಡುತ್ತಿರುವಾಗಲೇ ಕಿಚ್ಚ ಸುದೀಪ್‌ ಶಾಕ್‌ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಬಿಗ್‌ ಬಾಸ್‌ 11 ನನ್ನ ಕೊನೆಯ ಸೀಸನ್‌ ಎಂದು ಹೇಳಿದ್ದಾರೆ.

ಬಿಗ್‌ಬಾಸ್‌ ಸೀಸನ್‌ 11ಕ್ಕೂ ಉತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು, ಈ ಕಾರ್ಯಕ್ರಮಕ್ಕೆ ಹಾಗೂ ನನಗೆ ತೋರಿದ ಪ್ರೀತಿಗೆ ಇದು ಸಾಕ್ಷಿಯಾಗಿದೆ. ಒಟ್ಟಿಗೆ 10 + 1 ಸೀಸನ್‌ ಸೇರಿ 11 ವರ್ಷಗಳ ಉತ್ತಮ ಪ್ರಯಾಣವಾಗಿದೆ. ಬಿಗ್‌ಬಾಸ್‌ನ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ಈ ನಿರ್ಧಾರವನ್ನು ಕಲರ್ಸ್‌ ಸಂಸ್ಥೆ ಮತ್ತು ಇಷ್ಟು ವರ್ಷಗಳು ಬಿಗ್‌ಬಾಸ್‌ನನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ. ಈ ಸೀಸನ್‌ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಸಹ ನಿಮ್ಮೆಲ್ಲರನ್ನೂ ಅತ್ಯುತ್ತಮವಾಗಿ ರಂಜಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಸುದೀಪ್ ಬಿಗ್ ಬಾಸ್ ತೊರೆಯುತ್ತಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸುದೀಪ್‌ ಟ್ವೀಟ್‌ ಮಾಡಿರುವುದು ಎಲ್ಲೆಡೆ ವೈರಲ್‌ ಆಗಿದೆ. ಹಿಂದೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚ ಸುದೀಪ್‌ ಬಿಗ್‌ಬಾಗ್‌ ಕಾರ್ಯಕ್ರಮದಿಂದ ಹೊರ ಬರುತ್ತಾರೆ ಎನ್ನಲಾಗಿತ್ತು. ಅವರ ಜಾಗಕ್ಕೆ ನಟ ರಮೇಶ್ ಅರವಿಂದ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಬ್ಬರಲ್ಲಿ ಒಬ್ಬರು ಹೋಸ್ಟ್‌ ಮಾಡಲಿದ್ದಾರೆ ಎನ್ನಲಾಗಿತ್ತು. ರಮೇಶ್‌ ಅರವಿಂದ ವೀಕೆಂಡ್ ವಿತ್ ರಮೇಶ್ ಮತ್ತು ಕೋಟ್ಯಾಧಿಪತಿ, ಮಹಾನಟಿ ಶೋ ಮೂಲಕ ವೀಕ್ಷಕರನ್ನು ತಲುಪಿದ್ದರು.

Continue Reading

ಬೆಂಗಳೂರು

Actor Darshan : ನಟ ದರ್ಶನ್‌ಗೆ ಬಿಟ್ಟು ಬಿಡದೆ ಕಾಡುತ್ತಿದೆ ಬೆನ್ನು ನೋವು; ನಾಳೆ ಆರು ಮಂದಿಯ ಬೇಲ್‌ ಭವಿಷ್ಯ

Actor Darshan : ನಟ ದರ್ಶನ್‌ಗೆ ಬಿಟ್ಟು ಬಿಡದೆ ಬೆನ್ನು ನೋವು ಕಾಡುತ್ತಿದೆ. ಮತ್ತೊಂದು ಕಡೆ ನಾಳೆ ಸೋಮವಾರ ಆರು ಮಂದಿಯ ಬೇಲ್‌ ಭವಿಷ್ಯ ನಿರ್ಧಾರವಾಗಲಿದೆ.

VISTARANEWS.COM


on

By

Actor Darshan suffers from back pain
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy case) ಬಳ್ಳಾರಿ ಜೈಲಲ್ಲಿರೋ ನಟ ದರ್ಶನ್‌ಗೆ (Actor Darshan) ಬಿಟ್ಟು ಬಿಡದೆ ಬೆನ್ನು ನೋವು ಕಾಡುತ್ತಿದೆ ಎನ್ನಲಾಗಿದೆ. ಬೆನ್ನು ನೋವಿಗಾಗಿ ಬಿಮ್ಸ್ ಆಸ್ಪತ್ರೆ ವೈದ್ಯರಿಂದ ತಪಾಸಣೆ ನಡೆದಿದ್ದು, ಚಿಕಿತ್ಸೆಗೆ ಸೂಚನೆ ನೀಡಲಾಗಿದೆ. ಹೀಗಿದ್ದರೂ ಚಿಕಿತ್ಸೆಗೆ ಒಪ್ಪದೆ ನಟ ದರ್ಶನ್ ನೋವಿನಲ್ಲೇ ಇದ್ದಾನೆ. ಎಮ್‌ಆರ್‌ಐ ಸ್ಕ್ಯಾನ್‌, ಸಿಟಿ ಸ್ಕ್ಯಾನೂ ಯಾವುದು ಬೇಡ ,ನಾನೂ ಎಲ್ಲೂ ಹೋಗಲ್ಲ ಅಂತಿದ್ದರಂತೆ. ವೈದ್ಯರು ನಟ ದರ್ಶನ್‌ಗೆ ಆಪರೇಷನ್ ಮಾಡುವ ಅಗತ್ಯವಿದೆ ಎಂದಿದ್ದಾರೆ. ಆದರೂ ಒಪ್ಪದೆ ಚಿಕಿತ್ಸೆಗೆ ನಿರಾಕರಿಸುತ್ತಿದ್ದರಂತೆ.

ಇಷ್ಟು ಬೆನ್ನು ನೋವಿಗೆ ಯಾತನೆ ಅನುಭವಿಸಿದ್ದರೂ ಚಿಕಿತ್ಸೆ ಬೇಡ ಅಂತಿರೋದ್ಯಾಕೆ ಎಂದು ಜೈಲಾಧಿಕಾರಿಗಳು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಳ್ಳಾರಿ ಜೈಲಾಧಿಕಾರಿಗಳು ತಂದಿದ್ದಾರೆ. ಮುಂದಿನ ಬಾರಿ ಕುಟುಂಬಸ್ಥರು ಬಂದಾಗ ಚಿಕಿತ್ಸೆ ಬಗ್ಗೆ ಗಮನಕ್ಕೆ ತರಲು ಸೂಚನೆ ನೀಡಲಾಗಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಸಮಸ್ಯೆ ಬರದೆ ಎಚ್ಚರ ವಹಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನಾಳೆ ನಿರ್ಧಾರವಾಗಲಿದೆ ಆರು ಮಂದಿಯ ಭವಿಷ್ಯ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಆರು ಮಂದಿಯ ಜಾಮೀನು ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ. ಅ.14ರಂದು ಸಿಸಿಹೆಚ್ 57 ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ಮೂಡಿದೆ. ನಟ ದರ್ಶನ್‌ ಜಾಮೀನು ಭವಿಷ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

A2 ನಟ ದರ್ಶನ್, A1 ಪವಿತ್ರಾಗೌಡ, A8 ರವಿಶಂಕರ್, A11 ನಾಗರಾಜ್ ಹಾಗೂ A12 ಲಕ್ಷ್ಮಣ್, A13 ದೀಪಕ್ ಜಾಮೀನು ಭವಿಷ್ಯ ನಿರ್ಧರವಾಗಲಿದೆ. ಈಗಾಗಲೇ ಎಸ್‌ಪಿಪಿ ದೀಪಕ್ ಮತ್ತು ರವಿಶಂಕರ್‌ಗೆ ಜಾಮೀನು ನೀಡಬಹುದು ಎಂದಿದ್ದಾರೆ. ಆದರೆ ದರ್ಶನ್ ಸೇರಿ ನಾಲ್ವರ ಜಾಮೀನಿಗೆ ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೊಲೆಯಲ್ಲಿ ಭಾಗಿಯಾದ ಸಾಕ್ಷ್ಯಗಳ ಬಗ್ಗೆ ಸಂಪೂರ್ಣ ಉಲ್ಲೇಖಿಸಲಾಗಿದೆ. ದರ್ಶನ್ ಪರವಾಗಿ ವಕಾಲತ್ತು ವಹಿಸಿರುವ ಹಿರಿಯ ವಕೀಲ‌ ಸಿವಿ ನಾಗೇಶ್‌ರಿಂದ ಸಾಕ್ಷ್ಯಗಳೇ ಇಲ್ಲವೆಂಬಂತೆ ವಾದಿಸಿದ್ದಾರೆ. ಪವಿತ್ರಾಗೌಡ ಪರವಾಗಿ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು. ಇತ್ತ ಕೋರ್ಟ್ ತೀರ್ಪು, ಅತ್ತ ಜೈಲಲ್ಲಿ ಆರೋಪಿಗಳಿಗೆ ಟೆನ್ಷನ್‌ ಶುರುವಾಗಿದೆ.

Continue Reading
Advertisement
Gosavi samaj lathicharged Sri Ram Sene calls for bandh in Lakshmeshwara town on October 19
ಗದಗ10 ಗಂಟೆಗಳು ago

Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

A man killed his wife and her lover then committed suicide
ಬೆಂಗಳೂರು12 ಗಂಟೆಗಳು ago

Murder Case: ಪ್ರಿಯಕರ ಜತೆ ಏಕಾಂತದಲ್ಲಿ ಇರುವಾಗಲೆ ಪತ್ನಿ ಲಾಕ್‌; ಇಬ್ಬರನ್ನು ಕೊಂದು ಪತಿ ಸೂಸೈಡ್‌

Parvati Nair to play dual role in suspense thriller un Paravail Tamil film
ಸಿನಿಮಾ13 ಗಂಟೆಗಳು ago

Parvati Nair : ಸಸ್ಪೆನ್ಸ್ ಥ್ರಿಲ್ಲರ್‌ ʻಊಣ್‌ ಪರವೈಲ್‌ʼ ತಮಿಳು ಚಿತ್ರದಲ್ಲಿ ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಮಿಂಚಿಂಗ್‌

ಬೆಂಗಳೂರು15 ಗಂಟೆಗಳು ago

Bengaluru Airport : ಬೆಂಗಳೂರು ಏರ್‌ಪೋರ್ಟ್‌ನ 17.7 ಎಕರೆಗಳಲ್ಲಿ ತಲೆ ಎತ್ತಲಿದೆ ಬಿಸಿನೆಸ್‌ ಪಾರ್ಕ್‌

Jio Cloud PC to turn home TV into computer
ಹೊಸ ಸುದ್ದಿ15 ಗಂಟೆಗಳು ago

Jio Cloud PC : ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲಿದೆ ‘ಜಿಯೋ ಕ್ಲೌಡ್ ಪಿಸಿ’

Dina Bhavishya
ಭವಿಷ್ಯ16 ಗಂಟೆಗಳು ago

Dina Bhavishya : ಕುಟುಂಬದ ಸದಸ್ಯರಿಂದ ರಹಸ್ಯ ಸುದ್ದಿಯೊಂದು ಈ ರಾಶಿಯವರಿಗೆ ಅಚ್ಚರಿ ತರಲಿದೆ

dina bhavishya
ಭವಿಷ್ಯ2 ದಿನಗಳು ago

Dina Bhavishya : ಬಹುದಿನಗಳ ಕನಸು ನನಸಾಗುವ ಸಮಯವಿದು; ಹೊಸ ಅವಕಾಶಗಳು ಗರಿಗೆದರಲಿವೆ

karnataka Rain
ಮಳೆ2 ದಿನಗಳು ago

Karnataka Rain : ನಿರಂತರ ಮಳೆಗೆ ಬೆಂಗಳೂರಿಗರು ಕಂಗಾಲು; ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Actor Darshan
ಬೆಂಗಳೂರು2 ದಿನಗಳು ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬೇಲ್‌ ಕನಸು ನಚ್ಚು ನೂರು; ನಟ ದರ್ಶನ್‌ ಜಾಮೀನು ನಿರಾಕರಣೆಗೆ ಕೋರ್ಟ್‌ ಕೊಟ್ಟ 9 ಕಾರಣಗಳು

Karnataka Rain
ಮಳೆ3 ದಿನಗಳು ago

Karnataka Rain : ಬೆಂಗಳೂರಿನಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ; ಧರೆಗುರುಳಿದ ಬೃಹತ್‌ ಮರ, ಕಾರು ಜಖಂ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌