ಕಿರುತೆರೆ
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
ಧಾರಾವಾಹಿಯಲ್ಲಿ ‘ಸಮರ್ಥ್’ ಪಾತ್ರವನ್ನು ನಿರ್ವಹಿಸುತ್ತಿದ್ದ ನಟ ದೀಪಕ್ ಗೌಡ (Deepak Gowda) ಇದೀಗ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದಾರೆ. ದೀಪಕ್ ತಮ್ಮ ನಿರ್ಧಾರದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ‘ಶ್ರೀರಸ್ತು ಶುಭಮಸ್ತು’ ಕೂಡ ಒಂದು. ಟಿಆರ್‌ಪಿಯಲ್ಲಿಯೂ ಒಳ್ಳೆಯ ಸ್ಥಾನ ಪಡೆದುಕೊಂಡಿರುವ ಈ ಧಾರಾವಾಹಿ ಇದೀಗ ಪ್ರೇಕ್ಷಕರಿಗೆ ಬೇಸರ ಸುದ್ದಿ ನೀಡಿದೆ. ಧಾರಾವಾಹಿಯಲ್ಲಿ ‘ಸಮರ್ಥ್’ ಪಾತ್ರವನ್ನು ನಿರ್ವಹಿಸುತ್ತಿದ್ದ ನಟ ದೀಪಕ್ ಗೌಡ (Deepak Gowda) ಇದೀಗ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದಾರೆ. ದೀಪಕ್ ತಮ್ಮ ನಿರ್ಧಾರದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ದೀಪಕ್ ಅಭಿಮಾನಿಗಳು ಇನ್‌ಸ್ಟಾದಲ್ಲಿ ಕಮೆಂಟ್ ಮೂಲಕ ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ.
.’ಶ್ರೀ ರಸ್ತು ಶುಭಮಸ್ತು’ ಧಾರಾವಾಹಿಯ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ನಟಿಸಿದ್ದ ದೀಪಕ್ ಗೌಡ ಅಲ್ಲೂ ಕೂಡಾ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಆಗಲೂ ಕೂಡ ಅವರ ಪಾತ್ರ ಅರ್ಧದಲ್ಲೇ ಮುಗಿದುಹೋಇತ್ತು. ‘ಶ್ರೀ ರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಕಿರುತೆರೆ ವೀಕ್ಷಕರು ಸಮರ್ಥ್ ಹಾಗೂ ಸಿರಿ ಜೋಡಿಯನ್ನು ಕೂಡಾ ಮೆಚ್ಚಿಕೊಂಡಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಿಳಿ ಹೆಂಡ್ತಿ’ ಧಾರಾವಾಹಿಯಲ್ಲಿ ನಾಯಕ ಅಜಿತ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರಿ ದೀಪಕ್.
ಶ್ರೀ ರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಸಮರ್ಥ್ ಪಾತ್ರಕ್ಕೆ ಈಗಾಗಲೇ ಹೊಸ ನಟನ ಆಗಮನವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ದೊರೆಸಾನಿ’ ಧಾರಾವಾಹಿಯಲ್ಲಿ ನಾಯಕಿ ದೀಪಿಕಾಳ ಅಣ್ಣ ಆಗಿ ನಟಿಸಿದ್ದ ದರ್ಶಿತ್ ಗೌಡ ಇನ್ನು ಮುಂದೆ ಸಮರ್ಥ್ ಆಗಿ ನಟಿಸಲಿದ್ದಾರೆ.
ಇದನ್ನೂ ಓದಿ: Deepa Katte: ವೈವಾಹಿಕ ಜೀವನಕ್ಕೆ ಕಾಲಿಟ್ಟ `ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಖ್ಯಾತಿಯ ನಟಿ ದೀಪಾ ಕಟ್ಟೆ
ಶ್ರೀರಸ್ತು ಶುಭಮಸ್ತು ಧಾರಾವಾಹಿ ಕಥೆಯು ವಿಧವೆಯಾದ ತುಳಸಿ ಎಂಬ ಹುಡುಗಿಯ ಸುತ್ತ ಸುತ್ತುತ್ತದೆ. ತುಳಸಿಯನ್ನು ಮರುಮದುವೆ ಮಾಡಿಸಲು ಸಿರಿ ತನ್ನ ಕುಟುಂಬ ಮತ್ತು ಸಮಾಜದ ವಿರುದ್ಧ ನಿಲ್ಲುತ್ತಾಳೆ. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯು ಮರಾಠಿಯ ‘ಅಗ್ಗಾಬಾಯಿ ಸಾಸುಭಾಯಿ’ಯ ರಿಮೇಕ್ ಆಗಿದೆ. ‘ಶ್ರೀರಸ್ತು ಶುಭಮಸ್ತು’ 100 ಕ್ಕೂ ಹೆಚ್ಚು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಸೊಸೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮಧ್ಯ ವಯಸ್ಕನ ಪಾತ್ರವನ್ನು ಅಜಿತ್ ಹಿಂದೆ ನಿರ್ವಹಿಸುತ್ತಿದ್ದಾರೆ.
ಕಿರುತೆರೆ
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!
ಈ ವಾರ ವೀಕೆಂಡ್ ವಿತ್ ರಮೇಶ್ ಶೋದಲ್ಲಿ (Weekend With Ramesh) ಸಾಹಿತಿ, ಅಪ್ಪಟ ದೇಸೀ ಕವಿ, ಗ್ರಾಮ್ಯ ಸಾಹಿತ್ಯದ ಮೇರು ಶಿಖರ, ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಹಾಗೂ ನಟನೆ, ನಿರ್ದೇಶನ, ನಿರ್ಮಾಣಕ್ಕೂ ಜೈ ಎಂದ ಕಲಾವಿದ ಜೈ ಜಗದೀಶ್ ಅತಿಥಿಯಾಗಿದ್ದಾರೆ.
ಬೆಂಗಳೂರು: ಈ ವಾರ ವೀಕೆಂಡ್ ವಿತ್ ರಮೇಶ್ ಶೋದಲ್ಲಿ (Weekend With Ramesh) ಸಾಹಿತಿ, ಅಪ್ಪಟ ದೇಸೀ ಕವಿ, ಗ್ರಾಮ್ಯ ಸಾಹಿತ್ಯದ ಮೇರು ಶಿಖರ, ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಹಾಗೂ ನಟನೆ, ನಿರ್ದೇಶನ, ನಿರ್ಮಾಣಕ್ಕೂ ಜೈ ಎಂದ ಕಲಾವಿದ ಜೈ ಜಗದೀಶ್ ಅತಿಥಿಯಾಗಿದ್ದಾರೆ. ಇಬ್ಬರು ಅತಿಥಿಗಳ ಎಪಿಸೋಡ್ ಪ್ರೋಮೋಗಳನ್ನು ಜೀ ಕನ್ನಡ ವಾಹಿನಿ ಈಗಾಗಲೇ ಹಂಚಿಕೊಂಡಿದೆ.
ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾದವರು ದೊಡ್ಡರಂಗೇಗೌಡರು
ದೊಡ್ಡರಂಗೇಗೌಡರು ಕನ್ನಡದ ಕವಿ, ಸಾಹಿತಿ , ಪ್ರಾಧ್ಯಾಪಕರು ಮತ್ತು ಚಲನಚಿತ್ರ ಸಾಹಿತಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾಗಿದ್ದಾರೆ. ಗ್ರಾಮೀಣ ಸೊಗಡಿನ ಗೀತ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ. ʻಕನ್ನಡ ಪ್ರಗಾಥಗಳ ಸಾಮ್ರಾಟ್ʼ ಎಂದೂ ಪ್ರಸಿದ್ಧಿಯಾಗಿದ್ದಾರೆ.
ನೋಟದಾಗೆ ನಗೆಯ ಬೀರಿ, ನಮ್ಮೂರ ಮಂದಾರ ಹೂವೆ, ತೇರಾ ಏರಿ ಅಂಬರದಾಗೆ ಹಾಡುಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಹಾಡುಗಳನ್ನು ದೊಡ್ಡರಂಗೇಗೌಡರು ಬರೆದಿದ್ದಾರೆ. 10 ಸಿನಿಮಾಕ್ಕೆ ಸಂಭಾಷಣೆ ಹಾಗೂ 100ಕ್ಕೂ ಹೆಚ್ಚು ಕಿರು-ಧಾರಾವಾಹಿಗಳಿಗೆ ಚಿತ್ರಕತೆ ಬರೆದಿದ್ದಾರೆ. ದೊಡ್ಡರಂಗೇಗೌಡರು ‘ಮಾಗಿಯ ಕನಸು’ ಚಿತ್ರದಲ್ಲಿ ಮತ್ತು ಸಾಧನೆ ಶಿಖರ ಚಲನಚಿತ್ರದಲ್ಲಿ ನಟಿಸಿದ್ದಾರೆ. ‘ಹಾರುವ ಹಂಸಗಳುʼ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಲ್ಕು ಬಾರಿ ಉತ್ತಮ ಗೀತರಚನೆಗೆ ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ದೊಡ್ಡರಂಗೇಗೌಡರು ಹಾಗೂ ಇನ್ಫೋಸಿಸ್ ನಾರಾಯಣಮೂರ್ತಿಯರು ಶಾಲಾ ದಿನಗಳಲ್ಲಿ ಸಹಪಾಠಿಗಳಾಗಿದ್ದವರು. ಈ ಬಗ್ಗೆಯೂ ದೊಡ್ಡರಂಗೇಗೌಡರು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: Weekend With Ramesh: ಸಾಧಕರ ಸೀಟ್‌ನಲ್ಲಿ ಕವಿತೆ, ಚಲನಚಿತ್ರ ಹಾಡುಗಳನ್ನು ಬರೆದ ಸಾಹಿತಿ ಡಾ. ನಾಗೇಂದ್ರ ಪ್ರಸಾದ್!
ನಟನೆ, ನಿರ್ದೇಶನ, ನಿರ್ಮಾಣಕ್ಕೂ ಜೈ ಎಂದ ಕಲಾವಿದ
1976ರಲ್ಲಿ ಫಲಿತಾಂಶ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಜೈ ಜಗದೀಶ್ ನಾಯಕ ನಟನಾಗಿ, ಪೋಷಕನಟನಾಗಿ, ಖಳನಟನಾಗಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ., ಕನ್ನಡದ ಜನಪ್ರಿಯ ನಟ. ಪುಟ್ಟಣ್ಣ ಕಣಗಾಲ್ರಿಂದ 1976 ರಲ್ಲಿ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ಜೈ ಜಗದೀಶ್ ಐದು ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಾಯಕನಾಗಿ, ಪೋಷಕ ನಟನಾಗಿ, ವಿಲನ್ ಆಗಿ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿರುವ ಜೈ ಜಗದೀಶ್, ಶಿವರಾಜ್ ಕುಮಾರ್ ನಟನೆಯ ʻಭೂಮಿ ತಾಯಿ ಚೊಚ್ಚಲ ಮಗʼ ಸಿನಿಮಾ ಮೂಲಕ ನಿರ್ಮಾಣಕ್ಕೂ ಕೈ ಹಾಕಿದರು.
ಕೆಲವು ಸಿನಿಮಾಗಳ ನಿರ್ದೇಶನವನ್ನೂ ಜೈ ಜಗದೀಶ್ ಮಾಡಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂವು, ಮದುವೆ ಮಾಡು ತಮಾಷೆ ನೋಡಿ, ಗರ್ಜನೆ, ಪಡುವಾರಹಳ್ಳಿ ಪಾಂಡವರು’,`ಗಾಳಿ ಮಾತು’ ಇನ್ನೂ ಹಲವು ಸಿನಿಮಾಗಳಲ್ಲಿ ಅಭಿನಯಸಿದ್ದಾರೆ. ಇವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ,ನಿರ್ದೇಶಕಿಯಾಗಿ ಪ್ರಸಿದ್ಧರಾಗಿದ್ದಾರೆ.
ಕಿರುತೆರೆ
Kannada Serials TRP: ಈ ವಾರ ಗಟ್ಟಿಮೇಳಕ್ಕೆ ಮೊದಲ ಸ್ಥಾನ; ಟಾಪ್ 5 ಸ್ಥಾನದಲ್ಲಿ ಯಾವೆಲ್ಲ ಧಾರಾವಾಹಿಗಳು ಇವೆ?
Kannada Serials TRP: ಕಳೆದ ವಾರ (ಮೇ 13-19) ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ಹಿಂದಿನ ವಾರದಂತೆ ಈ ವಾರವೂ ಗಟ್ಟಿಮೇಳ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನ ಪುಟ್ಟಕ್ಕನ ಮಕ್ಕಳು ಪಡೆದಿದೆ.
ಬೆಂಗಳೂರು: ಈ ವಾರದ ಕನ್ನಡ ಕಿರುತೆರೆಯ (Kannada Serials TRP) ಟಿಆರ್‌ಪಿ ಹೊರಬಿದ್ದಿದೆ. ಕಲರ್ಸ್ ಕನ್ನಡ ಹಾಗೂ ಜೀ ವಾಹಿನಿಯಲ್ಲಿ ಹಲವು ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಕಳೆದ ವಾರ (ಮೇ 13-19) ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ಹಿಂದಿನ ವಾರದಂತೆ ಈ ವಾರವೂ ಗಟ್ಟಿಮೇಳ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನ ಪುಟ್ಟಕ್ಕನ ಮಕ್ಕಳು ಪಡೆದಿದೆ.
ಮೊದಲ ಸ್ಥಾನ ‘ಗಟ್ಟಿಮೇಳ’
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿ 1000 ಎಪಿಸೋಡ್ ಪೂರೈಸಿದೆ. ಇಷ್ಟಾದರೂ ತನ್ನ ಸ್ಥಾನವನ್ನು ಹಾಗೇ ಉಳಿಸಿಕೊಂಡಿದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ಇದರಲ್ಲಿ ಇದ್ದಾರೆ. ಈ ಮಧ್ಯಮ ವರ್ಗದ ಮನೆಯ ಹೆಣ್ಣು ಮಕ್ಕಳನ್ನು ಹೇಗೆ ಪರಿಮಳಾ ಹಾಗೂ ಮಂಜುನಾಥ್ ದಂಪತಿ ಮದುವೆ ಮಾಡುತ್ತಾರೆ ಎಂಬುದು ಒನ್‌ಲೈನ್ ಸ್ಟೋರಿ.
ಎರಡನೇ ಸ್ಥಾನ ಪುಟ್ಟಕ್ಕನ ಮಕ್ಕಳು.
ಈ ಧಾರಾವಾಹಿ ಹಾಗೂ ಗಟ್ಟಿಮೇಳ ಆಗಾಗ ಪೈಪೋಟಿಗೆ ಇಳಿಯುತ್ತವೆ. ಈ ಧಾರಾವಾಹಿ ಎರಡನೇ ಸ್ಥಾನಕ್ಕೆ ಇಳಿದಿದೆ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಉಮಾಶ್ರೀ ಅವರು ನಟನೆ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Kannada Serials TRP: ಈ ವಾರ ಟಿಆರ್‌ಪಿಯಲ್ಲಿ ನಂಬರ್ 1 ಸ್ಥಾನ ಪಡೆದ ಧಾರಾವಾಹಿ ಯಾವುದು?
ಮೂರನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’
ಕಲರ್ಸ್ ಕನ್ನಡದ ‘ಲಕ್ಷ್ಮೀ ಬಾರಮ್ಮ’ ಹಾಗೂ ‘ಭಾಗ್ಯಲಕ್ಷ್ಮೀ’ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಇದು ಅಕ್ಕ ತಂಗಿ ಕಥೆ. ಈ ಎರಡೂ ಧಾರಾವಾಹಿಗಳು ಹಿಂದಿನ ವಾರ ಒಂದೇ ಟಿಆರ್‌ಪಿ ಪಡೆದು ಮೂರನೇ ಸ್ಥಾನದಲ್ಲಿತ್ತು. ಆದರೆ ಈ ವಾರ ಭಾಗ್ಯಲಕ್ಷ್ಮೀ ಮೂರನೇ ಸ್ಥಾನ ಪಡೆದುಕೊಂಡಿದೆ. ಸುದರ್ಶನ್ ರಂಗಪ್ರಸಾದ್, ಸುಷ್ಮಾ ಕೆ ರಾವ್, ಪದ್ಮಜಾ ರಾವ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಲಕ್ಷ್ಮೀ ಬಾರಮ್ಮ
ಕಲರ್ಸ್ ಕನ್ನಡದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಜನಮನ್ನಣೆ ಪಡೆದಿದೆ. ಈ ಧಾರಾವಾಹಿಯನ್ನು ಜನರು ಇಷ್ಟಪಡುತ್ತಿದ್ದಾರೆ. ಟಾಪ್ ಐದರಲ್ಲಿ ಈ ಧಾರಾವಾಹಿಗೆ ನಾಲ್ಕನೇ ಸ್ಥಾನ ಇದೆ. ಶಮಂತ್ ಬ್ರೋ ಗೌಡ ಮೊದಲಾದವರು ಇದ್ದಾರೆ.
ಶ್ರೀರಸ್ತು ಶುಭಮಸ್ತು
ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿ (Shrirasthu Shubhamasthu Serial) ಧಾರಾವಾಹಿಯ ಪ್ರತಿ ಪಾತ್ರವನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟಿದ್ದಾರೆ. ತುಳಸಿ ಹೆಸರಿನ ಪಾತ್ರವನ್ನು ಅವರು ಮಾಡಿದ್ದಾರೆ. ಮಾಧವ್ ಆಗಿ ಅಜಿತ್ ಹಂದೆ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಗೆ ಐದನೇ ಸ್ಥಾನ ಇದೆ.ಸುಧಾರಾಣಿ ಅವರು ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಸೊಸೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಿರುತೆರೆ
Deepa Katte: ವೈವಾಹಿಕ ಜೀವನಕ್ಕೆ ಕಾಲಿಟ್ಟ `ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಖ್ಯಾತಿಯ ನಟಿ ದೀಪಾ ಕಟ್ಟೆ
ಶ್ರೀರಸ್ತು ಶುಭಮಸ್ತು ಧಾರಾವಾಹಿ ಖ್ಯಾತಿಯ ದೀಪಾ ಕಟ್ಟೆ (Deepa Katte) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿವೆ ಫೋಟೊಗಳು!
ಶ್ರೀರಸ್ತು ಶುಭಮಸ್ತು ಧಾರಾವಾಹಿ ಖ್ಯಾತಿಯ ದೀಪಾ ಕಟ್ಟೆ (Deepa Katte) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
‘ಮಿಥುನರಾಶಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ದೀಪಾ ಕಟ್ಟೆ ಅವರು ಸದ್ಯ `ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಸುಧಾರಾಣಿ ಅವರ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನೆಗೆಟಿವ್ ಶೇಡ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಪುತ್ರಿ ಸಂಧ್ಯಾ ಪಾತ್ರ ನಿರ್ವಹಿಸುತ್ತಿರುವ ನಟಿ ದೀಪಾ ಕಟ್ಟೆ ಧಾರಾವಾಹಿಯಲ್ಲಿ ಸೊಕ್ಕಿನ ಹುಡುಗಿಯಾಗಿ, ಮನೆ ಬಿಟ್ಟು ಓಡಿ ಹೋದವಳು ಎಂತಲೇ ಫೇಮಸ್ ಆಗಿದ್ದಾರೆ.
ಐಟಿ ಉದ್ಯೋಗಿ ರಕ್ಷಿತ್ ಯಡಪಡಿತ್ತಾಯ ಅವರ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾ ಗೃಹದಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆ ಸಮಾರಂಭ, ಅರಿಶಿನ, ಮೆಹೆಂದಿ ಶಾಸ್ತ್ರದ ಫೋಟೊಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದೀಪಾ ಕಟ್ಟೆ – ರಕ್ಷಿತ್ ಅವರ ವಿವಾಹ, ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆಯಿತು.
ಕಿರುತೆರೆ
Nitesh Pandey: ಕಿರುತೆರೆ ನಟ ನಿತೇಶ್ ಪಾಂಡೆ ಹೃದಯಾಘಾತದಿಂದ ನಿಧನ
‘ಅನುಪಮಾ’ ಧಾರಾವಾಹಿ ಖ್ಯಾತಿಯ ನಿತೇಶ್ ಪಾಂಡೆ (Nitesh Pandey) ಹೃದಯಾಘಾತದಿಂದ ಮೇ 24ರಂದು ನಿಧನರಾಗಿದ್ದಾರೆ. ಹಿಂದಿಯ ಸ್ಟಾರ್ ಪ್ಲಸ್ನಲ್ಲಿ ‘ಅನುಪಮಾ’ ಧಾರಾವಾಹಿ ಪ್ರಸಾರ ಕಾಣುತ್ತಿದೆ.
ಮುಂಬೈ: ‘ಅನುಪಮಾ’ ಧಾರಾವಾಹಿ ಖ್ಯಾತಿಯ ನಿತೇಶ್ ಪಾಂಡೆ (Nitesh Pandey) ಹೃದಯಾಘಾತದಿಂದ ಮೇ 24ರಂದು ನಿಧನರಾಗಿದ್ದಾರೆ. ಹಿಂದಿಯ ಸ್ಟಾರ್ ಪ್ಲಸ್ನಲ್ಲಿ ‘ಅನುಪಮಾ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಧೀರಜ್ ಕಪೂರ್ ಹೆಸರಿನ ಪಾತ್ರವನ್ನು ನಿತೇಶ್ ಪಾಂಡೆ ಮಾಡುತ್ತಿದ್ದರು.
ನಿತೇಶ್ ಪಾಂಡೆ 1990ರಲ್ಲಿ ರಂಗಭೂಮಿಗೆ ಪದಾರ್ಪಣೆ ಮಾಡಿದರು. 1995ರಲ್ಲಿ ʻತೇಜಸ್ʼ ಚಿತ್ರದಲ್ಲಿ ಪತ್ತೇದಾರಿ ಪಾತ್ರವನ್ನು ನಿರ್ವಹಿಸಿದರು. ನಿತೇಶ್ ಪಾಂಡೆ ʻಮಂಜಿಲೀನ್ ಅಪಾನಿ ಅಪಾನಿʼ, ʻಅಸ್ತಿತ್ವ…ಏಕ್ ಪ್ರೇಮ್ ಕಹಾನಿʼ, ʻಸಾಯಾʼ, ʻಜುಸ್ತಜೂʼ ಮತ್ತು ʻದುರ್ಗೇಶ್ ನಂದಿನಿʼಯಂತಹ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ʻಓಂ ಶಾಂತಿ ಓಂʼ ಮತ್ತು ʻಬದಾಯಿ ದೋʼ ಸೇರಿದಂತೆ ಹಲವಿ ಸಿನಿಮಾಗಲಲ್ಲಿ ಅಭಿನಯಿಸಿದ್ದರು. ಡ್ರೀಮ್ ಕ್ಯಾಸಲ್ ಪ್ರೊಡಕ್ಷನ್ಸ್ ಎಂಬ ಹೆಸರಿನ ನಿರ್ಮಾಣ ಸಂಸ್ಥೆಯನ್ನೂ ನಡೆಸುತ್ತಿದ್ದರು. ‘ಪ್ಯಾರ್ ಕ ದರ್ದ್ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರಾ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದರು. ಈಗ ನಿತೇಶ್ ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಆಘಾತ ತಂದಿದೆ. ಕಳೆದ 25 ವರ್ಷಗಳಿಂದ ಕಿರುತೆರೆಯಲ್ಲಿ ಪರಿಚಿತರಾಗಿದ್ದರು.
ನಿತೇಶ್ ಅವರ ಭಾವ, ನಿರ್ಮಾಪಕ ಸಿದ್ದಾರ್ಥ್ ನಗರ್ ಈ ಬಗ್ಗೆ ಮಾತನಾಡಿ. ‘ನಿತೇಶ್ ಅವರು ಮೃತಪಟ್ಟಿದ್ದಾರೆ. ಅವರ ಪತ್ನಿ ಅರ್ಪಿತಾ ಪಾಂಡೆ ಶಾಕ್ನಲ್ಲಿದ್ದಾರೆ. ಅವರ ತಂದೆ ಮೃತದೇಹ ತರಲು ತೆರಳಿದ್ದಾರೆ. ನನ್ನ ಸಹೋದರಿ ಅರ್ಪಿತಾ ಜತೆ ನನಗೆ ಮಾತನಾಡಲೂ ಸಾಧ್ಯವಾಗುತ್ತಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Ray Stevenson: ಆರ್ಆರ್ಆರ್ ಚಿತ್ರದಲ್ಲಿ ನಟಿಸಿದ್ದ ರೇ ಸ್ಟೀವನ್ಸನ್ ನಿಧನ; ಅರಗಿಸಿಕೊಳ್ಳಲಾಗುತ್ತಿಲ್ಲ ಎಂದ ರಾಜಮೌಳಿ
ಇತ್ತೀಚೆಗೆ ಹಿಂದಿ ಕಿರುತೆರೆಗೆ ಕರಾಳ ದಿನ ಎದುರಾಗುತ್ತಿದೆ. ಕೆಲವೇ ಕೆಲವು ದಿನಗಳ ಹಿಂದೆ ಕಿರುತೆರೆ ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ಮೃತಪಟ್ಟರು. ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದಾದ ಬೆನ್ನಲ್ಲೇ ಮೇ 23ರಂದು ಕಿರುತೆರೆ ನಟಿ ವೈಭವಿ ಉಪಾಧ್ಯಾಯ ಅವರು ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಕೊನೆಯುಸಿರೆಳೆದರು.
-
ಕರ್ನಾಟಕ22 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ22 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕರ್ನಾಟಕ16 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್12 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ5 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
ಕರ್ನಾಟಕ11 hours ago
DA Hike: ಶೇ.4 ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ; ಸಿಎಂ ಸಿದ್ದರಾಮಯ್ಯಗೆ ಸರ್ಕಾರಿ ನೌಕರರ ಅಭಿನಂದನೆ
-
EXPLAINER3 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?