Sa Re Ga Ma Pa fame Hanumantha In BharjariBachelors Coming Soon Bharjari Bachelors: ವಧುವಿಗಾಗಿ ಹೊಸ ಅವತಾರ ತಾಳ್ತಾನಾ ಹನುಮಂತ? ಶುರುವಾಗಲಿದೆ ʻಭರ್ಜರಿ ಬ್ಯಾಚುಲರ್ಸ್‌ʼ! - Vistara News

ಕಿರುತೆರೆ

Bharjari Bachelors: ವಧುವಿಗಾಗಿ ಹೊಸ ಅವತಾರ ತಾಳ್ತಾನಾ ಹನುಮಂತ? ಶುರುವಾಗಲಿದೆ ʻಭರ್ಜರಿ ಬ್ಯಾಚುಲರ್ಸ್‌ʼ!

Bharjari Bachelors: ಮೂಲಗಳ ಪ್ರಕಾರ ‘ಭರ್ಜರಿ ಬ್ಯಾಚುಲರ್ಸ್’ ಕಾರ್ಯಕ್ರಮವನ್ನು ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಗಾಯಕ ಹನುಮಂತ ಕೂಡ ಹೊಸ ಅವತಾರದಲ್ಲಿ ಎಂಟ್ರಿ ಕೊಡುತ್ತಿದ್ದಾರೆ.

VISTARANEWS.COM


on

Sa Re Ga Ma Pa fame Hanumantha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈಗಾಗಲೇ ಜೀ ವಾಹಿನಿ ಹಲವು ಹೊಸ ಧಾರಾವಾಹಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ‘ವೀಕೆಂಡ್ ವಿತ್ ರಮೇಶ್’, ‘ಡಿಕೆಡಿ’ ಅಂತಹ ಕಾರ್ಯಕ್ರಮಗಳು ಜನರನ್ನು ರಂಜಿಸುತ್ತಿವೆ. ಇದರ ಜತೆಗೆ ಹೊಸ ಈಗ ಹೊಸದಾಗಿ ಸೇರ್ಪಡೆಯಾಗುತ್ತಿದೆ ಭರ್ಜರಿ ಬ್ಯಾಚುಲರ್ಸ್ ಶೋ. ಮೂಲಗಳ ಪ್ರಕಾರ ‘ಭರ್ಜರಿ ಬ್ಯಾಚುಲರ್ಸ್’ (Bharjari Bachelors) ಕಾರ್ಯಕ್ರಮವನ್ನು ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಗಾಯಕ ಹನುಮಂತ ಕೂಡ ಹೊಸ ಅವತಾರದಲ್ಲಿ ಎಂಟ್ರಿ ಕೊಡುತ್ತಿದ್ದಾರೆ.

ಭರ್ಜರಿ ಬ್ಯಾಚುಲರ್ಸ್’ ಪ್ರೋಮೊಗೆ ವ್ಯಾಪಕ ಮೆಚ್ಚುಗೆಯು ವ್ಯಕ್ತವಾಗುತ್ತಿದೆ. ಸುಂದರವಾದ ಹುಡುಗಿಯರನ್ನು ರ‍್ಯಾಂಪ್ ಮೇಲೆ ವಾಕ್ ಮಾಡಿಸಿ ಶೋಗೆ ಗ್ಲಾಮರ್ ಸೇರಿಸಿದೆ ‘ಭರ್ಜರಿ ಬ್ಯಾಚುಲರ್ಸ್‌ʼ (Bharjari Bachelors) ತಂಡ. ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆ ಮೂಲಕ ಹುಡುಗಿಯರ ಅಂತರಾಳವನ್ನ ಪ್ರೋಮೊ ಅನಾವರಣ ಮಾಡಲಾಗಿದೆ. ಇನ್ನೇನಿದ್ದರೂ ಕಾರ್ಯಕ್ರಮ ಯಾವಾಗ ಶುರುವಾಗಬಹುದು ಎಂಬ ಕುತೂಹಲವಿದೆ ಪ್ರೇಕ್ಷಕರಿಗೆ.

ಮೂಲಗಳ ಪ್ರಕಾರ ‘ಭರ್ಜರಿ ಬ್ಯಾಚುಲರ್ಸ್’ ಕಾರ್ಯಕ್ರಮವನ್ನು ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ಅಕುಲ್ ಬಾಲಾಜಿ ಬಹಳ ವರ್ಷಗಳ ಬಳಿಕ ಜೀ ಕನ್ನಡಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ಶೋಗೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಜಡ್ಜ್‌ಗಳಾಗುತ್ತಾರೆ ಎನ್ನಲಾಗುತ್ತಿದೆ.

ಇದೀಗ ಗಾಯಕ ಹನುಮಂತನದ್ದೇ ಎಲ್ಲೆಲ್ಲಿಯೂ ಜಪ. ತನ್ನ ಕಂಠಸಿರಿಯಿಂದ, ಮುಗ್ಧ ಮಾತುಗಳಿಂದ ಅದೆಷ್ಟೋ ಹೃದಯ ಗೆದ್ದ ಹನುಮಂತನಿಗೆ ಒಳ್ಳೆ ಹುಡುಗಿ ಸಿಗ್ಲಿ ಎಂದು ಅವರ ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ. ಜುಲೈ ಅಂತ್ಯಕ್ಕೆ ‘ಭರ್ಜರಿ ಬ್ಯಾಚುಲರ್ಸ್‌ʼ ಮನೆಯಂಗಳಕ್ಕೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ. ಮತ್ತೆ ಕಿರುತೆರೆಯಲ್ಲಿ ಹನುಮನ ಪಯಣ ಶುರುವಾಗಲಿದೆ.

ಇದನ್ನೂ ಓದಿ: Paaru TV Serial: ಬೋಲ್ಡ್ ಅವತಾರದಲ್ಲಿ ಪಾರು ಧಾರಾವಾಹಿಯ ದಾಮಿನಿ!

ಸೂರಜ್, ರಾಕೇಶ್, ಮನೋಹರ್, ಉಮೇಶ್, ನವಾಜ್, ರುದ್ರ ಮಾಸ್ಟರ್, ಹನುಮಂತ, ಜಗಪ್ಪ, ಗಿಲ್ಲಿ ನಟ, ರಾಕೇಶ್ ಭರ್ಜರಿ ಬ್ಯಾಚುಲರ್ಸ್ ಕಂಟೆಸ್ಟೆಂಟ್‌ಗಳಾಗಿದ್ದಾರೆ. ಆಸಕ್ತಿಕರವಾದ ಸಂಗತಿ ಎಂದರೆ ಈ ಶೋನಲ್ಲಿ ಸಾಕಷ್ಟು ಗೇಮ್‌ಗಳಿರಲಿವೆ ಎಂತಲೂ ವರದಿಯಾಗಿದೆ. ಈ ಟಾಸ್ಕ್‌ಗಳು ಬ್ಯಾಚುಲರ್‌ಗೆ ಏನೆಲ್ಲಾ ಸಂಕಷ್ಟಗಳು ಎದುರಾಗಲಿವೆ ಎಂಬುದಕ್ಕೆ ಸಂಬಂಧಿಸಿದ್ದಾಗಿರುತ್ತದೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Vijay Surya: ತಾಯಂದಿರ ದಿನ ತನ್ನ ಹೆಸರನ್ನೇ ಬದಲಿಸಿಕೊಂಡ ʻಅಗ್ನಿಸಾಕ್ಷಿ’ ನಟ! ಹೊಸ ಹೆಸರೇನು?

Vijay Surya: ವಿಜಯ್ ಸೂರ್ಯ ಅವರ ಕಿರುತೆರೆ ಪಯಣ ಶುರುವಾಗಿದ್ದು ‘ಉತ್ತರಾಯಣ’ ಧಾರಾವಾಹಿಯ ಮೂಲಕ.’ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಸಿದ್ಧಾರ್ಥ್ ಆಗಿ ಅಭಿನಯಿಸಿದರು ವಿಜಯ್ ಸೂರ್ಯ. ಮುಂದೆ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿಯೂ ನಾಯಕ ಸಿದ್ಧಾರ್ಥ್ ಆಗಿ ಕಂಡಿದ್ದರು.ಈ ಬಾರಿ ವಿಶೇಷವಾಗಿ ಅಮ್ಮಂದಿರ ದಿನಾಚರಣೆಯನ್ನು ಆಚರಿಸಿದ್ದಾರೆ ನಟ.

VISTARANEWS.COM


on

Vijay Surya changes his name on mothers day
Koo

ʻಅಗ್ನಿಸಾಕ್ಷಿ’ ,’ನಮ್ಮ ಲಚ್ಚಿ’ ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ (Vijay Suriya) ಅವರು ಈ ಬಾರಿ ವಿಶೇಷವಾಗಿ ಅಮ್ಮಂದಿರ ದಿನಾಚರಣೆಯನ್ನು ಆಚರಿಸಿದ್ದಾರೆ.

ಇಂದಿನಿಂದ ನಾನು ನನ್ನ ಹೆಸರನ್ನು ʻವಿಜಯ್ ಲಲಿತಾ ಸೂರ್ಯʼ ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು. ನನ್ನ ಪಾಲಿನ ಉಸಿರು ಎಂದು ವಿಜಯ್ ಸೂರ್ಯ ಹೇಳಿದ್ದಾರೆ. ಈ ಮೂಲಕ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ ನಟ.

ಇದನ್ನೂ ಓದಿ: Puneeth Parva | ಅಪ್ಪುವಿನ ಮಾಸ್‌ ಡೈಲಾಗ್‌ ಹೇಳಿದ ಧ್ರುವ ಸರ್ಜಾ: ದುನಿಯಾ ವಿಜಯ್‌ ಭಾವುಕ

ವಿಜಯ್‌ ಸೂರ್ಯ ಪೋಸ್ಟ್‌ ಮಾಡಿ. ʻʻಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ..
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ..

ಎಂ ಆರ್ ಕಮಲಾ ಅವರು ಬರೆದ ಈ ಸಾಲನ್ನು ಮನದಲ್ಲಿ ನೆನೆಯುತ್ತಾ ಅಮ್ಮನಿಗೊಂದು ಭಾವುಕ ನಮನ ಸಲ್ಲಿಸುತ್ತೇನೆ. ಹ್ಯಾಪಿ ಮದರ್ಸ್‌ ಡೇ ಅಮ್ಮ.

ಇಷ್ಟು ಹೇಳಿದರೆ ಸಾಕಾ ? ಅಮ್ಮ ಪ್ರತಿ ಕ್ಷಣದ ಮಿಡಿತ ಅಲ್ವಾ ? ಈ ಪ್ರಶ್ನೆ ನನ್ನನ್ನು ಸದಾ ಕಾಡಿದೆ ಇದಕ್ಕೆ ಉತ್ತರ ಹುಡುಕಲು ಹೊರಟಾಗ ಅನ್ನಿಸಿದ್ದು ನನ್ನ ಹೆಸರಿನಲ್ಲಿ ಅಮ್ಮನ ಹೆಸರು ಬೆರೆತರೆ ಹೇಗೆ ಎಂಬ ಭಾವ. ಅದನ್ನು ಅಳವಡಿಸಿಕೊಳ್ಳಲು ಅಮ್ಮಂದಿರ ದಿನಕ್ಕಿಂತ ವಿಶೇಷ ಸಂದರ್ಭ ಯಾವುದಿದೆ ಅಲ್ವಾ ?

ಹೌದು ಇಂದಿನಿಂದ ನಾನು ನನ್ನ ಹೆಸರನ್ನು ʻವಿಜಯ್ ಲಲಿತಾ ಸೂರ್ಯʼ ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು. ನನ್ನ ಪಾಲಿನ ಉಸಿರು.

ಜಗತ್ತಿನ ಎಲ್ಲ ಅಮ್ಮಂದಿರಿಗೂ ನನ್ನ ಶುಭಾಶಯಗಳು. ʻನಿಮ್ಮವನುʼ , ವಿಜಯ್ ಲಲಿತಾ ಸೂರ್ಯ…ʼʼಎಂದು ಬರೆದುಕೊಂಡಿದ್ದಾರೆ.

ತಾಯಿಗಾಗಿ ಹೆಸರನ್ನೇ ಬದಲಿಸಿಕೊಂಡ ನಟನ ಈ ನಡೆಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಜಯ್ ಸೂರ್ಯ ಅವರ ಕಿರುತೆರೆ ಪಯಣ ಶುರುವಾಗಿದ್ದು ‘ಉತ್ತರಾಯಣ’ ಧಾರಾವಾಹಿಯ ಮೂಲಕ.’ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಸಿದ್ಧಾರ್ಥ್ ಆಗಿ ಅಭಿನಯಿಸಿದರು ವಿಜಯ್ ಸೂರ್ಯ. ಮುಂದೆ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿಯೂ ನಾಯಕ ಸಿದ್ಧಾರ್ಥ್ ಆಗಿ ಕಂಡಿದ್ದರು.

Continue Reading

ಕಿರುತೆರೆ

Jyoti Rai: ವೈರಲ್ ವಿಡಿಯೊ ಬೆನ್ನಲ್ಲೇ ಜ್ಯೋತಿ ರೈ ಟೆಂಪಲ್‌ ರನ್‌!

Jyoti Rai: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಜ್ಯೋತಿ ರೈ ಅವರನ್ನ ಅವರ ಅಭಿಮಾನಿಗಳು ಮಾತನಾಡಿಸಿದ್ದಾರೆ. ಜ್ಯೋತಿ ರೈ ಕೂಡ ಅಲ್ಲಿನ ಸಿಬ್ಬಂದಿ ಜೊತೆ ಕಷ್ಟ-ಸುಖ ಹಂಚಿಕೊಂಡಿದ್ದಾರೆ.ಜ್ಯೋತಿ ರೈ ತಿರುಪತಿಯ ತಮ್ಮ ಈ ದಿವ್ಯ ಅನುಭವವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ನಟಿ ತೀವ್ರ ಬೇಸರದ ನಡುವೆಯೂ ಜನಪದ ಗಾಯಕರೊಬ್ಬರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾದರಿಯಾದರು.

VISTARANEWS.COM


on

Jyoti Rai seeks divine blessings at tirupathi
Koo

ಬೆಂಗಳೂರು: ಕಿರುತೆರೆ ನಟಿ, ಬಹುಭಾಷಾ ಕಲಾವಿದೆ, ಕನ್ನಡ ಮೂಲದ ಜ್ಯೋತಿ ರೈ (Jyoti Rai) ಕುರಿತಾದ ಸುದ್ದಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದೇ ಇದಕ್ಕೆ ಕಾರಣ. ಇದಾದ ಬಳಿಕ ನಟಿ ತೀವ್ರ ಬೇಸರದ ನಡುವೆಯೂ ಜನಪದ ಗಾಯಕರೊಬ್ಬರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾದರಿಯಾದರು. ಈ ಎಲ್ಲದರ ನಡುವೆ ನಟಿ ತಮ್ಮ ಸಂಗಾತಿ ಸುಕು ಪೂರ್ವಜ್ ಜತೆ ತಿರುಪತಿಗೆ ತೆರಳಿದ್ದಾರೆ. ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಜ್ಯೋತಿ ರೈ ಅವರನ್ನ ಅವರ ಅಭಿಮಾನಿಗಳು ಮಾತನಾಡಿಸಿದ್ದಾರೆ. ಜ್ಯೋತಿ ರೈ ಕೂಡ ಅಲ್ಲಿನ ಸಿಬ್ಬಂದಿ ಜೊತೆ ಕಷ್ಟ-ಸುಖ ಹಂಚಿಕೊಂಡಿದ್ದಾರೆ.ಜ್ಯೋತಿ ರೈ ತಿರುಪತಿಯ ತಮ್ಮ ಈ ದಿವ್ಯ ಅನುಭವವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನೋವಿನ ನಡುವೆಯೂ ಸಹಾಯ ಹಸ್ತ ಚಾಚಿದ ನಟಿ ಜ್ಯೋತಿ ರೈ

ತೆಲುಗಿನ ಜನಪ್ರಿಯ ಜನಪದ ಗಾಯಕ ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ (Darshanam Mogilaiah) ತೀವ್ರ ಬಡತನದಲ್ಲಿದ್ದು, ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಅವರು ಗಾರೆ ಕೆಲಸ ಮಾಡುತ್ತಿರುವ ಚಿತ್ರಗಳು, ವಿಡಿಯೊ ವೈರಲ್ ಆಗಿತ್ತು. ಹೀಗಾಗಿ ತನ್ನ ನೋವನ್ನು ನುಂಗಿ ಜ್ಯೋತಿ ರೈ ಅವರು ಈ ಹಿರಿಯ ಕಲಾವಿದರ ನೆರವಿಗೆ ಧಾವಿಸಿದ್ದರು.

ಧನ ಸಹಾಯ

ಅಕ್ಷಯ ತೃತೀಯ ದಿನ (ಶುಕ್ರವಾರ)ದಂದು ಜ್ಯೋತಿ ರೈ ಅವರು ಮೊಗಿಲಯ್ಯ ಅವರಿಗೆ 50 ಸಾವಿರ ರೂ. ಧನ ಸಹಾಯ ನೀಡಿದ್ದರು. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದರು. ʼʼಅಕ್ಷಯ ತೃತೀಯದ ಪುಣ್ಯ ದಿನದಂದು ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಿದೆ. ಮೊಗಿಲಯ್ಯ ಅಷ್ಟು ಜನಪ್ರಿಯರಾಗಿದ್ದರೂ ತಮ್ಮ ಖಾಸಗಿ ಜೀವನ ಹಾಗೂ ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರು ನಡೆಸಿದ ಸುದ್ದಿಗೋಷ್ಠಿಯಿಂದಾಗಿ ಅವರ ಕಷ್ಟಗಳು ನನಗೆ ತಿಳಿದು ಬಂತುʼʼ ಎಂದು ಜ್ಯೋತಿ ರೈ ಹೇಳಿದ್ದರು.

ಇದನ್ನೂ ಓದಿ: Jyoti Rai: ನೋವಿನ ನಡುವೆಯೂ ಸಹಾಯ ಹಸ್ತ ಚಾಚಿದ ನಟಿ ಜ್ಯೋತಿ ರೈ; ವಿಡಿಯೊ ವೈರಲ್‌ ಮಾಡುವಂತೆ ಸವಾಲು ಹಾಕಿದ್ದೇಕೆ?

ಮುಂದುವರಿದು, ʼʼಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ ಅವರ ಕಷ್ಟ ಕೇಳಿದಾಗ ನನ್ನೊಳಗೆ ಮೂಡಿದ ಬೆಳಕು, ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರೇಪಿಸಿತು. ಹೀಗಾಗಿ ಅವರಿಗೆ ಸಹಾಯ ಮಾಡಿದೆ. ಅವರಿಗೆ ಇನ್ನಷ್ಟು ಸಹಾಯ ಮಾಡುವ ಆಸೆಯಿದೆ. ನನ್ನಿಂದ ಸಾಧ್ಯವಾಗಿದ್ದನ್ನು ನಾನು ಮಾಡಿದ್ದೇನೆ. ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ಬನ್ನಿ ಎಲ್ಲರೂ ಒಟ್ಟು ಸೇರಿ ನೆರವಾಗೋಣʼʼ ಎಂದು ಕರೆ ನೀಡಿದ್ದರು.

ಸವಾಲು

ಇದರ ಜತೆಗೆ ತಮ್ಮದು ಎನ್ನಲಾದ ನಕಲಿ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಗಳಿಗೆ ಸವಾಲು ಹಾಕಿದ್ದರು. ʼʼಈ ವಿಡಿಯೊ (ಮೊಗಿಲಯ್ಯ ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ವಿಡಿಯೊ)ವನ್ನು ವೈರಲ್‌ ಮಾಡುವ ತಾಕತ್ತು ನಿಮ್ಮಲ್ಲಿ ಇದೆಯಾ? ಇದು ನಿಜವಾದುದು. ಈ ಕೆಳಗಿನ ಸಾಲುಗಳು ಕೆಲಸ ಇಲ್ಲದವರಿಗೆ, ಬುದ್ಧಿ ಇಲ್ಲದವರಿಗಾಗಿ. ಜಗತ್ತು ನನ್ನೆಡೆಗೆ ಅಂಧಕಾರವನ್ನು ದೂಡಿದಾಗ ನನ್ನೊಳಗಿನ ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ. ನನ್ನೊಳಗಿನ ಬೆಳಕು ಉರಿಯಲು ಇಂತಹ ಕತ್ತಲೇ ಇಂಧನ. ನಿರಾಶಾವಾದದ ಬೂದಿಯಿಂದ ಸಾಧ್ಯತೆಯ ಫೀನಿಕ್ಸ್ ಏಳುತ್ತದೆ. ನಕಾರಾತ್ಮಕ ಶಕ್ತಿಯು ಮೆಟ್ಟಿಲು; ನಾನು ಅದರ ಮೇಲೆ ಹತ್ತಿ ಸಕಾರಾತ್ಮಕತೆಯ ದಿಗಂತದ ಕಡೆಗೆ ಸಾಗುತ್ತೇನೆʼʼ ಎಂದು ಜ್ಯೋತಿ ರೈ ಬರೆದುಕೊಂಡಿದ್ದರು. ಸದ್ಯ ಅವರ ಈ ಪೋಸ್ಟ್‌ ವೈರಲ್‌ ಆಗಿದೆ. ಅಭಿಮಾನಿಗಳು ಅವರ ಈ ದಿಟ್ಟತನವನ್ನು, ಮಾನವೀಯತೆಯ ಗುಣವನ್ನು ಮೆಚ್ಚಿದ್ದರು.

ಇನ್ನೂ ವಿಡಿಯೊ ವಿಚಾರಕ್ಕೆ ಬಂದರೆ ಜ್ಯೋತಿ ರೈ ವಿಚಾರದ ಕಿಡಿಗೇಡಿಗಳು ಡೀಪ್‌ಫೇಕ್ ವಿಡಿಯೊ ಬಳಸಿ ನಟಿ ಜ್ಯೋತಿ ರೈ ಅವರ ನಕಲಿ ವಿಡಿಯೋ ಹಾಗೂ ಫೋಟೊಗಳನ್ನು ಸೃಷ್ಟಿಸಿರಬಹುದೆಂದು ಚರ್ಚೆಯಾಗುತ್ತಿದೆ. ಈ ಬಗ್ಗೆ ನಟಿ ಈಗಾಗಲೇ ಜತೆಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಹ ನೀಡಿದ್ದರು.

Continue Reading

ಕಿರುತೆರೆ

Pavithra Jayaram: ತೆಲುಗಿನ ‘ತ್ರಿನಯನಿ’ ಧಾರಾವಾಹಿ ನಟಿ, ಕನ್ನಡತಿ ಪವಿತ್ರ ಜಯರಾಂ ಅಪಘಾತದಲ್ಲಿ ನಿಧನ

Pavithra Jayaram: ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್‌ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ. . ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು.

VISTARANEWS.COM


on

Pavithra Jayaram Trinayani serial Fame No More
Koo

ಬೆಂಗಳೂರು: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani serial) ಜನಪ್ರಿಯರಾಗಿರುವ ಕನ್ನಡತಿ ಪವಿತ್ರ ಜಯರಾಂ (Pavithra Jayaram) ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ ಇಂದು (ಮೇ.12) ಮುಂಜಾನೆ ಅಪಘಾತವಾಗಿದೆ ಎಂದು ವರದಿಯಾಗಿದೆ. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು.

ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್‌ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ . ಈ ಬಗ್ಗೆ ನಟಿ ಈ ಹಿಂದೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ʻʻನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಆದರೆ ಕನ್ನಡಕ್ಕಿಂತ ನನಗೆ ಹೆಚ್ಚು ಹೆಸರು ಕೊಟ್ಟಿದ್ದು ತೆಲುಗು. ‘ತ್ರಿನಯನಿ’ ಧಾರಾವಾಹಿ ಮುಂಚೆ ಅನೇಕ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದರು ಅಷ್ಟಾಗಿ ಫಾಲೋವರ್ಸ್‌ ಇರಲಿಲ್ಲ. ಆದರೆ ‘ತ್ರಿನಯನಿ’ ಧಾರಾವಾಹಿ ಕನ್ನಡದಲ್ಲಿಯೂ ಡಬ್‌ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿಯೂ ತುಂಬಾ ಫ್ಯಾನ್ ಪೇಜ್‌ಗಳು ಶುರುವಾದವುʼʼಎಂದಿದ್ದರು.

ಇದನ್ನೂ ಓದಿ: IPL 2024: ಬೆಂಗಳೂರಲ್ಲಿಂದು ಆರ್‌ಸಿಬಿ, ಡೆಲ್ಲಿ ನಿರ್ಣಾಯಕ ಪಂದ್ಯ; ಮಳೆ ಅಡ್ಡಿ ಆಗತ್ತಾ ? ಇಲ್ಲಿದೆ ರಿಪೋರ್ಟ್

“ಅಷ್ಟೇ ಅಲ್ಲ 16ನೇ ವಯಸ್ಸಿಗೆ ಮದುವೆ ಮಾಡಿದ್ದರು. ಮ್ಯಾರೇಜ್ ಲೈಫ್ ಕೂಡ ನನ್ನದು ಅಷ್ಟಾಗಿ ಸರಿಯಿರಲಿಲ್ಲ. ಓದು ಕೂಡ ಅರ್ಧಕ್ಕೆ ಮುಗಿದಿತ್ತು. ಚಿಕ್ಕ ಚಿಕ್ಕ ಮಕ್ಕಳು ಇರುವಾಗಲೇ ನನ್ನ ಮಗಳು ಮತ್ತು ಮಗನನ್ನು ಕರೆದುಕೊಂಡು ಬೆಂಗಳೂರಿಗೆ ಅವಕಾಶ ಅರಸಿಕೊಂಡು ಬಂದೆ. ಮಕ್ಕಳನ್ನು ಬೆಳೆಸಲು ಹೌಸ್ ಕೀಪಿಂಗ್ ಕೆಲಸ ಕೂಡ ಮಾಡಿದ್ದೆ. ನರ್ಸಿಂಗ್ ಕಾಲೇಜಿನ ಲೈಬ್ರರಿಯಲ್ಲಿ ಕೂಡ ಕೆಲಸ ಮಾಡಿದ್ದೆʼʼಎಂದು ಹೇಳಿಕೊಂಡಿದ್ದರು.

Continue Reading

ಸಿನಿಮಾ

Abdu Rozik: ಎಂಗೇಜ್‌ ಆದ ಬಿಗ್‌ ಬಾಸ್‌ ಖ್ಯಾತಿಯ ಅಬ್ದು ರೋಜಿಕ್!

Abdu Rozik: 20 ವರ್ಷದ ಅಬ್ದು ರೋಜಿಕ್ 19 ವರ್ಷದ ಯುವತಿಯನ್ನು ಮದುವೆಯಾಗಲಿದ್ದಾರೆ. ಅಭಿಮಾನಿಗಳು ಕೂಡ ಅಬ್ದು ಮದುವೆಗಾಗಿ ಕಾಯುತ್ತಿದ್ದಾರೆ. ಅಬ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿಗ್ ಬಾಸ್’ ನಿಂದಾಗಿ ಅಬ್ದು ಖ್ಯಾತಿ ಮತ್ತು ಜನಪ್ರಿಯತೆ ಹೆಚ್ಚಾಯಿತು. ಸಲ್ಮಾನ್ ಖಾನ್ ಅವರ ಜೊತೆಗೂ ಅಬ್ದು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ.

VISTARANEWS.COM


on

Abdu Rozik Bigg Boss 16 gets engaged
Koo

ಬೆಂಗಳೂರು: ಹಿಂದಿ ಬಿಗ್‌ ಬಾಸ್‌ ಸೀಸನ್‌ 16ರ (Bigg Boss 16 fame Abdu Rozik) ಖ್ಯಾತಿಯ ಅಬ್ದು ರೋಜಿಕ್ (Abdu Rozik) ತಾವು ಎಂಗೇಜ್‌ ಆಗಿರುವ ವಿಚಾರವನ್ನು ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಅಬ್ದು ರೋಜಿಕ್ ಇದೀಗ ನಿಶ್ಚಿತಾರ್ಥ ಸಮಾರಂಭದ ಕೆಲವು ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಜತೆಗೆ ಮದುವೆಯಾಗುತ್ತಿರುವ ಹುಡುಗಿ ಹೆಸರನ್ನು ರಿವೀಲ್‌ ಮಾಡಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅಮೀರಾ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಜುಲೈನಲ್ಲಿ ಮದುವೆಯಾಗುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಮದುವೆಗೆ ಸಲ್ಮಾನ್ ಖಾನ್ ಭಾಗಿಯಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಅಬ್ದು ರೋಜಿಕ್ ನಿಶ್ಚಿತಾರ್ಥದ ಸಮಾರಂಭಕ್ಕಾಗಿ ಸಾಂಪ್ರದಾಯಿಕ ಉಡುಪನ್ನು ಧರಿಸಿರುವುದನ್ನು ಕಾಣಬಹುದು. ಭಾವಿ ಪತ್ಮಿ ಅಮೀರಾ ಮುಖವು ಬುರ್ಖಾದಿಂದ ಮುಚ್ಚಲ್ಪಟ್ಟಿತ್ತು. ಅಬ್ದು ಹೃದಯ ಆಕಾರದ ಉಂಗುರವನ್ನು ಹಿಡಿದಿರುವುದು ಕಂಡುಬಂದಿದೆ. ದುಬೈ ಮಾಲ್‌ನಲ್ಲಿ ಇವರ ಭೇಟಿ ನಡೆದಿದೆ. ಮೊದಲ ಬಾರಿಗೆ ಅಬ್ದು ಅವರು ಅಮೀರಾ ಅವರನ್ನು ನೋಡಿದರು. ಮೊದಲ ನೋಟದಲ್ಲೇ ಅವರು ಸಾಕಷ್ಟು ಇಷ್ಟ ಆದರು. ಈಗ ಇವರು ಮದುವೆ ಆಗುತ್ತಿದ್ದಾರೆ.

ಅಬ್ದು ಅವರು ಅಮೀರಾ ಕುರಿತಾಗಿ ಮಾತನಾಡಿ ʻʻಅಮೀರಾ ಸುಂದರವಾದ ಉದ್ದ ಕೂದಲು ಮತ್ತು ಚೆಂದದ ಕಣ್ಣುಗಳನ್ನು ಹೊಂದಿದ್ದಾಳೆ” ಎಂದು ಹೇಳಿದರು. ಅಮೀರಾ ಶಾರ್ಜಾದಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಓದುತ್ತಿದ್ದಾರೆ ಎಂದು ಹೇಳಿಕೆ ನೀಡಿದರು. ಅಬ್ದು ಮಾತನಾಡಿ ʻʻಅಮೀರಾ ನಾನು ಕುಳ್ಳುಗಿದ್ದರೂ ನನ್ನ ಪ್ರೀತಿಯನ್ನು ಒಪ್ಪಿಕೊಂಡಿರುವುದು ಸಂತೋಷವಾಗಿದೆ. ಜುಲೈ 7 ರಂದು ಮದುವೆಯಾಗಲಿದ್ದೇವೆ. ಸಲ್ಮಾನ್ ಖಾನ್ ನಮಗೆ ಆಶೀರ್ವದಿಸಲು ಮದುವೆಗೆ ಬರುತ್ತಾರೆ. ಅಮೀರಾ ನನ್ನ ಜೀವನದಲ್ಲಿ ಬಂದಿರುವುದು ನನ್ನ ಅದೃಷ್ಟʼʼಎಂದರು.

ಇದನ್ನೂ ಓದಿ: Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

20 ವರ್ಷದ ಅಬ್ದು ರೋಜಿಕ್ 19 ವರ್ಷದ ಯುವತಿಯನ್ನು ಮದುವೆಯಾಗಲಿದ್ದಾರೆ. ಅಭಿಮಾನಿಗಳು ಕೂಡ ಅಬ್ದು ಮದುವೆಗಾಗಿ ಕಾಯುತ್ತಿದ್ದಾರೆ. ಅಬ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿಗ್ ಬಾಸ್’ ನಿಂದಾಗಿ ಅಬ್ದು ಖ್ಯಾತಿ ಮತ್ತು ಜನಪ್ರಿಯತೆ ಹೆಚ್ಚಾಯಿತು. ಸಲ್ಮಾನ್ ಖಾನ್ ಅವರ ಜೊತೆಗೂ ಅಬ್ದು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಅಬ್ದು ರೋಜಿಕ್ ತಜಕಿಸ್ತಾನದ ಸಂಗೀತಗಾರರೂ ಹೌದು.

Continue Reading
Advertisement
Madhavi Latha
ದೇಶ16 mins ago

Madhavi Latha: ಮತಗಟ್ಟೆಯಲ್ಲೇ ಮುಸ್ಲಿಂ ಮಹಿಳೆಯರ ಐಡಿ ಕಾರ್ಡ್‌ ಚೆಕ್ಕಿಂಗ್-ಮಾಧವಿ ಲತಾ ಹೊಸ ವಿವಾದ

pm Narendra Modi
ಪ್ರಮುಖ ಸುದ್ದಿ34 mins ago

PM Narendra Modi: “ಪಾಕ್‌ ಬಳೆ ತೊಡದಿದ್ದರೆ ನಾವು ತೊಡಿಸುತ್ತೇವೆ….” ಪಿಎಂ ಮೋದಿ ಗುಡುಗು

karnataka politics eknath shinde
ಪ್ರಮುಖ ಸುದ್ದಿ1 hour ago

Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

Vijayapura news Drowned in water
ವಿಜಯಪುರ2 hours ago

Vijayapura News: ನಾಪತ್ತೆಯಾಗಿದ್ದ ಮೂವರು ಮಕ್ಕಳು ಚರಂಡಿ ಶುದ್ಧೀಕರಣ ಕೇಂದ್ರಕ್ಕೆ ಬಿದ್ದು ಸಾವು

Road Accident between Bolero and bike Couple dies on the spot
ಕಲಬುರಗಿ2 hours ago

Road Accident: ಬೊಲೇರೋ – ಬೈಕ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಆಳಂದದ ದಂಪತಿ ಸಾವು

Arvind Kejriwal
ದೇಶ2 hours ago

Arvind Kejriwal: ಕೇಜ್ರಿವಾಲ್‌ಗೆ ಮತ್ತೊಂದು ರಿಲೀಫ್‌; ಸಿಎಂ ಸ್ಥಾನ ವಜಾಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ

Assault case Cubbon park
ಬೆಂಗಳೂರು2 hours ago

Cubbon park: ಕಬ್ಬನ್‌ ಪಾರ್ಕ್‌ನಲ್ಲಿ ಯುವಕನನ್ನು ಅಟ್ಟಾಡಿಸಿ ಚಪ್ಪಲಿಯಿಂದ ಹೊಡೆದ ಮಹಿಳೆಯರು!

A Manju and Naveen Gowda
ಕ್ರೈಂ2 hours ago

Prajwal Revanna Case: ಪೆನ್‌ ಡ್ರೈವ್‌ ಹಂಚಿಕೆ ಆರೋಪ ಮಾಡಿದ್ದ ನವೀನ್‌ ಗೌಡ ಮೇಲೆ ಶಾಸಕ ಮಂಜು ದೂರು

Viral Video
ದೇಶ2 hours ago

Viral Video: ಸಾಲಿನಲ್ಲಿ ಬನ್ನಿ ಅಂದಿದ್ದೇ ತಪ್ಪಾಯ್ತಾ? ಮತದಾರನಿಗೆ MLA ಕಪಾಳಮೋಕ್ಷ

POK Explainer in Kannada
ರಾಜಕೀಯ2 hours ago

POK Explainer in Kannada: ಪಾಕ್ ಆಕ್ರಮಿತ ಕಾಶ್ಮೀರ ಕುರಿತ 15 ಕುತೂಹಲಕಾರಿ ಸಂಗತಿಗಳು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ9 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ11 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ21 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ22 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ22 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

ಟ್ರೆಂಡಿಂಗ್‌