Nirup Bhandari: ನಿರೂಪ್ ಭಂಡಾರಿ ಜತೆಯಾದ ಸಾಯಿಕುಮಾರ್‌; ಮತ್ತೆ ಒಂದಾಯ್ತು ʻರಂಗಿತರಂಗʼ ಕಾಂಬಿನೇಷನ್‌! - Vistara News

ಸ್ಯಾಂಡಲ್ ವುಡ್

Nirup Bhandari: ನಿರೂಪ್ ಭಂಡಾರಿ ಜತೆಯಾದ ಸಾಯಿಕುಮಾರ್‌; ಮತ್ತೆ ಒಂದಾಯ್ತು ʻರಂಗಿತರಂಗʼ ಕಾಂಬಿನೇಷನ್‌!

Nirup Bhandari: ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಯುವ ಪ್ರತಿಭೆ ಸಚಿನ್ ವಾಲಿ ಸಾರಥ್ಯದ ಹೊಸ ಸಿನಿಮಾದಲ್ಲಿ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಒಟ್ಟಿಗೆ ನಟಿಸ್ತಿದ್ದಾರೆ. ಈಗಾಗಲೇ ಸಾಯಿಕುಮಾರ್ ಚಿತ್ರತಂಡ ಸೇರಿದ್ದು ಬಹಳ ವರ್ಷಗಳ ನಂತ್ರ ಈ ಕಾಂಬೋ ಮತ್ತೆ ಒಂದಾಗಿರುವುದು ಕುತೂಹಲ ಹೆಚ್ಚಿಸಿದೆ.

VISTARANEWS.COM


on

sai kumar Nirup Bhandari Rangitarang combination has come together again!
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ರಂಗಿತರಂಗ’ ಚಿತ್ರ ಮಾಡಿದ ಸಾಧನೆ ದೊಡ್ಡದು. ಈ ಸಿನಿಮಾ ಬಿಡುಗಡೆಯಾಗಿ ಹೆಚ್ಚುಕಮ್ಮಿ 10 ವರ್ಷವಾಗಿದೆ. ಬಾಹುಬಲಿಯಂತಹ ದೊಡ್ಡ ಸಿನಿಮಾದ ಎದುರು ಗೆದ್ದು ಬೀಗಿದ್ದ ಈ ಸಿನಿಮಾದಲ್ಲಿ, ನಾಯಕನಾಗಿ ಅಮೋಘವಾಗಿ ನಟಿಸಿದ್ದ ನಿರೂಪ್ ಭಂಡಾರಿ (Nirup Bhandari) ಎದುರು ಖಳನಾಯಕನಾಗಿ ಸಾಯಿಕುಮಾರ್ ಅತ್ಯದ್ಭುತ ಪ್ರದರ್ಶನ ತೋರಿಸಿದ್ದರು. ಪೋಸ್ಟ್ ಮ್ಯಾನ್ ಕಾಳಿಂಗನಾಗಿ ಅಬ್ಬರಿಸಿದ್ದ ಸಾಯಿಕುಮಾರ್ ಹಾಗೂ ನಿರೂಪ್ ಮತ್ತೆ ಕೈ ಜೋಡಿಸಿದ್ದಾರೆ.

ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಯುವ ಪ್ರತಿಭೆ ಸಚಿನ್ ವಾಲಿ ಸಾರಥ್ಯದ ಹೊಸ ಸಿನಿಮಾದಲ್ಲಿ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಒಟ್ಟಿಗೆ ನಟಿಸ್ತಿದ್ದಾರೆ. ಈಗಾಗಲೇ ಸಾಯಿಕುಮಾರ್ ಚಿತ್ರತಂಡ ಸೇರಿದ್ದು ಬಹಳ ವರ್ಷಗಳ ನಂತ್ರ ಈ ಕಾಂಬೋ ಮತ್ತೆ ಒಂದಾಗಿರುವುದು ಕುತೂಹಲ ಹೆಚ್ಚಿಸಿದೆ. ಸಾಯಿಕುಮಾರ್ ಅವರು ನಿರೂಪ್ ಅವರ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಶೀರ್ಷಿಕೆ ಮತ್ತು ಪರ್ಸ್ಟ್ ಲುಕ್ ಫೆಬ್ರವರಿ 6ಕ್ಕೆ ಅನಾವರಣಗೊಳ್ಳುತ್ತಿದೆ.

ಇದನ್ನೂ ಓದಿ: Nirup Bhandari: ನಿರೂಪ್ ಭಂಡಾರಿಗೆ ಜೋಡಿಯಾದರು ಬೃಂದಾ ಆಚಾರ್ಯ!

ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಅಂಕೆತ್ ಸಿನಿಮಾಸ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ ನಿರ್ಮಿಸಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Rakshit Shetty: ಬ್ಯಾಚಲರ್‌ ಪಾರ್ಟಿ ‌’ಕಿರಿಕ್’; ಕೇಸ್‌ ಬೆನ್ನಲ್ಲೇ ಕಾನೂನು ಹೋರಾಟ ಎಂದ ರಕ್ಷಿತ್‌ ಶೆಟ್ಟಿ; ಇಲ್ಲಿದೆ ಪತ್ರ

Rakshit Shetty: ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಜನವರಿ 26 ರಂದು ರಿಲೀಸ್‌ ಆಗಿತ್ತು. ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾ‌ರ್, ನಟಿ ಸಿರಿ ರವಿಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಕಿರಿಕ್‌ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಈ ಸಿನಿಮಾದಲ್ಲಿ ಬಳಕೆಯಾದ ಎರಡು ಹಾಡುಗಳ ಕುರಿತು ಈಗ ವಿವಾದ ಸೃಷ್ಟಿಯಾಗಿದೆ.

VISTARANEWS.COM


on

Rakshit Shetty
Koo

ಬೆಂಗಳೂರು: ಸ್ಯಾಂಡಲ್‌ವುಟ್‌ ನಟ, ನಿರ್ಮಾಪಕ, ನಿರ್ದೇಶಕ ರಕ್ಷಿತ್‌ ಶೆಟ್ಟಿ (Rakshit Shetty) ವಿರುದ್ಧ ಕಾಪಿರೈಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ (Bachelor Party Kannada Movie) ಬಳಸಿದ ಒಮ್ಮೆ ನಿನ್ನನ್ನು ಹಾಗೂ ನ್ಯಾಯ ಎಲ್ಲಿದೆ ಎಂಬ ಹಾಡುಗಳ ಕಾಪಿರೈಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಕೇಸ್‌ ದಾಖಲಾಗಿದೆ. ಇದರ ಬೆನ್ನಲ್ಲೇ, ರಕ್ಷಿತ್‌ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋಸ್‌ನಿಂದ (Paramvah Studios) ಸುದೀರ್ಘ ಪತ್ರ ಬರೆದಿದ್ದು, ಕಾನೂನು ಹೋರಾಟ ಮಾಡುವುದಾಗಿ ಘೋಷಿಸಲಾಗಿದೆ.

ಪರಂವಃ ಪತ್ರದ ಸಾರಾಂಶ ಹೀಗಿದೆ…

“ನಾವು ಈ ಬಹಿರಂಗ ಪತ್ರವನ್ನು ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ನಮ್ಮ ಮೇಲೆ ಎರಡು ಹಾಡಿನ ಹಕ್ಕು ಉಲ್ಲಂಘನೆಯ ಆರೋಪ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ಬರೆದಿರುತ್ತೇವೆ. ಮೊದಲಿಗೆ ಸ್ಪಷ್ಟಿಕರಿಸಲು, ಚಿತ್ರದಲ್ಲಿ ಬಳಕೆಯಾಗಿರುವ ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಕಾರಣ, ಚಿತ್ರದಲ್ಲಿ ಈ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂದು. ಅಲ್ಲದೆ, ಬಳಕೆಯ ರೂಪವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ” ಎಂಬುದಾಗಿ ಪತ್ರವನ್ನು ಹಂಚಿಕೊಳ್ಳಲಾಗಿದೆ.

“ಈ ಮುಂಚೆ, ಅಂದರೆ, ಬ್ಯಾಚುಲರ್ ಪಾರ್ಟಿ ಸಿನಿಮ ತೆರೆಕಾಣುವುದಕ್ಕೂ ಮುನ್ನವೆ ನಾವು ಎಂ ಆರ್ ಟಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಈ ಕುರಿತು ಮಾತು ಕತೆ ನಡೆಸಿದ್ದೆವು. ಆದರೆ ಅವರು ನಮ್ಮ ಮುಂದೆ ಇಟ್ಟ ಶುಲ್ಕ, ನಮ್ಮ ಬಜೆಟ್‌ ಅನ್ನು ಮೀರಿತ್ತು. ಎಂ ಆರ್ ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರು ಮಾತುಕತೆಗೆ ತಯಾರಿರರಿಲ್ಲ. ಈಗ ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಬಂದಿದ್ದು, ಎಫ್ ಐ ಆರ್ ದಾಖಲಾಗಿದೆ. ಇದು ನಿಜವಾಗಿಯು ಹಾಡಿನ ಹಕ್ಕು ಉಲ್ಲಂಘನೆಯೆ? ಹೌದಾಗಿದ್ದೇ ಆದಲ್ಲಿ, ನಾವು ತರಬೇಕಾದ ದಂಡವಾದರೂ ಎಷ್ಟು? ಏಕೆಂದರೆ ಎಂ ಆರ್ ಟಿ ಸಂಸ್ಥೆಯಿಂದ ಕೇಳಲ್ಪಟ್ಟದ್ದು ಬೃಹತ್ ಮೊತ್ತ ಎಂದರೆ ತಪ್ಪಾಗಲಾರದು. ಅಲ್ಲವಾದರೆ, ಈ ತರಹದ ಆರೋಪವನ್ನು ಈಗಾಗಲಿ ಅಥವಾ ಮುಂಬರುವ ದಿನಗಳಲ್ಲಾಗಲಿ ಹೇಗೆ ಸಹಿಸಿಕೊಳ್ಳುವುದು! ಇದೊಂದು ಯಕ್ಷ ಪ್ರಶ್ನೆ! ಇದಕ್ಕೆ ಉತ್ತರ ನಾವು ಹುಡುಕ ಬಯಸುತ್ತೇವೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“ಹಾಗಾಗಿ, ನ್ಯಾಯ ಮತ್ತು ಪ್ರಭುದ್ಧತೆಯನ್ನು ಕಾಪಾಡಿಕೊಳ್ಳಲು ನಾವು ಇದನ್ನು ನ್ಯಾಯಸ್ಥಾನದಲ್ಲಿಯೇ ನಿರ್ಧಾರವಾಗಿಲಿ ಎಂದು ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ. ಇದರಿಂದ ಇನ್ನು ಮುಂಬರುವ ದಿನಗಳಲ್ಲಿ, ನಮಗಷ್ಟೇ ಅಲ್ಲ, ಬೇರೆ ಇನ್ಯಾವ ಸಿಸಿಮಾ ಕರ್ಮಿಗೂ ಈ ಪರಿಸ್ಥಿತಿ ಹಾಗೂ ಗೊಂದಲ ಎದುರಾಗಬಾರದೆಂದು, ನಮ್ಮ ಈ ಪ್ರಾಮಾಣಿಕ ಪ್ರಯತ್ನ” ಎಂದು ಪರಂವಃ ಸ್ಟುಡಿಯೋಸ್‌ ಪತ್ರದ ಮೂಲಕ ತಿಳಿಸಿದೆ. ಹಾಗೆಯೇ, ಸಿನಿಮಾದಲ್ಲಿ ಬಳಸಲಾದ ಎರಡು ಹಾಡುಗಳ ವಿಡಿಯೊವನ್ನು ಕೂಡ ಹಂಚಿಕೊಳ್ಳಲಾಗಿದೆ.

  ಏನಿದು ಪ್ರಕರಣ?

  ʻನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಹಾಗೂ ‘ಒಮ್ಮೆ ನಿನ್ನನ್ನೂ ಕಣ್ತುಂಬ ನೋಡುವಾಸೆ” ಹಾಡುಗಳನ್ನು ಕದ್ದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿಂದೆ ನವೀನ್ ಕುಮಾರ್ ಎಂಬುವವರ ಜತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು. ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡುವ ಬ್ಯುಸಿನೆಸ್ ಮೆನ್ ಆಗಿದ್ದರು. ಇವರ ಜತೆ ಹಾಡಿಗೆ ಸಂಬಂಧಿಸಿದ ಮಾತುಕತೆ ನಡೆದಿತ್ತು. ಆದರೆ ನಾನಾ ಕಾರಣಕ್ಕೆ ಈ ಡೀಲ್ ಮುರಿದು ಬಿದ್ದಿತ್ತು. ಆದರೂ ಆ ಹಾಡನ್ನು ಮಾಲೀಕರ ಅನುಮತಿ ಇಲ್ಲದೆ ಬಳಕೆ ಆಗಿತ್ತು. ಚಿತ್ರದಲ್ಲಿ ಎರಡೂ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ್ದಾರೆಂದು ನವೀನ್‌ರಿಂದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂದು ಕಿರಿಕ್ ಪಾರ್ಟಿ ಇಂದು ಬ್ಯಾಚುಲರ್ ಪಾರ್ಟಿ ವಿವಾದ ಶುರು ಆದಂತಾಗಿದೆ.

  ಇದನ್ನೂ ಓದಿ: Rakshit Shetty: ರಕ್ಷಿತ್‌ ಶೆಟ್ಟಿಗೆ ತಪ್ಪದ ಸಂಕಷ್ಟ; ಮತ್ತೊಂದು ದೂರು ದಾಖಲು!

  Continue Reading

  ಸಿನಿಮಾ

  Actor Chetan: ವಿಧಾನಸೌಧದ ಮುಂದೆ ಭುವನೇಶ್ವರಿ ಪ್ರತಿಮೆ ಬೇಡ: ನಟ ಚೇತನ್‌

  ಎಲ್ಲಾ ಬ್ರಾಹ್ಮಣ್ಯಗಳ ನಡುವೆ ಈ ಸರ್ಕಾರ ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ. ಕನ್ನಡ ಶಾಲೆಗಳಲ್ಲಿ ಕನ್ನಡದ ಪ್ರಾಬಲ್ಯ ಹೆಚ್ಚಿಸಲು ಕಾನೂನು ತರಬೇಕು. ಕನ್ನಡ ಮಾಧ್ಯಮದಲ್ಲಿ ಓದಿರೋರಿಗೆ ಉದ್ಯೋಗ ಕಲ್ಪಿಸಿಕೊಡಿ ಎಂದು ಚೇತನ್‌ (Actor Chetan) ಹೇಳಿದ್ದಾರೆ.

  VISTARANEWS.COM


  on

  actor Chetan
  Koo

  ಚಿಕ್ಕಬಳ್ಳಾಪುರ: ವಿಧಾನಸೌಧದ (Vidhana Soudha) ಆವರಣದಲ್ಲಿ ಕನ್ನಡ ತಾಯಿ ಭುವನೇಶ್ವರಿ (Goddess Buvanehswari) ಪ್ರತಿಮೆ ಸ್ಥಾಪನೆಗೆ ನಟ ಚೇತನ್ (Actor Chetan) ವಿರೋಧ ವ್ಯಕ್ತಪಡಿಸಿದ್ದಾರೆ. ʼಸರ್ಕಾರ 25 ಅಡಿಯ ಭುವನೇಶ್ವರಿ ಪ್ರತಿಮೆ (Bhuvaneshwari Statue) ಸ್ಥಾಪನೆ ಮಾಡಿರುವುದು ಕನ್ನಡ ಪರ ಅಲ್ಲ, ಮೌಢ್ಯದ ಪರʼ ಎಂದಿದ್ದಾರೆ.

  ಎಲ್ಲಾ ಬ್ರಾಹ್ಮಣ್ಯಗಳ ನಡುವೆ ಈ ಸರ್ಕಾರ ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ. ಕನ್ನಡ ಶಾಲೆಗಳಲ್ಲಿ ಕನ್ನಡದ ಪ್ರಾಬಲ್ಯ ಹೆಚ್ಚಿಸಲು ಕಾನೂನು ತರಬೇಕು. ಕನ್ನಡ ಮಾಧ್ಯಮದಲ್ಲಿ ಓದಿರೋರಿಗೆ ಉದ್ಯೋಗ ಕಲ್ಪಿಸಿಕೊಡಿ. ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಿಕೊಡಿ. ಅದು ನಿಜವಾದ ಕನ್ನಡ ಅಭಿಮಾನ. ಹೊರತು ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡುವುದಲ್ಲ ಎಂದು ಚೇತನ್‌ ನುಡಿದಿದ್ದಾರೆ.

  ಮುಂದಿನ ದಿನಗಳಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಪಾಲಿಟಿಕ್ಸ್ ಆಗುತ್ತೆ. ಭುವನೇಶ್ವರಿ ಪ್ರತಿಮೆಗೆ ಒಬ್ಬ ಅರ್ಚಕ ಬರ್ತಾರೆ. ಮುಂದೆ ಅದು ಮಂದಿರ ಆಗುತ್ತೆ. ಮುಂದಿನ ದಿನಗಳಲ್ಲಿ ವಿಧಾನಸೌಧ ಒಂದು ಧಾರ್ಮಿಕ ಕೇಂದ್ರವಾಗಿಬಿಡುತ್ತೆ ಎಂದು ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನಟ ಚೇತನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ವಾಲ್ಮೀಕಿ ನಿಗಮ ಹಗರಣಕ್ಕೆ ಆಕ್ರೋಶ

  ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ (Valmiki Corporation Scam) ವಿಚಾರದಲ್ಲಿ ಸರ್ಕಾರದ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 187 ಕೋಟಿ ರೂಪಾಯಿ ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆಗಿದೆ. ವಾಲ್ಮೀಕಿ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಈ ಹಗರಣದ ಬಗ್ಗೆ ಎಸ್.ಐ.ಟಿ. ಒಂದೂವರೆ ತಿಂಗಳಿಂದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬಿ.ನಾಗೇಂದ್ರ ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದ ವ್ಯಕ್ತಿ. ಮಂತ್ರಿ ಆಗಲು ಅರ್ಹತೆ ಇಲ್ಲದ ವ್ಯಕ್ತಿ. ಅಂತಹವರು ಸಚಿವರಾದರು. ಎಸ್.ಐ.ಟಿ. ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಇಡಿ ಪ್ರವೇಶ ಮಾಡಿದ ನಂತರ ತನಿಖೆ ಚುರುಕುಗೊಂಡಿದೆ. ತೆಲಂಗಾಣ-ಆಂಧ್ರಕ್ಕೆ ಆ ಹಣ ಹೋಗಿದೆ ಅನ್ನೋದು ಬೆಳಕಿಗೆ ಬಂದಿದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಅವರು ಹೇಳಿದ್ದಾರೆ.

  ನ್ಯಾಯಾಂಗ ತನಿಖೆಗೆ ಒಪ್ಪಲ್ಲ: ವಿಜಯೇಂದ್ರ

  ಮುಡಾ ಹಗರಣದಲ್ಲಿ ನ್ಯಾಯಾಂಗ ತನಿಖೆಗೆ ನಾವು ಒಪ್ಪುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಮುಡಾ ಹಗರಣ ನ್ಯಾಯಾಂಗ ತನಿಖೆಗೆ ನೀಡಿರುವುದು ಸರಿಯಲ್ಲ. ಸರ್ಕಾರ CBI ತನಿಖೆಗೆ ನೀಡಬೇಕು. ಯಾವುದೇ ಕಾರಣಕ್ಕೂ ನ್ಯಾಯಾಂಗ ತನಿಖೆಯನ್ನು ಒಪ್ಪಲ್ಲ. ಸಿಎಂಗೆ ತಾಕತ್‌ ಇದ್ದರೆ ಇದನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

  ನ್ಯಾಯಾಂಗ ತನಿಖೆ ಅಂತ ನಾಟಕ‌ಮಾಡುತ್ತಿದ್ದಾರೆ. ಇದೊಂದು ದೊಡ್ಡ ಹಗರಣ. ಸದನದ ಒಳಗೆ ಹೊರಗೆ ನಾವು ಹೋರಾಟ ಮಾಡುತ್ತೇವೆ. ಸಿಎಂ ರಾಜೀನಾಮೆ ಕೋಡಬೇಕು. ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದು ದಲಿತರ ಹಣ ದೋಚಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲಾಗಿದೆ. ಸಿಎಂ ನೈತಿಕತೆ ‌ಕಳೆದುಕೊಂಡಿದ್ದಾರೆ. ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಈಗಾಗಲೇ ಇಡಿ‌ ಕಸ್ಟಡಿಯಲ್ಲಿದ್ದಾರೆ. ಸಿಎಂ ಇದಕ್ಕೆ ಉತ್ತರ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

  ಡಿಸಿಎಂ ಆರೋಪಿಗಳಿಗೆ ಕ್ಲೀನ್ ಚಿಟ್ ಕೊಡ್ತಾ ಇದ್ದಾರೆ. ಮುಡಾ ಹಗರಣ ಸಿಬಿಐಗೆ ವಹಿಸಬೇಕು. ವಾಲ್ಮೀಕಿ ನಿಗಮದ ಹಗರಣಕ್ಕೆ ಸದನದಲ್ಲಿ ಸಿಎಂ ಉತ್ತರ ಕೋಡಬೇಕು. ವಾಲ್ಮೀಕಿ ನಿಗಮ ಹಗರಣದ ಬಗ್ಗೆ ನಿಲುವಳಿ‌ ಸೂಚನೆ ಕೊಟ್ಟಿದ್ದೇವೆ. ಇವತ್ತು ಚರ್ಚೆಗೆ ಅವಕಾಶ ಕೊಡುತ್ತೇವೆ. ಮುಡಾದಲ್ಲಿ ಯಾರದೇ ಮೇಲೆ ಆರೋಪ ಇರಲಿ, ಸಿಬಿಐ ತನಿಖೆಗೆ ನೀಡಿ ಎಂದು ಸರ್ಕಾರಕ್ಕೆ ವಿಜಯೇಂದ್ರ ಒತ್ತಾಯಿಸಿದರು.

  ಇದನ್ನೂ ಓದಿ: CM Siddaramaiah: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ನೀಡಲು ಮುಂದಾದ ಬಿಜೆಪಿ

  Continue Reading

  ಸ್ಯಾಂಡಲ್ ವುಡ್

  Ragini Prajwal: ರಾಗಿಣಿ ಪ್ರಜ್ವಲ್ ಅಭಿನಯದ `ಶಾನುಭೋಗರ ಮಗಳು’ ಚಿತ್ರ ಸದ್ಯದಲ್ಲೇ ತೆರೆಗೆ!

  Ragini Prajwal: ವಸಂತ ಕುಲಕರ್ಣಿ ಕಲಾ ನಿರ್ದೇಶನ, ರಮೇಶ್ ಕೃಷ್ಣನ್ ಸಂಗೀತ, ಕರಣ್ ಮಯೂರ್ ನಿರ್ಮಾಣ ನಿರ್ವಹಣೆ ಹಾಗೂ ಎಸ್.ನಾಗರಾಜ್ ರಾವ್(ಹಾಸ್ನ), ರಘು ಕಲ್ಪತರು ಸಹ ನಿರ್ದೇಶನವಿರುವ “ಶಾನುಭೋಗರ ಮಗಳು” ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.

  VISTARANEWS.COM


  on

  Ragini Prajwal shanabhogara magalu will release
  Koo

  ಬೆಂಗಳೂರು: ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ “ಶಾನುಭೋಗರ ಮಗಳು” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ “ಯು/ಎ” ಪ್ರಮಾಣ ಪತ್ರ ನೀಡಿದೆ. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ “ಶಾನುಭೋಗರ ಮಗಳ” (Ragini Prajwal) ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

  ಭುವನ್ ಫಿಲಂಸ್ ಲಾಂಛನದಲ್ಲಿ ಸಿ.ಎಂ.ನಾರಾಯಣ್ ನಿರ್ಮಿಸಿರುವ ಈ ಚಿತ್ರ ಹಲವು ವಿಶೇಷಗಳನ್ನೊಳಗೊಂಡಿದೆ. ಜೈ ಆನಂದ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಬಿ.ಎಸ್ ಕೆಂಪರಾಜ್ ಅವರ ಸಂಕಲನವಿದೆ. ವಸಂತ ಕುಲಕರ್ಣಿ ಕಲಾ ನಿರ್ದೇಶನ, ರಮೇಶ್ ಕೃಷ್ಣನ್ ಸಂಗೀತ, ಕರಣ್ ಮಯೂರ್ ನಿರ್ಮಾಣ ನಿರ್ವಹಣೆ ಹಾಗೂ ಎಸ್.ನಾಗರಾಜ್ ರಾವ್(ಹಾಸ್ನ), ರಘು ಕಲ್ಪತರು ಸಹ ನಿರ್ದೇಶನವಿರುವ “ಶಾನುಭೋಗರ ಮಗಳು” ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.

  ಇದನ್ನೂ ಓದಿ: Paris Olympics 2024 : ಜಿಯೋಸಿನಿಮಾದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​​ ಉಚಿತ ನೇರಪ್ರಸಾರ

  ರಾಗಿಣಿ ಪ್ರಜ್ವಲ್,ನಿರಂಜನ್ ಶೆಟ್ಟಿ, ರಮೇಶ್ ಭಟ್, ಶ್ರೀನಿವಾಸಮೂರ್ತಿ, ಸುಧಾ ಬೆಳವಾಡಿ, ವಾಣಿಶ್ರೀ, ಪದ್ಮಾ ವಾಸಂತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಟಿಪ್ಪುಸುಲ್ತಾನ್ ಪಾತ್ರದಲ್ಲಿ ಖ್ಯಾತ ನಟ ಕಿಶೋರ್ ಅಭಿನಯಿಸಿದ್ದಾರೆ.

  Continue Reading

  ಸ್ಯಾಂಡಲ್ ವುಡ್

  Kannada New Movie: ಸಸ್ಪೆನ್ಸ್, ಥ್ರಿಲ್ಲರ್ `ನೈಸ್ ರೋಡ್’ ಟ್ರೈಲರ್ ಬಿಡುಗಡೆ!

  Kannada New Movie: ಗೋವಿಂದೇಗೌಡ, ಮಂಜು ನಾಥ್ ರಂಗಾಯಣ, ಮಂಜು ಕ್ರಿಶ್, ರೇಣು ಶಿಕಾರಿ, ಪ್ರಭು, ಸಚ್ಚಿ ರವಿಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. 25 ದಿನಗಳ ಕಾಲ ಬೆಂಗಳೂರು, ಕುಣಿಗಲ್ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದು ಈ ತಿಂಗಳ ಕೊನೆಯ ವಾರ ರಿಲೀಸ್ ಮಾಡೋ ಪ್ಲ್ಯಾನ್ ಇದೆ

  VISTARANEWS.COM


  on

  Kannada New Movie Nice road trailer out
  Koo

  ಬೆಂಗಳೂರು: ಗೋಪಾಲ್ ಹಳೇಪಾಳ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ (Kannada New Movie) ಮಾಡಿರುವ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ʻನೈಸ್ ರೋಡ್ʼ ಚಿತ್ರದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಹಿಂದಿನ ಜನ್ಮದಲ್ಲಿ ಮಾಡಿದ ತಪ್ಪಿಗೆ ಈ ಜನ್ಮದಲ್ಲಿ ಶಿಕ್ಷೆ ಕೊಡುವುದು ಯಾವ ನ್ಯಾಯ ಎನ್ನುವ ಅಂಶವನ್ನಿಟ್ಟುಕೊಂಡು ಕರ್ಮ ಮತ್ತು ಧರ್ಮದ ಮೇಲೆ ‘ನೈಸ್ ರೋಡ್’ ಚಿತ್ರದ ಕಥೆ ಹೆಣೆಯಲಾಗಿದೆ.

  ನಿರ್ದೇಶನದ ಜತೆಗೆ ಪುನರ್ ಗೀತಾ ಸಿನಿಮಾಸ್ ಬ್ಯಾನರ್ ಅಡಿ ಗೋಪಾಲ್ ಹಳೇಪಾಳ್ಯ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.‌ ಈ ಸಂದರ್ಭದಲ್ಲಿ ನಿರ್ದೇಶಕ ಗೋಪಾಲ್ ಮಾತನಾಡಿ ʻʻಈ ಹಿಂದೆ ನಾನು ತಾಂಡವ ಎಂಬ ಸಿನಿಮಾ ನಿರ್ದೇಶನ ಮಾಡಿದ್ದೆ. ನೈಸ್ ರೋಡ್ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದ್ದು ಪಾಪ, ಪುಣ್ಯ, ಪುನರ್ಜನ್ಮದ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿದ ಚಿತ್ರ. ಈ ಕಥೆ ಬರೆಯುವಾಗಲೇ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರಕ್ಕೆ ಧರ್ಮ ಅವರನ್ನು ಆಯ್ಕೆ ಮಾಡಿಕೊಂಡಿದ್ದೆ, ಮತ್ತೊಂದು ಮುಖ್ಯ ಪಾತ್ರದಲ್ಲಿ ಜೋತಿ ರೈʼʼ ಕಾಣಿಸಿಕೊಂಡಿದ್ದಾರೆ.‌ ಎಂದರು.

  ʻʻಗೋವಿಂದೇಗೌಡ, ಮಂಜು ನಾಥ್ ರಂಗಾಯಣ, ಮಂಜು ಕ್ರಿಶ್, ರೇಣು ಶಿಕಾರಿ, ಪ್ರಭು, ಸಚ್ಚಿ ರವಿಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. 25 ದಿನಗಳ ಕಾಲ ಬೆಂಗಳೂರು, ಕುಣಿಗಲ್ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದು ಈ ತಿಂಗಳ ಕೊನೆಯ ವಾರ ರಿಲೀಸ್ ಮಾಡೋ ಪ್ಲ್ಯಾನ್ ಇದೆ, ನೈಸ್ ರೋಡ್ ಗೂ ನಮ್ಮ ಸಿನಿಮಾಗೂ ಸಂಬಂಧವಿಲ್ಲ. ಹಳ್ಳಿಯ ಮುಂದೆ ಹೈವೇ ರಸ್ತೆಯಿರುತ್ತದೆ. ಆ ರಸ್ತೆ ಎಷ್ಟು ನೈಸಾಗಿದೆ ಅಂತ ಊರ ಜನ ಹೇಳ್ತಿರ್ತಾರೆ. ಅದನ್ನೇ ಚಿತ್ರದ ಟೈಟಲ್ ಆಗಿಟ್ಟಿದ್ದೇವೆʼʼ ಎಂದು ಹೇಳಿದರು.

  ಇದನ್ನೂ ಓದಿ: Kannada New Movie: ಕಣ್ಮನ ಸೆಳೆಯುತ್ತಿದೆ ”ಕಡಲೂರ ಕಣ್ಮಣಿ” ಚಿತ್ರದ ಟ್ರೇಲರ್

  ನಟ ಧರ್ಮ ಮಾತನಾಡಿ ಈವರೆಗೆ ಎಲ್ಲಾ ಥರದ ಪಾತ್ರಗಳನ್ನು ಮಾಡಿದ್ದೇನೆ. ಇಲ್ಲೂ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದು, ಇದರಲ್ಲಿ ಕಥೆಯೇ ಹೀರೋ. ಕರ್ಮದ ಬಗ್ಗೆ ಕಥೆ ಹೇಳಲಾಗಿದ್ದು, ಡಿಫರೆಂಟ್ ಆಗಿ ಬಂದಿದೆ. ಗೋಪಾಲ್ ನೀವೇ ಬೇಕು ಅಂತ ಬಂದಿದ್ದರು ಎಂದು ಹೇಳಿದರು.

  ರಾಜುಗೌಡ ಮಾತನಾಡಿ ʻʻಈ ಕಾನ್ಸೆಪ್ಟ್ ಕೇಳಿದಾಗ ತುಂಬಾ ಇಷ್ಟ ಆಯ್ತು. ಕ್ಯಾರೆಕ್ಟರ್ ಗಳಲ್ಲಿ ನಮ್ಮ ಸುತ್ತಲಿನ ಅನೇಕ ಪಾತ್ರಗಳು ಸಿಗುತ್ತವೆ, ಇದು ಬದುಕಿನ ಆಯಾಮ ಕಟ್ಟಿಕೊಡುವ ಚಿತ್ರ ಈ ಬಳಗದ ಜೊತೆ ನಾನು ನಿಂತದ್ದು ಖುಷಿಯಿದೆʼʼ ಎಂದರು.

  ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡುತ್ತ ಪ್ರಾರಂಭದಲ್ಲಿ ಹಾಡುಗಳು ಇರಲಿಲ್ಲ. ಆರ್.ಆರ್. ತುಂಬಾ ಚಾಲೆಂಜಿಂಗ್ ಆಗಿತ್ತು. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇರುವ ಚಿತ್ರ. ಮನುಷ್ಯ ಜೀವನದಲ್ಲಿ ನಡೆವ ಹಲವಾರು ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ ಎಂದರು.

  ಉಳಿದಂತೆ ಛಾಯಾಗ್ರಾಹಕ ಪ್ರವೀಣ್ ಶೆಟ್ಟಿ, ಕಲಾವಿದರಾದ ಮಂಜು ರಂಗಾಯಣ, ಗೋವಿಂದೇ ಗೌಡ, ರವಿಕಿಶೋರ್, ಸಚ್ಚಿ, ಸುರೇಖ, ಮಂಜು ಕ್ರಿಶ್, ಪ್ರಭು ತಮ್ಮ ಪಾತ್ರಗಳ ಕುರಿತು ಮಾತನಾಡಿದರು.

  Continue Reading
  Advertisement
  Virat Kohli
  ಪ್ರಮುಖ ಸುದ್ದಿ16 mins ago

  Virat Kohli : ಹಣ, ಹೆಸರು ಬಂದ ತಕ್ಷಣ ಕೊಹ್ಲಿಗೆ ಅಹಂಕಾರ ಬಂತು; ಮಾಜಿ ಆಟಗಾರನ ಅರೋಪ

  Smriti Singh
  ದೇಶ16 mins ago

  Smriti Singh: ಹುತಾತ್ಮ ಯೋಧನ 1 ಕೋಟಿ ರೂಪಾಯಿಯಲ್ಲಿ ಪೋಷಕರಿಗೆ 50%, ಪತ್ನಿಗೆ 50%; ಕೊನೆಗೂ ಸಿಕ್ಕಿತು ನ್ಯಾಯ

  7th Pay Commission
  ಕರ್ನಾಟಕ56 mins ago

  7th Pay Commission: ವೇತನ ಏರಿಕೆಗೆ ಒಪ್ಪಿಗೆ; ಒಪಿಎಸ್, ಆರೋಗ್ಯ ಯೋಜನೆ ಬೇಡಿಕೆ ಬಾಕಿ; ನೌಕರರ ಸಂಘದ ಮುಂದಿನ ನಿರ್ಧಾರ ಏನು?

  Viral Video
  ವೈರಲ್ ನ್ಯೂಸ್1 hour ago

  Viral Video: ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ! ವಿಡಿಯೊ ನೋಡಿ

  Jasprit Bumrah
  ಕ್ರಿಕೆಟ್1 hour ago

  Jasprit Bumrah : ಬುಮ್ರಾ ಶೈಲಿಯಲ್ಲೇ ಬೌಲಿಂಗ್ ಮಾಡುವ ಪಾಕಿಸ್ತಾನದ ಬಾಲಕನ ವಿಡಿಯೊ ವೈರಲ್​

  Round table meeting on June 16 in Bengaluru
  ಕರ್ನಾಟಕ1 hour ago

  Round table meeting: ಶಿಕ್ಷಣ ಗುಣಮಟ್ಟ ಸುಧಾರಿಸಲು ಜು.16ರಂದು ದುಂಡು ಮೇಜಿನ ಸಭೆ

  Emergency Operations Center opened for public assistance says DC Lakshmipriya
  ಉತ್ತರ ಕನ್ನಡ1 hour ago

  Uttara Kannada News: ಸಾರ್ವಜನಿಕರ ನೆರವಿಗೆ ತುರ್ತು ಕಾರ್ಯಾಚರಣೆ ಕೇಂದ್ರ ಸ್ಥಾಪನೆ: ಡಿಸಿ

  district level various departments officials Meeting by DC MS Diwakar
  ವಿಜಯನಗರ1 hour ago

  Vijayanagara News: ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು: ಡಿಸಿ ಎಂ.ಎಸ್.ದಿವಾಕರ್‌ ಸೂಚನೆ

  Assembly Session Government is making sincere efforts to solve the problems in the Survey Department says Minister Krishna Byre Gowda
  ಕರ್ನಾಟಕ1 hour ago

  Assembly Session: ಸರ್ವೆ ಇಲಾಖೆ ಸಮಸ್ಯೆಗಳ ಪರಿಹಾರಕ್ಕೆ ಚುರುಕಿನ ಕ್ರಮ: ಸಚಿವ ಕೃಷ್ಣ ಬೈರೇಗೌಡ

  Grassroot Boxing match in Bengaluru
  ಬೆಂಗಳೂರು1 hour ago

  Grassroot Boxing: ಬೆಂಗಳೂರಿನಲ್ಲಿ ರೋಮಾಂಚನಗೊಳಿಸಿದ ಬಾಕ್ಸಿಂಗ್‌ ಪಂದ್ಯ

  Sharmitha Gowda in bikini
  ಕಿರುತೆರೆ9 months ago

  Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

  Kannada Serials
  ಕಿರುತೆರೆ9 months ago

  Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

  Bigg Boss- Saregamapa 20 average TRP
  ಕಿರುತೆರೆ9 months ago

  Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

  galipata neetu
  ಕಿರುತೆರೆ8 months ago

  Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

  Kannada Serials
  ಕಿರುತೆರೆ10 months ago

  Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

  Kannada Serials
  ಕಿರುತೆರೆ9 months ago

  Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

  Bigg Boss' dominates TRP; Sita Rama fell to the sixth position
  ಕಿರುತೆರೆ9 months ago

  Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

  geetha serial Dhanush gowda engagement
  ಕಿರುತೆರೆ7 months ago

  Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

  varun
  ಕಿರುತೆರೆ8 months ago

  Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

  Kannada Serials
  ಕಿರುತೆರೆ10 months ago

  Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

  karnataka Weather Forecast
  ಮಳೆ6 hours ago

  Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

  karnataka Rain
  ಮಳೆ13 hours ago

  Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

  karnataka weather Forecast
  ಮಳೆ18 hours ago

  Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

  Karnataka Rain
  ಮಳೆ1 day ago

  Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

  karnataka Rain
  ಮಳೆ1 day ago

  Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

  haveri News
  ಹಾವೇರಿ1 day ago

  Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

  karnataka Rain
  ಮಳೆ2 days ago

  Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

  karnataka Weather Forecast
  ಮಳೆ2 days ago

  Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

  karnataka Rain
  ಮಳೆ2 days ago

  Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

  Wild Animal Attack
  ಹಾಸನ2 days ago

  Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

  ಟ್ರೆಂಡಿಂಗ್‌