Muktha Muktha: 'ಮುಕ್ತ ಮುಕ್ತ' ಧಾರಾವಾಹಿ ಮರು ಪ್ರಸಾರ; ಎಲ್ಲಿ? ಯಾವಾಗ? - Vistara News

ಕಿರುತೆರೆ

Muktha Muktha: ‘ಮುಕ್ತ ಮುಕ್ತ’ ಧಾರಾವಾಹಿ ಮರು ಪ್ರಸಾರ; ಎಲ್ಲಿ? ಯಾವಾಗ?

Muktha Muktha:ಇದೇ ಆಗಸ್ಟ್​29ರಿಂದ ಗುರುವಾರ, ಶುಕ್ರವಾರ ವಾರದ ಎರಡು ದಿನ ಎರಡು ಕಂತುಗಳಲ್ಲಿ ಧಾರಾವಾಹಿಯನ್ನು ನೋಡುವ ಅವಕಾಶ ಕಿರುತೆರೆ ವೀಕ್ಷಕರಿಗೆ ಕಲ್ಪಿಸಲಾಗಿದೆ.

VISTARANEWS.COM


on

Muktha Muktha streaming in youtube
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಟಿ‌.ಎನ್. ಸೀತಾರಾಮ್ ಅವರ ನಿರ್ದೇಶನಡಿಯಲ್ಲಿ ಪ್ರಸಾರವಾಗುತ್ತಿದ್ದ ಮುಕ್ತ ಮುಕ್ತ ಧಾರಾವಾಹಿ 1204 ಸಂಚಿಕೆ ಪೂರೈಸಿತ್ತು. ಆ ಕಾಲದ ಪ್ರಸ್ತುತ ವಿಷಯಗಳನ್ನು ಸಾಮಾಜಕ್ಕೆ ತೋರಿಸಿತ್ತು. ಅಕ್ರಮ ಭೂ ಒತ್ತುವರಿ, ಜಾಗತೀಕರಣದ ಪರಿಣಾಮಗಳು, ರೈತರ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಈ ಧಾರಾವಾಹಿಯಲ್ಲಿ ಎಳೆಎಳೆಯಾಗಿ ತೋರಿಸುತ್ತಿದ್ದರು. ಅಂದು ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ‘ಮುಕ್ತ ಮುಕ್ತ’ ಧಾರಾವಾಹಿಯನ್ನು ಇದೀಗ ಮತ್ತೊಮ್ಮೆ ನೋಡುವ ಸುವರ್ಣಾವಕಾಶ ವೀಕ್ಷಕರಿಗೆ ದೊರಕಿದೆ.

ಸಿ.ಎಸ್​.ಪಿ ಪಾತ್ರದ ಜೊತೆಗೆ ಶಾಂಭವಿ ಟೀಚರ್, ಕಲ್ಯಾಣಿ, ಶಶಿ, ಶಂಕರಮೂರ್ತಿ, ನಿರ್ಮಲಾ ಕೊಂಡಹಳ್ಳಿ, ಮಂಗಳತ್ತೆ, ಮಿಶ್ರ, ದೇಶಪಾಂಡೆ ಪಾತ್ರಗಳು ವೀಕ್ಷಕರಲ್ಲಿ ಇನ್ನು ನೆನಪಿನಲ್ಲಿ ಇದೆ. ಇದೀಗ ಈ ಧಾರಾವಾಹಿ ಮರುಪ್ರಸಾರ ಕಾಣಿಸುತ್ತಿದೆ. ಆದರೆ ಟಿವಿಯಲ್ಲಿ ಅಲ್ಲ, ಬದಲಿಗೆ ಯೂಟ್ಯೂಬ್ ಚಾನೆಲ್‌ನಲ್ಲಿ. ಟಿ.ಎನ್‌. ಸೀತಾರಾಮ್ ಅವರ ಭೂಮಿಕಾ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ‘ಮುಕ್ತ ಮುಕ್ತ’ ಧಾರಾವಾಹಿಯು ಮರು ಪ್ರಸಾರಗೊಳ್ಳಲಿದೆ.ಇದೇ ಆಗಸ್ಟ್​29ರಿಂದ ಗುರುವಾರ, ಶುಕ್ರವಾರ ವಾರದ ಎರಡು ದಿನ ಎರಡು ಕಂತುಗಳಲ್ಲಿ ಧಾರಾವಾಹಿಯನ್ನು ನೋಡುವ ಅವಕಾಶ ಕಿರುತೆರೆ ವೀಕ್ಷಕರಿಗೆ ಕಲ್ಪಿಸಲಾಗಿದೆ.

 ದಶಕಗಳ ಹಿಂದೆಯೇ ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಸಂಚಲನ ಹುಟ್ಟುಹಾಕಿದವರು ಟಿ.ಎನ್‌. ಸೀತಾರಾಮ್‌. ‘ಮಾಯಾಮೃಗ’, ‘ಜ್ವಾಲಾಮುಖಿ’, ‘ಮನ್ವಂತರ’, ‘ಮಳೆಬಿಲ್ಲು’, ‘ಮುಕ್ತ’, ‘ಮುಕ್ತ ಮುಕ್ತ’, ‘ಮಹಾಪರ್ವ’ ಮುಂತಾದ ಧಾರಾವಾಹಿಗಳಿಂದ ಮನೆಮಾತಾಗಿರುವ ನಿರ್ದೇಶಕ.  ಧಾರವಾಹಿ ಶೀರ್ಷಿಕೆ, ಶೀರ್ಷಿಕೆ ಗೀತೆ, ಸಂಭಾಷಣೆಯಲ್ಲಿ ಸಾಹಿತ್ಯದ ಸ್ಪರ್ಶವನ್ನು ನೀಡಿದವರು ಟಿ.ಎನ್‌ ಸೀತಾರಾಮ್‌. ವಕೀಲರಾಗಿ ಕಟಕಟೆಯಲ್ಲಿ ಗೋಪಾಲಕೃಷ್ಣ ಅಡಿಗರ, ಕುವೆಂಪು ಅವರ ಕವನದ ಸಾಲುಗಳನ್ನು ಕೋಟ್‌ ಮಾಡುತ್ತಿದ್ದವರು ಅವರು. ೨೦೦೫ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಆರ್ಯಭಟ ಪ್ರಶಸ್ತಿಗಳಲ್ಲಿ ʼಮುಕ್ತʼ ಧಾರಾವಾಹಿಯ ನಿರ್ದೇಶನಕ್ಕಾಗಿ ‘ಶ್ರೇಷ್ಠ ನಿರ್ದೇಶಕ’ ಪ್ರಶಸ್ತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!

ಮುಕ್ತ ಮುಕ್ತ ಹಾಡಿಗೆ ಭರ್ಜರಿ ಡಿಮ್ಯಾಂಡ್‌

 ‘ಮುಕ್ತ ಮುಕ್ತ’. ಶೀರ್ಷಿಕೆ ಗೀತೆಯಾಗಿ ಅಳವಡಿಸಿಕೊಂಡಿರುವ ಈ ರಚನೆಯನ್ನು ಬಲು ಸೊಗಸಾಗಿ ಹಾಡಿರುವವರು ವಿಜಯ್ ಪ್ರಕಾಶ್. ಹಾಡಿನ ಸಂಗೀತ ಸಿ. ಅಶ್ವಥ್ ಅವರಿಂದ. ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ, ಬೇವ ಅಗಿವ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ ಸಾಲು ಭಾರಿ ಸಂಚಲನ ಸೃಷ್ಟಿಸಿತ್ತು.

ಮಾಯಾಮೃಗ

ಟಿ.ಎನ್.ಸೀತಾರಾಮ್ ಪ್ರಧಾನ ನಿರ್ದೇಶನದ, ಪಿ.ಶೇಷಾದ್ರಿ ಹಾಗೂ ನಾಗೇಂದ್ರ ಶಾ ನಿರ್ದೇಶನದ ‘ಮಾಯಾಮೃಗ’ (Mayamruga)ಧಾರಾವಾಹಿ ವೆಬ್ ಸರಣಿ ರೂಪದಲ್ಲಿ ಯೂಟ್ಯೂಬ್ ಮುಖಾಂತರ ಪ್ರಸಾರಗೊಳ್ಳುತ್ತಿದೆ. ‘ಮಾಯಾಮೃಗ’ ಧಾರಾವಾಹಿ ಮೊದಲು ಪ್ರಸಾರ ಕಂಡಿದ್ದು 1998ರಲ್ಲಿ ಡಿಡಿ ಚಂದನ ವಾಹಿನಿಯಲ್ಲಿ. ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ‘ಮಾಯಾಮೃಗ’ ಧಾರಾವಾಹಿ 2014ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮರು ಪ್ರಸಾರ ಕಂಡಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Vijay Surya: `ದೃಷ್ಟಿಬೊಟ್ಟು’ ಧಾರಾವಾಹಿ ಮೂಲಕ ಖಡಕ್‌ ಎಂಟ್ರಿ ಕೊಟ್ಟ ವಿಜಯ್ ಸೂರ್ಯ!

Vijay Surya: ಕಲರ್ಸ್ ಕನ್ನಡ ವಾಹಿನಿಯ ವಿಜಯ್ ಸೂರ್ಯ ಅವರ ಎರಡನೇ ಪ್ರೋಮೋ ರಿಲೀಸ್ ಮಾಡಲಾಗಿದೆ. ಅದರಲ್ಲಿ ವಿಜಯ್ ಸೂರ್ಯ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ‘ಹೆಸರು ದತ್ತಾ ಶ್ರೀರಾಮ ಪಾಟಿಲ್, ಬಳ್ಳಾರಿ ಜನ ಕರೆಯೋದು ದತ್ತಾ ಭಾಯ್ ಎಂದು.

VISTARANEWS.COM


on

Vijay Surya drusti bottu serial will start
Koo

ಕಲರ್ಸ್ ಕನ್ನಡ ವಾಹಿನಿಯ ಹೊಸ ಧಾರಾವಾಹಿ ದೃಷ್ಟಿಬೊಟ್ಟು ಶುರುವಾಗುತ್ತಿದೆ.

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ ವಿಜಯ್ ಸೂರ್ಯ ಈ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ವಿಜಯ್ ಸೂರ್ಯ ಅವರ ಎರಡನೇ ಪ್ರೋಮೋ ರಿಲೀಸ್ ಮಾಡಲಾಗಿದೆ. ಅದರಲ್ಲಿ ವಿಜಯ್ ಸೂರ್ಯ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ‘ಹೆಸರು ದತ್ತಾ ಶ್ರೀರಾಮ ಪಾಟಿಲ್, ಬಳ್ಳಾರಿ ಜನ ಕರೆಯೋದು ದತ್ತಾ ಭಾಯ್ ಎಂದು.

ಇದನ್ನೂ ಓದಿ: Vijay Surya: ತಾಯಂದಿರ ದಿನ ತನ್ನ ಹೆಸರನ್ನೇ ಬದಲಿಸಿಕೊಂಡ ʻಅಗ್ನಿಸಾಕ್ಷಿ’ ನಟ! ಹೊಸ ಹೆಸರೇನು?

ದತ್ತಾ ಭಾಯ್ ಬರ್ತಿದ್ದಾರೆ ಶ್ರೀಘ್ರದಲ್ಲೇ..! ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ದೃಷ್ಟಿಬೊಟ್ಟ ಆರಂಭವಾಗುತ್ತಿದ್ದು, ನಾಯಕನಾಗಿ ವಿಜಯ್ ಸೂರ್ಯ ಖಡಕ್ ಎಂಟ್ರಿ ಕೊಟ್ಟಿದ್ದಾರೆ.

Continue Reading

ಬಿಗ್ ಬಾಸ್

Bigg Boss Telugu 8: ಬಿಗ್​ಬಾಸ್ ತೆಲುಗು ಸೀಸನ್‌ 8ರ ಪ್ರೋಮೊ ಔಟ್‌; ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು!

Bigg Boss Telugu 8: ಈಗಾಗಲೇ ಮೂರು ಪ್ರೋಮೋಗಳು ಬಿಡುಗಡೆಯಾಗಿದ್ದು, ಸೀಸನ್ 8ಕ್ಕೆ ಯಾರೆಲ್ಲ ಬರುತ್ತಾರೆ ಎಂಬ ಬಗ್ಗೆ ಕುತೂಹಲ ಕೂಡ ಹೆಚ್ಚಿದೆ. ಕನ್ನಡದವರು ಕೂಡ ಈ ಬಾರಿ ಇರಲಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Bigg Boss Telugu 8 Confirmed Contestants nagarjuna akkineni host
Koo

ಬಿಗ್​ಬಾಸ್ ತೆಲುಗು (Bigg Boss Telugu 8) ಮತ್ತೆ ಪ್ರಾರಂಭವಾಗುತ್ತಿದೆ. ಸ್ಟಾರ್ ಮಾ ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗು ಸೀಸನ್ 8 ರ ಹೊಸ ಪ್ರೋಮೊವನ್ನು ಭಾನುವಾರ ಬಿಡುಗಡೆ ಮಾಡಿದೆ. ,ಈ ಶೋಗೆ ಸ್ಪರ್ಧಿಗಳು ಯಾರೆಂಬುದರ ಬಗ್ಗೆ ಚರ್ಚೆಗಳು ಶುರುವಾಗಿವೆ. ಈಗಾಗಲೇ ಮೂರು ಪ್ರೋಮೋಗಳು ಬಿಡುಗಡೆಯಾಗಿದ್ದು, ಸೀಸನ್ 8ಕ್ಕೆ ಯಾರೆಲ್ಲ ಬರುತ್ತಾರೆ ಎಂಬ ಬಗ್ಗೆ ಕುತೂಹಲ ಕೂಡ ಹೆಚ್ಚಿದೆ. ಕನ್ನಡದವರು ಕೂಡ ಈ ಬಾರಿ ಇರಲಿದ್ದಾರೆ ಎಂದು ವರದಿಯಾಗಿದೆ.

ಸಂಭಾವ್ಯ ಅಭ್ಯರ್ಥಿಗಳ ಹೆಸರು ವೈರಲ್ ಆಗುತ್ತಿದೆ. ಅದರಂತೆ ಜ್ಯೋತಿಷ್ಯ ವೇಣುಸ್ವಾಮಿ, ಯೂಟ್ಯೂಬರ್ ಬರೆಲ್ಲಕ್ಕ, ಯೂಟ್ಯೂಬರ್ ಯಾದಂ ರಾಜು ರಿತು ಚೌಧರಿ, ಕಿರುತೆರೆ ತಾರೆಯರಾದ ಅಂಜಲಿ, ಯಶ್ಮಿ ಗೌಡ, ತೇಜಸ್ವಿನಿ ಗೌಡ, ಹಿರಿಯ ನಟಿ ಸನಾ, ನಟ ಅನಿಲ್ ಗೀಲಾ, ಹಾಸ್ಯನಟ ಬುಂಚಿಕ್ ಬಬ್ಲು, ಕಿರಾಕ್ ಆರ್‌ಪಿ, ರಿಂಗ್ ರಿಯಾಜ್, ನಿರೂಪಕಿ ವಿಂಧ್ಯಾ ವಿಶಾಖ, ಪಾಗಲ್ ಪವಿತ್ರಾ ಹೀಗೆ ಹಲವು ಜನರ ಹೆಸರಿದೆ. ಇದರ ಜೊತೆಗೆ ಸುದ್ದಿ ವಾಚಕಿ ಕಲ್ಯಾಣಿ, ನಟಿ ರೇಖಾ ಬೋಜ್, ಸಾವಯವ ಕೃಷಿ ತಜ್ಞ ನೇತ್ರಾ ರೆಡ್ಡಿ, ಧಾರಾವಾಹಿ ನಟ ಇಂದ್ರನೀಲ್ ಸೇನ್‌ಗುಪ್ತ, ನಟ ಅಬ್ಬಾಸ್, ನಟ ರೋಹಿತ್, ಗಾಯಕ ಸಾಕೇತ್ ಕೊಮಂದೂರಿ, ಫೆಮಿನಾ ಮಿಸ್ ಇಂಡಿಯಾ ತೆಲಂಗಾಣ 2023 ರ ಊರ್ಮಿಳಾ ಚೌಹಾಣ್ ಅವರ ಹೆಸರು ಕೂಡ ಇದೆ.

ಇದರಲ್ಲಿ ಯಶ್ಮಿ ಗೌಡ ಕನ್ನಡದಾಕೆ, ಇದರ ಜೊತೆಗೆ ತೇಜಸ್ವಿನಿ ಗೌಡ ಕೂಡ ಕನ್ನಡದವರೇ ಆಗಿದ್ದಾರೆ. ಮೂಲತಃ ಕನ್ನಡದವರಾದ ಇವರು ತೆಲುಗಿನ ಧಾರವಾಹಿಗಳಲ್ಲಿ ಫೇಮಸ್ ಆಗಿದ್ದಾರೆ. . ಬಿಗ್ ಬಾಸ್ ಸೀಸನ್ 8 ಸೆಪ್ಟೆಂಬರ್ 8 ರ ಭಾನುವಾರ ಸಂಜೆ 6 ರಿಂದ ಪ್ರಾರಂಭವಾಗಲಿದೆ. ನಂದಮೂರಿ ಕುಟುಂಬದಿಂದ ತೆಲುಗು ಸಿನೆಮಾ ರಂಗಕ್ಕೆ ನಾಯಕನಾಗಿ ಕಾಲಿಟ್ಟಿರುವ ಚೈತನ್ಯ ಕೃಷ್ಣ ಅವರು ಬಿಗ್‌ಬಾಸ್‌ ಗೆ ಬರಲಿದ್ದಾರೆಂದು ಸುದ್ದಿ ಹಬ್ಬಿದೆ.

ಇದನ್ನೂ ಓದಿ: Bigg Boss Telugu 8: ಬಿಗ್‌ ಬಾಸ್‌ ಮನೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಎಂಟ್ರಿ?

ಸೆಪ್ಟೆಂಬರ್ 3 ರಂದು ತೆಲುಗು ಬಿಗ್​ಬಾಸ್ ಸೀಸನ್ 7 ಆರಂಭವಾಗಿತ್ತು. 19 ಮಂದಿ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಿದ್ದರು. ಅವರಲ್ಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದಿದ್ದರು. ಅಲ್ಲಿಗೆ ಒಟ್ಟು 21 ಸ್ಪರ್ಧಿಗಳು ಈ ಬಾರಿಯ ಬಿಗ್​ಬಾಸ್ ತೆಲುಗು ಸೀಸನ್ 7ರಲ್ಲಿ ಆಡಿದರುಪಲ್ಲವಿ ಪ್ರಶಾಂತ್ ವಿನ್ನರ್ ಆಗಿದ್ದು, ಹಲವರಿಗೆ ಖುಷಿ ನೀಡಿತ್ತು. ಆದರೆ ಮೊದಲಿನಿಂದಲೂ ಶಿವಾಜಿ ವಿನ್ನರ್ ಎಂದುಕೊಂಡಿದ್ದ ಹಲವರಿಗೆ ಬೇಸರವಾಗಿತ್ತು.

Continue Reading

ಸಿನಿಮಾ

Rachael Lillis: ಧ್ವನಿ ನಿಲ್ಲಿಸಿದ ʻಪೋಕೆಮಾನ್ʼ ತಾರೆ ರಾಚೆಲ್; ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡಿ ಸೋತ ನಟಿ

Rachael Lillis: 1997 ಮತ್ತು 2015 ರ ನಡುವೆ ಪೋಕೆಮಾನ್ 423 ಸಂಚಿಕೆಗಳಲ್ಲಿ ಆಕೆಯ ಧ್ವನಿ ಕಾಣಿಸಿಕೊಂಡಿದೆ. 2019 ರ ಚಲನಚಿತ್ರ ಡಿಟೆಕ್ಟಿವ್ ಪಿಕಾಚು ಮತ್ತು ಸೂಪರ್ ಸ್ಮ್ಯಾಶ್ ಬ್ರದರ್ಸ್ ವಿಡಿಯೋ ಗೇಮ್ ಸರಣಿ ಸೇರಿದಂತೆ ಪೋಕೆಮಾನ್ ಪಾತ್ರದ ಜಿಗ್ಲಿಪಫ್‌ಗೆ ಧ್ವನಿ ನೀಡಿದ್ದಾರೆ.

VISTARANEWS.COM


on

Rachael Lillis The voice of Pokémon Misty and Jessie passes away
Koo

ಬೆಂಗಳೂರು: ಪೋಕೆಮಾನ್ ಸರಣಿಯಲ್ಲಿನ ಮಿಸ್ಟಿ ಮತ್ತು ಜೆಸ್ಸಿ ಪಾತ್ರಗಳಿಗೆ ತನ್ನ ಧ್ವನಿಯ ಮೂಲಕ ಜೀವ ತುಂಬುತ್ತಿದ್ದ ಪ್ರಸಿದ್ಧ ನಟಿ ರಾಚೆಲ್ (Rachael Lillis) ನಿಧನರಾಗಿದ್ದಾರೆ.  46ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್‌ನಿಂದ ನಿಧನರಾದರು. ಪ್ರೀತಿಯ ಜಪಾನೀಸ್ ಅನಿಮೇಟೆಡ್ ಸರಣಿಯಲ್ಲಿ (Pokémon television series) ಮಿಸ್ಟಿ ಮತ್ತು ಜೆಸ್ಸಿ ( Misty and Jessie) ಮತ್ತು ಇನ್ನೂ ಅನೇಕ ಪ್ರಮುಖ ಪಾತ್ರಗಳಿಗೆ ಲಿಲ್ಲಿಸ್ ಧ್ವನಿ ನೀಡಿದ್ದಾರೆ. ಪೋಕೆಮಾನ್ ಪ್ರಮುಖ ಪಾತ್ರ ಆಶ್ ಕೆಚಮ್ ಆಗಿ ನಟಿಸಿದ್ದರು.

1990ರ ದಶಕದ ಉತ್ತರಾರ್ಧದಲ್ಲಿ ಪೋಕೆಮಾನ್ ಟಿವಿ ಸರಣಿ, ಚಲನಚಿತ್ರ ಮತ್ತು ವಿಡಿಯೋ ಗೇಮ್‌ಗಳಲ್ಲಿ  ಮಿಸ್ಟಿ ಮತ್ತು ಜೆಸ್ಸಿಯಾಗಿ  ಲಿಲ್ಲಿಸ್  ತಮ್ಮ ಧ್ವನಿ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಮಾತ್ರವಲ್ಲ ಈ ಎರಡು ಪಾತ್ರಗಳಿಗೆ ಆಕೆ ಜೀವ ತುಂಬುತ್ತಿದ್ದರಿಂದ ಅಪಾರ ಹೆಸರವಾಸಿಯಾಗಿದ್ದರು. ಲಿಲ್ಲಿಸ್ ನ್ಯೂಯಾರ್ಕ್‌ನ ನಯಾಗರಾ ಫಾಲ್ಸ್‌ನಲ್ಲಿ 1969 ನಲ್ಲಿ ಜನಿಸಿದರು. ಹಿನ್ನೆಲೆ ಧ್ವನಿ ಕಲಾವಿದೆಯಾಗುವ ಮೊದಲು ವಿಶ್ವವಿದ್ಯಾಲಯದಿಂದ ಒಪೆರಾದಲ್ಲಿ ತರಬೇತಿ ಪಡೆದರು.

1997 ಮತ್ತು 2015 ರ ನಡುವೆ ಪೋಕೆಮಾನ್ 423 ಸಂಚಿಕೆಗಳಲ್ಲಿ ಆಕೆಯ ಧ್ವನಿ ಕಾಣಿಸಿಕೊಂಡಿದೆ. 2019 ರ ಚಲನಚಿತ್ರ ಡಿಟೆಕ್ಟಿವ್ ಪಿಕಾಚು ಮತ್ತು ಸೂಪರ್ ಸ್ಮ್ಯಾಶ್ ಬ್ರದರ್ಸ್ ವಿಡಿಯೋ ಗೇಮ್ ಸರಣಿ ಸೇರಿದಂತೆ ಪೋಕೆಮಾನ್ ಪಾತ್ರದ ಜಿಗ್ಲಿಪಫ್‌ಗೆ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: Bengaluru Police: ಸಿಟಿ ಸಿವಿಲ್‌ ಕೋರ್ಟ್‌ನಿಂದ ಕೊಲೆ ಆರೋಪಿ ಎಸ್ಕೇಪ್‌! ಸಿನಿಮಾ ಸ್ಟೈಲ್‌ನಲ್ಲಿ ಚೇಸ್‌ ಮಾಡಿದ ಖಾಕಿ

ಪೊಕ್ಮೊನ್ ಕಂಪನಿ ಇಂಟರ್‌ನ್ಯಾಶನಲ್‌ನ “ರಾಚೆಲ್ ಲಿಲ್ಲಿಸ್ ಅವರ ನಿಧನದ ಬಗ್ಗೆ ನಮಗೆ ತುಂಬಾ ದುಃಖವಾಗಿದೆ.ಅವರ ವಿಶೇಷ ಪ್ರತಿಭೆಯಿಂದ ಜೀವ ತುಂಬಿದ ಪಾತ್ರಗಳೊಂದಿಗೆ ಬೆಳೆದ ಅನೇಕ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತದೆʼʼ ಎಂದು ಹೆಳಿಕೆ ನೀಡಿದೆ.

ಲಿಲ್ಲಿಸ್ ಇತರ ಅನಿಮೆ ಮತ್ತು ಅನಿಮೇಟೆಡ್ ಸರಣಿಗಳಿಗೆ ಕೊಡುಗೆ ನೀಡಿದರು.  ಯುವರ್ ಲೈ ಇನ್ ಏಪ್ರಿಲ್, ಹಂಟರ್ ಎಕ್ಸ್ ಹಂಟರ್, ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್, ಮತ್ತು ಮೊಬೈಲ್ ಸೂಟ್ ಗುಂಡಮ್ ಯುನಿಕಾರ್ನ್, ಇತರ ಪಾತ್ರಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ. ಅನೇಕ ಪ್ರಶಸ್ತಿಗಳು ಕೂಡ ಗಳಿಸಿದ್ದಾರೆ.

Continue Reading

ಬಾಲಿವುಡ್

Kaun Banega Crorepati Season 16: 25 ಲಕ್ಷ ರೂ. ಪ್ರಶ್ನೆಗೆ ಉತ್ತರಿಸಲು ವಿಫಲರಾದ ಬೆಂಗಳೂರಿನ ಎಂಜಿನಿಯರ್! ಏನಿತ್ತು ಆ ಪ್ರಶ್ನೆ?

ಕೌನ್ ಬನೇಗಾ ಕರೋಡ್ ಪತಿಯ 16ನೇ ಸರಣಿ (Kaun Banega Crorepati Season 16) ಪ್ರಾರಂಭಗೊಂಡಿದ್ದು, ಕಾರ್ಯಕ್ರಮದ ನಿರೂಪಕರಾಗಿ ಅಮಿತಾಭ್ ಬಚ್ಚನ್ ಮರಳಿ ಬಂದಿದ್ದಾರೆ. ಬೆಂಗಳೂರಿನ ಎಂಜಿನಿಯರ್ ಮೊದಲ ಸ್ಪರ್ಧಿಯಾಗಿ ಪಾಲ್ಗೊಂಡಿದ್ದು, 25 ಲಕ್ಷ ರೂ. ಮೌಲ್ಯದ ಮಹಾಭಾರತದ ಪ್ರಶ್ನೆಗೆ ಉತ್ತರ ನೀಡುವಲ್ಲಿ ವಿಫಲರಾಗಿ ಕೇವಲ 3.20 ಲಕ್ಷ ರೂ. ಗೆದ್ದುಕೊಂಡರು.

VISTARANEWS.COM


on

By

Kaun Banega Crorepati Season 16
Koo

ಕೌನ್ ಬನೇಗಾ ಕರೋಡ್ ಪತಿಯ 16ನೇ ಸರಣಿ (Kaun Banega Crorepati Season 16) ಆಗಸ್ಟ್ 12ರಂದು ಗ್ರ್ಯಾಂಡ್ ಪ್ರೀಮಿಯರ್ ಸಂಚಿಕೆಯೊಂದಿಗೆ ಪ್ರಾರಂಭವಾಗಿದೆ. ಕಾರ್ಯಕ್ರಮದ ನಿರೂಪಕರಾಗಿ ಅಮಿತಾಭ್‌ ಬಚ್ಚನ್ (Amitabh Bachchan) ಮರಳಿ ಬಂದಿದ್ದಾರೆ. ಬೆಂಗಳೂರು (bengaluru) ಮೂಲದ ಉತ್ಕರ್ಷ್ ಬಕ್ಸಿ ಅವರು ಕಾರ್ಯಕ್ರಮದಲ್ಲಿ ಮೊದಲ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಮೊದಲ ಸ್ಪರ್ಧೆಯಲ್ಲಿ ಎಂಜಿನಿಯರ್ ಉತ್ಕರ್ಷ್ ಬಕ್ಸಿ ಅವರು ಪ್ರಾರಂಭದ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು. ಆದರೆ 25 ಲಕ್ಷ ರೂ. ಮೌಲ್ಯದ ಮಹಾಭಾರತದ ಪ್ರಶ್ನೆಗೆ ಉತ್ತರ ನೀಡುವಲ್ಲಿ ವಿಫಲರಾದರು.

25 ಲಕ್ಷ ರೂ.ನ ಪ್ರಶ್ನೆ ಏನು?

ಅಮಿತಾಭ್‌ ಬಚ್ಚನ್ ಅವರು ಉತ್ಕರ್ಷ್ ಬಕ್ಸಿ ಅವರ ಜ್ಞಾನ ಮತ್ತು ಅದ್ಭುತ ಸಂಗೀತ ಪ್ರತಿಭೆಯಿಂದ ಪ್ರಭಾವಿತರಾದರು. 12.50 ಲಕ್ಷ ರೂ. ಗೆದ್ದ ಅನಂತರ ಬಿಗ್ ಬಿ ಮಹಾಭಾರತ ಕುರಿತಾದ 25 ಲಕ್ಷ ರೂ. ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆ ಹೀಗಿತ್ತು: ಮಹಾಭಾರತದ ಪ್ರಕಾರ ಅಂಬಾಗೆ ಮಾಲೆಯನ್ನು ಉಡುಗೊರೆಯಾಗಿ ನೀಡಿದ ಮತ್ತು ಅದನ್ನು ಧರಿಸಿದವರು ಭೀಷ್ಮನನ್ನು ಕೊಲ್ಲುತ್ತಾರೆ ಎಂದು ಹೇಳಿದ ದೇವರು ಯಾರು?

ಇದರ ಆಯ್ಕೆಗಳೆಂದರೆ ಎ) ಭಗವಾನ್ ಶಿವ ಬಿ) ಭಗವಾನ್ ಕಾರ್ತಿಕೇಯ ಸಿ) ಭಗವಾನ್ ಇಂದ್ರ ಮತ್ತು ಡಿ) ಭಗವಾನ್ ವಾಯು

ಪ್ರಶ್ನೆಯನ್ನು ಕೇಳಿದ ಅನಂತರ ಉತ್ಕರ್ಷ್ ತಮ್ಮ ವೀಡಿಯೋ ಕಾಲ್ ಎ ಫ್ರೆಂಡ್ ಲೈಫ್‌ಲೈನ್ ಅನ್ನು ಬಳಸಲು ನಿರ್ಧರಿಸಿದರು. ಇದರಲ್ಲಿ ಅವರು ತಮ್ಮ ಸ್ನೇಹಿತನನ್ನು ಕರೆದು ಅವರು ನೀಡಿದ ಉತ್ತರವಾದ A ಆಯ್ಕೆಯನ್ನು ನೀಡಿದರು. ಉತ್ಕರ್ಷ್ ಅದರ ಬಗ್ಗೆ ಸಾಕಷ್ಟು ಖಚಿತವಾಗಿರಲಿಲ್ಲ. ಹೀಗಾಗಿ ಅವರು ತಮ್ಮ ಅಂತಿಮ ಜೀವಸೆಲೆಯಾದ ಡಬಲ್ ಡಿಪ್ ಅನ್ನು ತೆಗೆದುಕೊಂಡರು. ಬಳಿಕ ಅವರು ಆರಂಭದಲ್ಲಿ ಆಯ್ಕೆ ಮಾಡಿದ್ದ ಎ ಆಯ್ಕೆಯನ್ನು ಬಿಟ್ಟು D ಅನ್ನು ಆಯ್ದುಕೊಂಡರು. ಆದರೆ ಈ ಎರಡೂ ಉತ್ತರವೂ ತಪ್ಪಾಗಿತ್ತು.

ಅತಿಯಾದ ಆತ್ಮವಿಶ್ವಾಸದಿಂದ ಉತ್ಕರ್ಷ್ ಬಕ್ಸಿ 25 ಲಕ್ಷ ರೂಪಾಯಿ ಕಳೆದುಕೊಂಡು 3.20 ಲಕ್ಷ ರೂ. ಅನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಈ ಪ್ರಶ್ನೆಯ ಸರಿಯಾದ ಉತ್ತರ ಬಿ- ಭಗವಾನ್ ಕಾರ್ತಿಕೇಯ. ಈ ಎಪಿಸೋಡ್‌ನ ಕ್ಲಿಪ್ ಅನ್ನು ಸೋನಿ ಟಿವಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.


ಹೊಸ ಬದಲಾವಣೆ

ಕೌನ್ ಬನೇಗಾ ಕರೋಡ್ ಪತಿ 16ನೇ ಸರಣಿಯಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಹೊಂದಿದೆ. ಇದರಲ್ಲಿ ‘ಸೂಪರ್ ಸವಾಲ್’ ಮತ್ತು ‘ದುಗ್ನಾಸ್ತ್ರ’ ಪರಿಚಯಿಸಿದ್ದಾರೆ. ಸ್ಪರ್ಧಿಯು ಸೂಪರ್ ಸವಾಲ್ ಉತ್ತರಿಸಲು ಪ್ರಯತ್ನಿಸುವ ಮೂಲಕ ಮೊತ್ತವನ್ನು ದ್ವಿಗುಣಗೊಳಿಸುವ ಅವಕಾಶವನ್ನು ಪಡೆಯುತ್ತಾನೆ.

ರಚನೆಕಾರರು ಈ ಹಿಂದೆ ಕಾರ್ಯಕ್ರಮದ ಪ್ರಚಾರದ ವಿಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅಮಿತಾಭ್ ಬಚ್ಚನ್ ಸೆಟ್‌ನಲ್ಲಿ ಕನಿಷ್ಠ ಹತ್ತು ಕೆಮರಾಗಳಿವೆ ಮತ್ತು ಪ್ರತಿ ಚಲನೆಯನ್ನು ರೆಕಾರ್ಡ್ ಮಾಡಲಾಗುತ್ತಿದೆ ಎಂದು ತಮಾಷೆಯಾಗಿ ಹೇಳಿದ್ದರು.


ಇದರಲ್ಲಿ ಅಮಿತಾಭ್‌ ಹೀಗೆ ಹೇಳಿದ್ದರು. ಬಡಾ ಕಾಂಪ್ಲಿಕೇಟೆಡ್ ಹೈ ಯೇ ಸೆಟ್, ಹಜಾರೋ ಲೈಟ್ ಹೈ, ಕಂಪ್ಯೂಟರ್ ಸೆ ಚಲ್ತಿ ಹೈ. ಕೆಮರಾ 10- 12 ಕೋಯಿ ಕುಚ್ ಭಿ ಕರೋಗೆ ಪಕಡ್ ಜಾಯೇಗಾ ಎಂದು ಹೇಳಿದರು. ಇದರ ಅರ್ಥ ಸೆಟ್ ಸಾಕಷ್ಟು ಸಂಕೀರ್ಣವಾಗಿದೆ. 1000 ಲೈಟ್‌ಗಳು ಕಂಪ್ಯೂಟರ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತವೆ. ಸುಮಾರು 10-12 ಕೆಮರಾಗಳಿವೆ. ಎಲ್ಲವನ್ನೂ ರೆಕಾರ್ಡ್ ಮಾಡಲಾಗುತ್ತದೆ. ಯಾರು ಏನೇ ಮಾಡಿದರೂ ಗೊತ್ತಾಗುತ್ತದೆ ಎಂದಿರುವ ಪ್ರೋಮೋ ಜೊತೆಗೆ ಶೀರ್ಷಿಕೆಯು, ಕೆಬಿಸಿ ಮೇ ಇತ್ ನೇ ಕೆಮರಾ ಹೈ, ಕಿ ಹರ್ ಮಸ್ತಿ ಭರ್ ಪಾಲ್ ಹೋತಾ ಹೈ ಕ್ಯಾಪ್ಚರ್! ಅಂದರೆ ಕೆಬಿಸಿ ಹಲವು ಕೆಮರಗಳನ್ನು ಹೊಂದಿದ್ದು, ಪ್ರತಿ ಮೋಜಿನ ಕ್ಷಣಗಳನ್ನು ಸೆರೆ ಹಿಡಿಯಲಾಗುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: 70th National Film Awards: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರೇಸ್‌ನಲ್ಲಿ ರಿಷಬ್‌ ಶೆಟ್ಟಿ; ʼಕಾಂತಾರʼಕ್ಕೆ ಸಿಗುತ್ತಾ ಇನ್ನೊಂದು ಪ್ರತಿಷ್ಠಿತ ಗರಿ?

ಅಮಿತಾಭ್ ಬಚ್ಚನ್ ಅತಿಥಿಯಾಗಿ ಕಾಣಿಸಿಕೊಂಡಿದ್ದ ಕೌನ್ ಬನೇಗಾ ಕರೋಡ್‌ಪತಿಯ ಮೊದಲ ಸೀಸನ್ 2000ರಲ್ಲಿ ಪ್ರದರ್ಶನಗೊಂಡಿತು. ಬಳಿಕ ಶಾರುಖ್ ಖಾನ್ ನಿರೂಪಣೆ ಮಾಡಿದ 2006 ರ ಮೂರನೇ ಸೀಸನ್ ಹೊರತುಪಡಿಸಿ, ಉಳಿದಂತೆ ಅಮಿತಾಭ್‌ ಬಚ್ಚನ್ ಅವರೇ ಇದರ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ.

Continue Reading
Advertisement
cm siddaramaiah
ಪ್ರಮುಖ ಸುದ್ದಿ2 mins ago

CM Siddaramaiah: ಸಿಎಂಗೆ ಇನ್ನೊಂದು ಶಾಕ್‌, ತಡೆಯಾಜ್ಞೆಗೂ ಕೇವಿಯಟ್

Bridge Collapse
ವೈರಲ್ ನ್ಯೂಸ್20 mins ago

Bridge Collapse: 9 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ 3ನೇ ಬಾರಿ ಕುಸಿದು ಬಿತ್ತು; ವಿಡಿಯೊ ನೋಡಿ

Manu Bhaker
ಕ್ರೀಡೆ36 mins ago

Manu Bhaker: 3 ತಿಂಗಳ ರಜೆಯಲ್ಲಿ ಭರತನಾಟ್ಯ, ಕುದುರೆ ಸವಾರಿ, ಸ್ಕೇಟಿಂಗ್ ಕಲಿಯಲಿದ್ದಾರೆ ಮನು ಭಾಕರ್

Physical Abuse
ದೇಶ1 hour ago

Physical Abuse: ದೇಶದಲ್ಲಿ ಪ್ರತಿ ಗಂಟೆಗೊಮ್ಮೆ 4 ಮಹಿಳೆಯರ ಮೇಲೆ ಅತ್ಯಾಚಾರ; ಬೆಚ್ಚಿಬೀಳಿಸುವ ಅಂಕಿ-ಅಂಶ ಬಹಿರಂಗ

Actor Nagabhushan birthday vidhyapathi promo Out
ಸ್ಯಾಂಡಲ್ ವುಡ್2 hours ago

Actor Nagabhushan: ನಾಗಭೂಷಣ್ ಬರ್ತ್‌ಡೇಗೆ ಡಾಲಿ ತಂಡದಿಂದ ಸ್ಪೆಷಲ್ ಗಿಫ್ಟ್‌; ನೋಡಿ ‘ವಿದ್ಯಾಪತಿ’ಯ ಕಿತಾಪತಿ!

Vinesh Phogat
ಕ್ರೀಡೆ2 hours ago

Vinesh Phogat: ತವರಿಗೆ ಮರಳಿದ ವಿನೇಶ್​​​ ಫೋಗಟ್​ಗೆ ಭರ್ಜರಿ ಸ್ವಾಗತ; ಅಭಿಮಾನಿಗಳನ್ನು ಕಂಡು ಕಣ್ಣೀರು

Government Employees
ಕರ್ನಾಟಕ2 hours ago

Government Employees: 7ನೇ ವೇತನ ಆಯೋಗ; ಸರ್ಕಾರಿ ನೌಕರರ ಸಂಘದಿಂದ ಇಂದು ಸಿಎಂ, ಡಿಸಿಎಂಗೆ ಸನ್ಮಾನ; Live ಇಲ್ಲಿದೆ

Viral Video
Latest2 hours ago

Viral Video: ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಿದ; ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡ!

Crorepati Sweeper
Latest2 hours ago

Crorepati Sweeper: ಕಸ ಗುಡಿಸುವ ಕಾರ್ಮಿಕನ ಬಳಿ ಇತ್ತು ಐಷಾರಾಮಿ ಕಾರುಗಳು, ಕೋಟಿ ಮೌಲ್ಯದ ಆಸ್ತಿ! ಆತ ಸಂಪಾದಿಸಿದ್ದು ಹೇಗೆ?

70th National Film Awards ational Award winner Madhyantara Short Movie
ಸ್ಯಾಂಡಲ್ ವುಡ್3 hours ago

70th National Film Awards: ಕನ್ನಡಕ್ಕೆ ಸಿಕ್ಕಿದ್ದು ಒಟ್ಟು 7 ಪ್ರಶಸ್ತಿಗಳು; ಜ್ಯೂರಿಗಳನ್ನೇ ಇಂಪ್ರೆಸ್‌ ಮಾಡಿದ ʻಮಧ್ಯಂತರʼ ಕಿರು ಚಿತ್ರ ಬಗ್ಗೆ ನಿಮಗೆಷ್ಟು ಗೊತ್ತು?

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌