Nitish Bharadwaj: ʼ16,000 ಹೆಂಡತಿಯರನ್ನು ನಿಭಾಯಿಸಿದʼವನಿಗೆ ಪತ್ನಿಯಿಂದ ದೌರ್ಜನ್ಯ! ಏನಿವರ ಗೋಳಿನ ಕತೆ? - Vistara News

ಕಿರುತೆರೆ

Nitish Bharadwaj: ʼ16,000 ಹೆಂಡತಿಯರನ್ನು ನಿಭಾಯಿಸಿದʼವನಿಗೆ ಪತ್ನಿಯಿಂದ ದೌರ್ಜನ್ಯ! ಏನಿವರ ಗೋಳಿನ ಕತೆ?

ಇದು ಜನಪ್ರಿಯ ಟಿವಿ ಸೀರಿಯಲ್‌ (TV Serial) ʼಮಹಾಭಾರತʼದ ಕೃಷ್ಣನ ಪಾತ್ರಧಾರಿ ನಟ ನಿತೀಶ್ ಭಾರದ್ವಾಜ್ (Nitish Bharadwaj) ಬದುಕಿನ ಕತೆ.

VISTARANEWS.COM


on

nitish bharadwaj with wife
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಮಹಾಭಾರತದ (Mahabharat) ಕೃಷ್ಣನೇನೋ 16,000 ಹೆಂಡತಿಯರನ್ನು ಜಗಳವಿಲ್ಲದೆ ನಿಭಾಯಿಸಿದ. ಆದರೆ ಈ ʼಕೃಷ್ಣʼನ (Krishna) ಬದುಕು ಮಾತ್ರ ಪತ್ನಿಯಿಂದಲೇ ಬರ್ಬಾದ್‌ ಆಗಿದೆ. ಇದು ಜನಪ್ರಿಯ ಟಿವಿ ಸೀರಿಯಲ್‌ (TV Serial) ʼಮಹಾಭಾರತʼದ ಕೃಷ್ಣನ ಪಾತ್ರಧಾರಿ ನಟ ನಿತೀಶ್ ಭಾರದ್ವಾಜ್ (Nitish Bharadwaj) ಬದುಕಿನ ಕತೆ.

ನಿತೀಶ್‌ ಭಾರದ್ವಾಜ್‌ ಮತ್ತು ಅವರ ವಿಚ್ಛೇದಿತ ಪತ್ನಿ ಸ್ಮಿತಾ ಭಾರದ್ವಾಜ್ ನಡುವಿನ ಕಲಹದ ಕತೆ ಹೊಸದೇನೂ ಅಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಇಬ್ಬರೂ ಪರಸ್ಪರರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಿತೀಶ್ ಇನ್ನಷ್ಟು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. ತಮ್ಮಿಬ್ಬರ ದಾಂಪತ್ಯದಲ್ಲಿ ತಾನು ಅತ್ಯಂತ ದೌರ್ಜನ್ಯಕ್ಕೀಡಾದವನು ಎಂದು ಹೇಳಿಕೊಂಡಿದ್ದಾರೆ.

“ಈ ದಾಂಪತ್ಯದಲ್ಲಿ ನಾನು ಎಲ್ಲಾ ರೀತಿಯ ನಿಂದನೆಗಳನ್ನು ಎದುರಿಸಿದ್ದೇನೆ. ನನ್ನ ಪೋಷಕರನ್ನು ನನ್ನಿಂದ ದೂರವಿಡಲಾಯಿತು. ನನ್ನ ಇಬ್ಬರು ಮಕ್ಕಳನ್ನು ನನ್ನಿಂದ ದೂರವಿಡಲಾಯಿತು. ನನ್ನ 11 ವರ್ಷದ ಹೆಣ್ಣುಮಕ್ಕಳು ಹೇಳಿದ ಎರಡು ಸಾಲುಗಳನ್ನು ಮಾತ್ರ ನಾನು ನಿಮಗೆ ಹೇಳುವೆ- ʻಅಪ್ಪಾ, ನಿಮ್ಮನ್ನು ನಮ್ಮ ತಂದೆ ಎಂದು ಕರೆಯಲು ನಮಗೆ ಅಸಹ್ಯವಾಗುತ್ತದೆ.’ ಇದು ಒಂದು ಮಗು ನನಗೆ ಹೇಳಿದ್ದು” ಎಂದು ನಿತೀಶ್ ದುಃಖಿಸಿದ್ದಾರೆ.

“ನನಗೆ ಆಗುತ್ತಿರುವ ಪ್ರಕ್ಷುಬ್ಧತೆಯನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ಹಣ ಕೇಳುತ್ತಿದ್ದೇನೆ ಎಂದು ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು. ನಾನು ನನ್ನಿಂದ ಮೋಸ ಮಾಡಿ ಕಸಿಯಲಾದ ಹಣವನ್ನು ಕೇಳುತ್ತಿದ್ದೇನೆ. ಹಾಗಾಗಿ ಇಂದು ನಾನು ಮಾಡುತ್ತಿರುವುದು ನನ್ನ ಮಕ್ಕಳ ಪಾಲಿನ ಹೋರಾಟವಾಗಿದೆ” ಎಂದಿದ್ದಾರೆ ನಿತೀಶ್. ‌

“ವಂಚಿತನಾದ ನಾನು ಬೇರೆ ಯಾವುದೇ ಮಹಿಳೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತದೆಯೇ ಎಂದು ನನಗೆ ಗೊತ್ತಾಗುತ್ತಿಲ್ಲ. ದಾಂಪತ್ಯ ನನಗೆ ಎಂದೂ ಗೌರವಾರ್ಹವಾದುದು. ನಾನು ಅದನ್ನು ನಂಬುತ್ತೇನೆ. ನನ್ನ ಹೆತ್ತವರ ದಾಂಪತ್ಯ ಸೇರಿದಂತೆ ಹಲವು ಯಶಸ್ವಿ ಕುಟುಂಬಗಳನ್ನು ನಾನು ನೋಡಿದ್ದೇನೆ” ಎಂದಿದ್ದಾರೆ ಅವರು.

ಕಳೆದ ತಿಂಗಳು ನಿತೀಶ್ ಭಾರದ್ವಾಜ್ ಅವರು ಅವರ ಪತ್ನಿ ಸ್ಮಿತಾ ಗೇಟ್ ವಿರುದ್ಧ ಕಿರುಕುಳ ಮತ್ತು ಅಶಿಸ್ತಿನ ವರ್ತನೆಯನ್ನು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಸ್ಮಿತಾ ಗೇಟ್‌, ಮಧ್ಯಪ್ರದೇಶದ ಮಾನವ ಹಕ್ಕುಗಳ ಆಯೋಗದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಯ ಪ್ರಕಾರ, ತಮ್ಮ ಅವಳಿ ಹೆಣ್ಣು ಮಕ್ಕಳಾದ ದೇವಯಾನಿ ಮತ್ತು ಶಿವರಂಜನಿ ಅವರನ್ನು ಭೇಟಿಯಾಗದಂತೆ ನಿತೀಶ್‌ ಅವರನ್ನು ಸ್ಮಿತಾ ತಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ತಮ್ಮ ಹೆಣ್ಣುಮಕ್ಕಳ ಶಾಲೆಗಳಿಗೆ ತಾವು ಹೋಗುವುದನ್ನು ತಡೆದಿದ್ದಾರೆ. ಇದು ತಮ್ಮ ಮಾನಸಿಕ ನೆಮ್ಮದಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ದೂರಿದ್ದಾರೆ.

ಜನಪ್ರಿಯ ಟಿವಿ ಸರಣಿ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ನಿತೀಶ್ ದೇಶಾದ್ಯಂತ ಖ್ಯಾತಿ ಗಳಿಸಿದ್ದರು. ವಿಷ್ಣು ಪುರಾಣ, ಮೊಹೆಂಜೊದಾರೋ, ಕೇದಾರನಾಥ್ ಮತ್ತಿತರ ಜನಪ್ರಿಯ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Actor Dhanush: ಧನುಷ್‌-ರಶ್ಮಿಕಾ ಅಭಿನಯದ ಸಿನಿಮಾದ ಟೈಟಲ್‌ ರಿವೀಲ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Chaitra Vasudevan: ನಾನು ಸಿಲ್ಲಿ ಹುಡುಗಿ ಅಲ್ಲ..ನನ್ನಂತವರಿಗೂ ಮೋಸ ಆಗುತ್ತದೆ ಅಂದುಕೊಂಡಿರಲಿಲ್ಲ ಎಂದ ಆ್ಯಂಕರ್ ಚೈತ್ರಾ!

Chaitra Vasudevan: ಈವೆಂಟ್‌ವೊಂದರಲ್ಲಿ ಚೈತ್ರಾ ಅವರನ್ನ ನೋಡಿ ಉದ್ಯಮಿ ಸತ್ಯ ನಾಯ್ಡು (Sathya Naidu) ಅವರು ಇಷ್ಟಪಟ್ಟು ಹಿರಿಯರನ್ನ ಒಪ್ಪಿಸಿ, 2017ರಲ್ಲಿ ಮದುವೆಯಾದರು. ಆದರೆ ಜೋಡಿ ತಮ್ಮ ಮಧ್ಯೆ ಇರುವ ಸಮಸ್ಯೆಯನ್ನ ಸರಿಪಡಿಸಿಕೊಳ್ಳಲು ಪ್ರಯತ್ನಪಟ್ಟಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಯೋಚಿಸಿ, ಇಬ್ಬರ ಸಮ್ಮತಿಯ ಮೇರೆಗೆ ಡಿವೋರ್ಸ್‌ ಪಡೆದುಕೊಂಡರು. ಇದೀಗ ಸಂದರ್ಶನವೊಂದರಲ್ಲಿ ಚೈತ್ರಾ ಅವರು ನೋವು ತೋಡಿಕೊಂಡಿದ್ದಾರೆ.

VISTARANEWS.COM


on

Chaitra Vasudevan says not a silly girl never thought that someone cheated me
Koo

ಬೆಂಗಳೂರು: ಬಿಗ್‌ ಬಾಸ್‌ʼನಿಂದ ಹೆಚ್ಚು ಜನಪ್ರಿಯರಾಗಿರುವ ಆ್ಯಂಕರ್ ಚೈತ್ರಾ ವಾಸುದೇವನ್‌ (Chaitra Vasudevan) ಅವರು ತಮ್ಮ ದಾಂಪತ್ಯಕ್ಕೆ ವಿಚ್ಛೇದನ ನೀಡಿರುವುದು ಗೊತ್ತೇ ಈದೆ. ಚೈತ್ರಾ ಅನೌನ್ಸ್‌ ಮಾಡಿದ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆಗಳು ಸೋಷಿಯಲ್‌ ಮೀಡಿಯಾದಲ್ಲಿ ನಡೆಯಿತು. ಈವೆಂಟ್‌ವೊಂದರಲ್ಲಿ ಚೈತ್ರಾ ಅವರನ್ನ ನೋಡಿ ಉದ್ಯಮಿ ಸತ್ಯ ನಾಯ್ಡು (Sathya Naidu) ಅವರು ಇಷ್ಟಪಟ್ಟು ಹಿರಿಯರನ್ನ ಒಪ್ಪಿಸಿ, 2017ರಲ್ಲಿ ಮದುವೆಯಾದರು. ಆದರೆ ಜೋಡಿ ತಮ್ಮ ಮಧ್ಯೆ ಇರುವ ಸಮಸ್ಯೆಯನ್ನ ಸರಿಪಡಿಸಿಕೊಳ್ಳಲು ಪ್ರಯತ್ನಪಟ್ಟಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಯೋಚಿಸಿ, ಇಬ್ಬರ ಸಮ್ಮತಿಯ ಮೇರೆಗೆ ಡಿವೋರ್ಸ್‌ ಪಡೆದುಕೊಂಡರು. ಇದೀಗ ಸಂದರ್ಶನವೊಂದರಲ್ಲಿ ಚೈತ್ರಾ ಅವರು ನೋವು ತೋಡಿಕೊಂಡಿದ್ದಾರೆ.

ಚೈತ್ರಾ ಮಾತನಾಡಿ ʻʻನಾನು ಈ ಬಗ್ಗೆ ಅನೌನ್ಸ್‌ ಮಾಡುವೆ ಮೊದಲೇ ಡಿವೋರ್ಸ್‌ ಮಾಡಿದ್ದೆ. ಈ ಬಗ್ಗೆ ನಾನು ಎಲ್ಲಿಯೂ ಹೇಳಲು ಇಷ್ಟ ಪಟ್ಟಿರಲಿಲ್ಲ. ನನ್ನ ತಂದೆ ತಾಯಿ ಕೂಡ ಆಗ ನನ್ನ ಜತೆ ನಿಂತು, ನಿನ್ನ ಜವಾಬ್ದಾರಿ ಅಂದಿದ್ದರು. ಬೇರೆಯವರ ಕರ್ಮ ಅವರು ಅನುಭವಿಸುತ್ತಾರೆ. ಎಲ್ಲೂ ಕಂಪ್ಲೇನ್‌ ಮಾಡಬೇಡು ಎಂದು ತಂದೆ ತಾಯಿ ಹೇಳಿದ್ದರು. ಕ್ಷುಲ್ಲಕ ಕಾರಣಕ್ಕೆ ಸಪ್‌ರೇಟ್‌ ಆದರು ಎನ್ನುವ ಗಾಸಿಪ್‌ ಹರಡಿತ್ತು. ಆದರೆ ರಿಯಲ್‌ ರೀಸನ್‌ ಬೇರೆ ಇದೆ. ನನ್ನ ಕುಟುಂಬ ಅಂದರೆ ನಾನು, ನನ್ನ ತಂದೆ ತಾಯಿ, ಸೇರಿ ಮೋಸ ಹೋದೆವು. ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ಮೋಸ ಹೋದೆವು. ಆದರೆ ನಾನು 5 ವರ್ಷಗಳ ಕಾಲ ಕಾದೆ. ಎನೋ ಒಂದು ಆಗತ್ತೆ ಅಂತ. ನಾನು ಸಿಲ್ಲಿ ಹುಡುಗಿ ಅಲ್ಲ. ಏನೋ ಅಚೀವ್‌ ಮಾಡಬೇಕು..ಏನೋ ಮಾಡಬೇಕು ಎಂದು ದುಡ್ಡು ದುಡೀಬೇಕು ಎಂಬ ಕಾರಣಕ್ಕೆ ಸಪ್‌ರೇಟ್‌ ಆಗ್ತೀನಿ ಎನ್ನುವ ಸಿಲ್ಲಿ ಹುಡುಗಿ ನಾನಲ್ಲ. ನಾನು ಪ್ಲ್ಯಾನ್‌ ಮುಂಚೆ ಹೇಗ್‌ ಮಾಡಿದ್ದೆ ಅಂದರೆ, ನನ್ನ ಕುಟುಂಬ, ನನ್ನ ಫ್ಯಾಮಿಲಿ, ಅತ್ತೆ ಮಾವ ಹೀಗೆ ಜತೆಗೆ ಇರಬೇಕು, ಮಕ್ಕಳು ಇರಬೇಕು ಎಂದು ಬಯಸಿದ್ದೆ. ಆದರೆ ಕನಸು ನನಸಾಗಿಲ್ಲ. ಕಳೆದ ಎರಡು ವರ್ಷದ ಹಿಂದೆ ಏನು ಮಾಡಕ್ಕೆ ಆಗದೇ ಸುಮ್ಮನೇ ಇದ್ದೆ. ಕೆಟ್ಟ ದಿನಗಳು ಆಗಿದ್ದವು. ಯಾರಾದರೂ ಬಂದು ನನ್ನ ಸೇವ್‌ ಮಾಡ್ತಾರಾ ಎನ್ನುವ ಪರಿಸ್ಥಿತಿ ಇತ್ತು. ಆ ತರ ನಾನು ಹಾತೊರೆಯುತ್ತಿದ್ದೆ. ಪ್ರೀತಿ ಮಾಡಿ, ಆದರೆ ನಿಜ ಹೇಳಿ. ಆದರೆ ಯಾರಿಗೂ ಮೋಸ ಮಾಡಬೇಡಿ. ಆದರೆ ನಾನು ಯಾರಿಗೂ ಮೋಸ ಮಾಡಿಲ್ಲ. ಆದರೆ ನನಗೆ ಹೀಗ್‌ ಆಯ್ತುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Chaitra Vasudevan: ಅಹಂಕಾರದಿಂದ ಬೇರೆಯಾಗಿಲ್ಲ ಎಂದು ಡಿವೋರ್ಸ್‌ ಅಸಲಿ ಕಾರಣ ತಿಳಿಸಿದ ಆ್ಯಂಕರ್ ಚೈತ್ರಾ!

ಕುಂದಾಪುರದ ಹುಡುಗಿ ಚೈತ್ರಾ ಜತೆ ಸತ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಕಾರ್ಯಕ್ರಮದ ನಿರೂಪಣೆ, ಬಿಗ್ ಬಾಸ್ ಮನೆಗೆ ಕಾಲಿಟ್ಟ ಚೈತ್ರಾ ಅಭಿಮಾನಿಗಳ ಗಮನ ಸೆಳೆದರು.

ಡಿವೋರ್ಸ್‌ ಪೋಸ್ಟ್‌ ಹಂಚಿಕೊಂಡಿದ್ದ ಚೈತ್ರಾ

‘ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನು ಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಚೈತ್ರಾ ಬರೆದುಕೊಂಡಿದ್ದರು.

ಆ್ಯಂಕರ್ ಆಗಿದ್ದ ಚೈತ್ರಾ ‘ಬಿಗ್ ಬಾಸ್ (big boss) ಕನ್ನಡ ಸೀಸನ್ 7’ರ ಸ್ಪರ್ಧಿಯಾಗಿದ್ದರು. ಚೈತ್ರಾ ವಾಸುದೇವನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಚೈತ್ರಾ ತಮ್ಮದೇ ಆದ ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ನಡೆಸುತ್ತಿದ್ದಾರೆ.

Continue Reading

ಬಿಗ್ ಬಾಸ್

Actress Siri: ನಾನೇನು ʻಮದುವೆʼಯ ವಿರೋಧಿ ಅಲ್ಲ, ವಿವಾಹ ಬೇಡ ಎಂದೂ ಅಂದುಕೊಂಡಿರಲಿಲ್ಲ ಎಂದ ಸಿರಿ!

Actress Siri: ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದರು. ಇದೀಗ ವಿಸ್ತಾರದೊಂದಿಗೆ ಮದುವೆ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದು ಇತ್ತುʼಎಂದು ಸಿರಿ ಮಾತನಾಡಿದರು.

VISTARANEWS.COM


on

Actress Siri Reaction about late marriage
Koo

ಬೆಂಗಳೂರು: `ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿರುವುದು ಗೊತ್ತೇ ಇದೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದರು. ಇದೀಗ ವಿಸ್ತಾರದೊಂದಿಗೆ ಮದುವೆ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದು ಇತ್ತುʼಎಂದು ಸಿರಿ ಮಾತನಾಡಿದರು.

ಸಿರಿ ಮಾತನಾಡಿ ʻʻಇಷ್ಟು ವರ್ಷ ನನಗೆ ಮದುವೆ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ನಮ್ಮ ತಾಯಿ ಬಿಟ್ಟರೆ ನಾನು ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾನು ನನ್ನ ತಾಯಿಗೆ ಒಂದು ಮಾತು ಹೇಳುತ್ತ ಇದ್ದೆ. ನಿನ್ನ ಮಗಳು ಖುಷಿಯಾಗಿ ಇರಬೇಕು. ಅದೇ ಮುಖ್ಯ ಅಂದರೆ ನೋಡು ಅಂತಿದ್ದೆ. ಆದರೆ ಬಿಗ್‌ ಬಾಸ್‌ ಆದ ಬಳಿಕ ಆಗಬೇಕು ಎಂಬ ಮನಸ್ಸು ಬಂತು. ಆದರೆ ಒತ್ತಡ ಅಂತೇನಿಲ್ಲ. ಹೀಗೆ ಆಗಬೇಕು ಎಂದು ಅನ್ನಿಸಿತ್ತು. ಹೊರಗೆ ಬಂದ ಮೇಲೆ ಈ ಬಗ್ಗೆ ನಿರ್ಧಾರ ಮಾಡಿದೆ. ಬಳಿಕ ಇವರನ್ನ ಮದುವೆ ಆಗಬಹುದು ಎಂದು ಅನ್ನಿಸಿದ ಮೇಲೆ ನಾನು ಮದುವೆಯಾದೆʼʼಎಂದರು.

ʻʻನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿಲ್ಲ. ನನ್ನ ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದೇ ಇತ್ತು. ಮದುವೆ ವಿರುದ್ಧನೂ ಅಲ್ಲ ನಾನು. ನನ್ನ ಹಣೆಬರಹದಲ್ಲಿ ಈಗ ಬರ್ದಿದೆ. ಮನೆಯಲ್ಲಿ ಪ್ರಯತ್ನ ಮಾಡಿದ್ದರು. ಆದರೆ ಈಗ ಆ ಕಾಲ ಕೂಡಿ ಬಂದಿದೆ. ಮದುವೆ ಬೇಗ ಆಗಿ ಏನಾದರೂ ಸಮಸ್ಯೆ ಮಾಡಿಕೊಳ್ಳುವುದಿಕ್ಕಿಂತ , ನಾನು ರೆಡಿ ಇದ್ದೀನಿ.. ಎಂದು ರೆಡಿ ಆದ ಮೇಲೆ ಮದುವೆ ಮದುವೆಯಾಗೋದು ಸರಿ. ಯಾರಿಗಾದರೂ ಇದು ದೊಡ್ಡ ನಿರ್ಧಾರ. ನನಗೆ ನನ್ನ ಪತಿ ಬದುಕು ಸೀರಿಯಲ್‌ ನಿಂದ ಪರಿಚಯ. ಇಬ್ಬರು ಸ್ನೇಹಿತರಾಗಿದ್ದೇವು. ಬಳಿಕ ಮತ್ತೆ ವರ್ಷಗಳ ನಂತರ ಟಚ್‌ನಲ್ಲಿ ಬಂದೆವು. ನಂತರ ಇಬ್ಬರು ಮದುವೆಯಾಗೋಣ ಎಂದು ನಿರ್ಧಾರ ಮಾಡಿದೆವು. ಈಗಲೂ ಫ್ರೆಂಡ್‌ ಜತಗೆ ಇದ್ದೇನೆ ಎಂದು ಅನ್ನಿಸುತ್ತೆ. ಇಬ್ಬರಲ್ಲೂ ಪ್ರಪೋಸ್‌ ಏನೂ ಆಗಿಲ್ಲ. ಮಾತುಕತೆ ಆಯ್ತು. ಹಾಗೇ ಮದುವೆ ಆದೆವುʼʼಎಂದರು.

ಇದನ್ನೂ ಓದಿ: Actress Siri: ಪ್ರೀತಿ ಏನೆಂದು ನನಗೆ ತಿಳಿದಿದ್ದರೆ ಅದಕ್ಕೆ ಕಾರಣ ನೀವೆ; ಪತಿಯನ್ನು ಬಣ್ಣಿಸಿದ ಸಿರಿ!

ಜೂನ್ 13ರಂದು ಸಿರಿ ಹಾಗೂ ಪ್ರಭಾಕರ್​ ಬೋರೇಗೌಡ ಅವರ ಮದುವೆ ನೆರವೇರಿತ್ತು. ಚಿಕ್ಕಬಳ್ಳಾಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಈ ವಿವಾಹ ಜರುಗಿತ್ತು. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

Continue Reading

ಕಿರುತೆರೆ

Star Suvarna: `ಸುವರ್ಣ ಗೃಹಮಂತ್ರಿ’ಯ ಸಾರಥಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ರವಿಶಂಕರ್

Star Suvarna: ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ “ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಶೈಲಿಯಾಗಿದೆ.

VISTARANEWS.COM


on

Star suvarna Ravi Shankar entered television suvarna grahamanthri
Koo

ಬೆಂಗಳೂರು: ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಮಧ್ಯಾಹ್ನದ ಮನರಂಜನೆಯಾಗಿ ಆರಂಭವಾದ “ಸುವರ್ಣ ಗೃಹಮಂತ್ರಿ” ಎಂಬ ಹೊಸ ಬಗೆಯ ರಿಯಾಲಿಟಿ ಶೋ ಈಗಾಗಲೇ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆದರೆ ಇದೀಗ ಮತ್ತಷ್ಟು ಮೆರುಗು ನೀಡಲು ಇದೇ ಮೊದಲ ಬಾರಿಗೆ ಸುವರ್ಣ ವಾಹಿನಿಯ ಮೂಲಕ ಖ್ಯಾತ ನಟ ರವಿಶಂಕರ್ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ಇನ್ಮುಂದೆ ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಟ ರವಿಶಂಕರ್ ಹೊರಲಿದ್ದಾರೆ. ವರ್ಷಗಳ ಬಳಿಕ ನಟ ರವಿ ಶಂಕರ್ (Ravi shankar) ಅವರನ್ನು ಗೃಹಮಂತ್ರಿ ಪ್ರೋಮೋದಲ್ಲಿ ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ವ್ಯಕ್ತ ಪಡಿಸಿದ್ದು, ‘ಸುವರ್ಣ ಗೃಹಮಂತ್ರಿ’ಯ ಸಂಚಿಕೆಯಲ್ಲಿ ರವಿಶಂಕರ್ (suvarna gruha mantri) ರವರ ನಿರೂಪಣೆಯನ್ನು ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ.

ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ “ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಶೈಲಿಯಾಗಿದೆ.

ಇದನ್ನೂ ಓದಿ: Vinod Dondale: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಇನ್ಮುಂದೆ ನಟ ರವಿಶಂಕರ್ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆಯನ್ನು ಕೊಟ್ಟು ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ.

‘ಸುವರ್ಣ ಗೃಹಮಂತ್ರಿ’ ಇದೇ ಸೋಮವಾರದಿಂದ ಶನಿವಾರ ಮಧ್ಯಾಹ್ನ 1 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ .

Continue Reading

ಕ್ರೈಂ

Vinod Dondale: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

Vinod Dondale : ನಿನ್ನೆ ಸಂಜೆಯಷ್ಟೇ ನಿನಾಸಂ ಸತೀಶ್ ಮತ್ತು ಚಿತ್ರತಂಡದ ಜೊತೆ ಮಾತನಾಡಿ ವಿನೋದ್ ದೊಂಡಾಲೆ ಬಂದಿದ್ದರು ಎನ್ನಲಾಗಿದೆ. ವಿನೋದ್ ವಿ ದೋಂಡಾಲೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕ. ಪಿ.ಶೇಷಾದ್ರಿ, ಟಿ.ಎನ್, ಸೀತಾರಾಂ ಅವರ ಜೊತೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

VISTARANEWS.COM


on

Vinod Dondale Famous Kannada TV director committed suicide
Koo

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ (Vinod Dondale) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ʻಕರಿಮಣಿʼ, ʻಶಾಂತಂ ಪಾಪಂʼ ಸೇರಿದಂತೆ ಹಲವು ಧಾರವಾಹಿಗಳಿಗೆ ವಿನೋದ್ ನಿರ್ದೇಶನ ಮಾಡಿದ್ದರು. ಸದ್ಯ ನಿನಾಸಮ್ ಸತೀಶ್ ನಟನೆಯ ʻಅಶೋಕ ಬ್ಲೇಡ್ʼ ಚಿತ್ರ ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮುಂದಿನ ವಾರದಿಂದ ಚಿತ್ರೀಕರಣ ಶುರು ಮಾಡಬೇಕಿತ್ತು. ಕಳೆದ ಎರಡು ವರ್ಷಗಳಿಂದಲೂ ಚಿತ್ರದ ಶೂಟಿಂಗ್ ಕುಂಟುತ್ತಲೇ ಸಾಗಿತ್ತು. ನಿರ್ಮಾಪಕರಾಗಿದ್ದರಿಂದ ಸಾಲದ ಸುಳಿಗೆ ಸಿಲುಕಿದ್ದ ವಿನೋದ್ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಿನ್ನೆ ಸಂಜೆಯಷ್ಟೇ ನಿನಾಸಂ ಸತೀಶ್ ಮತ್ತು ಚಿತ್ರತಂಡದ ಜೊತೆ ಮಾತನಾಡಿ ವಿನೋದ್ ದೊಂಡಾಲೆ ಬಂದಿದ್ದರು ಎನ್ನಲಾಗಿದೆ. ವಿನೋದ್ ವಿ ದೋಂಡಾಲೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕ. ಪಿ.ಶೇಷಾದ್ರಿ, ಟಿ.ಎನ್, ಸೀತಾರಾಂ ಅವರ ಜೊತೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ನಗರಬಾವಿಯಲ್ಲಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಅತಿಥಿ,ಬೇರು,ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ವಿನೋದ್ ಕೆಲಸ ಮಾಡಿದ್ದರು. ನಟ, ನಿರ್ದೇಶಕ, ನಿರ್ಮಾಪಕರಾಗಿಯೂ ಸಕ್ರಿಯರಾಗಿದ್ದರು.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಹಲ್ಲೆ ದೃಶ್ಯ ಐಫೋನ್‌ನಲ್ಲಿ ರೆಕಾರ್ಡ್‌; ಸಿನಿಮಾ ಶೈಲಿಯಲ್ಲಿ ನಡೆದಿತ್ತು ಕೃತ್ಯ!

ಇನ್ನೂ ಕೆಲವು ಸಿನಿಮಾಗಳ ಎರಡನೇ ಭಾಗದ ಚಿತ್ರೀಕರಣ ನಡೆಯುತ್ತಿದೆ. ಈಗ ಸತೀಶ್‌ ನೀನಾಸಂ ನಟನೆಯ ‘ಅಶೋಕ ಬ್ಲೇಡ್‌’ ಸಿನಿಮಾ ಸಹ ಎರಡು ಭಾಗಗಳಲ್ಲಿ ರಿಲೀಸ್‌ ಆಗಲಿದೆ.ಅವರ ವೃತ್ತಿ ಬದುಕಿನ ಬಹಳ ವಿಶೇಷ ಸಿನಿಮಾ ಎಂದೇ ಅನಿಸಿಕೊಂಡಿರುವ ಮತ್ತು ಬಿಗ್‌ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು ವಿನೋದ್‌ ವಿ ದೊಂಡಾಲೆ ನಿರ್ದೇಶನ ಮಾಡುತ್ತಿದ್ದಾರೆ. 70ರ ದಶಕದಲ್ಲಿ ನಡೆಯಲಿರುವ ಇದರ ಕಥೆಯನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ.

Continue Reading
Advertisement
News
ದೇಶ2 hours ago

‘ಐಎಎಸ್‌’ ಗಂಡನ ಬಿಟ್ಟು, ಗ್ಯಾಂಗ್‌ಸ್ಟರ್‌ ಜತೆ ಓಡಿಹೋಗಿದ್ದ ಮಹಿಳೆ ಬಾಳು ಅಂತ್ಯ; ಪತಿ ಮನೆಗೆ ವಾಪಸಾಗಿ ಆತ್ಮಹತ್ಯೆ!

Mumbai Indians
ಕ್ರಿಕೆಟ್2 hours ago

Mumbai Indians : ಮುಂದಿನ ಐಪಿಎಲ್​ಗೆ ಮುಂಬೈ ತೊರೆಯಲಿದ್ದಾರೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್​

Abhinav Bindra
ಕ್ರೀಡೆ2 hours ago

Abhinav Bindra : ಭಾರತದ ಶೂಟರ್ ಅಭಿನವ್ ಬಿಂದ್ರಾಗೆ ‘ಒಲಿಂಪಿಕ್​ ಆರ್ಡರ್’ ಗೌರವ​

BJP strongly condemns MLA Shivaram Hebbar statement about MP Vishweshwar Hegde Kageri says hariprakash konemane
ಕರ್ನಾಟಕ3 hours ago

Uttara Kannada News: ಸಂಸದ ಕಾಗೇರಿ ಬಗ್ಗೆ ಶಾಸಕ ಹೆಬ್ಬಾರ್‌ ಕೀಳುಮಟ್ಟದ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ

Chaluvadi Narayanaswamy
ಕರ್ನಾಟಕ4 hours ago

Chaluvadi Narayanaswamy : ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್​​ನ ಪ್ರತಿಪಕ್ಷದ ನಾಯಕ

NEET
ಕರ್ನಾಟಕ4 hours ago

NEET: ನೀಟ್‌ ಪರೀಕ್ಷೆಗೆ ವಿರೋಧ, ಬೆಂಗಳೂರು ವಿಭಜನೆಗೆ ಅಸ್ತು; ರಾಜ್ಯ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

DK Shivakumar
ಕರ್ನಾಟಕ4 hours ago

DK Shivakumar: ರೈತನಿಗೆ ಪ್ರವೇಶ ನಿರ್ಬಂಧ ಖಂಡನೀಯ; ಮಾಲ್ ಸೇರಿ ಇತರೆಡೆ ಶೀಘ್ರ ವಸ್ತ್ರ ಸಂಹಿತೆ ಜಾರಿ ಎಂದ ಡಿಕೆಶಿ

Veerabaswanthreddy Mudnal
ಶ್ರದ್ಧಾಂಜಲಿ5 hours ago

Veerabaswanthreddy Mudnal: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅನಾರೋಗ್ಯದಿಂದ ನಿಧನ

Rahat Fateh Ali Khan
ವಿದೇಶ5 hours ago

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Valmiki Corporation Scam
ಕರ್ನಾಟಕ5 hours ago

Valmiki Corporation Scam: ಬಿ. ನಾಗೇಂದ್ರ ಹೆಸರೇಳುವಂತೆ ಒತ್ತಡ; ಇಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ3 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ4 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ4 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ7 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌