Vijay Surya: `ದೃಷ್ಟಿಬೊಟ್ಟು' ಧಾರಾವಾಹಿ ಮೂಲಕ ಖಡಕ್‌ ಎಂಟ್ರಿ ಕೊಟ್ಟ ವಿಜಯ್ ಸೂರ್ಯ! - Vistara News

ಕಿರುತೆರೆ

Vijay Surya: `ದೃಷ್ಟಿಬೊಟ್ಟು’ ಧಾರಾವಾಹಿ ಮೂಲಕ ಖಡಕ್‌ ಎಂಟ್ರಿ ಕೊಟ್ಟ ವಿಜಯ್ ಸೂರ್ಯ!

Vijay Surya: ಕಲರ್ಸ್ ಕನ್ನಡ ವಾಹಿನಿಯ ವಿಜಯ್ ಸೂರ್ಯ ಅವರ ಎರಡನೇ ಪ್ರೋಮೋ ರಿಲೀಸ್ ಮಾಡಲಾಗಿದೆ. ಅದರಲ್ಲಿ ವಿಜಯ್ ಸೂರ್ಯ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ‘ಹೆಸರು ದತ್ತಾ ಶ್ರೀರಾಮ ಪಾಟಿಲ್, ಬಳ್ಳಾರಿ ಜನ ಕರೆಯೋದು ದತ್ತಾ ಭಾಯ್ ಎಂದು.

VISTARANEWS.COM


on

Vijay Surya drusti bottu serial will start
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಲರ್ಸ್ ಕನ್ನಡ ವಾಹಿನಿಯ ಹೊಸ ಧಾರಾವಾಹಿ ದೃಷ್ಟಿಬೊಟ್ಟು ಶುರುವಾಗುತ್ತಿದೆ.

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ ವಿಜಯ್ ಸೂರ್ಯ ಈ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ವಿಜಯ್ ಸೂರ್ಯ ಅವರ ಎರಡನೇ ಪ್ರೋಮೋ ರಿಲೀಸ್ ಮಾಡಲಾಗಿದೆ. ಅದರಲ್ಲಿ ವಿಜಯ್ ಸೂರ್ಯ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ‘ಹೆಸರು ದತ್ತಾ ಶ್ರೀರಾಮ ಪಾಟಿಲ್, ಬಳ್ಳಾರಿ ಜನ ಕರೆಯೋದು ದತ್ತಾ ಭಾಯ್ ಎಂದು.

ಇದನ್ನೂ ಓದಿ: Vijay Surya: ತಾಯಂದಿರ ದಿನ ತನ್ನ ಹೆಸರನ್ನೇ ಬದಲಿಸಿಕೊಂಡ ʻಅಗ್ನಿಸಾಕ್ಷಿ’ ನಟ! ಹೊಸ ಹೆಸರೇನು?

ದತ್ತಾ ಭಾಯ್ ಬರ್ತಿದ್ದಾರೆ ಶ್ರೀಘ್ರದಲ್ಲೇ..! ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ದೃಷ್ಟಿಬೊಟ್ಟ ಆರಂಭವಾಗುತ್ತಿದ್ದು, ನಾಯಕನಾಗಿ ವಿಜಯ್ ಸೂರ್ಯ ಖಡಕ್ ಎಂಟ್ರಿ ಕೊಟ್ಟಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Namratha Gowda: ಕಪ್ಪು ಸೀರೆಯುಟ್ಟು ನೋಡುಗರ ನಿದ್ದೆಗೆಡಿಸಿದ ಕಿರುತೆರೆ ನಟಿ ನಮ್ರತಾ ಗೌಡ

Namratha Gowda: ಹಾಟ್‌ ಆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರು ನಮ್ರತಾ ಗೌಡ . ಇಲ್ಲಿವೆ ಫೋಟೊಗಳು!

VISTARANEWS.COM


on

Namratha Gowda
Koo
Namratha Gowda
ಬಿಗ್‌ಬಾಸ್‌ ಖ್ಯಾತಿಯ ನಮ್ರತಾ ಗೌಡ ಲಕ್ಷ್ಮೀ ಕೃಷ್ಣ ಡಿಸೈನ್ ಮಾಡಿರುವ ಕಪ್ಪು ಸೀರೆಯುಟ್ಟು ಗಮನ ಸೆಳೆದಿದ್ದಾರೆ.
Namratha Gowda
ಸ್ಲೀವ್ ಲೆಸ್ ಬ್ಲೌಸ್ ಜತೆ ಬ್ಲ್ಯಾಕ್‌ ಹ್ಯಾಂಡ್‌ ಗ್ಲೌಸ್‌, ಅದರ ಮೇಲೆ ಡೈಮಂಡ್‌ ರಿಂಗ್‌ ಮತ್ತು ಸಿಂಹಿಣಿಯ ಲೋಗೋ ಇರುವ ಬೆಲ್ಟ್‌ ಇದು ಬೆಡಗಿಯ ನ್ಯೂ ಲುಕ್‌ನ ವಿಷೇಶವಾಗಿದೆ.
Namratha Gowda
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕ್ಯೂಟ್‌ ಮತ್ತು ಹಾಟ್ ಫೋಟೊಗಳನ್ನು ಪೋಸ್ಟ್‌ ಮಾಡಿರುವ ನಮ್ಮು “Some wars help us bloom” ಎಂದು ಕ್ಯಾಪ್ಶನ್ ಸಹ ಹಾಕಿಕೊಂಡಿದ್ದಾರೆ.
Namratha Gowda
ಕೆಲದಿನಗಳ ಹಿಂದೆ ಪ್ಯಾರ್ ಗೆ ಆಗ್ಬಿಟ್ಟೈತೆ ನಟಿ ಪಾರುಲ್ ಯಾದವ್ ಬ್ಲ್ಯಾಕ್ ಸೀರೆ ಧರಿಸಿ ಬೋಲ್ಡ್‌ ಆಗಿ ಫೋಟೊ ಶೂಟ್ ಮಾಡಿಸಿದ್ದು ಅದು ವೈರಲ್ ಆಗಿತ್ತು. ಇದೀಗ ಅವರನ್ನು ಮೀರಿಸುವ ಹಾಗೆ ನಟಿ ನಮ್ರತಾ ಗೌಡ ಫೋಟೊಗಳನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Namratha Gowda
ಸದ್ಯಕ್ಕೆ ಜಿಮ್‌ ವರ್ಕೌಟ್‌ ಮಾಡಿ ಫಿಟ್‌ ಆಗುತ್ತಿರುವ ನಮ್ರತಾ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿ ಆಗಲಿದ್ದಾರೆ.
Continue Reading

ಸಿನಿಮಾ

Ranjani Raghavan: ಹಸೆಮಣೆ ಏರಲು ಸಜ್ಜಾದ ನಟಿ ರಂಜನಿ ರಾಘವನ್; ಇವ್ರೇ ನೋಡಿ ಅವ್ರ ಹುಡುಗ

ವೃತ್ತಿಯಲ್ಲಿ ಅಥ್ಲೆಟ್​ ಆಗಿರುವ ಸಾಗರ್ ಭಾರಧ್ವಜ್ ಎಂಬವರನ್ನು ರಂಜನಿ ರಾಘವನ್ (Ranjani Raghavan) ಕೈಹಿಡಿಯಲಿದ್ದಾರೆ. ಸಾಗರ್ ರನ್ನರ್, ಸೈಕಲಿಸ್ಟ್​, ಬೈಕರ್ ಕೂಡ ಆಗಿದ್ದಾರೆ. ಮದುವೆ ಹಾಗೂ ನಿಶ್ಚಿತಾರ್ಥದ ದಿನಾಂಕದ ಬಗ್ಗೆ ನಟಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

VISTARANEWS.COM


on

By

Ranjani Raghavan
Koo

ಕನ್ನಡತಿ ಧಾರವಾಹಿ (Kannadati serial) ಮೂಲಕ ಎಲ್ಲರ ಮನಗೆದ್ದಿರುವ ನಟಿ (kannada actress) ರಂಜನಿ ರಾಘವನ್ (Ranjani Raghavan) ಇದೀಗ ತಮ್ಮ ಬಾಳ ಸಂಗಾತಿಯನ್ನು ಸಾಮಾಜಿಕ ಜಾಲತಾಣದ (social media) ಮೂಲಕ ಎಲ್ಲರಿಗೂ ಪರಿಚಯಿಸಿದ್ದಾರೆ. ಇವರ ಈ ಫೋಟೋ ಭಾರಿ ವೈರಲ್ (Viral news) ಆಗಿದ್ದು, ಶುಭಾಶಯಗಳ ಹೊಳೆಯೇ ಹರಿದು ಬರುತ್ತಿದೆ.

ವೃತ್ತಿಯಲ್ಲಿ ಅಥ್ಲೆಟ್​ ಆಗಿರುವ ಸಾಗರ್ ಭಾರಧ್ವಜ್ ಎಂಬವರನ್ನು ರಂಜನಿ ಕೈಹಿಡಿಯಲಿದ್ದಾರೆ. ಸಾಗರ್ ರನ್ನರ್, ಸೈಕಲಿಸ್ಟ್​, ಬೈಕರ್ ಕೂಡ ಆಗಿದ್ದಾರೆ. ಮದುವೆ ಹಾಗೂ ನಿಶ್ಚಿತಾರ್ಥದ ದಿನಾಂಕದ ಬಗ್ಗೆ ನಟಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಂಜನಿ ಅವರ ‘ಕಾಂಗರೂ’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.
ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ರಂಜನಿ ರಾಘವನ್ 1994ರ ಮಾರ್ಚ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಶೇ‍ಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ಮುಗಿಸಿರುವ ಇವರು ಓರ್ವ ಸೃಜನಶೀಲ ಬರಹಗಾರ್ತಿಯೂ ಆಗಿದ್ದಾರೆ.

Ranjani Raghavan
Ranjani Raghavan

‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ನಾಯಕಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟ ಇವರು ಬಳಿಕ ಪೌರ್ಣಮಿ ಎಂಬ ಮಲಯಾಳಂ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು. ಅನಂತರ ‘ಇಷ್ಟದೇವತೆ’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇದರ ಕಥೆಯನ್ನು ತಾವೇ ಬರೆದು ನಿರ್ದೇಶಕಿಯಾಗಿ ಗುರುತಿಸಿಕೊಂಡರು.


ಬಳಿಕ ಕನ್ನಡತಿ ಧಾರವಾಹಿ ಮೂಲಕ ಮನೆಮಾತಾದ ಇವರು 2017ರಲ್ಲಿ ‘ರಾಜಹಂಸ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಪ್ರವೇಶಿಸಿದರು. ಅನಂತರ ಪುಣ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ ಸೇರಿದಂತೆ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.


ಇದನ್ನೂ ಓದಿ: Kannada New Movie: ರಾ ಲುಕ್‌ನಲ್ಲಿ ವಿಜಯ್ ರಾಘವೇಂದ್ರ; ʼರಿಪ್ಪನ್ ಸ್ವಾಮಿʼ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್‌

ಕಥೆ ಡಬ್ಬಿ, ಸ್ವೈಪ್ ಅಪ್ ಎಂಬ ಪುಸ್ತಕ ಬಿಡುಗಡೆ ಮಾಡಿ ಸಾಹಿತ್ಯ ಪ್ರೇಮಿಗಳ ಮನಗೆದ್ದಿರುವ ನಟಿ ರಂಜನಿ ರಾಘವನ್ ಇದೀಗ ಹಸೆ ಮಣೆ ಏರಲು ಸಿದ್ದರಾಗಿದ್ದಾರೆ. ಕಾರ್ಯಕ್ರಮ ಖಾಸಗಿಯಾಗಿಡಲು ಬಯಸುತ್ತಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ.

Continue Reading

ಸಿನಿಮಾ

Kaun Banega Crorepati: ಕೆಬಿಸಿ ಲೈಫ್ ಲೈನ್‌ ಫೋನ್‌ ಕಾಲ್‌ಗೆ ಬಂದ ಉತ್ತರ ಕೇಳಿ ಅಮಿತಾಭ್‌ ಕಂಗಾಲು!

ಕೌನ್ ಬನೇಗಾ ಕರೋಡ್ ಪತಿಯ ( Kaun Banega Crorepati) ಸ್ಟುಡಿಯೋದಲ್ಲಿ ಅಮಿತಾಭ್‌ ಬಚ್ಚನ್ ಅವರು ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ತಮ್ಮನ್ನು ಕೆಬಿಸಿ ಸ್ಟುಡಿಯೋದಿಂದ ಅಮಿತಾಭ್ ಬಚ್ಚನ್ ಎಂದು ಪರಿಚಯಿಸಿಕೊಂಡಿದ್ದಾರೆ. ಆಗ ಎದುರಿದ್ದ ವ್ಯಕ್ತಿ ತಾನು ಶಾರುಖ್ ಖಾನ್ ಎಂದು ಹೇಳಿದ್ದಾನೆ! ಇದನ್ನು ಕೇಳಿ ಅಮಿತಾಭ್‌ ಬಚ್ಚನ್‌ ಹೌಹಾರಿದ್ದಾರೆ.

VISTARANEWS.COM


on

By

Kaun Banega Crorepati
Koo

ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati) 16ನೇ ಸರಣಿಯಲ್ಲಿ ತಮಾಷೆಯ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral Video) ಆಗಿದೆ. ಅಮಿತಾಭ್‌ ಬಚ್ಚನ್ (Amitabh Bachchan) ಅವರು ಸ್ಟುಡಿಯೋದಿಂದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದಾಗ ಈ ಘಟನೆ ನಡೆದಿದ್ದು, ಎಲ್ಲರೂ ನಗೆಗಡಲಲ್ಲಿ ತೇಲುವಂತೆ ಮಾಡಿದೆ.

ಕೌನ್ ಬನೇಗಾ ಕರೋಡ್ ಪತಿಯ ಸ್ಟುಡಿಯೋದಲ್ಲಿ ಅಮಿತಾಭ್ ಬಚ್ಚನ್ ಅವರು ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ತಮ್ಮನ್ನು ಕೆಬಿಸಿ ಸ್ಟುಡಿಯೋದಿಂದ‌ ತಾವು ಅಮಿತಾಭ್ ಬಚ್ಚನ್ ಎಂದು ಪರಿಚಯಿಸಿಕೊಂಡಿದ್ದಾರೆ. ಆಗ ಎದುರಿದ್ದ ವ್ಯಕ್ತಿ ನಾನು ಶಾರುಖ್ ಖಾನ್ ಎಂದು ಹೇಳಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಇದಕ್ಕೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ವಾಸ್ತವವಾಗಿ ಇದು ವಂಚನೆಯ ಕರೆ ಎಂದು ಭಾವಿಸಿ ಎದುರಿಗಿದ್ದ ವ್ಯಕ್ತಿ ಅಮಿತಾಭ್ ಬಚ್ಚನ್‌ಗೆ ಈ ರೀತಿಯ ಉತ್ತರವನ್ನು ನೀಡಿದ್ದಾನೆ ಎನ್ನಲಾಗಿದೆ. ಅಮಿತಾಭ್ ಬಚ್ಚನ್ ಅವರ ಧ್ವನಿ ಮತ್ತು ಕೌನ್ ಬನೇಗಾ ಕರೋಡ್ ಪತಿ ಬಗ್ಗೆ ವಂಚನೆ ಕರೆಗಳು ಮತ್ತು ಮೀಮ್‌ಗಳು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. ಈ ನಡುವೆ ಇದೀಗ ಈ ವಿಡಿಯೋ ಸದ್ಯ ಚರ್ಚೆಯಲ್ಲಿದೆ. ಅಮಿತಾಭ್ ಜೊತೆಗಿನ ಈ ಹಾಸ್ಯ ನೋಡಿ ಎಲ್ಲರೂ ನಗುವಂತಾಗಿದೆ. ಸ್ಟುಡಿಯೋದಲ್ಲಿ ಕುಳಿತಿದ್ದವರೂ ಕೂಡ ಇದನ್ನು ಕೇಳಿ ನಕ್ಕರು. ಈ ಲಘುವಾದ ಸಂವಾದವು ಅಂತರ್ಜಾಲದಲ್ಲಿ ಎಲ್ಲರ ಗಮನವನ್ನು ಸೆಳೆದಿದೆ.

ಕೆಹ್ ಕೆ ಪೆಹೆನೊ ಹ್ಯಾಂಡಲ್‌ನಿಂದ ಟ್ವಿಟರ್‌ನಲ್ಲಿ ಮೊದಲು ಹಂಚಿಕೊಂಡ ಈ ವಿಡಿಯೋ ಅಂದಿನಿಂದ ಮತ್ತೆ ಬಹಳಷ್ಟು ತಮಾಷೆಯ ಕಾಮೆಂಟ್‌ಗಳನ್ನು ಸ್ವೀಕರಿಸಿದೆ.


ಒಬ್ಬ ವೀಕ್ಷಕ “ಗಜಬ್ ಬೇಜ್ಜತಿ ಹೈ ಯಾರ್” ಎಂದು ಬರೆದರೆ ಇನ್ನೊಬ್ಬರು, ಏನು ಸಹೋದರ ನಾನಾಗಿದ್ದರೆ ಡೊನಾಲ್ಡ್ ಟ್ರಂಪ್‌, ಅಮೆರಿಕದಿಂದ ಎಂದು ಹೇಳುತ್ತಿದ್ದೆ. ಇನ್ನೊಬ್ಬ ಧನ್ಯವಾದಗಳು ಏನೂ ಬೈಯಲಿಲ್ಲವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Actor Darshan: ನಟಿ ರಚಿತಾ ರಾಮ್‌ ಜೈಲಿಗೆ ಎಂಟ್ರಿ ಕೊಟ್ಟ ದಿನವೇ ನಡೀತಾ ದರ್ಶನ್ ಸಿಗರೇಟ್ ಪಾರ್ಟಿ?

ಕೌನ್ ಬನೇಗಾ ಕರೋಡ್ ಪತಿಯ ಈ ಕ್ಲಿಪ್ ಇಂಟರ್ನೆಟ್‌ನ ಸಾಕಷ್ಟು ಮಂದಿಯ ಹೃದಯ ಗೆದ್ದಿದೆ. ಪ್ರೇಕ್ಷಕರ ಪ್ರತಿಕ್ರಿಯೆಗಳ ಪರಿಣಾಮವಾಗಿ ಈ ವಿಡಿಯೊ ಈಗ ವೈರಲ್ ಆಗಿದ್ದು, ಸಾಕಷ್ಟು ಮಂದಿ ಇದನ್ನು ಇಷ್ಟಪಟ್ಟಿದ್ದಾರೆ. ಅನಿರೀಕ್ಷಿತ ಮತ್ತು ಹಾಸ್ಯಮಯ ಸಂದರ್ಭಗಳಲ್ಲಿ ಅಮಿತಾಭ್ ಬಚ್ಚನ್ ಅವರಂತಹ ದೊಡ್ಡ ಸೆಲೆಬ್ರಿಟಿಗಳು ಭಾಗಿಯಾಗಿರುವುದರಿಂದ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

Continue Reading

ಸಿನಿಮಾ

Kaun Banega Crorepati: ಕೌನ್ ಬನೇಗಾ ಕರೋಡ್‌‌ಪತಿ ವಿಜೇತರು ತೆರಿಗೆ ಎಷ್ಟು ಕಟ್ಟಬೇಕು?

ಕೌನ್ ಬನೇಗಾ ಕರೋಡ್ ಪತಿಯಲ್ಲಿ (Kaun Banega Crorepati) ಸಾಕಷ್ಟು ಪ್ರತಿಭಾವಂತರು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ದಾಟಲೂ ಸಾಧ್ಯವಾಗುವುದಿಲ್ಲ. ಅಪರೂಪಕ್ಕೊಮ್ಮೆ ಕೆಲವರು ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ಗೆದ್ದುಕೊಂಡು ಹೋಗುತ್ತಾರೆ. ಹೀಗೆ ಅಪಾರ ಪ್ರಮಾಣ ಹಣ ಗೆಲ್ಲುವವರು ತೆರಿಗೆಯನ್ನು ಪಾವತಿಸಬೇಕೇ, ಎಷ್ಟು, ಹೇಗೆ ಪಾವತಿಸಬೇಕು ಎನ್ನುವ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Kaun Banega Crorepati
Koo

ಜನಪ್ರಿಯ ಟಿವಿ ಷೋಗಳಲ್ಲಿ (most famous TV shows) ಒಂದಾಗಿರುವ ಕೌನ್ ಬನೇಗಾ ಕರೋಡ್ ಪತಿಯಲ್ಲಿ (Kaun Banega Crorepati) ವಿಜೇತರಿಗೆ ಸಾವಿರದಿಂದ ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಹೀಗಾಗಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಸಾಕಷ್ಟು ಮಂದಿ ಕನಸು ಕಾಣುತ್ತಾರೆ. ಕಠಿಣ ಸ್ಪರ್ಧೆಯನ್ನು ಎದುರಿಸಿ ಇದರಲ್ಲಿ ಪಾಲ್ಗೊಳ್ಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ಸಾಕಷ್ಟು ಪ್ರತಿಭಾವಂತರು ಇಲ್ಲಿ ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ದಾಟಲೂ ಸಾಧ್ಯವಾಗುವುದಿಲ್ಲ. ಅಪರೂಪಕ್ಕೊಮ್ಮೆ ಕೆಲವರು ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ಗೆದ್ದುಕೊಂಡು ಹೋಗುತ್ತಾರೆ. ಹೀಗೆ ಅಪಾರ ಪ್ರಮಾಣ ಹಣ ಗೆಲ್ಲುವವರು ತೆರಿಗೆಯನ್ನು (tax) ಪಾವತಿಸಬೇಕೇ, ಎಷ್ಟು, ಹೇಗೆ ಪಾವತಿಸಬೇಕು ಎನ್ನುವ ಗೊಂದಲ ಹಲವರಲ್ಲಿ ಇದೆ.

Kaun Banega Crorepati
Kaun Banega Crorepati


ಕೆಬಿಸಿ ಬಹುಮಾನದ ಮೊತ್ತಕ್ಕೆ ಎಷ್ಟು ತೆರಿಗೆ?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194ಬಿ ಪ್ರಕಾರ ರಿಯಾಲಿಟಿ ಟಿವಿ ಶೋಗಳು, ಲಾಟರಿ, ಸ್ಪರ್ಧೆ, ಕಾರ್ಡ್ ಆಟ ಇತ್ಯಾದಿಗಳಿಂದ ಯಾವುದೇ ರೀತಿಯ ಗಳಿಕೆಯು “ಇತರ ಮೂಲಗಳಿಂದ ಆದಾಯ” ದ ಅಡಿಯಲ್ಲಿ ಬರುತ್ತದೆ. ಹೀಗಾಗಿ, ಬಹುಮಾನದ ಮೊತ್ತವು 10,000 ರೂ. ಮೀರಿದರೆ ಮೂಲದಲ್ಲಿ ಶೇ. 30ರಷ್ಟು ತೆರಿಗೆ ಜೊತೆಗೆ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.

ಬಹುಮಾನವನ್ನು ಹಸ್ತಾಂತರಿಸುವ ಮೊದಲು ಟಿಡಿಎಸ್ ಕಡಿತಗೊಳಿಸಲು ಅಧಿಕಾರಿಗಳು ಅಥವಾ ಬಹುಮಾನದ ಹಣವನ್ನು ವಿತರಿಸುವ ವ್ಯಕ್ತಿ ಜವಾಬ್ದಾರರಾಗಿರುತ್ತಾರೆ. ಇದಕ್ಕೆ ಸೆಕ್ಷನ್ 80ಸಿ ಅಥವಾ 80ಡಿ ಅಡಿಯಲ್ಲಿ ಯಾವುದೇ ತೆರಿಗೆ ವಿನಾಯಿತಿಗಳನ್ನು ಪಡೆಯಲು ಸಾಧ್ಯವಿಲ್ಲ.

ಸೆಕ್ಷನ್ 194ಬಿ ನಿಯಮಗಳು ಏನು?

ಸೆಕ್ಷನ್ 194ಬಿ ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಅಂಶಗಳು ನೆನಪಿನಲ್ಲಿರಲಿ. ಎಲ್ಲಾ ರೀತಿಯ ರಿಯಾಲಿಟಿ ಟಿವಿ ಶೋ, ಲಾಟರಿ ಇತ್ಯಾದಿಗಳಿಂದ ಬಹುಮಾನ ಗಳಿಕೆಗಳಿಗೆ ಇದು ಅನ್ವಯಿಸುತ್ತದೆ.

ಬಹುಮಾನದ ಹಣವನ್ನು ಕಂತುಗಳಲ್ಲಿ ಸ್ವೀಕರಿಸಿದರೆ ಪ್ರತಿ ಬಾರಿ ಪಾವತಿಯನ್ನು ಸ್ವೀಕರಿಸಿದಾಗ ಟಿಡಿಎಸ್ ಅನುಪಾತದ ದರದಲ್ಲಿ ತೆರಿಗೆಯನ್ನು ಅನ್ವಯಿಸಲಾಗುತ್ತದೆ.

ಮಾರಾಟವಾಗದ ಲಾಟರಿಯಲ್ಲಿರುವ ಮೊತ್ತಕ್ಕೆ ತೆರಿಗೆ ಅನ್ವಯವಾಗುವುದಿಲ್ಲ. ಯಾಕೆಂದರೆ ಇದು ವ್ಯಾಪಾರ ಆದಾಯದ ಭಾಗವಾಗಿರುತ್ತದೆ.

ಬಹುಮಾನವು ಕೇವಲ ರಜೆ ಪ್ಯಾಕೇಜ್, ಕಾರು, ಇತ್ಯಾದಿಗಳಾಗಿದ್ದರೆ ವಿಜೇತರು ಅದನ್ನು ಸ್ವೀಕರಿಸುವ ಮೊದಲು ಟಿಡಿಎಸ್ ಪಾವತಿಸಬೇಕಾಗುತ್ತದೆ. ತೆರಿಗೆ ದರವು ಶೇ. 30 ಮತ್ತು ಮಾರುಕಟ್ಟೆ ಮೌಲ್ಯದ ಹೆಚ್ಚುವರಿ ಶುಲ್ಕವನ್ನು ಒಳಗೊಂಡಿರುತ್ತದೆ.

ಒಂದು ವೇಳೆ ನಗದು ಮತ್ತು ವಸ್ತು ರೂಪದ ಬಹುಮಾನವನ್ನು ಸ್ವೀಕರಿಸಿದರೆ ಎರಡರ ಜಂಟಿ ಮೌಲ್ಯದ ಮೇಲೆ ಟಿಡಿಎಸ್ ಅನ್ವಯಿಸುತ್ತದೆ. ಆದರೆ ಅದನ್ನು ನಗದು ಭಾಗದಿಂದ ಮಾತ್ರ ಕಡಿತಗೊಳಿಸಲಾಗುತ್ತದೆ.

ಬಹುಮಾನವು ಕೇವಲ ವಸ್ತುವಾಗಿದ್ದರೆ ಇದನ್ನು ವಿತರಿಸುವ ವ್ಯಕ್ತಿಯು ವಿಜೇತರಿಗೆ ಹಸ್ತಾಂತರಿಸುವ ಮೊದಲು ಎಲ್ಲಾ ತೆರಿಗೆಗಳನ್ನು ಪಾವತಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಒಂದು ವೇಳೆ ಬಹುಮಾನ ವಿಜೇತರ ಒಂದು ನಿರ್ದಿಷ್ಟ ಭಾಗವು ಸರ್ಕಾರ ಅಥವಾ ಲಾಟರಿ ಏಜೆನ್ಸಿಗೆ ಹೋದರೆ ಆ ಭಾಗವು ಟಿಡಿಎಸ್ ನಲ್ಲಿ ಬರುವುದಿಲ್ಲ.

ಇದನ್ನೂ ಓದಿ: Gold In Country: ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ ಭಾರತ ಯಾವ ಸ್ಥಾನದಲ್ಲಿದೆ?

ಸೆಕ್ಷನ್ 194ಜಿ ಪ್ರಕಾರ ಲಾಟರಿ ಏಜೆಂಟ್‌ಗಳಿಗೆ ಕಮಿಷನ್‌ಗಳ ಪಾವತಿಯು ತೆರಿಗೆಗೆ ಒಳಪಡುತ್ತದೆ.

ಕೌನ್ ಬನೇಗಾ ಕರೋಡ್ ಪತಿಯಲ್ಲಿ ನಗದು ಬಹುಮಾನವನ್ನು ಗೆದ್ದ ಅನಂತರ ಶೇ. 30ರಷ್ಟು ಟಿಡಿಎಸ್ ಮತ್ತು ಶೇ. 4ರಷ್ಟು ಹೆಚ್ಚುವರಿ ಸೆಸ್ ಅನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

Continue Reading
Advertisement
TA Sharavana
ಕರ್ನಾಟಕ2 hours ago

TA Sharavana : ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾದ ಬಳಿಕ ಕಚೇರಿ ಉದ್ಘಾಟನೆ ಮಾಡಿದ ಟಿ.ಎ ಶರವಣ

actor darshan
ಸಿನಿಮಾ4 hours ago

Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

Actor Darshans gang moves Google to destroy evidence after Renukaswamys murder
ಸಿನಿಮಾ4 hours ago

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshan gang
ಬೆಂಗಳೂರು5 hours ago

Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ROad Accident
ಗದಗ8 hours ago

Road Accident : ನೀರಿನಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ ಶವವಾಗಿ ಪತ್ತೆ; ಸ್ಕಿಡ್ ಆಗಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಗೂಡ್ಸ್ ಗಾಡಿ

darling krishna
ಸಿನಿಮಾ8 hours ago

Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ

Road Accident
ರಾಯಚೂರು9 hours ago

Road Accident : ಸ್ಕೂಲ್‌ ಬಸ್‌-ಸಾರಿಗೆ ಬಸ್‌ ಡಿಕ್ಕಿ; ಡೆಡ್ಲಿ ಆ್ಯಕ್ಸಿಡೆಂಟ್‌ಗೆ ಮಕ್ಕಳಿಬ್ಬರು ಬಲಿ, ತುಂಡಾಯ್ತು ಮಕ್ಕಳ ಕಾಲುಗಳು

Road Accident
ಚಿಕ್ಕಬಳ್ಳಾಪುರ9 hours ago

Road Accident : ಕಂಟ್ರೋಲ್ ತಪ್ಪಿ‌ ಹೋಟೆಲ್‌ಗೆ ನುಗ್ಗಿದ ಟಿಪ್ಪರ್ ಲಾರಿ; ಕ್ಯಾಶಿಯರ್‌, ಅಡುಗೆ ಭಟ್ಟ ದಾರುಣ ಸಾವು

One and a half year old boy dies of suffocation after swallowing bottle cap in Shivamogga
ಶಿವಮೊಗ್ಗ10 hours ago

Child Death: ಶಿವಮೊಗ್ಗದಲ್ಲಿ ಜ್ಯೂಸ್‌ ಬಾಟೆಲ್‌ನ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಉಸಿರುಗಟ್ಟಿ ಸಾವು

Karnataka Weather Forecast
ಮಳೆ10 hours ago

Karnataka Weather : ಗೌರಿ-ಗಣೇಶ ಹಬ್ಬಕ್ಕೆ ಮಳೆ ಅಡ್ಡಿ!ನಿರಂತರ ಗಾಳಿ ಜತೆಗೆ ಭಾರಿ‌ ವರ್ಷಧಾರೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್5 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌