Rishab Shetty: ಅಣ್ಣಾವ್ರ ಅಪ್ಪಟ ಅಭಿಮಾನಿ ರಿಷಬ್‌ ಶೆಟ್ಟಿ ಸಿನಿ ಜರ್ನಿ ಹೀಗಿತ್ತು! ನಾಡಿಗೆ ಕೀರ್ತಿ ತಂದ ಕುಂದಾಪುರದ ಹುಡುಗ! - Vistara News

ಸ್ಯಾಂಡಲ್ ವುಡ್

Rishab Shetty: ಅಣ್ಣಾವ್ರ ಅಪ್ಪಟ ಅಭಿಮಾನಿ ರಿಷಬ್‌ ಶೆಟ್ಟಿ ಸಿನಿ ಜರ್ನಿ ಹೀಗಿತ್ತು! ನಾಡಿಗೆ ಕೀರ್ತಿ ತಂದ ಕುಂದಾಪುರದ ಹುಡುಗ!

Rishab Shetty: ಅತ್ಯುತ್ತಮ ಚಿತ್ರದ ಜತೆಗೆ ನಟ, ನಿರ್ದೇಶಕ ವಿಭಾಗದಲ್ಲಿಯೂ ರಿಷಬ್‌ ಶೆಟ್ಟಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಯಾಂಡಲ್​​​ವುಡ್​ನಲ್ಲಿ ಸ್ಟಾರ್ ಡೈರೆಕ್ಟರ್ ಜೊತೆಗೆ ಹೀರೋ ಆಗಿರುವ ರಿಷಬ್ ಶೆಟ್ಟಿ ಇಂದು ನಿರ್ಮಾಪಕರು ಕೂಡ ಹೌದು. ರಿಷಬ್‌ ಶೆಟ್ಟಿ ಸಿನಿ ಪಯಣ ಹೇಗಿತ್ತು? ತಿಳಿಯಲು ಮುಂದೆ ಓದಿ. ಚಿತ್ರರಂಗದಲ್ಲಿ ರಿಷಬ್‌ ಶೆಟ್ಟಿ ಅವರ ಪಯಣದ ಹಿನ್ನೋಟ ಇಲ್ಲಿದೆ.

VISTARANEWS.COM


on

Rishab Shetty cinema Journey before Kantara
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎನಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ (70th National Film Awards) ಇಂದು (ಆಗಸ್ಟ್ 16) ಘೋಷಣೆ ಆಗಿದೆ. ‘ಕಾಂತಾರ’ ಸಿನಿಮಾಗಾಗಿ ರಿಷಬ್‌ ಶೆಟ್ಟಿ (Rishab Shetty) ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಕೂಡ ಕಾಂತಾರ ಪಡೆದುಕೊಂಡಿದೆ. 2022ರಲ್ಲಿ ತೆರೆಕಂಡು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ, ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿದ ʼಕಾಂತಾರʼ ಚಿತ್ರ ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಅತ್ಯುತ್ತಮ ಚಿತ್ರದ ಜತೆಗೆ ನಟ, ನಿರ್ದೇಶಕ ವಿಭಾಗದಲ್ಲಿಯೂ ರಿಷಬ್‌ ಶೆಟ್ಟಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಯಾಂಡಲ್​​​ವುಡ್​ನಲ್ಲಿ ಸ್ಟಾರ್ ಡೈರೆಕ್ಟರ್ ಜೊತೆಗೆ ಹೀರೋ ಆಗಿರುವ ರಿಷಬ್ ಶೆಟ್ಟಿ ಇಂದು ನಿರ್ಮಾಪಕರು ಕೂಡ ಹೌದು. ರಿಷಬ್‌ ಶೆಟ್ಟಿ ಸಿನಿ ಪಯಣ ಹೇಗಿತ್ತು? ತಿಳಿಯಲು ಮುಂದೆ ಓದಿ.

ನಾಟಕ -ಯಕ್ಷಗಾನಗಳಲ್ಲಿ ಆಸಕ್ತಿ

ಬಾಲ್ಯದ ದಿನಗಳಲ್ಲಿ ನಾಟಕ ಹಾಗೂ ಯಕ್ಷಗಾನಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದರು. ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ಸಿನಿಮಾದ ಗೀಳು ಅಂಟಿಸಿಕೊಂಡಿದ್ದರು. ಡಾ. ರಾಜ್​ಕುಮಾರ್ ಹಾಗೂ ಶಂಕರ್​ನಾಗ್ ಚಿತ್ರಗಳು ಅಂದರೆ ಈ ನಟನಿಗೆ ಪಂಚಪ್ರಾಣ. ಮುಖ್ಯವಾಗಿ ರಿಷಬ್ ಶೆಟ್ಟಿ ಅವರಿಗೆ ತಾನು ಹೀರೋ ಆಗಬೇಕು ಎಂಬ ಸ್ಫೂರ್ತಿ ಆಗಿದ್ದು ಕನ್ನಡ ಚಿತ್ರರಂಗದ ಮೇರು ನಟನರಾದ ದಿ. ಡಾ. ರಾಜ್​ಕುಮಾರ್. ಅವರ ಮನೋಜ್ಞ ಅಭಿನಯ ಹಾಗು ಸಿನಿಮಾಗಳು ʼಡಿವೈನ್​ ಸ್ಟಾರ್ʼ​ ಗಮನ ಸೆಳೆದಿತ್ತು. ಆಗ್ಲೇ ಅಣ್ಣಾವ್ರ ರೀತಿ ನಟನಾಗಬೇಕು ಎಂದು ರಿಷಬ್ ಶೆಟ್ಟಿ ನಿರ್ಧಾರ ಮಾಡಿದ್ದರು. ಕಾಲೇಜು ವಿದ್ಯಾಭ್ಯಾಸ ವೇಳೆ ಸಿನಿಮಾ ಕ್ರೇಜ್ ಜಾಸ್ತಿ ಮಾಡಿದ್ದು ಉಪೇಂದ್ರ ಅವರ ಸಿನಿಮಾಗಳು. ಆಗ ಕುಂದಾಪುರದಿಂದ ರಿಷಬ್ ಶೆಟ್ಟಿ ಬೆಂಗಳೂರಿಗೆ ಬರುತ್ತಾರೆ. ನಿರ್ದೇಶಕ ಎ.ಎಂ.ಆರ್ ರಮೇಶ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ. ಅರವಿಂದ್ ಕೌಶಿಕ್ ನಿರ್ದೇಶನದ ತುಘ್ಲಕ್ ಚಿತ್ರದಲ್ಲಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಾ, ಇದೇ ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನೂ ಮಾಡ್ತಾರೆ. ಅಲ್ಲಿಂದ ಲೂಸಿಯಾ ಹಾಗು ಉಳಿದವರು ಕಂಡಂತೆ ಚಿತ್ರಗಳಲ್ಲಿ ನಟಿಸುವ ಮೂಲಕ ರಿಷಬ್ ಶೆಟ್ಟಿ ಗಾಂಧಿನಗರದಲ್ಲಿ ಗಮನ ಸೆಳೆದರು.

ಕಿರಿಕ್ ಪಾರ್ಟಿ ಸಕ್ಸಸ್

ರಿಷಬ್ ಶೆಟ್ಟಿ ಅವರಿಗೆ ಸ್ಟಾರ್ ಡೈರೆಕ್ಟರ್ ಪಟ್ಟ ತಂದುಕೊಟ್ಟ ಸಿನಿಮಾ ಕಿರಿಕ್ ಪಾರ್ಟಿ. 2016ರಲ್ಲಿ ʼರಿಕ್ಕಿʼ ಚಿತ್ರ ನಿರ್ದೇಶಿಸುವ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಬಳಿಕ ತೆರೆಕಂಡ ʼಕಿರಿಕ್‌ ಪಾರ್ಟಿʼ ಮತ್ತು ʼಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುʼ ಸಿನಿಮಾದಿಂದ ಸ್ಯಾಂಡಲ್‌ವುಡ್‌ನ ಗಮನ ಸೆಳೆದರು.  ರಿಷಬ್ ಶೆಟ್ಟಿ ಬೆಲ್ ಬಾಟಮ್ ಚಿತ್ರದಲ್ಲಿ ನಟಿಸುವ ಮೂಲ ತಮ್ಮ ಬಾಲ್ಯದ ಕನಸನ್ನು ಈಡೇರಿಸಿಕೊಳ್ಳುತ್ತಾರೆ. ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ ರಿಷಬ್ ಶೆಟ್ಟಿ ಅವರಿಗೆ, ಬೆಲ್ ಬಾಟಮ್ ಚಿತ್ರ ಸ್ಟಾರ್ ಪಟ್ಟ ತಂದು ಕೊಡುತ್ತದೆ. ʻಕಾಂತಾರʼ ಚಿತ್ರದ ಶಿವ ಪಾತ್ರದ ಮೂಲಕ ಅತ್ಯುತ್ತಮ ನಟ ವಿಭಾಗದಲ್ಲಿ ರಿಷಬ್‌ ಶೆಟ್ಟಿ ಪ್ರಬಲ ಪೈಪೋಟಿ ಒಡ್ಡಿ ಇದೀಗ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ತುಳುನಾಡಿನ ವಿಶಿಷ್ಟ ಭೂತಾರಾಧನೆಯ ಸಂಸ್ಕೃತಿಯನ್ನು ಜಗತ್ತಿಗೇ ಸಾರಿದ ಈ ಸಿನಿಮಾ ಮೇಕಿಂಗ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರಲ್ಲಿಯೂ ನಾಯಕನಾಗಿ ರಿಷಬ್‌ ಶೆಟ್ಟಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಕ್ಲೈಮಾಕ್ಸ್‌ನಲ್ಲಂತೂ ಅವರ ಅಭಿನಯ ಅಮೋಘ ಎಂದಿದ್ದ ಹಲವರು ಅಂದೇ ನ್ಯಾಷನಲ್‌ ಅವಾರ್ಡ್‌ ಬಗ್ಗೆ ಭವಿಷ್ಯ ನುಡಿದಿದ್ದರು.

ಇದನ್ನೂ ಓದಿ: Rishab Shetty: ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ ನಾನು; ಚಿಯಾನ್ ವಿಕ್ರಮ್ ಭೇಟಿ ಬಳಿಕ ರಿಷಬ್ ಶೆಟ್ಟಿ ರಿಯಾಕ್ಷನ್‌!

ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ರಿಷಬ್‌

`ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು’ ಸಿನಿಮಾ ಮಾಡಿದಾಗಿನಿಂದಲೂ ರಿಷಬ್ ಶೆಟ್ಟಿಯವರು ಶಿಕ್ಷಣ ಕ್ಷೇತ್ರದಲ್ಲಿ ಕೈಲಾದ ಸೇವೆ ಮಾಡುತ್ತಲೇ ಇದ್ದಾರೆ. ಸಮಾಜ ಸೇವೆ ಅದರಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಡುವುದು ರಿಷಬ್​ಗೆ ಬಹಳ ಇಷ್ಟವಾಗುವ ಕೆಲಸ. ರಿಷಬ್‌ ಶೆಟ್ಟಿ ಫೌಂಡೇಶನ್ ಮೂಲಕ ಅಳಿವಿನಂಚಿನಲ್ಲಿದ್ದ ತಾವು ಓದಿದ ಕೆರಾಡಿ (Keradi) ಸರ್ಕಾರಿ ಕನ್ನಡ ಶಾಲೆಯನ್ನು (School) ದತ್ತು ಪಡೆದಿದ್ದಾರೆ.

ಸಿನಿಮಾ ನಿರ್ಮಾಣಕ್ಕೂ ಸೈ

 ರಿಷಬ್ ಶೆಟ್ಟಿ (Rishab Shetty) ನಿರ್ಮಾಣ ಮಾಡಿ, ಪ್ರಸ್ತುತಪಡಿಸಿದ ‘ಶಿವಮ್ಮ’ ಸಿನಿಮಾ (Shivamma Movie) ವಿಶ್ವಾದ್ಯಂತ ವಿವಿಧ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ‘ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022’ರಲ್ಲಿ ನ್ಯೂ ಕರೆಂಟ್ಸ್ ಪುರಸ್ಕಾರ ಪಡೆದಿತ್ತು. ‘ಥ್ರೀ ಕಾಂಟಿನೆಂಟ್ಸ್ ಫೆಸ್ಟಿವಲ್ 2022’ದಲ್ಲಿ ಯುವ ಜ್ಯೂರಿ ಪ್ರಶಸ್ತಿ, ‘ಫಾಜರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ’ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಜಯಶಂಖರ್ ಆರ್ಯರ್ ನಿರ್ದೇಶನದ ‘ಶಿವಮ್ಮ’ ಸಿನಿಮಾ ಜೂನ್ 14ಕ್ಕೆ ತೆರೆಗೆ  ಬಂದಿತ್ತು. ಸದ್ಯ ರಿಷಬ್‌ ಶೆಟ್ಟಿ ನಿರ್ಮಾಣದ ಪ್ರಮೋದ್ ಶೆಟ್ಟಿ (Pramod Shetty) ನಟನೆಯ ‘ಲಾಫಿಂಗ್ ಬುದ್ಧ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ತೆರೆಗೆ ಬರಲು ಸಜ್ಜಾಗುತ್ತಿದೆ.

ಇದನ್ನೂ ಓದಿ: Rishab Shetty: ರಿಷಬ್ ನಿರ್ಮಾಣದ ‘ಶಿವಮ್ಮ’ ಟ್ರೈಲರ್‌ ಔಟ್‌; ಜೂನ್‌ 14ಕ್ಕೆ ತೆರೆಗೆ

ಸಾಲು ಸಾಲು ಪ್ರಶಸ್ತಿಗಳು

 ರಿಷಬ್‌ ಶೆಟ್ಟಿ ‘ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ (dada saheb phalke award 2023) ಪ್ರಶಸ್ತಿ ಪಡೆದ ಬೆನ್ನಲ್ಲೇ ಬಾಲಿವುಡ್ ಲೈಫ್ ಅವಾರ್ಡ್ಸ್‌ನ (BLAwards2023) (BLAwards) ದಕ್ಷಿಣ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರು. 2023ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ‘ಭರವಸೆಯ ನಟ’ ಎಂಬ ಪ್ರಶಸ್ತಿ ಸ್ವೀಕರಿಸಿದ್ದರು.  ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಿಕ ಕತೆಯನ್ನು ಹೊಂದಿರುವ ಕಾಂತಾರ ಸಿನಿಮಾ ಚೊಚ್ಚಲ ಆವೃತ್ತಿಯ “ಸಿಲ್ವರ್ ಪಿಕಾಕ್​ ಅವಾರ್ಡ್’​​ ತನ್ನದಾಗಿಸಿಕೊಂಡಿತ್ತು.  ಕಾಂತಾರ ಸಿನಿಮಾ ತಂಡದ ಹಾಗೂ ಕನ್ನಡಿಗರ ಪಾಲಿಗೆ ವಿಶೇಷವಾಗಿದೆ. ಇದು ಕನ್ನಡ ಸಿನಿಮಾ ಒಂದಕ್ಕೆ ದೊರೆತ ಮೊಟ್ಟ ಮೊದಲ ಪ್ರಶಸ್ತಿಯೂ ಹೌದು. ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್ 2023 (SIIMA 2023) ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಕಾಂತಾರ ಸಿನಿಮಾ 10 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ಇನ್ನು ವಿಶೇಷವಾಗಿ ʼಕಾಂತಾರʼ ಚಿತ್ರಕ್ಕೆ ಬೆನ್ನೆಲುಬಾಗಿದ್ದಂತಹ ದೈವ ನರ್ತಕರಾದ ಮುಖೇಶ್ ಲಕ್ಷ್ಮಣ್ ಅವರು ದುಬೈನಲ್ಲಿ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದರು. ಉಳಿದಂತೆ ಅತ್ಯುತ್ತಮ ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಸೇರಿ ಒಟ್ಟು 10 ಅವಾರ್ಡ್ಸ್ ಕಾಂತಾರ ಸಿನಿಮಾ ಗೆದ್ದು ಸದ್ದು ಮಾಡಿತ್ತು. ಇದುವರೆಗೆ ಸೈಮಾ ಅವಾರ್ಡ್ಸ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳನ್ನು ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

KGF Chapter 2: ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಕೆಜಿಎಫ್‌ 2 ಚಿತ್ರದ 6 ವಿಶೇಷ ಸಂಗತಿಗಳಿವು!

ಅತಿ ಹೆಚ್ಚು ವೀಕ್ಷಣೆ ಪಡೆದ ಟೀಸರ್ ನಿಂದ ಹಿಡಿದು ಅತ್ಯಂತ ದುಬಾರಿ (KGF Chapter 2) ಚಿತ್ರವಾಗುವವರೆಗೆ ಕೆಜಿಎಫ್ ಚಾಪ್ಟರ್ 2 ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭಾರಿ ಚರ್ಚೆಯ ವಿಷಯವಾಯಿತು. ಎರಡು ನಿಮಿಷಗಳ ಟೀಸರ್‌ನಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿತ್ತು. ಕೆಜಿಎಫ್ ಚಾಪ್ಟರ್ 2 ಚಿತ್ರದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

VISTARANEWS.COM


on

By

KGF Chapter 2
Koo

ಕೆಜಿಎಫ್ ಚಾಪ್ಟರ್ 2 (KGF Chapter 2) ಟೀಸರ್ ಸೂಪರ್‌ಸ್ಟಾರ್ ಯಶ್ (super star yash) ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭಾರಿ ಚರ್ಚೆಯ ವಿಷಯವಾಯಿತು. ಎರಡು ನಿಮಿಷಗಳ ಟೀಸರ್‌ನಲ್ಲಿ (KGF Chapter 2 Teaser) ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿತ್ತು. ಕೆಜಿಎಫ್ ಚಾಪ್ಟರ್ 2 ಹೇಗಿರುತ್ತದೆ ಎಂಬುದರ ಕುರಿತು ಒಂದು ನೋಟವನ್ನು ಈ ಚಿತ್ರ ನೀಡಿತ್ತು. ರವೀನಾ ಟಂಡನ್ ಮತ್ತು ಸಂಜಯ್ ದತ್ ಅವರ ಅತ್ಯತ್ತಮ ಅಭಿನಯ ಟೀಸರ್‌ನಲ್ಲಿ ಎಲ್ಲರ ಗಮನ ಸೆಳೆದಿತ್ತು. 2019ರ ಕೆಜಿಎಫ್ ಚಾಪ್ಟರ್ 1 ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತ್ತು. ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿರುವ ಈ ಆಕ್ಷನ್ ಚಿತ್ರವು ಕನ್ನಡ ಭಾಷೆಯ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಯಿತು. ಇದೀಗ ಕೆಜಿಎಫ್‌ ಚಾಪ್ಟರ್‌ 2 ಕನ್ನಡದ ಅತ್ಯುತ್ತಮ ಚಿತ್ರವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಕೆಜಿಎಫ್ ಚಾಪ್ಟರ್ 2 ಕುರಿತ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ:


1. ಚಿತ್ರದ ಟೀಸರ್ ಮೊದಲ 24 ಗಂಟೆಗಳಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟೀಸರ್ ಆಗಿತ್ತು. ಇದು 72 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತ್ತು. ಮೊದಲ 24 ಗಂಟೆಗಳಲ್ಲಿ ವಿಶ್ವದ 5ನೇ ಅತಿ ಹೆಚ್ಚು ವೀಕ್ಷಿಸಿದ ʼವಿಡಿಯೋʼ ಆಗಿತ್ತು.

2. ಮೊದಲ ಭಾಗದಂತೆಯೇ ಕೆಜಿಎಫ್ ಚಾಪ್ಟರ್ 2 ನೂರು ಕೋಟಿ ರೂ. ಬಜೆಟ್‌ನ ಅತ್ಯಂತ ದುಬಾರಿ ಕನ್ನಡ ಚಿತ್ರವಾಗಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಚಿತ್ರ ಡಬ್ ಆಗಿತ್ತು.

3. ಕೆಜಿಎಫ್ ಚಾಪ್ಟರ್ 2 ಕಥಾವಸ್ತುವು ರಾಕಿ ಸಾಯುತ್ತಿರುವ ತನ್ನ ತಾಯಿಗೆ ತಾನು ಎಂದಿಗೂ ಬಡತನದಲ್ಲಿ ಸಾಯುವುದಿಲ್ಲ ಎಂದು ಬಾಲ್ಯದಲ್ಲಿ ಮಾಡಿದ ಒಂದು ವಾಗ್ದಾನದ ಸುತ್ತ ಸುತ್ತುತ್ತದೆ. ಟೀಸರ್ ಕೊನೆಯಲ್ಲಿ “ಆ ಭರವಸೆಯನ್ನು ಉಳಿಸಿಕೊಳ್ಳಲಾಗುವುದು” ಎಂದು ಸೂಚಿಸಿತ್ತು. ಈ ಮೂಲಕ ಚಿತ್ರದ ಕಥಾವಸ್ತುವಿನ ಬಗ್ಗೆ ಸಂಪೂರ್ಣ ಸುಳಿವು ನೀಡಿತ್ತು.

KGF Chapter 2
KGF Chapter 2


4. ಮೂವತ್ತು ವರ್ಷಗಳ ಕಥೆಯನ್ನು ಹೇಳುವ ಕೆಜಿಎಫ್‌ ಯಶ್ ಅವರು ಚಿನ್ನದ ವ್ಯವಹಾರವನ್ನು ಆಳಲು ಬಯಸುವುದು, ಅಧಿಕಾರಕ್ಕಾಗಿ ಹಸಿದ ರಾಜಕಾರಣಿಗಳು ಮತ್ತು ದರೋಡೆಕೋರರ ನಡುವಿನ ಕಥಾ ಹಂದರವನ್ನು ಒಳಗೊಂಡಿದೆ . ರಾಕಿ ತನ್ನ ಪ್ರೀತಿಗಾಗಿ, ಅಧಿಕಾರಕ್ಕಾಗಿ ಹಸಿದಿರುವವರಿಗೆ ಪಾಠ ಕಲಿಸುವ ಉದ್ದೇಶಕ್ಕಾಗಿ ಏನು ಮಾಡುತ್ತಾರೆ ಎಂಬುದಕ್ಕೆ ಚಿತ್ರವೂ ಉತ್ತರಿಸುತ್ತದೆ.

5. ಸೂರ್ಯವರ್ಧನ್ ಅವರ ಸಹೋದರನಾಗಿ ಕಾಣಿಸಿಕೊಂಡಿರುವ ಸಂಜಯ್ ದತ್ ಎಲ್ಲರ ಗಮನ ಸೆಳೆದಿದ್ದಾರೆ. ಸೂರ್ಯವರ್ಧನ್ ಅವರ ಪಾತ್ರವನ್ನು ರಮೇಶ್ ಇಂದಿರಾ ಅವರು ಕೆಜಿಎಫ್ ಅಧ್ಯಾಯ 1ರಲ್ಲಿ ನಿರ್ವಹಿಸಿದ್ದರು. ಅವರು ಕೋಲಾರ ಚಿನ್ನದ ಗಣಿಗಳ (ಕೆಜಿಎಫ್) ಆಡಳಿತಗಾರರಾಗಿದ್ದರು. ಸೂರ್ಯವರ್ಧನ್ ಅವರ ಮಗ ಗರುಡ ಮೊದಲ ಚಿತ್ರದಲ್ಲಿ ವಿಲನ್ ಆಗಿದ್ದರು ಮತ್ತು ಈಗ ಈ ದುಷ್ಟ ಖಳನಾಯಕನ ಪರಂಪರೆಯನ್ನು ಸಂಜಯ್ ದತ್ ತೆಗೆದುಕೊಳ್ಳುವುದನ್ನು ಕೆಜಿಎಫ್ 2ರಲ್ಲಿ ಕಾಣಬಹುದು. ಗರುಡನ ಪಾತ್ರವನ್ನು ಮಾಡಿರುವ ರಾಮಚಂದ್ರರಾಜು ಅವರು ಈ ಚಿತ್ರದಲ್ಲಿ ನಟಿಸುವ ಮೊದಲು ಯಶ್ ಅವರ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದರು!


ಇದನ್ನೂ ಓದಿ: Kannada New Movie: ತೆರೆಯ‌ ಮೇಲೆ‌ ಚಿತ್ರವಾಗಿ ಬರಲಿದೆ ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ; ಮೊದಲ ಹಾಡು ರಿಲೀಸ್‌

6. ಕೆಜಿಎಫ್ ಚಾಪ್ಟರ್ 2 ಒಂದು ಕಾಲ್ಪನಿಕ ಕಥೆಯಾಗಿದೆ. ಇದು ನಟ ಸಂಜಯ್ ದತ್ ಅವರು ನಟಿಸಿರುವ ದಕ್ಷಿಣ ಭಾರತೀಯ ಚೊಚ್ಚಲ ಚಿತ್ರವಾಗಿದೆ. ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Kannada New Movie: ಅದ್ಧೂರಿಯಾಗಿ ನಡೆದ ʻಪೌಡರ್ ಹಬ್ಬʼ; ಪ್ರೀ ರಿಲೀಸ್ ಕಾರ್ಯಕ್ರಮ ಝಲಕ್‌ ಹೀಗಿದೆ!

Kannada New Movie:ಪೌಡರ್ ಹಬ್ಬದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್, ರೋರಿಂಗ್ ಸ್ಟಾರ್ ಶ್ರೀಮುರಳಿ, ದಾನಿಷ್ ಸೇಠ್, ಖ್ಯಾತ ನಟಿ ಐಂದ್ರಿತಾ ರೈ, ಹೆಸರಾಂತ ನಿರ್ದೇಶಕ ರೋಹಿತ್ ಪದಕಿ ಸೇರಿದಂತೆ ಪೌಡರ್ ತಾರಾಬಳಗ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ,ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ರವಿಶಂಕರ್ ಗೌಡ ಎಲ್ಲರೂ ವೀಕ್ಷಕರ ಗಮನ ಸೆಳೆದರು. ವಾಸುಕಿ ವೈಭವ್ ಮತ್ತು ಎಂ ಸಿ ಬಿಜ್ಜುವಿನ ಸಂಗೀತ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸಿತು.

VISTARANEWS.COM


on

Kannada New Movie powder habba pre realease programme
Koo

ಬೆಂಗಳೂರು: ಬಹು ನಿರೀಕ್ಷಿತ ಹಾಸ್ಯ ಚಟಾಕಿ ಚಿತ್ರ “ಪೌಡರ್” (Kannada New Movie) ತನ್ನ ಪ್ರೀ ರಿಲೀಸ್ ಕಾರ್ಯಕ್ರಮವಾದ “ಪೌಡರ್ ಹಬ್ಬ”ದಿಂದ ಮತ್ತೊಮ್ಮೆ ಸುದ್ದಿಯಾಗಿದೆ‌. ಆಗಸ್ಟ್ 15ರಂದು ಫೀನಿಕ್ಸ್ ಮಾಲ್ ಆಫ್ ಏಷಿಯಾದಲ್ಲಿ ನಡೆದ “ಪೌಡರ್ ಹಬ್ಬ” ಕನ್ನಡ ಚಿತ್ರರಂಗದ ತಾರಾ ಸಮಾಗಮವೇ ಆಗಿತ್ತು‌.

ಪೌಡರ್ ಹಬ್ಬದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್, ರೋರಿಂಗ್ ಸ್ಟಾರ್ ಶ್ರೀಮುರಳಿ, ದಾನಿಷ್ ಸೇಠ್, ಖ್ಯಾತ ನಟಿ ಐಂದ್ರಿತಾ ರೈ, ಹೆಸರಾಂತ ನಿರ್ದೇಶಕ ರೋಹಿತ್ ಪದಕಿ ಸೇರಿದಂತೆ ಪೌಡರ್ ತಾರಾಬಳಗ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ,ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ರವಿಶಂಕರ್ ಗೌಡ ಎಲ್ಲರೂ ವೀಕ್ಷಕರ ಗಮನ ಸೆಳೆದರು. ವಾಸುಕಿ ವೈಭವ್ ಮತ್ತು ಎಂ ಸಿ ಬಿಜ್ಜುವಿನ ಸಂಗೀತ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸಿತು.

ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!

“ಪೌಡರ್” ಒಂದು ಹಾಸ್ಯಭರಿತ ಚಿತ್ರವಾಗಿದ್ದು, ಇದನ್ನು ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುತ್ತಾರೆ‌‌. ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ್, ರವಿಶಂಕರ್ ಗೌಡ ಮುಂತಾದವರು ನಟಿಸಿರುತ್ತಾರೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ. “ಪೌಡರ್” ಚಿತ್ರ ಇದೇ ಆಗಸ್ಟ್ 23ರಂದು ತೆರೆ ಕಾಣಲಿದೆ.

Continue Reading

ಸಿನಿಮಾ

KGF 2: ರಾಷ್ಟ್ರ ಪ್ರಶಸ್ತಿ ವಿಜೇತ ಕೆಜಿಎಫ್‌ 2 ಹೀರೊ ಯಶ್ ಕುರಿತ 10 ಕುತೂಹಲಕರ ಸಂಗತಿಗಳಿವು

KGF 2: ರಾಕಿ ಭಾಯ್ (Rocky bhai Yash) ಎಂದೇ ಕರೆಯಲ್ಪಡುವ ಯಶ್ ಮೊಗ್ಗಿನ ಮನಸು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಪಡೆದರು. ಕೆಜಿಎಫ್ ಮೂಲಕ ದೊಡ್ಡ ಖ್ಯಾತಿಯನ್ನು ಗಳಿಸಿದರು. ಅವರ ಅಭಿಮಾನಿಗಳಿಗೆ ಅವರ ಬಗ್ಗೆ ಬಹುತೇಕ ವಿಷಯಗಳು ಗೊತ್ತೇ ಇದೆ. ಆದರೆ ಅವರ ಬಗ್ಗೆ ತಿಳಿಯಬೇಕೆಂದು ಬಯಸುವವರಿಗೆ ಹತ್ತು ವಿಷಯಗಳು ಇಲ್ಲಿವೆ.

VISTARANEWS.COM


on

By

KGF 2
Koo

ಚಿತ್ರರಂಗದಲ್ಲಿ (KGF 2) ಬಹು ನಿರೀಕ್ಷೆ ಮೂಡಿಸಿರುವ ಕೆಜಿಎಫ್: ಚಾಪ್ಟರ್ 3 (K.G.F.: Chapter 3) ಮೂಲಕ ಮತ್ತೊಮ್ಮೆ ರಾಕಿ ಭಾಯ್ ಯಶ್ (Rocky bhai Yash) ಅಬ್ಬರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆಯಲ್ಲಿರುವ ಈ ಚಿತ್ರದ ಬಗ್ಗೆ ತಾರಾಗಣವಾಗಲಿ, ನಿರ್ದೇಶಕರಾಗಲಿ ಇನ್ನೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈ ಚಿತ್ರದ ಮೂಲಕ ಯಶ್ (actor yash) ಮರಳಿ ಬರುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.

ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಕೆಜಿಎಫ್ 2 ಪ್ರೇಕ್ಷಕರನ್ನು ಆಸನದ ತುದಿಯಲ್ಲಿ ಕುರಿಸುವಲ್ಲಿ ಯಶಸ್ವಿಯಾಗಿತ್ತು. ಅಧ್ಯಾಯ 1ರಂತೆ ಕನ್ನಡ ನಟ ಯಶ್ ರಾಕಿ ಪಾತ್ರವನ್ನು ಇದರಲ್ಲೂ ಮುಂದುವರಿಸಿದ್ದರು.

ಕೆಜಿಎಫ್ ಮೂಲಕ ವಿಶ್ವದ ಪ್ರೇಕ್ಷಕರ ಮನ ಗೆದ್ದ ಯಶ್ ಬಗ್ಗೆ ತಿಳಿದುಕೊಳ್ಳಬೇಕಾದ ಹತ್ತು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.


1. ಯಶ್ ಅವರ ನಿಜವಾದ ಹೆಸರು ನವೀನ್ ಕುಮಾರ್ ಗೌಡ.

2. ಯಶ್ ಅವರು ಜನಿಸಿದ್ದು ಕರ್ನಾಟಕದ ಹಾಸನ ಜಿಲ್ಲೆಯ ಬೂವನಹಳ್ಳಿ ಎಂಬ ಗ್ರಾಮದಲ್ಲಿ.

3. 2008ರಲ್ಲಿ ಶಶಾಂಕ್ ಅವರ ಮೊಗ್ಗಿನ ಮನಸು ಚಿತ್ರದ ಮೂಲಕ ಯಶ್ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.


4. ಯಶ್ ವೃತ್ತಿಜೀವನದಲ್ಲಿ ಮೊದಲಾಸಲ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ರಾಜಧಾನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

5. ಯಶ್ ಯಾವಾಗಲೂ ನಟನಾಗಬೇಕೆಂದು ಬಯಸಿದ್ದರು. ಎಷ್ಟರ ಮಟ್ಟಿಗೆಂದರೆ ಯಶ್ ತನ್ನ ಕನಸನ್ನು ನನಸಾಗಿಸಲು ಮನೆಯಿಂದ ಓಡಿ ಹೋಗಿದ್ದರು.


6. ಯಶ್ 2016 ರಲ್ಲಿ ನಟಿ ರಾಧಿಕಾ ಪಂಡಿತ್ ಅವರನ್ನು ವಿವಾಹವಾದರು. ದಂಪತಿಗೆ ಐರಾ ಮತ್ತು ಯಥರ್ವ್ ಎಂಬ ಹೆಸರಿನ ಇಬ್ಬರು ಮಕ್ಕಳಿದ್ದಾರೆ.


7. ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದು ದೊಡ್ಡ ಯಶಸ್ಸನ್ನು ಕಂಡಿತು.

8. ಯಶ್ ಧಾರಾವಾಹಿಯಲ್ಲೂ ನಟಿಸಿದ್ದು, ನಂದ ಗೋಕುಲದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದನ್ನು ಅಶೋಕ್ ಕಶ್ಯಪ್ ನಿರ್ದೇಶಿಸಿದ್ದಾರೆ. ಈ ಧಾರಾವಾಹಿಯಲ್ಲಿ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಕಾಣಿಸಿಕೊಂಡಿದ್ದರು.

9. ಯಶ್ ಅವರ ಜನ್ಮ ದಿನಾಂಕ ಜನವರಿ 8. ಅವರ ವಯಸ್ಸು ಈಗ ಕೇವಲ 36.


10. ಈವರೆಗೆ 21 ಸಿನಿಮಾ, 6 ಧಾರಾವಾಹಿಗಳಲ್ಲಿ ಯಶ್ ಬಣ್ಣ ಹಚ್ಚಿದ್ದಾರೆ. ಸದ್ಯ ಟಾಕ್ಸಿಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Continue Reading

ಸ್ಯಾಂಡಲ್ ವುಡ್

Rishab Shetty: ʻಕಾಂತಾರʼ, ʻಕೆಜಿಎಫ್‌ 2ʼಗೆ ನ್ಯಾಷನಲ್​ ಅವಾರ್ಡ್; ಸಂತಸ ವ್ಯಕ್ತ ಪಡಿಸಿದ ವಿಜಯ್‌ ಕಿರಗಂದೂರು!

Rishab Shetty: ಕಾಂತಾರ 2 ಪೂರ್ವಭಾವಿ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಎಂದು ವಿಜಯ್‌ ಕಿರಗಂದೂರು ಈ ಮುಂಚೆ ಹೇಳಿಕೆ ನೀಡಿದ್ದರು.

VISTARANEWS.COM


on

Rishab Shetty Kantara national award vijay kirangduru reaction
Koo

ಬೆಂಗಳೂರು: ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎನಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ (70th National Film Awards) ಇಂದು (ಆಗಸ್ಟ್ 16) ಘೋಷಣೆ ಆಗಿದೆ. ‘ಕಾಂತಾರ’ ಸಿನಿಮಾಗಾಗಿ ರಿಷಬ್‌ ಶೆಟ್ಟಿ (Rishab Shetty) ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಕೂಡ ಕಾಂತಾರ ಪಡೆದುಕೊಂಡಿದೆ. 2022ರಲ್ಲಿ ತೆರೆಕಂಡು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ, ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿದ ʼಕಾಂತಾರʼ ಚಿತ್ರ ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ.  ಕೆಜಿಎಫ್‌ 2ಗೆ ಅತ್ತುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಸಾಹಸ ವಿಭಾಗದಲ್ಲೂ ಕೆಜಿಎಫ್‌ 2ಗೆ ಪ್ರಶಸ್ತಿ ಸಿಕ್ಕಿದೆ. ಇದೀಗ ಹೊಂಬಾಳೆ ಫಿಲ್ಮ್ಸ್‌ ಸಂಸ್ಥಾಪಕ ವಿಜಯ್‌ ಕಿರಗಂದೂರು ಇದೀಗ ವಿಶಸ್‌ ತಿಳಿಸಿದ್ದಾರೆ.

ವಿಜಯ್‌ ಕಿರಗಂದೂರು ಮಾತನಾಡಿ ʻʻಪ್ರಶಸ್ತಿ ಕನ್ನಡ ಜನತೆ ಮತ್ತು ಕನ್ನಡ ಚಿತ್ರರಂಗಕ್ಕೆ ಪ್ರಶಸ್ತಿ ಸೇರಬೇಕು. ಕಾಂತಾರ, ಕೆಜಿಎಫ್‌ ತಂಡದ ಪ್ರತಿಯೊಬ್ಬರು ಶ್ರಮ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಒಳ್ಳೊಳ್ಳೆ ಸಿನಿಮಾಗಳನ್ನು ಕೊಡಲು ಪ್ರಯತ್ನಿಸುತ್ತೇವೆ. ನಮಗೂ ಜವಬ್ದಾರಿ ಜಾಸ್ತಿ ಆಗಿದೆ. ಕಾಂತಾರದಲ್ಲಿ ನನಗೆ ಎಲ್ಲ ದೃಶ್ಯಗಳು ಇಟ್ಟವಾಗಿದೆ. ಆದರೆ ಕೊನೆಯ ದೃಶ್ಯ ನನಗೆ ತುಂಬ ಇಷ್ಟವಾಯ್ತು. ಮೊದಲನೇ ಭಾಗ ಪ್ರಿಕ್ವೆಲ್‌ ಆಗುತ್ತಿದೆ. ಇನ್ನು ದೊಡ್ಡ ಮಟ್ಟಕ್ಕೆ ಮಾಡಲಾಗುತ್ತಿದೆ. ಪ್ರಶಾಂತ್‌ ಮತ್ತು ಯಶ್‌ಗೂ ಕೂಡ ಗೌರವ ಸಲ್ಲಬೇಕುʼʼಎಂದರು.

ಕಾಂತಾರ 2 ಪೂರ್ವಭಾವಿ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಎಂದು ವಿಜಯ್‌ ಕಿರಗಂದೂರು ಈ ಮುಂಚೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Rishab Shetty: ಈ ಪ್ರಶಸ್ತಿ ದೈವಕ್ಕೆ ಸಲ್ಲಬೇಕು ಎಂದ ರಿಷಬ್ ಶೆಟ್ಟಿ; ನಟನ ಫಸ್ಟ್‌ ರಿಯಾಕ್ಷನ್‌ ಹೀಗಿತ್ತು!

ಇದನ್ನೂ ಓದಿ: Rishab Shetty: ಈ ಪ್ರಶಸ್ತಿ ದೈವಕ್ಕೆ ಸಲ್ಲಬೇಕು ಎಂದ ರಿಷಬ್ ಶೆಟ್ಟಿ; ನಟನ ಫಸ್ಟ್‌ ರಿಯಾಕ್ಷನ್‌ ಹೀಗಿತ್ತು!

ಹೆಚ್ಚಿನ ಪಾತ್ರವರ್ಗದ ಸದಸ್ಯರನ್ನು ಸೇರಿಸಲಾಗುತ್ತಿದೆ ಎನ್ನಲಾಗಿದೆ. ಮೊದಲ ಚಿತ್ರಕ್ಕೆ ಹೋಲಿಸಿದರೆ ಚಿತ್ರತಂಡದ ಸದಸ್ಯರು ಹೆಚ್ಚು ಸಂಭಾವನೆ ಪಡೆಯುವ ಸಾಧ್ಯತೆಯಿದೆ. ರಿಷಬ್ ಶೆಟ್ಟಿ ಮೊದಲ ಚಿತ್ರಕ್ಕೆ ರೂ. 4 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವದಂತಿಗಳಿವೆ. ಅವರು ಪ್ರಿಕ್ವೆಲ್‌ನೊಂದಿಗೆ ದುಪ್ಪಟ್ಟು ಗಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಾಂತಾರ-1 , 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಿಲಾಗಿದ್ದು, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 400 ಕೋಟಿ ರೂ. ಗಳಿಸಿತು. ಕಾಂತಾರ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಾಗ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡಿತು. ಕಾಂತಾರ ಚಿತ್ರದಲ್ಲಿ ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Continue Reading
Advertisement
bangladesh unrest
ದೇಶ10 mins ago

Bangladesh Unrest: ಪ್ರಧಾನಿ ಮೋದಿಗೆ ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ ಕರೆ; ಹಿಂದೂಗಳ ರಕ್ಷಣೆ ಬಗ್ಗೆ ಭರವಸೆ

WFI chief Sanjay Singh
ಕ್ರೀಡೆ15 mins ago

WFI Chief Sanjay Singh: ಪ್ರತಿಭಟನೆಯಿಂದಲೇ ಕುಸ್ತಿಯಲ್ಲಿ ಹೆಚ್ಚಿನ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ; ಸಂಜಯ್​ ಸಿಂಗ್​ ಆರೋಪ

KGF Chapter 2
ಸಿನಿಮಾ16 mins ago

KGF Chapter 2: ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಕೆಜಿಎಫ್‌ 2 ಚಿತ್ರದ 6 ವಿಶೇಷ ಸಂಗತಿಗಳಿವು!

False Case
ಕರ್ನಾಟಕ23 mins ago

False Case: ಪಿಎಸ್ಐ ಮನೆಯಲ್ಲಿ 12 ಲಕ್ಷ ಕಳವು ಕೇಸ್; ತನಿಖೆ ವೇಳೆ ಬಯಲಾಯ್ತು ನಕಲಿ ದೂರಿನ‌ ಅಸಲಿ ಕತೆ!

Shimla For Honeymoon
Latest36 mins ago

Shimla For Honeymoon: ಹನಿಮೂನ್‍ ಜೋಡಿಗಳ ರೊಮ್ಯಾನ್ಸ್‌ ಹೆಚ್ಚಿಸುತ್ತವೆ ಶಿಮ್ಲಾದ ಈ ತಾಣಗಳು!

Kannada New Movie powder habba pre realease programme
ಸ್ಯಾಂಡಲ್ ವುಡ್58 mins ago

Kannada New Movie: ಅದ್ಧೂರಿಯಾಗಿ ನಡೆದ ʻಪೌಡರ್ ಹಬ್ಬʼ; ಪ್ರೀ ರಿಲೀಸ್ ಕಾರ್ಯಕ್ರಮ ಝಲಕ್‌ ಹೀಗಿದೆ!

Digital Arrest
ಕರ್ನಾಟಕ1 hour ago

Digital Arrest: ಡಿಜಿಟಲ್‌ ಅರೆಸ್ಟ್‌ ಮಾಡಿ 2.2 ಕೋಟಿ ರೂ. ವಂಚನೆ; ಐವರು ಸೈಬರ್‌ ಕಳ್ಳರ ಬಂಧನ

KGF 2
ಸಿನಿಮಾ1 hour ago

KGF 2: ರಾಷ್ಟ್ರ ಪ್ರಶಸ್ತಿ ವಿಜೇತ ಕೆಜಿಎಫ್‌ 2 ಹೀರೊ ಯಶ್ ಕುರಿತ 10 ಕುತೂಹಲಕರ ಸಂಗತಿಗಳಿವು

Mady Villiers
ಕ್ರಿಕೆಟ್1 hour ago

Mady Villiers: ಎಬಿಡಿ ವಿಲಿಯರ್ಸ್ ಶೈಲಿಯಲ್ಲೇ ಕ್ಯಾಚ್​ ಹಿಡಿದ ಇಂಗ್ಲೆಂಡ್​ ಆಟಗಾರ್ತಿ ಮ್ಯಾಡಿ ವಿಲಿಯರ್ಸ್; ವಿಡಿಯೊ ವೈರಲ್​

Koppala News
ಕೊಪ್ಪಳ1 hour ago

Koppala News: ಅವ್ಯವಹಾರ ನಡೆಸಿ ಕಿಮ್ಸ್ ಹೆಸರಿಗೆ ಮಸಿ ಬಳಿದರೆ ಮುಲಾಜಿಲ್ಲದೆ ಕ್ರಮ; ಶರಣಪ್ರಕಾಶ ಪಾಟೀಲ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌