Star Suvarna: `ಸುವರ್ಣ ಗೃಹಮಂತ್ರಿ'ಯ ಸಾರಥಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ರವಿಶಂಕರ್ - Vistara News

ಕಿರುತೆರೆ

Star Suvarna: `ಸುವರ್ಣ ಗೃಹಮಂತ್ರಿ’ಯ ಸಾರಥಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ರವಿಶಂಕರ್

Star Suvarna: ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ “ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಶೈಲಿಯಾಗಿದೆ.

VISTARANEWS.COM


on

Star suvarna Ravi Shankar entered television suvarna grahamanthri
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಮಧ್ಯಾಹ್ನದ ಮನರಂಜನೆಯಾಗಿ ಆರಂಭವಾದ “ಸುವರ್ಣ ಗೃಹಮಂತ್ರಿ” ಎಂಬ ಹೊಸ ಬಗೆಯ ರಿಯಾಲಿಟಿ ಶೋ ಈಗಾಗಲೇ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆದರೆ ಇದೀಗ ಮತ್ತಷ್ಟು ಮೆರುಗು ನೀಡಲು ಇದೇ ಮೊದಲ ಬಾರಿಗೆ ಸುವರ್ಣ ವಾಹಿನಿಯ ಮೂಲಕ ಖ್ಯಾತ ನಟ ರವಿಶಂಕರ್ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ಇನ್ಮುಂದೆ ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಟ ರವಿಶಂಕರ್ ಹೊರಲಿದ್ದಾರೆ. ವರ್ಷಗಳ ಬಳಿಕ ನಟ ರವಿ ಶಂಕರ್ (Ravi shankar) ಅವರನ್ನು ಗೃಹಮಂತ್ರಿ ಪ್ರೋಮೋದಲ್ಲಿ ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ವ್ಯಕ್ತ ಪಡಿಸಿದ್ದು, ‘ಸುವರ್ಣ ಗೃಹಮಂತ್ರಿ’ಯ ಸಂಚಿಕೆಯಲ್ಲಿ ರವಿಶಂಕರ್ (suvarna gruha mantri) ರವರ ನಿರೂಪಣೆಯನ್ನು ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ.

ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ “ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಶೈಲಿಯಾಗಿದೆ.

ಇದನ್ನೂ ಓದಿ: Vinod Dondale: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಇನ್ಮುಂದೆ ನಟ ರವಿಶಂಕರ್ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆಯನ್ನು ಕೊಟ್ಟು ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ.

‘ಸುವರ್ಣ ಗೃಹಮಂತ್ರಿ’ ಇದೇ ಸೋಮವಾರದಿಂದ ಶನಿವಾರ ಮಧ್ಯಾಹ್ನ 1 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ .

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Vinod Dondale: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣು

Vinod Dondale : ನಿನ್ನೆ ಸಂಜೆಯಷ್ಟೇ ನಿನಾಸಂ ಸತೀಶ್ ಮತ್ತು ಚಿತ್ರತಂಡದ ಜೊತೆ ಮಾತನಾಡಿ ವಿನೋದ್ ದೊಂಡಾಲೆ ಬಂದಿದ್ದರು ಎನ್ನಲಾಗಿದೆ. ವಿನೋದ್ ವಿ ದೋಂಡಾಲೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕ. ಪಿ.ಶೇಷಾದ್ರಿ, ಟಿ.ಎನ್, ಸೀತಾರಾಂ ಅವರ ಜೊತೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

VISTARANEWS.COM


on

Vinod Dondale Famous Kannada TV director committed suicide
Koo

ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ (Vinod Dondale) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ʻಕರಿಮಣಿʼ, ʻಶಾಂತಂ ಪಾಪಂʼ ಸೇರಿದಂತೆ ಹಲವು ಧಾರವಾಹಿಗಳಿಗೆ ವಿನೋದ್ ನಿರ್ದೇಶನ ಮಾಡಿದ್ದರು. ಸದ್ಯ ನಿನಾಸಮ್ ಸತೀಶ್ ನಟನೆಯ ʻಅಶೋಕ ಬ್ಲೇಡ್ʼ ಚಿತ್ರ ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮುಂದಿನ ವಾರದಿಂದ ಚಿತ್ರೀಕರಣ ಶುರು ಮಾಡಬೇಕಿತ್ತು. ಕಳೆದ ಎರಡು ವರ್ಷಗಳಿಂದಲೂ ಚಿತ್ರದ ಶೂಟಿಂಗ್ ಕುಂಟುತ್ತಲೇ ಸಾಗಿತ್ತು. ನಿರ್ಮಾಪಕರಾಗಿದ್ದರಿಂದ ಸಾಲದ ಸುಳಿಗೆ ಸಿಲುಕಿದ್ದ ವಿನೋದ್ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಿನ್ನೆ ಸಂಜೆಯಷ್ಟೇ ನಿನಾಸಂ ಸತೀಶ್ ಮತ್ತು ಚಿತ್ರತಂಡದ ಜೊತೆ ಮಾತನಾಡಿ ವಿನೋದ್ ದೊಂಡಾಲೆ ಬಂದಿದ್ದರು ಎನ್ನಲಾಗಿದೆ. ವಿನೋದ್ ವಿ ದೋಂಡಾಲೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕ. ಪಿ.ಶೇಷಾದ್ರಿ, ಟಿ.ಎನ್, ಸೀತಾರಾಂ ಅವರ ಜೊತೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ನಗರಬಾವಿಯಲ್ಲಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಅತಿಥಿ,ಬೇರು,ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ವಿನೋದ್ ಕೆಲಸ ಮಾಡಿದ್ದರು. ನಟ, ನಿರ್ದೇಶಕ, ನಿರ್ಮಾಪಕರಾಗಿಯೂ ಸಕ್ರಿಯರಾಗಿದ್ದರು.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಹಲ್ಲೆ ದೃಶ್ಯ ಐಫೋನ್‌ನಲ್ಲಿ ರೆಕಾರ್ಡ್‌; ಸಿನಿಮಾ ಶೈಲಿಯಲ್ಲಿ ನಡೆದಿತ್ತು ಕೃತ್ಯ!

ಇನ್ನೂ ಕೆಲವು ಸಿನಿಮಾಗಳ ಎರಡನೇ ಭಾಗದ ಚಿತ್ರೀಕರಣ ನಡೆಯುತ್ತಿದೆ. ಈಗ ಸತೀಶ್‌ ನೀನಾಸಂ ನಟನೆಯ ‘ಅಶೋಕ ಬ್ಲೇಡ್‌’ ಸಿನಿಮಾ ಸಹ ಎರಡು ಭಾಗಗಳಲ್ಲಿ ರಿಲೀಸ್‌ ಆಗಲಿದೆ.ಅವರ ವೃತ್ತಿ ಬದುಕಿನ ಬಹಳ ವಿಶೇಷ ಸಿನಿಮಾ ಎಂದೇ ಅನಿಸಿಕೊಂಡಿರುವ ಮತ್ತು ಬಿಗ್‌ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು ವಿನೋದ್‌ ವಿ ದೊಂಡಾಲೆ ನಿರ್ದೇಶನ ಮಾಡುತ್ತಿದ್ದಾರೆ. 70ರ ದಶಕದಲ್ಲಿ ನಡೆಯಲಿರುವ ಇದರ ಕಥೆಯನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ.

Continue Reading

ಕಿರುತೆರೆ

Kannada Serials TRP: ಟಾಪ್‌ 3ಯಲ್ಲಿ ʻಲಕ್ಷ್ಮೀ ನಿವಾಸʼ: ಐದನೇ ಸ್ಥಾನದಲ್ಲಿ ʻಲಕ್ಷ್ಮೀ ಬಾರಮ್ಮʻ ಧಾರಾವಾಹಿ

Kannada Serials TRP: . ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಪಡೆದಿದೆ. ಈ ಮೊದಲಿಗಿಂತಲೂ ‘ಸೀತಾ ರಾಮ’ ಧಾರಾವಾಹಿಗೆ ಹೆಚ್ಚಿನ ಟಿಆರ್​ಪಿ ಸಿಕ್ಕಿದೆ ಎನ್ನುವುದು ವಿಶೇಷ.ಲಕ್ಷ್ಮೀ ನಿವಾಸ’ ಧಾರಾವಾಹಿಗೆ ಈ ಬಾರಿ ಮೂರನೇ ಸ್ಥಾನ ಸಿಕ್ಕಿದೆ. ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ.

VISTARANEWS.COM


on

Kannada Serials TRP Lakshmi Nivas in Top 3 Lakshmi Baramma at fifth position
Koo

ಬೆಂಗಳೂರು: 28ನೇ ವಾರದ ವಾರದ ಟಿಆರ್​ಪಿ ಬಂದಿದೆ. ಟಿಆರ್​ಪಿಯಲ್ಲಿ (Kannada Serials TRP) (TRP) ಏರಿಳಿತ ಆಗುತ್ತಲೇ ಇರುತ್ತದೆ. ಅದೇ ರೀತಿ ಟಿಆರ್​ಪಿ ವಿವರ ಸಿಕ್ಕಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಪಡೆದಿದೆ. ಈ ಮೊದಲಿಗಿಂತಲೂ ‘ಸೀತಾ ರಾಮ’ ಧಾರಾವಾಹಿಗೆ ಹೆಚ್ಚಿನ ಟಿಆರ್​ಪಿ ಸಿಕ್ಕಿದೆ ಎನ್ನುವುದು ವಿಶೇಷ.

‘ಪುಟ್ಟಕ್ಕನ ಮಕ್ಕಳು’

ಈ ವಾರ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಧಾರಾವಾಹಿ 675 ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರ ನಟನೆ ಗಮನ ಸೆಳೆದಿದೆ. ʼಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಪುಟ್ಟಕ್ಕ ಕುಟುಂಬ ಸಹನಾ ತೀರಿ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಸಹನಾ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊತ್ತಿದ್ದಾಳೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿಯ ಟಿಆರ್​ಪಿ ಪಡೆದಿತ್ತು. ಈಗಲೂ ಧಾರಾವಾಹಿಗೆ ಮತ್ತೆ ಅದೇ ರೀತಿಯ ಬೇಡಿಕೆ ಸೃಷ್ಟಿ ಆಗಿದೆ. ಈ ಧಾರಾವಾಹಿಗೆ ಹಲವು ಟ್ವಿಸ್ಟ್​ಗಳು ಸಿಕ್ಕಿರುವುದರಿಂದ ಧಾರಾವಾಹಿಯನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ಭರ್ಜರಿ ಟಿಆರ್‌ಪಿ ಪಡೆದು ಎರಡನೇ ಸ್ಥಾನ ಪಡೆದ ‘ಸೀತಾ ರಾಮ’; ಟ್ರ್ಯಾಕ್‌ಗೆ ಮರಳಿದ ʻಅಮೃತಧಾರೆʼ!

ಶ್ರಾವಣಿ ಸುಬ್ರಮಣ್ಯ

ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಸೀತಾ ರಾಮ ಧಾರಾವಾಹಿ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಈ ಮೊದಲು ಪ್ರಸಾರ ಕಾಣುತ್ತಿದ್ದ ಬೇಡಿಕೆಯ ಧಾರಾವಾಹಿಗಳ ಟಿಆರ್​ಪಿಯನ್ನು ಈ ಧಾರಾವಾಹಿ ಹಿಂದಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿ

ಲಕ್ಷ್ಮೀ ನಿವಾಸ’ ಧಾರಾವಾಹಿಗೆ ಈ ಬಾರಿ ಮೂರನೇ ಸ್ಥಾನ ಸಿಕ್ಕಿದೆ. ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಆರಂಭದಲ್ಲಿ ಒಳ್ಳೆಯ ಟಿಆರ್‌ಪಿಯನ್ನು ಪಡೆದುಕೊಂಡಿತ್ತು. ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಿಂದಾಗಿ ಈಗ ಟಿಆರ್‌ಪಿ ಅಂಕದಲ್ಲಿ ಕುಸಿತ ಕಂಡಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಮೊದಲು ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆ ಧಾರಾವಾಹಿಯನ್ನು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಹಿಂದಿಕ್ಕಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು. ಕೆಲವು ವಾರ ಈ ಧಾರಾವಾಹಿ ಮೊದಲ ಸ್ಥಾನ ಕೂಡ ಪಡೆದಿತ್ತು. ‘ಲಕ್ಷ್ಮಿ ನಿವಾಸ’ದಲ್ಲಿ ಕಥಾ ನಾಯಕಿ ಭಾವನಾಗೆ ಸಿದ್ದು ತಾಳಿ ಕಟ್ಟಿ ಹೋಗಿದ್ದಾನೆ. 

ಸೀತಾ ರಾಮ

ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ನಟಿಸಿದ್ದಾರೆ. ಈ ಧಾರಾವಾಹಿ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದೆ.  ಈ ಮೊದಲಿಗಿಂತಲೂ ‘ಸೀತಾ ರಾಮ’ ಧಾರಾವಾಹಿಗೆ ಹೆಚ್ಚಿನ ಟಿಆರ್​ಪಿ ಸಿಕ್ಕಿದೆ ಅನ್ನೋದು ವಿಶೇಷ. ಸೀತಾ ಹಾಗೂ ರಾಮನ ಮದುವೆ ಸಂಭ್ರಮವೇ ಇದಕ್ಕೆ ಕಾರಣ. ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಒಳ್ಳೆಯ ಟಿಆರ್​ಪಿ ಪಡೆದುಕೊಂಡಿದೆ. ಇದಕ್ಕೆ ಕಾರಣ ಆಗಿರೋದು ಸೀತಾ ಹಾಗೂ ರಾಮನ ಮದುವೆ. ನಗರ ಭಾಗದಲ್ಲಿ ಈ ಧಾರಾವಾಹಿ ಒಂದನೇ ಸ್ಥಾನ ಪಡೆದುಕೊಂಡಿದೆ. ಮದುವೆ ಬಳಿಕ ಟ್ವಿಸ್ಟ್​ಗಳು ಸಿಕ್ಕರೆ ಧಾರಾವಾಹಿ ಟಿಆರ್​ಪಿ ಮತ್ತಷ್ಟು ಹೆಚ್ಚಲಿದೆ.

ಲಕ್ಷ್ಮೀ ಬಾರಮ್ಮ

ಐದನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ. ಈ ಧಾರಾವಾಹಿ ಹಲವು ದಿನಗಳಿಂದ ಟಾಪ್ ಐದರಲ್ಲಿ ಬಂದಿರಲಿಲ್ಲ. ಈ ಧಾರಾವಾಹಿಯನ್ನು ಜನರು ಹೆಚ್ಚು ಇಷ್ಟಪಟ್ಟಿದ್ದಾರೆ. 

Continue Reading

ಕಿರುತೆರೆ

Star Suvarna: ಸಿಗಂದೂರು ದೇವಸ್ಥಾನದಲ್ಲಿ ‘ಸುವರ್ಣ ಅಖಂಡ ದೀಪ’ಕ್ಕೆ ಚಾಲನೆ; `ಶ್ರೀ ದೇವೀ ಮಹಾತ್ಮೆ’ ಧಾರಾವಾಹಿ ತಂಡದ ಕೊಡುಗೆ

Star Suvarna: ಸ್ಟಾ‌ರ್ ಸುವರ್ಣ ವಾಹಿನಿಯಲ್ಲಿ ಕಳೆದ ಜುಲೈ 1 ರಿಂದ ಪ್ರಸಾರವಾಗುತ್ತಿರುವ “ಶ್ರೀ ದೇವೀ ಮಹಾತ್ಮೆ” ಎಂಬ ಪೌರಾಣಿಕ ಧಾರಾವಾಹಿಗೆ ಮೊದಲ ದಿನದಿಂದಲೇ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ‌ ಹಿನ್ನೆಲೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಲೋಕ ಕಲ್ಯಾಣಾರ್ಥವಾಗಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸುವರ್ಣ ಅಖಂಡ ದೀಪವನ್ನು ಸ್ಥಾಪಿಸಿದೆ.

VISTARANEWS.COM


on

Star Suvarna Akhand Deepa at Sigandur Sri Chaudeshwari Temple Shri Devi Mahatme serial team contribution
Koo

ಬೆಂಗಳೂರು: ಸಾಗರ ತಾಲೂಕಿನ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದ ಆವರಣದಲ್ಲಿ ‘ಶ್ರೀ ದೇವೀ ಮಹಾತ್ಮೆ’ ಧಾರಾವಾಹಿ ತಂಡದಿಂದ ಸ್ಥಾಪಿಸಲಾಗಿರುವ ‘ಸುವರ್ಣ ಅಖಂಡ ದೀಪ’ಕ್ಕೆ “ಸುವರ್ಣ ಸಂಕಲ್ಪ” ಕಾರ್ಯಕ್ರಮ (Star Suvarna) ಖ್ಯಾತಿಯ ವಿದ್ವಾನ್ ಡಾ. ಗೋಪಾಲ ಕೃಷ್ಣ ಶರ್ಮ ಹಾಗು ಧರ್ಮದರ್ಶಿಗಳಾದ ರಾಮಪ್ಪನವರ್ ಪುತ್ರ ರವಿಕುಮಾರ್ ಅವರು ಚಾಲನೆ ನೀಡಿದರು.

ಸ್ಟಾ‌ರ್ ಸುವರ್ಣ ವಾಹಿನಿಯಲ್ಲಿ ಕಳೆದ ಜುಲೈ 1 ರಿಂದ ಪ್ರಸಾರವಾಗುತ್ತಿರುವ “ಶ್ರೀ ದೇವೀ ಮಹಾತ್ಮೆ” ಎಂಬ ಪೌರಾಣಿಕ ಧಾರಾವಾಹಿಗೆ ಮೊದಲ ದಿನದಿಂದಲೇ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ‌ ಹಿನ್ನೆಲೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಲೋಕ ಕಲ್ಯಾಣಾರ್ಥವಾಗಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸುವರ್ಣ ಅಖಂಡ ದೀಪವನ್ನು ಸ್ಥಾಪಿಸಿದೆ. ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀ‌ ಸಿಗಂದೂರು ಚೌಡೇಶ್ವರಿ ದೇವಾಲಯ ಸಮಿತಿ ಕಾರ್ಯದರ್ಶಿ ರವಿಕುಮಾರ್ ದೀಪ ಬೆಳಗಿಸುವ ಮೂಲಕ ಅಖಂಡ ದೀಪವನ್ನು ಉದ್ಘಾಟಿಸಿದರು.

ಇದನ್ನೂ ಓದಿ: Kannada New Movie: ಸೆಟ್ಟೇರಿತು ‘ಆಕಾಶ್’, ‘ಅರಸು’ ಚಿತ್ರಗಳ ಡೈರೆಕ್ಟರ್ ಹೊಸ ಸಿನಿಮಾ; ಕಿರುತೆರೆಯ ಈ ಪ್ರತಿಭೆ ನಾಯಕ

ಇದಕ್ಕೂ‌ ಮುನ್ನ‌ ವೇದಿಕೆ ಮೇಲೆ ಉಪಸ್ಥಿತರಿದ್ದ ಗೋಪಾಲಕೃಷ್ಣ ಶರ್ಮ ಗುರೂಜಿ ಮಾತನಾಡಿ ಶ್ರೀದೇವಿಯ ಅವತಾರಗಳ‌ ಬಗ್ಗೆ, ಇಂದಿನಿಂದ ನಿರಂತರವಾಗಿ ಪ್ರಜ್ವಲಿಸರುವ ಅಖಂಡ ದೀಪದ ಬಗ್ಗೆ ವಿವರಣೆ ನೀಡಿದರು. ಜೊತೆಗೆ ಸುವರ್ಣ ವಾಹಿನಿಯು ಲೋಕ ಕಲ್ಯಾಣಾರ್ಥವಾಗಿ, ಸುವರ್ಣ ವಾಹಿನಿಯ ವೀಕ್ಷಕರಿಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತಾ ಹಾಗು ಶ್ರೀ ದೇವೀ ಮಹಾತ್ಮೆಯು ಇನ್ನಷ್ಟು ಪ್ರಖ್ಯಾತಿ ಪಡೆಯಲಿ ಎಂದು ಈ “ಸುವರ್ಣ ಅಖಂಡ ದೀಪ”ವನ್ನು ಸ್ಥಾಪಿಸಿ ಬೆಳಗಿಸಲಾಗುತ್ತಿದೆ ಎಂದರು. ನಂತರ ‘ಶ್ರೀ ದೇವೀ ಮಹಾತ್ಮೆ’ ಧಾರಾವಾಹಿಯ ನಿರ್ಮಾಪಕ ಅರವಿಂದ್ ಮಾತನಾಡಿ, ಇದು ನಮ್ಮ ಸಂಸ್ಥೆಯ ನಿರ್ಮಾಣದ ಮೂರನೇ ಧಾರಾವಾಹಿ. ಮೊದಲು ಆರಂಭಿಸಿದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಈಗಾಗಲೇ 1000 ಕಂತುಗಳನ್ನು ಮುಗಿಸಿದೆ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಈಗಾಗಲೇ 500 ಕಂತುಗಳನ್ನು ಮುಗಿಸಿದೆ. ಅತ್ಯದ್ಭುತವಾಗಿರುವ ಗ್ರಾಫಿಕ್ಸ್‌ ತಂತ್ರಜ್ಞಾನಗಳಿಂದ, ಚಿತ್ರೀಕರಣಗೊಳ್ಳುತ್ತಿರುವ ಈ ಧಾರಾವಾಹಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ‌ ನೆಲದ ಕಥೆಗಳನ್ನು ನಮ್ಮ ಜನರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ. ಈಗ ‘ಶ್ರೀ ದೇವೀ ಮಹಾತ್ಮೆ’ ಧಾರಾವಾಹಿಯು ಸೋಮವಾರದಿಂದ ಶನಿವಾರ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿದೆ ಎಂದರು.

ಇನ್ನು ಶಿವನ ಪಾತ್ರಧಾರಿ ನಟ ಅರ್ಜುನ್ ರಮೇಶ್ ಮಾತನಾಡಿ, ʻʻಈಗಾಗಲೇ ನನಗೆ ಮೂರು ಸಲ ಶಿವನ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿದೆ, ಸಣ್ಣ ಗರ್ವ ಜೊತೆಗೆ ಹೆಮ್ಮೆಯೂ ಇದೆ. ಆಧುನಿಕ ಯುಗದಲ್ಲಿ ಜನ ಪೌರಾಣಿಕ ಧಾರಾವಾಹಿಗಳನ್ನು ಬೆಂಬಲಿಸಬೇಕಿದೆ. ಆದರೆ ಪಾತ್ರಕ್ಕೆ ವೇಷಭೂಷಣ ತೊಟ್ಟು ಗಂಟೆಗಟ್ಟಲೆ ಚಿತ್ರೀಕರಣಕ್ಕೆ ನಿಲ್ಲುವ ಕಲಾವಿದರ ಕಷ್ಟ ಜನರಿಗೆ ಅರ್ಥವಾಗಲ್ಲ. ಆದರೆ ನನ್ನ ಪಾತ್ರವನ್ನು ಜನರು ಮೆಚ್ಚಿಕೊಂಡಿರುವುದು ಖುಷಿ ಕೊಟ್ಟಿದೆ ಎಂದರು. ನಂತರ ಪಾರ್ವತಿ ಪಾತ್ರಧಾರಿ ನಟಿ ಜೀವಿತಾ ವಸಿಷ್ಠ ಮಾತನಾಡಿ, ಶ್ರೀದೇವಿಯ ಪಾತ್ರ ಮಾಡೋ ಅವಕಾಶ ನನಗೆ ಸಿಕ್ಕಿರುವುದೇ ನನ್ನ ಜೀವನದ ದೊಡ್ಡ ಪುಣ್ಯ. ಯಾವುದೇ ಒತ್ತಡವಿಲ್ಲದೆ ಕೆಲಸ ಮಾಡುತ್ತಿರುವೆ. ಎಲ್ಲರೂ ಸಪೋರ್ಟ್ ಮಾಡುತ್ತಿದ್ದಾರೆ. ಶ್ರೀ ದೇವೀ ಮಹಾತ್ಮೆ ಧಾರಾವಾಹಿಯನ್ನು ಸೋಮವಾರದಿಂದ ಶನಿವಾರ ರಾತ್ರಿ 7 ಗಂಟೆಗೆ ಎಲ್ಲರೂ ನೋಡುವಂತೆʼʼ ಕೋರಿಕೊಂಡರು.

Continue Reading

ಕಿರುತೆರೆ

Neenade Naa Serial: ರಿಯಲ್‌ ಲೈಫಲ್ಲೂ ಒಂದಾಗ್ತಿದ್ದಾರಾ ವಿಕ್ರಂ-ವೇದಾ? ಮದುವೆ ಯಾವಾಗ?

Neenade Naa Serial: ಅಭಿಮಾನಿಗಳು ಕೂಡ ಇಬ್ಬರ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಪೇಜ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ. ಇದೀಗ  “ನೀನಾದೆ ನಾ” (Neenade Naa Serial) ಧಾರಾವಾಹಿ ನಟ ನಟಿ ವಿಕ್ರಂ-ವೇದಾ ಇಬ್ಬರ ನಡುವೆ ಲವ್ವಾಗಿದೆ, ಮುಂದೆ ಇಬ್ಬರೂ ಮುದುವೆಯಾಗಲಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

VISTARANEWS.COM


on

Neenade Naa Serial Dileep R Shetty khushi will be marry in real life
Koo

ಬೆಂಗಳೂರು: ಕೆಲ ಸಿನಿಮಾ ನಟನ ನಟಿಯರು ತೆರೆ ಮೇಲೆ ಒಂದಾಗಿರುವುದಲ್ಲದೇ ರಿಯಲ್‌ ಲೈಫ್‌ನಲ್ಲಿಯೂ ಒಂದಾಗಿರುವ ಅದೆಷ್ಟೋ ಉದಾಹರಣೆಗಳಿವೆ. ಜತೆಗೆ ವೀಕ್ಷಕರಿಗೂ ನಟ ನಟಿಯ ಜೋಡಿ ಇಷ್ಟವಾದರೆ ರಿಯಲ್‌ ಲೈಫ್‌ನಲ್ಲಿಯೂ ಒಂದಾಗಿ ಎಂದು ಆಶಿಸುತ್ತಾರೆ. ಇದೀಗ  “ನೀನಾದೆ ನಾ” (Neenade Naa Serial) ಧಾರಾವಾಹಿ ನಟ ನಟಿ ವಿಕ್ರಂ-ವೇದಾ ಇಬ್ಬರ ನಡುವೆ ಲವ್ವಾಗಿದೆ, ಮುಂದೆ ಇಬ್ಬರೂ ಮುದುವೆಯಾಗಲಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಈ ಜೋಡಿಯ ಮತ್ತೊಂದು ಸ್ಪೆಷಾಲಿಟಿ ಅಂದರೆ ಇದರಲ್ಲಿ ವಿಕ್ರಂ ಪಾತ್ರ ಮಾಡೋ ದಿಲೀಪ್ ಆರಡಿ ಕಟೌಟ್‌ . ಆದರೆ ವೇದಾ ಮಾತ್ರ ಕುಳ್ಳಿ. ವೇದಾ ಪಾತ್ರಧಾರಿ ಖುಷಿ, ವಿಕ್ರಂ ಪಾತ್ರ ಮಾಡುತ್ತಿರುವುದು ದಿಲೀಪ್‌. ಇದೀಗ ಇವರಿಬ್ಬರ ನಟನೆಗೆ ಹಾಗೇ ಜೋಡಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಕೆಲ ದಿನಗಳ ಹಿಂದೆ ತೆಲುಗು ಕಾರ್ಯಕ್ರಮಕ್ಕೆ ದಿಲೀಪ್ ಅವರ ವಿಶೇಷ ಸ್ನೇಹಿತೆ ಎಂದು ಸಪ್ರೈಸ್‌ ಆಗಿ ಖುಷಿ ಅವರನ್ನು ಆಹ್ವಾನಿಸಲಾಗಿತ್ತು. ಇಬ್ಬರ ಪ್ರೀತಿಗೆ ಬಿದ್ದಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು.

ಅಭಿಮಾನಿಗಳು ಕೂಡ ಇಬ್ಬರ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಪೇಜ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ. ನೀವಿಬ್ಬರು ನಿಜಜೀವನದಲ್ಲಿ ಒಂದಾದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.ಸ್ವತಃ ದಿಲೀಪ್ ಶೆಟ್ಟಿ ಈ ಚರ್ಚೆ ಬಗ್ಗೆ ಮಾತನಾಡಿದ್ದಾರೆ. ಯಾಕೆ ರಿಯಲ್‌ ಲೈಫ್‌ನಲ್ಲೂ ಜೋಡಿ ಆಗಬಾರದು? ಎನ್ನುವ ಪ್ರಶ್ನೆಗೆ “ಅದೆಲ್ಲಾ ವಿಧಿ. ಡೆಸ್ಟಿನಿಯಲ್ಲಿ ಏನು ಬರೆದಿರುತ್ತಾರೆ? ಅದೇ ಆಗುವುದು. ನೋಡೋಣ, ಡೆಸ್ಟಿನಿ ಏನು ಹೇಳುತ್ತದೆ” ಎಂದು ಹೇಳಿ ದಿಲೀಪ್‌ ನಕ್ಕಿದ್ದಾರೆ.

ಇದನ್ನೂ ಓದಿ: Neenade Naa Serial: ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನ ಹೊಚ್ಚ ಹೊಸ ಧಾರಾವಾಹಿ ‘ನೀನಾದೆ ನಾ’

 ‘ನೀನಾದೆ ನಾ’ ಧಾರಾವಾಹಿ

ವಿದ್ಯಾಭ್ಯಾಸ ಮುಗಿಸಿದರು ಕೂಡ ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ ಈ ಕಥಾ ನಾಯಕಿ ‘ವೇದಾ’. ಅಜ್ಜಿಯ ಪ್ರೀತಿಯ ಮೊಮ್ಮಗಳು ‘ವೇದಾ’ ನೇರ ನಡೆಯನ್ನು ಹೊಂದಿರುತ್ತಾಳೆ. ಈಕೆಗೆ ಮನೆಯವರ ಸಮ್ಮುಖದಲ್ಲಿ, ಹುಟ್ಟಿ ಬೆಳೆದ ಊರಲ್ಲಿ, ಮನೆಯವರು ನೋಡಿದ ಹುಡುಗನೊಂದಿಗೆ ಮದುವೆಯಾಗಬೇಕು ಎಂಬ ಆಸೆ ಇರುತ್ತದೆ. ಆದರೆ ಮುಂದೆ ನಡೆಯುವುದು ಮಾತ್ರ ವಿಧಿಲಿಖಿತ.

ಕಥಾ ನಾಯಕ ವಿಕ್ರಮ್. ಗೂಂಡಾಗಿರಿ ಮಾಡಿಕೊಂಡು, ತನ್ನ ಬಾಸ್ ಹೇಳಿದನ್ನು ಚಾಚು ತಪ್ಪದೆ ಮಾರುವ ಈತನಿಗೆ , ಆಚಾರ-ವಿಚಾರ ಸಂಸ್ಕಾರವಂತೂ ಇಲ್ಲವೇ ಇಲ್ಲ. ಪದವಿ ಪಡೆದಿದ್ದರೂ ಕೂಡ ಈತ ಹೀಗಿರುವುದರಿಂದ ಅಪ್ಪನಿಗೂ ಇವನ ಮೇಲೆ ಸಿಕ್ಕಾಪಟ್ಟೆ ಕೋಪವಿರುತ್ತದೆ. ಅಚಾನಕ್ ಆಗಿ ಒಂದು ದಿನ ದೇವರ ಸನ್ನಿಧಾನದಲ್ಲಿ ವಿಧಿಯಾಟದಂತೆ ವಿಕ್ರಮ್- ವೇದಾಳಿಗೆ ತಾಳಿ ಕಟ್ಟುತ್ತಾನೆ.

ನೀನಾದೆ ನಾ’ ಧಾರಾವಾಹಿಯು ಅದ್ಭುತ ತಾರಾಬಳಗವನ್ನು ಹೊಂದಿದ್ದು, ನಾಯಕನ ಪಾತ್ರದಲ್ಲಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಗೆ ಖ್ಯಾತ ನಟ ರಮೇಶ್ ಅರವಿಂರ್‌ ಅವರು ‘ವಂದನ ಮೀಡಿಯಾ’ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

Continue Reading
Advertisement
Viral Video
ಕ್ರೈಂ8 mins ago

Viral Video: ಅತೀ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ; ಮೇಲೆ ಹಾರಿ ನೆಲಕ್ಕೆ ಅಪ್ಪಳಿಸಿದ ದಂಪತಿ

CM Siddaramaiah
ರಾಜಕೀಯ32 mins ago

CM Siddaramaiah: ಜಾತಿ ವ್ಯವಸ್ಥೆ ದೇವರ ಸೃಷ್ಟಿಯಲ್ಲ, ಸ್ವಾರ್ಥಿ ಮನುಷ್ಯರ ಸೃಷ್ಟಿ: ಸಿಎಂ

Monsoon Fashion
ಫ್ಯಾಷನ್39 mins ago

Monsoon Fashion: ಮಾನ್ಸೂನ್‌ಗೆ ತಕ್ಕಂತೆ ಬದಲಾದ ಸೂಪರ್‌ ಮಾಡೆಲ್‌ ಸಂತೋಷ್‌ ರೆಡ್ಡಿ ಫ್ಯಾಷನ್‌!

karnataka rain
ಮಳೆ41 mins ago

Karnataka Rain : ಗುಡ್ಡ ಕುಸಿತದಿಂದ ಅಂಕೋಲಾ ಹೆದ್ದಾರಿ ಬಂದ್‌; ಕೊಂಕಣ ರೈಲ್ವೆಯಿಂದ ರೈಲು ವ್ಯವಸ್ಥೆ

Paris Olympic 2024:
ಕ್ರೀಡೆ44 mins ago

Paris Olympic 2024 : ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್​ ಕರ್ಣಂ ಮಲ್ಲೇಶ್ವರಿ ಸಾಧನೆಯ ವಿವರ ಇಲ್ಲಿದೆ

Manoj Soni
ದೇಶ1 hour ago

Manoj Soni: ಅಕ್ರಮ ಆರೋಪದ ಬೆನ್ನಲ್ಲೇ ಯುಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಮನೋಜ್‌ ಸೋನಿ ರಾಜೀನಾಮೆ

ಕರ್ನಾಟಕ1 hour ago

CM Siddaramaiah: ಅಧಿಕಾರ ದುರುಪಯೋಗ ಆರೋಪ; ಸಿಎಂ ವಿರುದ್ಧ ಲೋಕಾಯುಕ್ತಕ್ಕೆ ದೂರು

UP Minister Resigns
ದೇಶ1 hour ago

UP Minister Resigns: ಯೋಗಿ ಸರ್ಕಾರದಿಂದ ಒಂದು ವಿಕೆಟ್‌ ಪತನ; ಸಚಿವೆ ಸೋನಮ್‌ ಚಿಶ್ಟಿ ರಾಜೀನಾಮೆ

Belgavi News
ಬೆಳಗಾವಿ1 hour ago

Belgavi News : ಬೆಳಗಾವಿಯಲ್ಲಿ ಮದ್ದು ಕುಟ್ಟುವಾಗ ಭಾರಿ ಸ್ಫೋಟ; ವ್ಯಕ್ತಿ ಸಜೀವ ದಹನ

Sonu Sood
ದೇಶ2 hours ago

Sonu Sood : ಸೋನು ಸೂದ್​, ಕಂಗನಾ ರಣಾವತ್​ ‘ಎಂಜಲು ರೊಟ್ಟಿಯ’ ಗಲಾಟೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ7 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ1 day ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌