Kannada New Movie: ಸೆಟ್ಟೇರಿತು ’ನಿದ್ರಾದೇವಿ Next Door; : ಹೊಸ ಚಿತ್ರಕ್ಕೆ ಕ್ರೇಜಿಸ್ಟಾರ್ ಕ್ಲಾಪ್! - Vistara News

ಸ್ಯಾಂಡಲ್ ವುಡ್

Kannada New Movie: ಸೆಟ್ಟೇರಿತು ’ನಿದ್ರಾದೇವಿ Next Door; : ಹೊಸ ಚಿತ್ರಕ್ಕೆ ಕ್ರೇಜಿಸ್ಟಾರ್ ಕ್ಲಾಪ್!

Kannada New Movie: ಕ್ರೇಜಿಸ್ಟಾರ್ ರವಿಚಂದ್ರನ್ ಪ್ರವೀರ್ ಶೆಟ್ಟಿಯ ಹೊಸ ಪ್ರಯತ್ನದ ’ನಿದ್ರಾದೇವಿ Next Door’ ಸಾಥ್ ಕೊಟ್ಟರು. ಚಿತ್ರಕ್ಕೆ ಕ್ಲಾಪ್ ಮಾಡಿದ ಕನಸುಗಾರ ಇಡೀ ತಂಡಕ್ಕೆ ಶುಭ ಹಾರೈಸಿದರು.

VISTARANEWS.COM


on

Nidra Devi next Door
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: `ಸೈರನ್’ ಸಿನಿಮಾ (Kannada New Movie) ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಪ್ರವೀರ್ ಶೆಟ್ಟಿ ಈಗ ಮತ್ತೊಂದು ವಿಭಿನ್ನ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಅದರ ಮೊದಲ ಭಾಗವೆಂಬಂತೆ ಫೆ.26ರಂದು ಬೆಂಗಳೂರಿನ ಬನಶಂಕರಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪ್ರವೀರ್ ಶೆಟ್ಟಿಯ ಹೊಸ ಪ್ರಯತ್ನದ ’ನಿದ್ರಾದೇವಿ Next Door’ ಸಾಥ್ ಕೊಟ್ಟರು. ಚಿತ್ರಕ್ಕೆ ಕ್ಲಾಪ್ ಮಾಡಿದ ಕನಸುಗಾರ ಇಡೀ ತಂಡಕ್ಕೆ ಶುಭ ಹಾರೈಸಿದರು.

ಯುವ ಪ್ರತಿಭೆ ಸುರಾಗ್ ಸಾಗರ್ ’ನಿದ್ರಾದೇವಿ Next Door’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರವೀರ್ ಶೆಟ್ಟಿ ಜತೆಗೆ ಶೈನ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ರಿಷಿಕಾ ನಾಯಕ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮುಹೂರ್ತ ಸಮಾರಂಭದ ಬಳಿಕ ಮಾತನಾಡಿದ ನಿರ್ದೇಶಕ ʻʻಸುರಾಗ್ ಸಾಗರ್, ರವಿ ಸರ್ ನಮ್ಮ ಸಿನಿಮಾಗೆ ಕ್ಲಾಪ್ ಮಾಡಿದ್ದು ಖುಷಿ ಕೊಟ್ಟಿದೆ. ಅವರು ವಿಭಿನ್ನ ಟೈಟಲ್ ಮೂಲಕ ಬರುತ್ತಾರೆ. ನಮ್ಮ ಟೈಟಲ್ ಕೂಡ ವಿಭಿನ್ನವಾಗಿದೆ. ಇದು ಕಾಕತಾಳೀಯ. ಇಬ್ಬರು ನಿದ್ದೆ ಇಲ್ಲದರ ಜರ್ನಿ. ಅವ್ರಿಗೆ ಯಾಕೆ ನಿದ್ದೆ ಬರಲ್ಲ. ಇದಕ್ಕೆ ಪರಿಹಾರ ಏನು. ಅದರೊಳಗೆ ಅವರು ಕಂಡುಕೊಳ್ಳುವ ಲವ್ ಸ್ಟೋರಿ. ಇದಕ್ಕೆಲ್ಲಾ ಸಿನಿಮಾ ನೋಡಬೇಕುʼʼʼ ಎಂದರು.

ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ, ʻʻಪ್ರವೀಣ್ ಶೆಟ್ಟಿ ಅವರಿಗೋಸ್ಕರ್ ಈ ಪ್ರಾಜೆಕ್ಟ್‌ಗೆ ಹಣ ಹಾಕುತ್ತಿದ್ದೇನೆ. ಕಥೆ ಬಹಳ ಚೆನ್ನಾಗಿದೆ. ನನಗೆ ಸುರಾಗ್ ಕಥೆ ಹೇಳಿದಾಗ ಫಸ್ಟ್ ಇಂಪ್ರೆಷನ್ ನಲ್ಲಿಯೇ ಇಷ್ಟವಾಯ್ತು. ಪ್ರತಿಯೊಬ್ಬರು ಲೈಫ್ ನಲ್ಲಿ ನಡೆಯುವ ಕೆಲ ಘಟನೆಗಳು ಜೀವನದಲ್ಲಿವೆ. ಕಾಮಿಡಿ ಜೊತೆಗೆ ಒಂದು ಸಂದೇಶ ಚಿತ್ರದಲ್ಲಿದೆʼʼ ಎಂದು ತಿಳಿಸಿದರು.

ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ, ʻʻನಿದ್ರೆ ಬರದಿರುವ ಹುಡುಗ ಏನೇನೂ ಕಷ್ಟಪಡುತ್ತಾನೆ. ಅದರ ಸುತ್ತ ನನ್ನ ಪಾತ್ರ ಸಾಗುತ್ತದೆ. ನನ್ನದು ಇಂಟ್ರೆಸ್ಟಿಂಗ್ ಪಾತ್ರ. ಈ ಹಿಂದಿನ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನ ಪಾತ್ರ. ಕಳೆದೊಂದು ತಿಂಗಳಿನಿಂದ ರಿಹರ್ಸಲ್ ಮಾಡುತ್ತಿದ್ದೇವೆʼʼ ಎಂದರು.

ನಾಯಕಿ ರಿಷಿಕಾ ನಾಯಕ್ ಮಾತನಾಡಿ, ʻʻಎರಡು ವರ್ಷದ ಹಿಂದೆಯೇ ನನಗೆ ನಿರ್ದೇಶಕರು ಸಿನಿಮಾದ ಕಥೆ ಹೇಳಿದ್ದರು. ಆಗ ಕ್ಯಾರಕ್ಟರ್ ಬೇರೆ ಇತ್ತು. ಈಗ ಕ್ಯಾರೆಕ್ಟರ್ ಬೇರೆ ಇದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆʼʼ ಎಂದು ತಿಳಿಸಿದರು.

ಯುರೋಪ್‌ನ ಪ್ರೇಗ್ ಫಿಲ್ಮ್ ಸ್ಕೂಲ್ನಲ್ಲಿ ನಿರ್ದೇಶಕ ಪಟು ಕಲಿತಿರುವ ಸುರಾಗ್ ಸಾಗರ್ ಎಂಟ್ರೋಪಿ ಕಿರುಚಿತ್ರದ ಮೂಲಕ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದೀಗ ಸುರಾಗ್ ’ನಿದ್ರಾದೇವಿ Next Door’ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುಧಾರಾಣಿ, ಶ್ರೀವತ್ಸ, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಗಳದಲ್ಲಿ ಇದ್ದಾರೆ.

ರಾಜು ಬೋನಗಾನಿ ಅವರ ರೋಡಿಯಂ ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ ಸೂರಂ ಮೂವೀಸ್ ಬ್ಯಾನರ್ನಡಿಯಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ ಮತ್ತು ನಕುಲ್ ಅಭ್ಯಂಕರ್ ಅವರ ಸಂಗೀತವಿದೆ. ಈ ತಿಂಗಳಾತ್ಯಂತಕ್ಕೆ ’ನಿದ್ರಾದೇವಿ Next Door’ ತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Shakhahaari Movie: ಒಟಿಟಿಗೆ ಎಂಟ್ರಿ ಕೊಡ್ತಿದೆ ʻಶಾಖಾಹಾರಿʼ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

Shakhahaari Movie: ರಂಗಾಯಣ ರಘು ನಟನೆಯ ʻಶಾಖಾಹಾರಿʼ ಸಿನಿಮಾ ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿದೆ. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾವ ಒಟಿಟಿಗೆ ಲಗ್ಗೆ ಇಡುತ್ತಿದೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Shakhahaari Movie In OTT amzon Prime
Koo

ಬೆಂಗಳೂರು: ರಂಗಾಯಣ ರಘು ನಟನೆಯ ʻಶಾಖಾಹಾರಿʼ ಸಿನಿಮಾ (Shakhahaari Movie) ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ನಿರ್ದೇಶಕ ಸಂದೀಪ್ ಸುಂಕದ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಸಿನಿರಸಿಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿರುವ ಶಾಖಾಹಾರಿ ರೋಚಕ ತಿರುವು, ಭಾವನಾತ್ಮಕ ಸಂಬಂಧ, ಪ್ರೀತಿ, ಸ್ನೇಹ, ನಂಬಿಕೆ ಇವೆಲ್ಲವುದರ ಬಗ್ಗೆ ಬಹಳ ಸೂಕ್ಷ್ಮವಾಗಿ ಪ್ರೇಕ್ಷಕರಿಗೆ ಮುಟ್ಟಿಸಿ ಎಲ್ಲಾ ರೀತಿಯ ರಸಾನುಭವ ನೀಡಿತ್ತು. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾವ ಒಟಿಟಿಗೆ ಲಗ್ಗೆ ಇಡುತ್ತಿದೆ. ಮೂಲಗಳ ಪ್ರಕಾರ ʻಶಾಖಾಹಾರಿʼ ಸಿನಿಮಾ (Shakhahaari Movie OTT) ಡಿಜಿಟಲ್‌ ರೈಟ್ಸ್‌ ಅಮೆಜಾನ್‌ ಪ್ರೈಂ (Amazon Prime) ಪಾಲಾಗಿದೆ. ಮುಂದಿನ ವಾರ ಒಟಿಟಿಗೆ ಕಾಲಿಡಿದೆ ಎಂದು ವರದಿಯಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ಬಲು ರೋಚಕವಾದ ಕಥೆ ‘ಶಾಖಾಹಾರಿ’ . ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ ಭಟ್‌ ರಂಗಾಯಣ ರಘು ಒಂದು ವೆಜಿಟೇರಿಯನ್ ಹೋಟೆಲ್ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಕಾಹಾರಿ ಹೋಟೆಲ್‌ನ ಇಮೇಜ್ ‘ಶಾಖಾಹಾರಿ’ಯಾಗಿ ಬದಲಾಗುತ್ತದೆ. ಇಂಥ ಒಗಟಿನಂತಹ ಟೈಟಲ್‌ ಹಿಂದಿರುವ ಕಥೆ ಏನು ಎಂಬುದು ಸಿನಿಮಾದ ತಿರುಳು.

ಇದನ್ನೂ ಓದಿ: Shakhahaari Movie: ಬೆಂಗಳೂರಿನಲ್ಲೇ ಕನ್ನಡದ “ಶಾಖಾಹಾರಿʼಯನ್ನು ಕೊಂದ ಮಲಯಾಳಂ ಸಿನಿಮಾ! ಕನ್ನಡಿಗರಿಗೇ ಸವಾಲ್‌!

ಶಾಖಾಹಾರಿ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ. ಶಶಾಂಕ್ ನಾರಾಯಣ್ ಸಂಕಲನ, ಮಯೂರ್ ಅಂಬೇಕಲ್ಲು ಸಂಗೀತ ಚಿತ್ರಕ್ಕೆ ಪುಷ್ಟಿ ನೀಡಿದೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ.ನ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Dhanya Ramkumar: ಕಿಶನ್ ಬಿಳಗಲಿ ಜತೆ ಡಾ. ರಾಜ್​ಕುಮಾರ್ ಮೊಮ್ಮಗಳ ಡ್ಯೂಯೆಟ್‌!

Dhanya Ramkumar: ಇದಕ್ಕೂ ಮುಂಚೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಡ್ಯಾನ್ಸರ್‌ ಕಿಶನ್‌ ಬಿಳಗಲಿ (Kishen Bilagali) ಸ್ಯಾಂಡಲ್‌ವುಡ್ ‘ಟೋಬಿ’ ಸುಂದರಿ ಚೈತ್ರಾ ಆಚಾರ್ (Chaithra J Achar) ಜತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದರು. ಕಿಶನ್‌ ಬಿಳಗಲಿ ಈ ರೀತಿ ರೊಮ್ಯಾಂಟಿಕ್‌ ಹಾಡಿಗೆ ಸ್ಟೆಪ್ಸ್‌ ಹಾಕುವುದು ಹೊಸದೇನಲ್ಲ. ನಟಿ ನಮ್ರತಾ ಗೌಡ ಜತೆ ಈ ಹಿಂದೆ ಕೂಡ ಈ ರೀತಿ ನೃತ್ಯ ಮಾಡಿ ಪೋಸ್ಟ್‌ ಮಾಡಿದ್ದರು.ಇದೀಗ ಧನ್ಯಾ ರಾಮ್‌ಕುಮಾರ್ ತಾತನಿಗೆ ವಿಭಿನ್ನವಾಗಿ ವಿಶ್‌ ಮಾಡಿ ಟ್ರಿಬ್ಯೂಟ್ ನೀಡಿದ್ದಾರೆ.

VISTARANEWS.COM


on

Dhanya Ramkumar reels with Kishen Bilagali
Koo

ಬೆಂಗಳೂರು: ಡಾ. ರಾಜ್​ಕುಮಾರ್ ಅವರ ಜನ್ಮದಿನ (Rajkumar Birth Anniversary) ಹಿನ್ನೆಲೆಯಲ್ಲಿ ಅದೆಷ್ಟೋ ಅಭಿಮಾನಿಗಳು ಅಣ್ಣಾವ್ರ ಸಿನಿಮಾ ಹಾಡಿಗೆ ರೀಲ್ಸ್‌ ಮಾಡಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಧನ್ಯಾ ರಾಮ್‌ಕುಮಾರ್ ತಾತನಿಗೆ ವಿಭಿನ್ನವಾಗಿ ವಿಶ್‌ ಮಾಡಿ ಟ್ರಿಬ್ಯೂಟ್ ನೀಡಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ಕಿಶನ್ ಬಿಳಗಲಿ (Kishen Bilagali) ಜತೆ ‘ರಾಜ ನನ್ನ ರಾಜ’ ಚಿತ್ರದ ಸೂಪರ್ ಹಿಟ್ ಗೀತೆಗೆ ಹೆಜ್ಜೆ ಹಾಕಿದ್ದಾರೆ.

ಇತ್ತೀಚಿಗೆ ನಟಿಯರ ಜತೆ ಕಿಶನ್ ಬಿಳಗಲಿ ಡ್ಯಾನ್ಸ್ ವಿಡಿಯೋಗಳು ಬಹಳ ಸದ್ದು ಮಾಡುತ್ತಿವೆ. ಆ ಲಿಸ್ಟ್‌ಗೆ ಇದು ಸೇರಿಕೊಂಡಿದೆ. ಚಿಕ್ಕಮಗಳೂರಿನ ಕಿಶನ್ ‘ಡ್ಯಾನ್ಸ್ ದಿವಾನೆ’ ಹಿಂದಿ ರಿಯಾಲಿಟಿ ಶೋ ವಿನ್ನರ್ ಸಹ ಆಗಿದ್ದರು. ಇದೀಗ ನಟಿ ಧನ್ಯಾ ರಾಮ್‌ಕುಮಾರ್ ಜತೆ ‘ರಾಜ ನನ್ನ ರಾಜ’ ಚಿತ್ರದ ಸೂಪರ್ ಹಿಟ್ ಗೀತೆ ʻನಿನದೇ ನೆನಪು ದಿನವೂ ಮನದಲ್ಲಿʼ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ರೆಟ್ರೋ ಲುಕ್‌ನಲ್ಲಿ ಇಬ್ಬರೂ ಮಿಂಚಿದ್ದಾರೆ. ಧನ್ಯಾ ಸೀರೆಯಲ್ಲಿ ಕಂಗೊಳಿಸಿದರೆ ಕಿಶನ್ ಬೆಲ್‌ಬಾಟಂ ಪ್ಯಾಂಟ್, ಪೋಲ್ಕಾ ಡಾಟ್ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್ ಹಾಗೂ ಆರತಿ ನಟನೆಯ ‘ರಾಜ ನನ್ನ ರಾಜ’ ಸಿನಿಮಾ 1976ರಲ್ಲಿ ತೆರೆಕಂಡಿತ್ತು.

ಇದನ್ನೂ ಓದಿ: Rajkumar Birth Anniversary: ಆತ್ಮಹತ್ಯೆಗೆ ಯತ್ನಿಸಿ ಅಡ್ಮಿಟ್‌ ಆದಾಗ ಅಣ್ಣಾವ್ರು ಆಶೀರ್ವಾದ ಮಾಡಿದ್ದರೆಂದ ಜಗ್ಗೇಶ್‌!

ಇದಕ್ಕೂ ಮುಂಚೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಡ್ಯಾನ್ಸರ್‌ ಕಿಶನ್‌ ಬಿಳಗಲಿ (Kishen Bilagali) ಸ್ಯಾಂಡಲ್‌ವುಡ್ ‘ಟೋಬಿ’ ಸುಂದರಿ ಚೈತ್ರಾ ಆಚಾರ್ (Chaithra J Achar) ಜತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದರು. ಕಿಶನ್‌ ಬಿಳಗಲಿ ಈ ರೀತಿ ರೊಮ್ಯಾಂಟಿಕ್‌ ಹಾಡಿಗೆ ಸ್ಟೆಪ್ಸ್‌ ಹಾಕುವುದು ಹೊಸದೇನಲ್ಲ. ನಟಿ ನಮ್ರತಾ ಗೌಡ ಜತೆ ಈ ಹಿಂದೆ ಕೂಡ ಈ ರೀತಿ ನೃತ್ಯ ಮಾಡಿ ಪೋಸ್ಟ್‌ ಮಾಡಿದ್ದರು.

ʻನಿನ್ನ ಸನಿಹಕೆʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು ಧನ್ಯಾ. ನಿನ್ನ ಸನಿಹಕೆ ಬಳಿಕ ಧನ್ಯಾ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಹೈಡ್ & ಸೀಕ್’ ಸಿನಿಮಾಗೆ ಅನೂಪ್ ರೇವಣ್ಣ ಜತೆಗೆ ಧನ್ಯಾ ರಾಮ್‌ಕುಮಾರ್ ನಟಿಸಿದ್ದಾರೆ. ಸಿನಿಮಾ ಆಸಕ್ತಿ ಬಗ್ಗೆ ನಟಿ ಮಾಧ್ಯಮವೊಂದರಲ್ಲಿ ಮಾತನಾಡಿ ʻʻನಮ್ಮ ಕುಟುಂಬದಲ್ಲಿ ನಟಿಯಾಗುತ್ತಿರುವ ಮೊದಲ ಹುಡುಗಿ ನಾನು. ಈ ಹಿಂದೆ ಪಿಆರ್‌ ಆಗಿ ಕೆಲಸ ಮಾಡಿದೆ. ಆಗ ಇದು ನನ್ನ ಫೀಲ್ಡ್‌ ಅಲ್ಲ ಎನ್ನಿಸಿತು. ನಾನು ನಟಿಯಾಗ್ತೀನಿ ಅಂದಾಗ ನನ್ನ ಅಪ್ಪ, ಅಮ್ಮ ಇದರ ಬಗ್ಗೆ ಆಸಕ್ತಿ ತೋರಲಿಲ್ಲ. ಈಗ ಅವರಿಗೂ ಇಷ್ಟವಾಗಿದೆ. ನನಗೆ ನನ್ನ ಆಯ್ಕೆ ತಡವಾಯ್ತು ಎನ್ನಿಸುತ್ತಿಲ್ಲ. ಈ ಚಿತ್ರದ ಕಥೆ, ಪಾತ್ರ ನನಗೆ ಇಷ್ಟವಾದ ಕಾರಣ ಒಪ್ಪಿದೆ’ ಎಂದಿದ್ದರು.

Continue Reading

ಸ್ಯಾಂಡಲ್ ವುಡ್

Rajkumar Birth Anniversary: ಆತ್ಮಹತ್ಯೆಗೆ ಯತ್ನಿಸಿ ಅಡ್ಮಿಟ್‌ ಆದಾಗ ಅಣ್ಣಾವ್ರು ಆಶೀರ್ವಾದ ಮಾಡಿದ್ದರೆಂದ ಜಗ್ಗೇಶ್‌!

Rajkumar Birth Anniversary: ತರ್ಲೆ ನನ್ಮಗ’ ಸಿನಿಮಾ ಮೂಲಕ ಜಗ್ಗೇಶ್‌ ಖ್ಯಾತಿ ಗಳಿಸಿದ್ದರು. 1994ರ ಸಮಯದಲ್ಲಿ ಅವರ ಸಿನಿಮಾಗಳು ಫ್ಲಾಪ್ ಆದವು. ಇದರಿಂದ ಬೇಸರಗೊಂಡ ಜಗ್ಗೇಶ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ಆ ವೇಳೆ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದು ಅಣ್ಣಾವ್ರು ಎಂದು ಹೇಳಿಕೊಂಡರು.ಈಗಾಗಲೇ ದೊಡ್ಮನೆ ಕುಟುಂಬ ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಗಳಲ್ಲಿರುವ ಡಾ. ರಾಜ್‌ ಪ್ರತಿಮೆಗಳಿಗೂ ಇಂದು ವಿಶೇಷ ಅಲಂಕಾರ ಆಗುತ್ತಿದೆ. ಜತೆಗೆ ಅನ್ನ ಸಂತರ್ಪಣೆಯಂಥ ಕಾರ್ಯಕ್ರಮಗಳು ನಡೆಯಲಿವೆ.

VISTARANEWS.COM


on

Rajkumar Birth Anniversary ​​Jaggesh said that Rajkumar blessed him when he was admitted due to suicide attempt
Koo

ಬೆಂಗಳೂರು: ಡಾ. ರಾಜ್​ಕುಮಾರ್ ಅವರ ಜನ್ಮದಿನ (Rajkumar Birth Anniversary) ಹಿನ್ನೆಲೆಯಲ್ಲಿ ನವರಸ ನಾಯಕ ಜಗ್ಗೇಶ್ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ಡಾ. ರಾಜ್​ಕುಮಾರ್ (Dr Rajkumar) ಹಾಗೂ ಜಗ್ಗೇಶ್ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯ ಇದೆ. ಅದೇ ರೀತಿ ಪುನೀತ್‌ ಜತೆಗೂ ಇದೆ. ಈ ಸಂದರ್ಭದಲ್ಲಿ ಜಗ್ಗೇಶ್‌ ಅವರು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು.

‘ತರ್ಲೆ ನನ್ಮಗ’ ಸಿನಿಮಾ ಮೂಲಕ ಜಗ್ಗೇಶ್‌ ಖ್ಯಾತಿ ಗಳಿಸಿದ್ದರು. 1994ರ ಸಮಯದಲ್ಲಿ ಅವರ ಸಿನಿಮಾಗಳು ಫ್ಲಾಪ್ ಆದವು. ಇದರಿಂದ ಬೇಸರಗೊಂಡ ಜಗ್ಗೇಶ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ಆ ವೇಳೆ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದು ಅಣ್ಣಾವ್ರು ಎಂದು ಹೇಳಿಕೊಂಡರು.

ಜಗ್ಗೇಶ್‌ ಮಾತನಾಡಿ ʻʻನಮ್ಮ ತಂದೆ ಹಾಗೂ ರಾಜ್ ಕುಮಾರ್ ಅವರ ಮೂಗು ಸೇಮ್ ಇದೆ. ನನಗೆ ರಾಜಣ್ಣ ಅಂದ್ರೆ ಪಂಚ ಪ್ರಾಣ. ನಾನು ಅವರಲ್ಲಿ ಕಂಡಿದ್ದು ಏನಂದ್ರೆ ತಂದೆಯ ವಾತ್ಸಲ್ಯ. ನಾನು ಹೊಸದಾಗಿ ಮನೆ ಕಟ್ಟಿದೀನಿ ಬರ್ಬೇಕು ಅಂದಾಗ, ಸುಮಾರು 11 ಗಂಟೆಗೆ ಬಂದು ಆಶೀರ್ವದಿಸಿದ್ರು. ಮಧ್ಯಾಹ್ನ 3 ಗಂಟೆವರೆಗೂ ಕೂತು ಮಾತನಾಡಿದ್ರು. ಅನೇಕ ನೆನಪುಗಳು, ಒಡನಾಟ ಇವೆʼ ಎಂದರು.

ಇದನ್ನೂ ಓದಿ: Rajkumar Birth Anniversary: ವರನಟ ಡಾ. ರಾಜ್​ಕುಮಾರ್ ಅವರ ಟಾಪ್‌ 10 ಸಿನಿಮಾಗಳಿವು!

ʻʻ94ನೇ ಇಸವಿಯಲ್ಲಿ ನನ್ನ ಸಿನಿಮಾಗಳು ಫ್ಲಾಪ್ ಆದ ಸಮಯದಲ್ಲಿ ನಾನು ಆತ್ಮಹತ್ಯೆ ಪ್ರಯತ್ನ ಮಾಡಿದ್ದೆ. ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ರು. ಅಣ್ಣಾವ್ರು ಬಂದು ತಲೆ ಮೇಲೆ ಕೈ ಇಟ್ಟು ಒಳ್ಳೇದು ಆಗ್ಲಿ ಎಂದು ಆಶೀರ್ವಾದ ಮಾಡಿದ್ದರು. ಯಾವುದೇ ಕಾರಣಕ್ಕೂ ಅತಿಯಾದ ಆಸೆ ಬೇಡ. ಜಗತ್ತನ್ನು ಮೆಚ್ಚಿಸಿ ಬದುಕೋಕೆ ಹೋಗ್ಬಾರ್ದು ಎಂದು ನನಗೆ ದೊಡ್ಡ ಮಾನಸಿಕ ಧೈರ್ಯ ಕೊಟ್ಟಿದ್ದು ರಾಜ್ ಕುಮಾರ್. ಅಣ್ಣಾವ್ರ ಆಶೀರ್ವಾದದಿಂದ ನನ್ನ ಸಿನಿಮಾಗಳು ಹಿಟ್ ಆದವು. ರಾಜ್ ಕುಮಾರ್ ಅವರ ಕಡೆಯ ಜರ್ನಿಯಲ್ಲಿ ನಾನಿದ್ದೆ. ಅವರ ಮೃತದೇಹದ ಜತೆಗೆ ನಾನು ಇಡೀ ದಿನ ಇದ್ದೆʼʼ ಎಂದರು.

ಇದನ್ನೂ ಓದಿ: PM Narendra Modi: “ಅಮೆರಿಕಕ್ಕೆ ಮೋದಿಯಂಥ ನಾಯಕ ಬೇಕು” ಜೆಪಿ ಮೋರ್ಗನ್‌ ಸಂಸ್ಥೆ ಸಿಇಒ ಜೇಮಿ ಶ್ಲಾಘನೆ

ಈಗಾಗಲೇ ದೊಡ್ಮನೆ ಕುಟುಂಬ ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಬದುಕಿದ್ದಾಗ ನೇತ್ರದಾನದ ಮೂಲಕ ಜಾಗೃತಿ ಮೂಡಿಸಿದ್ದ ರಾಜ್‌ಕುಮಾರ್‌, ತಮ್ಮ ನಿಧನದ ಬಳಿಕ ಕಣ್ಣುಗಳನ್ನು ದಾನ ಮಾಡಿದ್ದರು. ಈಗ ಪ್ರತಿ ವರ್ಷದಂತೆ, ಸಮಾಧಿ ಬಳಿ ನೇತ್ರದಾನ ನೋಂದಣಿ, ರಕ್ತದಾನ, ಅನ್ನದಾನದ ಕಾರ್ಯಗಳು ನಡೆಯಲಿವೆ. ಪುಣ್ಯಭೂಮಿಗೆ ಬರುವ ಅಭಿಮಾನಿಗಳಿಗೆ ಅಭಿಮಾನಿಗಳಿಂದಲೇ ಅನ್ನದಾನ ನೆರವೇರಲಿದೆ. ಅಷ್ಟೇ ಅಲ್ಲ ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಗಳಲ್ಲಿರುವ ಡಾ. ರಾಜ್‌ ಪ್ರತಿಮೆಗಳಿಗೂ ಇಂದು ವಿಶೇಷ ಅಲಂಕಾರ ಆಗುತ್ತಿದೆ. ಜತೆಗೆ ಅನ್ನ ಸಂತರ್ಪಣೆಯಂಥ ಕಾರ್ಯಕ್ರಮಗಳು ನಡೆಯಲಿವೆ.

Continue Reading

ಸಿನಿಮಾ

Harshika Poonacha: ಹಲ್ಲೆ ಪ್ರಕರಣ; ನ್ಯಾಯ ಕೋರಿ ಪ್ರಲ್ಹಾದ ಜೋಶಿ ಭೇಟಿಯಾದ ಹರ್ಷಿಕಾ ಪೂಣಚ್ಚ ದಂಪತಿ

Harshika Poonacha: ಬೆಂಗಳೂರಿನ ಫ್ರೆಜರ್ ಟೌನ್‌ನಲ್ಲಿ ನಡೆದ ದೌರ್ಜನ್ಯ ಘಟನೆ ಬಳಿಕ ನಟಿ ಹರ್ಷಿಕಾ ಪೂರ್ಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ಬುಧವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿದರು. ಸೂಕ್ತ ಕ್ರಮಕ್ಕೆ ಮನವಿ ಮಾಡಿದರು.ದಂಪತಿ ಜತೆ ನಾವಿದ್ದೇವೆ ಎಂದು ಜೋಶಿಯವರು ಧೈರ್ಯ ತುಂಬಿದರು.

VISTARANEWS.COM


on

Harshika Poonacha bhuvan ponnanna met pralhad joshi
Koo

ಹುಬ್ಬಳ್ಳಿ: ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಭುವನ್ ದಂಪತಿ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು (ಏ.24) ಹುಬ್ಬಳ್ಳಿಯಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಹಲ್ಲೆ ಸಂಬಂಧ ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದು, ನ್ಯಾಯ ದೊರಕಿಸಿ ಕೊಡುವಂತೆ ಸಚಿವರೆದುರು ಮೊರೆ ಇಟ್ಟರು. ದಂಪತಿ ಜತೆ ನಾವಿದ್ದೇವೆ ಎಂದು ಜೋಶಿಯವರು ಧೈರ್ಯ ತುಂಬಿದರು.

ಬೆಂಗಳೂರಿನ ಫ್ರೆಜರ್ ಟೌನ್‌ನಲ್ಲಿ ನಡೆದ ದೌರ್ಜನ್ಯ ಘಟನೆ ಬಳಿಕ ನಟಿ ಹರ್ಷಿಕಾ ಪೂರ್ಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ಬುಧವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿದರು. ಸೂಕ್ತ ಕ್ರಮಕ್ಕೆ ಮನವಿ ಮಾಡಿದರು.

ʻʻನಮ್ಮ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿದ ಮೂವರನ್ನು ಗುರುತಿಸಿದ್ದೇವೆ.‌ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಕೆಲ ವ್ಯಕ್ತಿಗಳನ್ನು ತೋರಿಸಿದ್ದು, ಗಲಾಟೆ ಮಾಡಿದವರ ಮುಖಚರ್ಯೆ ಇರುವ ವ್ಯಕ್ತಿಗಳನ್ನು ಗುರುತಿಸಿದ್ದೇವೆʼʼ ಎಂದು ಸಚಿವರೆದುರು ಹೇಳಿದರು.

ʻʻನಮಗೆ ಆದಂತೆ ಬೇರೆ ಯಾರಿಗೂ ಈ ಘಟನೆ ಸಂಭವಿಸಿಬಾರದು. ಹೀಗಾಗಿ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದ್ದಾರೆʼʼ ಎಂದು ಹರ್ಷಿಕಾ ಪೂಣಚ್ಚ ಮಾಧ್ಯಮಗಳಿಗೆ ತಿಳಿಸಿದರು.

ಇದನ್ನೂ ಓದಿ: Harshika Poonacha: ಹರ್ಷಿಕಾ ಪೂಣಚ್ಚ-ಭುವನ್‌ ಮೇಲೆ ಅಟ್ಯಾಕ್! ಕನ್ನಡ ಮಾತನಾಡಿದ್ದೇ ತಪ್ಪಾಯ್ತಾ?

ಏನಿದು ಘಟನೆ?

ಬೆಂಗಳೂರಿನಲ್ಲಿ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ಪತಿ ನಟ ಭುವನ್ ಮೇಲೆ ಹಲ್ಲೆ ನಡೆದಿತ್ತು. ಕಾರ್ ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ ತೆಗೆದು ಚಿನ್ನದ ಸರ ಕದಿಯಲು ಆರೋಪಿಗಳು ಯತ್ನಿಸಿದ್ದರು. ಫ್ರೆಜರ್ ಟೌನ್ ಪುಲಕೇಶಿ ನಗರದಲ್ಲಿ ಘಟನೆ ನಡೆದಿತ್ತು. ಚಿನ್ನದ ಸರ ಕದಿಯಲು ಯತ್ನಿಸಿದ್ದಲ್ಲದೇ ಕನ್ನಡದಲ್ಲಿ ಮಾತನಾಡಬೇಡಿ ಎಂದು ಆರೋಪಿಗಳು ದರ್ಪ ತೋರಿದ್ದರು ಹರ್ಷಿಕಾ ಪೂಣಚ್ಚ ಹಲ್ಲೆ ನಡೆದ ವಿಡಿಯೊವನ್ನು ಚಿತ್ರೀಕರಿಸಿ, ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಘಟನೆ ಕುರಿತು ಹರ್ಷಿಕ ಪೂಣಚ್ಚ ಅವರು ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಈ ಘಟನೆ ವಿರುದ್ಧ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಈ ಸುದ್ದಿ ವೈರಲ್‌ ಆಗಿತ್ತು. ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲೂ ಘಟನೆಯ ಕುರಿತು ವರದಿಯಾಗಿತ್ತು.

Continue Reading
Advertisement
ಫ್ಯಾಷನ್13 mins ago

Summer Nail Art : ಸಮ್ಮರ್ ಸೀಸನ್​ನಲ್ಲಿ ಟ್ರೆಂಡಿಯಾದ ಕಲ್ಲಂಗಡಿ ಹಣ್ಣಿನ ನೇಲ್ಆರ್ಟ್

Lok sabaha election
ಪ್ರಮುಖ ಸುದ್ದಿ29 mins ago

Narendra Modi : ತಮ್ಮನ್ನು ನಿಂದಿಸಿದ ರಾಹುಲ್​ಗೆ ಪ್ರತ್ಯುತ್ತರ ಕೊಟ್ಟ ಮೋದಿ; ಇಲ್ಲಿದೆ ವಿಡಿಯೊ

Ballari Lok Sabha Constituency Congress candidate E Tukaram election campaign in Ballari
ರಾಜಕೀಯ40 mins ago

Lok Sabha Election 2024: ಸಂವಿಧಾನ ಉಳಿಸಲು ಕಾಂಗ್ರೆಸ್‌ ಗೆಲ್ಲಿಸಿ; ಈ. ತುಕಾರಾಂ

Lok Sabha Election-2024
Latest45 mins ago

Lok Sabha Election 2024: 2ನೇ ಹಂತದ ಚುನಾವಣೆ; ಕಣದಲ್ಲಿರುವ ಟಾಪ್‌ 10 ಶ್ರೀಮಂತರಲ್ಲಿ ಕರ್ನಾಟಕದ ಐವರು!

Viral Video
ವೈರಲ್ ನ್ಯೂಸ್51 mins ago

Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

deadly murder
Latest1 hour ago

Deadly Murder: ಬರ್ಗರ್‌ ತಿಂದನೆಂದು ಸ್ನೇಹಿತನನ್ನೇ ಗುಂಡಿಟ್ಟು ಕೊಂದ!

Chemistry paper leak case
ಕೋರ್ಟ್1 hour ago

Chemistry paper leak : ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 17 ಆರೋಪಿಗಳು ಖುಲಾಸೆ

Ranji Trophy
ಪ್ರಮುಖ ಸುದ್ದಿ2 hours ago

Ranji Trophy : ರಣಜಿ ಟ್ರೋಫಿ ಆಡುವವರಿಗೆ ಇನ್ನು ಮುಂದೆ ಒಂದು ಕೋಟಿ ರೂ. ವೇತನ!

Fire Tragedy
ದೇಶ2 hours ago

Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು

World Malaria Day April 25
ಆರೋಗ್ಯ2 hours ago

World Malaria Day: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ3 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ3 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ6 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20248 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET 2024 Exam
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌